ರಶ್ಮಿಕಾ ಮಂದಣ್ಣಗೆ ನಾಳೆ ಹುಟ್ಟುಹಬ್ಬದ ಸಂಭ್ರಮ. 22ನೇ ವರ್ಷಕ್ಕೆ ಕಾಲಿಡುತ್ತಿರುವ ರಶ್ಮಿಕಾ, ಹುಟ್ಟುಹಬ್ಬದ ದಿನ ಚಿಕ್ಕಮಗಳೂರಿನಲ್ಲಿ ಶೂಟಿಂಗ್‍ನಲ್ಲಿರ್ತಾರೆ. ಆ ದಿನ ರಶ್ಮಿಕಾಗೆ ಒಂದು ಪ್ರೀತಿಯ ಉಡುಗೊರೆ ಕಾದಿದೆ. ಅದು ಕಾರು, ಬೈಕು, ವಜ್ರ, ವೈಢೂರ್ಯ ಅಲ್ಲ..ಆದರೆ, ಅವೆಲ್ಲವುಗಳಿಗಿಂತ ಅಮೂಲ್ಯವಾದದ್ದು. ಅಂಥಾದ್ದೊಂದು ಅಮೂಲ್ಯ ಕಾಣಿಕೆ ನೀಡುತ್ತಿರುವುದು ರಶ್ಮಿಕಾ ಅವರ ತಾಯಿ ಸುಮನ್.
ಅಂಥಾ ಕಾಣಿಕೆ ಏನಿರಬಹುದು ಅಂತೀರಾ.. ಅದೊಂದು ಪತ್ರ. ತಾಯಿಯೊಬ್ಬರು ಮಗಳಿಗೆ ಬರೆಯಬಹುದಾದ ಒಂದು ಪತ್ರವನ್ನು ಮಗಳ ಹುಟ್ಟುಹಬ್ಬಕ್ಕೆ ಕೊಡುತ್ತಿದ್ದಾರೆ ಸುಮನ್. ಆ ಪತ್ರದಲ್ಲಿ ರಶ್ಮಿಕಾಗೆ ಅವರ ಜೀವನದ ಅತ್ಯಂತ ಪ್ರಮುಖ ವಿಷಯವೊಂದನ್ನು ಹೇಳಲಿದ್ದಾರಂತೆ ಸುಮನ್.
ಏನದು ಎಂದರೆ, ಅದು ರಶ್ಮಿಕಾಗೆ ಹೇಳಬೇಕು ಎಂದುಕೊಂಡಿರೋದು. ಈಗಲೇ ಹೇಳಿಬಿಟ್ಟರೆ ಹೇಗೆ ಅಂತಾರೆ ಸುಮನ್. ಆ ಪತ್ರದಲ್ಲಿ ತಮ್ಮ ಜೀವನ ಹಾಗೂ ರಶ್ಮಿಕಾ ಬದುಕಿನ ಕೆಲವು ಪ್ರಮುಖ ಘಟ್ಟಗಳು, ತಿರುವುಗಳ ಕಥೆಯೂ ಇರಲಿದೆ. ಅದೊಂದು ಭಾವನಾತ್ಮಕ ಪತ್ರ. ಆ ಪತ್ರ ಇಂದು ಮಧ್ಯರಾತ್ರಿ 12 ಗಂಟೆಗೆ ರಶ್ಮಿಕಾ ಕೈ ಸೇರಲಿದೆ. ಅದು ರಶ್ಮಿಕಾಗೆ ನಾನು ಕೊಡುತ್ತಿರುವ ಕಾಣಿಕೆ ಎಂದಿದ್ದಾರೆ ಸುಮನ್.
ರಶ್ಮಿಕಾ ಕಾಯುತ್ತಿದ್ದಾರೆ. ಕಾಯಲೇಬೇಕಲ್ಲವೇ. ಅಮ್ಮನ ಗಿಫ್ಟು ಅಮೂಲ್ಯವಾದದ್ದೇ ತಾನೆ.