` diganth, - chitraloka.com | Kannada Movie News, Reviews | Image

diganth,

 • ಮುಂದಿನ ವರ್ಷ ದಿಗಂತ್-ಐಂದ್ರಿತಾ ಮದುವೆ..!

  aindritha diganth to marry next year

  10,16, 2017, ಸ್ಯಾಂಡಲ್‍ವುಡ್‍ಗೆ ಮದುವೆ ವರ್ಷಗಳೆಂದೇ ಹೇಳಬೇಕು. ಯಶ್, ರಾಧಿಕಾ, ಪ್ರಿಯಾಮಣಿ, ಅಮೂಲ್ಯ, ಮೇಘನಾ ರಾಜ್, ಚಿರಂಜೀವಿ ಸರ್ಜಾ, ರಮ್ಯಾ ಬಾರ್ನಾ, ಸಿಂಧು ಲೋಕನಾಥ್... ಹೀಗೆ ವರ್ಷವಿಡೀ ಮದುವೆ, ಎಂಗೇಜ್‍ಮೆಂಟ್‍ಗಳು ಸುದ್ದಿಯಗುತ್ತಲೇ ಇವೆ. ಈಗ ದಿಗಂತ್ ಮತ್ತು ಐಂದ್ರಿತಾ ಸರದಿ. 

  ದಿಗಂತ್ ಮತ್ತು ಐಂದ್ರಿತ ನಡುವೆ ಪ್ರೀತಿ ಇದೆ ಅನ್ನೋದು ಹೊಸ ಸುದ್ದಿಯೇನಲ್ಲ. ಕೆಲವೊಮ್ಮೆ ನಿರಾಕರಿಸುವ ಮತ್ತೂ ಕೆಲವೊಮ್ಮೆ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡುವ ಇಬ್ಬರೂ ಅಧಿಕೃತ ಕುತೂಹಲವನ್ನು ಕಾದಿಟ್ಟುಕೊಂಡೇ ಬಂದಿದ್ದಾರೆ. ಹೀಗಿರುವಾಗಲೇ ಈ ಸುದ್ದಿ ಹೊರಬಿದ್ದಿದೆ.

  ಮುಂದಿನ ವರ್ಷ ಇಬ್ಬರೂ ಮದುವೆಯಾಗಲಿದ್ದಾರಂತೆ. ಬ್ರೇಕಪ್ ಏನೂ ಆಗಿಲ್ಲ. ಮದುವೆಯಾಗೋದು ನಿಜ. ಆದರೆ, ಈಗಲ್ಲ. ಮುಂದಿನ ವರ್ಷದ ಕೊನೆಯಲ್ಲಿ ಮದುವೆಯಾಗುತ್ತೇವೆ ಎಂದು ಹೇಳಿಕೊಂಡಿದ್ದಾರೆ ದಿಗಂತ್. ಇಬ್ಬರೂ ಮನಸಾರೆ, ಪಾರಿಜಾತ, ಶಾರ್ಪ್ ಶೂಟರ್ ಚಿತ್ರಗಳಲ್ಲಿ ಒಟ್ಟಿಗೇ ನಟಿಸಿದ್ದವರು. ಮದುವೆಯಾಗುವುದಾದರೆ, ಕಂಗ್ರಾಟ್ಸ್ ಹೇಳೋಣ.

 • ಮೊಟ್ಟೆ ಹುಡುಗಿಯ ಕಥೆಯೊಂದು ಶುರುವಾಗಿದೆ

  shreya anchan talks about katheyondhu shuruvagidhe

  ಕಥೆಯೊಂದು ಶುರುವಾಗಿದೆ ಚಿತ್ರದಲ್ಲಿ ಶ್ರೇಯಾ ಅಂಚನ್ ಎಂಬ ಚೆಲುವೆ ರಿಸೆಪ್ಷನಿಸ್ಟ್ ಆಗಿದ್ದಾರೆ. ದಿಗಂತ್ ಮಾಲೀಕತ್ವದ ರೆಸಾರ್ಟ್‍ಗೆ ಅವರೇ ರಿಸೆಪ್ಷನಿಸ್ಟ್. ನೋಡೋಕೆ ಬ್ಯೂಟಿಫುಲ್ ಹುಡುಗಿ. ಹುಡುಗರು ಬೀಳದೇ ಇರ್ತಾರಾ..? ಹಾಗೆ ಬೆನ್ನು ಬಿದ್ದ ಹುಡುಗನಿಗೆ ಈ ಶ್ರೇಯಾ ಅಂಚನ್ ಏನ್ ಹೇಳ್ತಾರೆ..? ಅವರನ್ನ ಹೇಗೆ ಮ್ಯಾನೇಜ್ ಮಾಡ್ತಾರೆ..? ತಿಳಿದುಕೊಳ್ಳೋ ಕುತೂಹಲ ಇದ್ಯಾ..? ಕಥೆಯೊಂದು ಶುರುವಾಗಿದೆ ಸಿನಿಮಾ ನೋಡಿ.

  ಶ್ರೇಯಾ ಅಂಚನ್ ಯಾರು ಗೊತ್ತಲ್ಲ, ಒಂದು ಮೊಟ್ಟೆಯ ಕಥೆ ಚಿತ್ರದಲ್ಲಿನಟಿಸಿದ್ದ ಚೆಲುವೆ. ಕಥೆಯೊಂದು ಶುರುವಾಗಿದೆ ನನ್ನ ವೃತ್ತಿ ಬದುಕಿನಲ್ಲಿ ವಿಶೇಷ ಚಿತ್ರ. ನಿರ್ದೇಶಕ ಸೆನ್ನಾ, ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಚಿತ್ರದುದ್ದಕ್ಕೂ ನನಗೆ ನೀಡಿದ ಸಪೋರ್ಟ್‍ನ್ನು ಮರೆಯೋಕೆ ಸಾಧ್ಯವೇ ಇಲ್ಲ ಎಂದು ಹೇಳಿಕೊಂಡಿದ್ದಾರೆ ಶ್ರೇಯಾ. ಚಿತ್ರದಲ್ಲಿ ಶ್ರೇಯಾ ಅವರ ಪಾತ್ರದ ಹೆಸರು ಸ್ವರ್ಣ.

 • ರೆಸಾರ್ಟ್‍ನಲ್ಲಿ ಅವನು.. ಅವಳು.. ಕಥೆಯೊಂದು ಶುರುವಾದಾಗ..

  katheyondhu shuruvagidhe is a special love story

  ಅವನೊಬ್ಬ ರೆಸಾರ್ಟ್ ಮಾಲೀಕ. ಅವಳು ಆ ರೆಸಾರ್ಟ್‍ಗೆ ಬರುವ ಅತಿಥಿ. ಅವರಿಬ್ಬರ ಮಧ್ಯೆ ಗೆಳೆತನ ಚಿಗುರೊಡೆದು, ಪ್ರೀತಿ ಶುರುವಾಗುತ್ತೆ. ಕಥೆಯೊಂದು ಶುರುವಾಗುವುದು ಹೀಗೆ... ಇಲ್ಲಿ ರೆಸಾರ್ಟ್ ಮಾಲೀಕ ದಿಗಂತ್. ಅತಿಥಿ ಪೂಜಾ. 

  ಏಕಾಂತ ಅರಸಿ ರೆಸಾರ್ಟ್‍ಗೆ ಬರುವ ನಾಯಕಿ, ತನ್ನದೇ ಕನಸುಗಳನ್ನು ಕೊಟ್ಟಿಕೊಂಡಿರುವ ನಾಯಕನ ಮಧ್ಯೆ ಕಥೆಯೊಂದು ಶುರು ಮಾಡಿರುವುದು ನಿರ್ದೇಶಕ ಸನ್ನಾ. 

  ಏನಾದರೂ ಮಾಡಿ, ಇವರಿಬ್ಬರ ಮಧ್ಯೆ ಚೆಂದದ ಲವ್ ಸ್ಟೋರಿ ಶುರು ಮಾಡಿಸಿ ಎಂದು ಹೇಳಿದ್ದವರು ಪರಂವಾ ಸ್ಟುಡಿಯೋಸ್‍ನ ರಕ್ಷಿತ್ ಶೆಟ್ಟಿ ಮತ್ತು ಪುಷ್ಕರ್ ಮಲ್ಲಿಕಾರ್ಜುನಯ್ಯ. ಕಥೆಯೊಂದು ಶುರುವಾಗಿದೆ ಚಿತ್ರದ ಟ್ರೇಲರ್.. ಅಷ್ಟೇ ವಿಭಿನ್ನವಾಗಿ ಗಮನ ಸೆಳೆಯುತ್ತಿದೆ. 

 • ಲೈಫ್ ಜೊತೆ ಸೆಲ್ಫಿಗೆ ಸೆಲ್ಫಿ ಕಳಿಸಿದ್ರಾ..?

  selfie contest from life jothe ondu selfie

  ಲೈಫ್ ಜೊತೆ ಒಂದ್ ಸೆಲ್ಫಿ. ಸಾರಥಿ ನಂತರ ತೂಗುದೀಪ ದಿನಕರ್ ನಿರ್ದೇಶಿಸಿರುವ ಸಿನಿಮಾ. ಪ್ರಜ್ವಲ್ ದೇವರಾಜ್, ನೆನಪಿರಲಿ ಪ್ರೇಮ್ ಮತ್ತು ಹರಿಪ್ರಿಯಾ ಮುಖ್ಯ ಭೂಮಿಕೆಯಲ್ಲಿರುವ ಸಿನಿಮಾ. ಸಿನಿಮಾಗೆ ಕಥೆ ಬರೆದಿರುವುದು ದಿನಕರ್ ಪತ್ನಿ ಮಾನಸ. ಸಮೃದ್ಧಿ ಮಂಜುನಾಥ್ ಮತ್ತು ವಿರಾಟ್ ಸಾಯಿ ನಿರ್ಮಾಣದ ಚಿತ್ರ, ರಿಲೀಸ್‍ಗೆ ರೆಡಿಯಾಗಿದೆ. 

  ರಿಲೀಸ್ ಹೊತ್ತಿನಲ್ಲೇ ಪ್ರೇಕ್ಷಕರಿಗೆ ಆಸಕ್ತಿಕರ ಸ್ಪರ್ಧೆಯೊಂದನ್ನೂ ಇಟ್ಟಿದೆ. ನೀವು ಮಾಡಬೇಕಿರೋದು ಇಷ್ಟೆ. ನಿಮ್ಮದೊಂದು ಚೆಂದದ ಸೆಲ್ಫಿ ತೆಗೆದು 

  9743873656ಗೆ ಕಳಿಸಿಕೊಡಬೇಕು. ಫೇಸ್‍ಬುಕ್, ಟ್ವಿಟರ್, ಇನ್‍ಸ್ಟಾಗ್ರಾಂಗಳಲ್ಲಿ.. ನಿಮ್ಮ ಸೆಲ್ಫಿಯನ್ನು ಲೈಫ್ ಜೊತೆ ಒಂದ್ ಸೆಲ್ಫಿ ಪೇಜ್‍ಗೆ ಟ್ಯಾಗ್ ಮಾಡಬೇಕು.

  ಇಷ್ಟು ಮಾಡಿದ್ರೆ ನಮಗೇನು ಅಂತೀರಾ..? ನಿಮ್ಮ ಅದೃಷ್ಟ ಚೆನ್ನಾಗಿದ್ದರೆ, ಪ್ರಜ್ವಲ್, ಹರಿಪ್ರಿಯಾ, ಪ್ರೇಮ್, ದಿನಕರ್.. ಇವರೆಲ್ಲ ನಿಮಗೆ ಡಿನ್ನರ್ ಕೊಡಿಸ್ತಾರೆ. ಅವರೆಲ್ಲರ ಜೊತೆ ಒಟ್ಟಿಗೇ ಊಟ ಮಾಡಿ, ಮಾತನಾಡಿ, ಅವರೆಲ್ಲರೊಂದಿಗೆ ಒಂದು ಸೆಲ್ಫಿಯನ್ನೂ ತೆಗೆದುಕೊಳ್ಳಬಹುದು. ಸೆಲ್ಫಿ ಕಳಿಸಿದ್ರಾ..?

 • ವಿಜಯ್ ದೇವರಕೊಂಡ ಚಿತ್ರದಲ್ಲಿ ದೂದ್‍ಪೇಡ ದಿಗಂತ್

  diganth to act with vijay devarakonda

  ದೂದ್‍ಪೇಡ ಎಂದೇ ಫೇಮಸ್ ಆಗಿರೋ ದಿಗಂತ್ ಮತ್ತೆ ತೆಲುಗಿಗೆ ಹಾರುತ್ತಿದ್ದಾರೆ. ಹೆಚ್ಚೂ ಕಡಿಮೆ ಒಂದು ದಶಕದ ಬಳಿಕ ತೆಲುಗಿನಲ್ಲಿ ನಟಿಸುತ್ತಿದ್ದಾರೆ ದಿಗಂತ್. ಅದೂ ಹೀರೋ ಚಿತ್ರದಲ್ಲಿ.

  ಹೀರೋ, ವಿಜಯ್ ದೇವರಕೊಂಡ ಅಭಿನಯದ ಸಿನಿಮಾ. ಕ್ರೀಡೆಯ ಸ್ಟೋರಿ ಆಧರಿಸಿದ ಈ ಚಿತ್ರದಲ್ಲಿ ದಿಗಂತ್ ಪ್ರಮುಖ ಪಾತ್ರವೊಂದಕ್ಕೆ ಬಣ್ಣ ಹಚ್ಚಲಿದ್ದಾರೆ. 10 ವರ್ಷಗಳ ಹಿಂದೆ ದಿಗಂತ್ ತೆಲುಗಿನಲ್ಲಿ ವಾನ ಚಿತ್ರದಲ್ಲಿ ನಟಿಸಿದ್ದರು. ಅದು ಮುಂಗಾರು ಮಳೆ ಚಿತ್ರದ ರೀಮೇಕ್. ಈಗ ಮತ್ತೊಮ್ಮೆ ತೆಲುಗಿನತ್ತ ಹೆಜ್ಜೆ ಇಟ್ಟಿದ್ದಾರೆ ದಿಗಂತ್.

 • ವಿದೇಶದಲ್ಲಿ ದಾಖಲೆ ಬರೆಯಲು ಹೊರಟ ಕಥೆಯೊಂದು ಶುರುವಾಗಿದೆ..

  katheyondhu shuruvagidhe to premiere overseas first

  ಕಥೆಯೊಂದು ಶುರುವಾಗಿದೆ... ರಾಜ್ಯಾದ್ಯಂತ ಬಿಡುಗಡೆಯಾಗುತ್ತಿರುವುದು ಆಗಸ್ಟ್ 3ರಂದು. ಆಗಸ್ಟ್ 2ರಂದು ಬೆಂಗಳೂರಿನ ಮಾಲ್‍ವೊಂದರಲ್ಲಿ ನಾಲ್ಕು ವಯೋಮಾನದ ಅದೃಷ್ಟವಂತ ಪ್ರೇಮಿಗಳಿಗಾಗಿ ಪ್ರೀಮಿಯರ್ ಶೋ ಆಯೋಜಿಸಿದೆ. ಅದಕ್ಕಾಗಿ ವಿಶೇಷ ಸ್ಪರ್ಧೆಯೊಂದನ್ನೂ ಹಮ್ಮಿಕೊಂಡಿರುವ ಚಿತ್ರತಂಡ, ಈಗ ಇನ್ನೊಂದು ದಾಖಲೆ ಮಾಡಲು ಹೊರಟಿದೆ. ಅದು ವಿದೇಶದಲ್ಲಿ.

  ಜುಲೈ 27 ಹಾಗೂ 28ರಂದು ಯೂರೋಪ್, ಅಮೆರಿಕ, ಆಸ್ಟ್ರೇಲಿಯ, ಸಿಂಗಾಪುರ್, ಬ್ರಿಟನ್, ಮಲೇಷ್ಯಾಗಳಲ್ಲಿ ಚಿತ್ರದ ಪ್ರೀಮಿಯರ್ ಶೋ ಆಯೋಜಿಸಿದೆ. ಮೊದಲು ಭಾರತದಲ್ಲಿ ಬಿಡುಗಡೆ ಮಾಡಿ, ನಂತರ ವಿದೇಶಕ್ಕೆ ಹೋಗಲು ಯೋಜಿಸಿದ್ದ ಚಿತ್ರತಂಡ, ನಂತರ ಅದನ್ನೇ ಉಲ್ಟಾ ಮಾಡಿದೆ. ವಿದೇಶದಿಂದಲೇ ಸಿನಿಮಾ ಅಭಿಯಾನ ಆರಂಭಿಸಿದೆ. ಇದು ಕನ್ನಡಕ್ಕೆ ಹೊಸದು ಹಾಗೂ ವಿಭಿನ್ನ ಪ್ರಯತ್ನ. ಇದು ಯಶಸ್ವಿಯಾದರೆ, ಕನ್ನಡ ಚಿತ್ರರಂಗದ ಮಾರುಕಟ್ಟೆ ಹಿಗ್ಗಲಿದೆ ಎಂದು ಬೇರೆ ಹೇಳಬೇಕಿಲ್ಲ.

  ಇದು ಸನ್ನಾ ಹೆಗಡೆ ನಿರ್ದೇಶನದ ಮೊದಲ ಸಿನಿಮಾ. ರಕ್ಷಿತ್ ಶೆಟ್ಟಿ, ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದ ಸಿನಿಮಾದಲ್ಲಿ ದಿಗಂತ್ ಹೀರೋ, ಪೂಜಾ ದೇವರಿಯಾ ನಾಯಕಿ. ವಿಭಿನ್ನ ವಯೋಮಾನದವರ ಪ್ರೇಮ ಕಥೆ ಹೇಳುವ ಸಿನಿಮಾ, ಬಿಡುಗಡೆಗೆ ಸಿದ್ಧಗೊಂಡಿದೆ.

 • ಶ್ರೀರಾಮಚಂದ್ರನಾದ ದಿಗಂತ್ : ಹೇಗಿದೆ ಪ್ರೇಕ್ಷಕರ ಪ್ರತಿಕ್ರಿಯೆ..?

  ಶ್ರೀರಾಮಚಂದ್ರನಾದ ದಿಗಂತ್ : ಹೇಗಿದೆ ಪ್ರೇಕ್ಷಕರ ಪ್ರತಿಕ್ರಿಯೆ..?

  ದೂದ್‍ಪೇಡಾ ದಿಗಂತ್ ಇದೇ ಮೊದಲ ಬಾರಿಗೆ ಪೌರಾಣಿಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅದೂ ಭಾರತೀಯರ ಆರಾಧ್ಯದೈವ ಶ್ರೀರಾಮಚಂದ್ರನ ಪಾತ್ರದಲ್ಲಿ. ಹಿಂದಿಯಲ್ಲಿ ಬಂದಿರುವ ರಾಮ್‍ಯುಗ್ ವೆಬ್‍ಸಿರೀಸ್‍ನಲ್ಲಿ ದಿಗಂತ್ ಶ್ರೀರಾಮನಾಗಿದ್ದಾರೆ. ಮೇ 6ರಂದು ಒಟಿಟಿಯಲ್ಲಿ ರಿಲೀಸ್ ಆಗಿರುವ ರಾಮ್‍ಯುಗ್, ಹೇಗಿದೆ..?

  ಕುನಾಲ್ ಕೊಹ್ಲಿ ನಿರ್ದೇಶನದ ರಾಮ್‍ಯುಗ್ 8 ಎಪಿಸೋಡ್‍ಗಳಲ್ಲಿ ಬಿಡುಗಡೆಯಾಗಿದೆ. ದಿಗಂತ್ ಅಭಿನಯಕ್ಕೆ ಪ್ರೇಕ್ಷಕರು ಶಹಬ್ಬಾಸ್ ಎಂದಿದ್ದರೂ, ಒಟ್ಟಾರೆ ಸಿರೀಸ್ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಬೀರ್ ಸಿಂಗ್ ರಾವಣನಾಗಿದ್ದರೆ, ಐಶ್ವರ್ಯಾ ಓಝಾ ಸೀತೆಯಾಗಿದ್ದಾರೆ. ರಾಮನ ಪಾತ್ರದಲ್ಲಿ ದಿಗಂತ್ 100ಕ್ಕೆ 100 ಅಂಕ ಗಿಟ್ಟಿಸಿದ್ದಾರೆ. ಆದರೆ ಕೈಕೊಟ್ಟಿರುವುದು ನಿದೇರ್ಶಕರೇ. ಪ್ರತಿಯೊಬ್ಬರೂ ಸೀರಿಯಲ್‍ನ್ನು ರಮಾನಂದ್ ಸಾಗರ್ ಅವರ ರಾಮಾಯಣಕ್ಕೆ ಹೋಲಿಸಿ, ಇದು ಸಪ್ಪೆ ಎನ್ನುತ್ತಿದ್ದಾರೆ. ಗ್ರಾಫಿಕ್ಸ್ ಮತ್ತು ತಂತ್ರಜ್ಞಾಗಳ ವೈಭವೀಕರಣದಲ್ಲಿ ಕಥೆ ಮತ್ತು ನಿರೂಪಣೆಯನ್ನೇ ಪೇಲವಗೊಳಿಸಿದ್ದಾರೆ ಎಂಬ ಮಾತುಗಳೂ ವ್ಯಕ್ತವಾಗುತ್ತಿವೆ.

 • ಶ್ರೀರಾಮನಾಗುತ್ತಿದ್ದಾರೆ ದೂದ್‍ಪೇಡ ದಿಗಂತ್..!

  diganth in bollywood as sri rama

  ದಿಗಂತ್ ಅಂದ್ರೆ ದೂದ್‍ಪೇಡ. ದಿಗಂತ್ ಅಂದ್ರೆ ಚಾಕೊಲೇಟ್ ಬಾಯ್. ದಿಗಂತ್ ಅಂದ್ರೆ ಹರೆಯದ ಹುಡುಗಿಯರ ಹೃದಯ ಸಾಮ್ರಾಟ. ಪೋಲಿತನ, ದಿಗಂತ್ ಅವರ ಆಭರಣ. ಅಂಥಾದ್ದರಲ್ಲಿ ಈ ದಿಗಂತ್, ಮರ್ಯಾದಾ ಪುರುಷೋತ್ತಮ ಶ್ರೀರಾಮನಾಗಿ ನಟಿಸೋಕೆ ಯೆಸ್ ಎಂದಿದ್ದಾರೆ. 

  ಬಾಲಿವುಡ್‍ನಲ್ಲಿ ಕುನಾಲ್ ಕೊಹ್ಲಿ ರಾಮಾಯಣವನ್ನಿಟ್ಟುಕೊಂಡು ಹೊಸ ಸಿನಿಮಾ ಮಾಡುತ್ತಿದ್ದಾರೆ. ಫನಾ, ಹಮ್‍ತುಮ್.. ಸಿನಿಮಾ ನಿರ್ದೇಶಿಸಿದ್ದ ಕುನಾಲ್ ಕೊಹ್ಲಿ, ಈ ಬಾರಿ ಪೌರಾಣಿಕ ಚಿತ್ರವನ್ನೆತ್ತಿಕೊಂಡಿದ್ದಾರೆ. ಅವರಿಗೆ ದಿಗಂತ್, ಶ್ರೀರಾಮಚಂದ್ರನ ಪಾತ್ರಕ್ಕೆ ಓಕೆ ಎನ್ನಿಸಿದೆ. 

  ಕಥೆಯೊಂದು ಶುರುವಾಗಿದೆ ಯಶಸ್ಸಿನ ಸಂಭ್ರಮದಲ್ಲಿರುವ ದಿಗಂತ್, ಕೆಲವೇ ದಿನಗಳಲ್ಲಿ ನಿರ್ದೇಶಕರು ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ ಎಂದು ತಿಳಿಸಲಿದ್ದಾರೆ. ಆ ಸಿನಿಮಾ 2 ಭಾಗಗಳಲ್ಲಿ ರಿಲೀಸ್ ಆಗಲಿದೆ ಎಂದು ತಿಳಿಸಿದ್ದಾರೆ ದಿಗಂತ್.

 • ಸಿಂಪಲ್ ಸುನಿ, ಪುಷ್ಕರ್ ಜೊತೆ ದಿಗಂತ್ ಹೊಸ ಕಥೆ

  suni, diganth, pushkar team up for next film

  ಕಥೆಯೊಂದು ಶುರುವಾಗಿದೆ... ಸಿನಿಮಾ ಇದೇ ವಾರ ಬಿಡುಗಡೆಯಾಗುತ್ತಿದೆ. ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದ ಚಿತ್ರ ರಿಲೀಸ್‍ಗೂ ಮುನ್ನವೇ, ಪುಷ್ಕರ್ ಮತ್ತು ದಿಗಂತ್ ಮಧ್ಯೆ ಹೊಸದೊಂದು ಕಥೆ ಶುರುವಾಗುತ್ತಿದೆ. ಈ ಹೊಸ ಕಥೆ ಶುರು ಮಾಡುತ್ತಿರುವುದು ಸಿಂಪಲ್ ಸುನಿ.

  ಕಥೆಯೊಂದು ಶುರುವಾಗಿದೆ ಲವ್ ಸ್ಟೋರಿಯಾದರೆ, ಹೊಸ ಕಥೆ ರೊಮ್ಯಾಂಟಿಕ್ ಕಾಮಿಡಿ. ರೊಮ್ಯಾಂಟಿಕ್ ಕಾಮಿಡಿ ಸಿನಿಮಾ ಮಾಡೋದ್ರಲ್ಲಿ ಸುನಿ ಎಕ್ಸ್‍ಪರ್ಟ್ ಆಗಿಬಿಟ್ಟಿದ್ದಾರೆ. ದಿಗಂತ್ ಕೂಡಾ ರೊಮ್ಯಾನ್ಸ್‍ಗೆ ಹೇಳಿ ಮಾಡಿಸಿದಂತಿದ್ದಾರೆ.

  ಕಥೆಯೊಂದು ಶುರುವಾಗಿದೆ ಚಿತ್ರಕ್ಕೆ ಪುಷ್ಕರ್ ಅವರ ಜೊತೆಗೆ ರಕ್ಷಿತ್ ಶೆಟ್ಟಿ ಕೂಡಾ ನಿರ್ಮಾಪಕರು. ಆದರೆ, ಈ ಹೊಸ ಚಿತ್ರಕ್ಕೆ ಪುಷ್ಕರ್ ಒಬ್ಬರೇ ನಿರ್ಮಾಪಕರು. ನವೆಂಬರ್ ಕೊನೆಯಲ್ಲಿ ಅಥವಾ ಡಿಸೆಂಬರ್‍ನಲ್ಲಿ ಶೂಟಿಂಗ್ ಶುರುವಾಗಲಿದ್ದು, ಮಲೆನಾಡು ಭಾಗದಲ್ಲಿಯೇ ಬಹುತೇಕ ಚಿತ್ರೀಕರಣ ನಡೆಯಲಿದೆಯಂತೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery