` diganth, - chitraloka.com | Kannada Movie News, Reviews | Image

diganth,

 • ಕಥೆ ಶುರುವಾಯ್ತು..

  katheyondhu shuruvagidhe starts

  ಕಥೆಯೊಂದು ಶುರುವಾಗಿದೆ.. ದಿಗಂತ್, ಪೂಜಾ ದೇವರಿಯಾ ಅಭಿನಯದ ಈ ಸಿನಿಮಾದ ಕಥೆ ಶುರುವಾಗಿಯೇಬಿಟ್ಟಿದೆ. ವಿದೇಶಗಳಲ್ಲಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದ ಸಿನಿಮಾ, ಪ್ರೀಮಿಯರ್ ಶೋನಲ್ಲಿಯೂ ಚಿತ್ರಪ್ರೇಮಿಗಳ ಮನ ಗೆದ್ದಿದೆ. ಈಗ.. ಕನ್ನಡಿಗರ ಮನ ಗೆಲ್ಲೋ ಗುರಿ.

  ಚಿತ್ರದ ಕಥೆ ಡಿಫರೆಂಟ್ ಮತ್ತು ವಿಶೇಷವಾಗಿದೆ. ನಾನು ಸಿನಿಮಾ ನೋಡಿದ್ದೇನೆ. ನನಗಂತೂ ಇಷ್ಟವಾಗಿದೆ. ಮೂರು ವರ್ಗದವರ ಪ್ರೇಮಕಥೆ ಪ್ರತಿಯೊಬ್ಬರಿಗೂ ಇಷ್ಟವಾಗುತ್ತೆ. ಒಂದೊಳ್ಳೆ ಸಿನಿಮಾಗೆ ಹಣ ಹೂಡಿದ ತೃಪ್ತಿ ನನ್ನದು. ಇದು ನಿರ್ಮಾಪಕ ರಕ್ಷಿತ್ ಶೆಟ್ಟಿ ಪ್ರತಿಕ್ರಿಯೆ.

  ಯುವಕರು, ಮಧ್ಯವಯಸ್ಕರು, ವೃದ್ಧರು ಎಲ್ಲರಿಗೂ ಇಷ್ಟವಾಗುವ ಕಥೆ ಚಿತ್ರದಲ್ಲಿದೆ ಅನ್ನೋ ಕಾನ್ಫಿಡೆನ್ಸ್ ಕೊಡ್ತಾರೆ ಇನ್ನೊಬ್ಬ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ. ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿರುವ ಚಿತ್ರ, ಪ್ರೇಕ್ಷಕರ ಎದೆಯಲ್ಲಿ ಲವ್ ಯೂ ಹೇಳುತ್ತಿದೆ.

 • ಕಥೆಯೊಂದರ ನಿರ್ದೇಶಕ ಸೆನ್ನಾ ಹೆಗ್ಡೆ ಕಥೆ ಏನು..?

  senna hegde's specialty in kateyondhu shuruvagidhe

  ಕಥೆಯೊಂದು ಶುರುವಾಗಿದೆ ಚಿತ್ರಕ್ಕೆ ಸನ್ನಾ ಹೆಗಡೆ ನಿರ್ದೆಶಕ. ಅಂದಹಾಗೆ ಇವರಿಗೆ ಇದು ನಿರ್ದೇಶಕರಾಗಿ ಮೊದಲ ಅನುಭವ. ಆದರೆ, ಚಿತ್ರರಂಗಕ್ಕೆ ರಕ್ಷಿತ್ ಶೆಟ್ಟಿಗೆ ಇವರು ಹೊಸಬರೇನೂ ಅಲ್ಲ. ರಕ್ಷಿತ್ ಶೆಟ್ಟಿಗೆ ಹೆಸರು ತಂದು ಕೊಟ್ಟ ಉಳಿದವರು ಕಂಡಂತೆ ಚಿತ್ರದ ಬರಹಗಾರರಲ್ಲಿ ಇವರೂ ಒಬ್ಬರು. ಆದರೆ, ನಂತರ ಊರಿಗೆ ವಾಪಸ್ ಹೋದ ಸೆನ್ನಾ, 0-41 ಅನ್ನೋ ಸಾಕ್ಷ್ಯ ಚಿತ್ರ ನಿರ್ಮಿಸಿದ್ರು. 

  ಇದೆಲ್ಲಕ್ಕೂ ಮೊದಲು ಅಂತಾರಾಷ್ಟ್ರೀಯ ಜಾಹೀರಾತು ಕಂಪೆನಿಯಲ್ಲಿ 8 ವರ್ಷ, ಅಮೆರಿಕ, ದುಬೈಗಳಲ್ಲಿ ಬ್ಯುಸಿನೆಸ್ ಸಲಹೆಗಾರರಾಗಿ ಕೆಲಸ ಮಾಡಿದ ಅನುಭವವೂ ಇದೆ. 

  ಜಾಹೀರಾತು, ಬ್ಯುಸಿನೆಸ್ ಕ್ಷೇತ್ರಗಳಲ್ಲಿ ಸಕ್ಸಸ್ ಕಂಡಿದ್ದ ಸೆನ್ನಾಗೆ ರಕ್ಷಿತ್ ಶೆಟ್ಟಿ ಮತ್ತು ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ದೇಶನದ ಅವಕಾಶ ಕೊಟ್ಟಿದ್ದಾರೆ. ದಿಗಂತ್, ಪೂಜಾ ದೇವರಿಯಾ, ಅಶ್ವಿನ್ ರಾವ್, ಶ್ರೇಯಾ ಅಂಚನ್ ಮೊದಲಾದವರು ನಟಿಸಿದ್ದಾರೆ. 3 ಜನರೇಷನ್‍ಗಳ ಪ್ರೀತಿಯ ಕಥೆ ಚಿತ್ರದಲ್ಲಿದೆ.

 • ಕಥೆಯೊಂದು ಶುರುವಾಗಿದೆ ಹಾಡುಗಳ ಮೋಡಿಗಾರನ ಕಥೆ

  katheyondhu shuruvagidhe music director

  ಕಥೆಯೊಂದು ಶುರುವಾಗಿದೆ ಚಿತ್ರದ ಹಾಡುಗಳಲ್ಲಿ ಅಬ್ಬರವಿಲ್ಲ. ಆದರೆ, ಹೃದಯಕ್ಕೆ ಇಳಿಯುತ್ತಿವೆ. ಟಪ್ಪಾಂಗುಚ್ಚಿ ಇಲ್ಲ. ಎದೆಯೊಳಗಿನ ಲಬ್ ಡಬ್‍ಗೆ ಹತ್ತಿರವಾಗುತ್ತಿವೆ. ವಿಭಿನ್ನ ಎನ್ನಿಸುತ್ತಿರುವ ಈ ಹಾಡುಗಳ ಹಿಂದಿನ ಮೋಡಿಗಾರನ ಹೆಸರು ಸಚಿನ್ ವಾರಿಯರ್. ಮಲಯಾಳಂ ಚಿತ್ರರಂಗದ ಸಂಗೀತ ನಿರ್ದೇಶಕ.

  ಮಲಯಾಳಂನಲ್ಲಿ ಆನಂದಂ ಚಿತ್ರಕ್ಕೆ ಸಚಿನ್ ವಾರಿಯರ್ ಸಂಗೀತ ನೀಡಿದ್ದರು. ಆ ಹಾಡು ಕೇಳಿದ್ದ ಕಥೆಯೊಂದು ಶುರುವಾಗಿದೆ ನಿರ್ದೇಶಕ ಸನ್ನಾ ಹೆಗ್ಡೆ,  ಅವರಿಂದಲೇ ತಮ್ಮ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿಸೋಕೆ ಮನಸ್ಸು ಮಾಡಿಬಿಟ್ಟರು. `ಸೆನ್ನಾ ಆಫರ್ ಬಂದಾಗ ನನಗೆ ಇನ್ನೂ ಕನ್ನಡ ಚಿತ್ರಗಳಿಗೂ ಸಂಗೀತ ನೀಡುತ್ತೇನೆ ಎಂಬ ಕಲ್ಪನೆಯೂ ಇರಲಿಲ್ಲ. ಆಕಸ್ಮಿಕವಾಗಿ ಸಿಕ್ಕ ಅವಕಾಶ ಅದು. ಚಿತ್ರದ ಸ್ಕ್ರಿಪ್ಟ್ ಕೇಳಿದಾಗ, ಅದು ನಾನು ಇಷ್ಟಪಡುವಂತಹಾ ಕಥೆಯೇ ಆಗಿತ್ತು. ಹೀಗಾಗಿ ಮ್ಯೂಸಿಕ್ ಕೊಡೋಕೆ ಒಪ್ಪಿಕೊಂಡೆ' ಇದು ಸಚಿನ್ ವಾರಿಯರ್ ಮಾತು.

  ಚಿತ್ರಕ್ಕೆ ಹಲವು ಟ್ಯೂನ್ ಕೊಟ್ಟಿದ್ದೇನೆ. ಕೆಲವು ಟ್ಯೂನ್‍ಗಳನ್ನು ಹಾಡುಗಳಲ್ಲಿ ಬಳಸಿಕೊಂಡಿದ್ದಾರೆ. ಇನ್ನೂ ಕೆಲವು ಟ್ಯೂನ್‍ಗಳನ್ನು ಹಿನ್ನೆಲೆ ಸಂಗೀತಕ್ಕೆ ಬಳಸಿಕೊಂಡಿದ್ದಾರೆ. ಇಂಟರ್‍ನ್ಯಾಷನಲ್ ಮ್ಯೂಸಿಕ್ ಮತ್ತು ಸ್ಥಳೀಯ ಸಂಗೀತ..ಎರಡೂ ಮಿಕ್ಸ್ ಆಗಿರುವ ಸಂಗೀತ ಚಿತ್ರದಲ್ಲಿದೆ ಎನ್ನುತ್ತಾರೆ ಸಚಿನ್ ವಾರಿಯರ್.

  ಪುಷ್ಕರ್ ಮಲ್ಲಿಕಾರ್ಜುನಯ್ಯ, ರಕ್ಷಿತ್ ಶೆಟ್ಟಿ ನಿರ್ಮಾಣದ ಚಿತ್ರಕ್ಕೆ ದಿಗಂತ್ ಹೀರೋ. ಪೂಜಾ ದೇವರಿಯಾ ನಾಯಕಿ. ನಾಲ್ಕು ವಯೋಮಾನದವರ ಪ್ರೇಮಕಥೆ ಹೊಂದಿರುವ ಚಿತ್ರ ಇದೇ ವಾರ ತೆರೆಗೆ ಬರುತ್ತಿದೆ. ಕರ್ನಾಟಕದಲ್ಲಿ ಬಿಡುಗಡೆಯಾಗುವ ಮುನ್ನವೇ, ವಿದೇಶಗಳಲ್ಲಿ ಪ್ರೀಮಿಯರ್ ಶೋ ಆಯೋಜಿಸಿಲಾಗಿದೆ. ಅಷ್ಟೇ ಅಲ್ಲ, ಬಿಡುಗಡೆಗೆ ಮುನ್ನಾ ದಿನ ತಮ್ಮ ತಮ್ಮ ಪ್ರೇಮಕಥೆ ಹೇಳಿಕೊಂಡಿರುವ ಆಯ್ದ ಪ್ರೇಮಿಗಳಿಗೆ ಸಿನಿಮಾ ತೋರಿಸುವುದಕ್ಕೂ ಚಿತ್ರತಂಡ ಸಿದ್ಧತೆ ಮಾಡಿಕೊಂಡಿದೆ.

 • ಕಥೆಯೊಂದು ಶುರುವಾಗಿದೆ.. ನಾಯಕಿಗೆ ಕನ್ನಡ ಕಲಿಸಿದ ಕಥೆ

  katheyondhu shuruvagidhe learns kannada while shooting

  ಕಥೆಯೊಂದು ಶುರುವಾಗಿದೆ.. ಚಿತ್ರದ ನಾಯಕಿ ಪೂಜಾ ದೇವರಿಯಾ. ಪೂಜಾ ಅವರ ತಾಯಿ ಕನ್ನಡದವರಾದರೂ, ಹುಟ್ಟಿದ್ದು, ಬೆಳೆದಿದ್ದು ತಮಿಳುನಾಡಿನಲ್ಲಿ. ಕನ್ನಡದಲ್ಲಿ ನಟಿಸಬೇಕು ಎಂಬ ಆಸೆಯಿತ್ತು. ನಿರ್ದೇಶಕಿ ಸೆನ್ನಾ ಕಥೆ ಹೇಳಿದಾಗ ಇಷ್ಟವಾಯ್ತು. ನನ್ನ ಅಜ್ಜಿ ಮತ್ತು ಸ್ನೇಹಿತರ ಸಹಾಯದಿಂದ ಕನ್ನಡ ಕಲಿತಿದ್ದಷ್ಟೇ ಅಲ್ಲ, ಸೆಟ್‍ನಲ್ಲಿ ಕನ್ನಡದಲ್ಲಿಯೇ ಮಾತನಾಡುತ್ತಿದ್ದೆ ಎಂದು ನೆನಪು ಹಂಚಿಕೊಂಡಿದ್ದಾರೆ ಪೂಜಾ ದೇವರಿಯಾ.

  ಚಿತ್ರದ ಡೈಲಾಗುಗಳೂ ಇಷ್ಟವಾದವು. ನಾಯಕಿಯಾಗಿ ನಟಿಸಿರುವುದಷ್ಟೇ ಅಲ್ಲ, ಗುಡ್‍ಮಾರ್ನಿಂಗ್ ಹಾಡಿಗೆ ಕೊರಿಯಾಗ್ರಫಿ ಕೂಡಾ ಮಾಡಿದ್ದೇನೆ. ಸಹಜವಾದ ಸ್ಟೆಪ್ಪುಗಳನ್ನೇ ಬಳಸಿ ಹಾಡು ಮಾಡಿದ್ದೇವೆ ಎಂದು ಹಾಡಿನ ಬಗ್ಗೆಯೂ ಹೇಳಿಕೊಂಡಿದ್ದಾರೆ ಪೂಜಾ.

  ಕನ್ನಡದಲ್ಲಿ ಉಚ್ಚಾರಣೆ ತಪ್ಪಾದಾಗ,ನಾಯಕ ದಿಗಂತ್ ತಿದ್ದುತ್ತಿದ್ದರಂತೆ. ಚಿತ್ರದಲ್ಲಿ ನನ್ನದು ಮಹತ್ವಾಕಾಂಕ್ಷೆಯ ಹುಡುಗಿಯ ಪಾತ್ರ. 4 ದಿನಗಳಲ್ಲಿ ನಡೆಯುವ ಕಥೆಯನ್ನೇ ಸಿನಿಮಾ ಮಾಡಲಾಗಿದೆ. ಚಿತ್ರದ ಬಗ್ಗೆ ಭಾರಿ ಕುತೂಹಲವಿದೆ ಎಂದಿದ್ದಾರೆ ಪೂಜಾ.

  ಪುಷ್ಕರ್ ಮಲ್ಲಿಕಾರ್ಜುನಯ್ಯ ಹಾಗೂ ರಕ್ಷಿತ್ ಶೆಟ್ಟಿ ನಿರ್ಮಾಣದ ಚಿತ್ರದ ಬಗ್ಗೆ ಪೂಜಾ ಅವರಿಗಷ್ಟೇ ಅಲ್ಲ, ಕನ್ನಡ ಚಿತ್ರರಸಿಕರಿಗೂ ಕುತೂಹಲವಿದೆ.

 • ಗಾಳಿಪಟ 2ಗೆ ಕುಂಭಳಕಾಯಿ

  ಗಾಳಿಪಟ 2ಗೆ ಕುಂಭಳಕಾಯಿ

  ಯೋಗರಾಜ್ ಭಟ್, ಗೋಲ್ಡನ್ ಸ್ಟಾರ್ ಗಣೇಶ್, ದಿಗಂತ್, ಪವನ್ ಕುಮಾರ್ ಕಾಂಬಿನೇಷನ್ನಿನ ಸಿನಿಮಾ ಗಾಳಿಪಟ 2. ಕೊರೊನಾ ಕಾರಣದಿಂದಾಗಿ ಚಿತ್ರೀಕರಣಕ್ಕೇ ಸುದೀರ್ಘ ಸಮಯ ತೆಗೆದುಕೊಂಡಿದ್ದ ಚಿತ್ರವೀಗ ಶೂಟಿಂಗ್ ಮುಗಿಸಿ ಕುಂಭಳಕಾಯಿ ಒಡೆದಿದೆ. ಡೈರೆಕ್ಟರ್ ಲೂಸಿಯಾ ಪವನ್ ಈ ಚಿತ್ರದ ಮೂಲಕ ಹೀರೋ ಆಗುತ್ತಿದ್ದಾರೆ. ಶರ್ಮಿಳಾ ಮಾಂಡ್ರೆ,ವೈಭವಿ ಶಾಂಡಿಲ್ಯ, ಸಂಯುಕ್ತ ಮೆನನ್ ನಾಯಕಿಯರು. ಸೂರಜ್ ಪ್ರೊಡಕ್ಷನ್ಸ್ ಬ್ಯಾನರ್‍ನಲ್ಲಿ ರಮೇಶ್ ರೆಡ್ಡಿ ನಿರ್ಮಿಸುತ್ತಿರುವ ಗಾಳಿಪಟ 2 ಚಿತ್ರ 2022ರ ಆರಂಭದಲ್ಲಿ ಬಿಡುಗಡೆಯಾಗುವ ಎಲ್ಲ ಸೂಚನೆಗಳೂ ಇವೆ.

 • ಜುಲೈ 20ಕ್ಕೆ ಕಥೆಯೊಂದು ಶುರುವಾಗಲಿದೆ

  katheyondhu shuruvagidhe on july 20th

  ಕಥೆಯೊಂದು ಶುರುವಾಗಿದೆ.. ಇದು ದಿಗಂತ್ ಅಭಿನಯದ ಸಿನಿಮಾ. ಸನ್ನಾ ಹೆಗ್ಡೆ ನಿರ್ದೇಶನದ, ಪುಷ್ಕರ್ ಮಲ್ಲಿಕಾರ್ಜುನಯ್ಯ ಹಾಗೂ ರಕ್ಷಿತ್ ಶೆಟ್ಟಿ ನಿರ್ಮಾಣದ ಸಿನಿಮಾ ಬಿಡುಗಡೆಗೆ ಸಿದ್ಧಗೊಂಡಿದೆ. ಜುಲೈ 20ಕ್ಕೆ ಸಿನಿಮಾ ರಿಲೀಸ್ ಆಗಲಿದೆ.

  ದಿಗಂತ್‍ಗೆ ಪೂಜಾ ದೇವರಿಯಾ ನಾಯಕಿ. ಅರುಣಾ ಬಾಲರಾಜ್, ಬಾಬು ಹಿರಣ್ಣಯ್ಯ ಮೊದಲಾದವರು ನಟಿಸಿರುವ ಚಿತ್ರ, ವಿಭಿನ್ನ ಟೈಟಲ್ ಮೂಲಕವೇ ನಿರೀಕ್ಷೆ ಹುಟ್ಟಿಸಿದೆ.

 • ಡಿಸೆಂಬರ್ ಗೆ ದಿಗಂತ್-ಐಂದ್ರಿತಾ ಮದುವೆ 

  aindritha to wed diganth in december

  ದೂದ್‍ಪೇಡ ದಿಗಂತ್ ಮತ್ತು ಐಂದ್ರಿತಾ ತಮ್ಮ ಪ್ರೀತಿಯನ್ನು ಈಗ ಗುಟ್ಟಾಗೇನೂ ಇಟ್ಟಿಲ್ಲ. ತಾವಿಬ್ಬರೂ ಜನುಮದ ಜೋಡಿ ಅನ್ನೋದನ್ನ ಓಪನ್ ಆಗಿಯೇ ಹೇಳಿಕೊಂಡಿದ್ದಾರೆ. ಹಲವು ವರ್ಷಗಳಿಂದ ಲವ್ ಮಾಡ್ತಾನೇ ಇರೋ ಈ ಜೋಡಿ, ಈ ವರ್ಷದ ಕೊನೆಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದೆಯಂತೆ.

  ಇಬ್ಬರೂ ಮಾತನಾಡಿಕೊಂಡಿದ್ದೇವೆ. ಡಿಸೆಂಬರ್‍ನಲ್ಲಿ ಮದುವೆಯಾಗೋ ಆಲೋಚನೆ ಇದೆ. ದಿನಾಂಕ, ಸ್ಥಳ ಎಲ್ಲ ಫಿಕ್ಸ್ ಆದ ಮೇಲೆ ನಾನೇ ಅಧಿಕೃತವಾಗಿ ಹೇಳ್ತೇನೆ ಎಂದಿದ್ದಾರೆ ದಿಗಂತ್.

  ಮನೆಯಲ್ಲಿನ್ನೂ ಮದುವೆಯ ಬಗ್ಗೆ ಚರ್ಚೆ ಮಾಡಿಲ್ಲ. ಅವರ ಒಪ್ಪಿಗೆ ತೆಗೆದುಕೊಂಡೇ ಮುನ್ನಡೆಯುತ್ತೇವೆ. ಡಿಸೆಂಬರ್ ನಂತರ ದಿಗಂತ್ ಜೀವನದಲ್ಲಿ ಹೊಸ ಕಥೆ ಶುರುವಾಗಲಿದೆ ಎಂದಿದ್ದಾರೆ ದಿಗಂತ್.

  ಅಫ್‍ಕೋರ್ಸ್, ಸದ್ಯಕ್ಕೆ ದಿಗಂತ್ `ಕಥೆಯೊಂದು ಶುರುವಾಗಿದೆ' ಚಿತ್ರದ ಹೀರೋ. ಆ ಚಿತ್ರದ ನಿರ್ಮಾಪಕರು ಪುಷ್ಕರ್ ಮಲ್ಲಿಕಾರ್ಜುನಯ್ಯ ಮತ್ತು ರಕ್ಷಿತ್ ಶೆಟ್ಟಿ. ಪರಂವಾ ಸ್ಟುಡಿಯೋಸ್‍ನಿಂದ ನಿರ್ಮಾಣವಾಗುತ್ತಿರುವ ಚಿತ್ರಕ್ಕೆ ಸನ್ನಾ ಹೆಗಡೆ ನಿರ್ದೇಶನವಿದೆ. 

 • ಡ್ರಗ್ಸ್ ಆಕ್ಸಿಡೆಂಟ್ - ದಿಗಂತ್, ಪ್ರಣಮ್ ದೇವರಾಜ್​ಗೆ ನೋಟಿಸ್

  diganth, pranam devraj gets notice

  ಉದ್ಯಮಿ ದಿ.ಆದಿಕೇಶವುಲು ಮೊಮ್ಮಗ ಗೀತಾವಿಷ್ಣು ಅವರ ಕಾರ್ ಅಪಘಾತ ಪ್ರಕರಣಕ್ಕೆ ದಿನೇ ದಿನೇ ವಿಚಿತ್ರ ತಿರುವು ಸಿಗುತ್ತಿದೆ. ಆರಂಭದಲ್ಲಿ ಅಪಘಾತ ನಡೆದಾಗ ಕಾರ್​ನಲ್ಲಿ ಪ್ರಜ್ವಲ್ ದೇವರಾಜ್ ಮತ್ತು ದಿಗಂತ್ ಇದ್ದರು ಎಂದು ಸುದ್ದಿಯಾಗಿತ್ತು. ನಂತರ, ಅವರಿಬ್ಬರೂ ಶೂಟಿಂಗ್​ನಲ್ಲಿದ್ದರು. ಬೆಂಗಳೂರಿನಲ್ಲಿ ಇರಲೇ ಇಲ್ಲ ಎಂಬ ಸ್ಪಷ್ಟನೆ ಸಿಕ್ಕಿತ್ತು. ಇತ್ತ, ಗೀತಾವಿಷ್ಣು ಆಸ್ಪತ್ರೆಯಿಂದ ಪರಾರಿಯಾಗಿದ್ದು, ಇನ್ನೂ ಸಿಕ್ಕಿಲ್ಲ. ಹೀಗಿರುವಾಗಲೇ ಇದೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ದೇವರಾಜ್ ಅವರ ಇನ್ನೊಬ್ಬ ಪುತ್ರ ಪ್ರಣಮ್ ದೇವರಾಜ್ ಹಾಗೂ ದಿಗಂತ್​ಗೆ ಪೊಲೀಸರು ನೊಟೀಸ್ ನೀಡಿದ್ದಾರೆ.

  ನೋಟಿಸ್ ಬಂದಿರುವುದು ನಿಜ. ಗೀತಾವಿಷ್ಣು ಹಾಗೂ ಪ್ರಣಮ್ ದೇವರಾಜ್ ಸ್ನೇಹಿತರು. ಅಪಘಾತ ನಡೆದ ನಂತರ ಪ್ರಣಮ್ ಅಪಘಾತ ಸ್ಥಳಕ್ಕೆ ಹೋಗಿದ್ದರು. ಪೊಲೀಸರು ಗೀತಾವಿಷ್ಣು ಅವರನ್ನು ವಶಕ್ಕೆ ತೆಗೆದುಕೊಂಡ ಮೇಲೆ ವಾಪಸ್ ಆಗಿದ್ದರು. ಪೊಲೀಸರ ನೋಟಿಸ್​ಗೆ ಉತ್ತರ ನೀಡುತ್ತೇವೆ ಎಂದಿದ್ದಾರೆ ದೇವರಾಜ್.

  ದಿಗಂತ್​ಗೆ ಇನ್ನೂ ನೋಟಿಸ್ ಸಿಕ್ಕಿಲ್ಲ. ಆದರೆ, ನೋಟಿಸ್ ಕಳಿಸಿರುವುದನ್ನು ಪೊಲೀಸ್ ಮೂಲಗಳು ಸ್ಪಷ್ಟಪಡಿಸಿವೆ.

  Related Articles :-

  Prem And Vijay Raghavendra Come In Favor Of Prajwal And Diganth

  ಡ್ರಗ್ಸ್ ಆಕ್ಸಿಡೆಂಟ್ - ಪ್ರಜ್ವಲ್, ದಿಗಂತ್ ಹೇಳಿದ್ದೇನು..?

 • ಡ್ರಗ್ಸ್ ಆಕ್ಸಿಡೆಂಟ್ - ಪ್ರಜ್ವಲ್, ದಿಗಂತ್ ಹೇಳಿದ್ದೇನು..?

  one accident two stars

  ಇಂದು ಬೆಳಗ್ಗೆಯಷ್ಟೇ ಬೆಂಗಳೂರಿನ ಸೌತ್ ಎಂಡ್ ಸರ್ಕಲ್​ನಲ್ಲಿ ಒಂದು ಅಪಘಾತವವಾಯ್ತು. ಖ್ಯಾತ ಉದ್ಯಮಿ ಆದಿಕೇಶವುಲು ಅವರ ಮೊಮ್ಮಗ ವಿಷ್ಣು ಅವರಿದ್ದ ಕಾರು, ಓಮ್ನಿ ಕಾರ್​ಗೆ ಡಿಕ್ಕಿ ಹೊಡೆದಿತ್ತು. ಆಗ ಕಾರ್​ನಲ್ಲಿ ವಿಷ್ಣು ಅವರ ಜೊತೆಗೆ ಇಬ್ಬರು ಸಿನಿಮಾ ಸ್ಟಾರ್​ಗಳಿದ್ದರು. ಅವರು ವಿಪರೀತ ಕುಡಿದಿದ್ದರು. ಹಾಗೂ ಡ್ರಗ್ಸ್​ ನಶೆಯಲ್ಲಿದ್ದರು ಎಂದು ಪೊಲೀಸ್ ಮೂಲಗಳು ಹೇಳಿದವು. ಕಾರ್​ನಲ್ಲಿ 200 ಗ್ರಾಂ ಗಾಂಜಾ ಕೂಡಾ ಸಿಕ್ಕಿತ್ತು.

  ಅಷ್ಟಾಗಿದ್ದೇ ತಡ, ಕೆಲವರು ಪ್ರಜ್ವಲ್ ದೇವರಾಜ್ ಮತ್ತು ದಿಗಂತ್ ಅವರ ಹೆಸರು ಹೇಳಿದವು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಇಬ್ಬರೂ ನಟರು ತಾವು ಕಾರ್​ನಲ್ಲಿ ಇರಲಿಲ್ಲ. ನಮಗೂ ಅದಕ್ಕೂ ಸಂಬಂಧವಿಲ್ಲ. ವಿಷ್ಣು ಸ್ನೇಹಿತ ಹೌದು. ಆದರೆ, ಕಾರ್​ನಲ್ಲಿ ನಾವಿರಲಿಲ್ಲ. ಸುಖಾಸುಮ್ಮನೆ ಸುಳ್ಳು ಸುದ್ದಿ ಹಬ್ಬಿಸಬೇಡಿ. ನಮಗೆ ಡ್ರಗ್ಸ್ ಚಟವೂ ಇಲ್ಲ. ನಮ್ಮ ಮರ್ಯಾದೆ ತೆಗೆಯಬೇಡಿ ಎಂದಿದ್ದಾರೆ. ಸುಮ್ಮ ಸುಮ್ಮನೆ ಸುಳ್ಳು ಸುದ್ದಿ ಹಬ್ಬಿಸದಂತೆ ಮಾಧ್ಯಮಗಳಿಗೆ ಕಿವಿಮಾತು ಹೇಳಿದ್ದಾರೆ.

 • ತಮಿಳು ನಟಿಗೆ ಕನ್ನಡ ಕಲಿಸಿದ ದಿಗಂತ್

  katheyondhu shuruvagidhe

  ದೂದ್‍ಪೇಡ ದಿಗಂತ್ ಅಭಿನಯದ ಕಥೆಯೊಂದು ಶುರುವಾಗಿದೆ ಚಿತ್ರ ಚಿತ್ರೀಕರಣ ಹಂತದಲ್ಲಿದೆ. ಚಿತ್ರದಲ್ಲಿ ನಾಯಕಿಯಾಗಿ ನಟಿಸಿರುವುದು ಪೂಜಾ ದೇವಾರಿಯಾ. ಕನ್ನಡದವರಲ್ಲ. ತಮಿಳಿನಲ್ಲಿ ಈಗಾಗಲೇ 4 ಸಿನಿಮಾ ಮಾಡಿರುವ ಪೂಜಾ ಅವರ ನಾಲ್ಕಕ್ಕೆ ನಾಲ್ಕೂ ಚಿತ್ರಗಳಿಗೆ ಪ್ರಶಸ್ತಿ ಬಂದಿರುವುದು ವಿಶೇಷ. ತಾಯಿ ಕನ್ನಡದವರಾದರೂ ಕನ್ನಡ ಗೊತ್ತಿಲ್ಲದೆ ಬೆಳೆದಿದ್ದ ಪೂಜಾಗೆ ಈಗ ದಿಗಂತ್ ಕನ್ನಡ ಕಲಿಸಿದ್ದಾರೆ.

  ಚಿತ್ರದಲ್ಲಿ ನಾಯಕ & ನಾಯಕಿ ಮಧ್ಯೆ ಉದ್ದುದ್ದ ಡೈಲಾಗ್‍ಗಳಿವೆ. ಅವುಗಳನ್ನು ಹೇಳಬೇಕು ಎಂದರೆ, ಕನ್ನಡ ಕಲಿಯುವುದು ಅನಿವಾರ್ಯ. ಹೀಗಾಗಿ ಕನ್ನಡ ಕಲಿತೆ ಎಂದು ಹೇಳಿಕೊಂಡಿದ್ದಾರೆ ಪೂಜಾ ದೇವರಿಯಾ. ಸೆನ್ನಾ ಹೆಗ್ಡೆ ನಿರ್ದೇಶನದ ಚಿತ್ರ ತಂಡದಲ್ಲಿ ತಂತ್ರಜ್ಞರ ವಿಭಾಗದಲ್ಲಿ ಹೆಚ್ಚು ಹೆಚ್ಚು ಮಹಿಳೆಯರೇ ಇರುವುದು ವಿಶೇಷ.

 • ದಿಗಂತ್`ಗೆ ತಾತನಾಗುತ್ತಿದ್ದಾರೆ ಅನಂತ ನಾಗ್

  ದಿಗಂತ್`ಗೆ ತಾತನಾಗುತ್ತಿದ್ದಾರೆ ಅನಂತ ನಾಗ್

  ಅನಂತ್ ನಾಗ್ ಅವರಿಗೆ ತಾತನ ಪಾತ್ರಗಳು ಹೊಸದಲ್ಲ. ಆದರೆ ದಿಗಂತ್‍ಗೆ ತಾತನಾಗುತ್ತಿರುವುದು ಹೊಸದು. ತಿಮ್ಮಯ್ಯ & ತಿಮ್ಮಯ್ಯ ಅನ್ನೋ ಚಿತ್ರವೊಂದು ಸೆಟ್ಟೇರುತ್ತಿದ್ದು, ದಿಗಂತ್ ಮತ್ತು ಅನಂತ ನಾಗ್ ಮೊಮ್ಮಗ, ತಾತನಾಗಿ ನಟಿಸಲಿದ್ದಾರೆ. ವಜ್ರಕಾಯ ಖ್ಯಾತಿಯ ಶುಭ್ರಾ ಅಯ್ಯಪ್ಪ ಹೀರೋಯಿನ್.

  ಸಂಜಯ್ ಶರ್ಮಾ ಎಂಬುವವರು ಚಿತ್ರವನ್ನು ನಿರ್ದೇಶಿಸಲಿದ್ದು, ಅವರ ಅಣ್ಣ ರಾಜೇಶ್ ಶರ್ಮಾ ನಿರ್ಮಾಪಕರಾಗಿದ್ದಾರೆ. ದಿಗಂತ್ ಮತ್ತು ಅನಂತ್ ಇಬ್ಬರೂ ಒಟ್ಟಿಗೇ ಕೆಲವು ಚಿತ್ರಗಳಲ್ಲಿ ಈಗಾಗಲೇ ನಟಿಸಿದ್ದಾರೆ. ಪಂಚರಂಗಿ, ಗಾಳಿಪಟ ಸೇರಿದಂತೆ ಕಾಂಬಿನೇಷನ್ ಚಿತ್ರಗಳು ಹಿಟ್ ಕೂಡಾ ಆಗಿವೆ.

 • ದುಬೈನಲ್ಲಿ ಶುರುವಾಗಲಿದೆ ಕಥೆ..

  katheyondhu shuruvagidhe to release in uae

  ರಾಜ್ಯಾದ್ಯಂತ ಬಾಕ್ಸಾಫೀಸ್ ಮತ್ತು ಪ್ರೇಮಿಗಳ ಹೃದಯದಲ್ಲಿ ಹೊಸ ಕಥೆ ಬರೆಯುತ್ತಿರುವ ಕಥೆಯೊಂದು ಶುರುವಾಗಿದೆ ಚಿತ್ರ, ಈಗ ದುಬೈನಲ್ಲಿ ತೆರೆ ಕಾಣುತ್ತಿದೆ. ಇಂದಿನಿಂದ ದುಬೈನಲ್ಲಿ ಕಥೆಯೊಂದು ಶುರುವಾಗಿದೆ ಚಿತ್ರ ರಿಲೀಸ್.

  ದುಬೈ, ಶಾರ್ಜಾ, ಅಲೈನ್ ಹಾಗೂ ಅಬುದಾಬಿಯಲ್ಲಿ ಚಿತ್ರ ಪ್ರದರ್ಶನ ಶುರುವಾಗುತ್ತಿದೆ. ದುಬೈನಲ್ಲೇ 10 ಸ್ಕ್ರೀನ್‍ಗಳಲ್ಲಿ ರಿಲೀಸ್ ಆಗುತ್ತಿರುವುದು ವಿಶೇಷ. ದಿಗಂತ್‍ರ ಕಮ್‍ಬ್ಯಾಕ್ ಸಿನಿಮಾ ಎನ್ನಲಾಗುತ್ತಿರುವ ಚಿತ್ರಕ್ಕೆ ಪುಷ್ಕರ್ ಮಲ್ಲಿಕಾರ್ಜುನಯ್ಯ ಮತ್ತು ರಕ್ಷಿತ್ ಶೆಟ್ಟಿ ನಿರ್ಮಾಪಕರು. ಸೆನ್ನಾ ಹೆಗ್ಡೆ ನಿರ್ದೇಶನದ ಮೊದಲ ಸಿನಿಮಾ ಕಥೆಯೊಂದು ಶುರುವಾಗಿದೆ.

 • ನಾಯಕಿಯೇ ಕೊರಿಯೋಗ್ರಾಫರ್ ಅದ ಕಥೆ

  katheyondhu shuruvagidhe

  ಕಥೆಯೊಂದು ಶುರುವಾಗಿದೆ.. ದಿಗಂತ್ ನಾಯಕತ್ವದ ಈ ಸಿನಿಮಾ ತೆರೆಗೆ ಬರೋಕೆ ಸಿದ್ಧವಾಗಿದೆ. ಅದರಲ್ಲೂ ಚಿತ್ರದ ಗುಡ್‍ಮಾರ್ನಿಂಗ್ ಹಾಡು ಗಮನ ಸೆಳೆಯುತ್ತಿದೆ. ಹಾಡಿನಷ್ಟೇ ವಿಶೇಷವಾಗಿ ಪ್ರೇಕ್ಷಕರನ್ನು ಮರುಳು ಮಾಡಿರುವುದು ಹಾಡಿನ ಕೊರಿಯೋಗ್ರಫಿ. ಆದರೆ, ಅಚ್ಚರಿಯೇನು ಗೊತ್ತಾ..? ಈ ಹಾಡಿಗೆ ಕೊರಿಯೋಗ್ರಫಿ ಮಾಡಿರೋದು ಚಿತ್ರದ ನಾಯಕಿ ಪೂಜಾ ದೇವರಿಯಾ.

  ಚಿತ್ರದ ಹಾಡು ರಿಯಲೆಸ್ಟಿಕ್ ಆಗಿ ಬರಬೇಕು ಅನ್ನೋದು ನಿರ್ದೇಶಕಿ ಸನ್ನಾ ಹೆಗ್ಡೆ ಯೋಜನೆಯಾಗಿತ್ತು. ಅದನ್ನೇ ಅವರು ಪೂಜಾ ಬಳಿ ಹೇಳಿಕೊಂಡಾಗ, ದಿಗಂತ್ ಜೊತೆ ಕೂಡಿಕೊಂಡು ಅವರೇ ಒಂದಷ್ಟು ಪ್ಲಾನ್ ಮಾಡಿದರಂತೆ. ಯಾವುದೇ ರಿಹರ್ಸಲ್ ಇಲ್ಲದೆ ಶೂಟ್ ಮಾಡಿದ ಹಾಡು ಅದು. ಹಾಡಿನ ಮಧ್ಯೆ ಬರುವ ಮಕ್ಕಳಿಗೂ ರಿಹರ್ಸಲ್ ಮಾಡಿಸಿಲ್ಲ ಎಂದು ಥ್ರಿಲ್ಲಾಗಿ ಹೇಳಿಕೊಂಡಿದ್ದಾರೆ ಸನ್ನಾ.

  ಪರಂವಾ ಸ್ಟುಡಿಯೋಸ್‍ರವರ ಕಥೆಯೊಂದು ಶುರುವಾಗಿದೆ ಚಿತ್ರಕ್ಕೆ ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಪಕ. ವಿಭಿನ್ನ ಕಥೆಗಳನ್ನೇ ಹುಡುಕಿ ಹುಡುಕೀ ಸಿನಿಮಾ ಮಾಡುವ ಮಲ್ಲಿಕಾರ್ಜುನಯ್ಯ, ಮತ್ತೊಂದು ಯಶಸ್ಸಿನ ನಿರೀಕ್ಷೆಯಲ್ಲಿದ್ದಾರೆ.

 • ನಿಮ್ ಲವ್ ಸ್ಟೋರಿ ಹೇಳಿ, ಕಥೆಯೊಂದು ಶುರುವಾಗಿದೆ ಟಿಕೆಟ್ ಗೆಲ್ಲಿ..!

  katheyondhy shuruvagidhe movie contest

  ಕಥೆಯೊಂದು ಶುರುವಾಗಿದೆ. ಪರಂವಾ ಸ್ಟುಡಿಯೋಸ್‍ನ ಹೊಸ ಸಿನಿಮಾ. ಆಗಸ್ಟ್ 3ಕ್ಕೆ ರಿಲೀಸ್ ಆಗುತ್ತಿರುವ ಚಿತ್ರದಲ್ಲಿ ದಿಗಂತ್ ಹೀರೋ. ಪೂಜಾ ದೇವರಿಯಾ ಹೀರೋಯಿನ್. ಜೀವನದ ವಿವಿಧ ಹಂತಗಳ ಲವ್‍ಸ್ಟೋರಿಯನ್ನು ಹೇಳುತ್ತಿರುವ ಈ ಸಿನಿಮಾ ಪ್ರೇಕ್ಷಕರಿಗೆ ಒಂದು ಇಂಟರೆಸ್ಟಿಂಗ್ ಸ್ಪರ್ಧೆಯನ್ನಿಟ್ಟಿದೆ. ಆ ಸ್ಪರ್ಧೆಯಲ್ಲಿ ನೀವೂ ಭಾಗವಹಿಸಬಹುದು. ಗೆದ್ದರೆ, ಕಥೆಯೊಂದು ಶುರುವಾಗಿದೆ ಸಿನಿಮಾ ಥಿಯೇಟರ್‍ಗಳಲ್ಲಿ ರಿಲೀಸ್ ಆಗುವ ಒಂದು ದಿನ ಮೊದಲೇ (ಆಗಸ್ಟ್ 2) ಸಿನಿಮಾ ನೋಡಬಹುದು. ಫ್ರೀಯಾಗಿ. ಹಾಗಾದರೆ, ನೀವೇನ್ ಮಾಡ್ಬೇಕು ಗೊತ್ತೇ...

  ನಿಮ್ಮದೇ ಲವ್ ಸ್ಟೋರಿಯನ್ನ ಪುಟ್ಟದಾಗಿ ಹೇಳಿ, ವಿಡಿಯೋ ರೆಕಾರ್ಡ್ ಮಾಡಿ. ಆ ವಿಡಿಯೋವನ್ನು ನಿಮ್ಮದೇ ಪೇಜ್‍ನಲ್ಲಿ ಅಪ್‍ಲೋಡ್ ಮಾಡಿ, ಕಥೆಯೊಂದು ಶುರುವಾಗಿದೆ ಪೇಜ್‍ಗೆ ಲಿಂಕ್ ಮಾಡಿ. ಕಥೆಯೊಂದು ಶುರುವಾಗಿದೆ ಹ್ಯಾಶ್‍ಟ್ಯಾಗ್ ಬಳಸಿ ಪೋಸ್ಟ್ ಮಾಡಿ. ನಂತರ ನಿಮ್ಮ ಲಕ್ ಚೆನ್ನಾಗಿದ್ದರೆ, ನಿಮಗೆ ಆಗಸ್ಟ್ 2ನೇ ತಾರೀಕು, ಬೆಂಗಳೂರಿನ ಮಲ್ಟಿಪ್ಲೆಕ್ಸ್‍ವೊಂದರಲ್ಲಿ ಸಿನಿಮಾ ನೋಡೋಕೆ ಬನ್ನಿ ಅನ್ನೋ ಮೆಸೇಜ್ ಕೊಡುತ್ತೆ ಸಿನಿಮಾ ಟೀಂ.

  ಈ ವಿಡಿಯೋ ಅಪ್‍ಲೋಡ್ ಮಾಡೋಕೆ ನಿಮಗೆ ಕೆಲವು ಅರ್ಹತೆಗಳಿರಬೇಕು. ನೀವು ಪ್ರೀತಿ ಮಾಡಿರಲೇಬೇಕು. ಪ್ರೀತಿ ಮಾಡದೇ ಇರುವವರಿಗೆ ಕಥೆಯೊಂದು ಶುರುವಾಗಿದೆ ಸ್ಪರ್ಧೆಗೆ ನೋ ಎಂಟ್ರಿ. ಹಾಗೆ ಆಯ್ಕೆಯಾದವರನ್ನು ವಿವಿಧ ವಿಭಾಗಗಳಲ್ಲಿ ವಿಭಜಿಸಿ, ಟಿಕೆಟ್ ಕೊಟ್ಟು ಸಿನಿಮಾ ತೋರಿಸ್ತಾರೆ.

  ಮೊದಲ ಆಡಿಟೋರಿಯಂನಲ್ಲಿ - ಪ್ರೀತಿಸಿ ಮದುವೆಯಾಗಿರಬೇಕು.

  2ನೇ ಆಡಿಟೋರಿಯಂನಲ್ಲಿ - ಮದುವೆಯಾಗಿ ಪ್ರೀತಿಸಿರಬೇಕು. ಅರೇಂಜ್ಡ್ ಮ್ಯಾರೇಜ್ ಜೋಡಿ

  3ನೇ ಆಡಿಟೋರಿಯಂನಲ್ಲಿ - ಭಗ್ನಪ್ರೇಮಿಗಳಿಗೆ ಮಾತ್ರ. ಹುಡುಗ/ಹುಡುಗಿ ಇಬ್ಬರಿಗೂ ಅವಕಾಶ

  4ನೇ ಆಡಿಟೋರಿಯಂನಲ್ಲಿ - ಮದುವೆಯಾಗಿ ಯಶಸ್ವಿಯಾಗಿ 25 ವರ್ಷ ಸಂಸಾರ ನಡೆಸಿರುವ ಜೋಡಿಗಳು.

  ಪ್ರತೀ ಆಡಿಟೋರಿಯಂನಲ್ಲಿ ಅಂದ್ರೆ, ಪ್ರೇಮಜೋಡಿ, ಮದುವೆ ಜೋಡಿ, ಭಗ್ನಪ್ರೇಮಿ ಹಾಗೂ ಯಶಸ್ವೀ ದಂಪತಿ ಜೋಡಿಗಳಲ್ಲಿ ತಲಾ 250 ಜನರಿಗೆ ಸಿನಿಮಾ ನೋಡೋಕೆ ಅವಕಾಶ ಇದೆ. ಅದ್ಸರಿ.. ನೀವು ಯಾವ ಗ್ರೂಪಿಗೆ ಬರುತ್ತೀರಿ..?

 • ಪಿಯು ಎಕ್ಸಾಂ ಹೊತ್ತಲ್ಲೇ ``ಪರೀಕ್ಷೆನಾ ಬಡಿಯಾ.. '' ಹಾಡು ಬಿಟ್ಟ ಭಟ್ಟರು

  ಪಿಯು ಎಕ್ಸಾಂ ಹೊತ್ತಲ್ಲೇ ``ಪರೀಕ್ಷೆನಾ ಬಡಿಯಾ.. '' ಹಾಡು ಬಿಟ್ಟ ಭಟ್ಟರು

  ಇವತ್ತಿಂದಾನೇ ಪಿಯುಸಿ ಎಕ್ಸಾಂ ಶುರು. ವಿದ್ಯಾರ್ಥಿಗಳಿಗೆಲ್ಲ ಶುಭವಾಗಲಿ ಎನ್ನುವ ಹಾರೈಕೆ ಮಾಡುತ್ತಿರುವಾಗಲೇ ಭಟ್ಟರು ಹಾಡು ಬಿಟ್ಟಿದ್ದಾರೆ. ಅಲ್ಲಲ್ಲ.. ಹಾರಿಸಿದ್ದಾರೆ. ಗಾಳಿಪಟ 2 ಚಿತ್ರದ ಮೊದಲ ಹಾಡು ``ಪರೀಕ್ಷೆನಾ ಬಡಿಯಾ.. '' ಲಿರಿಕಲ್ ವಿಡಿಯೋ ರಿಲೀಸ್ ಆಗಿದೆ.

  ಪರೀಕ್ಷೆನಾ ಬಡಿಯಾ.. ಪರೀಕ್ಷೆನಾ ಬಡಿಯಾ.. ಕ್ವಶ್ಚನ್ ಪೇಪರ್‍ಗೆ ಎಂಟ್ಹತ್ತು ನಾಗರ್‍ಹಾವ್ ಕಡಿಯಾ.. ಎಂದು ಶುರುವಾಗೋ ಹಾಡು.. ಮೂರೂವರೆ ನಿಮಿಷ ಇದೆ. ಸಾಹಿತ್ಯ ಕೇಳಿದ್ಮೇಲೆ ಬರೆದಿರೋದು ಯೋಗರಾಜ್ ಭಟ್ಟರೇ ಅನ್ನೋದು ಹೇಳಬೇಕಿಲ್ಲ. ಜಯಂತ್ ಕಾಯ್ಕಿಣಿ ಪ್ರಿನ್ಸಿಪಾಲ್ ಆಗಿ ನಟಿಸಿದ್ದಾರಾ? ಹಾಡು ನೋಡಿದಾಗ ಅನ್ನಿಸೋದು ಅದು.

  ಭಟ್ಟರ ಸಾಹಿತ್ಯಕ್ಕೆ ಅರ್ಜುನ್ ಜನ್ಯ ಮ್ಯೂಸಿಕ್ ಕೊಟ್ಟಿದ್ದಾರೆ. ವಿಜಯ್ ಪ್ರಕಾಶ್, ಅರ್ಜುನ್ ಜನ್ಯಾ, ಯೋಗರಾಜ್ ಭಟ್ ಹಾಡಿದ್ದಾರೆ. ಗಣೇಶ್, ದಿಗಂತ್, ಪವನ್, ವೈಭವಿ ಶಾಂಡಿಲ್ಯ, ಶರ್ಮಿಳಾ ಮಾಂಡ್ರೆ ನಟಿಸಿರೋ ಚಿತ್ರಕ್ಕೆ  ಉಮಾ ರಮೇಶ್ ರೆಡ್ಡಿ ನಿರ್ಮಾಪಕರು.

 • ಪೂಜಾ ದೇವರಿಯಾ ಕಥೆ ಶುರುವಾಗಿದ್ದು ಹೀಗೆ..

  pooja remembers her katheyondhu shuruvagidhe

  ಕಥೆಯೊಂದು ಶುರುವಾಗಿದೆ ಚಿತ್ರದ ನಾಯಕಿ ಪೂಜಾ ದೇವರಿಯಾ. ಓದಿದ್ದು ಬೆಳೆದಿದ್ದು ಮುಂಬೈನಲ್ಲಾದರೂ ತಾಯಿ ಕನ್ನಡದವರಂತೆ. ಹೀಗಾಗಿ ಮುಂಬೈನಲ್ಲಿದ್ದರೂ ಅಲ್ಪಸ್ವಲ್ಪ ಕನ್ನಡವೂ ಬರುತ್ತಿತ್ತು. ಆದರೆ, ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು ತಮಿಳು ಚಿತ್ರದ ಮೂಲಕ. ತಮಿಳು ಚಿತ್ರದ ಪ್ರಮೋಷನ್‍ನಲ್ಲಿ ಭಾಗವಹಿಸಿದ್ದಾಗ ರಕ್ಷಿತ್ ಶೆಟ್ಟಿ ಭೇಟಿ ಮಾಡಿದ್ದರಂತೆ ಪೂಜಾ. ಕನ್ನಡದಲ್ಲಿ ಅವಕಾಶ ಸಿಕ್ಕರೆ ನಟಿಸುವ ಆಸೆಯನ್ನೂ ಹೇಳಿಕೊಂಡಿದ್ದರಂತೆ. ಲೂಸಿಯಾ, ಉಳಿದವರು ಕಂಡಂತೆ ಹಾಗೂ ಯು ಟರ್ನ್,ನಾನು ನೋಡಿ ಮೆಚ್ಚಿದ ಕನ್ನಡ ಚಿತ್ರಗಳು. ಇಂತಹ ಸಬ್ಜೆಕ್ಟ್ ಸಿಕ್ಕರೆ ಕನ್ನಡದಲ್ಲಿ ನಟಿಸಬೇಕು ಎಂದುಕೊಳ್ಳುತ್ತಿದ್ದಾಗಲೇ, ಕಥೆಯೊಂದು ಶುರುವಾಗಿದೆ ಚಿತ್ರದ ಆಫರ್ ಬಂತು ಎಂದು ಹೇಳಿಕೊಳ್ತಾರೆ ಪೂಜಾ.

  ಇದು ಎಂಥಹವರೂ ನಾನು ಮಾಡಬೇಕು ಎಂದು ಇಷ್ಟಪಡುವ ಪಾತ್ರ. ಇನ್ನು ಚಿತ್ರದ ಶೂಟಿಂಗ್ ಅಂತೂ ಗೆಳೆಯರ ಜೊತೆ ಟ್ರಿಪ್ ಹೋದ ಹಾಗಿತ್ತು. ಒಬ್ಬರಿಗೊಬ್ಬರು ತಮಾಷೆ ಮಾಡಿಕೊಳ್ಳುತ್ತಾ, ಎಂಜಾಯ್ ಮಾಡಿದೆವು. ಒಂದೇ ಮನೆಯವರು ಎಂಬ ಫೀಲ್ ಇತ್ತು ಎಂದು ಶೂಟಿಂಗ್ ಅನುಭವ ನೆನಪಿಸಿಕೊಳ್ತಾರೆ ಪೂಜೆ.

  ಕಥೆಯೊಂದು ಶುರುವಾಗಿದೆ ಚಿತ್ರದಲ್ಲಿ ತೊಡಗಿಸಿಕೊಂಡ ಮೇಲೆ, ಅಲ್ಪಸ್ವಲ್ಪವಷ್ಟೇ ಬರುತ್ತಿದ್ದ ಕನ್ನಡ ಈಗ ಶೇ.70ರಷ್ಟು ಸುಧಾರಿಸಿದೆಯಂತೆ. ಸೆನ್ನಾ ಹೆಗ್ಡೆ ನಿರ್ದೇಶನದ ಚಿತ್ರದಲ್ಲಿ ಪೂಜಾಗೆ ದಿಗಂತ್ ಹೀರೋ. ಪುಷ್ಕರ್ ಮಲ್ಲಿಕಾರ್ಜುನಯ್ಯ ಮತ್ತು ರಕ್ಷಿತ್ ಶೆಟ್ಟಿ ನಿರ್ಮಾಣದ ಸಿನಿಮಾ, ನಾಳೆ ತೆರೆ ಕಾಣುತ್ತಿದೆ.

   

 • ಫಾರಿನ್ ಕನ್ನಡಿಗರ ಮನಗೆದ್ದ ಕಥೆಯೊಂದು ಶುರುವಾಗಿದೆ

  katheyondhu shuruvagidhe gets good response

  ಕಥೆಯೊಂದು ಶುರುವಾಗಿದೆ. ದಿಗಂತ್ ಅಭಿನಯದ ಸಿನಿಮಾ. ಪೂಜಾ ದೇವರಿಯಾ ನಾಯಕಿ. ಸನ್ನಾ ಹೆಗ್ಡೆ ನಿರ್ದೇಶನದ ಮೊದಲ ಚಿತ್ರಕ್ಕೆ ಪುಷ್ಕರ್ ಮಲ್ಲಿಕಾರ್ಜುನಯ್ಯ ಮತ್ತು ರಕ್ಷಿತ್ ಶೆಟ್ಟಿ ನಿರ್ಮಾಪಕರು. ಆಗಸ್ಟ್ 3ಕ್ಕೆ ರಿಲೀಸ್ ಆಗುತ್ತಿರುವ ಸಿನಿಮಾವನ್ನು ವಿದೇಶಗಳಲ್ಲಿ ಪ್ರೀಮಿಯರ್ ಶೋ ಮೂಲಕ ಪ್ರದರ್ಶನ ಮಾಡಿದೆ ಚಿತ್ರತಂಡ. 

  ವಿದೇಶದಲ್ಲಿರುವ ಕನ್ನಡಿಗರು ಈಗಾಗಲೇ ಚಿತ್ರ ನೋಡಿ ಮೆಚ್ಚಿಕೊಂಡಿರುವುದು ನಿರ್ಮಾಪಕರ ಖುಷಿಗೆ ಕಾರಣವಾಗಿದೆ. ಡಬಲ್ ಮೀನಿಂಗ್ ಇಲ್ಲ. ಬಿಲ್ಡಪ್ ಇಲ್ಲ. ಹೈ ಬೇಸ್ ಮ್ಯೂಸಿಕ್ ಇಲ್ಲ. ಸಿಂಪಲ್ ಕಥೆ, ಫ್ರೆಶ್ ಆದ ನಿರೂಪಣೆ. ಒಂದೊಳ್ಳೆ ಸಿನಿಮಾ ಅನ್ನೋದು ಹಲವು ಪ್ರೇಕ್ಷಕರ ಅಭಿಪ್ರಾಯ. 

  ವಿದೇಶಿ ಪ್ರೇಕ್ಷಕರಿಗೆ ಇಷ್ಟವಾಗಿರೋದು ದಿಗಂತ್‍ರ ಫ್ರೆಶ್ ಲುಕ್. ಕನ್ನಡದಲ್ಲಿ ಇಂತಹ ಇನ್ನಷ್ಟು ಸಿನಿಮಾಗಳು ಬರಲಿ ಎಂದು ಹಾರೈಸಿದ್ದಾರೆ ಫಾರಿನ್ ಕನ್ನಡಿಗರು. 

 • ಬಾಂಗ್ ವೆಡ್ಸ್ ಬೊಮ್ಮನ್ ಅಂದ್ರೆ ಆ್ಯಂಡಿ ವೆಡ್ಸ್ ದಿಗ್ಗಿ

  bang weds bomman invitation

  #ಬಾಂಗ್ ವೆಡ್ಸ್ ಬೊಮ್ಮನ್ ಅನ್ನೊದು ಹ್ಯಾಷ್‍ಟ್ಯಾಗ್. ಇದು ಐಂದ್ರಿತಾ ರೇ ಮತ್ತು ದಿಗಂತ್ ತಮ್ಮ ಮದುವೆ ಆಹ್ವಾನಕ್ಕೆ ಸ್ವತಃ ಸೃಷ್ಟಿಸಿರುವ ಹ್ಯಾಷ್‍ಟ್ಯಾಗ್. ಐಂದ್ರಿತಾ ಬಂಗಾಳಿ ಹುಡುಗಿ. ಹೀಗಾಗಿ (bang)ಬಾಂಗ್. ದಿಗಂತ್ ಬ್ರಾಹ್ಮಣರ ಹುಡುಗ. ಹೀಗಾಗಿ ಬೊಮ್ಮನ್. (bomman). ಹೀಗೆ ತಮ್ಮದೇ ಶೈಲಿಯಲ್ಲಿ ಡಿಫರೆಂಟಾಗಿ ಆಹ್ವಾನ ಕೊಡುತ್ತಿದ್ದಾರೆ ದಿಗಂತ್ ಮತ್ತು ಐಂದ್ರಿತಾ.

  ಮದುವೆ ಮನೆಯಲ್ಲಿ ಬಂಗಾಳಿ ಶೈಲಿಯ ಸೋಲನ್‍ಗುರ್ ರಸಗುಲ್ಲ ಮತ್ತು ಬ್ರಾಹ್ಮಣರ ಸ್ಪೆಷಲ್ ಮಿಡಿ ಉಪ್ಪಿನಕಾಯಿ ಇರುತ್ತದಂತೆ.

 • ಬಿಡುಗಡೆಗೂ ಮೊದಲೇ ಬಂಪರ್ : ಗಾಳಿಪಟ 2 ಬಿಸಿನೆಸ್ ಎಷ್ಟು ಕೋಟಿ?

  ಬಿಡುಗಡೆಗೂ ಮೊದಲೇ ಬಂಪರ್ : ಗಾಳಿಪಟ 2 ಬಿಸಿನೆಸ್ ಎಷ್ಟು ಕೋಟಿ?

  ಗಾಳಿಪಟ 2 ರಿಲೀಸ್ ಆಗೋಕೆ ಸಿದ್ಧವಾಗುತ್ತಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಜೋರಾಗಿ ನಡೆಯುತ್ತಿವೆ. ಯೋಗರಾಜ್ ಭಟ್, ಗಣೇಶ್, ಅನಂತನಾಗ್, ದಿಗಂತ್.. ಎಲ್ಲರೂ 2ನೇ ಬಾರಿಗೆ ಗಾಳಿಪಟ ಹಾರಿಸುತ್ತಿದ್ದರೆ, ಅವರಿಗೆ ಈ ಬಾರಿ ಹೊಸದಾಗಿ ಜೊತೆಯಾಗಿರೋದು ಪವನ್ ಕುಮಾರ್, ಶರ್ಮಿಳಾ ಮಾಂಡ್ರೆ, ವೈಭವಿ ಶಾಂಡಿಲ್ಯ, ಸಂಯುಕ್ತಾ ಮೆನನ್. ಇವರೆಲ್ಲರನ್ನೂ ಒಟ್ಟಿಗೇ ಸೇರಿಸಿರುವ ಕೀರ್ತಿ ರಮೇಶ್ ರೆಡ್ಡಿ ಅವರದ್ದು. ಚಿತ್ರವೀಗ ರಿಲೀಸ್ ಆಗೋಕೂ ಮೊದಲೇ ಭರ್ಜರಿ ಬಿಸಿನೆಸ್ ಮಾಡುತ್ತಿದೆ.

  ಚಿತ್ರದ ಆಡಿಯೋ ರೈಟ್ಸ್ ಸೇರಿದಂತೆ ಕೆಲವು ಹಕ್ಕುಗಳನ್ನು ಆನಂದ್ ಆಡಿಯೋ ತೆಗೆದುಕೊಂಡಿದೆ. ಸ್ಯಾಟಲೈಟ್ ಮತ್ತು ಒಟಿಟಿ ರೈಟ್ಸ್‍ನ್ನು ಝೀ ಗ್ರೂಪ್ ಖರೀದಿಸಿದೆ. ಇದೆಲ್ಲದರಿಂದ ಒಟ್ಟಾರೆ ಈಗಾಗಲೇ 8 ಕೋಟಿ ಲಾಭದಲ್ಲಿದೆ ಗಾಳಿಪಟ 2 ಟೀಂ. ಇನ್ನು ಮುಂದೆ ಬರೋದು ಬೋನಸ್.

  ಅಂದಹಾಗೆ 2008ರಲ್ಲಿ ರಿಲೀಸ್ ಆಗಿದ್ದ ಗಾಳಿಪಟ 25 ಕೋಟಿ ಬಿಸಿನೆಸ್ ಮಾಡಿತ್ತು. ಅದೂ 2008ರಲ್ಲಿ. 25 ವಾರ ಯಶಸ್ವಿಯಾಗಿ ಓಡಿದ್ದ ಸಿನಿಮಾ ಗಾಳಿಪಟ. ಈಗ 2022.  ರಿಲೀಸ್ ಆಗೋಕೂ ಮೊದಲೇ ಗಾಳಿಪಟ 2 ಲಾಭ ಮಾಡುತ್ತಿದೆ. ಸಿನಿಮಾ ಮೇ ತಿಂಗಳಲ್ಲಿ ರಿಲೀಸ್ ಆಗುವ ಸಾಧ್ಯತೆಗಳಿವೆ.

 • ಬ್ಯಾಡ್ ನ್ಯೂಸ್‍ನಿಂದ ಗುಡ್ ನ್ಯೂಸ್‍ಗೆ ಕಥೆಯೊಂದು ಶುರುವಾಗಿದೆ

  katheyondhu shuruvagidhe is a love philosophical story

  ಕಥೆಯೊಂದು ಶುರುವಾಗಿದೆ ಚಿತ್ರದಲ್ಲಿ ಕೇವಲ 3 ಲವ್‍ಸ್ಟೋರಿಗಳಷ್ಟೇ ಅಲ್ಲ, ಜೀವನ ಸಂದೇಶವೂ ಇದೆ. ತತ್ವಜ್ಞಾನವೂ ಇದೆ. ಹರೆಯ, ಮಧ್ಯವಯಸ್ಸು ಮತ್ತು ವೃದ್ಧಾಪ್ಯದ ಪ್ರೇಮ, ಜೀವನದಲ್ಲಿ ಸೋತಿರುವ ಮನಸ್ಸುಗಳು.. ಚಿತ್ರದ ಕಥೆಯ ಪಾತ್ರಗಳು.

  ರೆಸಾರ್ಟ್‍ನ ಕರೆಂಟು, ಫೋನ್ ಬಿಲ್ ಕೂಡಾ ಕಟ್ಟಲಾಗದೆ ಲಾಸಿನಲ್ಲಿರುವ ಮಾಲೀಕನಾಗಿ ದಿಗಂತ್, ಯಾವುದೋ ನೋವು ಮರೆಯಲು ರೆಸಾರ್ಟ್‍ಗೆ ಬರುವ ನಾಯಕಿ.. ಅವರಿಬ್ಬರ ನಡುವೆ ಶುರುವಾಗುವ ಬಾಂಧವ್ಯ, ಅದು ಪ್ರೇಮವಾ..? ಇಂತಹ ಕಥೆಗಳು ಮುಗಿಯುವುದೂ ಇಲ್ಲ. ಮುಗಿಯುವ ಹಂತದಲ್ಲೇ ಇನ್ನೊಂದು ಕಥೆ ಶುರುವಾಗುತ್ತೆ. 

  ಕಥೆಯೊಂದು ಶುರುವಾಗಿದೆ ಚಿತ್ರದ ಕಥಾ ಹಂದರವೂ ಅದೇ. ದಿಗಂತ್, ಪೂಜಾ ದೇವರಿಯಾ ಪ್ರಮುಖ ಪಾತ್ರದಲ್ಲಿರೋ ಚಿತ್ರ, ಅಬ್ಬರವಿಲ್ಲದ ಸೂಕ್ಷ್ಮ ಸಿನಿಮಾ. ಆಗಸ್ಟ್ ಮೊದಲ ವಾರದಲ್ಲಿ ತೆರೆಗೆ ಬರುತ್ತಿರುವ ಚಿತ್ರ, ಯುವ ಮನಸ್ಸುಗಳನ್ನೇ ಉದ್ದೇಶವಾಗಿಟ್ಟುಕೊಂಡು ಚಿತ್ರೀಕರಿಸಿದ ಹಾಗಿದೆ. ಪುಷ್ಕರ್ ಮಲ್ಲಿಕಾರ್ಜುನಯ್ಯ, ರಕ್ಷಿತ್ ಶೆಟ್ಟಿ ನಿರ್ಮಾಣದ ಸಿನಿಮಾಗೆ ಸೆನ್ನಾ ಹೆಗಡೆ ನಿರ್ದೇಶನವಿದೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery