ಮಕ್ರ್ಯುರಿ.. ಮೂಕಿ ಸಿನಿಮಾ. ಸೈಲೆಂಟ್ ಥ್ರಿಲ್ಲರ್. ಇಡೀ ಚಿತ್ರದಲ್ಲಿ ಒಂದೇ ಒಂದು ಸಂಭಾಷಣೆ ಇಲ್ಲ. ಡ್ಯಾನ್ಸ್ ಕೂಡಾ ಇಲ್ಲ. ಕಾಮಿಡಿಯೂ ಇಲ್ಲ. ಆದರೆ, ಈ ಚಿತ್ರದ ಹೀರೋ ಪ್ರಭುದೇವ. ಪ್ರಭುದೇವ ಇದ್ದೂ, ಇವ್ಯಾವುದೂ ಇಲ್ಲ ಎಂದರೆ ಹೇಗೆ..? ಪ್ರಭುದೇವ ಅವರಿಗೆ ಇದು ರಿಸ್ಕ್ ಎನಿಸಲಿಲ್ಲವಾ..? ಇಂಥಾದ್ದೊಂದು ಪ್ರಶ್ನೆಯನ್ನು ಪ್ರಭುದೇವ ಮುಂದಿಟ್ಟಾಗ ಅವರು ಹೇಳಿದ್ದು ನಮಗೆ ಅಚ್ಚರಿ ತರಬಹುದು.
`ನಾನು ಮೂಲತಃ ಡ್ಯಾನ್ಸರ್. ಡ್ಯಾನ್ಸ್ ಮಾಡುವವರು ಮಾತನಾಡದೆಯೇ ಸಂಭಾಷಣೆ ನಡೆಸೋದು ಅತ್ಯಂತ ಸಹಜವಾಗಿ ನಡೆದು ಹೋಗುತ್ತೆ. ಕಣ್ಣು, ಕೈಬಾಯಿ ಸನ್ನೆಗಳಲ್ಲೇ ಕಮ್ಯುನಿಕೇಷನ್ ಆಗಿರುತ್ತೆ. ಹೀಗಾಗಿ ಈ ಸಿನಿಮಾದಲ್ಲಿ ನಟಿಸುವುದು ನನಗೆ ಚಾಲೆಂಜ್ ಎನಿಸಲಿಲ್ಲ'
ಇದು ಪ್ರಭುದೇವ ಉತ್ತರ. ಮಕ್ರ್ಯುರಿ ಚಿತ್ರದ ಕಥೆ ಕೇಳಿದಾಗ ಥ್ರಿಲ್ ಆಗಿದ್ದರಂತೆ ಪ್ರಭುದೇವ. ನನ್ನೊಳಗೆ ಡ್ಯಾನ್ಸರ್ ಅಷ್ಟೇ ಅಲ್ಲ, ನಟನೂ ಇದ್ದಾನೆ. ಒಳ್ಳೆಯ ಪಾತ್ರಕ್ಕಾಗಿ ಮನಸ್ಸು ಹುಡುಕುತ್ತಿರುತ್ತೆ. ಹೀಗಿರುವಾಗಲೇ ಈ ಸಿನಿಮಾದ ಆಫರ್ ಬಂತು. ಥ್ರಿಲ್ಲಾಗಿಬಿಟ್ಟೆ ಅಂತಾರೆ ಪ್ರಭುದೇವ.
ಸಿನಿಮಾ ಇದೇ ವಾರ ರಿಲೀಸ್. ರಕ್ಷಿತ್ ಶೆಟ್ಟಿ, ಪುಷ್ಕರ್ ಮಲ್ಲಿಕಾರ್ಜುನಯ್ಯ ಬ್ಯಾನರ್ನ ಪರಂವಾ ಸ್ಟುಡಿಯೋಸ್ ಸಿನಿಮಾವನ್ನು ರಾಜ್ಯದಾದ್ಯಂತ ಬಿಡುಗಡೆ ಮಾಡುತ್ತಿದೆ.ಕಾರ್ತಿಕ್ ಸುಬ್ಬರಾಜ್ ನಿರ್ದೇಶನದ ಈ ಚಿತ್ರ, ಕಾರ್ತಿಕ್-ಪ್ರಭುದೇವ ಕಾಂಬಿನೇಷನ್ ಹಾಗೂ ಸೈಲೆಂಟ್ ಮೂವಿ ಎಂಬ ಕಾರಣಕ್ಕೇ ನಿರೀಕ್ಷೆ ಹುಟ್ಟಿಸಿದೆ.