ಬಿಗ್ಬಾಸ್ನಿಂದಲೇ ಖ್ಯಾತಿಗೆ ಬಂದ ಪ್ರಥಮ್, ಬಿಗ್ಬಾಸ್ನಲ್ಲಿ ಗೆದ್ದ ಬಹುಮಾನದ ಹಣವನ್ನು ಸಮಾಜಸೇವೆ ಕೆಲಸಗಳಿಗೆ ಬಳಸಿದ್ದು, ಪ್ರಧಾನಿಯವರ ಪರಿಹಾರ ನಿಧಿಗೆ ನೀಡಿದ್ದು ಗೊತ್ತಿರುವ ವಿಚಾರವೇ.
ಪ್ರಥಮ್ ಅವರ ಊರು ಕೊಳ್ಳೇಗಾಲ ತಾಲೂಕಿನ ಹಲಗಾಪುರ. ಆ ಊರಿನಲ್ಲಿಯೂ ಎಲ್ಲ ಊರುಗಳ ಹಾಗೆ ಜನರೆಲ್ಲ ಜಾತಿಬೇಧವಿಲ್ಲದೆ ಬದುಕುತ್ತಿದ್ದಾರೆ. ಲಿಂಗಾಯತರು, ಕುರುಬರು, ದಲಿತರು ಹೆಚ್ಚಿರುವ ಊರಿನಲ್ಲಿ ಸಾಮರಸ್ಯ ನೆಲೆಸಿದೆ.
ಆ ಊರಿನಲ್ಲಿ ಊರ ಜನರೆಲ್ಲ ಸೇರಿ, ಶಿವಲಂಕಾರೇಶ್ವರ ದೇವಸ್ಥಾನ ಕಟ್ಟಿಸುತ್ತಿದ್ದಾರೆ. ಆ ದೇವಸ್ಥಾನಕ್ಕೆ ಮೊದಲು 50 ಸಾವಿರ ರೂ. ದೇಣಿಗೆ ನೀಡಿದ್ದ ಪ್ರಥಮ್, ನಂತರ ಮತ್ತೆ ಒಂದು ಲಕ್ಷ ಹಣ ಕೊಟ್ಟಿದ್ದಾರೆ. ನವೆಂಬರ್ನಲ್ಲಿ ದೇವಸ್ಥಾನ ಉದ್ಘಾಟಿಸುವ ಯೋಜನೆಯಿದೆ. ಸಾಧ್ಯವಾದರೆ, ಆ ಉದ್ಘಾಟನೆಗೆ ಯಡಿಯೂರಪ್ಪನವರನ್ನೇ ಕರೆಸಬೇಕು ಅನ್ನೋದು ಊರವರ ಬಯಕೆ.
ಒಟ್ಟಿನಲ್ಲಿ ಇದುವರೆಗೆ ಹುತಾತ್ಮ ಯೋಧರ ಕುಟುಂಬ, ಊರಿನಲ್ಲಿ ದೇವಸ್ಥಾನ, ಅನಾಥ ಮಕ್ಕಳಿಗೆ ನೆರವು, ಪ್ರಧಾನಮಂತ್ರಿ ಪರಿಹಾರ ನಿಧಿ ಸೇರಿದಂತೆ ಬಿಗ್ಬಾಸ್ ಬಹುಮಾನದ ಹಣದಲ್ಲಿ 20 ಲಕ್ಷವನ್ನು ವಿತರಿಸಿ ಆಗಿದೆ. ಉಳಿದಿರುವ ಹಣವನ್ನೂ ಸಮಾಜ ಸೇವೆ ಕೆಲಸಗಳಿಗೆ ಬಳಸೋದಾಗಿ ಹೇಳಿಕೊಂಡಿದ್ದಾರೆ.