` pratham, - chitraloka.com | Kannada Movie News, Reviews | Image

pratham,

 • ಎಂಎಲ್‍ಎ ಪ್ರಥಮ್‍ಗೆ ಪುನೀತ್, ದರ್ಶನ್ ಬೆಂಬಲ

  mla pratham gets support from puneeth, darshan

  ಒಳ್ಳೆಯ ಹುಡುಗ ಪ್ರಥಮ್ ಅಭಿನಯದ ಎಂಎಲ್‍ಎ ಚಿತ್ರದ ಆಡಿಯೋ ಬಿಡುಗಡೆಗೆ ವೇದಿಕೆ ಸಿದ್ಧಗೊಂಡಿದೆ. ಈ ಚಿತ್ರಕ್ಕೆ ಪ್ರಥಮ್‍ಗೆ ಕನ್ನಡದ ಇಬ್ಬರು ಸ್ಟಾರ್‍ಗಳ ಬೆಂಬಲ ಸಿಕ್ಕಿರುವುದು ವಿಶೇಷ. ಪವರ್ ಸ್ಟಾರ್ ಪುನೀತ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್‍ರ ಬೆಂಬಲ, ಪ್ರೋತ್ಸಾಹ ಪ್ರಥಮ್ ಹೊಸ ಸಿನಿಮಾಗೆ ಸಿಕ್ಕಿದೆ.

  ಕಾರ್ಮಿಕರ ದಿನಾಚರಣೆ ದಿನದಂದೇ ನಡೆಯುತ್ತಿರುವ ಈ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಬರುತ್ತಿರುವುದು ಚಾಲೆಂಜಿಂಗ್ ಸ್ಟಾರ್ ದರ್ಶನ್.

  ಮೈಸೂರಿನಲ್ಲಿ ಯಜಮಾನ ಚಿತ್ರದ ಚಿತ್ರೀಕರಣ ನಡೆಯುವ ಸ್ಥಳಕ್ಕೆ ಹೋಗಿದ್ದ ಪ್ರಥಮ್‍ಗೆ, ಬಂದೇ ಬರ್ತೀನಿ ಅನ್ನೋ ಭರವಸೆ ಕೊಟ್ಟಿದ್ದಾರೆ ದರ್ಶನ್. ದರ್ಶನ್ ಅವರು ಯಾವತ್ತೂ ಕೊಟ್ಟ ಮಾತು ತಪ್ಪಿಲ್ಲ. ಅದು ನಾನು ಅವರಿಂದ ಕಲಿತ ಪಾಠವೂ ಹೌದು. ದರ್ಶನ್ ಅವರನ್ನು ಚಿತ್ರದ ಆಡಿಯೋ ಬಿಡಗಡೆಗೆ ಕರೆತರಲು ಸಹಕರಿಸಿದ ಎಲ್ಲರಿಗೂ ನಾನು ಋಣಿ ಎಂದಿದ್ದಾರೆ ಪ್ರಥಮ್.

  ಇನ್ನು ಎಂಎಲ್‍ಎ ಚಿತ್ರದ ಆಡಿಯೋ ರೈಟ್ಸ್ ಖರೀದಿಸಿರುವುದು ಪುನೀತ್ ರಾಜ್‍ಕುಮಾರ್ ಒಡೆತನದ ಪಿಆರ್‍ಕೆ ಆಡಿಯೋ ಕಂಪೆನಿ. ಸೋನಲ್ ಮಂಟಾರಿಯೋ ಪ್ರಥಮ್‍ಗೆ ನಾಯಕಿಯಾಗಿದ್ದು, ಮಜಾ ಟಾಕೀಸ್ ಮೌರ್ಯ ಚಿತ್ರದ ನಿರ್ದೇಶಕ. ವೆಂಕಟೇಶ್ ರೆಡ್ಡಿ ಚಿತ್ರದ ನಿರ್ಮಾಪಕರು.

 • ಎಂಎಲ್‍ಎಯ ಮೂಲದಲ್ಲಿರೋದು ರಾಮಕೃಷ್ಣ ಪರಮಹಂಸರ ಕಥೆ

  mla story based on ramakrishna parmahamsa

  ಎಂಎಲ್‍ಎ. ಪ್ರಥಮ್ ಅಭಿನಯದ ಸಿನಿಮಾ ರಿಲೀಸ್‍ಗೆ ರೆಡಿಯಾಗಿದೆ. ಇದೇ ವಾರ ತೆರೆಗೆ ಬರುತ್ತಿರೋ ಚಿತ್ರದ ಮೂಲ ಕಥೆಗಾರರು ರಾಮಕೃಷ್ಣ ಪರಮಹಂಸ. ಆಸೆ ಇದ್ದರೆ ಮನುಷ್ಯ ಏನಾಗುತ್ತಾನೆ ಅನ್ನೋ ಪರಮಹಂಸರ ಕಥೆಯನ್ನಿಟ್ಟುಕೊಂಡೇ ಸಿನಿಮಾ ಮಾಡಲಾಗಿದೆ. ಅಷ್ಟಕ್ಕೂ ಎಂಎಲ್‍ಎ ಅಂದ್ರೆ `ಮದರ್ ಪ್ರಾಮಿಸ್ ಲೆಕ್ಕಕ್ಕಿಲ್ಲದ ಆಸಾಮಿ' ಎಂದು ಅರ್ಥ ಇದೆಯಂತೆ.

  ತಮಾಷೆಯಾಗಿಯೇ ಸಾಗುವ ಕಥೆ ಹೋಗ್ತಾ ಹೋಗ್ತಾ ಸೀರಿಯಸ್ ಕೂಡಾ ಆಗುತ್ತೆ. ಸಿಎಂ ಆಗಿ ಮಾಜಿ ಸಚಿವ ಎಚ್.ಎಂ.ರೇವಣ್ಣ ನಟಿಸಿದ್ದರೆ, ನೆಗೆಟಿವ್ ಶೇಡ್‍ನಲ್ಲಿ ಕಾಣಿಸಿಕೊಂಡಿರೋದು ಸ್ಪರ್ಶ ರೇಖಾ.

  ಮೌರ್ಯ ನಿರ್ದೇಶನದ ಚಿತ್ರಕ್ಕೆ ವೆಂಕಟೇಶ್ ರೆಡ್ಡಿ ನಿರ್ಮಾಪಕರು. ಸೋನಾಲ್ ನಾಯಕಿ. 

 • ಒಳ್ಳೆ ಹುಡುಗ ಪ್ರಥಮ್ ಹಿಂಗೆಲ್ಲ ಆಡ್ತಾರಾ..?

  ramachandra, pratham image

  ಬಿಗ್ ಬಾಸ್ ಖ್ಯಾತಿಯ ಒಳ್ಳೆ ಹುಡುಗ ಪ್ರಥಮ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಈ ಬಾರಿಯೂ ವಿವಾದದ ಮೂಲಕವೇ. ಎಂಎಲ್​ಎ ಚಿತ್ರದ ಸಹನಿರ್ದೇಶಕ ರಾಮಚಂದ್ರ, ಪ್ರಥಮ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಫೇಸ್​ಬುಕ್ ಲೈವ್​ನಲ್ಲಿ ಪ್ರತ್ಯಕ್ಷವಾದ ರಾಮಚಂದ್ರ, ಓಂ ಸಾಯಿ ಪ್ರಕಾಶ್ ಅವರ ಬಳಿ 9 ವರ್ಷದಿಂದ ಕೆಲಸ ಮಾಡುತ್ತಿದ್ದ ಸಹ ನಿರ್ದೇಶಕ. ಪ್ರಥಮ್ ಅಭಿನಯದ ಎಂ.ಎಲ್.ಎ ಚಿತ್ರದಲ್ಲಿ ಸಹ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದರು. ಈ ಚಿತ್ರದ ನಿರ್ದೇಶಕ ಮೌರ್ಯ ಮಂಜುನಾಥ್.

  mla_director_assistant_dire.jpgಪ್ರಥಮ್ ಚಿತ್ರೀಕರಣದಲ್ಲಿ ಇಷ್ಟ ಬಂದಂತೆ ಆಡ್ತಾರಂತೆ. ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಚಿತ್ರೀಕರಣ ಮಾಡುವಾಗ 8 ಟೇಕ್ ತೆಗೆದುಕೊಂಡೂ ಶಾಟ್ ಮುಗಿಸಲಿಲ್ಲವಂತೆ. ಮಧ್ಯೆ ಮಧ್ಯೆ ಶೂಟಿಂಗ್ ನೋಡಲು ಬಂದಿದ್ದವರ ಜೊತೆ ಸೆಲ್ಫಿ ತೆಗೆದುಕೊಂಡು ಕಾಲ ಕಳೆಯುತ್ತಿದ್ದರಂತೆ. ನಂತರ ನಿರ್ದೇಶಕರು ಕರೆದರೂ ಕೇಳಿಸಿಕೊಳ್ಳದೆ ಶೂಟಿಂಗ್ ಸ್ಪಾಟ್​ನಿಂದ ಎದ್ದು ಹೋದರಂತೆ. ಆಗ, ರಾಮಚಂದ್ರ,  ಪ್ರಥಮ್ ಅವರನ್ನು ಅಕ್ಷರಶಃ ಕೈ ಹಿಡಿದು ಎಳೆದು ತಂದು ಶೂಟಿಂಗ್ ಮಾಡಿಸಿದರಂತೆ. 

  ಆದರೆ, ಅದಾದ ಮೇಲೆ  ಪ್ರಥಮ್  ನನ್ನನ್ನು ಬಾಯಿಗೆ ಬಂದಂತೆ ಬೈದರು. ಕೆಟ್ಟ ಕೆಟ್ಟ ಪದಗಳನ್ನೆಲ್ಲ ಬಳಸಿದರು. ನಟಿ ರೇಖಾ, ಕುರಿ ಪ್ರತಾಪ್ ಮೊದಲಾದವರು ಹೇಳಿದರೂ ಕೇಳದರೆ, ನನ್ನನ್ನು ಅವಮಾನಿಸಿದರು. ಕೊನೆಗೆ ನಾನು ತಂಡದಲ್ಲಿದ್ದರೆ, ಸಿನಿಮಾನೇ ಮಾಡಲ್ಲ ಎಂದು ಹಠ ಹಿಡಿದರು. ಕೊನೆಗೆ ಸಿನಿಮಾಗೆ ಸಮಸ್ಯೆ ಆಗಬಾರದು ಎಂಬ ಕಾರಣಕ್ಕೆ ನಾನೇ ಚಿತ್ರದಿಂದ ಹೊರಬಂದೆ ಎಂದಿದ್ದಾರೆ ರಾಮಚಂದ್ರ. 

  ‘ಪ್ರಥಮ್ ಒಳ್ಳೆ ಹುಡುಗ ಅಲ್ಲ. ಅವನಿಗೆ ಬೇಕಾದ ಚಪ್ಪಲಿ, ಬಟ್ಟೆ ಇಲ್ಲದಿದ್ದರೆ, ಅವನು ನಟಿಸೋದೇ ಇಲ್ಲ. ದಯವಿಟ್ಟು ಅವನಿಂದ ದೂರವಿರಿ ಎಂದಿದ್ದಾರೆ ರಾಮಚಂದ್ರ. ಅಲ್ಲದೆ ನಿರ್ದೇಶಕರು ಕೊಟ್ಟ ಡೈಲಾಗ್ ಹೇಳದೆ ಕಿರಿಕಿರಿ ಮಾಡುತ್ತಾನೆ. ದಯವಿಟ್ಟು ಇವನನ್ನ ಸಿನಿಮಾಗೆ ಹಾಕಿಕೊಳ್ಳಬೇಡಿ ಎಂದು ಹೇಳಿದ್ದಾರೆ ರಾಮಚಂದ್ರ.

  ಇದಕ್ಕೆಲ್ಲ ಪ್ರಥಮ್ ಏನ್ ಹೇಳ್ತಾರೋ..?

 • ಒಳ್ಳೆ ಹುಡ್ಗ ಪ್ರಥಮ್ ವಿರುದ್ಧ ಎಸ್‍ಡಿಪಿಐ ಕಾರ್ಯಕರ್ತ ಕಂಪ್ಲೇಂಟ್

  pratham image

  ಒಳ್ಳೆ ಹುಡ್ಗ ಪ್ರಥಮ್ ವಿರುದ್ಧ ಪೊಲೀಸ್ ಕಂಪ್ಲೇಂಟ್ ದಾಖಲಾಗಿದೆ. ಎಸ್‍ಡಿಪಿಐ ಕಾರ್ಯಕರ್ತ ಉಮರ್ ಫಾರೂಕ್ ಎಂಬುವವರು ಪ್ರಥಮ್ ವಿರುದ್ಧ ಹಲಸೂರು ಗೇಟ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಐಪಿಸಿ ಸೆಕ್ಷನ್ 295ರ ಅಡಿಯಲ್ಲಿ ಧಾರ್ಮಿಕ ಭಾವನೆಗಳಿಗೆ ಅವಮಾನ ಮಾಡಿದ ಆರೋಪದಲ್ಲಿ ಕೇಸ್ ದಾಖಲಾಗಿದೆ.

  ಡಿಜೆ ಹಳ್ಳಿ, ಕೆಜಿ ಹಳ್ಳಿ, ಕಾವಲ್ ಭೈರಸಂದ್ರ ಗಲಭೆ ಕೇಸ್‍ನಲ್ಲಿ ತಮ್ಮ ಪತಿಯನ್ನು ಅಕ್ರಮವಾಗಿ ಅರೆಸ್ಟ್ ಮಾಡಲಾಗಿದೆ ಎಂದು ಆರೋಪಿಸಿದ್ದ ಮಹಿಳೆಯೊಬ್ಬರು ನನಗೆ 7 ತಿಂಗಳ ಮಗು ಹಾಗೂ 3 ತಿಂಗಳ ಎರಡು ಮಕ್ಕಳಿವೆ ಎಂದು ಹೇಳಿದ್ದರು. ಇದನ್ನು ಲೇವಡಿ ಮಾಡಿದ್ದ ಪ್ರಥಮ್ `ನಿಜಕ್ಕೂ ಇಂತಹ ಮುಗ್ಧ ಮನಸ್ಸುಗಳು ಅನ್ ಎಜುಕೇಟೆಡ್ ಇರಬೇಕು. ಇಲ್ಲ ಅಂದ್ರೆ ಅಲ್ಲಾ ಪವಾಡ ಮಾಡಿರ್ಬೇಕು. 4 ತಿಂಗಳ ಡಿಫರೆನ್ಸ್‍ನಲ್ಲಿ ಹೆಂಗೆ ಎರಡು ಮಕ್ಕಳು ಹುಟ್ಟೋಕೆ ಸಾಧ್ಯ..? ಎಂದು ಪೋಸ್ಟ್ ಮಾಡಿದ್ದರು.

  ಇದರಿಂದ ತಮ್ಮ ಧಾರ್ಮಿಕ ನಂಬಿಕೆ, ಭಾವನೆಗೆ ಧಕ್ಕೆಯಾಗಿದೆ. ಇದು ಸಮಾಜದ ಶಾಂತಿ ಕದಡುವಂತಿದೆ ಎಂದು ಎಸ್‍ಡಿಪಿಐ ಜಿಲ್ಲಾ ಸಮಿತಿ ಸದಸ್ಯ ಉಮರ್ ಫಾರೂಕ್ ಎಂಬುವವರು ದೂರು ನೀಡಿದ್ದಾರೆ.

 • ಕೊಲೆಯಾದ ಹರ್ಷ ಕುಟುಂಬಕ್ಕೆ ಪ್ರಥಮ್ ನೆರವು

  ಕೊಲೆಯಾದ ಹರ್ಷ ಕುಟುಂಬಕ್ಕೆ ಪ್ರಥಮ್ ನೆರವು

  ಶಿವಮೊಗ್ಗದಲ್ಲಿ ಕೋಮು ದ್ವೇಷಕ್ಕೆ ಬಲಿಯಾದ ಬಜರಂಗದಳ ಕಾರ್ಯಕರ್ತ ಹರ್ಷ ಕುಟುಂಬಕ್ಕೆ ಒಳ್ಳೆ ಹುಡ್ಗ ಪ್ರಥಮ್ ನೆರವಾಗಿದ್ದಾರೆ. ವೈಯಕ್ತಿಕವಾಗಿ 25 ಸಾವಿರ ರೂ. ನೆರವು ಕೊಟ್ಟಿದ್ದಾರೆ. ಅಲ್ಲಾ ಹೋ ಅಕ್ಬರ್ ಅಂತಾ ಕೂಗಿದ್ರೆ 5 ಲಕ್ಷ ಕೊಡ್ತಾರಂತೆ.

  ನನ್ನ ಹತ್ತಿರ ಅಷ್ಟು ದುಡ್ಡಿಲ್ಲ. ಸದ್ಯಕ್ಕೆ ನಟ ಭಯಂಕರ ಚಿತ್ರದಿಂದ ಸಾಲದಲ್ಲಿದ್ದೆನೆ. ನನ್ನ ಹತ್ತಿರ ಕೊಡೋಕೆ ಆಗೋದು 25 ಸಾವಿರ ಅಷ್ಟೆ. ಇದ್ದಿದ್ದರೆ ಖಂಡಿತಾ ಕೊಡುತ್ತಿದ್ದೆ ಎಂದಿದ್ದಾರೆ ಪ್ರಥಮ್.

  ಸರ್ಕಾರವನ್ನು ನಂಬಿಕೊಂಡು ಕೂರಬೇಡಿ. ಹರ್ಷ ಕುಟುಂಬಕ್ಕೆ ನಿಮ್ಮಿಂದ ಸಾಧ್ಯವಾದಷ್ಟೂ ನೆರವಾಗಿ ಎಂದೂ ಕರೆ ಕೊಟ್ಟಿದ್ದಾರೆ ಪ್ರಥಮ್. ಬಿಜೆಪಿಯ ಕೆಲವು ಶಾಸಕರು ಕೂಡಾ ಹರ್ಷ ಕುಟುಂಬಕ್ಕೆ ನೆರವು ನೀಡೋದಾಗಿ ಹೇಳಿದ್ದಾರೆ.

 • ಚಿತ್ರಲೋಕ ಹೇಳಿದ್ದನ್ನೇ ಪ್ರಥಮ್ ಹೇಳಿದಾಗ..

  pratham reveals what chitraloka exposed

  ಸಂಜನಾ ಅವರ ಬಿಲ್ಡಪ್ ದರ್ಶನ್ ಹೇಳಿಕೆ ಸಡನ್ನಾಗಿ ಬಂದಿದ್ದೇನೂ ಅಲ್ಲ. ಆ ಹೇಳಿಕೆ ಕೊಡುವಾಗ ಪ್ಲಾನ್ ಹಾಕಿಕೊಂಡೇ ಹೇಳಿದ್ದರು. ಅಂಥಾದ್ದೊಂದು ಸ್ಟೇಟ್‍ಮೆಂಟ್ ಕೊಡುವಾಗ ಅವರಿಗೆ ಅದು ಹೋಗುವ ರೀತಿ, ವಿವಾದವಾಗುವ ಬಗೆ ಎಲ್ಲದರ ಅರಿವೂ ಇತ್ತು. ಕೇವಲ ಸುದ್ದಿಯಲ್ಲಿರುವ ಕಾರಣಕ್ಕಾಗಿ ಸಂಜನಾ ಅಂತಹ ಹೇಳಿಕೆ ಕೊಟ್ಟಿದ್ದರು ಎನ್ನುವುದನ್ನು ಚಿತ್ರಲೋಕ ನಿನ್ನೆಯಷ್ಟೇ ವರದಿ ಮಾಡಿತ್ತು. ಈಗ ಆ ಮಾತಿಗೆ ಪುಷ್ಠಿ ನೀಡುವಂತೆ ಪ್ರಥಮ್ ಕೂಡಾ ಅದೇ ಮಾತು ಹೇಳಿದ್ದಾರೆ. ಅಂದಹಾಗೆ ಪ್ರಥಮ್, ಸಂಜನಾ ಜೊತೆಗೆ ಅದೇ ಶೋನಲ್ಲಿ ಪಾಲ್ಗೊಂಡಿದ್ದ ನಟ.

  ಶೋ ಮುಗಿದ ಮೇಲೆ ಮಾತನಾಡುವಾಗ ನನ್ನ ಎದುರೇ ಒಬ್ಬರು ಸಂಜನಾಗೆ ಹೇಳಿದರು. ಟ್ರಸ್ಟ್ ಮೀ, ಇಟ್ಸ್ ವಿಲ್ ಬಿ ಬಿಗ್ಗೆಸ್ಟ್ ಟ್ರೋಲ್ ಎವರ್ ಎಂದರು. ಆಗ ಸಂಜನಾ ಹಾಗೂ ಅವರ ಜೊತೆಯಲ್ಲಿದ್ದ ಇನ್ನೊಬ್ಬ ಏನು ಹೇಳಿದ ಗೊತ್ತಾ..? ಒಳ್ಳೆಯದೋ.. ಕೆಟ್ಟದ್ದೋ.. ನನಗೆ ಬೇಡ. ಇವಳ ಹೆಸರು ಪಬ್ಲಿಸಿಟಿಯಲ್ಲಿರಬೇಕು. ಇವಳು ದರ್ಶನ್ ಹೆಸರು ಹೇಳಿರೋದ್ರಿಂದ ಒಂದು ವಾರ ಇವಳ ಹೆಸರು ಪಬ್ಲಿಸಿಟಿಯಲ್ಲಿ ಇರುತ್ತಾ..? ಜಸ್ಟ್ ಚಿಲ್ ಎಂದ.

  ಆದರೆ, ಇದರ ಬಗ್ಗೆ ಪ್ರಥಮ್ ಬಳಿ ಏನೂ ಸಾಕ್ಷಿ ಇಲ್ಲವಂತೆ. ನನಗೆ ಹೊಡೆದಾಗಲೇ ಸಾಕ್ಷಿ ಇಟ್ಟುಕೊಳ್ಳದ ದಡ್ಡನಾನು, ಇದಕ್ಕೆಲ್ಲಿಂದ ಸಾಕ್ಷಿ ತರಲಿ ಎಂದಿದ್ದಾರೆ ಪ್ರಥಮ್. ದರ್ಶನ್ ಮೇಲೇಕೆ ಪ್ರೀತಿ ಎಂಬ ಬಗ್ಗೆಯೂ ಪ್ರಥಮ್ ಬರೆದುಕೊಂಡಿದ್ದಾರೆ. ಪ್ರಥಮ್ ಅವರನ್ನು ಪ್ರಥಮ್ ಸರ್ ಎಂದು ಕರೆದ ಮೊದಲ ವ್ಯಕ್ತಿ ದರ್ಶನ್ ಅಂತೆ. ಹಾಗಾಗಿ ದರ್ಶನ್ ಅವರನ್ನು ತುಂಬಾ ಗೌರವಿಸುತ್ತೇನೆ. 

  ಅವರ ಬಗ್ಗೆ ಹಾಗೆ ಹೇಳಿದಾಗ ಸಹಿಸಿಕೊಳ್ಳಲು ಆಗಲಿಲ್ಲ ಎಂದಿದ್ದಾರೆ ಪ್ರಥಮ್.

  Related Articles :-

  ದರ್ಶನ್ ಸರ್, ನನ್ನನ್ನೂ ಕ್ಷಮಿಸಿಬಿಡಿ - ಬಿಗ್‍ಬಾಸ್ ಪ್ರಥಮ್ 

  ದರ್ಶನ್ ಅಭಿಮಾನಿಗಳೇ.. ದಯವಿಟ್ಟು ಕ್ಷಮಿಸಿ - ಸಾರಿ ಕೇಳಿದ ಸಂಜನಾ 

  ‘ದರ್ಶನ್ ಬಿಲ್ಡಪ್’ ಸಂಜನಾ ಹೇಳಿಕೆ ಹಿಂದಿನ ಕಾರಣವೇ ಬಿಲ್ಡಪ್ - EXCLUSIVE

  ದರ್ಶನ್ ಅಂದ್ರೆ ಬಿಲ್ಡಪ್ - ಬಿಗ್ಬಾಸ್ ಸಂಜನಾಗೆ ದರ್ಶನ್ ಅಭಿಮಾನಿಗಳಿಂದ ಟ್ರೋಲ್

 • ತಿಮಿಂಗಿಲ ಪ್ರಥಮ್

  pratham as corrupt police officer

  ಒಳ್ಳೆಯ ಹುಡುಗ ಪ್ರಥಮ್, ನಟಭಯಂಕರ ಪ್ರಥಮ್ ಈಗ ತಿಮಿಂಗಿಲವಾಗುತ್ತಿದ್ದಾರೆ. ತಿಮಿಂಗಿಲ ಪ್ರಥಮ್ ಅವರ ಹೊಸ ಚಿತ್ರದ ಹೆಸರು. ಅದು ಪರಮ ಭ್ರಷ್ಟಪೊಲೀಸ್ ಅಧಿಕಾರಿಯ ಕಥೆಯಂತೆ.

  ಅಂತಹ ಭ್ರಷ್ಟಾತಿಭ್ರಷ್ಟ ತಿಮಿಂಗಿಲ ಪೊಲೀಸ್ ಅಧಿಕಾರಿಯಾಗಿ ನಟಿಸುತ್ತಿರುವುದು ಪ್ರಥಮ್. ಇಮೇಜಿನ ಹಂಗನ್ನೇ ಇಟ್ಟುಕೊಳ್ಳದ ಪ್ರಥಮ್, ಭ್ರಷ್ಟನಾಗಿ ನಟಿಸುತ್ತಿದ್ದಾರೆ. ಜೊತೆಯಾಗಿರುವುದು ಈ ಬಾರಿ ಸಾಧುಕೋಕಿಲ. ಒಂದೇ ದಿನ ಹುಟ್ಟಿ, ಒಂದೇ ಕಡೆ ಬೆಳೆಯುವ ಇಬ್ಬರೂ ಒಂದೇ ದಿನ ಪರೀಕ್ಷೆ ಬರೆಯುತ್ತಾರೆ. ಆದರೆ, ಪ್ರಥಮ್, ಸಾಧುಗಿಂತ ಒಂದೇ ಒಂದು ಅಂಕ ಜಾಸ್ತಿ ಪಡೆದು ಇನ್ಸ್ ಪೆಕ್ಟರ್ ಆದರೆ, ಸಾಧು ಪೊಲೀಸ್ ಆಗುತ್ತಾರೆ. ಇವರಿಬ್ಬರ ಮಧ್ಯೆ ನಡೆಯುವ ತಮಾಷೆ ಪ್ರಸಂಗಗಳೇ ಚಿತ್ರದ ಕಥೆ.

  ಅವಿನಾಶ್ ಎಂಬುವರು ನಿರ್ದೇಶಿಸುತ್ತಿರುವ ಚಿತ್ರ ಜುಲೈನಲ್ಲಿ ಸೆಟ್ಟೇರಲಿದೆ.

 • ತೊಡೆ ಕಚ್ಚಿದ ಪ್ರಥಮ್ ನ್ಯಾಯಾಲಯಕ್ಕೆ ಶರಣು

  pratham image

  ನಿನ್ನೆಯಿಂದ ನಾಪತ್ತೆಯಾಗಿದ್ದ ಬಿಗ್​​ಬಾಸ್​ ಪ್ರಥಮ್ ನ್ಯಾಯಾಲಯಕ್ಕೆ ಶರಣಾಗಿದ್ದಾರೆ. ಬೆಂಗಳೂರಿನ 2ನೇ ಎಸಿಜೆಎಂ ಕೋರ್ಟ್​ಗೆ ತೆರಳಿ ಶರಣಾಗಿದ್ದಾರೆ. ಸಹನಟ ಭುವನ್ ತೊಡೆ ಕಚ್ಚಿದ್ದಕ್ಕೆ ಪ್ರಥಮ್ ಮೇಲೆ ದೂರು ನೀಡಲಾಗಿತ್ತಷ್ಟೇ ಅಲ್ಲ, ಎಫ್​ಐಆರ್ ಕೂಡಾ ದಾಖಲಾಗಿತ್ತು. ರಾತ್ರಿಯಿಂದಲೂ ಪೊಲೀಸರಿಗೆ ಸಿಗದೆ ಓಡಾಡಿಕೊಂಡಿದ್ದ ಪ್ರಥಮ್, ಕುಕ್ಕೆ ಸುಬ್ರಹ್ಮಣ್ಯದಲ್ಲಿರೋದಾಗಿ ಪೊಲೀಸರಿಗೆ ತಿಳಿಸಿದ್ದ. 

  ಈಗ ನೇರವಾಗಿ ನ್ಯಾಯಾಲಯಕ್ಕೇ ಶರಣಾಗಿರುವ ಪ್ರಥಮ್, ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾರೆ.

  Related Articles :-

  ಪೊಲೀಸರಿಗೂ ಸಿಕ್ಕದೆ ಬಿಗ್​ಬಾಸ್ ಪ್ರಥಮ್ ನಾಪತ್ತೆ - ಪ್ರಥಮ್ ವಿರುದ್ಧ ದೂರುಗಳು.. ಅಬ್ಬಬ್ಬಾ..!!!

  Udaya Mehta Not Producimg Pratham Movie 

  ಬಿಗ್ ಬಾಸ್ ಪ್ರಥಮ್ ಮತ್ತೊಮ್ಮೆ ಕಿರಿಕ್ - ಈ ಬಾರಿ ಗೆಳೆಯನ ತೊಡೆಯನ್ನೇ ಕಚ್ಚಿದ

 • ದರ್ಶನ್ ಸರ್, ನನ್ನನ್ನೂ ಕ್ಷಮಿಸಿಬಿಡಿ - ಬಿಗ್‍ಬಾಸ್ ಪ್ರಥಮ್ 

  pratham seeks apology to darshan

  ಎಲ್ಲ ಚಾಲೆಂಜಿಂಗ್ ಸ್ಟಾರ್ ಅಭಿಮಾನಿಗಳಿಗೆ ಕ್ಷಮೆ ಕೋರುತ್ತಿದ್ದೇನೆ. ಕ್ಷಮಿಸಿ ದರ್ಶನ್ ಸರ್, ನಿಮಗೆ ಅಗೌರವ ಮಾಡಿದ ನಾಲಾಯಕ್ ಜೊತೆಯಲ್ಲಿ ಕಾರ್ಯಕ್ರಮಕ್ಕೆ ಹೋಗಿದ್ದಕ್ಕೆ ದಯವಿಟ್ಟು ಕ್ಷಮಿಸಿ. ಈಗಲೂ ಸ್ಕ್ರೀನ್ ಶೇರ್ ಮಾಡ್ತಾ ಇರೋದಕ್ಕೆ ನನಗೆ ನನ್ನ ಮೇಲೆಯೇ ನಾಚಿಕೆ ಇದೆ. ನಾನು ಈ ಕಾರಣಕ್ಕೆ ಆ ಹೆಣ್ಣಿನ ರೂಪದಲ್ಲಿರೋ ಕಸದ ಜೊತೆ ಸ್ಕ್ರೀನ್ ಶೇರ್ ಮಾಡೋಕೆ ಹಿಂಸೆ.

  ಇದು ದರ್ಶನ್ ಮತ್ತು ದರ್ಶನ್ ಅಭಿಮಾನಿಗಳಿಗೆ ಪ್ರಥಮ್ ಕ್ಷಮೆ ಕೇಳಿರುವ ಪರಿ.

  ಅಂದ ಹಾಗೆ ಪ್ರಥಮ್ ಈ ಮಾತು ಹೇಳಿರೋದು ಸಂಜನಾ ಅವರ ಬಿಲ್ಡಪ್ ವಿವಾದದ ಬಗ್ಗೆ. ಸಂಜನಾ ಕ್ಷಮೆ ಕೇಳಿದ ನಂತರ, ಸಂಜನಾ ಅವರ ಜೊತೆ ಕಾರ್ಯಕ್ರಮಕ್ಕೆ ಹೋಗಿದ್ದಕ್ಕೆ, ಅವರ ಜೊತೆ ಧಾರಾವಾಹಿಯಲ್ಲಿ ನಟಿಸುತ್ತಿರುವುದಕ್ಕೆ ಕೂಡಾ ಬೇಜಾರು ಮಾಡಿಕೊಂಡಿದ್ದಾರೆ.

  Related Articles :-

  ದರ್ಶನ್ ಅಭಿಮಾನಿಗಳೇ.. ದಯವಿಟ್ಟು ಕ್ಷಮಿಸಿ - ಸಾರಿ ಕೇಳಿದ ಸಂಜನಾ 

  ‘ದರ್ಶನ್ ಬಿಲ್ಡಪ್’ ಸಂಜನಾ ಹೇಳಿಕೆ ಹಿಂದಿನ ಕಾರಣವೇ ಬಿಲ್ಡಪ್ - EXCLUSIVE

  ದರ್ಶನ್ ಅಂದ್ರೆ ಬಿಲ್ಡಪ್ - ಬಿಗ್ಬಾಸ್ ಸಂಜನಾಗೆ ದರ್ಶನ್ ಅಭಿಮಾನಿಗಳಿಂದ ಟ್ರೋಲ್

   

 • ದಾನಮ್ಮಳಿಗಾಗಿ ಮುಖ್ಯಮಂತ್ರಿ ಭೇಟಿ ಮಾಡಿದ ಪ್ರಥಮ್

  pratham meets cm

  ಬಿಗ್‍ಬಾಸ್ ಖ್ಯಾತಿಯ ಪ್ರಥಮ್, ಸದಾ ಸುದ್ದಿಯಲ್ಲಿರುವ ವ್ಯಕ್ತಿ. ಇತ್ತೀಚೆಗೆ ಒಳ್ಳೆಯ ಕಾರಣಗಳಿಂದಲೇ ಹೆಚ್ಚು ಹೆಚ್ಚು ಸುದ್ದಿಯಾಗುತ್ತಿರುವುದು ವಿಶೇಷ. ವಿಜಯಪುರದಲ್ಲಿ ಸಾಮೂಹಿಕ ಅತ್ಯಾಚಾರಿಗಳ ಅಟ್ಟಹಾಸಕ್ಕೆ ಬಲಿಯಾದ ಪುಟ್ಟ ಬಾಲಕಿ ದಾನಮ್ಮನಿಗಾಗಿ. ಆಕೆಯ ಸಾವಿಗೆ ನ್ಯಾಯ ಕೊಡಿಸುವ ಸಲುವಾಗಿ ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಿದ್ದಾರೆ. ದಾನಮ್ಮ ಕುಟುಂಬಕ್ಕೆ ನ್ಯಾಯ ಸಲ್ಲಿಸುವಂತೆ ಸಿದ್ದರಾಮಯ್ಯನವರಿಗೆ ಮನವಿ ಪತ್ರ ಕೊಟ್ಟಿದ್ದಾರೆ.

  ಸಿದ್ದರಾಮಯ್ಯನವರಿಗೆ ಕೊಟ್ಟಿರುವ ಮನವಿ ಪತ್ರದಲ್ಲಿ ಪ್ರಥಮ್ ಅವರ ಬೇಡಿಕೆಗಳು ಇಷ್ಟೆ. 

  ದಾನಮ್ಮ ಕುಟುಂಬಕ್ಕೆ ಇನ್ನಷ್ಟು ಆರ್ಥಿಕ ನೆರವು ಒದಗಿಸಬೇಕು. ಅವರ ಕುಟುಂಬದ ಯಾರಾದರೊಬ್ಬರಿಗೆ ಸರ್ಕಾರಿ ನೌಕರಿ ನೀಡಬೇಕು. ಪ್ರಕರಣದ ವಿಚಾರಣೆಯನ್ನು ತ್ವರಿತ ನ್ಯಾಯಾಲಯದಲ್ಲಿ ನಡೆಸಬೇಕು. 

  ಅಪರಾಧಿಗಳು ಯಾವುದೇ ಕಾರಣಕ್ಕೂ ಕಾನೂನಿನ ಚೌಕಟ್ಟಿನಿಂದ ತಪ್ಪಿಸಿಕೊಳ್ಳಲು ಅವಕಾಶ ನೀಡಬಾರದು ಎಂದು ಮನವಿ ಮಾಡಿದ್ದಾರೆ.

  ಪ್ರಥಮ್ ಅವರಿಗೆ ಒಂದು ಹವ್ಯಾಸವಿದೆ. ಅವರು ಸಾಮಾನ್ಯವಾಗಿ ಯಾರೇ ಗಣ್ಯರನ್ನು ಭೇಟಿ ಮಾಡಿದರೂ, ಸೆಲ್ಫಿ ತೆಗೆದುಕೊಳ್ತಾರೆ. ಆದರೆ, ದಾನಮ್ಮ ವಿಚಾರಕ್ಕೆ ಸಿದ್ದರಾಮಯ್ಯರನ್ನು ಭೇಟಿ ಮಾಡಿದಾಗ ಸೆಲ್ಫಿ ತೆಗೆದುಕೊಳ್ಳಬೇಕು ಎಂದು ಅನ್ನಿಸಲಿಲ್ಲ ಎಂದಿದ್ದಾರೆ ಪ್ರಥಮ್. ಇನ್ನು ಪ್ರಥಮ್‍ಗೆ ಸಿದ್ದರಾಮಯ್ಯನವರ ಸರಳತೆ ಮತ್ತು ಕಳಕಳಿಯೂ ಇಷ್ಟವಾಗಿದೆಯಂತೆ. ಅವರ ಸಜ್ಜನಿಕೆಗೊಂದು ಸೆಲ್ಯೂಟ್ ಎಂದಿದ್ದಾರೆ ಪ್ರಥಮ್.

 • ದೀಪಕ್ ಕುಟುಂಬಕ್ಕೆ ಪ್ರಥಮ್‍ರಿಂದ ಪರಿಹಾರ, ಸಾಂತ್ವನ

  pratham meets deepak's mother and brother

  ರಾಜ್ಯಾದ್ಯಂತ ಹೊತ್ತಿ ಉರಿಯುತ್ತಿರುವುದು ಕೋಮು ಸಂಘರ್ಷ. ಕರಾವಳಿಯಂತೂ ಕೊತಕೊತನೆ ಕುದಿಯುತ್ತಿದೆ.  ದೀಪಕ್ ರಾವ್ ಕೋಮುವಾದಿ ಮುಸಲ್ಮಾನರ ದಾಳಿಗೆ ಬಲಿಯಾಗಿದ್ದರೆ, ಬಶೀರ್ ಎಂಬುವವರು ಹಿಂದೂ ಕೋಮುವಾದಿಗಳ ಅಟ್ಟಹಾಸಕ್ಕೆ ಜೀವಬಿಟ್ಟಿದ್ದಾರೆ. ಮೃತರ ನೆರವಿಗೆ ಧಾವಿಸಿರುವವರು ಸೌಹಾರ್ದದ ಮಾತನಾಡುತ್ತಿದ್ದಾರೆ. ಅದರಲ್ಲೂ ಪ್ರಥಮ್‍ಗೆ ಆನ್‍ಲೈನ್ ಅಭಿಯಾನದಲ್ಲಿ ನೆರವಿನ ಮಹಾಪೂರವೇ ಹರಿದುಬಂದಿದೆ. ಸರಿಸುಮಾರು 40 ಲಕ್ಷ ರೂ. ಹಣ ದಾನಿಗಳಿಂದಲೇ ಸಂಗ್ರಹವಾಗಿದೆ. ಸರ್ಕಾರದ ನೆರವನ್ನು ಹೊರತುಪಡಿಸಿ ಎನ್ನುವುದು ವಿಶೇಷ.

  ಈ ನಡುವೆಯೇ ಬಿಗ್‍ಬಾಸ್ ಪ್ರಥಮ್ ಸದ್ದಿಲ್ಲದೆ ಮಂಗಳೂರಿಗೆ ಹೋಗಿ ಬಂದಿದ್ದಾರೆ. ಯಾವುದೇ ಪ್ರಚಾರವಿಲ್ಲದೆ ದೀಪಕ್ ರಾವ್ ಅವರ ಮನೆಗೆ ಹೋಗಿ ಸಾಂತ್ವನ ಹೇಳಿದ್ದಾರೆ. ನಿಮ್ಮ ನೆರವಿಗೆ, ಕುಟುಂಬಕ್ಕೆ ಆಸರೆಯಾಗಿ ನಾವಿದ್ದೇವೆ ಎಂದು ಭರವಸೆ ತುಂಬಿದ್ದಾರೆ. 25 ಸಾವಿರ ರೂ. ನಗದು ಹಾಗೂ 25 ಸಾವಿರ ರೂ. ಚೆಕ್‍ನ್ನು ನೀಡಿ ಬಂದಿದ್ದಾರೆ.

  ಪ್ರಥಮ್ ಈ ರೀತಿಯ ನೆರವು ನೀಡುತ್ತಿರುವುದು ಇದೇ ಮೊದಲೇನೂ ಅಲ್ಲ. ಹಾಗೆಂದು ಪ್ರಥಮ್ ಕೋಟ್ಯಧಿಪತಿಯಲ್ಲ. ತನ್ನ ಬಳಿ ಇರುವ ಅಲ್ಪಸ್ವಲ್ಪ ಹಣವನ್ನೇ ನೊಂದವರಿಗೆ ನೀಡುವ ಕೆಲಸವನ್ನು ಮಾಡಿಕೊಂಡೇ ಬರುತ್ತಿದ್ದಾರೆ. 

 • ದೇವ್ರಂತ ಮನುಷ್ಯ ಥಿಯೇಟರಲ್ಲಿ ಸಿಕ್ಕೇ ಸಿಗ್ತಾನೆ

  devarantha manushya image

  ದೇವ್ರಂಥ ಮನುಷೈ. ಒಳ್ಳೆ ಹುಡುಗ ಪ್ರಥಮ್ ಅಭಿನಯದ ಚಿತ್ರದ ಟ್ಯಾಗ್‍ಲೈನ್, ಸಂಜೆ ಮೇಲೆ ಸಿಗ್ಬೇಡಿ ಅನ್ನೋದು. ಹೀಗಿದ್ರೂ ಪ್ರಥಮ್ ಇದೇ ವಾರದಿಂದ ಥಿಯೇಟರಿನಲ್ಲಿ ಸಿಗ್ತಾರೆ. ಪ್ರಥಮ್ ಸಿಗದೇ ಹೋದರೂ ಅಪ್ಪಟ ದೇವ್ರಂತಾ ಮನುಷ್ಯ ಸಿಕ್ಕೋದು ಗ್ಯಾರಂಟಿ. ಇದೇ ವಾರ ಚಿತ್ರ ರಿಲೀಸ್ ಆಗ್ತಾ ಇದೆ.

  ಚಿತ್ರದ ಕಥೆ, ಚಿತ್ರಕಥೆಯ ಸಸ್ಪೆನ್ಸ್ ಹಾಗೆಯೇ ಇದೆ. ನಾಯಕಿಯಾಗಿ ವೈಷ್ಣವಿ ನಟಿಸಿದ್ದಾರೆ. ಪಂಚಿಂಗ್ ಡೈಲಾಗುಗಳಿಂದಲೇ ಕಿಕ್ಕು ಹತ್ತಿಸಿದ್ದ ದೇವ್ರಂಥಾ ಮನುಷ್ಯ, ಯೂಟ್ಯೂಬ್‍ನಲ್ಲಿ ಭರ್ಜರಿ ಹಿಟ್ಸ್ ಗಿಟ್ಟಿಸಿತ್ತು. ಅದೇ ಲೆಕ್ಕ ನೋಡಿದರೆ, ಪ್ರಥಮ್ ಮೊದಲ ಎಸೆತದಲ್ಲೇ ಸೆಂಚುರಿ ಹೊಡೆಯೋದು ಗ್ಯಾರಂಟಿ.

   

 • ದೇವ್ರಂತ ಮನುಷ್ಯ ರಾಜಕೀಯಕ್ಕೆ ಬರ್ತಾರಾ..?

  will pratham enter politics?

  ನಾನು ಕೋತ್‍ನನ್ಮಗ ಇರಬೌದು, ಕಳ್ ನನ್ಮಗ ಅಲ್ಲ. ನನಗೆ ಸಿನಿಮಾಗಿಂತ ರಾಜಕೀಯದಲ್ಲೇ ಆಸಕ್ತಿ ಜಾಸ್ತಿ. ಮುಂದೊಂದು ದಿನ ರಾಜಕೀಯಕ್ಕೆ ಬರುವ ಆಸೆಯಿದೆ. ಬಿಗ್‍ಬಾಸ್ ಪ್ರಥಮ್ ಇಂಥದ್ದೊಂದು ಕನಸನ್ನು ಮೊದಲಬಾರಿ ಹೇಳಿಕೊಂಡಿದ್ದು ಚಿತ್ರಲೋಕದಲ್ಲೇ. ವಿಜಯಪುರದ ದಾನಮ್ಮ ಅತ್ಯಾಚಾರ ಪ್ರಕರಣದ ತನಿಖೆ ಕುರಿತಂತೆ, ಸಿಎಂ ಸಿದ್ದರಾಮಯ್ಯನವರನ್ನು ಭೇಟಿ ಮಾಡಿದ್ದ ಪ್ರಥಮ್, ನಂತರ ಚಿತ್ರಲೋಕದ ಜೊತೆ ಮಾತನಾಡಿದ್ದರು. 

  ಈಗ ಪ್ರಥಮ್ ದೆಹಲಿಗೆ ಫ್ಲೈಟು ಹತ್ತುವ ಕನಸಿನಲ್ಲಿದ್ದಾರೆ. ಅವರ ಪ್ರಕಾರ ಎಲ್ಲವೂ ಆಗಿಬಿಟ್ಟರೆ, ದೆಹಲಿಯಲ್ಲಿ ಅಮಿತ್ ಶಾ ಅವರನ್ನು ಭೇಟಿ ಮಾಡಬಹುದು. ಈ ಚುನಾವಣೆಯಲ್ಲೇ ಟಿಕೆಟ್ ಪಡೆದರೂ ಪಡೆಯಬಹುದು.

  ಆದರೆ, ಪ್ರಥಮ್ ಸದ್ಯಕ್ಕೆ ದೇವ್ರಂಥ ಮನುಷ್ಯ ಚಿತ್ರದ ಬಿಡುಗಡೆಯಲ್ಲಿ ಬ್ಯುಸಿ.  ದೇವ್ರಂಥ ಮನುಷ್ಯ, ಸಂಜೆ ಹೊತ್ತಲ್ಲಿ ಸಿಗಬೇಡಿ ಅನ್ನೋ ಟ್ಯಾಗ್‍ಲೈನ್ ಇರುವ ಚಿತ್ರ ತೆರೆಗೆ ಸಿದ್ಧವಾಗಿದೆ. 

 • ದೇವ್ರಂಥ ಮನುಷ್ಯ ಸಿಎಂಗೇ ಇಷ್ಟವಾಗಿಬಿಡ್ತು..!

  cm siddaramaiah liked devarantha manushya

  ಬಿಗ್‍ಬಾಸ್ ಖ್ಯಾತಿಯ ಪ್ರಥಮ್ ಅಭಿನಯದ ಚಿತ್ರ ಚಿತ್ರಮಂದಿರಗಳಿಗೆ ಪ್ರವೇಶಿಸಿದೆ. ಪ್ರೇಕ್ಷಕರ ಅಭಿಪ್ರಾಯ ಕೇಳೋಕೂ ಮೊದಲೇ ಪ್ರಥಮ್ ಚಿತ್ರಕ್ಕೆ ಅತಿ ದೊಡ್ಡ ಮೆಚ್ಚುಗೆಯೊಂದು ಸಿಕ್ಕಿಬಿಟ್ಟಿದೆ. ಅದು ಸಿಎಂ ಸಿದ್ದರಾಮಯ್ಯನವರದ್ದು.

  ದೇವ್ರಂಥ ಮನುಷ್ಯ ಚಿತ್ರದ ಹಾಡು ಕೇಳಿರುವ ಸಿದ್ದರಾಮಯ್ಯ, ಚಿತ್ರದ  ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಿದ್ದರಾಮಯ್ಯ ಹಾಡು ಕೇಳುತ್ತಿರುವ, ತಾಳ ಹಾಕುತ್ತಿರುವ ವಿಡಿಯೋವನ್ನು ಪ್ರಥಮ್ ಬಿಡುಗಡೆ ಮಾಡಿದ್ದಾರೆ. ದೇವ್ರಂಥ ಮನುಷ್ಯ ಸಂಜೆ ಮೇಲೆ ಸಿಗ್ಬೇಡಿ ಅನ್ನೋದನ್ನೇ ಟ್ಯಾಗ್‍ಲೈನ್ ಮಾಡಿಕೊಂಡಿರುವ ಚಿತ್ರದ ಥೀಮ್ ವಿಶೇಷವಾಗಿದೆ. ತಪ್ಪು ಮಾಡೋದು ಸಹಜ. ಆದರೆ, ತಪ್ಪುಗಳೇ ಅತಿಯಾಗಿಬಿಟ್ಟರೆ ಏನಾಗುತ್ತೆ ಅನ್ನೋದೇ ಚಿತ್ರದ ಕಥೆ.

  ಎಚ್.ಸಿ.ಮಂಜುನಾಥ್, ತಿಮ್ಮರಾಜು ನಿರ್ಮಾಣದ ಚಿತ್ರಕ್ಕೆ ಕಿರಣ್ ಶೆಟ್ಟಿ ನಿರ್ದೇಶನವಿದೆ. ಶ್ರುತಿ ಹಾಗೂ ವೈಷ್ಣವಿ ಚಿತ್ರದ ನಾಯಕಿಯರು. ಸುಚೇಂದ್ರ ಪ್ರಸಾದ್, ತಬಲಾನಾಣಿ, ಕಿರಿಕ್ ಕೀರ್ತಿ ಕೂಡಾ ಚಿತ್ರದಲ್ಲಿದ್ದಾರೆ. 

  ಈಗಾಗಲೇ ಚಿತ್ರದ ಪುಟ್ಟ ಟ್ರೇಲರ್‍ಗಳು, ಡೈಲಾಗ್‍ಗಳು ಹಾಡುಗಳು ಚಿತ್ರರಸಿಕರ ಮನ ಗೆದ್ದಿವೆ. ಇನ್ನು ಥಿಯೇಟರ್‍ನಲ್ಲಿ ಜನ ಮೆಚ್ಚುವುದಷ್ಟೇ ಬಾಕಿ.

 • ನಟ ಭಯಂಕರ ಹಾಡು ರಿಲೀಸ್ ಮಾಡಿದ ರಕ್ಷಿತ್ ಶೆಟ್ಟಿ

  rakshit shetty released natabhayankara songs

  ಒಳ್ಳೆಯ ಹುಡ್ಗ ಪ್ರಥಮ್, ಸದ್ದು ಮಾಡೋದ್ರಲ್ಲಿ ಫೇಮಸ್. ತಮಗನ್ನಿಸಿದ್ದನ್ನು ಯಾವುದೇ ಮುಚ್ಚುಮರೆ ಇಲ್ಲದೆ ಹೇಳೋ ಪ್ರಥಮ್ ಈಗ ನಟ ಭಯಂಕರ ಅನ್ನೋ ಸಿನಿಮಾ ಮಾಡಿದ್ದಾರೆ. ಅವರೇ ಹೀರೋ. ಅವರೇ ಡೈರೆಕ್ಟರ್. ತಮ್ಮ ಚಿತ್ರಗಳನ್ನು ಸ್ಪೆಷಲ್ ಆಗಿ ಪ್ರಮೋಟ್ ಮಾಡುವ ಪ್ರಥಮ್, ಈ ಚಿತ್ರಕ್ಕೆ ಬಿಜೆಪಿ ಭೀಷ್ಮ ಎಲ್.ಕೆ. ಅಡ್ವಾಣಿ ಆಶೀರ್ವಾದ ಪಡೆದುಕೊಂಡಿದ್ದರು.

  ಚಿತ್ರಕ್ಕೆ ಉಪೇಂದ್ರ ಒಂದು ಹಾಡು ಹಾಡಿದ್ದರೆ, ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿದ್ದವರು ಮೀನಾ ತೂಗುದೀಪ್. ಈಗ ಚಿತ್ರದ ಗೀತಾ ಗಾಂಚಾಲಿ ಗೀತಾ ಅನ್ನೋ ಹಾಡು ಬಿಡುಗಡೆಯಾಗಿದೆ. ಬಿಡುಗಡೆ ಮಾಡಿರೋದು ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ.

  ಅರಸು ಬರೆದಿರುವ ಹಾಡಿಗೆ ಸಂಚಿತ್ ಹೆಗ್ಡೆ ಧ್ವನಿ ನೀಡಿದ್ದಾರೆ. ಪ್ರದ್ಯೋಥನ್ ಸಂಗೀತ ನಿರ್ದೇಶಕ. ರನ್ ಆ್ಯಂಟನಿ ಚಿತ್ರದಲ್ಲಿ ನಟಿಸಿದ್ದ ಸುಶ್ಮಿತಾ ಚಿತ್ರಕ್ಕೆ ನಾಯಕಿ. ಇವರ ಜೊತೆ ಸಾಯಿಕುಮಾರ್, ಲೀಲಾವತಿ, ಶೋಭರಾಜ್, ಓಂ ಪ್ರಕಾಶ್ ರಾವ್, ಕುರಿ ಪ್ರತಾಪ್, ಬಿರಾದಾರ್ ಮೊದಲಾದವರು ನಟಿಸಿದ್ದಾರೆ.

 • ನಟ ಭಯಂಕರನಿಗೆ ಉಪೇಂದ್ರ ಹಾಡು

  upendra sings a song for natabhayankara

  ಒಳ್ಳೆಯ ಹುಡುಗ ಪ್ರಥಮ್ ಅಭಿನಯದ ಹೊಸ ಚಿತ್ರ ನಟ ಭಯಂಕರನಿಗೆ ಉಪೇಂದ್ರ ಸಾಥ್ ಸಿಕ್ಕಿದೆ. ರಿಯಲ್ ಸ್ಟಾರ್ ಉಪೇಂದ್ರ, ನಟಭಯಂಕರ ಚಿತ್ರದ ಇಂಟ್ರೊಡಕ್ಷನ್ ಹಾಡಿಗೆ ಧ್ವನಿ ನೀಡಿದ್ದಾರೆ. ಪ್ರಥಮ್ ಅವರೇ ನಿರ್ದೇಶಿಸುತ್ತಿರುವ ಈ ಚಿತ್ರದ ಹೀರೋ ಇಂಟ್ರೊಡಕ್ಷನ್ ಸಾಂಗ್‍ಗೆ ಸಾಹಿತ್ ನೀಡಿರುವುದು ಭರ್ಜರಿ ಚೇತನ್. 

  ಇದೊಂದು ಹೈ ವೋಲ್ಟೇಜ್ ಸಾಂಗ್. ಹಾಡು ಮತ್ತು ಹಾಡಿನ ಮೇಕಿಂಗ್‍ನ್ನು ಉಪೇಂದ್ರ ಕೂಡಾ ಇಷ್ಟಪಟ್ಟಿದ್ದಾರೆ. ಅವರ ಹುಟ್ಟುಹಬ್ಬದ ದಿನವೇ ಹಾಡನ್ನು ರಿಲೀಸ್ ಮಾಡುತ್ತೇವೆ ಎಂದಿದ್ದಾರೆ ಪ್ರಥಮ್.

 • ನಟಭಯಂಕರ' ಪ್ರಥಮ್

  pratham is now natabhayankara

  ನಟ ಸಾರ್ವಭೌಮ ಎಂದರೆ ಡಾ.ರಾಜ್‍ಕುಮಾರ್. ನಟ ಭೈರವ ಎಂದರೆ ವಜ್ರಮುನಿ. ನಟಶೇಖರ ಎಂದರೆ ಕಲ್ಯಾಣ್‍ಕುಮಾರ್. ನಟಭಯಂಕರ ಎಂದರೆ ಪ್ರಥಮ್. ಹೌದು, ಒಳ್ಳೆಯ ಹುಡುಗ ಪ್ರಥಮ್, ಬಿಗ್‍ಬಾಸ್ ಪ್ರಥಮ್ ನಟಭಯಂಕರರಾಗುತ್ತಿದ್ದಾರೆ. ನಿಮಗೆ ನೆನಪಿರಬೇಕು. ಇತ್ತೀಚೆಗೆ ಪ್ರಥಮ್ ಅಭಿನಯದ 

  `ಪ್ರಥಮ್ ಬಿಲ್ಡಪ್' ಹೆಸರಿನ ಚಿತ್ರವೊಂದು ಶುರುವಾಗಿತ್ತು. ಈಗ ಚಿತ್ರದ ಟೈಟಲ್ ಬದಲಾಗಿದೆ. ಚಿತ್ರಕ್ಕೆ ನಟಭಯಂಕರ ಎಂದು ಟೈಟಲ್ ಇಡಲಾಗಿದೆ. ಅಲ್ಲಿಗೆ ಬಿಗ್‍ಬಾಸ್ ಪ್ರಥಮ್, ಒಳ್ಳೆಯ ಹುಡುಗ ಪ್ರಥಮ್... ನಟ ಭಯಂಕರ ಪ್ರಥಮ್ ಆಗಲಿದ್ದಾರೆ.

 • ನಟಭಯಂಕರನ ಜೊತೆ ಡೈಲಾಗ್ ಕಿಂಗ್

  sai kumar joins natabhayankara team

  ಬಿಗ್‍ಬಾಸ್ ಖ್ಯಾತಿಯ ಒಳ್ಳೆ ಹುಡ್ಗ ಪ್ರಥಮ್ ಅಭಿನಯದ ಚಿತ್ರ ನಟಭಯಂಕರ. ಈಗ ಅವರ ಜೊತೆಗೆ ಡೈಲಾಗ್ ಕಿಂಗ್ ಸೇರಿಕೊಂಡಿದ್ದಾರೆ. ಅದೂ ವಿಶೇಷ ಪಾತ್ರದಲ್ಲಿ. ಕಾಮಿಡಿ, ಆ್ಯಕ್ಷನ್ ಮತ್ತು ಹಾರರ್ ಮೂರೂ ಇರುವ ವಿಶೇಷ ಸಿನಿಮಾ ನಟಭಯಂಕರ. ಈ ಚಿತ್ರದಲ್ಲಿ ಸಾಯಿಕುಮಾರ್ ಮತ್ತೊಮ್ಮೆ ಅಗ್ನಿಯಾಗಿ ಬರುತ್ತಿದ್ದಾರೆ.

  ಅಗ್ನಿ ಎಂದರೆ ಸಾಕು, ಅಭಿಮಾನಿಗಳ ಎದುರು ತಕ್ಷಣ ಪ್ರತ್ಯಕ್ಷವಾಗುವುದು ಸಾಯಿಕುಮಾರ್‍ರ ಖಡಕ್ ಖಡಕ್ ಕೆಂಡದಂತಾ ಡೈಲಾಗುಗಳು. ಆದರೆ, ಇಲ್ಲಿ ಡೈಲಾಗ್‍ಗಳಿದ್ದರೂ.. ಪಾತ್ರ ಸ್ವಲ್ಪ ಡಿಫರೆಂಟ್ ಎನ್ನುತ್ತಿದ್ದಾರೆ ಸಾಯಿಕುಮಾರ್.

  ಸಾಯಿಕುಮಾರ್ ಜೊತೆ ಅಭಿನಯಿಸುತ್ತಿರುವುದಕ್ಕೆ ಥ್ರಿಲ್ ಆಗಿದ್ದಾರೆ ಪ್ರಥಮ್. ನಟನೆ ಅಷ್ಟೇ ಅಲ್ಲ, ಈ ಚಿತ್ರಕ್ಕೆ ಪ್ರಥಮ್ ಅವರೇ ನಿರ್ದೇಶಕ. 

 • ಪುನೀತ್ ವೃದ್ಧಾಶ್ರಮಕ್ಕೆ ಒಳ್ಳೆ ಹುಡುಗ ಪ್ರಥಮ್ ದೇಣಿಗೆ

  pratham donates to shaktidama

  ಒಳ್ಳೆ ಹುಡುಗ ಪ್ರಥಮ್, ಬಿಗ್‍ಬಾಸ್‍ನಲ್ಲಿ ಗೆದ್ದ ಹಣದ ಬಹುಭಾಗವನ್ನು ಸಮಾಜಸೇವೆಗೆ ಮೀಸಲಿಟ್ಟು ಸುದ್ದಿಯಾದವರು. ರೈತರು, ಸೈನಿಕರು, ಊರಿನ ದೇವಸ್ಥಾನ.. ಹೀಗೆ ತಮಗೆ ಕೊಡಬೇಕು ಎನಿಸಿದ ತಕ್ಷಣ, ತಮ್ಮ ಕೈಲಾದಷ್ಟು ನೆರವು ನೀಡುತ್ತಾ ಬಂದಿದ್ದಾರೆ ಪ್ರಥಮ್. ಇದೀಗ ಮತ್ತೊಮ್ಮೆ ಅಂಥದ್ದೇ ಗುಣ ಮೆರೆದಿದ್ದಾರೆ.

  ಇತ್ತೀಚೆಗೆ ಸ್ಟಾರ್ ಸುವರ್ಣ ವಾಹಿನಿಯ ಸಿಕ್ಸ್ತ್ ಸೆನ್ಸ್ ಗೇಮ್‍ಶೋಗೆ ಹೋಗಿದ್ದ ಪ್ರಥಮ್, ಸ್ಪರ್ಧೆಯಲ್ಲಿ 10 ಸಾವಿರ ರೂ. ಬಹುಮಾನ ಗೆದ್ದರು. 10 ಲಕ್ಷ ಗೆಲ್ಲುವ ಅವಕಾಶ ಮಿಸ್ ಮಾಡಿಕೊಂಡ ಪ್ರಥಮ್, ತಾವು ಗೆದ್ದ ಅಷ್ಟೂ ಹಣವನ್ನು ಅಲ್ಲಿಯೇ ಶಕ್ತಿಧಾಮ ಸಂಸ್ಥೆಗೆ ದೇಣಿಗೆಯಾಗಿ ನೀಡಿದರು.

  ಮೈಸೂರಿನಲ್ಲಿರುವ ಶಕ್ತಿಧಾಮ ಸಂಸ್ಥೆ, ರಾಜ್ ಕುಟುಂಬದವರದ್ದು. ದಶಕಗಳ ಹಿಂದೆ ಪಾರ್ವತಮ್ಮ ರಾಜ್‍ಕುಮಾರ್ ಆರಂಭಿಸಿದ್ದ ಈ 

  ಸಂಸ್ಥೆಯಲ್ಲಿ ವೃದ್ಧರು, ಅಶಕ್ತ ಮಹಿಳೆಯರಿಗೆ ಬದುಕು ಕಲ್ಪಿಸಲಾಗುತ್ತಿದೆ. ಅಶಕ್ತ ಮಹಿಳೆಯರಿಗೆ ಸೂಕ್ತ ತರಬೇತಿ ನೀಡಿ, ಸ್ವಯಂ ಉದ್ಯೋಗ ಹಾಗೂ ನೆಲೆ ಕಲ್ಪಿಸುತ್ತಿರುವ ಸಂಸ್ಥೆ, ಪ್ರತಿವರ್ಷ ನೂರಾರು ಮಹಿಳೆಯರ ಬಾಳಿಗೆ ಬೆಳಕಾಗುತ್ತಿದೆ. ಆ ಸಂಸ್ಥೆಗೆ ತಾವು ಗೆದ್ದ ಹಣವನ್ನು ದೇಣಿಗೆಯಾಗಿ ಕೊಟ್ಟಿದ್ದಾರೆ. ಹಾಗಂತ ಪ್ರಥಮ್ ಕೋಟ್ಯಧಿಪತಿಯೇನೂ ಅಲ್ಲ. ಕೊಡುವ ಮನಸ್ಸಿರುವವರು ಅಷ್ಟೆ.

   

 • ಪೊಲೀಸರಿಗೂ ಸಿಕ್ಕದೆ ಬಿಗ್​ಬಾಸ್ ಪ್ರಥಮ್ ನಾಪತ್ತೆ - ಪ್ರಥಮ್ ವಿರುದ್ಧ ದೂರುಗಳು.. ಅಬ್ಬಬ್ಬಾ..!!!

  pratham image

  ಬಿಗ್​ಬಾಸ್ ಪ್ರಥಮ್ ಸಹನಟ ಭುವನ್​ ತೊಡೆಗೇ ಕಚ್ಚಿ, ಟಿವಿ ನ್ಯೂಸ್​ನಲ್ಲಿ ಮಾತನಾಡಿ, ನಂತರ ನಾಪತ್ತೆಯಾಗಿ ಹೋಗಿದ್ದಾರೆ. ಆದರೆ, ಪ್ರಥಮ್ ಮೇಲೆ ಕಂಪ್ಲೇಂಟುಗಳ ಸರಮಾಲೆಯೇ ಬರತೊಡಗಿದೆ. 

  ಸಂಜು ಮತ್ತು ನಾನು ಸೀರಿಯಲ್​ನಲ್ಲಿ ನಟಿಸುತ್ತಿದ್ದ ಪ್ರಥಮ್, ಸೀರಿಯಲ್​ನ ದೃಶ್ಯವೊಂದರಲ್ಲಿ ಸಂಜನಾ ಜೊತೆ ನಟಿಸಬೇಕಿತ್ತು. ಪ್ರಥಮ್ ಎಂದರೇನೇ ಉರಿದು ಬೀಳುತ್ತಿದ್ದ ನಟಿ ಸಂಜನಾ, ಆತನ ಕೈ ಮೇಲೆ ಕೈ ಇಟ್ಟು ಪ್ರಾಮಿಸ್ ಮಾಡುವ ದೃಶ್ಯಕ್ಕೂ ಒಲ್ಲೆ ಎಂದು ಕೂತುಬಿಟ್ಟಿದ್ದರು. ನಂತರ ಭುವನ್ ಹೇಳಿದ ಮೇಲೆ ಒಪ್ಪಿ ನಟಿಸಿದರಂತೆ. ಆದರೆ, ಅದಾದ ಮೇಲೆ ಇನ್ನಷ್ಟು ಕೆರಳಿದ ಪ್ರಥಮ್, ಈ ರೀತಿ ಹಲ್ಲೆ ನಡೆಸಿದ್ದಾರೆ ಎನ್ನುವುದು ಭುವನ್ ಪೊನ್ನಣ್ಣ ದೂರು.

  ಸಂಜನಾಗೆ ಕೂಡಾ ಪ್ರಥಮ್ ವರ್ತನೆ ಇಷ್ಟವಾಗುತ್ತಿರಲಿಲ್ಲ. ಅವರಷ್ಟೇ ಅಲ್ಲ, ಸೀರಿಯಲ್ ತಂಡದ ಹಲವು ತಂತ್ರಜ್ಞರು, ಸಹ ಕಲಾವಿದರು ಪ್ರಥಮ್ ವರ್ತನೆಯ ಬಗ್ಗೆ ದೂರುಗಳ ಸರಮಾಲೆಯನ್ನೇ ಹೇಳುತ್ತಿದ್ದಾರೆ.

  ಇದೆಲ್ಲದರ ಮಧ್ಯೆ ಭುವನ್, ಪ್ರಥಮ್ ವಿರುದ್ಧ ದೂರು ಕೊಟ್ಟಾಗಿದೆ. ಆದರೆ, ಪ್ರಥಮ್ ಇದುವರೆಗೆ ಪೊಲೀಸರಿಗೆ ಸಿಕ್ಕಿಲ್ಲ. ಎಲ್ಲಿದ್ದಾರೋ ಗೊತ್ತಿಲ್ಲ. 

  ಇದೆಲ್ಲದರ ಮಧ್ಯೆ ಬಚ್ಚನ್ ಖ್ಯಾತಿಯ ಉದಯ್ ಮೆಹ್ತಾ ಅವರು ನನ್ನನ್ನು ಹೀರೋ ಹಾಕಿಕೊಂಡು ಸಿನಿಮಾ ಮಾಡುತ್ತಿದ್ದಾರೆ ಎಂದಿದ್ದು, ನಂತರ ಅದನ್ನು ಉದಯ್ ಮೆಹ್ತಾ ನಿರಾಕರಿಸಿದ್ದು ಪ್ರಥಮ್ ಹುಚ್ಚಾಟಕ್ಕೆ ಇನ್ನೊಂದು ಉದಾಹರಣೆಯಷ್ಟೆ. 

  ಪ್ರಥಮ್ ವಿರುದ್ಧದ ದೂರುಗಳ ಲಿಸ್ಟು ಹನುಮಂತನ ಬಾಲದಂತೆ ಬೆಳೆಯುತ್ತಿದೆ. ಆತನ ಜೊತೆ ಕೆಲಸ ಮಾಡಿರುವವರು ನೀಡುತ್ತಿರುವ ಸಲಹೆಯೇನು ಗೊತ್ತೇ, ಪ್ರಥಮ್​ಗೆ ಒಬ್ಬ ಒಳ್ಳೆಯ ಮಾನಸಿಕ ತಜ್ಞರಿಂದ ಕೌನ್ಸೆಲಿಂಗ್ ಮಾಡಿಸಬೇಕು ಎನ್ನುವುದು.

  Related Articles :-

  ಬಿಗ್ ಬಾಸ್ ಪ್ರಥಮ್ ಮತ್ತೊಮ್ಮೆ ಕಿರಿಕ್ - ಈ ಬಾರಿ ಗೆಳೆಯನ ತೊಡೆಯನ್ನೇ ಕಚ್ಚಿದ

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery