` sudeep fans, - chitraloka.com | Kannada Movie News, Reviews | Image

sudeep fans,

 • Sudeep Fans Association Help Satyajith - Exclusive

  sudeep fans association help satyajith

  As soon as Chitraloka published the tragedy story of actor Satyajith leg amputated Akila Karnataka Abinaya Chakravarthy Kiccha Sudeep Seena samithi has rushed to Satyajith house and has given Rs 50,000/- cash to him.

  Association President Naveen Gowda, Vice President Jagadish (Jaggi) and secretary Nandi were present at Satyajith house.

  Related Posts :-

  Want to Help Satyajith? - Here Is his Bank Details

  Satyajith Left Leg Amputated - Watch Video - Exclusive

   

 • ಕಿಚ್ಚನ ಅಭಿಮಾನಿಗಳೇ.. ಶಹಬ್ಬಾಶ್..

  sudeep fan associations social work

  ಕಿಚ್ಚ ಸುದೀಪ್ ಸಾಮಾಜಿಕ ಸೇವೆಗಳಲ್ಲಿ, ನೆರವು ನೀಡುವುದರಲ್ಲಿ ಒಂದು ಹೆಜ್ಜೆ ಮುಂದಿರುತ್ತಾರೆ. ಹಾಗೆ ತಾವು ನೆರವು ನೀಡಿದ್ದನ್ನು ಹೊರಗೆಲ್ಲಿಯೂ ಹೇಳಿಕೊಳ್ಳುವುದೂ ಇಲ್ಲ. ಸಹಾಯ ಪಡೆದುಕೊಂಡವರಿಗೆ ಹಾಗೂ ಸುದೀಪ್‍ಗೆ ಮಾತ್ರವೇ ಗೊತ್ತಿರುತ್ತೆ. ಹೀಗೆ ಸಹಾಯ ಮಾಡುವ ಸುದೀಪ್, ಇತ್ತೀಚೆಗೆ ತಮ್ಮ ಹುಟ್ಟುಹಬ್ಬದ ದಿನವೂ ಅಭಿಮಾನಿಗಳಿಗೆ ಮನವಿ ಮಾಡಿ, ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಂಡಿದ್ದರು.

  ಆಗ ಸುದೀಪ್ ಮೆಚ್ಚುಗೆಗೆ ಪಾತ್ರವಾಗಿದ್ದರು. ಈಗ ಅಭಿಮಾನಿಗಳು ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಉತ್ತರ ಕರ್ನಾಟಕದಲ್ಲಿ ಈ ವರ್ಷವೂ ನೀರಿಗೆ ಬರ. ಆದರೆ, ಕಿಚ್ಚ ಸುದೀಪ್ ಅಭಿಮಾನಿಗಳು ತಮ್ಮ ಶಕ್ತಿಮೀರಿ ಜನರಿಗೆ ಕುಡಿಯುವ ನೀರು ಒದಗಿಸುವ ಸೇವೆಗೆ ಕೈ ಹಾಕಿದ್ದಾರೆ. ಬಸವ ಕಲ್ಯಾಣದಲ್ಲಿರುವ ಕಿಚ್ಚನ ಅಭಿಮಾನಿಗಳ ಸಂಘ ಈ ಸೇವೆಗೆ ಮುಂದಾಗಿದೆ. 

  ಇವರಷ್ಟೆ ಅಲ್ಲ, ಇವರಂತೆಯೇ ಬಡವರಿಗೆ ನೆರವು ನೀಡುವ, ಅಶಕ್ತರಿಗೆ ಸಹಾಯವಾಗುವ ಎಷ್ಟೋ ಕೆಲಸಗಳಲ್ಲಿ ಸುದೀಪ್ ಅಭಿಮಾನಿಗಳು ಮುಂದಿದ್ದಾರೆ. ಶಹಬ್ಬಾಶ್ ಹೇಳಲೇಬೇಕಲ್ಲವೇ...

 • ಮತ್ತೊಮ್ಮೆ ಹೃದಯವಂತಿಕೆ ಮೆರೆದ ಕಿಚ್ಚ

  sudeep's heartwarming act

  ಕಿಚ್ಚ ಸುದೀಪ್ ಕೋಟಿಗೊಬ್ಬರಷ್ಟೇ ಅಲ್ಲ, ಹೃದಯವಂತರೂ ಹೌದು ಅನ್ನೋದಕ್ಕೆ ಈ ಪ್ರಕರಣ ಇನ್ನೊಂದು ಸಾಕ್ಷಿ ಅನ್ನೋಕೆ ಅಡ್ಡಿಯಿಲ್ಲ. ಬಳ್ಳಾರಿ ಮೂಲದ ವಿನುತಾ, ಸುದೀಪ್ ಅವರ ಅಪ್ಪಟ ಅಭಿಮಾನಿ. ಕ್ಯಾನ್ಸರ್ 4ನೇ ಹಂತದಲ್ಲಿರುವ ವಿನುತಾ ಅವರಿಗೆ ಒಮ್ಮೆಯಾದರೂ ಸುದೀಪ್ ಅವರನ್ನು ನೋಡಬೇಕು, ಮಾತನಾಡಿಸಬೇಕು ಎಂಬ ಆಸೆ. 

  ತಮ್ಮ ಅಭಿಮಾನಿ ಸಂಘ ಕಿಚ್ಚ ಸುದೀಪ್ ಸೇನಾ ಸಮಿತಿಯಿಂದ ವಿಷಯ ತಿಳಿದುಕೊಂಡ ಸುದೀಪ್, ಮನೆಗೇ ಸ್ವತಃ ತೆರಳಿ ವಿನುತಾ ಅವರನ್ನು ಭೇಟಿಯಾಗಿದ್ದಾರೆ. ಅಭಿಮಾನಿಯ ಜೊತೆ ಗಂಟೆಗೂ ಹೆಚ್ಚು ಕಾಲ ಕಳೆದು ಅಭಿಮಾನಿಯ ಅಂತಿಮ ಆಸೆ ಈಡೇರಿಸಿದ್ದಾರೆ.

Padarasa Movie Gallery

Kumari 21 Movie Gallery