ಕನ್ನಡ ಕಿರುತೆರೆಯ ಕಾಮಿಡಿ ರಿಯಾಲಿಟಿ ಷೋನಲ್ಲಿ ಮಜಾ ಟಾಕೀಸ್‍ಗೆ ಬೇರೆಯದ್ದೇ ಸ್ಥಾನವಿದೆ. 200 ಎಪಿಸೋಡ್ ದಾಟಿ ಮುನ್ನುಗ್ಗುತ್ತಿರುವ ಈ ಕಾಮಿಡಿ ಶೋಗೆ ಚಿತ್ರರಂಗದ ಸ್ಟಾರ್‍ಗಳೆಲ್ಲ ಬಂದು ಹೋಗಿದ್ದಾರೆ. ಆದರೆ, ಇದುವರೆಗೆ ಮಜಾ ಟಾಕೀಸ್‍ನಲ್ಲಿ ಪುನೀತ್ ರಾಜ್‍ಕುಮಾರ್ ಎಂಟ್ರಿ ಕೊಟ್ಟಿರಲಿಲ್ಲ.
ಸೃಜನ್ ಲೋಕೇಶ್ ನಡೆಸಿಕೊಡುವ ಮಜಾ ಟಾಕೀಸ್‍ನಲ್ಲಿ ಇದೇ ಮೊದಲ ಬಾರಿಗೆ ಪುನೀತ್ ರಾಜ್‍ಕುಮಾರ್ ಕಾಣಿಸಿಕೊಂಡಿದ್ದಾರೆ. ಅದು ರಾಜಕುಮಾರ ಸಕ್ಸಸ್ ಹಿನ್ನೆಲೆಯಲ್ಲಿ.
ರಾಜಕುಮಾರ ಚಿತ್ರ 50 ದಿನ ಪೂರೈಸಿದಾಗಲೇ ಮಜಾ ಟಾಕೀಸ್‍ಗೆ ಪುನೀತ್ ಎಂಟ್ರಿ ಕೊಟ್ಟಿದ್ದರು. ಕಾರ್ಯಕ್ರಮ ಶೂಟಿಂಗ್ ಕೂಡಾ ಆಗಿತ್ತು. ಆದರೆ, ಪುನೀತ್ ಭಾಗವಹಿಸಿರುವ ಕಾರ್ಯಕ್ರಮವನ್ನು ವಿಶೇಷ ದಿನದಂದೇ ಪ್ರಸಾರ ಮಾಡಬೇಕು ಎಂದು ನಿರ್ಧರಿಸಿದ್ದ ಕಾಯಕ್ರಮ ನಿರ್ಮಾಪಕರು, ಈಗ ರಾಜಕುಮಾರ ಚಿತ್ರದ ಶತದಿನೋತ್ಸವ ದಿನದಂದು ಡೇಟ್ ಫಿಕ್ಸ್ ಮಾಡಿದ್ದಾರೆ.
ಕಾರ್ಯಕ್ರಮದ ವಿಶೇಷತೆಗಳೇನು ಗೊತ್ತಾ..?
ಜುಲೈ 1ರಂದು ರಾಜಕುಮಾರ ಚಿತ್ರ 100 ದಿನ ಪೂರೈಸಲಿದೆ. ಅದೇ ದಿನ ಈ ಕಾರ್ಯಕ್ರಮ ಪ್ರಸಾರವಾಗಲಿದೆ.
ಇದು ಮಜಾ ಟಾಕೀಸ್ ಸರಣಿಯ 250ನೇ ಎಪಿಸೋಡ್
ಈ ಕಾರ್ಯಕ್ರಮದಲ್ಲಿ ಅಪ್ಪು ಪುಟ್ಟ ಮಕ್ಕಳೊಂದಿಗೆ ಡ್ಯಾನ್ಸ್ ಮಾಡಿರೋದು ವಿಶೇಷ.