ಸಿದ್ಧಗಂಗಾ ಮಠದ ತ್ರಿವಿಧ ದಾಸೋಹಿ, ನಡೆದಾಡುವ ದೇವರು ಎಂದೇ ಹೆಸರಾಗಿದ್ದ ಶ್ರೀ ಶಿವಕುಮಾರ ಸ್ವಾಮೀಜಿಗಳ ಕುರಿತ ಮಿನಿ ಸಿರೀಸ್ ಮಾಡೋ ಕೆಲಸಕ್ಕೆ ಹಂಸಲೇಖ ಕೈಹಾಕಿದ್ದಾರೆ. ಇದು ಸಿನಿಮಾ ಅಲ್ಲ. ಒಟ್ಟಾರೆ 52 ಎಪಿಸೋಡ್‍ಗಳ ಸಿರೀಸ್. ನಿರ್ದೇಶನ ನಾದಬ್ರಹ್ಮ ಹಂಸಲೇಖ ಅವರದ್ದು.
ರುದ್ರಾ ಕಿರುಚಿತ್ರ ಸಂಸ್ಥೆ ಮತ್ತು ಐದನಿ ಎಂಟರ್‍ಪ್ರೈಸಸ್ ಈ ಸಿರೀಸ್‍ಗೆ ಬಂಡವಾಳ ಹೂಡುತ್ತಿವೆ. ಮಾಜಿ ಐಎಎಸ್ ಅಧಿಕಾರಿ ಸೋಮಶೇಖರ್, ಎಂ.ಪಿ.ರೇಣುಕಾಚಾರ್ಯ, ನಿರ್ಮಾಪಕ ರುದ್ರೇಶ್, ದೀಪಕ್, ಸದಾಶಿವಯ್ಯ.. ಮೊದಲಾದವರು ಈ ಸಿರೀಸ್‍ಗೆ ಕೈಜೋಡಿಸುತ್ತಿದ್ದಾರೆ.
ಅಂದಹಾಗೆ ಸಿದ್ದಗಂಗಾ ಶ್ರೀಗಳ ಪಾತ್ರಕ್ಕೆ ಅಮಿತಾಭ್ ಬಚ್ಚನ್ ಅವರನ್ನು ಸಂಪರ್ಕಿಸಲು ಚಿತ್ರತಂಡ ಚಿಂತನೆ ನಡೆಸಿದೆ. ಇನ್ನೂ ಅಂತಿಮವಾಗಿಲ್ಲ. ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ, ಇಂಗ್ಲಿಷ್ ಹಾಗೂ ಸಂಸ್ಕøತ ಭಾಷೆಗಳಲ್ಲಿ ಸಿರೀಸ್ ಸಿದ್ಧವಾಗಲಿದ್ದು, ಎಲ್ಲರಿಗೂ ಪರಿಚಿತವಾಗಿರೋ ಸ್ಟಾರ್ ನಟರನ್ನೇ ಆಯ್ಕೆ ಮಾಡಿಕೊಳ್ಳೋಕೆ ಚಿತ್ರತಂಡ ಮುಂದಾಗಿದ್ದು, ಬಚ್ಚನ್ ಅವರೇ ಸೂಕ್ತ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.