` hamsalekha, - chitraloka.com | Kannada Movie News, Reviews | Image

hamsalekha,

  • ಹಂಸಲೇಖ ಹುಟ್ಟುಹಬ್ಬಕ್ಕೆ ಬರ್ತಾಳೆ ಶಕುಂತಲಾ

    Shakuntala Coming on Hamsalekha Birthday

    ಶಕುಂತಲಾ ಎಂದರೆ, ದುಷ್ಯಂತ, ಕವಿರತ್ನ ಕಾಳಿದಾಸ ಅಷ್ಟೇ ಅಲ್ಲ, ಹಂಸಲೇಖ ಕೂಡಾ ನೆನಪಾಗ್ತಾರೆ. ಏಕೆಂದರೆ, ಈ ಹಂಸಲೇಖ ಪ್ರೇಮಲೋಕದ ಶಕುಂತಲೆಯ ಅಲ್ಲಲ್ಲಾ..ಶಶಿಕಲಾರ ಸೃಷ್ಟಿಕರ್ತರಲ್ಲಿ ಒಬ್ಬರು.

    ಈಗ ಶಕುಂತಲೆಯನ್ನು ಮತ್ತೆ ಸೃಷ್ಟಿಸಲು ಹೊರಟಿದ್ದಾರೆ ಹಂಸಲೇಖ. ಅದು ಅವರ ಹುಟ್ಟುಹಬ್ಬದ ದಿನ. ಜೂನ್ 23 ಅಂದ್ರೆ ನಾಳೆ ಹಂಸಲೇಖ ಹುಟ್ಟುಹಬ್ಬ. ಹುಟ್ಟುಹಬ್ಬದ ದಿನಕ್ಕೆ ಶಕುಂತಲೆ ಹೆಸರಿನ ಚಿತ್ರ ಸೆಟ್ಟೇರುತ್ತಿದೆ. ಚಿತ್ರದ ಸಂಗೀತ ಸಾಹಿತ್ಯ ಅಷ್ಟೇ ಅಲ್ಲ, ಚಿತ್ರದ ನಿರ್ಮಾಪಕ ಮತ್ತು ನಿರ್ದೇಶಕ ಕೂಡಾ ಹಂಸಲೇಖ.

    ಇದರ ಜೊತೆಯಲ್ಲೇ ಇನ್ನೂ ಎರಡು ಚಿತ್ರಗಳ ನಿರ್ದೇಶನಕ್ಕೆ ಹಂಸಲೇಖ ಕೈ ಹಾಕಿದ್ದಾರೆ. ಐಯೋರಾ ಮತ್ತು ಗಿಟಾರ್ ಹೆಸರಿನ ಆ ಚಿತ್ರಗಳು ಶಕುಂತಲೆಯ ನಂತರ ಶುರುವಾಗಲಿವೆ.

    ನಾಳೆಗೆ ಹಂಸಲೇಖ ಅವರಿಗೆ 65 ತುಂಬಲಿದೆ

  • 11 ವರ್ಷಗಳ ಹಂಸಲೇಖ ಕನಸು ಕಮರಿಹೋಗಿದ್ದು ಏಕೆ..?

    hamsalekha's desi university dream collapsed?

    ಹಂಸಲೇಖ, ಕನ್ನಡ ಚಿತ್ರ ಸಂಗೀತ ಲೋಕದ ನಾದಬ್ರಹ್ಮ. ದಶಕಗಳ ಕಾಲ ಕನ್ನಡ ಸಂಗೀತ ಲೋಕದ ಸಾಮ್ರಾಟನಾಗಿ ಮೆರೆದವರು. ಇಂತಹ ಹಂಸಲೇಖ ಅವರಿಗೆ ಒಂದು ಕನಸಿತ್ತು. ದೇಸಿ ವಿಶ್ವವಿದ್ಯಾಲಯ ಸ್ಥಾಪಿಸಬೇಕೆಂಬ ಕನಸದು. ಅದಕ್ಕೆ ಹಂಸಲೇಖ, ಚಿತ್ರ ಸಂಗೀತವನ್ನು ಬಿಟ್ಟು, ಊರೂರು ತಿರುಗಿದ್ದರು. ಹಳ್ಳಿ ಹಳ್ಳಿಗಳಿಂದ ಹುಡುಕಿ 900 ಜನರನ್ನು ಕರೆತಂದಿದ್ದರು.

    ಆದರೆ, ಅಲ್ಲಿಂದ ಕಾಲೇಜಿಗೆ ಬರಬೇಕಿದ್ದ ಆ 900 ವಿದ್ಯಾರ್ಥಿಗಳಲ್ಲಿ ಒಬ್ಬರೂ ಬರಲಿಲ್ಲ. ಸಾಂಸ್ಕøತಿಕ ಕ್ಷೇತ್ರದಲ್ಲೂ ಹಣ ಇದೆ ಅನ್ನೋದು ಅವರಿಗೆ ಗೊತ್ತಿಲ್ಲ. ಹೀಗಾಗಿ ಯುನಿವರ್ಸಿಟಿ ಕಟ್ಟುವ ಕನಸು ಹೊತ್ತಿದ್ದ ಹಂಸಲೇಖ, ಈಗ ಅದನ್ನೇ ಜಾನಪದ ಸಂಶೋಧನಾ ಕೇಂದ್ರ ಮಾಡಲು ಹೊರಟಿದ್ದಾರೆ.

  • Be accessible to film makers, Hamsalekha advises Raja Vardhan

    hamsalekha image

    Raja Vardhan, the son of veteran actor Dingri Nagaraj is making his debut in a historical film. Bichchugatti is releasing on the 28th of February. Sandalwood legend Hamsalekha is the mentor of this film. In fact he was supposed to direct the film. But due to the fact that his vision of the film was too expensive, he asked the producers to get Alemari Santu (Hari Santhosh) to direct the film. 

    The film is based on a novel by BL Venu and chronicles the life of Bichchugatti Bharamappa Nayaka, one of the most famous palegaras of Chitradurga who fought against the Mughals. Hamsalekha mentored the film and has even composed a song for it. He had prepared it earlier planning to direct the film and then handed it to Santhu to be used by him.

    bicchugatthi_2_20.jpg

    Hamsalekha praised the work of the director and the lead actor Raja Vardhan. Hamsalekha said that it was very important for film makers and actors to read books and history and pick up stories from them. He said that there were hundreds of good stories in Karnataka's history that can be made into films. He said that apart from Ramayana and Mahabharata there were other epics in South India which film makers should make into films. 

    Advising Raja Vardhan Hamsalekha said that he should group up to be an actor who is accessible to producer and directors. It was only with the support of actors that epics and good films can be made. Otherwise only the same kind of hero oriented films will be made which will not help the industry or Kannada culture, he said.

  • Hamsalekha Releases The Songs Of 'Srisamanya'

    hamsalkeha releses sreesamanya ong

    Well known music director and lyricist Hamsalekha on Monday evening released the songs of a new film called 'Srisamanya' at the Artistes Association's new building in Bangalore.

    'Srisamanya' is a film which is written and directed by Gunavantha Manju and produced by Bharathi Shetty. The producer's daughter Shakthi Shetty has played a prominent role in the film and the songs of the film have been composed by Indrasena. The film talks about nature and the problems arising out of plastic.

    Hamsalekha said 'Srisamanya' is a word coined by Jnanapeeta Award winner Kuvempu and the title is very much apt for the film. Lahari Velu was present during the occasion.

  • Hamsalekha Releases The Songs Of Marali Mannige

    marali mannige audio release image

    Senior music director and lyricist Hamsalekha on Thursday evening released the songs of 'Marali Mannige' being directed by Yogish Master.

    The film is based on Yogish Master's novel which was written many years many years back. Based on the novel, Yogish Master himself has written the story, screenplay and dialogues apart from directing the film. The film is produced by Lingegowda and Subhash L Gowda.

    The film stars Shruthi, Shankar Aryan, Aniruddh, Arundhati Jatkar and others. Shruthi was also present during the audio release function. Yogish Master has composed the songs of the film along with Gurumurthy Vaidya.

  • Hamsalekha To Direct A Film Called Guitar

    hamsalekha image

    Well known music composer Hamsalekha has been talking of directing a film for a while. However, the film didn't happen due to various reasons. Now the ace music composer has announced that he will be directing a film called 'Guitar'.

    Hamsalekha himself announced that he will be directing a film during an audio release function. He also requested ace guitarist Raghu Deekhshith to play Bass Guitar for the film, for which Raghu Deekshith immediately approved.

    More details about the film are yet awaited.

  • Hamsalekha To Direction Through 4K

    hamsalekha image

    Well known music director Hamsalekha has been talking of directing a film for quite some time. Now the veteran music composer is all set to make his debut in direction through a new film called '4K'.Hamsalekha has launched a new production company called

    Hamsalekha has launched a new production company called Hamsa Cine School Productions and is planning to launch '4K' through the newly floated company. One of the highlights of this film is, the film will be having four different stories. Each story will be directed by a different director and each film will have a different crew. Hamsalekha will be directing one film among the four.

    Hamsalekha has selected four stories by well-known writers and is busy with the post-production of the film. Hamsalekha's son Alankar will be in charge of the project.

  • Rajavardhan Has A Great Future As Actor, Hamsalekha Predicts

    rajavardhan has a great future as actor

    Musical maestro Nadabrahma Hamsalekha who is impressed with the works of debutant Rajavardhan, son of popular actor Dingri Nagaraj, in the upcoming periodical 'Bicchugathii' predicts that the actor has a great future. However, he advises him to select films judiciously for a prospective future as an actor.

    He also revealed that initially Bicchugathii was his project but due to budget constraints, the producers backed off. "As promised to director Hari Santhu, I handed over this periodic film and I must admit, he has done a wonderful job," he says.

    He goes onto add that making a historical film is a hard task but with dedication and adopting the present technology could help making it effectively. "There are numerous such historical stories which can be made with great details," says Hamsalekha who has also composed songs for Bicchugathii.

    Whereas, actor Dingri Nagaraj urged everyone to extend the same kind of support and love towards his son Rajavardhan.

    Directed by Hari Santhu, the film is based on the novel titled Dalavai Muddanna by senior writer B L Venu. Along with Rajavardhan as Bharamanna Nayaka, Hariprriya and Prabhakar of Bahubali fame as Mudanna are in the lead role. The film is set for release in the coming weeks.

  • ಇದಕ್ಕಿಂತ ದೊಡ್ಡ ದುರಂತವನ್ನು ನನ್ನ ಜೀವನದಲ್ಲಿ ನೋಡಲಾರೆ - ಹಂಸಲೇಖ

    Hamsalekha's Expresses Extreme Grief Over SPB's Death

    ಹಂಸಲೇಖ ಮತ್ತು ಎಸ್‍ಪಿಬಿ ಅವರದ್ದು ಜುಗಲ್‍ಬಂದಿ ಜೀವನ. ಹಂಸಲೇಖರ ಶ್ರೇಷ್ಟ ಗೀತೆಗಳಿಗೆ ಜೀವ ತುಂಬಿದವರು ಇದೇ ಎಸ್‍ಪಿಬಿ. ಹಂಸಲೇಖ ಅವರಿಗೆ ಕನ್ನಡದಲ್ಲಿ ರಾಷ್ಟ್ರಪ್ರಶಸ್ತಿ ಪಡೆಯಬೇಕು. ಆ ಪ್ರಶಸ್ತಿ ಸಮಾರಂಭಕ್ಕೆ ರಫಿ ಅವರು ಧರಿಸುತ್ತಿದ್ದಂತ ಕೋಟು ಧರಿಸಿ ಹೋಗಿ ಪ್ರಶಸ್ತಿ ಸ್ವೀಕರಿಸಬೇಕು ಎಂಬ ಕನಸಿತ್ತು. ಆ ಕನಸನ್ನು ನನಸು ಮಾಡಿದವರು ಹಂಸಲೇಖ.

    ಗಾನಯೋಗಿ ಪಂಚಕ್ಷರಿ ಗವಾಯಿ ಚಿತ್ರಕ್ಕೆ ಎಸ್‍ಪಿಬಿ ರಾಷ್ಟ್ರಪ್ರಶಸ್ತಿ ಪಡೆದರು. ಆ ದಿನ ಹೇಳಿದಂತೆಯೇ ರಫಿ ಧರಿಸುತ್ತಿದ್ದ ಮಾದರಿಯ ಕೋಟನ್ನೇ ಧರಿಸಿದ್ದರು. ಆರಂಭದಲ್ಲಿ ಅಷ್ಟು ದೊಡ್ಡ ಸಾಧಕನ ಹಾಡುಗಳನ್ನು ಹಾಡುವ ಶಕ್ತಿ ನನ್ನಲ್ಲಿ ಇಲ್ಲ ಎಂದಿದ್ದರಂತೆ ಎಸ್‍ಪಿಬಿ. ಸತತ 6 ತಿಂಗಳ ಪ್ರಯತ್ನದ ನಂತರವೂ ಎಸ್‍ಪಿಬಿ ಒಪ್ಪದೇ ಹೋದಾಗ ಹರಿಹರನ್ ಅವರಿಂದ ಹಾಡಿಸೋಣ ಎಂದುಕೊಂಡು ನಿರ್ಮಾಪಕರ ಬಳಿ ಹೇಳಿದ್ದರಂತೆ ಹಂಸಲೇಖ.

    ನಿರ್ಮಾಪಕ ಬಂಗಾರೇಶ್ ಅವರು ಹರಿಹರಾನ ಕರ್ಕೊಂಡ್ ಬರ್ತೀರೋ.. ದಾವಣಗೆರೆಯನ್ನೇ ಕರ್ಕೊಂಡ್ ಬರ್ತೀರೋ ಗೊತ್ತಿಲ್ಲ. ಈ ಚಿತ್ರದಲ್ಲಿ ಎಸ್‍ಪಿಬಿ ಅವರು ಹಾಡಲೇಬೇಕು. ಅವರನ್ನು ಹೇಗಾದರೂ ಮಾಡಿ ಒಪ್ಪಿಸುವ ಜವಾಬ್ದಾರಿ ನಿಮ್ಮದು ಎಂದರಂತೆ. ಮತ್ತೊಮ್ಮೆ ಎಸ್‍ಪಿಬಿ ಅವರನ್ನು ಭೇಟಿ ಮಾಡಿ ಒತ್ತಾಯ ಮಾಡಿದಾಗ ಎಸ್‍ಪಿಬಿ, ಹಂಸಲೇಖ ಅವರಿಗೆ ಹಾಡುಗಳನ್ನು ಕೇಳಿಸಿದರಂತೆ.

    ಹಂಸಲೇಖ ಗವಾಯಿಗಳ ಚಿತ್ರಕ್ಕೆ ಸಂಯೋಜಿಸಿ ಕಳಿಸಿದ್ದ ಅಷ್ಟೂ ಹಾಡುಗಳನ್ನು 50 ಬಾರಿ ಹಾಡಿ ರೆಕಾರ್ಡ್ ಮಾಡಿದ್ದರಂತೆ ಎಸ್‍ಪಿಬಿ. ಕೊನೆಗೆ ಹಂಸಲೇಖ ಅವರನ್ನು ಸ್ಟುಡಿಯೋದಲ್ಲಿ ನೀವು ಇರಬಾರದು. ನೀವೇನಾದರೂ ದೋಷಗಳನ್ನು ಎತ್ತಿ ತೋರಿಸಿದರೆ ನನಗೆ ಕಷ್ಟವಾಗುತ್ತೆ. ಹಾಡು ಮುಗಿದ ನಂತರವೇ ನಿಮ್ಮ ಅಭಿಪ್ರಾಯ ಹೇಳಿ ಎಂದು ರೆಕಾರ್ಡಿಂಗ್ ಸ್ಟುಡಿಯೋಗೂ ಬಿಟ್ಟುಕೊಂಡಿರಲಿಲ್ಲವಂತೆ ಎಸ್‍ಪಿಬಿ. ಅವರಿಬ್ಬರ ಪ್ರೀತಿ, ಬಾಂಧವ್ಯ ಹಾಗಿತ್ತು.

    ನಾನು ಸ್ವಾತಂತ್ರ್ಯ ಚಳವಳಿ ಕಂಡವನಲ್ಲ. ಗಾಂಧಿಯನ್ನು ನೋಡಿದವನಲ್ಲ. ಆದರೆ ಜೆಪಿ ಚಳವಳಿ ನೋಡಿದವನು. ಮಹಾಯುದ್ಧಗಳನ್ನು ನೋಡಿದವನಲ್ಲ. ಆದರೆ ಈಗ ಬಂದಿರೋ ಕೊರೊನಾ ಮಹಾಯುದ್ಧಕ್ಕಿಂತ ಭೀಕರವಾಗಿದೆ. ನಾನು ನನ್ನ ಈ ಜನ್ಮದಲ್ಲಿ ನೋಡಬಾರದು ಎಂದುಕೊಂಡಿದ್ದುದು ಎಸ್‍ಪಿಬಿ ನಿಧನ. ಅದನ್ನೂ ನೋಡಿಬಿಟ್ಟೆ. ಇದಕ್ಕಿಂತ ದೊಡ್ಡ ದುರಂತವನ್ನು ನಾನು ನೋಡೋಕೆ ಸಾಧ್ಯವಿಲ್ಲ ಎಂದಿದ್ದಾರೆ ಹಂಸ.

  • ಈ ಒಗಟು ಬಿಡಿಸಿದ್ರೆ.. ಹಂಸಲೇಖ ಕೊಡ್ತಾರೆ 1 ಲಕ್ಷ ರೂ

    hamsalekha's chanllenge

    ನಾದಬ್ರಹ್ಮ ಹಂಸಲೇಖ, ನಿರ್ದೇಶಕರಾಗುತ್ತಿರುವ ಸಂಗತಿ ಹೊಸದೇನೂ ಅಲ್ಲ. `ಶಕುಂತ್ಲೆ' ಸಿನಿಮಾಗೆ ಆ್ಯಕ್ಷನ್ ಕಟ್ ಹೇಳುತ್ತಿರುವ ಹಂಸಲೇಖ, ಚಿತ್ರದ ಒಂದು ಸಣ್ಣ ಟೀಸರ್ ಬಿಟ್ಟಿದ್ದಾರೆ. ಅದು ಟೀಸರ್ ಅಲ್ಲ, ಪಂಥಾಹ್ವಾನ ಎಂದರೂ ಆಶ್ಚರ್ಯವಿಲ್ಲ. ಏಕೆಂದರೆ, ಟೀಸರ್‍ನಲ್ಲಿರೋದು ಒಗಟು.

    ಇದು ಹಂಸಲೇಖ ಒಗಟು - ಅಂಚಿಲ್ದ್ ಅರಿವೆ ಉಟ್ಕಂಡ್, ತಳಾ ಇಲ್ದ ತಂಬ್ಗೆ ತಗಂಡ್, ಏರಿ ಇಲ್ದಿರೋ ಕೆರೆಗೆ, ತೂಬೆ ಇಲ್ದಿರೋ ತುದಿಗೇ, ನೀರ್ ತರಕ್ ಹೋದ ನಾರಿ...

    ಉತ್ತರ ಹೇಳಿದೋವ್ರಿಗೆ ಒಂದು ಲಕ್ಷ ಬಹುಮಾನ ಕೊಡ್ತಾರಂತೆ. ಒಗಟುಗಳನ್ನು ಈಗಾಗಲೇ ಹಲವು ಸಿನಿಮಾಗಳಲ್ಲಿ ಹಾಡಾಗಿಸಿದ್ದ ಹಂಸಲೇಖ, ಈ ಒಗಟಿನ ಮೂಲಕ ಕನ್ನಡಿಗರ ತಲೆಗೊಂದು ಹೊಸ ಒಗಟು ಬಿಟ್ಟಿದ್ದಾರೆ.

  • ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ವಿರುದ್ಧ ಹಂಸಲೇಖ ಬೇಸರ

    ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ವಿರುದ್ಧ ಹಂಸಲೇಖ ಬೇಸರ

    ಕನ್ನಡ ಚಿತ್ರರಂಗಕ್ಕೆ ನೇತೃತ್ವವೂ ಇಲ್ಲ. ಚುಕ್ಕಾಣಿಯೂ ಇಲ್ಲ. ಹಿರಿಯರು, ದೊಡ್ಡ ದೊಡ್ಡ ಮಹನೀಯರು ಕಟ್ಟಿದ ಚಿತ್ರರಂಗ ಈಗ ದಿಕ್ಕು ತಪ್ಪಿದೆ ಎನ್ನುವ ಮೂಲಕ ಪರೋಕ್ಷವಾಗಿ  ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ವಿರುದ್ಧ ಹಂಸಲೇಖ ಬೇಸರ ಹೊರಹಾಕಿದ್ದಾರೆ.

    ದೊಡ್ಡ ದೊಡ್ಡ ಮಹನೀಯರು ಸೇರಿ ಸಂಸ್ಥೆಯನ್ನ ಕಟ್ಟಿ ಬೆಳೆಸಿದ್ರು. ಮೂರು ವರ್ಗಗಳನ್ನೂ ಜೊತೆಯಲ್ಲಿ ಕರೆದುಕೊಂಡು ಹೋಗುತ್ತಿದ್ರು. ನಿರ್ಮಾಪಕ, ಪ್ರದರ್ಶಕ ಹಾಗೂ ವಿತರಕ ವಲಯವನ್ನ ಒಗ್ಗಟ್ಟಿನ ತ್ರಿಶೂಲವಾಗಿಟ್ಟುಕೊಂಡು ಕೆಲಸ ಮಾಡಿದ್ರು. ಆದರೆ ಪ್ಯಾನ್ ಇಂಡಿಯಾದ ವ್ಯಾಪಾರದ ಸೋಗು ಬಂದಿದೆ. ಇದರಿಂದಾಗಿ ಕನ್ನಡ ಚಿತ್ರರಂಗ ಇಂದು ದಿಕ್ಕು ತಪ್ಪಿ ಹೋಗಿದೆ. ಕನ್ನಡದಲ್ಲೇ ಬದುಕಬೇಕಾ ಅಥವಾ ಕನ್ನಡವನ್ನಟ್ಟಿಕೊಂಡು ಎಲ್ಲರ ಜೊತೆಯಲ್ಲಿ ಬದುಕಬೇಕಾ ಎನ್ನುವ ದೊಡ್ಡ ತಾಪತ್ರಯ ಎದುರಾಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ ಹಂಸಲೇಖ.

    ಈ ಹಿಂದೆ ಪ್ರತಿ ಕನ್ನಡ ಚಿತ್ರದಲ್ಲಿ ಕನ್ನಡದ ಹಿರಿಮೆ ಸಾರುವ ಒಂದು ಹಾಡು ಇರುತ್ತಿತ್ತು. ಆದರೆ ಈಗ ಅಂತಹ ಹಾಡುಗಳಿಗೆ ಕತ್ತರಿ ಹಾಕ್ತಾರೆ. ಏಕೆಂದ್ರೆ ಇಲ್ಲಿ ಹಾಡಿದ ಹಾಡು ಅಲ್ಲಿ ಸಲ್ಲುವುದಿಲ್ಲ. ಅಲ್ಲಿ ಹಾಡಿದ ಹಾಡು ಇಲ್ಲಿ ಸಲ್ಲುವುದಿಲ್ಲ. ಹೀಗಾಗಿ ಇಂದು ಬರೀ ಆಕ್ಷನ್ ನೇ ರಿಯಾಕ್ಷನ್ ಆಗಿದೆ. ಇಂದಿನ ಸಿನಿಮಾಗಳಲ್ಲಿ ಸಂಬಂಧಗಳು ಯಾವುದೂ ಇರುವುದಿಲ್ಲ. ಬರೀ ಹೊಡಿ-ಬಡಿ ಕಿವಿ ಮುಚ್ಚಿಕೊಳ್ಳೋ ರೀತಿ ಅಬ್ಬರದ ಸಂಗೀತ.  ಇದು ಎಲ್ಲಾ ಭಾಷೆಗಳಲ್ಲಿ ಮ್ಯಾಚ್ ಆಗುತ್ತೆ ಅಂಥ ತಿಳಿದುಕೊಂಡಿದ್ದಾರೆ.ಹಾಗಾಗಿ ಇಂದಿನ ಎಲ್ಲ ಸಿನಿಮಾಗಳಲ್ಲಿ ಹೊಡಿಬಡಿ ಹಾಡುಗಳು ಸಾಮಾನ್ಯವಾಗಿಬಿಟ್ಟಿವೆ ಎಂದು ಬೇಸರ ಹೊರಹಾಕಿದ್ದಾರೆ.

    ಕನ್ನಡ ಚಿತ್ರರಂಗದಲ್ಲಿ ಹೊಸ ನಿರ್ದೇಶಕರು 250 ಜನ ಇದ್ದಾರೆ, ಹೊಸ ನಿರ್ಮಾಪಕರು 500 ಜನ ಇದ್ದಾರೆ. ಇವರ್ಯಾರಿಗೂ ನಮ್ಮ ಚೇಂಬರ್ ನ ಸಂಪರ್ಕವೇ ಇಲ್ಲ. ಎಲ್ಲರನ್ನ ಕರೆದು ಚರ್ಚೆ ಮಾಡುವವರೇ ಇಲ್ಲದಂತಾಗಿದೆ. ಮುಂದಿನ ದಿನದಲ್ಲಿ ಯಾರಾದ್ರು ಬಂದು ಆ ಚುಕ್ಕಾಣಿಯನ್ನ ಹಿಡಿಬೇಕು. ಸಂಸ್ಕೃತಿ ಮಾರ್ಗದಲ್ಲಿ, ಕನ್ನಡ ಮಾರ್ಗದಲ್ಲಿ ಕನ್ನಡ ಚಲನಚಿತ್ರವನ್ನ ನಡೆಸುವಂತಾಗಬೇಕು ಎಂದಿದ್ದಾರೆ ಹಂಸಲೇಖ.

  • ಝೀ ಕನ್ನಡದಿಂದ ದೂರವಾದರಾ ಹಂಸಲೇಖ..?

    ಝೀ ಕನ್ನಡದಿಂದ ದೂರವಾದರಾ ಹಂಸಲೇಖ..?

    ಗಾನಗಾರುಡಿಗ ಹಂಸಲೇಖ ಕಿರುತೆರೆಗೆ ಬಂದಿದ್ದು ಝೀ ಕನ್ನಡದ ಝೀ ಕನ್ನಡದ ಮೂಲಕ. ಝೀ ಕನ್ನಡದ ಸರಿಗಮಪ ಶೋ ಮೂಲಕ ಬಂದ ಹಂಸಲೇಖ, ಆ ಕಾರ್ಯಕ್ರಮಕ್ಕೆ ಮೆರುಗು ತಂದಿದ್ದರು. ಮಹಾಗುರುಗಳ ಸ್ಥಾನದಲ್ಲಿದ್ದರು. ವಿಜಯ್ ಪ್ರಕಾಶ್, ಅರ್ಜುನ್ ಜನ್ಯಾ ಮತ್ತು ರಾಜೇಶ್ ಕೃಷ್ಣನ್ ತೀರ್ಪುಗಾರರಾಗಿದ್ದರೆ, ಇವರು ಮಹಾಗುರು. ರಿಯಾಲಿಟಿ ಶೋ ಕಳೆ ಹೆಚ್ಚಿಸಿದ್ದ ಹಂಸಲೇಖ ಈಗ ಅಲ್ಲಿಂದ ಹೊರಬಿದ್ದರಾ..? ಹೌದು ಎನ್ನಲಾಗುತ್ತಿದೆ.

    ಕಲರ್ಸ್ ಕನ್ನಡದಲ್ಲಿ ಈಗ ಎದೆ ತುಂಬಿ ಹಾಡುವೆನು ರಿಯಾಲಿಟಿ ಶೋ ಮತ್ತೆ ಶುರುವಾಗುತ್ತಿದೆ. ಎದೆ ತುಂಬಿ ಹಾಡುವೆನು ಕಾರ್ಯಕ್ರಮ, ಎಸ್‍ಪಿಬಿ ಅವರ ಜೊತೆಯಲ್ಲೇ ಗುರುತಿಸಿಕೊಂಡಿದ್ದ ಕಾರ್ಯಕ್ರಮ. ಹೆಚ್ಚೂಕಡಿಮೆ ಒಂದು ದಶಕ ಟಾಪ್  ಶೋ ಆಗಿದ್ದ ಕಾರ್ಯಕ್ರಮವದು. ಆ ಕಾರ್ಯಕ್ರಮದಲ್ಲಿ ಎಸ್‍ಪಿಬಿ ಅವರ ಸ್ಥಾನಕ್ಕೆ ಹಂಸಲೇಖ ಬಂದಿದ್ದಾರೆ. ಅವರ ಜೊತೆಯಲ್ಲಿ ರಾಜೇಶ್ ಕೃಷ್ಣನ್ ಕೂಡಾ ಇರುತ್ತಾರೆ. ಇಬ್ಬರೂ ಕೂಡಾ ಝೀ ಕನ್ನಡದಿಂದ ಹೊರಬಿದ್ದಂತಾಗಿದೆ.

  • ದಸರಾ ಉದ್ಘಾಟನೆಗೆ ಹಂಸಲೇಖ : 22 ವರ್ಷಗಳ ಬಳಿಕ ಚಿತ್ರರಂಗಕ್ಕೆ ದಸರಾ ಭಾಗ್ಯ

    ದಸರಾ ಉದ್ಘಾಟನೆಗೆ ಹಂಸಲೇಖ : 22 ವರ್ಷಗಳ ಬಳಿಕ ಚಿತ್ರರಂಗಕ್ಕೆ ದಸರಾ ಭಾಗ್ಯ

    ನಾಡಿನ 413ನೇ ಮೈಸೂರು ದಸರಾ ಮಹೋತ್ಸವವನ್ನು ಖ್ಯಾತ ಸಾಹಿತಿ ಸಂಗೀತ ನಿರ್ದೇಶಕ, ನಾದಬ್ರಹ್ಮ ಹಂಸಲೇಖ ಉದ್ಘಾಟಿಸಲಿದ್ದಾರೆ. ಇಡೀ ವಿಶ್ವವೇ ಬೆರಗುಗಣ್ಣುಗಳಿಂದ ನೋಡುವ ಮೈಸೂರಿನ ದಸರಾವನ್ನು  ಈ ಬಾರಿ ಅದ್ಧೂರಿಯಾಗಿ ಮಾಡಲಾಗುತ್ತದೆ.  ಅಕ್ಟೋಬರ್ 15ರ ಬೆಳಗ್ಗೆ 10.15ರಿಂದ 10.30ರ ನಡುವಿನ ಮುಹೂರ್ತದಲ್ಲಿ ಮೈಸೂರು ದಸರಾವನ್ನು ಉದ್ಘಾಟನೆ ಮಾಡಲಾಗುತ್ತದೆ. ಕಳೆದ ಬಾರಿಯ 412ನೇ ದಸರಾವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಉದ್ಘಾಟನೆ ಮಾಡಿದ್ದರು.. ಈ ಬಾರಿ ಈ ಗೌರವ ಸಂಗೀತ ನಿರ್ದೇಶಕ ಹಂಸಲೇಖ ಅವರಿಗೆ ಒಲಿದು ಬಂದಿದೆ.

    ಕನ್ನಡ ಚಿತ್ರರಂಗದವರಿಗೆ 22 ವರ್ಷಗಳ ಈ ದಸರಾ ಭಾಗ್ಯ ಒಲಿದು ಬಂದಿದೆ. 2001ರಲ್ಲಿ ಬಿ.ಸರೋಜಾ ದೇವಿ ಉದ್ಘಾಟಿಸಿದ್ದೇ ಕೊನೆ. ಅದಾದ ಬಳಿಕ ಚಿತ್ರರಂಗದವರಿಗೆ ದಸರಾ ಉದ್ಘಾಟಿಸುವ ಭಾಗ್ಯ ಸಿಕ್ಕಿರಲಿಲ್ಲ. 1993ರಲ್ಲಿ ಮೊದಲ  ಬಾರಿಗೆ ಡಾ.ರಾಜ್ ಕುಮಾರ್ ಅವರು ದಸರಾ ಉದ್ಘಾಟಿಸಿದ್ದರು. 1994ರಲ್ಲಿ ರೆಬಲ್`ಸ್ಟಾರ್ ಅಂಬರೀಶ್ ಉದ್ಘಾಟಿಸಿದ್ದರು.

    ಹಾಗಂತ ಹಂಸಲೇಖ ಅವರನ್ನು ಜನ ಸಂಪೂರ್ಣವಾಗಿ ಒಪ್ಪಿಕೊಂಡೂ ಇಲ್ಲ. ಹಂಸಲೇಖ ಆಯ್ಕೆ ಎಂದು ಫೈನಲ್ ಆಗುತ್ತಿದ್ದಂತೆಯೇ ಪರ ವಿರೋಧ ಚರ್ಚೆಗಳು ಜೋರಾಗಿ ಕೇಳಿ ಬಂದಿವೆ. ಆದರೆ ಅದಕ್ಕೆಲ್ಲ ಕಾರಣ ಹಂಸಲೇಖ ಅವರು ಪೇಜಾವರ ಶ್ರೀಗಳ ಕುರಿತಂತೆ ನೀಡಿದ್ದ ರಕ್ತಮಾಂಸದ ಹೇಳಿಕೆ, ಬಿಜೆಪಿ ವಿರುದ್ಧದ ಪ್ರತಿಭಟನೆ ಮೊದಲಾದುವು. ಕಾಂಗ್ರೆಸ್ ಋಣ ತೀರಿಸಿದೆ ಎಂಬ ಆರೋಪಗಳೂ ಕೇಳಿ ಬರುತ್ತಿವೆ. ಆದರೆ ಇದಕ್ಕೆಲ್ಲ ಪ್ರತಿಕ್ರಿಯೆ ನೀಡಿರುವ ಹಂಸಲೇಖ `` ಇದು ನಾಲ್ವಡಿ ಕೃಷ್ಣರಾಜ ಒಡೆಯರ ಕನಸು. ಜಗತ್ತು ಕಂಡ ಅತ್ಯಂತ ಶ್ರೀಮಂತ ರಾಜ ಅವರು. ನನಗೆ ಈಗ ಸಂತೋಷವನ್ನೂ ತಡೆದುಕೊಳ್ಳುವ ವಯಸ್ಸು. ಅದಕ್ಕೂ ಒಂದು ನಿಯಂತ್ರಣ ಬೇಕು. 35 ವರ್ಷದ ಹಿಂದೆ ಆಗಿದ್ದರೆ ನಾನು ಏನೇನೋ ಮಾತನಾಡುತ್ತಿದ್ದೆ. ಮೊದಲು ನಾವು ರಾಜ್ಯ ಸರ್ಕಾರಕ್ಕೆ ಎಲ್ಲ ಕಲಾವಿದರ ಪರವಾಗಿ ಧನ್ಯವಾದ ತಿಳಿಸಬೇಕು. ಕಳೆದ ವರ್ಷ ನನಗೆ ಆರೋಗ್ಯದಲ್ಲಿ ಏರುಪೇರು ಆದಾಗ ಸಿದ್ಧರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರು ಟ್ವೀಟ್ ಮಾಡಿದ್ದರು. ದಸರಾ ಎಂಬುದು ದೊಡ್ಡ ಸಂಭ್ರಮ. ಅಂಥ ಸಂಭ್ರಮವನ್ನು ಉದ್ಘಾಟಿಸಲು ನನ್ನಂತಹ ಸ್ಟ್ರೀಟ್ ಫೈಟರ್ನನ್ನು ಆಯ್ಕೆ ಮಾಡಿದ್ದಕ್ಕೆ ಧನ್ಯವಾದಗಳು. ನನ್ನ ಮನೆಯವರು ಪ್ರತ್ಯೇಕವಾಗಿ ಅಭಿನಂದನೆ ತಿಳಿಸಿದ್ದಾರೆ’ ಎಂದು ಹೇಳಿದ್ದಾರೆ.

  • ಪಂಚಾಕ್ಷರಿ ಗವಾಯಿಗಳ ಗುರುಗಳ ಕಥೆಯ ಸಿನಿಮಾ

    ಪಂಚಾಕ್ಷರಿ ಗವಾಯಿಗಳ ಗುರುಗಳ ಕಥೆಯ ಸಿನಿಮಾ

    ಗಾನಯೋಗಿ ಪಂಚಾಕ್ಷರಿ ಗವಾಯಿಗಳದ್ದು ಸಂಗೀತ ಲೋಕದಲ್ಲಿ ಬಹು ದೊಡ್ಡ ಹೆಸರು. ಅವರ ಗುರುಗಳು ಹಾನಗಲ್ ಕುಮಾರಸ್ವಾಮಿ. ಅವರ ಕಥೆಯೀಗ ಸಿನಿಮಾ ಆಗುತ್ತಿದೆ. ಪಂಚಾಕ್ಷರ ಗವಾಯಿಗಳ ಸಿನಿಮಾ ಮಾಡಿದ್ದ ಬಂಗಾರೇಶ್ ಅವರೇ ಈ ಚಿತ್ರಕ್ಕೂ ನಿರ್ಮಾಪಕರು.

    ಮೌನ ತಪಸ್ವಿ ಶ್ರೀ ಜಡೆಯ ಶಾಂತಲಿಂಗ ಸ್ವಾಮಿಗಳು ಈ ಚಿತ್ರ ಮಾಡಲು ಬಂಗಾರೇಶ್ ಅವರಿಗೆ ತಿಳಿಸಿದರಂತೆ. ಕುಮಾರಸ್ವಾಮಿಗಳ ಸಿನಿಮಾ ಮಾಡುವ ಯೋಗ ನನಗೇ ಸಿಕ್ಕಿದ್ದು ನನ್ನ ಪುಣ್ಯ ಎಂದಿದ್ದಾರೆ ಬಂಗಾರೇಶ್. ಕುಮಾರಸ್ವಾಮಿಯವರನ್ನು ಆರಾಧಿಸುವ ಮಠಾಧೀಶರ ಒಪ್ಪಿಗೆಯನ್ನೂ ಈಗಾಗಲೇ ಪಡೆದಿರುವ ಬಂಗಾರೇಶ್, ಚಿತ್ರದ ಸಂಗೀತವನ್ನು ಹಂಸಲೇಖ ಅವರಿಗೇ ವಹಿಸಿದ್ದಾರೆ. 

  • ಪೇಜಾವರ ಶ್ರೀ, ಚಿಕನ್, ಮೊಟ್ಟೆ, ಬಿಳಿಗಿರಿ ರಂಗಯ್ಯ, ಕ್ಷಮೆ : ಏನಿದು ಹಂಸಲೇಖ ವಿವಾದ...?

    ಪೇಜಾವರ ಶ್ರೀ, ಚಿಕನ್, ಮೊಟ್ಟೆ, ಬಿಳಿಗಿರಿ ರಂಗಯ್ಯ, ಕ್ಷಮೆ : ಏನಿದು ಹಂಸಲೇಖ ವಿವಾದ...?

    ಹಂಸಲೇಖ. ನಾದಬ್ರಹ್ಮ ಎಂದೇ ಖ್ಯಾತರಾದವರು. ಚಿತ್ರರಂಗದ ಒಳಗೆ ವಿವಾದಗಳಿಲ್ಲದ ವ್ಯಕ್ತಿಯೇನಲ್ಲ. ಆದರೆ, ಚಿತ್ರರಂಗದ ಹೊರಗೆ ಅವರಿಗೆ ಇದ್ದ ಇಮೇಜ್ ಬೇರೆ. ಇದೇ ಮೊದಲ ಬಾರಿಗೆ ಹಂಸಲೇಖ ಒಂದು ವಿವಾದಕ್ಕೆ ಸಿಲುಕಿದ್ದಾರೆ. ಅದೂ ಪೇಜಾವರ ಶ್ರೀಗಳ ಬಗ್ಗೆ ಮಾತನಾಡಿ.

    ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಹಂಸಲೇಖ `ಪೆಜಾವರ ಶ್ರೀಗಳು ದಲಿತರ ಮನೆಗೆ ಹೋಗಿದ್ದು ದೊಡ್ಡ ಸುದ್ದಿಯಾಗಿತ್ತು. ಅದರಿಂದ ಯಾರಿಗೂ ಲಾಭವಿಲ್ಲ. ಪೇಜಾವರ ಶ್ರೀಗಳು ದಲಿತರ ಮನೆಯಲ್ಲಿ ಮೊಟ್ಟೆ ಕೊಟ್ಟರೆ ತಿಂತಾರಾ? ಕುರಿ ರಕ್ತದ ಫ್ರೈ ಮಾಡಿಕೊಟ್ಟರೆ ತಿಂತಾರಾ? ಲಿವರ್ ಫ್ರೈ ಮಾಡಿಕೊಟ್ಟರೆ ತಿಂತಿದ್ರಾ..? ಮೇಲ್ಜಾತಿ ಜನ ಎಲ್ಲಿಗೇ ಹೋದರೂ ಮೇಲ್ಜಾತಿಯವರಂತೆಯೇ ವರ್ತಿಸುತ್ತಾರೆ. ಎಂದಿದ್ದರು. ಬಲಿತರು ದಲಿತರ ಮನೆಗೆ ಹೋಗೋದಲ್ಲ. ದಲಿತರನ್ನು ಬಲಿತರು ಮನೆಗೆ ಕರೆಸಿಕೊಂಡು ಅವರಿಗೆ ಊಟ ಹಾಕಿ, ಅವರ ತಟ್ಟೆ ತೊಳೆಯುವುರದಲ್ಲಿ ಸಮಾನತೆ ಇದೆ ಎಂದಿದ್ದರು ಹಂಸಲೇಖ.

    ಇನ್ನು ಬಿಳಿಗಿರಿ ರಂಗಯ್ಯನ ವಿಷಯವನ್ನೂ ಹಂಸಲೇಖ ಹೀಗೇ ತಮ್ಮದೇ ಆದ ರೀತಿಯಲ್ಲಿ ವಿಡಂಬನೆ ಮಾಡಿದ್ದರು. ಬಿಳಿಗಿರಿ ರಂಗಯ್ಯ ಸೋಲಿಗರ ಹೆಣ್ಣು ಮಗಳನ್ನು ಪ್ರೀತಿಸಿ, ಆಕೆಯ ಮನೆಗೇ ಹೋಗಿ ಸಂಸಾರ ಮಾಡುತ್ತಾನೆ. ಮಾರನೇ ದಿನ ಕಲ್ಲಾಗುತ್ತಾನೆ. ಇದು ಕಥೆ. ಅದೊಂದು ಬೂಟಾಟಿಕೆ, ನಾಟಕ ಎನ್ನುವುದು ಹಂಸಲೇಖ ವಾದ. ಹಂಸಲೇಖ ಪ್ರಕಾರ ಬಿಳಿಗಿರಿ ರಂಗಯ್ಯ ಆ ಸೋಲಿಗರ ಹೆಣ್ಣನ್ನು ತನ್ನ ಮನೆಗೆ ಕರೆತಂದು ಸಂಸಾರ ಮಾಡಬೇಕಿತ್ತು.

    ಸಾಮಾಜಿಕ ಜಾಲತಾಣಗಳಲ್ಲಿ ಹಂಸಲೇಖ ವಿರುದ್ಧ ಜನರೇ ತಿರುಗಿಬಿದ್ದರು. ಅದರಲ್ಲೂ ಪೇಜಾವರ ಶ್ರೀ ಅಭಿಮಾನಿಗಳು ಹಂಸಲೇಖ ಅವರು ಜಾಡಿಸಿದರು. ಬಿಳಿಗಿರಿ ರಂಗಯ್ಯನ ವಿಷಯ, ಅದೇ ಕಾರ್ಯಕ್ರಮದಲ್ಲಿ ಭಗವದ್ಗೀತೆ ಬಗ್ಗೆ ಮಾತನಾಡಿದ್ದು.. ಎಲ್ಲವೂ ಹಂಸಲೇಖ ವಿರುದ್ಧ ಜನರು ತಿರುಗಿಬೀಳಲು ಕಾರಣವಾಯ್ತು.

    ಕೊನೆಗೆ ಹಂಸಲೇಖ ಕ್ಷಮೆಯಾಚನೆ ಮಾದರಿಯಲ್ಲಿ ಒಂದು ತಪ್ಪೊಪ್ಪಿಗೆ ಹೇಳಿಕೆ ವಿಡಿಯೋ ಬಿಟ್ಟರು.

    ಮೊದಲಿಗೆ ಕ್ಷಮೆ ಇರಲಿ, ಎರಡನೆಯದಾಗಿಯೂ ಕ್ಷಮೆ ಇರಲಿ. ಎಲ್ಲ ಮಾತುಗಳೂ ವೇದಿಕೆಗೆ ಅಲ್ಲ. ಅಸ್ಪøಶ್ಯತೆ ತೊಡೆದು ಹಾಕಲು ಪೇಜಾವರ ಶ್ರೀಗಳು ಸೇರಿದಂತೆ ಎಲ್ಲರ ಪ್ರಯತ್ನ, ಸಂಧಾನಗಳ ಬಗ್ಗೆ ನನಗೆ ಅಪಾರ ಗೌರವವಿದೆ. ನಾನು ಆಡಿದ ಕೆಲ ಮಾತುಗಳು ನನ್ನ ಹೆಂಡತಿಗೂ ಇಷ್ಟವಾಗಲಿಲ್ಲ. ಆಕೆಯ ಕ್ಷಮೆಯನ್ನೂ ಕೇಳಿದ್ದೇನೆ ಎಂದಿದ್ದಾರೆ ಹಂಸಲೇಖ.

    ಆದರೆ.. ಕ್ಷಮೆ ಕೇಳುತ್ತಲೇ ಎಲ್ಲ ಮಾತುಗಳೂ ವೇದಿಕೆಗೆ ಅಲ್ಲ ಎನ್ನುವ ಮೂಲಕ ಎಂದಿರುವ ಹಂಸಲೇಖ ಅವರ ಮಾತನ್ನು ಹಲವರು ಒಪ್ಪಿಲ್ಲ. ಕ್ಷಮೆ ಕೇಳುತ್ತಿರುವುದು ಕೇವಲ ನಾಟಕ. ಹಂಸಲೇಖ ಈ ರೀತಿ ಮಾತನಾಡಬಾರದಿತ್ತು ಎಂದಿದ್ದಾರೆ ಹಲವರು. ಪರ ವಿರೋಧ ಚರ್ಚೆಗಳ ಮಧ್ಯೆ ಹಂಸಲೇಖ ವಿರುದ್ಧ ಪ್ರತಿಭಟನೆ ಕೂಗುಗಳೂ ಕೇಳಿ ಬರುತ್ತಿವೆ. 

  • ಬಿಚ್ಚುಗತ್ತಿ ಭರಮಣ್ಣನ ಕಥೆ ಸಿನಿಮಾ ಆಗಲು ಕಾರಣ ಇವರೇ..!

    hamsalekha is the force behind bicchugaati baramanna movie

    ದರ್ಶನ್ ನಾಯಕತ್ವದಲ್ಲಿ ಮದಕರಿ ನಾಯಕ ಸೆಟ್ಟೇರಿದೆ. ಇನ್ನೊಂದೆಡೆ ಅದೇ ಚಿತ್ರದುರ್ಗದ ಮದಕರಿ ನಾಯಕನ ನಂಬುಗೆಯ ಬಂಟ ಬಿಚ್ಚುಗತ್ತಿ ಭರಮಣ್ಣನ ಕಥೆ ಸಿನಿಮಾ ಆಗಿ ಸಿದ್ಧವಾಗಿದೆ. ಮದಕರಿಯ ಬೆಂಗಾವಲು ಬಂಟನಾಗಿದ್ದ ಬಿಚ್ಚುಗತ್ತಿ ಭರಮಣ್ಣ ನಾಯಕ ಕಥೆಯೂ ಅಷ್ಟೇ ಅದ್ಭುತ ಮತ್ತು ಸ್ವಾರಸ್ಯಗಳಿಂದ ಕೂಡಿದೆ.

    ಹೌದು, ಚಿತ್ರದುರ್ಗದ ಓಂ ಸಾಯಿ ಕೃಷ್ಣ ಪ್ರೊಡಕ್ಷನ್ಸ್‌ ಈ ಬಿಚ್ಚುಗತ್ತಿ ಚಿತ್ರವನ್ನು ನಿರ್ಮಿಸಿದೆ. ಒಂದೊಳ್ಳೆಯ ಸಿನಿಮಾ ನಿರ್ಮಾಣ ಮಾಡಬೇಕು, ಅದು ನೆನಪಲ್ಲಿ ಉಳಿಯುವಂತಾಗಬೇಕು ಎಂಬ ಆಸೆ ಹೊತ್ತ ನಿರ್ಮಾಣ ಸಂಸ್ಥೆ, ಹಂಸಲೇಖ ಅವರ ಬಳಿ ಚರ್ಚಿಸಿದಾಗ, ಚಿತ್ರದುರ್ಗ ಜಿಲ್ಲೆ ಐತಿಹಾಸಿಕ ಹಿನ್ನೆಲೆ ಹೊಂದಿದೆ. ಹಾಗಾಗಿ ಒಂದೊಳ್ಳೆಯ ಐತಿಹಾಸಿಕ ಸಿನಿಮಾ ಮಾಡುವ ಕುರಿತು ಸೂಚಿಸಿದ್ದಾರೆ.

    ರಾಜವರ್ಧನ್ ಇಲ್ಲಿ ಬಿಚ್ಚುಗತ್ತಿ ಭರಮಣ್ಣನಾಗಿ ನಟಿಸಿದ್ದಾರೆ. ಹರಿಪ್ರಿಯಾ ಕೂಡಾ ಅತ್ಯಂತ ಪ್ರಮುಖ ಪಾತ್ರದಲ್ಲಿದ್ದಾರೆ. ಈ ಚಿತ್ರಕ್ಕೂ ಬಿ.ಎಲ್. ವೇಣು ಅವರ ಕಥೆಯೇ ಸ್ಫೂರ್ತಿ. ಆದರೆ, ವೇಣು ಅವರ ಕಥೆಯನ್ನು ಸಿನಿಮಾ ಮಾಡಿಸಲು ಕಾರಣರಾದವರು ಮಾತ್ರ ಹಂಸಲೇಖ.

    ಹರಿ ಸಂತೋಷ್ ನಿರ್ದೇಶನದ ಚಿತ್ರಕ್ಕೆ  ಚಿತ್ರದುರ್ಗದ ಓಂ ಸಾಯಿ ಕೃಷ್ಣ ಪ್ರೊಡಕ್ಷನ್ಸ್‌ ನಿರ್ಮಾಪಕರು. ಇವರು ಹಂಸಲೇಖ ಅವರನ್ನು ಸಂಪರ್ಕಿಸಿ ‘ಒಂದೊಳ್ಳೆಯ ಸಿನಿಮಾ ಮಾಡಬೇಕು, ಅದು ನೆನಪಲ್ಲಿ ಉಳಿಯುವಂತಿರಬೇಕು’ ಎಂದು ಚರ್ಚಿಸಿದ್ದರಂತೆ. ಆಘ ಹಂಸಲೇಖ ಚಿತ್ರದುರ್ಗದ ಪಾಳೆಯಗಾರರು ಹಾಗೂ ಅವರ ಪರಾಕ್ರಮ, ಶೌರ್ಯ ಕುರಿತು ಮಾತನಾಡಿ ಡಾ.ಬಿ.ಎಲ್‌ವೇಣು ಅವರ ‘ರಾಜ ಬಿಚ್ಚುಗತ್ತಿ ಭರಮಣ್ಣ ನಾಯಕ’ ಕಾದಂಬರಿಯನ್ನು ನಿರ್ಮಾಪಕರಿಗೆ ಕೊಟ್ಟಿದ್ದಾರೆ. ಭರಮಣ್ಣ ನಾಯಕ ಎಂಬ ವೀರನ ಕಥೆ ಸಿನಿಮಾ ಆಗಲು ಕಾರಣರಾಗಿದ್ದಾರೆ. ಈಗಾಗಲೇ ಚಿತ್ರೀಕರಣ ಮುಗಿಸಿರುವ ಚಿತ್ರ, ರಿಲೀಸ್ ಆಗಲು ಕಾಯುತ್ತಿದೆ.

  • ಮರಿ ಕೋಗಿಲೆಗಳ ಸ್ವಾಗತಕ್ಕೆ ನಾದಬ್ರಹ್ಮ

    hamsalekha to judge sa ra ga ma pa

    ಹಾಡಿದೆ.. ಹಾಡು ಕಟ್ಟಿದೆ.. ಹಾಡಿದರೆ ಕರುಣಿಸೋ ಜನಮನವೇ.. ನೀವೇ ನನ್ನ ಕಾಯಕದ ಸ್ಫೂರ್ತಿ. ಸಂಗೀತವೇ ನನ್ನ ದೇವರು.. ಚಪ್ಪಾಳೆಯೇ ನನ್ನ ಉಸಿರು.. ಅಕ್ಕರೆ, ಅಚ್ಚರಿಗಳನ್ನು ತುಂಬಿಕೊಂಡು, ಸಂಪಿಗೆ ಸರಿಗಮಗಳ ಬಾಗಿನ ಹೊತ್ತುಕೊಂಡು ಇರೋ ಬರುತ್ತಿದ್ದೇನೆ.. ಸರಿಗಮಪ ಕುಟುಂಬಕ್ಕೆ ನಿರಂತರವಾಗಿ.. ಪೂಜ್ಯ ಕನ್ನಡಿಗರೇ.. ನಾನಿಲ್ಲಿ ಗುರುತಿಸುವ ಗುರು ನೀವು.. ಜಯ ಕೊಡುವ ಕಲ್ಪತರು. ಹೀಗೆ ಹೇಳಿಕೊಂಡು ಕಿರುತೆರೆಗೆ ಬರುತ್ತಿದ್ದಾರೆ ಹಂಸಲೇಖ. ಸರಿಗಮಪ ಸೀಸನ್ 14ನ ಜಡ್ಜ್ ಆಗುತ್ತಿದ್ದಾರೆ. 

    ಹಾಗಂತ ಹಂಸಲೇಖ ಅವರಿಗೆ ಕಿರುತೆರೆ ಹೊಸದಲ್ಲ. ಆದರೆ, ಫಿನಾಲೆಯಲ್ಲಷ್ಟೇ ಕಾಣಿಸಿಕೊಳ್ಳುತ್ತಿದ್ದ ಹಂಸಲೇಖ, ಇನ್ನುಮುಂದೆ ಪ್ರತಿವಾರ ನೋಡಲು ಸಿಗುತ್ತಾರೆ. ಒಂದಷ್ಟು ಹೊಸ ಹೊಸ ಗೊತ್ತಿಲ್ಲದ ಕಥೆ, ಪಟ್ಟುಗಳನ್ನು ಹೇಳುತ್ತಾರೆ. ಹಂಸಲೇಖ ಅವರ ಜೊತೆ ವಿಜಯ್‍ಪ್ರಕಾಶ್ ಹಾಗೂ ಅರ್ಜುನ್ ಜನ್ಯ ಇರುತ್ತಾರೆ. 

     

  • ಮಾಗಡಿ ರೋಡು.. ಪೋಲಿ ಆಟ.. ಹಂಸಲೇಖ ಹೇಳಿದ ಚರಿತ್ರೆ

    ಮಾಗಡಿ ರೋಡು.. ಪೋಲಿ ಆಟ.. ಹಂಸಲೇಖ ಹೇಳಿದ ಚರಿತ್ರೆ

    ಇತ್ತೀಚೆಗೆ ಪೇಜಾವರ ಶ್ರೀಗಳ ಬಗ್ಗೆ ಆಡಿದ್ದ ಮಾತಿನಿಂದಾಗಿ ವಿವಾದಕ್ಕೊಳಗಾಗಿದ್ದ ಸಂಗೀತ ನಿರ್ದೇಶಕ ಹಂಸಲೇಖ, ಆಗ ಕ್ಷಮೆ ಕೇಳಿದ್ದರು. ಈಗ ಮತ್ತೊಮ್ಮೆ ವಿವಾದವನ್ನು ಕೆಣಕಿದ್ದಾರೆ. ನಾನು ಹೆದರಿಲ್ಲ. ಹೆದರುವುದೂ ಇಲ್ಲ. ನಾನು ಭಯಸ್ತನಲ್ಲ. ಮಾಗಡಿ ರೋಡ್‍ನಲ್ಲಿ ದೊಡ್ಡ ಪೋಲಿ ಆಟ ಆಡಿದ ಚರಿತ್ರೆ ಇದೆ ಎನ್ನುವ  ಮೂಲಕ ವಿವಾದಕ್ಕೆ ಧುಮುಕಿದ್ದಾರೆ ಹಂಸಲೇಖ.

    ಸಾಹಿತಿ ಎಸ್.ಜಿ ಸಿದ್ದರಾಮಯ್ಯ ಅವರ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಹಂಸಲೇಖ ಆ ವಿವಾದದ ವೇಳೆ ತಮ್ಮ ಬೆಂಬಲಕ್ಕೆ ನಿಂತ ಎಲ್ಲರಿಗೂ ಧನ್ಯವಾದ ತಿಳಿಸಿದರು. ಇದೇ ವೇಳೆ ಕಾರ್ಯಕ್ರಮದಲ್ಲಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಆಗಲಿ ಎಂದು ಹಾರೈಸಿದರು ಹಂಸಲೇಖ. 

  • ರವಿಚಂದ್ರನ್ ಮಗಳ ಮದುವೆಗೆ ಹಂಸಲೇಖ ಸಂಗೀತ..!

    hamsalekha's music for ravichandran

    ರವಿಚಂದ್ರನ್ ಮತ್ತು ಹಂಸಲೇಖ ಚಿತ್ರರಂಗದಲ್ಲಿ ಅದೆಷ್ಟು ಒಳ್ಳೆಯ ಸ್ನೇಹಿತರು ಎನ್ನುವುದು ಎಲ್ಲರಿಗೂ ಗೊತ್ತು. ಮಧ್ಯೆ ಭಿನ್ನಾಭಿಪ್ರಾಯಗಳು ಬಂದಿರಬಹುದು. ರವಿ ಚಿತ್ರಗಳಿಗೆ ಹಂಸಲೇಖ ಸಂಗೀತ ನೀಡಿರುವುದು ನಿಂತಿರಬಹುದು. ಆದರೆ, ಅವರಿಬ್ಬರ ಗೆಳೆತನ ಈಗಲೂ ಹಾಗೆಯೇ ಇದೆ. 

    ರವಿಚಂದ್ರನ್‍ರನ್ನು ಯಜಮಾನ್ರೇ ಎಂದು ಕರೆಯುವ ಪ್ರೀತಿಯನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ ಹಂಸಲೇಖ. ಅದು ರವಿಚಂದ್ರನ್ ಮಗಳ ಮದುವೆಯಲ್ಲೂ ಸಾಬೀತಾಗುತ್ತಿದೆ.

    ಮೇ 28,29ರಂದು ರವಿಚಂದ್ರನ್ ಮಗಳು ಗೀತಾಂಜಲಿ ಮದುವೆ ಇದೆ. ಆ ಮದುವೆಗೆ ಸಂಗೀತ ಕಾರ್ಯಕ್ರಮ ನಡೆಸಿಕೊಡ್ತಿರೋದು ಹಂಸಲೇಖ. ರವಿಚಂದ್ರನ್ ತಮ್ಮ ಮಗಳಿಗಾಗಿಯೇ ಒಂದು ಹಾಡನ್ನು ಬರೆದು, ಸಂಗೀತ ನಿರ್ದೇಶನ ಮಾಡಿದ್ದಾರೆ. ಈಗ ಅವರ ಮಗಳ ಮದುವೆಯ ಇಡೀ ಸಂಗೀತ ಕಾರ್ಯಕ್ರಮನ್ನು ಅವರ ಗೆಳೆಯ ಹಂಸಲೇಖ ನಿರ್ದೇಶನ ಮಾಡುತ್ತಿದ್ದಾರೆ.

  • ವದಂತಿ ಹಿಂದಿನ ಅಸಲಿ ಸತ್ಯ : ಈಗ ಹೇಗಿದೆ ಹಂಸಲೇಖ ಆರೋಗ್ಯ?

    ವದಂತಿ ಹಿಂದಿನ ಅಸಲಿ ಸತ್ಯ : ಈಗ ಹೇಗಿದೆ ಹಂಸಲೇಖ ಆರೋಗ್ಯ?

    ನಾದಬ್ರಹ್ಮ ಹಂಸಲೇಖ ಅವರಿಗೆ ಆರೋಗ್ಯ ಹದಗೆಟ್ಟಿದೆ. ಅದರಲ್ಲೂ ಎದೆನೋವು ಎಂದಾಗ ಅಭಿಮಾನಿಗಳು ಆತಂಕಗೊಂಡಿದ್ದಂತೂ ಹೌದು. ಈ ಮೊದಲು ಒಮ್ಮೆ ಹಾರ್ಟ್ ಸರ್ಜರಿ ಆಗಿದ್ದ ವಿಷಯವೂ ನೆನಪಿದ್ದವರು ಆಘಾತದಲ್ಲೇ ಇದ್ದರು. ರಾಜಾಜಿನಗರದ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಂಸಲೇಖ ಈಗಲೂ ಅಲ್ಲಿಯೇ ಇದ್ದಾರೆ.

    ಹಂಸಲೇಖ ಅವರಿಗೆ ಯಾವುದೇ ತೊಂದರೆ ಇಲ್ಲ. ಹೆದರುವ ಅವಶ್ಯಕತೆ ಇಲ್ಲ. ಈ ಹಿಂದೆ ಸರ್ಜರಿ ಮಾಡಿದ್ದೆವು. ಅವರಿಗೆ ಈಗ ವಿಶ್ರಾಂತಿಗೆ ಸೂಚಿಸಲಾಗಿದೆ ಎಂದಿದ್ದಾರೆ ಅಪೋಲೋ ಆಸ್ಪತ್ರೆ ವೈದ್ಯರು. ಅಷ್ಟೇ ಅಲ್ಲದೆ ಅವರಿಗೆ ಏನೂ ತೊಂದರೆ ಆಗಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ.

    ಅಭಿಮಾನಿಗಳು ಇನ್ನಷ್ಟು ಗೊಂದಲಕ್ಕೀಡಾಗಲು ಆತಂಕಕ್ಕೀಡಾಗಲು ಕಾರಣ ಸಿದ್ದರಾಮಯ್ಯ ಟ್ವೀಟ್ ಕೂಡಾ ಒಂದು. ಮಾಜಿ ಸಿಎಂ ಸಿದ್ದರಾಮಯ್ಯನವರೇನೋ ಹಂಸಲೇಖ ಅವರು ಶೀಘ್ರ ಚೇತರಿಸಿಕೊಳ್ಳಲಿ ಎಂದೇನೋ ಹಾರೈಸಿದರಾರೂ, ವದಂತಿಗಳ ಸುತ್ತ ಹಬ್ಬಿಕೊಂಡಿದ್ದ ಹಂಸಲೇಖ ಅನಾರೋಗ್ಯ ಎಂಬ ಸುದ್ದಿಗೆ ದೊಡ್ಡ ಬಲ ಸಿಕ್ಕಂತಾಯಿತು. ಸಿದ್ದರಾಮಯ್ಯನವರೇ ಟ್ವೀಟ್ ಮಾಡಿದ್ದಾರೆ ಎಂದ್ರೆ ಸುದ್ದಿಯಲ್ಲಿ ನಿಜವಿರಬೇಕು ಎಂದುಕೊಂಡರು. ಆದರೆ ಅದು ಅರ್ಧಸತ್ಯವಾಗಿತ್ತು.

    ಹಾಗಾದರೆ ಆಗಿದ್ದು ಏನು? ಹಂಸಲೇಖ ಅವರ ಮಗಳು ತೇಜಸ್ವಿನಿ ಅವರಿಗೆ ಅನಾರೋಗ್ಯವಾಗಿದೆ. ಅವರನ್ನು ಕರೆದುಕೊಂಡು ವಿಜಯನಗರ ಆಸ್ಪತ್ರಗೆ ಹೋಗಿದ್ದಾರೆ. ಅದು ಹೊರಗೆ ಹಂಸಲೇಖ ಅವರಿಗೇ ಏನೋ ಆಗಿದೆ ಎಂಬ ಸುದ್ದಿ ಹಬ್ಬುವಂತೆ ಆಗಿದೆ. ಕೊನೆಗೆ ಹಂಸಲೇಖ ಅವರ ಮಗ ಸೂರ್ಯಪ್ರಕಾಶ್ ಹಾಗೂ ಮಗಳು ತೇಜಸ್ವಿನಿ ಇಬ್ಬರೂ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.