` roopika - chitraloka.com | Kannada Movie News, Reviews | Image

roopika

 • 3rd Class Review: Chitraloka Rating 3.5/ 5*

  3rd class movie review

  Seems like the love season has already begun in Sandalwood with romantic tales rushing to theaters. Among st them, 3rd Class directed by Ashoka Dev starring the debutant Nam Jagadeesh along with the pretty Roopika and Divya Rao in the lead is a power-packed triangular love story. Avinash in the role of a home minister delivers yet another notable performance.

  Despite the love story revolving around the rich girl who is in love with a mechanic, 3rd is high on entertainment quotient. It has all necessary ingredients to make this romantic journey a likable one with decent making, soothing melodies and some thunderous action to add on to it.

  When opposed by the girl's father, a home minister, the protagonist takes upon the powerful politician for his love. Jagadeesh makes an impressive debut with this one, scoring a near perfection in almost every other department. 

  Will Jaggi be able to survive against the onslaught of his lover's influential minister forms the rest of the action. Another lovely film to watch with your loved one this valentines day.

 • Roopika And Niranjan Deshpande's Cameo In Raga

  roopika, niranjan desphpande image

  The star cast of Mitra's debut film as a producer 'Raga' has been finalised and Avinash, Jaijagadish, Ramesh Bhatt, Sadhu Kokila, Rangayana Raghu, 'Kaddipudi' Chandru and others play prominent roles in the film, while Roopika and Niranjan Deshpande are see in cameo roles.

  Meanwhile, Actress Bhama has been roped in as the heroine for 'Raga' which is being produced by Mitra. Bhama will be playing the role of a blind character in the film. Mitra is the hero of the film.

  'Raaga' is being scripted and directed by P C Shekhar. Vaidi is the cameraman, while Arjun Janya is the music director of the film .The film is likely to be launched soon.

 • Roopika Makes A Comeback With Rudrakshipura

  roopika image

  Actress Roopika who had taken a small break from acting is back with a new film called 'Rudrakshipura'. The film was launched recently in Bangalore.

  'Rudrakshipura' stars newcomer Arjun and Roopika in main roles and actor Ravi Chetan plays a negative character in the film. The film is being produced by Nagaraj Murdeshwara, while Eshwar Polanki is the director.

  The film revolves around a lost diamond and Roopika plays a research student in this film. The film is being produced under Sri Chowdeshwari Cine Creations banner. Santhosh S is the cinematographer, while Alvin Bruno Hemanth is the music director.

 • ಅವಳೇ ಮಂಜರಿ.. ಅವಳೇ ಕಾವ್ಯ.. ಅವಳೇ ರೂಪಿಕಾ..!

  manjari movie image

  ರೂಪಿಕಾ ಪ್ರಮುಖ ಪಾತ್ರದಲ್ಲಿ ನಟಿಸಿರುವ ಮಂಜರಿ ಈ ವಾರ ತೆರೆಗೆ ಬರುತ್ತಿದೆ. ಇದೊಂದು ಪಕ್ಕಾ ಹಾರರ್ ಸಿನಿಮಾ. ರೂಪಿಕಾ ಇದೇ ಮೊದಲ ಬಾರಿಗೆ ಹಾರರ್ ಸಿನಿಮಾದಲ್ಲಿ ನಟಿಸುತ್ತಿರುವುದು ಚಿತ್ರದ ಹೈಲೈಟ್.

  ಒಂದೂವರೆ ವರ್ಷ ಗ್ಯಾಪ್ ತೆಗೆದುಕೊಂಡು ಈ ಸಿನಿಮಾ ಮಾಡಿದ್ದೇನೆ.ತುಂಬಾ ಡಿಫರೆಂಟ್ ಆದ, ನನಗೆ ನಟನೆಗೆ ಹೆಚ್ಚು ಸ್ಕೋಪ್ ಇದ್ದ ಪಾತ್ರ ಇದು ಎಂದು ಖುಷಿಯಿಂದ ಹೇಳಿಕೊಂಡಿದ್ದಾರೆ ರೂಪಿಕಾ.

  ಚಿತ್ರದ ಟೈಟಲ್ ಮಂಜರಿ ಪಾತ್ರಧಾರಿ ಅವರೇ. ಚಿತ್ರದಲ್ಲಿ ಕಾವ್ಯ ಪಾತ್ರಧಾರಿಯೂ ಅವರೇ. ಒಂದರ್ಥದಲ್ಲಿ ಡಬಲ್ ಆ್ಯಕ್ಟಿಂಗ್. ಹೇಗೆ ಅನ್ನೋ ಸಸ್ಪೆನ್ಸ್‍ಗೆ ಉತ್ತರ ಸಿಗೋದು ಚಿತ್ರಮಂದಿರಗಳಲ್ಲಿ ಮಾತ್ರ.

  ಕೆಲವು ರಿಸ್ಕೀ ಸ್ಟಂಟ್‍ಗಳನ್ನು ಯಾವುದೇ ಡ್ಯೂಪ್‍ಗಳ ಸಹಾಯವಿಲ್ಲದೆ ಮಾಡಿದ್ದೇನೆ. ಅದು ನನಗೆ ಥ್ರಿಲ್ಲಿಂಗ್ ಆಗಿತ್ತು ಎಂದು ಚಿತ್ರತಂಡದ ಜೊತೆಗಿನ ಅನುಭವ ನೆನಪಿಸಿಕೊಳ್ಳುವ ರೂಪಿಕಾ, ಚಿತ್ರದ ಮೇಲೆ ಅಪಾರ ಭರವಸೆ ಇಟ್ಟುಕೊಂಡು ಕಾಯುತ್ತಿದ್ದಾರೆ.

 • ಟೈಟಲ್ ಥರ್ಡ್ ಕ್ಲಾಸ್.. ಸಿನಿಮಾ ಫಸ್ಟ್ ಕ್ಲಾಸ್

  third class movie title speciality

  ಥರ್ಡ್ ಕ್ಲಾಸ್ ಅನ್ನೋದು ಬೈಗುಳದ ಪದವಾಗಿ, ಲೋ ಸ್ಟಾಂಡರ್ಡಿಗೆ ಬಳಸುವ ಪದವಾಗಿ ಬಳಕೆಯಲ್ಲಿದೆ. ಅಂತಾದ್ದೊಂದು ಪದವನ್ನು ಚಿತ್ರದ ಟೈಟಲ್ ಆಗಿಟ್ಟುಕೊಂಡು ಫಸ್ಟ್ ಕ್ಲಾಸ್ ಸಿನಿಮಾ ಹೊರತಂದಿದ್ದಾರೆ ಜಗದೀಶ್. ಥರ್ಡ್ ಕ್ಲಾಸ್ ಚಿತ್ರಕ್ಕೆ ಜಗದೀಶ್ ಹೀರೋ, ಕಥೆಗಾರ ಮತ್ತು ನಿರ್ಮಾಪಕ.

  ಚಿತ್ರದಲ್ಲಿ ಇಬ್ಬರು ನಾಯಕಿಯರು. ರೂಪಿಕಾ ಮತ್ತು ದಿವ್ಯಾರಾವ್. ಅವಿನಾಶ್, ಸಂಗೀತಾ, ರಮೇಶ್ಭಟ್, ಪವನ್ ಕೂಡಾ ನಟಿಸಿರುವ ಚಿತ್ರದಲ್ಲಿ ಜೆಡಿಎಸ್ ಶಾಸಕ ಸರವಣ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ವಿಶೇಷ.

  ಅಶೋಕ್‌ ದೇವ್‌  ಈ ಚಿತ್ರದ ನಿರ್ದೇಶಕ. ಚಿತ್ರದಲ್ಲಿ ಸಮಾಜದಲ್ಲಿರುವ ಶ್ರೀಮಂತ-ಬಡವ ಎಂಬ ವರ್ಗ, ಸ್ಥಾನಮಾನಗಳ ಸುತ್ತ ಕಥೆಯಿದೆ, ಚಿತ್ರದ ಕಥೆಗೆ ಈ ಟೈಟಲ್ ಸೂಕ್ತವಾಗಿದೆ ಎನ್ನುತ್ತಾರೆ ಅಶೋಕ್ ದೇವ್. ಚಿತ್ರದ ಟ್ಯಾಗ್ಲೈನ್ ಹಣೆಬರಹಕ್ಕೆ ಯಾರು ಹೊಣೆ..?

 • ಥರ್ಡ್ ಕ್ಲಾಸ್ ಮಾರ್ನಿಂಗ್ ಶೋ ಫ್ರೀ

  third class first day first show is free

  ಇದೇ ವಾರ ರಿಲೀಸ್ ಆಗುತ್ತಿರುವ ಥರ್ಡ್ ಕ್ಲಾಸ್ ಸಿನಿಮಾ ತಂಡ, ಪ್ರೇಕ್ಷಕರಿಗೆ ಸ್ಪೆಷಲ್ ಆಫರ್ ಕೊಟ್ಟಿದೆ. ಈಗಾಗಲೇ ಬಾದಾಮಿಯಲ್ಲೊಂದು ಗ್ರಾಮವನ್ನು ದತ್ತು ತೆಗೆದುಕೊಂಡು, 50 ಸಾವಿರ ಆಟೋ, ಕ್ಯಾಬ್ ಚಾಲಕರಿಗೆ ಇನ್ಷೂರೆನ್ಸ್ ಮಾಡಿಸಿರುವ ಚಿತ್ರತಂಡ ವಿಭಿನ್ನವಾಗಿಯೇ ಚಿತ್ರದ ಪ್ರಚಾರ ಹಮ್ಮಿಕೊಂಡಿದೆ. ಈಗ ಅದೇ ಹಾದಿಯಲ್ಲಿ ಇನ್ನೂ ಒಂದು ಹೆಜ್ಜೆ ಮುಂದಿಟ್ಟಿದೆ ಥರ್ಡ್ ಕ್ಲಾಸ್ ಸಿನಿಮಾ ಟೀಂ.

  ಫೆಬ್ರವರಿ 7ರಂದು ರಿಲೀಸ್ ಆಗುತ್ತಿರುವ ಸಿನಿಮಾವನ್ನು ನೀವು ಫ್ರೀಯಾಗಿ ನೋಡಬಹುದು. ಚಿತ್ರ ಕೆಜಿ ರಸ್ತೆಯ ಅನುಪಮ ಥಿಯೇಟರಿನಲ್ಲಿ ರಿಲೀಸ್ ಆಗುತ್ತಿದೆ. ಆ ದಿನ, ಬೆಳಗಿನ ಆಟಕ್ಕೆ ಯಾರು ಬೇಕಾದರೂ ಹೋಗಬಹುದು. ಟಿಕೆಟ್ ಖರೀದಿಸಬೇಕಿಲ್ಲ. ಫುಲ್ ಫ್ರೀ.

  ಅಶೋಕ್ ದೇವ್ ನಿರ್ದೇಶನ ಚಿತ್ರದಲ್ಲಿ ಜಗದೀಶ್ ಹೀರೋ, ರೂಪಿಕಾ ನಾಯಕಿ. ಹಣೆ ಬರಹಕ್ಕೆ ಹೊಣೆ..? ಎಂಬ ಟ್ಯಾಗ್‍ಲೈನ್ ಇರೋ ಚಿತ್ರದಲ್ಲಿ ಒಂದು ಚೆಂದದ ಲವ್ ಸ್ಟೋರಿ ಇದೆ.

 • ಥರ್ಡ್ ಕ್ಲಾಸ್ ಸಕ್ಸಸ್ : NEXT ಜೋಪಾನ

  3rd class movie running successfully

  ಥರ್ಡ್ ಕ್ಲಾಸ್, ಹೆಸರಿನ ಕಾರಣಕ್ಕೇ ವಿಸ್ಮಯ ಮೂಡಿಸಿದ್ದ ಸಿನಿಮಾ. ಯಾರಾದರೂ ಇಂತಹ ಟೈಟಲ್ ಸಿನಿಮಾಗೆ ಇಡ್ತಾರಾ ಅನ್ನೋ ಪ್ರಶ್ನೆ ಹಾಕಿದ್ದ ಚಿತ್ರವಿದು. ರಿಲೀಸ್ ಆಗಿ ಪ್ರೇಕ್ಷಕರ ಮನಗೆದ್ದಿದೆ. ಚಿತ್ರ ಸಕ್ಸಸ್ ಆಗಿದೆ.

  ರಿಲೀಸ್ ಆಗಿದ್ದು 100+ ಥಿಯೇಟರುಗಳಲ್ಲಿ. ಈಗ ಚಿತ್ರಮಂದಿರಗಳ ಸಂಖ್ಯೆ 35ಕ್ಕೆ ಇಳಿದಿದೆ. 2ನೇ ವಾರ ಪೂರೈಸಿರುವ ಚಿತ್ರ ಸಕ್ಸಸ್ ಎಂದು ಘೋಷಿಸಿಕೊಂಡಿದೆ ಥರ್ಡ್ ಕ್ಲಾಸ್ ಚಿತ್ರತಂಡ.  ಚಿತ್ರಕ್ಕೆ ಹಾಕಿರುವ ಬಂಡವಾಳ ವಾಪಸ್ ಬಂದಿದೆ ಎಂದು ಖುಷಿಯಿಂದ ಹೇಳಿಕೊಂಡಿದ್ದಾರೆ ನಿರ್ದೇಶಕ ಅಶೋಕ್.

  ಚಿತ್ರದ ಹೀರೋ ಕಮ್ ನಿರ್ಮಾಪಕ ಜಗದೀಶ್ ಈ ಚಿತ್ರದ ಯಶಸ್ಸಿನ ಬೆನ್ನಲ್ಲೇ ಜೋಪಾನ ಎಂಬ ಹೆಸರಿನ ಹೊಸ ಚಿತ್ರ ಘೋಷಿಸಿದ್ದಾರೆ. ಹೊಸ ಚಿತ್ರಕ್ಕೆ ಪಿ.ಸಿ.ಶೇಖರ್ ನಿರ್ದೇಶಕರಂತೆ. ಅರ್ಜುನ್ ಜನ್ಯ ಸಂಗೀತ ನೀಡಲಿದ್ದಾರಂತೆ.

  ಚಿತ್ರದ ನಾಯಕಿ ನಟಿ ರೂಪಿಕಾಗೂ ಚಿತ್ರದ ಗೆಲುವು ಖುಷಿ ಕೊಟ್ಟಿದೆ. ಚೆಲುವಿನ ಚಿಲಿಪಿಲಿ ನಂತರ ಗೆದ್ದ ಚಿತ್ರವಿದು ಎನ್ನುವುದೇ ನನಗೆ ಖುಷಿ. ಚಿತ್ರ ನೋಡಿದವರು ನನಗೆ ಮೆಸೇಜ್ ಮಾಡಿ ಚೆನ್ನಾಗಿ ನಟಿಸಿದ್ದೀರಾ ಎಂದು ಹೇಳಿದ್ದಾರೆ. ಇದಕ್ಕಿಂತ ಇನ್ನೇನು ಬೇಕು ಅಂತಾರೆ ರೂಪಿಕಾ.

  ಚಿತ್ರ ಬಿಡುಗಡೆಗೂ ಮುನ್ನ ಬಾದಾಮಿ ತಾಲೂಕಿನ ಊರೊಂದನ್ನು ದತ್ತು ಪಡೆದು, ಟ್ಯಾಕ್ಸಿ, ಆಟೋ ಚಾಲಕರಿಗೆ ವಿಮೆ ಮಾಡಿಸಿ ಜನಮೆಚ್ಚುವ ಕೆಲಸ ಮಾಡಿದ್ದ ಚಿತ್ರತಂಡ, ವಿಶೇಷ ರೀತಿಯಲ್ಲಿ ಸಮಾಜಸೇವೆಯ ಮೂಲಕ ಪ್ರಚಾರ ಮಾಡಿತ್ತು. ಈಗ ಚಿತ್ರವೂ ಗೆದ್ದು, ಚಿತ್ರತಂಡದ ನಮ್ಮ ಶ್ರಮಕ್ಕೆ ಬೆಲೆ ಸಿಕ್ಕಿದೆ ಎಂದು ಖುಷಿಯಾಗಿದೆ.

 • ಮಂಜರಿ ಡೈರೆಕ್ಟರ್ ರಿಯಲ್ ಸ್ಟೋರಿ ಮರ್ಮ

  manjari directors real story

  ಮಂಜರಿ, ಹಾರರ್ ಸಿನಿಮಾ. ರೂಪಿಕಾ ಒಂದೂವರೆ ವರ್ಷದ ಗ್ಯಾಪ್ ನಂತರ ನಟಿಸಿರುವ ಚಿತ್ರ, ಪ್ರೇಕ್ಷಕರ ಕುತೂಹಲ ಕೆರಳಿಸಿರುವುದು ನಿಜ. ಮಂಜರಿ ಸರಣಿಯ 3 ಚಿತ್ರಗಳಿಗೆ ಪ್ಲಾನ್ ಮಾಡಿಕೊಂಡಿರುವ ಚಿತ್ರತಂಡ, ಮೊದಲ ಭಾಗವನ್ನಷ್ಟೇ ತೆರೆಗೆ ತಂದಿದೆ. ಚಿತ್ರದ ನಿರ್ದೇಶಕ ವಿಶ್ರುತ್ ನಾಯಕ್.

  ವಿಶ್ರುತ್ ಯಾರು ಎಂದರೆ, ಒಂದ್ಸಲ ರಿಂಗ್ ಮಾಸ್ಟರ್ ಸಿನಿಮಾ ನೆನಪು ಮಾಡಿಕೊಳ್ಳಿ. ಅರುಣ್ ಸಾಗರ್ ಅಭಿನಯದ ಆ ಚಿತ್ರ ತನ್ನ ವಿಭಿನ್ನತೆಯಿಂದಲೇ ಗಮನ ಸೆಳೆದಿದ್ದ ಚಿತ್ರ. ಆ ಚಿತ್ರದ ನಿರ್ದೇಶಕರ ಎರಡನೇ ಪ್ರಯತ್ನವೇ ಮಂಜರಿ. ವಿಶ್ರುತ್ ಕುಟುಂಬದಲ್ಲೇ ರಂಗಕಲಾವಿದರಿದ್ದಾರೆ. ತಾಯಿ ಸೋಬಾನೆ ಸಿದ್ಧಮ್ಮ ಆಕಾಶವಾಣಿಯಲ್ಲೂ ಹಾಡುತ್ತಿದ್ದ ಜಾನಪದ ಗಾಯಕಿ. ಆದರೆ, ಆ ಕಲೆಯ ಹಿನ್ನೆಲೆ ಚಿತ್ರರಂಗಕ್ಕೆ ಪ್ರವೇಶಿಸಲು ಸಾಧ್ಯವಾಗಲಿಲ್ಲ. ಬೆಂಗಳೂರಿಗೆ ಬಂದು ಏನೇನೆಲ್ಲ ಕೆಲಸ ಮಾಡಿದ ವಿಶ್ರುತ್‍ಗೆ ನಿರ್ದೇಶಕನಾಗುವ ಹಾದಿಯಲ್ಲಿ ಮೊದಲ ಹೆಜ್ಜೆ ಇಡಿಸಿದವರು ಅವರ ಪತ್ನಿ.

  ನಿರ್ದೇಶಕರ ಸಂಘದಲ್ಲಿ ತರಬೇತಿ ಪಡೆಯಲು ಕಳಿಸಿಕೊಟ್ಟರಂತೆ ಅವರ ಪತ್ನಿ. ಅಲ್ಲಿ ವಿಶ್ರುತ್‍ಗೆ ಜೋಸೈಮನ್, ಸಿದ್ದಲಿಂಗಯ್ಯನವರ ಮಾರ್ಗದರ್ಶನ ಸಿಕ್ಕಿತು. ಶ್ರೇಷ್ಟ ಸಿನಿಮಾಗಳನ್ನು ನೋಡುವ ಅವಕಾಶ ಸಿಕ್ಕಿತು. ಆ ಎಲ್ಲ ಅನುಭವವೂ ಚಿತ್ರದಲ್ಲಿ ಹದವಾಗಿ ಬೆರೆತಿದೆ.

  ಹಾರರ್ ಚಿತ್ರ ಎಂದರೆ, ರಾತ್ರಿ, ಕತ್ತಲು ಎನ್ನುವುದು ಸಾಮಾನ್ಯ. ಆದರೆ, ಈ ಚಿತ್ರದಲ್ಲಿ ದೆವ್ವ ಬರೋದೇ ಹಗಲು ಹೊತ್ತಿನಲ್ಲಿ. ಹೀಗೇ ರೂಲ್ಸ್ ಬ್ರೇಕ್ ಮಾಡಿಯೇ ಸಿನಿಮಾ ಮಾಡಿರುವ ವಿಶ್ರುತ್, ಅಭಿಮಾನಿಗಳ ಕರತಾಡನವನ್ನು ಎದುರು ನೋಡುತ್ತಿದ್ದಾರೆ.

 • ಮಂಜರಿ ಹಾರರ್ ಆದ್ರೆ, ಫ್ರೆಂಡ್‍ಶಿಪ್ಪು ಸೂಪರ್..!

  manjari still

  ಮಂಜರಿ ಅನ್ನೋ ಹಾರರ್ ಸಿನಿಮಾದ ಲುಕ್ಕು, ಟ್ರೇಲರ್ ಭಯ ಹುಟ್ಟಿಸುತ್ತಿರುವುದು ಸತ್ಯ. ಅದರಲ್ಲೂ ಇಷ್ಟು ದಿನ ಮುದ್ದು ಮುದ್ದು ಪಾತ್ರಗಳಲ್ಲೇ ಕಾಣಿಸುತ್ತಿದ್ದ ರೂಪಿಕಾ, ಈ ಚಿತ್ರದಲ್ಲಿ ಕಣ್ಣನ್ನು ಇಷ್ಟಗಲ ಮಾಡಿ ಕೊಡುತ್ತಿರುವ ಲುಕ್ಕಿಗೇ ಭಯ ಬೀಳಿಸುವ ತಾಕತ್ತಿದೆ.

  ಆದರೆ, ನಾವೀಗ ಹೇಳ್ತಿರೋದು ಹಾರರ್ ಕಥೆಯಲ್ಲ. ಹಾರರ್ ಮಂಜರಿಯ ಹಿಂದೆ ಹೃದಯ ಮಿಡಿಯುವ ಗೆಳೆತನದ ಕಥೆಯೂ ಇದೆ. ಚಿತ್ರದ ನಿರ್ಮಾಪಕರು ಕಿರಣ್ ಮತ್ತು ಶಂಕರ್. ವಿಶೃತ್ ನಾಯ್ಕ್ ನಿರ್ದೇಶನದ ಈ ಚಿತ್ರವನ್ನು 3 ಭಾಗಗಳಲ್ಲಿ ತೆರೆಗೆ ತರಲಾಗುತ್ತಿದೆ. ಮೊದಲ ಭಾಗ ಈ ವಾರ ಬಿಡುಗಡೆ.

  ಗೆಳೆಯ ವಿಶ್ವತ್‍ಗಾಗಿ ಅವರ ಇನ್ನಿಬ್ಬರು ಗೆಳೆಯರು ಬಂಡವಾಳ ಹೂಡಿರುವುದೇ ಚಿತ್ರದ ವಿಶೇಷ. ಪ್ರತಿಯೊಬ್ಬ ಗೆಳೆಯರಿಗೂ ಸ್ಫೂರ್ತಿಯಾಗಬಲ್ಲ ಕಥೆಯಿದು. ಅವರಿಲ್ಲದೇ ಇದ್ದಿದ್ದರೆ, ಈ ಚಿತ್ರ ಸಿದ್ಧವಾಗುತ್ತಲೇ ಇರಲಿಲ್ಲ ಎಂದು ನೆನಪಿಸಿಕೊಳ್ತಾರೆ ನಿರ್ದೇಶಕರು. 

 • ಮಂಜರಿಯಲ್ಲಿದೆಯಂತೆ ಹಾರರ್ ಶಾಕ್ ಟ್ರೀಟ್‍ಮೆಂಟ್

  manjari movie image

  ಇದೇ ವಾರ ತೆರೆಗೆ ಬರುತ್ತಿರುವ ಹಾರರ್ ಸಿನಿಮಾ ಮಂಜರಿಯಲ್ಲಿ ಶಾಕ್ ಟ್ರೀಟ್‍ಮೆಂಟ್‍ಗಳಿವೆಯಂತೆ. ಸರಳ ಕಥೆಯಲ್ಲಿ ಪ್ರೀತಿ, ಕಾಮಿಡಿ, ಸೆಂಟಿಮೆಂಟ್ ಎಲ್ಲವೂ ಇದೆ. ಆದರೆ, ಚಿತ್ರದ ಕಥೆಯ ಪ್ರಮುಖ ಎಳೆ ಹಾರರ್. ರೂಪಿಕಾ ವಿಭಿನ್ನವಾಗಿ ಭಯ ಹುಟ್ಟಿಸುವಂತೆ ನಟಿಸಿದ್ದಾರೆ. ಅದಕ್ಕೆ ಸ್ಯಾಂಪಲ್‍ಗಳೂ ಇವೆ.

  ಒಂದೂವರೆ ವರ್ಷದ ಗ್ಯಾಪ್ ನಂತರ ಬಂದಿರುವ ರೂಪಿಕಾ, ಚಿತ್ರದಲ್ಲಿ ತಮ್ಮ ಮುದ್ದಿನ ಮುಖದಲ್ಲೇ ಭಯ ಹುಟ್ಟಿಸುತ್ತಾರೆ. ತಮ್ಮ ಆಕರ್ಷಕ ಕಣ್ಣುಗಳನ್ನು ಅದ್ಭುತವಾಗಿ ಬಳಸಿಕೊಂಡಿದ್ದಾರೆ. ಕಣ್ಣಾಮುಚ್ಚೆ ಕಾಡೇಗೂಡೇ ಎಂದ ಪದದೊಂದಿಗೆ ಶುರುವಾಗುವ ಚಿತ್ರದ ಟ್ರೇಲರ್‍ನಲ್ಲಿಯೇ ಅಂತಹ ಶಾಕ್ ಟ್ರೀಟ್‍ಮೆಂಟ್ ದೃಶ್ಯಗಳಿವೆ. ಇನ್ನು ಇಡೀ ಚಿತ್ರದಲ್ಲಿ ಹೇಗಿರಬಹುದು ಅನ್ನೋದು ಕುತೂಹಲ. 

  ಹಾರರ್ ಚಿತ್ರ ಪ್ರೇಮಿಗಳು, ಆಗಾಗ್ಗೆ ತಾವು ಧೈರ್ಯವಂತರು ಎಂದು ಸಾಬೀತು ಪಡಿಸಿಕೊಳ್ಳಲು ಇಚ್ಚಿಸುವವರು.. ಆಕಾಶದಿಂದ ಧುತ್ತನೆ ಪ್ರತ್ಯಕ್ಷವಾಗುವ ರೂಪಿಕಾರನ್ನು ನೋಡಲು ಚಿತ್ರಮಂದಿರಕ್ಕೆ ಹೋಗಿ ಬನ್ನಿ.

 • ರುದ್ರಾಕ್ಷಿಪುರದಲ್ಲಿ ರೂಪಿಕಾ

  roopika in rudrakshipura

  ರೂಪಿಕಾ.. ಹೊಸ ಮಾದರಿಯ ಪಾತ್ರದಲ್ಲಿ ಕಾಣಿಸಿಕೊಳ್ಳೋಕೆ ತಯಾರಾಗಿದ್ದಾರೆ. ಮಂಜರಿ ಸಿನಿಮಾದಲ್ಲಿ ನಾಗವಲ್ಲಿಯಂತೆ ಕಾಣಿಸಿಕೊಂಡು ಭಯ ಹುಟ್ಟಿಸಿದ್ದ ರೂಪಿಕಾ, ಈಗ ರುದ್ರಾಕ್ಷಿಪುರ ಅನ್ನೋ ಸಿನಿಮಾ ಒಪ್ಪಿಕೊಂಡಿದ್ದಾರೆ. ಅದು ಸಂಪೂರ್ಣ ಹೊಸಬರ ಸಿನಿಮಾ. ಸ್ಟೋನ್ & ಡೈಮಂಡ್ ಸಂಶೋಧಕಿಯಾಗಿ ನಟಿಸುತ್ತಿದ್ದಾರೆ ರೂಪಿಕಾ.

  ಕಿರುತೆರೆಯಲ್ಲಿ ಹೀರೋ ಆಗಿದ್ದ ಅರ್ಜುನ್ ಚೌಹಾಣ್ ಚಿತ್ರದ ನಾಯಕ. ಈಶ್ವರ್ ಪೋಲಂಕಿ ನಿರ್ದೇಶಕ. ನಿರ್ಮಾಪಕರೂ ಹೊಸಬರೇ.. ನಾಗರಾಜ್ ಮುರ್ಡೇಶ್ವರ. ಸದ್ದಿಲ್ಲದೆ ಚಿತ್ರೀಕರಣ ಮುಗಿಸಿರುವ ಸಿನಿಮಾ ತಂಡ, ಆಡಿಯೋ ಸಿಡಿಯನ್ನೂ ಹೊರತಂದಿದೆ.

  ಪಾತ್ರಕ್ಕಾಗಿ ಆಭರಣ ಮಳಿಗೆಗಳಿಗೆ ಹೋಗಿ 15 ದಿನಗಳ ತರಬೇತಿಯನ್ನೂ ಪಡೆದಿರುವ ರೂಪಿಕಾ, ಆ ತರಬೇತಿ ಪಾತ್ರ ನಿರ್ವಹಣೆಗೆ ತುಂಬಾ ಸಹಾಯ ಮಾಡಿತು ಎಂದು ಹೇಳಿಕೊಂಡಿದ್ದಾರೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery