` hombale films - chitraloka.com | Kannada Movie News, Reviews | Image

hombale films

 • ಕೆಜಿಎಫ್ 2 ನೋಡಿದ ಪಾಂಡ್ಯ ಟೀಮ್

  ಕೆಜಿಎಫ್ 2 ನೋಡಿದ ಪಾಂಡ್ಯ ಟೀಮ್

  ಕೆಜಿಎಫ್ ನಿರ್ಮಾಣ ಸಂಸ್ಥೆ ಹೊಂಬಾಳೆ ಆರ್.ಸಿ.ಬಿ. ಜೊತೆಗೆ ಅಧಿಕೃತ ಒಪ್ಪಂದವನ್ನೇ ಮಾಡಿಕೊಂಡಿದೆ. ಕ್ರೀಡಾ ಸಂಸ್ಥೆಯ ಜೊತೆ ಇಂಥಾದ್ದೊಂದು ಒಪ್ಪಂದ ಹೊಸದು. ಇದರ ಜೊತೆಗೆ ಆರ್.ಸಿ.ಬಿ. ತಂಡದ ಆಟಗಾರರು ಕೆಜಿಎಫ್ 2 ಸಿನಿಮಾವನ್ನು ನೋಡಿ ಖುಷಿ ಪಟ್ಟಿದ್ದಾರೆ. ಅತ್ತ, ಕೆಜಿಎಫ್ ತಂಡದವರು ಆರ್.ಸಿ.ಬಿ ಮ್ಯಾಚ್‍ಗಳನ್ನು ನೋಡಿ ಬೆನ್ನು ತಟ್ಟಿದ್ದಾರೆ. ಇದರ ಜೊತೆಗೆ ಇನ್ನೊಂದು ತಂಡವೂ ಕೆಜಿಎಫ್ 2 ಸಿನಿಮಾವನ್ನು ನೋಡಿ ಖುಷಿಪಟ್ಟಿದೆ. ಸದ್ಯಕ್ಕೆ ಐಪಿಎಲ್‍ನಲ್ಲಿ ಅಬ್ಬರಿಸುತ್ತಿರುವ ನಂ.1 ತಂಡವಾಗಿರುವ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟನ್ಸ್ ಕೆಜಿಎಫ್ 2 ಸಿನಿಮಾವನ್ನು ನೋಡಿದೆ.

  ಆಟಗಾರರು ಬಯೋಬಬಲ್‍ನಲ್ಲಿರೋ ಕಾರಣ ಐಪಿಎಲ್ ಆಡಳಿತ ಮಂಡಳಿಯನ್ನು ಕೇಳಿಕೊಂಡು ವಿಶೇಷ ಸ್ಕ್ರೀನಿಂಗ್ ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು. ಬಯೋಬಬಲ್‍ನಲ್ಲಿರೋ ಆಟಗಾರರು ಹಾಗೂ ಅವರ ಪತ್ನಿಯರು ಒಟ್ಟಿಗೇ ಕೆಜಿಎಫ್ 2 ನೋಡಿ ಖುಷಿಪಟ್ಟಿದ್ದಾರೆ.

  ಅತ್ತ ಕೆಜಿಎಫ್ ದಾಖಲೆಗಳನ್ನೆಲ್ಲ ಚಿಂದಿ ಉಡಾಯಿಸುತ್ತಾ ಮುನ್ನುಗ್ಗುತ್ತಿದೆ. ಸದ್ಯಕ್ಕೆ ಕೆಜಿಎಫ್ ದೇಶದ ನಂ.3 ಸಿನಿಮಾ ಆಗಿದೆ, ಲಾಭದ ಲೆಕ್ಕದಲ್ಲಿ.

 • ಕೆಜಿಎಫ್ 25 ದಿನ : ಸೃಷ್ಟಿಸಿದ ದಾಖಲೆಗಳೆಷ್ಟು..?

  ಕೆಜಿಎಫ್ 25 ದಿನ : ಸೃಷ್ಟಿಸಿದ ದಾಖಲೆಗಳೆಷ್ಟು..?

  ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿರೋ ಕೆಜಿಎಫ್ ಚಾಪ್ಟರ್ 2 ಯಶಸ್ವೀ 25 ದಿನ ಪೂರೈಸಿದೆ. ಬಾಕ್ಸಾಫೀಸ್‍ನ್ನು ಚಿಂದಿ ಉಡಾಯಿಸಿದ ರಾಕಿಭಾಯ್ ಈಗಲೂ ಥಿಯೇಟರುಗಳಲ್ಲಿ ಸಿನಿಮಾ ಪ್ರೇಕ್ಷಕರ ಹಾಟ್ ಫೇವರಿಟ್. ಹಾರ್ಟ್ ಫೇವರಿಟ್. ಪ್ರಶಾಂತ್ ನೀಲ್ ಮಾಡಿರುವ ಮ್ಯಾಜಿಕ್ ಅಂಥಾದ್ದು. ಈ ಹಾದಿಯಲ್ಲಿ ಕೆಜಿಎಫ್ ದಾಖಲೆಗಳ ಮೇಲೆ ದಾಖಲೆಯನ್ನು ಬರೆಯುತ್ತಲೇ ಹೋಗಿದೆ. ಬರೆಯುತ್ತಿದೆ.  

  1. ಕೇವಲ ಕನ್ನಡದಲ್ಲಿ ಕೆಜಿಎಫ್ ಬಿಸಿನೆಸ್ 200 ಕೋಟಿ ಸಮೀಪಕ್ಕೆ ಬಂದಿದೆ. ಇದೇ ವೇಗ ಕಾಯ್ದುಕೊಂಡರೆ ಕನ್ನಡದಲ್ಲಿ 200 ಕೋಟಿ ಬಿಸಿನೆಸ್ ಮಾಡಿದ ಮೊದಲ ಸಿನಿಮಾ ಎಂಬ ದಾಖಲೆ ಬರೆಯಲಿದೆ.

  2. ಕನ್ನಡ, ತೆಲುಗು, ಹಿಂದಿ ಹಾಗೂ ತಮಿಳು. ಈ ನಾಲ್ಕೂ ಭಾಷೆಗಳಲ್ಲಿ 100 ಕೋಟಿ ಬಿಸಿನೆಸ್ ಮಾಡಿದ ಮೊದಲ ಸಿನಿಮಾ ಕೆಜಿಎಫ್.

  3. ಹಿಂದಿಯಲ್ಲಿ 400 ಕೋಟಿಗೂ ಹೆಚ್ಚು ಬಿಸಿನೆಸ್ ಮಾಡಿದ ಡಬ್ಬಿಂಗ್ ಸಿನಿಮಾಗಳಲ್ಲಿ ನಂ.2 ಕೆಜಿಎಫ್ ಚಾಪ್ಟರ್ 2. ಮೊದಲ ಸ್ಥಾನದಲ್ಲಿ ಈಗಲೂ ಬಾಹುಬಲಿ 2 ಇದೆ.

  4. ತಂಜಾವೂರಿನ ಥಿಯೇಟರ್ ಮಾಲೀಕರೊಬ್ಬರು ಕೆಜಿಎಫ್ ಚಾಪ್ಟರ್ 2ಗೆ ಟ್ವೀಟ್ ಮಾಡಿದ್ದು, ನಮ್ಮ ಥಿಯೇಟರಿನಲ್ಲಿ 20 ವರ್ಷಗಳ ನಂತರ, 25ನೇ ದಿನವೂ ಹೌಸ್‍ಫುಲ್ ಪ್ರದರ್ಶನ ಕಂಡ ಸಿನಿಮಾ ಕೆಜಿಎಫ್ ಎಂದಿದ್ದಾರೆ. 25 ದಿನಗಳ ನಂತರ ಅವರ ಥಿಯೇಟರಿನಲ್ಲಿ ಈ ಹಿಂದೆ ಕೇವಲ ಚಂದ್ರಮುಖಿ ಸಿನಿಮಾ ಹೌಸ್‍ಫುಲ್ ಶೋ ಆಗಿತ್ತಂತೆ.

  5. ತಮಿಳುನಾಡಿನಲ್ಲಿ 100 ಕೋಟಿ ಬಿಸಿನೆಸ್ ಮಾಡಿದ ಮೊದಲ ಕನ್ನಡ ಸಿನಿಮಾ ಕೆಜಿಎಫ್ ಚಾಪ್ಟರ್ 2.

  6. 1100 ಕೋಟಿಗೂ ಹೆಚ್ಚು ಬಿಸಿನೆಸ್ ಮಾಡಿದ ದೇಶದ 2ನೇ ಸಿನಿಮಾ ಕೆಜಿಎಫ್ ಚಾಪ್ಟರ್ 2.

  7. ಇದೆಲ್ಲದರ ಜೊತೆಗೆ ಇನ್ನೂ ಒಂದು ವಿಶೇಷ ದಾಖಲೆ ಇದೆ. ಮೊದಲ ಸ್ಥಾನದಲ್ಲಿ ಬಾಹುಬಲಿ 2. 2ನೇ ಸ್ಥಾನದಲ್ಲಿ ಕೆಜಿಎಫ್ 2. ಹಾಗೂ 3ನೇ ಸ್ಥಾನದಲ್ಲಿರೋದು ಆರ್.ಆರ್.ಆರ್. ಮೂರೂ ಡಬ್ಬಿಂಗ್ ಸಿನಿಮಾಗಳೇ ಅನ್ನೋದು ವಿಶೇಷ.

  8. ಕೆಜಿಎಫ್ 2 ಡಬ್ಬಿಂಗ್ ರೈಟ್ಸ್ ಸೇಲ್ ಆಗಿದೆ. ಅಮೇಜಾನ್ ಪ್ರೈಮ್ ಖರೀದಿಸಿದೆ. ಅದೂ ದಾಖಲೆಯ 320 ಕೋಟಿಗೆ ಅನ್ನೋ ಸುದ್ದಿ ಇದೆ. ಅದೂ ದಾಖಲೆಯೇ..

 • ಕೆಜಿಎಫ್ ನೋಡಿದ ಶಿವಣ್ಣ : ಶಿವಣ್ಣಗೆ ಇಷ್ಟವಾಗಿದ್ದೇನು?

  ಕೆಜಿಎಫ್ ನೋಡಿದ ಶಿವಣ್ಣ : ಶಿವಣ್ಣಗೆ ಇಷ್ಟವಾಗಿದ್ದೇನು?

  ಕೆಜಿಎಫ್ ಚಾಪ್ಟರ್ 2 ರಿಲೀಸ್ ಆದ ನಂತರ ಹಲವು ಸ್ಟಾರ್‍ಗಳು ಚಿತ್ರವನ್ನು ನೋಡಿದ್ದಾರೆ. ಮೆಚ್ಚಿದ್ದಾರೆ. ಕನ್ನಡದಲ್ಲೂ ಹಲವು ಚಿತ್ರನಟರು ಸಿನಿಮಾ ನೋಡಿ ಖುಷಿ ಪಟ್ಟಿದ್ದಾರೆ. ಇದೀಗ ಶಿವ ರಾಜಕುಮಾರ್ ಕೂಡಾ ಚಿತ್ರವನ್ನು ನೋಡಿ ಖುಷಿಪಟ್ಟಿದ್ದಾರೆ. ಬೆಂಗಳೂರಿನ ಒರಾಯನ್ ಮಾಲ್`ನಲ್ಲಿ ಕೆಜಿಎಫ್ ನೋಡಿದ ಶಿವಣ್ಣ ಚಿತ್ರವನ್ನು ಮನಸಾರೆ ಹೊಗಳಿದರು. ಇದು ನಮ್ಮ ಚಿತ್ರರಂಗದ ಅದ್ಧೂರಿ ಸಿನಿಮಾ ಎಂದು ಪ್ರಶಂಸಿಸಿದರು.

  ಸಿನಿಮಾ ನೋಡ್ತಾ ಇದ್ರೆ ನಮಗೆಲ್ಲ ಹೆಮ್ಮೆ ಆಗುತ್ತೆ. ಡೈಲಾಗ್‍ಗಳಂತೂ ಅದ್ಧೂರಿಯಾಗಿವೆ. ಸೌಂಡಿಂಗ್ ಕೂಡಾ ಸಖತ್ತಾಗಿದೆ. ಕೆಜಿಎಫ್ ನಮ್ಮ ಸಿನಿಮಾ ಇಂಡಸ್ಟ್ರಿಗೆ ಬೂಸ್ಟ್ ಕೊಟ್ಟಿದೆ ಎಂದ ಶಿವಣ್ಣ ಯಶ್ ನನ್ನ ತಮ್ಮನಿದ್ದಂತೆ. ಯಶ್ ಮೇಲೆ ನನಗೆ ಸಪರೇಟ್ ಪ್ರೀತಿ ಇದೆ. ಅವರ ಹಾರ್ಡ್ ವರ್ಕಿಂಗ್ ಸೂಪರ್. ಯಶ್‍ನ ನೋಡ್ತಾ ಇದ್ರೆ ನನ್ನ ತಮ್ಮ ನೆನಪಾಗ್ತಾನೆ. ನನ್ನ ತಮ್ಮನೇ ಮುಂದೆ ಬಂದಂತೆ ಅನ್ನಿಸುತ್ತೆ ಎಂದರು ಶಿವಣ್ಣ.

  ಪ್ರಶಾಂತ್ ನೀಲ್ ನಿರ್ದೇಶನವನ್ನು ಹೊಗಳಿದ ಶಿವಣ್ಣ ಪ್ರಶಾಂತ್‍ರನ್ನು ಸರಸ್ವತಿ ಪುತ್ರ ಎಂದು ಹೊಗಳಿದರು. ಕೆಜಿಎಫ್ 3 ಬರುತ್ತೋ.. ಇಲ್ವೋ ಗೊತ್ತಿಲ್ಲ. ಪ್ರಶಾಂತ್‍ಗೇ ಕಾಲ್ ಮಾಡಿ ಕೇಳ್ತೇನೆ ಎಂದರು ಶಿವಣ್ಣ.

  ನನಗೆ ಚಿತ್ರದಲ್ಲಿ ಎಲ್ಲಕ್ಕಿಂತ ತಾಯಿ ಸೆಂಟಿಮೆಂಟ್ ಸೀನ್ ಇಷ್ಟವಾಯ್ತು ಎನ್ನೋದನ್ನೂ  ಮರೆಯಲಿಲ್ಲ ಶಿವಣ್ಣ. ಯಶ್ ಮೇಲೆ ನನಗೊಂಥರಾ ವಿಶೇಷ ಪ್ರೀತಿ. ಯಶ್ ಅವರ ಆರಂಭದ ದಿನಗಳಿಂದಲೂ ನೋಡಿದ್ದೇನೆ. ಇಂಡಸ್ಟ್ರಿಯಲ್ಲಿ ಯಾರೇ ಎತ್ತರಕ್ಕೆ ಬೆಳೆದರೂ ಖುಷಿ. ಯಶ್ ಬೆಳೆದರೆ ಇನ್ನೂ ಒಂಥರಾ ಖುಷಿ ಎಂದರು ಶಿವಣ್ಣ.

 • ಕೆಜಿಎಫ್..ರಾಜಕುಮಾರ ದಾಖಲೆಗಳನ್ನು ಹಿಂದಿಕ್ಕಿದ ಕಾಂತಾರ

  ಕೆಜಿಎಫ್..ರಾಜಕುಮಾರ ದಾಖಲೆಗಳನ್ನು ಹಿಂದಿಕ್ಕಿದ ಕಾಂತಾರ

  ಕನ್ನಡದಲ್ಲಿ ಕಾಂತಾರ ಹೊಸ ಇತಿಹಾಸವನ್ನೇ ಸೃಷ್ಟಿಸಿದೆ. ಸೃಷ್ಟಿಸುತ್ತಿದೆ. ದಾಖಲೆಗಳೆಲ್ಲ ಪುಡಿ ಪುಡಿಯಾಗುತ್ತಿದೆ. ಡಿವೈನ್ ಹಿಟ್ ಎಂಬ ಹೊಸ ಪದಪುಂಜವನ್ನು ಕನ್ನಡಕ್ಕೆ ಕೊಟ್ಟ ಸಿನಿಮಾ ಕಾಂತಾರ. ರಿಷಬ್ ಶೆಟ್ಟಿ, ಹೊಂಬಾಳೆ ಫಿಲಮ್ಸ್ ಎರಡೂ ಹೊಸ ದಾಖಲೆ ಬರೆದಿವೆ. ಈ ಹಾದಿಯಲ್ಲಿ ಕಾಂತಾರ ಯಶ್, ಪುನೀತ್ ರಾಜಕುಮಾರ್ ಹೆಸರಲ್ಲಿದ್ದ ದಾಖಲೆಗಳನ್ನೆಲ್ಲ ಅಳಿಸಿ ಹಾಕಿದೆ. ಹೊಸ ಮೈಲುಗಲ್ಲು ಸ್ಥಾಪಿಸಿದೆ.

  25 ದಿನಗಳಲ್ಲಿ ಕಾಂತಾರ ಚಿತ್ರವನ್ನು ನೋಡಿದವರ ಸಂಖ್ಯೆ 77 ಲಕ್ಷಕ್ಕೂ ಹೆಚ್ಚು. ಇದು ಹೊಸ ದಾಖಲೆ. ಈ ಹಿಂದೆ ಈ ದಾಖಲೆ ಇದ್ದದ್ದು ಕೆಜಿಎಫ್ ಚಾಪ್ಟರ್ 2 ಹೆಸರಲ್ಲಿ. ಕೆಜಿಎಫ್ 2 ಚಿತ್ರವನ್ನು 75 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದರು. ಪುನೀತ್ ರಾಜಕುಮಾರ್ ಅಭಿನಯದ ರಾಜಕುಮಾರ ಸಿನಿಮಾವನ್ನು 65 ಲಕ್ಷ ಜನ ವೀಕ್ಷಿಸಿದ್ದರು. ಅ ದಾಖಲೆಯನ್ನು ಕೆಜಿಎಫ್ ಚಾಪ್ಟರ್ 1 ಬ್ರೇಕ್ ಮಾಡಿತ್ತು. ಕೆಜಿಎಫ್ ಸಿನಿಮಾವನ್ನು 72 ಲಕ್ಷ ಜನ ವೀಕ್ಷಿಸಿದ್ದರು. ಆ ಎರಡೂ ಚಿತ್ರಗಳು ಹೊಂಬಾಳೆ ಚಿತ್ರಗಳೇ.

  ಈಗ ಕೇವಲ 25 ದಿನಗಳಲ್ಲಿ ಕಾಂತಾರ ಚಿತ್ರವನ್ನು 25 ದಿನಗಳಲ್ಲಿ 77 ಲಕ್ಷ ವೀಕ್ಷಿಸಿದ್ದಾರೆ. ಆ ಸಂಖ್ಯೆ ಕೋಟಿ ದಾಟಿದರೂ ಅಚ್ಚರಿಯಿಲ್ಲ. ಇದು ಕೇವಲ ಕನಾಟಕದ ಲೆಕ್ಕ. ಕನ್ನಡಿಗರು ನೋಡಿರುವ ಚಿತ್ರ. ಕಾಂತಾರ ಕೆಜಿಎಫ್ ದಾಖಲೆಯನ್ನು ಹಿಂದಿಕ್ಕಿದೆ. ಬಾಕ್ಸಾಫೀಸ್ ಲೆಕ್ಕಾಚಾರದಲ್ಲಿ ಅಲ್ಲ. ಸದ್ಯಕ್ಕೆ ಆ ದಾಖಲೆಯ ಹತ್ತಿರಕ್ಕೂ ಹೋಗೋಕಾಗಲ್ಲ. ಅದು ಸೃಷ್ಟಿಸಿರುವ ಇತಿಹಾಸ ಅಂತದ್ದು.

  ಹೊಂಬಾಳೆ ಶುರುವಾಗಿದ್ದು ನಿನ್ನಿಂದಲೇ ಚಿತ್ರದ ಮೂಲಕ. ವಿಜಯ್ ಕಿರಗಂದೂರು ನಿರ್ಮಾಣದ ಮೊದಲ ನಿರೀಕ್ಷೆಯ ಮಟ್ಟ ತಲುಪಿರಲಿಲ್ಲ. ಅದಾದ ನಂತರ ಹೊಂಬಾಳೆ ಸಿನಿಮಾಗಳು ಸೋತದ್ದೇ ಇಲ್ಲ. ಮಾಸ್ಟರ್‍ಪೀಸ್, ರಾಜಕುಮಾರ. ಕೆಜಿಎಫ್ 1 & 2, ಯುವರತ್ನ ಎಲ್ಲ ಚಿತ್ರಗಳೂ ಇತಿಹಾಸ ಬರೆದವು. ಇನ್ನು ಮುಂದೆ ಜಗ್ಗೇಶ್ ಜೊತೆಗಿನ ರಾಘವೇಂದ್ರ ಸ್ಟೋರ್ಸ್ ಇದೆ. ಇದೇ ವರ್ಷ ರಿಲೀಸ್ ಆಗಲಿದೆ. ಇದು ಮಾತ್ರ ಕನ್ನಡದ ಸಿನಿಮಾ.

  ಪ್ರಭಾಸ್-ಪ್ರಶಾಂತ್ ನೀಲ್ ಜೊತೆಗಿನ  ಸಲಾರ್, ಪೃಥ್ವಿರಾಜ್ ಸುಕುಮಾರನ್ ಜೊತೆಗಿನ ಟೈಸನ್, ಪವನ್ ಕುಮಾರ್-ಫಹಾದ್ ಫಾಸಿಲ್ ಜೊತೆಗಿನ ಧೂಮಂ, ಡಾ.ಸೂರಿ-ಶ್ರೀಮುರಳಿ ಕಾಂಬಿನೇಷನ್‍ನ ಬಘೀರ, ರಕ್ಷಿತ್ ಶೆಟ್ಟಿ ಜೊತೆಗೆ ರಿಚರ್ಡ್ ಆಂಟನಿ ಘೋಷಣೆಯಾಗಿವೆ. ಬಘೀರ ಮತ್ತು ರಿಚರ್ಡ್ ಆಂಟನಿ ಇನ್ನೂ ಸೆಟ್ಟೇರಿಲ್ಲ. ಇದರ ಜೊತೆಗೆ ಸಂತೋಷ್ ಆನಂದರಾಮ್-ಯುವ ರಾಜಕುಮಾರ್ ಚಿತ್ರವೂ ಸೆಟ್ಟೇರುತ್ತಿದೆ.

 • ಜಗ್ಗೇಶ್ ವೃತ್ತಿ ಬದುಕಿಗೆ ಈ ಚಿತ್ರ ನವಿಲುಗರಿಯಂತೆ..!

  ಜಗ್ಗೇಶ್ ವೃತ್ತಿ ಬದುಕಿಗೆ ಈ ಚಿತ್ರ ನವಿಲುಗರಿಯಂತೆ..!

  ನವರಸ ನಾಯಕ ಅನ್ನೋ ಬಿರುದು ಹೊತ್ತಿರೋ ಜಗ್ಗೇಶ್ ಹೆಚ್ಚು ಹೆಚ್ಚಾಗಿ ಗುರುತಿಸಿಕೊಂಡಿದ್ದು ಕಾಮಿಡಿ ಚಿತ್ರಗಳಲ್ಲೇ ಆದರೂ, ಯಾವ ಪಾತ್ರಕ್ಕಾದರೂ ಸೈ ಅನ್ನೋದು ಚಿತ್ರರಂಗಕ್ಕೆ ಗೊತ್ತಿಲ್ಲದೇ ಏನಲ್ಲ. ವಿಲನ್ ಆಗಿಯೂ ಗೆದ್ದು ತೋರಿಸಿರೋ ಜಗ್ಗೇಶ್, ಬೇವು ಬೆಲ್ಲ, ಮೇಕಪ್.. ಸೇರಿದಂತೆ ಹಲವು ಚಿತ್ರಗಳಲ್ಲಿ ಸಕಲ ತಾಕತ್ತನ್ನೂ ತೋರಿಸಿರೋ ನಟ. ಇಂತಹ ಜಗ್ಗೇಶ್ ತಮ್ಮ ವೃತ್ತಿ ಬದುಕಿಗೇ ಈ ಚಿತ್ರ ನವಿಲುಗರಿಯಾಗಲಿದೆ ಎಂದಿರೋದು ರಾಘವೇಂದ್ರ ಸ್ಟೋರ್ಸ್ ಚಿತ್ರಕ್ಕೆ.

  ಹೊಂಬಾಳೆ ಬ್ಯಾನರ್‍ನಲ್ಲಿ ಇದೇ ಮೊದಲ ಬಾರಿಗೆ ನಟಿಸುತ್ತಿರೋ ಜಗ್ಗೇಶ್‍ಗೆ ನಿರ್ದೇಶನ ಮಾಡುತ್ತಿರೋದು ಹಿಟ್ ಚಿತ್ರಗಳ ಸರದಾರ ಸಂತೋಷ್ ಆನಂದರಾಮ್. ಚಿತ್ರದ ಪೋಸ್ಟರ್ ಈಗಾಗಲೇ ಇದೊಂದು ವಿಭಿನ್ನ ಕಥಾಹಂದರದ ಚಿತ್ರ ಎನ್ನೋದನ್ನು ಸಾಬೀತು ಮಾಡಿದೆ. ಇಡೀ ಚಿತ್ರದ ಚಿತ್ರೀಕರಣ ಮಲೆನಾಡಿನಲ್ಲಿ ನಡೆಯಲಿದೆಯಂತೆ. 

 • ತಮಿಳಿಗೆ ಹೊಂಬಾಳೆ : ಕೀರ್ತಿ ಸುರೇಶ್ ಸಿನಿಮಾ ರಘು ತಥಾ ನಿರ್ಮಾಣ

  ತಮಿಳಿಗೆ ಹೊಂಬಾಳೆ : ಕೀರ್ತಿ ಸುರೇಶ್ ಸಿನಿಮಾ ರಘು ತಥಾ ನಿರ್ಮಾಣ

  ದೇಶದ ಪ್ರತಿಷ್ಠಿತ ಸಿನಿಮಾ ನಿರ್ಮಾಣ ಸಂಸ್ಥೆಯಾಗಿರೋ ಹೊಂಬಾಳೆ ಫಿಲಮ್ಸ್ ಈಗ ತಮಿಳಿಗೂ ಹೊರಟಿದೆ. ಮಹಾನಟಿ ಕೀರ್ತಿ ಸುರೇಶ್ ನಟನೆಯ ರಘು ತಥಾ ಎಂಬ ಚಿತ್ರಕ್ಕೆ ಬಂಡವಾಳ ಹೂಡುತ್ತಿದೆ. ಅಂದಹಾಗೆ ಇದು ಹೀರೋ ಬೇಸ್ ಸಿನಿಮಾ ಅಲ್ಲ. ಸ್ಟೋರಿ ಬೇಸ್ ಸಿನಿಮಾ. ಅಂದಹಾಗೆ ಈ ಚಿತ್ರಕ್ಕೆ ನಿರ್ದೇಶಕರಾಗಿರೋದು ಸುಮನ್ ಕುಮಾರ್. ಲಾಕ್ ಡೌನ್ ಸಮಯದಲ್ಲಿ ಒಟಿಟಿಯಲ್ಲಿ ದೊಡ್ಡದೊಂದು ಅಲೆಯನ್ನೇ ಎಬ್ಬಿಸಿದ್ದ ಫ್ಯಾಮಿಲಿ ಮ್ಯಾನ್ ವೆಬ್ ಸಿರೀಸ್‍ಗೆ ಕಥೆ-ಚಿತ್ರಕಥೆ ರಚಿಸಿದ್ದ ಸುಮನ್ ಕುಮಾರ್ ಇದೇ ಮೊದಲ ಬಾರಿಗೆ ನಿರ್ದೇಶಕರಾಗುತ್ತಿದ್ದಾರೆ.

  ಇದೊಂದು ಕಾಮಿಡಿ ಡ್ರಾಮಾ ಚಿತ್ರ, ಸಮಾಜದ ವಿರುದ್ದ ಸವಾಲೆಸೆಯುವ ಒಬ್ಬ ಗಟ್ಟಿಗಿತ್ತಿ ಯುವತಿಯ ಸುತ್ತ ನಡೆಯುವ ಕಥೆ. ಸಮಾಜದ ವಿರುದ್ಧ ಹೋರಾಡುತ್ತಲೇ ಆಕೆ ತನ್ನ ಸಿದ್ಧಾಂತಗಳನ್ನು ಎತ್ತಿ ಹಿಡಿದು ಎಲ್ಲರಿಗೂ ಸ್ಫೂರ್ತಿಯಾಗುತ್ತಾಳೆ. ಆಕೆ ತನ್ನ ನೆಲ ಮತ್ತು ಜನರ ಗುರುತನ್ನು ರಕ್ಷಿಸುವ ನಿಟ್ಟಿನಲ್ಲಿ ಏನೆಲ್ಲ ಸಾಹಸಗಳನ್ನು ಮಾಡುತ್ತಾಳೆ ಎಂಬುದನ್ನು ಕಾಮಿಡಿ ರೂಪದಲ್ಲಿ ಹೇಳಲಾಗಿದೆ. ಜನ ನಗು ನಗುತ್ತಲೇ ತಮ್ಮನ್ನು ತಾವು ಆತ್ಮಾವಲೋಕನ ಮಾಡಿಕೊಳ್ಳುವಂತಹ ಕಥೆ ಚಿತ್ರದಲ್ಲಿದೆ ಎಂದು ಮಾಹಿತಿ ನೀಡಿದ್ದು ನಿರ್ಮಾಪಕ ವಿಜಯ್ ಕಿರಗಂದೂರು.

  ಈ ಚಿತ್ರದಲ್ಲಿ ಕೀರ್ತಿ ಸುರೇಶ್ ಜತೆಗೆ ಎಂ.ಎಸ್. ಭಾಸ್ಕರ್, ದೇವದರ್ಶಿನಿ, ರವೀಂದ್ರ ವಿಜಯ್, ಆನಂದ್ ಸ್ವಾಮಿ, ರಾಜೇಶ್ ಬಾಲಕೃಷ್ಣನ್ ಮುಂತಾದವರು ನಟಿಸುತ್ತಿದ್ದಾರೆ.

  ಜೈ ಭೀಮ್ ಖ್ಯಾತಿಯ ಸೀನ್ ರೋಲ್ಡನ್ ಸಂಗೀತ ನೀಡುತ್ತಿದ್ದು, ಯಾಮಿನಿ ಯಜ್ಞಾಮೂರ್ತಿ ಛಾಯಾಗ್ರಹಣ ಮಾಡುತ್ತಿದ್ದಾರೆ. ಈ ಚಿತ್ರ ತಮಿಳಿನಲ್ಲಿ ಮಾತ್ರವೇ ಬರಲಿದೆಯೇ.. ಎಲ್ಲ ಭಾಷೆಗಳಿಗೂ ಬರಲಿದೆಯೇ ಎಂಬುದು ಸ್ಪಷ್ಟವಾಗಿಲ್ಲ.

 • ನವರಸಂ ತಂಡದಿಂದ ಕಾಂತಾರ ಮೇಲೆ ಕೇಸ್ ಎಚ್ಚರಿಕೆ : ವರಾಹರೂಪಂ ಹಾಡು ಕದ್ದಿದ್ದಾ?

  ನವರಸಂ ತಂಡದಿಂದ ಕಾಂತಾರ ಮೇಲೆ ಕೇಸ್ ಎಚ್ಚರಿಕೆ : ವರಾಹರೂಪಂ ಹಾಡು ಕದ್ದಿದ್ದಾ?

  ಈಗ ವಾಟ್ಸಪ್‍ನಲ್ಲಿ.. ಫೇಸ್‍ಬುಕ್‍ನಲ್ಲಿ.. ಟ್ವಿಟ್ಟರ್‍ನಲ್ಲಿ.. ಎಲ್ಲೆಲ್ಲಿಯೂ ಈ ಹಾಡು ಗುನುಗುಡುತ್ತಿದೆ. ವರಾಹರೂಪಂ ದೈವವರೀತಂ.. ಹಾಡು ಎಲ್ಲೆಡೆ ಜನಪ್ರಿಯವಾಗಿದೆ. ಕಾಂತಾರದ ಯಶಸ್ಸು ಹಾಗಿದೆ. ಆದರೆ ತಂಡದ ಮೇಲೆ ಚಿತ್ರದ ಈ ಹಾಡಿನ ಟ್ರ್ಯಾಕ್ ಕದ್ದ ಆರೋಪ ಕೇಳಿಬಂದಿತ್ತು. 2017ರಲ್ಲಿ ರಿಲೀಸ್ ಆಗಿದ್ದ ತೈಕುಡಂ

  ಬ್ರಿಡ್ಜ್ ತಂಡದ ನವರಸಂ ಆಲ್ಬಂನಲ್ಲಿ ಇದೇ ರೀತಿಯ ಮ್ಯೂಸಿಕ್ ಬಳಕೆಯಾಗಿತ್ತು. ಅಜನೀಶ್ ಲೋಕನಾಥ್ ಈ ಮ್ಯೂಸಿಕ್ಕನ್ನು ಯಥಾವತ್ತು ಬಳಸಿಕೊಂಡರಾ ಎಂಬ ಪ್ರಶ್ನೆಯೂ ಎದ್ದಿತ್ತು. ಆಗ ಅಜನೀಶ್ ಪ್ರತಿಕ್ರಿಯೆ ನೀಡಿ ಆ ಹಾಡಿನಿಂದ ಸ್ಫೂರ್ತಿ ಪಡೆದಿದ್ದು ಸತ್ಯ. ಆದರೆ ಚಿತ್ರದ ಈ ಹಾಡಿನಲ್ಲಿ ಅದೇ ರಾಗಗಳನ್ನು ಬಳಸಿಕೊಂಡಿದ್ದೇವೆ. ಕಾಪಿ ಮಾಡಿಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದರು.

  ಈಗ ತೈಕುಡಂ ಬ್ರಿಡ್ಜ್ ತಂಡ ಕಾಂತಾರ ಮೇಲೆ ಕೇಸ್ ಹಾಕುವ ಎಚ್ಚರಿಕೆ ನೀಡಿದೆ. ನಮಗೂ ಕಾಂತಾರಕ್ಕೂ ಯಾವ ಸಂಬಂಧವೂ ಇಲ್ಲ. ವರಾಹರೂಪಂ ಹಾಗೂ ನವರಸಂ ಹಾಡುಗಳಲ್ಲಿ ಸಾಮ್ಯತೆ ಇದೆ. ಇದು ಕಾಪಿರೈಟ್ ಕಾಯಿದೆಯ ಸ್ಪಷ್ಟ ಉಲ್ಲಂಘನೆ. ಕಾಂತಾರ ತಂಡ ನಮಗೆ ಕ್ರೆಡಿಟ್ ಕೂಡಾ ನೀಡಿಲ್ಲ. ತಮ್ಮದೇ ಸ್ವಂತ ಸೃಷ್ಟಿ ಎಂಬಂತೆ ಪ್ರಚಾರ ಮಾಡಿದ್ದಾರೆ. ಇದರ ವಿರುದ್ಧ ಕಾನೂನು ಹೋರಾಟಕ್ಕೆ ಸಿದ್ಧ. ನಿಮ್ಮ ಬೆಂಬಲವಿರಲಿ ಎಂದು ಪೋಸ್ಟ್ ಹಾಕಿದ್ದಾರೆ.

  ಈ ಬಗ್ಗೆ ಕಾಂತಾರ ಚಿತ್ರತಂಡದ ನಿರ್ದೇಶಕ ರಿಷಬ್ ಶೆಟ್ಟಿಯವರಾಗಲೀ, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಅವರಾಗಲೀ ಹೊಂಬಾಳೆ ಫಿಲಮ್ಸ್‍ನವರಾಗಲೀ ಪ್ರತಿಕ್ರಿಯೆ ನೀಡಿಲ್ಲ.

 • ಪರಶುರಾಮ.. ದೇವತಾ ಮನುಷ್ಯ.. ಜ್ವಾಲಾಮುಖಿ.. ಮುಂದ..?

  what is the name of puneeth anandram's new film

  ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್, ಸಂತೋಷ್ ಆನಂದ್‍ರಾಮ್ ಹಾಗೂ ಹೊಂಬಾಳೆ ಪ್ರೊಡಕ್ಷನ್ಸ್ ಕಾಂಬಿನೇಷನ್‍ನ ಸಿನಿಮಾದ ಟೈಟಲ್ ಏನು..? ನವೆಂಬರ್ 1ಕ್ಕೆ ಅಭಿಮಾನಿ ದೇವರಿಂದ ಸಿನಿಮಾ ಟೈಟಲ್ ಬಿಡುಗಡೆ ಎಂದಿದೆ ಚಿತ್ರತಂಡ. ಆದರೆ, ಗಾಂಧಿನಗರದಲ್ಲಿ ಸಿನಿಮಾದ ಟೈಟಲ್ ಕುರಿತು ಹತ್ತಾರು ಕಥೆಗಳು ಓಡಾಡುತ್ತಲೇ ಇವೆ. 

  ಮೊದಲಿಗೆ ಪರಶುರಾಮ್ ಎಂಬ ಹೆಸರು ಕೇಳಿಬಂದಿತ್ತು. ನಂತರ ಅಲ್ಲ.. ದೇವತಾ ಮನುಷ್ಯ ಅನ್ನೋ ಹೆಸರು ಕಾಣಿಸಿಕೊಳ್ತು. ಈಗ ಅವೆರಡನ್ನೂ ಮೀರಿ ಜ್ವಾಲಾಮುಖಿ ಅನ್ನೋ ಹೆಸರು ಓಡಾಡುತ್ತಿದೆ. ಅಂದಹಾಗೆ ಮೂರಕ್ಕೆ ಮೂರೂ ಅಣ್ಣಾವ್ರ ಚಿತ್ರದ ಹೆಸರುಗಳೇ. ಈ ಮೂರರಲ್ಲಿ ಯಾವುದೋ ಒಂದು ಹೆಸರಿರುತ್ತೆ. ಅಥವಾ.. ನಾಲ್ಕನೇ ಹೆಸರು ಬಂದರೂ ಆಶ್ಚರ್ಯವಿಲ್ಲ.

  ನವೆಂಬರ್ 1ರವರೆಗೂ ಕಾಯದೆ ವಿಧಿಯಿಲ್ಲ.

 • ಪವರ್ ಸ್ಟಾರ್ ಪವನ್ ಕುಮಾರ್'ಗೆ  ಹಾಕಿರೋದು ಒಂದೇ ಕಂಡೀಷನ್..!

  ಪವರ್ ಸ್ಟಾರ್ ಪವನ್ ಕುಮಾರ್'ಗೆ  ಹಾಕಿರೋದು ಒಂದೇ ಕಂಡೀಷನ್..!

  ಸಹಜವಾಗಿಯೇ ಎಲ್ಲ ನಿರ್ದೇಶಕರಿಗೂ ಇರುವಂತೆ ಪುನೀತ್‌ ರಾಜ್‌ಕುಮಾರ್‌ ಅವರಿಗೆ ಸಿನಿಮಾ ಮಾಡಬೇಕು ಅನ್ನೋ ಕನಸು ಲೂಸಿಯಾ ಪವನ್ ಅವರಿಗೂ ಇತ್ತು. ಭಟ್ಟರ ಜೊತೆ ಭೇಟಿ ಮಾಡಿದ್ದಾಗ ಪುನೀತ್ ಅವರ ಸರಳತೆ ಮತ್ತು ಕಥೆ ಕೇಳುವ ಗುಣಕ್ಕೆ ಮಾರು ಹೋಗಿದ್ದರಂತೆ ಪವನ್. ಹೀಗಾಗಿಯೇ ಒಮ್ಮೆ ಹೀಗೆ ಒಂದು ಕಥೆ ಬರೆದಿದ್ದೇನೆ ಎಂದಿದ್ದರಂತೆ. ತೆಗೆದುಕೊಂಡು ಬನ್ನಿ, ಒಟ್ಟಿಗೆ ಕೆಲಸ ಮಾಡೋಣ ಎಂದಿದ್ದರಂತೆ ಪುನೀತ್.

  ಪುನೀತ್‌ ರಾಜ್‌ಕುಮಾರ್‌ ಅವರಿಗೆ ಕಥೆ ಒಪ್ಪಿಸಲು ಕಷ್ಟ ಎನ್ನುತ್ತಾರೆ. ನನಗೋ ಕಥೆ ಹೇಳೋಕೆ ಬರಲ್ಲ. ಕಂಪ್ಲೀಟ್‌ ಸ್ಕ್ರಿಪ್ಟ್ ಬರೆದು ಕೊಡುತ್ತೇನೆ. ಅದನ್ನು ಓದಬೇಕು. ಕೆಲವರು ಓದುವುದಿಲ್ಲ ಎಂದೂ ಹೇಳಿದ್ದಾರೆ ಎಂದಿರುವ ಪವನ್‌, ನಂತರ ಕಥೆಯನ್ನು ಮೇಲ್ ಮಾಡಿದರಂತೆ.

  ಎರಡು ದಿನದ ನಂತರ ರಿಯಾಕ್ಷನ್ ಬಂತು. ಬ್ರಿಲಿಯಂಟ್ ಸ್ಕ್ರಿಪ್ಟ್‌ ಮಾಡಿದ್ದೀರಾ, ಇದನ್ನು ನಾನು ಮಾಡುತ್ತೇನೆ ಎಂದರು. ಜತೆಗೆ ನೀವೇನು ಬರೆದುಕೊಂಡಿದ್ದೀರೋ ಅಷ್ಟನ್ನೂ ಡಿಟೇಲ್‌ ಆಗಿ ತೆರೆಮೇಲೆ ತರಬೇಕು ಎಂದು ಹೇಳಿದರು. ಕಥೆಯನ್ನು ನಂತರ ವಿಜಯ್‌ ಕಿರಗಂದೂರು ಕೇಳಿದರು. ನಿರ್ಮಾಣ ಮಾಡೋಕೆ ಮುಂದೆ ಬಂದರು ಎನ್ನುವ ಪವನ್, ಇದು ಯಾವ ಜಾನರ್ ಸಿನಿಮಾ ಎಂದರೆ, ಕಂಟೆಂಟ್ ಇರೋ ಸಿನಿಮಾ ಎನ್ನುತ್ತಾರೆ.

  ಇನ್ನೂ ಚಿತ್ರಕ್ಕೆ ಟೈಟಲ್ ಇಟ್ಟಿಲ್ಲ. ಸದ್ಯದಲ್ಲೇ ಎಲ್ಲವೂ ಫೈನಲ್ ಆಗಲಿದೆ ಎನ್ನುವ ಪವನ್ ಅವರಿಗೆ ಜುಲೈನಲ್ಲಿ ಶೂಟಿಂಗ್ ಶುರು ಮಾಡೋ ಪ್ಲಾನ್ ಇದೆ.

   

  ಪವನ್ ಅವರು ತುಂಬಾ ವಿಶಿಷ್ಟ ಸಬ್ಜೆಕ್ಟ್ಗಳನ್ನ ತೆರೆಮೇಲೆ ತರ್ತಾರೆ. ಅವರ ಜೊತೆ ಸುಮಾರು ಸಾರಿ ಚರ್ಚೆ ಮಾಡಿದ್ದೇನೆ. ಈ ಕಥೆ ಇಷ್ಟವಾಯ್ತು. ನಿರ್ಮಾಪಕರಿಗೂ ಇಷ್ಟವಾಗಿದೆ. ಜೇಮ್ಸ್ ಮುಗಿದ ತಕ್ಷಣ ಪವನ್ ಸಿನಿಮಾ ಶುರುವಾಗುತ್ತೆ ಎಂದಿದ್ದಾರೆ ಪುನೀತ್. ಯಾವ ಜಾನರ್ ಕಥೆ ಅನ್ನೋ ಪ್ರಶ್ನೆಗೆ ಪುನೀತ್ ಅವರದ್ದು ಒಂದೇ ಉತ್ತರ. ನಂಗೆ ಜಾನರ್ ಗೊತ್ತಿಲ್ಲ. ಸಿನಿಮಾ ಅನ್ನೋದಷ್ಟೇ ಗೊತ್ತು.

 • ಬಘೀರ ಶ್ರೀಮುರಳಿಗೆ ರುಕ್ಮಿಣಿ ಹೀರೋಯಿನ್

  ಬಘೀರ ಶ್ರೀಮುರಳಿಗೆ ರುಕ್ಮಿಣಿ ಹೀರೋಯಿನ್

  ಪ್ರಶಾಂತ್ ನೀಲ್-ಹೊಂಬಾಳೆ ಮತ್ತೊಮ್ಮೆ ಒಂದಾಗಿರುವ ಚಿತ್ರ ಬಘೀರ. ಡಾ.ಸೂರಿ ನಿರ್ದೇಶನದ ಚಿತ್ರಕ್ಕೆ ಶ್ರೀಮುರಳಿ ಹೀರೋ. ಚಿತ್ರಕ್ಕೆ ಕಥೆ ಬರೆದಿರುವುದು ಕೆಜಿಎಫ್ ಪ್ರಶಾಂತ್ ನೀಲ್. ಬಘೀರ ಚಿತ್ರದ ಲೇಟೆಸ್ಟ್ ಅಪ್‍ಡೇಟ್ ಬಂದಿದ್ದು, ಚಿತ್ರದ ನಾಯಕಿಯಾಗಿ ರುಕ್ಮಿಣಿ ವಸಂತ್ ಆಯ್ಕೆಯಾಗಿದ್ದಾರೆ.

  ರುಕ್ಮಿಣಿ ವಸಂತ್ ಅವರ ಒಂದು ಚಿತ್ರವೂ ಇನ್ನೂ ಬಿಡುಗಡೆಯಾಗಿಲ್ಲ. ಮೊದಲನೇ ಸಿನಿಮಾ ರಕ್ಷಿತ್ ಶೆಟ್ಟಿ ಜೊತೆಗಿನ ಸಪ್ತ ಸಾಗರದಾಚೆಯೆಲ್ಲೋ.. ನಿರ್ದೇಶಕ ಹೇಮಂತ್ ರಾವ್. 2ನೇ ಸಿನಿಮಾ ಬಾನದಾರಿಯಲ್ಲಿ. ಗಣೇಶ್ ಹೀರೋ ಆದರೆ ಡೈರೆಕ್ಟರ್ ಪ್ರೀತಂ ಗುಬ್ಬಿ. 3ನೇ ಸಿನಿಮಾ ಕೂಡಾ ಸ್ಟಾರ್ ನಟ ಶ್ರೀಮುರಳಿ. ಡೈರೆಕ್ಟರ್ ಡಾ.ಸೂರಿ. ಕಥೆ ಪ್ರಶಾಂತ್ ನೀಲ್. ಬ್ಯಾನರ್ ಹೊಂಬಾಳೆ.

  ಬಘೀರ ನನಗೆ ತುಂಬಾ ವಿಶೇಷವಾದದ್ದು. ಪ್ರಶಾಂತ್ ನೀಲ್ ಕಥೆ ಮತ್ತು ಡಾ.ಸೂರಿಯವರ ನರೇಷನ್ ಎರಡೂ ಇಷ್ಟವಾಯಿತು. ಚಿತ್ರದ ನನ್ನ ಪಾತ್ರವನ್ನು ಸೂರಿ ಹೇಳುತ್ತಿದ್ದಂತೆಯೇ ನಾನು ಗಗನದಲ್ಲಿ ತೇಲುವುದಕ್ಕೆ ಶುರು ಮಾಡಿದೆ. ಪಾತ್ರವೇ ಹಾಗಿದೆ ಎಂದು ಥ್ರಿಲ್ ಆಗಿದ್ದಾರೆ ರುಕ್ಮಿಣಿ ವಸಂತ್.

 • ಬಘೀರನಿಗೆ ಕೂಡಿ ಬಂತು ಕಾಲ

  ಬಘೀರನಿಗೆ ಕೂಡಿ ಬಂತು ಕಾಲ

  ರೋರಿಂಗ್ ಸ್ಟಾರ್ ಶ್ರೀಮುರಳಿ ಮದಗಜ ನಂತರ ನಟಿಸುತ್ತಿರೋ ಹೊಸ ಸಿನಿಮಾ ಬಘೀರ. ಈ ಚಿತ್ರಕ್ಕೆ ಕಥೆ ಬರೆದಿರುವುದು ಪ್ರಶಾಂತ್ ನೀಲ್. ಡೈರೆಕ್ಷನ್ ಮಾಡುತ್ತಿರೋದು ಡಾ.ಸೂರಿ. ಲಕ್ಕಿ, ಕ್ವಾಟ್ಲೆ ಸತೀಶ ಚಿತ್ರಗಳನ್ನು ನಿರ್ದೇಶಿಸಿದ್ದ ಸೂರಿ, ಈಗ ಬಘೀರನಿಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರಕ್ಕೆ ಈಗ ಕಾಲ ಕೂಡಿ ಬಂದಿದ್ದು  ಮೇ 20ರಂದು ಸಿನಿಮಾಗೆ ಮುಹೂರ್ತ ನಡೆಯುತ್ತಿದೆ.

  ಜಂಗಲ್ ಬುಕ್ ಕಾರ್ಟೂನ್ ನೋಡಿರುವವರಿಗೆ ಬಘೀರ ಅನ್ನೋ ಹೆಸರು ಪರಿಚಿತವಾಗಿಯೇ ಇರುತ್ತೆ. ಕಷ್ಟಕ್ಕೆ ಸಿಲುಕುವ ಮೋಗ್ಲಿಯನ್ನು ಕಾಪಾಡುವವನು ಬಘೀರ. ವೆನ್ ಸೊಸೈಟಿ ಬಿಕಮ್ಸ್ ಎ ಜಂಗಲ್.. ಅಂಡ್ ಓನ್ಲಿ ಒನ್ ಪ್ರಿಡೇಟರ್ ರೋರ್ಸ್ ಫಾರ್ ಜಸ್ಟಿಸ್ ಅನ್ನೋದು ಚಿತ್ರದ ಟ್ಯಾಗ್‍ಲೈನ್. ಸಮಾಜವೇ ಒಂದು ಅರಣ್ಯವಾದಾಗ ಪರಭಕ್ಷಕನೇ ನ್ಯಾಯಕ್ಕಾಗಿ ಹೋರಾಡುತ್ತಾನೆ ಅನ್ನೋ ಅರ್ಥವದು. ಚಿತ್ರದಲ್ಲಿ ಶ್ರೀಮುರಳಿಯವರದ್ದು ಪೊಲೀಸ್ ಆಫೀಸರ್ ಪಾತ್ರ. ಚಿತ್ರವನ್ನು ಹೊಂಬಾಳೆಯವರು ಪ್ರೊಡ್ಯೂಸ್ ಮಾಡ್ತಿರೋದ್ರಿಂದ ಅದ್ಧೂರಿತನಕ್ಕೆ ನೋ ಪ್ರಾಬ್ಲಂ.

 • ಮಂಡ್ಯದಲ್ಲಿ ಉದ್ಘಾಟನೆಯಾಯ್ತು ಹೊಂಬಾಳೆ ಐಸಿಯು ಯುನಿಟ್

  ಮಂಡ್ಯದಲ್ಲಿ ಉದ್ಘಾಟನೆಯಾಯ್ತು ಹೊಂಬಾಳೆ ಐಸಿಯು ಯುನಿಟ್

  ಕೋವಿಡ್ 2ನೇ ಅಲೆ ತೀವ್ರಗೊಂಡಾಗ ಆಕ್ಸಿಜನ್ ಮತ್ತು ಐಸಿಯು ಘಟಕಗಳ ಕೊರತೆ ಎದುರಾಗಿತ್ತು. ಆ ನಿಟ್ಟಿನಲ್ಲಿ ಧೃಡವಾದ ಹೆಜ್ಜೆಯಿಟ್ಟಿದ್ದ ಹೊಂಬಾಳೆ ಫಿಲಮ್ಸ್, ಮಂಡ್ಯದಲ್ಲಿ ಐಸಿಯು ಘಟಕ ಸ್ಥಾಪನೆಗೆ ಕೈಜೋಡಿಸಿತ್ತು. ಜಿಲ್ಲಾಡಳಿತಕ್ಕೆ 50 ಲಕ್ಷ ನೀಡಿದ್ದಲ್ಲದೇ, ಅಗತ್ಯ ಇನ್ನಿತರ ನೆರವನ್ನೂ ನೀಡಿತ್ತು. ಒಟ್ಟಾರೆ 2 ಕೋಟಿ 35 ಲಕ್ಷ ನೆರವು ನೀಡಿದ್ದರು. ಆ ನೆರವು ಈಗ ಕಾರ್ಯರೂಪಕ್ಕೂ ಬಂದಿದೆ.

  ಮಂಡ್ಯದಲ್ಲಿ 20 ಬೆಡ್‍ಗಳ ಐಸಿಯು ಬೆಡ್ ವ್ಯವಸ್ಥೆ ಸ್ಥಾಪನೆಯೂ ಆಗಿದ್ದು, ಡಿಸಿಎಂ ಅಶ್ವತ್ಥ್ ನಾರಾಯಣ ಅದನ್ನು ಉದ್ಘಾಟನೆ ಮಾಡಿದ್ದಾರೆ. ಇದು ನೂತನ ತಂತ್ರಜ್ಞಾನದ ಐಸಿಯು ಘಟಕ. ಒಂದೇ ಮಾನಿಟರ್‍ನಲ್ಲಿ ರೋಗಿಯ ಬಿಪಿ, ಶುಗರ್ ಲೆವೆಲ್ ಹಾಗೂ ಆಕ್ಸಿಜನ್ ಮಟ್ಟವನ್ನು ನೋಡಬಹುದು. ಹೊಂಬಾಳೆ ಫಿಲಮ್ಸ್‍ನ ಈ ಸೇವೆಗೆ ಡಿಸಿಎಂ ಅಶ್ವತ್ಥ್ ನಾರಾಯಣ ಧನ್ಯವಾದ ಅರ್ಪಿಸಿದ್ದಾರೆ. ವಿಜಯ್ ಕಿರಗಂದೂರು ಅವರ ಯೋಜನೆಗೆ ಮಂಡ್ಯದ ಮಿಮ್ಸ್ ವೈದ್ಯಕೀಯ ಕಾಲೇಜು ಕೈಜೋಡಿಸಿದೆ.

 • ಮಾರ್ಟಿನ್`ಗೆ ತಂಗಬಲ್ಲಿ ವಿಲನ್..!

  ಮಾರ್ಟಿನ್`ಗೆ ತಂಗಬಲ್ಲಿ ವಿಲನ್..!

  ಯಾರಿದು ತಂಗಬಲ್ಲಿ ಅನ್ನೋ ಕನ್‍ಫ್ಯೂಷನ್ ಬೇಡ. ಚೆನ್ನೈ ಎಕ್ಸ್‍ಪ್ರೆಸ್ ನೋಡಿದ್ದವರಿಗೆ ಖಂಡಿತಾ ಆತನ ನೆನಪಿರುತ್ತೆ. ಚೆನ್ನೈ ಎಕ್ಸ್‍ಪ್ರೆಸ್, ದಬಾಂಬ್ 2, ರೆಡಿ, ಜೋಧಾ ಅಕ್ಬರ್, ಸೂರ್ಯವಂಶಿ ಸೇರಿದಂತೆ ಹಲವು ಬಾಲಿವುಡ್ ಚಿತ್ರಗಳಲ್ಲಿ ನಟಿಸಿರೋ ನಟ ನಿಕಿತಿನ್ ಧೀರ್ ಈಗ ಮಾರ್ಟಿನ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಬರುತ್ತಿದ್ದಾರೆ. ಧ್ರುವ ಸರ್ಜಾ ಎದುರು ಅಬ್ಬರಿಸೋಕೆ ಸಿದ್ಧರಾಗಿದ್ದಾರೆ.

  ಮಾರ್ಟಿನ್, ಎ.ಪಿ.ಅಜುನ್ ನಿರ್ದೇಶನದ ಸಿನಿಮಾ. ಉದಯ್ ಕೆ.ಮೆಹ್ತಾ ನಿರ್ಮಾಪಕರಾಗಿರೋ ಚಿತ್ರಕ್ಕೆ ವೈಭವಿ ಶಾಂಡಿಲ್ಯ ಹೀರೋಯಿನ್. ಸೆಪ್ಟೆಂಬರ್ 30ಕ್ಕೆ ರಿಲೀಸ್ ಆಗುತ್ತಿರೋ ಚಿತ್ರದ ಕ್ಲೈಮಾಕ್ಸ್ ಶೂಟಿಂಗ್ ವೈಜಾಗ್‍ನಲ್ಲಿ ನಡೆಯುತ್ತಿದೆ. ಅಲ್ಲಿಗೆ ನಿಕಿತಿನ್ ಧೀರ್ ಎಂಟ್ರಿ ಕೊಟ್ಟಿದ್ದಾರೆ.

 • ಯುವ ರಾಜಕುಮಾರ್ ಚಿತ್ರದ ಚಿತ್ರೀಕರಣ ಯಾವಾಗ ಶುರು?

  ಯುವ ರಾಜಕುಮಾರ್ ಚಿತ್ರದ ಚಿತ್ರೀಕರಣ ಯಾವಾಗ ಶುರು?

  ಯಾವಾಗ..? ಯಾವಾಗ..? ಯಾವಾಗ..?

  ಸಂತೋಷ್ ಆನಂದರಾಮ್ ಹೋದಲ್ಲಿ ಬಂದಲ್ಲಿ..

  ವಿಜಯ್ ಕಿರಂಗದೂರು ಕಣ್ಣಿಗೆ ಕಂಡಲ್ಲೆಲ್ಲ ಎದುರಾಗುತ್ತಿದ್ದ ಪ್ರಶ್ನೆ ಇದು. ಯುವರಾಜಕುಮಾರ್ ಸಿನಿಮಾ ಅನೌನ್ಸ್ ಮಾಡಿದ್ದೀರಿ, ಸಿನಿಮಾ ಶೂಟಿಂಗ್ ಯಾವಾಗ ಶುರು ಮಾಡ್ತೀರಿ ಅನ್ನೋ ಪ್ರಶ್ನೆಯನ್ನು ಎಲ್ಲರೂ ಕೇಳಿದ್ದವರೇ. ಪುನೀತ್ ಬಿಟ್ಟು ಹೋಗಿರುವ ಶೂನ್ಯವನ್ನ ಯುವ ತುಂಬಬಹುದು ಅನ್ನೋ ಆಸೆ ಅಭಿಮಾನಿ ದೇವರುಗಳದ್ದು. ಈಗ ಆ ಪ್ರಶ್ನೆಗೆ ಖುದ್ದು ಸಂತೋಷ್ ಆನಂದರಾಮ್ ಅವರೇ ಉತ್ತರ ಕೊಟ್ಟಿದ್ದಾರೆ.

  ಅಕ್ಟೋಬರ್‍ನಿಂದ ಚಿತ್ರೀಕರಣ ಶುರುವಾಗಲಿದೆ ಎಂದಿದ್ದಾರೆ ಸಂತೋಷ್ ಆನಂದರಾಮ್. ಸದ್ಯಕ್ಕೆ ಅವರು ರಾಘವೇಂದ್ರ ಸ್ಟೋರ್ಸ್ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಫೈನಲ್ ಸ್ಟೇಜ್ ನೋಡಬೇಕು. ಪ್ರಚಾರದತ್ತ ಗಮನ ಹರಿಸಬೇಕು. ವರಮಹಾಲಕ್ಷ್ಮಿ ಹಬ್ಬಕ್ಕೆ ಆ ಸಿನಿಮಾ ರಿಲೀಸ್ ಆಗುತ್ತಿದೆ. ಅದು ಮುಗಿಯುತ್ತಿದ್ದಂತೆಯೇ ಈ ಹೊಸ ಸಿನಿಮಾ ಶುರುವಾಗಲಿದೆ.

  ಅಂದಹಾಗೆ.. ಇನ್ನೊಂದು ವಿಷಯ. ಇತ್ತೀಚೆಗೆ ಯುವ ರಾಜಕುಮಾರ್ ಎಲ್ಲಿಯೂ ಬಹಿರಂಗವಾಗಿ ಕಾಣಿಸಿಕೊಂಡಿಲ್ಲ. ಕಾಣಿಸಿಕೊಳ್ಳುತ್ತಿಲ್ಲ. ಯುವ ರಾಜಕುಮಾರ್ ಲುಕ್‍ನ್ನು ಅಷ್ಟು ಜತನದಿಂದ ಕಾಪಾಡಿಕೊಂಡು ಬರುತ್ತಿದ್ದಾರೆ ಸಂತೋಷ್. ಅಕ್ಟೋಬರ್‍ನಲ್ಲಿ ಸಿನಿಮಾಗೆ ಮುಹೂರ್ತವಾದಾಗ ಹೇಗೂ ನೋಡಿಯೇ ನೋಡ್ತೀವಲ್ಲ. ವೇಯ್ಟ್.

 • ರಾಜ್ ಕುಟುಂಬದ ಮೊದಲ ಸಿನಿಮಾ ಹೊಂಬಾಳೆಗೆ ಸಿಕ್ಕಿದ್ದು ಹೇಗೆ? 

  ರಾಜ್ ಕುಟುಂಬದ ಮೊದಲ ಸಿನಿಮಾ ಹೊಂಬಾಳೆಗೆ ಸಿಕ್ಕಿದ್ದು ಹೇಗೆ? 

  ಯುವ ರಾಜಕುಮಾರ್. ಕನ್ನಡಿಗರ ಪಾಲಿಗೆ ಜ್ಯೂ.ಪವರ್ ಸ್ಟಾರ್. ಡಾ.ರಾಜ್, ಶಿವಣ್ಣ, ರಾಘಣ್ಣ, ಪುನೀತ್, ವಿನಯ್ ಎಲ್ಲರನ್ನೂ ಅವರಲ್ಲೇ ನೋಡುವ ತವಕದಲ್ಲಿದ್ದಾರೆ ಕನ್ನಡ ಸಿನಿಮಾ ಪ್ರೇಕ್ಷಕರು. ಹೊಂಬಾಳೆ. ಈಗ ಇಂಡಿಯಾದ ನಂ.1 ಚಿತ್ರ ನಿರ್ಮಾಣ ಸಂಸ್ಥೆ.

  ಯುವರಾಜಕುಮಾರ್ ಅವರನ್ನು ಚಿತ್ರರಂಗಕ್ಕೆ ಲಾಂಚ್ ಮಾಡುವ ದೊಡ್ಡ ಜವಾಬ್ದಾರಿಯನ್ನ ಈಗ ಹೊಂಬಾಳೆ ಇಷ್ಟಪಟ್ಟು ಹೆಗಲಿಗೇರಿಸಿಕೊಂಡಿದೆ. ಹೊಂಬಾಳೆ ಫಿಲಮ್ಸ್ ಚಿತ್ರರಂಗಕ್ಕೆ ಪರಿಚಯವಾಗಿದ್ದೇ ನಿನ್ನಿಂದಲೇ ಚಿತ್ರದ ಮೂಲಕ. ಆ ಚಿತ್ರ ಇನ್ನಿಲ್ಲದಂತೆ ನೆಲ ಕಚ್ಚಿತು. ಪುನೀತ್ ವೃತ್ತಿ ಜೀವನದ ಅತೀ ದೊಡ್ಡ ಸೋಲು ನಿನ್ನಿಂದಲೇ. ಆದರೆ.. ಆಗ ವಿಜಯ್ ಕಿರಗಂದೂರು ಅವರ ಬೆನ್ನಿಗೆ ನಿಂತು ಮತ್ತೆ ಚಿತ್ರ ನಿರ್ಮಾಣಕ್ಕೆ ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದು ಪುನೀತ್. ನಂತರ ಬಂದ ರಾಜಕುಮಾರ್ ದೊಡ್ಡ ಮಟ್ಟದ ಯಶಸ್ಸು ಕಾಣುವುದರೊಂದಿಗೆ ಹೊಂಬಾಳೆಗೆ ದೊಡ್ಡ ಮಟ್ಟದ ಯಶಸ್ಸು ಸಿಕ್ಕಿತು. ವಿಜಯ್ ಕಿರಗಂದೂರು ಸ್ಯಾಂಡಲ್‍ವುಡ್‍ಗೆ ದೊಡ್ಡ ನಿರ್ಮಾಪಕರಾಗಿ ಎಂಟ್ರಿ ಕೊಟ್ಟಿದ್ದೇ ಆಗ. ಇದರ ಮಧ್ಯೆ ಮಾಸ್ಟರ್ ಪೀಸ್ ಮೂಲಕ ಯಶ್ ಹೊಂಬಾಳೆಗೆ ಸಿಕ್ಕರು. ನಂತರ ಬಂದ ಕೆಜಿಎಫ್ ಇತಿಹಾಸವನ್ನೇ ಬರೆಯಿತು. 

  ಈಗ ಹೊಂಬಾಳೆ ಕನ್ನಡ ಚಿತ್ರರಂಗದ ಎಲ್ಲ ಸ್ಟಾರ್ ನಟರೊಂದಿಗೂ ಹೊಂಬಾಳೆ ಸಿನಿಮಾ ಮಾಡುತ್ತಿದ್ದಾರೆ. ಸ್ಟಾರ್ ಡೈರೆಕ್ಟರುಗಳೆಲ್ಲ ವಿಜಯ್ ಕಿರಗಂದೂರು ಜೊತೆಗಿದ್ದಾರೆ. ಯಶ್ ಅಷ್ಟೇ ಅಲ್ಲ.. ಜಗ್ಗೇಶ್, ಸಂತೋಷ್ ಆನಂದರಾಮ್, ಶ್ರೀಮುರಳಿ, ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ, ಪ್ರಭಾಸ್, ಪ್ರಶಾಂತ್ ನೀಲ್.. ಹೀಗೆ ಎಲ್ಲರೂ ವಿಜಯ್ ಕಿರಗಂದೂರು ಅವರ ಹೊಂಬಾಳೆಗಾಗಿ ಸಿನಿಮಾ ಮಾಡುತ್ತಿದ್ದಾರೆ.

  ಇನ್ನು ದೊಡ್ಮನೆ ವಿಷಯಕ್ಕೆ ಬಂದರೆ ಶಿವ ರಾಜಕುಮಾರ್ ಅವರ ಆನಂದ್, ರಾಘವೇಂದ್ರ ರಾಜಕುಮಾರ್ ಅವರ ಚಿರಂಜೀವಿ ಸುಧಾಕರ್, ಪುನೀತ್ ಅವರ ಅಪ್ಪು, ವಿನಯ್ ಅವರ ಸಿದ್ಧಾರ್ಥ.. ಈ ಎಲ್ಲ ಚಿತ್ರಗಳನ್ನೂ ನಿರ್ಮಾಣ ಮಾಡಿದ್ದು ಡಾ.ರಾಜ್ ಬ್ಯಾನರ್. ಇದೇ ಮೊದಲ ಬಾರಿಗೆ ರಾಜ್ ಮನೆತನದ ಕುಡಿಯನ್ನು ಹೊರಗಿನ ಚಿತ್ರಸಂಸ್ಥೆ ಲಾಂಚ್ ಮಾಡುತ್ತಿದೆ. ಅದಕ್ಕೆ ಪ್ರೀತಿಯ ಕಾರಣವೂ ಇದೆ. ಪುನೀತ್ ಅವರು ತಮ್ಮ ವಜ್ರೇಶ್ವರಿ, ಪೂರ್ಣಿಮಾ, ಪಿಆರ್‍ಕೆ ಸಂಸ್ಥೆಗಳನ್ನು  ಹೇಗೆ ಪ್ರೀತಿಸುತ್ತಿದ್ದರೋ.. ಅಷ್ಟೇ ಪ್ರೀತಿಯಿಂದ ಇದು ನಮ್ಮ ಸಂಸ್ಥೆ ಎನ್ನುತ್ತಿದ್ದುದು ಹೊಂಬಾಳೆ ಬಗ್ಗೆ. ತಮ್ಮ ಪಿಆರ್‍ಕೆ ಮೂಲಕವೇ ಲಾಂಚ್ ಮಾಡಬೇಕು ಎಂದುಕೊಂಡಿದ್ದ ಯುವ ರಾಜಕುಮಾರ್ ಅವರನ್ನು ಅಷ್ಟೇ ಪ್ರೀತಿಯಿಂದ ಲಾಂಚ್ ಮಾಡೋಕೆ ಹೊರಟಿರುವುದು ವಿಜಯ್ ಕಿರಗಂದೂರು ಮತ್ತು ಸಂತೋಷ್ ಆನಂದರಾಮ್. 

 • ರಿಷಬ್ ಶೆಟ್ಟಿ ಮನವಿ ಮೀರಿದ್ದ ಹುಡುಗಿಗೆ ಕಡೆಗೆ ಏನಾಯ್ತು?

  ರಿಷಬ್ ಶೆಟ್ಟಿ ಮನವಿ ಮೀರಿದ್ದ ಹುಡುಗಿಗೆ ಕಡೆಗೆ ಏನಾಯ್ತು?

  ಕಾಂತಾರ ಸಿನಿಮಾ ರಿಲೀಸ್ ಆದ ಹೊತ್ತಿನಲ್ಲಿ ರಿಷಬ್ ಶೆಟ್ಟಿ ಒಂದು ಮನವಿ ಮಾಡಿದ್ದರು. ಆ ಹೊತ್ತಿಗೆ ಓಓಓ.. ಎಂಬುದು ಹಾಗೂ ಪಂಜುರ್ಲಿಯ ದೃಶ್ಯಗಳು ಮೋಡಿ ಮಾಡುವುದಕ್ಕೆ ಶುರು ಮಾಡಿದ್ದವು. ಆಗ ಖುದ್ದು ರಿಷಬ್ ಪ್ರೇಕ್ಷಕರಿಗೆ ರೀಲ್ಸ್ ಅಥವಾ ಮೇಮ್ಸ್ ಮಾಡಬೇಡಿ. ದೈವಕ್ಕೆ ಅಪಚಾರ ಮಾಡಬೇಡಿ. ದೈವನನ್ನು ಆರಾಧಿಸುವವರ ನಂಬಿಕೆಗೆ ಘಾಸಿ ಮಾಡಬೇಡಿ ಎಂದಿದ್ದರು. ಆದರೆ ಪ್ರೇಕ್ಷಕರು ಕೇಳಬಲ್ಲ. ಪಂಜುರ್ಲಿ ದೈವದ ದೃಶ್ಯ ರೀಲ್ಸ್ ಮಾಡಿ ಶ್ವೇತಾ ರೆಡ್ಡಿ ಎಂಬ ಯುವತಿ ಪೋಸ್ಟ್ ಮಾಡಿದ್ದಳು.

  ಅದಾದ ನಂತರ ಜ್ವರವೂ ಶುರುವಾಗಿದೆ. ಇತ್ತ ಸೋಷಿಯಲ್ ಮೀಡಿಯಾದಲ್ಲಿ ಇಂತಹ ಹುಚ್ಚಾಟ ಬೇಡ ಎಂದು ಕೆಲವರು ಕ್ಲಾಸ್ ತೆಗೆದುಕೊಂಡಿದ್ದಾರೆ. ವರಾಹರೂಪಂ ಹಾಡಿಗೆ ಪಂಜುರ್ಲಿಯಂತೆ ವೇಷ ಧರಿಸಿ ನೃತ್ಯ ಮಾಡಿದ್ದು ಅಪರಾಧ ಎಂಬಂತೆ ಬೈದಿದ್ದಾರೆ. ಇನ್ನೂ ಕೆಲವರು ಮತ್ತೊಂದು ಹೆಜ್ಜೆ ಮುಂದೆ ಹೋಗಿ ಪಂಜುರ್ಲಿ ದೈವಕ್ಕೆ ದೂರು ಸಲ್ಲಿಸಿದ್ದಾರೆ. ವಿಚಿತ್ರವೆಂದರೆ ಆ ಬೆನ್ನಲ್ಲೇ ಆಕೆಗೆ ಜ್ವರ ಶುರುವಾಗಿದೆ. ಬೆನ್ನಲ್ಲೇ ಶ್ವೇತಾ ರೆಡ್ಡಿ ಧರ್ಮಸ್ಥಳದ ಮಂಜುನಾಥನಿಗೆ ತಪ್ಪು ಕಾಣಿಕೆ ಸಲ್ಲಿಸಿ ಕ್ಷಮೆ ಕೋರಿದ್ದಾರೆ. ಬಳಿಕ ವೀಡಿಯೋ ಡಿಲೀಟ್ ಮಾಡಿದ್ದಾರೆ, ತೀರ್ಥಸ್ನಾನ ಮಾಡಿದ್ದಾರೆ. ದಯವಿಟ್ಟು ಹರಕೆ ಇಡಬೇಡಿ ಎಂದು ಮನವಿ ಮಾಡಿದ್ದಾರೆ.

  ನಾನು ಈ ವಿಡಿಯೋವನ್ನು ಇಷ್ಟ ಪಟ್ಟು ಮಾಡಿದ್ದೇನೆಯೇ ಹೊರತು, ಯಾರಿಗೋ ಅವಮಾನಿಸುವ, ನಂಬಿಕೆಗೆ ಅವಹೇಳನ ಮಾಡುವ ಉದ್ದೇಶದಿಂದ ಮಾಡಿದ್ದಲ್ಲ. ಸಿನಿಮಾ ಇಷ್ಟವಾಯಿತು. ಪಂಜುರ್ಲಿಯೂ ಇಷ್ಟವಾಯಿತು. ನನಗೆ ಹೆಚ್ಚಿನದ್ದು ಗೊತ್ತಿರಲಿಲ್ಲ. ಯಕ್ಷಗಾನ ಮತ್ತು ದೈವಕೋಲ ಒಂದೇ ಎಂದುಕೊಂಡಿದ್ದೆ. ಈಗ ಗೊತ್ತಾಗಿದೆ. ದಯವಿಟ್ಟು ಹರಕೆ ಇಡಬೇಡಿ. ನಿಮಗೆ ನಿಮ್ಮ ದೈವಕ್ಕೆ ನೋವಾಗಿದ್ದರೆ ಕ್ಷಮೆಯಿರಲಿ. ಮುಂದೆಂದೂ ಸಂಸ್ಕøತಿಗೆ ಅಪಚಾರ ಎಸಗುವ ಕೆಲಸ ಮಾಡುವುದಿಲ್ಲ. ದೈವಕೋಲವನ್ನೊಮ್ಮೆ ನೋಡಬೇಕು. ಖಂಡಿತಾ ನೋಡುತ್ತೇನೆ ಎಂದಿದ್ದಾರೆ ಶ್ವೇತಾ ರೆಡ್ಡಿ.

 • ಸೂರರೈಪೊಟ್ರು ನಿರ್ದೇಶಕಿ ಜೊತೆ ಹೊಂಬಾಳೆ ಸಿನಿಮಾ : ಹೀರೋ ಸೂರ್ಯನಾ?

  ಸೂರರೈಪೊಟ್ರು ನಿರ್ದೇಶಕಿ ಜೊತೆ ಹೊಂಬಾಳೆ ಸಿನಿಮಾ : ಹೀರೋ ಸೂರ್ಯನಾ?

  ಹೊಂಬಾಳೆ ಸಾಲು ಸಾಲು ಸಿನಿಮಾ ಮಾಡುತ್ತಿದೆ. ಕನ್ನಡದಲ್ಲಿ.. ತೆಲುಗಿನಲ್ಲಿ.. ಪ್ಯಾನ್ ಇಂಡಿಯಾ ಲೆವೆಲ್ಲಿನಲ್ಲಿ.. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಿವೆ. ಯಶ್ ಮತ್ತು ಪ್ರಶಾಂತ್ ಜೊತೆಗಿದ್ದ ಪ್ರಾಜೆಕ್ಟ್ ಕೆಜಿಎಫ್ ಸದ್ಯಕ್ಕೆ ಮುಗಿದಿದೆ.

  ಹೊಂಬಾಳೆಯ ಲಿಸ್ಟಿನಲ್ಲಿರೋ ಸಿನಿಮಾಗಳಲ್ಲಿ ಪ್ರಭಾಸ್, ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ, ಜಗ್ಗೇಶ್ ಚಿತ್ರಗಳಿವೆ. ಪ್ರಶಾಂತ್ ನೀಲ್ ಸಲಾರ್ ಮಾಡುತ್ತಿದ್ದರೆ, ರಿಷಬ್ ಕಾಂತಾರಾ ಮಾಡುತ್ತಿದ್ದಾರೆ. ರಕ್ಷಿತ್ ಶೆಟ್ಟಿ ರಿಚರ್ಡ್ ಆಂಟೊನಿ ಮಾಡುತ್ತಿದ್ದರೆ, ಸಂತೋಷ್ ಆನಂದರಾಮ್ ರಾಘವೇಂದ್ರ ಸ್ಟೋರ್ ರೆಡಿ ಮಾಡಿದ್ದಾರೆ. ಇದೆಲ್ಲದರ ಜೊತೆಗೆ 5ನೇ ಸಿನಿಮಾ ಘೋಷಿಸಿದೆ ಹೊಂಬಾಳೆ.

  ಸತ್ಯ ಘಟನೆ ಆಧರಿಸಿದ ಚಿತ್ರಕ್ಕೆ ನಿರ್ದೇಶಕಿಯಾಗಿ ಬರುತ್ತಿರೋದು ಸುಧಾ ಕೊಂಗರಾ. ತಮಿಳಿನ ಸೂರರೈಪೊಟ್ರು ಸಿನಿಮಾ ನೋಡಿದ್ದವರಿಗೆ ಸುಧಾ ಕೊಂಗರಾ ಅವರ ಡೈರೆಕ್ಷನ್ ತಾಕತ್ತು ಗೊತ್ತಿರುತ್ತೆ. ಕನ್ನಡಿಗ ಕ್ಯಾ.ಗೋಪಿನಾಥ್ ಸ್ಟೋರಿಯನ್ನು ಚೆಂದವಾಗಿ ಹೇಳಿದ್ದರು ಸುಧಾ. ಸೂರ್ಯ ನಟಿಸಿದ್ದ ಚಿತ್ರ ಕನ್ನಡದಲ್ಲೂ ಡಬ್ ಆಗಿತ್ತು. ಈಗ ಅದೇ ಸುಧಾ ಕೊಂಗರಾ ಹೊಂಬಾಳೆಗಾಗಿ ಸಿನಿಮಾ ಮಾಡುತ್ತಿದ್ದಾರೆ. ಸತ್ಯ ಘಟನೆ ಆಧರಿಸಿದ ಚಿತ್ರವಂತೆ.

  ಹೀರೋ ಆಗಿ ಸೂರ್ಯ ಅವರೇ ನಟಿಸಲಿದ್ದಾರೆ ಅನ್ನೋ ಸುದ್ದಿ ಇದೆ. ಇದ್ದರೂ ಇರಬಹುದು. ಸದ್ಯಕ್ಕೆ ನಿರ್ದೇಶಕಿ ಬಿಟ್ಟು ಇನ್ಯಾವ ಮಾಹಿತಿಯನ್ನೂ ಹೊಂಬಾಳೆ ನೀಡಿಲ್ಲ.

 • ಹೊಂಬಾಳೆ ಬ್ಯಾನರ್‍ನಲ್ಲಿ ಶ್ರೀಮುರಳಿ

  srimurali's next with hombale films

  ಉಗ್ರಂ ನಂತರ ಬ್ಯಾಕ್ ಟು ಬ್ಯಾಕ್ ಹಿಟ್ ಕೊಟ್ಟಿರುವ ಶ್ರೀಮುರಳಿ, ಈಗ ಹೊಂಬಾಳೆ ಬ್ಯಾನರ್ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ರಾಜಕುಮಾರ, ಕೆಜಿಎಫ್‍ನಂತ ದೊಡ್ಡ ಚಿತ್ರಗಳನ್ನು ನಿರ್ಮಿಸಿರುವ ಹೊಂಬಾಳೆ ಪ್ರೊಡಕ್ಷನ್ಸ್, ಶ್ರೀಮುರಳಿಗಾಗಿ ಸಿನಿಮಾ ನಿರ್ಮಿಸಲಿದೆ. 

  ಚಿತ್ರಕ್ಕೆ ನಿರ್ದೇಶಕರಾಗಿ ಆಯ್ಕೆಯಾಗಿರುವುದು ಬಂಗಾರ ಸ/ಒ ಬಂಗಾರದ ಮನುಷ್ಯ ಚಿತ್ರ ನಿರ್ದೇಶಿಸಿದ್ದ ಯೋಗಿ ಜಿ.ರಾಜ್. ಉಗ್ರಂ, ರಥಾವರ ಹಾಗೂ ಈಗ ಮಫ್ತಿ ಚಿತ್ರದ ಯಶಸ್ಸಿನ ಅಲೆಯಲ್ಲಿರುವ ಶ್ರೀಮುರಳಿಗೆ ಈಗ ದೊಡ್ಡ ಬ್ಯಾನರ್‍ನಿಂದ ಆಫರ್ ಸಿಕ್ಕಿದೆ. 

  ಸದ್ಯಕ್ಕೆ ಫೈನಲ್ ಆಗಿರುವುದು ಹೀರೋ & ನಿರ್ದೇಶಕ ಮಾತ್ರ. ಉಳಿದ ತಂತ್ರಜ್ಞರು, ಕಲಾವಿದರ ಆಯ್ಕೆ ಇನ್ನಷ್ಟೇ ಆಗಬೇಕಿದೆ.

 • ಹೊಂಬಾಳೆ ಮತ್ತು ಮೂರು ಸಾವಿರ ಕೋಟಿ

  ಹೊಂಬಾಳೆ ಮತ್ತು ಮೂರು ಸಾವಿರ ಕೋಟಿ

  ಹೊಂಬಾಳೆ ಫಿಲಮ್ಸ್ ಸಂಸ್ಥೆ ಈಗ ದೇಶದ ನಂ.1 ಚಿತ್ರ ನಿರ್ಮಾಣ ಸಂಸ್ಥೆ. ಈ ವರ್ಷವೇ ಕೆಜಿಎಫ್ ಮತ್ತು ಕಾಂತಾರ ಎಂಬ ಎರಡು ಬ್ಲಾಕ್ ಬಸ್ಟರ್ ಹಿಟ್ ಕೊಟ್ಟ ಹೊಂಬಾಳೆಯ ಬೆನ್ನೆಲುಬು ವಿಜಯ್ ಕಿರಗಂದೂರು. ಅವರೀಗ ಮೂರು ಸಾವಿರ ಕೋಟಿ ಬಂಡವಾಳ ಹೂಡಿ ಎಲ್ಲರ ಹುಬ್ಬೇರಿಸಿದ್ದಾರೆ. ಇದು ಒಂದು ದಿನದ ಕಥೆ ಅಲ್ಲ, ಘೋಷಣೆಯ ವೈಭವವೂ ಅಲ್ಲ. ಇದು 5 ವರ್ಷಗಳ ಪ್ಲಾನ್. ಮುಂದಿನ 5 ವರ್ಷಗಳಲ್ಲಿ 3 ಸಾವಿರ ಕೋಟಿ ಬಂಡವಾಳ ಹೂಡುತ್ತಿರುವುದಾಗಿ ವಿಜಯ್ ಕಿರಗಂದೂರು ಘೋಷಿಸಿದ್ದಾರೆ. ಹೊಂಬಾಳೆಯವರ ಕೈಲಿ ಸುಮಾರು ಚಿತ್ರಗಳಿವೆ.

  1.ಸಲಾರ್ : ಇದು ಪ್ರಭಾಸ್, ಶೃತಿ ಹಾಸನ್, ಜಗಪತಿ ಬಾಬು ನಟಿಸುತ್ತಿರುವ ಸಿನಿಮಾ. ನಿರ್ದೇಶಕ ಪ್ರಶಾಂತ್ ನೀಲ್.

  2.ರಾಘವೇಂದ್ರ ಸ್ಟೋರ್ಸ್ : ಇದು ಜಗ್ಗೇಶ್, ಶ್ವೇತಾ ಶ್ರೀವಾತ್ಸವ್ ಸಿನಿಮಾ. ನಿರ್ದೇಶಕ ಸಂತೋಷ್ ಆನಂದರಾಮ್.

  3. ರಿಚರ್ಡ್ ಆಂಟನಿ : ರಕ್ಷಿತ್ ಶೆಟ್ಟಿ ನಟಿಸಿ, ನಿರ್ದೇಶಿಸುತ್ತಿರುವ ಸಿನಿಮಾ.

  4. ಟೈಸನ್ : ಪೃಥ್ವಿರಾಜ್ ಸುಕುಮಾರನ್ ನಟನೆ, ನಿರ್ದೇಶನದ ಮಲಯಾಳಂ ಸಿನಿಮಾ

  5. ಧೂಮಮ್ : ಪವನ್ ಕುಮಾರ್ ನಿರ್ದೇಶನದ ಚಿತ್ರ. ಫಾಹದ್ ಫಾಸಿಲ್, ಅಪರ್ಣಾ ಬಾಲಮುರಳಿ ನಟಿಸುತ್ತಿರುವ ಸಿನಿಮಾ.

  6. ಬಘೀರಾ : ಶ್ರೀಮುರಳಿ ನಟನೆಯ ಸಿನಿಮಾ. ಡಾ.ಸೂರಿ ನಿರ್ದೇಶಕ

  7. ರಘುತಾತ : ಕೀರ್ತಿ ಸುರೇಶ್ ಪ್ರಧಾನ ಪಾತ್ರದಲ್ಲಿರೋ ಚಿತ್ರ. ಸುಮನ್ ಕುಮಾರ್ ನಿರ್ದೇಶಕ

  8. ಸೂರರೈಪೊಟ್ರು ನಿರ್ದೇಶಕಿ ಸುಧಾ ಕೊಂಗೆರಾ ಜೊತೆಗೊಂದು ಸಿನಿಮಾ.

  ಅದ್ಧೂರಿ ಚಿತ್ರವೆಂದರೆ ದುಡ್ಡು ಸುರಿದೇ ಸಿನಿಮಾ  ಮಾಡಬೇಕು ಎಂತಿಲ್ಲ. ಕಥೆಯನ್ನೇ ಮುಖ್ಯವಾಗಿಟ್ಟುಕೊಂಡು ಚಿತ್ರದ ಕಥೆಗೆ ಏನೇನು ಬೇಕೋ ಎಲ್ಲವನ್ನೂ ಕೊಡುವ ಕೆಲಸ ಮಾಡುತ್ತಿರುವ ಹೊಂಬಾಳೆಯವರು ದೊಡ್ಡ ಕನಸಿನ ಬೆನ್ನು ಹತ್ತಿದ್ದಾರೆ. ವಿಜಯ್ ಕಿರಗಂದೂರು ಅವರಿಗೆ ಎಲ್ಲರೂ ಶುಭ ಕೋರಿದ್ದಾರೆ.

 • ಹೊಂಬಾಳೆಯವರ ಧೂಮಂ ಆರಂಭ

  ಹೊಂಬಾಳೆಯವರ ಧೂಮಂ ಆರಂಭ

  ದೇಶದ ಪ್ರತಿಷ್ಠಿತ ಸಿನಿಮಾ ಸಂಸ್ಥೆ ಹೊಂಬಾಳೆ ಹೊಸ ಸಿನಿಮಾ ಆರಂಭಿಸಿದೆ. ಧೂಮಂ ಚಿತ್ರಕ್ಕೆ ಮುಹೂರ್ತ ನೆರವೇರಿದ್ದು ವಿಶೇಷ. ಕಂಠೀರವ ಸ್ಟುಡಿಯೋದಲ್ಲಿ ಮುಹೂರ್ತ ನಡೆಯಿತು. ಮೊದಲ ದೃಶ್ಯಕ್ಕೆ ಮಂಜುನಾಥ ಕಿರಗಂದೂರು ಕ್ಲಾಪ್ ಮಾಡಿದರೆ, ಶೈಲಜಾ ಕಿರಗಂದೂರು ಕ್ಯಾಮೆರಾಗೆ ಚಾಲನೆ ನೀಡಿದರು. ವಿಜಯ್ ಕಿರಗಂದೂರು ನಿರ್ಮಾಣದ ಧೂಮಂ ಚಿತ್ರದ ಮುಹೂರ್ತಕ್ಕೆ ಎಂದಿನಂತೆ ಹೊಂಬಾಳೆ ಕುಟುಂಬದವರೆಲ್ಲ ಹಾಜರಿದ್ದರು.

  ಲೂಸಿಯಾ ಖ್ಯಾತಿಯ ಪವನ್ ಕುಮಾರ್ ನಿರ್ದೇಶನದ ಚಿತ್ರಕ್ಕೆ ಫಹಾದ್ ಫಾಸಿಲ್ ನಾಯಕ. ಮಲಯಾಳಂ ಚಿತ್ರಗಳಲ್ಲಿ ಈಗ ಸ್ಟಾರ್. ಮಲಯಾಳಂ ಸಿನಿಮಾ ನೋಡದವರ ಗಮನಕ್ಕೆ : ಇತ್ತೀಚೆಗೆ  ಕಮಲ್ ಹಾಸನ್ ಅಭಿನಯದ ವಿಕ್ರಂನಲ್ಲಿ ಪೊಲೀಸ್ ಆಫೀಸರ್ ಪಾತ್ರ ಮಾಡಿದ್ದರಲ್ಲ... ಅವರೇ ಫಹಾದ್ ಫಾಸಿಲ್. ನಾಯಕಿ ಅಪರ್ಣ ಬಾಲಮುರಳಿ. ಸೂರರೈ ಪೋಟ್ರು ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದ ರಾಷ್ಟ್ರಪ್ರಶಸ್ತಿ ವಿಜೇತ ಕಲಾವಿದೆ.

  ಅಂದಹಾಗೆ ಇದು ಹೊಂಬಾಳೆಯವರ 12ನೇ ಸಿನಿಮಾ.