` vijaykumar kiragandur - chitraloka.com | Kannada Movie News, Reviews | Image

vijaykumar kiragandur

 • `ರಾಜಕುಮಾರ' ಸೃಷ್ಟಿಕರ್ತರ ಪುನರ್ ಮಿಲನ

  rajakumar team reunites

  ರಾಜಕುಮಾರ, 2017ರ ಸೂಪರ್ ಡ್ಯೂಪರ್ ಹಿಟ್ ಚಿತ್ರ. ಕನ್ನಡ ಚಿತ್ರರಂಗದ ಬಾಕ್ಸಾಫೀಸ್ ದಾಖಲೆಗಳನ್ನೆಲ್ಲ ದೂಳೀಪಟ ಮಾಡಿದ ಈ ಸಿನಿಮಾದ ರೂವಾರಿ ನಿರ್ದೇಶಕ ಸಂತೋಷ್ ಆನಂದ್ ರಾಮ್. ನಿರ್ಮಾಪಕ ವಿಜಯ್ ಕಿರಗಂದೂರು ಮತ್ತು ರಾಜಕುಮಾರ ಪುನೀತ್ ರಾಜ್‍ಕುಮಾರ್. ಈ ಜೋಡಿ ಈಗ ಪುನಃ ಒಂದಾಗುತ್ತಿದೆ.

  ಕಥೆ ಬರೆಯುತ್ತಿದ್ದೇನೆ ಎಂದು ಹೇಳಿದ್ದ ಸಂತೋಷ್ ಆನಂದ್ ರಾಮ್, ಕಥೆ, ಚಿತ್ರಕಥೆ ಸಿದ್ಧಪಡಿಸಿದ್ದು, ಅದು ಪುನೀತ್ ರಾಜ್‍ಕುಮಾರ್‍ಗೆ ಇಷ್ಟವಾಗಿದೆ. ಹೊಂಬಾಳೆ ಬ್ಯಾನರ್‍ನಲ್ಲಿಯೇ ಸಿನಿಮಾ ರೆಡಿಯಾಗುತ್ತಿದೆ. ಮಾನವೀಯ ಸಂಬಂಧ, ಮೌಲ್ಯಗಳೇ ಚಿತ್ರದ ಪ್ರಮುಖ ಭಾಗ ಎಂದಿದ್ದಾರೆ ಸಂತೋಷ್ ಆನಂದ್‍ರಾಮ್.

  ರಾಜಕುಮಾರ ಚಿತ್ರದಲ್ಲಿ ವೃದ್ಧರ ಕಣ್ಣೀರ ಕಥೆಯನ್ನು ಪರಿಣಾಮಕಾರಿಯಾಗಿ ಹೇಳಿ, ಸಂದೇಶ ನೀಡಿದ್ದ ಸಂತೋಷ್, ಇಲ್ಲಿ ಯಾವ ಸಂದೇಶ ಕೊಡುತ್ತಾರೆ ಎಂಬ ಕುತೂಹಲವಂತೂ ಖಂಡಿತಾ ಇದೆ. ರಾಜಕುಮಾರ ಚಿತ್ರಕ್ಕಿಂತ ಇದು ದೊಡ್ಡ ದಾಖಲೆ ಸೃಷ್ಟಿಸಲಿದೆ ಎಂಬುದು ನಿರ್ಮಾಪಕ ವಿಜಯ್ ಕಿರಗಂದೂರು ನಿರೀಕ್ಷೆ.

 • KGF Team looking Heroine for Yash

  KFG launch image

  The team of Yash starrer 'KGF' is planning to start the shooting of the film sometime in October and is busy looking for a suitable heroine for Yash.

  The team has given an announcement looking for suitable heroines.The team is preferably looking for Kannada speaking girls for this film and has asked the interested girls to send their resume, small videos and photos to This email address is being protected from spambots. You need JavaScript enabled to view it..

  'KGF' is being directed by Prashanth Neel and produced by Vijaykumar Kiragandur of Hombale Films. Ravi Basrur is the music director.

 • ಕೆಜಿಎಫ್ ಚಾಪ್ಟರ್ 2 : ಮತ್ತೆ ಶೂಟಿಂಗ್

  ಕೆಜಿಎಫ್ ಚಾಪ್ಟರ್ 2 : ಮತ್ತೆ ಶೂಟಿಂಗ್

  ಯಾವುದೇ ಸಮಸ್ಯೆ ಬರದೇ ಹೋಗಿದ್ದರೆ ಕೆಜಿಎಫ್ ಚಾಪ್ಟರ್ 2, 2021ರ ಜುಲೈನಲ್ಲೇ ರಿಲೀಸ್ ಆಗಬೇಕಿತ್ತು. ಈಗ 2022ರ ಏಪ್ರಿಲ್‍ಗೆ ಪೋಸ್ಟ್ ಪೋನ್ ಆಗಿದೆ. ಇದರ ನಡುವೆ ಮತ್ತೆ ಚಿತ್ರದ ಶೂಟಿಂಗ್ ನಡೆದಿದೆ. 2020ರ ಡಿಸೆಂಬರ್‍ನಲ್ಲೇ ಕ್ಲೈಮಾಕ್ಸ್ ಶೂಟಿಂಗ್ ಮುಗೀತು ಎಂದಿದ್ದ ಕೆಜಿಎಫ್ ಟೀಂ, ಈಗ ಮತ್ತೊಮ್ಮೆ ಶೂಟಿಂಗ್ ಮಾಡಿದೆ.

  ನಿರ್ದೇಶಕ ಪ್ರಶಾಂತ್ ನೀಲ್ ಅವರಿರೋದೇ ಹಾಗೆ. ಸ್ಕ್ರೀನ್‍ನಲ್ಲಿ ಕಾಂಪ್ರೊಮೈಸ್ ಆಗುವವರಲ್ಲ. ಎಡಿಟಿಂಗ್ ಟೇಬಲ್ ಮೇಲೆ ಕುಳಿತಾಗ ಒಂದಿಷ್ಟು ಶಾಟ್ಸ್ ಬೇಕು ಎನ್ನಿಸಿ ಮತ್ತೆ ಚಿತ್ರೀಕರಣ ಮಾಡಿದ್ದಾರೆ ನೀಲ್. ನೈಸ್ ರೋಡ್‍ನಲ್ಲಿ ಒಂದು ಚೇಸಿಂಗ್ ಸೀನ್‍ನ ದೃಶ್ಯ ಚಿತ್ರೀಕರಿಸಲಾಗಿದೆ. ನೀಲ್ ಜೊತೆ ಕ್ಯಾಮೆರಾಮನ್ ಭುವನ್ ಗೌಡ ಭಾಗಿಯಾಗಿದ್ದಾರೆ. ಪ್ರಶಾಂತ್ ನೀಲ್ ಅವರಂತೂ ಇತ್ತ ಕೆಜಿಎಫ್ ಚಾಪ್ಟರ್ 2 ಪೋಸ್ಟ್ ಪ್ರೊಡಕ್ಷನ್ ಮತ್ತು ಅತ್ತ ಸಲಾರ್ ಶೂಟಿಂಗ್.. ಎರಡೂ ಕಡೆ ಬ್ಯುಸಿ. ಇನ್ನೊಂದೆಡೆ ಬಘೀರ ವೇಯ್ಟಿಂಗ್.

 • ಕೆಜಿಎಫ್ ಚಾಪ್ಟರ್ 2 ಮೊದಲ ವಿಮರ್ಶೆ

  ಕೆಜಿಎಫ್ ಚಾಪ್ಟರ್ 2 ಮೊದಲ ವಿಮರ್ಶೆ

  ಕೆಜಿಎಫ್ ಚಾಪ್ಟರ್ 1ನ ಮಾತು ಬಿಡಿ.. ನಿರೀಕ್ಷೆಗಳು ಕಡಿಮೆಯಿದ್ದವು. ಸಿಕ್ಕ ಗೆಲುವು ಬೋನಸ್. ಆದರೆ ಕೆಜಿಎಫ್ ಚಾಪ್ಟರ್ 2 ಹಾಗಲ್ಲ.. ನಿರೀಕ್ಷೆಗಳು ಬೆಟ್ಟದಷ್ಟಿವೆ. ಆ ಬೆಟ್ಟದಷ್ಟು ನಿರೀಕ್ಷೆ ಹುಟ್ಟೋಕೆ ಕಾರಣ ಚಾಪ್ಟರ್ 1 ಸೃಷ್ಟಿಸಿದ ಇತಿಹಾಸ. ಹಾಗಾದರೆ ಚಾಪ್ಟರ್ 2 ಹೇಗಿದೆ? ಅರೆ.. ಸಿನಿಮಾ ರಿಲೀಸ್ ಆಗೋಕೆ ಇನ್ನೂ ಒಂದೂವರೆ ತಿಂಗಳು ಟೈಮಿದೆ. ಈಗ್ಲೇ ಹೇಗ್ ಹೇಳೋಕಾಗುತ್ತೆ ಅನ್ನಬೇಡಿ. ಅದನ್ನು ನೋಡಿದವರೊಬ್ಬರು ಮೊದಲ ವಿಮರ್ಶೆ ಕೊಟ್ಟಿದ್ದಾರೆ.

  ಕೆಜಿಎಫ್ 2 ಸಿನಿಮಾ ನೋಡಿದ್ದು ಮನಸ್ಸಿಗೆ ಮುದ ನೀಡಿತು. ವಿಜಯ್ ಕಿರಗಂದೂರು ಜೊತೆ ಕೆಲಸ ಮಾಡೋಕೆ ಖುಷಿಯಾಗುತ್ತಿದೆ. ಈ ಚಿತ್ರದಲ್ಲಿ ಪ್ರಶಾಂತ್ ನೀಲ್ ಹೊಸ ಸ್ಟಾಂಡರ್ಡ್ ಸೆಟ್ ಮಾಡಿದ್ದಾರೆ. ಇದು ಪೃಥ್ವಿರಾಜ್ ಸುಕುಮಾರನ್ ಕೊಟ್ಟಿರೋ ವಿಮರ್ಶೆ.

  ಕೆಜಿಎಫ್ ಪ್ರಚಾರಕ್ಕೆ ತಯಾರಿ ಆರಂಭಿಸಿರುವ ಚಿತ್ರತಂಡ ಮಲಯಾಳಂನಲ್ಲಿ ನಟ ಪೃಥ್ವಿರಾಜ್ ಅವರನ್ನು ಭೇಟಿ ಮಾಡಿದೆ. ಮಲಯಾಳಂಣಲ್ಲಿ ಕೆಜಿಎಫ್ ವಿತರಣೆ ಹಕ್ಕು ಅವರದ್ದೇ. ಮಲಯಾಳಂನಲ್ಲಿ ವಿಭಿನ್ನ ಕಥಾಹಂದರದ ಚಿತ್ರಗಳಿಂದಲೇ ಸಕ್ಸಸ್ ಕಂಡಿರೋ ನಟ ಪೃಥ್ವಿರಾಜ್. ಈಗ ಕೆಜಿಎಫ್ 2 ವಿತರಣೆ ಮಾಡುತ್ತಿದ್ದಾರೆ. ಮಲಯಾಳಂನಲ್ಲಿ. 

 • ಕೆಜಿಎಫ್ ಪ್ರಚಾರದ ಹೊಸ ಸ್ಟೈಲ್ : ಕೆಜಿಎಫ್ ವರ್ಸ್

  ಕೆಜಿಎಫ್ ಪ್ರಚಾರದ ಹೊಸ ಸ್ಟೈಲ್ : ಕೆಜಿಎಫ್ ವರ್ಸ್

  ಕೆಜಿಎಫ್ ಚಾಪ್ಟರ್ 2ನಲ್ಲಿ ಬರೋ ಪಾತ್ರಗಳ ಜೊತೆ ನೀವು ಮಾತನಾಡಬಹುದು. ಗೇಮ್ ಆಡಬಹುದು. ಓಡಾಡಬಹುದು... ಇದು ಕೆಜಿಎಫ್ ಪ್ರಚಾರದ ಹೊಸ ಸ್ಟೈಲ್. ಇದು ಹೇಗೆ ಸಾಧ್ಯ ಎಂದು ತಲೆಕೆಡಿಸಿಕೊಳ್ಳಬೇಡಿ. ಡಿಜಿಟಲ್ ಕ್ರಾಂತಿಯ ಜಗತ್ತಿನಲ್ಲಿ ಎಲ್ಲವೂ ಸಾಧ್ಯ. ಇದಕ್ಕಾಗಿಯೇ ನಿರ್ಮಾಪಕ ವಿಜಯ್ ಕಿರಗಂದೂರು ಅವರ ಹೊಂಬಾಳೆ ಹೊಸ ವರ್ಚುವಲ್ ಜಗತ್ತನ್ನೇ ಸೃಷ್ಟಿಸಿದೆ. ಅದೇ ಕೆಜಿಎಫ್ ವರ್ಸ್.

  ಮೆಟಾವರ್ಸ್ ಅನ್ನೋದು ವರ್ಚುವಲ್ ಜಗತ್ತಿನ ಒಂದು ವರ್ಷನ್. ಅದರಲ್ಲಿಯೇ ಕೆಜಿಎಫ್ ಟೀಂ ಕೆಜಿಎಫ್ ವರ್ಸ್ ಸೃಷ್ಟಿಸಿದೆ. ಏಪ್ರಿಲ್ 7ನೇ ತಾರೀಕು ಅದಕ್ಕೆ ಸಂಬಂಧಪಟ್ಟಂತೆ ವೆಬ್‍ಸೈಟ್ ಅನಾವರಣವಾಗಲಿದೆ. ನೀವು ಆ ವೆಬ್‍ಸೈಟ್‍ಗೆ ಭೇಟಿ ಕೊಟ್ಟು, ಟೋಕನ್ ಪಡೆದರೆ ಆಯಿತು. ಚಿತ್ರದಲ್ಲಿ ಬರೋ ರಾಕೀಭಾಯ್, ರೀನಾ, ಅಧೀರ, ರುಮಿಕಾ ಸೇನ್.. ಹೀಗೆ ಪ್ರತಿಯೊಂದು ಪಾತ್ರಗಳೂ ನಿಮ್ಮನ್ನು ಎದುರುಗೊಳ್ಳಲಿವೆ.

  ಚಿತ್ರದಲ್ಲಿರೋ ಯಶ್, ಶ್ರೀನಿಧಿ ಶೆಟ್ಟಿ, ಸಂಜಯ್ ದತ್, ರವೀನಾ ಟಂಡನ್, ಪ್ರಕಾಶ್ ರೈ ಅವರ ವರ್ಚುವಲ್ ಪಾತ್ರಗಳು ನಿಮ್ಮೊಂದಿಗೆ ಆಟವಾಡುತ್ತವೆ. ಮಾತನಾಡುತ್ತವೆ. ಓಡಾಡುತ್ತವೆ.. ಇದೆಲ್ಲವೂ ಪ್ರಶಾಂತ್ ನೀಲ್ ಅವರ ಕಲ್ಪನೆ. ಇನ್ನೂ ಅನುಮಾನವಿದ್ದರೆ.. ಇದೆಲ್ಲ ಹೇಗೆ ಸಾಧ್ಯ ಎಂಬ ಪ್ರಶ್ನೆಗಳಿದ್ದರೆ.. ತಲೆಕೆಡಿಸಿಕೊಳ್ಳಬೇಡಿ. ಏಪ್ರಿಲ್ 7ರವರೆಗೆ ಕಾಯಿರಿ.

 • ರಾಖಿ ಭಾಯ್ ಬೈಕ್ ಬಿಡಲ್ಲ..!

  rocky bhai fida over bike

  ಕೆಜಿಎಫ್ ಚಿತ್ರದಲ್ಲಿ ಎಲ್ಲರ ಗಮನ ಸೆಳೆಯುತ್ತಿರುವುದು ಮ್ಯೂಸಿಕ್, ಸೌಂಡ್, ಡೈಲಾಗ್ಸ್, ಕ್ಯಾಮೆರಾ ಟೇಕಿಂಗ್ಸ್.. ಈ ಎಲ್ಲದರ ನಡುವೆ ಯುವಕರ ಕಣ್ಣು ಕುಕ್ಕುತ್ತಿರೋದು ರಾಖಿ ಭಾಯ್ ಬೈಕ್. 

  ಮೊದಲೇ 70-80ರ ದಶಕದ ಕಥೆ. ಹೀಗಾಗಿ ಆಗಿನ ಕಾಲದ ಬೈಕ್‍ನ್ನೇ ಬಳಸಿಕೊಳ್ಳೋ ಪ್ಲಾನ್ ನಿರ್ದೇಶಕ ಪ್ರಶಾಂತ್ ನೀಲ್ ಅವರಿಗೆ ಇತ್ತು. ಆದರೆ, ಮೈಲೇಜ್, ಕೆಪ್ಯಾಸಿಟಿ ಪ್ರಾಬ್ಲಂಗಳಿಂದಾಗಿ ಹೊಸ ರಾಯಲ್ ಎನ್‍ಫೀಲ್ಡ್ ಹಿಮಾಲಯನ್ ಗಾಡಿಯನ್ನೇ ಹಳೆಯ ರೂಪಕ್ಕೆ ಬದಲಿಸಲಾಯಿತು. ನಾವು ಟ್ರೇಲರ್‍ನಲ್ಲಿ ನೋಡ್ತಿರೋದು ಅದೇ ಬೈಕ್.

  ಆ ಬೈಕ್ ಮೇಲೆ ಯಶ್‍ಗೆ ಲವ್ವಾಗಿ ಬಿಟ್ಟಿದೆ. ಕೆಜಿಎಫ್ ಚಾಪ್ಟರ್ 2 ಶೂಟಿಂಗ್ ಮುಗಿದ ಮೇಲೆ ಆ ಬೈಕ್‍ನ್ನು ಸ್ವಂತಕ್ಕೆ ತೆಗೆದುಕೊಳ್ಳೋ ಪ್ಲಾನ್ ಹಾಕಿಕೊಂಡಿದ್ದಾರಂತೆ ಯಶ್.