ಕೆಂಡಸಂಪಿಗೆ, ಟಗರು ಖ್ಯಾತಿಯ ಮಾನ್ವಿತಾ ಹರೀಶ್ ಬಿಬಿಸಿಯಲ್ಲಿ ಮಾತನಾಡಿದ್ದಾರೆ. ಅರೆ.. ಮಾನ್ವಿತಾ ಸಿನಿಮಾ ಬಿಟ್ಟು, ಮತ್ತೆ ತಮ್ಮ ಹಳೆಯ ಪ್ರೊಫೆಷನ್‍ಗೆ ಮರಳಿಬಿಟ್ಟರಾ ಎಂಬ ಪ್ರಶ್ನೆ ಕಾಡೋದು ಸಹಜ. ಏಕಂದ್ರೆ, ಮಾನ್ವಿತಾ ಮೊದಲು ಆರ್‍ಜೆ (ರೇಡಿಯೋ ಜಾಕಿ) ಆಗಿದ್ದವರು. ಆದರೆ, ಬಿಬಿಸಿಯಲ್ಲಿ ಮಾತನಾಡಿರುವುದು ಆರ್‍ಜೆ ಆಗಿ ಅಲ್ಲ.
ಕೆಲವು ದಿನಗಳಿಂದ ನಾಗತಿಹಳ್ಳಿ ಚಂದ್ರಶೇಖರ್ ಸಿನಿಮಾ ಶೂಟಿಂಗ್‍ಗಾಗಿ ಲಂಡನ್‍ನಲ್ಲೇ ಬೀಡುಬಿಟ್ಟಿರುವ ಮಾನ್ವಿತಾ, ಬಿಬಿಸಿ ಏಷ್ಯಾನೆಟ್‍ಗೆ ಸಂದರ್ಶನ ನೀಡಿದ್ದಾರೆ. ಕನ್ನಡದಲ್ಲೇ.
ಶಾಂತಿ ಓಂಕಾರ್ ಎಂಬುವವರು ಮಾನ್ವಿತಾ ಅವರನ್ನು ಇಂಟರ್‍ವ್ಯೂ ಮಾಡಿದ್ದಾರೆ. ತಮ್ಮ ಜೀವನ ಮತ್ತು ವೃತ್ತಿ ಜೀವನದ ಬಗ್ಗೆ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಆರ್‍ಜೆ ಆಗಿಯೇ ವೃತ್ತಿ ಜೀವನ ಆರಂಭಿಸಿದ ನನಗೆ, ಬಿಬಿಸಿ ರೇಡಿಯೋ ಸಂದರ್ಶನದ ಅತಿಥಿಯಾಗಿದ್ದು ಖುಷಿ ಕೊಟ್ಟಿದೆ. ಜೀವನ ಒಂದು ಸರ್ಕಲ್ ಮುಗಿಸಿದ ಭಾವವೆ ಕಾಡುತ್ತಿದೆ ಎಂದು ಹೇಳಿದ್ದಾರೆ ಮಾನ್ವಿತಾ.