ಎಂಗೇಜ್ಮೆಂಟ್ ಆದ ಹುಡುಗಿಯನ್ನು ನೋಡೋದು, ಇಷ್ಟಪಡೋದು ಗೋಲ್ಡನ್ ಸ್ಟಾರ್ ಗಣೇಶ್ ಟ್ರೇಡ್ಮಾರ್ಕ್ ಆಗಿಬಿಟ್ಟಿದೆ. ಸುಮ್ಮನೆ ನೆನಪಿಸಿಕೊಳ್ಳಿ, ಮುಂಗಾರು ಮಳೆ - ಎಂಗೇಜ್ಮೆಂಟ್ ಆಗಿದ್ದ ನಂದಿನಿ ಪೂಜಾ ಗಾಂಧಿ ಮೇಲೆ ಲವ್ವು. ಹುಡುಗಾಟ -
ಗಣೇಶ್ನ ಇಷ್ಟ ಪಡೋ ಹೊತ್ತಿಗೆ ರೇಖಾಗೆ ಇನ್ನೊಂದು ಲವ್ವಾಗಿರುತ್ತೆ.ಗಾಳಿಪಟ - ಗಣಿ ಲವ್ ಮಾಡೋ ಡೈಸಿ ಬೋಪಣ್ಣ ಅವರದ್ದು ವಿಧವೆಯ ಪಾತ್ರಅರಮನೆ - ಗಣೇಶ್ಗೆ ಹೀರೋಯಿನ್ ಸಿಗೋದೇ ಇಲ್ಲಶ್ರಾವಣಿ ಸುಬ್ರಹ್ಮಣ್ಯ - ಅಮೂಲ್ಯ ಗಣೇಶ್ಗೆ ಸಿಕ್ಕೊದೇ ಲವ್ವರ್ ಜೊತೆ ಓಡಿ ಬಂದಾಗ..ಮಳೆಯಲಿ ಜೊತೆಯಲಿ - ಅವರೇ ನಿರ್ದೇಶಿಸಿದ ಚಿತ್ರದಲ್ಲೂ ಅಷ್ಟೆ.. ನೋ ಚೇಂಜ್ ಸರ್ಕಸ್, ಉಲ್ಲಾಸ ಉತ್ಸಾಹ, ಮಳೆಯಲಿ ಜೊತೆಯಲಿ, ಏನೋ ಒಂಥರಾ, ಮದುವೆ, ದಿಲ್ ರಂಗೀಲಾ, ಖುಷಿ ಖುಷಿಯಾಗಿ, ಮುಗುಳುನಗೆ .. ಹೀಗೆ ಗಣೇಶ್ ಚಿತ್ರಗಳಲ್ಲಿ ಅವರ ಪಾತ್ರದ ಸ್ಟೈಲೇ ಹಾಗೆ..
ಆರೆಂಜ್ ಚಿತ್ರದಲ್ಲೂ ಹಾಗೇ.. ಹೀರೋಯಿನ್ ಚೆಲುವೆ ಪ್ರಿಯಾ ಆನಂದ್. ಈ ರಾಜಕುಮಾರಿಗೂ ಚಿತ್ರದಲ್ಲಿ ಆಗಲೇ ಎಂಗೇಜ್ಮೆಂಟ್ ಆಗಿ, ಆರೆಂಜ್ನಿಂದ ಏನೇನೋ ಆಗಿ.. ಲವ್ವಾಗುತ್ತೆ. ಪ್ರಶಾಂತ್ ರಾಜ್ ಕಾಮಿಡಿ ಲವ್ ಸ್ಟೋರಿ ಹೇಳಿದ್ದಾರೆ. ಜಸ್ಟ್ ಎಂಜಾಯ್.