` engaged, - chitraloka.com | Kannada Movie News, Reviews | Image

engaged,

  • 4000 ಕೋಟಿ ಒಡೆಯನನ್ನು ವರಿಸಿದ ಆ್ಯಮಿ ಜಾಕ್ಸನ್

    amy jackson engaged to her millionarie boyfriend

    ದಿ ವಿಲನ್ ಚಿತ್ರದ ಮೂಲಕ ಕನ್ನಡ ಚಿತ್ರರಸಿಕರಿಗೆ ಪರಿಚಿತಳಾದ ಆ್ಯಮಿ ಜಾಕ್ಸನ್, ಲವ್ವಲ್ಲಿ ಬಿದ್ದಿದ್ದರು ಎನ್ನುವುದು ಹೊಸದೇನಲ್ಲ. ಈಗ ಆ್ಯಮಿ, ತಾವು ಪ್ರೀತಿಸುತ್ತಿದ್ದ ಯುವಕನ ಜೊತೆ ಎಂಗೇಜ್‍ಮೆಂಟ್ ಮಾಡಿಕೊಂಡಿದ್ದಾರೆ. ಜಾಂಬಿಯಾದಲ್ಲಿ ಹೊಸ ವರ್ಷದ ದಿನ ತಮ್ಮ ಪ್ರಿಯಕರ ಜಾರ್ಜ್ ಪನಯೌಟು ಜೊತೆ ಉಂಗುರ ಬದಲಿಸಿಕೊಂಡಿದ್ದಾರೆ.

    ಈ ಜಾರ್ಜ್ ಪನಯೌಟು, ಆಗರ್ಭ ಶ್ರೀಮತಂ. ಬ್ರಿಟನ್‍ನ ಅತಿದೊಡ್ಡ ರಿಯಲ್ ಎಸ್ಟೇಟ್ ಉದ್ಯಮಿಯ ಪುತ್ರ. ಎಬಿಲಿಟಿ ಗ್ರೂಪ್‍ನ ಒಡೆಯ. ಲಂಡನ್‍ನಲ್ಲಿ ಹಲವಾರು ಸ್ಟಾರ್ ಹೋಟೆಲ್‍ಗಳ ಮಾಲೀಕ. ಆಸ್ತಿಯ ಮೊತ್ತ 4000 ಕೋಟಿಗೂ ಹೆಚ್ಚಿದೆ. ನಿಶ್ಚಿತಾರ್ಥ ಪೂರೈಸಿದ್ದು, ಕೆಲವೇ ತಿಂಗಳಲ್ಲಿ ಮದುವೆಯಾಗಲಿದ್ದಾರಂತೆ.

     

  • Yash And Radhika Pandith Engaged

    yash radhika pandit image

    Sandalwood actors Yash and Radhika Pandith on Friday got engaged amidst family and friends in Goa.

    Many of the celebrities including Ambarish, Ravichandran, Puneeth Rajakumar, Sumalatha Ambarish, Malavika, Yogaraj Bhatt, K Manju, Jayanna, Harsha, Aneesh Tejeshwar and others were present at the occasion.

    yash_radhika_engagemant.jpg

    The duo will get married in the month of December in Bangalore

    Super Hit Pair - Yash - Radhika Pandith Images - View

    Also Read

    Yash and Radhika Pandit Wedding In December

    It Is Not Andy's Engagement Please

     

  • ಅನುಪೂವಮ್ಮ ಜೊತೆ ಅಯ್ಯಪ್ಪ ನಿಶ್ಚಿತಾರ್ಥ

    actress anu poovamma and arickter engaged

    ಎನ್.ಸಿ.ಅಯ್ಯಪ್ಪ, ಮಾಜಿ ಕ್ರಿಕೆಟ್ ಆಟಗಾರ. ನಟಿ ಪ್ರೇಮಾ ಅವರ ಸಹೋದರ. ಅನು ಪೂವಮ್ಮ, ಚಿತ್ರನಟಿ. ಕರ್ವ ಚಿತ್ರದ ನಾಯಕಿ. ಇಬ್ಬರೂ ಈಗ ಸಪ್ತಪದಿ ತುಳಿಯಲು ಸಿದ್ಧರಾಗಿದ್ದಾರೆ. ಬೆಂಗಳೂರಿನ ಕೊಡವ ಸಮಾಜದಲ್ಲಿ ಅಪ್ಪಟ ಕೊಡವರ ಸಂಪ್ರದಾಯದಂತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

    ಇಬ್ಬರ ಮಧ್ಯೆ ಹಲವು ವರ್ಷಗಳಿಂದ ಪ್ರೀತಿ ಅರಳಿತ್ತು. ಅದು ಎರಡೂ ಮನೆಯವರಿಗೆ ಗೊತ್ತಿತ್ತು. ಆ ಪ್ರೀತಿಗೆ ಈಗ ನಿಶ್ಚಿತಾರ್ಥದ ಅಂಕಿತ ಬಿದ್ದಿದೆ. ಮದುವೆ ಈಗಲ್ಲ, ಮುಂದಿನ ವರ್ಷ. 

  • ರಾಜಕುಮಾರನಿಗೆ ರಾಜಕುಮಾರಿ ಸಿಕ್ಕಿದ್ಲು..!

    rajakumara director santhosh anandram

    ರಾಜಕುಮಾರನೆಂದರೆ, ಅಭಿಮಾನಿಗಳಿಗೆ ತಕ್ಷಣ ನೆನಪಾಗೋದು ಪುನೀತ್ ರಾಜ್‍ಕುಮಾರ್. ಆ ರಾಜಕುಮಾರ ಎಂಬ ಚಿತ್ರದ ಹಿಂದಿನ ಮಾಸ್ಟರ್ ನಿರ್ದೇಶಕ ಸಂತೋಷ್ ಆನಂದರಾಮ್. ಅವರಿಗೀಗ ರಾಜಕುಮಾರಿ ಸಿಕ್ಕಿದ್ದಾರೆ. ತಾವೀಗ ಎಂಗೇಜ್ ಎಂಬ ವಿಷಯವನ್ನು ಸ್ವತಃ ಸಂತೋಷ್ ಆನಂದ್‍ರಾಮ್ ಹೇಳಿಕೊಂಡಿದ್ದಾರೆ.

    ಅವರು ಮದುವೆಯಾಗುತ್ತಿರುವ ಹುಡುಗಿಯ ಹೆಸರು ಸುರಭಿ. ಬಳ್ಳಾರಿಯಲ್ಲಿ ಇದೇ ತಿಂಗಳ 26ರಂದು ನಿಶ್ಚಿತಾರ್ಥ ನಡೆಯಲಿದೆ. ಸುರಭಿ, ಸಂತೋಷ್ ಆನಂದ್‍ರಾಮ್ ಅವರ ಫ್ಯಾಮಿಲಿ ಫ್ರೆಂಡ್. ಬಿಇ ಮಾಡಿ ಎಂಟೆಕ್ ಮಾಡಿರುವ ಸುರಭಿ, ಶ್ರೀನಿವಾಸ್ ಹಾಗೂ ಭಾವನಾ ಹತ್ವಾರ್ ಅವರ ಏಕೈಕ ಪುತ್ರಿ. 

    ಸದ್ಯಕ್ಕೆ ಸಂತೋಷ್ ಬಾಯ್ಬಿಟ್ಟಿರುವ ಸತ್ಯ ಇಷ್ಟೆ. ಇದು ಲವ್ ಮ್ಯಾರೇಜಾ..? ಅರೇಂಜ್ ಮ್ಯಾರೇಜಾ..? ಗೊತ್ತಿಲ್ಲ. ಮೂಲತಃ ಬಳ್ಳಾರಿಯವರಾದರೂ ಸುರಭಿ ಇರುವುದು ಬೆಂಗಳೂರಿನಲ್ಲಿ. ಹೊಸ ಬಾಳಿನ ಹೊಸ್ತಿಲಲ್ಲಿ ನಿಂತಿರುವ ಸಂತೋಷ್‍ಗೆ ಶುಭ ಹಾರೈಸೋಣ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery