ಮದುವೆಯಾದ ಮೇಲೆ ಅಮೂಲ್ಯ ನಟನೆ ಮಾಡ್ತಾರಾ..? ಅಥವಾ ಸಂಪೂರ್ಣ ಗೃಹಿಣಿಯಾಗಿರ್ತಾರಾ..? ಅನ್ನೋ ಪ್ರಶ್ನೆಗಳಿಗೆ ನಟನೆ ಮುಂದುವರೆಸ್ತೀನಿ ಅನ್ನೋ ಉತ್ತರ ಕೊಟ್ಟಿದ್ದರು ಅಮೂಲ್ಯ. ಆದರೆ, ಹೊಸ ಚಿತ್ರಗಳನ್ನು ಒಪ್ಪಿಕೊಂಡ ಸುದ್ದಿಗಳ್ಯವುವೂ ಇರಲಿಲ್ಲ. ಹಾಗಾದರೆ ಅಮೂಲ್ಯ ಏನ್ ಮಾಡ್ತಿದ್ದಾರೆ ಅಂತಾ ಹುಡುಕಿಕೊಂಡು ಹೊರಟಾಗ, ಅಮೂಲ್ಯ ಅವರ ಸಮಾಜಸೇವೆಯ ಬಗ್ಗೆ ಗೊತ್ತಾಗಿದೆ.
ವನಿತಾ ವಿಕಾಸ್ ಅನ್ನೋ ಸಂಸ್ಥೆಯ ಜೊತೆ ಗುರುತಿಸಿಕೊಂಡಿರುವ ಅಮೂಲ್ಯ, ದುಡಿಯಲು ಆಸಕ್ತಿಯಿರುವ ಮಹಿಳೆಯರನ್ನು ಗುರುತಿಸಿ, ತರಬೇತಿ ನೀಡಿ ಉದ್ಯೋಗ ಕೊಡಿಸುವ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಸುಮಾರು 10 ಸಾವಿರ ಜನಕ್ಕಾದರೂ ಇದನ್ನು ತಲುಪಿಸಬೇಕು ಅನ್ನೋದು ಅಮೂಲ್ಯ ಅವರ ಬಯಕೆ. ಟೈಲರಿಂಗ್, ಬುಕ್‍ಬೈಂಡಿಂಗ್‍ನಂತಾ ಕೆಲಸಗಳ ತರಬೇತಿಗೆ ಈಗಾಗಲೇ ಚಾಲನೆಯನ್ನೂ ಕೊಡಿಸಿಬಿಟ್ಟಿದ್ದಾರೆ.
ಪತಿ ಜಗದೀಶ್ ಮತ್ತು ಮಾವ ರಾಮಚಂದ್ರ, ಅಮೂಲ್ಯ ಅವರ ಕೆಲಸಕ್ಕೆ ಸಂಪೂರ್ಣ ಬೆಂಬಲ ಕೊಟ್ಟಿದ್ದಾರೆ. ಹಾಗಂತ ರಾಜಕೀಯಕ್ಕೆ ಬರ್ತೀರಾ ಅಂದ್ರೆ, ಒಂದೇ ಮಾತಲ್ಲಿ ಇಲ್ಲ ಅಂತಾರೆ ಅಮೂಲ್ಯ. ಈಗಾಗಲೇ 8 ಬ್ಯಾಚ್‍ನಲ್ಲಿ ತರಬೇತಿಯನ್ನೂ ಕೊಡಿಸಿದ್ದಾರಂತೆ. ಅಮೂಲ್ಯ ಅವರ ಸಮಾಜಸೇವೆಯೂ ಯಶಸ್ವಿಯಾಗಲಿ.