ಐ ಲವ್ ಯು. ಆರ್.ಚಂದ್ರು ನಿರ್ದೇಶನದ ಉಪೇಂದ್ರ, ರಚಿತಾರಾಂ ಅಭಿನಯದ ಸಿನಿಮಾ. ಕನ್ನಡ ಹಾಗೂ ತೆಲುಗು ಎರಡೂ ಭಾಷೆಗಳಲ್ಲಿ ತಯಾರಾಗುತ್ತಿರುವ ಸಿನಿಮಾ, ಪ್ರೀತಿಯ ಬಗ್ಗೆ ಹೊಸ ಭಾಷ್ಯೆಯನ್ನೇ ಬರೆಯಲಿದೆ ಅಂತಿದ್ದಾರೆ ಚಂದ್ರು. ಎರಡೂ ಭಾಷೆಯಲ್ಲಿ ನಿರ್ಮಾಣವಾಗುತ್ತಿರುವ ಕಾರಣ, ಎರಡೂ ಭಾಷೆಯ ಕಲಾವಿದರನ್ನು ಸೇರಿಸಲಾಗುತ್ತಿದೆ. ಹೀಗಾಗಿ ಚಿತ್ರಕ್ಕೆ ತೆಲುಗು ಕಾಮಿಡಿ ಕಿಂಗ್ ಬ್ರಹ್ಮಾನಂದಂ ಎಂಟ್ರಿ ಕೊಟ್ಟಿದ್ದಾರೆ.
ಬ್ರಹ್ಮಾನಂದಂಗೆ ಕನ್ನಡದಲ್ಲಿ ಇದು 2ನೇ ಸಿನಿಮಾ. ಈ ಮೊದಲು ನಿನ್ನಿಂದಲೇ ಚಿತ್ರದಲ್ಲಿ ನಟಿಸಿದ್ದ ಬ್ರಹ್ಮಾನಂದಂ, 2ನೇ ಬಾರಿ ಕನ್ನಡ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಬ್ರಹ್ಮಾನಂದಂ ಅಷ್ಟೇ ಅಲ್ಲ, ಪೋಸಾನಿ ಕೃಷ್ಣಮುರಳಿ, ಸತ್ಯಬಾಬು ಮೊದಲಾದವರು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರದ ಚಿತ್ರೀಕರಣ ಬಿರುಸಿನಿಂದ ಸಾಗುತ್ತಿದೆ.