` america, - chitraloka.com | Kannada Movie News, Reviews | Image

america,

 • 'Kavalu Daari' Teaser To Be Launched In America

  kavalu daari teaser to be launchd in america

  The shooting for Rishi-Roshini Prakash starrer 'Kavalu Daari' is complete and the teaser of the film is all set to be launched on August 31st during the AKKA summit in America. Puneeth Rajakumar will be attending the summit as a chief guest and the teaser of his first production will be released there.

  'Kavalu Daari' is a thriller and is being directed by Hemanth Rao of 'Godhi Banna Sadharana Maikattu' fame. Hemanth  himself has written the story and screenplay for the film. 

  The film is being produced by Ashwini Puneeth Rajakumar under the PRK Productions banner. Charan Raj is the music director, while Advaitha Gurumurthy is the cameraman.

 • OverSeas

 • ಅಮೆರಿಕ, ಕೆನಡಾದಲ್ಲಿ ಮುಗುಳುನಗೆ ದಾಖಲೆ ಸಜ್ಜು

  mugulunage image

  ಯೋಗರಾಜ್ ಭಟ್ ಮತ್ತು ಗಣೇಶ್ ಪುನರ್‍ಮಿಲನದ ಮುಗುಳುನಗೆ ಈಗಾಗಲೇ ರಾಜ್ಯಾದ್ಯಂತ ಭರ್ಜರಿ ಸದ್ದು ಮಾಡುತ್ತಿದೆ. ಮುಂಗಾರು ಮಳೆಯ ಮೋಡಿ ಮತ್ತೆ ಸೃಷ್ಟಿಯಾಗುವ ಹಾದಿಯಲ್ಲಿದೆ. ಹೀಗಿರುವಾಗಲೇ ಮುಗುಳುನಗೆ ಅಮೆರಿಕ ಮತ್ತು ಕೆನಡಾದಲ್ಲಿ ರಿಲೀಸ್‍ಗೆ ರೆಡಿಯಾಗಿದೆ. ಕನ್ನಡದ ಹಲವು ಚಿತ್ರಗಳು ಈಗ ಅಮೆರಿಕ, ಕೆನಡಾ ಸೇರಿದಂತೆ ವಿದೇಶಗಳಲ್ಲಿ ರಿಲೀಸ್ ಆಗುವುದು ಹೊಸದೇನಲ್ಲವಲ್ಲ. ಇದರಲ್ಲೇನಿದೆ ವಿಶೇಷ ಅಂತೀರಾ. ವಿಶೇಷ ಇರೋದು ಇಲ್ಲೆ. ದಾಖಲೆ ಸಂಖ್ಯೆಯ ಸ್ಕ್ರೀನ್‍ಗಳಲ್ಲಿರಿಲೀಸ್ ಆಗುತ್ತಿರುವುದೇ ಮುಗುಳುನಗೆ ದಾಖಲೆ.

  ಅಮೆರಿಕವೊಂದರಲ್ಲೇ 50 ಸ್ಕ್ರೀನ್‍ಗಳಲ್ಲಿ ತೆರೆ ಕಾಣುತ್ತಿರುವ ಮುಗುಳುನಗೆ, ಕೆನಡಾದಲ್ಲಿ ಕೂಡಾ 4 ಸ್ಕ್ರೀನ್‍ಗಳಲ್ಲಿ ತೆರೆ ಕಾಣುತ್ತಿದೆ.

  ಅಮೆರಿಕದ ಲಾಸ್ ಏಂಜಲೀಸ್, ಸೀಟಲ್, ಡಲ್ಲಾಸ್, ಹೂಸ್ಟನ್, ಡೆಟ್ರಾಯಿಟ್, ಒರ್ಲಾಂಡೋ, ವಾಷಿಂಗ್ಟನ್ ಡಿಸಿ, ಅಟ್ಲಾಂಟಾನ್ಯೂಯಾರ್ಕ್, , ಆಸ್ಟಿನ್ ಮೊದಲಾದ ನಗರಳಲ್ಲಿ ಹಾಗೂ ಕೆನಡಾದ ಒಟ್ಟಾವ, ಮಾಂಟ್ರಿಯಲ್, ಟೊರಂಟೋ ಹಾಗೂ ಕ್ಯಾಲ್‍ಗ್ರೇ ನಗರಗಳಲ್ಲಿ ತೆರೆ ಕಾಣುತ್ತಿದೆ.

  ಸೈಯದ್ ಸಲಾಮ್, ಗೋಲ್ಡನ್ ಮೂವೀಸ್ ಹಾಗೂ ಯೋಗರಾಜ್ ಮೂವೀಸ್ ನಿರ್ಮಾಣದ ಮುಗುಳುನಗೆ, ಕರ್ನಾಟಕದಲ್ಲಿ ದಾಖಲೆ ಬರೆಯುತ್ತಿದೆ. ಅಮೆರಿಕದಲ್ಲಿ ಮುಗುಳುನಗೆ ಚಿತ್ರವನ್ನು ವಿತರಣೆ ಮಾಡುತ್ತಿರುವುದು ಕಸ್ತೂರಿ ಮೀಡಿಯಾ, ಡ್ರೀಮ್ಸ್ ಮೀಡಿಯಾ ಹಾಗೂ ತಾನಿಶ್ ಮೀಡಿಯಾ. 

  ಕಳೆದ 2 ವರ್ಷಗಳಲ್ಲಿ ಅಮೆರಿಕದಲ್ಲಿ ಕನ್ನಡ ಸಿನಿಮಾಗಳ ಪ್ರದರ್ಶನ ಚೆನ್ನಾಗಿ ನಡೆಯುತ್ತಿದೆ. ಇದುವರೆಗಿನ ಅಮೆರಿಕದಲ್ಲಿ ಸೂಪರ್ ಹಿಟ್ ಆಗಿರುವ ಕನ್ನಡ ಚಿತ್ರ ಎಂಬ ದಾಖಲೆ, ಈಗಲೂ ರಂಗಿತರಂಗದ ಹೆಸರಲ್ಲಿದೆ. ಆ ದಾಖಲೆಯನ್ನು ಮಗುಳುನಗೆ ಮುರಿಯುತ್ತಾ..?

  Related Articles :-

  Mugulu Nage Record Release In USA and Canada

 • ಅಮೆರಿಕಕ್ಕೆ ಹಾರಿಬಿಟ್ರು ರಾಗಿಣಿ, ಶರಣ್

  sharan and ragini flies to america

  ಕಾಮಿಡಿ ಕಿಂಗ್ ಆಗಿರುವ ಶರಣ್, ತುಪ್ಪದ ಹುಡುಗಿ ರಾಗಿಣಿ ಜೊತೆ ಅಮೆರಿಕಕ್ಕೆ ಹಾರಿಬಿಟ್ಟಿದ್ದಾರೆ. ಜೋಡಿಯಾಗಿ. ಚಿತ್ರವೊಂದರ ಶೂಟಿಂಗ್‍ಗೆ ಜೊತೆ ಜೊತೆಯಾಗಿ ತೆರಳಿದ್ದಾರೆ ರಾಗಿಣಿ ಮತ್ತು ಶರಣ್.

  ಶರಣ್ ಮತ್ತು ರಾಗಿಣಿ ಹೊಸ ಚಿತ್ರವೊಂದರಲ್ಲಿ ಜೊತೆಯಾಗಿ ನಟಿಸುತ್ತಿದ್ದು, ಚಿತ್ರಕ್ಕಿನ್ನೂ ಹೆಸರಿಟ್ಟಿಲ್ಲ. ಮಲಯಾಳಂನ ಟೂ ಕಂಟ್ರಿಸ್ ಚಿತ್ರದ ರೀಮೇಕ್ ಆಗಿರುವ ಚಿತ್ರ ಅದು. ಬಹುಭಾಗದ ಚಿತ್ರೀಕರಣ ಅಮೆರಿಕದಲ್ಲೇ ನಡೆಯಲಿದೆ.

  ಈ ಹಿಂದೆ ವಿಕ್ಟರಿ ಚಿತ್ರದಲ್ಲಿ ಅಕ್ಕ ನಿನ್ ಮಗ್ಳು ನಂಗೆ ಚಿಕ್ಕೋಳಗಲ್ವಾ ಎಂಬ ಹಾಡಿನಲ್ಲಿ ಶರಣ್ ಜೊತೆ ಹೆಜ್ಜೆ ಹಾಕಿದ್ದ ರಾಗಿಣಿ, ಈಗ ಶರಣ್‍ಗೇ ನಾಯಕಿಯಾಗಿರೋದು ಇಂಟ್ರೆಸ್ಟಿಂಗ್. ಈ ಚಿತ್ರದ ಚಿತ್ರೀಕರಣ ಅಮೆರಿಕದಲ್ಲೇ ಸುಮಾರು 1 ತಿಂಗಳು ನಡೆಯಲಿದೆ.

 • ಚಂದ್ರಮುಖಿ ಭಾವನಾಗೆ ಅಮೆರಿಕದಲ್ಲಿ ಪ್ರಶಸ್ತಿ

  bhavana ramanna honored

  ಚಂದ್ರಮುಖಿ ಎಂದೇ ಕನ್ನಡಿಗರ ಹೃದಯದಲ್ಲಿ ನೆಲೆ ನಿಂತಿರುವ ನಟಿ ಭಾವನಾ ರಾಮಣ್ಣ ಅಮೆರಿಕದಲ್ಲಿ ಮೇರಿಲ್ಯಾಂಡ್‍ನಲ್ಲಿ ಪ್ರತಿಷ್ಟಿತ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅಮೆರಿಕದ ಮೇರಿಲ್ಯಾಂಡ್ ಪ್ರಾಂತ್ಯದ ಗವರ್ನರ್ `ವರ್ಷದ ಭಾರತೀಯ ಅತ್ಯುತ್ತಮ ನಟಿ' ಪ್ರಶಸ್ತಿ ನೀಡಿ ಗೌರವಿಸಿದ್ರು. ಮೇರಿಲ್ಯಾಂಡ್ ಮತ್ತು ವಾಷಿಂಗ್ಟನ್ ಡಿಸಿಯ ಕಾವೇರಿ ಕನ್ನಡ ಅಸೋಸಿಯೇಷನ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾವನಾ ರಾಮಣ್ಣ ಅವರಿಗೆ ಈ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಾಯ್ತು.

  ತುಳು ಚಿತ್ರೋದ್ಯಮದಲ್ಲಿ ಚಿತ್ರಜೀವನ ಆರಂಭಿಸಿದ ಭಾವನಾ, ಚಂದ್ರಮುಖಿ ಪ್ರಾಣಸಖಿ, ನೀ ಮುಡಿದಾ ಮಲ್ಲಿಗೆ ಚಿತ್ರಗಳ ಮೂಲಕ ಹೆಸರು ಗಳಿಸಿದ ತಾರೆ. ಶಾಂತಿ ಚಲನಚಿತ್ರಕ್ಕಾಗಿ ರಾಜ್ಯ ಪ್ರಶಸ್ತಿಯನ್ನೂ ಪಡೆದಿರುವ ಭಾವನಾ, ಫಿಲಂಫೇರ್ ಸೇರಿದಂತೆ ಹಲವು ಪ್ರಶಸ್ತಿ ಪುರಸ್ಕಾರಗಳಿಗೆ ಪಾತ್ರರಾಗಿರುವ ನಟಿ. ನಾಟ್ಯ ಕಲಾವಿದೆಯೂ ಹೌದು. ಹೂವು ಪ್ರತಿಷ್ಟಾನದ ಮೂಲಕ ದೇಶದ ವಿವಿಧ ಭಾಗಗಳಲ್ಲಿ ಕನ್ನಡ ಕಲಾವಿದರನ್ನು ಪರಿಚಯಿಸುತ್ತಿದ್ದಾರೆ ಭಾವನಾ.

  ಸುಧಾಕರ್ ಗಂದೆ ಅವರೊಂದಿಗೆ ಲೆಕ್ಸಿಕನ್ ಮೋಶನ್ ಪಿಕ್ಚರ್ಸ್ ಜೊತೆ ಹೋಂಟೌನ್ಸ್ ಪ್ರೊಡಕ್ಷನ್ಸ್ ಬ್ಯಾನರ್‍ನಲ್ಲಿ ನಿರುತ್ತರ ಸಿನಿಮಾ ನಿರ್ಮಿಸಿದ್ದ ಭಾವನಾ, ನಿರ್ಮಾಪಕಿಯೂ ಹೌದು. ಆಸ್ಕರ್ ಪುರಸ್ಕøತ ರಸೂಲ್ ಪೂಕುಟ್ಟಿಯವರನ್ನು ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕರೆತಂದವರು ಭಾವನಾ.

  ಒಬ್ಬ ಕಲಾವಿದೆಯಾಗಿ ಕನ್ನಡ ಚಿತ್ರ ರಸಿಕರ ಹೃದಯ ಗೆದ್ದಿರುವ ಭಾವನಾ, ಈಗ ಅಮೆರಿಕದಲ್ಲಿ ಪ್ರತಿಷ್ಟಿತ ಪುರಸ್ಕಾರಕ್ಕೆ ಭಾಜನರಾಗಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery