`ನಮಗಾಗಿ' ರಾಧಿಕಾ-ವಿಜಯ್ ರಾಘವೇಂದ್ರ ಜೋಡಿಯ ಸಿನಿಮಾ. ನಿನಗಾಗಿ ಚಿತ್ರದ ನಂತರ, ರಾಧಿಕಾ ಮತ್ತು ವಿಜಯ್ ರಾಘವೇಂದ್ರ ಒಟ್ಟಿಗೇ ನಟಿಸಿದ್ದ ಸಿನಿಮಾ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ಇಷ್ಟು ಹೊತ್ತಿಗೆ ನಮಗಾಗಿ ಸಿನಿಮಾ ರಿಲೀಸ್ ಆಗಿ 2 ವರ್ಷಗಳಾಗುತ್ತಿತ್ತು. ಈಗ ಚಿತ್ರವೇ ಸ್ಥಗಿತಗೊಂಡಿರುವ ಸುದ್ದಿ ಬಂದಿದೆ.
ಸ್ವತಃ ಚಿತ್ರದ ನಿರ್ದೇಶಕ ರಘುರಾಮ್ ಇನ್ನು ನನಗೂ ಚಿತ್ರಕ್ಕೂ ಸಂಬಂಧವಿಲ್ಲ ಎಂದು ಹೇಳಿಬಿಟ್ಟಿದ್ದಾರೆ. ಚಿತ್ರ ಶುರುವಾದ ಕೆಲವೇ ದಿನಗಳಲ್ಲಿ ನಿರ್ಮಾಪಕರಿಗೆ ಸಮಸ್ಯೆಯಾಗಿ ಚಿತ್ರವನ್ನು ನಿಲ್ಲಿಸಿದರು. ನಂತರ, ನಿರ್ಮಾಣದ ಹೊಣೆಯನ್ನು ಸ್ವತಃ ರಾಧಿಕಾ ಕುಮಾರಸ್ವಾಮಿ ಹೊತ್ತುಕೊಂಡರು.
ಆದರೆ, ರಾಧಿಕಾ ನಿರ್ಮಾಪಕಿಯಾದ ನಂತರವೂ ಚಿತ್ರ ಅದೇಕೋ ಟೇಕಾಫ್ ಆಗಲೇ ಇಲ್ಲ. ಏನು ಕಾರಣ ಎನ್ನುವುದೂ ಗೊತ್ತಾಗಲಿಲ್ಲ. ಚಿತ್ರಕ್ಕಾಗಿ 3 ವರ್ಷ ಕಾದು, ಈಗ ಹೊರಬರುತ್ತಿದ್ದೇನೆ. ನಮಗಾಗಿ ಮುಗಿದ ಅಧ್ಯಾಯ ಎಂದಿದ್ದಾರೆ ರಘುರಾಮ್.
ಇಷ್ಟಕ್ಕೂ ರಾಧಿಕಾ ಕುಮಾರಸ್ವಾಮಿ ಚಿತ್ರ ನಿರ್ಮಾಣದಿಂದ ಹಿಂದೆ ಸರಿದಿದ್ದು ಏಕೆ..? ಏನು ಕಾರಣವೋ.. ಏನೋ..