` sruthi hariharan - chitraloka.com | Kannada Movie News, Reviews | Image

sruthi hariharan

 • ರೀಲ್‍ನಲ್ಲಿ ರಿಯಲ್ ಪ್ರೇಮಿಗಳು

  sruthi hariharn acts with her beau

  ಶೃತಿ ಹರಿಹರನ್. ಈ ಕಲಾವಿದೆ ನಟನೆಯಲ್ಲಷ್ಟೇ ಅಲ್ಲ, ಪರ್ಸನಲ್ ಲೈಫ್‍ನಲ್ಲೂ ಬೋಲ್ಡ್ & ಬ್ಯೂಟಿಫುಲ್. ಅವರು ತಮ್ಮ ಲವ್ ಸ್ಟೋರಿಯನ್ನು ಕೂಡಾ ಮುಚ್ಚಿಟ್ಟವರಲ್ಲ. ಪರ್ಸನಲ್ ವಿಚಾರಗಳನ್ನು ಎಷ್ಟು ಬೇಕೋ ಅಷ್ಟು ಹೇಳಿ ಸುಮ್ಮನಿರುವ ಶೃತಿ ಹರಿಹರನ್, ಇದೇ ಮೊದಲ ಬಾರಿಗೆ ತಮ್ಮ ರಿಯಲ್ ಪ್ರಿಯತಮನ ಜೊತೆ ತೆರೆ ಹಂಚಿಕೊಂಡಿದ್ದಾರೆ. ಅಫ್‍ಕೋರ್ಸ್, ಸಿನಿಮಾದಲ್ಲಿ ಅಲ್ಲ, ಮ್ಯೂಸಿಕ್ ಆಲ್ಬಂನಲ್ಲಿ.

  ರಾಮ್‍ಕುಮಾರ್ ಅವರ ಜೊತೆ ಸುಮಾರು 8 ವರ್ಷಗಳಿಂದ ಪ್ರೀತಿಯಲ್ಲಿರುವ ಶೃತಿ, ಪ್ರೇಮ ಅನ್ನೋ ವಿಡಿಯೋ ಆಲ್ಬಂನಲ್ಲಿ ಒಟ್ಟಿಗೇ ಕಾಣಿಸಿಕೊಂಡಿದ್ದಾರೆ. ಗೊಮ್ಮಟೇಶ್ ಉಪಾಧ್ಯ ನಿರ್ದೇಶನದ ಆಲ್ಬಂಗೆ ಫಣಿ ಕಲ್ಯಾಣ್ ಸಂಗೀತವಿದೆ.

  ರಾಮ್ ಜೊತೆ ನಟಿಸೋಕೆ ಕಷ್ಟವೇನೂ ಆಗಲಿಲ್ಲ. ಅವರ ಜೊತೆ ಮ್ಯೂಸಿಕ್ ಕ್ಲಾಸ್‍ಗಳಲ್ಲಿ ಭಾಗಿಯಾಗಿದ್ದೆ. ಜೊತೆಗೆ 8 ವರ್ಷದ ಪ್ರೀತಿ. ಹೀಗಾಗಿ ಎಲ್ಲವೂ ಸುಲಭವಾಗಿತ್ತು ಎಂದು ಹೇಳಿದ್ದಾರೆ ಶೃತಿ ಹರಿಹರನ್

 • ವಿಲನ್ ಚಿತ್ರದಿಂದ ಹೊರಬಿದ್ದರಾ ಶ್ರುತಿ ಹರಿಹರನ್..?

  actress sruthi hariharan

  ದಿ ವಿಲನ್ ಚಿತ್ರದ ಶೂಟಿಂಗ್ ನಡೆಯುತ್ತಿರುವಾಗಲೇ ಚಿತ್ರತಂಡದಿಂದ ನಟಿ ಶ್ರುತಿ ಹರಿಹರನ್ ಹೊರಬಿದ್ದಿರುವ ಸುದ್ದಿ ಬರುತ್ತಿದೆ. ಚಿತ್ರದಲ್ಲಿ ಶ್ರುತಿ ಹರಿಹರನ್, ಶಿವರಾಜ್ ಕುಮಾರ್ ಜೋಡಿಯಾಗಿ ನಟಿಸಬೇಕಿತ್ತು. ಅದು ಹಳ್ಳಿಯಲ್ಲಿರುವಾಗ ಶಿವರಾಜ್ ಕುಮಾರ್ ಅವರನ್ನು ಪ್ರೀತಿಸುವ ಹುಡುಗಿಯ ಪಾತ್ರ. ಕಥೆ ಇಷ್ಟವಾಗಿದ್ದ ಕಾರಣ, ಚಿಕ್ಕ ಪಾತ್ರವಾದರೂ ನಟಿಸಲು ಶ್ರುತಿ ಒಪ್ಪಿದ್ದರಂತೆ.

  ಈಗ ಬಂದಿರುವ ಮಾಹಿತಿ ಪ್ರಕಾರ, ನಿರ್ದೇಶಕ ಪ್ರೇಮ್, ಸಿನಿಮಾದ ಕಥೆಯಲ್ಲಿ ಶ್ರುತಿ ಅವರ ಪಾತ್ರವನ್ನೇ ತೆಗೆದಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ಸಿನಿಮಾ ತಂಡದಿಂದ ಶ್ರುತಿ ಹರಿಹರನ್ ಹೊರಬಿದ್ದಿದ್ದಾರಂತೆ. ಚಿತ್ರದ ಚಿತ್ರೀಕರಣ ಜೋರಾಗಿ ನಡೆಯುತ್ತಿದ್ದು, ಇನ್ನೂ 25 ದಿನಗಳ ಶೂಟಿಂಗ್ ಬಾಕಿ ಇದೆ. ಎಲ್ಲವೂ ಅಂದುಕೊಂಡಂತೆ ಆದರೆ, ವರಮಹಾಲಕ್ಷ್ಮಿ ಹಬ್ಬಕ್ಕೆ ಸಿನಿಮಾ ರಿಲೀಸ್ ಆಗಬಹುದು.

 • ಶೃತಿ V/s ಅರ್ಜುನ್ ವಿವಾದವನ್ನು ಅಂಬರೀಷ್ ಬಗೆಹರಿಸ್ತಾರಾ..?

  will ambareesh resolve sruthi hariharan's arjun sarja's issue

  ಶೃತಿ ಹರಿಹರನ್ ಮತ್ತು ಅರ್ಜುನ್ ಸರ್ಜಾ ವಿವಾದ ಈಗ ಚಲನಚಿತ್ರ ವಾಣಿಜ್ಯ ಮಂಡಳಿ ಮೆಟ್ಟಿಲೇರಿದೆ. ಅರ್ಜುನ್ ಸರ್ಜಾ ಅವರ ಮಾವ ಕಲಾತಪಸ್ವಿ ರಾಜೇಶ್, ಶೃತಿ ವಿರುದ್ಧ ದೂರು ನೀಡಿದ್ದಾರೆ. ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಲು ಮುಂದಾಗಿರುವ ವಾಣಿಜ್ಯ ಮಂಡಳಿ, ಸಂಧಾನ ಸಮಿತಿ ರಚಿಸಲು ಮುಂದಾಗಿದೆ. ಮಂಡಳಿಯ ಪದಾಧಿಕಾರಿಗಳ ಸಭೆ ನಂತರ ಫಿಲಂಚೇಂಬರ್ ಅಧ್ಯಕ್ಷ ಎಸ್.ಎ.ಚಿನ್ನೇಗೌಡ ಈ ನಿರ್ಧಾರ ಪ್ರಕಟಿಸಿದ್ದಾರೆ.

  ವಿವಾದ ಬಗೆಹರಿಸಲು ಸಂಧಾನ ಸಮಿತಿ ಸೂಕ್ತ ಎನ್ನುವುದು ನಮ್ಮ ಅಭಿಪ್ರಾಯ. ಇಬ್ಬರಿಗೂ ನ್ಯಾಯ ಸಿಗಲಿದೆ ಎನ್ನುವ ನಂಬಿಕೆ ನಮಗಿದೆ. ಸಂಧಾನ ಸಮಿತಿ ಧಿಕ್ಕರಿಸಿ ಕೋರ್ಟ್‍ಗೆ ಹೋದರೆ, ಇಡೀ ಪ್ರಕರಣದಿಂದ ಮಂಡಳಿ ಅಂತರ ಕಾಯ್ದುಕೊಳ್ಳಲಿದೆ ಎಂದು ಹೇಳಿದ್ದಾರೆ ಚಿನ್ನೇಗೌಡ.

  ಕಲಾವಿದರ ಸಂಘದ ಅಧ್ಯಕ್ಷ ಅಂಬರೀಷ್, ನಿರ್ಮಾಪಕರ ಸಂಘದ ಅಧ್ಯಕ್ಷ ಮುನಿರತ್ನ, ಹಿರಿಯ ನಟಿ ಬಿ.ಸರೋಜಾದೇವಿ, ಲೋಕನಾಥ್ ಸೇರಿದಂತೆ ಹಿರಿಯತೇ ಈ ಸಮಿತಿಯಲ್ಲಿ ಇರುತ್ತಾರೆ ಎಂದು ಚಿನ್ನೇಗೌಡ ತಿಳಿಸಿದ್ದಾರೆ. ಚಿತ್ರರಂಗದ ಇಂತಹ ವೈಮನಸ್ಯಗಳು ಒಂದೇ ಮಾತಿನಲ್ಲಿ ಬಗೆಹರಿಸಿದ ಖ್ಯಾತಿ ಹೊಂದಿರುವ ಅಂಬರೀಷ್, ಈ ವಿವಾದ ಬಗೆಹರಿಸುತ್ತಾರಾ..? ವಿವಾದ ಮುಗಿಯುತ್ತಾ..? ಕಾದು ನೋಡಬೇಕು.

 • ಶೃತಿ ಆರೋಪಕ್ಕೆ ಧ್ರುವ ಸರ್ಜಾ ಕೆಂಡಾಮಂಡಲ

  dhruva expresse anger against sruthi hariharan

  ನನ್ನನ್ನು ಅರ್ಜುನ್ ಸರ್ಜಾ ಕೆಟ್ಟದಾಗಿ ನಡೆಸಿಕೊಂಡರು. ಬಲವಂತವಾಗಿ ತಬ್ಬಿದರು. ಮೈಮೇಲೆ ಕೆಟ್ಟದಾಗಿ ಕೈ ಆಡಿಸಿದ್ರು. ರೆಸಾರ್ಟ್‍ಗೆ ಕರೆದರು ಅನ್ನೊದು ಶೃತಿ ಹರಿಹರನ್ ಆರೋಪ. ಈ ಕುರಿತು ಅರ್ಜುನ್ ಸರ್ಜಾ ಬೆನ್ನಿಗೆ ನಿಂತಿರೋದು ಅವರ ಕುಟುಂಬ. ಧ್ರುವ ಸರ್ಜಾ ಅಂತೂ ಕೆಂಡಾಮಂಡಲವಾಗಿ ಹೋಗಿದ್ದಾರೆ.

  ನಾನು ಚಿಕ್ಕ ವಯಸ್ಸಿನಿಂದ ನನ್ನ ಅಂಕಲ್‍ನನ್ನು ನೋಡಿಕೊಂಡೇ ಬಂದಿದ್ದೇನೆ. ಅವರೇನು ಅನ್ನೋದು ನನಗೆ ಚೆನ್ನಾಗಿ ಗೊತ್ತು. ನಾಯಿ, ನರಿ, ಕ್ರಿಮಿ, ಕೀಟಗಳು ಹೇಳಿದ್ದನ್ನೆಲ್ಲ ಕೇಳುವ ಅಗತ್ಯ ನನಗಿಲ್ಲ. ನಮಗೆ ಹೀಗೆಲ್ಲ ಹೆಣ್ಣು ಮಕ್ಕಳನ್ನು ಮುಂದಿಟ್ಟುಕೊಂಡು ಆಡೋಕೆ ಬರಲ್ಲ. ಆಕೆಯ ಹಿಂದೆ ಯಾರಿದ್ದಾರೋ.. ಅವರು ಇರುವ ಜಾಗಕ್ಕೆ ನಾನು ಒಬ್ಬನೇ ಹೋಗ್ತೀನಿ. ಅದೇನಾಗುತ್ತೋ ನೋಡೇ ಬಿಡೋಣ. ಕೈ ಕೈ ಮಿಲಾಯಿಸಿಬಿಡೋಣ ಎಂದಿದ್ದಾರೆ ಧ್ರುವ ಸರ್ಜಾ.

 • ಶೃತಿ ಆ್ಯಕ್ಟಿಂಗ್ ಕಲಿತುಕೊಳ್ಳಲಿ - ಮುನಿರತ್ನ

  muniratna blasts sruthi hariharan

  ಶೃತಿ ಹರಿಹರನ್ ಮೊದಲು ನಟನೆಯನ್ನು ಚೆನ್ನಾಗಿ ಕಲಿತುಕೊಳ್ಳಲಿ. ಘಟನೆ ನಡೆದಿದ್ದರೆ, ಆ ದಿನವೇ ಹೊರಬಂದು ಹೇಳಬೇಕಿತ್ತು. 1 ವರ್ಷ ಸುಮ್ಮನಿದ್ದು ಈಗ ಏಕೆ ಆರೋಪಿಸುತ್ತಿದ್ದಾರೆ. ಅವರ ಸಿನಿಮಾಗಳು ಮಾರ್ನಿಂಗ್ ಶೋನೇ ಭರ್ತಿಯಾಗಲ್ಲ. ಸುಮ್ಮನೆ ಇಲ್ಲದ ಆರೋಪಗಳನ್ನು ಮಾಡೋ ಬದಲು, ಆಕ್ಟಿಂಗ್ ಕಲಿಯೋದರತ್ತ ಗಮನ ಕೊಡಲಿ. ಶೃತಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವಂತೆ ಅರ್ಜುನ್‍ಗೆ ನಾನೇ ಹೇಳುತ್ತೇನೆ ಎಂದಿದ್ದಾರೆ ನಿರ್ಮಾಪಕ ಮುನಿರತ್ನ.

  ಅರ್ಜುನ್ ಸರ್ಜಾ ವಿರುದ್ಧ ಕೇಳಿ ಬಂದ ಕಿರುಕುಳದ ಆರೋಪಕ್ಕೆ ನಿರ್ಮಾಪಕರ ಸಂಘದ ಅಧ್ಯಕ್ಷರೂ ಆಗಿರುವ ಮುನಿರತ್ನ ನೀಡಿರುವ ಪ್ರತಿಕ್ರಿಯೆ ಇದು. 

 • ಶೃತಿ ಬೆಂಬಲಕ್ಕೆ ಪ್ರಕಾಶ್ ರೈ

  prakash raj stands by sruthi hariharan

  ಶೃತಿ ಹರಿಹರನ್ ಬೆಂಬಲಕ್ಕೆ ನಟ ಪ್ರಕಾಶ್ ರೈ ನಿಂತಿದ್ದಾರೆ. ಶೃತಿ ಹರಿಹರನ್ ಅವರ ನೋವನ್ನು ನಾವು ಅರ್ಥ ಮಾಡಿಕೊಳ್ಳಬೇಕಿದೆ. ಅರ್ಜುನ್ ಸರ್ಜಾ ದೊಡ್ಡತನ ಮೆರೆದು ಕ್ಷಮೆ ಕೇಳುವುದು ಒಳ್ಳೆಯದು. ಅದು ದೊಡ್ಡತನದ ಲಕ್ಷಣ ಎಂದಿದ್ದಾರೆ ಪ್ರಕಾಶ್ ರೈ.

  ಶೃತಿ ಹರಿಹರನ್ ವಿಚಾರ ಕುರಿತಂತೆ ಪ್ರಕಾಶ್ ರೈ, ಅರಿತೋ ಅರಿಯದೆಯೋ.. ನಾವು ಗಂಡಸರು ಹೆಣ್ಣು ಮಕ್ಕಳ ಬೇಕು ಬೇಡಗಳ ಬಗ್ಗೆ ಸೂಕ್ಷ್ಮತೆ ಕಳೆದುಕೊಂಡಿದ್ದೇವೆ. ಈ ಮೀಟೂ ಅಭಿಯಾನ ಮುಂದಿನ ದಿನಗಳಲ್ಲಿ ಹೆಣ್ಣು ಮಕ್ಕಳ ಮೇಲಿನ ಅವಮಾನ.. ದೌರ್ಜನ್ಯಗಳಿಗೆ ಅಂತ್ಯ ಹಾಡಲಿ ಎಂದು ಆಶಯ ವ್ಯಕ್ತಪಡಿಸಿದ್ದಾರೆ ಪ್ರಕಾಶ್ ರೈ.

 • ಶೃತಿ ಮದುವೆಯ ಗುಟ್ಟು ರಟ್ಟಾಗಿದ್ದು ಹೇಗೆ..?

  is sruthi hariharan married

  ಶೃತಿ ಹರಿಹರನ್ ಮದುವೆಯಾಗಿದ್ದಾರಾ..? ಇಲ್ಲವಾ..? ಇದು ಚಿತ್ರರಂಗದಲ್ಲಿ ಅದರಲ್ಲೂ ಗಾಂಧಿನಗರದಲ್ಲಿ ತುಂಬಾ ದಿನಗಳಿಂದ ಚಾಲ್ತಿಯಲ್ಲಿದ್ದ ಗಾಸಿಪ್. ನಿಜಾನಾ ಎಂದು ಪ್ರಶ್ನಿಸಿದರೆ, ಶೃತಿ ಹರಿಹರನ್ ಇಲ್ಲ ಎಂದೇ ಉತ್ತರಿಸುತ್ತಿದ್ದರು. ರಿಲೇಶನ್‍ಶಿಪ್ ವಿಷಯವನ್ನೇನೂ ನಿರಾಕರಿಸುತ್ತಿರಲಿಲ್ಲ. ರಾಮ್ ಎಂಬುವವರ ಜೊತೆ ಮದುವೆಯಾಗಲಿದ್ದೇನೆ ಎಂದು ಹೇಳುತ್ತಿದ್ದರು. 

  ಆದರೆ, ಈಗ ಅರ್ಜುನ್ ಸರ್ಜಾ ವಿರುದ್ಧ ದೂರು ಕೊಡುವಾಗ ಶೃತಿ ಹರಿಹರನ್ ಈಗಾಗಲೇ ಮದುವೆಯಾಗಿದ್ದಾರೆ ಎಂಬ ಸಂಗತಿ ಬೆಳಕಿಗೆ ಬಂದಿದೆ. ದೂರು ಕೊಡುವ ವೇಳೆ ಶೃತಿ ಹರಿಹರನ್, ಶ್ರೀಮತಿ ಎಂದು ಬರೆದಿದ್ದರು. ಆಗ ಪೊಲೀಸರು ನಿಮಗೆ ಮದುವೆಯಾಗಿದೆಯೇ..? ಎಂದು ಕೇಳಿದರು. ಹೌದು ಎಂದಿದ್ದಾರೆ ಶೃತಿ. ಹಾಗಾದರೆ ಅದನ್ನು ಕಂಪ್ಲೇಂಟ್‍ನಲ್ಲಿ ನಮೂದಿಸಿ ಎಂದು ಹೇಳಿದ ಮೇಲೆ ವೈಫ್ ಆಫ್ ರಾಮ್‍ಕುಮಾರ್ ಎಂದು ನಮೂದಿಸಿದ್ದಾರೆ. 

  ಶೃತಿ ಅವರ ಪತಿ ರಾಮ್‍ಕುಮಾರ್, ಕೇರಳದವರೇ. ಕಳರಿಯಪಟ್ಟು ಪಟು. ಶೃತಿ ಮತ್ತು ರಾಮ್ ಇಬ್ಬರೂ ಕೂಡಾ ಪ್ರೇಮ ಎಂಬ ಮ್ಯೂಸಿಕ್ ವಿಡಿಯೋದಲ್ಲಿ ಒಟ್ಟಿಗೇ ನಟಿಸಿದ್ದಾರೆ. 

 • ಶೃತಿ ಮೀಟೂ ಏಟಿಗೆ ಐಶ್ವರ್ಯಾ ಸರ್ಜಾ ತಿರುಗೇಟು

  aishwarya sarja questions sruthi hariharan

  ಅರ್ಜುನ್ ಸರ್ಜಾ ಕಿರುಕುಳ ನೀಡಿದ್ದ ಎಂಬ ಶೃತಿ ಹರಿಹರನ್ ಆರೋಪಕ್ಕೆ ಅರ್ಜುನ್ ಸರ್ಜಾ ಮಗಳು ಐಶ್ವರ್ಯ ಸರ್ಜಾ ತಿರುಗೇಟು ಕೊಟ್ಟಿದ್ದಾರೆ. ನನ್ನ ತಂದೆ ಏನೆಂದು ನನಗೆ ಗೊತ್ತಿದೆ. ಅವರು ಹೆಣ್ಣು ಮಕ್ಕಳಿಗೆ ಎಷ್ಟು ಗೌರವ ಕೊಡುತ್ತಾರೆ ಅನ್ನೋದು ನನಗೆ ಗೊತ್ತು ಎಂದಿದ್ದಾರೆ ಐಶ್ವರ್ಯ. 

  ಹೀಗೆ ಹೇಳುವ ಐಶ್ವರ್ಯ ಶೃತಿಗೆ ಕೆಲವೊಂದು ಪ್ರಶ್ನೆ ಕೇಳಿದ್ದಾರೆ. ಘಟನೆ ಆದ ದಿನ ಶೃತಿ ಮಾತನಾಡಿಲ್ಲ. ಪ್ರತಿಭಟಿಸಿಯೂ ಇಲ್ಲ. ದೂರನ್ನೂ ಕೊಟ್ಟಿಲ್ಲ. ಅಲ್ಲದೆ ಚಿತ್ರದ ಪ್ರೀಮಿಯರ್ ಶೋನಲ್ಲಿ ನನಗೆ ಸಿಕ್ಕಾಗ ಶೃತಿ ಐಶ್ವರ್ಯ ಬಳಿ ``ನಿಮ್ಮ ತಂದೆ ಲೆಜೆಂಡ್. ಸೂಪರ್ ಸ್ಟಾರ್. ಅವರ ಜೊತೆ ಇನ್ನೂ ಹೆಚ್ಚು ಸಿನಿಮಾ ಮಾಡಬೇಕು'' ಎಂದು ಹೇಳಿಕೊಂಡಿದ್ದರು. ಅಷ್ಟೆಲ್ಲ ಕೆಟ್ಟ ಅನುಭವವಾಗಿದ್ದರೆ, ನನ್ನ ಬಳಿ ಆ ರೀತಿ ಏಕೆ ಹೇಳಬೇಕಿತ್ತು..? ಇದು ಐಶ್ವರ್ಯ ಸರ್ಜಾ ಕೇಳುತ್ತಿರುವ ಪ್ರಶ್ನೆ. ಅಷ್ಟೆ ಅಲ್ಲ, ಅದೇ ಚಿತ್ರದ ಸುದ್ದಿಗೋಷ್ಟಿಯಲ್ಲಿ ಅರ್ಜುನ್ ಸರ್ಜಾ ಅವರ ಜೊತೆ ಇನ್ನಷ್ಟು ಸಿನಿಮಾ ಮಾಡಬೇಕು ಎನ್ನುವುದು ನನ್ನ ಆಸೆ ಎಂದು ಹೇಳಿಕೊಂಡಿದ್ದ ಶೃತಿ ಹರಿಹರನ್ ಮಾತುಗಳೂ ಕೂಡಾ ಈಗ ಶೃತಿಯ ವಾದವನ್ನು ಒಪ್ಪದೇ ಇರುವವರ ಪ್ರಶ್ನೆಗೆ ಕಾರಣವಾಗಿವೆ.

 • ಶೃತಿ ಹರಿಹರನ್ ಉತ್ತರಿಸಲೇಬೇಕಾದ 5 ಪ್ರಶ್ನೆಗಳು..!

  sruthi hariharan is answerable to these 5 uestions

  ಶೃತಿ ಹರಿಹರನ್, ಅರ್ಜುನ್ ಸರ್ಜಾ ಹೆಸರಲ್ಲಿ ಕಿರುಕುಳದ  ಆರೋಪ ಮಾಡಿದ್ದಾರೆ. ಸರಿ. ಆಗ ನನಗೆ ಧೈರ್ಯ ಇರಲಿಲ್ಲ. ಈಗ ಮೀಟೂ ಅಭಿಯಾನದಿಂದಾಗಿ ಧೈರ್ಯ ಬಂದಿದೆ ಎನ್ನುವುದನ್ನೂ ಒಪ್ಪಬಹುದು. ಆದರೆ, ಶೃತಿ ಹರಿಹರನ್ ಕೆಲವೊಂದು ಪ್ರಶ್ನೆಗಳಿಗೆ ಉತ್ತರಿಸಲೇಬೇಕಿದೆ. 

  ಪ್ರಶ್ನೆ 1 : ಶೃತಿ ಹರಿಹರನ್, ತಮಗಾದ ಅನುಭವವನ್ನು ವಿಸ್ಮಯ ಚಿತ್ರತಂಡದ ನಿರ್ದೇಶಕ, ನಿರ್ಮಾಪಕ ಸೇರಿದಂತೆ ಯಾರೊಬ್ಬರ ಗಮನಕ್ಕೂ ತಂದಿಲ್ಲ ಏಕೆ..? ಶೃತಿ ಆರೋಪದ ಬಗ್ಗೆ ವಿಸ್ಮಯ ಚಿತ್ರತಂಡದ ಯಾರೊಬ್ಬರಿಗೂ ಮಾಹಿತಿ ಇಲ್ಲವೇ..? ವೈಯಕ್ತಿಕವಾಗಿಯೂ ಯಾರ ಬಳಿಯೂ ಅವರು ಈ ವಿಷಯ ಹೇಳಿಕೊಂಡಿಲ್ಲವೇ..?

  ಪ್ರಶ್ನೆ 2 : ವಿಸ್ಮಯ ಚಿತ್ರದಲ್ಲಿ ಅರ್ಜುನ್ ಸರ್ಜಾ ಜೊತೆ ಕೆಟ್ಟ ಅನುಭವ ಆಗಿತ್ತು. ವೃತ್ತಿ ಪರತೆಯಿಂದಾಗಿ ನಾನು ಸನಿಮಾದಲ್ಲಿ ಮುಂದುವರಿದೆ ಎಂದಿದ್ದಾರೆ ಶೃತಿ. ಅಷ್ಟು ಕೆಟ್ಟ ಅನುಭವವಾಗಿದ್ದರೆ, ಚಿತ್ರದ ಪ್ರೆಸ್‍ಮೀಟುಗಳಲ್ಲಿ, ಪ್ರೀಮಿಯರ್ ಶೋಗಳಲ್ಲಿ ಅದೇ ಅರ್ಜುನ್ ಸರ್ಜಾ ಬಗ್ಗೆ ಹೊಗಳಿದ್ದು ಏಕೆ..? ನಾನು ಅವರ ಅಭಿಮಾನಿ. ಅವರ ಜೊತೆ ಇನ್ನಷ್ಟು ಮತ್ತಷ್ಟು ಚಿತ್ರಗಳಲ್ಲಿ ನಟಿಸುವ ಕನಸಿದೆ ಎಂದು ಹೇಳಿಕೊಂಡಿದ್ದುದು ಏಕೆ..? ಅದು ವೃತ್ತಿಪರತೆಯ ಭಾಗವೇನೂ ಅಲ್ಲ. ಅಲ್ಲವೇ..?

  ಪ್ರಶ್ನೆ 3 : ಸಾಕ್ಷಿ ಇದೆ ಅಂತೀರಿ. ಕೋರ್ಟ್‍ನಲ್ಲಷ್ಟೇ ತೋರಿಸ್ತೀವಿ ಅಂತೀರಿ. ತಮಗಾದ ಮೀಟೂ ಅನುಭವ ಬಯಲು ಮಾಡಲು ಬಳಸಿಕೊಂಡ ಸಾಮಾಜಿಕ ಜಾಲತಾಣದಲ್ಲೇ ಅದನ್ನು ತೋರಿಸಬಹುದಲ್ಲಾ..? ಕೋರ್ಟ್‍ನಲ್ಲೇ ಹೇಳುವುದಾಗಿದ್ದರೆ, ಕೋರ್ಟ್‍ನಲ್ಲೇ ಕೇಸು ಹಾಕಬಹುದಿತ್ತು. ಆರೋಪ ಮಾಡೋಕೆ ಸಾಮಾಜಿಕ ಜಾಲತಾಣ, ಸಾಕ್ಷಿ ತೋರಿಸೋಕೆ ಕೋರ್ಟ್ ಏಕೆ..?

  ಪ್ರಶ್ನೆ 4 : ಚಿತ್ರರಂಗದಲ್ಲಿ ಈ ರೀತಿ ಕಿರುಕುಳಕ್ಕೊಳಗಾಗುವವರಿಗೆ ಸಹಾಯ, ನೆರವು ನೀಡಲೆಂದೇ ಕೆಲವು ಸಂಸ್ಥೆಗಳಿವೆ. ಫಿಲಂ ಚೇಂಬರ್, ಕಲಾವಿದರ ಸಂಘ, ನಿರ್ಮಾಪಕರ ಸಂಘ, ನಿರ್ದೇಶಕರ ಸಂಘಗಳೂ ಇವೆ. ಇಲ್ಲಿ ದೂರು ನೀಡಲು ಸಾಧ್ಯವಾಗದೇ ಹೋದರೆ, ಚಿತ್ರರಂಗದ ಹಿರಿಯರ ಗಮನಕ್ಕಾದರೂ ತರಬಹುದಿತ್ತು. ಯಾರೊಬ್ಬರಿಗೂ ಈ ಬಗ್ಗೆ ಮಾಹಿತಿಯೇ ಇಲ್ಲ. 

  ಪ್ರಶ್ನೆ 5 : ಈ ಮೊದಲು ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದರು ಶೃತಿ. ಶೃತಿ ಆ ಹೇಳಿಕೆ ನೀಡುವಷ್ಟು ಹೊತ್ತಿಗೆ ವಿಸ್ಮಯ ಚಿತ್ರ ಮುಗಿದಿತ್ತು. ಆಗಲೂ ಶೃತಿ ಹೆಸರು ಹೇಳಿರಲಿಲ್ಲ. ಹಲವಾರು ಬಾರಿ ಅನುಭವಗಳಾಗಿವೆ ಎಂದಿದ್ದ ಶೃತಿ, ಈ ಬಾರಿ ಮಾತ್ರ ಅರ್ಜುನ್ ಸರ್ಜಾ ಹೆಸರು ಹೇಳಿದ್ದಾರೆ. ಅಷ್ಟೇ ಅಲ್ಲ, ಹಲವಾರು ಅನುಭವಗಳಾಗಿವೆ ಎನ್ನುತ್ತಿರುವ ಅವರು ಹೊರಗೆ ಬಿಟ್ಟಿರುವುದು ಅರ್ಜುನ್ ಸರ್ಜಾ ಹೆಸರನ್ನು ಮಾತ್ರ. ಉಳಿದ ಎಲ್ಲ ಅನುಭವಗಳನ್ನೂ ಹೇಳಿಕೊಂಡಿಲ್ಲ. ಏಕೆ..?

 • ಶೃತಿ ಹರಿಹರನ್ ದೆವ್ವಾನಾ..?

  is sruthi hariharan ghist in mane maratakkidhe movie

  ಮನೆ ಮಾರಾಟಕ್ಕಿದೆ ಚಿತ್ರದ ಟ್ರೇಲರ್ ಹೊರಬಿದ್ದಿದೆ. ಕಾಮಿಡಿ ಮಿಶ್ರಿತ ಹಾರರ್ ಚಿತ್ರ.. ಭಯ ಹುಟ್ಟುಸುತ್ತಲೇ ನಗಿಸುವ ಗುಣ ಹೊಂದಿರೋ ಸಿನಿಮಾ. ಚಿತ್ರ ದೆವ್ವದ ಸಿನಿಮಾ ಅನ್ನೋದು ಕನ್‌ಫರ್ಮ್. ಆದರೆ.. ದೆವ್ವ ಯಾರು.. ಶೃತಿ ಹರಿಹರನ್ ಇರಬಹುದೇ..?

  ಈ ಅನುಮಾನ ಬರೋಕೆ ಕಾರಣ ಟ್ರೇಲರ್‌ನಲ್ಲಿ ಶೃತಿ ಹರಿಹರನ್ ಹೇಳಿರೋ ಒಂದು ಡೈಲಾಗ್. ನಮಗೂ ಮನುಷ್ಯರಿಗೂ ಇರೋ ವ್ಯತ್ಯಾಸ ಏನ್ ಗೊತ್ತಾ..? ನಮಗೆ ಭಯ ಇರಲ್ಲ ಎನ್ನುತ್ತೆ ಶೃತಿ ಪಾತ್ರ. ಹಾಗಾದ್ರೆ, ಶೃತಿ ಹರಿಹರನ್ ಇಲ್ಲಿ ದೆವ್ವದ ಪಾತ್ರ ಮಾಡಿದ್ದಾರಾ..?  ಇನ್ನೊಮ್ಮೆ ದೆವ್ವಕ್ಕೆ ಶೃತಿಯೇ ಹೆದರುಸ ಸನ್ನಿವೇಶವೂ ಇದೆ. ಹಾಗಾದರೆ.. ರಿಯಲ್ ದೆವ್ವ ಯಾರು..?

  ಎಸ್.ವಿ.ಬಾಬು ನಿರ್ಮಿಸಿರುವ ಚಿತ್ರದಲ್ಲಿ ಶೃತಿ ಹರಿಹರನ್, ಕಾರುಣ್ಯ ರಾಮ್, ಸಾಧು ಕೋಕಿಲ, ಚಿಕ್ಕಣ್ಣ, ಕುರಿ ಪ್ರತಾಪ್, ರವಿಶಂಕರ್ ಗೌಡ ನಟಿಸಿದ್ದು, ಮಂಜು ಸ್ವರಾಜ್ ನಿರ್ದೇಶನ ಮಾಡಿದ್ದಾರೆ.

 • ಶೃತಿ ಹರಿಹರನ್‍ಗೆ ಆಫರ್ ಗಳೇ ಇಲ್ವಂತೆ..!

  sruthi hariharan has no movie offers

  ಮೀಟೂ ಅಭಿಯಾನದ ಮೂಲಕ ಕನ್ನಡ ಚಿತ್ರರಂಗದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದ್ದ ಶೃತಿ ಹರಿಹರನ್, ಈಗ ಖಾಲಿ ಖಾಲಿ. ಹೌದು, ಇದುಅವರೇ ಹೇಳಿಕೊಂಡಿರೋ ಸತ್ಯ. ಮೀಟೂ ಶುರುವಾಗುವ ಮುನ್ನ, ಅರ್ಜುನ್ ಸರ್ಜಾ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡುವ ಮುನ್ನ ಶೃತಿ ಹರಿಹರನ್, ವಾರಕ್ಕೆ ಕನಿಷ್ಠ ಎಂದರೂ ಮೂರು ಸಿನಿಮಾ ಕಥೆ ಕೇಳುತ್ತಿದ್ದರಂತೆ. ಅಂದರೆ, ಶೃತಿ ಅವರಿಗೆ ಆಗ ವಾರಕ್ಕೆ ಮಿನಿಮಮ್ ಮೂರಾದರೂ ಆಫರ್ ಬರುತ್ತಿದ್ದವು. ಒಪ್ಪಿಕೊಳ್ಳುತ್ತಿದ್ದುದು, ಬಿಡುತ್ತಿದ್ದುದು ಮುಂದಿನ ಮಾತು. ಆದರೆ, ಮೀಟೂ ಆರೋಪ ಮಾಡಿದ ಮೇಲೆ ಏನಾಗಿದೆ ಗೊತ್ತೇ..?

  ಆಫರ್ ಬರುವುದು ಹೆಚ್ಚೂ ಕಡಿಮೆ ನಿಂತೇ ಹೋಗಿದೆ. ಸಿನಿಮಾ ಆಫರ್‍ಗಳು ಕಡಿಮೆಯಾಗಿದೆ. ಬಹುಶಃ ನಿರ್ದೇಶಕರಿಗೆ ನನ್ನ ಜೊತೆ ಕೆಲಸ ಮಾಡಲು ಇಷ್ಟವಿಲ್ಲದೇ ಇರಬಹುದು. ಆದರೆ, ಇದನ್ನು ನಾನು ನಿರೀಕ್ಷೆ ಮಾಡಿದ್ದೆ. ಬೇರೆ ಕೆಲಸಗಳತ್ತ ಗಮನ ಕೊಡುತ್ತೇನೆ. ಹಾಗೆಂದು ನಟನೆಯನ್ನು ಕೈಬಿಡುವುದಿಲ್ಲ. ಇಷ್ಟದ ಪಾತ್ರಗಳು ಬಂದರೆ ಖಂಡಿತಾ ನಟಿಸುತ್ತೇನೆ ಎಂದಿದ್ದಾರೆ ಶೃತಿ ಹರಿಹರನ್.

 • ಶೃತಿಗೆ ತಲೆ ಕೆಟ್ಟಿದೆಯಾ..? - ಸಾ.ರಾ.ಗೋವಿಂದು ಪ್ರಶ್ನೆ

  sa ra govindu says sruthi hariharan must be abnormal

  ಶೃತಿ ಹರಿಹರನ್, ಹಿರಿಯ ನಟ ಅರ್ಜುನ್ ಸರ್ಜಾ ವಿರುದ್ಧ ಮಾಡಿರುವ ಆರೋಪಕ್ಕೆ ಸರ್ಜಾ ಅವರ ಕುಟುಂಬವಷ್ಟೇ ಅಲ್ಲ, ಚಿತ್ರರಂಗದ ಹಿರಿಯರೂ ಸಿಟ್ಟಾಗಿದ್ದಾರೆ. ಚಿತ್ರರಂಗದ ಹಿರಿಯ ನಿರ್ಮಾಪಕ, ಫಿಲಂ ಚೇಂಬರ್ ಮಾಜಿ ಅಧ್ಯಕ್ಷರೂ ಆಗಿರುವ ಸಾ.ರಾ.ಗೋವಿಂದು ಶೃತಿ ವಿರುದ್ಧ ಕಿಡಿಕಾರಿದ್ದಾರೆ.

  ಶೃತಿ ಹರಿಹರನ್‍ಗೆ ತಲೆ ಕೆಟ್ಟಿದ್ದರೆ ಹುಚ್ಚಾಸ್ಪತ್ರೆ ಸೇರಿಕೊಳ್ಳಲಿ. ಇಲ್ಲದಿದ್ದರೆ ನಾವೇ ಆಸ್ಪತ್ರೆಗೆ ಸೇರಿಸೋ ವ್ಯವಸ್ಥೆ ಮಾಡುತ್ತೇವೆ. ಅರ್ಜುನ್ ಸರ್ಜಾ ಆ ರೀತಿ ಇದ್ದಿದ್ದರೆ, ಅವರು ತಮಿಳುನಾಡಿನಲ್ಲಿ ಸೂಪರ್ ಸ್ಟಾರ್ ಆಗುತ್ತಿರಲಿಲ್ಲ. ಅರ್ಜುನ್ ಸರ್ಜಾ ಎಂತಹವರು, ಅವರ ವ್ಯಕ್ತಿತ್ವ ಎಂಥದ್ದು ಎನ್ನುವುದು ನನಗೂ ಗೊತ್ತು. ಶೃತಿ ಈಗ್ಯಾಕೆ ಹೀಗೆ ಹೇಳುತ್ತಿದ್ದಾರೆ. ಆಗಲೇ ಏಕೆ ಪ್ರತಿಭಟಿಸಲಿಲ್ಲ. ಶೃತಿಗೆ ಸಿನಿಮಾಗಳು ಸಿಗುತ್ತಿಲ್ಲ. ಹೀಗಾಗಿಯೇ ಅಸ್ಥಿತ್ವಕ್ಕಾಗಿ ಈ ರೀತಿ ಹೇಳುತ್ತಿದ್ಧಾರೆ ಎಂದಿದ್ದಾರೆ ಸಾ.ರಾ.ಗೋವಿಂದು.

 • ಶೃತಿಗೆ ವಿಸ್ಮಯ ನಿರ್ಮಾಪಕ, ನಿರ್ದೇಶಕ ಕೊಟ್ಟ ಶಾಕ್

  vismaya director and producer support arjun sarja

  ವಿಸ್ಮಯ ಚಿತ್ರದ ಶೂಟಿಂಗ್ ವೇಳೆ ಶೃತಿ ಇದ್ದದ್ದೇ 9 ದಿನ. ಆ 9 ದಿನಕ್ಕೆ ನಾವು 3 ಲಕ್ಷ ರೂ. ಸಂಭಾವನೆ ನೀಡಿದ್ದೇವೆ. ಶೂಟಿಂಗ್‍ಗೆ ರಿಹರ್ಸಲ್ ನಡೆದಿದ್ದುದು ನಿಜ. ಆದರೆ, ಇಂತಹ ಘಟನೆ ನಡೆದಿರುವುದು ನಮಗೆ ಗೊತ್ತಿಲ್ಲ. ಏಕೆಂದರೆ, ಶೃತಿ ಒಮ್ಮೆಯೂ ಇಂತಹ ಘಟನೆಗಳ ಬಗ್ಗೆ ನಮ್ಮಲ್ಲಿ ಹೇಳಿಕೊಂಡಿಲ್ಲ. ಆಕ್ಷೇಪವನ್ನೂ ಮಾಡಿರಲಿಲ್ಲ. ಈಗ ಅವರ ಆರೋಪ ಕೇಳಿದರೆ ಅಚ್ಚರಿಯಾಗುತ್ತಿದೆ. ಇದು ವಿಸ್ಮಯ ಚಿತ್ರದ ನಿರ್ದೇಶಕ ಅರುಣ್ ವೈದ್ಯನಾಥನ್ ಪೊಲೀಸರ ಎದುರು ನೀಡಿರುವ ಹೇಳಿಕೆ.

  ವಿಸ್ಮಯ ಚಿತ್ರದಲ್ಲಿ ಇನ್ನೂ ಹೆಚ್ಚು ರೊಮ್ಯಾಂಟಿಕ್ ಸೀನ್‍ಗಳಿದ್ದವು. ಎರಡು ಬೆಡ್‍ರೂಂ ದೃಶ್ಯಗಳಿದ್ದವು. ಆದರೆ, ಸರ್ಜಾ ಅವರೇ ಈ ವಯಸ್ಸಿನಲ್ಲಿ ಇದೆಲ್ಲ ಬೇಡ. ಚಿತ್ರಕ್ಕೆ ತೀರಾ ಅಗತ್ಯವಿರುವಷ್ಟು ಮಾತ್ರ ರೊಮ್ಯಾನ್ಸ್ ಸೀನ್ ಇರಲಿ ಎಂದು ಕೇಳಿಕೊಂಡರು. ಅವರು ಕೇಳಿದಂತೆಯೇ ಕೆಲ ದೃಶ್ಯಗಳನ್ನು ಕೈಬಿಟ್ಟೆವು ಎಂದಿದ್ದಾರೆ ಅರುಣ್ ವೈದ್ಯನಾಥನ್.

  ಚಿತ್ರದ ನಿರ್ಮಾಪಕ ಉದಯ್ ಕುಮಾರ್ ಕೂಡಾ ಶೃತಿ ಆರೋಪವನ್ನು ಅಲ್ಲಗಳೆದಿದ್ದಾರೆ. 43 ದಿನಗಳ ಶೂಟಿಂಗ್‍ನಲ್ಲಿ ಶೃತಿ ಅವರು ಇದ್ದದ್ದು 9 ದಿನ ಮಾತ್ರ. ಯಾವುದೇ ತಕರಾರು, ಆರೋಪಗಳಿರಲಿಲ್ಲ. ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದನ್ನು ಕೇಳಿ ನಿಜಕ್ಕೂ ಶಾಕ್ ಆಯಿತು ಎಂದಿದ್ದಾರೆ ಉದಯ್ ಕುಮಾರ್.

  ಅಷ್ಟೇ ಅಲ್ಲ, ಶೃತಿ ಅವರ ಬೆನ್ನಿಗೆ ನಿಂತಿರುವ ನಟ ಚೇತನ್, ವಿಸ್ಮಯ ಚಿತ್ರದ ವಿಲನ್ ರೋಲ್‍ಗೆ ಆಯ್ಕೆಯಾಗಿದ್ದರಂತೆ. ಆದರೆ, ಕೊನೆಗೆ ಜಯರಾಮ್ ಕಾರ್ತಿಕ್(ಜೆಕೆ)ರನ್ನು ಆಯ್ಕೆ ಮಾಡಲಾಯಿತಂತೆ. ಇದಕ್ಕೆ ಸರ್ಜಾ ಕಾರಣ ಎಂಬ ಅಸಮಾಧಾನ ಇದ್ದರೂ ಇರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ ನಿರ್ಮಾಪಕ ಉದಯ್ ಕುಮಾರ್.

  ಒಟ್ಟಿನಲ್ಲಿ ಪೊಲೀಸರ ಎದುರು ವಿಸ್ಮಯ ಚಿತ್ರದ ನಿರ್ಮಾಪಕ, ನಿರ್ದೇಶಕ.. ಇಬ್ಬರ ಹೇಳಿಕೆಗಳೂ ಶೃತಿ ಹರಿಹರನ್ ಆರೋಪಗಳಿಗೆ ವ್ಯತಿರಿಕ್ತವಾಗಿಯೇ ಮೂಡಿಬಂದಿವೆ. 

 • ಶ್ರುತಿ ಹರಿಹರನ್ ಬಳಿ ಇದೆಯಂತೆ ವಿಡಿಯೋ ಸಾಕ್ಷ್ಯ..!

  sruthi says she has video evidence against arjun

  ಶೃತಿ ಹರಿಹರನ್ ವ/ಸ ಅರ್ಜುಜ್ ಸರ್ಜಾ ನಡುವಣ ಮೀಟೂ ಗಲಾಟೆ ದಿನೇ ದಿನೇ ವಿಸ್ತರಿಸಿಕೊಳ್ಳುತ್ತಲೇ ಹೋಗುತ್ತಿದೆ. ಸದ್ಯಕ್ಕೆ ನ್ಯಾಯಾಲಯದಲ್ಲಿರುವ ಪ್ರಕರಣದ ವಿಚಾರಣೆ ಮುಂದಕ್ಕೆ ಹೋಗಿದ್ದರೆ, ಇತ್ತ ಶೃತಿ ಹರಿಹರನ್ ಮಹಿಳಾ ಆಯೋಗದ ಮೆಟ್ಟಿಲು ಹತ್ತಿದ್ದಾರೆ. 

  ಆ ನಂತರ ಮಾತನಾಡಿರುವ ಶೃತಿ ಹರಿಹರನ್ `ನಾನು ಮಾಡಿರುವ ಆರೋಪದ ಕುರಿತು ನನ್ನ ಬಳಿ ವಿಡಿಯೋ ಸಾಕ್ಷ್ಯ ಇದೆ. ಅದನ್ನು ನಾನು ಮಹಿಳಾ ಆಯೋಗದ ಅಧ್ಯಕ್ಷರಿಗೆ ತೋರಿಸಿದ್ದೇನೆ. ಕೋರ್ಟ್‍ನಲ್ಲಿಯೂ ತೋರಿಸುತ್ತೇನೆ. ಫ್ರೆಶರ್ ಕುಕ್ಕರ್ ಹಾಗೇನೇ.. ವಿಶಲ್ ಹೋಗ್ತಾ ಹೋಗ್ತಾ ಒಂದ್ಸಲ ಬ್ಲಾಸ್ಟ್ ಆಗುತ್ತೆ. ನಾನು ನ್ಯಾಯಾಲಯದಲ್ಲಿ ವಿನ್ ಆಗ್ತೀನಿ'' ಎಂದಿದ್ದಾರೆ.

  ಸಂಜನಾ ಗಲ್ರಾನಿ ರೀತಿ ನಾನು ಕ್ಷಮೆ ಕೇಳಲ್ಲ. ಚಿತ್ರರಂಗದ ಯಾವೊಬ್ಬ ಹೀರೋಯಿನ್ ಕೂಡಾ ನನ್ನ ಬೆಂಬಲಕ್ಕೆ ಬಂದಿಲ್ಲ. ದೇವರು ನನಗೆ ಒಬ್ಬಳೇ ಎಲ್ಲವನ್ನೂ ಫೇಸ್ ಮಾಡುವ ಶಕ್ತಿ ಕೊಟ್ಟಿದ್ದಾನೆ. ನಾನು ಫೇಸ್ ಮಾಡುತ್ತೇನೆ ಎಂದಿದ್ದಾರೆ ಶೃತಿ ಹರಿಹರನ್.

   

 • ಶ್ರುತಿ ಹರಿಹರನ್ ಬಿಚ್ಚಿಟ್ಟ ಕಾಮುಕ ನಿರ್ಮಾಪಕರ ಕಥೆ

  sruthi hariharan talks about her casting couch experience

  ಅವಕಾಶ ಬೇಕಾ..? ನಾಯಕಿಯಾಗಬೇಕಾ..? ಹಾಸಿಗೆಗೆ ಬನ್ನಿ. ಇದು ಕೇವಲ ಬಾಲಿವುಡ್, ಹಾಲಿವುಡ್ ಕಥೆಯಲ್ಲ. ಸ್ಯಾಂಡಲ್‍ವುಡ್‍ನಲ್ಲೂ ಇಂಥಾ ನಿರ್ಮಾಪಕರು, ನಿರ್ದೇಶಕರು ಇದ್ದಾರೆ. ಇತ್ತೀಚೆಗೆ ಇಂಥವುಗಳನ್ನು ನಾಯಕಿಯರೂ ಬಹಿರಂಗಪಡಿಸುವ ಮೂಲಕ, ಅವುಗಳ ವಿರುದ್ಧ ಧ್ವನಿಯೆತ್ತುತ್ತಿದ್ದಾರೆ. ಈ ಬಾರಿ ಶ್ರುತಿ ಹರಿಹರನ್, ತಮಗೆ ಆಗಿದ್ದ ಅನುಭವವನ್ನು ಬಿಚ್ಚಿಟ್ಟಿದ್ದಾರೆ. ಹೈದರಾಬಾದ್‍ನಲ್ಲಿ ನಡೆಯುತ್ತಿರುವ `ಸಿನಿಮಾದಲ್ಲಿ ಸೆಕ್ಸಿಸಮ್' ಸಂಕಿರಣದಲ್ಲಿ ಶ್ರುತಿ ಸ್ವತಃ ತಾವು ಅನುಭವಿಸಿದ ಕಿರುಕುಳವನ್ನು ಹೇಳಿಕೊಂಡಿದ್ದಾರೆ.

  ಆಗಿನ್ನೂ ನನಗೆ 18 ವರ್ಷ. ಚಿತ್ರವೊಂದರ ಆಯ್ಕೆಯಾಗಿ ಸಂದರ್ಶನಕ್ಕೆ ಹೋಗಿದ್ದೆ. ಆಗ ನಡೆದ ಘಟನೆ ನನ್ನನ್ನು ಬೆಚ್ಚಿಬೀಳಿಸಿತ್ತು. ಶಾಕ್ ಆಗಿದ್ದೆ. ಆ ಚಿತ್ರದಲ್ಲಿ ನಾನು ಅಭಿನಯಿಸಲಿಲ್ಲ ಎನ್ನವುದು ಬೇರೆ ಮಾತು.  ಅದಾದ ಕೆಲವು ವರ್ಷಗಳ ನಂತರ ಖ್ಯಾತ ನಿರ್ಮಾಪಕರೊಬ್ಬರು ಕರೆ ಮಾಡಿದರು. ನಾವು ನಾಲ್ಕೈದು ನಿರ್ಮಾಪಕರಿದ್ದೇವೆ. ನಾವು ನಿಮ್ಮನ್ನು ಉಪಯೋಗಿಸಿಕೊಳ್ಳುತ್ತೇವೆ ಮತ್ತು ಬೇಕಾದಂತೆ ಬದಲಾಯಿಸಿಕೊಳ್ಳುತ್ತೇವೆ ಎಂದು ಕೇಳಿದರು. ತಕ್ಷಣವೇ ನಾನು ಎದುರಿಗೆ ಬನ್ನಿ, ನಾನು ಚಪ್ಪಲಿಯಲ್ಲಿ ಹೊಡೆಯುತ್ತೇನೆ ಎಂದಿದ್ದೆ. ಇಂಥ ಘಟನೆಗಳನ್ನು ಸಮರ್ಥವಾಗಿ ಎದುರಿಸಿದ ಮೇಲೆ ನನಗೆ ಕನ್ನಡ ಮತ್ತು ತಮಿಳು ಚಿತ್ರರಂಗದಲ್ಲಿ ಒಳ್ಳೆಯ ಅವಕಾಶಗಳು ಸಿಕ್ಕವು ಎಂದು ಹೇಳಿಕೊಂಡಿದ್ದಾರೆ ಶ್ರುತಿ. 

  ಈಗ ಶ್ರುತಿ ಹರಿಹರನ್, ಕನ್ನಡ ಚಿತ್ರರಂಗದ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರು. ರಾಜ್ಯ ಪ್ರಶಸ್ತಿ ಪುರಸ್ಕøತರೂ ಹೌದು. 

 • ಶ್ರುತಿ ಹರಿಹರನ್ ಮನೆ ಮಾರಾಟಕ್ಕಿದೆ..

  sruthi hariharan back to movies

  ಮನೆ ಮಾರಾಟಕ್ಕಿದೆ. ಇದು ಹೊಸ ಸಿನಿಮಾ. ದೆವ್ವಗಳಿವೆ ಎಚ್ಚರಿಕೆ, ಇದು ಟ್ಯಾಗ್‍ಲೈನ್. ನಾತಿಚರಾಮಿ ನಂತರ ನಾಪತ್ತೆಯಾಗಿದ್ದ ಶ್ರುತಿ ಹರಿಹರನ್ ಮತ್ತೊಮ್ಮೆ ಬರುತ್ತಿದ್ದಾರೆ. ಮಂಜು ಸ್ವರಾಜ್ ನಿರ್ದೇಶನದ ಹೊಸ ಚಿತ್ರದಲ್ಲಿ ಹೀರೋಯಿನ್ ಆಗಿದ್ದಾರೆ.

  ಹಾರರ್ ಥ್ರಿಲ್ಲರ್ ಚಿತ್ರವಾಗಿರುವ ಮನೆ ಮಾರಾಟಕ್ಕಿದೆ ಸಿನಿಮಾದಲ್ಲಿ ಕಾರುಣ್ಯ ರಾಮ್, ಇನ್ನೊಬ್ಬ ಹೀರೋಯಿನ್. ಸಾಧು ಕೋಕಿಲ, ಚಿಕ್ಕಣ್ಣ ಕೂಡಾ ಪ್ರಮುಖ ಪಾತ್ರದಲ್ಲಿದ್ದಾರೆ.

 • ಸಾಕ್ಷಿ ಇದೆ.. ಕೋರ್ಟ್‍ನಲ್ಲಿ ತೋರಿಸ್ತೇನೆ - ಶೃತಿ ಹರಿಹರನ್

  sruthi hariharan says she has proof

  ಅರ್ಜುನ್ ಸರ್ಜಾ ವಿರುದ್ಧ ಕಿರುಕುಳದ ಆರೋಪ ಮಾಡಿರುವ ಶೃತಿ ಹರಿಹರನ್, ಅರ್ಜುನ್ ಸರ್ಜಾ ವಿರುದ್ಧದ ಆರೋಪಕ್ಕೆ ಸಾಕ್ಷಿಗಳನ್ನೂ ಇಟ್ಟುಕೊಂಡಿದ್ದಾರಂತೆ. ಸುದ್ದಿಗೋಷ್ಟಿಯಲ್ಲಿ ಅರ್ಜುನ್ ಸರ್ಜಾ ಅವರ ಹೆಸರನ್ನೇ ಹೇಳೋಕೆ ಕಾರಣಗಳೂ ಇವೆ ಎಂದ ಶೃತಿ, ಅದನ್ನು ನಾನು ಕೋರ್ಟ್‍ನಲ್ಲೇ ಹೇಳುತ್ತೇನೆ. ಇಲ್ಲಿ ಬಹಿರಂಗಪಡಿಸುವುದಿಲ್ಲ ಎಂದಿದ್ದಾರೆ.

  ಹಾಗಂತ ಅರ್ಜುನ್ ಸರ್ಜಾ, ಶೃತಿಗೆ ಯಾವುದೇ ಮೆಸೇಜ್ ಅಥವಾ ವಾಟ್ಸಪ್ ಮಾಡಿಲ್ಲ. ಅಂತಹ ಮೆಸೇಜ್‍ಗಳಿಲ್ಲ. ಆದರೆ, ಸಾಕ್ಷಿಗಳಿವೆ. ಅವುಗಳನ್ನು ಸಮಯ ಬಂದಾಗ ಕೋರ್ಟಿನಲ್ಲೇ ತೋರಿಸುತ್ತೇನೆ ಎಂದಿದ್ದಾರೆ ಶೃತಿ ಹರಿಹರನ್.

  ಶೃತಿ ಹರಿಹರನ್ ಅವರ ಜೊತೆ ಫೈರ್ ಸಂಘಟನೆಯ ಚೇತನ್, ಕವಿತಾ ಲಂಕೇಶ್ ಸೇರಿದಂತೆ ಹಲವು ಸದಸ್ಯರಿದ್ದರು. ನಾನು ಸುದೀಪ್, ದರ್ಶನ್‍ರಂತಹ ದೊಡ್ಡ ಸ್ಟಾರ್‍ಗಳ ಜೊತೆಯಲ್ಲೂ ನಟಿಸಿದ್ದೇನೆ. ನನಗೆ ಅವರ ಜೊತೆ ಇಂತಹ ಕೆಟ್ಟ ಅನುಭವಗಳಾಗಿಲ್ಲ ಎನ್ನುವುದು ಶೃತಿ ಹರಿಹರನ್ ಮಾತು.

 • ಸಾಧು, ಚಿಕ್ಕಣ್ಣ, ರವಿಶಂಕರ್ ಗೌಡ, ಕುರಿ ಮತ್ತು ಶೃತಿ ಹರಿಹರನ್ ಕಾಮಿಡಿ

  sruthi, chikkana in horror comedy

  ರಘುಪತಿ ರಾಘವ ರಾಜಾರಾಮ್. ಇದು ಹೀರೋಗಳ ಹೆಸರು ಅಷ್ಟೇ ಅಲ್ಲ, ಚಿತ್ರದ ಹೆಸರೂ ಹೌದು. ಚಿತ್ರಕ್ಕೆ ನಾಲ್ವರು ಹೀರೋಗಳು. ಸಾಧುಕೋಕಿಲ ಮಹಾನ್ ಮಹಾನ್ ಕುಡುಕ ಪೂಜಾರಿಯಾಗಿ, ಚಿಕ್ಕಣ್ಣ ಬಾರ್ ಸರ್ವರ್ ಆಗಿ, ರವಿಶಂಕರ್ ಗೌಡ ಎಟಿಎಂ ವಾಚ್‍ಮನ್ ಆಗಿ ಹಾಗೂ ಕುರಿ ಪ್ರತಾಪ್ ಹೇರ್ ಕಟಿಂಗ್ ಮಾಡುವ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ನಾಲ್ವರಿಗೂ ಒಬ್ಬಳೇ ನಾಯಕಿ ಶೃತಿ ಹರಿಹರನ್.

  ಶ್ರೀಕಂಠ ಹಾಗೂ ಪಟಾಕಿ ಚಿತ್ರಗಳ ನಂತರ ಮಂಜು ಸ್ವರಾಜ್ ನಿರ್ದೇಶಿಸುತ್ತಿರುವ ಹಾರರ್ ಕಾಮಿಡಿ ಚಿತ್ರವಿದು. ಎಸ್.ವಿ.ಬಾಬು ನಿರ್ಮಾಣದ ಚಿತ್ರ ಈಗಾಗಲೇ ಅರ್ಧ ಶೂಟಿಂಗ್ ಮುಗಿಸಿದೆ. ಭಯ ಬೀಳಿಸುತ್ತಲೇ ನಕ್ಕು ನಲಿಸುವ ಕಥೆ ಚಿತ್ರದಲ್ಲಿದೆಯಂತೆ. 

 • ಹಾಡು ಕೇಳಿ ಯರ್ರಾಬಿರ್ರಿ ಲವ್ವಾಗೋಯ್ತು..!

  tarak movie image

  ತಾರಕ್ ಚಿತ್ರದ ಇನ್ನೊಂದು ಹಾಡಿನ ವಿಡಿಯೋ ಬಿಡುಗಡೆಯಾಗಿದೆ. ಸಂಜೆ ಹೊತ್ತು ನಿನ್ನ ಶ್ಯಾನೆ ನೋಡ್ತಾ ಇದ್ರೆ ಯರ್ರಾಬಿರ್ರಿ ಲವ್ವಾಯ್ತದೆ ಅನ್ನೋ ಹಾಡು ನೋಡಿ ಅಭಿಮಾನಿಗಳಿಗೂ ಯರ್ರಾಬಿರ್ರಿ ಲವ್ವಾಗೋಗಿದೆ. 

  ಹಾಡಿನಲ್ಲಿ ಮಧ್ಯೆ ಮಧ್ಯೆ ಶ್ಲೋಕಗಳೂ ಇವೆ. ಯುಗಳ ಗೀತೆಯಲ್ಲಿ ಇದೊಂದು ಹೊಸ ಪ್ರಯೋಗ. ಆ ಪ್ರಯೋಗ ಕಿವಿಗಿಂಪಾಗಿದೆ. ಶೃತಿ ಹರಿಹರನ್ ಕಣ್ಣಿಗೆ ತಂಪಾಗಿದ್ದಾರೆ. ಅರ್ಜುನ್ ಜನ್ಯ ಸಂಗೀತದ ಹಾಡಿಗೆ ಸಾಹಿತ್ಯ ಕೊಟ್ಟಿರುವುದು ಹರಿ ಸಂತೋಷ್. ಹಾಡಿರುವುದು ವಿಜಯ್ ಪ್ರಕಾಶ್ ಮತ್ತು ಇಂದು ನಾಗರಾಜ್.

  ದರ್ಶನ್ ಸಿನಿಮಾ ಇದೇ ಶುಕ್ರವಾರ ತೆರೆಗೆ ಬರ್ತಾ ಇದೆ. ಹಾಡು ಕೇಳಿ ಯರ್ರಾಬಿರ್ರಿ ಲವ್ವಿಗೆ ಬಿದ್ದಿದ್ದ ಅಭಿಮಾನಿಗಳು, ಈಗ ಹಾಡು ನೋಡಿ ಯರ್ರಾಬಿರ್ರಿ ಲವ್ವಲ್ಲಿದ್ದಾರೆ. ಶುಕ್ರವಾರಕ್ಕೆ ವೇಯ್ಟಿಂಗ್.

 • ಹೆಣ್ಮಕ್ಕಳೇ ಕ್ಷಮೆ ಕೇಳಬೇಕಾ..? - ಶೃತಿ ಹರಿಹರನ್

  no apologies says sruthi hariharan

  ನನ್ನ ನೋವು ಏನು..? ಆರೋಪ ಏನು..? ಅನ್ನೋದನ್ನ ಇವತ್ತಿನ ವಾಣಿಜ್ಯ ಮಂಡಳಿ ಸಭೆಯಲ್ಲಿ ಹೇಳಿಕೊಂಡಿದ್ದೇನೆ. ಅರ್ಜುನ್ ಸರ್ಜಾ ನನ್ನ ವಿರುದ್ಧ ಒಂದಲ್ಲ, 2 ಕೇಸ್ ಹಾಕಿದ್ದಾರೆ. ನಾನೂ ಕೂಡಾ ಕೋರ್ಟ್‍ಗೇ ಹೋಗುತ್ತೇನೆ ಎಂದಿದ್ದಾರೆ ಶೃತಿ ಹರಿಹರನ್.

  ಪ್ರತಿ ಬಾರಿಯೂ, ನೋವನ್ನೂ ಅನುಭವಿಸಿ ನಾವೇ.. ಹೆಣ್ಣು ಮಕ್ಕಳೇ ಕ್ಷಮೆ ಕೇಳಬೇಕಾ ಎಂದರು ಶೃತಿ ಹರಿಹರನ್. ವಾಣಿಜ್ಯ ಮಂಡಳಿ ಬಗ್ಗೆ ನನಗೆ ಗೌರವ ಇದೆ. ಹಾಗಾಗಿಯೇ ಅಂಬರೀಷ್ ಸರ್ ನೇತೃತ್ವದ ಸಭೆಗೆ ಬಂದಿದ್ದೇನೆ ಎಂದರು ಶೃತಿ.

  ವಾಣಿಜ್ಯ ಮಂಡಳಿ ಮೇಲೆ ಅಷ್ಟೊಂದು ಗೌರವ ಇದ್ದವರು, ಸೋಷಿಯಲ್ ಮೀಡಿಯಾಗೆ ಹೋಗುವುದಕ್ಕೆ ಮೊದಲೇ ವಾಣಿಜ್ಯ ಮಂಡಳಿ ಎದುರು ಸಮಸ್ಯೆ ಹೇಳಿಕೊಳ್ಳಬೇಕಿತ್ತಲ್ಲವೇ.. ಎಂದು ಪ್ರಶ್ನಿಸಿದರು ಪತ್ರಕರ್ತರು. ಶೃತಿ ದಢಕ್ಕನೆ ಎದ್ದು ಹೋದರು.