` sruthi hariharan - chitraloka.com | Kannada Movie News, Reviews | Image

sruthi hariharan

 • ಕಿಚ್ಚನ್ ಕಿಚನ್‍ನಲ್ಲಿ ಖುಷಿಖುಷಿಯಾದ ಕಿಚ್ಚ

  kicchana kitchen with gundappa vishwanath

  ಕಿಚ್ಚ ಸುದೀಪ್ ಬಿಗ್‍ಬಾಸ್ ವೀಕೆಂಡ್‍ನಲ್ಲಿ ಕಿಚ್ಚನ್ ಕಿಚನ್ ಶೋ ಕೂಡಾ ಮಾಡ್ತಾರೆ. ಅದು ಬಿಗ್‍ಬಾಸ್ ನಿರೂಪಣೆಯ ಒಂದು ಭಾಗ. ಈ ವಾರದ ಕಿಚ್ಚನ್ ಕಿಚನ್‍ನಲ್ಲಿ ಸ್ವತಃ ಸುದೀಪ್ ಥ್ರಿಲ್ ಆಗುವಂತಾ ಅತಿಥಿಯೊಬ್ಬರು ಬಂದಿದ್ದರು.

  ಭಾರತೀಯ ಕ್ರಿಕೆಟ್ ಕಂಡ ಕ್ರಿಕೆಟ್ ಕಲಾವಿದ ಜಿ.ಆರ್.ವಿಶ್ವನಾಥ್ ಅವರ ಆಗಮನ ಸುದೀಪ್ ಅವರ ಖುಷಿಯನ್ನು ಹೆಚ್ಚಿಸಿತ್ತು. ಗುಂಡಪ್ಪ ವಿಶ್ವನಾಥ್ ಅವರ ಬ್ಯಾಟಿಂಗ್ ನೋಡಿದವರು ಅವರನ್ನು ಆಟಗಾರ ಎನ್ನುವ ಬದಲಿಗೆ ಕ್ರಿಕೆಟ್ ಕಲಾವಿದ ಎಂದೇ ಬಣ್ಣಿಸುತ್ತಾರೆ. ಅದೊಂದು ರೀತಿ ಕ್ರಿಕೆಟ್ ಕಲಾವಿದ ಹಾಗೂ ಚಿತ್ರರಂಗದ ಕಲಾವಿದರ ಸಮ್ಮಿಲನವಾಗಿತ್ತು. 

  ಇಬ್ಬರೂ ಕಲಾವಿದರ ಮಧ್ಯೆ ಶೃತಿ ಹರಿಹರನ್ ಮಿನುಗಲೆ ಮಿನುಗಲೆ ನಕ್ಷತ್ರ ಎಂಬಂತೆ ಮಿಂಚುತ್ತಿದ್ದರು.

 • ಚಾನ್ಸ್ ಗಾಗಿ ಹಾಸಿಗೆ - ವಿವಾದಕ್ಕೆ ಶ್ರುತಿ ಹೇಳಿದ್ದೇನು..?

  sruthi talks again on casting couch

  ಕಾಮುಕ ನಿರ್ಮಾಪಕರು ಎಲ್ಲ ಕಡೆ ಇದ್ದಾರೆ. ಚಾನ್ಸ್ ಕೊಡಿಸುತ್ತೇವೆ, ನಮ್ಮ ಜೊತೆ ಸಹಕರಿಸಿ ಎಂದು ನೇರವಾಗಿಯೇ ಮಂಚಕ್ಕೆ ಕರೆಯುವವರೂ ಇದ್ದಾರೆ. ನನಗೂ ಅಂತಹ ಅನುಭವಗಳಾಗಿವೆ ಎಂದು ತಮ್ಮ ಅನುಭವಗಳನ್ನು ಬಿಚ್ಚಿಟ್ಟಿದ್ದರು ಶ್ರುತಿ. ನಾವು ಐವರಿದ್ದೇವೆ, ನಮಗೆ ಬೇಕಾದಂತೆ ಬಳಸಿಕೊಳ್ಳುತ್ತೇವೆ ಎಂದಿದ್ದ ತಮಿಳು ನಿರ್ಮಾಪಕರಿಗೆ ಚಪ್ಪಲಿಯಲ್ಲಿ ಹೊಡೆಯುತ್ತೇನೆ ಎಂದು ಹೇಳಿದ್ದನ್ನೂ ಶ್ರುತಿ ಹೇಳಿಕೊಂಡಿದ್ದರು. ಅದಾದ ನಂತರ ತಮಗೆ ತಮಿಳಿನಲ್ಲಿ ಅವಕಾಶಗಳು ಸಿಗಲೇ ಇಲ್ಲ ಎಂಬುದನ್ನೂ ಹೇಳಿದ್ದರು. ಅದು ದೊಡ್ಡ ವಿವಾದವನ್ನೇ ಸೃಷ್ಟಿಸಿದೆ. ವಿವಾದಕ್ಕೆ ಶ್ರುತಿ ನೀಡಿರುವ ಪ್ರತಿಕ್ರಿಯೆ ಇಷ್ಟು.

  `ನಾನು ಏನು ಹೇಳಿದ್ದೇನೋ, ಅದಕ್ಕೆ ನಾನು ಬದ್ಧಳಾಗಿದ್ದೇನೆ. ವಿವಾದ ಸೃಷ್ಟಿಸಬೇಕು ಎಂದು ಹೇಳಿದ ವಿಚಾರ ಇದಲ್ಲ. ಕಾಂಪ್ರೊಮೈಸ್ ಮಾಡಿಕೊಂಡರೆ, ಅಂದುಕೊಂಡಿದ್ದನ್ನು ಸಾಧಿಸಬಹುದು ಎಂಬ ಯುವತಿಯರಿಗೆ ಇದು ಎಚ್ಚರಿಕೆ ಅಷ್ಟೆ. ಕನ್ನಡ ಚಿತ್ರರಂಗದಲ್ಲಿ ಎಲ್ಲರೂ ಕೆಟ್ಟವರೇ ಇದ್ದಾರೆ ಎಂದೇನೂ ನಾನು ಹೇಳಿಲ್ಲ. ಇಲ್ಲಿಯೂ ಹಲವರು ಒಳ್ಳೆಯ ತಂತ್ರಜ್ಞರು, ನಿರ್ಮಾಪಕರು ಇದ್ದಾರೆ. ಅವರಲ್ಲಿ ಎಷ್ಟೋ ಜನರ ಜೊತೆ ನಾನು ಇನ್ನೂ ಕೆಲಸ ಮಾಡಿಲ್ಲ. ಈಗ ಬರುತ್ತಿರುವ ಎಷ್ಟೋ ಹೊಸ ಕಲಾವಿದರು, ಯಾವುದೇ ಕಿರುಕುಳ ಅನುಭವಿಸದೆ ಸ್ಟಾರ್ ಆಗಿದ್ದಾರೆ. ಪ್ರತಿಭೆ, ಪರಿಶ್ರಮದಿಂದ ಚಿತ್ರರಂಗದಲ್ಲಿ ಏನನ್ನಾದರೂ ಸಾಧಿಸಬಹುದೇ ಹೊರತು, ಅಡ್ಡದಾರಿಯಿಂದ ಅಲ್ಲ.''

  ಇಷ್ಟಕ್ಕೂ ಶ್ರುತಿಯವರಿಗೆ ಬೆಳಗ್ಗೆ 5 ಗಂಟೆಯಿಂದಲೇ ದೂರವಾಣಿ ಕರೆಗಳು ಬರಲು ಶುರುವಾಗಿವೆ. ಕೊನೆಗೆ ಶ್ರುತಿ ದಿನವಿಡೀ ತಮ್ಮ ಫೋನ್ ಸ್ವಿಚ್ ಆಫ್ ಮಾಡಿಟ್ಟುಕೊಂಡುಬಿಟ್ಟಿದ್ದಾರೆ. ಚಿತ್ರರಂಗದ ಹಲವರು ಅದರಲ್ಲೂ ನಾಯಕಿಯರು ಶ್ರುತಿ ಹರಿಹರನ್ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು, ಇದು ಸುದ್ದಿಯಲ್ಲಿರಲು ಮಾಡುವ ತಂತ್ರವಷ್ಟೇ ಎಂದು ಟೀಕಿಸಿದ್ದಾರೆ.

  Related Articles :-

  ಶ್ರುತಿ ಹರಿಹರನ್ ಬಿಚ್ಚಿಟ್ಟ ಕಾಮುಕ ನಿರ್ಮಾಪಕರ ಕಥೆ

 • ಚಿರು ಸರ್ಜಾ ಚಿತ್ರದಲ್ಲಿ ಶ್ರುತಿ ಹರಿಹರನ್ ಪೊಲೀಸ್

  sruthi hariharan plays cop in chiru sarja's aadhya

  ಮೀಟೂ ಪ್ರಕರಣದ ಬಳಿಕ ಶ್ರುತಿ ಹರಿಹರನ್ ನಟಿಸಿರುವ ಚಿತ್ರ ಆದ್ಯಾ. ಕಳೆದ ವರ್ಷ ನಾತಿಚರಾಮಿ ಚಿತ್ರದ ಅವಾರ್ಡ್ ಸೆನ್ಸೇಷನ್ ಸೃಷ್ಟಿಸಿದ್ದ ಶ್ರುತಿ, ನಂತರ ಮನೆ ಮಾರಾಟಕ್ಕಿದೆ ಚಿತ್ರದ ಮೂಲಕ ಬಾಕ್ಸಾಫೀಸ್ ಸಕ್ಸಸ್ ಕಂಡಿದ್ದರು. ಈಗ ಮತ್ತೊಮ್ಮೆ ಖಡಕ್ ಆಫೀಸರ್ ಆಗಿ ಬರುತ್ತಿದ್ದಾರೆ. ಆದ್ಯಾ ಚಿತ್ರದಲ್ಲಿ.

  ಆದ್ಯಾ ಚಿತ್ರದ ಹೀರೋ ಚಿರಂಜೀವಿ ಸರ್ಜಾ. ಶ್ರುತಿ ಹರಿಹರನ್ ಇಲ್ಲಿ ಪೊಲೀಸ್ ಅಧಿಕಾರಿ. ಮೀಟೂ ಮೂಲಕ ಸುದ್ದಿ ಮಾಡಿದ ಇನ್ನೊಬ್ಬ ನಟಿ ಸಂಗೀತಾ ಭಟ್ ಕೂಡಾ ಚಿತ್ರದಲ್ಲಿ ನಟಿಸಿದ್ದಾರೆ. ಶಶಾಂಕ್‌ ಪುರುಷೋತ್ತಮ್, ರವಿಶಂಕರ್‌ ಗೌಡ, ಪ್ರಮೋದ್ ಶೆಟ್ಟಿ ನಟಿಸಿರುವ ಚಿತ್ರದಲ್ಲಿ ಪುಟ್ಟ ಬಾಲಕಿ ಪಾತ್ರವೇ ಅಟ್ರ್ಯಾಕ್ಷನ್. ಆ ದಿನಗಳು ಖ್ಯಾತಿಯ ಕೆ.ಎಂ. ಚೈತನ್ಯ ನಿರ್ದೇಶಿಸಿರುವ ಚಿತ್ರವಿದು.  ಆಟಗಾರ, ಆಕೆ, ಅಮ್ಮ ಐ ಲವ್‌ ಯೂ ನಂತರ ಚೈತನ್ಯ ಮತ್ತು ಸರ್ಜಾ ಕಾಂಬಿನೇಷನ್ನಿನ 4ನೇ ಚಿತ್ರ. ಚಿತ್ರವು ಇದೇ ಫೆ.21ಕ್ಕೆ ರಿಲೀಸ್ ಆಗುತ್ತಿದೆ.

 • ಡಬಲ್ ಖುಷಿಯಲ್ಲಿ ಶ್ರುತಿ ಹರಿಹರನ್

  its a double celebratons for sruthi hariharan

  ಶ್ರುತಿ ಹರಿಹರನ್ ಈಗ ಡಬಲ್ ಖುಷಿಯಲ್ಲಿದ್ದಾರೆ. ಒಂದು ಕಡೆ ವೈಯಕ್ತಿಕ ಜೀವನ.. ಮತ್ತೊಂದು ಕಡೆ ವೃತ್ತಿ ಜೀವನ..ಎರಡರಲ್ಲೂ ಅವರಿಗೆ ಖುಷಿ ಖುಷಿ ಸಮಾಚಾರ. ಪರ್ಸನಲ್ ಲೈಫಲ್ಲಿ ಶ್ರುತಿ ತಾಯಿಯಾಗಿದ್ದಾರೆ. ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ತಾಯ್ತನ ಅನ್ನೋದು ಎಷ್ಟು ಗ್ರೇಟ್ ಎನ್ನುವುದು ಈಗ ಅರ್ಥವಾಗಿದೆ ಎಂದಿದ್ದಾರೆ ಶ್ರುತಿ.

  ಇದೇ ವೇಳೆ ಶ್ರುತಿ ಅಭಿನಯದ ನಾತಿಚರಾಮಿ ಚಿತ್ರ, 5 ರಾಷ್ಟ್ರೀಯ ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಅದರಲ್ಲೂ ಶ್ರುತಿ ಹರಿಹರನ್ ಅಭಿನಯಕ್ಕೆ ವಿಶೇಷ ಪ್ರಶಂಸಾ ಪ್ರಮಾಣ ಪತ್ರ ಲಭಿಸಿದೆ.

 • ತಾರಕ್ ಚಿತ್ರದ ಹೀರೋ ನಾನಲ್ಲ - ದರ್ಶನ್

  i am not tarak hero

  ತಾರಕ್, ದರ್ಶನ್ ಅಭಿನಯದ 49ನೇ ಚಿತ್ರ. ಚಿತ್ರದ ಹೀರೋ ಅವರೇ. ಹೀಗಿರುವಾಗ ಚಿತ್ರದ ಹೀರೋ ನಾನಲ್ಲ  ಎಂದು ದರ್ಶನ್ ಅವರೇ ಹೇಳಿದರೆ ಏನಪ್ಪಾ ಕಥೆ ಅಂತಾ ತಲೆಗೆ ಹುಳ ಬಿಟ್ಕೋಬೇಡಿ. ದರ್ಶನ್ ಪ್ರಕಾರ ಚಿತ್ರದ ಹೀರೋ ಡೈನಮಿಕ್ ಸ್ಟಾರ್ ದೇವರಾಜ್. 

  ತಾರಕ್ ಚಿತ್ರದ ಆಡಿಯೋ ಬಿಡುಗಡೆ ವೇಳೆ, ದೇವರಾಜ್ ಅವರ ಪ್ರೀತಿ ಮತ್ತು ಪಾತ್ರವನ್ನು ಪ್ರೀತಿಯಿಂದ ಮೆಚ್ಚಿಕೊಂಡ ದರ್ಶನ್, ದೇವರಾಜ್ ಅವರನ್ನು ಹೊಗಳಿದರು. ದೇವರಾಜ್ ತಮಗಿಂತ ಎತ್ತರದ ಸ್ಥಾನದಲ್ಲಿದ್ಧಾರೆ ಎಂದು ಹೇಳಿ ಪ್ರೀತಿಯಿಂದ ಧನ್ಯವಾದ ಅರ್ಪಿಸಿದರು ದರ್ಶನ್.

  ಚಿತ್ರದಲ್ಲಿ ದೇವರಾಜ್ ದರ್ಶನ್ ತಂದೆಯ ಪಾತ್ರ ಮಾಡುತ್ತಿದ್ದಾರೆ. ಇದೇ ಮೊದಲ ಬಾರಿಗೆ ದರ್ಶನ್ ಫುಟ್​ಬಾಲ್ ಆಟಗಾರನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ನಿಮಗೆ ಈ ಚಿತ್ರದಲ್ಲಿ ಹಳೆಯ ದರ್ಶನ್ ಸಿಕ್ಕೋದಿಲ್ಲ. ನಿರ್ದೇಶಕ ಮಿಲನ ಪ್ರಕಾಶ್ ನಿರ್ದೇಶಿಸಿರುವ ನಟ ದರ್ಶನ್ ಅವರನ್ನಷ್ಟೇ ನೋಡಬಹುದು ಎನ್ನುವ ಮೂಲಕ ಚಿತ್ರದ ಬಗೆಗಿನ ಕುತೂಹಲವನ್ನೂ ಹೆಚ್ಚಿಸಿದ್ರು ದರ್ಶನ್.

 • ತಾರಕ್ ಡ್ಯಾನ್ಸ್ ಮಾಡಿ, ಬಹುಮಾನ ಗೆಲ್ಲಿ

  tarak dance competition

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ತಾರಕ್ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ದರ್ಶನ್ ಅಭಿಮಾನಿಗಳಂತೂ ಕಾತುರದಿಂದ ಕಾಯುತ್ತಿದ್ದಾರೆ. ಆ ಕಾತುರಕ್ಕೆ ಕಿಚ್ಚು ಹಚ್ಚುವಂತೆ ವಿಶೇಷ ಅವಕಾಶವೊಂದನ್ನು ಒದಗಿಸಿದೆ ತಾಕರ್ ಚಿತ್ರತಂಡ.

  ತಾರಕ್ ಚಿತ್ರಗಳ ಹಾಡಿಗೆ ನೃತ್ಯ ಮಾಡುವುದು ಹಾಗೂ ಬಹುಮಾನ ಗೆಲ್ಲುವುದು. ಪ್ರಥಮ ಬಹುಮಾನ 25 ಸಾವಿರ, ದ್ವಿತೀಯ ಬಹುಮಾನ 10 ಸಾವಿರ ರೂ. ನೀವು ಮಾಡಬೇಕಾದ್ದು ಇಷ್ಟೆ..ತಾರಕ್ ಚಿತ್ರದ ಯಾವುದಾದರೂ ಹಾಡನ್ನು ಆಯ್ಕೆ ಮಾಡಿಕೊಳ್ಳಿ. ಆ ಹಾಡಿಗೆ ನಿಮ್ಮದೇ ಶೈಲಿಯಲ್ಲಿ ನೃತ್ಯ ಮಾಡಿ. ಅದನ್ನು ವಿಡಿಯೋ ಮಾಡಿ ಕಳುಹಿಸಿಕೊಡಿ. 

  ನಿಮ್ಮ ನೃತ್ಯದ ವಿಡಿಯೋಗಳನ್ನು  This email address is being protected from spambots. You need JavaScript enabled to view it.ಗೆ ಮೇಯ್ಲ್ ಮಾಡಿ. ವಿಡಿಯೋ ಕಳುಹಿಸಿಕೊಡಲು ಕೊನೆಯ ದಿನ ಸೆಪ್ಟೆಂಬರ್ 29.

 • ತಾರಕ್ ತರುಣಿಯರು..ಅವರು ಹಂಗೆ..ಇವರು ಹಿಂಗೆ..

  tarak movie image

  ತಾರಕ್ ಚಿತ್ರದಲ್ಲಿ ಶೃತಿ ಹರಿಹರನ್ ಹಾಗೂ ಶಾನ್ವಿ ಶ್ರೀವಾಸ್ತವ್ ಇಬ್ಬರೂ ನಾಯಕಿಯರು. ಆ ಇಬ್ಬರು ಸುಂದರಿಯರಲ್ಲಿ ದರ್ಶನ್ ಒಲಿಯುವುದು ಯಾರಿಗೆ..? ಅದನ್ನು ನಿರ್ದೇಶಕ ಮಿಲನ ಪ್ರಕಾಶ್ ಗುಟ್ಟಾಗಿಯೇ ಇಟ್ಟಿದ್ದಾರೆ. ಸಿನಿಮಾ ರಿಲೀಸ್ ಆಗುವವರೆಗೂ ಅದು ಗೊತ್ತಾಗಲ್ಲ. ಆದರೆ, ಚಿತ್ರದ ಚಿತ್ರೀಕರಣದ ವೇಳೆ ನಿರ್ದೇಶಕರು ಅನುಭವಿಸಿದ ಕಷ್ಟವೇ ಬೇರೆ.

  ಚಿತ್ರದಲ್ಲಿ ಶಾನ್ವಿ ಶ್ರೀವಾಸ್ತವ್ ಅವರದ್ದು ಬಬ್ಲಿ ಬಬ್ಲಿ ಪಾತ್ರ. ಪಟಪಟನೆ ಮಾತನಾಡುವ ತುಂಟಾಟದ ಹುಡುಗಿ. ಎನ್‍ಆರ್‍ಐ ಬೇರೆ. ಶಾನ್ವಿಯನ್ನು ನೋಡಿದವರು, ಅವರು ಹಾಗೇನೇ ಇರ್ತಾರೆ ಬಿಡಿ ಅಂದ್ಕೋತಾರೆ. ಆದರೆ, ರಿಯಲ್ ಲೈಫಲ್ಲಿ ಶಾನ್ವಿ ಅದಕ್ಕೆ ಪೂರ್ತಿ ಉಲ್ಟಾ. ಸಿಕ್ಕಾಪಟ್ಟೆ ಸೈಲೆಂಟು.

  ಇನ್ನು ಅದೇ ಚಿತ್ರದಲ್ಲಿ ಶೃತಿ ಹರಿಹರನ್ ಅವರದ್ದು ಸೈಲೆಂಟ್ ಗರ್ಲ್ ಪಾತ್ರ. ಆದರೆ, ಅದಕ್ಕೆ ಕಂಪ್ಲೀಟ್ ಉಲ್ಟಾ ವ್ಯಕ್ತಿತ್ವ ಶೃತಿ ಅವರದ್ದು. ಕಲ್ಲನ್ನೂ ಕೂಡಾ ಕರಗಿಸಿ, ಅದಕ್ಕೆ ಮಾತು ಬರಿಸುವ ಕಲೆ ಶೃತಿ ಅವರಿಗೆ ಅದು ಹೇಗೋ ಸಿದ್ಧಿಸಿಬಿಟ್ಟಿದೆ. ಅವರಿದ್ದ ಕಡೆ, ನಗು, ಉಲ್ಸಾಸ, ಉತ್ಸಾಹಗಳಿಗೆ ಬರವಿಲ್ಲ. 

  ಹೀಗೆ ಕಲಾವಿದೆಯರ ವೊರಿಜಿನಲ್ ವ್ಯಕ್ತಿತ್ವಕ್ಕೆ ತದ್ವಿರುದ್ಧವಾದ ಪಾತ್ರ ಕೊಟ್ಟು ಗೆದ್ದಿದ್ದಾರೆ ಪ್ರಕಾಶ್. ಇನ್ನು ಚಿತ್ರವನ್ನು ಗೆಲ್ಲಿಸುವ ಹೊಣೆ ದಾಸನ ಅಭಿಮಾನಿಗಳದ್ದು.

  Related Articles :-

  ಮನೆಯಲ್ಲೇ ತಾರಕೋತ್ಸವ ಕಣ್ತುಂಬಿಕೊಳ್ಳಿ..

  ಧೋನಿಗೂ ದರ್ಶನ್​ಗೂ ತಾರಕ್ ಲಿಂಕ್

  Tarak To Release On Sep 29th

  Tarak Teaser Gets Huge Response

  ದರ್ಶನ್ ತಾರಕ್ ಟ್ರೇಲರ್ ಸಖತ್ತಾಗಿದೆ ಗುರೂ..

  ತಾರಕ್ ಚಿತ್ರದ ಹೀರೋ ನಾನಲ್ಲ - ದರ್ಶನ್

  Tarak Songs Released

  Tarak Songs To Release Today

  Tarak Will Have 6 Audio Teasers

  Darshan Off To Switzerland For Tarak Shooting

 • ತಾರಕ್‍ನಲ್ಲಿ ದರ್ಶನ್‍ಗೆ ದೇಸೀ..ವಿದೇಶಿ ರಸಗವಳ

  desi videshi mix in tarak

  ತಾರಕ್ ಚಿತ್ರ ರಿಲೀಸ್‍ಗೆ ಹತ್ತಿರವಾಗುತ್ತಿದ್ದಂತೆ ಚಿತ್ರದಲ್ಲಿ ಯಾವ ರೀತಿಯ ಪಾತ್ರದಲ್ಲಿ ಕಾಣಿಸಿಕೊಂಡಿರಬಹುದು ಎಂಬ ಕುತೂಹಲ ಎಲ್ಲರಲ್ಲಿಯೂ ಇದೆ. ಅಭಿಮಾನಿಗಳಿಗೆ ಆ ಕುತೂಹಲ ಡಬಲ್ ಆಗಿದೆ. ಚಿತ್ರದಲ್ಲಿ ದರ್ಶನ್ ವಿದೇಶಿ ಹುಡುಗ. ಅಂದರೆ, ಭಾರತದಿಂದ ಹೋಗಿ ವಿದೇಶದಲ್ಲಿ ನೆಲೆಸಿರುವ ಪಾತ್ರ. ಚಿತ್ರದ ಕಥೆಯೂ ಅದೇ. ವಿದೇಶದಲ್ಲಿ ನೆಲೆಸಿರುವವರ ಸಂಭ್ರಮ, ಸಂಕಟ, ತಾಕಲಾಟ, ಸಂಬಂಧಗಳ ಕುರಿತಾದದ್ದು. 

  ಹಾಗಂತ ಸಿನಿಮಾ ಪೂರ್ತಿ ಅಲ್ಲಿಯೇ ಇರಲ್ಲ. ಸ್ವದೇಶಕ್ಕೆ ಬರುತ್ತೆ. ಹೀಗಾಗಿ ದರ್ಶನ್‍ಗೆ ಚಿತ್ರದಲ್ಲಿ ಎರಡುಮೂರು ಗೆಟಪ್‍ಗಳಿವೆ. ಸ್ವದೇಶಕ್ಕೆ ಬರುವ ನಾಯಕ, ಆತನ ತಾತ, ಮತ್ತವರ ಕುಟುಂಬದ ಜೊತೆ ದರ್ಶನ್ ಜರ್ನಿಯೇ ಸಿನಿಮಾ ಸ್ಟೋರಿ. ದರ್ಶನ್ ಕೇರ್‍ಟೇಕರ್‍ಗಳಾಗಿ ಚಿತ್ರದಲ್ಲಿ ಹಿರಿಯ ಕಲಾವಿದರ ದಂಡೇ ಇದೆ.

  ದರ್ಶನ್ ಮಾಸ್ ಹೀರೋ. ಹೀಗಾಗಿ ಅಭಿಮಾನಿಗಳಿಗೆ ನಿರಾಸೆ ಮಾಡದ ರೀತಿಯಲ್ಲಿ ಫೈಟ್ಸ್, ಡೈಲಾಗ್ಸ್ ಇವೆ. ಹಾಗೆಂದು ಸಂಪೂರ್ಣವಾಗಿ ಇದು ರೆಗ್ಯುಲರ್ ದರ್ಶನ್ ಸಿನಿಮಾ ಅಲ್ಲ. ಮಿಲನ ಪ್ರಕಾಶ್ ಅವರ ಫ್ಯಾಮಿಲಿ ಟಚ್ ಕೂಡಾ ಚಿತ್ರದಲ್ಲಿದೆ. ಹೀಗಾಗಿ ತಾರಕ್ ರಸಗವಳವಾಗುವುದು ಗ್ಯಾರಂಟಿ.

  Related Articles :-

  ತಾರಕ್ : ಬಾವ ಬಾಮೈದರೇ ನಿರ್ಮಾಪಕ, ನಿರ್ದೇಶಕ

  ಶಾನ್ವಿಗೇಕೆ ಪದೇ ಪದೇ ದೆವ್ವ ಹಿಡಿಯುತ್ತೆ..?

  ದರ್ಶನ್‍ಗೆ ಅಜ್ಜನಾಗಲು ದೇವರಾಜ್ ಒಪ್ಪಿದ್ದು ಹೇಗೆ..?

  ತಾರಕ್ ತಾರಾಗಣದಲ್ಲಿ ಕಲಾವಿದರ ಹಬ್ಬ

  ಸೈಲೆಂಟ್ ಸುನಾಮಿಯಾಗುತ್ತಿದೆ ತಾರಕ್

  ಸಖತ್ತಾಗಿದೆ ತಾರಕ್ ಟ್ರೇಲರ್

  ಇಬ್ಬರು ಮಹಾಮೌನಿಗಳ ಮಿಲನ ತಾರಕ್

  ಯೂರೋಪ್‍ನ 20 ಸ್ಥಳಗಳಲ್ಲಿ ತಾರಕ್

 • ದರ್ಶನ್ ಅಭಿಮಾನಿಗಳೇ ಥ್ಯಾಂಕ್ಸ್

  arman mallik thanks darshan fans

  ದರ್ಶನ್ ಅಭಿಮಾನಿಗಳೇ ಥ್ಯಾಂಕ್ಸ್.. ಈ ಮಾತು ಹೇಳ್ತಿರೋದು ಬಾಲಿವುಡ್ ಸಿಂಗರ್ ಅರ್ಮಾನ್ ಮಲಿಕ್. ದರ್ಶನ್ ಚಿತ್ರಗಳಲ್ಲಿ ಹಾಡಿದ ನಂತರ ಸ್ಯಾಂಡಲ್‍ವುಡ್‍ನಲ್ಲಿ ನನ್ನ ಅಭಿಮಾನಿಗಳ ಸಂಖ್ಯೆ ಹೆಚ್ಚಿತು. ದರ್ಶನ್‍ಗೆ ಅತ್ಯಂತ ದೊಡ್ಡ ಸಂಖೈಎಯ ಫ್ಯಾನ್ಸ್ ಇದ್ದಾರೆ. ಅವರೆಲ್ಲ ಈಗ ನನಗೂ ಫ್ಯಾನ್ಸ್ ಆಗಿದ್ಧಾರೆ ಎಂದು ಖುಷಿಯಿಂದ ಹೇಳಿಕೊಂಡಿದ್ದಾರೆ.

  ಮುಂಗಾರು ಮಳೆ ಚಿತ್ರದಲ್ಲಿ ಸೋನು ನಿಗಮ್‍ರ ಹಾಡು ಕೇಳಿದ ಮೇಲೆ, ನನಗೂ ಕನ್ನಡದಲ್ಲಿ ಹಾಡಬೇಕು ಎಂಬ ಕನಸು ಹುಟ್ಟಿತ್ತು. ಅದು ಈಡೇರಿದ್ದು ಚಕ್ರವರ್ತಿ ಚಿತ್ರದಿಂದ. ಈಗ ತಾರಕ್‍ನಲ್ಲೂ ಹಾಡಿದ್ದೇನೆ ಎಂದು ಖುಷಿ ಹಂಚಿಕೊಂಡಿದ್ದಾರೆ ಅರ್ಮಾನ್ ಮಲಿಕ್.

 • ದರ್ಶನ್ ತಾರಕ್ ಟ್ರೇಲರ್ ಸಖತ್ತಾಗಿದೆ ಗುರೂ..

  tarak trailer released

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 49ನೇ ಚಿತ್ರ ತಾರಕ್. ದೇವರಾಜ್, ಶೃತಿ ಹರಿಹರನ್, ಶಾನ್ವಿ ಶ್ರೀವಾಸ್ತವ್ ನಟಿಸಿರುವ ಚಿತ್ರ, ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಟಿಸಿದೆ. ಅದಕ್ಕೆ ಮೊದಲ ಕಾರಣ, ಅದು ಎಂದಿನ ದರ್ಶನ್ ಸ್ಟೈಲ್​ನಲ್ಲಿ ಇಲ್ಲ ಅನ್ನೋದು.

  ಚಿತ್ರದಲ್ಲಿ ದರ್ಶನ್ ಇದೇ ಮೊದಲ ಬಾರಿಗೆ ರಗ್ಬಿ ಆಟಗಾರನಾಗಿ ಕಾಣಿಸಿಕೊಂಡಿದ್ದಾರೆ. ಈಗ ಬಿಡುಗಡೆ ಮಾಡಿರುವ ಟ್ರೇಲರ್​ನಲ್ಲಿ ದರ್ಶನ್ ಹಿಂದಿನ ಚಿತ್ರಗಳಿಗಿಂತ ಸ್ಲಿಮ್ & ಸ್ಮಾರ್ಟ್ ಆಗಿ ಕಾಣಿಸುತ್ತಿದ್ದಾರೆ. ಇಡೀ ಟ್ರೇಲರ್​ನಲ್ಲಿರೋದು ಒಂದೇ ಡೈಲಾಗ್. ನನ್ನ ಹೆಸರು ತಾರಕಮೂರ್ತಿ. ಎಲ್ಲರೂ ಪ್ರೀತಿಯಿಂದ ತಾರಕ್ ಅಂತಾರೆ. 

  ದರ್ಶನ್​ಗೆ ಇಂಥಾದ್ದೊಂದು ಟ್ರೆಂಡೀ ಲುಕ್ ಕೊಟ್ಟಿರುವುದು ಮಿಲನ ಖ್ಯಾತಿಯ ಪ್ರಕಾಶ್. ಲಕ್ಷ್ಮಣ ದುಶ್ಯಂತ್ ನಿರ್ಮಾಣದ ತಾರಕ್ ಟ್ರೇಲ್ ಅಷ್ಟರಮಟ್ಟಿಗೆ ಕ್ರೇಜ್ ಸೃಷ್ಟಿಸಿದೆ. ಇನ್ನು ಟ್ರೇಲರ್ ನೋಡಿ, ಚಿತ್ರದ ಬಿಡುಗಡೆ ಯಾವಾಗ ಎಂದು ಕಾಯುವುದು ದರ್ಶನ್ ಅಭಿಮಾನಿಗಳಿಗೆ ಬಿಟ್ಟಿದ್ದು.

  Related Articles :-

  ತಾರಕ್ ಚಿತ್ರದ ಹೀರೋ ನಾನಲ್ಲ - ದರ್ಶನ್

  Tarak Songs Released

  Tarak Songs To Release Today

  Darshan Off To Switzerland For Tarak Shooting

 • ನಟಿ ಶೃತಿ ಹರಿಹರನ್ ಸೀಕ್ರೆಟ್ ಮದುವೆಯಾಗಿದ್ದಾರಂತೆ..!

  shruthi hariharan secret marriage gossip

  ಕನ್ನಡ ಚಿತ್ರರಂಗದಲ್ಲೀಗ ಸೀಕ್ರೆಟ್ ಮದುವೆಗಳದ್ದೇ ಸುದ್ದಿ. ರಮ್ಯಾ ಬಾರ್ನಾ ಗುಟ್ಟು ಗುಟ್ಟು ಮದುವೆಯ ನಂತರ, ಸಿಂಧು ಲೋಕನಾಥ್ ಮದುವೆಯಾಯ್ತು. ಸಿಂಧು ಮದುವೆ ಗುಟ್ಟೇನೂ ಅಲ್ಲದಿದ್ದರೂ, ಮದುವೆಯಾಗುವವರೆಗೆ ಬಹುತೇಕರಿಗೆ ಗೊತ್ತಿರಲಿಲ್ಲ. ಈಗ ಶೃತಿ ಹರಿಹರನ್ ಸರದಿ. ಹಾಗಂತ ಈ ಸುದ್ದಿ ಇನ್ನೂ ಖಚಿತವಾಗಿಲ್ಲ. ಸದ್ಯಕ್ಕಿದು ಗಾಂಧಿನಗರದ ಗಾಸಿಪ್.

  ಶೃತಿ ಹರಿಹರನ್ ತಿಂಗಳ ಹಿಂದೆಯೇ ತಮ್ಮ ಗೆಳೆಯ ರಾಮ್ ಅವರನ್ನು ಮದುವೆಯಾಗಿದ್ದಾರಂತೆ. ಸದ್ಯಕ್ಕೆ ವೃತ್ತಿ ಜೀವನದ ಉತ್ತುಂಗದಲ್ಲಿರುವ ಶೃತಿ ಹರಿಹರನ್, ಸದ್ಯಕ್ಕೆ ಇದನ್ನು ಮುಚ್ಚಿಟ್ಟಿದ್ದಾರಂತೆ. ತಾರಕ್ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ತಾರಕ್ ರಿಲೀಸಾದ ನಂತರ ಈ ವಿಷಯವನ್ನು ಬಹಿರಂಗಪಡಿಸಲು ಶೃತಿ ನಿರ್ಧರಿಸಿದ್ದಾರಂತೆ.

 • ನನ್ನ ವಿರುದ್ಧ ಎಫ್‍ಐಆರ್ ರದ್ದು ಮಾಡಿ - ಹೈಕೋರ್ಟ್‍ಗೆ ಶೃತಿ ಹರಿಹರನ್ ಮನವಿ

  sruthi hariharan questions the fir filed by high court

  ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳದ ಗಂಭೀರ ಆರೋಪ ಮಾಡಿದ್ದ ಶೃತಿ ಹರಿಹರನ್, ಈಗ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಶೃತಿ ಅವರ ಆರೋಪದ ನಂತರ ಶೃತಿ ಅವರ ಶಿವಾರ್ಜುನ್ ಕೇಸು ದಾಖಲಿಸಿದ್ದಾರೆ. ದೂರು ದಾಖಲಿಸಿದ ನಂತರ ಎಫ್‍ಐಆರ್ ಮಾಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. 

  ಈ ಎಫ್‍ಐಆರ್ ರದ್ದು ಮಾಡುವಂತೆ ಕೋರಿ ಶೃತಿ ಹರಿಹರನ್ ಹೈಕೋರ್ಟ್‍ಗೆ ಮನವಿ ಸಲ್ಲಿಸಿದ್ದಾರೆ. ನನ್ನ ವಿರುದ್ಧದ ಕೇಸ್ ದುರುದ್ದೇಶಪೂರ್ವಕವಾಗಿದ್ದು, ಪ್ರಕರಣ ರದ್ದು ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

 • ಪ್ರೀತಿ ನಿಜ, ಮದುವೆ ಸುಳ್ಳು - ಶೃತಿ ಹರಿಹರನ್

  sruthi hariharan reacts

  ಶೃತಿ ಹರಿಹರನ್ ಮದುವೆಯಾಗಿದ್ದಾರೆ ಎಂಬ ವದಂತಿ ಗಾಂಧಿನಗರದಲ್ಲಿ ಹರಿದಾಡುತ್ತಿತ್ತು. ಆದರೆ, ಚಿತ್ರರಂಗದಲ್ಲಿ ಸದ್ಯಕ್ಕೆ ಉತ್ತುಂಗದಲ್ಲಿರುವ ಕಾರಣಕ್ಕೆ ಅದನ್ನು ಗುಟ್ಟಾಗಿದ್ದಾರೆ ಎನ್ನಲಾಗಿತ್ತು. ಆ ಗಾಸಿಪ್​ಗಳಿಗೆ ನಟಿ ಶೃತಿ ಹರಿಹರನ್ ಪ್ರತಿಕ್ರಿಯೆ ನೀಡಿದ್ದಾರೆ.

  ಮದುವೆ ಆಗೋದು ನಿಜ. ಆದರೆ, ಸದ್ಯಕ್ಕೆ ಆಗಿಲ್ಲ. ನಾನು ಮದುವೆಯಾಗಿದ್ದೇನೆ ಎನ್ನಲಾಗುತ್ತಿರುವ ರಾಮ್ ಕುಮಾರ್, ನನಗೆ ಚಿತ್ರರಂಗಕ್ಕೆ ಬರುವ ಮೊದಲಿನಿಂದಲೂ ಗೊತ್ತು. ಮದುವೆ ಆಗುವಾಗ ಎಲ್ಲರಿಗೂ ಹೇಳಿಯೇ ಮದುವೆಯಾಗುತ್ತೇನೆ. ಇಷ್ಟಕ್ಕೂ ಅದು ನನ್ನ ಪರ್ಸನಲ್ ಎಂದಿದ್ದಾರೆ ಶೃತಿ ಹರಿಹರನ್.     

  ನಾನು ಡ್ಯಾನ್ಸ್ ಮಾಸ್ಟರ್ ಜೊತೆ ಮದುವೆ ಆಗಿದ್ದೇನೆ ಅಂತ ಸುದ್ದಿ ಹರಡಿದೆ. ಆದರೆ ನಾನು ಮದುವೆ ಆಗುತ್ತಿರುವಾತ ಡ್ಯಾನ್ಸ್ ಮಾಸ್ಟರ್ ಅಲ್ಲ. ಮುಚ್ಚಿಡುವಂಥಾದ್ದು ಏನೂ ಇಲ್ಲ ಎಂದಿದ್ದಾರೆ ಶೃತಿ ಹರಿಹರನ್.

  Related Articles :-

  ನಟಿ ಶೃತಿ ಹರಿಹರನ್ ಸೀಕ್ರೆಟ್ ಮದುವೆಯಾಗಿದ್ದಾರಂತೆ..!

 • ಫಿಲಂ ಚೇಂಬರ್, ಅಂಬರೀಷ್ ಮೀಟೂ ಸಂಧಾನ ವಿಫಲ

  me too meeting failed

  ಅರ್ಜುನ್ ಸರ್ಜಾ ವರ್ಸಸ್ ಶೃತಿ ಹರಿಹರನ್ ಮೀಟೂ ಆರೋಪ ಪ್ರತ್ಯಾರೋಪಗಳ ಕುರಿತಂತೆ ಫಿಲಂಚೇಂಬರ್‍ನಲ್ಲಿ ನಡೆದ 3 ತಾಸುಗಳ ಸುದೀರ್ಘ ಸಂಧಾನ ಸಭೆ ವಿಫಲಗೊಂಡಿದೆ. ಶೃತಿ ಹರಿಹರನ್ ಆಗಲೀ, ಅರ್ಜುನ್ ಸರ್ಜಾ ಆಗಲೀ ಕ್ಷಮೆ ಕೇಳುವುದಿಲ್ಲ ಎಂದು ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಅಂಬರೀಷ್ ಕೂಡಾ ವಿವಾದ ಬಗೆಹರಿಸುವಲ್ಲಿ ವಿಫಲರಾಗಿದ್ದಾರೆ. 

  ಕೋರ್ಟ್‍ನಲ್ಲಿ ಕೇಸು ಹಾಕಿದ್ದೇನೆ. ಅಲ್ಲಿಯೇ ನೋಡಿಕೊಳ್ಳುತ್ತೇನೆ ಎಂದು ಅರ್ಜುನ್ ಸರ್ಜಾ ಹೇಳಿದರೆ, ನಾನೂ ಅಲ್ಲಿಯೇ ನೋಡಿಕೊಳ್ತೇನೆ ಎಂದಿದ್ದಾರೆ ಶೃತಿ ಹರಿಹರನ್. ಚಿತ್ರೋದ್ಯಮದ ಗೌರವ, ಕಲಾವಿದರ ಭವಿಷ್ಯವನ್ನು ಹಾಳು ಮಾಡಬೇಡಿ ಎಂದು ಅಂಬರೀಷ್ ನೇತೃತ್ವದ ಸಮಿತಿ ವಿನಂತಿ ಮಾಡಿಕೊಂಡಿತು. ಆದರೆ, ಇಬ್ಬರೂ ಕೂಡಾ ತಮಗೆ ಅನ್ಯಾಯವಾಗಿದೆ. ನೋವಾಗಿದೆ. ಸಂಧಾನ ಸಾಧ್ಯವಿಲ್ಲ. ಕ್ಷಮೆ ಕೋರುವ ಪ್ರಶ್ನೆಯೇ ಇಲ್ಲ ಎಂದರು. ಈಗಾಗಿ ಸಭೆ ವಿಫಲಗೊಂಡಿತು.

  ಸಂಧಾನ ಸಭೆಯಲ್ಲಿ ಅಂಬರೀಷ್, ಫಿಲಂ ಚೇಂಬರ್ ಅಧ್ಯಕ್ಷ ಚಿನ್ನೇಗೌಡ, ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್, ನಿರ್ಮಾಪಕರ ಸಂಘದ ಅಧ್ಯಕ್ಷ ಮುನಿರತ್ನ, ಚೇಂಬರ್‍ನ ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದು ಭಾಗವಹಿಸಿದ್ದರು.

 • ಫಿಲ್ಮ್‍ಫೇರ್‍ನಲ್ಲಿ ಪುನೀತ್, ಶೃತಿ, ಚೌಕ ದಿ ಬೆಸ್ಟ್

  film fare award list

  ಪ್ರತಿಷ್ಟಿತ ಫಿಲ್ಮ್‍ಫೇರ್ ಪ್ರಶಸ್ತಿ ಪ್ರಕಟಗೊಂಡಿದೆ. ಈ ಬಾರಿಯ ಶ್ರೇಷ್ಟ ನಟ ಪ್ರಶಸ್ತಿ ಪುನೀತ್ ರಾಜ್‍ಕುಮಾರ್ ಅವರಿಗೆ ನೀಡಲಾಗಿದೆ. ರಾಜಕುಮಾರ ಚಿತ್ರದ ನಟನೆಗೆ ಪುನೀತ್ ಶ್ರೇಷ್ಟರಾಗಿದ್ದರೆ, ಶ್ರೇಷ್ಟ ನಟಿಯಾಗಿರುವುದು ಶೃತಿ ಹರಿಹರನ್. ಇದೇ ಚಿತ್ರಕ್ಕೆ ರಾಜ್ಯ ಪ್ರಶಸ್ತಿಯನ್ನೂ ಪಡೆದಿರುವ ಶೃತಿ, ಫಿಲ್ಮ್‍ಫೇರ್ ಪ್ರಶಸ್ತಿಯನ್ನೂ ಗೆದ್ದುಕೊಂಡಿದ್ದಾರೆ.

  ಈ ಬಾರಿ ಅತಿ ಹೆಚ್ಚು ಪ್ರಶಸ್ತಿ ಗೆದ್ದಿರುವ ಚಿತ್ರ, ಯೋಗಿ ದ್ವಾರಕೀಶ್ ನಿರ್ಮಾಣದ ಚೌಕ. ಚೌಕ ಚಿತ್ರದ ನಿರ್ದೆಶನಕ್ಕಾಗಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ತರುಣ್ ಸುಧೀರ್ ಪಾಲಾದರೆ, ಚಿತ್ರದ ಅಪ್ಪಾ ಐ ಲವ್ ಯೂ ಪಾ ಹಾಡಿಗಾಗಿ ಗಾಯಕಿ ಅನುರಾಧಾ ಭಟ್ ಹಾಗೂ ಚಿತ್ರ ಸಾಹಿತಿ ನಾಗೇಂದ್ರ ಪ್ರಸಾದ್ ಪ್ರಶಸ್ತಿ ಸ್ವೀಕರಿಸಿದ್ರು. ಒಟ್ಟಿನಲ್ಲಿ ಚೌಕ ಚಿತ್ರ 3 ಫಿಲ್ಮ್‍ಫೇರ್ ಪ್ರಶಸ್ತಿ ಪಡೆಯಿತು.

  ಶ್ರೇಷ್ಟ ಪೋಷಕ ನಟ ಪ್ರಶಸ್ತಿ ರವಿಶಂಕರ್ (ಕಾಲೇಜ್ ಕುಮಾರ), ಶ್ರೇಷ್ಟ ಪೋಷಕ ನಟಿ ಪ್ರಶಸ್ತಿ ಭವಾನಿ ಪ್ರಕಾಶ್(ಉರ್ವಿ) ಅವರಿಗೆ ಸಂದಿದ್ದರೆ, ಈ ವರ್ಷದ ಬೆಸ್ಟ್ ಸಿನಿಮಾ ಪ್ರಶಸ್ತಿ, ಒಂದು ಮೊಟ್ಟೆಯ ಕಥೆ ಚಿತ್ರಕ್ಕೆ ಸಂದಿದೆ. 

  ಅತ್ಯುತ್ತಮ ಸಂಗೀತ ನಿರ್ದೇಶಕ ಭರತ್ (ಬ್ಯೂಟಿಫುಲ್ ಮನಸುಗಳು), ಅತ್ಯುತ್ತಮ ಗಾಯಕ ಅರ್ಮಾನ್ ಮಲಿಕ್ ಅತ್ಯುತ್ತಮ ಗಾಯಕ (ಒಂದು ಮಳೆಬಿಲ್ಲು.. ಚಿತ್ರ: ಚಕ್ರವರ್ತಿ) ಪ್ರಶಸ್ತಿ  ಮುಡಿಗೇರಿಸಿಕೊಂಡಿದ್ದಾರೆ.

  ಇನ್ನು ವಿಮರ್ಶಕರ ಪ್ರಶಸ್ತಿ ಪಟ್ಟಿಯಲ್ಲಿ ಶ್ರೇಷ್ಟನಟಿಯಾಗಿ ಶ್ರದ್ಧಾ ಶ್ರೀನಾಥ್ (ಚಿತ್ರ:ಆಪರೇಷನ್ ಅಲಮೇಲಮ್ಮ) ಹಾಗೂ ಶ್ರೇಷ್ಟನಟನಾಗಿ ಧನಂಜಯ್ (ಚಿತ್ರ: ಅಲ್ಲಮ) ಹೊರಹೊಮ್ಮಿದ್ದಾರೆ.

 • ಬಾಲಿವುಡ್‍ಗೆ ಗೋಧಿ ಬಣ್ಣ..

  godi banna to be remake in hindi

  ಗೋಧಿ ಬಣ್ಣ ಸಾಧಾರಣ ಮೈಕಟ್ಟು.. ತನ್ನ ವಿಭಿನ್ನ ಟೈಟಲ್‍ನಿಂದಾಗಿಯೇ ಗಮನ ಸೆಳೆದಿದ್ದ ಚಿತ್ರ, ವಿಶಿಷ್ಟ ಕಥೆ, ಅನಂತ್‍ನಾಗ್, ರಕ್ಷಿತ್ ಶೆಟ್ಟಿ, ಶ್ರುತಿ ಹರಿಹರನ್ ಅವರ ಅಭಿನಯ, ಹೇಮಂತ್ ರಾವ್ ಅವರ ಅಚ್ಚುಕಟ್ಟಾದ ನಿರ್ದೇಶನದಿಂದ ಕನ್ನಡಿಗರ ಮನ ಗೆದ್ದಿತ್ತು. ಹೀಗೆ ಕನ್ನಡಿಗರ ಮನಗೆದ್ದಿದ್ದ ಚಿತ್ರ, ಈಗ ಬಾಲಿವುಡ್‍ಗೆ ಹೊರಟಿದೆ.

  ಸುಮಾರು ದಿನಗಳಿಂದ ಮಾತುಕತೆ ನಡೆಯುತ್ತಿತ್ತು. ಈಗ ಫೈನಲ್ ಆಗಿದೆ. ಕನ್ನಡದ ಚಿತ್ರವೊಂದು ಹಿಂದಿಗೆ ರೀಮೇಕ್ ಆಗಲಿದೆ. ನನ್ನ ಚಿತ್ರವೇ ರೀಮೇಕ್ ಆಗಲಿದೆ ಎನ್ನುವುದು ಹೆಮ್ಮೆಯ ವಿಚಾರ ಎಂದು ಖುಷಿ ಹಂಚಿಕೊಂಡಿದ್ದಾರೆ ಹೇಮಂತ್ ರಾವ್.

  ಗೋಧಿಬಣ್ಣದ ನಿರ್ಮಾಪಕರಾದ ಪುಷ್ಕರ್, ರಕ್ಷಿತ್ ಶೆಟ್ಟಿ ಎಲ್ಲರೂ ಗೋಧಿ ಬಣ್ಣಕ್ಕೆ ಸಿಕ್ಕ ಮನ್ನಣೆ ನೋಡಿ ಖುಷಿಗೊಂಡಿದ್ದಾರೆ. ಹಿಂದಿಯಲ್ಲಿ ತಯಾರಾಗುತ್ತಿರುವ ಗೋಧಿ ಬಣ್ಣದ ತಾರಾಬಳಗ, ತಂತ್ರಜ್ಞರ ಬಗ್ಗೆ ಇನ್ನೂ ಮಾಹಿತಿ ಹೊರಬಿದ್ದಿಲ್ಲ.

 • ಮಧ್ಯರಾತ್ರಿ ದೂರು ನೀಡಿದ ಶೃತಿ ಹರಿಹರನ್

  sruthi hariharan files complaint at night

  ಅರ್ಜುನ್ ಸರ್ಜಾ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದ ಶೃತಿ ಹರಿಹರನ್, ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಬೆಂಗಳೂರಿನ ಹೈಗ್ರೌಂಡ್ಸ್ ಠಾಣೆಗೆ ಮಧ್ಯರಾತ್ರಿ 12 ಗಂಟೆ ವೇಳೆ ದೂರು ಕೊಟ್ಟಿದ್ದಾರೆ.

  ಫಿಲಂ ಚೇಂಬರ್‍ನಲ್ಲಿ ಚಿನ್ನೇಗೌಡರು ಹಾಗೂ ಅಂಬರೀಷ್ ಅವರ ಜೊತೆ ಸಭೆ ನಡೆಯುವಾಗ, ಚೇಂಬರ್‍ನ ಹೊರಗೆ ಪ್ರಶಾಂತ್ ಸಂಬರಗಿ ನನ್ನ ವಿರುದ್ಧ ಕೆಟ್ಟದಾಗಿ ಮಾತನಾಡಿದ್ದಾರೆ. ನನ್ನ ವಿರುದ್ಧ ಒಂದು ಧರ್ಮದವರನ್ನು ಎತ್ತಿ ಕಟ್ಟುವ ಪ್ರಯತ್ನ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧವೇ ಇಲ್ಲದವರನ್ನು ಸೇರಿಸಿ, ನನಗೆ ಜೀವ ಬೆದರಿಕೆಯೊಡ್ಡಿದ್ದಾರೆ. ಅವರ ಬಳಿ ನನ್ನ 3 ಫೇಸ್‍ಬುಕ್ ಅಕೌಂಟ್‍ಗಳ ಮಾಹಿತಿ ಇದೆಯಂತೆ. ಇದು ನನ್ನ ಖಾಸಗಿತನಕ್ಕೆ ಧಕ್ಕೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

  ಮಾಧ್ಯಮಗಳ ಎದುರು ಶೃತಿ ಹರಿಹರನ್ ಅವರ ಈ ಆರೋಪದ ಹಿಂದೆ ಕ್ರೈಸ್ತ ಮಿಷನರಿಗಳು, ಅಮೆರಿಕ, ದುಬೈನ ಕೆಲವು ಹಿತಾಸಕ್ತಿಗಳು ಹಾಗೂ ಇಬ್ಬರು ಹಿರಿಯ ನಟರ ಕೈವಾಡವಿದೆ ಎಂದು ಪ್ರಶಾಂತ್ ಸಂಬರಗಿ ಆರೋಪಿಸಿದ್ದರು. ಇದೇ ವೇಳೆ ಅರ್ಜುನ್ ಸರ್ಜಾರ ಕೆಲವು ಅಭಿಮಾನಿಗಳು ಚೇಂಬರ್ ಎದುರು ಆಗಮಿಸಿ ಶೃತಿ ವಿರುದ್ಧ ಘೋಷಣೆ ಕೂಗಿದ್ದರು.

 • ಮೀ ಟೂ ಕೇಸ್ : ಶೃತಿ ಹರಿಹರನ್ ಆರೋಪದಿಂದ ಮುಕ್ತರಾದ ಅರ್ಜುನ್ ಸರ್ಜಾ

  ಮೀ ಟೂ ಕೇಸ್ : ಶೃತಿ ಹರಿಹರನ್ ಆರೋಪದಿಂದ ಮುಕ್ತರಾದ ಅರ್ಜುನ್ ಸರ್ಜಾ

  ಸುಮಾರು 3 ವರ್ಷಗಳ ಹಿಂದೆ ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿದ್ದ ಪ್ರಕರಣ ಮೀಟೂ ಕೇಸ್. ನಟಿ ಶೃತಿ ಹರಿಹರನ್, ಅರ್ಜುನ್ ಸರ್ಜಾ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ವಿಸ್ಮಯ ಚಿತ್ರದ ಚಿತ್ರೀಕರಣ ವೇಳೆ ಅರ್ಜುನ್ ಸರ್ಜಾ ನನ್ನೊಂದಿಗೆ ಅಸಭ್ಯವಾಗಿ ವರ್ತಿಸಿದ್ದರು ಎಂದು ಶೃತಿ ಹರಿಹರನ್ ಆರೋಪಿಸಿದ್ದರು.

  ಪ್ರಕರಣದ ವಿಚಾರಣೆ ನಡೆಸಿರುವ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಬಿ ರಿಪೋರ್ಟ್ ಸಲ್ಲಿಸಿದ್ದಾರೆ. ಬೆಂಗಳೂರಿನ 8ನೇ ಎಸಿಎಂಎಂ ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಲಾಗಿದೆ. ನಟಿ ಶೃತಿ ಹರಿಹರನ್ ತಾವು ಮಾಡಿದ್ದ ಆರೋಪಕ್ಕೆ ಯಾವುದೇ ಸಾಕ್ಷ್ಯ ನೀಡುವಲ್ಲಿ ವಿಫಲರಾಗಿರುವ ಕಾರಣ ಬಿ ರಿಪೋರ್ಟ್ ಸಲ್ಲಿಸಲಾಗಿದೆ.

  ವಿಚಾರಣೆಯನ್ನು ಜನವರಿ 13ಕ್ಕೆ ಮುಂದೂಡಿರುವ ನ್ಯಾಯಾಲಯ, ಬಿ ರಿಪೋರ್ಟ್ ಬಗ್ಗೆ ಯಾವುದೇ ಆಕ್ಷೇಪವಿದ್ದಲ್ಲಿ ಆ ದಿನ ನ್ಯಾಯಾಲಯಕ್ಕೆ ಹಾಜರಾಗಿ ವಿವರಣೆ ನೀಡುವಂತೆ ಶೃತಿ ಹರಿಹರನ್ ಅವರಿಗೆ ನೋಟಿಸ್ ನೀಡಿದೆ. ಬಿ ರಿಪೋರ್ಟ್ ಸಲ್ಲಿಸುವುದಕ್ಕೂ ಮುನ್ನ ಪೊಲೀಸರು ಶೃತಿ ಹರಿಹರನ್ ಅವರಿಗೆ ಮಾಹಿತಿ ನೀಡಿದ್ದರಾದರೂ, ಶೃತಿ ಹರಿಹರನ್ ಸಾಕ್ಷ್ಯಾಧಾರ ಒದಗಿಸುವಲ್ಲಿ ವಿಫಲರಾಗಿದ್ದಾರೆ.

 • ಮೀಟೂ ಸ್ಟಾರ್ ಶೃತಿ ಕೈಲೀಗ ಒಂದ್ ಸಿನಿಮಾನೂ ಇಲ್ಲ..!

  sruthi hariharan has no movies in hand

  ಅರ್ಜುನ್ ಸರ್ಜಾ ಮೇಲೆ ಮೀಟೂ ಬಾಂಬ್ ಸಿಡಿಸಿದ ಶೃತಿ ಹರಿಹರನ್ ಕೈಲೀಗ ಒಂದು ಸಿನಿಮಾನೂ ಇಲ್ಲ. ನೃತ್ಯಗಾರ್ತಿಯಾಗಿದ್ದ ಶೃತಿ, ಲೂಸಿಯಾ ಮೂಲಕ ನಾಯಕಿಯಾದ್ರು. ಅದಾದ ಮೇಲೆ ನಾಯಕಿಯಾಗಿ, ಅತಿಥಿ ನಟಿಯಾಗಿ, ಡ್ಯಾನ್ಸರ್ ಆಗಿ ಒಟ್ಟು 18 ಸಿನಿಮಾಗಳಲ್ಲಿ ನಟಿಸಿದ್ದಾರೆ. ಮೂರ್ನಾಲ್ಕು ಚಿತ್ರಗಳು ಹಿಟ್ ಆಗಿವೆ. ಒಂದು ರಾಜ್ಯೋತ್ಸವ ಪ್ರಶಸ್ತಿಯೂ ಸಿಕ್ಕಿದೆ. ಇಷ್ಟೆಲ್ಲ ಇದ್ದರೂ, ಶೃತಿ ಕೈಲೀಗ ಒಂದೇ ಒಂದು ಸಿನಿಮಾನೂ ಇಲ್ಲ.

  ಅವರು ನಟಿಸಿದ್ದ ನಾತಿಚರಾಮಿ ಚಿತ್ರ ರಿಲೀಸ್‍ಗೆ ರೆಡಿಯಾಗಿದೆ. ಟಿಸ್ಲಾ ಚಿತ್ರ ಶೂಟಿಂಗ್ ಮುಗಿಸಿದೆ. ಒಪ್ಪಿಕೊಳ್ಳಬೇಕಿದ್ದ, ಮಾತುಕತೆ ಹಂತದಲ್ಲಿದ್ದ ದಾರಿ ತಪ್ಪಿಸು ದೇವರೇ ಚಿತ್ರ ತಂಡ ಶೃತಿ ಹರಿಹರನ್ ಅವರನ್ನು ಚಿತ್ರದಿಂದ ಕೈಬಿಟ್ಟಿದೆಯಂತೆ. ಅದಕ್ಕೆ ಡೇಟ್ಸ್ ಪ್ರಾಬ್ಲಂ ಕಾರಣ ಎನ್ನುತ್ತಿದೆ ಚಿತ್ರತಂಡ.

  ಮೀಟೂ ಮುಗಿದ ನಂತರ ಶೃತಿ ಅಮೆರಿಕಕ್ಕೆ ತೆರಳಲಿದ್ದಾರಂತೆ. ಅಲ್ಲಿ ಯಾವುದೋ ಕೋರ್ಸು ಮಾಡಲಿದ್ದಾರಂತೆ. ಯಾವ ಕೋರ್ಸು ಎನ್ನುವುದಕ್ಕೆ ಉತ್ತರ ಲಭ್ಯವಿಲ್ಲ.

 • ಯಂಗ್ ಅಂಬಿಗೆ ಶೃತಿ ಹರಿಹರನ್ ಜೋಡಿ

  Ambi Ninge Vayassaitho

  ಅಂಬಿ ನಿಂಗೆ ವಯಸ್ಸಾಯ್ತೋ.. ಕಿಚ್ಚ ಕ್ರಿಯೇಷನ್ಸ್‍ನಲ್ಲಿ ಬರುತ್ತಿರುವ ಚಿತ್ರದಲ್ಲಿ ಕಿಚ್ಚ ಸುದೀಪ್, ಯಂಗ್ ಅಂಬರೀಷ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಯುವಕ ಅಂಬರೀಷ್ ಪಾತ್ರದಲ್ಲಿ ನಟಿಸುತ್ತಿರುವುದು ಸುದೀಪ್.

  ಸೀನಿಯರ್ ಅಂಬರೀಷ್‍ಗೆ ಸುಹಾಸಿನಿ ಜೋಡಿಯಾಗಿದ್ದರೆ, ಜ್ಯೂನಿಯರ್ ಅಂಬರೀಷ್‍ಗೆ ಯಾರು ಜೋಡಿ ಅನ್ನೋ ಪ್ರಶ್ನೆ ಇತ್ತು. ಆ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಸುದೀಪ್‍ಗೆ ಜೋಡಿಯಾಗುತ್ತಿರುವುದು ಶೃತಿ ಹರಿಹರನ್.

  Related Articles :-

  Shruthi Haran In Ambi Ninge Vayassaitho