` shraddha srinath, - chitraloka.com | Kannada Movie News, Reviews | Image

shraddha srinath,

 • ಕನ್ನಡದಲ್ಲಿ ತೆರೆಗೆ ಬರುತ್ತಿದೆ `ಗೋದ್ರಾ' - ಅದು ಗೋದ್ರಾ ಹತ್ಯಾಕಾಂಡದ ಕಥೇನಾ..?

  godhra image

  ಗೋದ್ರಾ ಹತ್ಯಾಕಾಂಡ. ಭಾರತದ ಇತಿಹಾಸದ ಕರಾಳ ಘಟನೆ. ಚಲಿಸುತ್ತಿದ್ದ ರೈಲಿಗೆ ಬೆಂಕಿ ಹಚ್ಚಿ, ರೈಲಿನಲ್ಲಿದ್ದ 50ಕ್ಕೂ ಹೆಚ್ಚು ಆರ್‍ಎಸ್‍ಎಸ್ ಕಾರ್ಯಕರ್ತರನ್ನು ಕೊಲ್ಲಲಾಗಿತ್ತು. ಅದಕ್ಕೆ ಪ್ರತಿಯಾಗಿ ನಡೆದ ಗೋದ್ರೋತ್ತರ ಹಿಂಸಾಚಾರವಂತೂ ಇನ್ನೂ ಭೀಕರವಾಗಿತ್ತು. ಈ ಕುರಿತು ಇದುವರೆಗೆ ಬಾಲಿವುಡ್ ಕೂಡಾ ಸಿನಿಮಾ ಮಾಡುವ ಸಾಹಸಕ್ಕೆ ಕೈ ಹಾಕಿಲ್ಲ. ಅಂಥಾದ್ದರಲ್ಲಿ ಕನ್ನಡದಲ್ಲಿ ಗೋದ್ರಾ ಎಂಬ ಹೆಸರಿನ ಚಿತ್ರವೊಂದು ಸೆಟ್ಟೇರುತ್ತಿದೆ.

  ನೀನಾಸಂ ಸತೀಶ್ ನಾಯಕರಾಗಿರುವ ಚಿತ್ರಕ್ಕೆ ಶ್ರದ್ಧಾ ಶ್ರೀನಾಥ್ ಹೀರೋಯಿನ್. ಜೇಕಬ್ ವರ್ಗಿಸ್ ಅವರ ಬಳಿ ಸಹಾಯಕರಾಗಿದ್ದ ನಂದೀಶ್ ಈ ಚಿತ್ರದ ನಿರ್ದೇಶಕ. ಅವರಿಗಿದು ಮೊದಲ ಪ್ರಯತ್ನ.

  ಗೋದ್ರಾ ಎಂಬ ಹೆಸರಿದ್ದರೂ, ಚಿತ್ರದ ಕಥೆಗೂ, ಗೋದ್ರಾ ಹತ್ಯಾಕಾಂಡಕ್ಕೂ ಸಂಬಂಧವಿಲ್ಲ ಎನ್ನುತ್ತಾರೆ ನಂದೀಶ್. ಆದರೆ, ತಮ್ಮ ಚಿತ್ರದ ಕಥೆಗೆ ಈ ಹೆಸರೇ ಸೂಕ್ತ ಎನ್ನುವ ಮೂಲಕ ಸಣ್ಣದೊಂದು ಗೊಂದಲ ಸೃಷ್ಟಿಸುತ್ತಾರೆ.

  ಇದು ಪೊಲಿಟಿಕಲ್ ಡ್ರಾಮಾ ಎನ್ನುತ್ತಾರೆ ಶ್ರದ್ಧಾ. ಇದುವರೆಗೆ ಇಂಥಾದ್ದೊಂದು ಪ್ರಬುದ್ಧ ಪಾತ್ರ ಸಿಕ್ಕಿರಲಿಲ್ಲ ಎನ್ನುತ್ತಾರೆ ನೀನಾಸಂ ಸತೀಶ್. ನೋಡೋಣ.. ಚಿತ್ರದಲ್ಲಿ ಇನ್ನೂ ಏನೇನಿರುತ್ತೋ..?

 • ಕರುಣಾನಿಧಿ ಮೊಮ್ಮಗನಿಗೆ ಶ್ರದ್ಧಾ ಶ್ರೀನಾಥ್ ನಾಯಕಿ

  shradhha heroine for udaynidhi stanlin

  ಶ್ರದ್ಧಾ ಶ್ರೀನಾಥ್.. ಯು ಟರ್ನ್‍ನ ಬೆಡಗಿ, ಆಪರೇಷನ್ ಅಲಮೇಲಮ್ಮನ ಟೀಚರ್ ಆಗಿ ಕನ್ನಡಿಗರಿಗೆ ಚಿರಪರಿಚಿತ. ಈಗ ವಿಕ್ರಂವೇದ ಚಿತ್ರದ ಮೂಲಕ ತಮಿಳಿನಲ್ಲೂ ಸ್ಟಾರ್ ಆಗಿದ್ದಾರೆ. ವಿಕ್ರಂವೇದ ತಮಿಳಿನಲ್ಲಿ ಸೂಪರ್ ಡ್ಯೂಪರ್ ಹಿಟ್. ಹೀಗಾಗಿ ಶ್ರದ್ಧಾ ಶ್ರೀನಾಥ್, ತಮಿಳು ಚಿತ್ರಪ್ರೇಮಿಗಳ ಅಚ್ಚುಮೆಚ್ಚಿನ ನಟಿ. ಅದರಲ್ಲೂ ವಿಭಿನ್ನ ರೀತಿಯ ಕಥೆ ಮಾಡುವವರೆಲ್ಲ ಶ್ರದ್ಧಾ ಶ್ರೀನಾಥ್ ಬೆನ್ನು ಹತ್ತಿದ್ದಾರಂತೆ.

  ತಮಿಳಿನಲ್ಲಿ ವಿಕ್ರಂವೇದ ಅಷ್ಟೇ ಅಲ್ಲ, ಶ್ರದ್ಧಾ ನಟಿಸಿದ್ದ ಮಣಿರತ್ನಂ ನಿರ್ದೇಶನದ ಕಾಟ್ರು ವೆಲಿಯಿದೈ, ಕಣ್ಣನ್ ನಿರ್ದೇಶನದ ಇವನ್ ಪಾಂಥಿರನ್ ಚಿತ್ರಗಳೂ ತಮಿಳಿನಲ್ಲಿ ಗಮನ ಸೆಳೆದಿವೆ. ಹೀಗಿರುವಾಗಲೇ ಕರುಣಾನಿಧಿಯವರ ಮೊಮ್ಮಗ ಉದಯನಿಧಿ ಸ್ಟಾಲಿನ್ ಅಭಿನಯದ ಚಿತ್ರಕ್ಕೂ ಶ್ರದ್ಧಾ ನಾಯಕಿ ಎನ್ನಲಾಗುತ್ತಿದೆ.

  ಕಥೆಯ ಬಗ್ಗೆ ಮಾತುಕತೆ ನಡೆಯುತ್ತಿದೆ. ಇನ್ನೂ ಫೈನಲ್ ಆಗಿಲ್ಲ ಎಂದಿದ್ದಾರೆ ಶ್ರದ್ಧಾ ಶ್ರೀನಾಥ್. ಕನ್ನಡದಲ್ಲಿ ಗೋದ್ರಾ, ಜಾನಿ ಜಾನಿ ಎಸ್ ಪಪ್ಪಾ, ಶಾದಿಭಾಗ್ಯ ಚಿತ್ರಗಳಲ್ಲಿ ಬ್ಯುಸಿಯಾಗಿರುವ ಶ್ರದ್ಧಾ ಕೈಲಿ, ತಮಿಳಿನ ಕೆಲವು ಪ್ರಾಜೆಕ್ಟ್‍ಗಳೂ ಇವೆ.

 • ಗೋದ್ರಾ ಟೀಸರ್ ಔಟ್ : ಎಂದೂ ಮುಗಿಯದ ಯುದ್ಧ

  godhra teaser out

  ನೀನಾಸಂ ಸತೀಶ್, ಶ್ರದ್ಧಾ ಶ್ರೀನಾಥ್ ಒಟ್ಟಿಗೇ ನಟಿಸಿರುವ ಮೊದಲ ಸಿನಿಮಾ ಗೋದ್ರಾ. ಎಂದೂ ಮುಗಿಯದ ಯುದ್ಧ ಅನ್ನೋದು ಟ್ಯಾಗ್‍ಲೈನ್. ಬಹುಕಾಲದ ನಿರೀಕ್ಷಿತ ಚಿತ್ರವಿದು. ಕಾರಣ ನಂ.1 ಚಿತ್ರದ ಟೈಟಲ್. ಏಕೆಂದರೆ, ಗೋದ್ರಾ ಅನ್ನೋ ಹೆಸರಿನಲ್ಲಿ ಭಾರತದ ಕರಾಳ ಇತಿಹಾಸವೊಂದು ಶಾಶ್ವತವಾಗಿ ನಿಂತಿದೆ. ಅಂಥಾದ್ದೊಂದು ಟೈಟಲ್ ಇಟ್ಟುಕೊಂಡು ಬರುತ್ತಿರುವ ಸಿನಿಮಾ ಕಥೆ ಏನಿರಬಹುದು ಅನ್ನೋ ಕುತೂಹಲ ಸಹಜವಾಗಿಯೇ ಇರುತ್ತೆ. ಚಿತ್ರದ ಟೀಸರ್ ಆ ಕುತೂಹಲವನ್ನು ಇನ್ನಷ್ಟು ಹೆಚ್ಚಿಸಿದೆ.

  ಅಲ್ಲಿ ರಾಜಕೀಯ, ಲವ್ ಸ್ಟೋರಿ, ನಕ್ಸಲ್ ಚಳವಳಿ, ಎಂಎನ್‍ಸಿಗಳ ವಿರುದ್ಧ ಹೋರಾಟ, ಹಿಂದುತ್ವದ ಕಿಚ್ಚು ಎಲ್ಲವೂ ಕಾಣಿಸುವ ಟೀಸರ್, ಕಥೆಯ ಒನ್ ಲೈನ್ ಗುಟ್ಟು ಬಿಟ್ಟುಕೊಟ್ಟಿಲ್ಲ.

  ಟೀಸರ್‍ನಲ್ಲಿ ಬರೋ ಖಡಕ್ ಡೈಲಾಗುಗಳು ರೋಮಾಂಚನ ಹುಟ್ಟಿಸುತ್ತವೆ. ನಿರ್ದೇಶಕ ಕೆ.ಎಸ್.ನಂದೀಶ್ ಭರವಸೆ ಹುಟ್ಟಿಸುತ್ತಾರೆ. ಜೇಕೋಬ್ ಫಿಲಂಸ್, ಲೀಡರ್ ಫಿಲಂಸ್ ಬ್ಯಾನರಿನಲ್ಲಿ ಬರುತ್ತಿರೋ ಚಿತ್ರದಲ್ಲಿ ಸತೀಶ್, ಶ್ರದ್ಧಾ ಜೊತೆಗೆ ಅಚ್ಯುತ್ ಕುಮಾರ್, ವಸಿಷ್ಠ ಸಿಂಹ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

 • ಗೋದ್ರಾದಲ್ಲಿ ವಾಜಪೇಯಿ ಬಂದಿರೋದೇಕೆ..?

  why was vajpaye's statement mentioned in godhra

  ನೀನಾಸಂ ಸತೀಶ್ ಅಭಿನಯದ ಗೋದ್ರಾ ಚಿತ್ರದ ಮೋಷನ್ ಪೋಸ್ಟರ್ ಸಾಕಷ್ಟು ಕುತೂಹಲ ಹುಟ್ಟಿಸಿದೆ. ಪೋಸ್ಟರ್ ಶುರುವಾಗುವುದೇ ವಾಜಪೇಯಿ ಅವರ ಪ್ರಖ್ಯಾತ ಹೇಳಿಕೆಯೊಂದಿಗೆ. ಜಾತ್ಯತೀತವಾಗಿಲ್ಲದೇ ಇದ್ದರೆ, ಅದು ಭಾರತವೇ ಅಲ್ಲ ಎಂಬ ಘೋಷದೊಂದಿಗೆ.

  ಅಚ್ಯುತ್ ಕುಮಾರ್, ವಸಿಷ್ಠ ಸಿಂಹ, ಶ್ರದ್ಧಾ ಶ್ರೀನಾಥ್, ಸೋನು ಗೌಡ, ರಕ್ಷಾ ಸೋಮಶೇಖರ್.. ಎಲ್ಲರ ಲುಕ್ ಪರಿಚಯವೂ ಮೋಷನ್ ಪೋಸ್ಟರ್‍ನಲ್ಲಿ ಸಿಗುತ್ತೆ. ಆದರೆ.. ವಾಜಪೇಯಿ ಬಂದಿದ್ದೇಕೆ, ಎಮರ್ಜೆನ್ಸಿ ಪ್ರಸ್ತಾಪ ಏಕೆ.. ಎಂಬ ಕುತೂಹಲಗಳು ಹಾಗೆಯೇ ಉಳಿದುಬಿಡುತ್ತವೆ.

  ಕೆ.ಎಸ್.ನಂದೀಶ್ ನಿರ್ದೇಶನದ ಗೋದ್ರಾ ಚಿತ್ರಕ್ಕೆ ಜಾಕಬ್ ಫಿಲ್ಮ್ಸ್ ಮತ್ತು ಲೀಡರ್ ಫಿಲ್ಮ್ಸ್ ನಿರ್ಮಾಪಕರು.

   

 • ಡ್ರಗ್ಸ್ ಪಾರ್ಟಿಯಲ್ಲಿ ಸೌಥ್ ಸ್ಟಾರ್ ನಟಿ ತಮ್ಮನ ಹೆಸರು..!

  ಡ್ರಗ್ಸ್ ಪಾರ್ಟಿಯಲ್ಲಿ ಸೌಥ್ ಸ್ಟಾರ್ ನಟಿ ತಮ್ಮನ ಹೆಸರು..!

  ಬೆಂಗಳೂರಿನ ಟ್ರಿನಿಟಿ ಸರ್ಕಲ್‍ನಲ್ಲಿರೋ ದಿ ಪಾರ್ಕ್ ಅನ್ನೋ ಫೈವ್ ಸ್ಟಾರ್ ಹೋಟೆಲ್ಲಿನ ಮೇಲೆ ಪೊಲೀಸರು ಭಾನುವಾರ ರಾತ್ರಿ ದಾಳಿ ಮಾಡಿದ್ದರು. ಆಗ ಸಿಕ್ಕಿಬಿದ್ದವರಲ್ಲಿ ಒಬ್ಬ ಸಿದ್ದಾಂತ್ ಕಪೂರ್. ಈತ ಬಾಲಿವುಡ್ ಸ್ಟಾರ್ ನಟ ಶಕ್ತಿ ಕಪೂರ್ ಮಗ. ನಟಿ ಶ್ರದ್ಧಾ ಕಪೂರ್ ಅಣ್ಣ. ಈ ಪಾರ್ಟಿಯಲ್ಲಿ ಸಿಕ್ಕಿಬಿದ್ದು ಜೈಲಿಗೆ ಹೋಗಿ, ಈಗ ಜಾಮೀನಿನ ಮೇಲೆ ಹೊರಗೆ ಬಂದಿದ್ದಾನೆ.

  ಇತ್ತೀಚೆಗಷ್ಟೇ ಸಂಜನಾ ಗಲ್ರಾನಿ, ರಾಗಿಣಿ ದ್ವಿವೇದಿ ಸೇರಿದಂತೆ ಬ್ಯಾಕ್ ಟು ಬ್ಯಾಕ್ ಚಿತ್ರನಟಿಯರ ಅರೆಸ್ಟ್ ಆಗಿತ್ತು. ಈಗ ಸಿದ್ದಾಂತ್ ಕಪೂರ್ ಸರದಿ. ಒನ್ಸ್ ಎಗೇನ್ ಈತನೂ ದೊಡ್ಡವರ ಮನೆ ಹುಡುಗನೇ.

  ಇದರ ಮಧ್ಯೆ ದಕ್ಷಿಣದ ಇನ್ನೊಬ್ಬ ನಟಿಯ ತಮ್ಮ ಪೊಲೀಸ್ ರೇಡ್ ಆಗುವ ವೇಳೆ ಎಸ್ಕೇಪ್ ಆಗಿದ್ದಾನೆ ಎನ್ನುವ ಮಾಹಿತಿ ಇದೆ. ಆ ಸ್ಟಾರ್ ನಟಿ ಇತ್ತೀಚೆಗೆ ದಕ್ಷಿಣ ಭಾರತ ಚಿತ್ರರಂಗದಲ್ಲಿ ಸಂಚಲನ ಮತ್ತು ವಿವಾದ ಎರಡನ್ನೂ ಸೃಷ್ಟಿಸಿದ್ದ ಹುಡುಗಿ. ದಕ್ಷಿಣ ಭಾರತ ಚಿತ್ರರಂಗದ ದೊಡ್ಡ ಸಿನಿಮಾ ಕುಟುಂಬದ ಸೊಸೆಯಾಗಿದ್ದ ಈಕೆ ಇತ್ತೀಚೆಗೆ ವಿಚ್ಛೇದನ ಪಡೆದಿದ್ದಾರೆ. ಈಕೆಯ ತಮ್ಮ ಪಾರ್ಟಿಯಲ್ಲಿದ್ದು ತಪ್ಪಿಸಿಕೊಂಡಿದ್ದಾನೆ ಎನ್ನುವುದು ಪೊಲೀಸ್ ಮೂಲಗಳ ಮಾಹಿತಿ. ಆತನಿಗೆ ಮಾಹಿತಿ ಲೀಕ್ ಆಗಿದ್ದು ಹೇಗೆ ಎಂದು ಪೊಲೀಸರೂ ಆಘಾತದಲ್ಲಿದ್ದಾರಂತೆ.

 • ದರ್ಶನ್ ಜೊತೆ ಶ್ರದ್ಧಾ ಶ್ರೀನಾಥ್..! ಏನ್ ವಿಷ್ಯ..?

  shraddha srinath meets darshan

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಮನೆಯಲ್ಲಿ ಶ್ರದ್ಧಾ ಶ್ರೀನಾಥ್ ಕಾಣಿಸಿಕೊಂಡಿದ್ದಾರೆ. ಸ್ವತಃ ದರ್ಶನ್ ಮನೆಗೆ ಹೋಗಿ, ಅವರನ್ನು ಭೇಟಿ ಮಾಡಿ, ಜೊತೆಯಲ್ಲಿ ಸಂದೇಶ್ ನಾಗರಾಜ್ ಅವರನ್ನೂ ಭೇಟಿ ಮಾಡಿ ಬಂದಿದ್ದಾರೆ. ದರ್ಶನ್ ಜೊತೆಗಿನ ಫೋಟೋ ಹಾಕಿಕೊಂಡು, ಸೂಪರ್ ಸಂಡೇ ಎಂದಿದ್ದಾರೆ. 

  ಕನ್ನಡ, ತಮಿಳು ಹಾಗೂ ಬಾಲಿವುಡ್‍ನಲ್ಲಿ ಮಿಂಚುತ್ತಿರುವ ಶ್ರದ್ಧಾ ಶ್ರೀನಾಥ್ ದರ್ಶನ್ ಮನೆಗೆ ಹೋಗಿದ್ದೇಕೆ. ಹಾಗಾದರೆ ದರ್ಶನ್ ಚಿತ್ರದಲ್ಲಿ ಶ್ರದ್ಧಾ ನಟಿಸುತ್ತಿದ್ದಾರಾ..? ಏನ್ ವಿಷ್ಯ..? ಸದ್ಯಕ್ಕೆ ನೋ ಆನ್ಸರ್. ಪ್ರಶ್ನೆಗಳಷ್ಟೆ.k

 • ಫಿಲಿಫೈನ್ಸ್ ಭಾಷೆಗೆ ಕನ್ನಡದ ಯು ಟರ್ನ್ ರೀಮೇಕ್

  u turn to be remade in philliphines

  ಕನ್ನಡದ ಚಿತ್ರಗಳು ಬೇರೆ ಭಾಷೆಗೆ ರೀಮೇಕ್ ಆಗುವ ಕಾಲ ಒಂದಾನೊಂದು ಕಾಲದಲ್ಲಿತ್ತು. ಇತ್ತೀಚೆಗೆ ಬೇರೆ ಭಾಷೆಯ ಚಿತ್ರಗಳೇ ಕನ್ನಡದಲ್ಲಿ ರೀಮೇಕ್ ಆಗಿ ನಳನಳಿಸುತ್ತವೆ ಎನ್ನುತ್ತಿರುವಾಗಲೇ, ಭರ್ಜರಿ ಸುದ್ದಿಯೊಂದು ಬಂದಿದೆ. ಕನ್ನಡದ ಯು ಟರ್ನ್ ಫಿಲಿಪೈನ್ಸ್ ಭಾಷೆಗೆ ರೀಮೇಕ್ ಆಗುತ್ತಿದೆ.

  ಯು ಟರ್ನ್, 2016ರಲ್ಲಿ ರಿಲೀಸ್ ಆಗಿದ್ದ ಸಿನಿಮಾ. ಶ್ರದ್ಧಾ ಶ್ರೀನಾಥ್, ರಾಧಿಕಾ ನಾರಾಯಣ್ ಅಭಿನಯಿಸಿದ್ದ ಸಿನಿಮಾ, ಸೂಪರ್ ಹಿಟ್ ಆಗಿತ್ತಷ್ಟೇ ಅಲ್ಲ, ತೆಲುಗು, ತಮಿಳಿನಲ್ಲಿಯೂ ರೀಮೇಕ್ ಆಗಿ ಗೆದ್ದಿತ್ತು. ಹಿಂದಿಗೂ ಹೋಗುತ್ತಿದೆ. ಹೀಗೆ ಇಲ್ಲಿ ದಾಖಲೆ ಬರೆ0ದ ಸಿನಿಮಾ ಈಗ ಫಿಲಿಪೈನ್ಸ್ ಭಾಷೆಗೆ ರೀಮೇಕ್ ಆಗುತ್ತಿದೆ.

  ಕಿಮ್ ಚಿವು, ಜಿಎಮ್ ಡೇ ಗುಜ್ ಮಾನ್, ಟೋನಿ ಲ್ಯಾಬ್ರುಸ್ಕಾ ನಟಿಸುತ್ತಿರುವ ಚಿತ್ರಕ್ಕೆ ಡೆರಿಕ್ ಕಾಬ್ರಿಡೋ ನಿರ್ದೇಶಕ. ಈಗ ಕ್ಲಾರಿಟಾ ಅನ್ನೋ ಸಿನಿಮಾ ಮೂಲಕ ಹಾಲಿವುಡ್‍ನಲ್ಲಿ ಸಂಚಲನ ಸೃಷ್ಟಿಸಿದ್ದ ನಿರ್ದೇಶಕ.

  ತಮ್ಮ ಚಿತ್ರವೊಂದು ಫಿಲಿಪೈನ್ಸ್ ಭಾಷೆಗೆ ರೀಮೇಕ್ ಆಗುತ್ತಿದೆ ಎಂಬ ಸಂತಸದ ಸುದ್ದಿಯನ್ನು ಸ್ವತಃ ನಿರ್ದೇಶಕ ಪವನ್ ಕುಮಾರ್ ಬಹಿರಂಗಪಡಿಸಿದ್ದಾರೆ.

 • ಫ್ಯಾಂಟಮ್ ಎದುರು ಶ್ರದ್ಧಾ ಹೀರೋಯಿನ್..?

  shraddha srinath is sudeep's phantom

  ಕಿಚ್ಚ ಸುದೀಪ್ ಅಭಿನಯದ ಫ್ಯಾಂಟಮ್ ಚಿತ್ರದ ನಾಯಕಿ ಯಾರು..? ಆ ಕುತೂಹಲವನ್ನು ಅನೂಪ್ ಭಂಡಾರಿಯಾಗಲೀ, ಸುದೀಪ್ ಆಗಲೀ ಬಿಟ್ಟುಕೊಟ್ಟಿಲ್ಲ. ಆದರೆ ಗಾಂಧಿನಗರದ ಪ್ರಕಾರ ಸುದೀಪ್ ಎದುರು ಶ್ರದ್ಧಾ ಶ್ರೀನಾಥ್ ನಟಿಸಲಿದ್ದಾರೆ ಎಂಬ ಸುದ್ದಿ ಸದ್ದು ಮಾಡ್ತಿದೆ.

  ಶ್ರದ್ಧಾ ಶ್ರೀನಾಥ್ ಕನ್ನಡಕ್ಕೆ ಪರಿಚಿತರಾಗಿದ್ದು ಯು ಟರ್ನ್ ಮೂಲಕ. ನಂತರ ಆಪರೇಷನ್ ಅಲಮೇಲಮ್ಮ, ರುಸ್ತುಂಗಳಲ್ಲಿ ನಟಿಸಿದರು. ಕೆಲವು ಚಿತ್ರಗಳಲ್ಲಿ ಅತಿಥಿಯಾಗಿ ಕಾಣಿಸಿಕೊಂಡರು. ಶ್ರದ್ಧಾ ದೊಡ್ಡ ಹೆಸರು ಮಾಡಿದ್ದು ತಮಿಳಿನ ವಿಕ್ರಂವೇದ, ತೆಲುಗಿನ ಜೆರ್ಸಿ ಚಿತ್ರದ ಮೂಲಕ. ಈಗ ಸುದೀಪ್ ಎದುರು ನಟಿಸಿದರೆ ಡೌಟೇ ಇಲ್ಲ, ಇಬ್ಬರು ವಂಡರ್‍ಫುಲ್ ಕಲಾವಿದರ ಜುಗಲ್‍ಬಂದಿ ಆಗೋದಂತೂ ಪಕ್ಕಾ.

 • ರಾಜ್ಯೋತ್ಸವಕ್ಕೆ ಶ್ರದ್ಧಾ-ಶಾನ್ವಿ ಕೊಡುಗೆ ಏನು..?

  shraddha shanvi's gift for rajyotsava

  ಕನ್ನಡ ರಾಜ್ಯೋತ್ಸವಕ್ಕೆ ಎಲ್ಲರೂ ಒಂದಲ್ಲ ರೀತಿಯಲ್ಲಿ ತಯಾರಾಗುತ್ತಾರೆ. ಚಿತ್ರರಂಗದವರಂತೂ ವಿಶೇಷವಾಗಿಯೇ ರಾಜ್ಯೋತ್ಸವವನ್ನು ಸಂಭ್ರಮಿಸುತ್ತಾರೆ. ಶ್ರದ್ಧಾ ಶ್ರೀನಾಥ್ ಹಾಗೂ ಶಾನ್ವಿ ಶ್ರೀವಾಸ್ತವ್ ಕನ್ನಡ ರಾಜ್ಯೋತ್ಸವಕ್ಕೆ ನಮಿಸುತ್ತಿರುವ ರೀತಿಯೇ ವಿಶೇಷ.

  ಇಬ್ಬರೂ ಸೇರಿಕೊಂಡು ಒಂದು ವಿಡಿಯೋ ಮಾಡಿದ್ದಾರೆ. ಡಾ.ರಾಜ್, ವಿಷ್ಣು, ಶಂಕರ್‍ನಾಗ್, ಅಂಬರೀಷ್, ರವಿಚಂದ್ರನ್, ಶಿವರಾಜ್ ಕುಮಾರ್, ಸುದೀಪ್, ದರ್ಶನ್, ಪುನೀತ್ ಸೇರಿದಂತೆ ಒಟ್ಟು 14 ಕನ್ನಡ ಕಲಾವಿದರ ಹಾಡುಗಳ ತುಣುಕುಗಳಿಗೆ ಸ್ಟೆಪ್ ಹಾಕಿದ್ದಾರೆ. 

  ಒಬ್ಬೊಬ್ಬ ನಟನ ಸ್ಟೆಪ್ 10 ಸೆಕೆಂಡ್‍ಗಳಲ್ಲಿ ಬಂದು ಹೋಗುತ್ತೆ. ಹಾಡಿಗೆ ತಕ್ಕಂತ ಕಾಸ್ಟ್ಯೂಮ್ ಕೂಡಾ ಮಾಡಿಕೊಂಡಿದ್ದಾರೆ ಶ್ರದ್ಧಾ ಮತ್ತು ಶಾನ್ವಿ. ಇವರ ಜೊತೆ ಕಾಮಿಡಿ ಕಲಾವಿದ ಪ್ರದೀಪ್ ಕೂಡಾ ಇದ್ದಾರೆ. ಇದೇ ದಿನ ವಿಡಿಯೋ ಬಿಡುಗಡೆಯಾಗುತ್ತಿದೆ.

 • ರಿಷಬ್ ರುದ್ರಪ್ರಯಾಗಕ್ಕೆ ಶ್ರದ್ಧಾ ಶ್ರೀನಾಥ್

  shraddha srinath is fmale lead in rudraprayag

  ರಿಷಬ್ ಶೆಟ್ಟಿ ನಿರ್ದೇಶನದ ರುದ್ರಪ್ರಯಾಗ ಚಿತ್ರಕ್ಕೆ ನಾಯಕಿಯ ಆಯ್ಕೆಯಾಗಿದೆ. ಅನಂತ್ ನಾಗ್ ಅವರನ್ನು ನಾಯಕರನ್ನಾಗಿಸಿರುವ ರಿಷಬ್, ಚಿತ್ರಕ್ಕೆ ಹೀರೋಯಿನ್ ಆಗಿ ಶ್ರದ್ಧಾ ಶ್ರೀನಾಥ್ ಅವರನ್ನು ಸೆಲೆಕ್ಟ್ ಮಾಡಿದ್ದಾರೆ. ಶ್ರದ್ಧಾ ಶ್ರೀನಾಥ್ ಕನ್ನಡದಿಂದ ಚಿತ್ರರಂಗಕ್ಕೆ ಬಂದವರಾದರೂ ಸದ್ಯಕ್ಕೆ ತಮಿಳು, ತೆಲುಗಿನಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿರುವ ನಟಿ.

  ಅವರದ್ದು ರೆಗ್ಯುಲರ್ ಪಾತ್ರ ಅಲ್ಲ. ಚಿತ್ರದಲ್ಲಿ ಒಟ್ಟು 9 ಪಾತ್ರಗಳಿವೆ. ಆ 9 ಪಾತ್ರಗಳಲ್ಲಿ ಶ್ರದ್ಧಾ ಅವರದ್ದು ಪ್ರಮುಖ ಪಾತ್ರ. ತುಂಬಾ ವೈಶಿಷ್ಟ್ಯಪೂರ್ಣ ಪಾತ್ರ ಎಂದಿದ್ದಾರೆ ರಿಷಬ್.

  ಜಯಣ್ಣ ಕಂಬೈನ್ಸ್‍ನಲ್ಲಿ ನಿರ್ಮಾಣವಾಗುತ್ತಿರುವ ರುದ್ರಪ್ರಯಾಗ ಚಿತ್ರಕ್ಕೆ ಮುಂದಿನ ತಿಂಗಳು ಶೂಟಿಂಗ್ ಶುರುವಾಗಲಿದೆ.

 • ರುಸ್ತುಂ ಇನ್ನೂ ಫೈನಲ್ ಆಗಿಲ್ಲ - ಶ್ರದ್ಧಾ

  shraddha in rustum is not yest finalised

  ರುಸ್ತುಂ, ಶಿವರಾಜ್ ಕುಮಾರ್ ಅಭಿನಯದ ಸಾಹಸ ನಿರ್ದೇಶಕ ರವಿವರ್ಮ ನಿರ್ದೇಶನದ ಮೊದಲ ಚಿತ್ರ. ಆ ಚಿತ್ರಕ್ಕೆ ಶ್ರದ್ಧಾ ಶ್ರೀನಾಥ್ ನಾಯಕಿ ಎಂಬ ಸುದ್ದಿ ಹಲವು ಕಡೆ ಹರಿದಾಡುತ್ತಿದೆ. ಈ ಕುರಿತು ನಟಿ ಶ್ರದ್ಧಾ ಶ್ರೀನಾಥ್ ಸ್ಪಷ್ಟನೆ ಕೊಟ್ಟಿದ್ದಾರೆ.

  ನಾನಿನ್ನೂ ಸಿನಿಮಾ ಒಪ್ಪಿಕೊಂಡಿಲ್ಲ. ಯಾವುದೇ ಅಗ್ರಿಮೆಂಟ್‍ಗೆ ಸಹಿ ಹಾಕಿಲ್ಲ. ಸಹಿ ಹಾಕಿದ ನಂತರ ಕನ್‍ಫರ್ಮ್ ಮಾಡುತ್ತೇನೆ ಎಂದಿದ್ದಾರೆ ಶ್ರದ್ಧಾ. ಶ್ರದ್ಧಾ ಅವರ ಮಾತು ಕೇಳಿದರೆ, ಒಂದಂತೂ ಗೊತ್ತಾಗುತ್ತೆ. ಚಿತ್ರದ ಆಫರ್ ಶ್ರದ್ಧಾಗೆ ಹೋಗಿರುವುದಂತೂ ಸತ್ಯ.

 • ರುಸ್ತುಂ ಟೀಂನಲ್ಲಿ ಶ್ರದ್ಧಾ ಶ್ರೀನಾಥ್

  shraddha srinath joines rustum

  ರುಸ್ತುಂ. ಶಿವರಾಜ್ ಕುಮಾರ್ ಅಭಿನಯದ ಸಿನಿಮಾ. ಸಾಹಸ ನಿರ್ದೇಶಕ ರವಿವರ್ಮಾ ನಿರ್ದೇಶನದ ಮೊದಲ ಸಿನಿಮಾ ರುಸ್ತುಂ, ಶಿವಣ್ಣ ಮೀಸೆಯಿಂದಾಗಿಯೇ ಗಮನ ಸೆಳೆಯುತ್ತಿದೆ. ಮೀಸೆಧಾರಿ ಕಾಪ್ ಆಗಿರುವ ಶಿವರಾಜ್‍ಕುಮಾರ್, ರಾಜ್‍ಕುಮಾರ್‍ರಂತೆ ಕಾಣಿಸ್ತಿದ್ದಾರೆ ಅನ್ನೊದು ಚಿತ್ರತಂಡದವರ ಮಾತು. ಈಗ ಆ ಟೀಂಗೆ ಶ್ರದ್ಧಾ ಶ್ರೀನಾಥ್ ಎಂಟ್ರಿಯಾಗಿದೆ. ಚಿತ್ರೀಕರಣವೂ ಶುರುವಾಗಿದೆ.

  ಶಿವಣ್ಣ ಜೊತೆ ನಟಿಸಬೇಕು ಅನ್ನೋದು ಪ್ರತಿಯೊಬ್ಬ ನಟಿಯ ಕನಸಾಗಿರುತ್ತೆ. ನನಗೆ ಆ ಕನಸು ಬಹುಬೇಗನೇ ಈಡೇರಿದೆ. ಚಿತ್ರದಲ್ಲಿ ನನಗೆ ಉತ್ತಮ ಪಾತ್ರವಿದೆ. ಶಿವರಾಜ್‍ಕುಮಾರ್ ಪೊಲೀಸ್ ಆಫೀಸರ್. ಪೊಲೀಸ್ ಅಧಿಕಾರಿಯ ಪತ್ನಿಯಾಗಿ ಮನೆ ಹಾಗೂ ಹೊರಜಗತ್ತನ್ನು ಹೇಗೆ ಎದುರಿಸುತ್ತೇನೆ ಅನ್ನೋದು ನನ್ನ ಪಾತ್ರಕ್ಕಿರುವ ಹಿನ್ನೆಲೆ ಎಂದಿದ್ದಾರೆ ಶ್ರದ್ಧಾ.

  ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಶೂಟಿಂಗ್ ಶುರುವಾಗಿದೆ. ಅಶ್ವಿನಿ ನಕ್ಷತ್ರ ಧಾರಾವಾಹಿ ಖ್ಯಾತಿಯ ಮಯೂರಿ ಶಿವರಾಜ್ ಕುಮಾರ್ ತಂಗಿಯಾಗಿ ನಟಿಸುತ್ತಿದ್ದಾರೆ.

   

 • ಲವ್ ಯೂ ಅಪ್ಪು ಸರ್ ಅಂದ್ರು ಶ್ರದ್ಧಾ..!

  shraddha feels happy wth

  ಪುನೀತ್ ರಾಜ್‍ಕುಮಾರ್ ಅವರನ್ನು ಕಣ್ಣಾರೆ ಕಂಡವರು, ಜೊತೆಯಲ್ಲಿ ನೋಡಿದವರಿಗೆ ಒಂದು ಶಾಕ್ ಖಂಡಿತಾ ಇರುತ್ತೆ. ಎಷ್ಟೆಂದರೂ ಡಾ.ರಾಜ್ ಪುತ್ರ, ಹ್ಯಾಟ್ರಿಕ್ ಹೀರೋ ತಮ್ಮ, ಸ್ವತಃ ಸ್ಟಾರ್ ನಟ...ಹೀಗೆಲ್ಲ ಇರುವಾಗ ಸ್ವಲ್ಪವಾದರೂ ಅಹಂ ಇದ್ದೇ ಇರುತ್ತೆ ಎಂದುಕೊಂಡವರಿಗೆ ಮೊದಲ ಶಾಕ್ ಸಿಗೋದು ಪುನೀತ್ ಅವರ ಸರಳತೆಯದ್ದು. ಪುನೀತ್ ಅವರ ಸರಳತೆ, ಸಜ್ಜನಿಕೆಗೆ ಮರುಳಾಗದವರೇ ಇಲ್ಲ. ಇದರಿಂದ ಶ್ರದ್ಧಾ ಶ್ರೀನಾಥ್ ಸಹ ಹೊರತಾಗಿಲ್ಲ.

  ಇತ್ತೀಚೆಗೆ ಏರ್‍ಪೋರ್ಟ್‍ವೊಂದರಲ್ಲಿ ಶ್ರದ್ಧಾ ಅವರಿಗೆ ಪುನೀತ್ ಆಕಸ್ಮಿಕವಾಗಿ ಎದುರಾಗಿದ್ದಾರೆ. ಅವರ ಜೊತೆ ಮಾತನಾಡಿ ಸೆಲ್ಫೀ ಕ್ಲಿಕ್ಕಿಸಿಕೊಂಡ ಶ್ರದ್ಧಾಗೆ, ಪುನೀತ್ ಅವರ ಸಿಂಪ್ಲಿಸಿಟಿ ಇಷ್ಟವಾಗಿಬಿಟ್ಟಿದೆ. ಆ ಸೆಲ್ಫಿಯನ್ನು ಪೋಸ್ಟ್ ಮಾಡಿರುವ ಶ್ರದ್ಧಾ, ನನ್ನ ಮುಖ ನೋಡಿದರೇ ನಿಮಗೆ ಅರ್ಥವಾಗಿರಬಹುದು. ಖುಷಿಯೇ ಖುಷಿ. ಪುನೀತ್ ನನ್ನ ಜೊತೆ ಮಾತನಾಡಿದರು. ನನ್ನ ಬಗ್ಗೆ ಅವರು ಒಳ್ಳೆಯ ಮಾತು ಹೇಳಿದರು. ಅವರು ಒಬ್ಬ ಸ್ಟಾರ್, ನನಗೆ ಅವನ್ನೆಲ್ಲ ಹೇಳಬೇಕಾಗಿಯೇನೂ ಇರಲಿಲ್ಲ. ಪವರ್‍ಸ್ಟಾರ್ ಮತ್ತು ಸ್ಟಾರ್‍ಗೆ ಇರುವ ವ್ಯತ್ಯಾಸ ಇದು. ಅವರ ಬಗ್ಗೆ ಸಾಕಷ್ಟು ಕಥೆಗಳನ್ನು ಕೇಳಿದ್ದೆ. ಅವರ ಭೇಟಿಯಿಂದ ಒಂದು ಸ್ಪಷ್ಟವಾಯಿತು. ಅವರದ್ದು ಬಂಗಾರದಂತಾ ಮನಸ್ಸು. ಲವ್ ಯೂ ಅಪ್ಪು ಸಾರ್ ಎಂದಿದ್ದಾರೆ ಶ್ರದ್ಧಾ.

 • ವಿಜಯ್‍ಗೆ ಶ್ರದ್ಧಾ ಹೀರೋಯಿನ್?

  is shraddha heroine for tamil's vijay

  ಯುಟರ್ನ್ ಹಾಗೂ ಆಪರೇಷನ್ ಅಲಮೇಲಮ್ಮ ಚಿತ್ರಗಳ ಮೂಲಕ ಕನ್ನಡಿಗರ ಮನಸ್ಸು ಗೆದ್ದ ಹುಡುಗಿ ಶ್ರದ್ಧಾ ಶ್ರೀನಾಥ್. ತಮಿಳಿನಲ್ಲಿ `ವಿಕ್ರಂವೇದ' ಚಿತ್ರದ ಮೂಲಕ ಸ್ಟಾರ್ ಹೀರೋಯಿನ್ ಆದ ಶ್ರದ್ಧಾಗೆ ಈಗ ಮತ್ತೊಂದು ಅದೃಷ್ಟ ಖುಲಾಯಿಸಿದ ಹಾಗಿದೆ.

  ಕಾಲಿವುಡ್ ಸೂಪರ್ ಸ್ಟಾರ್ ವಿಜಯ್ ಮುಂದಿನ ಚಿತ್ರಕ್ಕೆ ಶ್ರದ್ಧಾ ನಾಯಕಿಯಾಗಿ ಆಯ್ಕೆಯಾಗಿದ್ದಾರಂತೆ. ಈಗಾಗಲೇ  ಕರುಣಾನಿಧಿ ಮೊಮ್ಮಗ ಉದಯನಿಧಿ ಸ್ಟಾಲಿನ್ ಚಿತ್ರದಲ್ಲಿ ನಟಿಸುತ್ತಿರುವ ಶ್ರದ್ಧಾ, ವಿಜಯ್ ಚಿತ್ರವನ್ನು ಒಪ್ಪಿಕೊಂಡಿದ್ದಾರೆ ಅನ್ನೋದು ಸುದ್ದಿ.

  ಹೌದೇನ್ರೀ ಅಂಥಾ ಕೇಳಿದ್ರೆ, ರೂಮರ್ ನಿಜವಾದರೆ ನನಗೂ ಖುಷಿಯಾಗುತ್ತೆ. ಸದ್ಯಕ್ಕಂತೂ ಅಂಥಾ ಸುದ್ದಿಯಿಲ್ಲ ಅಂತಾರೆ ಶ್ರದ್ಧಾ. ತಮಿಳು ಪ್ರಾಜೆಕ್ಟ್‍ಗಳ ವಿಚಾರದಲ್ಲಿ ಶ್ರದ್ಧಾ ತುಂಬಾನೇ ಸೀಕ್ರೆಟ್ ಮೈಂಟೇನ್ ಮಾಡುತ್ತಾರೆ ಎನ್ನುವುದಂತೂ ನಿಜ.

 • ಶಿವಣ್ಣ ಜೊತೆಗೆ ಡ್ಯಾನ್ಸ್‍ಗೆ ಸ್ಯಾಂಡಲ್‍ವುಡ್ ಸುಂದರಿಯರು..!

  three beauties to shake leg with shivanna

  sಶಿವರಾಜ್‍ಕುಮಾರ್ ಹೆಜ್ಜೆ ಹಾಕೋಕೆ ನಿಂತರೆ ಯುವಕರೂ ನಾಚಬೇಕು. ಡ್ಯಾನ್ಸ್ ಬರದೇ ಇರುವವರು ಜೊತೆಗಿದ್ದರೆ, ಅನುಮಾನವೇ ಅಲ್ಲ, ಅದು ಕಷ್ಟಾನೇ. ಈಗ ಅಂತಹ ಶಿವಣ್ಣ ಜೊತೆ ಹೆಜ್ಜೆ ಹಾಕೋಕೆ ಸ್ಯಾಂಡಲ್‍ವುಡ್‍ನ ಮೂವರು ಸುಂದರಿಯರು ರೆಡಿಯಾಗಿದ್ದಾರೆ.

  ಬುಲ್‍ಬುಲ್ ರಚಿತಾ ರಾಮ್, ರಂಗಿತರಂಗ ರಾಧಿಕಾ ಚೇತನ್ ಹಾಗೂ ಯು ಟರ್ನ್ ಶ್ರದ್ಧಾ ಶ್ರೀನಾಥ್. ಈ ಮೂವರೂ ಶಿವಣ್ಣ ಜೊತೆ ಸ್ಪೆಷಲ್ ಸಾಂಗ್‍ಗೆ ಹೆಜ್ಜೆ ಹಾಕುತ್ತಿದ್ದಾರೆ. ದಿ ವಿಲನ್ ಚಿತ್ರದ ಶೂಟಿಂಗ್‍ನ ಈಗಿನ ವೇಗ ನೋಡಿದರೆ, ಸಿನಿಮಾ ಶೂಟಿಂಗ್ ಮಾರ್ಚ್ ಕೊನೆಗೆ ಮುಗಿಯುವುದು ಹೆಚ್ಚೂ ಕಡಿಮೆ ಪಕ್ಕಾ. ಆಮೇಲೆ ಪೋಸ್ಟ್ ಪ್ರೊಡಕ್ಷನ್ ಕೆಲಸ ಶುರುವಾಗಲಿದೆ.

 • ಶಿವಣ್ಣ, ಶ್ರದ್ಧಾ ಶ್ರೀನಾಥ್ ಬೆಸ್ಟ್ ನಟ ನಟಿ - ಸೈಮಾ(SIMA) ಪ್ರಶಸ್ತಿ ಪ್ರದಾನ

  Shivarajkumar, Shradda Srinath Best at SIIMA AWARDs

  ಪ್ರತಿಷ್ಠಿತ ''ದಕ್ಷಿಣ ಭಾರತದ ಅಂತರಾಷ್ಟ್ರೀಯ ಸಿನಿಮಾ ಪ್ರಶಸ್ತಿ(ಸೈಮಾ) ಪ್ರಶಸ್ತಿ ಪ್ರದಾನ ಸಮಾರಂಭ ನೆರವೇರಿದೆ. 2016-2017 ನೇ ಸಾಲಿನ ಸೈಮಾ ಪ್ರಶಸ್ತಿ ಕನ್ನಡ ವಿಭಾಗದಲ್ಲಿ ಶಿವರಾಜ್ ಕುಮಾರ್ ಅತ್ಯುತ್ತಮ ನಟ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ. ಅದು ಶಿವಲಿಂಗ ಚಿತ್ರದ ಅಭಿನಯಕ್ಕೆ.

  'ಯೂ ಟರ್ನ್' ಚಿತ್ರ ಅಭಿನಯಕ್ಕಾಗಿ ನಟಿ ಶ್ರದ್ಧಾ ಶ್ರೀನಾಥ್ ಅವರಿಗೆ ಸೈಮಾ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ. 

  ಸೈಮಾ(SIMA) ಪ್ರಶಸ್ತಿ ಪುರಸ್ಕೃತರ ವಿವರ ಹೀಗಿದೆ

  ಅತ್ಯುತ್ತಮ ಫೋಷಕ ನಟ - ಚಂದನ್ ಆಚಾರ್ (ಚಿತ್ರ - ಕಿರಿಕ್ ಪಾರ್ಟಿ)

  ಅತ್ಯುತ್ತಮ ಫೋಷಕ ನಟಿ - ರಾಧಿಕಾ ಚೇತನ್ (ಚಿತ್ರ - ಯೂ ಟರ್ನ್)

  ಅತ್ಯುತ್ತಮ ಖಳನಟ - ವಶಿಷ್ಟ ಸಿಂಹ (ಚಿತ್ರ - ಗೋಧಿ ಬಣ್ಣ ಸಾಧಾರಣ ಮೈಕಟ್ಟು)

  ಅತ್ಯುತ್ತಮ ಹಿನ್ನೆಲೆ ಗಾಯಕಿ - ಇಂದು ನಾಗರಾಜ್ ( ಚಿತ್ರ - ದೊಡ್ಮನೆ ಹುಡ್ಗ - ಹಾಡು : ಥ್ರಾಸ್ ಆಗ್ತೈತಿ..)

  ಅತ್ಯುತ್ತಮ ಹಿನ್ನೆಲೆ ಗಾಯಕ - ಅರ್ಮಾನ್ ಮಲ್ಲಿಕ್ ( ಚಿತ್ರ - ಮುಂಗಾರು ಮಳೆ 2, ಹಾಡು - ಸರಿಯಾಗಿ ನೆನಪಿದೆ ನನಗೆ )

  ಬೆಸ್ಟ್ ಕಾಮಿಡಿಯನ್ - ರವಿ ಶಂಕರ್ ಗೌಡ  (ಚಿತ್ರ - ಸುಂದರಾಂಗ ಜಾಣ)

  ಅತ್ಯುತ್ತಮ ಗೀತೆ ರಚನೆಕಾರ - ಧನಂಜಯ್ ರಂಜನ್ ( ಚಿತ್ರ- ಕಿರಿಕ್ ಪಾರ್ಟಿ, ಹಾಡು - ಬೆಳಗೆದ್ದು ಯಾರ ಮುಖವ ನಾನು ನೋಡಿದೆ ) 

  ಅತ್ಯುತ್ತಮ ಉದಯೋನ್ಮುಖ ನಟಿ - ರಶ್ಮಿಕಾ ಮಂದಣ್ಣ (ಚಿತ್ರ -ಕಿರಿಕ್ ಪಾರ್ಟಿ)

  ಅತ್ಯುತ್ತಮ ಉದಯೋನ್ಮುಕ ನಟ - ನಿಖಿಲ್ ಕುಮಾರಸ್ವಾಮಿ (ಚಿತ್ರ-ಜಾಗ್ವಾರ್)

  ಉದಯೋನ್ಮುಖ ನಿರ್ದೇಶಕ - ಹೇಮಂತ್ ರಾವ್ (ಚಿತ್ರ - ಗೋಧಿ ಬಣ್ಣ ಸಾಧಾರಣ ಮೈಕಟ್ಟು)

  ಅತ್ಯುತ್ತಮ ನಟಿ - ವಿಮರ್ಶಕರ ಆಯ್ಕೆ - ಪಾರುಲ್ ಯಾದವ್ (ಚಿತ್ರ-ಕಿಲ್ಲಿಂಗ್ ವೀರಪ್ಪನ್)

  ಅತ್ಯುತ್ತಮ ಮನರಂಜನಾತ್ಮಕ ಚಿತ್ರ (ಚಿತ್ರ-ಕಿರಿಕ್ ಪಾರ್ಟಿ)

  ಅತ್ಯುತ್ತಮ ನಿರ್ದೇಶಕ - ರಿಷಬ್ ಶೆಟ್ಟಿ (ಚಿತ್ರ-ಕಿರಿಕ್ ಪಾರ್ಟಿ)

   

   

   

   

 • ಶ್ರದ್ಧಾ ಎದೆ ಮೇಲಿನ ಟ್ಯಾಟೂ ಕಥೆ ಏನು..?

  story behind shraddha's tattoo

  ಶ್ರದ್ಧಾ ಶ್ರೀನಾಥ್, ಕನ್ನಡ, ತಮಿಳು ಹಾಗೂ ಬಾಲಿವುಡ್‍ನಲ್ಲಿ ಮಿಂಚುತ್ತಿರುವ ಕನ್ನಡದ ಚೆಲುವೆ. ಈ ಚೆಲುವೆ ಈಗಷ್ಟೇ ಫಿಲಂಫೇರ್ ಪುರಸ್ಕಾರ ಸಿಕ್ಕ ಸಂಭ್ರಮದಲ್ಲಿದ್ದಾರೆ. ಹಾಗೆ ಕಪ್ಪು ಸುಂದರಿಯನ್ನು ಕೈಲಿ ಹಿಡಿದಿದ್ದ ಶ್ರದ್ಧಾರನ್ನು ನೋಡಿದಾಗ, ಆ ಸುಂದರಿಯ ಎದೆಯ ಮೇಲಿರುವ ಟ್ಯಾಟೂ ಎಲ್ಲರ ಗಮನ ಸೆಳೆದಿದೆ. ಏನದು..? ಏನ್ ಕಥೆ ಎಂದು ಕೇಳಿದಾಗ, ಟ್ಯಾಟೂ ಹಿಂದಿನ ಕಥೆ ಹೇಳಿಕೊಂಡಿದ್ದಾರೆ.

  ಶ್ರದ್ಧಾ ನಟಿಯಾಗುವುದಕ್ಕೂ ಮೊದಲು, `ದಿ ಬೀಟಲ್ಸ್' ಅನ್ನೋ ಮ್ಯೂಸಿಕ್ ಬ್ಯಾಂಡ್‍ನಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಸಂಗೀತ ಅವರ ಆಸಕ್ತಿದಾಯಕ ಕ್ಷೇತ್ರ. ಸ್ಟೇಜ್ ಶೋಗಳಲ್ಲಿ ಹಾಡುತ್ತಿದ್ದಾಗ, ಶ್ರದ್ಧಾಗೆ ಮೊದಲ ಸಂಭಾವನೆ ಸಿಕ್ಕಿತ್ತಂತೆ. 2 ಸಾವಿರ ರೂಪಾಯಿ. 

  ಮೊದಲ ಸಂಭಾವನೆಯ ನೆನಪು, ಶಾಶ್ವತವಾಗಿ ಇರಬೇಕು ಎಂದುಕೊಂಡ ಶ್ರದ್ಧಾಗೆ ಟ್ಯಾಟೂ ಹುಚ್ಚೂ ಇತ್ತು. ಹೀಗಾಗಿ ಹಚ್ಚೆ ಹಾಕುವವನ ಬಳಿ, ಸಂಗೀತದ ಪರಿಕರಗಳನ್ನೇ ನೆನಪಿಸುವ ಟ್ಯಾಟೂ ಹಾಕಿಸಿಕೊಂಡರಂತೆ ಶ್ರದ್ಧಾ.

 • ಶ್ರದ್ಧಾ ಜೊತೆ ನೀನಾಸಂ ಸತೀಶ್ ಡ್ಯಾನ್ಸ್

  godhra movie shooting completed

  ನೀನಾಸಂ ಸತೀಶ್ ಅಭಿನಯದ ಗೋದ್ರಾ ಚಿತ್ರದ ಶೂಟಿಂಗ್ ಮುಕ್ತಾಯವಾಗಿದೆ. ಸುದೀರ್ಘ ಅವಧಿಯವರೆಗೆ ನಡೆದ ಶೂಟಿಂಗ್‍ನ್ನು ಮುಗಿಸಿದ ಸಿನಿಮಾ, ಪೋಸ್ಟ್ ಪ್ರೊಡಕ್ಷನ್ ಹಂತ ತಲುಪಿದೆ. ಆಂಧ್ರಪ್ರದೇಶದಲ್ಲಿ ಚಿತ್ರದ ಹಾಡಿನ ಚಿತ್ರೀಕರಣ ಮುಗಿಸಿದ್ದಾರೆ ನಿರ್ದೇಶಕ ನಂದೀಶ್.

  ಚಿತ್ರದಲ್ಲಿ ಸತೀಶ್ ನಕ್ಸಲ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಶ್ರದ್ಧಾ ಶ್ರೀನಾಥ್ ನೀನಾಸಂ ಸತೀಶ್‍ಗೆ ಜೋಡಿಯಾಗಿದ್ದಾರೆ. 

 • ಸುದೀಪ್`ಗೆ ಶ್ರದ್ಧಾ ಶ್ರೀನಾಥ್ ಜೋಡಿ..?

  will sharddha srinath pair opposite sudeep in phantom

  ಕಿಚ್ಚ ಸುದೀಪ್ ಅಭಿನಯಿಸುತ್ತಿರುವ ಫ್ಯಾಂಟಮ್ ಚಿತ್ರದಲ್ಲಿ ಸುದೀಪ್ ಎದುರು ಶ್ರದ್ಧಾ ಶ್ರೀನಾಥ್ ನಟಿಸಲಿದ್ದಾರಾ..? ಹೌದು ಎನ್ನುತ್ತಿವೆ ಗಾಂಧಿನಗರದ ಮೂಲಗಳು. ಚಿತ್ರತಂಡ ಸುದ್ದಿಯನ್ನು ನಿರಾಕರಿಸುತ್ತಿಲ್ಲವಾದರೂ ಇನ್ನೂ ಅಧಿಕೃತವಾಗಿ ಹೇಳಿಲ್ಲ.

  ಫ್ಯಾಂಟಮ್ ಚಿತ್ರಕ್ಕೆ ಅನೂಪ್ ಭಂಡಾರಿ ನಿರ್ದೇಶಕರಾದರೆ, ಕಿಚ್ಚ ಸುದೀಪ್ ಹೀರೋ. ಸುದೀಪ್ ಜೊತೆ ನಿರೂಪ್ ಭಂಡಾರಿ ಕೂಡಾ ಇನ್ನೊಂದು ಪಾತ್ರದಲ್ಲಿ ನಟಿಸಲಿದ್ದಾರೆ. ಚಿತ್ರದಲ್ಲಿ ಮೂವರು ನಾಯಕಿಯರಿದ್ದು, ಸದ್ಯಕ್ಕೆ ನೀತಾ ಅಶೋಕ್ ನಟಿಸುತ್ತಿರುವ ಅಪರ್ಣಾ ಬಲ್ಲಾಳ್ ಅಲಿಯಾಸ್ ಪನ್ನಾ ಪಾತ್ರದ ಲುಕ್ ರಿವೀಲ್ ಆಗಿದೆ. ಚಿತ್ರದ ಒಂದೊಂದು ಪಾತ್ರವನ್ನೂ ಆ ಪಾತ್ರಗಳ ಹೆಸರಿನಲ್ಲೇ ಪರಿಚಯಿಸುತ್ತಿರುವ ಅನೂಪ್ ಭಂಡಾರಿ, ಫ್ಯಾಂಟಮ್ ಚಿತ್ರವನ್ನು ಬೇರೆಯದೇ ಲೆವೆಲ್‍ಗೆ ಕೊಂಡೊಯ್ಯುತ್ತಿರುವಂತಿದೆ. ಜಾಕ್ ಮಂಜು ನಿರ್ಮಾಣದ ಫ್ಯಾಂಟಮ್ ಚಿತ್ರ ಸದ್ಯಕ್ಕೆ ಹೈದರಾಬಾದ್‍ನಲ್ಲಿ ಶೂಟಿಂಗ್‍ನಲ್ಲಿದೆ.

 • ಹಿಂದಿ, ಮರಾಠಿ, ತಮಿಳು.. ಆಪರೇಷನ್ ಅಲಮೇಲಮ್ಮನ ಸಕ್ಸಸ್ ಯಾತ್ರೆ

  operation almelamma

  ಆಪರೇಷನ್ ಅಲಮೇಲಮ್ಮ ಕನ್ನಡದಲ್ಲಿ ಹಿಟ್ ಆಗಿದ್ದೇ ತಡ, ಹಲವು ಭಾಷೆಯ ನಿರ್ಮಾಪಕರು ಕಥೆಯ ಬೆನ್ನು ಬಿದ್ದಿದ್ದಾರೆ. ಕಚಗುಳಿಯಿಡುವ ಸಂಭಾಷಣೆ, ಪ್ರೇಮಕಥೆಯನ್ನು ಕಿಡ್ನಾಪ್ ಸ್ಟೋರಿಯೊಂದಿಗೆ ಬೆಸೆದಿರುವ ನಿರ್ದೇಶಕ ಸುನಿಯ ಟೆಕ್ನಿಕ್ ಇಲ್ಲಿ ವರ್ಕೌಟ್ ಆಗಿದೆ. 

  ಅಲಮೇಲಮ್ಮ ಚಿತ್ರವನ್ನು ಮರಾಠಿ ಮತ್ತು ಹಿಂದಿಯಲ್ಲಿ ಧೂನ್ ಎಂಬ ಸಂಸ್ಥೆ ನಿರ್ಮಿಸೋಕೆ ಮುಂದಾಗಿದ್ದರೆ, ತಮಿಳಿನಲಿ ಹಾರಿಜನ್ ಎಂಬ ಸಂಸ್ಥೆ ಚಿತ್ರ ನಿರ್ಮಾಣಕ್ಕೆ ಆಸಕ್ತಿ ತೋರಿದೆ. ಇನ್ನು ಚಿತ್ರದ 2ನೇ ಭಾಗಕ್ಕೂ ಸಿದ್ಧತೆ ನಡೆಯುತ್ತಿದ್ದು, ಅಮರೇಶ್ ಸೂರ್ಯವಂಶಿ ನಿರ್ಮಾಣಕ್ಕೆ ಆಸಕ್ತಿ ತೋರಿಸುತ್ತಿದ್ದಾರೆ.