` rakshith shetty - chitraloka.com | Kannada Movie News, Reviews | Image

rakshith shetty

 • ಅವನೇ ಶ್ರೀಮನ್ನಾರಾಯಣನಿಗೆ ಒಂದೇ ಡ್ರೆಸ್ಸಾ..?

  secret shetty's costume secret in avana srimananarayana

  ರಕ್ಷಿತ್ ಶೆಟ್ಟಿ-ಶಾನ್ವಿ ಶ್ರೀವಾಸ್ತವ್ ಪ್ರಧಾನ ಪಾತ್ರದಲ್ಲಿರುವ ಅವನೇ ಶ್ರೀಮನ್ನಾರಾಯಣ, ಆಗಸ್ಟ್‍ನಲ್ಲಿ ತೆರೆಗೆ ಬರಲಿದೆ. ಕನ್ನಡವೂ ಸೇರಿದಂತೆ 5 ಭಾಷೆಗಳಲ್ಲಿ ಏಕಕಾಲದಲ್ಲಿ ರಿಲೀಸ್ ಆಗಲಿದೆ ಎನ್ನುವುದೆಲ್ಲ ಈಗ ಕನ್ನಡಿಗರಿಗೆ ಗೊತ್ತು. ಆದರೆ, ಇಷ್ಟು ದೊಡ್ಡ ಅದ್ಧೂರಿ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿಯವರಿಗೆ ಇರೋದು ಒಂದೇ ಡ್ರೆಸ್ಸು. ತಮಾಷೆ ಅಲ್ಲ ಸ್ವಾಮಿ.. ಇದು ಸತ್ಯ.

  ಚಿತ್ರದ 99% ದೃಶ್ಯಗಳಲ್ಲಿ ರಕ್ಷಿತ್ ಶೆಟ್ಟಿ ಪೊಲೀಸ್ ಯೂನಿಫಾರ್ಮಲ್ಲೇ ಇರ್ತಾರೆ ಎಂದು ಹೇಳಿರುವುದು ನಿರ್ಮಾಪಕರಲ್ಲಿ ಒಬ್ಬರಾದ ಪುಷ್ಕರ್ ಮಲ್ಲಿಕಾರ್ಜುನಯ್ಯ. ಚಿತ್ರದಲ್ಲಿ ಒಂದು ಹೋಳಿ ಹಾಡಿದ್ದು, ಆ ಹಾಡಿನಲ್ಲಿ ಮಾತ್ರ ರಕ್ಷಿತ್ ಶೆಟ್ಟಿ ಬಣ್ಣಬಣ್ಣದ ಹುಡುಗನಾಗಿ ಕಾಣಿಸಿಕೊಂಡಿದ್ದಾರಂತೆ.

  ಹೋಳಿ ದೃಶ್ಯಗಳು ತುಂಬಾ ರೊಮ್ಯಾಂಟಿಕ್ ಆಗಿ ಬಂದಿವೆ. ಇಮ್ರಾನ್ ಸರ್ದಾರಿಯಾ ಒಳ್ಳೆಯ ನೃತ್ಯ ಸಂಯೋಜಿಸಿದ್ದಾರೆ. ಚಿತ್ರೀಕರಣ ಮುಗಿದಿದ್ದು ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಚುರುಕುಗೊಳ್ಳಲಿವೆ.

 • ಅವನೇ ಶ್ರೀಮಾನ್ ರಕ್ಷಿತ್ ಶೆಟ್ಟಿ

  rkahsit shetty had a busy birthday

  ಇದ್ಯಾವುದು.. ಇದೇನು ಹೊಸ ಸಿನಿಮಾನಾ.. ಅಂತಾ ಕನ್‍ಫ್ಯೂಸ್ ಆಗಬೇಡಿ. ಅವನೇ ಶ್ರೀಮನ್ನಾರಾಯಣ ಚಿತ್ರತಂಡ ಈಗ ರಕ್ಷಿತ್ ಶೆಟ್ಟಿ ಮಯವಾಗಿದೆ. ಅದಕ್ಕೆ ಕಾರಣ ರಕ್ಷಿತ್ ಶೆಟ್ಟಿ ಹುಟ್ಟುಹಬ್ಬ. ತಮ್ಮ ಚಿತ್ರದ ನಾಯಕನ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಆಚರಿಸಿರುವ ಚಿತ್ರತಂಡ, ಸಿನಿಮಾದ ಫಸ್ಟ್ ಲುಕ್ ಬಿಡುಗಡೆ ಮಾಡಿದೆ.

  ಈ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಪೊಲೀಸ್. ಆದರೆ, ಎಲ್ಲರಂತಲ್ಲ. ಸದಾ ನಗುತ್ತಾ, ನಗಿಸುತ್ತಾ ಇರುವ ಪಾತ್ರ. ಹೇಳಿದ ಕೆಲಸವೊಂದನ್ನು ಬಿಟ್ಟು, ಮಿಕ್ಕಿದ್ದನ್ನೆಲ್ಲ ಮಾಡುವ ಪೊಲೀಸ್. ಆದರೆ, ಅವನು ಒಂದು ಮಹಾನ್ ಕಾರ್ಯಕ್ಕಾಗಿ ಬದುಕುತ್ತಿರುತ್ತಾನೆ. ಅದೇನು ಅನ್ನೋದು ಚಿತ್ರದ ಸಸ್ಪೆನ್ಸ್. 

  ಸಚಿನ್ ನಿರ್ದೇಶನದ ಚಿತ್ರಕ್ಕೆ ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಪಕರು. ಈಗಾಗಲೇ ಚಿತ್ರದ 33 ದಿನಗಳ ಶೂಟಿಂಗ್ ಆಗಿದೆ. ಇನ್ನೂ 70 ದಿನಗಳ ಶೂಟಿಂಗ್ ಬಾಕಿ ಇದೆ. ಮುಂದಿನ ಚಿತ್ರೀಕರಣವೆಲ್ಲ ಸ್ಟುಡಿಯೋ ಸೆಟ್‍ನಲ್ಲಿ ನಡೆಯಲಿದೆ. ಚಿತ್ರವನ್ನು ಡಿಸೆಂಬರ್‍ಗೆ ತೆರೆಗೆ ತರುವುದು ಪುಷ್ಕರ್ ಮಲ್ಲಿಕಾರ್ಜುನಯ್ಯ ಪ್ಲಾನ್.

  ಈ ಹುಟ್ಟುಹಬ್ಬಕ್ಕೆ ಅವನೇ ಶ್ರೀಮನ್ನಾರಾಯಣ ಚಿತ್ರದ ಫಸ್ಟ್‍ಲುಕ್ ರಿಲೀಸ್ ಆದರೆ, ಇದೇ ದಿನ 777 ಚಾರ್ಲಿ ಚಿತ್ರದ ಮುಹೂರ್ತವೂ ನಡೆಯಲಿದೆ. ಇನ್ನು ಕೆಲವು ದಿನ ರಕ್ಷಿತ್ ಶೆಟ್ಟಿಗೆ ಅವನೇ ಶ್ರೀಮನ್ನಾರಾಯಣ ಚಿತ್ರದಿಂದ ವಿರಾಮ. ಆ ವಿರಾಮದಲ್ಲಿ ಚಾರ್ಲಿಯ ಶೂಟಿಂಗ್. ಹಾಗಂತ ಇಡೀ ನಾರಾಯಣ ಚಿತ್ರತಂಡ ಸುಮ್ಮನೆ ಇರಲ್ಲ. ಅದು ಬಿಡುವೇ ಇಲ್ಲದಂತೆ ಚಿತ್ರದ ಸೆಟ್ ಹಾಕುವ ಕೆಲಸದಲ್ಲಿ ಬ್ಯುಸಿಯಾಗಿದೆ. 

  ಒಟ್ಟಿನಲ್ಲಿ ಈ ಬರ್ತ್ ಡೇಯನ್ನು ರಕ್ಷಿತ್ ಶೆಟ್ಟಿ ಬಿಡುವೇ ಇಲ್ಲದಷ್ಟು ಕೆಲಸ ಹೇರಿಕೊಂಡು ಸೆಲಬ್ರೇಟ್ ಮಾಡುತ್ತಿದ್ದಾರೆ.

 • ಒಲವಿನ ಕಚಗುಳಿ ಶುರುವಾಗಿದ್ದು ಯಾವಾಗ..? ರಕ್ಷಿತ್ ಶೆಟ್ಟಿ ಮಾತನಾಡಿದಾಗ

  Rakshith - Rashmika Love story

  ಹೌದು, ಮದುವೆಯಾಗುತ್ತಿದ್ದೇವೆ ಎಂದು ರಕ್ಷಿತ್ ಶೆಟ್ಟಿ ಹೇಳಿಕೊಂಡಿದ್ದು, ಎಂಜೇಜ್‍ಮೆಂಟ್ ಫಿಕ್ಸ್ ಆಗಿರುವುದು ಹಳೆಯ ವಿಚಾರ. ಆದರೆ, ಪ್ರೀತಿ ಶುರುವಾಗಿದ್ದು ಹೇಗೆ ಅನ್ನೋದರ ಬಗ್ಗೆ ರಕ್ಷಿತ್ ಬಾಯಿಬಿಟ್ಟಿರಲೇ ಇಲ್ಲ.

  ಆಗೆಲ್ಲ ನಾಚಿಕೊಳ್ಳುತ್ತಿದ್ದ ರಕ್ಷಿತ್ ಶೆಟ್ಟಿ, ಈಗ ಹೇಳಿಕೊಂಡಿದ್ದಾರೆ. ಕಿರಿಕ್ ಪಾರ್ಟಿ ಚಿತ್ರಕ್ಕೆ ಆಯ್ಕೆಯಾದಾಗಿನಿಂದ ಶೂಟಿಂಗ್ ಮುಗಿಯುವವರೆಗೂ ಇಬ್ಬರ ಮಧ್ಯೆ ಅಂಥದ್ದೇನೂ ಇರಲಿಲ್ಲವಂತೆ. ತಮ್ಮ ಪಾತ್ರದ ಶೂಟಿಂಗ್ ಮುಗಿದ ಮೇಲೂ ಆಗಾಗ್ಗೆ ಸೆಟ್‍ಗೆ ಬರುತ್ತಿದ್ದ ರಶ್ಮಿಕಾರನ್ನು ನೋಡುತ್ತಿದ್ದ ರಕ್ಷಿತ್‍ಗೆ, ರಶ್ಮಿಕಾ ಇಷ್ಟವಾಗ್ತಾ ಹೋದರಂತೆ.

  ರಶ್ಮಿಕಾಗೂ ಹಾಗೇ ಅನ್ನಿಸೋಕೆ ಶುರುವಾಗಿತ್ತು. ಆದರೆ, ಒಬ್ಬರಿಗೊಬ್ಬರು ಇದುವರೆಗೆ ಐ ಲವ್ ಯೂ ಎಂದು ಹೇಳಿಕೊಂಡಿಲ್ಲ. ಕಳೆದ ವರ್ಷ ರಕ್ಷಿತ್ ಶೆಟ್ಟಿ ಹುಟ್ಟುಹಬ್ಬಕ್ಕೆ 20 ಉಡುಗೊರೆ ಕೊಟ್ಟರಂತೆ ರಶ್ಮಿಕಾ. ಅದು ರಕ್ಷಿತ್‍ಗೆ ಇಷ್ಟವಾದರೂ, ಆಗಲೂ ರಕ್ಷಿತ್ ಬಾಯಿ ಬಿಡಲಿಲ್ಲ. ರಶ್ಮಿಕಾ ಹುಟ್ಟುಹಬ್ಬಕ್ಕೆ ಉಂಗುರ ಕೊಟ್ಟಾಗಲೂ ಇಬ್ಬರೂ ಪ್ರೀತಿಯ ಮಾತನಾಡಲಿಲ್ಲ.

  ಸಿಕ್ಕರೆ ಇಂತಹ ಸೊಸೆ ಸಿಗಬೇಕು ಎಂದು ತಾಯಿ, ನಿನಗೆ ಇಂತಹ ಹುಡುಗಿಯನ್ನೇ ನೋಡ್ತೀವಿ ಎಂದು ಅಣ್ಣ-ಅತ್ತಿಗೆ, ರಶ್ಮಿಕಾರನ್ನು ತೋರಿಸಿಕೊಂಡೇ  ಹೇಳುತ್ತಿದ್ದಾಗಲೂ ರಕ್ಷಿತ್ ಶೆಟ್ಟಿ, ಪ್ರೀತಿಯನ್ನ ಹೇಳಿಕೊಂಡಿರಲಿಲ್ಲ.

  ಕೊನೆಗೆ ಮಾಧ್ಯಮಗಳಲ್ಲಿ ಸುದ್ದಿಯಾದಾಗ ಇಬ್ಬರ ತಂದೆ ತಾಯಿಯೂ ಕರೆದು ಕೇಳಿದ್ದಾರೆ. ಇಬ್ಬರೂ ಅವರವರ ಮನೆಗಳವರಿಗೆ ಒಪ್ಪಿಗೆ ಕೊಟ್ಟಿದ್ದಾರೆ. ಪ್ರೀತಿ ಎಂಗೇಜ್‍ಮೆಂಟ್ ತನಕ ಬಂದಿದೆ. ಕಚಗುಳಿ ಶುರುವಾಗಿದೆ.

  Related Articles :-

  ರಕ್ತಿತ್ ಶೆಟ್ಟಿ - ರಶ್ಮಿಕಾ ಲವ್ ಸ್ಟೋರಿ - ಪ್ರಪೋಸ್ ಮಾಡಿದ್ದು ಯಾರು?

  ಕಿರಿಕ್ ಜೋಡಿಗೆ ಶ್ರೀರಸ್ತು ಶುಭಮಸ್ತು. ಒಪ್ಪಿಕೊಂಡರು ರಕ್ಷಿತ್ ಶೆಟ್ಟಿ

  Rakshith - Rashmika Engagement On July 3rd?

  Rakshith Shetty Says Marriage Only After Two Years

 • ಕತೆಯೊಂದು ಶುರುವಾಗಿದೆ.. ಶೂಟಿಂಗ್ ಮುಗಿದೋಗಿದೆ

  dinganth;s katheyondhu shuruvagidhe

  ಕತೆಯೊಂದು ಶುರುವಾಗಿದೆ.. ಇದು ಪುಷ್ಕರ್ ಮಲ್ಲಿಕಾರ್ಜುನಯ್ಯ ಮತ್ತು ರಕ್ಷಿತ್ ಶೆಟ್ಟಿ ಕಾಂಬಿನೇಷನ್‍ನ ಸಿನಿಮಾ. ಕಥೆ, ಚಿತ್ರಕಥೆಗಳಿಗೇ ಹೆಚ್ಚು ಆದ್ಯತೆ ಕೊಡುತ್ತಿರುವ ಪುಷ್ಕರ್-ರಕ್ಷಿತ್ ಜೋಡಿ, ಈ ಚಿತ್ರವನ್ನೂ ಹಾಗೆಯೇ ಒಪ್ಪಿಕೊಂಡು ನಿರ್ಮಿಸಿದೆ. ಚಿತ್ರಕ್ಕೆ ಅವರು ಎಷ್ಟರಮಟ್ಟಿಗೆ ಸಿದ್ಧರಾಗಿದ್ದರು ಎಂದರೆ, ಮೂವತ್ತೇ ದಿನಕ್ಕೆ ಶೂಟಿಂಗ್ ಮುಗಿದೇ ಹೋಗಿದೆ.

  ಚಿತ್ರದ ಬಗ್ಗೆ ಸಂಪೂರ್ಣ ಪೂರ್ವತಯಾರಿ ಆಗಿತ್ತು. ಯಾವ ಸೀನ್‍ಗೆ ಎಷ್ಟು ಶಾಟ್ ಬೇಕು ಎನ್ನುವುದು ಕೂಡಾ ನಿರ್ಧಾರವಾಗಿ ಹೋಗಿತ್ತು. ಪ್ರತಿಯೊಂದನ್ನೂ ತಯಾರಿ ಮಾಡಿಕೊಂಡರೆ, 30 ದಿನಗಳಲ್ಲಿ ಶೂಟಿಂಗ್ ಮುಗಿಸುವುದು ಕಷ್ಟವೇನಲ್ಲ ಅಂತಾರೆ ನಿರ್ದೇಶಕ ಸೆನ್ನಾ ಹೆಗ್ಡೆ.

  ಚಿತ್ರಕ್ಕೆ ದಿಗಂತ್ ಹೀರೋ ಆದರೆ, ಪೂಜಾ ದೇವರಿಯಾ ನಾಯಕಿ. ಸಚಿನ್ ವಾರಿಯರ್ ಸಂಗೀತವಿರುವ ಚಿತ್ರಕ್ಕೆ ಕಿರಣ್ ಕಾವೇರಪ್ಪ ಸಾಹಿತ್ಯ ಹಾಗೂ ಅಭಿಜಿತ್ ಮಹೇಶ್ ಸಂಭಾಷಣೆ ಇದೆ.

 • ಕಿರಿಕ್ ಜೋಡಿಗೆ ಶ್ರೀರಸ್ತು ಶುಭಮಸ್ತು. ಒಪ್ಪಿಕೊಂಡರು ರಕ್ಷಿತ್ ಶೆಟ್ಟಿ

  rakshith shetty rashmika mandana

  ನಾನು ನೋಡಿದ ತುಂಬಾ ಒಳ್ಳೆ ಹುಡುಗರಲ್ಲಿ ರಕ್ಷಿತ್ ಶೆಟ್ಟಿ ಒಬ್ಬರು. ಅವರಿಗೆ ಹುಟ್ಟುಹಬ್ಬದ ಶುಭಾಶಯ. ರಕ್ಷಿತ್ ಅವರೇ, ನಮ್ಮ ಪುಟ್ಟ ಕುಟುಂಬಕ್ಕೆ ನಿಮಗೆ ಸ್ವಾಗತ. ಕಿರಿಕ್ ಪಾರ್ಟಿಯ ಸಾನ್ವಿ ಫೇಸ್​ಬುಕ್​ನಲ್ಲಿ ಇಂಥಾದ್ದೊಂದು ಸ್ಟೇಟಸ್ ಹಾಕಿಕೊಂಡಾಗ, ಎಲ್ಲರ ಹುಬ್ಬೇರಿದ್ದು ನಿಜ.

  ಇತ್ತೀಚೆಗೆ ಸ್ಯಾಂಡಲವುಡ್​ನಲ್ಲಿ ರಕ್ಷಿತ್ ಶೆಟ್ಟಿ-ರಶ್ಮಿಕಾ ಮಂದಣ್ಣ ಜೋಡಿಯ ಪ್ರೀತಿ-ಪ್ರೇಮದ ಸುದ್ದಿ ಓಡಾಡುತ್ತಲೇ ಇತ್ತು. ಇದ್ದಕ್ಕಿದ್ದಂತೆ ಸುದ್ದಿ ಹುಟ್ಟೋದು, ರಕ್ಷಿತ್ ಶೆಟ್ಟಿ ನಿರಾಕರಿಸೋದು ನಡೆದೇ ಇತ್ತು.

  ಈಗ ಆ ಎಲ್ಲ ಸುದ್ದಿಗಳಿಗೂ ಬ್ರೇಕ್​ ಬಿದ್ದಿದೆ. ರಶ್ಮಿಕಾ ಸ್ಟೇಟಸ್​ ನೋಡಿ ಕುತೂಹಲಗೊಂಡು ರಕ್ಷಿತ್​ಗೆ ಫೋನ್ ಮಾಡಿದಾಗ, ಹೌದು ಎಂದಿದ್ದಾರೆ ರಕ್ಷಿತ್ ಶೆಟ್ಟಿ.

  ಮಾಧ್ಯಮಗಳಲ್ಲಿ ಸುದ್ದಿಯಾದಾಗ ಏನಿದೆಲ್ಲ ಎಂದು ಕೇಳಿದ್ದರಂತೆ ರಶ್ಮಿಕಾ ತಂದೆ. ಮಾಧ್ಯಮಗಳ ಎದುರು ಸುದ್ದಿ ನಿರಾಕರಿಸಿದ್ದ ರಕ್ಷಿತ್ ಶೆಟ್ಟಿಗೆ ಭಾವೀ ಮಾವನ ಎದುರು ನಿರಾಕರಿಸಲು ಆಗಲಿಲ್ಲ. ಒಪ್ಪಿಕೊಂಡಿದ್ದಾರೆ. ಇದನ್ನು ಖುದ್ದು ರಕ್ಷಿತ್ ಶೆಟ್ಟಿ ಸ್ಪಷ್ಟಪಡಿಸಿದ್ದಾರೆ.

   ಜುಲೈ3ಕ್ಕೆ ಕೊಡಗು ಜಿಲ್ಲೆಯ ಕುಶಾಲನಗರದಲ್ಲಿ ಎಂಗೇಜ್​ಮೆಂಟ್ ಖಚಿತ. ಹೊಸ ಬಾಳಿನ ಹೊಸಿಲಲ್ಲಿ ನಿಂತಿರುವ ಹೊಸ ಜೋಡಿಗೆ ಶುಭವಾಗಲಿ.

   

 • ಕೊನೆಗೂ ರಶ್ಮಿಕಾ ಮಂದಣ್ಣ ಮೌನ ಮುರಿದಾಗ..

  rashmika breaks her silence on break up issue

  ರಕ್ಷಿತ್ ಶೆಟ್ಟಿ ಜೊತೆಗಿನ ಬ್ರೇಕಪ್ ಸುದ್ದಿ ಹಾರಾಡುತ್ತಿರುವಾಗ, ರಶ್ಮಿಕಾ ಅವರನ್ನು ಎಲ್ಲರೂ ಟ್ರೋಲ್ ಮಾಡುತ್ತಿರುವಾಗ.. ಹಲವು ದಿನಗಳಿಂದ ಮೌನಕ್ಕೆ ಶರಣಾಗಿದ್ದ ರಶ್ಮಿಕಾ ಮಂದಣ್ಣ, ಕೊನೆಗೂ ಮೌನ ಮುರಿದಿದ್ದಾರೆ. ಉತ್ತರ ಕೊಟ್ಟಿದ್ದಾರೆ. 

  ಕಳೆದ ಹಲವು ದಿನಗಳಿಂದ ನನ್ನ ಬಗ್ಗೆ ಕೇಳಿ ಬರುತ್ತಿರುವ ರೂಮರ್, ಸುದ್ದಿ ಹಾಗೂ ಟ್ರೋಲ್‍ಗಳ ಬಗ್ಗೆ ಗಮನಿಸುತ್ತಿದ್ದೇನೆ. ಸುಮ್ ಸುಮ್ನೆ ಕೇಳಿ ಬರುವ ಇಂತಹ ಟ್ರೋಲ್‍ಗಳು ಕಿರಿಕಿರಿ ಮಾಡುತ್ತವೆ. ನನ್ನನ್ನು ಬಿಂಬಿಸಿರುವ ರೀತಿಯಿಂದಾಗಿ ನಿಜಕ್ಕೂ ಬೇಸರ ತರಿಸಿದೆ.

  ಹಾಗಂತ, ನಾನು ನಿಮ್ಮನ್ನು ದೂರುವುದಿಲ್ಲ. ನೀವು ನಂಬಿರೋದನ್ನ ನೀವು ಮಾಡಿದ್ದೀರಿ. ನಾನೀಗ ಯಾವುದನ್ನೂ ಸಮರ್ಥಿಸಿಕೊಳ್ಳುವ ಗೋಜಿಗೆ ಹೋಗಲ್ಲ. ಅದು ಅಗತ್ಯವೂ ಇಲ್ಲ.

  ಇನ್ನು ನಾನಾಗಲೀ, ರಕ್ಷಿತ್ ಆಗಲೀ, ಸಿನಿಮಾ ರಂಗದ ಯಾರೇ ಆಗಲೀ.. ಇದನ್ನು ನೋಡಿಕೊಂಡು ಮುನ್ನಡೆಯುವುದಿಲ್ಲ. ಪ್ರತಿ ನಾಣ್ಯಕ್ಕೂ ಎರಡು ಮುಖಗಳಿರುವಂತೆ, ಪ್ರತಿ ಕಥೆಗೂ ಎರಡು ಮುಖಗಳಿರುತ್ತವೆ. 

  ನಾನು ನಿಮಗೆ ಕೇಳಿಕೊಳ್ಳೋದು ಇಷ್ಟೆ. ನಮ್ಮನ್ನು ಸ್ವಲ್ಪ ನೆಮ್ಮದಿಯಿಂದ ಕೆಲಸ ಮಾಡಲು ಬಿಟ್ಟುಬಿಡಿ. ಅಷ್ಟೆ. ಅಂದಹಾಗೆ, ನಾನು ಕನ್ನಡ ಚಿತ್ರರಂಗ ಬಿಟ್ಟು ಹೋಗುತ್ತಿಲ್ಲ. ನಾನು ಇಲ್ಲಿಯೇ ಇರುತ್ತೇನೆ. ಯಾವುದೇ ಚಿತ್ರವಾಗಲಿ, ನನ್ನೊಳಿಗೆ ಬೆಸ್ಟ್‍ನ್ನು ಕೊಡುತ್ತೇನೆ. ಧನ್ಯವಾದ.

  ಇದು ರಶ್ಮಿಕಾ ಮಂದಣ್ಣ ಪ್ರತಿಕ್ರಿಯೆ. ಹಲವು ದಿನಗಳ ನಂತರ ಮೌನ ಮುರಿದಿರುವ ರಶ್ಮಿಕಾ, ನೇರವಾಗಿ ತಮ್ಮ ಬ್ರೇಕಪ್ ಬಗ್ಗೆ ಸ್ಪಷ್ಟನೆಯನ್ನೇನೂ ಕೊಟ್ಟಿಲ್ಲ.

 • ಕೋಟ್ಯಧಿಪತಿಯಲ್ಲಿ ರಕ್ಷಿತ್ ಶೆಟ್ಟಿ

  rakshit shetty attends kannada kotyadhipathi

  ಕನ್ನಡದ ಕೋಟ್ಯಧಿಪತಿಗೆ ರಕ್ಷಿತ್ ಶೆಟ್ಟಿ ಅತಿಥಿಯಾಗಿದ್ದಾರೆ. ರಮೇಶ್ ಅರವಿಂದ್ ಎದುರು ಹಾಟ್‍ಸೀಟ್‍ನಲ್ಲಿ ಕುಳಿತು, ಸವಾಲು ಎದುರಿಸಿದ್ದಾರೆ. ಈ ಕೋಟ್ಯಧಿಪತಿ ಸಂಚಿಕೆಯಲ್ಲಿ ಎರಡು ವಿಶೇಷಗಳಿವೆ. ಇದು ಕೋಟ್ಯಧಿಪತಿ ಸಿರೀಸ್‍ನ 50ನೇ ಎಪಿಸೋಡ್. ಈ ಕಾರ್ಯಕ್ರಮದಲ್ಲಿ ರಕ್ಷಿತ್ ಶೆಟ್ಟಿ ಭಾಗವಹಿಸುತ್ತಿರುವುದು ಕೊಡಗಿಗಾಗಿ.

  ಪ್ರವಾಹದಿಂದ ತತ್ತರಿಸಿ ಹೋಗಿರುವ ಕೊಡಗು ಸಂತ್ರಸ್ತರಿಗೆ ರಕ್ಷಿತ್ ಶೆಟ್ಟಿ ಈ ಕಾರ್ಯಕ್ರಮದಲ್ಲಿ ಗೆದ್ದ ಹಣ ಸಂದಾಯವಾಗಲಿದೆ. ಕಾರ್ಯಕ್ರಮದಲ್ಲಿ ರಕ್ಷಿತ್ ಶೆಟ್ಟಿ ಜೊತೆಗೆ ಅವರ ತಂದೆ, ತಾಯಿ, ಸಹೋದರ ರಂಜಿತ್ ಮತ್ತು ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಕೂಡಾ ಭಾಗವಹಿಸಿದ್ದಾರೆ.

  ರಮೇಶ್ ಎದುರು ರಕ್ಷಿತ್ ಶೆಟ್ಟಿ, ನಿರ್ದೇಶಕರಾದ ಸಿಂಪಲ್ ಸುನಿ, ಹೇಮಂತ್ ರಾವ್ ಹಾಗೂ ಕಿರಣ್ ರಾಜ್ ಬಗ್ಗೆ ಇಂಟರೆಸ್ಟಿಂಗ್ ಸಂಗತಿಗಳನ್ನೂ ಹೇಳಿಕೊಂಡಿದ್ದಾರಂತೆ. ಇದೇ ಶುಕ್ರವಾರ ರಕ್ಷಿತ್ ಶೆಟ್ಟಿ ಕಾರ್ಯಕ್ರಮ ಪ್ರಸಾರವಾಗಲಿದೆ.

 • ಗುರು ರಾಯರ ಸನ್ನಿಧಿಯಲ್ಲಿ ರಕ್ಷಿತ್, ರಶ್ಮಿಕಾ ಜೋಡಿ

  rakshith, rashmika in matralaya

  ಒಂದು ಕಡೆ ಕಿರಿಕ್ ಪಾರ್ಟಿ ಚಿತ್ರ 200 ದಿನ ಪೂರೈಸಿದ ಸಂಭ್ರಮ, ಮತ್ತೊಂದೆಡೆ ಬಾಳ ಸಂಗಾತಿಗಳಾಗಲು ನಿರ್ಧರಿಸಿರುವ ಸಡಗರ.. ಈ ಎರಡೂ ಸಡಗರಕ್ಕೆ ಸಾಕ್ಷಿಯಾಗುತ್ತಿರುವ ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ ಕುಟುಂಬ ಮಂತ್ರಾಲಯಕ್ಕೆ ಭೇಟಿ ನೀಡಿದೆ.

  ನಿಶ್ಚಿತಾರ್ಥ ಮಾಡಿಕೊಂಡ ನಂತರ ಇಬ್ಬರೂ ಮಂತ್ರಾಲಯಕ್ಕೆ ಭೇಟಿ ನೀಡಿ, ಸುಬುದೇಂದ್ರ ಶ್ರೀಗಳ ಆಶೀರ್ವಾದ ಪಡೆದಿದ್ದಾರೆ. ರಿಷಬ್ ಶೆಟ್ಟಿ ಸೇರಿದಂತೆ ಎರಡೂ ಕುಟುಂಬ ಸದಸ್ಯರು ಮಂತ್ರಾಲಯದಲ್ಲಿ ವಿಶೇಷ ಪೂಜೆ ನೆರವೇರಿಸಿದ್ದಾರೆ.

 • ಚಾರ್ಲಿ 777ಗೂ ರಕ್ಷಿತ್ ಶೆಟ್ಟಿಯೇ ಹೀರೋ

  rakshith shetty is now charlie 777

  ವಿಭಿನ್ನ ಸಿನಿಮಾಗಳ ಮೂಲಕವೇ ಸ್ಟಾರ್ ಆದ ರಕ್ಷಿತ್ ಶೆಟ್ಟಿ, ಈಗ ಚಾರ್ಲಿ 777 ಆಗುತ್ತಿದ್ದಾರೆ. ಚಿತ್ರಕ್ಕೆ ಮೊದಲು ಅರವಿಂದ್ ಅಯ್ಯರ್ ಹೀರೋ ಎನ್ನಲಾಗಿತ್ತು. ಆದರೆ, ಈಗ ಚಿತ್ರತಂಡ ರಕ್ಷಿತ್ ಶೆಟ್ಟಿ ಅವರನ್ನೇ ನಾಯಕರನ್ನಾಗಿ ಆಯ್ಕೆ ಮಾಡಿಕೊಂಡಿದೆ. ಅರವಿಂದ್ ಅಯ್ಯರ್ ಬದಲಾವಣೆಗೆ ಕಾರಣ, ಅವರ ಹಳೆಯ ಕಮಿಟ್‍ಮೆಂಟ್ಸ್ ಅಷ್ಟೇ ಹೊರತು, ಬೇರೇನೂ ಇಲ್ಲ ಎಂದಿದೆ ಚಿತ್ರತಂಡ.

  ಈಗಾಗಲೇ ಹಲವು ಚಿತ್ರಗಳಿಗೆ ಕಮಿಟ್ ಆಗಿರುವ ಅರವಿಂದ್ ಅಯ್ಯರ್, ಚಾರ್ಲಿ 777 ಚಿತ್ರಕ್ಕೆ ಡೇಟ್ ಹೊಂದಿಸಲು ಸಾಧ್ಯವಾಗಿಲ್ಲ. ಅಂದಹಾಗೆ ಅರವಿಂದ್ ಅಯ್ಯರ್ ಕೂಡಾ ರಕ್ಷಿತ್ ಶೆಟ್ಟಿ ಗ್ಯಾಂಗ್‍ನ ಸದಸ್ಯರೇ. ಅವರದ್ದೇ ಬ್ಯಾನರ್‍ನ ಭೀಮಸೇನ ನಳಮಹರಾಜ ಚಿತ್ರಕ್ಕೆ ಅರವಿಂದ್ ಅಯ್ಯರ್ ಅವರೇ ನಾಯಕ.

  ಪ್ರಾಣಿ ಮತ್ತು ಮನುಷ್ಯನ ನಡುವಿನ ಬಾಂಧವ್ಯದ ಕುರಿತ ಕಥೆ ಹೊಂದಿರುವ ಚಿತ್ರ, ವಿಭಿನ್ನ ಕಥಾ ಹಂದರ ಹೊಂದಿದೆ ಎಂದಿದ್ದಾರೆ ರಕ್ಷಿತ್ ಶೆಟ್ಟಿ. ಅವನೇ ಶ್ರೀಮನ್ನಾರಾಯಣ ಹಾಗೂ ಚಾರ್ಲಿ 777.. ಎರಡೂ ಚಿತ್ರಗಳಿಗೆ ರಕ್ಷಿತ್ ಶೆಟ್ಟಿ ಅವರೇ ನಾಯಕರಾಗಿದ್ದಾರೆ. 

   

 • ಚಾರ್ಲಿ 777ಗೆ ಇಬ್ಬರು ಮರಿ ಸ್ಟಾರ್‍ಗಳ ಎಂಟ್ರಿ 

  two baby stars in charlie 777

  ರಕ್ಷಿತ್ ಶೆಟ್ಟಿ ಅಭಿನಯದ ಅವನೇ ಶ್ರೀಮನ್ನಾರಾಯಣ ಬಿರುಸಾಗಿ ಸಾಗುತ್ತಿದ್ದರೆ, ಇನ್ನೊಂದೆಡೆ ಚಾರ್ಲಿ 777 ಚಿತ್ರೀಕರಣವೂ ಜೋರಾಗಿ ನಡೆಯುತ್ತಿದೆ. ರಕ್ಷಿತ್ ಶೆಟ್ಟಿ ಜೊತೆ ಈ ಚಿತ್ರದ ಇನ್ನೊಂದು ಹೀರೋ ನಾಯಿ. ಚಾರ್ಲಿ ಅನ್ನೋ ಹೆಸರಿನ ಮುದ್ದಾದ ನಾಯಿಯ ಕಥೆ ಚಿತ್ರದಲ್ಲಿದೆ. ಈಗ ಚಿತ್ರದ ಚಿತ್ರೀಕರಣಕ್ಕೆ ಇನ್ನಿಬ್ಬರು ಮರಿ ಸ್ಟಾರ್‍ಗಳ ಎಂಟ್ರಿ ಆಗಿದೆ. ಬೇಬಿ ಶಾರ್ವರಿ ಮತ್ತು ಪಾಣ್ಯ ಬಿ.ರಾವ್.

  ಇವರಲ್ಲಿ ಶಾರ್ವರಿ, ಡ್ರಾಮಾ ಜ್ಯೂನಿಯರ್ಸ್ ಖ್ಯಾತಿ. ಪ್ರಾಣ್ಯ ಬಿ.ರಾವ್, ಡಬ್ ಸ್ಮಾಶ್ ಖ್ಯಾತಿ. ಶಾರ್ವರಿ, ಪುಟ್ಟ ರಕ್ಷಿತ್ ಶೆಟ್ಟಯಾಗಿ ಅಂದರೆ, ರಕ್ಷಿತ್ ಶೆಟ್ಟಿ ಬಾಲಕನಾಗಿದ್ದಾಗಿನ ಪಾತ್ರ ಮಾಡುತ್ತಿದ್ದರೆ, ಪ್ರಾಣ್ಯ, ತಂಗಿಯಾಗಿದ್ದಾರೆ.

  ಕಿರಣ್ ರಾಜ್ ನಿರ್ದೇಶನದ ಚಿತ್ರಕ್ಕೆ ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಪಕರು. ಆದಷ್ಟು ಶೀಘ್ರವಾಗಿ ಚಿತ್ರೀಕರಣ ಮುಗಿಸಿ, ಡಿಸೆಂಬರ್ ಹೊತ್ತಿಗೆ ಸಿನಿಮಾವನ್ನು ರಿಲೀಸ್ ಮಾಡುವ ಸನ್ನಾಹದಲ್ಲಿದೆ ಚಿತ್ರತಂಡ.

 • ಚೆಂದ ಚೆಂದ ಚೆಂದ ಚೆಂದ ನನ್ನ ಹೆಂಡ್ತಿ ಕಾರು

  rashmika mandanna, rakshith shetty

  ಡಿ.29 ಬಂತೆಂದರೆ, ಎಲ್ಲರಿಗಿಂತ ಹೆಚ್ಚು ಖುಷಿಯಾಗಿರುವವರಲ್ಲಿ ರಶ್ಮಿಕಾ ಇರುತ್ತಾರೆ. ಅದು ಕಳೆದ ವರ್ಷ ಅವರ ಮೊದಲ ಸಿನಿಮಾ ಕಿರಿಕ್ ಪಾರ್ಟಿ ರಿಲೀಸ್ ಆದ ದಿನ. ಈ ವರ್ಷ ಅವರ 3ನೇ ಸಿನಿಮಾ ಚಮಕ್ ರಿಲೀಸ್ ಆದ ದಿನ. ವಾರದ ಹಿಂದಷ್ಟೇ ಅವರ ಅಭಿಯನದ 2ನೇ ಸಿನಿಮಾ ಅಂಜನಿಪುತ್ರ ಬಿಡುಗಡೆಯಾಗಿತ್ತು. ಹೀಗೆ ಡಿಸೆಂಬರ್ ತಿಂಗಳಲ್ಲಿ ಭಾರಿ ಖುಷಿಯಲ್ಲಿರುವ ರಶ್ಮಿಕಾ ಅವರ ಸಂಭ್ರಮಕ್ಕೆ ಹೊಸ ಸೇರ್ಪಡೆ ಆಡಿ ಕಾರು.

  ರಶ್ಮಿಕಾ ಫಳಫಳ ಹೊಳೆಯುವ ಕೆಂಬಣ್ಣದ ಆಡಿ ಕಾರು ಖರೀದಿಸಿದ್ದಾರೆ. ಭಾವೀ ಪತ್ನಿಯ ಹೊಸ ಕಾರು ಖರೀದಿಗೆ ಸಾಕ್ಷಿಯಾಗಿದ್ದವರು ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ. ಜೀವದ ಗೆಳೆಯನ ಜೊತೆ ಮೊದಲ ಡ್ರೈವ್ ಮಾಡಿ ಬಂದ ರಶ್ಮಿಕಾ ಮುಖದ ರಂಗು, ಥೇಟು ಅವರ ಕಾರಿನ ಬಣ್ಣಕ್ಕೇ ತಿರುಗಿದೆ.

 • ಪಂಚಭಾಷಾ ಸಿನಿಮಾ ಅವನೇ ಶ್ರೀಮನ್ನಾರಾಯಣ

  after kgf avane srimananrayana to release in 5 languages

  ರಕ್ಷಿತ್ ಶೆಟ್ಟಿ ಸಿನಿಮಾ ಬಂದು ಎರಡೂವರೆ ವರ್ಷವಾಯ್ತು. ಇನ್ನೂ 3 ತಿಂಗಳು ಕಾಯಬೇಕು. ಆಗ ಬರ ನೀಗಲಿದೆ. ಅವನೇ ಶ್ರೀಮನ್ನಾರಾಯಣ ಆಗಸ್ಟ್‍ನಲ್ಲಿ ತೆರೆಗೆ ಬರ್ತಾನೆ. ಒಂದಲ್ಲ.. ಎರಡಲ್ಲ.. ಐದು ಭಾಷೆಗಳಲ್ಲಿ ಮಾತನಾಡ್ತಾನೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ ಮಾತನಾಡಲಿದ್ದಾನೆ ಶ್ರೀಮನ್ನಾರಾಯಣ.

  ಪುಷ್ಕರ್ ಮಲ್ಲಿಕಾರ್ಜುನಯ್ಯ, ಪ್ರಕಾಶ್ ಗೌಡ ನಿರ್ಮಾಣದ ಚಿತ್ರಕ್ಕೆ ಯುವ ನಿರ್ದೇಶಕ ಸಚಿನ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಶ್ವೇತಾ ಶ್ರೀವಾಸ್ತವ್ ಹೀರೋಯಿನ್. 9 ಸೆಟ್ಟುಗಳಲ್ಲಿ 200 ದಿನ ಶೂಟಿಂಗ್ ಮಾಡಿರುವ ಸಿನಿಮಾ ಅವನೇ ಶ್ರೀಮನ್ನಾರಾಯಣ.

  ಆಗಸ್ಟ್‍ನಲ್ಲಿ ಯಾವಾಗ ಅನ್ನೋದು ಫೈನಲ್ ಆಗಿಲ್ಲ. ಒಬ್ಬ ನಟನಾಗಿ ನನಗೂ ಕುತೂಹಲವಿದೆ ಎಂದಿರುವ ರಕ್ಷಿತ್ ಶೆಟ್ಟಿ, ಹಿಂದಿಯಲ್ಲಿಯೂ ಅವರೇ ಡಬ್ ಮಾಡಿದ್ದಾರಂತೆ. 

 • ಪಡ್ಡೆಹುಲಿಗೆ ಸಿಂಪಲ್ ಸ್ಟಾರ್ ಪವರ್

  rakshit shetty joins paddehuli team

  ನಿರ್ಮಾಪಕ ಕೆ.ಮಂಜು ಪುತ್ರ ಶ್ರೇಯಸ್ ಅಭಿನಯದ ಮೊದಲ ಸಿನಿಮಾ ಪಡ್ಡೆಹುಲಿ. ಅಪ್ಪಟ ವಿಷ್ಣು ಅಭಿಮಾನಿಯಾಗಿರುವ ಕೆ.ಮಂಜು, ತಮ್ಮ ಮೊದಲ ಚಿತ್ರದಲ್ಲಿ ವಿಷ್ಣು ಆರಾಧನೆಯನ್ನೇ ಮಾಡಿಬಿಟ್ಟಿದ್ದಾರೆ. ಪುತ್ರನಿಗೆ ನಾಗರಹಾವು ರಾಮಾಚಾರಿ ವೇಷ ಹಾಕಿಸಿ ಸಂಭ್ರಮಿಸಿದ್ದಾರೆ. ಚಿತ್ರದಲ್ಲಿ ಚಾಮಯ್ಯ ಮೇಷ್ಟರಂತೆ ಇರೋದು ರವಿಚಂದ್ರನ್. ಇವರೆಲ್ಲರ ಜೊತೆಗೆ ಈಗ ಸಿಂಪಲ್ ಸ್ಟಾರ್ ಆಗಮನವಾಗಿದೆ.

  ರಕ್ಷಿತ್ ಶೆಟ್ಟಿ, ಪಡ್ಡೆಹುಲಿ ಚಿತ್ರದಲ್ಲೊಂದು ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಅದು ಅತಿಥಿ ನಟನ ಪಾತ್ರವೇನಲ್ಲ. ಹೀಗೆ ಕಾಣಿಸಿಕೊಂಡು ಮರೆಯಾಗುವ ರೋಲ್ ಅಲ್ಲ. ಮಧ್ಯಂತರದ ನಂತರ ಹೆಚ್ಚೂ ಕಡಿಮೆ ಚಿತ್ರದುದ್ದಕ್ಕೂ ರಕ್ಷಿತ್ ಶೆಟ್ಟಿ ಇರ್ತಾರೆ.

  `ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಕ್ರೀಡಾಪಟುವಾಗಿ ಕಾಣಿಸಿಕೊಳ್ತಾರೆ. ಸ್ನೇಹಪೂರ್ವಕವಾಗಿ ನಟಿಸುತ್ತಿದ್ದಾರೆ. ಹೀರೋ ಶ್ರೇಯಸ್‍ಗೆ ಸ್ಫೂರ್ತಿ ತುಂಬುವ ಪಾತ್ರವದು. ಪಾತ್ರವೂ ಪವರ್‍ಫುಲ್ಲಾಗಿದೆ'' ಎಂದಿದ್ದಾರೆ ನಿರ್ದೇಶಕ ಗುರು ದೇಶಪಾಂಡೆ.

 • ಪುಣ್ಯಕೋಟಿ ಬಜೆಟ್ 100 ಕೋಟಿಯಂತೆ..!

  rakshit shetty's pnyakoti

  ದಿ ವಿಲನ್, ಕೆಜಿಎಫ್ ನಂತರ ಕನ್ನಡದಲ್ಲಿ ಮತ್ತೊಂದು ಭಾರಿ ಬಜೆಟ್ ಸಿನಿಮಾ ಸೆಟ್ಟೇರೋಕೆ ಸಿದ್ಧವಾಗಿದೆ. ಈಗಾಗಲೇ ಅವನೇ ಶ್ರೀಮನ್ನಾರಾಯಣ, 777 ಚಾರ್ಲಿ ಎಂಬ ದೊಡ್ಡ ಬಜೆಟ್ ಚಿತ್ರಗಳಲ್ಲಿಯೇ ತೊಡಗಿಸಿಕೊಂಡಿರುವ ರಕ್ಷಿತ್ ಶೆಟ್ಟಿ, ಈಗ 100 ಕೋಟಿ ಬಜೆಟ್ ಚಿತ್ರಕ್ಕೆ ರೆಡಿಯಾಗುತ್ತಿದ್ದಾರೆ. ರಕ್ಷಿತ್ ಶೆಟ್ಟಿ ನಿರ್ದೇಶಿಸಿ, ನಟಿಸಲು ನಿರ್ಧರಿಸಿರುವ ಪುಣ್ಯಕೋಟಿ ಚಿತ್ರದ ಬಜೆಟ್ 100 ಕೋಟಿಯಂತೆ.

  ಪುಣ್ಯಕೋಟಿಗೆ 100 ಕೋಟಿ ಅನ್ನೋಕೂ ಕಾರಣಗಳಿವೆ. ಏಕೆಂದರೆ ಕಥೆ 300 ವರ್ಷಗಳ ಹಿಂದಿನದ್ದು. ಆ ಕಾಲದಲ್ಲಿ ನಡೆದಿದ್ದ ಯುದ್ಧವೊಂದನ್ನು ಮರುಸೃಷ್ಟಿಸುವುದು ಈಗಿನ ಸವಾಲು. ಜೊತೆಯಲ್ಲೇ ಪುಣ್ಯಕೋಟಿ ಗೋವು ಮತ್ತು ಹುಲಿರಾಯನದ ಕಥೆಯನ್ನೂ ಅಳವಡಿಸಿಕೊಂಡು ಕಥೆ ಹೇಳಲಾಗುತ್ತೆ. ಹೀಗಾಗಿ ಚಿತ್ರದ ಬಜೆಟ್ ಮಿನಿಮಮ್ 80ರಿಂದ 100 ಕೋಟಿ ಎನ್ನಲಾಗುತ್ತಿದೆ. ಸಿನಿಮಾ ಮುಂದಿನ ವರ್ಷ ಸೆಟ್ಟೇರಲಿದೆ.

 • ಪ್ರಭುದೇವಗೆ ಮೂಕಿ ಚಿತ್ರ ಸವಾಲಾಗಲಿಲ್ಲ. ಏಕೆ ಗೊತ್ತಾ..?

  prabhudeva talks about mercury

  ಮಕ್ರ್ಯುರಿ.. ಮೂಕಿ ಸಿನಿಮಾ. ಸೈಲೆಂಟ್ ಥ್ರಿಲ್ಲರ್. ಇಡೀ ಚಿತ್ರದಲ್ಲಿ ಒಂದೇ ಒಂದು ಸಂಭಾಷಣೆ ಇಲ್ಲ. ಡ್ಯಾನ್ಸ್ ಕೂಡಾ ಇಲ್ಲ. ಕಾಮಿಡಿಯೂ ಇಲ್ಲ. ಆದರೆ, ಈ ಚಿತ್ರದ ಹೀರೋ ಪ್ರಭುದೇವ. ಪ್ರಭುದೇವ ಇದ್ದೂ, ಇವ್ಯಾವುದೂ ಇಲ್ಲ ಎಂದರೆ ಹೇಗೆ..? ಪ್ರಭುದೇವ ಅವರಿಗೆ ಇದು ರಿಸ್ಕ್ ಎನಿಸಲಿಲ್ಲವಾ..? ಇಂಥಾದ್ದೊಂದು ಪ್ರಶ್ನೆಯನ್ನು ಪ್ರಭುದೇವ ಮುಂದಿಟ್ಟಾಗ ಅವರು ಹೇಳಿದ್ದು ನಮಗೆ ಅಚ್ಚರಿ ತರಬಹುದು.

  `ನಾನು ಮೂಲತಃ ಡ್ಯಾನ್ಸರ್. ಡ್ಯಾನ್ಸ್ ಮಾಡುವವರು ಮಾತನಾಡದೆಯೇ ಸಂಭಾಷಣೆ ನಡೆಸೋದು ಅತ್ಯಂತ ಸಹಜವಾಗಿ ನಡೆದು ಹೋಗುತ್ತೆ. ಕಣ್ಣು, ಕೈಬಾಯಿ ಸನ್ನೆಗಳಲ್ಲೇ ಕಮ್ಯುನಿಕೇಷನ್ ಆಗಿರುತ್ತೆ. ಹೀಗಾಗಿ ಈ ಸಿನಿಮಾದಲ್ಲಿ ನಟಿಸುವುದು ನನಗೆ ಚಾಲೆಂಜ್ ಎನಿಸಲಿಲ್ಲ'

  ಇದು ಪ್ರಭುದೇವ ಉತ್ತರ. ಮಕ್ರ್ಯುರಿ ಚಿತ್ರದ ಕಥೆ ಕೇಳಿದಾಗ ಥ್ರಿಲ್ ಆಗಿದ್ದರಂತೆ ಪ್ರಭುದೇವ. ನನ್ನೊಳಗೆ ಡ್ಯಾನ್ಸರ್ ಅಷ್ಟೇ ಅಲ್ಲ, ನಟನೂ ಇದ್ದಾನೆ. ಒಳ್ಳೆಯ ಪಾತ್ರಕ್ಕಾಗಿ ಮನಸ್ಸು ಹುಡುಕುತ್ತಿರುತ್ತೆ. ಹೀಗಿರುವಾಗಲೇ ಈ ಸಿನಿಮಾದ ಆಫರ್ ಬಂತು. ಥ್ರಿಲ್ಲಾಗಿಬಿಟ್ಟೆ ಅಂತಾರೆ ಪ್ರಭುದೇವ. 

  ಸಿನಿಮಾ ಇದೇ ವಾರ ರಿಲೀಸ್. ರಕ್ಷಿತ್ ಶೆಟ್ಟಿ, ಪುಷ್ಕರ್ ಮಲ್ಲಿಕಾರ್ಜುನಯ್ಯ ಬ್ಯಾನರ್‍ನ ಪರಂವಾ ಸ್ಟುಡಿಯೋಸ್ ಸಿನಿಮಾವನ್ನು ರಾಜ್ಯದಾದ್ಯಂತ ಬಿಡುಗಡೆ ಮಾಡುತ್ತಿದೆ.ಕಾರ್ತಿಕ್ ಸುಬ್ಬರಾಜ್ ನಿರ್ದೇಶನದ ಈ ಚಿತ್ರ, ಕಾರ್ತಿಕ್-ಪ್ರಭುದೇವ ಕಾಂಬಿನೇಷನ್ ಹಾಗೂ ಸೈಲೆಂಟ್ ಮೂವಿ ಎಂಬ ಕಾರಣಕ್ಕೇ ನಿರೀಕ್ಷೆ ಹುಟ್ಟಿಸಿದೆ.

 • ಬಂದ.. ಬಂದ.. ಬಂದ.. ಅವನೇ ಶ್ರೀಮನ್ನಾರಾಯಣ

  avane srimmanrayana teaser out

  ರಕ್ಷಿತ್ ಶೆಟ್ಟಿ ಹುಟ್ಟುಹಬ್ಬಕ್ಕೆಂದೇ ವಿಶೇಷವಾಗಿ ಸಿದ್ಧಪಡಿಸಲಾಗಿರುವ ಅವನೇ ಶ್ರೀಮನ್ನಾರಾಯಣದ ಟೀಸರ್ ಹೊರಬಿದ್ದಿದೆ. ರಾಕ್ಷಸರನ್ನು ಕೊಲ್ಲಲು ನಮ್ಮೊಳಗಿನ ರಾಕ್ಷಸನನ್ನು ಮೊದಲು ಕೊಂದುಹಾಕಬೇಕು ಎಂಬ ವಾಯ್ಸ್ ಓವರ್‍ನೊಂದಿಗೆ ಶುರುವಾಗುವ ಟೀಸರ್ ನೋಡಿದರೆ, ಕಥೆ ಖಂಡಿತಾ ಗೊತ್ತಾಗಲ್ಲ.

  3 ವರ್ಷಗಳ ನಂತರ ರಕ್ಷಿತ್ ಶೆಟ್ಟಿಯನ್ನು ತೆರೆಗೆ ತರುತ್ತಿರುವ ಚಿತ್ರವಿದು. ಸಚಿನ್ ನಿರ್ದೇಶನದ ಚಿತ್ರದ ಟೀಸರ್ ಪಕ್ಕಾ ಮಾಸ್ ಆ್ಯಕ್ಷನ್ ಸಿನಿಮಾ ಇರಬಹುದು ಎನಿಸುತ್ತದೆಯಾದರೂ, ಬೇರೇನೋ ಇದೆ ಎಂಬ ಕುತೂಹಲವನ್ನೂ ಹುಟ್ಟಿಸುತ್ತೆ. 

  ಶಾನ್ವಿ ಶ್ರೀವತ್ಸವ್ ನಾಯಕಿಯಾಗಿರುವ ಚಿತ್ರಕ್ಕೆ ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಪಕ. ಸಿನಿಮಾ ವರಮಹಾಲಕ್ಷ್ಮಿ ಹಬ್ಬದ ದಿನ ರಿಲೀಸ್ ಆಗುವ ಸಾಧ್ಯತೆ ಇದೆ.

 • ಬಾಲಿವುಡ್‍ಗೆ ಗೋಧಿ ಬಣ್ಣ..

  godi banna to be remake in hindi

  ಗೋಧಿ ಬಣ್ಣ ಸಾಧಾರಣ ಮೈಕಟ್ಟು.. ತನ್ನ ವಿಭಿನ್ನ ಟೈಟಲ್‍ನಿಂದಾಗಿಯೇ ಗಮನ ಸೆಳೆದಿದ್ದ ಚಿತ್ರ, ವಿಶಿಷ್ಟ ಕಥೆ, ಅನಂತ್‍ನಾಗ್, ರಕ್ಷಿತ್ ಶೆಟ್ಟಿ, ಶ್ರುತಿ ಹರಿಹರನ್ ಅವರ ಅಭಿನಯ, ಹೇಮಂತ್ ರಾವ್ ಅವರ ಅಚ್ಚುಕಟ್ಟಾದ ನಿರ್ದೇಶನದಿಂದ ಕನ್ನಡಿಗರ ಮನ ಗೆದ್ದಿತ್ತು. ಹೀಗೆ ಕನ್ನಡಿಗರ ಮನಗೆದ್ದಿದ್ದ ಚಿತ್ರ, ಈಗ ಬಾಲಿವುಡ್‍ಗೆ ಹೊರಟಿದೆ.

  ಸುಮಾರು ದಿನಗಳಿಂದ ಮಾತುಕತೆ ನಡೆಯುತ್ತಿತ್ತು. ಈಗ ಫೈನಲ್ ಆಗಿದೆ. ಕನ್ನಡದ ಚಿತ್ರವೊಂದು ಹಿಂದಿಗೆ ರೀಮೇಕ್ ಆಗಲಿದೆ. ನನ್ನ ಚಿತ್ರವೇ ರೀಮೇಕ್ ಆಗಲಿದೆ ಎನ್ನುವುದು ಹೆಮ್ಮೆಯ ವಿಚಾರ ಎಂದು ಖುಷಿ ಹಂಚಿಕೊಂಡಿದ್ದಾರೆ ಹೇಮಂತ್ ರಾವ್.

  ಗೋಧಿಬಣ್ಣದ ನಿರ್ಮಾಪಕರಾದ ಪುಷ್ಕರ್, ರಕ್ಷಿತ್ ಶೆಟ್ಟಿ ಎಲ್ಲರೂ ಗೋಧಿ ಬಣ್ಣಕ್ಕೆ ಸಿಕ್ಕ ಮನ್ನಣೆ ನೋಡಿ ಖುಷಿಗೊಂಡಿದ್ದಾರೆ. ಹಿಂದಿಯಲ್ಲಿ ತಯಾರಾಗುತ್ತಿರುವ ಗೋಧಿ ಬಣ್ಣದ ತಾರಾಬಳಗ, ತಂತ್ರಜ್ಞರ ಬಗ್ಗೆ ಇನ್ನೂ ಮಾಹಿತಿ ಹೊರಬಿದ್ದಿಲ್ಲ.

 • ಬೆಸ್ಟ್ ಆಫ್ ಲಕ್ ಮಗಾ.. - ರಕ್ಷಿತ್ ಶೆಟ್ಟಿಗೆ ರಿಷಬ್ ಶೆಟ್ಟಿ ಹಾರೈಕೆ 

  rakshit shetty puts up director cap once again

  ರಕ್ಷಿತ್ ಶೆಟ್ಟಿ, ಮತ್ತೆ ನಿರ್ದೇಶನಕ್ಕೆ ಮುಂದಾಗಿದ್ದಾರೆ. ಉಳಿದವರು ಕಂಡಂತೆ ಚಿತ್ರದ ನಂತರ ರಕ್ಷಿತ್ ಶೆಟ್ಟಿ, ನಟನೆ, ನಿರ್ಮಾಣದಲ್ಲೇ ತೊಡಗಿಸಿಕೊಂಡಿದ್ದರು. ಈಗ ಮತ್ತೊಮ್ಮೆ ಡೈರೆಕ್ಟರ್ ಕ್ಯಾಪ್ ತೊಡುತ್ತಿದ್ದಾರೆ. ಪುಣ್ಯಕೋಟಿ ಚಿತ್ರದ ಮೂಲಕ. ಆ ಚಿತ್ರಕ್ಕೆ ಕಥೆ, ಚಿತ್ರಕಥೆ ಮತ್ತು ನಿರ್ದೇಶನ ರಕ್ಷಿತ್ ಶೆಟ್ಟಿ ಅವರದ್ದೇ.

  ಸದ್ಯಕ್ಕೆ ಪುಣ್ಯಕೋಟಿ ಚಿತ್ರದ ಹೆಚ್ಚಿನ ವಿವರಗಳು ತಿಳಿದುಬಂದಿಲ್ಲ. ಏಕೆಂದರೆ, ಈ ಪುಣ್ಯಕೋಟಿ ಕಥೆ ಹೇಳಿರುವುದು ರಕ್ಷಿತ್ ಶೆಟ್ಟಿಯ ಗೆಳೆಯ ರಿಷಬ್ ಶೆಟ್ಟಿ. ಸೋಷಿಯಲ್ ಮೀಡಿಯಾದಿಂದ ದೂರವೇ ಉಳಿದಿರುವ ರಕ್ಷಿತ್ ಶೆಟ್ಟಿಯವರನ್ನು ಉಳಿದವರು ಕಂಡಂತೆ ಚಿತ್ರದ ನಂತರ ಕತೆ, ನಿರ್ದೇಶನ ರಕ್ಷಿತ್ ಶೆಟ್ಟಿ ಅನ್ನೋ ಬರಹ ನೋಡುವುದಕ್ಕೇ ಖುಷಿಯಾಗ್ತಿದೆ. ಈಗ ರಕ್ಷಿತ್ ಕಥೆಯನ್ನು ಮತ್ತೊಮ್ಮೆ ತಿದ್ದುತ್ತಿದ್ದಾರೆ. ಬೆಸ್ಟ್ ಆಫ್ ಲಕ್ ಮಗಾ ಎಂದಿದ್ದಾರೆ ರಿಷಬ್.

 • ಬ್ರೇಕಪ್ ನ್ಯೂಸ್‍ಗೆ ರಕ್ಷಿತ್ ಶೆಟ್ಟಿ ಬ್ರೇಕ್

  rakshit shetty breaks silence on break up iwith rashmika

  ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ನಡುವಿನ ಬ್ರೇಕಪ್ ನ್ಯೂಸ್ ಕುರಿತಂತೆ ರಕ್ಷಿತ್ ಶೆಟ್ಟಿ ಮೌನ ಮುರಿದಿದ್ದಾರೆ. ಅಷ್ಟೇ ಅಲ್ಲ, ತಾವು ದೂರವಾಗಿದ್ದ ಸಾಮಾಜಿಕ ಜಾಲತಾಣಕ್ಕೆ ಮತ್ತೆ ಬಂದಿರುವ ರಕ್ಷಿತ್ ಶೆಟ್ಟಿ, ರಶ್ಮಿಕಾ ಬೆಂಬಲಕ್ಕೆ ನಿಂತಿದ್ದಾರೆ. ನನ್ನ ಪ್ರೀತಿಪಾತ್ರರ ಬಗ್ಗೆ ಹರಿದಾಡುತ್ತಿರುವ ಕೆಲವು ಸಂಗತಿಗಳ ಕುರಿತು ಸ್ಪಷ್ಟನೆ ನೀಡಲು ಮತ್ತೆ ಬಂದಿದ್ದೇನೆ ಎಂದಿದ್ದಾರೆ ರಕ್ಷಿತ್ ಶೆಟ್ಟಿ.

  ರಶ್ಮಿಕಾ ಬಗ್ಗೆ ರೂಪುಗೊಳ್ಳುತ್ತಿರುವ ಅಭಿಪ್ರಾಯ ಬೇಸರ ತರಿಸಿದೆ. ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು ಅಂತಾರೆ. ಆದರೆ ಈ ಸುದ್ದಿಗಳನ್ನು ನನ್ನನ್ನಾಗಲೀ ಅಥವಾ ರಶ್ಮಿಕಾ ಅವರನ್ನಾಗಲೀ ಸಂಪರ್ಕಿಸದೆ ಮಾಡಲಾಗಿದೆ. ರಶ್ಮಿಕಾ ನನಗೆ 2 ವರ್ಷಗಳಿಂದ ಚೆನ್ನಾಗಿ ಗೊತ್ತು. ಎಲ್ಲರಿಗಿಂತ ಚೆನ್ನಾಗಿ ಗೊತ್ತು. ದಯವಿಟ್ಟು ಬಜ್ ಮಾಡುವುದನ್ನು ನಿಲ್ಲಿಸಿ. ರಶ್ಮಿಕಾರನ್ನು ನೆಮ್ಮದಿಯಾಗಿರಲು ಬಿಡಿ ಎಂದು ಮನವಿ ಮಾಡಿದ್ದಾರೆ ರಕ್ಷಿತ್ ಶೆಟ್ಟಿ.

  ದಯವಿಟ್ಟು ಮಾಧ್ಯಮದ ಸುದ್ದಿಗಳನ್ನು ನಂಬಬೇಡಿ ಎಂದಿರುವ ರಕ್ಷಿತ್ ಶೆಟ್ಟಿ, ಅವೆಲ್ಲವೂ ಕಪೋಲಕಲ್ಪಿತ ಎಂದಿದ್ದಾರೆ. ನಾನು ಸಾಮಾಜಿಕ ಜಾಲತಾಣದಿಂದ ದೂರವಾಗೋಕೆ ಕಾರಣ, ನಾನು ಅದಕ್ಕೆ ಅಡಿಕ್ಟ್ ಆಗಿಬಿಟ್ಟಿದ್ದೆ. ಅದರಿಂದ ಹೊರಬರಬೇಕಿತ್ತು.  ಅಷ್ಟೇ ಹೊರತು, ಅದಕ್ಕೂ ರಶ್ಮಿಕಾಗೂ ಸಂಬಂಧ ಕಲ್ಪಿಸಬೇಡಿ ಎಂದು ಕೇಳಿಕೊಂಡಿದ್ದಾರೆ.

 • ಮಕ್ರ್ಯುರಿ ಒಂದು ದಿನ ಮೊದಲೇ ರಿಲೀಸ್.. ಇಲ್ಲಲ್ಲ..!

  mercury to release one day before in united states

  ಮಕ್ರ್ಯುರಿ .. ಈ ಮೂಕಭಾಷೆಯ ಸಿನಿಮಾ ಏಪ್ರಿಲ್ 13ಕ್ಕೆ ದೇಶಾದ್ಯಂತ ಬಿಡುಗಡೆಯಾಗುತ್ತಿದೆ. ಆದರೆ, ಇದಕ್ಕೂ ಮೊದಲೇ.. ಅಂದರೆ ಒಂದು ದಿನ ಮೊದಲು ಮಕ್ರ್ಯುರಿ ಅಮೆರಿಕದಲ್ಲಿ ಬಿಡುಗಡೆಯಾಗುತ್ತಿದೆ. ಅದು ಇಂಡಿಯನ್ ಫಿಲಂ ಫೆಸ್ಟಿವಲ್ ಆಫ್ ಲಾಸ್ ಏಂಜಲೀಸ್ ಚಲನಚಿತ್ರೋತ್ಸವದಲ್ಲಿ. 

  ಮಕ್ರ್ಯುರಿ ಚಿತ್ರಕ್ಕೆ ಬೆನ್ನೆಲುಬಾಗಿ ನಿಂತಿರುವುದು ತಮಿಳಿನಲ್ಲಿ ಧನುಷ್ ಹಾಗೂ ತೆಲುಗಿನಲ್ಲಿ ರಾಣಾದಗ್ಗುಬಾಟಿ. ಕನ್ನಡದಲ್ಲಿ ಮಕ್ರ್ಯುರಿಗೆ ಬೆಂಬಲ ಕೊಟ್ಟಿರುವುದು ರಕ್ಷಿತ್ ಶೆಟ್ಟಿ ಮತ್ತು ಪುಷ್ಕರ್ ಮಲ್ಲಿಕಾರ್ಜುನಯ್ಯ. ಕರ್ನಾಟಕದಲ್ಲಿ ಸಿನಿಮಾವನ್ನು ವಿತರಣೆ ಮಾಡುತ್ತಿರುವ ಮಲ್ಲಿಕಾರ್ಜುನಯ್ಯ, ಒಂದು ದಿನ ಮೊದಲೇ ಚಿತ್ರ ಅಮೆರಿಕದಲ್ಲಿ ಪ್ರದರ್ಶನವಾಗುತ್ತಿರುವುದರಿಂದ ಯಾವುದೇ ತೊಂದರೆ ಇಲ್ಲ ಎಂದಿದ್ದಾರೆ. ಚಿತ್ರದಲ್ಲಿ ಪ್ರಭುದೇವ ಮುಖ್ಯಪಾತ್ರದಲ್ಲಿದ್ದಾರೆ. ಕಾರ್ತಿಕೇಯನ್, ಸಂತಾನಂ, ಜಯಂತಿಲಾಲ್ ಗಡ ಜಂಟಿಯಾಗಿ ನಿರ್ಮಿಸಿರುವ ಚಿತ್ರ ಇದು. ಕಾರ್ತಿಕ್ ಸುಬ್ಬರಾಜು ಚಿತ್ರದ ನಿರ್ದೇಶಕ.

   

Geetha Movie Gallery

Upendra Birthday Celebration Gallery