` rakshith shetty - chitraloka.com | Kannada Movie News, Reviews | Image

rakshith shetty

 • ರಕ್ಷಿತ್ ಶೆಟ್ಟಿಗೆ ಜೀರ್ಜಿಂಬೆ ಸೈಕಲ್ ಕಾಣಿಕೆ

  rakshit shetty gets special gift from jeerjimbe hudgi

  ರಕ್ಷಿತ್ ಶೆಟ್ಟಿಗೆ ಒಂದು ಮರೆಯಲಾಗದ ಉಡುಗೊರೆ ಕೊಟ್ಟಿದೆ. ರಕ್ಷಿತ್ ಶೆಟ್ಟಿಗೆ ಅಂತಾದ್ದೊಂದು ಕಾಣಿಕೆ ನೀಡಿರುವುದು ಸಿರಿ ವಾನಳ್ಳಿ. ಆ ಕಾಣಿಕೆ ನೀಡುವುದಕ್ಕೆ ಕಾರಣ.. ಆಕೆ ಜೀರ್ಜಿಂಬೆ ಚಿತ್ರದ ನಾಯಕಿ. ಜೀರ್ಜಿಂಬೆ ಎಂಬ ಮಕ್ಕಳ ಚಿತ್ರದಲ್ಲಿ ಸೈಕಲ್ ಮಹತ್ವದ ಪಾತ್ರ ವಹಿಸುತ್ತದೆ. ಸೈಕಲ್ ಕಲಿಯುತ್ತಾ ಕಲಿಯುತ್ತಾ ಬಾಲ್ಯ ವಿವಾಹದ ಸಿಡಿದೇಳುವ ರುದ್ರಿಯಾಗಿ ನಟಿಸಿದ್ದಾಳೆ ಸಿರಿ ವಾನಳ್ಳಿ. ಆ ಸಿರಿ, ರಕ್ಷಿತ್ ಶೆಟ್ಟಿಗೆ ಸೈಕಲ್‍ವೊಂದನ್ನು ಗಿಫ್ಟ್ ಆಗಿ ನೀಡಿದ್ದಾಳೆ.

  ಸೈಕಲ್ ಜೊತೆ ಜೊತೆಯಲ್ಲೇ ಬಾಲ್ಯದ ನೆನಪಿಗೆ ಜಾರಿದ ರಕ್ಷಿತ್ ಶೆಟ್ಟಿ, ತಮ್ಮ ಮೊದಲ ಸೈಕಲ್ ಕಥೆ ಹಂಚಿಕೊಂಡರು. ಮಕ್ಕಳು ಗಿಫ್ಟ್ ಮತ್ತು ಸುತ್ತುವ ಚಟಕ್ಕೆ ಬಿದ್ದರೆ ಹಾಳಾಗಿ ಬಿಡುತ್ತಾರೆ ಅನ್ನೋದು ರಕ್ಷಿತ್ ತಂದೆಯ ವಾದವಾಗಿತ್ತಂತೆ. ಮನೆಯನ್ನು ಬಿಟ್ಟು ಹೊರಗೇ ಹೋಗದ ರಕ್ಷಿತ್‍ಗೆ ಆಗ.. ರಕ್ಷಿತ್‍ರ ಚಿಕ್ಕಪ್ಪ, ತಮ್ಮ ಮನೆಗೆ ಬಂದು 2 ವಾರ ಇದ್ದರೆ ಸೈಕಲ್ ಕೊಡಿಸುವ ಆಸೆ ತೋರಿಸಿ ಕರೆದುಕೊಂಡು ಹೋಗಿದ್ದರಂತೆ. ತಮ್ಮ ಮೊದಲ ಸೈಕಲ್ ಬಂದಿದ್ದು ಹಾಗೆ ಎಂದಿದ್ದಾರೆ ರಕ್ಷಿತ್ ಶೆಟ್ಟಿ.

  ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಕಾರ್ತಿಕ್ ಸರಗೂರ್ ನಿರ್ದೇಶನದ ಸಿನಿಮಾದಲ್ಲಿ ಮಕ್ಕಳಿಗೂ ಪ್ರಿಯವಾದ ಅಂಶಗಳಿವೆ ಅಂತಾರೆ ಪುಷ್ಕರ್.

 • ರಕ್ಷಿತ್ ಶೆಟ್ಟಿಗೆ ಹೀರೋಯಿನ್ ಆಗೋಕೆ ಆಸೆಯಿದ್ದರೆ..

  pushkar and rakshit calls for suditions

  ರಕ್ಷಿತ್ ಶೆಟ್ಟಿ ಅಭಿನಯದ ಚಾರ್ಲಿ 777 ಚಿತ್ರ ಸೆಟ್ಟೇರುತ್ತಿದೆ. ಈ ಚಿತ್ರಕ್ಕೆ ಅಡಿಷನ್ ಮೂಲಕವೇ ನಾಯಕಿಯನ್ನು ಆಯ್ಕೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಚಿತ್ರಕ್ಕೆ ಹೊಸ ಮುಖ ಬೇಕು. ಅಭಿನಯಿಸುವ ಪ್ರತಿಭೆ ಇರಬೇಕು. ಪರಂವಾ ಸ್ಟುಡಿಯೋಸ್‍ನಲ್ಲಿ ನಿರ್ಮಾಣವಾಗುತ್ತಿರುವ ಚಿತ್ರಕ್ಕೆ ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಪಕರು.

  ನಾಯಿ ಮತ್ತು ಮನುಷ್ಯನ ನಡುವಿನ ಬಾಂಡಿಂಗ್, ಚಿತ್ರದ ಕಥೆ. ರಕ್ಷಿತ್ ಅವರ ಬಳಿಯೇ ಕೆಲಸ ಮಾಡುತ್ತಿದ್ದ ಕಿರಣ್ ರಾಜ್, ಚಿತ್ರದ ನಿರ್ದೇಶಕ. ಚಾರ್ಲಿ ಅನ್ನೋದು ನಾಯಿಯ ಹೆಸರಾದರೆ, 777 ಅನ್ನೋದು ಅದರ ಲೈಸೆನ್ಸ್ ನಂಬರ್. 

  ಸ್ಸೋ.. ಇನ್ನೇಕೆ ತಡ.. This email address is being protected from spambots. You need JavaScript enabled to view it. ಗೆ ಒಂದು ಮೇಯ್ಲ್ ಮಾಡಿ. ನಿಮಗೆ ನೆನಪಿರಲಿ.. ರಶ್ಮಿಕಾ ಮಂದಣ್ಣ, ಸಂಯುಕ್ತಾ ಹೆಗಡೆ ಚಿತ್ರಕ್ಕೆ ಆಯ್ಕೆಯಾಗಿದ್ದೂ ಕೂಡಾ ಇಂತಹ ಅಡಿಷನ್ ಮೂಲಕವೇ.

   

 • ರಕ್ಷಿತ್ ಸಿನಿಮಾಗೆ ರಶ್ಮಿಕಾ ವೇಯ್ಟಿಂಗ್

  rashmika eager to watch avane srimannaryana

  ಪ್ರೀತಿ ಮುರಿದುಬಿದ್ದ ನಂತರೂ, ಅಭಿಮಾನಿಗಳಿಂದ ಅತಿರೇಕದ ಟೀಕೆಗೆ ಗುರಿಯಾದರೂ ಸಾರ್ವಜನಿಕವಾಗಿ ಅತ್ಯಂತ ಗೌರವದಿಂದ ರಶ್ಮಿಕಾ ಮಂದಣ್ಣ-ರಕ್ಷಿತ್ ಶೆಟ್ಟಿ ಜೋಡಿ ಮತ್ತೊಮ್ಮೆ ಅದೇ ಮೆಚ್ಯುರಿಟಿ ಪ್ರದರ್ಶನ ಮಾಡಿದೆ. ರಕ್ಷಿತ್ ಶೆಟ್ಟಿಯವರ ಅವನೇ ಶ್ರೀಮನ್ನಾರಾಯಣ ಚಿತ್ರವನ್ನು ನೋಡಲು ಕಾತುರದಿಂದ ಕಾಯುತ್ತಿರುವುದಾಗಿ ರಶ್ಮಿಕಾ ಮಂದಣ್ಣ ಹೇಳಿದ್ದಾರೆ.

  ಅವನೇ ಶ್ರೀಮನ್ನಾರಾಯಣ ಚಿತ್ರದ ನಿರ್ದೇಶಕ ಸಚಿನ್ ಅವರಿಗೆ ನವೆಂಬರ್ 30 ಹುಟ್ಟುಹಬ್ಬ. ಹುಟ್ಟುಹಬ್ಬದ ಶುಭಾಶಯ ಕೋರಿದ ರಶ್ಮಿಕಾ, ಅವನೇ ಶ್ರೀಮನ್ನಾರಾಯಣ ಚಿತ್ರವನ್ನು ನೋಡಲು ಕಾಯುತ್ತಿದ್ದೇನೆ ಎಂದಿದ್ದಾರೆ. ಪುಷ್ಕರ್ ಮಲ್ಲಿಕಾರ್ಜುನಯ್ಯ, ರಕ್ಷಿತ್ ಶೆಟ್ಟಿ ನಿರ್ಮಾಣದ ಅವನೇ ಶ್ರೀಮನ್ನಾರಾಯಣ 5 ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ.

 • ರಶ್ಮಿಕಾ-ರಕ್ಷಿತ್ ಬ್ರೇಕಪ್‍ಗೆ ವಿಜಯ್ ದೇವರಕೊಂಡ ಹೇಳಿದ್ದೇನು..?

  vijay devarakonda talks about rakshit rashmika

  ರಶ್ಮಿಕಾ ಮಂದಣ್ಣ ಮತ್ತು ರಕ್ಷಿತ್ ಶೆಟ್ಟಿ ನಡುವಿನ ಲವ್ ಬ್ರೇಕಪ್ ಆಗಿದೆ ಎನ್ನುವ ಸುದ್ದಿಗೆ ಗೀತ ಗೋವಿಂದಂ ಚಿತ್ರದ ಹೀರೋ ವಿಜಯ್ ದೇವರಕೊಂಡ ಪ್ರತಿಕ್ರಿಯೆ ನೀಡಿದ್ದಾರೆ. ಇಬ್ಬರ ನಡುವಿನ ಮುನಿಸಿಗೆ ಗೀತಗೋವಿಂದಂ ಸಿನಿಮಾದ ಲಿಪ್‍ಲಾಕ್ ದೃಶ್ಯವೂ ಕಾರಣ ಎನ್ನಲಾಗಿತ್ತು. ಈ ಎಲ್ಲದರ ಬಗ್ಗೆಯೂ ಮಾತನಾಡಿದ್ದಾರೆ ವಿಜಯ್ ದೇವರಕೊಂಡ.

  `ಅವರ ಪರ್ಸನಲ್ ಲೈಫ್ ಬಗ್ಗೆ ಮಾತನಾಡೋಕೆ ನಾನು 3ನೇ ವ್ಯಕ್ತಿ. ನನಗೆ ರಕ್ಷಿತ್ ಮತ್ತು ರಶ್ಮಿಕಾ ಇಬ್ಬರೂ ಗೊತ್ತು. ಇಬ್ಬರ ಬಗ್ಗೆಯೂ ನನಗೆ ಅಪಾರ ಗೌರವವಿದೆ. ಇಬ್ಬರ ಮಧ್ಯೆ ಬ್ರೇಕಪ್ ಆಗಿದೆ ಎನ್ನುವ ಸುದ್ದಿ ಕೇಳಿ ನನಗೂ ಬೇಜಾರಾಯ್ತು. ಈ ವಿಚಾರದ ಬಗ್ಗೆ ಅವರಿಬ್ಬರೇ ಮಾತನಾಡಬೇಕು' ಎಂದಿದ್ದಾರೆ ವಿಜಯ್ ದೇವರಕೊಂಡ.

 • ರಶ್ಮಿಕಾಗೆ ಕಾದಿದೆ ಅಮ್ಮನ ಪ್ರೀತಿಯ ಉಡುಗೊರೆ

  rashmika awaits her mothers gift

  ರಶ್ಮಿಕಾ ಮಂದಣ್ಣಗೆ ನಾಳೆ ಹುಟ್ಟುಹಬ್ಬದ ಸಂಭ್ರಮ. 22ನೇ ವರ್ಷಕ್ಕೆ ಕಾಲಿಡುತ್ತಿರುವ ರಶ್ಮಿಕಾ, ಹುಟ್ಟುಹಬ್ಬದ ದಿನ ಚಿಕ್ಕಮಗಳೂರಿನಲ್ಲಿ ಶೂಟಿಂಗ್‍ನಲ್ಲಿರ್ತಾರೆ. ಆ ದಿನ ರಶ್ಮಿಕಾಗೆ ಒಂದು ಪ್ರೀತಿಯ ಉಡುಗೊರೆ ಕಾದಿದೆ. ಅದು ಕಾರು, ಬೈಕು, ವಜ್ರ, ವೈಢೂರ್ಯ ಅಲ್ಲ..ಆದರೆ, ಅವೆಲ್ಲವುಗಳಿಗಿಂತ ಅಮೂಲ್ಯವಾದದ್ದು. ಅಂಥಾದ್ದೊಂದು ಅಮೂಲ್ಯ ಕಾಣಿಕೆ ನೀಡುತ್ತಿರುವುದು ರಶ್ಮಿಕಾ ಅವರ ತಾಯಿ ಸುಮನ್. 

  ಅಂಥಾ ಕಾಣಿಕೆ ಏನಿರಬಹುದು ಅಂತೀರಾ.. ಅದೊಂದು ಪತ್ರ. ತಾಯಿಯೊಬ್ಬರು ಮಗಳಿಗೆ ಬರೆಯಬಹುದಾದ ಒಂದು ಪತ್ರವನ್ನು ಮಗಳ ಹುಟ್ಟುಹಬ್ಬಕ್ಕೆ ಕೊಡುತ್ತಿದ್ದಾರೆ ಸುಮನ್. ಆ ಪತ್ರದಲ್ಲಿ ರಶ್ಮಿಕಾಗೆ ಅವರ ಜೀವನದ ಅತ್ಯಂತ ಪ್ರಮುಖ ವಿಷಯವೊಂದನ್ನು ಹೇಳಲಿದ್ದಾರಂತೆ ಸುಮನ್.

  ಏನದು ಎಂದರೆ, ಅದು ರಶ್ಮಿಕಾಗೆ ಹೇಳಬೇಕು ಎಂದುಕೊಂಡಿರೋದು. ಈಗಲೇ ಹೇಳಿಬಿಟ್ಟರೆ ಹೇಗೆ ಅಂತಾರೆ ಸುಮನ್. ಆ ಪತ್ರದಲ್ಲಿ ತಮ್ಮ ಜೀವನ ಹಾಗೂ ರಶ್ಮಿಕಾ ಬದುಕಿನ ಕೆಲವು ಪ್ರಮುಖ ಘಟ್ಟಗಳು, ತಿರುವುಗಳ ಕಥೆಯೂ ಇರಲಿದೆ. ಅದೊಂದು ಭಾವನಾತ್ಮಕ ಪತ್ರ. ಆ ಪತ್ರ ಇಂದು ಮಧ್ಯರಾತ್ರಿ 12 ಗಂಟೆಗೆ ರಶ್ಮಿಕಾ ಕೈ ಸೇರಲಿದೆ. ಅದು ರಶ್ಮಿಕಾಗೆ ನಾನು ಕೊಡುತ್ತಿರುವ ಕಾಣಿಕೆ ಎಂದಿದ್ದಾರೆ ಸುಮನ್.

  ರಶ್ಮಿಕಾ ಕಾಯುತ್ತಿದ್ದಾರೆ. ಕಾಯಲೇಬೇಕಲ್ಲವೇ. ಅಮ್ಮನ ಗಿಫ್ಟು ಅಮೂಲ್ಯವಾದದ್ದೇ ತಾನೆ. 

 • ರಾಜರಥ ರೈಟ್ ರೈಟ್ ಎಂದ ರಕ್ಷಿತ್ ಶೆಟ್ಟಿ

  rakshit shettya applauds rajaratha movie team

  ರಾಜರಥ ಚಿತ್ರದ ಬಗ್ಗೆ ವಿಮರ್ಶಕರ ವಲಯದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೆ,  ಪ್ರೇಕ್ಷಕರಲ್ಲಿ ಹಾಗಿಲ್ಲ. ಚಿತ್ರಮಂದಿರಗಳು ಹೌಸ್‍ಫುಲ್. ಹೀಗಿರುವಾಗಲೇ ರಾಜರಥದ ಗೇರ್‍ನ್ನು ಹೈಸ್ಪೀಡ್‍ಗೆ ತಿರುಗಿಸಿದ್ದಾರೆ ರಕ್ಷಿತ್ ಶೆಟ್ಟಿ. ಚಿತ್ರದ ಬಗ್ಗೆ ಒಂದು ಸುದೀರ್ಘ ವಿಮರ್ಶೆಯನ್ನೇ ಮಾಡಿದ್ದಾರೆ.

  ರಾಜರಥ ನೋಡಿದೆ. ಚಿತ್ರವನ್ನು ಮೆಚ್ಚೋಕೆ ಹಲವಾರು ಕಾರಣಗಳಿವೆ. ಅನೂಪ್ ನನ್ನ ಗೆಳೆಯ ಅನ್ನೋ ಕಾರಣಕ್ಕೆ ಈ ಹೊಗಳಿಕೆ ಅಲ್ಲ. ಚಿತ್ರದ ಬಗ್ಗೆ ತಪ್ಪುಗಳಿದ್ದರೆ ಕಮೆಂಟ್ ಮಾಡುವುದಾದರೆ ಓಕೆ. ಆದರೆ, ರಾಜರಥ ಕೆಟ್ಟ ಸಿನಿಮಾ ಅಲ್ಲ. ಇಡೀ ಚಿತ್ರದಲ್ಲಿ ತಂಡದ ಒಟ್ಟಾರೆ ಪರಿಶ್ರಮ ಎದ್ದು ಕಾಣುತ್ತೆ.

  ಅನೂಪ್ ಸ್ಯಾಂಡಲ್‍ವುಡ್‍ನ ಅಮೂಲ್ಯ ರತ್ನವಿದ್ದ ಹಾಗೆ. ಬಾಲಿವುಡ್ ಆಫರ್‍ಗಳಿದ್ದರೂ, ಅವರು ಕನ್ನಡ ಚಿತ್ರರಂಗದಲ್ಲೇ ಉಳಿದುಕೊಂಡಿದ್ದಾರೆ. ಕನ್ನಡದ ಪರವಾಗಿ ನಿಂತ ಅವರ ಪರವಾಗಿ ಈಗ ನಾವು ನಿಲ್ಲಬೇಕು. ರಾಜರಥವನ್ನು ಗೆಲ್ಲಿಸಬೇಕು. ಇದು ರಕ್ಷಿತ್ ಶೆಟ್ಟಿ ಚಿತ್ರದ ಬಗ್ಗೆ ಮಾಡಿರುವ ವಿಮರ್ಶೆ ಹಾಗೂ ಕನ್ನಡ ಚಿತ್ರರಸಿಕರಿಗೆ ನೀಡಿರುವ ಕರೆ. 

   

 • ರಿಚ್ಚಿ ರಕ್ಷಿತ್‍ಗೆ ಹೊಸ ಡೈರೆಕ್ಟರ್

  rakshit shetty teams up with rahul p k

  ರಕ್ಷಿತ್ ಶೆಟ್ಟಿ ರಿಚ್ಚಿ ಅನ್ನೋ ಟೈಟಲ್‍ನಲ್ಲಿ ಸಿನಿಮಾ ಮಾಡುತ್ತಿದ್ದಾರೆ ಅನ್ನೋದು ಹಳೆಯ ಸುದ್ದಿ. ಆ ಚಿತ್ರದ ಮೂಲಕ ರಿಷಬ್ ಶೆಟ್ಟಿ, ಮತ್ತೊಮ್ಮೆ ರಕ್ಷಿತ್ ಶೆಟ್ಟಿಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಎಂದು ಸುದ್ದಿಯಾಗಿತ್ತು. ಈಗ ನಿರ್ದೇಶಕರು ಚೇಂಜ್ ಆಗಿದ್ದಾರೆ ಎನ್ನಲಾಗುತ್ತಿದೆ. ಪಿ.ಕೆ.ರಾಹುಲ್ ಎಂಬ ಹೊಸ ಪ್ರತಿಭೆಗೆ ರಕ್ಷಿತ್ ಶೆಟ್ಟಿ ಸಿನಿಮಾ ನಿರ್ದೇಶಿಸುವ ಅವಕಾಶ ಸಿಕ್ಕಿದೆ.

  ಉತ್ತರಾ ಎಂಬ ಕಿರುಚಿತ್ರ ನಿರ್ದೇಶನ ಮಾಡಿದ್ದ ರಾಹುಲ್, ರಿಚ್ಚಿ ಚಿತ್ರದ ಚಿತ್ರಕಥೆ, ಸಂಭಾಷಣೆ ಬರೆಯಲು ಕುಳಿತಿದ್ದಾರಂತೆ. ಅಂದಹಾಗೆ ರಿಚ್ಚಿ ಚಿತ್ರದ ಕಥೆ ರಕ್ಷಿತ್ ಶೆಟ್ಟಿ ಅವರದ್ದೇ. ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಪಕರು. ಏನಿದ್ದರೂ, ಈ ಸಿನಿಮಾ ಸೆಟ್ಟೇರುವುದು ಮುಂದಿನ ವರ್ಷಾನೇ. ಏಕೆಂದ್ರೆ ರಕ್ಷಿತ್ ಶೆಟ್ಟಿಯೂ ಬ್ಯುಸಿ. ಪುಷ್ಕರ್ ಮಲ್ಲಿಕಾರ್ಜುನಯ್ಯನವರೂ ಬ್ಯುಸಿ.

 • ಶಿವಣ್ಣ V/s ಸುದೀಪ್ V/s ರಕ್ಷಿತ್ ಶೆಟ್ಟಿ V/s ಶ್ರೀಮುರಳಿ

  its clash of legends in august

  ಆಗಸ್ಟ್ ತಿಂಗಳು ಸ್ಯಾಂಡಲ್‍ವುಡ್‍ನ ಪೈಪೋಟಿಯ ತಿಂಗಳಾಗುವ ಎಲ್ಲ ಲಕ್ಷಣಗಳೂ ಗೋಚರವಾಗುತ್ತಿವೆ. 2019ರ ಸೆಮಿಫೈನಲ್ ತಿಂಗಳು ಆಗಸ್ಟ್ ಆದರೆ ಅಚ್ಚರಿಯಿಲ್ಲ. ಏಕೆ ಗೊತ್ತೇ.. ಕನ್ನಡ ಚಿತ್ರರಂಗದ ಸ್ಟಾರ್ ನಟರ ಚಿತ್ರಗಳು ಅದೇ ತಿಂಗಳು ರಿಲೀಸ್ ಆಗುತ್ತಿವೆ.

  ವರಮಹಾಲಕ್ಷ್ಮಿ ಹಬ್ಬಕ್ಕೆ ಸುದೀಪ್ ಅಭಿನಯದ ಕೃಷ್ಣ ನಿರ್ದೇಶನದ ಪೈಲ್ವಾನ್ ತೆರೆಗೆ ಬರುತ್ತಿದೆ.

  ಅದೇ ತಿಂಗಳು ರಕ್ಷಿತ್ ಶೆಟ್ಟಿ ಅಭಿನಯದ ಪುಷ್ಕರ್ ಮಲ್ಲಿಕಾರ್ಜುನಯ್ಯ, ಪ್ರಕಾಶ್ ಗೌಡ ನಿರ್ಮಾಣದ ಅವನೇ ಶ್ರೀಮನ್ನಾರಾಯಣ ಚಿತ್ರವೂ ರಿಲೀಸ್ ಆಗುತ್ತಿದೆ.

  ಪೈಲ್ವಾನ್ 9 ಭಾಷೆಗಳಲ್ಲಿ ರಿಲೀಸ್ ಆದರೆ, ಅವನೇ ಶ್ರೀಮನ್ನಾರಾಯಣ 5 ಭಾಷೆಗಳಲ್ಲಿ ರಿಲೀಸ್ ಆಗಲಿದೆ.

  ಈ ಇಬ್ಬರದ್ದಷ್ಟೇ ಅಲ್ಲ, ಆಗಸ್ಟ್ ಹೊತ್ತಿಗೆ ಶಿವರಾಜ್ ಕುಮಾರ್ ಅಭಿನಯದ ಆನಂದ್ ಕೂಡಾ ರಿಲೀಸ್ ಆಗಲಿದೆ. ದ್ವಾರಕೀಶ್ ಬ್ಯಾನರ್‍ನಲ್ಲಿ ಇದೇ ಮೊದಲ ಬಾರಿಗೆ ಶಿವಣ್ಣ ನಟಿಸಿರುವ, ವಾಸು ನಿರ್ದೇಶನದ ಸಿನಿಮಾ ಅದು. 

  ಇದಕ್ಕೆ ಕಳಶವಿಟ್ಟಂತೆ ಶ್ರೀಮುರಳಿ ಭರಾಟೆಯೂ ಅದೇ ತಿಂಗಳು ಶುರುವಾಗಲಿದೆ. ನಿರ್ದೇಶಕ ಚೇತನ್ ಕುಮಾರ್ ಬಹದ್ದೂರ್, ಭರ್ಜರಿ ನಂತರ ಹ್ಯಾಟ್ರಿಕ್ ನಿರೀಕ್ಷೆಯಲ್ಲಿರುವ ಸಿನಿಮಾ ಭರಾಟೆ.

  ಸದ್ಯಕ್ಕೆ ಆಗಸ್ಟ್ ಕ್ಯೂನಲ್ಲಿರುವ ಚಿತ್ರಗಳಿವು. ಇವುಗಳ ಜೊತೆಗೆ ಇನ್ನಷ್ಟು ಚಿತ್ರಗಳು ಜೊತೆಯಾದರೂ ಅಚ್ಚರಿಯಿಲ್ಲ.

 • ಶೆರ್ಲಾಕ್ ಹೋಮ್ಸ್, ಚುಲ್‍ಬುಲ್ ಪಾಂಡೆ.. ಎಲ್ಲವೂ ಅವನೇ ಶ್ರೀಮನ್ನಾರಾಯಣ..!

  sherlock homes and chulbul pandey is avane srimannarayana

  ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅವನೇ ಶ್ರೀಮನ್ನಾರಾಯಣ ಚಿತ್ರದ ಟೀಸರ್ ಹೊರಬಿದ್ದ ಹೊತ್ತಲ್ಲೇ, ಚಿತ್ರದಲ್ಲಿನ ತಮ್ಮ ಕ್ಯಾರೆಕ್ಟರ್ ಬಗ್ಗೆ ರಕ್ಷಿತ್ ಶೆಟ್ಟಿ ಮಾತನಾಡಿದ್ದಾರೆ. ಚಿತ್ರದಲ್ಲಿ ಇಂಟೆಲಿಜೆಂಟ್ ಪೊಲೀಸ್ ಕ್ಯಾರೆಕ್ಟರ್ ಮಾಡಿರುವ ರಕ್ಷಿತ್ ಶೆಟ್ಟಿ, ಡಿಫರೆಂಟ್ ಗೆಟಪ್‍ನಲ್ಲಿ ಕಂಗೊಳಿಸಿದ್ದಾರೆ.

  ಚಿತ್ರದಲ್ಲಿನ ನಾರಾಯಣನ ಪಾತ್ರಕ್ಕೆ ಹಲವು ಶೇಡ್‍ಗಳಿವೆ. ಅವನು ಶೆರ್ಲಾಕ್ ಹೋಮ್ಸ್, ಜ್ಯಾಕ್ ಸ್ಪ್ಯಾರೋ ಹಾಗೂ ದಬ್ಬಾಂಗ್ ಚುಲ್‍ಬುಲ್ ಪಾಂಡೆಯ ಮಿಕ್ಸಿಂಗ್. ಚಿತ್ರದಲ್ಲಿ ನಾನೊಬ್ಬ ಇನ್ಸ್‍ಪೆಕ್ಟರ್. ನನಗಿಬ್ಬರು ಸಬಾರ್ಡಿನೇಟ್ಸ್. ಆ  ಸ್ಟೇಷನ್‍ಗೆ ನಾನೇ ಬಾಸ್. ನನ್ನನ್ನು ಪ್ರಶ್ನಿಸುವ ಅಧಿಕಾರಿಯೂ ಇರಲ್ಲ. ಹೀಗಿರುವಾಗ.. ಮುಂದಿನದ್ದನ್ನು ಸಿನಿಮಾದಲ್ಲೇ ನೋಡಿ..

  ಹೀಗೆ ರಕ್ಷಿತ್ ಶೆಟ್ಟಿ, ಗುಟ್ಟನ್ನು ಬಿಟ್ಟು ಕೊಟ್ಟು, ಸ್ವಲ್ಪವೂ ಬಿಟ್ಟುಕೊಡದೆ ಕುತೂಹಲ ಹುಟ್ಟಿಸಿಯೇ ಸಾಗುತ್ತಾರೆ. ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದ ಚಿತ್ರದಲ್ಲಿ ಶಾನ್ವಿ ಶ್ರೀವಾತ್ಸವ ಹೀರೋಯಿನ್. ಸಚಿನ್ ನಿರ್ದೇಶನದ ಚಿತ್ರ ವರಮಹಾಲಕ್ಷ್ಮಿ ಹಬ್ಬದಂದು ತೆರೆ ಕಾಣಲಿದೆ.

   

 • ಶೆರ್ಲಾಕ್ ಹೋಮ್ಸ್.. ಭಕ್ತ ಪ್ರಹ್ಲಾದ.. ಅವನೇ ಶ್ರೀಮನ್ನಾರಾಯಣ.. ಏನಪ್ಪಾ ಲಿಂಕು..?

  avane srimanaaryana and sherlock holmes link

  ಶೆರ್ಲಾಕ್ ಹೋಮ್ಸ್.. ಇಂಗ್ಲಿಷ್ ಕಾದಂಬರಿಗಳಲ್ಲಿ ಬರುವ ಫೇಮಸ್ ಡಿಟೆಕ್ಟಿವ್.

  ಅವನೇ ಶ್ರೀಮನ್ನಾರಾಯಣ.. ಭಕ್ತ ಪ್ರಹ್ಲಾದ ಚಿತ್ರದ ಕ್ಲೈಮಾಕ್ಸ್‍ನಲ್ಲಿ ಹಿರಣ್ಯಕಶಿಪು ರೋಷಾವೇಷದಿಂದ ಪ್ರಹ್ಲಾದನನ್ನು ಪ್ರಶ್ನಿಸಿದಾ ಪ್ರಹ್ಲಾದ ಕುಮಾರ ಹೇಳುವ ಉತ್ತರ. ಹೀಗಾಗಿ ಅಣ್ಣಾವ್ರು, ಪುನೀತ್ ಡೈಲಾಗ್‍ಗೆ ಈ ಸಿನಿಮಾ ತುಂಬಾ ಹತ್ತಿರ.

  ಈಗ ಪ್ರಶ್ನೆ, ಅವನೇ ಶ್ರೀಮನ್ನಾರಾಯಣ ಚಿತ್ರದಲ್ಲಿ ಹೀರೋ ರಕ್ಷಿತ್ ಶೆಟ್ಟಿ ಪಾತ್ರದ ಹೆಸರು ನಾರಾಯಣ. ಶೆರ್ಲಾಕ್ ಹೋಮ್ಸ್ ಅವತಾರ. ಈಗ ಪೋಸ್ಟ್ ಪ್ರೊಡಕ್ಷನ್ ಮುಕ್ತಾಯ ಹಂತಕ್ಕೆ ಬಂದಿದೆ.

  ರಕ್ಷಿತ್ ಶೆಟ್ಟಿ ಎದುರು ಶಾನ್ವಿ ಹೀರೋಯಿನ್ ಆಗಿದ್ದಾರೆ. ಸಚಿನ್ ರವಿ ಡೈರೆಕ್ಟರ್. ಕಿರಿಕ್ ಪಾರ್ಟಿ ಕ್ರೇಜ್, ರಕ್ಷಿತ್ ಶೆಟ್ಟಿ ಇಮೇಜ್‍ನಿಂದಾಗಿ ಎಲ್ಲ ಭಾಷೆಗಳಲ್ಲೂ ಕುತೂಹಲ ಮತ್ತು ನಿರೀಕ್ಷೆ ಇದೆ. ಡಬ್ಬಿಂಗ್ ಬಿರುಸಾಗಿ ಸಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ. 

 • ಶ್ರೀಮನ್ನಾರಾಯಣನಾದ ರಕ್ಷಿತ್ ಶೆಟ್ಟಿ

  avane srimannarayana launched

  ಕಿರಿಕ್ ಪಾರ್ಟಿಯ ನಂತರ ಹೆಚ್ಚೂ ಕಡಿಮೆ ಒಂದು ವರ್ಷ ವಿಶ್ರಾಂತಿ ತೆಗೆದುಕೊಂಡಿದ್ದ ರಕ್ಷಿತ್ ಶೆಟ್ಟಿ ಕಡೆಗೂ ಹೊಸ ಸಿನಿಮಾ ಶುರು ಮಾಡಿದ್ದಾರೆ. ವಿಶ್ರಾಂತಿ ಎಂದರೆ, ವಿಶ್ರಾಂತಿಯೇನೂ ಅಲ್ಲ. ಸ್ಕ್ರಿಪ್ಟ್ ವರ್ಕ್‍ನಲ್ಲಿ ಬ್ಯುಸಿಯಾಗಿದ್ದರು. ಅಷ್ಟೆ. ಆದರೆ, ಹೊಸ ಚಿತ್ರ ಯಾವುದೂ ಸೆಟ್ಟೇರಿರಲಿಲ್ಲ. 

  ಅವನೇ ಶ್ರೀಮನ್ನಾರಾಯಣ ಚಿತ್ರಕ್ಕೆ ಬೆಂಗಳೂರಿನ ಧರ್ಮಗಿರಿ ಮಂಜುನಾಥ ದೇವಸ್ಥಾನದಲ್ಲಿ ಮುಹೂರ್ತ ನೆರವೇರಿತು. ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ, ನಾಯಕಿ ಶಾನ್ವಿ ಶ್ರೀವಾಸ್ತವ, ನಿರ್ದೇಶಕ ಸಚಿನ್, ರಶ್ಮಿಕಾ ಮಂದಣ್ಣ, ನಿರ್ದೇಶಕ ಸುನಿ, ಮೇಘನಾ ಗಾಂವ್ಕರ್ ಸೇರಿದಂತೆ ತಂಡದ ಸ್ನೇಹಿತರೆಲ್ಲ ಹಾಜರಿದ್ದು ಹೊಸ ಚಿತ್ರಕ್ಕೆ ಶುಭ ಹಾರೈಸಿದ್ರು.

  ರಕ್ಷಿತ್ ಶೆಟ್ಟಿ ಮತ್ತು ಶಾನ್ವಿ ಶ್ರೀವಾಸ್ತವ್‍ಗೆ ಜೋಡಿಯಾಗಿ ಇದು ಮೊದಲ ಸಿನಿಮಾ. ಇನ್ನು ಸಂಕಲನಕಾರರಾಗಿದ್ದ ನಿರ್ದೇಶಕ ಸಚಿನ್‍ಗೂ ಇದು ಮೊದಲ ಸಿನಿಮಾ. 80ರ ದಶಕದ ಕಥೆ ಹೊಂದಿರುವ ಚಿತ್ರಕ್ಕೆ, ವಿಶೇಷವಾಗಿ ಕಾಸ್ಟ್ಯೂಮ್ ಡಿಸೈನ್ ಮಾಡಲಾಗಿದೆ. ಆ ಡಿಸೈನ್‍ನ ಒಂದು ಲುಕ್‍ನಲ್ಲಿ ಶಾನ್ವಿ ಕಂಗೊಳಿಸುತ್ತಿದ್ದರು.

 • ಶ್ರೀಮನ್ನಾರಾಯಣನಿಗಾಗಿ ರಜನಿಕಾಂತ್ ಪೆಟ್ಟಾ ಆಫರ್ ಬಿಟ್ಟಿದ್ದ ರಕ್ಷಿತ್ ಶೆಟ್ಟಿ

  rakshit shetty dropped petta movie offer for avane srimnarayana

  ಅವನೇ ಶ್ರೀಮನ್ನಾರಾಯಣ, ರಕ್ಷಿತ್ ಶೆಟ್ಟಿ ಅವರ ಬಹು ನಿರೀಕ್ಷೆಯ ಸಿನಿಮಾ. ಇದೊಂದು ಚಿತ್ರಕ್ಕಾಗಿ ಅವರು 3 ವರ್ಷಗಳ ಶ್ರಮವಹಿಸಿದ್ದಾರೆ. ಮಿಕ್ಕೆಲ್ಲ ಚಿತ್ರಗಳನ್ನೂ ಸೈಡಿಗಿಟ್ಟು, ಹಗಲೂ ರಾತ್ರಿ ಈ ಚಿತ್ರಕ್ಕಾಗಿ ನುಡಿದಿದ್ದಾರೆ. ಇಂತಹ ವೇಳೆಯಲ್ಲೇ ಅವರಿಗೆ ರಜನಿಕಾಂತ್ ಚಿತ್ರದ ಆಫರ್ ಸಿಕ್ಕಿದ್ದ ವಿಷಯವೂ ಹೊರಬಿದ್ದಿದೆ.

  ರಜನಿಕಾಂತ್ ಚಿತ್ರವೆಂದರೆ, ಅಲ್ಲೊಂದು ಪುಟ್ಟ ಪಾತ್ರವಾದರೂ ಸೈ, ಮಾಡೋಣ ಎನ್ನುವ ಕಲಾವಿದರೇ ಹೆಚ್ಚು. ಆದರೆ, ಪೆಟ್ಟಾ ಚಿತ್ರದಲ್ಲಿ ವಿಲನ್ ಆಗಿ ನಟಿಸುವ ಅವಕಾಶ ಸಿಕ್ಕರೂ, ಅವನೇ ಶ್ರೀಮನ್ನಾರಾಯಣನಿಂದಾಗಿ ಪೆಟ್ಟಾ ಕೈಬಿಟ್ಟಿದ್ದಾರೆ ರಕ್ಷಿತ್ ಶೆಟ್ಟಿ.

  ಪೆಟ್ಟಾ ನಿರ್ದೇಶಕ ಕಾರ್ತಿಕ್ ಸುಬ್ಬರಾಜು, ರಕ್ಷಿತ್ ಶೆಟ್ಟಿ ಗೆಳೆಯರೂ ಹೌದು. ಕೊನೆಗೆ ರಕ್ಷಿತ್ ಕೈಬಿಟ್ಟ ಪಾತ್ರದಲ್ಲಿ ವಿಜಯ್ ಸೇತುಪತಿ ನಟಿಸಿದ್ದರು. ಗೆದ್ದಿದ್ದರು.

  ಇದೆಲ್ಲವನ್ನೂ ಸ್ವತಃ ರಕ್ಷಿತ್ ಶೆಟ್ಟಿ ಅವರೇ ಹೇಳಿಕೊಂಡಿದ್ದಾರೆ. ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದ ಅವನೇ ಶ್ರೀಮನ್ನಾರಾಯಣ ಈ ತಿಂಗಳ ಕೊನೆಯಲ್ಲಿ ರಿಲೀಸ್ 5 ಭಾಷೆಗಳಲ್ಲಿ ಆಗುತ್ತಿದೆ. ಸಚಿನ್ ನಿರ್ದೇಶನದ ಚಿತ್ರದಲ್ಲಿ ಶಾನ್ವಿ ಶ್ರೀವಾತ್ಸವ್ ನಾಯಕಿ.

 • ಸಿಂಪಲ್ಲಾಗ್ ಒಂದ್ ವರ್ಷದ್ ಲವ್ ಸ್ಟೋರಿ

  rakshit rashmika's engagement anniversary

  ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ. ಸ್ಯಾಂಡಲ್‍ವುಡ್‍ನ ಮುದ್ದು ಜೋಡಿ. ಈ ಜೋಡಿಹಕ್ಕಿಯ ಪ್ರೇಮಕಥೆಗೀಗ ಒಂದು ವರ್ಷ. ಆ ಒಂದು ವರ್ಷವನ್ನು ರಕ್ಷಿತ್ ಶೆಟ್ಟಿ, ತಮ್ಮಿಬ್ಬರ ಹಳೆಯ ಫೋಟೋ ಮತ್ತು ವಿಡಿಯೋಗಳ ಕೊಲಾಜ್ ಮಾಡಿಸಿ, ರಶ್ಮಿಕಾಗೊಂದು ಪ್ರೇಮ ಪತ್ರ ಬರೆದು ಹಂಚಿಕೊಂಡಿದ್ದಾರೆ.

  ನಮ್ಮಿಬ್ಬರ ಎಂಗೇಜ್‍ಮೆಂಟ್ ಆಗಿ ಒಂದು ವರ್ಷ ಕಳೆದಿದೆ. ನನಗೆ ನಂಬಲಾಗುತ್ತಿಲ್ಲ. ನಾನು ನಿನ್ನೊಂದಿಗೆ ಇದ್ದ ಸಮಯದಲ್ಲಿ ಸಾಕಷ್ಟು ಸಂಗತಿಗಳನ್ನು ಕಲಿತಿದ್ದೇನೆ. ನಿನ್ನಿಂದ ದೂರವಿದ್ದ ಸಮಯದಲ್ಲಿ ಕಲಿಯವ ಅವಕಾಶ ಕಳೆದುಕೊಂಡಿದ್ದೇನೆ. ನನ್ನ ಜೀವನದಲ್ಲಿ ಗಳಿಸಿದ ಬಹುದೊಡ್ಡ ಆಸ್ತಿ ನೀನು. ನಿನ್ನನ್ನು ಪ್ರತಿ ದಿನವೂ ಹೆಚ್ಚೆಚ್ಚು ಪ್ರೀತಿಸುತ್ತೇನೆ, ಸ್ವೀಟ್ ಹಾರ್ಟ್ ಎಂದು ಪ್ರೇಮ ಪತ್ರ ಬರೆದಿದ್ದಾರೆ ರಕ್ಷಿತ್ ಶೆಟ್ಟಿ.

  ಇದು ಪ್ರೀತಿಯಲ್ಲ.. ಬಿಕಾಸ್ ಪ್ರೀತಿ ಎಂದರೆ ಪರ್ಫೆಕ್ಟ್. ಎರಡು ಸುಂದರ ಮನಸ್ಸುಗಳು ಬೇರೆಯದ್ದನ್ನು ಹುಡುಕುತ್ತಿದ್ದಾಗ ಒಂದಾದ ಜೀವನ ಇದು. ಬದುಕಿನ ಪಾಠದ ಬಗ್ಗೆ ಒಬ್ಬರಿಗೊಬ್ಬರು ಕಲಿಸಿಕೊಂಡು ಬದುಕೋಣ. ನಾವಿಬ್ಬರೂ ಬೆಸ್ಟ್ ಟೀಚರ್ಸ್. ನಾನು ನಿಮ್ಮಿಂದ ಬಹಳಷ್ಟನ್ನು ಕಲಿತಿದ್ದೇನೆ.. ನಾನು.. ನೀವು ತುಂಬಾ ಕೋಪ ಮಾಡಿಕೊಂಡಿದ್ದೇವೆ. ಅದಕ್ಕಾಗಿ ನಾನು ನಿಮ್ಮನ್ನು ತುಂಬಾ ಪ್ರೀತಿಸುತ್ತೇನೆ. ಐ ಲವ್ ಯೂ ಎಂದಿದ್ದಾರೆ ರಶ್ಮಿಕಾ.

  ಪ್ರೀತಿಯೆಂದರೆ ಪರಸ್ಪರ ಗೌರವಿಸುವುದು ಎನ್ನುವುದು ಕೂಡಾ ಈ ಇಬ್ಬರ ಪ್ರೇಮಪತ್ರದ ಸ್ವಾರಸ್ಯ. ಇನ್ನೂ ಒಂದಷ್ಟು ವರ್ಷ ಪ್ರೀತಿ ಮಾಡಿಕೊಂಡೇ ಇರುತ್ತೇವೆ. ಇನ್ನೂ ನೂರು ವರ್ಷ ಆದರೂ ನಮ್ಮಿಬ್ಬರ ಪ್ರೀತಿ ಕಡಿಮೆ ಆಗುವುದಿಲ್ಲ. ವಿ ಲವ್ ಈಚ್ ಅದರ್ ಎಂದಿದ್ದಾರೆ ರಶ್ಮಿಕಾ.

  ಇದು ಸಿಂಪಲ್ಲಾಗ್ ಒಂದ್ ವರ್ಷದ್ ಲವ್ ಸ್ಟೋರಿ ಕಥೆ. 

 • ಸಿನಿಮಾ ಒಂದು.. ಟೈಟಲ್ ನಾಲ್ಕು..!

  avane srimanarayana will have four different titles

  ಅವನೇ ಶ್ರೀಮನ್ನಾರಾಯಣ.. ರಕ್ಷಿತ್ ಶೆಟ್ಟಿ ಅಭಿನಯದ ಈ ಸಿನಿಮಾ ಕೂಡಾ ಹಲವು ಭಾಷೆಗಳಲ್ಲಿ ರಿಲೀಸ್ ಆಗಲಿದೆ. ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ ಸಿನಿಮಾ ಬರಲಿದೆ. ಕುತೂಹಲ ಇರುವುದು ಟೈಟಲ್ ಬಗ್ಗೆ. 

  ಕನ್ನಡದಲ್ಲಿ ಅವನೇ ಶ್ರೀಮನ್ನಾರಾಯಣ ಎನ್ನುವುದು ಕ್ಯಾಚಿ ಟೈಟಲ್. ಭಕ್ತ ಪ್ರಹ್ಲಾದ ಸಿನಿಮಾದ ಸೂಪರ್ ಹಿಟ್ ಡೈಲಾಗ್‍ನಲ್ಲಿ ಅದೂ ಒಂದು. ತೆಲುಗಿನಲ್ಲಿಯೂ ಗೊಂದಲವೇನಿಲ್ಲ. ಅವನೇ ಎನ್ನುವುದನ್ನು ತೆಲುಗಿನಲ್ಲಿ ಹೇಳಿದರೆ ಆಯಿತು. 

  ಆದರೆ, ಅದೇ ಸ್ಟೈಲ್ ಬೇರೆ ಭಾಷೆಗೆ ಅನ್ವಯಿಸೋದಿಲ್ಲ. ಹೀಗಾಗಿ ಮಲಯಾಳಂ, ತಮಿಳು ಹಾಗೂ ಹಿಂದಿಯಲ್ಲಿ ಬೇರೆಯದ್ದೇ ಟೈಟಲ್ ಇಡೋಕೆ ಚಿತ್ರತಂಡ ಸಿದ್ಧವಾಗಿದೆ. ಒಂದೊಂದು ಭಾಷೆಗೂ ಮೂರ್ನಾಲ್ಕು ಟೈಟಲ್‍ಗಳನ್ನು ರೆಡಿ ಮಾಡಿಕೊಂಡಿರುವ ಚಿತ್ರತಂಡ ಫೈನಲ್ ಟೈಟಲ್ ಯಾವುದು ಅನ್ನೋದನ್ನೂ ಶೀಘ್ರದಲ್ಲೇ ನಿರ್ಧರಿಸಲಿದೆ ಎಂದು ತಿಳಿಸಿದ್ದಾರೆ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ.

 • ಸೂಪರ್ ಮಗಾ.. ರಿಷಬ್ ಶೆಟ್ಟಿಗೆ ಶ್ರೀಮನ್ನಾರಾಯಣನ ಶುಭಾಶಯ

  srimannarayana wishes rakshit shetty in his own style

  ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ರಾಷ್ಟ್ರಪ್ರಶಸ್ತಿ ಗೆದ್ದದ್ದು ಗೊತ್ತಿದೆ ತಾನೇ. ಇದಿಗ ಪ್ರಶಸ್ತಿಗಳನ್ನು ವಿಜೇತರಿಗೆ ವಿತರಣೆ ಮಾಡಿದ್ದಾರೆ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು. ಉಪರಾಷ್ಟ್ರಪತಿಗಳಿಂದ ಸ್ವರ್ಣ ಕಮಲ  ಪ್ರಶಸ್ತಿ ಸ್ವೀಕರಿಸುತ್ತಿರುವ ಗೆಳೆಯನಿಗೆ ರಕ್ಷಿತ್ ಶೆಟ್ಟಿ ಅಲಿಯಾಸ್ ಶ್ರೀಮನ್ನಾರಾಯನ ವಿಷ್ ಮಾಡಿರುವುದು ಹೀಗೆ..

  ಮಗಾ ಸೂಪರ್ ಕಣೋ..ವ್ಹಾವ್.. ನಿನ್ನ ಸಾಧನೆ ಅಮೋಘ ಎಂದು ಹೊಗಳಿದ್ದಾರೆ ರಕ್ಷಿತ್. ಇಂತಹ ಇನ್ನಷ್ಟು ಪ್ರಶಸ್ತಿಗಳು ನಿನಗಿರಲಿ ಎಂದು ಹಾರೈಸಿದ್ದಾರೆ. ರಿಷಬ್ ಶೆಟ್ಟಿ ನಿರ್ದೇಶನದ ಕಿರಿಕ್ ಪಾರ್ಟಿ ನಂತರ ರಕ್ಷಿತ್ ಶೆಟ್ಟಿ ನಟಿಸಿರುವ ಅವನೇ ಶ್ರೀಮನ್ನಾರಾಯಣ ಇದೇ ಡಿಸೆಂಬರ್ 27ಕ್ಕೆ ರಿಲೀಸ್ ಆಗುತ್ತಿದೆ. 3 ವರ್ಷಗಳ ಗ್ಯಾಪ್ ನಂತರ ಬರುತ್ತಿರುವ ರಕ್ಷಿತ್ ಶೆಟ್ಟಿ ಚಿತ್ರದ ಮೇಲೆ ಸ್ಯಾಂಡಲ್ವುಡ್ ಭರ್ಜರಿ ನಿರೀಕ್ಷೆ ಇಟ್ಟುಕೊಂಡಿದೆ.

 • ಸೈಲೆಂಟ್ ಹೀರೋ ಜೊತೆ ತರ್ಲೆ ನಾಯಿಯ ಕಥೆ

  silent hero's journey with hyper active dog is charlie 777

  ಹೀರೋ ಏಕಾಂಗಿ. ಮಾನಸಿಕ ಖಿನ್ನತೆಗೆ ಒಳಗಾಗಿರುವ ಮುಂಗೋಪಿ. ಯಾರೊಬ್ಬರ ಜೊತೆಗೂ ಬೆರೆಯದವನು. ಅಂತವನ ಜೊತೆ ಒಂದು ತರಲೆ ನಾಯಿ. ಆತನ ಹೆಸರು ಚಾರ್ಲಿ. ಹೈಪರ್‌ ಆಕ್ಟಿವ್‌. ಅಲ್ಲೆಲ್ಲೋ ತಪ್ಪಿಸಿಕೊಂಡ ನಾಯಿ, ಏಕಾಂಗಿ ನಾಯಕನ ಜಗತ್ತಿಗೆ ಎಂಟ್ರಿ ಕೊಡುತ್ತೆ. ನಾಯಕನ ಲೈಫು ಕಂಪ್ಲೀಟ್ ಚೇಂಜ್ ಆಗ್ಬಿಡುತ್ತೆ. ಹೇಗೆ ಚೇಂಜ್ ಆಗುತ್ತೆ.. ಅದೇ 777 ಚಾರ್ಲಿ ಚಿತ್ರದ ಕಥೆ.

  ಅವನೇ ಶ್ರೀಮನ್ನಾರಾಯಣ ಸಿನಿಮಾದ ಬಳಿಕ ರಕ್ಷಿತ್‌ ಶೆಟ್ಟಿ ನಟಿಸುತ್ತಿರುವ 777 ಚಾರ್ಲಿ, ಈ ಕಾರಣಕ್ಕೇ ಕುತೂಹಲ ಹುಟ್ಟಿಸಿದೆ. ಕಿರಣ್‌ರಾಜ್‌ ನಿರ್ದೇಶನ ಚಿತ್ರಕ್ಕೆ ಜಿ.ಎಸ್.ಗುಪ್ತಾ ಮತ್ತು ರಕ್ಷಿತ್ ಶೆಟ್ಟಿ ನಿರ್ಮಾಪಕರು. ಪುಷ್ಕರ್ ಮಲ್ಲಿಕಾರ್ಜುನಯ್ಯ ಅರ್ಪಿಸುತ್ತಿರುವ ಚಿತ್ರವಿದು.

  ಈಗಾಗಲೇ, ಶೇಕಡ 60ರಷ್ಟು ಚಿತ್ರೀಕರಣ ಪೂರ್ಣಗೊಳಿಸಿರುವ ಚಿತ್ರತಂಡ, ಮುಂದಿನ ಶೂಟಿಂಗ್ನ್ನು ಶಿಮ್ಲಾ, ಕಾಶ್ಮೀರ, ಗುಜರಾತ್‌, ರಾಜಸ್ಥಾನ ಮತ್ತು ಪಂಜಾಬ್‌ನಲ್ಲಿ ಪ್ಲಾನ್ ಮಾಡಿದೆ. ರಕ್ಷಿತ್‌ ಶೆಟ್ಟಿ ಎದುರು ಸಂಗೀತ ನಾಯಕಿಯಾಗಿದ್ದಾರೆ. ಅಂದಹಾಗೆ ಅಲ್ಲಿಗೆ ಈ ತರ್ಲೆ ಚಾರ್ಲಿಯನ್ನೂ ಕರೆದುಕೊಂಡು ಹೋಗಬೇಕು. 15 ದಿನಗಳ ಶೂಟಿಂಗ್ ಇದೆ.

  ಇದು ಕೂಡಾ ಪ್ಯಾನ್‌ ಇಂಡಿಯಾ ಕಾನ್ಟೆಪ್ಟ್‌ ಇಟ್ಟುಕೊಂಡೇ ತಯಾರಾಗುತ್ತಿರುವ ಸಿನಿಮಾ. ಇನ್ನೆರಡು ತಿಂಗಳ ನಂತರ ಶೂಟಿಂಗ್ ಮುಗಿಯಲಿದೆ. 20 ನಿಮಿಷದ ಗ್ರಾಫಿಕ್ಸ್ ಬೇಕಿದೆ. ಹೀಗಾಗಿ ಶೂಟಿಂಗ್ ಮುಗಿದ ಮೇಲೆಯೇ ರಿಲೀಸ್ ಡೇಟ್ ಹೇಳ್ತೇವೆ ಅಂತಾರೆ ನಿರ್ದೇಶಕ ಕಿರಣ್ ರಾಜ್.

  ನಟ ರಾಜ್‌ ಬಿ. ಶೆಟ್ಟಿ ಚಿತ್ರದ ಇನ್ನೊಂದು ಮುಖ್ಯ ಪಾತ್ರದಲ್ಲಿದ್ದಾರೆ. ನೊಬಿಲ್‌ ‍ಪಾಲ್‌ ಸಂಗೀತ ನೀಡಿದ್ದಾರೆ.

 • ಸೊಸೆ ರಶ್ಮಿಕಾಗೆ ಅತ್ತೆಯಿಂದ ಉಡುಗೊರೆಗಳ ಮಾಲೆ

  rashmika mother in law's gifts

  ರಕ್ಷಿತ್ ಶೆಟ್ಟಿ-ರಶ್ಮಿಕಾ ಎಂಗೇಜ್​ಮೆಂಟ್​ಗೆ ಮೊದಲೇ ಆಭರಣಗಳು ರೆಡಿಯಾಬಿಟ್ಟಿವೆ. ಮುದ್ದಿನ ಭಾವೀ ಸೊಸೆಗೆ ರಕ್ಷಿತ್ ಶೆಟ್ಟಿ ತಾಯಿ ರಂಜನಾ ಬಂಗಾರದ ಆಭರಣಗಳ ಉಡುಗೊರೆ ಕೊಡೋಕೆ ನಿರ್ಧರಿಸಿದ್ದಾರೆ.

  ಒಂದು ಡೈಮೆಂಡ್ ನೆಕ್ಲೇಸ್, ಕಾಂಜೀವರಂ ಸೀರೆ, ಜೊತೆಗೆ ಬಂಗಾರದ ಆಭರಣಗಳನ್ನ ನೀಡಲಿದ್ದಾರಂತೆ ರಂಜನಾ.

  ರಕ್ಷಿತ್ ಶೆಟ್ಟಿಗೆ ರಶ್ಮಿಕಾ ತಂದೆ ಕಡಗ ಕೊಟ್ಟು ಹಾರೈಸಿದ್ದರು. ಇನ್ನು ರಶ್ಮಿಕಾ, ಪ್ರೀತಿ ಶುರುವಾಗುವ ಮುಂಚೆ ರಕ್ಷಿತ್​ಗೆ 20 ಉಡುಗೊರೆಗಳ ಬೊಕೆಯನ್ನೇ ಕೊಟ್ಟಿದ್ದರು. ಈಗ ಉಡುಗೊರೆ ಕೊಡುವ ಸರದಿ ರಕ್ಷಿತ್ ಶೆಟ್ಟಿ ತಾಯಿಯದ್ದು.

  ಜುಲೈ3ಕ್ಕೆ ಕೊಡಗಿನಲ್ಲಿ ಎಂಗೇಜ್​ಮೆಂಟ್ ನಡೆಯಲಿದ್ದು, ರಶ್ಮಿಕಾ ಪ್ರೀತಿಯ ಅತ್ತೆ ಕೊಡುವ ಆಭರಣಗಳಲ್ಲಿ ಕಂಗೊಳಿಸಲಿದ್ದಾರೆ.

  Related Articles :-

  ರಕ್ಷಿತ್ - ರಶ್ಮಿಕಾ ನಿಶ್ಚಿತಾರ್ಥ ಎಲ್ಲಿ..? ಹೇಗೆ..?

  ಒಲವಿನ ಕಚಗುಳಿ ಶುರುವಾಗಿದ್ದು ಯಾವಾಗ..? ರಕ್ಷಿತ್ ಶೆಟ್ಟಿ ಮಾತನಾಡಿದಾಗ

  ರಕ್ತಿತ್ ಶೆಟ್ಟಿ - ರಶ್ಮಿಕಾ ಲವ್ ಸ್ಟೋರಿ - ಪ್ರಪೋಸ್ ಮಾಡಿದ್ದು ಯಾರು?

  ಕಿರಿಕ್ ಜೋಡಿಗೆ ಶ್ರೀರಸ್ತು ಶುಭಮಸ್ತು. ಒಪ್ಪಿಕೊಂಡರು ರಕ್ಷಿತ್ ಶೆಟ್ಟಿ

  Rakshith - Rashmika Engagement On July 3rd?

   

   

   

 • ಸೋಷಿಯಲ್ ಮೀಡಿಯಾದಿಂದ ರಕ್ಷಿತ್ ಶೆಟ್ಟಿ ಔಟ್

  rakshit shetty quits social media

  ರಕ್ಷಿತ್ ಶೆಟ್ಟಿ, ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದವರು. ಸಾಮಾಜಿಕ ಜಾಲತಾಣಗಳನ್ನು ಸಿನಿಮಾಗೆ ಬಳಸಿಕೊಳ್ಳೋದು ಹೇಗೆಂದು ತೋರಿಸಿಕೊಟ್ಟ ಮೊದಲಿಗರಲ್ಲಿ ರಕ್ಷಿತ್ ಕೂಡಾ ಒಬ್ಬರು. ಈಗಲೂ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ರಕ್ಷಿತ್, ಇದ್ದಕ್ಕಿದ್ದಂತೆ ಟ್ವಿಟರ್‍ನಲ್ಲಿ ಸೈಲೆಂಟ್. ಪ್ರತಿ ದಿನ ಟ್ವಿಟರ್‍ನಲ್ಲಿ ಸಂವಾದಕ್ಕೆ ಸಿಗುತ್ತಿದ್ದ ರಕ್ಷಿತ್ ಈಗ ದಿಢೀರನೆ ನಾಪತ್ತೆ. ಏಕಿರಬಹುದು ಎಂದು ಹುಡುಕಿದಾಗ ಕಂಡಿದ್ದು ಅವನೇ ಶ್ರೀಮನ್ನಾರಾಯಣ.

  ಸಿನಿಮಾದಲ್ಲಿ ಬ್ಯುಸಿಯಾಗಿರುವ ರಕ್ಷಿತ್ ಶೆಟ್ಟಿಗೆ, ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವುದೇ ಸಮಸ್ಯೆಯಾಗಿತ್ತಂತೆ. ಹೀಗಾಗಿ ಶೂಟಿಂಗ್‍ಗೆ ತೊಂದರೆಯಾಗದೇ ಇರಲಿ ಎಂದು ಸೋಷಿಯಲ್ ಮೀಡಿಯಾದಿಂದಲೇ ದೂರ ಹೋಗಿದ್ದಾರೆ. 

  ಹೆಚ್ಚು ಹೆಚ್ಚು ಸೋಷಿಯಲ್ ಮೀಡಿಯಾದಲ್ಲಿ ತೊಡಗಿಸಿಕೊಂಡಷ್ಟೂ, ಚಾರ್ಲಿ ಹಾಗೂ ಅವನೇ ಶ್ರೀಮನ್ನಾರಯಣ ಚಿತ್ರಗಳ ಶೂಟಿಂಗ್‍ಗೆ ಪ್ರಾಬ್ಲಂ ಆಗುತ್ತಿತ್ತು. ಹೀಗಾಗಿ ಅವರು ತಾತ್ಕಾಲಿಕವಾಗಿ ದೂರ ಹೋಗಿದ್ದಾರೆ. ಶೂಟಿಂಗ್ ಮುಗಿದ ಮೇಲೆ ಮತ್ತೆ ಬರ್ತಾರೆ ಎಂದಿದ್ದಾರೆ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ.

 • ಸ್ಯಾಂಡಲ್‍ವುಡ್ ಪುಣ್ಯಕೋಟಿ ರಕ್ಷಿತ್ ಶೆಟ್ಟಿ

  rakshit shetty to direct again

  ಒಂದೆಡೆ ಅವನೇ ಶ್ರೀಮನ್ನಾರಾಯಣ.. ಮತ್ತೊಂದೆಡೆ 777 ಚಾರ್ಲಿ.. ಚಿತ್ರಗಳಲ್ಲಿ ಬ್ಯುಸಿಯಾಗಿರೋ ರಕ್ಷಿತ್ ಶೆಟ್ಟಿ, ಇನ್ನೊಂದೆಡೆ ಚಿತ್ರಗಳ ನಿರ್ಮಾಣದಲ್ಲೂ ಬ್ಯುಸಿ. ಪಡ್ಡೆಹುಲಿಯಲ್ಲಿ ಅತಿಥಿ ನಟರಾಗಿಯೂ ನಟಿಸಿರುವ ರಕ್ಷಿತ್ ಶೆಟ್ಟಿ, ಈಗ ಪುಣ್ಯಕೋಟಿಯಾಗೋಕೆ ಸಿದ್ಧರಾಗುತ್ತಿದ್ದಾರೆ.

  ರಕ್ಷಿತ್ ಶೆಟ್ಟಿ ಹೊಸದೊಂದು ಪ್ರಾಜೆಕ್ಟ್ ಕೈಗೆತ್ತಿಕೊಂಡು ಹಸು ಮತ್ತು ಹುಲಿಗಳನ್ನು ವ್ಯಕ್ತಿಗಳಿಗೆ ಹೋಲಿಸಿ ಕಥೆ ಸಿದ್ಧಪಡಿಸುತ್ತಿದ್ದಾರೆ. ಸ್ಕ್ರಿಪ್ಟ್ ವರ್ಕ್‍ನಲ್ಲಿ ಸಂಪೂರ್ಣ ತೊಡಗಿಸಿಕೊಂಡಿರುವ ರಕ್ಷಿತ್ ಶೆಟ್ಟಿ, ಸ್ವತಃ ನಿರ್ದೇಶನ ಮಾಡಲಿದ್ದಾರೆ.

  ಉಳಿದವರು ಕಂಡಂತೆ ಚಿತ್ರದ ಬಳಿಕ ನಿರ್ದೇಶನದಿಂದ ದೂರವುಳಿದು, ನಟನೆಯಲ್ಲಷ್ಟೇ ತೊಡಗಿಸಿಕೊಂಡಿದ್ದ ರಕ್ಷಿತ್ ಶೆಟ್ಟಿ, ಮತ್ತೊಮ್ಮೆ ಡೈರೆಕ್ಟರ್ ಕ್ಯಾಪ್ ತೊಡುತ್ತಿದ್ದಾರೆ. ಆದರೆ, ಪುಣ್ಯಕೋಟಿ ಪ್ರಾಜೆಕ್ಟ್‍ಗೆ ಜೀವ ಬರೋದು 2020ರಲ್ಲಿ ಎನ್ನುತ್ತಿವೆ ಮೂಲಗಳು.

 • ಹಬ್ಬಕ್ಕೆ ಶಾನ್ವಿ ಶ್ರೀವಾಸ್ತವ್ ಲಕ್ಷ್ಮೀ ಕಟಾಕ್ಷ

  varmahalakshmi habba gift from avane srimananrayana

  ಅವನೇ ಶ್ರೀಮನ್ನಾರಾಯಣ ವರಮಹಾಲಕ್ಷ್ಮಿ ಹಬ್ಬಕ್ಕೆ ಲಕ್ಷ್ಮಿಯನ್ನೇ ಮನೆ ಮನೆಗೆ ಕಳಿಸಿಕೊಟ್ಟಿದೆ. ಅದು ಶಾನ್ವಿ ಶ್ರೀವಾಸ್ತವ್ ರೂಪದಲ್ಲಿ. ಹಬ್ಬಕ್ಕೆ ವಿಶೇಷ ಪೋಸ್ಟರ್ ರಿಲೀಸ್ ಮಾಡಿರುವ ಚಿತ್ರತಂಡ, ಶಾನ್ವಿ ಶ್ರೀವಾಸ್ತವ್ ಅವರನ್ನು ಲಕ್ಷ್ಮೀ ಸ್ವರೂಪಿಯಾಗಿ ಚಿತ್ರಿಸಿ ಪೋಸ್ಟರ್ ರಿಲೀಸ್ ಮಾಡಿದೆ.

  ಪುಷ್ಕರ್ ಮಲ್ಲಿಕಾರ್ಜುನಯ್ಯ, ಹೆಚ್.ಕೆ.ಪ್ರಕಾಶ್ ಗೌಡ ನಿರ್ಮಾಣದ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಹೀರೋ. ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ ಅವನೇ ಶ್ರೀಮನ್ನಾರಾಯಣ ಮಂದಿನ ತಿಂಗಳು ರಿಲೀಸ್ ಆಗುವ ಸಾಧ್ಯತೆ ಇದೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery