` rakshith shetty - chitraloka.com | Kannada Movie News, Reviews | Image

rakshith shetty

 • ಅವನೇ ಶ್ರೀಮನ್ನಾರಾಯಣ ಗೆಲುವಿನ ಸೀಕ್ರೆಟ್ ಹೇಳಿದ ರಕ್ಷಿತ್ ಶೆಟ್ಟಿ

  rakshit shetty reveals avane srimananrayana success meet

  ಅವನೇ ಶ್ರೀಮನ್ನಾರಾಯಣ ಗೆದ್ದಾಗಿದೆ. ಅದೂ ಅಂತಿಂತಾ ಗೆಲುವಲ್ಲ, ಭರ್ಜರಿ..ಸೂಪರ್..ಬೊಂಬಾಟ್..ಮಾರ್ವಲೆಸ್..ಸೂಪರ್ಬ್..ಥಂಡರ್‍ಫುಲ್.. ಹೀಗೆಲ್ಲ ಹೇಳ್ತಾರಲ್ಲ.. ಅಂತಾ ಗೆಲುವು. ವರ್ಷದ ಕೊನೆಯಲ್ಲಿ ಬಂದು ಮತ್ತೊಮ್ಮೆ ಬಂಪರ್ ಬೆಳೆ ತೆಗೆದಿದ್ದಾರೆ ರಕ್ಷಿತ್ ಶೆಟ್ಟಿ. ಇಷ್ಟಕ್ಕೂ ಇಡೀ ಚಿತ್ರದ ಗೆಲುವಿನ ಅತಿ ದೊಡ್ಡ ಸೀಕ್ರೆಟ್ ಏನು..?

  3 ವರ್ಷದ ಗ್ಯಾಪ್ ನಂತರ ರಕ್ಷಿತ್ ಶೆಟ್ಟಿ ಬಂದಿದ್ದಾ..? ಹಾಡು ಹಿಟ್ ಆಗಿದ್ದಾ..? ಸೆಟ್ಟುಗಳು ಅದ್ಭುತವಾಗಿದ್ದುದಾ..? ಅದ್ಭುತವಾಗಿ ಟೆಕ್ನಾಲಜಿಯನ್ನು ಬಳಸಿಕೊಂಡಿದ್ದಾ..? ರಕ್ಷಿತ್-ಶಾನ್ವಿ ಜೋಡಿ ವರ್ಕೌಟ್ ಆಯ್ತಾ..? ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಚಿತ್ರವನ್ನು ಪ್ರಮೋಟ್ ಮಾಡಿದ್ದು ಕೆಲಸ ಮಾಡಿತಾ..? ಹೀಗೆ ಹಲವು ಪ್ರಶ್ನೆಗಳು.. ಆದರೆ, ರಕ್ಷಿತ್ ಹೇಳಿದ ಗೆಲುವಿನ ರಹಸ್ಯಮಂತ್ರವೇ ಬೇರೆ.

  ಸಿನಿಮಾ ಅಂತಾ ಬಂದಾಗ ನನ್ನ ಪ್ರಕಾರ ಬರವಣಿಗೆಯೇ ಕಿಂಗ್. ನನ್ನ ತಂಡ ಬರವಣಿಗೆಯನ್ನು ಒಂದು ರೂಪಕ್ಕೆ ತರುತ್ತೆ. ಅದೇ ತಂಡದ ಬೆನ್ನೆಲುಬು. ನಟನೆಯ ಮಾತು ಬಿಡಿ, ಪ್ರತಿ ಚಿತ್ರವೂ ನನಗೆ ಕಲಿಕೆಯೇ. ಇವೆಲ್ಲವೂ ಸೇರಿದರೆ ಮಾತ್ರ ರಕ್ಷಿತ್ ಶೆಟ್ಟಿ ಮತ್ತು ಅವನೇ ಶ್ರೀಮನ್ನಾರಾಯಣ ಎಂದಿದ್ದಾರೆ ರಕ್ಷಿತ್ ಶೆಟ್ಟಿ.

  ಗೆಲುವಿನ ಸೀಕ್ರೆಟ್ ಅದೇ.. ಕಥೆ..

   

 • ಅವನೇ ಶ್ರೀಮನ್ನಾರಾಯಣ ಟೀಸರ್ ಹಿಟ್ ಸಂಭ್ರಮ

  avane srimannarayana teser released

  ರಕ್ಷಿತ್ ಶೆಟ್ಟಿ ಅವರ ಹುಟ್ಟುಹಬ್ಬಕ್ಕೆಂದೇ ಅವನೇ ಶ್ರೀಮನ್ನಾರಾಯಣ ಚಿತ್ರದ ಟೀಸರ್ ಹೊರಬಿತ್ತು. 80ರ ದಶಕದ ಪೊಲೀಸ್ ಕಥೆ ಹೊಂದಿರುವ ಸಿನಿಮಾದ ಟೀಸರ್, ಆನ್‍ಲೈನ್‍ನಲ್ಲಿ ಸೂಪರ್ ಡ್ಯೂಪರ್ ಹಿಟ್. ಹಳೆಯ ಕಾಲದ ಗೆಟಪ್ಪು, ಶೋಲೆಯನ್ನು ನೆನಪಿಸುವಂತಹ ವಿಲನ್‍ಗಳು, ಸ್ಟೈಲು.. ಟೀಸರ್ ನೋಡಿದವರು ಫುಲ್ ಫಿದಾ.

  ನಾಯಕಿ ಶಾನ್ವಿ ಶ್ರೀವಾಸ್ತವ್, ಅಚ್ಯುತ್ ಕುಮಾರ್, ಬಾಲಾಜಿ ಮನೋಹರ್, ಪ್ರಮೋದ್ ಶೆಟ್ಟಿ, ಮಧುಸೂದನ್ ರಾವ್ ಮೊದಲಾದವರಿರುವ ಚಿತ್ರಕ್ಕೆ ಸಚಿನ್ ನಿರ್ದೇಶನವಿದೆ. ಟೀಸರ್ ನೋಡಿದವರಿಗೆ ಇಷ್ಟವಾಗಿರೋದು ರಕ್ಷಿತ್ ಶೆಟ್ಟಿ, ಮ್ಯಾನರಿಸಂ. ಟೀಸರ್ ವೀಕ್ಷಿಸಿದವರ ಸಂಖ್ಯೆ ಈಗಾಗಲೇ 4 ಲಕ್ಷ ಗಡಿದಾಟಿರುವುದು ವಿಶೇಷ.ಮಲಯಾಳಂನಲ್ಲೂ ರಿಲೀಸ್ ಮಾಡಿ ಎಂದು ಕೇರಳದ ಅಭಿಮಾನಿಗಳು ಆನ್‍ಲೈನ್‍ನಲ್ಲೇ ಡಿಮ್ಯಾಂಡ್ ಇಟ್ಟಿರುವುದು ಅವನೇ ಶ್ರೀಮನ್ನಾರಾಯಣ ಚಿತ್ರತಂಡಕ್ಕೆ ಬೂಸ್ಟ್ ಕೊಟ್ಟಂತಾಗಿದೆ.

 • ಅವನೇ ಶ್ರೀಮನ್ನಾರಾಯಣ ಡಬಲ್ ಸೆಂಚುರಿ

  avane srimananrayana makes a new record

  ಅವನೇ ಶ್ರೀಮನ್ನಾರಾಯಣ. ರಕ್ಷಿತ್ ಶೆಟ್ಟಿ, ಪುಷ್ಕರ್ ಮಲ್ಲಿಕಾರ್ಜುನಯ್ಯ ಕಾಂಬಿನೇಷನ್ ಸಿನಿಮಾ. ಕನ್ನಡದ ಬಹುನಿರೀಕ್ಷಿತ ಚಿತ್ರ ಶುರುವಾಗಿದ್ದು 2018ರಲ್ಲಿ. ಈಗಾಗಲೇ 160 ದಿನಗಳ ಚಿತ್ರೀಕರಣ ಮುಗಿಸಿರುವ ಚಿತ್ರತಂಡಕ್ಕೆ ಇನ್ನೂ 40 ದಿನಗಳ ಶೂಟಿಂಗ್ ಬಾಕಿ ಇದೆ.

  ಕನ್ನಡದಲ್ಲಿ ಬಹುಶಃ ಸುದೀರ್ಘ ಅವಧಿ ಶೂಟಿಂಗ್ ಆದ ಸಿನಿಮಾ ಎಂಬ ಕ್ರೆಡಿಟ್ಟು, ರಿಲೀಸ್‍ಗೆ ಮೊದಲೇ ಸಿಗಲಿದೆ. 80ರ ದಶಕದ ಕಥೆಯಾಗಿರುವ ಕಾರಣ, ಚಿತ್ರವನ್ನು ಬಹುತೇಕ ಸೆಟ್‍ಗಳಲ್ಲೇ ಮಾಡಲಾಗಿದೆ. ಆಗಿನ ಕಾಲವನ್ನು ಮರು ನಿರ್ಮಿಸಲಾಗಿದೆ. ಮೋಹನ್ ಬಿ.ಕೆರೆ ಸ್ಟುಡಿಯೋ, ಕಂಠೀರವ ಸ್ಟುಡಿಯೋಗಳಲ್ಲಿ ಸೆಟ್ ಹಾಕಿದ್ದು, ಶೇ.90ರಷ್ಟು ಚಿತ್ರೀಕರಣ ಮುಗಿದಿದೆ. 

  ಶಾನ್ವಿ ಶ್ರೀವಾಸ್ತವ್, ರಕ್ಷಿತ್ ಶೆಟ್ಟಿಗೆ ಜೋಡಿಯಾಗಿದ್ದಾರೆ. ಚಿತ್ರವನ್ನು ಜುಲೈನಲ್ಲಿ ತೆರೆಗೆ ತರುವ ಪ್ಲಾನ್ ಹಾಕಿದ್ದಾರೆ ಪುಷ್ಕರ್ ಮಲ್ಲಿಕಾರ್ಜುನಯ್ಯ.

 • ಅವನೇ ಶ್ರೀಮನ್ನಾರಾಯಣ ಪ್ರೇಕ್ಷಕರಿಗೆ ರಸಾಯನ

  avana srimannarayana image

  ಸತತ 3 ವರ್ಷ ಕಾದಿದ್ದ.. ಕಾಯಿಸಿದ್ದ ಸಿನಿಮಾದ ಟ್ರೇಲರ್ ಹೊರಬಂದಿದೆ. ಅವನೇ ಶ್ರೀಮನ್ನಾರಾಯಣ. ಪ್ರೇಕ್ಷಕರು ಥ್ರಿಲ್ ಆಗುವಂತೆಯೇ ಟ್ರೇಲರ್ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಸಚಿನ್. ರಕ್ಷಿತ್ ಶೆಟ್ಟಿ, ಪುಷ್ಕರ್ ಕಾಂಬಿನೇಷನ್ ಮತ್ತೊಮ್ಮೆ ಮೋಡಿ ಮಾಡುವ ಹಾದಿಯಲ್ಲಿ ಹೆಜ್ಜೆಯಿಟ್ಟಿದೆ. ಒಟ್ಟು 5 ಭಾಷೆಗಳಲ್ಲಿ.

  ಶಂಕರ್ ನಾಗ್ ಚಿತ್ರಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿರ್ಮಾಪಕರಾದ ಪುಷ್ಕರ್ ಮಲ್ಲಿಕಾರ್ಜುನಯ್ಯ, ಪ್ರಕಾಶ್ ಗೌಡ, ನಾಯಕಿ ಶಾನ್ವಿ, ನಟರಾದ ರಿಷಬ್ ಶೆಟ್ಟಿ, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್, ಚರಣ್ ರಾಜ್.. ಹೀಗೆ ಇಡೀ ಚಿತ್ರತಂಡವೇ ಅಲ್ಲಿತ್ತು.

  ರಾಜವಂಶ, ದರೋಡೆಗ್ಯಾಂಗ್, ಕೌಬಾಯ್ ಪೊಲೀಸ್, ಆಟ-ಹುಡುಗಾಟ, ನಿಧಿಯ ಹುಡುಕಾಟ, ಯುದ್ಧ.. ಹೀಗೆ ಹಲವು ಅಂಶಗಳು ಇರುವ ಸಂಪೂರ್ಣ ಕಾಲ್ಪನಿಕ ಸಿನಿಮಾ ಅವನೇ ಶ್ರೀಮನ್ನಾರಾಯಣ.

  ತೆಲುಗಿನಲ್ಲಿ ನಾನಿ, ತಮಿಳಿನಲ್ಲಿ ಧನುಷ್, ಮಲಯಾಳಂನಲ್ಲಿ ನಿವಿನ್ ಪೌಲ್ ಚಿತ್ರದ ಟ್ರೇಲರ್ ರಿಲೀಸ್ ಮಾಡಿದ್ದಾರೆ. ಟ್ರೇಲರ್ ರಿಲೀಸ್ ವೇಳೆ ಭಾವುಕರಾದ ರಕ್ಷಿತ್ ಶೆಟ್ಟಿ ಚಿತ್ರದ ಬಗ್ಗೆ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ

 • ಅವನೇ ಶ್ರೀಮನ್ನಾರಾಯಣ ಬುಕ್ಕಿಂಗ್ ಶುರು

  avane srimmnarayana booking starts

  ಅವನೇ ಶ್ರೀಮನ್ನಾರಾಯಣ ರಿಲೀಸ್ ಇರೋದು ಮುಂದಿನ ವಾರ. ಇನ್ನೂ 10 ದಿನ ಬಾಕಿಯಿದೆ. ಆದರೆ ರಕ್ಷಿತ್ ಶೆಟ್ಟಿ ಹ್ಯಾಂಡ್ಸಪ್ ಹವಾ ಹೇಗಿದೆಯೆಂದರೆ.. ಆಗಲೇ ಬುಕ್ಕಿಂಗ್ ಶುರುವಾಗಿಬಿಟ್ಟಿದೆ. ಬೆಂಗಳೂರಿನಲ್ಲಿ ಎರಡು ಥಿಯೇಟರುಗಳಲ್ಲಿ ಮಾತ್ರವೇ ಸದ್ಯಕ್ಕೆ ಅಡ್ವಾನ್ಸ್ ಬುಕ್ಕಿಂಗ್ ಇದ್ದು, ಉಳಿದ ಥಿಯೇಟರುಗಳಲ್ಲಿಯೂ ಇನ್ನೇನು ಶುರುವಾಗಲಿದೆ.

  ರಕ್ಷಿತ್ ಶೆಟ್ಟಿ, ಶಾನ್ವಿ ಶ್ರೀವಾತ್ಸವ್ ಜೋಡಿಯ ಮೋಡಿ ಹಾಗಿದೆ. ಅದು ತೆಲುಗಿನಲ್ಲಿ ಮೋಡಿ ಮಾಡುತ್ತಿದೆ. ಜೊತೆಗೆ ದಿಲ್ ರಾಜುರಂಥ ಖ್ಯಾತ ವಿತರಕ ತೆಲುಗಿನಲ್ಲಿ ರಿಲೀಸ್ ಮಾಡುತ್ತಿದ್ದು, ಅಲ್ಲಿ ಶಾನ್ವಿ ಶ್ರೀವಾತ್ಸವ್ ಪರಿಚಿತ ಮುಖ. ಹೀಗಾಗಿ ತೆಲುಗಿನಲ್ಲೂ ಒಳ್ಳೆಯ ಓಪನಿಂಗ್ ಸಿಗುತ್ತಿದೆ. ಇದೆಲ್ಲದರಿಂದಾಗಿ ಹ್ಯಾಪಿಯಾಗಿರೋದು ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ.

 • ಅವನೇ ಶ್ರೀಮನ್ನಾರಾಯಣ ಮ್ಯಾಜಿಕ್ ಬಾಕ್ಸ್

  avane srimnnarayana magic box

  ಅವನೇ ಶ್ರೀಮನ್ನಾರಾಯಣ ಮ್ಯಾಜಿಕ್ ಬಾಕ್ಸ್. ಅಲ್ಲಿ ರಕ್ಷಿತ್ ಶೆಟ್ಟಿ ಇದ್ದಾರೆ. ನೀವು ಅವರ ಜೊತೆ ಫೋಟೋ ತೆಗೆಸಿಕೊಳ್ಳಬಹುದು. ಇದು ಒರಾಯನ್ ಮಾಲ್‌ನಲ್ಲಿರೋ ಮ್ಯಾಜಿಕ್ ಬಾಕ್ಸ್.

  ಇಲ್ಲಿ ನಾರಾಯಣದ ಪೋಸಿನಲ್ಲಿ ರಕ್ಷಿತ್ ಶೆಟ್ಟಿ ನಿಂತಿದ್ದಾರೆ. ಒಂದಲ್ಲ, ನಾಲ್ಕು ಭಂಗಿಗಳಲ್ಲಿ. ನೀವು ಹೋಗಿ.. ನಿಮಗೆ ಬೇಕಾದ ಪೋಸ್ ಆರಿಸಿಕೊಳ್ಳಿ. ಚಿತ್ರದ ಟೈಟಲ್ಲಿನ ಜೊತೆಗೆ ನಿಮಗೆ ಅವರೇ ಒಂದು ಫೋಟೋ ತೆಗೆದು, ನಿಮ್ಮ ಮೊಬೈಲಿಗೆ, ವಾಟ್ಸಪ್ಪಿಗೆ, ಮೇಯ್ಲ್ಗೆ ಕಳಿಸಿಕೊಡ್ತಾರೆ.

  ಒಬ್ಬರಾದರೂ ಓಕೆ.. ಗುಂಪಲ್ಲಾದರೂ ಓಕೆ.. ಸದ್ಯಕ್ಕೆ ಈಗ ಒರಾಯನ್ ಮಾಲ್‌ನಲ್ಲಿ ಶುರುವಾಗಿದೆ. ಇನ್ನೂ ಕೆಲವು ನಗರಗಳ ವಿವಿಧ ಮಾಲ್‌ಗಳಿಗೆ ಮ್ಯಾಜಿಕ್ ಬಾಕ್ಸ್ ಹೊರಡುತ್ತಿದೆ.

 • ಅವನೇ ಶ್ರೀಮನ್ನಾರಾಯಣ ಸೂಪರ್ ಹಿಟ್

  avane srimannarayana teaser is super hit

  ರಕ್ಷಿತ್ ಶೆಟ್ಟಿ ಅಭಿನಯದ ಅವನೇ ಶ್ರೀಮನ್ನಾರಾಯಣ ಚಿತ್ರದ 2ನೇ ಪೋಸ್ಟರ್, ಆನ್‍ಲೈನ್‍ನಲ್ಲಿ ಸೂಪರ್ ಹಿಟ್ ಆಗಿದೆ. ಪರಂವಾ ಸ್ಟುಡಿಯೋಸ್ ಬ್ಯಾನರ್‍ನ ಸಿನಿಮಾ ಟೀಸರ್ ಬಿಡುಗಡೆಯಾದ ಕ್ಷಣದಿಂದ ಈಗಿನವರೆಗೆ ಯೂಟ್ಯೂಬ್ ಟ್ರೆಂಡಿಂಗ್‍ನಲ್ಲಿ ನಂ.1 ಸ್ಥಾನದಲ್ಲಿದೆ. 10 ಲಕ್ಷಕ್ಕೂ ಹೆಚ್ಚು ಜನ ಟೀಸರ್ ನೋಡಿದ್ದಾರೆ.

  ಟೀಸರ್‍ನ ಮೇಕಿಂಗ್ ಸ್ಟೈಲ್, ಅಚ್ಯುತ್ ಕುಮಾರ್ ಡೈಲಾಗ್ ಕಿಚ್ಚು ಹಚ್ಚಿಸಿದೆ. ಶಾನ್ವಿ ಶ್ರೀವಾಸ್ತವ್ ಹೀರೋಯಿನ್ ಆಗಿರುವ ಚಿತ್ರಕ್ಕೆ ಇನ್ನಷ್ಟು ಮೆರುಗು ನೀಡಿರುವುದು ಅಜನೀಶ್ ಲೋಕನಾಥ್ ಸಂಗೀತ. ಸಚಿನ್ ನಿರ್ದೇಶನದ ಸಿನಿಮಾಗೆ ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಪಕ.

 • ಅವನೇ ಶ್ರೀಮನ್ನಾರಾಯಣ ಸೃಷ್ಟಿಕರ್ತ ಹೇಳಿದ್ದೇನು..?

  avane srimnannarayana director talks about the mpvie

  ಜಗತ್ತಿಗೆಲ್ಲ ತಂದೆ ನಾರಾಯಣ. ಸೃಷ್ಟಿಕರ್ತ  ಬ್ರಹ್ಮನ ತಂದೆಯೂ ನಾರಾಯಣ. ಆದರೆ, ಅವನೇ ಶ್ರೀಮನ್ನಾರಾಯಣನ ಸೃಷ್ಟಿಕರ್ತ ಮಾತ್ರ ಸಚಿನ್ ರವಿ. ಕನ್ನಡದ ಬಹುದೊಡ್ಡ ಬಜೆಟ್‍ನ ಸಿನಿಮಾ ನಿರ್ದೇಶಿಸಿರುವ ಸಚಿನ್ ರವಿಗೆ ಇದು ಮೊದಲ ಸಿನಿಮಾ.

  ಕಳೆದ ಏಳೆಂಟು ತಿಂಗಳಿಂದ ಎಡಿಟಿಂಗ್ ರೂಂನ್ನೇ ಮನೆ ಮಾಡಿಕೊಂಡಿರುವ ಸಚಿನ್ ಅವರಿಗೆ ಮೊದಲ ಚಿತ್ರ ರಿಲೀಸ್ ಎಕ್ಸೈಟ್‍ಮೆಂಟ್ ಬೇರೆಯೇ ಇದೆ.

  ಸ್ಕ್ರಿಪ್ಟ್‍ಗಾಗಿ ಒಂದು ವರ್ಷ ತೆಗೆದುಕೊಂಡಿದ್ದೇವೆ ಎನ್ನುವ ಸಚಿನ್‍ಗೆ ಚಿತ್ರದ ಒನ್‍ಲೈನ್ ಹೊಳೆದಿದ್ದು ಉಳಿದವರು ಕಂಡಂತೆ ಚಿತ್ರದ ಶೂಟಿಂಗ್ ವೇಳೆ. ಆ ಚಿತ್ರಕ್ಕೆ ಎಡಿಟರ್ ಆಗಿದ್ದ ಸಚಿನ್ ರವಿ, ಇದು ಕನ್ನಡದ ಅತ್ಯಂತ ವಿಶಿಷ್ಟ ಸಿನಿಮಾ ಎನ್ನುತ್ತಾರೆ.

  ಈ ಚಿತ್ರದ ನಂತರ ರಕ್ಷಿತ್ ಶೆಟ್ಟಿ ಅವರಿಗೆ ಮಕ್ಕಳು ದೊಡ್ಡ ಫ್ಯಾನ್ಸ್ ಆಗುತ್ತಾರೆ. ಶಾನ್ವಿ ಶ್ರೀವಾತ್ಸವ್ ಅವರಿಗೆ ಬೇರೆಯದ್ದೇ ಆದ ಇಮೇಜ್ ಸೃಷ್ಟಿಯಾಗಲಿದೆ ಎನ್ನುವ ವಿಶ್ವಾಸ ಸಚಿನ್ ಅವರಿಗಿದೆ. ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದ ಅವನೇ ಶ್ರೀಮನ್ನಾರಾಯಣ ಶುಕ್ರವಾರ ಬರುತ್ತಿದೆ.

 • ಅವನೇ ಶ್ರೀಮನ್ನಾರಾಯಣ.. ಸೆನ್ಸಾರ್ ಮಂದಿ ನೋಡಿದ್ರಣ್ಣ

  avane srimannarayana passed censor exam

  ರಕ್ಷಿತ್ ಶೆಟ್ಟಿ, ಶಾನ್ವಿ ಶ್ರೀವಾತ್ಸವ್ ಅಭಿನಯದ ಅವನೇ ಶ್ರೀಮನ್ನಾರಾಯಣ ಸೆನ್ಸಾರ್ ಪಾಸ್ ಆಗಿದೆ. ಯು/ಎ ಸರ್ಟಿಫಿಕೇಟ್ ಸಿಕ್ಕಿದೆ. ವಿಶೇಷವೆಂದರೆ ಚಿತ್ರದಲ್ಲಿ ಯಾವುದೇ ಬೀಪ್, ಮ್ಯೂಟ್‌ಗಳನ್ನು ಸೆನ್ಸಾರ್ ಮಂಡಳಿಯವರು ಕೊಟ್ಟಿಲ್ಲ. ಅಷ್ಟೇ ಅಲ್ಲ, ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಸರ್ಟಿಫಿಕೇಟ್ ಕೊಟ್ಟಿದ್ದಾರೆ.

  ಹೀಗಾಗಿ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ, ನಿರ್ದೇಶಕ ಸಚಿನ್ ಸೇರಿದಂತೆ ಇಡೀ ಚಿತ್ರತಂಡ ಫುಲ್ ಹ್ಯಾಪಿ. ಇದರ ಜೊತೆಯಲ್ಲೇ ಹ್ಯಾಂಡ್ಸಪ್ ಟ್ರೆಂಡಿAಗ್‌ನಲ್ಲಿ ಕಂಟಿನ್ಯೂ ಆಗಿದ್ದು, ಇಡೀ ಟೀಂ ಖುಷ್ ಖುಷಿಯಾಗಿದೆ.

 • ಅವನೇ ಶ್ರೀಮನ್ನಾರಾಯಣದ ಇಂಟ್ರೊಡಕ್ಷನ್ ಸಾಂಗ್ ಸ್ಪೆಷಲ್

  avane srimnarayana introduction song speciality

  ಅವನೇ ಶ್ರೀಮನ್ನಾರಾಯಣ ಚಿತ್ರದ ಮೊದಲ ಹಾಡಿದು. ಟ್ರೇಲರ್, ಟೀಸರ್ ಮೂಲಕವೇ ಹವಾ ಸೃಷ್ಟಿಸಿದ್ದ ಎಎಸ್‌ಎನ್ ಚಿತ್ರದ ಮೊದಲ ಹಾಡು ನಾಯಕನ  ಇಂಟ್ರೊಡಕ್ಷನ್ ಸಾಂಗ್. ಇಡೀ ಚಿತ್ರವೇ ಭಾರಿ ಬಜೆಟ್ಟಿನದ್ದು. ಆದರೆ, ಈ ಹಾಡು ಆ ಅದ್ಧೂರಿ ಬಜೆಟ್ಟಿನ ಕೇಕ್ ಮೇಲಿನ ಹಣ್ಣಿನ ಹಾಗೆ.

  ಇದು ಸಿನಿಮಾದ ಮೊದಲ ಹಾಡು. ನಾಯಕನ ಮೇಲೆಯೇ ಕೇಂದ್ರೀಕರಿಸಿರುವ ಸ್ಪೆಷಲ್ ಸಾಂಗ್.

  ಇದೊAದೇ ಹಾಡಿಗಾಗಿ ಸ್ಪೆಷಲ್ ಸೆಟ್ಟಿನಲ್ಲಿ 20 ದಿನಗಳ ಶೂಟಿಂಗ್ ಮಾಡಿದ್ದಾರೆ ನಿರ್ದೇಶಕ ಸಚಿನ್.

  ಹಾಡಿಗೆ ಕನ್ನಡದಲ್ಲಿ ನಾಗಾರ್ಜುನ ಶರ್ಮ, ತೆಲುಗಿನಲ್ಲಿ ರಾಮಜೋಗಯ್ಯ ಶಾಸ್ತಿç, ತಮಿಳಿನಲ್ಲಿ ವಿವೇಕ್, ಯುಗಭಾರತಿ, ಅರುಣ್ ರಾಜ್, ಕಾಮರಾಜ್, ಹಿಂದಿಯಲ್ಲಿ ಶೆಲ್ಲಿ, ಮಲಯಾಳಂನಲ್ಲಿ ಅಖಿಲ್ ಎಂ.ಬೋಸ್ ಸಾಹಿತ್ಯ ರಚಿಸಿದ್ದಾರೆ.

  ಈ ಹಾಡಿನಲ್ಲಿ ಕಥೆಯ ಥೀಮ್ ಕೂಡಾ ಇದೆ.

  ಅಜನೀಶ್ ಲೋಕನಾಥ್ ಅದ್ಭುತ ಮ್ಯೂಸಿಕ್ ಕೊಟ್ಟಿದ್ದಾರೆ.

  ಕನ್ನಡದಲ್ಲಿ ಇದೇ ಮೊದಲ ಬಾರಿಗೆ ಇಷ್ಟೊಂದು ಅದ್ಧೂರಿ ಮೇಕಿಂಗ್‌ನ ಹಾಡು 5 ಭಾಷೆಗಳಲ್ಲಿ ಬರುತ್ತಿದೆ ಎಂದು ಹೆಮ್ಮೆಯಿಂದ ಹೇಳಿಕೊಳ್ತಾರೆ ಪುಷ್ಕರ್ ಮಲ್ಲಿಕಾರ್ಜುನಯ್ಯ

 • ಅವನೇ ಶ್ರೀಮನ್ನಾರಾಯಣದಲ್ಲಿ ಕಳೆದುಕೊಂಡಿದ್ದು ಎಷ್ಟು ಕೋಟಿ..?

  ಅವನೇ ಶ್ರೀಮನ್ನಾರಾಯಣದಲ್ಲಿ ಕಳೆದುಕೊಂಡಿದ್ದು ಎಷ್ಟು ಕೋಟಿ..?

  ಅವನೇ ಶ್ರೀಮನ್ನಾರಾಯಣ. 2019ರಲ್ಲಿ ರಿಲೀಸ್ ಆದ ಸಿನಿಮಾ. ತಕ್ಕಮಟ್ಟಿಗೆ ಸದ್ದು ಮಾಡಿದ ಚಿತ್ರ, ಟೆಕ್ನಿಕಲಿ ಸ್ಟ್ರಾಂಗ್ ಇತ್ತು. ಪಂಚಭಾಷೆಗಳಲ್ಲಿ ರಿಲೀಸ್ ಆಗಿದ್ದ ಸಿನಿಮಾ, ಕನ್ನಡದಲ್ಲಿ ಹಿಟ್ ಚಿತ್ರಗಳ ಸಾಲಿಗೇ ಸೇರಿತ್ತು. ಆದರೆ, ಆ ಚಿತ್ರದಲ್ಲಿ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಲಾಸ್ ಮಾಡಿಕೊಂಡರಾ..?

  ಅವನೇ ಶ್ರೀಮನ್ನಾರಾಯಣ ಚಿತ್ರ ನಿರ್ಮಾಪಕರಿಗೆ ಲಾಸ್ ಮಾಡಿದ ಚಿತ್ರವಲ್ಲ. ಆದರೆ, ಚಿತ್ರಕ್ಕಾಗಿ ತಂದಿದ್ದ ಸಾಲದ ಮೇಲಿನ ಬಡ್ಡಿಯೂ ಸಾಲದಷ್ಟೇ ಬೆಳೆದ ಕಾರಣ ಕಷ್ಟವಾಯ್ತು. ಚಿತ್ರದ ನಿರ್ಮಾಪಕರಿಗೆ ರಕ್ಷಿತ್ ಶೆಟ್ಟಿ 20 ಕೋಟಿ ಕೊಟ್ಟರು. ತಂತ್ರಜ್ಞರಿಗೆ ಸಂಭಾವನೆಯನ್ನು ರಕ್ಷಿತ್ ಅವರೇ ಕೊಟ್ಟರು. 777 ಚಾರ್ಲಿ ಮತ್ತು ಸಪ್ತಸಾಗರದಾಚೆ ಎಲ್ಲೋ ಚಿತ್ರಗಳಿಗೆ ಪುಷ್ಕರ್ ಮಲ್ಲಿಕಾರ್ಜುನಯ್ಯ ಹೂಡಿದ್ದ ಹಣವನ್ನು ವಾಪಸ್ ಕೊಟ್ಟಿದ್ದಾರೆ. ಕೋವಿಡ್ ಕಷ್ಟದಲ್ಲಿ ತಂಡದಲ್ಲಿದ್ದವರಿಗೆ ತಲಾ 5 ಸಾವಿರ ರೂ. ನೀಡಿ ಕಷ್ಟಕ್ಕೆ ನೆರವಾಗಿದ್ದಾರೆ. ಇದೆಲ್ಲವನ್ನೂ ಹೇಳಿರೋದು ರಿಷಬ್ ಶೆಟ್ಟಿ.

  ಪುಷ್ಕರ್ ಮಲ್ಲಿಕಾರ್ಜುನಯ್ಯ ಸದಭಿರುಚಿಯ ಮಹತ್ವಾಕಾಂಕ್ಷಿ ನಿರ್ಮಾಪಕ ಎನ್ನುವ ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ ನೆರವು ನೀಡಿದ್ದನ್ನು ನಿರ್ಮಾಪಕರಿಗೆ ನೆರವು ನೀಡುವ ಒಳ್ಳೆಯತನಕ್ಕೆ ಸಾಕ್ಷಿ ಎನ್ನುತ್ತಾರೆ.

  20 ಕೋಟಿಯನ್ನು ರಕ್ಷಿತ್ ಶೆಟ್ಟಿ ನೀಡಿರುವುದು ನಿಜ ಎನ್ನುವ ಪುಷ್ಕರ್ ಮಲ್ಲಿಕಾರ್ಜುನಯ್ಯ ಚಿತ್ರದಿಂದ ಲಾಸ್ ಆಯಿತಾ.. ಅಥವಾ ನಷ್ಟವಾಯಿತಾ..? ಎಂಬ ಪ್ರಶ್ನೆಗೆ ಕರಾರುವಾಕ್ ಉತ್ತರ ಹೇಳಲ್ಲ. ಸದ್ಯಕ್ಕವರು ಅವರದೇ ಬ್ಯಾನರ್`ನ ಅವತಾರ ಪುರುಷ, ಟೆನ್ ಮತ್ತು ಮಲಯಾಳಂ ಚಿತ್ರವೊಂದರ ಬಿಡುಗಡೆಯಲ್ಲಿ ಬ್ಯುಸಿಯಾಗಿದ್ದಾರೆ.

 • ಅವನೇ ಶ್ರೀಮನ್ನಾರಾಯಣನ ಎದುರು ಬರೋ ಸ್ಟಾರ್ ಸಿನಿಮಾಗಳೆಷ್ಟು..?

  will avane srimnarayana face big star fight at box office

  ಅವನೇ ಶ್ರೀಮನ್ನಾರಾಯಣ ರಿಲೀಸ್ ಡೇಟ್ ಫಿಕ್ಸ್ ಆದ ಬೆನ್ನಲ್ಲೇ ವರ್ಷದ ಕೊನೆಯ ತಿಂಗಳು ಚಿತ್ರಮಂದಿರಗಳಲ್ಲಿ ಮಹಾಯುದ್ಧವೇ ನಡೆಯಲಿದೆಯಾ ಎಂಬ ಅನುಮಾನ ಸೃಷ್ಟಿಸಿದೆ. ಕಾರಣ ಇಷ್ಟೆ.. ಅವನೇ ಶ್ರೀಮನ್ನಾರಾಯಣ ಸಿನಿಮಾ ದೇಶಾದ್ಯಂತ ಸ್ಟಾರ್ ನಟರ ಸಿನಿಮಾಗಳನ್ನು ಎದುರಿಸಿಕೊಂಡೇ ಬರಬೇಕು.

  ಡಿಸೆಂಬರ್ 25ಕ್ಕೆ ಅವನೇ ಶ್ರೀಮನ್ನಾರಾಯಣ ಬಂದರೆ, ಅದಕ್ಕೆ ಕೆಲವು ದಿನ ಮುನ್ನ ಕ್ರಿಸ್ ಮಸ್ ಹಬ್ಬಕ್ಕೆ ಬರೋದು ದಬಾಂಗ್ 3. ಸಲ್ಮಾನ್ ಖಾನ್, ಸುದೀಪ್ ಕಾಂಬಿನೇಷನ್ನಿನ ಸಿನಿಮಾ. ಕನ್ನಡದಲ್ಲೂ ಡಬ್ ಆಗಿ ಬರುತ್ತಿರುವ ಈ ಚಿತ್ರಕ್ಕೆ ಸಲ್ಮಾನ್ ಖಾನ್ ಅವರೇ ಡಬ್ಬಿಂಗ್ ಮಾಡಿದ್ರೆ.. ಅದರ ಹವಾನೇ ಬೇರೆ.

  ಇನ್ನು ಧ್ರುವ ಸರ್ಜಾ ಅಭಿನಯದ ಪೊಗರು ಕೂಡಾ ಡಿಸೆಂಬರ್ ತಿಂಗಳಲ್ಲಿ ರಿಲೀಸ್ ಎನ್ನುವ ಮಾತುಗಳಿವೆ. ಅತ್ತ ರಾಬರ್ಟ್ ಕೂಡಾ ಡಿಸೆಂಬರ್ ತಿಂಗಳನ್ನೇ ಸೆಲೆಕ್ಟ್ ಮಾಡಿಕೊಂಡಿದೆಯಂತೆ. ಎಲ್ಲವೂ ಹೀಗೆಯೇ ಆಗಿಬಿಟ್ಟರೆ, ದೊಡ್ಡ ಸ್ಟಾರ್ ಸಮರವೇ ನಡೆಯಲಿದೆ ಎಂಬುದು ಪಕ್ಕಾ.

  ರಕ್ಷಿತ್ ಶೆಟ್ಟಿ, ಶಾನ್ವಿ ಶ್ರೀವಾಸ್ತವ್ ಅಭಿನಯದ ಸಿನಿಮಾವನ್ನು ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಪ್ಯಾನ್ ಇಂಡಿಯಾ ಲೆವೆಲ್ಲಿನಲ್ಲಿ ರಿಲೀಸ್ ಮಾಡುತ್ತಿದ್ದಾರೆ. ಕನ್ನಡವಷ್ಟೇ ಅಲ್ಲದೆ, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂನಲ್ಲೂ ಸಿನಿಮಾ ರಿಲೀಸ್ ಆಗುತ್ತಿದೆ.

 • ಅವನೇ ಶ್ರೀಮನ್ನಾರಾಯಣನಿಗೆ ಒಂದೇ ಡ್ರೆಸ್ಸಾ..?

  secret shetty's costume secret in avana srimananarayana

  ರಕ್ಷಿತ್ ಶೆಟ್ಟಿ-ಶಾನ್ವಿ ಶ್ರೀವಾಸ್ತವ್ ಪ್ರಧಾನ ಪಾತ್ರದಲ್ಲಿರುವ ಅವನೇ ಶ್ರೀಮನ್ನಾರಾಯಣ, ಆಗಸ್ಟ್‍ನಲ್ಲಿ ತೆರೆಗೆ ಬರಲಿದೆ. ಕನ್ನಡವೂ ಸೇರಿದಂತೆ 5 ಭಾಷೆಗಳಲ್ಲಿ ಏಕಕಾಲದಲ್ಲಿ ರಿಲೀಸ್ ಆಗಲಿದೆ ಎನ್ನುವುದೆಲ್ಲ ಈಗ ಕನ್ನಡಿಗರಿಗೆ ಗೊತ್ತು. ಆದರೆ, ಇಷ್ಟು ದೊಡ್ಡ ಅದ್ಧೂರಿ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿಯವರಿಗೆ ಇರೋದು ಒಂದೇ ಡ್ರೆಸ್ಸು. ತಮಾಷೆ ಅಲ್ಲ ಸ್ವಾಮಿ.. ಇದು ಸತ್ಯ.

  ಚಿತ್ರದ 99% ದೃಶ್ಯಗಳಲ್ಲಿ ರಕ್ಷಿತ್ ಶೆಟ್ಟಿ ಪೊಲೀಸ್ ಯೂನಿಫಾರ್ಮಲ್ಲೇ ಇರ್ತಾರೆ ಎಂದು ಹೇಳಿರುವುದು ನಿರ್ಮಾಪಕರಲ್ಲಿ ಒಬ್ಬರಾದ ಪುಷ್ಕರ್ ಮಲ್ಲಿಕಾರ್ಜುನಯ್ಯ. ಚಿತ್ರದಲ್ಲಿ ಒಂದು ಹೋಳಿ ಹಾಡಿದ್ದು, ಆ ಹಾಡಿನಲ್ಲಿ ಮಾತ್ರ ರಕ್ಷಿತ್ ಶೆಟ್ಟಿ ಬಣ್ಣಬಣ್ಣದ ಹುಡುಗನಾಗಿ ಕಾಣಿಸಿಕೊಂಡಿದ್ದಾರಂತೆ.

  ಹೋಳಿ ದೃಶ್ಯಗಳು ತುಂಬಾ ರೊಮ್ಯಾಂಟಿಕ್ ಆಗಿ ಬಂದಿವೆ. ಇಮ್ರಾನ್ ಸರ್ದಾರಿಯಾ ಒಳ್ಳೆಯ ನೃತ್ಯ ಸಂಯೋಜಿಸಿದ್ದಾರೆ. ಚಿತ್ರೀಕರಣ ಮುಗಿದಿದ್ದು ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಚುರುಕುಗೊಳ್ಳಲಿವೆ.

 • ಅವನೇ ಶ್ರೀಮನ್ನಾರಾಯಣನಿಗೆ ಕನ್ನಡ ಚಿತ್ರರಂಗವೇ ಬಹುಪರಾಕ್

  avane srimananrayana is appreciated by sandalwood stars

  ಅವನೇ ಶ್ರೀಮನ್ನಾರಾಯಣ ಟ್ರೇಲರ್ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದೆ. ಇದಕ್ಕಾಗಿಯೇ ಕಾಯುತ್ತಿದ್ದರೇನೋ ಎಂಬಂತೆ ಚಿತ್ರದ ಟ್ರೇಲರ್ನ್ನು ನೋಡಿ ನೋಡಿ ಆನಂದಿಸುತ್ತಿದ್ದಾರೆ. ವೀಕ್ಷಕರ ಸಂಖ್ಯೆ 9 ಮಿಲಿಯನ್ ದಾಟಿದೆ. ಲೈಕ್ಸ್ ಕೂಡಾ ಲಕ್ಷಗಳ ಲೆಕ್ಕದಲ್ಲಿದೆ. ರಕ್ಷಿತ್ ಶೆಟ್ಟಿ, ಶಾನ್ವಿ ಶ್ರೀವಾಸ್ತವ್, ನಿರ್ದೇಶಕ ಸಚಿನ್, ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಮುಖದಲ್ಲಿ ಗೆಲುವಿನ ಮುಗುಳ್ನಗೆ. ಅದಕ್ಕಿಂತಲೂ ಹೆಚ್ಚು ಖುಷಿ ಕೊಟ್ಟಿರುವುದು ಚಿತ್ರರಂಗದವರು ಅದನ್ನು ಸ್ವಾಗತಿಸಿರುವ ರೀತಿ.

  ದಕ್ಷಿಣ ಭಾರತದ ಸ್ಟಾರ್ ನಟರಾದ ಧನುಷ್, ನಾನಿ, ನಿವಿನ್ ಪೌಲ್ ಚಿತ್ರದ ಟ್ರೇಲರ್ ರಿಲೀಸ್ ಮಾಡಿದ್ದರು. ಇದರ ಜೊತೆಯಲ್ಲೇ ಪುನೀತ್ ರಾಜ್‌ಕುಮಾರ್, ಕಿಚ್ಚ ಸುದೀಪ್ ಮತ್ತು ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ನಿರ್ಮಾಪಕ ವಿಜಯ್ ಕಿರಗಂದೂರು ಟ್ವೀಟ್ ಮಾಡಿ ಟ್ರೇಲರ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  ಧನುಷ್, ತಮಿಳು ನಟ :ರಕ್ಷಿತ್ ಶೆಟ್ಟಿ ತಂಡಕ್ಕೆ ಅಭಿನಂದನೆಗಳು. ಟ್ರೇಲರ್ನಲ್ಲಿ ಸಾಹಸ, ಫೈಟ್ಸ್ ಎಲ್ಲವೂ ಚೆನ್ನಾಗಿದೆ.

  ನಾನಿ, ತೆಲುಗು ನಟ : ಅವನೇ ಶ್ರೀಮನ್ನಾರಾಯಣ ಟ್ರೇಲರ್ ವಿಭಿನ್ನವಾಗಿದೆ. ದೃಶ್ಯಗಳು ಕೂಡ ಚೆನ್ನಾಗಿದೆ.

  ಪುನೀತ್ ರಾಜ್‌ಕುಮಾರ್ : ಅವನೇ ಶ್ರೀಮನ್ನಾರಾಯಣ ಟ್ರೇಲರ್ ಚೆನ್ನಾಗಿದೆ. ಇಡೀ ತಂಡಕ್ಕೆ ಧನ್ಯವಾದಗಳು.

  ಕಿಚ್ಚ ಸುದೀಪ್ : ಚಿತ್ರ ತಂಡದ ಅದ್ಭುತ ಕೆಲಸ ಕಾಣುತ್ತಿದೆ. ಒಳ್ಳೆಯ ಟ್ರೇಲರ್

  ರಿಷಬ್ ಶೆಟ್ಟಿ : ಗೆಳೆಯನ ಗೆಲುವಿನ ಸಂಭ್ರಮ ನೋಡಲು ಕಾಯುತ್ತಿದ್ದೇನೆ.

  ಪ್ರಶಾಂತ್ ನೀಲ್ : ಟ್ರೇಲರ್ನಲ್ಲಿ ಚಿತ್ರತಂಡದ ಶ್ರಮ ಎದ್ದು ಕಾಣುತ್ತಿದೆ. ಹೊಸ ಇತಿಹಾಸ ಸೃಷ್ಟಿಸಲಿ

  ವಿ.ಹರಿಕೃಷ್ಣ : ಅವನೇ ಶ್ರೀಮನ್ನಾರಾಯಣ ತುಂಬ ಹೊಸ ಅನುಭವ ನೀಡುತ್ತಿದೆ. ಪರ್ಫೆಕ್ಟ್  ಮತ್ತು ಎಕ್ಸಲೆಂಟ್

  ಕೆಪಿ ಶ್ರೀಕಾಂತ್ : ಟ್ರೇಲರ್ ತುಂಬ ಕುತೂಹಲಕಾರಿಯಾಗಿದೆ. ಎಎಸ್ಎನ್ ತಂಡಕ್ಕೆ ಶುಭ ಹಾರೈಕೆಗಳು.

  ಹೇಮಂತ್ ರಾವ್ : ರಿಲೀಸ್ವರೆಗೂ ಕಾಯಲು ಆಗುತ್ತಿಲ್ಲ. ಅಷ್ಟು ಕುತೂಹಲಕಾರಿಯಾಗಿದೆ

  ತರುಣ್ ಸುಧೀರ್ : ಚಿತ್ರತಂಡಕ್ಕೆ ಸಿನಿಮಾ ಮೇಲಿರುವ ಪ್ಯಾಷನ್ ಎದ್ದು ಕಾಣುತ್ತಿದೆ. ಕನ್ನಡ ಚಿತ್ರರಂಗದ ಗೌರವವನ್ನು ಈ ಸಿನಿಮಾ ಎತ್ತಿ ಹಿಡಿಯಲಿದೆ

  ವಿಜಯ್ ಕಿರಗಂದೂರು : ರಕ್ಷಿತ್ ಶೆಟ್ಟಿ ಮತ್ತು ಅವನೇ ಶ್ರೀಮನ್ನಾರಾಯಣ ಚಿತ್ರತಂಡಕ್ಕೆ ಶುಭಾಶಯಗಳು

  ನಿರೂಪ್ ಭಂಡಾರಿ : ಚಿತ್ರದ ಪ್ರತಿ ಫ್ರೇಮ್ನಲ್ಲಿಯೂ ಪ್ಯಾಷನ್ ಮತ್ತು ಶ್ರಮ ಕಣ್ಣಿಗೆ ಕಾಣುತ್ತಿದೆ

  ಸಿಂಪಲ್ ಸುನಿ : ಇದರ ರೀಚ್ ನೋಡಿದರೆ, ಹಾಲಿವುಡ್ಗೂ ಡಬ್ ಮಾಡಬಹುದು.

  ಡ್ಯಾನಿಷ್ ಸೇಟ್ : ಕರ್ನಾಟಕದಿಂದ ವಿಶ್ವ ಚಿತ್ರರಂಗಕ್ಕೆ ಇನ್ನೊಂದು ಕೊಡುಗೆ, ಅವನೇ ಶ್ರೀಮನ್ನಾರಾಯಣ

  ಚೇತನ್ ಕುಮಾರ್ : ಕನ್ನಡ ಚಿತ್ರರಂಗ ಪ್ರಜ್ವಲಿಸಲಿದೆ

 • ಅವನೇ ಶ್ರೀಮಾನ್ ರಕ್ಷಿತ್ ಶೆಟ್ಟಿ

  rkahsit shetty had a busy birthday

  ಇದ್ಯಾವುದು.. ಇದೇನು ಹೊಸ ಸಿನಿಮಾನಾ.. ಅಂತಾ ಕನ್‍ಫ್ಯೂಸ್ ಆಗಬೇಡಿ. ಅವನೇ ಶ್ರೀಮನ್ನಾರಾಯಣ ಚಿತ್ರತಂಡ ಈಗ ರಕ್ಷಿತ್ ಶೆಟ್ಟಿ ಮಯವಾಗಿದೆ. ಅದಕ್ಕೆ ಕಾರಣ ರಕ್ಷಿತ್ ಶೆಟ್ಟಿ ಹುಟ್ಟುಹಬ್ಬ. ತಮ್ಮ ಚಿತ್ರದ ನಾಯಕನ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಆಚರಿಸಿರುವ ಚಿತ್ರತಂಡ, ಸಿನಿಮಾದ ಫಸ್ಟ್ ಲುಕ್ ಬಿಡುಗಡೆ ಮಾಡಿದೆ.

  ಈ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಪೊಲೀಸ್. ಆದರೆ, ಎಲ್ಲರಂತಲ್ಲ. ಸದಾ ನಗುತ್ತಾ, ನಗಿಸುತ್ತಾ ಇರುವ ಪಾತ್ರ. ಹೇಳಿದ ಕೆಲಸವೊಂದನ್ನು ಬಿಟ್ಟು, ಮಿಕ್ಕಿದ್ದನ್ನೆಲ್ಲ ಮಾಡುವ ಪೊಲೀಸ್. ಆದರೆ, ಅವನು ಒಂದು ಮಹಾನ್ ಕಾರ್ಯಕ್ಕಾಗಿ ಬದುಕುತ್ತಿರುತ್ತಾನೆ. ಅದೇನು ಅನ್ನೋದು ಚಿತ್ರದ ಸಸ್ಪೆನ್ಸ್. 

  ಸಚಿನ್ ನಿರ್ದೇಶನದ ಚಿತ್ರಕ್ಕೆ ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಪಕರು. ಈಗಾಗಲೇ ಚಿತ್ರದ 33 ದಿನಗಳ ಶೂಟಿಂಗ್ ಆಗಿದೆ. ಇನ್ನೂ 70 ದಿನಗಳ ಶೂಟಿಂಗ್ ಬಾಕಿ ಇದೆ. ಮುಂದಿನ ಚಿತ್ರೀಕರಣವೆಲ್ಲ ಸ್ಟುಡಿಯೋ ಸೆಟ್‍ನಲ್ಲಿ ನಡೆಯಲಿದೆ. ಚಿತ್ರವನ್ನು ಡಿಸೆಂಬರ್‍ಗೆ ತೆರೆಗೆ ತರುವುದು ಪುಷ್ಕರ್ ಮಲ್ಲಿಕಾರ್ಜುನಯ್ಯ ಪ್ಲಾನ್.

  ಈ ಹುಟ್ಟುಹಬ್ಬಕ್ಕೆ ಅವನೇ ಶ್ರೀಮನ್ನಾರಾಯಣ ಚಿತ್ರದ ಫಸ್ಟ್‍ಲುಕ್ ರಿಲೀಸ್ ಆದರೆ, ಇದೇ ದಿನ 777 ಚಾರ್ಲಿ ಚಿತ್ರದ ಮುಹೂರ್ತವೂ ನಡೆಯಲಿದೆ. ಇನ್ನು ಕೆಲವು ದಿನ ರಕ್ಷಿತ್ ಶೆಟ್ಟಿಗೆ ಅವನೇ ಶ್ರೀಮನ್ನಾರಾಯಣ ಚಿತ್ರದಿಂದ ವಿರಾಮ. ಆ ವಿರಾಮದಲ್ಲಿ ಚಾರ್ಲಿಯ ಶೂಟಿಂಗ್. ಹಾಗಂತ ಇಡೀ ನಾರಾಯಣ ಚಿತ್ರತಂಡ ಸುಮ್ಮನೆ ಇರಲ್ಲ. ಅದು ಬಿಡುವೇ ಇಲ್ಲದಂತೆ ಚಿತ್ರದ ಸೆಟ್ ಹಾಕುವ ಕೆಲಸದಲ್ಲಿ ಬ್ಯುಸಿಯಾಗಿದೆ. 

  ಒಟ್ಟಿನಲ್ಲಿ ಈ ಬರ್ತ್ ಡೇಯನ್ನು ರಕ್ಷಿತ್ ಶೆಟ್ಟಿ ಬಿಡುವೇ ಇಲ್ಲದಷ್ಟು ಕೆಲಸ ಹೇರಿಕೊಂಡು ಸೆಲಬ್ರೇಟ್ ಮಾಡುತ್ತಿದ್ದಾರೆ.

 • ಅವರೇ.. ಇವರೇ.. ಶ್ರೀಮನ್ನಾರಾಯಣ ಟ್ರೇಲರ್ ರಿಲೀಸ್ ಮಾಡೋದು..

  avane srimannarayan gets star support

  ತಮಿಳಿನಲ್ಲಿ ಧನುಷ್, ತೆಲುಗಿನಲ್ಲಿ ನಾನಿ, ಮಲಯಾಳಂನಲ್ಲಿ ನಿವಿನ್ ಪೌಲ್ ಅವನೇ ಶ್ರೀಮನ್ನಾರಾಯಣ ಟ್ರೇಲರ್ ರಿಲೀಸ್ ಮಾಡಲಿದ್ದಾರೆ. ಅದೇ.. ಅದೇ ಹೊತ್ತಿನಲ್ಲಿ ಇಲ್ಲಿ ಬೆಂಗಳೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಅವನೇ ಶ್ರೀಮನ್ನಾರಾಯಣದ ಕನ್ನಡ ವರ್ಷನ್ ರಿಲೀಸ್ ಆಗಲಿದೆ. ಎಲ್ಲವೂ ಏಕಕಾಲದಲ್ಲಿ. ಸಮಯ ನವೆಂಬರ್ 28ರಂದು ಸಂಜೆ 4 ಗಂಟೆ.

  ಆ ದಿನ ಸಂಜೆ ನಾಲ್ಕು ರಾಜ್ಯಗಳ ಪತ್ರಕರ್ತರು ಬೆಂಗಳೂರಿನಲ್ಲಿರುತ್ತಾರೆ. ರಕ್ಷಿತ್ ಶೆಟ್ಟಿ, ಪುಷ್ಕರ್ ಮಲ್ಲಿಕಾರ್ಜುನಯ್ಯ ಸಾಹಸಕ್ಕೆ 4 ರಾಜ್ಯಗಳ ಸ್ಟಾರ್‌ಗಳು ಹಾಗೂ ಪತ್ರಕರ್ತರು ಜೊತೆಯಾಗಲಿದ್ದಾರೆ.

  ಅಂದಹಾಗೆ ಚಿತ್ರ 2 ವರ್ಷ ಶೂಟಿಂಗ್ ಆಗಿ ಸಿದ್ಧವಾಗಿರುವಂತದ್ದು. ಕನ್ನಡದಲ್ಲಿ ಇದೊಂದು ದಾಖಲೆ. ಚಿತ್ರದ ನಾಯಕಿ ಶಾನ್ವಿ ಶ್ರೀವಾತ್ಸವ್. ನಿರ್ದೇಶಕ ಸಚಿನ್ ರವಿ. ಚಿತ್ರದ ಕುತೂಹಲದ ಒಂದೊAದೇ ಪುಟಗಳನ್ನು ಚಿತ್ರತಂಡ ತೆರೆಯುತ್ತಿದೆ. ಪ್ರತಿಯೊಂದೂ ಇಂಟರೆಸ್ಟಿAಗ್.

 • ಆಗ ಅಲೆಲೆಲೆ.. ಈಗ ಹ್ಯಾಂಡ್ಸಪ್ ಟ್ರೆಂಡಿAಗ್

  avane srimnarayna's hands up song goes viral

  ಅವನೇ ಶ್ರೀಮನ್ನಾರಾಯಣ ಚಿತ್ರದ ಹ್ಯಾಂಡ್ಸಪ್ ಹಾಡು ಹೊರಬಿದ್ದಿದ್ದೇ ತಡ ಟ್ರೆಂಡಿAಗ್ ಶುರುವಾಗಿದೆ. ರಕ್ಷಿತ್ ಶೆಟ್ಟಿ ಹಾಕಿದ ಹ್ಯಾಂಡ್ಸಪ್ ಚಾಲೆಂಜ್‌ನ್ನು ಅಭಿಮಾನಿಗಳು ಸ್ವೀಕರಿಸಿದ್ದಾರೆ. ಶಾನ್ವಿ ಶ್ರೀವಾತ್ಸವ್ ಅವರೇ ಸ್ಟೆಪ್ ಹಾಕಿದ ಮೇಲೆ ಇನ್ನೇನಿದೆ. ಸಾವಿರಾರು ಅಭಿಮಾನಿಗಳು ಇದು ದೇವರ ಸೃಷ್ಟಿಯ ಅವತಾರ ಎನ್ನುತ್ತಾ ಹ್ಯಾಂಡ್ಸಪ್ ಮಾಡುತ್ತಿದ್ದಾರೆ.

  ಕಿರಿಕ್ ಪಾರ್ಟಿ ಸಿನಿಮಾ ಬಂದಾಗ.. ಬೆಳಗೆದ್ದು ಯಾರ ಮುಖವಾ ನಾನಾನು ನೋಡಿದೆ.. ಕನಸಲ್ಲಿ ಅಲೆಲೆಲೆಲೆ.. ಅನ್ನೋದು ಟ್ರೆಂಡಿAಗ್ ಸೃಷ್ಟಿಸಿತ್ತು. ಈಗ ಹ್ಯಾಂಡ್ಸಪ್. ಅಜನೀಶ್ ಲೋಕನಾಥ್ ಸಂಗೀತ, ಇಮ್ರಾನ್ ಸರ್ದಾರಿಯಾ ಕೊರಿಯೋಗ್ರಫಿ ಪ್ರೇಕ್ಷಕರಿಗೆ ಥ್ರಿಲ್ ಕೊಟ್ಟಿದೆ.

  ಇದನ್ನು ನಾವು ನಿರೀಕ್ಷಿಸಿದ್ದೆವು. ಇದು ಚಿತ್ರದ ಸಿಗ್ನೇಚರ್ ಟ್ಯೂನ್ ಮತ್ತು ಸ್ಟೆಪ್. ಈಗ ಜನರೇ ತಮ್ಮ ತಮ್ಮ ಗೆಳೆಯ, ಗೆಳತಿಯರಿಗೆ ಚಾಲೆಂಜ್ ಹಾಕ್ಕೊಂಡು ಸ್ಟೆಪ್‌ನ್ನು ಜನಪ್ರಿಯ ಮಾಡುತ್ತಿದ್ದಾರೆ ಎನ್ನುವ ಖುಷಿ ನಿರ್ದೇಶಕ ಸಚಿನ್ ಅವರಲ್ಲಿದೆ.

  ಪುಷ್ಕರ್ ಮಲ್ಲಿಕಾರ್ಜುನಯ್ಯ ಅವರಂತೂ ಹಾಡಿಗೆ ಸಿಗುತ್ತಿರುವ ರೆಸ್ಪಾನ್ಸ್ಗೆ ಥ್ರಿಲ್ ಆಗಿದ್ದಾರೆ. ಅಂದಹಾಗೆ ಹೀರೋ ಹಿಡಿದಿರುವ ಗನ್ ಹೆಸರೇ ಹ್ಯಾಂಡ್ಸಪ್.

 • ಇಡೀ ತಂಡಕ್ಕೆ ಗೆಲುವಿನ ಪಾಲು ಹಂಚಿದ ರಕ್ಷಿತ್ ಶೆಟ್ಟಿ : ಗಳಿಸಿದ್ದೆಷ್ಟು ಕೋಟಿ..?

  ಇಡೀ ತಂಡಕ್ಕೆ ಗೆಲುವಿನ ಪಾಲು ಹಂಚಿದ ರಕ್ಷಿತ್ ಶೆಟ್ಟಿ : ಗಳಿಸಿದ್ದೆಷ್ಟು ಕೋಟಿ..?

  ಚಿತ್ರರಂಗದಲ್ಲಿ ದುಡಿದದ್ದೇಕ್ಕೇ ಸಂಭಾವನೆ ಸಿಗೋದು ಕಷ್ಟ. ಕೆಲವು ಸಂಸ್ಥೆ ಮತ್ತು ನಿರ್ಮಾಪಕರು ಬಿಟ್ಟರೆ ಕೈ ಎತ್ತೋರ ಸಂಖ್ಯೆಯೇ ಹೆಚ್ಚು. ಅಂತಾದ್ದರಲ್ಲಿ ರಕ್ಷಿತ್ ಶೆಟ್ಟಿ ಇನ್ನೂ ಒಂದು ಹೆಜ್ಜೆ ಮುಂದಿಟ್ಟಿದ್ದಾರೆ. ತಮ್ಮ ಇಡೀ ತಂಡಕ್ಕೆ ತಮ್ಮ ಚಿತ್ರದ ಗೆಲುವಿನ ಪಾಲನ್ನು ಹಂಚುತ್ತಿದ್ದಾರೆ.

  777 ಚಾರ್ಲಿ ಸಿನಿಮಾ ಬಾಕ್ಸಾಫೀಸ್‍ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ. 25 ದಿನಗಳನ್ನು ಯಶಸ್ವಿಯಾಗಿ ಪೂರೈಸಿರುವ ಚಿತ್ರ, 450ಕ್ಕೂ ಹೆಚ್ಚು ಸೆಂಟರ್‍ಗಳಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ. ಕೆಜಿಎಫ್ ನಂತರ ಇಷ್ಟು ದೊಡ್ಡ ಮಟ್ಟದ ಸಕ್ಸಸ್ ಕಂಡ ಕನ್ನಡ ಸಿನಿಮಾ ಇದೇ. 777 ಚಾರ್ಲಿ.

  ಹಾಗಾದರೆ ಚಿತ್ರ ಗಳಿಸಿರುವ ಲಾಭ ಎಷ್ಟು? ಇದು ಅಂದಾಜಿನ ಲೆಕ್ಕಾಚಾರವಲ್ಲ. ಖುದ್ದು ನಿರ್ಮಾಪಕರೂ ಆಗಿರೋ ರಕ್ಷಿತ್ ಶೆಟ್ಟಿಯವರೇ ನೀಡಿರುವ ಅಧಿಕೃತ ಲೆಕ್ಕ. ಇದುವರೆಗೆ 777 ಚಾರ್ಲಿ ಮಾಡಿರುವ ಒಟ್ಟಾರೆ ಬಿಸಿನೆಸ್ 150 ಕೋಟಿ. ನಿರ್ಮಾಪಕರಿಗೆ 90ರಿಂದ 100 ಕೋಟಿಗಳಷ್ಟು ಹಣ ಬರಬಹುದು ಎಂದು ವಿವರ ಕೊಟ್ಟಿದ್ದಾರೆ ರಕ್ಷಿತ್ ಶೆಟ್ಟಿ. ಇದರಲ್ಲಿ ಥಿಯೇಟರ್ ಬಿಸಿನೆಸ್ ಅಷ್ಟೇ ಅಲ್ಲ, ಸ್ಯಾಟಲೈಟ್, ಒಟಿಟಿ, ಆಡಿಯೋ, ಡಬ್ಬಿಂಗ್.. ಎಲ್ಲವೂ ಸೇರಿಯೇ ಇರುವ ಲೆಕ್ಕ.

  ಅಷ್ಟೇ ಅಲ್ಲ, ಈಗ ಬಂದಿರೋ ಲಾಭದಲ್ಲಿ ಶೇ.10ರಷ್ಟನ್ನು ಚಿತ್ರತಂಡಕ್ಕೆ, ಸಿನಮಾಗೆ ಶ್ರಮಿಸಿದವರಿಗೆ ಹಂಚಲು ನಿರ್ಧರಿಸಿದ್ದಾರೆ ರಕ್ಷಿತ್ ಶೆಟ್ಟಿ. ಇನ್ನು ಲಾಭದ ಶೇ.5ರಷ್ಟನ್ನು ನಾಯಿಗಳ ಸಾಕಾಣಿಕೆಗೆ, ನೆರವಿಗೆ ನೀಡಲು ನಿರ್ಧರಿಸಿದ್ದಾರೆ.

  ಅಂದಹಾಗೆ ಚಿತ್ರ ಈಗಿನ್ನೂ 25 ದಿನ ಪೂರೈಸಿದೆ. ವೀಕೆಂಡ್‍ಗಳಲ್ಲಿ ಈಗಲೂ ಭರ್ಜರಿ ಗಳಿಕೆ ಕಾಣುತ್ತಿರೋ 777 ಚಾರ್ಲಿ, ವಾರದ ದಿನಗಳಲ್ಲಿ ಸರಾಸರಿಗಿಂತ ಹೆಚ್ಚಿಗೇ ಕಲೆಕ್ಷನ್ ಮಾಡುತ್ತಿದೆ. 

 • ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ.. ರೈಲಲ್ಲಿ ನಾರಾಯಣ

  avane srimnannarayana promotions in train

  ಗೋಡೆಗಳ ಮೇಲೆ, ಬಸ್ಸುಗಳ ಮೇಲೆ, ಆಟೋಗಳ ಮೇಲೆ.. ಪೋಸ್ಟರ್ ಅಂಟಿಸುವುದನ್ನು ನೋಡಿದವರಿಗೆ ಅವನೇ ಶ್ರೀಮನ್ನಾರಾಯಣ ಹೊಸದೊಂದು ರೀತಿಯ ಪ್ರಚಾರ ಆರಂಭಿಸಿರುವುದು ವ್ಹಾವ್ ಎನಿಸಿದ್ದರೆ ಅಚ್ಚರಿಯಿಲ್ಲ. ಏಕೆಂದರೆ ನಾರಾಯಣ ಕಾಣಿಸಿರುವುದು ರೈಲುಗಳ ಮೇಲೆ. ಅಂದಹಾಗೆ ಇದು ದಕ್ಷಿಣ ಭಾರತ ಚಿತ್ರರಂಗದಲ್ಲೆ ಮೊದಲ ಪ್ರಯತ್ನ.

  ಬೆಂಗಳೂರು ಲೋಕಲ್ ಟ್ರೆöÊನು, ಬೆಂಗಳೂರು ಟು ರಾಮನಗರ, ಮೈಸೂರು, ಮಾರಿಕಕುಪ್ಪಂ (ಕೆಜಿಎಫ್), ಕುಪ್ಪಂ (ಆಂಧ್ರ), ಹಿಂದೂಪುರ, ಬಂಗಾರಪೇಟೆ, ವೈಟ್‌ಫೀಲ್ಡ್ ರೈಲುಗಳು, ಮೈಸೂರು-ಅರಸೀಕೆರೆ-ಶಿವಮೊಗ್ಗ ಹಾಗೂ ಹುಬ್ಬಳ್ಳಿ ಪ್ಯಾಸೆಂಜರ್ ರೈಲುಗಳಲ್ಲಿ ಅವನೇ ಶ್ರೀಮನ್ನಾರಯಣ ಪೋಸ್ಟರ್ ರಾರಾಜಿಸುತ್ತಿದೆ.

  ಇದೊಂದು ಹೊಸ ಪ್ರಯತ್ನ. ರೈಲಿನ ಬೋಗಿಗಳ ಒಳಗೆ ಸಿನಿಮಾ ಪ್ರಚಾರಕ್ಕೆ ಅವಕಾಶ ಕೊಟ್ಟಿದ್ದಾರೆ. 2020ರ ಜನವರಿ 20ರವರೆಗೆ ರೈಲುಗಳಲ್ಲಿ ಅವನೇ ಶ್ರೀಮನ್ನಾರಯಣ ಪೋಸ್ಟರ್ ಇರಲಿದೆ ಎಂದಿದ್ದಾರೆ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ.

 • ಇನ್ನು 70 ದಿನ ಕಾಯಿರಿ. ಅವನೇ ಬರ್ತಾನೆ.. ಬಂದೇ ಬರ್ತಾನೆ..!

  avane srimmanrayana may release in december

  ಅವನೇ ಶ್ರೀಮನ್ನಾರಾಯಣ. ಸುಮಾರು ಎರಡು ವರ್ಷಗಳಿಂದ ಸುದ್ದಿಯಲ್ಲಿರುವ ಚಿತ್ರ. ರಕ್ಷಿತ್ ಶೆಟ್ಟಿ, ಶಾನ್ವಿ ಶ್ರೀವಾಸ್ತವ್ ನಟಿಸಿರುವ ಚಿತ್ರದ ಪೋಸ್ಟರ್, ಟೀಸರುಗಳೇ ಭಾರಿ ಕುತೂಹಲ ಹುಟ್ಟಿಸಿವೆ. 5 ಭಾಷೆಗಳಲ್ಲಿ ರೆಡಿಯಾಗಿರುವ ಚಿತ್ರದ ಬಿಡುಗಡೆ ಯಾವಾಗ ಎನ್ನುವುದು ಅಭಿಮಾನಿಗಳ ಪ್ರಶ್ನೆಯಾಗಿತ್ತು. ಏಕೆಂದರೆ ರಕ್ಷಿತ್ ಶೆಟ್ಟಿ ಅಭಿನಯದ ಚಿತ್ರ ಬಂದು ಈ ಡಿಸೆಂಬರ್‍ಗೆ 3 ವರ್ಷ ತುಂಬಲಿದೆ. ಈ ನಿರೀಕ್ಷೆಗಳಿಗೆ, ಕಾತುರಗಳಿಗೆ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಉತ್ತರ ಕೊಟ್ಟಿದ್ದಾರೆ.

  ಇನ್ನು 70 ದಿನ. ಅವನು ಬಂದೇ ಬರ್ತಾನೆ ಎಂದಿದ್ದಾರೆ. ಅಂದರೆ ನವೆಂಬರ್ ಅಥವಾ ಡಿಸೆಂಬರ್‍ನಲ್ಲಿ ಅವನೇ ಶ್ರೀಮನ್ನಾರಾಯಣ ರಿಲೀಸ್ ಎನ್ನುವುದು ಪಕ್ಕಾ. ಸಚಿನ್ ರವಿ ನಿರ್ದೇಶನದ ಸಿನಿಮಾಗೆ ಚರಣ್ ರಾಜ್ ಮತ್ತು ಅಜನೀಶ್ ಲೋಕನಾಥ್ ಇಬ್ಬರೂ ಸಂಗೀತ ನೀಡಿದ್ದಾರೆ. ಸ್ಸೋ.. ಲಾಸ್ಟ್ 70 ಡೇಸ್.