` rakshith shetty - chitraloka.com | Kannada Movie News, Reviews | Image

rakshith shetty

 • ಮಕ್ರ್ಯುರಿ ಚಿತ್ರದಲ್ಲಿ ಕೊಡೈಕೆನಾಲ್ ಪಾಯ್ಸನ್ ದುರಂತದ ಕಥೆ

  mercury is based on real incidents

  ಮಕ್ರ್ಯುರಿ ಚಿತ್ರ, ಸೈಲೆಂಟ್ ಥ್ರಿಲ್ಲರ್ ಎಂಬ ಕಾರಣಕ್ಕಾಗಿಯೇ ಗಮನ ಸೆಳೆಯುತ್ತಿರುವ ಸಿನಿಮಾ. ಸಂಭಾಷಣೆ ಇಲ್ಲದ ಚಿತ್ರದಲ್ಲಿರುವ ಕಥೆ ಏನು ಎಂಬುದಕ್ಕೆ ಉತ್ತರ ಸಿಕ್ಕಿದೆ. ಚಿತ್ರದಲ್ಲಿನ ಕಥೆಯ ಮೂಲವಸ್ತು ಕೊಡೈಕೆನಾಲ್‍ನ ಮಕ್ರ್ಯುರಿ ಫ್ಯಾಕ್ಟರಿಯಲ್ಲಿ ನಡೆದ ದುರಂತದ ಕಥೆ. ಅದನ್ನು ನಾಲ್ವರು ಗೆಳೆಯರ ಮೂಲಕ ಹೇಳಲಾಗಿದೆ. 

  1987ರಲ್ಲಿ ಕೊಡೈಕೆನಾಲ್‍ನಲ್ಲಿ ಪಾಂಡ್ಸ್ ಕಂಪೆನಿಯವರು ಮಕ್ರ್ಯುರಿ ಥರ್ಮಾಮೀಟರ್ ಘಟಕ ಸ್ಥಾಪಿಸಿದರು. ಅಮೆರಿಕದಿಂದ ಪಾದರಸ ತರಿಸಿಕೊಂಡು, ಥರ್ಮಾಮೀಟರ್ ತಯಾರಿಸುವುದು ಆ ಫ್ಯಾಕ್ಟರಿಯ ಕೆಲಸ. 2001ರ ಹೊತ್ತಿಗೆ ಆ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರಲ್ಲಿ ಕಿಡ್ನಿ ಸಮಸ್ಯೆ ಕಾಣಿಸಿಕೊಂಡಿತು. ಕಾರಣ ಏನೆಂದು ಹುಡುಕುತ್ತಾ ಹೊರಟಾಗ, ಫ್ಯಾಕ್ಟರಿಯವರು ಪಾದರಸದ ವೇಸ್ಟ್‍ನ್ನು ಯಾವುದೇ ಮುಂಜಾಗ್ರತೆ ವಹಿಸದೆ ಕಸ ಎಸೆಯುವಂತೆ ಎಸೆಯುತ್ತಿದ್ದ ವಿಷಯ ಬೆಳಕಿಗೆ ಬಂದಿತ್ತು. ನೂರಾರಲ್ಲ.. ಸಾವಿರಾರು ಕಾರ್ಮಿಕರು, ಕಿಡ್ನಿ ಕಳೆದುಕೊಂಡಿದ್ದಾರೆ. ಜೀವ ಕಳೆದುಕೊಂಡಿದ್ದಾರೆ. ಅವರ ಮಕ್ಕಳು ಇಂದಿಗೂ ನರಳುತ್ತಿದ್ದಾರೆ. ನಮ್ಮ ಕರಾವಳಿ ಭಾಗದ ಎಂಡೋಸಲ್ಫಾನ್ ಕಥೆಯಂತಹುದೇ ಕಥೆ ವಿಷಕಾರಿ ಪಾದರಸದ್ದು. ಆ ಜನರಿಗೆ ಇದುವರೆಗೆ ಯಾವುದೇ ಪರಿಹಾರ ಸಿಕ್ಕಿಲ್ಲ. ಕಂಪೆನಿಯ ತಪ್ಪೇ ಇಲ್ಲ ಎಂಬ ವರದಿ ಬಂದಿದೆ. ಇದು ಸತ್ಯ ಘಟನೆ. 

  ಮಕ್ರ್ಯುರಿ ಚಿತ್ರದಲ್ಲಿರೋದು ಇದೇ ಕಥೆ. ಈ ನೈಜ ಘಟನೆಯನ್ನಿಟ್ಟುಕೊಂಡು ಥ್ರಿಲ್ಲರ್ ಕಥೆ ಹೆಣೆಯಲಾಗಿದೆ. ಹೀಗಾಗಿಯೇ ರಕ್ಷಿತ್ ಶೆಟ್ಟಿ, ಪುಷ್ಕರ್ ಮಲ್ಲಿಕಾರ್ಜುನಯ್ಯ ಅವರ ಪರಂವಾ ಸ್ಟುಡಿಯೋ, ಚಿತ್ರವನ್ನು ಹೆಚ್ಚು ಹೆಚ್ಚು ಜನರಿಗೆ ತಲುಪಿಸುವ ಗುರಿ ಇಟ್ಟುಕೊಂಡು ಹೊರಟಿದೆ. ಕರ್ನಾಟಕದಲ್ಲಿ ಸಿನಿಮಾ ಬಿಡುಗಡೆಯ ಜವಾಬ್ದಾರಿ ಹೊತ್ತಿರುವುದೇ ಪರಂವಾ ಸ್ಟುಡಿಯೋ. ಒಂದು ಸಾಮಾಜಿಕ ಕಳಕಳಿ ಇರುವ ಚಿತ್ರ, ಇದೇ ವಾರ ಬಿಡುಗಡೆಯಾಗುತ್ತಿದೆ.

 • ಮಕ್ರ್ಯುರಿ ನಿರ್ದೇಶಕರ ಸಿನಿಮಾ ಲಿಸ್ಟ್ ಕೇಳಿದ್ರೆ ಸಾಕು..

  mercury is directors special

  ಮಕ್ರ್ಯುರಿ ಅನ್ನೋ ಸಂಭಾಷಣೆಯಿಲ್ಲ, ಡ್ಯಾನ್ಸ್ ಇಲ್ಲದ ಸೈಲೆಂಟ್ ಥ್ರಿಲ್ಲರ್ ಬಿಡುಗಡೆಯಾಗುತ್ತಿರುವುದು ಗೊತ್ತಿರುವ ವಿಷಯವೇ. ಏಕೆಂದರೆ, ಕರ್ನಾಟಕದಲ್ಲಿ ಈ ಚಿತ್ರವನ್ನು ಪ್ರಮೋಟ್ ಮಾಡುತ್ತಿರುವುದು ರಕ್ಷಿತ್ ಶೆಟ್ಟಿ ಮತ್ತು ಪುಷ್ಕರ್ ಮಲ್ಲಿಕಾರ್ಜುನಯ್ಯ. ಅವರು ತಮ್ಮ ಪರಂವಾ ಸ್ಟುಡಿಯೋದಿಂದ ಚಿತ್ರವನ್ನು ಕರ್ನಾಟಕದಲ್ಲಿ ವಿತರಣೆ ಮಾಡುತ್ತಿದ್ದಾರೆ. ಚಿತ್ರದಲ್ಲಿ ಪ್ರಭುದೇವಾ ಹೀರೋ. ಆದರೆ, ಅದೆಲ್ಲಕ್ಕಿಂತ ಕುತೂಹಲ ಹುಟ್ಟಿಸಿರುವುದು ಚಿತ್ರದ ನಿರ್ದೇಶಕ ಕಾರ್ತಿಕ್ ಸುಬ್ಬರಾಜ್.

  ಕಾರ್ತಿಕ್ ಅವರ ಈ ಹಿಂದಿನ ಚಿತ್ರಗಳ ಹೆಸರುಗಳನ್ನೊಮ್ಮೆ ಕೇಳಿದರೆ ಸಾಕು, ಚಿತ್ರದ ಕುತೂಹಲ ನೂರ್ಮಡಿಯಾಗುತ್ತೆ. ಕಾರ್ತಿಕ್ ನಿರ್ದೇಶಿಸಿದ ಮೊದಲ ಚಿತ್ರ ಪಿಜ್ಜಾ. ಇದು ಕನ್ನಡದಲ್ಲಿ ವಿಷಲ್ ಹೆಸರಿನಲ್ಲಿ ರೀಮೇಕ್ ಆಗಿದ್ದ ಚಿತ್ರ. ಮತ್ತೊಂದು ಚಿತ್ರ ಜಿಗರ್‍ಥಂಡಾ. ಆ ಚಿತ್ರವನ್ನು ಕಿಚ್ಚ ಸುದೀಪ್ ತಮ್ಮ ಬ್ಯಾನರ್‍ನಲ್ಲಿ ರೀಮೇಕ್ ಮಾಡಿದ್ದರು. ಇರೈವಿ ಚಿತ್ರವೂ ಪ್ರೇಕ್ಷಕರು, ವಿಮರ್ಶಕರ ಮೆಚ್ಚುಗೆ ಗಳಿಸಿತ್ತು. ಈಗ ನಾಲ್ಕನೇ ಚಿತ್ರ ಮಕ್ರ್ಯುರಿ.

  ಮೇಲೆ ಹೇಳಿದ ಒಂದೊಂದು ಚಿತ್ರವೂ ವಿಭಿನ್ನ ಎನ್ನುವುದೇ ಕಾರ್ತಿಕ್ ಸ್ಪೆಷಾಲಿಟಿ. ಪಿಜ್ಜಾ ಹಾರರ್ ಥ್ರಿಲ್ಲರ್. ಅತ್ಯಂತ ಕಡಿಮೆ ಬಜೆಟ್‍ನಲ್ಲಿ ತಯಾರಾಗಿ, ಬಾಕ್ಸಾಫೀಸ್ ಚಿಂದಿ ಉಡಾಯಿಸಿದ್ದ ಸಿನಿಮಾ. ಇನ್ನು ಜಿಗರ್‍ಥಂಡಾ ರೌಡಿಸಂ ಮತ್ತು ಮಾನವೀಯತೆ ಹಿನ್ನೆಲೆಯ ಚಿತ್ರ. ಇರೈವಿ ಕಥೆಯೇ ಒಂಥರಾ ವಿಚಿತ್ರ. ಸಂಬಂಧಗಳ ಕುರಿತಾದ ಕಥೆ. ಈಗ ಮಕ್ರ್ಯುರಿ. ಇದು ಸೈಲೆಂಟ್ ಥ್ರಿಲ್ಲರ್ ಅಷ್ಟೇ ಅಲ್ಲ, ನೈಜ ಕಥೆಯೂ ಇದೆ. ಹೀಗಾಗಿಯೇ ಮಕ್ರ್ಯುರಿ ಕುತೂಹಲ ಹುಟ್ಟಿಸುತ್ತಿದೆ. 

 • ಮಕ್ರ್ಯುರಿ ಹವಾ ಭರ್ಜರಿ

  mercury trending online

  ಮಕ್ರ್ಯುರಿ, 7 ಭಾಷೆಗಳಲ್ಲಿ ರಿಲೀಸ್ ಆಗುತ್ತಿರುವ ಮೂಕಿ ಚಿತ್ರ. ಪ್ರಭುದೇವ ನಾಯಕರಾಗಿರುವ ಚಿತ್ರದಲ್ಲಿ ಇರುವುದು ಥ್ರಿಲ್ಲರ್ ಕಥೆ. ಹೈಸ್ಕೂಲಿನಲ್ಲಿ ಒಟ್ಟಿಗೇ ಓದಿದ ಐವರು ಗೆಳೆಯರು ಹಲವು ವರ್ಷಗಳ ನಂತರ ಒಟ್ಟಿಗೇ ಸೇರುತ್ತಾರೆ. ಅಲ್ಲಿ ನಡೆಯಬಾರದ ಘಟನೆಯೊಂದು ನಡೆದು ಹೋಗುತ್ತೆ. ಅಲ್ಲಿಂದ ಶುರುವಾಗುತ್ತೆ ಮಕ್ರ್ಯುರಿ ಥ್ರಿಲ್ಲರ್. ಕ್ಷಣ ಕ್ಷಣವೂ ಕುತೂಹಲ ಹುಟ್ಟಿಸುವ ಚಿತ್ರದಲ್ಲಿ ಸಂಭಾಷಣೆಗಳಿಲ್ಲ. 

  ಚಿತ್ರದಲ್ಲಿ ಪ್ರಭುದೇವ ಮುಖ್ಯಪಾತ್ರದಲ್ಲಿದ್ದಾರೆ. ಕಾರ್ತಿಕೇಯನ್, ಸಂತಾನಂ, ಜಯಂತಿಲಾಲ್ ಗಡ ಜಂಟಿಯಾಗಿ ನಿರ್ಮಿಸಿರುವ ಚಿತ್ರ ಇದು. ಕಾರ್ತಿಕ್ ಸುಬ್ಬರಾಜು ಚಿತ್ರದ ನಿರ್ದೇಶಕ.

  ವೆನ್ ಲೈಫ್ ಈಸ್ ಅಟ್ ವಾರ್, ದಿ ಮೋಸ್ಟ್ ಪವರ್‍ಫುಲ್ ಸ್ಕೀಮ್ ಈಸ್ ಸೈಲೆನ್ಸ್ ಅನ್ನೋದು ಚಿತ್ರದ ಟ್ಯಾಗ್‍ಲೈನ್. ಜೀವನವೇ ಯುದ್ಧವಾಗಿರುವ ಸಮಯದಲ್ಲಿ ಮೌನವೇ ಅತಿ ದೊಡ್ಡ ಎದುರಾಳಿ ಎನ್ನುವ ಅರ್ಥವಿದೆ. ಟೀಸರ್‍ನಲ್ಲಿ ಸಂತೋಷ್ ನಾರಾಯಣನ್ ಹಿನ್ನೆಲೆ ಸಂಗೀತ ಹಾಗೂ ತಿರುನವುಕ್ಕರಸು ಕ್ಯಾಮೆರಾ ಕೆಲಸ ಗಮನ ಸೆಳೆಯುತ್ತಿದೆ. ಹಾಲಿವುಡ್ ಫೀಲ್ ಕೊಡುತ್ತಿರುವ ಚಿತ್ರ, ಮುಂದಿನ ವಾರ ಪಾದರಸದಂತೆಯೇ ಜಗತ್ತಿನಾದ್ಯಂತ ತೆರೆ ಕಾಣುತ್ತಿದೆ.

 • ಮಕ್ರ್ಯೂರಿ ಚಿತ್ರ ವಿತರಣೆ ಮಾಡಿದ್ದೇಕೆ ರಕ್ಷಿತ್ ಶೆಟ್ಟಿ..?

  paramvah studios to distribute mercury

  ಇಂದು ದೇಶಾದ್ಯಂತ ಮಕ್ರ್ಯೂರಿ ಚಿತ್ರ ಬಿಡುಗಡೆಯಾಗಿದೆ. ಪ್ರಭುದೇವ ಅಭಿನಯದ ಈ ಚಿತ್ರಕ್ಕೆ ಕಾರ್ತಿಕ್ ಶುಭ್‍ರಾಜ್ ನಿರ್ದೇಶನವಿದೆ. ಮಾತುಗಳೇ ಇಲ್ಲದ ಈ ಈ ಚಿತ್ರವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡುತ್ತಿರುವುದು ಪರಂವಾ ಸ್ಟುಡಿಯೋಸ್. ರಕ್ಷಿತ್ ಶೆಟ್ಟಿ, ಪುಷ್ಕರ್ ಮಲ್ಲಿಕಾರ್ಜುನಯ್ಯ ಮಲ್ಟಿಪ್ಲೆಕ್ಸ್ ವಿತರಣೆ ಹೊಣೆ ಹೊತ್ತುಕೊಂಡಿದ್ದಾರೆ. ಜಯಣ್ಣ-ಭೋಗೇಂದ್ರ ಥಿಯೇಟರ್‍ಗಳಲ್ಲಿ ವಿತರಣೆ ಮಾಡುತ್ತಿದ್ದಾರೆ.

  ತಮಿಳು ಡೈರೆಕ್ಟರ್ ನಿರ್ದೇಶನದ ಚಿತ್ರವನ್ನು ಕರ್ನಾಟಕದಲ್ಲಿ ವಿತರಣೆ ಮಾಡುತ್ತಿರುವುದಕ್ಕೆ ಚಿತ್ರದ ಕಥೆ, ವಿಭಿನ್ನತೆಯೊಂದೇ ಕಾರಣವಲ್ಲ. ನಾವು ಕನ್ನಡ ಸಿನಿಮಾಗಳನ್ನು ಬೇರೆ ರಾಜ್ಯಗಳಿಗೂ ವಿಸ್ತರಿಸುವ ಕನಸು ಕಟ್ಟುತ್ತಿದ್ದೇವೆ. ಅದು ಸಾಧ್ಯವಾಗಬೇಕಾದರೆ, ಪರರಾಜ್ಯದವರ ಜೊತೆ ನಮ್ಮ ನಂಟು ಬೆಳೆಯಲೇಬೇಕು. ಇವುಗಳ ಆರಂಭದ ಹಂತವೇ ಈ ಮಕ್ರ್ಯೂರಿ ಸಿನಿಮಾ ಎನ್ನುತ್ತಾರೆ ರಕ್ಷಿತ್ ಶೆಟ್ಟಿ.

  ಚಿತ್ರದಲ್ಲಿ ಒಂದೊಳ್ಳೆಯ ಮೆಸೇಜ್ ಇದೆ. ಚಿತ್ರ ಸೆನ್ಸಾರ್ ಆಗಿರುವುದೂ ಬೆಂಗಳೂರಿನಲ್ಲಿ. ಹೀಗೆ ಚಿತ್ರವನ್ನು ಕರ್ನಾಟಕದಲ್ಲಿ ವಿತರಿಸಲು ಒಪ್ಪಿಕೊಳ್ಳೋಕೆ ಹಲವು ಕಾರಣಗಳಿವೆ. ಸಿನಿಮಾ ಇಂದು ದೇಶಾದ್ಯಂತ 1500ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಆಗುತ್ತಿದೆ.

 • ಮತ್ತೆ ಮತ್ತೆ ಪುಷ್ಪಕ ವಿಮಾನ

  mercury is another silent thriller movie

  ಮಕ್ರ್ಯುರಿ. ಈ ವಾರ ರಿಲೀಸ್ ಆಗುತ್ತಿರುವ ಸೈಲೆಂಟ್ ಥ್ರಿಲ್ಲರ್. ಪ್ರಭುದೇವ ಹೀರೋ. ಇಡೀ ಚಿತ್ರದಲ್ಲಿ ಒಂದೇ ಒಂದು ಡೈಲಾಗ್ ಇಲ್ಲ. ತಕ್ಷಣ ನಿಮಗೆ 1987ರಲ್ಲಿ ರಿಲೀಸ್ ಆಗಿದ್ದ ಪುಷ್ಪಕವಿಮಾನ ನೆನಪಾದರೆ, ಅದು ಸಹಜ. ಏಕೆಂದರೆ, 30 ವರ್ಷಗಳ ನಂತರೂ ಆ ಚಿತ್ರ ಇಂದಿಗೂ ನಮ್ಮ ಮನಸ್ಸಿನಲ್ಲಿ ಫ್ರೆಷ್ ಆಗಿದೆ. ಆ ಚಿತ್ರದಲ್ಲಿ ಕಮಲ್‍ಹಾಸನ್ ಹೀರೋ. ಆದರೆ, ಮಕ್ರ್ಯುರಿ ಮತ್ತು ಪುಷ್ಪಕ ವಿಮಾನ ಚಿತ್ರಗಳ ನಡುವಿನ ಹೋಲಿಕೆ ಇಲ್ಲಿಗೇ ಮುಗಿಯುತ್ತೆ.

  ಪುಷ್ಪಕ ವಿಮಾನ ಥ್ರಿಲ್ಲರ್ ಆಗಿದ್ದರೂ, ಚಿತ್ರದಲ್ಲಿ ಕಾಮಿಡಿ, ಲವ್ ಎಲ್ಲವೂ ಇತ್ತು. ಆದರೆ, ಮಕ್ರ್ಯುರಿಯಲ್ಲಿ ಹಾಗಿಲ್ಲ. ಒಮ್ಮೆ ಸಿನಿಮಾ ಶುರುವಾದರೆ, ಸೀಟ್‍ನ ಅಂಚಿಗೆ ಬಂದು ಉಗುರು ಕಡಿಯುತ್ತಾ ಕೂರುವ ಪ್ರೇಕ್ಷಕ ರಿಲ್ಯಾಕ್ಸ್ ಆಗುವುದು ಕ್ಲೈಮಾಕ್ಸ್‍ನಲ್ಲೇ. ಅಷ್ಟರಮಟ್ಟಿಗೆ ಮಕ್ರ್ಯುರಿ ಚಿತ್ರದ ಕಥೆ, ಚಿತ್ರಕಥೆ ವಂಡರ್‍ಫುಲ್ ಆಗಿದೆ ಅನ್ನೋದು ಈಗಾಗಲೇ ಚಿತ್ರ ನೋಡಿರುವವರ ಅಭಿಪ್ರಾಯ.

  ಮಕ್ರ್ಯುರಿ ಚಿತ್ರದ ಕಥೆ ಕೇಳಿಯೇ ಥ್ರಿಲ್ ಆಗಿಬಿಟ್ಟೆ. ಪುಷ್ಪಕವಿಮಾನದ ನಂತರ ಹಲವು ಮೂಕಿ ಸಿನಿಮಾಗಳು ಬಂದಿವೆ. ಆದರೆ, ಇಂದಿಗೂ ನಮ್ಮ ನೆನಪಲ್ಲಿರುವುದು ಪುಷ್ಪಕವಿಮಾನ. 30 ವರ್ಷಗಳ ನಂತರವೂ. ಸಿನಿಮಾ ನೋಡಿದ ಮೇಲಂತೂ ಥ್ರಿಲ್ ಆಗಿಬಿಟ್ಟೆ. ಚಿತ್ರದ ಮ್ಯೂಸಿಕ್ ಅಂತೂ ಅದ್ಭುತ. 

  ಹೀಗೆ ಸಿನಿಮಾ ನೋಡಿದ ಥ್ರಿಲ್‍ನಲ್ಲಿರುವುದು ಪುಷ್ಕರ್ ಮಲ್ಲಿಕಾರ್ಜುನಯ್ಯ. ಪರಂವಾ ಸ್ಟುಡಿಯೋಸ್ ಮೂಲಕ ಮಕ್ರ್ಯುರಿ ಚಿತ್ರವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡುತ್ತಿರುವುದು ಇವರೇ. ರಕ್ಷಿತ್ ಶೆಟ್ಟಿ, ಪುಷ್ಕರ್ ಜೊತೆಯಲ್ಲಿಯೇ ಇದ್ದಾರೆ. ಒಂದು ವಿಭಿನ್ನ ಸಿನಿಮಾವನ್ನು ಜನರಿಗೆ ತಲುಪಿಸಲೇಬೇಕು. ಸಿನಿಮಾದಲ್ಲಿ ಥ್ರಿಲ್ಲರ್ ಅಂಶವಷ್ಟೇ ಅಲ್ಲದೆ, ಒಂದು ವಿಭಿನ್ನವಾದ ಸಂದೇಶವೂ ಇದೆ ಅಂತಾರೆ ಪುಷ್ಕರ್. ಕೆಲವೇ ದಿನ. ಮಕ್ರ್ಯುರಿ ಥಿಯೇಟರುಗಳಲ್ಲಿ ಪ್ರತ್ಯಕ್ಷವಾಗಲಿದೆ.

 • ರಕ್ತಿತ್ ಶೆಟ್ಟಿ - ರಶ್ಮಿಕಾ ಲವ್ ಸ್ಟೋರಿ - ಪ್ರಪೋಸ್ ಮಾಡಿದ್ದು ಯಾರು?

  rakshith rashmika who proposed first

  ಎಂಗೇಜ್​ಮೆಂಟ್ ಸುದ್ದಿ ರಶ್ಮಿಕಾ ಮಂದಣ್ಣ ಫೇಸ್​ಬುಕ್​ನಲ್ಲಿ ಹೊರಬಿತ್ತು. ಹೌದಾ ಅಂಥಾ ಕೇಳಿದಾಗ ರಕ್ಷಿತ್ ಶೆಟ್ಟಿ ಅದೆಷ್ಟು ನಾಚಿಕೊಂಡ್ರು ಅಂದ್ರೆ, ಹೂಂ ಅನ್ನೋದೇನೋ ಅಂದ್ರು. ಆದರೆ, ಫಸ್ಟ್​ ಟೈಂ ಲವ್ವಲ್ಲಿ ಬಿದ್ದ ಹುಡುಗನ ರೋಮಾಂಚನ ಅವರ ಮಾತಿನಲ್ಲಿತ್ತು. ವಯಸ್ಸು 33 ಆದರೂ ಫಸ್ಟ್ ಲವ್, ಫಸ್ಟ್ ಲವ್ವೇ ಅಲ್ವಾ..?

  ಮೊದ ಮೊದಲು ಇದು ಗಾಸಿಪ್ ಅಷ್ಟೇ ಆಗಿತ್ತು. ಆದರೆ, ಗಾಸಿಪ್ ಪತ್ರಿಕೆ, ಟಿವಿಗಳಲ್ಲಿ ಸುದ್ದಿಯಾದಾಗ ರಶ್ಮಿಕಾ ತಂದೆ ರಕ್ಷಿತ್ ಅವರನ್ನು ಕರೆದು ಏನಿದೆಲ್ಲ ಅಂದ್ರಂತೆ..ಅಷ್ಟೆ.

  ಲವ್ ಹೇಗೆ ಶುರುವಾಯ್ತು ಅಂದ್ರೆ, ಅದನ್ನೆಲ್ಲ ಹೇಳೋಕೆ ಸ್ಪೆಷಲ್ಲಾಗಿ ಬರ್ತೀನಿ ಅಂತಿದ್ದ ರಕ್ಷಿತ್ ಶೆಟ್ಟಿ ಮಾತಿನಲ್ಲಿ ನಾಚಿಕೆ ತುಂಬಿ ತುಳುಕಾಡುತ್ತಿತ್ತು. ರಶ್ಮಿಕಾರಲ್ಲಿ ರಕ್ಷಿತ್​ಗೆ ಇಷ್ಟವಾಗಿದ್ದು, ಅವರ ಇನ್ನೊಬ್ಬರ ಬಗ್​ಗೆ ಹೊಟ್ಟೆಕಿಚ್ಚುಪಡದ ಗುಣ. ಅಹಂಕಾರವಿಲ್ಲದ ಗುಣ.

  ಚಿತ್ರ ಹಿಟ್ ಆದ ಖುಷಿಯಲ್ಲಿ ಪ್ರಪೋಸ್ ಮಾಡಿದ್ದು ರಕ್ಷಿತ್ ಶೆಟ್ಟಿಯಂತೆ. ಆದರೆ, ನೋಡೋಣ ಎಂದಿದ್ದ ರಶ್ಮಿಕಾ, ಆಗ ಓಕೆ ಎಂದೇನೂ ಹೇಳಿರಲಿಲ್ಲ. ಆದರೆ, ರಶ್ಮಿಕಾ ತಂದೆಯ ಎದುರು ಫೈನಲ್ ಆಯ್ತು.

  ಇನ್ನು ರಕ್ಷಿತ್ ಶೆಟ್ಟಿ ಕುಟುಂಬದ ಪಾಲಿಗೆ ರಶ್ಮಿಕಾ ಭಾಗ್ಯಲಕ್ಷ್ಮಿ. ಮೊದ ಮೊದಲು ತಮಾಷೆಯಾಗಿ ಹೇಳಿದ್ದು ಆಮೇಲೆ ನಿಜವಾಗಿ ಹೋಗಿದೆ. ರಕ್ಷಿತ್ ಅಮ್ಮನಿಗೆ ರಶ್ಮಿಕಾ ತುಂಬಾ ಇಷ್ಟವಾಗಿಬಿಟ್ಟಿದ್ದಾರೆ.

  ರಶ್ಮಿಕಾ, ರಕ್ಷಿತ್​ಗೆ ಒಂದು ಪುಟ್ಟ ಬ್ರೇಸ್​ಲೆಟ್​ನ್ನ ಒಲವಿನ ಉಡುಗೊರೆಯಾಗಿ ಕೊಟ್ಟಿದ್ದಾರೆ.

  ಜುಲೈ 3ಕ್ಕೆ ಕೊಡಗಿನಲ್ಲೇ ಎಂಗೇಜ್​ಮೆಂಟ್. 

  ರಶ್ಮಿಕಾಗಿನ್ನೂ 21 ವರ್ಷ. ಪುನೀತ್ ರಾಜ್ ಕುಮಾರ್ ಜೊತೆ ಅಂಜನಿಪುತ್ರ, ಗಣೇಶ್ ಜೊತೆ ಚಮಕ್, ತೆಲುಗಿನಲ್ಲಿ ಒಂದು ಸಿನಿಮಾದಲ್ಲಿ ನಟಿಸ್ತಿರೋ ರಶ್ಮಿಕಾ, ಕೊಡಗಿನ ಕುವರಿ.

  ಸದ್ಯಕ್ಕೆ ಮದುವೆ ಇಲ್ಲ. ಮದುವೆಯೇನಿದ್ದರೂ ಎರಡು ವರ್ಷದ ನಂತರ ಎನ್ನುತ್ತಿದ್ದಾರೆ. ಅವರ ಬಾಳು ಬಂಗಾರವಾಗಲಿ.

   

 • ರಕ್ಷಿತ್ - ರಶ್ಮಿಕಾ ನಿಶ್ಚಿತಾರ್ಥ ಎಲ್ಲಿ..? ಹೇಗೆ..?

  rakshith rashmika engagement update

  ಸ್ಯಾಂಡಲ್‌ವುಡ್‌ ನಟ ರಕ್ಷಿತ್‌ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ನಿಶ್ಚಿತಾರ್ಥ ಜುಲೈ 3ರಂದು ಫಿಕ್ಸ್ ಆಗಿದೆ. ಕಿರಿಕ್‌ ಪಾರ್ಟಿ ಚಿತ್ರದ ಜೋಡಿ ರಕ್ಷಿತ್‌ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ, ರಿಯಲ್ ಲೈಫ್​ನಲ್ಲೂ ಜೋಡಿಯಾಗುತ್ತಿದ್ದಾರೆ. ಜುಲೈ 3ರಂದು ಕೊಡಗಿನ ವಿರಾಜಪೇಟೆಯಲ್ಲಿ ನಿಶ್ಚಿತಾರ್ಥ ನಡೆಯಲಿದ್ದು, ಉಂಗುರ ಬದಲಿಸಿಕೊಳ್ಳಲಿದ್ದಾರೆ. ಎರಡೂ ಕುಟುಂಬದ ಸದಸ್ಯರು ಮತ್ತು ಆಪ್ತ ಗೆಳೆಯರಷ್ಟೇ ನಿಶ್ಚಿತಾರ್ಥದಲ್ಲಿ ಭಾಗವಹಿಸುತ್ತಿದ್ಧಾರೆ. ವಿರಾಜಪೇಟೆಯ ಸೆರನಿಟಿ ಹಾಲ್​ ಬುಕ್ ಮಾಡಲಾಗಿದ್ದು, ಆ ದಿನ ಸಂಜೆ 6.30ಕ್ಕೆ ನಿಶ್ಚಿತಾರ್ಥ.

  ಡಿಸೈನರ್ ಶ್ರದ್ಧಾ ಪೊನ್ನಪ್ಪ, ರಶ್ಮಿಕಾಗೆ ಗೌನ್ ಡಿಸೈನ್ ಮಾಡಿಕೊಟ್ಟಿದ್ದಾರೆ. ರಕ್ಷಿತ್ ಶೆಟ್ಟಿ ತಮ್ಮ ಸೂಟ್​ನ್ನು ತಾವೇ ಡಿಸೈನ್ ಮಾಡಿಕೊಂಡಿದ್ದಾರೆ. ಕಾರ್ಯಕ್ರಮದಲ್ಲಿ ವಿವೇಕ್ ಸೋಮಯ್ಯ ತಂಡದ ಡಿ.ಜೆ. ಡ್ಯಾನ್ಸ್ ಕುಡಾ ಇರುತ್ತೆ. 

 • ರಕ್ಷಿತ್ - ರಶ್ಮಿಕಾ ನಿಶ್ಚಿತಾರ್ಥಕ್ಕೆ ವೆರೈಟಿ ವೆರೈಟಿ  ತಯಾರಿ

  rakshit rashmika engagement prepearations

  ಕಿರಿಕ್ ಜೋಡಿಯ ನಿಶ್ಚಿತಾರ್ಥಕ್ಕೆ ಕೊಡಗಿನಲ್ಲಿ ಅದ್ಧೂರಿ ವೇದಿಕೆ ಸಿದ್ಧಗೊಂಡಿದೆ. ದುಬೈನಿಂದ ಬರಲಿರುವ ರಕ್ಷಿತ್ ಮತ್ತು ರಶ್ಮಿಕಾ, ನೇರ ನಿಶ್ಚಿತಾರ್ಥ ಸಮಾರಂಭಕ್ಕೆ ಬರಲಿದ್ದಾರೆ. ಹಸಿರು ಮತ್ತು ಹೂವುಗಳ ಸ್ಟೇಜು ಸಿದ್ಧಗೊಂಡಿದೆ. ಪಾಶ್ಚಾತ್ಯ ಶೈಲಿಯಲ್ಲಿ ಉಂಗುರ ಬದಲಾವಣೆ ನಂತರ, ಕೇಕ್ ಕತ್ತರಿಸಿ ಸಂಭ್ರಮಿಸಲಿದ್ದಾರೆ. 18 ಕೆಜಿ ಕೇಕ್ ಕೂಡಾ ಸಿದ್ಧವಾಗಿದೆ. 

  ಇನ್ನು ಊಟದ ವಿಚಾರದಲ್ಲಂತೂ ಸಂಪೂರ್ಣ ವೆರೈಟಿ ಇದೆ. ಕೊಡಗಿನ ಹೆಸರಾಂತ ಬಾಣಸಿಗ ರಾಮ್ ದಾಸ್ ನೇತೃತ್ವದಲ್ಲಿ ಬಾಯಲ್ಲಿ ನೀರೂರಿಸುವ ಖಾದ್ಯಗಳು ಸಿದ್ಧಗೊಂಡಿವೆ. ಚಿಕನ್ ಲಾಲಿಪಪ್, ಪೋರ್ಕ್ ಡ್ರೈ, ಚಿಕನ್ ಡ್ರೈ, ಫಿಂಗರ್ ಚಿಪ್ಸ್, ಚಿಲ್ಲಿ ಮಟನ್, ಟೀತರ್ ಫ್ರೈ, ಕ್ಯಾಸಿವ್ ಮಸಾಲಾ, ಸಿಪಿ ಸಾಲಾಡ್, ಮ್ಯಾಂಗೋ ಮಸಾಲಾ ಪಾರ್ಟಿಗೆ  ಸಿದ್ಧಗೊಂಡಿರುವ ಖಾದ್ಯಗಳು.

  ಡಿನ್ನರ್ ಪಾರ್ಟಿಗೆ ಕೊಡಗು ಶೈಲಿಯ ನೂಪುಟ್ಟು ಕೋಳಿ ಕರಿ, ಕಡಂಬುಟ್ಟು ಪೋರ್ಕ್ ಕರಿ, ಮಟನ್ ಬಿರಿಯಾನಿ, ಆನಿಯನ್ ರೈತಾ, ವೈಟ್ ರೈಸ್, ರಸಂ, ಪೆಪ್ಪರ್ ಚಿಕನ್ ಮಸಾಲಾ, ಫೋರ್ಕ್ ಚಾಪ್ಸ್, ಫೋರ್ಕ್ ಡ್ರೈ, ಮಟನ್ ಮಸಾಲಾ, ಮಟನ್ ಚಾಪ್ಸ್, ಚೈನೀಸ್ ಐಟಂಗಳಾದ ವೆಜ್ ಫ್ರೈಡ್ ರೈಸ್, ಚಿಕನ್ ಫ್ರೈಡ್ ರೈಸ್, ನ್ಯೂಡಲ್ಸ್, ಚಿಕನ್ ನ್ಯೂಡಲ್, ಸ್ವೀಟ್ & ಸಾಲ್ಟ್ ಚಿಕನ್, ಬಟರ್ ನಾನ್, ಬಟರ್ ವ್ಯವಸ್ಥೆ ಕುಲ್ಚಾ, ಕಡಾಯ್ ಚಿಕನ್, ಪಾಲಾಕ್ ಪನ್ನೀರ್ , ಕಡಾಯ್ ವೆಜ್, ದಾಲ್ ಕರಿ.

  50 ಜನರ ದೊಡ್ಡ ತಂಡವೇ ಅಡುಗೆ ಸಿದ್ಧ ಮಾಡಿದೆ. ವೆಜ್ಜು, ನಾನ್​ವೆಜ್ಜುಗಳ ಮಿಶ್ರಣದ ಜೊತೆ, ಕೊಡಗಿನ ಸ್ಟೈಲು, ಫಾರಿನ್ ಸ್ಟೈಲು ಎರಡೂ ಮಿಕ್ಸ್ ಆಗಿದೆ.

 • ರಕ್ಷಿತ್ ಬೆಂಬಲಕ್ಕೆ ಸುದೀಪ್

  sudeep appreciates rakshit shetty's maturity

  ಇತ್ತೀಚೆಗೆ ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ನಡುವೆ ಬ್ರೇಕ್ ಅಪ್ ಆಗಿದೆ ಎಂಬ ಸುದ್ದಿಗಳಿಗೆ, ಗಾಸಿಪ್‍ಗಳಿಗೆ ರಕ್ಷಿತ್ ಶೆಟ್ಟಿ ತುಂಬಾ ಗಾಂಭೀರ್ಯದಿಂದ ಉತ್ತರ ಕೊಟ್ಟಿದ್ದರು. ಸಾಮಾಜಿಕ ಜಾಲತಾಣಗಳಿಗೆ ಮತ್ತೆ ವಾಪಸ್ ಬಂದು, ರಶ್ಮಿಕಾ ಅವರ ಬೆಂಬಲಕ್ಕೆ ನಿಂತಿದ್ದರು. ರಕ್ಷಿತ್ ಶೆಟ್ಟಿ,  ರಶ್ಮಿಕಾ ಅವರ ಬೆಂಬಲಕ್ಕೆ ನಿಂತ ರೀತಿ, ಕಿಚ್ಚ ಸುದೀಪ್ ಅವರಿಗೆ ಇಷ್ಟವಾಗಿದೆ.

  ರಕ್ಷಿತ್ ಶೆಟ್ಟಿ ಈ ವಿಷಯದಲ್ಲಿ ತುಂಬಾ ಘನತೆಯಿಂದ ಉತ್ತರ ಕೊಟ್ಟಿದ್ದಾರೆ.  ಸಾರ್ವಜನಿಕ ಜೀವನದಲ್ಲಿರುವವರು ತಮ್ಮ ಭಾವನೆಗಳನ್ನೂ ಸಾರ್ವಜನಿಕವಾಗಿಯೇ ವ್ಯಕ್ತಪಡಿಸಬೇಕಾದ ಅಗತ್ಯವಿಲ್ಲ. ಪ್ರತಿಯೊಬ್ಬರಿಗೂ ಅವರದ್ದೇ ಆದ ವೈಯಕ್ತಿಕ ಜೀವನ ಇರುತ್ತೆ. ರಕ್ಷಿತ್ ಒಳ್ಳೆಯದಾಗಲಿ ಎಂದಿದ್ದಾರೆ ಸುದೀಪ್.

 • ರಕ್ಷಿತ್ ಶೆಟ್ಟಿ 8 ಪ್ಯಾಕ್ ಮಾಡ್ತಾರಂತೆ..!

  rakshit shetty to build 8 packs?

  ರಕ್ಷಿತ್ ಶೆಟ್ಟಿ, ಮೊದಲಿನಿಂದಲೂ ಹಾಗೇ. ಆರಂಭದ ಚಿತ್ರದಿಂದಲೂ ಇದುವರೆಗೆ ದಪ್ಪವೂ ಆಗಿಲ್ಲ. ಸಣ್ಣವೂ ಆಗಿಲ್ಲ. ಮಾಸ್ ಇಷ್ಟಪಡುವಂತಹ ಸಾಹಸ ದೃಶ್ಯಗಳಲ್ಲಿ ನಟಿಸುವ ರಿಸ್ಕ್ ತೆಗೆದುಕೊಳ್ಳದ ರಕ್ಷಿತ್ ಶೆಟ್ಟಿ, ಇದುವರೆಗೆ ವಿಭಿನ್ನ ಪಾತ್ರಗಳ ಮೂಲಕವಷ್ಟೇ ಗಮನ ಸೆಳೆದ ನಟ. ಅಂತಹಾ ರಕ್ಷಿತ್ ಶೆಟ್ಟಿ ಈಗ 8 ಪ್ಯಾಕ್ ಆಗುತ್ತಿದ್ದಾರೆ.

  ಅವನೇ ಶ್ರೀಮನ್ನಾರಾಯಣ ಚಿತ್ರದಲ್ಲಿ ನಟಿಸುತ್ತಿರುವ ರಕ್ಷಿತ್ ಶೆಟ್ಟಿ, ಚಿತ್ರಕ್ಕಾಗಿ ದೇಹವನ್ನೂ ಹುರಿಗಟ್ಟಿಸುತ್ತಿದ್ದಾರೆ. ಇದುವರೆಗೆ ಚಾಕೊಲೇಟ್ ಹೀರೋ, ಜವಾಬ್ದಾರಿಯುತ ವ್ಯಕ್ತಿ, ಡಾಕ್ಟರ್, ಡಾನ್, ಬೇಜವಾಬ್ದಾರಿ ಹುಡುಗ, ವಿದ್ಯಾರ್ಥಿಯಂತಹ ಪಾತ್ರಗಳಲ್ಲೇ ಮಿಂಚಿದ್ದ ರಕ್ಷಿತ್ ಶೆಟ್ಟಿಗೆ, ಇದು ಹೊಸ ಅನುಭವ. 

   

 • ರಕ್ಷಿತ್ ಶೆಟ್ಟಿ ಅಭಿಮಾನಿಗಳಿಗೊಂದು ಶುಭವಾರ್ತೆ

  rakshit shetty in tenali

  ಗೋಧಿ ಬಣ್ಣ ಸಾಧಾರಣ ಮೈಕಟ್ಟು, ರಕ್ಷಿತ್ ಶೆಟ್ಟಿ ಅಭಿನಯದ ಸೂಪರ್ ಹಿಟ್ ಸಿನಿಮಾ. ಆ ಸಿನಿಮಾದ ನಿರ್ದೇಶಕ ಹೇಮಂತ್ ರಾವ್. ಸದ್ಯಕ್ಕೆ ಕವಲುದಾರಿಯಲ್ಲಿದ್ದಾರೆ. ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ. ಈಗ.. ಆ ಮೂರೂ ಜನ ಮತ್ತೆ ಒಟ್ಟಾಗುತ್ತಿದ್ದಾರೆ. ತೆನಾಲಿ ಮೂಲಕ.

  ತೆನಾಲಿ, ಹೇಮಂತ್ ರಾವ್ ಬರೆಯುತ್ತಿರುವ ಹೊಸ ಕಥೆ. ಸದ್ಯಕ್ಕೆ ಐಡಿಯಾ ಮಾತ್ರ. ಕಥೆ ಬರೆಯೋಕೆ ಕೂರಬೇಕು. ಕವಲುದಾರಿ ಮುಗಿದ ಮೇಲೆ, ಹೊಸ ಸಾಹಸಕ್ಕೆ ಇಳಿಯಲಿದ್ದೇನೆ ಎಂದು ಹೇಳಿಕೊಂಡಿದ್ದಾರೆ ಹೇಮಂತ್ ರಾವ್. ಹಿಟ್ ಜೋಡಿ ಒಂದಾದರೆ, ಹೊಸ ಸಿನಿಮಾ ಮಾಡಿದರೆ, ಅದಕ್ಕಿಂತ ಶುಭ ಸುದ್ದಿ ಇನ್ನೇನಿದೆ. ಅಲ್ವೇ..

 • ರಕ್ಷಿತ್ ಶೆಟ್ಟಿ ಥಗ್ಸ್..ಗೆ ಸುದೀಪ್ ಗುಡ್ ಬೈ

  rakshith sudeep thugs of malgudi

  ಸುದೀಪ್ ಹುಟ್ಟುಹಬ್ಬಕ್ಕೆ ಪೈಲ್ವಾನ್ ಚಿತ್ರತಂಡ ಹೊಸದೊಂದು ಪೋಸ್ಟರ್ ರಿಲೀಸ್ ಮಾಡಿ ಶುಭಕೋರಿತ್ತು. ಚಿತ್ರದ ಫಸ್ಟ್ ಲುಕ್ ಡಿಫರೆಂಟಾಗಿದ್ದ ಕಾರಣ, ಚಿತ್ರರಂಗದ ಹಲವರು ಇದನ್ನು ಮೆಚ್ಚಿಕೊಂಡಿದ್ದರು. ಹಾಗೆ ಪೈಲ್ವಾನ್ ಪೋಸ್ಟರ್‍ನ್ನು ಹೊಗಳಿದ್ದವರಲ್ಲಿ ರಕ್ಷಿತ್ ಶೆಟ್ಟಿ ಕೂಡಾ ಒಬ್ಬರು.

  ಪೈಲ್ವಾನ್ ಚಿತ್ರದ ಪೋಸ್ಟರ್‍ನ್ನು ಹೊಗಳುತ್ತಾ ರಕ್ಷಿತ್ ಶೆಟ್ಟಿ, ಸುದೀಪ್ ಅವರಿಂದ ಆಗದೇ ಇರುವಂತಹದ್ದು ಏನಿದೆ ಎಂದು ಹೇಳಿದ್ದರು. ಅದಕ್ಕೆ ಸುದೀಪ್ ಉತ್ತರ ಥ್ಯಾಂಕ್ಸ್. ಆದರೆ, ಥಗ್ಸ್ ಆಫ್ ಮಾಲ್ಗುಡಿ ಒಂದನ್ನು ಬಿಟ್ಟು ಎಂಬ ಉತ್ತರ ಕೊಟ್ಟರು.

  ಅದಕ್ಕೆ ಪ್ರತಿಕ್ರಿಯೆಯಾಗಿ ರಕ್ಷಿತ್ ಶೆಟ್ಟಿ, ನಾನಿನ್ನೂ ಅದನ್ನು ಕೈಬಿಟ್ಟಿಲ್ಲ ಎಂಬ ಉತ್ತರ ಕೊಟ್ಟರು. ಅದಕ್ಕೆ ಸುದೀಪ್ ನೀಡಿರುವ ಉತ್ತರ ಥ್ಯಾಂಕ್ಸ್ ಸರ್, ಆದರೆ ನನ್ನಿಂದ ಅದನ್ನು ಮುಂದುವರೆಸಲು ಸಾಧ್ಯವೇ ಇಲ್ಲ. ನನ್ನ ಪಾಲಿಗೆ ಅದು ಮುಗಿದ ಅಧ್ಯಾಯ ಎಂಬ ಉತ್ತರ ಕೊಟ್ಟರು. ರಕ್ಷಿತ್ ಶೆಟ್ಟಿಗೆ ಮಾತನಾಡಲು ಏನೂ ಉಳಿದಿರಲಿಲ್ಲ. ಅಲ್ಲಿಗೆ ಥಗ್ಸ್ ಆಫ್ ಮಾಲ್ಗುಡಿ ಚಿತ್ರದ ಕಥೆ ಮುಗಿಯಿತು.

 • ರಕ್ಷಿತ್ ಶೆಟ್ಟಿ ನಿರ್ದೇಶನದ ಕಿಚ್ಚನ ಚಿತ್ರ ಬ್ರೇಕಪ್

  rakshith shetty, sudeep image

  ಕಿಚ್ಚ ಸುದೀಪ್ ನಟಿಸಲಿರುವ `ಥಗ್ಸ್ ಆಫ್ ಮಾಲ್ಗುಡಿ' ಚಿತ್ರವನ್ನು ರಕ್ಷಿತ್ ಶೆಟ್ಟಿ ನಿರ್ದೇಶಿಸಲಿದ್ದಾರೆ ಎಂಬುದು ದೊಡ್ಡ ಮಟ್ಟದಲ್ಲೇ ಸುದ್ದಿಯಾಗಿತ್ತು. ಆ ಚಿತ್ರದ ಒನ್‍ಲೈನ್ ಸುದೀಪ್‍ಗೆ ಇಷ್ಟವಾಗಿದೆ. ಚಿತ್ರಕಥೆಯ ಸ್ಕ್ರಿಪ್ಟ್ ವರ್ಕ್ ನಡೆಯುತ್ತಿದೆ ಎನ್ನುವುದನ್ನು ಸುದೀಪ್ ಮತ್ತು ರಕ್ಷಿತ್ ಶೆಟ್ಟಿ ಇಬ್ಬರೂ ಹೇಳಿಕೊಂಡಿದ್ದರು. ಈಗ ಆ ಚಿತ್ರಕ್ಕೆ ಬ್ರೇಕ್ ಬಿದ್ದಿದೆ. ಸ್ವತಃ ಸುದೀಪ್ ಇದನ್ನು ಹೇಳಿಕೊಂಡಿದ್ದಾರೆ.

  ಥಗ್ಸ್ ಆಫ್ ಮಾಲ್ಗುಡಿ ಚಿತ್ರಕ್ಕೆ ರಕ್ಷಿತ್ ಶೆಟ್ಟಿ ಡೇಟ್ಸ್ ಕೇಳಿದ್ದು ಸುಮಾರು ಎರಡೂವರೆ ವರ್ಷಗಳ ಹಿಂದೆ. ಆದರೆ, ಚಿತ್ರದ ಸ್ಕ್ರಿಪ್ಟ್ ವರ್ಕ್ ಶುರುವಾಗಲೇ ಇಲ್ಲ. ಅದಾದ ಮೇಲೆ ರಕ್ಷಿತ್ ಶೆಟ್ಟಿ ಕೂಡಾ ಬ್ಯುಸಿಯಾಗಿಬಿಟ್ಟರು. ಇದು ಅವರಿಗೆ ಬೆಳೆಯುವ ಸಮಯ. ಚಿತ್ರಗಳು ಹಿಟ್ ಆಗಿವೆ. ಈ ಸಮಯದಲ್ಲಿ ನನ್ನ ಚಿತ್ರ ಮಾಡಿಕೊಡು ಎಂದು ನಾವೂ ಕೇಳಬಾರದು ಎಂದಿದ್ದಾರೆ ಸುದೀಪ್. 

  ಗೋಧಿ ಬಣ್ಣ ಸಾಧಾರಣ ಮೈಕಟ್ಟು ಮತ್ತು ಕಿರಿಕ್ ಪಾರ್ಟಿ ಸಕ್ಸಸ್ ಆದ ನಂತರ ರಕ್ಷಿತ್ ಶೆಟ್ಟಿ ಬ್ಯುಸಿಯಾಗಿ ಹೋಗಿದ್ದಾರೆ. ಒಂದರ ಹಿಂದೊಂದರಂತೆ ಚಿತ್ರಗಳು ಕ್ಯೂನಲ್ಲಿವೆ. ಸದ್ಯಕ್ಕೆ ರಕ್ಷಿತ್ ಶೆಟ್ಟಿ ಮತ್ತೆ ಡೈರೆಕ್ಷನ್ ಕ್ಯಾಪ್ ಹಾಕುವ ಲಕ್ಷಣಗಳಿಲ್ಲ. ಹೀಗಾಗಿಯೇ `ಥಗ್ಸ್ ಆಫ್ ಮಾಲ್ಗುಡಿ' ಸಿನಿಮಾಕ್ಕೆ ಫುಲ್‍ಸ್ಟಾಪ್ ಬಿದ್ದಿದೆ.

  Related Articles :-

  Thugs Of Malgudi Postponed Indefinitely

  Thugs Of Malgudi Will Have Lots Of Newcomers

 • ರಕ್ಷಿತ್ ಶೆಟ್ಟಿ ಬರ್ತ್‍ಡೇ  777 ಚಾರ್ಲಿ ಗಿಫ್ಟ್ 

  rakshit shetty's birthday special

  ರಕ್ಷಿತ್ ಶೆಟ್ಟಿ ಈಗ ಅವನೇ ಶ್ರೀಮನ್ನಾರಾಯಣ ಚಿತ್ರದ ಶೂಟಿಂಗ್‍ನಲ್ಲಿ ಬ್ಯುಸಿ. ವಿಜಯಪುರದ ಸುತ್ತಮುತ್ತ ನಡೆಯುತ್ತಿರುವ ಚಿತ್ರೀಕರಣದ ನಡುವೆಯೇ ರಕ್ಷಿತ್ ಶೆಟ್ಟಿ ಬಿಡುವು ಮಾಡಿಕೊಳ್ಳುತ್ತಿದ್ದಾರೆ. ಆ ಬಿಡುವಿನಲ್ಲೇ 777 ಚಾರ್ಲಿ ಚಿತ್ರಕ್ಕೆ ರೆಡಿಯಾಗಲಿದ್ದಾರೆ.

  ಜೂನ್ 6ನೇ ತಾರೀಕು 777 ಚಾರ್ಲಿ ಚಿತ್ರದ ಮುಹೂರ್ತವೂ ನಡೆಯಲಿದೆ. ಏಕೆಂದರೆ, ಅಂದು ರಕ್ಷಿತ್ ಶೆಟ್ಟಿ ಜನ್ಮದಿನ. ಅಷ್ಟೇ ಅಲ್ಲ, ಅದೇ ದಿನ ಅವನೇ ಶ್ರೀಮನ್ನಾರಾಯಣ ಹಾಗೂ 777ಚಾರ್ಲಿ.. ಎರಡೂ ಚಿತ್ರಗಳ ಫಸ್ಟ್ ಲುಕ್‍ನ್ನೂ ಬಿಡುಗಡೆ ಮಾಡಲು ಚಿತ್ರತಂಡಗಳು ನಿರ್ಧರಿಸಿವೆ. 

  ಅವನೇ ಶ್ರೀಮನ್ನಾರಾಯಣ ಚಿತ್ರಕ್ಕೆ ಅದ್ಧೂರಿ ಸೆಟ್ ಹಾಕಲಾಗುತ್ತಿದ್ದು, ಅದಕ್ಕೆ ಸ್ವಲ್ಪ ಸಮಯ ಬೇಕಿದೆ. ಅವನೇ.. ಚಿತ್ರದ ಸೆಟ್ ರೆಡಿ ಮಾಡುವ ನಡುವೆ ಸಿಗುವ ಗ್ಯಾಪ್‍ನಲ್ಲಿ 777ಚಾರ್ಲಿ ಚಿತ್ರದ ಶೂಟಿಂಗ್ ನಡೆಯಲಿದೆ. 

 • ರಕ್ಷಿತ್ ಶೆಟ್ಟಿ ರಿಟನ್ರ್ಸ್

  rakshit shetty returns

  ಸಿಂಪಲ್ ಸ್ಟಾರ್ ರಕ್ಷಿತ್ ವಾಪಸ್ ಬರುತ್ತಿದ್ದಾರೆ. ಎಲ್ಲಿಗೆ..? ಯಾವಾಗ..? ಹೇಗೆ..? ಎಂಬ ಪ್ರಶ್ನೆಗೆ ಉತ್ತರ ಜೂನ್ 6ರಂದು ಸೋಷಿಯಲ್ ಮೀಡಿಯಾಗಳಲ್ಲಿ ದೊರೆಯಲಿದೆ. ಆ ದಿನ ಅವರ ಹುಟ್ಟುಹಬ್ಬ. ಹಲವು ಕಾರಣಗಳಿಂದ ಸೋಷಿಯಲ್ ಮೀಡಿಯಾಗಳಿಗೆ ಬೈ ಬೈ ಹೇಳಿದ್ದ ರಕ್ಷಿತ್ ಶೆಟ್ಟಿ, ಆ ದಿನ ಗ್ರ್ಯಾಂಡ್ ಎಂಟ್ರಿ ಕೊಡಲಿದ್ದಾರೆ.

  ಟೀಂ ರಕ್ಷಿತ್ ಶೆಟ್ಟಿ ಎಂಬ ರಕ್ಷಿತ್ ಶೆಟ್ಟಿ ಫ್ಯಾನ್ಸ್ ಕ್ಲಬ್, ರಕ್ಷಿತ್ ಶೆಟ್ಟಿ ರೀ ಎಂಟ್ರಿಯನ್ನು ಗ್ರ್ಯಾಂಡ್ ಸೆಲಬ್ರೇಟ್ ಮಾಡುತ್ತಿದೆ. ಆ ದಿನ ಅವನೇ ಶ್ರೀಮನ್ನಾರಾಯಣ ಚಿತ್ರಕ್ಕೆ ಕುಂಭಳಕಾಯಿ ಒಡೆಯುವ ಮೂಲಕ, ಶೂಟಿಂಗ್ ಮುಗಿಸಲಿದೆ ಚಿತ್ರತಂಡ. 777 ಚಾರ್ಲಿ ಹಾಗೂ ಅವನೇ ಶ್ರೀಮನ್ನಾರಾಯಣ ಚಿತ್ರತಂಡಗಳಿಂದ ವಿಶೇಷ ಟೀಸರ್, ಪೋಸ್ಟರ್ ರಿಲೀಸ್ ಆಗಲಿವೆ.

  ಟೀಂ ರಕ್ಷಿತ್ ಶೆಟ್ಟಿ ಹೆಸರಿನಲ್ಲಿ ನೇರವಾಗಿ ಅಭಿಮಾನಿಗಳ ಜೊತೆ ಮಾತನಾಡುತ್ತೇನೆ. ಅದರಲ್ಲಿ ಸದ್ಯಕ್ಕೆ ಅವನೇ ಶ್ರೀಮನ್ನಾರಾಯಣ ಚಿತ್ರದ ಸ್ಪೆಷಾಲಿಟಿ ಹೇಳಲಿದ್ದೇನೆ ಎಂದಿದ್ದಾರೆ ರಕ್ಷಿತ್ ಶೆಟ್ಟಿ.

  ಸ್ಸೋ.. ಗೆಟ್ ರೆಡಿ ಟು ವೆಲ್‍ಕಂ ರಕ್ಷಿತ್ ಶೆಟ್ಟಿ ಇನ್ ಟ್ವಿಟ್ಟರ್.. ಫೇಸ್‍ಬುಕ್.. ಇನ್ಸ್‍ಸ್ಟಾಗ್ರಾಂ.. ಎಕ್ಸೆಟ್ರಾ..ಎಕ್ಸೆಟ್ರಾ..ಎಕ್ಸೆಟ್ರಾ..

 • ರಕ್ಷಿತ್ ಶೆಟ್ಟಿ ಸಿನಿಮಾ ಶೂಟಿಂಗ್‍ನಲ್ಲಿ ಶಿವಣ್ಣ

  shivanna surprises rakshith shetty

  ಇದು ನಡೆದಿರೋದು ಅವನೇ ಶ್ರೀಮನ್ನಾರಾಯಣ ಶೂಟಿಂಗ್ ವೇಳೆ. ರಕ್ಷಿತ್ ಶೆಟ್ಟಿ ಅಭಿನಯದ ಸಿನಿಮಾ ಶೂಟಿಂಗ್ ನಡೆಯುತ್ತಿದ್ದ ಸ್ಥಳಕ್ಕೆ ದಿಢೀರನೆ ಶಿವರಾಜ್‍ಕುಮಾರ್ ಭೇಟಿ ಕೊಟ್ಟಿದ್ದಾರೆ. ಚಿತ್ರತಂಡ ಥ್ರಿಲ್ಲಾಗಿದೆ. ರಕ್ಷಿತ್ ಶೆಟ್ಟಿ ಹಾಗೂ ನಿರ್ದೇಶಕ ಸಚಿನ್, ಚಿತ್ರದ ಕೆಲವು ಮೇಕಿಂಗ್‍ನ ತುಣುಕುಗಳನ್ನು ತೋರಿಸಿದ್ದಾರೆ. 

  ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದ ಚಿತ್ರದ ಶೂಟಿಂಗ್ ಮಾರ್ಚ್‍ನಲ್ಲಿ ಶುರುವಾಗಿದ್ದು ಭರ್ಜರಿಯಾಗಿ ನಡೆಯುತ್ತಿದೆ. ಇದೇ ಮೊದಲ ಬಾರಿಗೆ ರಕ್ಷಿತ್ ಶೆಟ್ಟಿ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶಾನ್ವಿ ಶ್ರೀವಾಸ್ತವ್ ಚಿತ್ರದ ನಾಯಕಿ. ಪೊಲೀಸ್ ಪಾತ್ರವಾಗಿದ್ದರೂ 5 ಬೇರೆ ಬೇರೆ ಗೆಟಪ್‍ಗಳಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ ರಕ್ಷಿತ್ ಶೆಟ್ಟಿ.

 • ರಕ್ಷಿತ್ ಶೆಟ್ಟಿಗೆ 12 ಕೋಟಿ ಸಂಭಾವನೆ

  rakshith gets 12 crore remuneration

  ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದಲ್ಲಿ ರಕ್ಷಿತ್ ಶೆಟ್ಟಿ ಮೂರು ಸಿನಿಮಾ ಮಾಡೋಕೆ ಓಕೆ ಎಂದಿದ್ದಾರೆ ಎಂಬ ಸುದ್ದಿ ಬಂದಿರುವಾಗಲೇ ಆ ಮೂರೂ ಸಿನಿಮಾಗಳಿಗಾಗಿ ಈಗಾಗಲೇ 12 ಕೋಟಿ ಸಂಭಾವನೆ ಕೊಡಲಾಗಿದೆ ಎಂಬ ಸುದ್ದಿಯೂ ಹೊರಬಿದ್ದಿದೆ.

  ರಕ್ಷಿತ್ ಶೆಟ್ಟಿ ಒಪ್ಪಿಕೊಂಡಿರುವ ಮೂರು ಚಿತ್ರಗಳಲ್ಲಿ 2 ಚಿತ್ರಗಳಿಗೆ ಅವರೇ ಹೀರೋ. ಇನ್ನೊಂದು ಸಿನಿಮಾಗೆ ಹೀರೋ ಕಂ ಡೈರೆಕ್ಟರ್. ಈ ಮೂರೂ ಸಿನಿಮಾಗಳಿಗೆ ತಲಾ 4 ಕೋಟಿಯಂತೆ 12 ಕೋಟಿ ಸಂಭಾವನೆ ನೀಡಲಾಗಿದೆಯಂತೆ.

 • ರಕ್ಷಿತ್ ಶೆಟ್ಟಿಗೆ ಜೀರ್ಜಿಂಬೆ ಸೈಕಲ್ ಕಾಣಿಕೆ

  rakshit shetty gets special gift from jeerjimbe hudgi

  ರಕ್ಷಿತ್ ಶೆಟ್ಟಿಗೆ ಒಂದು ಮರೆಯಲಾಗದ ಉಡುಗೊರೆ ಕೊಟ್ಟಿದೆ. ರಕ್ಷಿತ್ ಶೆಟ್ಟಿಗೆ ಅಂತಾದ್ದೊಂದು ಕಾಣಿಕೆ ನೀಡಿರುವುದು ಸಿರಿ ವಾನಳ್ಳಿ. ಆ ಕಾಣಿಕೆ ನೀಡುವುದಕ್ಕೆ ಕಾರಣ.. ಆಕೆ ಜೀರ್ಜಿಂಬೆ ಚಿತ್ರದ ನಾಯಕಿ. ಜೀರ್ಜಿಂಬೆ ಎಂಬ ಮಕ್ಕಳ ಚಿತ್ರದಲ್ಲಿ ಸೈಕಲ್ ಮಹತ್ವದ ಪಾತ್ರ ವಹಿಸುತ್ತದೆ. ಸೈಕಲ್ ಕಲಿಯುತ್ತಾ ಕಲಿಯುತ್ತಾ ಬಾಲ್ಯ ವಿವಾಹದ ಸಿಡಿದೇಳುವ ರುದ್ರಿಯಾಗಿ ನಟಿಸಿದ್ದಾಳೆ ಸಿರಿ ವಾನಳ್ಳಿ. ಆ ಸಿರಿ, ರಕ್ಷಿತ್ ಶೆಟ್ಟಿಗೆ ಸೈಕಲ್‍ವೊಂದನ್ನು ಗಿಫ್ಟ್ ಆಗಿ ನೀಡಿದ್ದಾಳೆ.

  ಸೈಕಲ್ ಜೊತೆ ಜೊತೆಯಲ್ಲೇ ಬಾಲ್ಯದ ನೆನಪಿಗೆ ಜಾರಿದ ರಕ್ಷಿತ್ ಶೆಟ್ಟಿ, ತಮ್ಮ ಮೊದಲ ಸೈಕಲ್ ಕಥೆ ಹಂಚಿಕೊಂಡರು. ಮಕ್ಕಳು ಗಿಫ್ಟ್ ಮತ್ತು ಸುತ್ತುವ ಚಟಕ್ಕೆ ಬಿದ್ದರೆ ಹಾಳಾಗಿ ಬಿಡುತ್ತಾರೆ ಅನ್ನೋದು ರಕ್ಷಿತ್ ತಂದೆಯ ವಾದವಾಗಿತ್ತಂತೆ. ಮನೆಯನ್ನು ಬಿಟ್ಟು ಹೊರಗೇ ಹೋಗದ ರಕ್ಷಿತ್‍ಗೆ ಆಗ.. ರಕ್ಷಿತ್‍ರ ಚಿಕ್ಕಪ್ಪ, ತಮ್ಮ ಮನೆಗೆ ಬಂದು 2 ವಾರ ಇದ್ದರೆ ಸೈಕಲ್ ಕೊಡಿಸುವ ಆಸೆ ತೋರಿಸಿ ಕರೆದುಕೊಂಡು ಹೋಗಿದ್ದರಂತೆ. ತಮ್ಮ ಮೊದಲ ಸೈಕಲ್ ಬಂದಿದ್ದು ಹಾಗೆ ಎಂದಿದ್ದಾರೆ ರಕ್ಷಿತ್ ಶೆಟ್ಟಿ.

  ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಕಾರ್ತಿಕ್ ಸರಗೂರ್ ನಿರ್ದೇಶನದ ಸಿನಿಮಾದಲ್ಲಿ ಮಕ್ಕಳಿಗೂ ಪ್ರಿಯವಾದ ಅಂಶಗಳಿವೆ ಅಂತಾರೆ ಪುಷ್ಕರ್.

 • ರಕ್ಷಿತ್ ಶೆಟ್ಟಿಗೆ ಹೀರೋಯಿನ್ ಆಗೋಕೆ ಆಸೆಯಿದ್ದರೆ..

  pushkar and rakshit calls for suditions

  ರಕ್ಷಿತ್ ಶೆಟ್ಟಿ ಅಭಿನಯದ ಚಾರ್ಲಿ 777 ಚಿತ್ರ ಸೆಟ್ಟೇರುತ್ತಿದೆ. ಈ ಚಿತ್ರಕ್ಕೆ ಅಡಿಷನ್ ಮೂಲಕವೇ ನಾಯಕಿಯನ್ನು ಆಯ್ಕೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಚಿತ್ರಕ್ಕೆ ಹೊಸ ಮುಖ ಬೇಕು. ಅಭಿನಯಿಸುವ ಪ್ರತಿಭೆ ಇರಬೇಕು. ಪರಂವಾ ಸ್ಟುಡಿಯೋಸ್‍ನಲ್ಲಿ ನಿರ್ಮಾಣವಾಗುತ್ತಿರುವ ಚಿತ್ರಕ್ಕೆ ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಪಕರು.

  ನಾಯಿ ಮತ್ತು ಮನುಷ್ಯನ ನಡುವಿನ ಬಾಂಡಿಂಗ್, ಚಿತ್ರದ ಕಥೆ. ರಕ್ಷಿತ್ ಅವರ ಬಳಿಯೇ ಕೆಲಸ ಮಾಡುತ್ತಿದ್ದ ಕಿರಣ್ ರಾಜ್, ಚಿತ್ರದ ನಿರ್ದೇಶಕ. ಚಾರ್ಲಿ ಅನ್ನೋದು ನಾಯಿಯ ಹೆಸರಾದರೆ, 777 ಅನ್ನೋದು ಅದರ ಲೈಸೆನ್ಸ್ ನಂಬರ್. 

  ಸ್ಸೋ.. ಇನ್ನೇಕೆ ತಡ.. This email address is being protected from spambots. You need JavaScript enabled to view it. ಗೆ ಒಂದು ಮೇಯ್ಲ್ ಮಾಡಿ. ನಿಮಗೆ ನೆನಪಿರಲಿ.. ರಶ್ಮಿಕಾ ಮಂದಣ್ಣ, ಸಂಯುಕ್ತಾ ಹೆಗಡೆ ಚಿತ್ರಕ್ಕೆ ಆಯ್ಕೆಯಾಗಿದ್ದೂ ಕೂಡಾ ಇಂತಹ ಅಡಿಷನ್ ಮೂಲಕವೇ.

   

 • ರಕ್ಷಿತ್ ಸಿನಿಮಾಗೆ ರಶ್ಮಿಕಾ ವೇಯ್ಟಿಂಗ್

  rashmika eager to watch avane srimannaryana

  ಪ್ರೀತಿ ಮುರಿದುಬಿದ್ದ ನಂತರೂ, ಅಭಿಮಾನಿಗಳಿಂದ ಅತಿರೇಕದ ಟೀಕೆಗೆ ಗುರಿಯಾದರೂ ಸಾರ್ವಜನಿಕವಾಗಿ ಅತ್ಯಂತ ಗೌರವದಿಂದ ರಶ್ಮಿಕಾ ಮಂದಣ್ಣ-ರಕ್ಷಿತ್ ಶೆಟ್ಟಿ ಜೋಡಿ ಮತ್ತೊಮ್ಮೆ ಅದೇ ಮೆಚ್ಯುರಿಟಿ ಪ್ರದರ್ಶನ ಮಾಡಿದೆ. ರಕ್ಷಿತ್ ಶೆಟ್ಟಿಯವರ ಅವನೇ ಶ್ರೀಮನ್ನಾರಾಯಣ ಚಿತ್ರವನ್ನು ನೋಡಲು ಕಾತುರದಿಂದ ಕಾಯುತ್ತಿರುವುದಾಗಿ ರಶ್ಮಿಕಾ ಮಂದಣ್ಣ ಹೇಳಿದ್ದಾರೆ.

  ಅವನೇ ಶ್ರೀಮನ್ನಾರಾಯಣ ಚಿತ್ರದ ನಿರ್ದೇಶಕ ಸಚಿನ್ ಅವರಿಗೆ ನವೆಂಬರ್ 30 ಹುಟ್ಟುಹಬ್ಬ. ಹುಟ್ಟುಹಬ್ಬದ ಶುಭಾಶಯ ಕೋರಿದ ರಶ್ಮಿಕಾ, ಅವನೇ ಶ್ರೀಮನ್ನಾರಾಯಣ ಚಿತ್ರವನ್ನು ನೋಡಲು ಕಾಯುತ್ತಿದ್ದೇನೆ ಎಂದಿದ್ದಾರೆ. ಪುಷ್ಕರ್ ಮಲ್ಲಿಕಾರ್ಜುನಯ್ಯ, ರಕ್ಷಿತ್ ಶೆಟ್ಟಿ ನಿರ್ಮಾಣದ ಅವನೇ ಶ್ರೀಮನ್ನಾರಾಯಣ 5 ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ.

Geetha Movie Gallery

Adhyaksha In America Audio Release Images