ಭಾದ್ರಪದ ಶುಕ್ಲದ ಚೌತಿಯಂದು../ ಚಂದಿರನ ನೋಡಿದರೆ ಅಪವಾದ ತಪ್ಪದು../ ಗಜಮುಖನೆ ಗಣಮುಖನೆ ನಿನಗೆ ವಂದನೆ.. /ಕಾಪಾಡು ಶ್ರೀಸತ್ಯನಾರಾಯಣ../ ಈ ದೇಹದಿಂದ ದೂರನಾದೆ ಏಕೆ ಆತ್ಮನೆ../ ಸಕಲ ಕಾರ್ಯಕಾರಣೆಗೆ ಸಾಷ್ಟಾಂಗ ವಂದನೆ../ ನೀ ನಡೆವ ದಾರಿಯಲ್ಲಿ ನಗೆ ಹೂವು ಬಾಡದಿರಲಿ../ ಪಂಚಮವೇದ ಪ್ರೇಮದ ನಾದ../ಬಾರೆ ಬಾರೆ ಚಂದದ ಚೆಲುವಿನ ತಾರೆ../ ವಿರಹಾ ನೂರು ನೂರು ತರಹ../ ಪ್ರೀತಿನೇ ಆ ದ್ಯಾವ್ರು ತಂದಾ ಆಸ್ತಿ ನಮ್ಮ ಪಾಲಿಗೆ../ ಭಾರತ ಭೂಶಿರ ಮಂದಿರ ಸುಂದರಿ../ ಆ ದೇವರೆ ನುಡಿದಾ ಮೊದಲ ನುಡಿ ಪ್ರೇಮ.. ಪ್ರೇಮ.. ಪ್ರೇಮವೆಂಬಾ ಹೊನ್ನುಡಿ/ ಈ ಸಂಭಾಷಣೆ.. ನಮ್ಮ ಈ ಪ್ರೇಮ ಸಂಭಾಷಣೆ../ ಹದಿನಾಲ್ಕು ವರುಷ ವನವಾಸದಿಂದ ಮರಳಿ ಬಂದಳು ಸೀತೆ../ ಆಸೆಯ ಭಾವ ಒಲವಿನ ಜೀವ../ ನೋಡು ಬಾ ನೋಡು ಬಾ ನಮ್ಮೂರ../ ನೀನೇ ಸಾಕಿದಾ ಗಿಣಿ..
ಒಂದಾ..ಎರಡಾ.. ವಿಜಯ ನಾರಸಿಂಹ ಬರೆದ ಎಲ್ಲ ಗೀತೆಗಳನ್ನೂ ಬಿಡಿ, ಅಮರಗೀತೆಗಳನ್ನಷ್ಟೇ ಹಿಡಿದು ಕುಳಿತರೆ ಪುಟಗಳು ತುಂಬಿ ಹೋಗುತ್ತವೆ. ಡಾ.ರಾಜ್ ಚಿತ್ರಗಳಲ್ಲಿ, ಪುಟ್ಟಣ್ಣ, ಸಿದ್ದಲಿಂಗಯ್ಯನವರ ಚಿತ್ರಗಳಲ್ಲಿ ವಿಜಯನಾರಸಿಂಹ ಹಾಡುಗಳು ಮುತ್ತುರತ್ನವಜ್ರಗಳಂತೆ ಕಂಗೊಳಿಸಿದ್ದವು. ಅವರು ನಿಧನರಾಗಿದ್ದು 2001ರಲ್ಲಿ. ಆ ಅದ್ಭುತ ಗೀತರಚನೆಕಾರನ ಹಾಡೊಂದು ಪ್ರೇಮಬರಹ ಚಿತ್ರದಲ್ಲಿದೆ.
ನಿಮಗೆಲ್ಲ ಗೊತ್ತಿರುವ ಹಾಗೆ, ಪ್ರೇಮಬರಹ, ಅರ್ಜುನ್ ಸರ್ಜಾ ಅವರ ಮಗಳ ಸಿನಿಮಾ. ಮಗಳನ್ನು ಕನ್ನಡ ಮತ್ತು ತಮಿಳಿನಲ್ಲಿ ಏಕಕಾಲದಲ್ಲಿ ಲಾಂಚ್ ಮಾಡುತ್ತಿರುವ ಅರ್ಜುನ್ ಸರ್ಜಾ ಅವರಿಗೆ, ಚಿತ್ರದಲ್ಲಿ ಆಂಜನೇಯನ ಮೇಲೊಂದು ಹಾಡು ಬೇಕಿತ್ತು. ಯಾರಿಂದ ಬರೆಸುವುದು ಎಂದು ಯೋಚಿಸಿದಾಗ, ಹಿಂದೆಂದೋ ವಿಜಯ ನಾರಸಿಂಹ ಅವರು ಬರೆದಿದ್ದ ಹಾಡು ನೆನಪಾಯಿತು. ಎರಡನೇ ಯೋಚನೆಯನ್ನೇ ಮಾಡದೆ, ಆ ಹಾಡನ್ನು ಸಂಗೀತಕ್ಕೆ ಕೊಟ್ಟರು. ಅರ್ಜುನ್ ಜನ್ಯಾ ಅದ್ಭುತ ಸಂಗೀತವನ್ನೂ ಸಂಯೋಜಿಸಿದರು.
ಆ ಹಾಡು ಪ್ರೇಮ ಬರಹ ಚಿತ್ರದಲ್ಲಿ ಮುತ್ತುರತ್ನವಜ್ರದಂತೆ ಮಿನುಗಲಿದೆ ಅನ್ನೊದು ಅರ್ಜುನ್ ಸರ್ಜಾ ಭರವಸೆ. ಆ ಹಾಡನ್ನಷ್ಟೇ ಅಲ್ಲ, ನೀವು ಪ್ರೇಮ ಬರಹ ಚಿತ್ರದಲ್ಲಿ ಪ್ರತಾಪ್ ಚಿತ್ರದಲ್ಲಿ ಅರ್ಜುನ್ ಸರ್ಜಾ-ಸುಧಾರಾಣಿ ಮೇಲೆ ಚಿತ್ರಿತವಾಗಿದ್ದ ಪ್ರೇಮ ಬರಹ ಕೋಟಿ ತರಹ ಹಾಡನ್ನೂ ಕೇಳಬಹುದು. ಚಿತ್ರ ಇದೇ ವಾರ ತೆರೆಗೆ ಬರುತ್ತಿದೆ.