` yashomarga - chitraloka.com | Kannada Movie News, Reviews | Image

yashomarga

  • 16ನೇ ಶತಮಾನದ ಪುಷ್ಕರಣಿಗೆ ಯಶ್ ಯಶೋಮಾರ್ಗ ಕಾಯಕಲ್ಪ

    16ನೇ ಶತಮಾನದ ಪುಷ್ಕರಣಿಗೆ ಯಶ್ ಯಶೋಮಾರ್ಗ ಕಾಯಕಲ್ಪ

    ಇದು ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಆನಂದಪುರದ ಬಳಿ ಇರೋ ಚಂಪಕ ಸರಸು ಪುಷ್ಕರಣಿ. ಈ ಕಲ್ಯಾಣಿಯನ್ನು ಕೆಳದಿ ಅರಸರ ಕಾಲದಲ್ಲಿ ಕಟ್ಟಲಾಗಿತ್ತು. ಆದರೆ, ಸರಿಯಾಗಿ ನಿಗಾವಹಿಸದ ಕಾರಣ ಕಲ್ಯಾಣಿಯ ಗೋಡೆಗಳು ಬಿದ್ದು ಹೋಗಿ, ಕಲ್ಲುಗಳು ಹಾಳಾಗಿತ್ತು. ಸುಣ್ಣದ ಗಾರೆ ಕಿತ್ತು ಹೋಗಿ, ಕಲ್ಯಾಣಿಯ ಗೋಡೆಗಳ ಮಧ್ಯೆ ಮರಗಳ ಬೇರು, ರೆಂಬೆಕೊಂಬೆಗಳು ಬೆಳೆದಿದ್ದವು. ಆ ಕಲ್ಯಾಣಿಗೀಗ ಮರುಜೀವ ನೀಡಲಾಗಿದೆ.

    ಇದು ಗೊತ್ತಾಗಿದ್ದು ಪರಿಸರ ಪ್ರೇಮಿ ಶಿವಾನಂದ ಕಳವೆ ಅವರಿಂದ. ಪರಿಸರ ಪ್ರೇಮಿ ಕಳವೆ, ಜಲತಜ್ಞರೆಂದೇ ಹೆಸರಾದವರು. ಹಲವು ಕೆರೆ, ಕಲ್ಯಾಣಿಗಳ ಪುನಃಶ್ಚೇತನದ ಬಗ್ಗೆ ವೈಜ್ಞಾನಿಕವಾಗಿ ಬಲ್ಲವರು. ಗ್ರಾಮೀಣ ಪ್ರದೇಶಗಳಲ್ಲಿ ಜನಪೂರಣದ ಬಗ್ಗೆಯೇ ಕೆಲಸ ಮಾಡುತ್ತಿರುವ ಅವರು ಈ ಕಲ್ಯಾಣಿಯ ವಿಷಯವನ್ನು ನಟ ಯಶ್ ಅವರ ಗಮನಕ್ಕೆ ತಂದರು. ಯಶೋಮಾರ್ಗದ ಮೂಲಕ ಕೆಲಸ ಶುರುವಾಯಿತು.

    ಈ ಕಲ್ಯಾಣಿಗೆ ಪುರಾತನ ಮಾದರಿಯನ್ನೇ ಬಳಸಲಾಗಿದೆ. ಅಂದರೆ ಕಾಂಕ್ರೀಟ್ ಮತ್ತು ಸಿಮೆಂಟ್ ಬಳಸಿಲ್ಲ. ಸುಮಾರು 60ರಿಂದ 100 ಕೆಜಿ ತೂಕದ ಕಲ್ಲುಗಳನ್ನು ಬಳಸಿ, ಹಿಂದೆ ಯಾವ ರೀತಿ ಕಟ್ಟಲಾಗಿತ್ತೋ.. ಅದೇ ಮಾದರಿಯಲ್ಲಿ ಕಟ್ಟಲಾಗಿದೆ. ಮಣ್ಣನ್ನು ಕಲೆಸಿ ಮೂರ್ನಾಲ್ಕು ದಿನ ಬಿಟ್ಟು, ಆ ಕೆಸರಿನ ಮಣ್ಣು ಅಂಟಂಟು ಆಗಲು ಬಿಟ್ಟು, ಆ ಅಂಟಂಟು ಕೆಸರಿನ ಮಣ್ಣಿನಿಂದ ಕಟ್ಟಲಾಗಿದೆ. ಕಾಂಕ್ರೀಟ್ ಬಳಸಿ ಮಾಡಿದರೆ ಖರ್ಚು ಕಡಿಮೆ. ಮಣ್ಣಿನ ಕೆಲಸಕ್ಕೇ ಖರ್ಚು ಜಾಸ್ತಿ. ಆದರೂ ಕಳವೆ ಅವರು ಹೇಳಿದ ಆ ಮಾರ್ಗವನ್ನೇ ಬಳಸಿ ಕಲ್ಯಾಣಿ ಪುನಶ್ಚೇತನಗೊಳಿಸಿದೆ ಯಶ್ ಅವರ ಯಶೋಮಾರ್ಗ. ಸುಮಾರು ಒಂದೂವರೆ ತಿಂಗಳಿಂದ ಈ ಕೆಲಸ ನಡೆಯುತ್ತಿದ್ದು, ಕಾಮಗಾರಿ ಮುಕ್ತಾಯದ ಹಂತದಲ್ಲಿದೆಯಂತೆ.

  • Akira Producer Donates 10 Lakhs To Yashomarga

    yash, anish image

    Producer Chethan of Aneesh Tejeshwar starrer 'Akira' has donated Rs 10 lakhs to Yash's Yashomarga Foundation which is doing charity by distributing drinking water to thousands of people in drought struck villages in the northern parts of Karnataka.

    Recently, Yash had started Yashomarga Foundation and has distributed free drinking water to drought struck villages in North Karnataka. Now 'Akira' producer Chethan has lent his helping hand to Yashomarga foundation and has donated Rs 10 lakh towards charity

    Meanwhile, 'Akira' is running successfully and sources say the film has earned 3.25 crores in the first week.

  • Yash's Work Draws Water

    yash image

    Natural spring water has started collecting in the Tallur lake in Koppal. This is the lake in which actor Yash's Yashomarga foundation has taken up desilting work. Because of silt the lake was not collecting water. The work started in the last week of February and is still underway. Even before completion water has started collecting in the lake from natural springs inside the lake. The lake is 96 acres across and its water will be used by villagers of 20 villages. After Yashomarga started work many villagers were inspired and have started working in removing silt from the lake.

    Yash has also clarified that as reported in some media, the cost of the lake rejuvenation project is not Rs 4 crore but will be completed in less than half that amount. This is possible because local villagers have come forward to do the work on voluntary basis and remove silt and transport it to their farms. The project has received maximum support from the people.

     

  • ಕೆಳದಿ ಅರಸರ ಪುಷ್ಕರಣಿಗೆ ಯಶ್ ಪುನರುಜ್ಜೀವನ

    ಕೆಳದಿ ಅರಸರ ಪುಷ್ಕರಣಿಗೆ ಯಶ್ ಪುನರುಜ್ಜೀವನ

    ಅದು ಚಂಪಕ ಸರಸ್ಸು ಪುಷ್ಕರಣಿ. ಅದಕ್ಕೆ ನಾನೂರು ವರ್ಷಕ್ಕೂ ದೊಡ್ಡ ಇತಿಹಾಸವಿದೆ. ಕೆಳದಿ ಅರಸರ ಕಾಲದಲ್ಲಿ ನಿರ್ಮಾಣವಾಗಿದ್ದ 5800 ಕೆರೆಗಳಲ್ಲಿ ಇದೂ ಒಂದು. ಶಿವಮೊಗ್ಗ ಜಿಲ್ಲೆ, ಸಾಗರ ತಾಲೂಕಿನ ಆನಂದಪುರದ ಬಳಿ ಇದೆ. ಇದು ಶಿಥಿಲಗೊಂಡಿತ್ತು. ಹಾಳಾಗುವ ಹಂತದಲ್ಲಿದ್ದ ಪುಷ್ಕರಣಿಯನ್ನು ಪುನರುಜ್ಜೀವನಗೊಳಿಸಲು ಮುಂದಾದವರು ಜಲತಜ್ಞ ಶಿವಾನಂದ ಕಳವೆ. ಇತಿಹಾಸಜ್ಞ ಗುಂಡಾ ಜೋಯಿಸ್. ಇವರಲ್ಲಿ ಶಿವಾನಂದ ಕಳವೆಯವರಿಗೆ ಯಶ್ ಅವರ ವೈಯಕ್ತಿಕ ಪರಿಚಯವೂ ಇತ್ತು. ನಂತರ ಶುರುವಾಗಿದ್ದೇ ಪುನರುಜ್ಜೀವನ ಕಾರ್ಯ. ಕೇವಲ 6 ತಿಂಗಳ ಹಿಂದೆ ಶುರುವಾದ ಕೆಲಸವೀಗ ಮುಕ್ತಾಯಗೊಂಡಿದೆ. ಪುಷ್ಕರಣಿ ಪುನರುಜ್ಜೀವನಗೊಳಿಸಿ, ಅದನ್ನು ಗ್ರಾಮಸ್ಥರಿಗೇ ನೀಡಿದೆ ಯಶೋಮಾರ್ಗ ತಂಡ.

    ಸಾಗರ ಮತ್ತು ಶಿಕಾರಿಪುರ ಮಾರ್ಗದ ಮಧ್ಯೆ

    ಮಲಂದೂರು ಗ್ರಾಮದಲ್ಲಿರುವ ಈ ಕೆರೆಯ ಉದ್ದ 77.8 ಮೀಟರ್. ಅಗಲ 76.8 ಮೀಟರ್. ಸ್ಥಳೀಯವಾಗಿ ದೊರೆಯುವ ಜಂಬಿಟ್ಟಗೀ ಕಲ್ಲುಗಳನ್ನೇ ಬಳಸಿ ಪುಷ್ಕರಣಿಯನ್ನು ಪುನರುಜ್ಜೀವನಗೊಳಿಸಿದ್ದು ವಿಶೇಷ. ಅಂದಹಾಗೆ ಈ ಕೆರೆಯ ಹಿಂದೊಂದು ಪ್ರೇಮಕಥೆಯೂ ಇದೆ. ಇದು ಕೆಳದಿಯ ಶಿವಪ್ಪನಾಯಕ ಕಟ್ಟಿಸಿದ ಕೆರೆ. ಆತ ತನ್ನ ಪ್ರೇಯಸಿ ಚಂಪಕಳ ನೆನಪಿಗಾಗಿ ಕಟ್ಟಿದ ಪುಷ್ಕರಣಿಯೇ ಇದು. ಇತಿಹಾಸದ ಅರಿವಿಲ್ಲದೆ ಹಾಳುಕೊಂಪೆಯಾಗಿದ್ದ ಪುಷ್ಕರಣಿಯ ಪುನರುಜ್ಜೀವನದ ಕೆಲಸ 2021ರ ನವೆಂಬರ್‍ನಲ್ಲಿ ಶುರುವಾಗಿತ್ತು. ಸ್ಥಳೀಯವಾಗಿ 30-40 ಜನರ ತಂಡ ಕಟ್ಟಿಕೊಂಡು ಕೆಲಸ ಮಾಡಿದೆವು. ಈಗ ಅದ್ಭುತವಾಗಿ ಕಾಣುತ್ತಿದೆ ಎಂದು ಮಾಹಿತಿ ನೀಡಿದ್ದಾರೆ ಶಿವಾನಂದ ಕಳವೆ.

  • ತಾವೇ ತುಂಬಿಸಿದ ಕೆರೆಗೆ ಯಶ್, ರಾಧಿಕಾ ಬಾಗಿನ

    yash radhika pandit at yalaburga district

    ರಾಕಿಂಗ್‌ ಸ್ಟಾರ್‌ ಯಶ್‌ ಹಾಗೂ ರಾಧಿಕಾ ಪಂಡಿತ್ ಯಲಬುರ್ಗಾ ತಾಲೂಕಿನ ತಲ್ಲೂರು ಕೆರೆಗೆ ಬಾಗಿನ ಅರ್ಪಿಸಿದ್ದಾರೆ. ಬರದಿಂದ ನೀರೇ ಬತ್ತಿ ಹೋಗಿದ್ದ ಈ ಕೆರೆಯ ಪುನರುಜ್ಜೀವನಕ್ಕೆ ಯಶ್ ಸುಮಾರು 1 ಕೋಟಿ ಖರ್ಚು ಮಾಡಿದ್ದಾರೆ. ತಾವೇ ತುಂಬಿಸಿದ ಕೆರೆಗೆ ದಂಪತಿ ಬಾಗಿನ ಅರ್ಪಿಸಿ, ಗಂಗೆಗೆ ಕೈ ಮುಗಿದಿದ್ದಾರೆ.

    ಯಶೋಮಾರ್ಗ ಫೌಂಡೇಶನ್‌ ಮೂಲಕ ಫೆಬ್ರವರಿ 28ರಂದು ಕಾಮಗಾರಿ ಶುರುವಾಗಿತ್ತು. ಹೂಳು ತೆಗೆಯುವ ವೇಳೆ ಕೆಲವೇ ದಿನಗಳಲ್ಲಿ ಕೆರೆಯಲ್ಲಿ ಅಂತರ್ಜಲ ಉಕ್ಕಿ ಹರಿದಿತ್ತು. ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ಕೆರೆ ಮತ್ತಷ್ಟು ತುಂಬಿರುವುದು ಗ್ರಾಮಸ್ಥರ ಮೊಗದಲ್ಲಿ ಸಂತಸ ಮೂಡಿಸಿದೆ.

    ತುಂಬಿದ ಕೆರೆಯನ್ನು ನೋಡಲು ಸಂತಸವಾಗುತ್ತಿದೆ ಎಂದು ಯಶ್ ಹೇಳಿದ್ದಾರೆ.

  • ಸಿಂಧನೂರಿನ ಕಾಂಗ್ರೆಸ್ ಪಾದಯಾತ್ರೆಗೆ ಯಶ್ ಹೋಗುತ್ತಿಲ್ಲ - Exclusive

    yash, sindanoor function

    ಸಿಂಧನೂರಿನಲ್ಲಿ ರಾಷ್ಟ್ರೀಕೃತ ಬ್ಯಾಂಕ್​ಗಳಿಂದ ಸಾಲ ಮನ್ನಾ ಮಾಡಿಸುವಂತೆ ಕಾಂಗ್ರೆಸ್ ಜುಲೈ 31ರಂದು ಬೃಹತ್ ಱಲಿ ಆಯೋಜಿಸಿದೆ. ರಾಯುಚೂರು ಜಿಲ್ಲಾ ಯುವ ಕಾಂಗ್ರೆಸ್ ಆಯೋಜಿಸಿರುವ ಱಲಿಯಲ್ಲಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಸೇರಿದಂತೆ ಕಾಂಗ್ರೆಸ್​ನ ಅತಿರಥ ನಾಯಕರೆಲ್ಲ ಭಾಗವಹಿಸುತ್ತಿದ್ದಾರೆ. 10 ಕಿ.ಮೀ. ಪಾದಯಾತ್ರೆಯನ್ನೂ ನಡೆಸಲಿದ್ದಾರೆ. ಆದರೆ, ವಿಷಯ ಅದಲ್ಲ. ಆ ಱಲಿಯಲ್ಲಿ ಚಿತ್ರನಟ ಯಶ್ ಕೂಡಾ ಭಾಗವಹಿಸುತ್ತಿದ್ದಾರೆ ಎಂದು ಯುವ ಕಾಂಗ್ರೆಸ್ ಅಧ್ಯಕ್ಷ ಬಸವನಗೌಡ ಬಾದರ್ಲಿ ಸುದ್ದಿಗೋಷ್ಟಿಯಲ್ಲಿ ಹೇಳಿದ್ದರು. ಅಷ್ಟೇ ಅಲ್ಲ, ಆ ದಿನ ಕಾಂಗ್ರೆಸ್​ನ ಱಲಿಯಲ್ಲಿ ಭಾಗವಹಿಸಲಿರುವ ಯಶ್ ಅವರಿಗೆ ಸ್ವಾಗತ ಕೋರುವ ಪೋಸ್ಟರ್​ಗಳು, ಬ್ಯಾನರ್​ಗಳು ಅಲ್ಲಿ ರಾರಾಜಿಸುತ್ತಿವೆ. 

    ಇದು ನಿಜಾನಾ..? 

    ಯಶ್ ಆ ಱಲಿಗೆ ಹೋಗುತ್ತಿದ್ದಾರಾ ಎಂದು ಯಶ್ ಅವರನ್ನೇ ಸಂಪರ್ಕಿಸಲು ಚಿತ್ರಲೋಕ ಡಾಟ್ ಕಾಮ್ ಪ್ರಯತ್ನಿಸಿತು. ಆದರೆ, ಯಶ್ ಕೆಜಿಎಫ್​ ಶೂಟಿಂಗ್​ನಲ್ಲಿ ಬ್ಯುಸಿಯಿದ್ದ ಕಾರಣ, ಫೋನ್ ಸ್ವೀಕರಿಸಲಿಲ್ಲ. ನಂತರ ಚಿತ್ರಲೋಕ ಡಾಟ್ ಕಾಮ್​ಗೆ ಸಿಕ್ಕ ಸುದ್ದಿಮೂಲಗಳ ಪ್ರಕಾರ, ಸಿಂಧನೂರಿನಲ್ಲಿ ಅಂಥಾದ್ದೊಂದು ಕಾರ್ಯಕ್ರಮ ಇದೆ ಎನ್ನುವ ವಿಷಯವೇ ಯಶ್​ಗೆ ಗೊತ್ತಿಲ್ಲ. ಯಶ್​ ಅವರಿಗೂ ಈ ಪೋಸ್ಟರ್​ಗಳು, ಹೇಳಿಕೆಗಳು ಅಚ್ಚರಿ ತಂದಿವೆ. 

    ಕಮಿಟ್​ಮೆಂಟ್ ವಿಷಯಕ್ಕೆ ಬಂದರೆ ಯಶ್ ಚಿತ್ರವೊಂದರ ಶೂಟಿಂಗ್​ನಲ್ಲಿ ಅದು ಎಂತಹ ಕಾರ್ಯಕ್ರಮವೇ ಇದ್ದರೂ ಹೋಗೋದಿಲ್ಲ. ಶೂಟಿಂಗ್​ನ್ನು ಯಾವುದೇ ಕಾರಣಕ್ಕೂ ಮಿಸ್ ಮಾಡುವುದಿಲ್ಲ. ಅದರಲ್ಲೂ ಕೆಜಿಎಫ್ ಚಿತ್ರದಲ್ಲಿ ಯಶ್ ಎಷ್ಟು ಬ್ಯುಸಿಯಾಗಿದ್ದಾರೆಂದರೆ, ಆ ಸಿನಿಮಾ ಹೊರತುಪಡಿಸಿ ಮಿಕ್ಕ ಯಾವುದರಲ್ಲೂ ಭಾಗವಹಿಸುತ್ತಿಲ್ಲ. ಕೆಜಿಎಫ್ ಎಂದೇ ಅಲ್ಲ, ಶೂಟಿಂಗ್ ಇದ್ದಾಗ ವೈಯಕ್ತಿಕ ಕೆಲಸಗಳನ್ನೂ ದೂರ ಇಡುವ ನಟ ಯಶ್. 

    ಹೀಗಾಗಿ ಯಶ್ ಆ ದಿನದ ಕಾಂಗ್ರೆಸ್ ಱಲಿಗೆ ಹೋಗುತ್ತಿಲ್ಲ ಎಂದು ಚಿತ್ರಲೋಕ ಡಾಟ್​ ಕಾಮ್ ಮೂಲಗಳು ಸ್ಪಷ್ಟಪಡಿಸಿವೆ. ಆದರೆ, ಯಶ್ ಅವರಿಗೇ ಗೊತ್ತಿಲ್ಲದೆ ಅವರ ಹೆಸರಿನಲ್ಲಿ ಪೋಸ್ಟರ್, ಬ್ಯಾನರ್​ಗಳು ಹರಿದಾಡುತ್ತಿರುವುದೇಕೆ ಎನ್ನುವುದೇ ನಿಗೂಢ.