` srinath, - chitraloka.com | Kannada Movie News, Reviews | Image

srinath,

 • Suli to Release on May 20th

  suli image

  Srinath starrer 'Suli' which is directed by senior director P H Vishwanath is all set to be released on the 20th of May across Karnataka. Srinath says, it was his urge to do something else made him to act in the film. 'I got very good opportunities as an actor. I got good recognition from 'Shubhamangala' and 'Manasa Saravora' as an actor. However, I wanted to do something more and that's when P H Vishwanath came to me with this story'  said Srinath.

  suli2.jpg

  Srinath says he is happy with the way 'Suli' has been shaped up and he wants to do more in the future.

  'Suli' is being written and directed by P H Vishwanath and produced by Geetha Srinath and Satyanarayan. Manjunath is the cameraman, while S P Venkatesh has composed the music for the film.

 • ಅಂಬಿ ಹೇರ್ ಕಟ್ ಗೆ ಹತ್ತು ಸಾವಿರ ಕೊಡೋರು! | ವಿಷ್ಣು ವಿಮಾನದಲ್ಲಿ ಕರೆಸಿ ಕಟ್ಟಿಂಗ್ ಮಾಡಿಸಿದ್ರು | Ambareesh

  ambareesh haircutting image

  ಬೆಂಗಳೂರಿನಲ್ಲಿರು ಟಚ್ ಆಫ್ ಕ್ಲಾಸ್ ಸಲೂನ್ ಬಹು ಜನಪ್ರಿಯ. ಸಿನಿಮಾ ರಂಗದವರಿಗೆ ಅಚ್ಚು ಮೆಚ್ಚಿನ ಜಾಗ. ಅಂಬರೀಶ್ ಅವರಿಗೆ ಹೇರ್ ಕಟ್ ಮಾಡಿದ್ರೆ ಅವರು ಕೊಡುತ್ತಿದ್ದದ್ದು ಬರಿ ಹತ್ತು ಸಾವಿರ!!. ಬೇರೆ ಊರಿನಲ್ಲಿದ್ರೆ ವಿಷ್ಣು ನಾರಾಯಣ್ ಅವರನ್ನ ಕರೆಸಿಕೊಳ್ಳುತ್ತಿದ್ದುದ್ದು ವಿಮಾನದಲ್ಲಿ!!... ಬೆಂಗಳೂುರಿಗೆ ಬಂದ್ರೆ ರಜನಿ ಕಟ್ಟಿಂಗ್ ಮಾಡಿಸುತ್ತಿದ್ದದ್ದೇ ನಾರಾಯಣ್ ಅವರ ಕೈಯಲ್ಲಿ.... 

   

 • ಎಡಕಲ್ಲು ಗುಡ್ಡದ ಮೇಲೆ ಕಲಾವಿದರ ಸಮಾಗಮ

  artists unite in edakallu guddadamle

  ಎಡಕಲ್ಲು ಗುಡ್ಡದ ಮೇಲೆ.. ಚಂದ್ರಶೇಖರ್ ಅಭಿನಯದ ಕೊನೆಯ ಸಿನಿಮಾ. ಚಂದ್ರಶೇಖರ್, ತಮಗೆ ಹೆಸರು ತಂದುಕೊಟ್ಟ ಸಿನಿಮಾದ ಟೈಟಲ್‍ನಲ್ಲಿಯೇ ಕೊನೆಯ ಸಿನಿಮಾ ಮಾಡಿರುವುದು ವಿಶೇಷ. ಸಿನಿಮಾದಲ್ಲಿ ಚಂದ್ರಶೇಖರ್ ಒಬ್ಬರೇ ಅಲ್ಲ, ಹಿರಿಯ ಕಲಾವಿದರ ದೊಡ್ಡ ದಂಡೇ ಇದೆ. ಭಾರತಿ ವಿಷ್ಣುವರ್ಧನ್, ಶ್ರೀನಾಥ್, ದತ್ತಣ್ಣ, ಸಿಹಿಕಹಿ ಚಂದ್ರು, ಸುಮಿತ್ರಾ, ಚಿದಾನಂದ್, ವೀಣಾ ಸುಂದರ್, ಭವ್ಯಶ್ರೀ, ಪದ್ಮಜಾ ರಾವ್, ಉಷಾ ಭಂಡಾರಿ ಮೊದಲಾದವರು ನಟಿಸಿದ್ದಾರೆ. 

  ತಾಯಿಯ ಪ್ರೀತಿಯಿಂದ ವಂಚಿತಳಾದ ಬಾಲಕಿಯೊಬ್ಬಳ ಬದುಕನ್ನು ವಿಭಿನ್ನವಾಗಿ ತೋರಿಸುವ ಪ್ರಯತ್ನ ಚಿತ್ರದಲ್ಲಿದೆ. ವಿವಿನ್ ಸೂರ್ಯ ನಿರ್ದೇಶನದ ಚಿತ್ರಕ್ಕೆ ಜಿ.ಪ್ರಕಾಶ್ ನಿರ್ಮಾಪಕರು. ಸಿನಿಮಾ ಇದೇ ಶುಕ್ರವಾರ ತೆರೆಗೆ ಬರುತ್ತಿದೆ.

 • ಭಟ್ಟರ ಅದೊಂದು ಕರೆಗಾಗಿ ಕಾಯುತ್ತಿದ್ದರಂತೆ ಪ್ರಣಯರಾಜ

  ಭಟ್ಟರ ಅದೊಂದು ಕರೆಗಾಗಿ ಕಾಯುತ್ತಿದ್ದರಂತೆ ಪ್ರಣಯರಾಜ

  ಪ್ರಣಯರಾಜ ಶ್ರೀನಾಥ್ ಚಿತ್ರರಂಗದ ಸೀನಿಯರ್ ಕಲಾವಿದ. ನಾಯಕರಾಗಿ, ಪೋಷಕ ನಟರಾಗಿ.. ತಮ್ಮದೇ ಛಾಪು ಮೂಡಿಸಿರುವ ಕಲಾವಿದ. ಪುಟ್ಟಣ್ಣ ಕಣಗಾಲರ ಶಿಷ್ಯ. ವೃತ್ತಿ ಜೀವನದಲ್ಲಿ ಹಲವು ದೊಡ್ಡ ದೊಡ್ಡ ನಿರ್ದೇಶಕರೊಂದಿಗೆ ಕೆಲಸ ಮಾಡಿರುವ ಈ ನಟ ಯೋಗರಾಜ್ ಭಟ್ ಅವರ ಒಂದು ಕರೆಗಾಗಿ ಕಾಯುತ್ತಿದ್ದರಂತೆ.

  ನಾನು ಮುಂಗಾರು ಮಳೆ ನೋಡಿದ ದಿನದಿಂದ ಕಾಯುತ್ತಿದ್ದೆ. ಯೋಗರಾಜ್ ಭಟ್ ಅವರ ಜೊತೆ ಕೆಲಸ ಮಾಡಬೇಕು ಎಂಬ ಆಸೆಯೊಂದು ಒಳಗೊಳಗೇ ಮೂಡಿತ್ತು. ಗಾಳಿಪಟ 2 ಚಿತ್ರದಲ್ಲಿ ನನ್ನದು ಅತಿಥಿ ನಟನ ಪಾತ್ರ. ಕಾಲೇಜ್ ಪ್ರಿನ್ಸಿಪಾಲ್ ಕ್ಯಾರೆಕ್ಟರ್. ಆದರೇನಂತೆ.. ಯೋಗರಾಜ್ ಭಟ್ ಅವರ ಒಂದು ಕರೆಗಾಗಿ ಕಾಯುತ್ತಿದ್ದವನಿಗೆ ಪಾತ್ರ ಯಾವುದಾದರೇನು? ಎರಡು ದಿನದ ಶೆಡ್ಯೂಲ್ ಇತ್ತು. ಯೋಗರಾಜ್ ಭಟ್ ಅವರಿಂದ ಹಲವು ಹೊಸತು ಕಲಿತೆ ಎಂದಿದ್ದಾರೆ ಶ್ರೀನಾಥ್.

  ಗಾಳಿಪಟ 2, ಒಂದು ರೀತಿಯಲ್ಲಿ ಶ್ರೀನಾಥ್ ಅವರಿಗೆ ಕಮ್ ಬ್ಯಾಕ್ ಸಿನಿಮಾ. ಇತ್ತೀಚೆಗೆ ಅವರು ನಟನೆಯಿಂದ ದೂರವೇ ಉಳಿದಿದ್ದರು. ನನಗೇನೂ ವಯಸ್ಸಾಗಿಲ್ಲ. ನಟಿಸುವ ಶಕ್ತಿಯೂ ಇದೆ. ಮೆಮೊರಿ ಪವರ್ ಕೂಡಾ ಚೆನ್ನಾಗಿದೆ. ಗಾಳಿಪಟ 2 ನಂತರ ಹೊಸ ಹೊಸ ಅವಕಾಶಗಳು ಬರಬಹುದು ಎನ್ನುತ್ತಾರೆ ಶ್ರೀನಾಥ್.

  ಅಷ್ಟು ಹಿರಿಯ ಕಲಾವಿದನಾಗಿ ನಿರ್ದೇಶಕರನ್ನು ಹೊಗಳುವುದು ಅವರ ದೊಡ್ಡತನ. ಅಷ್ಟು ಹಿರಿಯ ಕಲಾವಿದರೊಬ್ಬರು ಯೋಗರಾಜ್ ಭಟ್ ಅವರ ಚಿತ್ರದಲ್ಲಿ ನಟಿಸುವುದಕ್ಕಾಗಿ ಕಾದಿದ್ದರು ಎನ್ನುವುದು ಯೋಗರಾಜ್ ಭಟ್ ಅವರ ಕಿರೀಟಕ್ಕೆ ಸಿಕ್ಕ ಗರಿ. ಸದ್ಯಕ್ಕೆ ಎಲ್ಲರೂ ಗಾಳಿಪಟ 2 ಎದುರು ನೋಡುತ್ತಿದ್ದಾರೆ.

  ರಮೇಶ್ ರೆಡ್ಡಿ ನಿರ್ಮಾಣದ ಗಾಳಿಪಟ 2 ಇದೇ ಆಗಸ್ಟ್ 12ಕ್ಕೆ ರಿಲೀಸ್ ಆಗುತ್ತಿದೆ. ಗಣೇಶ್ ಮತ್ತು ಭಟ್ಟರು 4ನೇ ಬಾರಿಗೆ ಒಂದುಗೂಡಿರುವ ಚಿತ್ರ ಗಾಳಿಪಟ 2. ಗಾಳಿಪಟದಲ್ಲಿದ್ದ ದಿಗಂತ್, ಅನಂತ್ ನಾಗ್, ಪದ್ಮಜಾ  ರಾವ್, ರಂಗಾಯಣ ರಘು, ಜಯಂತ ಕಾಯ್ಕಿಣಿ, ಸೋನು ನಿಗಮ್ ಎಲ್ಲರೂ ಈ ಗಾಳಿಪಟ 2ನಲ್ಲೂ ಇದ್ದಾರೆ.

 • ಮತ್ತೆ ಮಾನಸ ಸರೋವರದಲ್ಲಿ ಹಳೇ ಜೋಡಿ..

  hit pair of manasa sarovara

  ಮಾನಸ ಸರೋವರ.. ಅದು ಪುಟ್ಟಣ್ಣ ಕಣಗಾಲ್ ಅವರ ಕ್ಲಾಸಿಕ್ ಚಿತ್ರ. ಶ್ರೀನಾಥ್ ವೃತ್ತಿಜೀವನದ ಅತ್ಯುನ್ನತ ಚಿತ್ರವೂ ಹೌದು. ಆ ಚಿತ್ರದ ಟೈಟಲ್​ನ್ನೇ ಇಟ್ಟುಕೊಂಡು ಧಾರಾವಾಹಿ ನಿರ್ಮಾಣವಾಗುತ್ತಿದೆ. ಈ ಧಾರಾವಾಹಿಯಲ್ಲಿ ಮತ್ತೊಮ್ಮೆ ಶ್ರೀನಾಥ್ ಹಾಗೂ ಪದ್ಮಾವಾಸಂತಿ ಹಾಗೂ ರಾಮಕೃಷ್ಣ ನಟಿಸುತ್ತಿದ್ದಾರೆ. 

  ಈ ಧಾರಾವಾಹಿಯ ನಿರ್ಮಾಪಕಿ ನಿವೇದಿತಾ ಶಿವರಾಜ್ ಕುಮಾರ್. ಶಿವರಾಜ್ ಕುಮಾರ್ ಫ್ಯಾಮಿಲಿ ನಿರ್ಮಾಣದ ಮೊದಲ ಧಾರಾವಾಹಿಯೂ ಇದೆ. ರಾಮ್ ಜೈಶೀಲ್ ವೈದ್ಯ ಈ ಸೀರಿಯಲ್​ನ ನಿರ್ದೇಶಕ. 

  ಧಾರಾವಾಹಿಯ ಕಥೆಯೂ ಅದೇ ರೀತಿ ಇರುತ್ತಾ..? ಶ್ರೀನಾಥ್ ಮಾನಸಿಕ ವೈದ್ಯರಾಗಿ, ಪದ್ಮಾವಾಸಂತಿ ಹುಚ್ಚಿಯಾಗಿ, ರಾಮಕೃಷ್ಣ ಪ್ರೀತಿ ಕದಿಯುವ ತರುಣನಾಗಿರ್ತಾರಾ..? ಏನ್ ಕಥೆ..? ಧಾರಾವಾಹಿಗೇ ಕಾಯಬೇಕು.

  Related Articles :-

  ದೊಡ್ಮನೆಯ ದೊಡ್ಡ ಸುದ್ದಿ

  ಶಿವಣ್ಣ ಕುಟುಂಬದ ಹೊಸ ಸಾಹಸ