ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಇಂದಿನ ಸಂಪೂರ್ಣ ಪಯಣ ಬಣ್ಣದಲೋಕದಲ್ಲಿ. ಸಿದ್ದರಾಮಯ್ಯನವರ ಇಂದಿನ ಶೆಡ್ಯೂಲ್ ಹಾಗೆಯೇ ಇದೆ. ಸಿಎಂ ಸಿದ್ದರಾಮಯ್ಯ ತಮ್ಮ ಇಡೀ ದಿನದ ಕಾಲ್‍ಶೀಟ್‍ನ್ನು ಸಿನಿಮಾ ಮತ್ತು ಕಿರುತೆರೆಗೆ ನೀಡಿದ್ದಾರೆ.
ಸಿದ್ದರಾಮಯ್ಯ ಮೊದಲು ಕಾಣಿಸಿಕೊಳ್ಳೋದು ಸಮ್ಮರ್ ಹಾಲಿಡೇಸ್ ಚಿತ್ರದ ಶೂಟಿಂಗ್‍ನಲ್ಲಿ. ಅದು ಕವಿತಾ ಲಂಕೇಶ್ ನಿರ್ದೇಶನದ, ಲಂಕೇಶ್ ಮೊಮ್ಮಕ್ಕಳೆಲ್ಲ ನಟಿಸುತ್ತಿರುವ ಚಿತ್ರ. ಅದರಲ್ಲಿರುವುದು ಒಂದೇ ಒಂದು ಲೈನ್ ಸಂಭಾಷಣೆಯಂತೆ.ಅದರಲ್ಲಿ ಸಿದ್ದರಾಮಯ್ಯ, ಸಿಎಂ ಸಿದ್ದರಾಮಯ್ಯನವರಾಗಿಯೇ ನಟಿಸಲಿದ್ದಾರೆ.
ನಂತರ ಸಿದ್ದರಾಮಯ್ಯನವರ ಪಯಣ ಹೊರಡೋದು ಝೀ ಟೀವಿಯತ್ತ. ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಶೂಟಿಂಗ್‍ನಲ್ಲಿ ಪಾಲ್ಗೊಳ್ತಾರೆ ಸಿದ್ದರಾಮಯ್ಯ. ದೇವೇಗೌಡರ ನಂತರ ವೀಕೆಂಡ್ ವಿತ್ ರಮೇಶ್‍ನಲ್ಲಿ ಭಾಗವಹಿಸುತ್ತಿರುವ ಎರಡನೇ ರಾಜಕಾರಣಿ ಸಿದ್ದರಾಮಯ್ಯ.
ಅದೆಲ್ಲವೂ ಮುಗಿದ ಮೇಲೆ ಸಿದ್ದರಾಮಯ್ಯ ಬರೋದು ಪಂಟ ಸಿನಿಮಾ ನೋಡೋಕೆ. ಅದು ಸಿದ್ದರಾಮಯ್ಯನವರ ಆಪ್ತಮಿತ್ರ ಹೆಚ್.ಎಂ. ರೇವಣ್ಣ ಪುತ್ರ ಅನೂಪ್ ನಟಿಸಿರುವ ಸಿನಿಮಾ. ಪಂಟ ಸಿನಿಮಾದ ಪ್ರೀಮಿಯರ್ ಶೋದೊಂದಿಗೆ ಸಿದ್ದರಾಮಯ್ಯನವರ ಗುರುವಾರ ಕೊನೆಯಾಗಲಿದೆ.
ಸಿದ್ದರಾಮಯ್ಯ ನಟನೆ ಇದೇ ಮೊದಲಲ್ಲ..!
ಈ ಹಿಂದೆ ಲಂಕೇಶ್ ನಿರ್ದೇಶನದ ಎಲ್ಲಿಂದಲೋ ಬಂದವರು ಚಿತ್ರದಲ್ಲಿ ಪುಟ್ಟದೊಂದು ಪಾತ್ರದಲ್ಲಿ ಕಾಣಿಸಿಕೊಂಡಿದ್ದರಂತೆ ಸಿದ್ದರಾಮಯ್ಯ. ಈಗ ಕವಿತಾ ಲಂಕೇಶ್ ನಿರ್ದೇಶನದ ಚಿತ್ರದಲ್ಲಿ ಕಾಣಿಸಿಕೊಳ್ಳೋ ಮೂಲಕ ಅಪ್ಪ-ಮಗಳ ಚಿತ್ರದಲ್ಲಿ ನಟಿಸಿದ ರಾಜಕಾರಣಿಯಾಗಲಿದ್ದಾರೆ ಸಿದ್ದರಾಮಯ್ಯ.
ನಟಿಸಲು ಸಿಎಂ ಷರತ್ತು
ಚಿತ್ರದಲ್ಲಿ ಯಾವುದೇ ಅಸಭ್ಯ, ಅಶ್ಲೀಲ ಸಂಭಾಷಣೆ ಅಥವಾ ದೃಶ್ಯ ಇರಬಾರದು. ಹಿಂಸೆ ಇರಬಾರದು. ಇದು ಕವಿತಾ ಲಂಕೇಶ್‍ಗೆ ಸಿದ್ದರಾಮಯ್ಯ ಹಾಕಿರುವ ಷರತ್ತು.
ಸಿದ್ದರಾಮಯ್ಯ ಡೈಲಾಗ್ ಏನು?
``ಶೌರ್ಯ ಪ್ರದರ್ಶಿಸಿರುವ ಮಕ್ಕಳಿಗೆ ಶೌರ್ಯ ಪ್ರಶಸ್ತಿ ನೀಡುವಂತೆ ಶಿಫಾರಸು ಮಾಡುತ್ತೇನೆ'' - ಇದು ಸಮ್ಮರ್ ಹಾಲಿಡೇಸ್ ಚಿತ್ರದಲ್ಲಿ ಸಿದ್ದರಾಮಯ್ಯ ಹೇಳುವ ಡೈಲಾಗ್. ಚಿತ್ರ ಕನ್ನಡ ಮತ್ತು ಇಂಗ್ಲಿಷ್‍ನಲ್ಲಿ ನಿರ್ಮಾಣವಾಗುತ್ತಿದೆ.
Related Articles :-
Siddaramaiah To Act In Summer Holidays