` siddaganga swamiji - chitraloka.com | Kannada Movie News, Reviews | Image

siddaganga swamiji

 • KFCC Office Bearers Take Siddaganga Swamiji Blessings

  kfcc office bearers with siddaganga swamiji image

  Team of office bearers had been to Siddaganga mutt and wished Sri Shivakumara Swamiji on his 109 th birthday and took his blessings. KFCC President Sa Ra Govindu, MG Rammurthy, NM Suresh, Umesh Banakar, Jairaj, Dinesh Gandhi, Narasimalu went to mutt and donated Rs 1.09 Lacs to swamiji.

 • Shruthi Birthday At Siddaganga Mutt

  shruthi birthday at siddaganga mutt

  Senior actress and Bigg Boss winner Shruthi celebrated her birthday at Siddaganga Mutt. Today morning Shruthi along with her parents and brother Sharan visited Siddaganga Mutt and took the blessings of Sri Shivakumara Swamiji. Her family performed Pada pooja there.

  After the pooja, Shruthi left to a function.

  Actress Shruthi Gallery - View

 • ನಡೆದಾಡುವ ದೇವರ ಆಶೀರ್ವಾದ ಪಡೆದ ರಶ್ಮಿಕಾ

  rashmika mandanna visits siddaganfa mutt

  ಸತತ ಯಶಸ್ಸಿನ ಸಂತಸದಲ್ಲಿರುವ ರಶ್ಮಿಕಾ ಮಂದಣ್ಣ, ನಡೆದಾಡುವ ದೇವರು ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳ ಆಶೀರ್ವಾದ ಪಡೆದಿದ್ದಾರೆ. ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ್ದ ರಶ್ಮಿಕಾ ಮಂದಣ್ಣ, ತ್ರಿವಿಧ ದಾಸೋಹಿಗೆ ನಮಸ್ಕರಿಸಿ ಆಶೀರ್ವಚನ ಪಡೆದರು.

  ನಮ್ಮ ಜೀವನದ ಯಶಸ್ಸಿಗೆ ಸಿದ್ದಗಂಗಾ ಶ್ರೀಗಳ ಆಶೀರ್ವಾದವೂ ಕಾರಣ ಎಂದ ರಶ್ಮಿಕಾ ತಮಗೆ ಶ್ರೀಗಳೇ ಸ್ಫೂರ್ತಿ ಎಂದರು.

 • ಶ್ರೀಗಳಿಗೇಕೆ ಭಾರತ ರತ್ನ, ಅವರೇ ರತ್ನ - ಜಗ್ಗೇಶ್

  jaggesh supports siddaganga sree

  ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರ ಈಗ ರಾಜಕೀಯ ಪಕ್ಷಗಳಲ್ಲಿ ವಾಗ್ವಾದ ಸೃಷ್ಟಿಸಿದೆ. ಇದರ ನಡುವೆ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಗಳ್ನು ವಿನಾಕಾರಣ ಎಳೆದು ತಂದಿರುವ ಬಗ್ಗೆ ಭಕ್ತರಲ್ಲಿ ಆಕ್ರೋಶ ವ್ಯಕ್ತವಾಗಿದೆ. ಅದರಲ್ಲೂ ಮಾತೆ ಮಹಾದೇವಿ ‘ಭಾರತ ರತ್ನ’ಕ್ಕಾಗಿ ಶ್ರೀಗಳು ಹೀಗೆ ಮಾಡಿದ್ದಾರೆ ಎಂಬ ಮಾತನ್ನು ಜಾತಿಭೇದವಿಲ್ಲದೆ ಜನ ಖಂಡಿಸಿದ್ಧಾರೆ.

  ಹೀಗಿರುವಾಗ ನಟ ಜಗ್ಗೇಶ್, ಸಿದ್ಧಗಂಗಾ ಶ್ರೀಗಳ ಪರ ಧ್ವನಿ ಎತ್ತಿದ್ದಾರೆ. ಸಿದ್ದಗಂಗಾ ಶ್ರೀಗಳಿಗೆ ಯಾರೂ 'ಭಾರತ ರತ್ನ' ಕೊಡಬೇಕಿಲ್ಲ. ಭಾರತ ದೇಶಕ್ಕೆ ಅವರೇ ಅತ್ಯಮೂಲ್ಯ ರತ್ನ. ಅಂತಹ ಮಹನೀಯರನ್ನು  ಪಡೆದ ನಾವೇ ಧನ್ಯ. ಅವರನ್ನ ಅವಮಾನಿಸೋದು ಒಂದೆ ಶಿವನನ್ನು ಅವಮಾನೀಸೋದು ಒಂದೆ' ಎಂದು ಜಗ್ಗೇಶ್‌ ಟ್ವೀಟ್‌ ಮಾಡಿದ್ದಾರೆ.  

  ಜಗ್ಗೇಶ್ ಅಭಿಮತವೇ ಕನ್ನಡಿಗರದ್ದು. ತಮಗನಿಸಿದ್ದನ್ನು ಮುಚ್ಚುಮರೆಯಿಲ್ಲದೆ ಹೇಳುವ ಜಗ್ಗೇಶ್, ಸ್ವಾಮಿಗಳ ಪರ ಮಾತನಾಡಿರುವುದನ್ನು ಅಭಿಮಾನಿಗಳು ಸ್ವಾಗತಿಸಿದ್ದಾರೆ.

 • ಸಿದ್ಧಗಂಗಾ ಮಠದಲ್ಲಿ ಯಶ್

  yash at siddaganga mutt

  ರಾಕಿಂಗ್ ಸ್ಟಾರ್ ಯಶ್, ಇತ್ತೀಚೆಗೆ ದಿಢೀರನೆ ತುಮಕೂರಿನ ಶ್ರೀ ಸಿದ್ಧಗಂಗಾ ಮಠಕ್ಕೆ ಭೇಟಿ ಕೊಟ್ಟು ಶಿವಕುಮಾರ ಸ್ವಾಮೀಜಿಗಳ ಆಶೀರ್ವಾದ ಪಡೆದರು. ತುಮಕೂರಿನ ಕಾಲೇಜ್‍ವೊಂದರ ಕಾರ್ಯಕ್ರಮಕ್ಕೆ ಹೋಗಿದ್ದ ಯಶ್, ಮಾರ್ಗಮಧ್ಯದಲ್ಲಿಯೇ ಮಠಕ್ಕೆ ಭೇಟಿ ಕೊಟ್ಟು ಶ್ರೀಗಳ ಆಶೀರ್ವಾದ ಪಡೆದಿದ್ದಾರೆ.

  yash_siddaganga_mutt1.jpgತ್ರಿವಿಧ ದಾಸೋಹಿ ಶ್ರೀಗಳು ಅನಾರೋಗ್ಯದಿಂದ ಚೇತರಿಸಿಕೊಂಡಿದ್ದು, ಯಶ್ ಅವರಿಗೆ ಹಾರ ಹಾಕಿ ಆಶೀರ್ವದಿಸಿದ್ದಾರೆ. ಸಿದ್ಧಗಂಗಾ ಮಠದ ಕೈಂಕರ್ಯದ ಬಗ್ಗೆ ಯಶ್ ಹಲವಾರು ಬಾರಿ ಸಾರ್ವಜನಿಕವಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅವರ ಸೇವೆ ಪ್ರತಿಯೊಬ್ಬರಿಗೂ ಸ್ಪೂರ್ತಿ ಎನ್ನುವ ಯಶ್, ಶ್ರೀಗಳನ್ನು ಭೇಟಿಯಾಗಿರುವುದು ಅಭಿಮಾನಿಗಳು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಾರೆ.

  ಯಶ್, ಮಠಕ್ಕೆ ಭೇಟಿ ನೀಡುವುದು ಇದೇ ಮೊದಲೇನೂ ಅಲ್ಲ. ಆಗಾಗ್ಗೆ ಮಠಕ್ಕೆ ಭೇಟಿ ಕೊಟ್ಟು, ಸ್ವಾಮೀಜಿಗಳ ಆಶೀರ್ವಾದ ಪಡೆಯುವುದು ಯಶ್ ಅವರಿಗೆ ಮಾಮೂಲು.

The Terrorist Movie Gallery

Thayige Thakka Maga Movie Gallery