` gurunandan - chitraloka.com | Kannada Movie News, Reviews | Image

gurunandan

  • ಫಾರಿನ್‍ಗೂ ಹೊರಡೋಕೆ ರಾಜು ರೆಡಿ..!

    raju kannada medium image

    ರಾಜು ಕನ್ನಡ ಮೀಡಿಯಂ ಸಿನಿಮಾ ಇದೇ ಜನವರಿ 19ರಂದು ರಾಜ್ಯದೆಲ್ಲೆಡೆ ಬಿಡುಗಡೆಯಾಗ್ತಾ ಇದೆ. ಅದಾದ ನಂತರ ಎರಡೇ ವಾರಗಳಲ್ಲಿ ವಿದೇಶಗಳಲ್ಲಿಯೂ ಬಿಡುಗಡೆ ಮಾಡೋಕೆ ಚಿತ್ರತಂಡ ನಿರ್ಧರಿಸಿದೆ. ರಾಜ್ಯದಲ್ಲಿಯೇ 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ. ವಿದೇಶದಲ್ಲಿ ಚಿತ್ರವನ್ನು ಮಾರ್ಕೆಟ್ ಮಾಡೋಕೆ ಫಸ್ಟ್ ರ್ಯಾಂಕ್ ರಾಜು ಚಿತ್ರದ ಸಕ್ಸಸ್ ಹಾಗೂ ಸುದೀಪ್ ಎಂಬ ಎರಡು ಹೆಸರು ಸಾಕು. 

    ಸುದೀಪ್ ಅವರನ್ನು ಸ್ಫೂರ್ತಿಯಾಗಿಟ್ಟುಕೊಂಡು ಹೊರಡುವ ಕನ್ನಡ ಮಾಧ್ಯಮದಲ್ಲಿ ಓದಿದ ಹುಡುಗ, ವಿದೇಶದಲ್ಲಿ ಏನೇನೆಲ್ಲ ಸಾಧಿಸುತ್ತಾನೆ ಅನ್ನೊದು ಚಿತ್ರದ ಕಥೆ. ನವಿರಾದ ಹಾಸ್ಯನ್ನು ಎಲ್ಲಿಯೂ ಬಿಟ್ಟುಕೊಡದೆ ಚಿತ್ರಕಥೆ ಹೆಣೆಯಲಾಗಿದೆ. ನಿರ್ಮಾಪಕ, ನಾಯಕಿ ಬಿಟ್ಟರೆ ಇಡೀ ಸಿನಿಮಾದಲ್ಲಿರೋದು ಫಸ್ಟ್ ರ್ಯಾಂಕ್ ರಾಜು ಚಿತ್ರತಂಡ. ಹೀಗಾಗಿ ಇದು ಬೇರೆಯೇ ದಾಖಲೆ ಬರೆಯುತ್ತೆ ಎಂಬ ಆತ್ಮವಿಶ್ವಾಸದಲ್ಲಿದ್ದಾರೆ ನಿರ್ಮಾಪಕ ಸುರೇಶ್.

  • ಬರ್ತಾನೆ ಬರ್ತಾನೆ ಕನ್ನಡ ರಾಜು ಬರ್ತಾನೆ

    raju kannada medium image

    ರಾಜು ಕನ್ನಡ ಮೀಡಿಯಂ. ಬಿಡುಗಡೆಗೆ ಮೊದಲೇ ಭರ್ಜರಿ ನಿರೀಕ್ಷೆ ಹುಟ್ಟಿಸಿದ್ದ ಚಿತ್ರ. ಚಿನಕುರುಳಿ ಪಟಾಕಿಯಂತಾ ಡೈಲಾಗುಗಳನ್ನು ಟ್ರೇಲರ್‍ನಲ್ಲಿ ಬಿಟ್ಟಿದ್ದ ಚಿತ್ರತಂಡ, ಪ್ರೇಕ್ಷಕರ ಕಿವಿಗೆ ಕಚಗುಳಿ ಇಟ್ಟಿತ್ತು. ಜೊತೆಗೆ ಚಿತ್ರತಂಡದ ಜೊತೆಗೆ ಕಿಚ್ಚನೂ ಸೇರಿಕೊಂಡ ಮೇಲೆ ಚಿತ್ರದ ಮೇಲಿನ ನಿರೀಕ್ಷೆ ದುಪ್ಪಟ್ಟಲ್ಲ, ನೂರು ಪಟ್ಟು ಹೆಚ್ಚಾಗಿತ್ತು. ಈಗ ಚಿತ್ರದ ರಿಲೀಸ್ ಡೇಟ್ ಫಿಕ್ಸ್ ಆಗಿದೆ. ಜನವರಿ 19ಕ್ಕೆ ತೆರೆಗೆ ಬರ್ತಾ ಇದೆ ರಾಜು ಕನ್ನಡ ಮೀಡಿಯಂ.

    ಇಂಗ್ಲಿಷ್ ಗೊತ್ತಿಲ್ಲದ ಹುಡುಗನ ಪಾತ್ರದಲ್ಲಿ ಫಸ್ಟ್ ರ್ಯಾಂಕ್ ರಾಜು ಖ್ಯಾತಿಯ ಗುರುನಂದನ್ ನಟಿಸಿದ್ದಾರೆ. ಆವಂತಿಕಾ ಶೆಟ್ಟಿ, ಆಶಿಕಾ ರಂಗನಾಥ್ ಚಿತ್ರದ ನಾಯಕಿಯರು. ಇಡೀ ಚಿತ್ರಕ್ಕೆ ಟರ್ನಿಂಗ್ ಪಾಯಿಂಟ್ ಕಿಚ್ಚ ಸುದೀಪ್. ಸುದೀಪ್ ಅವರ ಸ್ಟೈಲ್ ಅಂತೂ ಅಭಿಮಾನಿಗಳ ಎದೆಯಲ್ಲಿ ಕಿಚ್ಚು ಹಚ್ಚುತ್ತಿದೆ. ಏನೆಂದರೂ ಜನವರಿ 19ರವರೆಗೆ ಕಾಯಬೇಕು.

  • ಮಿಸ್ಸಿಂಗ್ ಬಾಯ್ ಚಿತ್ರಕ್ಕೆ ಸಿದ್ದರಾಮಯ್ಯ ಶುಭಾಶಯ

    siddaramaiah wishes best wishes to missing boy team

    ಮಿಸ್ಸಿಂಗ್ ಬಾಯ್ ಚಿತ್ರ, ನಿಧಾನವಾಗಿ ಚಿತ್ರರಸಿಕರವನ್ನು ಆವರಿಸಿಕೊಳ್ಳುತ್ತಿದೆ. ನೈಜ ಘಟನೆ ಆಧರಿತ ಕಥೆ ಹೊಂದಿರುವ ಮಿಸ್ಸಿಂಗ್ ಬಾಯ್ ಸಿನಿಮಾ, ಕಿಚ್ಚ ಸುದೀಪ್, ನಾನಿ, ಶಿವಣ್ಣ ಮೊದಲಾದವರ ಗಮನ ಸೆಳೆದಿದೆ. ಈಗ ರಾಜಕಾರಣಿಗಳ ಮೆಚ್ಚುಗೆಗೂ ಪಾತ್ರವಾಗಿದೆ.

    ಚುನಾವಣೆಯ ಬಿಡುವಿಲ್ಲದ ಶೆಡ್ಯೂಲ್ ನಡುವೆ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ ಸಿದ್ದರಾಮಯ್ಯ. ಯಾವುದೇ ಚಿತ್ರ, ಸಮಾಜಕ್ಕೆ ಒಳ್ಳೆ ಸಂದೇಶ ನೀಡಬೇಕು. ಮಿಸ್ಸಿಂಗ್ ಬಾಯ್ ಚಿತ್ರಕ್ಕೆ ಶುಭವಾಗಲಿ ಎಂದಿದ್ದಾರೆ.

    ಸಿದ್ದು ಒಬ್ಬರೇ ಅಲ್ಲ, ಉಪಮುಖ್ಯಮಂತ್ರಿ ಪರಮೇಶ್ವರ್ ಕೂಡಾ ಚಿತ್ರಕ್ಕೆ ಶುಭ ಹಾರೈಸಿದ್ದಾರೆ. ರಘುರಾಮ್ ನಿರ್ದೇಶನದ ಚಿತ್ರದಲ್ಲಿ ಗುರುನಂದನ್, ರಂಗಾಯಣ ರಘು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇದೇ 22ಕ್ಕೆ ಚಿತ್ರ ರಿಲೀಸ್ ಆಗುತ್ತಿದೆ.

  • ಮಿಸ್ಸಿಂಗ್ ಬಾಯ್ ಡೈರೆಕ್ಟರ್ ಇವರೇ..

    missing boy movie director's story is also interesting

    ಮಿಸ್ಸಿಂಗ್ ಬಾಯ್ ಚಿತ್ರದ ಹೀರೋ ಗುರುನಂದನ್. ಕೊಲ್ಲ ಪ್ರವೀಣ್ ನಿರ್ಮಾಣದ ಈ ಚಿತ್ರಕ್ಕೆ ನಿರ್ದೇಶಕ ರಘುರಾಮ್. ವಿಶೇಷ ಅಂದ್ರೆ, ಇದು ಇವರ 3ನೇ ಸಿನಿಮಾ. ಇವರು ನಿರ್ದೇಶಿಸಿದ ಈ ಹಿಂದಿನ ಎರಡು ಚಿತ್ರಗಳು ಬೇರೆ ಬೇರೆ ಕಾರಣಕ್ಕೆ ಸದ್ದು ಸುದ್ದಿ ಮಾಡಿದ್ದ ಚಿತ್ರಗಳು.

    ರಘುರಾಮ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು ನಿರ್ದೇಶಕನಾಗಿ. ನಿರ್ದೇಶಕನಾಗುವ ಮುಂಚೆಯೇ ನಟನಾಗಿ ಗುರುತಿಸಿಕೊಂಡರು. ವಿ.ರವಿಚಂದ್ರನ್, ಜೋಗಿ ಪ್ರೇಮ್, ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಅವರಿಗೆ ಸಹನಿರ್ದೇಶಕರಾಗಿ ಕೆಲಸ ಮಾಡಿದ್ದ ರಘು, ನಿರ್ದೇಶಕರಾಗಿದ್ದು ಚೆಲುವೆಯೇ ನಿನ್ನ ನೋಡಲು ಚಿತ್ರದ ಮೂಲಕ. ಶಿವಣ್ಣ ಅಭಿನಯದ ಆ ಚಿತ್ರವನ್ನು ಜಗತ್ತಿನ 7 ಅದ್ಭುತಗಳಲ್ಲಿ ಚಿತ್ರೀಕರಿಸಲಾಗಿತ್ತು. ಅದಾದ ನಂತರ ಫೇರ್ & ಲವ್ಲಿ ಚಿತ್ರ ಜನ ಮೆಚ್ಚುಗೆ ಪಡೆಯಿತು. ಈಗ ಮಿಸ್ಸಿಂಗ್ ಬಾಯ್. ರಘುರಾಮ್ ಹಿಟ್ ನಿರೀಕ್ಷೆಯಲ್ಲಿದ್ದಾರೆ.

  • ಮಿಸ್ಸಿಂಗ್ ಬಾಯ್ ನಿರ್ಮಾಪಕರ ಇಂಟ್ರೆಸ್ಟಿಂಗ್ ಕಹಾನಿ

    missing boy producer happy with the movie

    ಮಿಸ್ಸಿಂಗ್ ಬಾಯ್ ಚಿತ್ರದ ನಿರ್ದೇಶಕ ರಘುರಾಮ್. ನಾಯಕ ಗುರುನಂದನ್. ನಾಯಕಿ ಅರ್ಚನಾ. ರಂಗಾಯಣ ರಘು ಅತ್ಯಂತ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಹರಿಕೃಷ್ಣ ಮ್ಯೂಸಿಕ್ಕಿದೆ. ನೈಜ ಘಟನೆ ಆಧಾರಿತ ಚಿತ್ರದ ನಿರ್ಮಾಪಕ ಕೊಲ್ಲ ಪ್ರವೀಣ್.

    ಕೊಲ್ಲ ಪ್ರವೀಣ್ ಈ ಮೊದಲು ಕನ್ನಡದಲ್ಲಿ ಎರಡು ಹಿಟ್ ಚಿತ್ರಗಳನ್ನು ನಿರ್ಮಿಸಿದ್ದಾರೆ. ಸುದೀಪ್ ಅಭಿನಯದ ಮಾಣಿಕ್ಯ ಹಾಗೂ ಪುನೀತ್ ಅಭಿನಯದ ಪವರ್ ಸಿನಿಮಾ. ಗೋಲಿಸೋಡ ಎಂಬ ಪ್ರಯೋಗಾತ್ಮಕ ಚಿತ್ರವನ್ನೂ ನಿರ್ಮಿಸಿರುವ ಕೊಲ್ಲ ಪ್ರವೀಣ್, ಈ ಚಿತ್ರವನ್ನು ನಿರ್ಮಿಸಿದ್ದರ ಹಿಂದೆಯೂ ಒಂದು ಕಾರಣ ಇದೆ.

    ಕಥೆ ಕೇಳಿದಾಗ ನನಗೆ ಇಷ್ಟವಾಗಿದ್ದು, ಚಿತ್ರದ ಭಾವನಾತ್ಮಕ ಸನ್ನಿವೇಶಗಳು. ರಘುರಾಮ್ ನನಗೆ ಹೇಗೆ ಕಥೆ ಹೇಳಿದ್ದರೋ, ಅದೇ ರೀತಿ ಚಿತ್ರ ಮಾಡಿಕೊಟ್ಟಿದ್ದಾರೆ. ಚಿತ್ರವನ್ನು ಒಬ್ಬ ಸಾಮಾನ್ಯ ಪ್ರೇಕ್ಷಕನಂತೆ ನೋಡಿದಾಗ ನನಗೆ ಬಹಳ ಇಷ್ಟವಾಯಿತು. ಖಂಡಿತಾ ಈ ಚಿತ್ರ ಜನ ಮೆಚ್ಚುಗೆ ಗಳಿಸುತ್ತೆ ಎಂದಿದ್ದಾರೆ ಪ್ರವೀಣ್.

  • ಮಿಸ್ಸಿಂಗ್ ಬಾಯ್ ಪಾತ್ರಗಳ ಕಥೆ

    meet the characters of missing boy

    ಮಿಸ್ಸಿಂಗ್ ಬಾಯ್ ಚಿತ್ರ ರಿಲೀಸ್‍ಗೆ ರೆಡಿಯಾಗಿದೆ. ಚಿತ್ರದಲ್ಲಿರೋದು ಜೋನಾಥನ್ ಎಂಬ ತಂದೆ-ತಾಯಿಯನ್ನು ಹುಡುಕಿಕೊಂಡು ಬರುವ ಹುಡುಗನ ಕಥೆ. ಅದು ರಿಯಲ್ ಸ್ಟೋರಿ. ಹಾಗಾದರೆ, ಚಿತ್ರದಲ್ಲಿ ಯಾರ ಯಾರ ಪಾತ್ರ ಏನೇನು..? ಇಲ್ಲಿದೆ ನೋಡಿ ಡೀಟೈಲ್ಸ್.

    ಗುರುನಂದನ್ - ಜೋನಾಥನ್, ಹೆತ್ತವರನ್ನು ಹುಡುಕುವ ನಾಯಕ

    ರಂಗಾಯಣ ರಘು - ಲವಕುಮಾರ್, ಸಹಾಯ ಮಾಡುವ ಪೊಲೀಸ್ ಅಧಿಕಾರಿ

    ಅರ್ಚನಾ ಜಯಕೃಷ್ಣನ್ - ಜೋನಾಥನ್‍ಗೆ ಸಹಾಯ ಮಾಡುವ ಯೂರೋಪಿಯನ್ ಪತ್ರಕರ್ತೆ

    ರವಿಶಂಕರ್ - ನಾಯಕ ಜೋನಾಥನ್ ಕ್ಯಾಬ್ ಡ್ರೈವರ್

    ಭಾಗೀರಥಿ ಕದಂ, ಶೋಭರಾಜ್ - ರಿಯಲ್ ಹೆತ್ತವರು

    ಜೈಜಗದೀಶ್, ವಿಜಯಲಕ್ಷ್ಮಿ ಸಿಂಗ್ - ಜೋನಾಥನ್‍ನನ್ನು ದತ್ತು ಪಡೆದು ಸಾಕಿದವರು

    ರಘುರಾಮ್ ನಿರ್ದೇಶನದ ಚಿತ್ರಕ್ಕೆ ಹರಿಕೃಷ್ಣ ಸಂಗೀತವಿದೆ. ಸಿನಿಮಾ ಇದೇ ವಾರ ರಿಲೀಸ್ ಆಗುತ್ತಿದೆ.

  • ಮುಖ್ಯಮಂತ್ರಿಗಳೇ ಬರ್ತಾರೆ.. ನೋಡ್ತಾರೆ

    cm siddaramaiah raju kannada medium team

    ರಾಜು ಕನ್ನಡ ಮೀಡಿಯಂ ಚಿತ್ರ ಕನ್ನಡಿಗರಿಗೆ, ಅದರಲ್ಲೂ ಕನ್ನಡ ಮಾಧ್ಯಮದಲ್ಲಿ ಓದಿದ, ಇಂಗ್ಲಿಷ್ ಬಾರದವರಿಗೆ ಸ್ಫೂರ್ತಿ ತುಂಬುವ ಹಾಗಿದೆ. ಕನ್ನಡ ಕಲಿತವರೆಲ್ಲ ದಡ್ಡರಲ್ಲ, ಇಂಗ್ಲಿಷ್ ಗೊತ್ತಿದ್ದವರೆಲ್ಲ ಅತಿಮಾನುಷರಲ್ಲ ಎಂಬ ಸಂದೇಶ ಇರುವ ಚಿತ್ರವನ್ನು ನೀವೊಮ್ಮೆ ನೋಡಬೇಕು. ನೋಡಿ ಪ್ರೋತ್ಸಾಹಿಸಬೇಕು.

    ರಾಜು ಕನ್ನಡ ಮೀಡಿಯಂ ಚಿತ್ರತಂಡ, ಖುದ್ದು ಸಿಎಂ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಅವರ ಮುಂದಿಟ್ಟಿರುವ ಬೇಡಿಕೆ ಇದು. ಅಂದಹಾಗೆ ಸಿದ್ದರಾಮಯ್ಯ ಕೂಡಾ ಕನ್ನಡಾಭಿಮಾನಿ. ಇನ್ನೂ ವಿಶೇಷವೆಂದರೆ, ರಾಜು ಕನ್ನಡ ಮೀಡಿಯಂ ಚಿತ್ರದ ಸಂದೇಶವನ್ನು ಸ್ವತಃ ಸಿದ್ದರಾಮಯ್ಯ ತಮ್ಮದೇ ಜೀವನದಲ್ಲಿ ಅಳವಡಿಸಿಕೊಂಡಿರುವವರು. ಕನ್ನಡದಲ್ಲಿ ಕಲಿತು, ಇಂಗ್ಲಿಷ್ ಗೊತ್ತಿಲ್ಲ ಎಂಬ ಕಾರಣಕ್ಕೆ ಕೀಳರಿಮೆಗೆ ಬೀಳಬೇಡಿ ಎಂದು ಹಲವು ಕಡೆ ಹೇಳಿರುವ ಸಿದ್ದರಾಮಯ್ಯ, ಶೀಘ್ರದಲ್ಲೇ ಸಿನಿಮಾ ನೋಡುವುದಾಗಿ ಹೇಳಿದ್ದಾರೆ. 

     

  • ರಾಜು ಈಸ್ ಬ್ಯಾಕ್

    raju kannada medium movie image

    ರಾಜು ಕನ್ನಡ ಮೀಡಿಯಂ.. ರಿಲೀಸ್‍ಗೆ ರೆಡಿಯಾಗಿದೆ. ಫಸ್ಟ್ ರ್ಯಾಂಕ್ ರಾಜು ಚಿತ್ರತಂಡದ ಪುನರ್‍ಮಿಲನ ಕುತೂಹಲ ಮೂಡಿಸಿದ್ದರೆ, ಕಿಚ್ಚನ ಇರುವಿಕೆ ಆ ಕುತೂಹಲಕ್ಕೆ ಕಿಚ್ಚು ಹಚ್ಚಿದೆ.

    ಕಣ್ಣೀರಲಿ ಕಾಡಿಗೆ ಕರಗಿ.. ಅಂಗೈ ಮದರಂಗಿ ಒಣಗಿ.. ಕಾದಿಗೆ ನಿನಗಾಗಿ ಬರುವೆಯಾ.. ಎಂಬ ಟ್ರೇಲರ್‍ನಲ್ಲಿರುವ ಪುಟ್ಟ ಸಾಲುಗಳು ನವಿರು ಪ್ರೇಮದ ಸುಳಿವು ನೀಡುತ್ತವೆ. ಪಂಚಿಂಗ್ ಡೈಲಾಗ್‍ಗಳಿಗೆ ಕೊರತೆಯೇ ಇಲ್ಲ. ಗುರುನಂದನ್ ಸ್ಟೈಲ್‍ಗೆ ಸಡ್ಡು ಹೊಡೆದಿರುವುದು ಆವಂತಿಕಾ ಶೆಟ್ಟಿ-ಆಶಿಕಾ ಸೌಂದರ್ಯ. ಸಾಧು ಕೋಕಿಲಾ-ಕುರಿ ಪ್ರತಾಪ್ ಜೋಡಿಯ ಹಾಸ್ಯದೌತಣವನ್ನೂ ನೀಡಿರುವ ನಿರ್ದೇಶಕ ನರೇಶ್ ಕುಮಾರ್ ಪ್ರತಿಭೆಗೆ ಸಂಗೀತದ ಮೂಲಕ ಸಾಥ್ ಕೊಟ್ಟಿರುವುದು ಸಂಗೀತ ನಿರ್ದೇಶಕ ಕಿರಣ್ ರವೀಂದ್ರನಾಥ್.

  • ರಾಜು ಕನ್ಡಡ ಮೀಡಿಯಂ ರಾಜ್ಯೋತ್ಸವ

    raju kannada medium kannada rajyotsava

    ರಾಜು ಕನ್ನಡ ಮೀಡಿಯಂ. ಇದು ರಾಜ್ಯೋತ್ಸವದ ಸಂದರ್ಭಕ್ಕೆ, ಸಂಭ್ರಮಕ್ಕೆ, ಸಂಕಟಕ್ಕೆ ಹೇಳಿ ಮಾಡಿಸಿದಂತಾ ಚಿತ್ರ ಎಂದರೆ ತಪ್ಪಾಗಲ್ಲ. ಚಿತ್ರದ ಕಥೆ ಇರುವುದೇ ಕನ್ನಡ ಮೀಡಿಯಂ ಹುಡುಗ, ಇಂಗ್ಲಿಷ್ ಬರದೇ ಅನುಭವಿಸುವ ಸಂಕಟಗಳಲ್ಲಿ. ಪ್ರತಿಭೆಯೆಂದರೆ, ಇಂಗ್ಲಿಷ್ ಗೊತ್ತಿರುವುದಷ್ಟೇ ಅಲ್ಲ ಎಂದು ಸಾರುವ ಸಿನಿಮಾ ರಾಜು ಕನ್ನಡ ಮೀಡಿಯಂ.

    ಈ ಮಾತನ್ನು ಹೇಳುವುದು ನಾಯಕ ಒಬ್ಬನೇ ಅಲ್ಲ. ನಾಯಕನ ಜೊತೆ ಕಿಚ್ಚ ಸುದೀಪ್ ಇದ್ದಾರೆ. ಸ್ಟಾರ್ ನಟನ  ಜೊತೆ ಕಿರಿಕ್ ಕೀರ್ತಿ, ಓಂಪ್ರಕಾಶ್ ರಾವ್, ಬಿಗ್‍ಬಾಸ್ ಪ್ರಥಮ್, ರೇಡಿಯೋ ಜಾಕಿ ರ್ಯಾಪಿಡ್ ರಶ್ಮಿ, ಇಂದ್ರಜಿತ್ ಲಂಕೇಶ್.. ಹೀಗೆ ತಾರೆಯರ ದಂಡೇ ಇದೆ. ಇವರೆಲ್ಲರೂ ಚಿತ್ರದಲ್ಲಿ ಕನ್ನಡದ ಬಗ್ಗೆಯೇ ಮಾತನಾಡುತ್ತಾರೆ. ಇಂಗ್ಲಿಷ್ ಗೊತ್ತಿಲ್ಲ ಎನ್ನುವುದು ದೊಡ್ಡ ಸಮಸ್ಯೆ ಅಲ್ಲವೇ ಅಲ್ಲ ಎನ್ನುತ್ತಾರಂತೆ. ಹೇಗೆ ಎಂದರೆ, ನಿರ್ದೇಶಕ ನರೇಶ್ ಗುಟ್ಟು ಬಿಟ್ಟುಕೊಡಲ್ಲ. ಚಿತ್ರಮಂದಿರದಲ್ಲೇ ನೋಡಿ ಎನ್ನುತ್ತಾರೆ. 

    ಒಂದರ ಹಿಂದೊಂದರಂತೆ ಹಿಟ್ ಚಿತ್ರಗಳನ್ನೇ ಕೊಟ್ಟ ನಿರ್ಮಾಪಕ ಸುರೇಶ್, ರಾಜು ಕನ್ನಡ ಮೀಡಿಯಂ ಮೂಲಕ ಒಂದು ಸೂಪರ್ ಹಿಟ್ ಚಿತ್ರದ ನಿರೀಕ್ಷೆಯಲ್ಲಿದ್ದಾರೆ.

  • ರಾಜು ಕನ್ನಡ ಮೀಡಿಯಂ V/S ಫಸ್ಟ್ ರ್ಯಾಂಕ್ ರಾಜು

    raju kannada medium speciality

    ರಾಜು ಕನ್ನಡ ಮೀಡಿಯಂ ಹಾಗೂ ಫಸ್ಟ್ ರ್ಯಾಂಕ್ ರಾಜು. ಎರಡೂ ಚಿತ್ರಗಳಲ್ಲಿ ಚಿತ್ರತಂಡ ಹೆಚ್ಚೂ ಕಡಿಮೆ ಒಂದೇ. ನಿರ್ಮಾಪಕರಷ್ಟೇ ಬೇರೆ. ತೆರೆಗೆ ಸಿದ್ಧವಾಗಿರುವ ಈ ಚಿತ್ರದಲ್ಲೂ ರಾಜು ಇದ್ದಾನೆ. ಹೀಗಿರುವಾಗ ಆ ಚಿತ್ರಕ್ಕೂ ಈ ಚಿತ್ರಕ್ಕೂ ಏನು ವ್ಯತ್ಯಾಸ..? 

    ಫಸ್ಟ್ ರ್ಯಾಂಕ್ ರಾಜು ಇಂಗ್ಲಿಷ್ ಮೀಡಿಯಂನಲ್ಲಿ ಓದಿದ ರ್ಯಾಂಕ್ ಸ್ಟೂಡೆಂಟ್ ಕಥೆಯಾದರೆ, ರಾಜು ಕನ್ನಡ ಮೀಡಿಯಂ, ಕನ್ನಡದ ಮಾಧ್ಯಮದಲ್ಲಿ ಕಲಿತ, ಇಂಗ್ಲಿಷ್ ಗೊತ್ತಿಲ್ಲದ ಪ್ರತಿಭಾವಂತನ ಕಥೆ. ಇನ್ನು ಚಿತ್ರಕ್ಕೆ ರಾಜು ಎಂದು ಹೆಸರಿಡೋಕೂ ಕಾರಣಗಳಿವೆ. ಏಕೆಂದರೆ, ನಾಯಕ ನಟ ಗುರುನಂದನ್ ಅವರಿಗೇ ತಮ್ಮ ಹೆಸರು ಮರೆತುಹೋಗುವಷ್ಟು ರಾಜು ಆಗಿ ಗುರುತಿಸಿಕೊಂಡುಬಿಟ್ಟಿದ್ದಾರೆ. ಸ್ಕೂಲು ಹುಡುಗನಿಂದ ಪ್ರಬುದ್ಧ ಯುವಕನವರೆಗೆ ವಿಭಿನ್ನ ಶೇಡ್‍ಗಳಲ್ಲಿ ಕಾಣಿಸಿಕೊಂಡಿರುವ ಗುರುನಂದನ್‍ಗೆ, ಚಿತ್ರದ ಮೇಲೆ ಭರ್ಜರಿ ನಿರೀಕ್ಷೆಯಿದೆ.

    ಕಿಚ್ಚ ಸುದೀಪ್ ಜೊತೆ ನಟಿಸಿದ್ದು ನನ್ನ ಪುಣ್ಯ ಎನ್ನುವ ಗುರುನಂದನ್‍ಗೆ, ಅವರ ಜೊತೆ ನಟಿಸಿದ್ದು ಮರೆಯಲಾಗದ ಅನುಭವವಂತೆ. ನಿರ್ಮಾಪಕ ಮತ್ತು ನಿರ್ದೇಶಕರಿಬ್ಬರಿಗೂ ಕಥೆ & ಚಿತ್ರಕಥೆಯ ಮೇಲೆ ನಂಬಿಕೆಯಿತ್ತು. ಇನ್ನು ಚಿತ್ರದಲ್ಲಿ ಹೊಟ್ಟೆ ಹುಣ್ಣಾಗಿಸುವಂತೆ ನಗಿಸಬಲ್ಲ ಡೈಲಾಗುಗಳಿಗೆ ಬರವಿಲ್ಲ.

  • ರಾಜುಗೆ ಧೈರ್ಯ ಹೇಳ್ತಾರೆ ಸುದೀಪ್

    sudeep in raju kannada medium

    ರಾಜು ಕನ್ನಡ ಮೀಡಿಯಂ ಚಿತ್ರದಲ್ಲಿ ಸುದೀಪ್ ಅವರದ್ದು ಅತಿಥಿ ನಟನ ಪಾತ್ರ. ಸುದೀಪ್ ಅವರ ಸ್ಟೈಲಿಷ್ ಲುಕ್, ಗಾಲ್ಫ್ ಸ್ಟಿಕ್ ಹಿಡಿದಿರುವ ಫೋಟೋ ನೋಡಿದವರಿಗೆಲ್ಲ ಕಿಚ್ಚನ ಪಾತ್ರ ಏನು..? ಹೇಗಿರುತ್ತೆ..? ಎಂಬ ಕುತೂಹಲ ಇದ್ದೇ ಇತ್ತು. ಚಿತ್ರದಲ್ಲಿ ಸುದೀಪ್ ಅವರದ್ದು ರಾಜುಗೆ ಧೈರ್ಯ ಹೇಳುವ ಪಾತ್ರವಂತೆ.

    ಕೀಳರಿಮೆ, ಇಂಗ್ಲಿಷ್ ಬರದೆ ಒದ್ದಾಡುವ ನಾಯಕ ರಾಜು ಅಲಿಯಾಸ್ ಗುರುನಂದನ್‍ಗೆ ಧೈರ್ಯ ಹೇಳುವ, ಆತ್ಮವಿಶ್ವಾಸ ತುಂಬುವ ಪಾತ್ರದಲ್ಲಿ ಸುದೀಪ್ ನಟಿಸಿದ್ದಾರೆ. ಕೆಲವೇ ನಿಮಿಷಗಳ ಕಾಲ ತೆರೆಯ ಮೇಲಿರುವ ಸುದೀಪ್, ಇಡೀ ಚಿತ್ರಕ್ಕೆ ಟರ್ನಿಂಗ್ ನೀಡಲಿದ್ದಾರೆ.

    ನರೇಶ್ ನಿರ್ದೇಶನದ ಚಿತ್ರ, ಬಿಡುಗಡೆಗೆ ರೆಡಿಯಾಗಿದೆ. ಚಿತ್ರದಲ್ಲಿ ವಿದೇಶಿ ಯುವತಿಯ ಪಾತ್ರದಲ್ಲಿ ಏಂಜಲಿನಾ ನಟಿಸಿದ್ದು, ಆಕೆಯ ಪಾತ್ರ ಏನು..? ಎಂಬ ಕುತೂಹಲವೂ ಇದೆ. ಬಹುಶಃ ಆಕೆ ವಿದೇಶದಲ್ಲಿದ್ದರೂ, ಕನ್ನಡವನ್ನು ಅಭಿಮಾನಿಸುವ ಯುವತಿಯಾಗಿ ನಟಿಸಿರಬಹುದು ಎಂಬುದು ನಿರೀಕ್ಷೆ.

  • ವಿದೇಶಕ್ಕೆ ಕನ್ನಡ ರಾಜು ಯಾತ್ರೆ..!

    raju kannada medium flies foreign

    ಕರ್ನಾಟಕದಲ್ಲಿ ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ಕೊಡುತ್ತಿರುವ ರಾಜು ಕನ್ನಡ ಮೀಡಿಯಂ ಚಿತ್ರ ವಿದೇಶಕ್ಕೆ ಹಾರೋಕೆ ಸಿದ್ಧವಾಗಿದೆ. ಕೆ.ಎ.ಸುರೇಶ್ ನಿರ್ಮಾಣದ ರಾಜು ಕನ್ನಡ ಮೀಡಿಯಂ ಚಿತ್ರಕ್ಕೆ ಸುದೀಪ್ ಸ್ಟಾರ್‍ಪಟ್ಟವನ್ನೇ ಕೊಟ್ಟಿದ್ದರು. ಗುರುನಂದನ್, ಆವಂತಿಕಾ ಶೆಟ್ಟಿ, ಆಶಿಕಾ ರಂಗನಾಥ್, ಚಿಕ್ಕಣ್ಣ ನಟಿಸಿರುವ ರಾಜು ಕನ್ನಡ ಮೀಡಿಯಂ ವಿದೇಶಿ ಮಾರುಕಟ್ಟೆಗೆ ಲಗ್ಗೆಯಿಡೋಕೆ ಹೊರಟಿದೆ.

    ಕೆನಡ, ಸಿಂಗಾಪುರ್, ಆಸ್ಟ್ರೇಲಿಯ ಹಾಗೂ ಅಮೆರಿಕಾಗಳಲ್ಲಿ 30 ಚಿತ್ರಮಂದಿರಗಳಲ್ಲಿ ರಾಜು ಕನ್ನಡ ಮೀಡಿಯಂ ಪ್ರದರ್ಶನವಾಗುತ್ತಿದೆ. ಇಡೀ ವಾರ ಯಾವುದೇ ದಿನ ಬೇಕಾದರೂ ಸಿನಿಮಾ ನೋಡಬಹುದು. ಮಲ್ಟಿಪ್ಲೆಕ್ಸ್‍ಗಳನ್ನು ಇಡೀ ವಾರಕ್ಕೆ ಬುಕ್ ಮಾಡಲಾಗಿದೆ ಎಂದು ಹೇಳಿದೆ ಚಿತ್ರತಂಡ.

     

     

  • ಸಿಂಗ ಡೈರೆಕ್ಟರ್ ಚಿತ್ರಕ್ಕೆ ಹರಿಪ್ರಿಯಾ

    haripriya in gurunandan's next

    ಕನ್ನಡದ ಬ್ಯುಸಿ ಸ್ಟಾರಿಣಿ ಹರಿಪ್ರಿಯಾ ಮತ್ತೊಂದು ಚಿತ್ರಕ್ಕೆ ಯೆಸ್ ಎಂದಿದ್ದಾರೆ. ಸಿಂಗ ಖ್ಯಾತಿಯ ವಿಜಯ್ ಕಿರಣ್ ನಿರ್ದೇಶನದ ಚಿತ್ರಕ್ಕೆ ಜಯಣ್ಣ ನಿರ್ಮಾಪಕ. ಗುರುನಂದನ್ ಹೀರೋ.

    ` ಈ ಹಿಂದೆ ಜಯಣ್ಣ ಬ್ಯಾನರ್‍ನ ಬುಲೆಟ್ ಬಸ್ಯಾದಲ್ಲಿ ನಟಿಸಿದ್ದೆ. ಬೆಲ್‍ಬಾಟಂ ಚಿತ್ರದ ವಿತರಕ ಕೂಡಾ ಜಯಣ್ಣ. ಈಗ ಮತ್ತೊಮ್ಮೆ ಚಾನ್ಸ್ ಸಿಕ್ಕಿದೆ. ಪಾತ್ರವೂ ಚೆನ್ನಾಗಿದೆ. ಕಂಪ್ಲೀಟ್ ಜಾನರ್' ಎಂದಿದ್ದಾರೆ ಹರಿಪ್ರಿಯಾ.

    ಕನ್ನಡ್ ಗೊತ್ತಿಲ್ಲ, ಎಲ್ಲಿದ್ದೆ ಇಲ್ಲಿ ತನಕ, ಬಿಚ್ಚುಗತ್ತಿ, ಕಥಾಸಂಗಮ.. ಹೀಗೆ ಸಾಲು ಸಾಲು ಚಿತ್ರಗಳು ಹರಿಪ್ರಿಯಾ ಲಿಸ್ಟಿನಲ್ಲಿವೆ.

     

  • ಸುದೀಪ್ ನೆಗೆಟಿವ್ ರೋಲ್ ಮಾಡಿದ್ದಾರಾ..?

    did sudeep play negative shade?

    ಕಿಚ್ಚ ಸುದೀಪ್‍ಗೆ ನೆಗೆಟಿವ್ ಪಾತ್ರಗಳು ಹೊಸದಲ್ಲ. ತೆಲುಗು, ತಮಿಳಿನಲ್ಲಿ ಈಗಾಗಲೇ ನೆಗೆಟಿವ್ ಶೇಡ್ ಇರುವ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮಿಂಚಿಯೂ ಇದ್ದಾರೆ. ಆದರೆ, ಕನ್ನಡದಲ್ಲಿ ನೆಗೆಟಿವ್ ಪಾತ್ರಗಳನ್ನು ಮಾಡಿದವರಲ್ಲ. ಹಾಗೆಂದು ಸುದೀಪ್ ಇಮೇಜ್‍ಗೆ ಅಂಟಿಕೊಂಡು ಕುಳಿತವರೇನೂ ಅಲ್ಲ. ಆ ಇಮೇಜ್‍ನ್ನು ರಾಜು ಕನ್ನಡ ಮೀಡಿಯಂ ಚಿತ್ರದಲ್ಲಿ ಮುರಿದಿದ್ದಾರೆ ಎನ್ನುವ ಸುದ್ದಿ ಇದೆ.

    ರಾಜು ಕನ್ನಡ ಮೀಡಿಯಂನಲ್ಲಿ ಸುದೀಪ್ ಗೆಸ್ಟ್‍ರೋಲ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ಅದು ಅಗರ್ಭ ಶ್ರೀಮಂತನ ಪಾತ್ರ. ಮೂಲಗಳ ಪ್ರಕಾರ ಅದು ನೆಗೆಟಿವ್ ರೋಲ್. ಆದರೆ, ಚಿತ್ರತಂಡ ಈ ಗುಟ್ಟನ್ನು ಮಾತ್ರ ಬಿಟ್ಟುಕೊಡೋದಿಲ್ಲ. ಇನ್ನೊಂದು ಮೂಲಗಳ ಪ್ರಕಾರ, ಸುದೀಪ್ ಅವರದ್ದು ಸ್ಫೂರ್ತಿ ತುಂಬುವ ರೋಲ್ ಮಾಡೆಲ್ ಪಾತ್ರ. ಹೌದಾ ಎಂದರೆ, ಅದಕ್ಕೂ ಚಿತ್ರ ತಂಡ ಮಾತನಾಡೋದಿಲ್ಲ.

    ಎಲ್ಲದಕ್ಕೂ ಉತ್ತರ ಸಿಗೋದು ಜನವರಿ 19ರಂದು. ಆ ದಿನ ಸಿನಿಮಾ ಥಿಯೇಟರ್‍ಗೆ ಲಗ್ಗೆಯಿಡುತ್ತಿದೆ. 

  • ಸ್ವಮೇಕ್‍ಗಾಗಿ ಕಾದು ಸಿನಿಮಾ ಒಪ್ಪಿದ ಗುರುನಂದನ್

    gurunandan okays manju swaraj

    ಫಸ್ಟ್ ರ್ಯಾಂಕ್ ರಾಜು, ರಾಜು ಕನ್ನಡ ಮೀಡಿಯಂ ಚಿತ್ರಗಳ ಸಕ್ಸಸ್ ನಂತರ ಗುರುನಂದನ್ ಮತ್ತೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ. ಅದು ಮಂಜು ಸ್ವರಾಜ್ ನಿರ್ದೇಶನದ ಚಿತ್ರ. ಕಥೆ ಓಕೆ ಆಗಿದೆ. ತಂತ್ರಜ್ಞರ ಆಯ್ಕೆ ನಡೆಯುತ್ತಿದೆ. ರಾಜು ಕನ್ನಡ ಮೀಡಿಯಂ ನಂತರ ಗುರುನಂದನ್ ಅವರ ಬಳಿ ಹಲವು ನಿರ್ಮಾಪಕರು ಬಂದಿದ್ದಾರೆ. ಆದರೆ, ಬಂದವರೆಲ್ಲ ರೀಮೇಕ್ ಚಿತ್ರಗಳನ್ನೇ ಹಿಡಿದು ತಂದಿದ್ದಾರೆ. ಆದರೆ, ಸ್ವಮೇಕ್ ಕಥೆಯನ್ನೇ ಮಾಡೋಣ ಎಂದು ನಿರ್ಧರಿಸಿ ಎಲ್ಲವನ್ನೂ ತಿರಸ್ಕರಿಸಿದೆ. ಮಂಜು ಸ್ವರಾಜ್ ಅವರ ಕಥೆ ಇಷ್ಟವಾಯ್ತು ಎಂದಿದ್ದಾರೆ ಗುರುನಂದನ್.

    ಮಂಜು ಸ್ವರಾಜ್ ಚಿತ್ರದ ಜೊತೆ ಜೊತೆಯಲ್ಲೇ ಮತ್ತೊಂದು ಸಿನಿಮಾ ಶುರುವಾಗಲಿದೆ. ಆ ಚಿತ್ರ ಫೈನಲ್ ಹಂತದಲ್ಲಿದ್ದು, ಕೆಲವೇ ದಿನಗಳಲ್ಲಿ ಸ್ಪಷ್ಟ ಮಾಹಿತಿ ನೀಡಲಿದ್ದೇನೆ ಎಂದಿದ್ದಾರೆ ಗುರು. ಅದರ ನಂತರ ಮತ್ತೊಮ್ಮೆ ರಾಜು ಕನ್ನಡ ಮೀಡಿಯಂ ನಿರ್ದೇಶಕರ ಜೊತೆ ಇನ್ನೊಂದು ಸಿನಿಮಾ ಮಾಡಲಿದ್ದಾರಂತೆ.