ಹೀರೋ ಚಿತ್ರದ ಟ್ರೇಲರ್ ನೋಡಿದವರಿಗೆಲ್ಲ ಕಾಡೋದು ಒಂದೇ ಪ್ರಶ್ನೆ. ಹೀರೋ ಪಾತ್ರ ಏನು..?
ಆತ ಯಾಕೆ ಆ ಎಸ್ಟೇಟ್ಗೆ ಕಟಿಂಗ್ ಮಾಡೋ ನೆಪದಲ್ಲಿ ಬರ್ತಾನೆ..?
ಆ ಎಸ್ಟೇಟ್ನಲ್ಲಿ ನಿಜಕ್ಕೂ ಏನು ನಡೀತಾ ಇರುತ್ತೆ..?
ಅಷ್ಟೆಲ್ಲ ಜನ ರಕ್ತಸಿಕ್ತವಾಗಿ ಬಿದ್ದಿರೋದ್ಯಾಕೆ..?
ವಿಲನ್ ಪ್ರಮೋದ್ ಶೆಟ್ಟಿ ಕ್ರೂರಿ. ಆದರೆ ಯಾಕೆ..?
ಆತನ ಬಂಗಲೆಯಲ್ಲಿರೋ ಆಕೆ ಆತನ ಹೆಂಡತಿನಾ..? ಅಲ್ಲವಾ..?
ಹೀರೋ ಜೊತೆ ಅವಳು ಓಡಿ ಬರೋದ್ಯಾಕೆ..?
ಆ ಹೀರೋಯಿನ್, ಹೀರೋ ಕೈಗೆ ರೇಝರ್ ಕೊಡೋದ್ಯಾಕೆ..
ಮತ್ತು..
ಕೊನೆಯಲ್ಲಿ..
ಅವನು ಅವಳ ಕುತ್ತಿಗೆಯನ್ನೇ ಸೀಳೋದ್ಯಾಕೆ..?
ಒಂದಲ್ಲ.. ಎರಡಲ್ಲ.. ಹತ್ತಾರು ಪ್ರಶ್ನೆಗಳು. ಇಲ್ಲಿರೋ ಪ್ರಶ್ನೆಗಳ ಜೊತೆಗೆ ನಿಮ್ಮ ತಲೆಯಲ್ಲೂ ಇನ್ನೊಂದಷ್ಟು ಪ್ರಶ್ನೆಗಳು ಮೂಡಿದ್ದರೆ, ಅದಕ್ಕೆ ಕಾರಣ ಚಿತ್ರದ ಒಂದೇ ಒಂದು ಟ್ರೇಲರ್. ಒಂದು ಟ್ರೇಲರ್, ಒಂದು ಹಾಡು ಬಿಟ್ಟು, ಮತ್ತೇನನ್ನೂ ತೋರಿಸದೆ.. ಅಷ್ಟರಲ್ಲೇ ಪ್ರಶ್ನೆ, ಕುತೂಹಲ, ಸಸ್ಪೆನ್ಸ್ ಹುಟ್ಟು ಹಾಕಿರೋದು ನಿರ್ದೇಶಕ ಭರತ್ ರಾಜ್.
ಎಷ್ಟೆಂದರೂ ಅವರು ಪಳಗಿರೋದು ರಿಷಬ್ ಗಡಿಯಲ್ಲಿ. ಇನ್ನು ಗಾನವಿ ಲಕ್ಷ್ಮಣ್ ಅಚ್ಚರಿ ಹುಟ್ಟಿಸೋದು ಖರೆ. ಆದರೆ.. ಆಕೆಗೂ, ರಿಷಬ್ ಶೆಟ್ಟಿಗೂ ಏನು ಲಿಂಕ್..? ಅವಳ್ಯಾಕೆ ವಿಲನ್ ಬಂಗಲೆಯಲ್ಲಿದ್ದಾಳೆ..?
ಎಷ್ಟೆಲ್ಲ ಪ್ರಶ್ನೆಗಳು.. ಈ ಪ್ರಶ್ನೆಗಳಿಗೆಲ್ಲ ಉತ್ತರ ನೋಡಬೇಕು ಅಂದ್ರೆ ಮಾರ್ಚ್ 5ನೇ ತಾರೀಕು ಥಿಯೇಟರಿಗೇ ಹೋಗಬೇಕು. ಅಷ್ಟರಮಟ್ಟಿಗೆ ಸಿನಿಮಾದ ಕುತೂಹಲವನ್ನ ಟ್ರೇಲರ್ನಲ್ಲೇ ಸೃಷ್ಟಿಸಿದ್ದಾರೆ ರಿಷಬ್ ಶೆಟ್ಟಿ.