` director shashank - chitraloka.com | Kannada Movie News, Reviews | Image

director shashank

 • ಉಪ್ಪಿ-ಶಶಾಂಕ್ ಸಿನಿಮಾ ಶುರು - ಇಬ್ಬರು ಹೀರೋಯಿನ್ಸ್

  upendra new movie with shashank

  ಉಪೇಂದ್ರ ಮತ್ತು ಶಶಾಂಕ್ ಕಾಂಬಿನೇಷನ್ನಿನ ಬಹುನಿರೀಕ್ಷಿತ ಸಿನಿಮಾ ಶುರುವಾಗಿದೆ. ಸ್ಕ್ರಿಪ್ಟ್ ಪೂಜೆ ಮಾಡಿ ಶಶಾಂಕ್, ಹೊಸ ಸಿನಿಮಾಗೆ ಓಂಕಾರ ಹಾಕಿದ್ದಾರೆ. ಚಿತ್ರದಲ್ಲಿ ಶಶಾಂಕ್, ಸದ್ಯದ ರಾಜಕೀಯ ಬೆಳವಣಿಗೆಗಳನ್ನೇ ಇಟ್ಟುಕೊಂಡು ಕಥೆ ಮಾಡಿದ್ದಾರಂತೆ. ಶಶಾಂಕ್ ಸದ್ಯಕ್ಕೆ ಬಿಟ್ಟುಕೊಟ್ಟಿರುವ ಗುಟ್ಟು ಇಷ್ಟೇ.

  ಉಪೇಂದ್ರಗೆ ಅಮ್ಮ ಐ ಲವ್ ಯು ಖ್ಯಾತಿಯ ನಿಶ್ವಿಕಾ ನಾಯ್ಡು ಹಾಗೂ ಬೀರ್‍ಬಲ್ ಖ್ಯಾತಿಯ ರುಕ್ಮಿಣಿ ನಾಯಕಿಯರು. ಸೆಪ್ಟೆಂಬರ್ 18ರಂದು ಉಪೇಂದ್ರ ಹುಟ್ಟುಹಬ್ಬವಿದ್ದು, ಆ ದಿನ ಚಿತ್ರದ ಟೈಟಲ್ ಹಾಗೂ ಫಸ್ಟ್‍ಲುಕ್ ಹೊರತರಲು ನಿರ್ಧರಿಸಿದ್ದಾರೆ ಶಶಾಂಕ್.

 • ಡ್ರಗ್ಸ್ ಕೇಸ್ : ಕೆಂಪೇಗೌಡ ನಿರ್ಮಾಪಕರ ಮೇಲೆ ಪೊಲೀಸ್ ರೇಡ್

  ಡ್ರಗ್ಸ್ ಕೇಸ್ : ಕೆಂಪೇಗೌಡ ನಿರ್ಮಾಪಕರ ಮೇಲೆ ಪೊಲೀಸ್ ರೇಡ್

  ಡ್ರಗ್ಸ್ ಕೇಸ್‍ನಲ್ಲಿ ಸೆಲಬ್ರಿಟಿಗಳ ಬೆನ್ನು ಹತ್ತಿರುವ ಪೊಲೀಸರು ಈಗ ಕೆಂಪೇಗೌಡ-2 ನಿರ್ಮಾಪಕ ಶಂಕರೇಗೌಡರ ಬೆನ್ನು ಬಿದ್ದಿದ್ದಾರೆ. ಡಾಲರ್ಸ್ ಕಾಲನಿಯಲ್ಲಿರುವ ಮನೆಯ ಮೇಲೆ ಗೋವಿಂದಪುರ ಠಾಣೆ ಪೊಲೀಸರು ದಾಳಿ ಮಾಡಿದ್ದು, ಕಚೇರಿ, ಮನೆ, ಕಾರುಗಳ ಪರಿಶೀಲನೆ ಮಾಡಿದ್ದಾರೆ.

  ಇತ್ತೀಚೆಗೆ ಅರೆಸ್ಟ್ ಆಗಿದ್ದ ಬಿಗ್‍ಬಾಸ್ ಮಸ್ತಾನ್ ಶಂಕರೇಗೌಡರ ಹೆಸರು ಹೇಳಿದ್ದಾನೆ ಎನ್ನಲಾಗಿದೆ. ಕೆಲವು ಮೊಬೈಲ್ಸ್ ಹಾರ್ಡ್ ಡಿಸ್ಕ್ ವಶಪಡಿಸಿಕೊಂಡಿರುವ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ಸೂಚನೆ ಕೊಟ್ಟಿದ್ದಾರೆ.

 • ತಾಯಿಗೆ ತಕ್ಕ ಮಗ ಟ್ರೇಲರ್ ಹವಾ..

  thayige thakka maga creates craze

  ತಾಯಿಗೆ ತಕ್ಕ ಮಗ. ಶಶಾಂಕ್ ನಿರ್ದೇಶನದ ಸಿನಿಮಾ ಟೈಟಲ್‍ನಿಂದಲೇ ಸದ್ದು ಮಾಡಿದ್ದ ಸಿನಿಮಾ. ಇನ್ನು ಎಕ್ಸ್‍ಕ್ಯೂಸ್ ಮಿ ನಂತರ ಸುಮಲತಾ ಮತ್ತು ಅಜೇಯ್ ರಾವ್ ಮತ್ತೊಮ್ಮೆ ತಾಯಿ ಮಗನಾಗಿ ನಟಿಸಿದ್ದು, ಚಿತ್ರದ ನಿರೀಕ್ಷೆ ಹೆಚ್ಚಿಸಿತ್ತು. ಆ ನಿರೀಕ್ಷೆಗಳನ್ನು ಇನ್ನಷ್ಟು ಹೆಚ್ಚಿಸಿದೆ ಚಿತ್ರದ ಟ್ರೇಲರ್.

  ಕಿಚ್ಚು ಸುದೀಪ್ ಹಿನ್ನೆಲೆ ಧ್ವನಿಯೊಂದಿಗೆ ಶುರುವಾಗುವ ಚಿತ್ರದ ಟ್ರೇಲರ್‍ನಲ್ಲಿ, ತಾಯಿ-ಮಗನ ಬಾಂಧವ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಸಾಹಸ ದೃಶ್ಯ ಮತ್ತು ಪಂಚಿಂಗ್ ಡೈಲಾಗುಗಳ ಹಿನ್ನೆಲೆಯಲ್ಲೂ ತಾಯಿ-ಮಗನ ಸೆಂಟಿಮೆಂಟ್ ಕಾಣುವಂತೆ ಮಾಡಿರೋದು ಶಶಾಂಕ್ ಸ್ಪೆಷಾಲಿಟಿ. 

  ಚಿತ್ರದ ನಾಯಕಿ ಆಶಿಕಾ ರಂಗನಾಥ್, ಸಿನಿಮಾದ ಹಾಟ್ ಹಾಟ್ ಸಬ್ಜೆಕ್ಟ್. ಕ್ಲಾಸ್ ಮತ್ತು ಮಾಸ್ ಎರಡೂ ಮಿಕ್ಸ್ ಆಗಿರುವ ಸಿನಿಮಾ ಅಜೇಯ್ ರಾವ್ ಅವರ 25ನೇ ಸಿನಿಮಾ ಎನ್ನವುದು ವಿಶೇಷ.

 • ತಾಯಿಗೆ ತಕ್ಕ ಮಗ ನಂತರ ಶಶಾಂಕ್ ಉಪ್ಪಿ ಸಿನಿಮಾ

  shsshank all set to work with upendra

  ತಾಯಿಗೆ ತಕ್ಕ ಮಗ ಚಿತ್ರದ ಪ್ರಮೋಷನ್‍ನಲ್ಲಿ ಬ್ಯುಸಿಯಾಗಿರುವ ನಿರ್ದೇಶಕ ಶಶಾಂಕ್, ತಮ್ಮ ಮುಂದಿನ ಚಿತ್ರವನ್ನೂ ಪ್ರಕಟಿಸಿಬಿಟ್ಟಿದ್ದಾರೆ. ತಾಯಿಗೆ ತಕ್ಕ ಮಗ ಚಿತ್ರದ ಆಡಿಯೋ ಸಕ್ಸಸ್ ಸುದ್ದಿಗೋಷ್ಟಿಯಲ್ಲೇ ಮುಂದಿನ ಸಿನಿಮಾ ಘೋಷಿಸಿರುವ ಶಶಾಂಕ್,  ತಾಯಿಗೆ ತಕ್ಕ ಮಗ ರಿಲೀಸ್ ನಂತರ ಉಪ್ಪಿ ಸಿನಿಮಾ ಕೆಲಸಗಳು ಶುರುವಾಗಲಿವೆ ಎಂದಿದ್ದಾರೆ.

  ಚಿತ್ರದ ಕಾರ್ಯಕ್ರಮದಲ್ಲಿ ಅತಿಥಿಯಾಗಿದ್ದವರು ಉಪೇಂದ್ರ ಮತ್ತು ಪ್ರಿಯಾಂಕಾ ಉಪೇಂದ್ರ. 2019ರ ಆರಂಭದಿಂದಲೇ ಉಪ್ಪಿ ಸಿನಿಮಾ ಕೆಲಸ ಶುರುವಾಗಲಿದೆ ಎಂದಿದ್ದಾರೆ ಶಶಾಂಕ್. ಸದ್ಯಕ್ಕೆ ತಾಯಿಗೆ ತಕ್ಕ ಮಗ ಚಿತ್ರದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ.

  ನವೆಂಬರ್ 16ಕ್ಕೆ ತಾಯಿಗೆ ತಕ್ಕ ಮಗ ರಿಲೀಸ್ ಆಗುತ್ತಿದ್ದು, ಸುಮಲತಾ ಅಂಬರೀಷ್, ಅಜೇಯ್ ರಾವ್, ಅಶಿಕಾ ರಂಗನಾಥ್ ಪ್ರಧಾನ ಪಾತ್ರಗಳಲ್ಲಿದ್ದಾರೆ.

 • ತಾಯಿಗೆ ತಕ್ಕ ಮಗ ಶಶಾಂಕ್, ಕಾಯ್ಕಿಣಿಗೆ ತಕ್ಕ ನಿರ್ದೇಶಕ

  thayige thakka maga team image

  ಈ ಮಾತು ಹೇಳೋಕೆ ಕಾರಣ ಇದೆ. ಏಕೆಂದರೆ ಈ ಚಿತ್ರದ ನಿರ್ದೇಶಕ ಶಶಾಂಕ್. ಸಿಕ್ಸರ್‍ನಿಂದ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಿದೇಶಕ ಶಶಾಂಕ್, ತಮ್ಮ ಮೊದಲ ಚಿತ್ರದಿಂದಲೂ ಹೊಸಬರಿಗೆ ಬೆನ್ನು ತಟ್ಟುತ್ತಲೇ ಬಂದವರು. ಶಶಾಂಕ್ ಅವರ ಪ್ರತಿ ಚಿತ್ರದಲ್ಲೂ ಕನಿಷ್ಠ ಐದಾರು ಹೊಸ ಪ್ರತಿಭೆಗಳಿರುತ್ತವೆ. ಕಲಾವಿದರು, ತಂತ್ರಜ್ಞರು, ಸಾಹಿತಿಗಳು.. ಹೀಗೆ ಪ್ರತಿ ಕಡೆಯಲ್ಲೂ ಹೊಸ ಹೊಸಬರನ್ನು ಪರಿಚಯಿಸುತ್ತಲೇ ಇರುತ್ತಾರೆ. 

  ಇನ್ನು ಕಾಯ್ಕಿಣಿಗೆ ತಕ್ಕ ನಿರ್ದೇಶಕ ಎಂದಿದ್ದು ಇದೇ ಕಾರಣಕ್ಕೆ. ತಾಯಿಗೆ ತಕ್ಕ ಮಗ ಚಿತ್ರದ ಆಡಿಯೋ ರಿಲೀಸ್ ಕಾರ್ಯಕ್ರಮದಲ್ಲಿ ಜಯಂತ್ ಕಾಯ್ಕಿಣಿ ``ಪ್ರತಿ ಚಿತ್ರದಲ್ಲೂ ಒಬ್ಬೊಬ್ಬ ಸಾಹಿತಿಗೆ, ಹೊಸ ಪ್ರತಿಭೆಗೆ ಅವಕಾಶ ಕೊಟ್ಟರೂ ಸಾಕು. ವರ್ಷಕ್ಕೆ ಕನಿಷ್ಠ 100 ಸಾಹಿತಿಗಳು ಬೆಳಕಿಗೆ ಬರುತ್ತಾರೆ. ಚಿತ್ರ ನಿರ್ದೇಶಕರು ಈ ಬಗ್ಗೆ ಮನಸ್ಸು ಮಾಡಬೇಕು'' ಎಂದಿದ್ದರು.

  ಆದರೆ, ಕಾಯ್ಕಿಣಿ ಹೇಳಿದ್ದನ್ನು ಜಾರಿಗೇ ತಂದಿರೋ ಶಶಾಂಕ್, ತಾಯಿಗೆ ತಕ್ಕ ಮಗ ಚಿತ್ರದಲ್ಲೂ ಅದನ್ನು ಮುಂದವರೆಸಿದ್ದಾರೆ. ಚಿತ್ರದಲ್ಲಿನ ಎದೆಯ ಒಳಗೆ ಬಲಗಾಲಿಟ್ಟು ಒಳಗೆ ಬಂದೇ ನೀನು ಹಾಡನ್ನು ಬರೆದಿರುವುದು ಹೊಸ ಪ್ರತಿಭೆ ರಾಘವೇಂದ್ರ. ಹಾಡು ಹಿಟ್ ಆಗಿದೆ. 

  ಸಿಕ್ಸರ್, ಮೊಗ್ಗಿನ ಮನಸ್ಸು, ಕೃಷ್ಣಲೀಲ, ಕೃಷ್ಣನ್ ಲವ್ ಸ್ಟೋರಿ.. ಹೀಗೆ ಪ್ರತಿ ಚಿತ್ರದಲ್ಲೂ ಹೊಸಬರನ್ನು ಪರಿಚಯಿಸಿ ಗೆದ್ದಿರುವ ಶಶಾಂಕ್, ಈ ಚಿತ್ರದಲ್ಲೂ ಭರ್ಜರಿ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.

 • ತಾಯಿಗೆ ತಕ್ಕ ಮಗನಿಗೆ ವಿರಾಮ

  thayige thakka maga gets injury break

  ತಾಯಿಗೆ ತಕ್ಕ ಮಗ. ನಿರ್ದೇಶಕ ಶಶಾಂಕ್ ನಿರ್ಮಾಣದ, ಅವರದ್ದೇ ನಿರ್ದೇಶನದ ಸಿನಿಮಾ. ಆರಂಭದಿಂದಲೂ ನಿರ್ದೇಶಕರ ಬದಲಾವಣೆಯಿಂದಾಗಿ ಸುದ್ದಿಯಲ್ಲಿದ್ದ ಚಿತ್ರದ ಚಿತ್ರೀಕರಣಕ್ಕೆ ಈಗ ಅಲ್ಪ ವಿರಾಮ. ಶಶಾಂಕ್ ನಿರ್ದೇಶನ, ನಿರ್ಮಾಣ ಎಂಬ ಕಾರಣಕ್ಕಾಗಿಯೇ ಬಹು ನಿರೀಕ್ಷೆ ಹುಟ್ಟಿಸಿರುವ ಚಿತ್ರ, ಶೇ.50ರಷ್ಟು ಚಿತ್ರೀಕರಣ ಮುಗಿಸಿದೆ. 

  ಈ ಮಧ್ಯೆ ಸಾಹಸ ದೃಶ್ಯವೊಂದರ ಚಿತ್ರೀಕರಣ ವೇಳೆ ನಾಯಕ ನಟ ಅಜೇಯ್ ರಾವ್, ಗಾಯ ಮಾಡಿಕೊಂಡಿದ್ದಾರೆ. ಹೀಗಾಗಿ ಶೂಟಿಂಗ್‍ಗೆ ಅಲ್ಪವಿರಾಮ. ಅಜೇಯ್ ರಾವ್‍ಗೆ ವಿಶ್ರಾಂತಿ.

  ಏಪ್ರಿಲ್ 2ನೇ ವಾರದಿಂದ ಮತ್ತೊಮ್ಮೆ ಚಿತ್ರೀಕರಣ ಶುರುವಾಗಲಿದೆ. ಸುಮಲತಾ ಅಂಬರೀಷ್ ಪ್ರಮುಖ ಪಾತ್ರದಲ್ಲಿರುವ ಚಿತ್ರಕ್ಕೆ ಆಶಿಕಾ ರಂಗನಾಥ್ ನಾಯಕಿ.

 • ಪುಣ್ಯಾತ್ಮ ಉಪೇಂದ್ರ

  punyathma image

  ಕರ್ನಾಟಕದವರ ಪಾಲಿಗೆ ಪುಣ್ಯಾತ್ಮ ಎಂಬ ಮಾತು ಕೇಳಿದ ಕೂಡಲೇ ರಾಹುಲ್ ಗಾಂಧಿ ನೆನಪಾಗಿಬಿಡುತ್ತಾರೆ. ರಾಹುಲ್ ಗಾಂಧಿಗೆ ಅಂಥಾದ್ದೊಂದು ಬಿರುದು ನೀಡಿದ್ದವರು ಮಾಜಿ ಸಿಎಂ ಕುಮಾರಸ್ವಾಮಿ. ಆದರೆ ಚಿತ್ರಲೋಕಕ್ಕೂ  ರಾಜಕೀಯಕ್ಕೂ ಎತ್ತಣಿಂದೆಣ ಸಂಬಂಧ. ಹೀಗಾಗಿ ನಾವ್ ಹೇಳ್ತಿರೋದು ಸಿನಿಮಾ ಪುಣ್ಯಾತ್ಮನ ಬಗ್ಗೆ.

  ಕನ್ನಡದ ಸ್ಟಾರ್ ನಿರ್ದೇಶಕ ಶಶಾಂಕ್ ಮತ್ತು ರಿಯಲ್ ಸ್ಟಾರ್ ಉಪೇಂದ್ರ ಒಂದಾಗುತ್ತಿದ್ದು, ಆ ಚಿತ್ರಕ್ಕೆ ಶಶಾಂಕ್ ಪುಣ್ಯಾತ್ಮ ಅನ್ನೋ ಟೈಟಲ್ ಕೊಟ್ಟಿದ್ದಾರೆ.

  you_tube_chitraloka1.gif

  ಸಿನಿಮಾದ ಪ್ರಿ-ಪ್ರೊಡಕ್ಷನ್ ಕೆಲಸಗಳನ್ನೆಲ್ಲ ಮುಗಿಸಿರುವ ಶಶಾಂಕ್, ಈಗ ಲೊಕೇಷನ್ ಹುಡುಕಾಟದಲ್ಲಿದ್ದಾರೆ. ಶಶಾಂಕ್ ತರಾತುರಿಯಲ್ಲಿ ಸಿನಿಮಾ ಮಾಡುವ ಜಾಯಮಾನದವರಲ್ಲ. ಪಕ್ಕಾ ಪ್ಲಾನ್ ಮಾಡುವ ಡೈರೆಕ್ಟರ್. ಹೀಗಾಗಿ ಎಲ್ಲವನ್ನೂ ಸಿದ್ಧ ಮಾಡಿಕೊಂಡು ನವೆಂಬರ್ ಹೊತ್ತಿಗೆ ಶೂಟಿಂಗ್ ಶುರು ಮಾಡಲಿದ್ದಾರೆ.

 • ಭಟ್-ಶಶಾಂಕ್ ಸಿನಿಮಾಗೆ ರಚಿತಾ ರಾಮ್

  rachita in bhat shashank's movie

  ಡಿಂಪಲ್ ಕ್ವೀನ್ ರಚಿತಾ ರಾಮ್ ಇಂಡಸ್ಟಿçಗೆ ಬಂದು ಕೆಲವು ವರ್ಷಗಳೇ ಆಗಿವೆ. ಬಹುತೇಕ ಎಲ್ಲ ಸ್ಟಾರ್ ನಟರ ಜೊತೆಯಲ್ಲೂ ನಟಿಸಿರುವ ರಚಿತಾ ರಾಮ್, ಕನ್ನಡದ ಈ ಇಬ್ಬರೂ ಸ್ಟಾರ್ ಡೈರೆಕ್ಟರ್ ಚಿತ್ರಗಳಲ್ಲಿ ನಟಿಸಿರಲಿಲ್ಲ. ಯೋಗರಾಜ್ ಭಟ್ ಮತ್ತು ಶಶಾಂಕ್ ಇಬ್ಬರ ಚಿತ್ರಗಳಲ್ಲೂ ರಚಿತಾ ರಾಮ್ ಇರಲಿಲ್ಲ. ಈಗ ಸಮಯ ಕೂಡಿ ಬಂದಿದೆ. ಭಟ್ಟರು ಮತ್ತು ಶಶಾಂಕ್ ಇಬ್ಬರೂ ಒಟ್ಟಿಗೇ ನಿರ್ಮಿಸುತ್ತಿರುವ ಹೊಸ ಚಿತ್ರದಲ್ಲಿ ರಚಿತಾ ರಾಮ್ ನಾಯಕಿ.

  ರಿಷಿ ನಾಯಕರಾಗಿರುವ ಚಿತ್ರಕ್ಕಿನ್ನೂ ಟೈಟಲ್ ಫಿಕ್ಸ್ ಆಗಿಲ್ಲ. ರಚಿತ ಇಲ್ಲಿ ಇಂಗ್ಲೆAಡಿನಿAದ ವಾಪಸ್ ಆದ ಎನ್‌ಆರ್‌ಐ ಪಾತ್ರದಲ್ಲಿದ್ದರೆ, ರಿಷಿ ಪಕ್ಕಾ ಲೋಕಲ್ ಹುಡುಗ. ರಿಷಿ ಜೊತೆಯಲ್ಲೂ ರಚಿತಾಗಿದು ಫಸ್ಟ್ ಸಿನಿಮಾ. ಇನ್ನು ಚಿತ್ರದ ಮತ್ತೊಂದು ಪ್ರಮುಖ ಪಾತ್ರದಲ್ಲಿ ಅನಂತ್ ನಾಗ್ ಇದ್ದಾರೆ.

  ಚಿತ್ರಕ್ಕೆ ಭಟ್ಟರ ಕ್ಯಾಂಪಿನ ಹುಡುಗ ಮೋಹನ್ ಸಿಂಗ್ ನಿರ್ದೇಶಕರಾಗಿದ್ದಾರೆ. ಸಿನಿಮಾ ಡಿಸೆಂಬರ್ ತಿಂಗಳಲ್ಲಿ ಚಿತ್ರೀಕರಣ ಶುರು ಮಾಡಲಿದೆ.

 • ಮತ್ತೆ ಒಂದಾದ ಅಜೇಯ್ ಶಶಾಂಕ್ ಜೋಡಿ

  ಮತ್ತೆ ಒಂದಾದ ಅಜೇಯ್ ಶಶಾಂಕ್ ಜೋಡಿ

  ಅಜೇಯ್ ರಾವ್ ಮತ್ತು ಶಶಾಂಕ್ ಅವರದ್ದು ಹಿಟ್ ಕಾಂಬಿನೇಷನ್. ಕೃಷ್ಣ ಸಿರೀಸ್‍ನಲ್ಲಿ ಅಜೇಯ್ ಮತ್ತು ಶಶಾಂಕ್ ಜೋಡಿ ಸೋತಿದ್ದೇ ಇಲ್ಲ. ಈಗ ಅವರಿಬ್ಬರೂ ಮತ್ತೆ ಒಂದಾಗಿದ್ದಾರೆ. ಹಾಗಂತ, ಆ ಚಿತ್ರಕ್ಕೆ ಶಶಾಂಕ್ ಡೈರೆಕ್ಟರ್ ಅಲ್ಲ. ಕಥೆಗಾರ. ಅಜೇಯ್ ರಾವ್ ಹೀರೋ. ನಿರ್ದೇಶಕರಾಗಿರೋದು ಶಂಕರ್ ಅನ್ನೋ ಹುಡುಗ. ಆತ ನಿರ್ದೇಶಕ, ನಿರ್ಮಾಪಕ ಗುರು ದೇಶಪಾಂಡೆ ಶಿಷ್ಯ.

  ತಮ್ಮಲ್ಲಿ ಸಹಾಯಕರಾಗಿದ್ದ ಹುಡುಗರನ್ನು ಲಾಂಚ್ ಮಾಡುವ ಕ್ಯಾಂಪೇನ್‍ನ್ನೇ ಮಾಡುತ್ತಿರುವಂತಿದೆ ಗುರು ದೇಶಪಾಂಡೆ. ಈ ಬಾರಿ ಶಂಕರ್ ಅವರಿಗೆ ಡೈರೆಕ್ಟರ್ ಸೀಟ್ ಕೊಟ್ಟಿದ್ದಾರೆ. ಜನವರಿ 24ರಂದು ಚಿತ್ರಕ್ಕೆ ಮುಹೂರ್ತ ಫಿಕ್ಸ್ ಮಾಡಿದ್ದಾರೆ. ಸ್ಟಾರ್ ಹೀರೋಯಿನ್ ಒಬ್ಬರು ಆಯ್ಕೆಯಾಗುವ ಸಾಧ್ಯತೆ ಇದ್ದು, ಮಾತುಕತೆ ನಡೆಯುತ್ತಿದೆಯಂತೆ.

 • ಶಶಾಂಕ್-ಉಪ್ಪಿ ಕಾಂಬಿನೇಷನ್ ಸಿನಿಮಾ

  first look of upendra shashank on first look

  ಉಪೇಂದ್ರರ ಸ್ಟೈಲೇ ಬೇರೆ.. ಶಶಾಂಕ್ ಸ್ಟೈಲೇ ಬೇರೆ.. ಉತ್ತರ ಧ್ರುವ.. ದಕ್ಷಿಣ ಧ್ರುವ.. ಈ ಎರಡೂ ಧ್ರುವಗಳು ಒಂದಾದರೆ ಹೇಗಿರುತ್ತೆ..? ಅಲ್ಲೊಂದು ವೈಬ್ರೇಷನ್ ಸೃಷ್ಟಿಯಾಗುತ್ತೆ. ಸದ್ಯಕ್ಕೆ ಅಂತಾದ್ದೊಂದು ವೈಬ್ರೇಷನ್ ಸೃಷ್ಟಿಸಿದೆ ಶಶಾಂಕ್-ಉಪೇಂದ್ರ ಜೋಡಿ.

  ಶಶಾಂಕ್ ನಿರ್ದೇಶನದಲ್ಲಿ ಉಪೇಂದ್ರ ಹೀರೋ ಆಗಿ ನಟಿಸುತ್ತಿದ್ದು, ಕಥೆ ಸಿದ್ಧವಾಗಿದೆ. ಫೆಬ್ರವರಿ ಮೊದಲ ವಾರ ಚಿತ್ರದ ಫಸ್ಟ್‍ಲುಕ್ ಹೊರಬರುತ್ತಿದೆ. ಉಪೇಂದ್ರ ತಮ್ಮ ಕೆರಿಯರ್‍ನಲ್ಲಿ ಇದುವರೆಗೂ ಮಾಡದೇ ಇರುವಂತಹ ಪಾತ್ರ ಸೃಷ್ಟಿಸಿದ್ದೇನೆ ಎನ್ನುತ್ತಿದ್ದಾರೆ ನಿರ್ದೇಶಕ ಶಶಾಂಕ್.

  ಐ ಲವ್ ಯೂ ಚಿತ್ರ ರಿಲೀಸ್ ಆಗುವ ಹೊತ್ತಿಗೆ, ಶಶಾಂಕ್ ಸಿನಿಮಾ ಸೆಟ್ಟೇರಿರುತ್ತೆ. ಏಪ್ರಿಲ್‍ನಲ್ಲಿ ಚಿತ್ರದ ಚಿತ್ರೀಕರಣ ಶುರುವಾಗುತ್ತೆ.

 • ಶಶಾಂಕ್-ಉಪ್ಪಿ ಚಿತ್ರಕ್ಕೆ ನಿಶ್ವಿಕಾ ನಾಯ್ಡು

  nishvika naidu in upendra - shashank's film

  ನಿಶ್ವಿಕಾ ನಾಯ್ಡು, ಇತ್ತೀಚೆಗೆ ಕನ್ನಡದಲ್ಲಿ ಬ್ಯುಸಿಯಾಗುತ್ತಿರುವ ನಟಿಯರಲ್ಲಿ ಒಬ್ಬರು. ವಾಸು ನಾನ್ ಪಕ್ಕಾ ಕಮರ್ಷಿಯಲ್, ಅಮ್ಮ ಐ ಲವ್ ಯು, ಪಡ್ಡೆಹುಲಿ ಚಿತ್ರಗಳ ಮೂಲಕ ಗಮನ ಸೆಳೆದಿದ್ದ ನಿಶ್ವಿಕಾ ನಾಯ್ಡು, ಈಗ ಉಪ್ಪಿಗೆ ಜೋಡಿಯಾಗಿದ್ದಾರೆ. 

  ಅದರಲ್ಲೂ ಕನ್ನಡದ ಸ್ಟಾರ್ ನಿರ್ದೇಶಕ ಶಶಾಂಕ್ ನಿರ್ದೇಶನ ಹಾಗೂ ನಿರ್ಮಾಣದ ಹೊಸ ಚಿತ್ರಕ್ಕೆ ನಿಶ್ವಿಕಾ ಹೀರೋಯಿನ್. ಬುದ್ದಿವಂತ 2 ಮುಗಿದ ಕೂಡಲೇ ಈ ಚಿತ್ರ ಶುರುವಾಗಲಿದೆ. ಶಶಾಂಕ್ ಸದ್ಯಕ್ಕೆ ಪ್ರಿ ಪ್ರೊಡಕ್ಷನ್ ಕೆಲಸಗಳಲ್ಲಿ ಬ್ಯುಸಿ.

 • ಹ್ಯಾಟ್ರಿಕ್ ಜೋಡಿಯಾಗ್ತಾರಾ ಶಶಾಂಕ್-ಅಜಯ್ ರಾವ್..?

  will shashank ajai rao jodi be called hatrick jodi

  ತಾಯಿಗೆ ತಕ್ಕ ಮಗ. ಶಶಾಂಕ್ ನಿರ್ದೇಶನದ ಸಿನಿಮಾ. ನಟ ಅಜಯ್ ರಾವ್‍ಗೆ ಇದು 25ನೇ ಸಿನಿಮಾ. ಮತ್ತೊಂದು ಹಿಟ್ ನಿರೀಕ್ಷೆಯಲ್ಲಿದೆ ಜೋಡಿ. ಏಕೆಂದರೆ, ಇದು ಇವರಿಬ್ಬರೂ ಒಟ್ಟಾಗಿ ಮಾಡಿರುವ 3ನೇ ಸಿನಿಮಾ. ಈ ಹಿಂದೆ ಶಶಾಂಕ್, ಅಜಯ್ ರಾವ್ ಅವರಿಗಾಗಿ ಕೃಷ್ಣನ್ ಲವ್ ಸ್ಟೋರಿ ಮಾಡಿದ್ದರು. ಅದು ಸೂಪರ್ ಹಿಟ್. ಕೃಷ್ಣಲೀಲ ಮಾಡಿದರು. ಅದೂ ಸೂಪರ್ ಹಿಟ್. ಈಗ ತಾಯಿಗೆ ತಕ್ಕ ಮಗ ಸಿದ್ಧ ಮಾಡಿದ್ದಾರೆ. ಮುಂದಿನ ವಾ ತೆರೆಗೆ ಬರುತ್ತಿರುವ ತಾಯಿಗೆ ತಕ್ಕ ಮಗ ಚಿತ್ರದ ಮೇಲಿನ ನಿರೀಕ್ಷೆ ಮತ್ತು ಹಾಡುಗಳು ಹಿಟ್ ಆಗಿರುವ ರೀತಿ ನೋಡಿದರೆ, ಸಿನಿಮಾ ಹಿಟ್ ಸಾಲಿಗೆ ಸೇರುವ ಸಾಧ್ಯತೆಗಳು ಹೆಚ್ಚಿವೆ. 

  ಇನ್ನು ಅಜಯ್ ರಾವ್‍ಗೆ ಮೊದಲ ಚಿತ್ರದಲ್ಲಿ ತಾಯಿಯಾಗಿದ್ದ ಸುಮಲತಾ, 25ನೇ ಚಿತ್ರದಲ್ಲೂ ತಾಯಿಯಾಗಿದ್ದಾರೆ. ಎಕ್ಸ್‍ಕ್ಯೂಸ್ ಮಿ ಕೊಟ್ಟ ಸ್ಟಾರ್‍ಗಿರಿಯನ್ನು 25ನೇ ಚಿತ್ರವೂ ಕೊಡಲಿದೆ ಎಂಬ ನಿರೀಕ್ಷೆ ಚಿತ್ರತಂಡದ್ದು. ಅಜಯ್ ರಾವ್, ಸುಮಲತಾ, ಆಶಿಕಾ ರಂಗನಾಥ್ ಪ್ರಧಾನ ಪಾತ್ರದಲ್ಲಿರುವ ಸಿನಿಮಾ, ಭಾರಿ ನಿರೀಕ್ಷೆ ಹುಟ್ಟುಹಾಕಿದೆ.

 • ‘ತಾಯಿಗೆ ತಕ್ಕ ಮಗ’ ಚಿತ್ರಕ್ಕೆ ಜುಡಾ ಸ್ಯಾಂಡಿ ಸಂಗೀತ

  juda sandy

  ಮೊಗ್ಗಿನ ಮನಸ್ಸು, ಕೃಷ್ಣನ್ ಲವ್ ಸ್ಟೋರಿ, ಕೃಷ್ಣ ಲೀಲಾ, ಬಚ್ಚನ್, ಮುಂಗಾರು ಮಳೆ 2 ಹೀಗೆ ಹಿಟ್ ಮೇಲೆ ಹಿಟ್ ಚಿತ್ರ ಕೊಟ್ಟಿರುವ ನಿರ್ದೇಶ ಶಶಾಂಕ್ ತಮ್ಮದೇ ಹೋಮ್ ಬ್ಯಾನರ್​ನಲ್ಲಿ ನಿರ್ಮಿಸುತ್ತಿರುವ ಚಿತ್ರ ತಾಯಿಗೆ ತಕ್ಕ ಮಗ.

  ಚಿತ್ರದ ಹೀರೋ ಅಜೇಯ್ ರಾವ್. ಕೃಷ್ಣನ್ ಲವ್ ಸ್ಟೋರಿ, ಕೃಷ್ಣಲೀಲಾ ಎಂಬ ಎರಡು ಸೂಪರ್ ಹಿಟ್ ಚಿತ್ರ ನೀಡಿರುವ ಜೋಡಿ, ಈಗ ‘ತಾಯಿಗೆ ತಕ್ಕ ಮಗ' ಚಿತ್ರದಲ್ಲಿ ಮತ್ತೆ ಒಂದಾಗುತ್ತಿದೆ. ಆದರೆ ಚಿತ್ರದ ನಾಯಕಿ ಮತ್ತು ತಾಯಿಯ ಪಾತ್ರಕ್ಕೆ ಇನ್ನೂ ಶಶಾಂಕ್ ಮನಸ್ಸಿಗೆ ತೃಪ್ತಿಯಾಗಬಲ್ಲ ಕಲಾವಿದರು ಸಿಕ್ಕಿಲ್ಲ. ಅವರಿಗೆ ಇನ್ನೂ ಹುಡುಕಾಟ ನಡೆಯುತ್ತಲೇ ಇದೆ. 

  ಆದರೆ, ಚಿತ್ರಕ್ಕೆ ಸಂಗೀತ ನಿರ್ದೇಶಕರ ಆಯ್ಕೆ ಮುಗಿಸಿದ್ದಾರೆ ಶಶಾಂಕ್. ಜುಡಾ ಸ್ಯಾಂಡಿ ತಾಯಿಗೆ ತಕ್ಕ ಮಗ ಚಿತ್ರದ ಮ್ಯೂಸಿಕ್ ಡೈರೆಕ್ಟರ್. ಜುಡಾ ಸ್ಯಾಂಡಿ ಯಾರು ಎಂದರೆ, ಒಂದ್ಸಲ ಆಪರೇಷನ್ ಅಲಮೇಲಮ್ಮ ಚಿತ್ರವನ್ನು ನೆನಪು ಮಾಡಿಕೊಳ್ಳಿ. ಆ ಚಿತ್ರಕ್ಕೆ ಸಂಗೀತ ನೀಡಿದ್ದವರೇ ಈ ಜುಡಾ ಸ್ಯಾಂಡಿ. 

  ಚಿತ್ರದ ಕಥೆ ಮತ್ತು ಚಿತ್ರಕಥೆಯನ್ನು ಸಿದ್ಧ ಮಾಡಿಕೊಂಡಿರುವ ಶಶಾಂಕ್, ಅಕ್ಟೋಬರ್ 2ನೇ ವಾರದಲ್ಲಿ ಚಿತ್ರದ ಶೂಟಿಂಗ್ ಶುರು ಮಾಡಲಿದ್ದಾರೆ. ಚಿತ್ರಕ್ಕೆ ಡಾ.ರಾಜ್ ಕುಮಾರ್ ಅವರ ಅಭಿನಯದ ಚಿತ್ರದ ಹೆಸರು ಇಟ್ಟುಕೊಂಡಿರು ವಕಾಋಣ, ಜವಾಬ್ದಾರಿ ಹೆಚ್ಚಿದೆ ಎಂದಿದ್ದಾರೆ ಶಶಾಂಕ್. 

  1978ರಲ್ಲಿ ಬಿಡುಗಡೆಯಾಗಿದ್ದ ಡಾ.ರಾಜ್ ಅಭಿನಯದ ತಾಯಿಗೆ ತಕ್ಕ ಮಗ ಚಿತ್ರದಲ್ಲಿ ಪದ್ಮಪ್ರಿಯಾ, ಸಾಹುಕಾರ್ ಜಾನಕಿ, ಪಂಡರೀಭಾಯಿ, ಅಶ್ವತ್ಥ್, ತೂಗುದೀಪ ಶ್ರೀನಿವಾಸ್..ಮೊದಲಾದವರು ನಟಿಸಿದ್ದರು. ಆದರೆ, ಆ ಚಿತ್ರಕ್ಕೂ ಈ ಚಿತ್ರಕ್ಕೂ ಸಂಬಂಧವಿಲ್ಲ. ಆದರೆ, ತಾಯಿ ಮಗನ ಸೆಂಟಿಮೆಂಟ್ ಇರಲಿದೆ ಎಂದಿದ್ದಾರೆ ಶಶಾಂಕ್. 

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery