ಆರೆಂಜ್. ಪ್ರಶಾಂತ್ ರಾಜ್ ನಿರ್ದೇಶನದ ಈ ಸಿನಿಮಾ ಪಕ್ಕಾ ಪೈಸಾ ವಸೂಲ್ ಚಿತ್ರ. ನೋಡುವ ಪ್ರೇಕ್ಷಕರು ಕೊಟ್ಟ ಹಣಕ್ಕೆ ಮೋಸವಿಲ್ಲ, ಪಕ್ಕಾ ಎಂಟರ್‍ಟೈನರ್ ಎಂದು ಭರವಸೆ ಕೊಡ್ತಾರೆ ನಿರ್ದೇಶಕ ಪ್ರಶಾಂತ್ ರಾಜ್. ಅಷ್ಟೇ ಅಲ್ಲ, ಚಿತ್ರದ ನಿರ್ಮಾಪಕರಿಗೂ ಆಗಲೇ ಚಿತ್ರದ ಪೈಸಾ ವಸೂಲ್ ಆಗಿ ಹೋಗಿದೆಯಂತೆ. ಚಿತ್ರವನ್ನು ಆಮೇಜಾನ್‍ನವರು ಉತ್ತಮ ಮೊತ್ತಕ್ಕೆ ಖರೀದಿಸಿದ್ದು, ಬಿಡಗಡೆಗೆ ಮುನ್ನವೇ ನಿರ್ಮಾಪಕರು ಸೇಫ್ ಝೋನ್‍ನಲ್ಲಿದ್ದಾರಂತೆ.
ನಾಳೆ ಸಿನಿಮಾ ರಾಜ್ಯಾದ್ಯಂತ ತೆರೆ ಕಾಣುತ್ತಿದ್ದು, ನಂತರ ವಿದೇಶದಲ್ಲೂ ರಿಲೀಸ್ ಮಾಡುವ ಯೋಚನೆ ಚಿತ್ರತಂಡಕ್ಕಿದೆ. ಇಡೀ ಸಿನಿಮಾದಲ್ಲಿ ಪಾತ್ರಧಾರಿಗಳು ಸೀರಿಯಸ್ಸಾಗಿದ್ದರೂ, ನೋಡುವವರು ನಗುತ್ತಿರುತ್ತಾರೆ. ಅಷ್ಟರಮಟ್ಟಿಗೆ ಚಿತ್ರಕಥೆ ಕಲರ್‍ಫುಲ್ಲಾಗಿದೆ ಅಂತಾರೆ ಗಣೇಶ್.
ಪ್ರಿಯಾ ಆನಂದ್-ಗಣೇಶ್ ಜೋಡಿ, ಕನ್ನಡ ಚಿತ್ರರಂಗದ ಸೂಪರ್ ಹಿಟ್ ಜೋಡಿಯಾಗಲಿದೆ ಎನ್ನುವ ಭರವಸೆ ಪ್ರಶಾಂತ್ ರಾಜ್ ಅವರದ್ದು.