` jaggesh - chitraloka.com | Kannada Movie News, Reviews | Image

jaggesh

 • ಜಗ್ಗೇಶ್ ಪುತ್ರನ ಮೇಲೆ ರೌಡಿಸಂ - ಆರೋಪಿ ಕಾಂಗ್ರೆಸ್ ಕಾರ್ಯಕರ್ತನೆಂಬ ಕಾರಣಕ್ಕೇ ಬಂಧನವಾಗಿಲ್ಲವಾ..?

  jaggesh son gururaj jaggesh

  ಜಗ್ಗೇಶ್ ಕೇವಲ ನಟರಲ್ಲ. ಮಾಜಿ ಶಾಸಕರೂ ಹೌದು. ಕರ್ನಾಟಕದ ಐಕಾನ್​ಗಳಲ್ಲಿ ಒಬ್ಬರು. ಈಗ ಹಲ್ಲೆಗೊಳಗಾಗಿರುವ,  ಚಾಕು ಇರಿತಕ್ಕೊಳಗಾಗಿರುವ ಗುರುರಾಜ್ ಕೂಡಾ ಉದಯೋನ್ಮುಖ ಕಲಾವಿದ. ರೌಡಿಸಂ ನಡೆದಿರೋದು ನಟ್ಟನಡುರಾತ್ರಿಯಲ್ಲಿ ಅಲ್ಲ. ಬೆಳ್ಳಂಬೆಳಗ್ಗೆ ಹೊತ್ತಿನಲ್ಲಿ. ಕಾರ್ ನಂಬರ್ ಸಿಕ್ಕಿದೆ. ಆರೋಪಿ ಶಿವರಾಂನ ಹೆಸರು, ವಿಳಾಸ ಎಲ್ಲವೂ ಸಿಕ್ಕಿದೆ. ಆದರೆ, ಇದುವರೆಗೆ ಆರೋಪಿ ಬಂಧನವಾಗಿಲ್ಲ.

  ನಟ ಜಗ್ಗೇಶ್ ಮತ್ತು ಪರಿಮಳಾ ಜಗ್ಗೇಶ್, ಮಗ ಹೇಗೋ ದೊಡ್ಡ ಗಂಡಾಂತರದಿಂದ ಪಾರಾದ ಎಂದು ನಿಟ್ಟುಸಿರುಬಿಟ್ಟಿದ್ದಾರೆ. ಆ ಹಲ್ಲೆ ನಡೆದಾಗ ಅವರ ಮಗ ಕಾರಿನಲ್ಲೇ ಇದ್ದ. ಅವನಿಗೆ ಏನೂ ಆಗಲಿಲ್ಲವಲ್ಲ, ದೇವರು ದೊಡ್ಡವನು ಎನ್ನುತ್ತಿದ್ದಾರೆ. 

  ಇಷ್ಟು ಹೊತ್ತಾದರೂ ಆರೋಪಿ ಬಂಧನವಾಗದೇ ಇರಲು ಕಾರಣವೇನು..? ಹುಡುಕುತ್ತಾ ಹೊರಟರೆ ಆತ ಕಾಂಗ್ರೆಸ್ ಕಾರ್ಯಕರ್ತ ಎಂಬ ಮಾತು ಕೇಳಿಬಂದಿದೆ. ಆತ ಕಾಂಗ್ರೆಸ್​ನ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿರುವ ಫೋಟೋಗಳು ಸಿಕ್ಕಿವೆ. ಶಾಸಕರ ಜೊತೆ ಇರುವ ಫೋಟೋಗಳೂ ಇವೆ. ಇದೇ ಕಾರಣಕ್ಕೆ ಆತನನ್ನು ಬಂಧಿಸಲು ಪೊಲೀಸರಿಗೆ ಸಾಧ್ಯವಾಗಿಲ್ಲವಾ..? 

  ಸದ್ಯಕ್ಕೇನೋ ಪೊಲೀಸರ ಬಗ್ಗೆ ಜಗ್ಗೇಶ್ ಒಳ್ಳೆಯ ಮಾತುಗಳನ್ನೇ ಹೇಳುತ್ತಿದ್ದಾರೆ. ಆದರೆ, ಜಗ್ಗೇಶ್  ಅಭಿಮಾನಿಗಳು ಮತ್ತು ನಾಗರಿಕರು ಕೇಳುತ್ತಿರುವ ಪ್ರಶ್ನೆಗಳಿಗೆ ಉತ್ತರ ಮತ್ತು ಸಮಾಧಾನ ಸಿಗುವುದು ಆತನ ಬಂಧನದ ನಂತರವೇ. ಆತನ ಬಂಧನಕ್ಕೆ ಎರಡು ವಿಶೇಷ ತಂಡ ರಚಿಸಿರುವ ಪೊಲೀಸರು ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.

  Related Articles :-

  ಜಗ್ಗೇಶ್ ಪುತ್ರನ ಮೇಲೆ ರೌಡಿಗಳ ದಾಳಿ - ಕಾರ್ ಗುರುತು ಪತ್ತೆ

  ಜಂಪ್ ಮಾಡದೇ ಇದ್ದಿದ್ದರೆ ಜೀವಕ್ಕೇ ಅಪಾಯವಿತ್ತು - ಗುರುರಾಜ್ ಜಗ್ಗೇಶ್

  ನಟ ಜಗ್ಗೇಶ್ ಪುತ್ರನಿಗೆ ರೌಡಿಗಳಿಂದ ಚಾಕು ಇರಿತ

 • ಜಗ್ಗೇಶ್ ಪುತ್ರನಿಗೆ ಚಾಕು ಹಾಕಿದವ 4 ದಿನವಾದರೂ ಪೊಲೀಸರಿಗೆ ಸಿಗಲಿಲ್ಲ. ಆದರೆ..

  jaggesh son attacked

  ನಟ ಜಗ್ಗೇಶ್ ಅವರ ಪುತ್ರ ಗುರುರಾಜ್ ಜಗ್ಗೇಶ್ ಮೇಲೆ ಚಾಕು ಹಾಕಿ ಪರಾರಿಯಾಗಿದ್ದ ಆರೋಪಿ ಶಿವಶಂಕರ್, 4 ದಿನವಾದರೂ ಪೊಲೀಸರ ಕೈಗೆ ಸಿಕ್ಕಿಲ್ಲ. ಕಾಂಗ್ರೆಸ್ ಕಾರ್ಯಕರ್ತನೂ ಆಗಿರುವ ಆರೋಪಿ ಶಿವಶಂಕರ್, ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡು ಓಡಾಡುತ್ತಿದ್ದಾನೆ. ಈ ಮಧ್ಯೆಯೇ ಬೆಂಗಳೂರು ಸೆಷನ್ಸ್ ನ್ಯಾಯಾಲಯದಲ್ಲಿ ಶಿವಶಂಕರ್ ಪರ ವಕೀಲರು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ.

  ಆಗಸ್ಟ್  14ರಂದು ಆರ್.ಟಿ.ನಗರದ ಮಠದಹಳ್ಳಿ ಮೈದಾನ ರಸ್ತೆಯಲ್ಲಿ ಜಗ್ಗೇಶ್ ಹಿರಿಯ ಪುತ್ರ ಗುರುರಾಜ್ ಜಗ್ಗೇಶ್ ಮೇಲೆ ಹಲ್ಲೆಯಾಗಿತ್ತು. ಮಗನನ್ನು ಶಾಲೆಗೆ ಬಿಡಲು ಹೋಗುವಾಗ ಗುರುರಾಜ್ ಕಾರ್​ನ್ನು ಓವರ್​ಟೇಕ್ ಮಾಡಿದ್ದ ಶಿವಶಂಕರ್, ಕಾರಿಗೆ ಗುದ್ದಿದ್ದೂ ಅಲ್ಲದೆ, ಗುರುರಾಜ್ ಮೇಲೆ ಹಲ್ಲೆ ನಡೆಸಿದ್ದ. ತೊಡೆಗೆ ಗಾಯವಾಗಿತ್ತು. ಆರೋಪಿ ಕಾಂಗ್ರೆಸ್ ಕಾರ್ಯಕರ್ತ ಎಂಬ ಕಾರಣಕ್ಕೇ ಬಂಧಿಸಿಲ್ಲ ಎಂಬ ಆರೋಪ ಕೇಳಿಬಂದಿತ್ತು.

  Related Articles :-

  ಜಗ್ಗೇಶ್ ಪುತ್ರನ ಮೇಲೆ ರೌಡಿಸಂ - ಆರೋಪಿ ಕಾಂಗ್ರೆಸ್ ಕಾರ್ಯಕರ್ತನೆಂಬ ಕಾರಣಕ್ಕೇ ಬಂಧನವಾಗಿಲ್ಲವಾ..?

  ಜಂಪ್ ಮಾಡದೇ ಇದ್ದಿದ್ದರೆ ಜೀವಕ್ಕೇ ಅಪಾಯವಿತ್ತು - ಗುರುರಾಜ್ ಜಗ್ಗೇಶ್

  ನಟ ಜಗ್ಗೇಶ್ ಪುತ್ರನಿಗೆ ರೌಡಿಗಳಿಂದ ಚಾಕು ಇರಿತ

 • ಜಗ್ಗೇಶ್ ಯಾರಿಗೋ ಹೊಡೆದ್ರಂತೆ.. ರಿಯಲ್ ಕಥೆ ಏನು..?

  jaggesh clarifies on assault allegation

  ಸುದ್ದಿ ಮಾಧ್ಯಮಗಳಲ್ಲಿ ಶನಿವಾರ ಇದ್ದಕ್ಕಿದ್ದಂತೆ ಒಂದು ವಿಡಿಯೋ ಹರಿದಾಡೋಕೆ ಶುರುವಾಯ್ತು. ಯುವಕನೊಬ್ಬನನ್ನು ಜಗ್ಗೇಶ್ ಎಳೆದಾಡುವ ವಿಡಿಯೋ ಅದು. ಚಿತ್ರನಟರಷ್ಟೇ ಅಲ್ಲ, ಬಿಜೆಪಿ ಮುಖಂಡರೂ ಆಗಿರುವ ಜಗ್ಗೇಶ್ ಸಹಜವಾಗಿಯೇ ಸುದ್ದಿಯಾದರು. ಅತ್ತ ಕಲಾವಿದರ ಕ್ರಿಕೆಟ್ ಕಪ್‍ನಲ್ಲಿ ಬ್ಯುಸಿಯಾಗಿದ್ದ ಜಗ್ಗೇಶ್‍ಗೆ ಫೋನ್‍ಗಳ ಸುರಿಮಳೆಯಾಗತೊಡಗಿತು. ಕೊನೆಗೆ ಈ ಬಗ್ಗೆ ಜಗ್ಗೇಶ್ ಸ್ಪಷ್ಟನೆ ಕೊಟ್ಟಿದ್ದಾರೆ.

  ಜಗ್ಗೇಶ್ ಸ್ಪಷ್ಟನೆ ಇದು. 

  ಮಲ್ಲೇಶ್ವರಂ 8ನೇ ಕ್ರಾಸ್‍ನಲ್ಲಿ ಜಗ್ಗೇಶ್ ನನ್ನ ಸಂಬಂಧಿ ಮಾದೇಗೌಡ(ಭೂಮಿಗೀತ ಚಿತ್ರದ ನಿರ್ಮಾಪಕ) ತಮ್ಮ ಮಗನಿಗೆ ಒಂದು ಔಟ್‍ಲೆಟ್ ಹಾಕಿಕೊಟ್ಟಿದ್ದಾರೆ. ಅಲ್ಲಿಗೆ ರವಿಕುಮಾರ್ ಎಂಬ ಯುವಕ ಆಗಾಗ್ಗೆ ಕಾರ್ಪೊರೇಟರ್ ಮಂಜುನಾಥ್ ಹೆಸರು ಹೇಳಿಕೊಂಡು ಬಂದು ಗಲಾಟೆ ಮಾಡುತ್ತಿದ್ದ. ತೊಂದರೆ ಕೊಡುತ್ತಿದ್ದ. ಇದು ಮಂಜುನಾಥ್ ಅವರ ಗಮನಕ್ಕೂ ತಂದಿದ್ದೆ. ನಮ್ಮ ಯಾವ ಹುಡುಗರೂ ಆ ರೀತಿ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದರು ಮಂಜುನಾಥ್. ನಿನ್ನೆ ರಾತ್ರಿ ಕೂಡಾ ಹಾಗೆಯೇ ಆಯ್ತು. ಆಗ ನನ್ನ ಜೊತೆಯಲ್ಲಿ ಕಾರ್ಪೊರೇಟರ್ ಮಂಜುನಾಥ್ ಕೂಡಾ ಇದ್ದರು. ಅವರ ಜೊತೆಯಲ್ಲಿಯೇ ನಾನು ಜಾಗಕ್ಕೆ ಹೋದೆ. ಆತನನ್ನು ಹಿಡಿದು ಪೊಲೀಸರಿಗೆ  ಒಪ್ಪಿಸಿದ್ದೇನೆ. ಹೀಗೆ ಹಿಡಿಯುವ ವೇಳೆ ತಳ್ಳಾಟಗಳಾಗಿವೆ. ಅಷ್ಟೆ. ನಾನು ಹೊಡೆದಿಲ್ಲ.

  ಆದರೆ, ಇದಕ್ಕೆ ಹೊಡೆತ ತಿಂದಿದ್ದಾರೆ ಎನ್ನಲಾದ ರವಿಕುಮಾರ್ ಹೇಳೋದೇ ಬೇರೆ. ಅವರು ರಸ್ತೆಯಲ್ಲಿಯೇ ಚೇರ್‍ಗಳನ್ನು ಹಾಕಿದ್ದರು. ನಾನು ಪ್ರಶ್ನೆ ಮಾಡಿದೆ. ನಾವು ಬಿಬಿಎಂಪಿಗೆ ದುಡ್ಡು ಕೊಟ್ಟಿದ್ದೇವೆ ಎಂದು ಧಿಮಾಕಿನಿಂದ ಉತ್ತರಿಸಿದ್ರು. ನಾನು ಪ್ರಶ್ನೆ ಮಾಡುವಷ್ಟರಲ್ಲಿ ಜಗ್ಗೇಶ್ ಬಂದು ನನಗೆ ಹೊಡೆದರು ಅನ್ನೋದು ರವಿಕುಮಾರ್ ವಾದ.

  ಜಗ್ಗೇಶ್ ಪ್ರಕಾರ, ವಿವಾದ ಪೊಲೀಸ್ ಠಾಣೆಯಲ್ಲಿ ಇತ್ಯರ್ಥವಾಗಿದೆ. ಅವರು ವಿಡಿಯೋವನ್ನು ವೈರಲ್ ಮಾಡಿದವರ ವಿರುದ್ಧ ಸೈಬರ್ ಕ್ರೈಂಗೆ ದೂರು ಕೊಡುವ ಚಿಂತನೆಯಲ್ಲಿದ್ದಾರೆ.

 • ಜಗ್ಗೇಶ್‍ಗೀಗ.. ಮುದ್ದೆ, ಬಸ್ಸಾರು ಎಲ್ಲ ಅದೇ..

  parimala jaggesh puts jaggesh on diet

  ಪಾಪ... ಜಗ್ಗೇಶ್ ಸಾರು.. ಮೇಡಂನ ಎಷ್ಟು ಪ್ರೀತಿಯಿಂದ ನೋಡ್ಕಂತರೆ. ಊಟ ಹಾಕಕಿಲ್ವೇ.. ಏನಾತಂತೆ.. ಹಂಗೆಲ್ಲ ತಲೆಗ್ ಹುಳ ಬಿಟ್ಕಬೇಡಿ. ಜಗ್ಗೇಶ್ ಅವರಿಗೆ ಅವರ ಪತ್ನಿ ಪರಿಮಳ ಜಗ್ಗೇಶ್, ಉಪ್ಪು, ಹುಳಿ, ಕಾರ.. ಎಲ್ಲವೂ ಇರುವ ಊಟವನ್ನು ಸದ್ಯಕ್ಕೆ ಬಂದ್ ಮಾಡಿದ್ದಾರೆ. ಅವರಿಗೀಗ.. ಮುದ್ದೆ, ಬಸ್ಸಾರು, ಉಪ್ಪಿಟ್ಟು, ಚಿತ್ರಾನ್ನ, ಪಲಾವ್ ಎಲ್ಲ ಅದೇ.. ಪರಂಗಿ ಹಣ್ಣು.

  6 ತಿಂಗಳಿಂದ ಡಯಟ್ ಬಿಟ್ಟು, ಮತ್ತೆ ಊದಿಕೊಳ್ಳೋಕೆ ಶುರುವಾಗಿದ್ದರಂತೆ ಜಗ್ಗೇಶ್. ಈಗ.. ಪರಿಮಳಾ ಮತ್ತೊಮ್ಮೆ ಡಯಟ್ ಶುರುಮಾಡಿಸಿದ್ದಾರೆ. ಬೆಳಗ್ಗೆ, ಮಧ್ಯಾಹ್ನ, ರಾತ್ರಿ.. ಜಗ್ಗೇಶ್‍ಗೀಗ ಪರಂಗಿ ಹಣ್ಣೇ ಸರ್ವಸ್ವವಾಗಿದೆ. 45 ದಿನಗಳಲ್ಲಿ ಈ ಡಯಟ್‍ನಲ್ಲಿ 5 ಕೆಜಿ ತೂಕ ಇಳಿಸಬೇಕು ಜಗ್ಗೇಶ್ ಮುಂದಿರುವ ಟಾರ್ಗೆಟ್.

 • ಜಗ್ಗೇಶ್‍ಗೆ ಟಿಕೆಟ್ - ಮೊದಲು ಹೇಳಿದ್ದು ಯಾರು..?

  jaggesh yet again feels the blessings of divine power

  ನವರಸ ನಾಯಕ ಜಗ್ಗೇಶ್, ಮತ್ತೊಮ್ಮೆ ಚುನಾವಣಾ ಅಖಾಡಕ್ಕಿಳಿಯುತ್ತಿದ್ದಾರೆ. ಯಶವಂತಪುರ ವಿಧಾನಸಭಾ ಕ್ಷೇತ್ರದಿಂದ ಜಗ್ಗೇಶ್ ಈ ಬಾರಿ ಅಭ್ಯರ್ಥಿ. ರಾಜ್ ಹುಟ್ಟುಹಬ್ಬದಂದೇ ನಾಮಪತ್ರ ಸಲ್ಲಿಸುತ್ತಿರುವುದು ವಿಶೇಷ. ಆದರೆ, ಚುನಾವಣೆಗೂ ಮುನ್ನ ಜಗ್ಗೇಶ್ ರಾಜಕೀಯ, ಸ್ಪರ್ಧೆಯ ಸಹವಾಸವೇ ಬೇಡ ಎನ್ನುವಂತಿದ್ದವರು. ವೈರಾಗ್ಯ ಜೀವನದ ಹತ್ತಿರದಲ್ಲಿದ್ದೇನೆ ಎನ್ನುತ್ತಿದ್ದ ಜಗ್ಗೇಶ್, ಟಿಕೆಟ್ ಆಕಾಂಕ್ಷಿಯೂ ಆಗಿರಲಿಲ್ಲ.

  ಇದಕ್ಕೂ ಮುನ್ನ ಜಗ್ಗೇಶ್ ಮಂತ್ರಾಲಯಕ್ಕೆ ಹೋಗಿದ್ದರಂತೆ. ಮನಸ್ಸಿಗೆ ತೋಚಿದಾಗಲೆಲ್ಲ ಮಂತ್ರಾಲಯಕ್ಕೆ ಹೋಗಿ ರಾಯರ ಎದುರು ಕೂರುವುದು ಜಗ್ಗೇಶ್ ಅವರಿಗೆ ಅಭ್ಯಾಸ. ಇತ್ತೀಚೆಗೆ ಹಾಗೆ ಹೋಗಿದ್ದಾಗ, ಅಲ್ಲಿನ ಸ್ವಾಮಿಗಳು ನಿಮಗೆ ಅಧಿಕಾರ ಪ್ರಾಪ್ತಿಯಾಗಲಿದೆ ಎಂದಿದ್ದರಂತೆ. ಆಗ ನಾನು ಚುನಾವಣೆಗೆ ನಿಲ್ಲುತ್ತಿಲ್ಲ, ಹೇಗೆ ಸಾಧ್ಯ ಎಂದು ಜಗ್ಗೇಶ್ ಪ್ರಶ್ನಿಸಿದಾಗ ಸ್ವಾಮಿಗಳು ನಕ್ಕಿದ್ದರಂತೆ.

  ಆಗ ನನಗೆ ಅರ್ಥವಾಗಿರಲಿಲ್ಲ. ಎಲ್ಲವೂ ರಾಯರ ಆಶೀರ್ವಾದ. ರಾಯರು ಬಯಸಿದಂತೆ ನಡೆಯುತ್ತೇನೆ ಎಂದಿದ್ದಾರೆ ಜಗ್ಗೇಶ್. ಅಂದಹಾಗೆ ಜಗ್ಗೇಶ್ ನಾಮಪತ್ರ ಸಲ್ಲಿಸುತ್ತಿರುವುದು ಅವರ ಆರಾಧ್ಯ ದೈವ ಡಾ.ರಾಜ್‍ಕುಮಾರ್ ಹುಟ್ಟುಹಬ್ಬದ ದಿನ ಎನ್ನುವುದು ಇನ್ನೊಂದು ವಿಶೇಷ.

   

 • ಜಪಾನ್‍ನಿಂದ ಹಾರಿಬಂತು 8ಎಂಎಂ

  8mm movie

  ನವರಸ ನಾಯಕ ಜಗ್ಗೇಶ್ ಅಭಿನಯದ 8ಎಂಎಂ ಚಿತ್ರದ ಚಿತ್ರೀಕರಣ ಶುರುವಾಗಿದೆ. ಚಿತ್ರದ ಮುಹೂರ್ತಕ್ಕೆ ಚಿತ್ರರಂಗದ ಗಣ್ಯಾತಿಗಣ್ಯರೆಲ್ಲ ಆಗಮಿಸಿ ಶುಭ ಹಾರೈಸಿದ್ದು ವಿಶೇಷ. ಶಿವರಾಜ್ ಕುಮಾರ್, ಯಶ್, ಸಾ.ರಾ. ಗೋವಿಂದು, ರಾಕ್‍ಲೈನ್ ವೆಂಕಟೇಶ್ ಸೇರಿದಂತೆ ಚಿತ್ರರಂಗದ ದೊಡ್ಡ ಸಮೂಹವೇ ಅಲ್ಲಿತ್ತು. 

  ಚಿತ್ರದ ಮುಹೂರ್ತವಾಗುತ್ತಿದ್ದಂತೆಯೇ, ತುಂಬಾ ದಿನಗಳಿಂದ ಕಾಡುತ್ತಿರುವ ಪ್ರಶ್ನೆ ಜಗ್ಗೇಶ್ ಅವರಿಗೂ ಎದುರಾಗಿದೆ. 8ಎಂಎಂ ತಮಿಳಿನ ``8 ತೊಟ್ಟಕ್ಕಲ್'' ಚಿತ್ರದ ರೀಮೇಕಾ..? ಈ ಪ್ರಶ್ನೆಗೆ ಇಲ್ಲ ಎಂದು ಸ್ಪಷ್ಟವಾಗಿ ಉತ್ತರ ಕೊಟ್ಟಿದ್ದಾರೆ ಜಗ್ಗೇಶ್. ಇದು ಜಪಾನ್‍ನ ಅಕಿರಾ ಕುರುಸೋವಾ ನಿರ್ದೇಶನದ ``ಸ್ಟ್ರೇ ಡಾಗ್ಸ್'' ಚಿತ್ರದಿಂದ ಸ್ಫೂರ್ತಿ ಪಡೆದು ಮಾಡಿರುವ ಕಥೆ. ಹಾಗೆಂದು ಇದು ಸ್ಟ್ರೇ ಡಾಗ್ಸ್ ಚಿತ್ರದ ಯಥಾವತ್ ನಕಲು ಕೂಡಾ ಅಲ್ಲ. ಆ ಕಥೆಯಿಂದ ಸ್ಫೂರ್ತಿ ಪಡೆದು ಇಲ್ಲಿನ ನೇಟಿವಿಟಿಗೆ ತಕ್ಕಂತೆ ಕಥೆ ಹೆಣೆಯಲಾಗಿದೆ.

  ಹರಿಕೃಷ್ಣ ಎಂಬುವವರು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ನಾರಾಯಣ ಸ್ವಾಮಿ, ಇನ್ಫೆಂಟ್ ಸ್ವಾಮಿ, ಸಲೀಂ ಶಾ ನಿರ್ಮಾಪಕರು. ಜೂಡಾ ಸ್ಯಾಂಡಿ ಸಂಗೀತ ನಿರ್ದೇಶನವಿದೆ.

  Related Articles :-

  Jaggesh's New Film 8MM Launched

  Motion poster of '8MM' On Thursday

 • ಟೀಮ್ ಇಷ್ಟವಾದರೆ ಜಗ್ಗೇಶ್ ಹೀಗೆಲ್ಲ ಪ್ರೀತಿಸ್ತಾರೆ..!

  jaggesh supports hangover movie

  ನವರಸ ನಾಯಕ ಜಗ್ಗೇಶ್, ಸ್ವಯಂ ಪ್ರತಿಭೆ, ಛಲದಿಂದ ಚಿತ್ರರಂಗದಲ್ಲಿ ಬೇರೂರಿದವರು. ಹೀಗಾಗಿಯೇ ಹೊಸಬರ ತಂಡಗಳಿಗೆ ಸದಾ ಬೆನ್ನೆಲುಬಾಗಿ ನಿಲ್ಲುವ ಗುಣವೂ ಬೆರೆತಿದೆ. ಅದು ಈಗಿನಿಂದಲ್ಲ... ಹೊಸ ಪ್ರತಿಭೆಗಳ ಚಿತ್ರಗಳಿಗೆ ಸಹಾಯ ಮಾಡುವ, ಕಷ್ಟಕ್ಕೆ ಜೊತೆಯಾಗುವ ಜಗ್ಗೇಶ್... ಈಗ ಮತ್ತೊಂದು ಹೊಸಬರ ಚಿತ್ರಕ್ಕೆ ಬೆನ್ನುತಟ್ಟಿದ್ದಾರೆ.

  ವಿಠಲ್ ಭಟ್ ನಿರ್ದೇಶನದ ಹ್ಯಾಂಗೋವರ್ ಚಿತ್ರಕ್ಕೆ ಜಗ್ಗೇಶ್ ಅವರದ್ದೇ ಹಿನ್ನೆಲೆ ಧ್ವನಿ. ಚಿತ್ರದಲ್ಲಿನ ಮೂರು ಪಾತ್ರಗಳನ್ನು ಜಗ್ಗೇಶ್ ತಮ್ಮದೇ ಶೈಲಿಯಲ್ಲಿ ಪ್ರೇಕ್ಷಕರಿಗೆ ಪರಿಚಯ ಮಾಡಿಕೊಡ್ತಾರೆ. ಇತ್ತೀಚೆಗೆ ಚಮಕ್ ಚಿತ್ರದಲ್ಲಿ ಜಗ್ಗೇಶ್ ಇದೇ ರೀತಿ ಕಥೆ ಶುರು ಮಾಡಿದ್ದರು. ಸಿನಿಮಾ ಹಿಟ್ ಆಗಿತ್ತು. ಈಗ ಹ್ಯಾಂಗೋವರ್ ಚಿತ್ರಕ್ಕೂ ಜಗ್ಗೇಶ್ ಧ್ವನಿ ನೀಡಿದ್ದಾರೆ.

  ಟೀಮ್ ಇಷ್ಟವಾದರೆ ಜಗ್ಗೇಶ್ ಹೇಗೆಲ್ಲ ಬೆಂಬಲ ಕೊಡ್ತಾರೆ ಅನ್ನೋಕೆ ಈ ಚಿತ್ರಕ್ಕೆ ಜಗ್ಗೇಶ್ ನೀಡಿರುವ ಸಹಕಾರವೇ ಸಾಕ್ಷಿ. ಸಿನಿಮಾಗೆ ವಾಯ್ಸ್ ಕೊಡೋಕೆ ಜಗ್ಗೇಶ್ ಬಂದಿರೋದು ರಾತ್ರಿ 9 ಗಂಟೆಗೆ. ಅದೂ ಸೈಕಲ್‍ನಲ್ಲಿ. ರಿಯಾಲಿಟಿ ಶೋ, ಸಿನಿಮಾ, ರಾಜಕೀಯಗಳ ಮಧ್ಯೆ ಬಿಡುವು ಮಾಡಿಕೊಂಡು ಹೊಸಬರ ಚಿತ್ರಕ್ಕೆ ಬೆನ್ನುತಟ್ಟಿರುವ ಜಗ್ಗೇಶ್, ಸಿನಿಮಾಗೆ ಶುಭ ಹಾರೈಸಿದ್ದಾರೆ.

 • ಡಬ್ಬಿಂಗ್‍ನ್ನು ಸಂವಿಧಾನವೇ ಸರಿ ಎಂದ ಮೇಲೆ ನಮ್ಮದೇನಿದೆ..? - ಜಗ್ಗೇಶ್ 

  jaggesh steps back from dubbing agitation

  ಡಬ್ಬಿಂಗ್. ಬರಬೇಕೋ ಬೇಡವೋ ಎಂಬ ಚರ್ಚೆ ಬಿರುಸಿನಿಂದ ನಡೆಯುತ್ತಿರುವಾಗಲೇ ಡಬ್ಬಿಂಗ್ ವಿರುದ್ಧ ನಿಲ್ಲುತ್ತಿದ್ದ ನವರಸ ನಾಯಕ ಜಗ್ಗೇಶ್, ತಮ್ಮ ವಾದದಿಂದ ಹಿಂದೆ ಸರಿದಿದ್ದಾರೆ. ಡಬ್ಬಿಂಗ್‍ನಲ್ಲಿ ತಪ್ಪೇನಿಲ್ಲ ಎಂದು ಸಂವಿಧಾನವೇ ಹೇಳಿದ ಮೇಲೆ ನಮ್ಮದೇನಿದೆ.

  ನನ್ನ ಈ ಹಿಂದಿನ ನಡಾವಳಿಗಳಿಂದ ನೋವಾಗಿದ್ದರೆ ಕ್ಷಮೆ ಇರಲಿ ಎಂದಿದ್ದಾರೆ. ಕನ್ನಡಿಗರಿಗೆ ಏನ ಇಷ್ಟವೋ.. ಅದನ್ನು ನೋಡಲು ಪಡೆಯಲು ಸ್ವತಂತ್ರರು ಎಂದಿದ್ದಾರೆ ಜಗ್ಗೇಶ್.

 • ತೋತಾಪುರಿಗೆ ಬಜಾರ್ ಹುಡುಗಿ

  aditi prabhudeva in thotapuri

  ಸಿಂಪಲ್ ಸುನಿ ನಿರ್ದೇಶನದ ಬಜಾರ್ ಚಿತ್ರದ ನಾಯಕಿ ಆದಿತಿ ಪ್ರಭುದೇವ್, ಜಗ್ಗೇಶ್-ವಿಜಯ್ ಪ್ರಸಾದ್ ಜೋಡಿಯ ತೋತಾಪುರಿ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಬಜಾರ್ ರಿಲೀಸ್‍ಗೂ ಮೊದಲೇ ಮತ್ತೊಂದು ದೊಡ್ಡ ಅವಕಾಶ ಆದಿತಿಯನ್ನು ಹುಡುಕಿಕೊಂಡು ಬಂದಿದೆ. ದುನಿಯಾ ವಿಜಯ್ ಜೊತೆ ಕುಸ್ತಿಯಲ್ಲಿ ನಾಯಕಿಯಾಗಿರುವ ಆದಿತಿ, ತೋತಾಪುರಿಗೂ ಬಣ್ಣ ತುಂಬಲಿದ್ದಾರೆ.

  ಸಿನಿಮಾ ನಾಯಕಿಗಾಗಿ ನಡೆದ ಅಡಿಷನ್‍ನಲ್ಲಿ ಕಾವ್ಯಾ ಶೆಟ್ಟಿ ಮತ್ತು ಆದಿತಿ ಪ್ರಭುದೇವ್ ಅಂತಿಮ ಸುತ್ತಿನಲ್ಲಿದ್ದರು. ಶುದ್ಧವಾದ ಭಾಷೆ ಮತ್ತು ಅಭಿನಯದ ಆಧಾರದ ಮೇಲೆ ಆದಿತಿ ಆಯ್ಕೆಯಾಗಲಿದ್ದಾರೆ ಎಂದಿದ್ದಾರೆ ನಿರ್ದೇಶಕ ವಿಜಯ್ ಪ್ರಸಾದ್.

  ತೋತಾಪುರಿಯಲ್ಲಿ ಆದಿತಿ, ಶಕೀಲಾ ಬಾನು ಎಂಬ ಸಂಪ್ರದಾಯಸ್ಥ ಮುಸ್ಲಿಂ ಹುಡುಗಿಯಾಗಿ ನಟಿಸಲಿದ್ದಾರೆ. ಉಡಾಳ ನಾಯಕನ ಪರಿಚಯವಾದ ಮೇಲೆ ಸಂಪೂರ್ಣ ಚೇಂಜ್ ಆಗುವ ಹುಡುಗಿಯಾಗಿ ನಟಿಸುತ್ತಿದ್ದಾರೆ. 

 • ದೇವರಾಜ್‍ಗೆ ಜಗ್ಗೇಶ್ ಕೊಟ್ಟ ಅಭಿಮಾನದ ಸರ್ಟಿಫಿಕೇಟ್

  jaggesh praises devaraj

  ದೇವರಾಜ್ ಒಬ್ಬ ಅದ್ಭುತ ನಟ. ಅವರ ಮುಖಚರ್ಯೆ, ಕಣ್ಣು.. ಇವೆಲ್ಲ ಎಂಥ ಪಾತ್ರಕ್ಕೂ ಸೂಟ್ ಆಗುತ್ತವೆ. ಅಣ್ಣ, ಅಪ್ಪ, ತಾತ.. ಹೀಗೆ ಯಾವ ಪಾತ್ರವಾದರೂ ಸರಿ. ಅವರು ಸರಿಯಾಗಿ ನಿಂತಿದ್ದರೆ, ಬೇರೆ ಭಾಷೆಯ ಚಿತ್ರಗಳಲ್ಲಿ ರೈ ಅಂತಹವರಿಗೆ ಚಾನ್ಸ್ ಕೂಡಾ ಸಿಗುತ್ತಿರಲಿಲ್ಲ. ಆಂಧ್ರಪ್ರದೇಶಕ್ಕೆ ನಂದಿ ಅವಾರ್ಡ್ ಪಡೆದುಕೊಂಡ ನಟ ಅವರು. ನಿಜಕ್ಕೂ ಅವರು ಕನ್ನಡ ಚಿತ್ರರಂಗಕ್ಕೆ ದೊಡ್ಡ ಆಸ್ತಿ. ಅವರು ಗಟ್ಟಿಯಾಗಿ ನಿಂತುಬಿಟ್ಟರೆ, ಅವರು ಬೆಳೆಯೋ ಎತ್ತರವೇ ಬೇರೆ. ಅವರನ್ನು ಮುಟ್ಟೋಕೆ ಆಗಲ್ಲ.

  ಇದು ಡೈನಮಿಕ್ ಸ್ಟಾರ್ ದೇವರಾಜ್ ಅವರಿಗೆ ಜಗ್ಗೇಶ್ ಕೊಟ್ಟಿರುವ ಅಭಿಮಾನದ ಸರ್ಟಿಫಿಕೇಟು. ಸಾಗುವ ದಾರಿಯಲ್ಲಿ ಚಿತ್ರದ ಆಡಿಯೋ ಬಿಡುಗಡೆ ವೇಳೆ ಅತಿಥಿಗಳಾಗಿ ಆಗಮಿಸಿದ್ದ ಜಗ್ಗೇಶ್, ದೇವರಾಜ್ ಅವರನ್ನು ಕೊಂಡಾಡಿದ್ದು ಹೀಗೆ. ತಾವು, ದೇವರಾಜ್, ಅವಿನಾಶ್, ಶಶಿಕುಮಾರ್ ಎಲ್ಲರೂ ಕೆ.ವಿ. ರಾಜು ಅವರ ಬಳಿ ಕೆಲಸ ಮಾಡಿದ ದಿನಗಳನ್ನು ನೆನಪಿಸಿಕೊಂಡ ಜಗ್ಗೇಶ್, ರಾಜು ಚಿತ್ರಗಳಲ್ಲಿ ದೇವರಾಜ್‍ಗೆ ಒಂದು ಪಾತ್ರ ಖಾಯಂ ಇರುತ್ತಿತ್ತು. ದೇವರಾಜ್ ಆಯ್ಕೆಯಾದ ಮೇಲೆಯೇ ಉಳಿದವರ ಆಯ್ಕೆಯಾಗುತ್ತಿತ್ತು ಎಂದು ನೆನಪಿಸಿಕೊಂಡರು.

  ದೇವರಾಜ್ ಅವರಿಗೆ ಅವರ ಪತ್ನಿ ಮೇಲೆ ಪ್ರೀತಿ ಜಾಸ್ತಿ. ಪ್ರೀತಿ ಮಾಡಿ ತಪ್ಪೇನಿಲ್ಲ. ಆದರೆ, ಪ್ರೀತಿಯನ್ನು ಸ್ವಲ್ಪ ಕಡಿಮೆ ಮಾಡಿ, ಹೊರಗೆ ಬನ್ನಿ ಎಂದು ಸಲಹೆಯನ್ನೂ ಕೊಟ್ಟರು. ಸಲಹೆಯನ್ನು ಸ್ವೀಕರಿಸೋದು ಬಿಡೋದು ದೇವರಾಜ್ ಅವರಿಗೆ ಬಿಟ್ಟಿದ್ದು.

 • ದೇವಸ್ಥಾನ ಕಟ್ಟಿಸಿಯೇಬಿಟ್ಟರು ನವರಸನಾಯಕ ಜಗ್ಗೇಶ್

  jaggesh rebuilds temple in his birth place

  ನವರಸ ನಾಯಕ ಜಗ್ಗೇಶ್ ರಾಯರ ಪರಮಭಕ್ತ. ದೇವರು ದಿಂಡಿರು, ಶಾಸ್ತ್ರ ಸಂಪ್ರದಾಯಗಳಲ್ಲಿ ನಂಬಿಕೆಯಿರುವ ಜಗ್ಗೇಶ್, ಈಗ ತಮ್ಮ ಊರಿನಲ್ಲೇ ಒಂದು ದೇವಸ್ಥಾನ ಕಟ್ಟಿಸಿದ್ದಾರೆ. ತಮ್ಮ ಹುಟ್ಟೂರು ಜಡೇಮಾಯಸಂದ್ರದಲ್ಲಿ 300 ವರ್ಷಗಳಷ್ಟು ಹಳೆಯದಾದ, ಶಿಥಿಲವಾಗಿದ್ದ ಕಾಲಭೈರವೇಶ್ವರನ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಿಸಿದ್ದಾರೆ. ಅದು ಅವರ ತಾಯಿಯ ನೆನಪಿಗಾಗಿ.

  ನನ್ನಿಂದ ಇಂಥಾದ್ದೊಂದು ಕೆಲಸ ಮಾಡಿಸಿದ ದೇವರಿಗೆ ನಾನು ಚಿರಋಣಿ ಎಂದು ಮತ್ತೊಮ್ಮೆ ಭಕ್ತಿ ಭಾವ ಮೆರೆದಿದ್ದಾರೆ ಜಗ್ಗೇಶ್.

 • ನಟ ಜಗ್ಗೇಶ್ ಪುತ್ರನಿಗೆ ರೌಡಿಗಳಿಂದ ಚಾಕು ಇರಿತ

  jaggesh, guru jaggesh image

  ನಟ ಜಗ್ಗೇಶ್ ಅವರ ಹಿರಿಯ ಪುತ್ರ ಗುರುರಾಜ್ ಜಗ್ಗೇಶ್ ಮೇಲೆ ರೌಡಿಗಳು ದಾಳಿ ಮಾಡಿದ್ದಾರೆ. ಬೆಂಗಳೂರಿನ ಆರ್‍ಟಿ ನಗರದಲ್ಲಿ ಬೆಳ್ಳಂಬೆಳಗ್ಗೆಯೇ ಈ ಘಟನೆ ನಡೆದಿದೆ. 

  ಇಂದು ಬೆಳಗ್ಗೆ ತಮ್ಮ ಮಗನನ್ನು ಶಾಲೆಗೆ ಬಿಡಲು ಹೋಗಿದ್ದ ಗುರು, ಓವರ್‍ಸ್ಪೀಡ್‍ನಲ್ಲಿ ಬೈಕ್ ಓಡಿಸುತ್ತಿದ್ದ ಯುವಕರನ್ನು ಪ್ರಶ್ನಿಸಿದ್ದಾರೆ. ಈ ವಿಚಾರಕ್ಕೆ ಶುರುವಾದ ಜಗಳ ಚಾಕು ಇರಿತದಲ್ಲಿ ಕೊನೆಯಾಗಿದೆ. ರೌಡಿಗಳು ಗುರುರಾಜ್‍ನ ಎಡತೊಡೆಗೆ ಚಾಕು ಹಆಕಿ ಎಸ್ಕೇಪ್ ಆಗಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ಗುರುರಾಜ್ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

  ಇದರಲ್ಲಿ ಯಾವುದೇ ವೈಯಕ್ತಿಕ ದ್ವೇಷವಿಲ್ಲ. ಆಕಸ್ಮಿಕವಾಗಿ ನಡೆದಿರುವ ಘಟನೆ ಎಂದು ನಟ ಜಗ್ಗೇಶ್ ಪ್ರತಿಕ್ರಿಯೆ ನೀಡಿದ್ದಾರೆ. ಪೊಲೀಸರು ಪ್ರತ್ಯಕ್ಷದರ್ಶಿಗಳ ಮೂಲಕ ಮಾಹಿತಿ ಸಂಗ್ರಹಿಸಿ ಚಾಕು ಹಾಕಿದವರನ್ನು ಹುಡುಕುತ್ತಿದ್ದಾರೆ.

 • ನವರಸ ನಾಯಕನ ಜೊತೆ ಡಾಲಿ

  dhananjay shares screen with jaggesh in thotapuri

  ವಿಜಯ್ ಪ್ರಸಾದ್ ನಿರ್ದೇಶನದ ತೋತಾಪುರಿ ಚಿತ್ರದಲ್ಲಿ ಹೀರೋ ಆಗಿರುವುದು ನವರಸ ನಾಯಕ ಜಗ್ಗೇಶ್. ಸಿದ್ಲಿಂಗು, ನೀರ್‍ದೋಸೆ ನಿರ್ದೇಶಿಸಿದ್ದ ವಿಜಯ್ ಪ್ರಸಾದ್, ಮತ್ತೊಮ್ಮೆ ಜಗ್ಗೇಶ್ ಅವರ ನಾಯಕತ್ವದಲ್ಲೇ ಚಿತ್ರ ಕೈಗೆತ್ತಿಕೊಂಡಿದ್ದಾರೆ. ವಿಜಯ್ ಪ್ರಸಾದ್ ಅವರ ಫೇವರಿಟ್ ಸುಮನ್ ರಂಗನಾಥ್ ಚಿತ್ರಕ್ಕೆ ನಾಯಕಿ. ಇದೆಲ್ಲದರ ಜೊತೆಗೆ ಡಾಲಿ ಧನಂಜಯ್ ಕೂಡಾ ಇದ್ದಾರೆ.

  ತೋತಾಪುರಿ ಕಥೆ ಕೇಳಿದೆ. ಇಷ್ಟವಾಯಿತು. ವಿಜಯ್ ಪ್ರಸಾದ್ ಅವರ ಸಿದ್ಲಿಂಗು, ನೀರ್‍ದೋಸೆ ಸಿನಿಮಾ ನೋಡಿದ್ದೆ. ಇಷ್ಟವಾಗಿದ್ದವು. ಜೊತೆಗೆ ಜಗ್ಗೇಶ್ ಅವರೊಂದಿಗೆ ನಟಿಸುವ ಅವಕಾಶ. ಹೀಗಾಗಿ ಚಿತ್ರವನ್ನು ಮರುಮಾತಿಲ್ಲದೆ ಒಪ್ಪಿಕೊಂಡೆ ಅಂತಾರೆ ಧನಂಜಯ್.

  ಶೂಟಿಂಗ್ ಬಿರುಸಾಗಿ ನಡೆಯುತ್ತಿದ್ದು, ಧನಂಜಯ್ ಶೀಘ್ರದಲ್ಲೇ ಚಿತ್ರತಂಡ ಸೇರಿಕೊಳ್ಳಲಿದ್ದಾರೆ.

 • ನೀರ್ ದೋಸೆ ಕೇಸ್ - ರಮ್ಯಾಗೆ ಮುಖಭಂಗ

  neerdose photo case dismissed

  ನೀರ್‍ದೋಸೆ. ಜಗ್ಗೇಶ್-ವಿಜಯ್ ಪ್ರಸಾದ್-ದತ್ತಣ್ಣ-ಹರಿಪ್ರಿಯಾ-ಸುಮನ್ ರಂಗನಾಥ್ ಅಭಿನಯದ ಸೂಪರ್ ಹಿಟ್ ಸಿನಿಮಾ. ಈ ಸಿನಿಮಾಗೆ ಮೊದಲು ನಾಯಕಿಯಾಗಿದ್ದವರು ರಮ್ಯಾ. ಆಗಿನ್ನೂ ಅವರು ರಾಜಕೀಯಕ್ಕೆ ಎಂಟ್ರಿ ಕೊಟ್ಟಿರಲಿಲ್ಲ. ಆನಂತರ ಸಿನಿಮಾದಿಂದ ಹೊರನಡೆದಿದ್ದರು. ಆದರೆ, ಆ ಚಿತ್ರದ ಶೂಟಿಂಗ್ ವೇಳೆ ವಿವಾದವೊಂದನ್ನು ಸೃಷ್ಟಿಸಿದ್ದರು ರಮ್ಯಾ. ಅದು ಕೋರ್ಟ್ ಮೆಟ್ಟಿಲೇರಿತ್ತು. ಈಗ ಕೋರ್ಟ್‍ನಲ್ಲಿ ರಮ್ಯಾ ವಾದಕ್ಕೆ ಹಿನ್ನಡೆಯಾಗಿದ್ದು, ಕೇಸ್‍ನ್ನು ನ್ಯಾಯಾಲಯ ವಜಾ ಮಾಡಿದೆ.

  ಪತ್ರಕರ್ತ ಶ್ಯಾಂ ಪ್ರಸಾದ್, ಫೋಟೋ ಜರ್ನಲಿಸ್ಟ್ ನಾಗೇಶ್ ಕುಮಾರ್ ಕುಮಾರ್ ಮತ್ತು ಮನೋಹರ್ ವಿರುದ್ಧ ತಮ್ಮ ಅನುಮತಿಯಿಲ್ಲದೆ ಆಕ್ಷೇಪಾರ್ಹ ಫೋಟೋ ತೆಗೆದಿದ್ದಾರೆ ಎಂದು ರಮ್ಯಾ ಕೇಸ್ ಹಾಕಿದ್ದರು. ಅನುಮತಿಯಿಲ್ಲದೆ ಫೋಟೋ ತೆಗೆಯಲಾಯಿತು ಎಂಬ ರಮ್ಯಾ ವಾದಕ್ಕೆ ಯಾವುದೇ ಸಮರ್ಥನೆ ಅಥವಾ ಸಾಕ್ಷ್ಯ ಸಿಗದ ಕಾರಣ, ಕೋರ್ಟ್ ಕೇಸ್‍ನ್ನು ವಜಾ ಮಾಡಿದೆ. ಎಲ್ಲ ಪತ್ರಕರ್ತರನ್ನೂ ದೋಷಮುಕ್ತಗೊಳಿಸಿದೆ.

  ಪ್ರಧಾನಿ ನರೇಂದ್ರ ಮೋದಿಯನ್ನು ಕಳ್ಳ ಎಂಬಂತೆ ಬಿಂಬಿಸಿದ ಫೋಟೋ ಹಾಕಿದ್ದಕ್ಕೆ ರಮ್ಯಾ ವಿರುದ್ಧ ಎರಡು ಕೇಸ್ ದಾಖಲಾದ ಮರುದಿನವೇ, 2013ರಲ್ಲಿ ರಮ್ಯಾ ಹಾಕಿದ್ದ ಕೇಸ್ ವಜಾ ಆಗಿರುವುದು ವಿಶೇಷ.

 • ಪದ್ಮಿನಿಗಾಗಿ ತಮ್ಮದೇ ಕಥೆ ಬಿಟ್ಟರು ಜಗ್ಗೇಶ್

  jaggesh talks about premiere padmini

  ನವರಸ ನಾಯಕ ಜಗ್ಗೇಶ್, ಪ್ರೀಮಿಯರ್ ಪದ್ಮಿನಿ ಚಿತ್ರದಲ್ಲಿ ನಟಿಸುತ್ತಿದ್ದಾರಷ್ಟೆ. ಆ ಚಿತ್ರದಲ್ಲಿರೋದು ಡೈವೋರ್ಸ್ ದಂಪತಿಗಳ ಸ್ಟೋರಿ. ವಿಶೇಷವೆಂದರೆ, ಈ ಚಿತ್ರವನ್ನು ಒಪ್ಪಿಕೊಳ್ಳುವುದಕ್ಕೂ ಮೊದಲೇ ಜಗ್ಗೇಶ್, ತಮ್ಮ ಕೋಮಲ್ ಜೊತೆ ಡೈವೋರ್ಸ್ ಕುರಿತಾದ ಕಥೆಯೊಂದನ್ನು ರೆಡಿ ಮಾಡಿಕೊಳ್ಳುತ್ತಿದ್ದರಂತೆ. ಕೆಲವರೊಂದಿಗೆ ಚರ್ಚಿಸಿಯೂ ಇದ್ದರಂತೆ. ಅದಿನ್ನೂ ಪ್ರಾಥಮಿಕ ಹಂತದಲ್ಲಿರುವಾಗಲೇ ಅವರ ಬಳಿಗೆ ರಮೇಶ್ ಇಂದಿರಾ ಅವರ ಪ್ರೀಮಿಯರ್ ಪದ್ಮಿನಿ ಕಥೆ ಬಂತು.

  ಅರೆ, ನಮ್ಮ ಕಥೆಗಿಂತ ಇದೇ ತುಂಬಾ ಚೆನ್ನಾಗಿದೆಯಲ್ಲ ಎನ್ನಿಸಿ ಮರುಮಾತಿಲ್ಲದೆ ಒಪ್ಪಿಕೊಂಡುಬಿಟ್ಟೆ. ಡೈವೋರ್ಸ್ ತೆಗೆದುಕೊಳ್ಳೋದು ಸುಲಭ. ಆದರೆ, ಬೇರೆಯಾಗುವಾಗಿನ ತಲ್ಲಣ, ತೊಳಲಾಟ, ನರಳಾಟ, ಭಾವನೆಗಳೇ ಬೇರೆ. ಅದೆಲ್ಲವನ್ನೂ ಚಿತ್ರದಲ್ಲಿ ಮನಮುಟ್ಟುವಂತೆ ಚಿತ್ರಿಸಲಾಗಿದೆ ಅನ್ನೋದು ಜಗ್ಗೇಶ್ ಮಾತು.

 • ಪ್ರೀಮಿಯರ್ ಪದ್ಮಿನಿಗೆ ಕುಂಭಳಕಾಯಿ..!

  jaggesh's premiere padmini shooting completed

  ನವರಸ ನಾಯಕ ಜಗ್ಗೇಶ್, ಮೈಸೂರು ಮಲ್ಲಿಗೆ ಸುಧಾರಾಣಿ, ರೋಜಾ ಮಧುಬಾಲಾ ಒಟ್ಟಿಗೇ ನಟಿಸಿರುವ ಸಿನಿಮಾ ಪ್ರೀಮಿಯರ್ ಪದ್ಮಿನಿ. ಕಿರುತೆರೆಯ ಸ್ಟಾರ್ ನಿರ್ಮಾಪಕಿ ಶೃತಿ ನಾಯ್ಡು ನಿರ್ಮಾಣದ ಮೊದಲ ಸಿನಿಮಾ. ಚಿತ್ರೀಕರಣ ಮುಗಿಸಿ ಕುಂಭಳಕಾಯಿ ಹೊಡೆದಿದೆ. 

  ರಮೇಶ್ ಇಂದಿರಾ ನಿರ್ದೇಶನದ ಸಿನಿಮಾದಲ್ಲಿ ಸಾಂಸಾರಿಕ ಜೀವನದ ಏರುಪೇರುಗಳ ಕಥೆ ಇದೆ. ಡೈವೋರ್ಸ್ ಒಳಸುಳಿಗಳ ಚಿತ್ರಣವಿದೆ. ಎಲ್ಲವನ್ನೂ ಹಾಸ್ಯದಲ್ಲಿಯೇ ಹೇಳಲಾಗಿದೆ.

  ಇದು ಅಪ್ಪಟ ಸ್ವಮೇಕ್ ಸಿನಿಮಾ. ಕಾರು ಚೆನ್ನಾಗಿ ಹೋಗಬೇಕು ಎಂದರೆ, ಕಾರು, ಡ್ರೈವರ್ ಮತ್ತು ಮಾಲೀಕರ ಮಧ್ಯೆ ಒಂದು ಬಾಂಡ್ ಇರಬೇಕು. ಸಂಸಾರದಲ್ಲೂ ಅಷ್ಟೆ, ಇಲ್ಲಿ ಕಾರು ಸಾಂಕೇತಿಕವಾಗಿ ಬಳಕೆಯಾಗಿದೆ ಎಂದಿದ್ದಾರೆ ನಿರ್ದೇಶಕ ರಮೇಶ್ ಇಂದಿರಾ.

 • ಫಸ್ಟ್ ಕ್ಲಾಸ್ ಪೊರ್ಕಿ ಎಂದು ಕರೆದವರ ಜೊತೆ ಜಗ್ಗೇಶ್ ಸಂಭ್ರಮಾಚರಣೆ

  jaggesh's celebrations

  ನಿಮ್ಮನ್ನ ಯಾರಾದರೂ ಪೊರ್ಕಿ ಎಂದು ಕರೆದರೆ ಏನು ಮಾಡ್ತೀರಿ..? ರಟ್ಟೆಯಲ್ಲಿ ಬಲವಿದ್ದರೆ, ಹಾಗೆಂದವನಿಗೆ ತದುಕುತ್ತೀರಿ. ಬಾಯಲ್ಲಿ ಬಲವಿದ್ದರೆ ಬೈತೀರಿ. ಆದರೆ, ನವರಸ ನಾಯಕ ಜಗ್ಗೇಶ್ ಡಿಫರೆಂಟು. ತಮಗೆ ಫಸ್ಟ್ ಕ್ಲಾಸ್ ಪೊರ್ಕಿ ಎಂದು ಬಿರುದು ನೀಡಿದ್ದವರ ಜೊತೆ ಸಂಭ್ರಮಾಚರಣೆ ಮಾಡಿದ್ದಾರೆ. ಅವರ ತಂದೆಯ ಹುಟ್ಟುಹಬ್ಬದ ದಿನವನ್ನು ಸಂಭ್ರಮಿಸಿದ್ದಾರೆ.

  ಕನ್‍ಫ್ಯೂಸ್ ಆಗಬೇಡಿ. ಇದೊಂಥರಾ `ಗಡ್ಡ ಎಳೆದವನಿಗೆ ಮಿಠಾಯಿ' ಕಥೆಯಂಥದ್ದು. ಜಗ್ಗೇಶ್‍ಗೆ ಫಸ್ಟ್ ಕ್ಲಾಸ್ ಪೊರ್ಕಿ ಎಂದು ಬಿರುದು ನೀಡಿದ್ದವರು ಬೇರ್ಯಾರೂ ಅಲ್ಲ. ಅವರ ಪ್ರೀತಿಯ ಪತ್ನಿ ಪರಿಮಳ ಅವರ ತಮ್ಮ ಸುಂದರ್. ಪರಿಮಳ ಅವರನ್ನು ನೋಡಲು ಅವರ ಮನೆ ಕಡೆ ಹೋಗಿದ್ದಾಗ, ಸುಂದರ್, ಅವರ ಅಪ್ಪನಿಗೆ ಅಪ್ಪ.. ನೋಡು.. ಅಕ್ಕನ್ನ ನೋಡೋಕೆ ಫಸ್ಟ್ ಕ್ಲಾಸ್ ಪೊರ್ಕಿ ಬಂದಿದ್ದಾನೆ ಎಂದು ಕಿರುಚಿ ಹೇಳುತ್ತಿದ್ದನಂತೆ.

  ಪರಿಮಳ ಅವರ ತಂದೆಯ 82ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿರುವ ಜಗ್ಗೇಶ್, ತಮ್ಮ ಬಾಮೈದನ ಹಳೆಯ ಕತೆಯೊಂದನ್ನು ನೆನಪಿಸಿಕೊಂಡಿದ್ದಾರೆ. ಅದ್ಸರಿ, ಜಗ್ಗೇಶ್ ಈಗ ಫಸ್ಟ್ ಕ್ಲಾಸ್ ಕಲಾವಿದ ಅನ್ನೋದೇನೋ ಖರೆ.. ಆಗ..

   

 • ಮಂಕಿ ಕ್ಯಾಪ್ ಹಾಕ್ಕೊಂಡು ಕೆಜಿಎಫ್ ನೋಡಿದ ಸ್ಟಾರ್

  jaggesh watches kgf in dusguise

  ತಲೆ ಮೇಲೆ ಮುಖ ಕಾಣದಂತೆ ಮಂಕಿ ಕ್ಯಾಪ್, ಲುಂಗಿ, ಹವಾಯ್ ಚಪ್ಪಲಿ ಹಾಕ್ಕೊಂಡು ಗಾಂಧಿ ಕ್ಲಾಸ್‍ನಲ್ಲಿ ತಮ್ಮ ಜೊತೆ ಸಿನಿಮಾ ನೋಡುತ್ತಿರುವುದು ಸ್ಟಾರ್ ನವರಸನಾಯಕ ಜಗ್ಗೇಶ್ ಎಂದು ಪಕ್ಕದಲ್ಲಿದ್ದವರಿಗೆ ಗೊತ್ತಿರಲಿಲ್ಲ. ತಮ್ಮ ಜೊತೆಯೇ ಟೀ, ಖಾರಾಪುರಿ ತಿಂದಿದ್ದು ಜಗ್ಗಣ್ಣ ಅನ್ನೋದು ಗೊತ್ತಾಗಲೇ ಇಲ್ಲ. ಗೊತ್ತಾಗಿದ್ದರೂ, ಇವರೇಕೆ ಗಾಂಧಿ ಕ್ಲಾಸ್‍ನಲ್ಲಿ ಬಂದು ಸಿನಿಮಾ ನೋಡ್ತಾರೆ ಬಿಡಿ.. ಏನೋ.. ಕನ್‍ಫ್ಯೂಸ್ ಆಗಿರಬೇಕು ಎಂದು ಸುಮ್ಮನಾಗುತ್ತಿದ್ದರೇನೋ..

  ಆದರೆ, ಅದು ನಿಜವಾಗಿಹೋಗಿದೆ. ಜಗ್ಗೇಶ್ ಹಾಗೆ ಮಾರುವೇಷದಲ್ಲಿ ಹೋಗಿ ನೋಡಿರೋ ಸಿನಿಮಾ ಕೆಜಿಎಫ್. ಅದೂ ಗಾಂಧಿ ಕ್ಲಾಸ್‍ನಲ್ಲಿ. 38 ವರ್ಷಗಳ ಹಿಂದೆ ನಾನು ಹೀಗೇ ಸಿನಿಮಾ ನೋಡುತ್ತಿದ್ದೆ ಎಂದು ನೆನಪಿನ ಬುತ್ತಿ ಬಿಚ್ಚಿಟ್ಟಿದ್ದಾರೆ ಜಗ್ಗೇಶ್. ಯಶ್‍ರನ್ನು ಹೊಗಳಿದ್ದಾರೆ. ನಿರ್ದೇಶಕ ಪ್ರಶಾಂತ್ ನೀಲ್ ಪ್ರತಿಭೆಯನ್ನು ಕೊಂಡಾಡಿದ್ದಾರೆ. 

 • ಮಂತ್ರಾಲಯದಲ್ಲಿ.. ತುಂಗೆಯ ನಡುವೆ ಜಗ್ಗೇಶ್ ಪ್ರೇಮಾಲಯವಿದೆ..!

  jaggesh remembers his golden days

  ಅದು ಜಗ್ಗೇಶ್ ಪಾಲಿನ ಪ್ರೇಮಾಲಯ ಎಂದರೆ ತಪ್ಪಾಗಲಿಕ್ಕಿಲ್ಲ. ಅವರು ಪರಿಮಳಾ ಅವರನ್ನು ಮದುವೆಯಾಗಿ.. ದೇಶದಲ್ಲೇ ಸಂಚಲನ ಮೂಡಿಸುವಂತೆ ಸುಪ್ರೀಂಕೋರ್ಟ್‍ನಲ್ಲಿ ಗೆದ್ದು ಮದುವೆಯಾದ ಜಗ್ಗೇಶ್, ಪತ್ನಿಯೊಂದಿಗೆ ಮೊದಲು ಹೋಗಿದ್ದು ಮಂತ್ರಾಲಯಕ್ಕೆ. ಅಲ್ಲಿ ಅವರು ತುಂಗೆಯ ಮೇಲೆ ನೀರಿನ ಹರಿವಿನ ನಡುವೆ ಒಂದು ಪ್ರೇಮಾಲಯ ಕಟ್ಟಿದ್ದಾರೆ. ಅದೇ ಇದು.

  ಅಲ್ಲಿನ ಬಂಡೆಯ ಮೇಲೆ ಜಗದೀಶ ಪರಿಮಳ ಶ್ರೀರಾಮ್‍ಪುರ, ಬೆಂಗಳೂರು ಎಂದು ಬರೆದಿದ್ದಾರೆ. ವಿಶೇಷವೇನು ಗೊತ್ತೇ.. ಅವರು ಆ ಕಲ್ಲಿನ ಮೇಲೆ ಇದನ್ನೆಲ್ಲ ಕೆತ್ತಿದ್ದು  1983ರ ನವೆಂಬರ್ 17ರಂದು. ತುಂಗೆಯಲ್ಲಿ ನೀರಿನ ಹರಿವು ಕಡಿಮೆಯಾದರೆ ಆ ಕಲ್ಲು, ಆ ಕಲ್ಲಿನ ಮೇಲೆ ಇವರೇ ಕೆತ್ತಿಕೊಂಡಿರುವ ಪ್ರೇಮಾಲಯ ಕಣ್ಣಿಗೆ ಬೀಳುತ್ತೆ. 

  ನವೆಂಬರ್ 17, ಜಗ್ಗೇಶ್ ಮದುವೆಯಾದ ದಿನ. ಅಂತಹ ಮದುವೆಯ ವಾರ್ಷಿಕೋತ್ಸವದಂದು ಮಂತ್ರಾಲಯಕ್ಕೆ ಹೋಗಿ ರಾಘವೇಂದ್ರರ ದರ್ಶನ ಮಾಡಿಕೊಂಡು ಬರುವಾಗ ಬಂಡೆಯ ಮೇಲೆ ಕೆತ್ತಿದ ಪ್ರೇಮ ಬರಹವಿದು.

 • ಮತ್ತೆ ಹಾಡಿದರು ಜಗ್ಗೇಶ್

  jaggesh sings for janatha mantar

  ನವರಸ ನಾಯಕ ಜಗ್ಗೇಶ್ ಗಾಯಕರೂ ಹೌದು. ಹಲವು ಚಿತ್ರಗಳಲ್ಲಿ ಹಾಡುವ ಪ್ರಯತ್ನ ಮಾಡಿದ್ದ ಜಗ್ಗೇಶ್, ಈಗ ಮತ್ತೊಮ್ಮೆ ಗಾಯಕರಾಗಿದ್ಧಾರೆ. ಜಂತರ್ ಮಂತರ್ ಅನ್ನೋ ಹೊಸಬರ ಚಿತ್ರಕ್ಕೆ ಜಗ್ಗೇಶ್ ಗಾಯಕರಾಗಿದ್ದಾರೆ.

  ಕಾಮಿಡಿ ಕಿಲಾಡಿಗಳು ಖ್ಯಾತಿಯ ಗೋವಿಂದೇ ಗೌಡ ಬರೆದಿರುವ ಹಾಡಿಗೆ ಧ್ವನಿ ನೀಡಿದ್ದಾರೆ ನಟ ಜಗ್ಗೇಶ್. ಚಿತ್ರದ ನಿರ್ದೇಶಕ ಕೂಡಾ ಗೋವಿಂದೇ ಗೌಡರೇ. ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದಲ್ಲಿ ಶುರುವಾದ ಬಾಂಧವ್ಯ, ಜಗ್ಗೇಶ್ ಅವರನ್ನು ತಮ್ಮ ಚಿತ್ರಕ್ಕೆ ಗಾಯಕರಾಗಿಸುವ ಹಂತಕ್ಕೆ ತಂದಿದೆ ಎಂದು ಖುಷಿಪಡುತ್ತಿದ್ದಾರೆ ಗೋವಿಂದೇ ಗೌಡರು.

  ಇನ್ನೇನು ಕೆಲವೇ ದಿನ, ಜಗ್ಗೇಶ್ ಗಾನ ಮಾಧುರ್ಯ ನಿಮ್ಮ ಕಿವಿ ತಲುಪಲಿದೆ ಚಿತ್ರದ ಸಂಗೀತ ನಿರ್ದೇಶಕ ರಾಕಿ ಸೋನು. ನಿರ್ಮಾಪಕರು ಶಿವಸುಂದರ ನಾಗರಾಜ್.

   

   

   

Chemistry Of Kariyappa Movie Gallery

BellBottom Movie Gallery