` prakash raj - chitraloka.com | Kannada Movie News, Reviews | Image

prakash raj

 • ಆಂಧ್ರದ ಮಾ ಎಲೆಕ್ಷನ್ ರೇಸ್`ಗೆ ಪ್ರಕಾಶ್ ರಾಜ್ : ಮೆಗಾ ಸಪೋರ್ಟ್

  ಆಂಧ್ರದ ಮಾ ಎಲೆಕ್ಷನ್ ರೇಸ್`ಗೆ ಪ್ರಕಾಶ್ ರಾಜ್ : ಮೆಗಾ ಸಪೋರ್ಟ್

  ನಟ, ನಿರ್ದೇಶಕ, ನಿರ್ಮಾಪಕ ಪ್ರಕಾಶ್ ರೈ ಅಲಿಯಾಸ್ ಪ್ರಕಾಶ್ ರಾಜ್ ತೆಲುಗು ಚಿತ್ರರಂಗದ ಮೂವಿ ಆರ್ಟಿಸ್ಟ್ ಅಸೋಸಿಯೇಷನ್ ಎಲೆಕ್ಷನ್‍ನಲ್ಲಿ ಸ್ಪರ್ಧಿಸುತ್ತಿದ್ದಾರೆ. ಪ್ರಕಾಶ್ ರೈಗೆ ರಾಜಕೀಯ ಹೊಸದಲ್ಲ. ಮೋದಿ ವಿರೋಧಿಗಳಲ್ಲಿ ರೈ ಅವರದ್ದು ದೊಡ್ಡ ಹೆಸರು. ಕಳೆದ ಲೋಕಸಭಾ ಎಲೆಕ್ಷನ್`ನಲ್ಲಿ ಬೆಂಗಳೂರು ಸೆಂಟ್ರಲ್‍ನಿಂದ ಪಕ್ಷೇತರರಾಗಿ ಸ್ಪರ್ಧಿಸಿದ್ದ ರೈ, ಠೇವಣಿ ಕಳೆದುಕೊಂಡಿದ್ದರು. ಹಾಗಂತ, ರೈ ಹೋರಾಟವನ್ನೇನೂ ನಿಲ್ಲಿಸಿಲ್ಲ. ಜಸ್ಟ್ ಆಸ್ಕಿಂಗ್ ಅನ್ನೋ ಹ್ಯಾಷ್ ಟ್ಯಾಗ್‍ನಲ್ಲಿ ಅವಕಾಶ ಸಿಕ್ಕಾಗಲೆಲ್ಲ ಮೋದಿ ಸರ್ಕಾರದ ವಿರುದ್ಧ ಕೆಂಡ ಕಾರುತ್ತಲೇ ಇರುತ್ತಾರೆ. ರೈಗೆ ಬೆಂಬಲಿಗರೂ ಇದ್ದಾರೆ. ಆದರೆ, ಇಲ್ಲಿ ಕೈಕೊಟ್ಟ ಅದೃಷ್ಟ ಆಂಧ್ರದಲ್ಲಿ ಪ್ರಕಾಶ್ ರಾಜ್ ಅವರ ಕೈ ಹಿಡಿಯುತ್ತಾ? ಅದೃಷ್ಟ ಕೈ ಹಿಡಿಯಬಹುದು ಎಂಬುದಕ್ಕೆ ಕಾರಣಗಳಿವೆ.

  ಪ್ರಕಾಶ್ ರಾಜ್ ಆಂಧ್ರಪ್ರದೇಶದ ಮಾ ಅರ್ಥಾತ್ ಮೂವಿ ಆರ್ಟಿಸ್ಟ್ ಅಸೋಸಿಯೇಷನ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದಾರೆ. ಪ್ರಕಾಶ್ ರಾಜ್ ವಿರುದ್ಧ ನಿಂತಿರುವುದು ಮೋಹನ್ ಬಾಬು ಪುತ್ರ ಮಂಚು ವಿಷ್ಣು. ಮೋಹನ್ ಬಾಬು ಮತ್ತು ಚಿರಂಜೀವಿ ನಡುವಿನ ಜಗಳ ತಾರಕಕ್ಕೇರಿದ್ದನ್ನು ತೆಲುಗು ಚಿತ್ರರಂಗ ನೋಡಿದೆ. ಹೀಗಾಗಿ ಈ ಬಾರಿ ಎಲೆಕ್ಷನ್‍ನಲ್ಲಿ ಪ್ರಕಾಶ್ ರಾಜ್ ಅವರಿಗೆ ಚಿರಂಜೀವಿ ಫ್ಯಾಮಿಲಿ ಸಪೋರ್ಟ್ ಮಾಡಲಿದೆ ಎನ್ನಲಾಗುತ್ತಿದೆ.

  ಮೆಗಾ ಕುಟುಂಬದಲ್ಲಿ ಚಿರಂಜೀವಿ, ರಾಮ್ ಚರಣ್, ಅಲ್ಲು ಅರ್ಜುನ್ ಮೊದಲಾದ ಸ್ಟಾರ್ ನಟರಿದ್ದಾರೆ. ನಿರ್ಮಾಪಕರಾಗಿಯೂ ಮೆಗಾ ಫ್ಯಾಮಿಲಿಗೆ ದೊಡ್ಡ ಹೆಸರಿದೆ. ದೊಡ್ಡ ಬಳಗವೂ ಇದೆ. ಹೀಗಾಗಿ ಮಾ ಎಲೆಕ್ಷನ್‍ನಲ್ಲಿ ರೈ ಗೆಲ್ಲಬಹುದು ಎನ್ನುವ ನಿರೀಕ್ಷೆ ಇದೆ. ಹಾಗಂತ ಮೋಹನ್ ಬಾಬು ಕಡಿಮೆ ಪಾರ್ಟಿಯೇನೂ ಅಲ್ಲ. ಅವರ ಬಳಗವೂ ದೊಡ್ಡದು. ಚಿರು ಫ್ಯಾಮಿಲಿ ವಿರೋಧಿಗಳು ಮೋಹನ್ ಬಾಬು ಜೊತೆ ಕೈಜೋಡಿಸುವ ಸಾಧ್ಯತೆ.

  ವಿಚಿತ್ರವೆಂದರೆ ವಿವಿಧ ಕಾರಣಗಳಿಂದಾಗಿ ಪ್ರಕಾಶ್ ರಾಜ್ ಅವರನ್ನು ಇದೇ ಮಾ ಒಟ್ಟಾರೆ 6 ಬಾರಿ ಚಿತ್ರರಂಗದಿಂದ ಬ್ಯಾನ್ ಮಾಡಿತ್ತು. ಈಗ ಅದೇ ಸಂಸ್ಥೆಯ ಉನ್ನತ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದಾರೆ ಪ್ರಕಾಶ್ ರಾಜ್.

 • ಎನ್‍ಟಿಆರ್ ಆಗ್ತಾರಾ ಪ್ರಕಾಶ್ ರೈ..?

  will prakash rai act as ntr

  ವಿವಾದಾತ್ಮಕ ನಿರ್ದೇಶಕ ಎಂದೇ ಫೇಮಸ್ ಆಗಿರೋ ರಾಮ್ ಗೋಪಾಲ್ ವರ್ಮಾ ಈಗ ಲಕ್ಷ್ಮೀಸ್ ಎನ್‍ಟಿಆರ್ ಅನ್ನೋ ಚಿತ್ರಕ್ಕೆ ಕೈ ಹಾಕಿದ್ದಾರೆ. ಚಿತ್ರ ಶುರುವಾಗುವ ಮುನ್ನವೇ ವಿವಾದದ ವಾಸನೆ ಬರತೊಡಗಿದೆ. ಏಕೆಂದರೆ, ರಾಮ್ ಗೋಪಾಲ್ ವರ್ಮಾ ಹೇಳೋಕೆ ಹೊರಟಿರುವುದು ಎನ್‍ಟಿಆರ್ ಜೀವನದ ಸಾಧನೆಯ ಕಥೆಗಳನ್ನಲ್ಲ. ಲಕ್ಷ್ಮಿ ಪಾರ್ವತಿ ಬಂದ ಮೇಲೆ ಎನ್‍ಟಿಆರ್ ಜೀವನ ಹೇಗೆ ಬದಲಾಯ್ತು ಅನ್ನೋ ಕಥೆಯನ್ನ. 

  ಲಕ್ಷ್ಮಿ ಪಾರ್ವತಿ, ಎನ್.ಟಿ. ರಾಮರಾವ್ ಅವರ ಎರಡನೇ ಪತ್ನಿ. ಬರಹಗಾರ್ತಿಯಾಗಿ ಎನ್‍ಟಿಆರ್ ಜೀವನ ಪ್ರವೇಶಿಸಿದ ಲಕ್ಷ್ಮಿ ಪಾರ್ವತಿ, ಎನ್‍ಟಿಆರ್ ಅವರ ಎರಡು ಜೀವನ ಚರಿತ್ರೆಗಳನ್ನು ಬರೆದವರು. ಎದಿರುಲೇನ ಮನಿಷಿ ಹಾಗೂ ತೆಲುಗು ತೇಜಂ ಎಂಬ ಕೃತಿಗಳಲ್ಲಿ ಎನ್‍ಟಿಆರ್ ಅವರನ್ನು ಅನಾವರಣ ಮಾಡಿದ್ದಾರೆ ಲಕ್ಷ್ಮಿ ಪಾರ್ವತಿ. 

  ಇದರ ಹೊರತಾದ ವಿವಾದಗಳನ್ನೇ ವರ್ಮಾ ಕೆಣಕಿದರೆ ಅಚ್ಚರಿಯೇನಿಲ್ಲ. ಇಂಥಾ ಪಾತ್ರಕ್ಕೆ ಯಾರು ಸೂಕ್ತ ಎಂಬ ಹುಡುಕಾಟದಲ್ಲಿರುವ ವರ್ಮಾಗೆ, ಪ್ರಕಾಶ್ ರೈ ಹೆಸರು ಹೊಳೆದಿದೆಯಂತೆ. ಪ್ರಕಾಶ್ ರೈಗೆ ತೆಲುಗಿನಲ್ಲೂ ಸಾಕಷ್ಟು ಅಭಿಮಾನಿಗಳಿದ್ದಾರೆ. ಹೀಗಿರುವಾಗ ಎನ್‍ಟಿಆರ್ ಅವರ ವಿವಾದಾತ್ಮಕ ಚಿತ್ರದಲ್ಲಿ ನಟಿಸುತ್ತಾರಾ..? ಸದ್ಯಕ್ಕೆ ಇದು ಪ್ರಶ್ನೆಯಷ್ಟೆ. ಏಕೆಂದರೆ, ಇದ್ಯಾವುದೂ ಇನ್ನೂ ಅಧಿಕೃತವಾಗಿಲ್ಲ. 

   

 • ಎಲೆಕ್ಷನ್‍ಗೆ ನಿಲ್ಲಲಿದ್ದಾರೆ ಪ್ರಕಾಶ್ ರೈ - ಯಾವ ಕ್ಷೇತ್ರ..?

  prakash raj announces his entry into politics

  ತಮ್ಮ ಮಾತುಗಳಿಂದ, ವಿವಾದಗಳಿಂದ, ಜಸ್ಟ್ ಆಸ್ಕಿಂಗ್ ಅಭಿಯಾನದಿಂದ, ಮೋದಿ ವಿರೋಧಿ ನಿಲುವಿನಿಂದ, ಹಿಂದುತ್ವ ವಿರೋಧಿ ಹೇಳಿಕೆಗಳಿಂದ ಸುದ್ದಿಯಲ್ಲಿರುವ ನಟ ಪ್ರಕಾಶ್ ರೈ, ರಾಜಕೀಯ ಪ್ರವೇಶ ಘೋಷಿಸಿದ್ದಾರೆ. ಇದೇ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಹೇಳಿದ್ದಾರೆ ಪ್ರಕಾಶ್ ರೈ.

  ಯಾವ ಪಕ್ಷವನ್ನೂ ಸೇರದೆ, ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರಂತೆ. ಪ್ರಕಾಶ್ ರೈ ರಾಜಕೀಯ ಪ್ರವೇಶ ಘೋಷಣೆಗೆ ಪ್ರಕಾಶ್ ರೈ ಪರವಾದಿಗಳು ಸಂತಸ ವ್ಯಕ್ತಪಡಿಸಿದ್ದರೆ, ವಿರೋಧಿಗಳು ಲೇವಡಿ ಮಾಡಿ ಸ್ವಾಗತಿಸಿದ್ದಾರೆ. 

  ಮೂಲಗಳ ಪ್ರಕಾರ ಪ್ರಕಾಶ್ ರೈ, ಬೆಂಗಳೂರು ಸೆಂಟ್ರಲ್‍ನಿಮದ ಕಣಕ್ಕಿಳಿಯುವ ಸಾಧ್ಯತೆ ಇದೆ.

 • ಗೋ ಹತ್ಯೆ.. ಡೈಲಾಗ್‍ಗೆ ಕತ್ತರಿ..!

  cow slaughter dialogue removied from seizer

  ಸೀಜರ್ ಚಿತ್ರ ನಾಳೆ ತೆರೆಕಾಣುತ್ತಿದೆ. ಚಿತ್ರದಲ್ಲಿ ಒಂದು ಕಡೆ ಗೋಹತ್ಯೆ ಕುರಿತ ಡೈಲಾಗ್ ಇದೆ. ಪಾತ್ರಧಾರಿ ರವಿಚಂದ್ರನ್, ಹಸುವಿನ ತಲೆ ಕಡಿಯುವುದು ಹಾಗೂ ಹೆತ್ತ ತಾಯಿಯ ತಲೆ ಹಿಡಿಯುವುದು ಎರಡೂ ಒಂದೇ ಎಂದು ಹೇಳುವ ಡೈಲಾಗ್ ಅದು. ಆ ಸಂಭಾಷಣೆಗೆ ವಿರೋಧ ವ್ಯಕ್ತವಾಗಿತ್ತು. ಗೋಹತ್ಯೆ ಪರ ಇರುವ ಸಂಘಟನೆಗಳು ಹಾಗೂ ಚಿತ್ರತಂಡದ ಭಾಗವಾಗಿರುವ ಪ್ರಕಾಶ್ ರೈ, ನಿರ್ದೇಶಕ ವಿನಯ್ ಕೃಷ್ಣ ವಿರುದ್ಧ ಕೆಂಡಕಾರಿದ್ದರು. ಫೋನ್ ಮಾಡಿ ಬೈದಿದ್ದೇನೆ ಎಂದು ಹೇಳಿದ್ದರು ಪ್ರಕಾಶ್ ರೈ.

  ಸಂಭಾಷಣೆಗೂ ರೈಗೂ ಸಂಬಂಧ ಇಲ್ಲ. ಅವರು ನನಗೆ ಫೋನ್ ಮಾಡಿಲ್ಲ ಎಂದಿದ್ದ ವಿನಯ್ ಕೃಷ್ಣ, ಈಗ ಚಿತ್ರದಲ್ಲಿ ಡೈಲಾಗ್‍ಗೆ ಮ್ಯೂಟ್ ಹಾಕಿಸಿದ್ದಾರೆ. ಅಂದರೆ, ಚಿತ್ರಮಂದಿರದಲ್ಲಿ ಈ ಸಿನಿಮಾ ನೋಡುವಾಗ ಆ ಸಂಭಾಷಣೆ ಬರುವ ವೇಳೆ ಬೀಪ್ ಸೌಂಡ್ ಮಾತ್ರ ಕೇಳುತ್ತೆ. 

  ನಟ ರವಿಚಂದ್ರನ್ ಕೂಡಾ ವಿವಾದ ಏಕೆ, ಡೈಲಾಗ್ ಬಿಡಿ ಎಂದು ಸೂಚಿಸಿದ ಹಿನ್ನೆಲೆಯಲ್ಲಿ ನಿರ್ದೇಶಕ ವಿನಯ್ ಹಾಗೂ ನಿರ್ಮಾಪಕ ತ್ರಿವಿಕ್ರಮ್ ಡೈಲಾಗ್‍ಗೆ ಕತ್ತರಿ ಆಡಿಸಿದ್ದಾರೆ. ಗೋಹತ್ಯೆ ಡೈಲಾಗ್ ಇಲ್ಲದ ಸೀಜರ್ ಸಿನಿಮಾ ನಾಳೆ ತೆರೆ ಕಾಣಲಿದೆ.

 • ಪುನೀತ್ ಮಾಯಾಬಜಾರ್‍ನಲ್ಲಿ ಪ್ರಕಾಶ್ ರೈ

  prakash raj in puneeth's maya bazar

  ಪುನೀತ್ ರಾಜ್‍ಕುಮಾರ್ ಇನ್ನೊಂದು ಹೊಸ ಸಿನಿಮಾ ಮಾಡುತ್ತಿದ್ದಾರೆ. ಮತ್ತೊಂದು ಹೊಸ ಪ್ರತಿಭೆಗೆ ಅವಕಾಶ ಕೊಟ್ಟಿದ್ದಾರೆ ಎನ್ನುವ ಸುದ್ದಿಯನ್ನು ಓದಿದ್ದೀರಷ್ಟೆ.. ಈಗ ಆ ಚಿತ್ರದ ಟೈಟಲ್ ಏನು ಎಂಬುದೂ ಗೊತ್ತಾಗಿದೆ. ಮಾಯಾಬಜಾರ್.

  ಮಾಯಾ ಬಜಾರ್ ಎಂದರೆ, ಥಟ್ಟಂತ ನೆನಪಾಗೋದು ವಿವಾಹ ಭೋಜನವಿದು ಹಾಡು. ಇಂದಿಗೂ ಅದೇ ಚರಿಷ್ಮಾ ಕಾಯ್ದುಕೊಂಡಿರುವ ಹಾಡಿನಿಂದಲೇ  ಆ ಸಿನಿಮಾ ನೆನಪಿನಲ್ಲಿದೆ. ಆ ಚಿತ್ರವನ್ನು ನಿರ್ದೇಶಿಸಲಿರುವುದು ರಾಧಾಕೃಷ್ಣ ಎಂಬ ಹೊಸ ಹುಡುಗ.

  ಅಂದಹಾಗೆ ಚಿತ್ರದಲ್ಲಿ ಪ್ರಕಾಶ್ ರೈ ಪ್ರಮುಖ ಪಾತ್ರದಲ್ಲಿದ್ದಾರೆ. ರಾಜ್ ಬಿ ಶೆಟ್ಟಿ, ವಸಿಷ್ಠ ಸಿಂಹ, ಅಚ್ಯುತ್ ಕುಮಾರ್ ಕೂಡಾ ತಾರಾಬಳಗದಲ್ಲಿದ್ದಾರೆ. ನಾಯಕಿಯ ಆಯ್ಕೆ ಇನ್ನೂ ಆಗಿಲ್ಲ. 

  Related Articles :-

  ಇನ್ನೊಂದು ಹೊಸ ಪ್ರತಿಭೆಗೆ ಚಾನ್ಸ್ ಕೊಟ್ಟ ಅಪ್ಪು..!

 • ಪೋಷಕ ಪಾತ್ರಕ್ಕೆ ಕೋಟಿ ಪಡೆಯುವ ಪ್ರಕಾಶ್ ರೈ, ನಿಷ್ಕರ್ಷಕ್ಕೆ ಪಡೆದಿದ್ದ ಸಂಭಾವನೆ ಎಷ್ಟು..?

  what was prakash rai's remunaration for nishkarsha

  ಈಗ ಥಿಯೇಟರಿನಲ್ಲಿರುವ ವಿಷ್ಣು ಅಭಿನಯದ ಕ್ಲಾಸಿಕ್ ಸಿನಿಮಾ ನಿಷ್ಕರ್ಷ. 1993ರಲ್ಲಿ ಬಂದಿದ್ದ ಹಾಲಿವುಡ್ ಸ್ಟೈಲ್ ಸಿನಿಮಾ. ಆ ಸಿನಿಮಾ ಬಂದಾಗ ವಿಷ್ಣುವರ್ಧನ್ ಕನ್ನಡದ ಬಹುಬೇಡಿಕೆಯ ನಟ. ಆದರೆ, ಆ ಚಿತ್ರಕ್ಕೆ ವಿಷ್ಣು ಪಡೆದಿದ್ದ ಸಂಭಾವನೆ ಎಷ್ಟು ಗೊತ್ತೆ..? 6 ಲಕ್ಷ ರೂ. ಅದರಲ್ಲಿಯೂ 1 ಲಕ್ಷ ರೂ.ಗಳನ್ನು ನಿರ್ಮಾಪಕರಿಗೆ ಸಹಾಯಕವಾಗಲಿ ಎಂದು ವಾಪಸ್ ಕೊಟ್ಟಿದ್ದರಂತೆ ವಿಷ್ಣು.

  ಅದಕ್ಕಿಂತಲೂ ಅಚ್ಚರಿಯ ವಿಷಯ ಇನ್ನೊಂದಿದೆ. ನಿಷ್ಕರ್ಷ ಚಿತ್ರದಲ್ಲಿ ಪ್ರಕಾಶ್ ರೈ ಕೂಡಾ ನಟಿಸಿದ್ದಾರೆ. ನಿಮಗೆ ಗೊತ್ತಿದೆ, ಪ್ರಕಾಶ್ ರೈ ಇಡೀ ಭಾರತೀಯ ಚಿತ್ರರಂಗದಲ್ಲಿ ಅತಿ ಹೆಚ್ಚು ಬೇಡಿಕೆಯಿರುವ ಪೋಷಕ ನಟ. ಕನ್ನಡದಲ್ಲಷ್ಟೇ ತೆಲುಗು, ತಮಿಳು, ಹಿಂದಿ, ಮಲಯಾಳಂನಲ್ಲಿಯೂ ನಟಿಸುವ ಪ್ರಕಾಶ್ ರೈ ಪುಟ್ಟ ಪುಟ್ಟ ಪಾತ್ರಕ್ಕೆ ಕೋಟಿ ಕೋಟಿ ಸಂಭಾವನೆ ಕೊಡುವವರಿದ್ದಾರೆ.

  ಆದರೆ ಬಿ.ಸಿ.ಪಾಟೀಲ್ ನಿರ್ಮಾಣದ ಆ ಚಿತ್ರಕ್ಕೆ ಪ್ರಕಾಶ್ ರೈ ಸಂಭಾವನೆ ಎಷ್ಟು ಗೊತ್ತೇ..? 5000 ರೂ. ಯೆಸ್, ದೇಸಾಯಿ ನಿರ್ದೇಶನದ ನಿಷ್ಕರ್ಷ ಚಿತ್ರದಲ್ಲಿ ಪ್ರಕಾಶ್ ರೈ 5000 ರೂ. ಸಂಭಾವನೆ ಪಡೆದು ನಟಿಸಿದ್ದರು. ಚಿತ್ರದಲ್ಲಿ ಪ್ರಕಾಶ್ ರೈ ಅವರದ್ದು ಸುರೇಶ್ ಎಂಬ ಆ್ಯಂಟಿ ಟೆರರಿಸ್ಟ್ ಸ್ಕ್ವಾಡ್‍ನ ಕಮಾಂಡೋ ಪಾತ್ರ.

 • ಪ್ರಕಾಶ್ ರಾಜ್`ಗೆ ಸೋಲು : ಇನ್ ಸೈಡ್ ಸ್ಟೋರಿ ಏನು?

  prakash rai image

  ನಟ ಪ್ರಕಾಶ್ ರಾಜ್ ಆಂಧ್ರಪ್ರದೇಶ ಮತ್ತು ತೆಲಂಗಾಣದ ಮೂವಿಸ್ ಆರ್ಟಿಸ್ಟ್ ಅಸೋಸಿಯೇಷನ್ (MAA) ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸೋಲು ಕಂಡಿದ್ದಾರೆ. 107 ಮತಗಳ ಅಂತರದಿಂದ ಸೋತಿದ್ದಾರೆ. ಚುನಾವಣೆಯಲ್ಲಿ ಒಟ್ಟಾರೆ 900 ಮತಗಳು ಚಲಾವಣೆಯಾಗಬೇಕಿತ್ತು. ಆದರೆ ಜೂ. ಎನ್‍ಟಿಆರ್, ಮಹೇಶ್ ಬಾಬು, ಅಲ್ಲು ಅರ್ಜುನ್, ಪ್ರಭಾಸ್, ವೆಂಕಟೇಶ್, ರಾನಾ ದಗ್ಗುಬಾಟಿ, ರವಿ ತೇಜ, ನಾಗ ಚೈತನ್ಯ, ತ್ರಿಷಾ, ವಿಜಯ್ ದೇವರಕೊಂಡ, ಹನ್ಸಿಕಾ ಮೊಟ್ವಾನಿ, ರಕುಲ್ ಪ್ರೀತ್.. ಹೀಗೆ ಹಲವು ಸ್ಟಾರ್ ಕಲಾವಿದರೇ ಮತದಾನದಿಂದ ದೂರ ಉಳಿದರು. ವೋಟ್ ಹಾಕಲಿಲ್ಲ. ಪ್ರಕಾಶ್ ರಾಜ್ ಪರ 274 ಮತಗಳು ಬಿದ್ದರೆ, ವಿರುದ್ಧವಾಗಿ ಮಂಚು ವಿಷ್ಣು ಪರ 381 ಮತಗಳು ಚಲಾವಣೆಯಾದವು.

  ಪ್ರಕಾಶ್ ರಾಜ್ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸೋತರೂ, ಅವರ ಬಳಗದಿಂದಲೇ ಸ್ಪರ್ಧಿಸಿದ್ದ ಶ್ರೀಕಾಂತ್ ಉಪಾಧ್ಯಕ್ಷ ಸ್ಥಾನದಲ್ಲಿ ಗೆದ್ದಿದ್ದಾರೆ. ಪ್ರಕಾಶ್ ರಾಜ್ ಅವರಿಗೆ ಚಿರಂಜೀವಿ ಬಳಗದ ಬೆಂಬಲವಿದೆ ಎನ್ನಲಾಗಿತ್ತು. ವಿರುದ್ಧವಾಗಿದ್ದುದು ಮೋಹನ್ ಬಾಬು ಬಳಗ. ಇದೇ ಕಾರಣಕ್ಕಾಗಿ ಚಿತ್ರರಂಗದ ಸ್ಟಾರ್ ಕಲಾವಿದರು ಇಬ್ಬರನ್ನೂ ಸಂಭಾಳಿಸುವ ಸಲುವಾಗಿ ಮತದಾನದಿಂದ ದೂರ ಉಳಿದರು ಎನ್ನಲಾಗುತ್ತಿದೆ.

  ಇದರಿಂದ ನೊಂದ ಪ್ರಕಾಶ್ ರಾಜ್  MAA ಸಂಸ್ಥೆಯ ಸದಸ್ಯತ್ವಕ್ಕೇ ರಾಜೀನಾಮೆ ನೀಡಿದ್ದಾರೆ. ನಾನು ಕನ್ನಡದವನು. ನನ್ನ ತಂದೆ ತಾಯಿ ತೆಲುಗಿನವರಲ್ಲ. ಅದು ನನ್ನ ತಪ್ಪಲ್ಲ. ಪ್ರಾಂತೀಯತೆ ಮತ್ತು ಜಾತಿ ಆಧಾರವಾಗಿಟ್ಟುಕೊಂಡು ನಡೆದಿರುವ ಈ ಚುನಾವಣೆ ಇದು.  ನನ್ನ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ. ರಾಜೀನಾಮೆ ನೀಡುತ್ತೇನೆ ಎಂದಿದ್ದಾರೆ ಪ್ರಕಾಶ್ ರಾಜ್. ಚಿರಂಜೀವಿ ಸಹೋದರ ನಾಗಬಾಬು ಕೂಡಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.

 • ಪ್ರಕಾಶ್ ರೈ ನಿರ್ದೇಶಕರಿಗೆ ಬೈದಿದ್ದೇ ಸುಳ್ಳಾ..?

  cow laughter dialogue row

  ಸೀಜರ್ ಚಿತ್ರ, ಇದೇ ವಾರ ತೆರೆಗೆ ಬರುತ್ತಿದೆ. ರವಿಚಂದ್ರನ್, ಚಿರಂಜೀವಿ ಸರ್ಜಾ, ಪಾರುಲ್ ಯಾದವ್ ನಟಿಸಿರುವ ಚಿತ್ರದಲ್ಲಿರುವುದು ಕಾರ್ ಮಾಫಿಯಾ ಕಥೆ. ಚಿತ್ರದ ಟ್ರೇಲರ್‍ನಲ್ಲಿ ಗೋ ಹತ್ಯೆ ಕುರಿತ ಒಂದು ಡೈಲಾಗ್ ಇದೆ. ಹಸುವಿನ ತಲೆ ಕಡಿಯುವುದೂ ಒಂದೇ.. ಹೆತ್ತ ತಾಯಿಯ ತಲೆ ಹಿಡಿಯೋದೂ ಒಂದೇ.. ಅನ್ನೋ ಡೈಲಾಗ್ ಅದು. ಡೈಲಾಗ್ ಹೇಳೋದು ರವಿಚಂದ್ರನ್.

  ಆ ಹೇಳಿಕೆ ವಿವಾದವಾದಾಗ ಖುದ್ದು ಪ್ರಕಾಶ್ ರೈ, ನಿರ್ದೇಶಕರ ವಿರುದ್ಧ ಸಿಟ್ಟಾಗಿದ್ದರು. ಸ್ವತಃ ಫೋನ್ ಮಾಡಿ ನಿರ್ದೇಶಕರಿಗೆ ಬೈದಿದ್ದೇನೆ. ನಾನ್ಸೆನ್ಸ್ ನಿರ್ದೇಶಕ ಎಂದು ನಿರ್ದೇಶಕ ವಿನಯ್‍ಕೃಷ್ಣ ವಿರುದ್ಧ ಮಾತನಾಡಿದ್ದರು. ಸ್ವತಃ ಪ್ರಕಾಶ್ ರೈ ಅವರೇ ಹೇಳಿದ್ದರಿಂದ ಹಾಗೂ ಪ್ರಕಾಶ್ ರೈ ಬಗ್ಗೆ ಗೊತ್ತಿದ್ದರಿಂದ ಇದ್ದರೂ ಇರಬಹುದೇನೋ ಎಂದುಕೊಂಡಿದ್ದರು.

  ಆದರೆ, ಈಗ ನಿರ್ದೇಶಕ ವಿನಯ್‍ಕೃಷ್ಣ ಮಾತನಾಡಿದ್ದಾರೆ. ನನಗೆ ರೈ ಫೋನ್ ಮಾಡಿಯೇ ಇಲ್ಲ. ರೈ ಅವರು ಹೀಗೆ ಮಾತನಾಡೋದು ಸರಿಯಲ್ಲ. ಚಿತ್ರದಲ್ಲಿ ಆ ಡೈಲಾಗ್‍ನ್ನು ಉದ್ದೇಶಪೂರ್ವಕವಾಗಿ ತುರುಕಿಲ್ಲ. ಸಿನಿಮಾ ನೋಡಿದರೆ ಗೊತ್ತಾಗುತ್ತೆ. ಅದು ಉದ್ದೇಶಪೂರ್ವಕವೇ ಆಗಿದ್ದರೆ, ರವಿಚಂದ್ರನ್‍ರಂತಹ ಹಿರಿಯ ನಟ ಆ ಡೈಲಾಗ್ ಹೇಳುತ್ತಿದ್ದರಾ..? ಅನ್ನೋದು ವಿನಯ್ ಕೃಷ್ಣ ಪ್ರಶ್ನೆ.

  ಈ ವಾದ ವಿವಾದಗಳ ನಡುವೆಯೇ ಸಿನಿಮಾ ಈ ವಾರ ರಿಲೀಸ್.

 • ಪ್ರಕಾಶ್ ರೈ ಬ್ಯಾನ್ ಮಾಡಿ - ವಾಣಿಜ್ಯ ಮಂಡಳಿಗೆ ಮನವಿ - ರೈ ಮಾಡಿದ ತಪ್ಪೇನು..?

  hindu mahasabha demands prakash raj to be banned

  ಭಾರತೀಯ ಚಿತ್ರರಂಗದ ಜನಪ್ರಿಯ ಕಲಾವಿದ ಪ್ರಕಾಶ್ ರೈ. ಕನ್ನಡದವರೇ.. ಆದರೆ ಇವರನ್ನು ಕನ್ನಡ ಚಿತ್ರರಂಗದಿಂದಲೇ ಬ್ಯಾನ್ ಮಾಡಬೇಕು ಎಂಬ ಒತ್ತಾಯ ಕೇಳಿಬಂದಿದೆ. ಹಾಗೆಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಮನವಿ ಮಾಡಿರುವುದು ಅಖಿಲ ಭಾರತ ಹಿಂದೂ ಮಹಾ ಸಭಾ ವೇದಿಕೆ.

  ಇಷ್ಟಕ್ಕೂ ಪ್ರಕಾಶ್ ರೈ ಮೇಲೇಕೆ ಹಿಂದೂ ಮಹಾಸಭಾಗೆ ಕೋಪ ಎಂದರೆ ಇತ್ತೀಚೆಗೆ ಪ್ರಕಾಶ್ ರೈ ಟಿವಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಡಿಬೇಟ್‍ನಲ್ಲಿ ಮಾತನಾಡುವ ವೇಳೆ ರಾಮ್‍ಲೀಲಾ ಕಾರ್ಯಕ್ರಮ ಮಾಡುವುದರಿಂದ ಅಲ್ಪಸಂಖ್ಯಾತರು ಹೆದರುತ್ತಾರೆ ಎಂದು ವಾದಿಸಿದ್ದರು. ಮಕ್ಕಳಿಗೆ ರಾಮಸೀತೆಯ ವೇಷ ಹಾಕುವುದಕ್ಕೂ, ಚಿಕ್ಕ ಮಕ್ಕಳ ಪೋರ್ನ್ ವಿಡಿಯೋ ಅಡಿಕ್ಷನ್‍ಗೂ ಯಾವುದೇ ವ್ಯತ್ಯಾಸ ಇಲ್ಲ ಎಂದಿದ್ದರು. ಧಾರ್ಮಿಕ ಆಚರಣೆಯನ್ನು ಪೋರ್ನ್ ವಿಡಿಯೋಗೆ ಹೋಲಿಸಿದ್ದು ತಪ್ಪು. ಪ್ರಕಾಶ್ ರೈ ಪದೇ ಪದೇ ಈ ರೀತಿಯ ವಿಕೃತ ಹೇಳಿಕೆ ನೀಡಿ ಹಿಂದೂಗಳ ಧಾರ್ಮಿಕ ಭಾವನೆಯನ್ನು ಕೆಣಕುತ್ತಿದ್ದಾರೆ. ಇವರನ್ನು ನಿಷೇಧಿಸಿ ಎಂದು ಆಗ್ರಹಿಸಿದ್ದಾರೆ.

 • ಪ್ರಕಾಶ್ ರೈಗೆ ಕಿಚ್ಚನ ಬಹುಪರಾಕ್

  sudeep praises prakash raj

  ಕಿಚ್ಚ ಸುದೀಪ್, ತಮಗೆ ಇಷ್ಟವಾಗಿದ್ದನ್ನು, ಅನ್ನಿಸಿದ್ದನ್ನು ಮುಚ್ಚುಮರೆಯಿಲ್ಲದ ಹೇಳುವ ವ್ಯಕ್ತಿ. ಇಷ್ಟವಾದವರನ್ನು ಕರಡಿಯಂತೆ ಪ್ರೀತಿಸುವ ಸುದೀಪ್, ಮೊನ್ನೆ ಪ್ರಕಾಶ್ ರೈ ಅವರ `ಇರುವುದೆಲ್ಲವ ಬಿಟ್ಟು..' ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಬಂದಿದ್ದರು. ಅದೂ ಏರ್‍ಪೋರ್ಟ್‍ಗೆ ಹೋಗಿ, ಅಲ್ಲಿ ಪ್ರಕಾಶ್ ರೈ ಅವರ ಟ್ವಿಟರ್ ನೋಡಿ, ಪ್ರಯಾಣವನ್ನು ಮುಂದಕ್ಕೆ ಹಾಕಿ ಕಾರ್ಯಕ್ರಮಕ್ಕೆ ಬಂದಿದ್ದರು ಸುದೀಪ್. ಅಷ್ಟೇ ಪ್ರೀತಿಯಿಂದ ಪ್ರಕಾಶ್ ರೈ ಅವರ ಮೇಲಿನ ಪ್ರೀತಿ, ಅಭಿಮಾನವನ್ನು ಬಿಚ್ಚಿಟ್ಟರು.

  ನನ್ನ ನಟನಾ ಬದುಕಿನಲ್ಲಿ ನಾನು ಶರಣಾಗಿರುವುದು ಇಬ್ಬರಿಗೆ ಮಾತ್ರ. ಮೊದಲು ಮಾತಾಡ್ ಮಾತಾಡ್ ಮಲ್ಲಿಗೆ ಚಿತ್ರೀಕರಣದ ವೇಳೆ ವಿಷ್ಣುವರ್ಧನ್ ಸರ್‍ಗೆ. ಆಮೇಲೆ ರನ್ನ ಚಿತ್ರೀಕರಣದ ವೇಳೆ ಪ್ರಕಾಶ್ ರೈ ಅವರಿಗೆ.. ಎಂದರು ಸುದೀಪ್.

  ಪ್ರಕಾಶ್ ರೈ ಜೊತೆ ನಟಿಸುವ ಅವಕಾಶ ನನಗೆ ಸಿಕ್ಕಿದ್ದು ರನ್ನ ಚಿತ್ರದಲ್ಲಿ. ಅವರು ಮಾತನಾಡುವಾಗ ಎಕೋ ಹೊಡೆಯುತ್ತೆ. ಅವರು ಎದುರಿಗಿದ್ದರೆ ನಟಿಸುವುದು ಕಷ್ಟ. ರನ್ನದಲ್ಲಿ ಕೂಡಾ ಅಷ್ಟೆ, ಅವರು ನಟಿಸುವಾಗ ನಾನು ಮಾತನಾಡಲೇ ಇಲ್ಲ. ಅವರು ಮಾತನಾಡುವ ತನಕ ಸುಮ್ಮನಿದ್ದು, ನಂತರ ಅವರ ಕೈಯ್ಯನ್ನು ಮೆಲ್ಲಗೆ ಒತ್ತಿದ್ದೆ. ಹಾಗಾಗಿ ನಾನೂ ಗೆದ್ದೆ ಎಂದು ಹೇಳಿಕೊಂಡಿದ್ದಾರೆ ಸುದೀಪ್.

  ಅಂದಹಾಗೆ ವೇದಿಕೆಯಲ್ಲಿದ್ದವರು ಬಹುತೇಕ ಸಾಹಿತ್ಯಾಸಕ್ತರು. ಸಾಹಿತಿಗಳು. ಆ ವೇದಿಕೆಯಲ್ಲಿ ಸುದೀಪ್ ಅವರ ಮಾತು ಎಲ್ಲರಿಗೂ ಇಷ್ಟವಾಗಿದ್ದು ವಿಶೇಷ. ಏಕೆಂದರೆ, ಅಲ್ಲಿ ಮಾತನಾಡಿದ್ದು ಸೂಪರ್ ಸ್ಟಾರ್ ಸುದೀಪ್ ಆಗಿರಲಿಲ್ಲ. ಪ್ರಕಾಶ್ ರೈ ಅವರ ನಟನೆಯನ್ನು ಗೌರವಿಸುವ, ಅಭಿಮಾನಿಸುವ ಅಭಿಮಾನಿ ಸುದೀಪ್. 

 • ಪ್ರಕಾಶ್ ರೈಗೊಂದು ಹ್ಯಾಟ್ಸಾಫ್ ಹೇಳಿ

  prakash raj

  ತೆಲಂಗಾಣದ ಮೆಹಬೂಬ್ ಜಿಲ್ಲೆಯಲ್ಲಿ ಕೊಂಡರೆಡ್ಡಿ ಅನ್ನೋ ಗ್ರಾಮ ಇದೆ. ಆ ಗ್ರಾಮವನ್ನು ಪ್ರಕಾಶ್ ರೈ ದತ್ತು ತೆಗೆದುಕೊಂಡಿದ್ದಾರೆ. ಆ ಊರಿಗೆ ಶಾಲೆ, ರಸ್ತೆ,  ಸೇರಿದಂತೆ ಮೂಲ ಸೌಕರ್ಯಗಳನ್ನೆಲ್ಲ ಮಾಡಿಕೊಡುತ್ತಿದ್ದಾರೆ.

  ಇದೆಲ್ಲ ಕೆಲಸ ಮಾಡುವಾಗ ಪ್ರಕಾಶ್ ರೈ ಕಣ್ಣಿಗೆ ಬಿದ್ದಿದ್ದೇ ಚೋಟಾ ಮಿಯಾ ಕುಟುಂಬ. ಲಾರಿ ಡ್ರೈವರ್ ಆಗಿದ್ದ ಚೋಟಾಜಿ, ಅಪಘಾತವೊಂದರಲ್ಲಿ ಬೆನ್ನುಮೂಳೆಗೆ ಪೆಟ್ಟು ಬಿದ್ದು ಅಸಹಾಯಕರಾಗಿ ಹಾಸಿಗೆ ಹಿಡಿದಿದ್ದರು. ಅವರ ಕಷ್ಟಕ್ಕೆ ಸ್ಪಂದಿಸಿರುವ ಪ್ರಕಾಶ್ ರೈ, ತಮ್ಮ ಫೌಂಡೇಷನ್‍ನಿಂದ 5 ಲಕ್ಷ ರೂ. ಖರ್ಚು ಮಾಡಿ ಮನೆ ಕಟ್ಟಿಸಿಕೊಟ್ಟಿದ್ದಾರೆ.

  ಆ ಮನೆ ತಮ್ಮದು ಎನ್ನುವುದು ಆ ಮನೆಯವರಿಗೇ ಗೊತ್ತಿರಲಿಲ್ಲ. ರಂಜಾನ್ ದಿನ, ಆ ಮನೆಗೆ ಗೃಹ ಪ್ರವೇಶ ಮಾಡಿಸಿ, ಕೀ ಕೊಟ್ಟಾಗಲೇ ಇದು ನಮ್ಮ ಮನೆ ಎಂದು ಆ ಕುಟುಂಬದವರಿಗೆ ಗೊತ್ತಾಗಿದ್ದು.

  ರಂಜಾನ್ ದಿನ, ಆ ಮನೆಯಲ್ಲೇ ಅಲ್ಲಿಯೇ ಈದ್ ಸಂಭ್ರಮ ಹಂಚಿಕೊಂಡಿದ್ದಾರೆ ಪ್ರಕಾಶ್ ರೈ. 

  ಹ್ಯಾಟ್ಸಾಫ್ ಹೇಳಬೇಕಲ್ಲವೇ..?

 • ಪ್ರಕಾಶ್ ರೈರಿಂದ ಆರಂಭ, ಗಣೇಶ್​ರಿಂದ ಅಂತ್ಯ

  ganesh image

  ವೀಕೆಂಡ್ ವಿತ್ ರಮೇಶ್, ಈ ಬಾರಿ ಟಿಆರ್​ಪಿಯಲ್ಲಷ್ಟೇ ಅಲ್ಲ, ವಿಭಿನ್ನತೆಯಲ್ಲೂ ವಿಶೇಷ ದಾಖಲೆ ಬರೆದಿದೆ. ಝೀ ಕನ್ನಡ ವಾಹಿನಿಯ ವೀಕೆಂಡ್ ವಿತ್ ರಮೇಶ್ ಸೀಸನ್ 3 ಈ ವಾರ ಕೊನೆಯಾಗುತ್ತಿದೆ. ಕೊನೆಯ ಕಾರ್ಯಕ್ರಮದ ಅತಿಥಿ ಗೋಲ್ಡನ್ ಸ್ಟಾರ್ ಗಣೇಶ್.

  ಈ ಸರಣಿ ಶುರುವಾಗಿದ್ದು ಪ್ರಕಾಶ್ ರೈ ಅವರಿಂದ. ಈ ಬಾರಿಯ ವೀಕೆಂಡ್ ಸೀಟ್​ನಲ್ಲಿ ಸಿನಿಮಾದವರಷ್ಟೇ ಅಲ್ಲ, ಬೇರೆ ಬೇರೆ ರಂಗದವರೂ ಭಾಗವಹಿಸಿದ್ದು ವಿಶೇಷ. ಚಿತ್ರರಂಗದ ಸ್ಟಾರ್​ಗಳಲ್ಲಿ ಭಾರತಿ ವಿಷ್ಣುವರ್ಧನ್, ಜಗ್ಗೇಶ್, ಬಿ.ಜಯಶ್ರೀ, ಶೃತಿ, ರಕ್ಷಿತ್ ಶೆಟ್ಟಿ, ಪ್ರಿಯಾಮಣಿ ಮೊದಲಾದವರು ಕಾಣಿಸಿಕೊಂಡರೆ, ಸಿನಿಮಾ ಹೊರತಾಗಿ ನಿ. ಲೋಕಾಯಕ್ತ ಸಂತೋಷ್ ಹೆಗ್ಡೆ, ಹಾಸ್ಯ ಕಲಾವಿದರಾದ ಪ್ರಾಣೇಶ್, ಕೃಷ್ಣೇಗೌಡ ವೇದಿಕೆಯೇರಿದರು.

  ಆದರೆ, ವೀಕೆಂಡ್​ ಇನ್ನೊಂದು ಮಜಲು ತಲುಪಿದ್ದು ಮಾಜಿ ಪ್ರಧಾನಿ ಹೆಚ್​.ಡಿ. ದೇವೇಗೌಡ ಮತ್ತು ಹಾಲಿ ಸಿಎಂ ಸಿದ್ದರಾಮಯ್ಯ ವೀಕೆಂಡ್ ಸೀಟ್​ನಲ್ಲಿ ಕುಳಿತಾಗ. ಹೀಗೆ 3 ತಿಂಗಳ ಕಾಲ ವಿಭಿನ್ನತೆ, ವಿಶಿಷ್ಟತೆ ಮೆರೆದ ವೀಕೆಂಡ್ ವಿತ್ ರಮೇಶ್ ಟಿಆರ್​ಪಿಯಲ್ಲೂ ದಾಖಲೆ ಬರೆಯಿತು.

  ಈ ವಾರ ಗೋಲ್ಡನ್ ಸ್ಟಾರ್ ಗಣೇಶ್ ಪಾಲ್ಗೊಂಡಿದ್ದು ಶನಿವಾರ ಮತ್ತು ಭಾನುವಾರ ಎರಡೂ ದಿನ ಗಣೇಶ್ ಚಿತ್ರ ಜೀವನ ವೀಕೆಂಡ್​ನಲ್ಲಿ ತೆರೆದುಕೊಳ್ಳಲಿದೆ.

 • ಬೆಂಗಳೂರು ಸೆಂಟ್ರಲ್‍ನಿಂದ ಪ್ರಕಾಶ್ ರೈ ಸ್ಪರ್ಧೆ

  prakash raj chooses bengaluru for his political debut

  ನಟ, ನಿರ್ಮಾಪಕ, ನಿರ್ದೇಶಕ ಪ್ರಕಾಶ್ ರೈ, ಇತ್ತೀಚೆಗೆ ಸಿನಿಮಾಗಳಿಗಿಂತ ಹೆಚ್ಚಾಗಿ ವಿವಾದಗಳಿಂದಲೇ ಸುದ್ದಿಯಾದವರು. ಮೋದಿ, ಅಮಿತ್ ಶಾ, ಬಿಜೆಪಿ ವಿರುದ್ಧದ ಹೇಳಿಕೆ ನೀಡುವ ಮೂಲಕ, ಜಸ್ಟ್ ಆ್ಯಸ್ಕಿಂಗ್ ಎನ್ನುವ ಮೂಲಕವೇ ರಾಷ್ಟ್ರೀಯ ಮಟ್ಟದಲ್ಲಿ  ಸುದ್ದಿಯಾದ ಪ್ರಕಾಶ್ ರೈ, ಹೊಸ ವರ್ಷದ ಮೊದಲ ದಿನ ಚುನಾವಣೆಗೆ ನಿಲ್ಲೋದಾಗಿ ಘೋಷಿಸಿದ್ದರು. ಈಗ ಯಾವ ಕ್ಷೇತ್ರ ಅನ್ನೋದನ್ನೂ ಬಹಿರಂಗಪಡಿಸಿದ್ದಾರೆ.

  ಪ್ರಕಾಶ್ ರೈ, ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ಚುನಾವಣೆಗೆ ನಿಲ್ಲಲಿದ್ದಾರಂತೆ. ಬೆಂಗಳೂರು ಸೆಂಟ್ರಲ್ ಬಿಜೆಪಿ ಸಂಸದ ಪಿ.ಸಿ.ಮೋಹನ್ ಪ್ರತಿನಿಧಿಸುತ್ತಿರುವ ಕ್ಷೇತ್ರ. ಈ ಲೋಕಸಭಾ ಕ್ಷೇತ್ರದಲ್ಲಿ ಸರ್ವಜ್ಞನಗರ, ಸಿ.ವಿ.ರಾಮನ್ ನಗರ, ಶಿವಾಜಿನಗರ, ಶಾಂತಿನಗರ, ಗಾಂಧಿನಗರ, ರಾಜಾಜಿನಗರ, ಚಾಮರಾಜಪೇಟೆ ಹಾಗೂ ಮಹದೇವಪುರ ವಿಧಾನಸಭಾ ಕ್ಷೇತ್ರಗಳು ಬರುತ್ತವೆ. ಈ ಲೋಕಸಭೆ ಕ್ಷೇತ್ರದಲ್ಲಿ ಮೂವರು ಬಿಜೆಪಿ ಶಾಸಕರಿದ್ದರೆ, 5 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಈ ಕ್ಷೇತ್ರದಲ್ಲಿ ತಮ್ಮ ರಾಜಕೀಯ ಭವಿಷ್ಯದ ಹುಡುಕಾಟಕ್ಕೆ ನಿಲ್ಲಲಿದ್ದಾರೆ ಪ್ರಕಾಶ್ ರೈ.

 • ಮಾತು ಕೊಟ್ಟು ಮರೆತರಾ ಪ್ರಕಾಶ್ ರೈ..?

  did prakash raj forget his promise

  ಪ್ರಕಾಶ್ ರೈ ತಾವು ಕೊಟ್ಟ ಮಾತು ಮರೆತುಬಿಟ್ಟಿದ್ದಾರೆ. ಕೇವಲ ಪ್ರಚಾರಕ್ಕಾಗಿ ಹೇಳಿಕೆ ಕೊಟ್ಟು ಹೊರಟು ಹೋಗಿದ್ದಾರೆ. ಈ ಮಾತು ಹೇಳ್ತಿರೋದು ಚಿತ್ರದುರ್ಗದ ಬಂಡ್ಲರಹಟ್ಟಿ ಗ್ರಾಮಸ್ಥರು. ಅದಕ್ಕೆ ಕಾರಣವೂ ಇದೆ. ಇದೇ ವರ್ಷದ ಜನವರಿ 27ರಂದು ಪ್ರಕಾಶ್ ರೈ, ಬಂಡ್ಲರಹಟ್ಟಿ ಗ್ರಾಮಕ್ಕೆ ಭೇಟಿ ಕೊಟ್ಟಿದ್ದರು. ಫ್ಲೋರೈಡ್‍ನಿಂದ ಬಳಲುತ್ತಿರುವ ಗ್ರಾಮವನ್ನು ದತ್ತು ತೆಗೆದುಕೊಂಡು ಅಭಿವೃದ್ಧಿ ಪಡಿಸುವುದಾಗಿ ಮಾತು ಕೊಟ್ಟಿದ್ದರು. ಗ್ರಾಮಸ್ಥರು ಸಹಕಾರ ನೀಡಬೇಕು ಎಂದು ಕೋರಿಕೊಂಡಿದ್ದರು.

  ಪ್ರಕಾಶ್ ರೈ ಮಾತಿಗೆ ಖುಷಿಯಾಗಿದ್ದ ಜನ, ಸಹಕಾರ ನೀಡುವ ಭರವಸೆಯನ್ನೂ ಕೊಟ್ಟಿದ್ದರು. ಕೃತಜ್ಞತೆಯನ್ನೂ ಸಲ್ಲಿಸಿದ್ದರು. ಆದರೆ, ಅದಾದ ಮೇಲೆ ಪ್ರಕಾಶ್ ರೈ ಈ ಗ್ರಾಮವನ್ನು ಮರೆತೇಬಿಟ್ಟಿದ್ದಾರೆ. ಊರಿಗೂ ಬಂದಿಲ್ಲ. ನೀರಿನ ಸಮಸ್ಯೆ ನಿವಾರಣೆಗೆ ಏನು ಮಾಡಬೇಕು ಗ್ರಾಮ ಪಂಚಾಯಿತಿ ಅಧಿಕಾರಿಗಳು ಯೋಜನೆಯೊಂದನ್ನು ಕಳಿಸಿಕೊಟ್ಟಿದ್ದಾರೆ. ಅದಕ್ಕೂ ಯಾವುದೆ ಪ್ರತಿಕ್ರಿಯೆ ಇಲ್ಲವಂತೆ.

  ಹಾಗಾದರೆ, ಪ್ರಕಾಶ್ ರೈ ಕೇವಲ ಪ್ರಚಾರಕ್ಕಾಗಿ ಈ ಮಾತು ಹೇಳಿದರಾ..? ಇದು ಗ್ರಾಮಸ್ಥರು ಕೇಳುತ್ತಿರುವ ಪ್ರಶ್ನೆ.

 • ವಿದ್ಯಾರ್ಥಿ ಪುನೀತ್‍ಗೆ ಪ್ರಕಾಶ್ ರೈ ಪ್ರಿನ್ಸಿಪಾಲ್

  prakash raj joins yuvaratna team

  ಪ್ರಕಾಶ್ ರೈ ಮತ್ತೊಮ್ಮೆ ಪುನೀತ್ ಜೊತೆಯಾಗಿದ್ದಾರೆ. ಅಜಯ್ ಚಿತ್ರದಲ್ಲಿ ವಿಲನ್ ಆಗಿದ್ದ ರೈ, ರಾಜಕುಮಾರ ಚಿತ್ರದಲ್ಲೂ ಖಳನಟನಾಗಿಯೇ ಮಿಂಚಿದ್ದರು. ಈಗ ಯುವರತ್ನ ಚಿತ್ರದಲ್ಲಿ ಪೋಷಕ ನಟ. 

  ಚಿತ್ರದಲ್ಲಿ ಪುನೀತ್ ಕಾಲೇಜು ವಿದ್ಯಾರ್ಥಿಯಾಗಿದ್ದು, ಪ್ರಕಾಶ್ ರೈ ಪ್ರಿನ್ಸಿಪಾಲ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ಅಲ್ಲಿಗೆ ಚಿತ್ರದ ತಾರಾಗಣದ ತೂಕ ಮತ್ತಷ್ಟು ಹೆಚ್ಚಿದೆ. ಈಗಾಗಲೇ ಚಿತ್ರದಲ್ಲಿ ಧನಂಜಯ್, ರಾಧಿಕಾ ಶರತ್ ಕುಮಾರ್ ಸೇರಿದಂತೆ ಘಟಾನುಘಟಿಗಳೇ ಇದ್ದಾರೆ. ಚಿತ್ರಕ್ಕೆ ಸಾಯೇಷಾ ಸೈಗಲ್ ನಾಯಕಿ. 

  ಸಂತೋಷ್ ಆನಂದ್‍ರಾಮ್ ನಿರ್ದೇಶನದ ರಾಜಕುಮಾರ ಚಿತ್ರದಲ್ಲಿ ವಿಲನ್ ಆಗಿ ಅಬ್ಬರಿಸಿದ್ದ ರೈ, ಎಲೆಕ್ಷನ್ ನಂತರ ಸಂತೋಷ್ ಚಿತ್ರದ ಮೂಲಕವೇ ರೀ ಎಂಟ್ರಿ ಕೊಡುತ್ತಿದ್ದಾರೆ.

 • ವಿವಾದ : ಅನಂತ್ ನಾಗ್ ಜಾಗಕ್ಕೆ ಪ್ರಕಾಶ್ ರೈ

  prakash raj replaces ananth nag in kgf chapter 2

  ಕೆಜಿಎಫ್ ಚಾಪ್ಟರ್ 2 ಚಿತ್ರಕ್ಕೀಗ ಇನ್ನೊಂದು ವಿವಾದ ಸುತ್ತಿಕೊಂಡಿದೆ. ಕೆಲವು ತಿಂಗಳ ಹಿಂದೆ ಕೆಜಿಎಫ್ 2ನಿಂದ ಅನಂತ್ ನಾಗ್ ಹೊರನಡೆದಿದ್ದಾರೆ ಎಂಬ ಸುದ್ದಿಯಿತ್ತು. ಈಗ ಅದು ಹೆಚ್ಚೂ ಕಡಿಮೆ ಅಧಿಕೃತವಾಗಿದೆ. ಅನಂತ್ ನಾಗ್ ನಟಿಸಿದ್ದ ಪಾತ್ರಕ್ಕೆ ಪ್ರಕಾಶ್ ರೈ ಅಧಿಕೃತವಾಗಿ ಎಂಟ್ರಿ ಕೊಟ್ಟಿದ್ದಾರೆ.

  ಅನಂತ್ ನಾಗ್ ಪಾತ್ರವೂ ಇರುತ್ತೆ, ಪ್ರಕಾಶ್ ರೈ ಪಾತ್ರ ಹೊಸದು ಎಂದು ಚಿತ್ರತಂಡ ಹೇಳುತ್ತಿದೆಯಾದರೂ, ಅನಂತ್ ನಾಗ್ ಸ್ಪಷ್ಟವಾಗಿ ಹೇಳಿಬಿಟ್ಟಿದ್ದಾರೆ. ನಾನು ಕೆಜಿಎಫ್ ಚಾಪ್ಟರ್ 2ನಲ್ಲಿ ನಟಿಸುತ್ತಿಲ್ಲ ಎಂದು. ಹೀಗಾಗಿ ಗೊಂದಲಗಳ ನಡುವೆಯೇ ಒಂದು ಸ್ಪಷ್ಟನೆ ಸಿಕ್ಕಿದೆ. ಕೆಜಿಎಫ್ ಚಾಪ್ಟರ್ 2ನಲ್ಲಿ ಅನಂತ್ ನಾಗ್ ಇರಲ್ಲ.

  ಇದರ ಜೊತೆಗೆ ಪ್ರಕಾಶ್ ರೈ ಎಂಟ್ರಿ ಕೊಟ್ಟ ಬೆನ್ನಲ್ಲೇ ಬಲಪಂತೀಯರು ಕೆಜಿಎಫ್ ಚಾಪ್ಟರ್ 2 ವಿರುದ್ಧ ಅಭಿಯಾನವನ್ನೇ ಆರಂಭಿಸಿದ್ದಾರೆ. ಎಡಪಂತೀಯ ವಿಚಾರಧಾರೆಯ ಪ್ರಕಾಶ್ ರೈ, ಮೋದಿ ಮತ್ತು ಬಿಜೆಪಿಯ ಪ್ರಬಲ ವಿರೋಧಿ. ಇದರಿಂದ ಮೋದಿ ಮತ್ತು ಬಿಜೆಪಿ ಪರವಾದಿಗಳ ಕೆಂಗಣ್ಣಿಗೆ ಗುರಿಯಾಗಿರೋ ಪ್ರಕಾಶ್ ರೈ ಮೇಲಿನ ಸಿಟ್ಟು, ಈಗ ಕೆಜಿಎಫ್ ಚಾಪ್ಟರ್ 2 ವಿರುದ್ಧ ತಿರುಗುತ್ತಿದೆ. ವಿಶೇಷವೆಂದರೆ ಪ್ರಕಾಶ್ ರೈ ಎದುರು ನಟಿಸುತ್ತಿರೋದು ವಿಚಾರಧಾರೆಯಲ್ಲಿ ರೈಗೆ ತದ್ವಿರುದ್ಧ ದಿಕ್ಕಿನಲ್ಲಿರುವ ಮಾಳವಿಕಾ ಅವಿನಾಶ್.

  ಒಟ್ಟಿನಲ್ಲಿ ಈ ವಿವಾದವನ್ನು ನಿರ್ದೇಶಕ ಪ್ರಶಾಂತ್ ನೀಲ್, ನಿರ್ಮಾಪಕ ವಿಜಯ್ ಕಿರಗಂದೂರು, ಸಹ ನಿರ್ಮಾಪಕ ಕಾರ್ತಿಕ್ ಗೌಡ, ನಾಯಕ ನಟ ಯಶ್.. ಇವರೆಲ್ಲ ಹೇಗೆ ನಿಭಾಯಿಸುತ್ತಾರೆ ಎನ್ನುವ ಕುತೂಹಲವಂತೂ ಇದೆ.

 • ಶೂಟಿಂಗ್ ಆ್ಯಕ್ಸಿಡೆಂಟ್ : ಪ್ರಕಾಶ್ ರೈಗೆ ಸರ್ಜರಿ

  ಶೂಟಿಂಗ್ ಆ್ಯಕ್ಸಿಡೆಂಟ್ : ಪ್ರಕಾಶ್ ರೈಗೆ ಸರ್ಜರಿ

  ಲವ್ ಯೂ ರಚ್ಚು ಶೂಟಿಂಗ್ ದುರಂತ ಇನ್ನೂ ಮುಗಿದಿಲ್ಲ. ಇದರ ನಡುವೆಯೇ ಖ್ಯಾತ ನಟ ಪ್ರಕಾಶ್ ರೈ ಕೂಡಾ ಶೂಟಿಂಗ್ ವೇಳೆ ಬಿದ್ದು, ಕೈಗೆ ಪೆಟ್ಟು ಮಾಡಿಕೊಂಡಿದ್ದಾರೆ. ತಮಿಳು ಚಿತ್ರದ ಚಿತ್ರೀಕರಣ ವೇಳೆ ಧನುಷ್ ಜೊತೆ ಫೈಟಿಂಗ್ ಸೀನ್ ನಡೆಯುತ್ತಿರುವಾಗ ಬಿದ್ದು ಕೈಗೆ ಪೆಟ್ಟಾಗಿದೆ. ಬಿದ್ದ ರಭಸಕ್ಕೆ ಮೂಳೆಯಲ್ಲಿ ಫ್ರಾಕ್ಚರ್ ಆಗಿದೆ. ಫ್ರಾಕ್ಚರ್ ಆಗಿದೆ ಅನ್ನೋದು ಶೂಟಿಂಗ್ ಮುಗಿದ ಮೇಲೆ ಗೊತ್ತಾಗಿದೆ.

  ಸಣ್ಣ ಗಾಯವಾಗಿದೆ. ಹೆದರುವ ಅಗತ್ಯವೇನೂ ಇಲ್ಲ. ಹೈದರಾಬಾದ್‍ನ ನನ್ನ ಗೆಳೆಯ  ಡಾ.ಗುರುವಾರೆಡ್ಡಿ ಅವರ ಬಳಿ ಸರ್ಜರಿ ಮಾಡಿಸಿಕೊಳ್ಳುತ್ತೇನೆ. ಡೋಂಟ್‍ವರಿ ಎಂದಿದ್ದಾರೆ ಪ್ರಕಾಶ್ ರೈ.

 • ಶೃತಿ ಬೆಂಬಲಕ್ಕೆ ಪ್ರಕಾಶ್ ರೈ

  prakash raj stands by sruthi hariharan

  ಶೃತಿ ಹರಿಹರನ್ ಬೆಂಬಲಕ್ಕೆ ನಟ ಪ್ರಕಾಶ್ ರೈ ನಿಂತಿದ್ದಾರೆ. ಶೃತಿ ಹರಿಹರನ್ ಅವರ ನೋವನ್ನು ನಾವು ಅರ್ಥ ಮಾಡಿಕೊಳ್ಳಬೇಕಿದೆ. ಅರ್ಜುನ್ ಸರ್ಜಾ ದೊಡ್ಡತನ ಮೆರೆದು ಕ್ಷಮೆ ಕೇಳುವುದು ಒಳ್ಳೆಯದು. ಅದು ದೊಡ್ಡತನದ ಲಕ್ಷಣ ಎಂದಿದ್ದಾರೆ ಪ್ರಕಾಶ್ ರೈ.

  ಶೃತಿ ಹರಿಹರನ್ ವಿಚಾರ ಕುರಿತಂತೆ ಪ್ರಕಾಶ್ ರೈ, ಅರಿತೋ ಅರಿಯದೆಯೋ.. ನಾವು ಗಂಡಸರು ಹೆಣ್ಣು ಮಕ್ಕಳ ಬೇಕು ಬೇಡಗಳ ಬಗ್ಗೆ ಸೂಕ್ಷ್ಮತೆ ಕಳೆದುಕೊಂಡಿದ್ದೇವೆ. ಈ ಮೀಟೂ ಅಭಿಯಾನ ಮುಂದಿನ ದಿನಗಳಲ್ಲಿ ಹೆಣ್ಣು ಮಕ್ಕಳ ಮೇಲಿನ ಅವಮಾನ.. ದೌರ್ಜನ್ಯಗಳಿಗೆ ಅಂತ್ಯ ಹಾಡಲಿ ಎಂದು ಆಶಯ ವ್ಯಕ್ತಪಡಿಸಿದ್ದಾರೆ ಪ್ರಕಾಶ್ ರೈ.

 • ಸೀಜರ್ ಗೋಹತ್ಯೆ ಡೈಲಾಗ್ - ನಿರ್ದೇಶಕರಿಗೆ ಪ್ರಕಾಶ್ ರೈ ಕ್ಲಾಸ್

  prakash raj slams seizer movie director

  ಗೋಹತ್ಯೆ ಮಾಡೋದು ಮತ್ತು ಹೆತ್ತ ತಾಯಿಯ ತಲೆ ಹಿಡಿಯೋದು ಎರಡೂ ಒಂದೇ. ಇದು ಸೀಜರ್ ಚಿತ್ರದಲ್ಲಿನ ಒಂದು ಡೈಲಾಗ್. ಇದು ಸದ್ಯಕ್ಕೆ ವಿವಾದವಾಗಿದೆ. ಚಿತ್ರ ಬಿಡುಗಡೆ ಹೊತ್ತಿನಲ್ಲಿಯೇ ವಿವಾದದ ಕಿಡಿ ಹೊತ್ತುಕೊಂಡಿದೆ.

  ಚಿತ್ರದಲ್ಲಿ ಈ ಡೈಲಾಗ್ ಹೇಳಿರುವುದು ರವಿಚಂದ್ರನ್ ಅವರ ಪಾತ್ರ. ಚಿರಂಜೀವಿ ಸರ್ಜಾ ಚಿತ್ರದ ನಾಯಕ. ಆ ಚಿತ್ರದಲ್ಲಿ ಪ್ರಕಾಶ್ ರೈ ಕೂಡಾ ಇದ್ದಾರೆ. ಹೇಳಿಕೇಳಿ ಪ್ರಕಾಶ್ ರೈ, ಗೋಹತ್ಯೆ ನಿಷೇಧದ ವಿರುದ್ಧ ಗುರುತಿಸಿಕೊಂಡಿರುವವರು. ಹೀಗಾಗಿಯೇ ಪ್ರಕಾಶ್ ರೈ ಕೂಡಾ ಈ ಡೈಲಾಗ್ ಬಗ್ಗೆ ಬೇಸರಗೊಂಡಿದ್ದಾರೆ.

  ಡೈರೆಕ್ಟರ್‍ಗೆ ಫೋನ್ ಮಾಡಿದ್ದ ಪ್ರಕಾಶ್ ರೈ `ಏನಯ್ಯಾ, ಹೀಗಾ ಡೈಲಾಗ್ ಬರೆಯೋದು. ನಿಂಗೇನ್ ತಲೆ ಇಲ್ವಾ' ಎಂದು ಬೈದಿದ್ದಾರೆ. ವಿಷಯ ಗೊತ್ತಾದ ತಕ್ಷಣ ಫೋನ್ ಮಾಡಿ ನಿರ್ದೇಶಕರಿಗೆ ಉಗಿದೆ ಅನ್ನೋದನ್ನ ಪ್ರಕಾಶ್ ರೈ ಅವರೇ ಹೇಳಿಕೊಂಡಿದ್ದಾರೆ. 

  ಆದರೆ ಆ ಡೈಲಾಗ್ ಹೇಳುವ ದೃಶ್ಯದಲ್ಲಿ ನಾನಿಲ್ಲ. ಅಷ್ಟೇ ಸಮಾಧಾನ ಎಂದು ಹೇಳಿದ್ದಾರೆ ಪ್ರಕಾಶ್ ರೈ. ಇಂಥವರೆನ್ನಲ್ಲ ನಿರ್ದೇಶಕರು ಎನ್ನುವುದು ಹೇಗೆ.. ನಾನ್ಸೆನ್ಸ್ ಎಂದಿದ್ದಾರೆ ಪ್ರಕಾಶ್ ರೈ. ಚಿತ್ರದ ನಿದೇಶಕ ವಿನಯ್ ಕೃಷ್ಣ. ಪರೂಲ್ ಯಾದವ್ ಚಿತ್ರದ ನಾಯಕಿ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery