ಮೊಗ್ಗಿನ ಮನಸ್ಸು ಖ್ಯಾತಿಯ ಶುಭಾ ಪೂಂಜಾಗೆ ಕಂಕಣ ಭಾಗ್ಯ ಕೂಡಿ ಬಂದಿದೆ. ಮಂಗಳೂರು ಮೂಲದ ಉದ್ಯಮಿ ಸುಮಂತ್ ಮಹಾಬಲ ಜೊತೆ ಶುಭಾ ಪೂಂಜಾ ಮದುವೆಯಾಗುತ್ತಿದ್ದಾರೆ.
ಡಿಸೆಂಬರ್ ಅಲ್ಲಿ ಪ್ಲಾನ್ ಆಗಿದೆ ಶುಭಾ ಮತ್ತು ಸುಮಂತ್ ಮಹಾಬಲ ಮ್ಯಾರೇಜ್ ಪ್ಲಾನ್ ಆಗಿದೆ. ಸುಮಂತ್ ಮಹಾಬಲ ಜಯ ಕರ್ನಾಟಕದ ಸೌಥ್ ವೈಸ್ ಪ್ರೆಸಿಡೆಂಟ್ ಆಗಿದ್ದು, ಮದುವೆ ಸುದ್ದಿಯನ್ನು ಶುಭಾ ಪೂಂಜಾ ಖಚಿತ ಪಡಿಸಿದ್ದಾರೆ.
ಇದು ಲವ್ ಕಂ ಅರೇಂಜ್ ಮ್ಯಾರೇಜ್. ಒಂದು ವರ್ಷದ ಪ್ರೀತಿಗೆ ಕುಟುಂಬದಿಂದ ಸಮ್ಮತಿ ಸಿಕ್ಕಿದೆ. ಮಚ್ಚಿ ಎಂಬ ತಮಿಳು ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಶುಭಾ ಪೂಂಜಾಗೆ ಹೆಸರು, ಖ್ಯಾತಿ ತಂದುಕೊಟ್ಟಿದ್ದು ಮೊಗ್ಗಿನ ಮನಸ್ಸು ಸಿನಿಮಾ. ಚಂಡ, ತಾಕತ್, ಸ್ಲಮ್ ಬಾಲಾ, ಕಂಠೀರವ, ಗೂಗಲ್, ಜೈಮಾರುತಿ 800, ಕೋಟಿಗೊಂದ್ ಲವ್ ಸ್ಟೋರಿ, ತರ್ಲೆ ನನ್ಮಕ್ಳು, ಸಿಗಂಧೂರು ಚೌಡೇಶ್ವರಿ ಮಹಿಮೆ ಸೇರಿದಂತೆ ಹಲವು ಚಿತ್ರಗಳಲ್ಲಿ ಶುಭಾ ನಟಿಸಿದ್ಧಾರೆ. ತಮಿಳಿನಲ್ಲೂ ಕೆಲವು ಚಿತ್ರಗಳಲ್ಲಿ ನಟಿಸಿರುವ ಶುಭಾ ಪೂಂಜಾ, ಈಗ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ಧಾರೆ