` engagement, - chitraloka.com | Kannada Movie News, Reviews | Image

engagement,

 • ಮದುವೆ ಈಗಲ್ಲ - 2 ವರ್ಷಗಳ ನಂತರ - ರಶ್ಮಿಕಾ ಮಂದಣ್ಣ ತಾಯಿ ಹೇಳಿಕೆ

  marriage after 2 years

  ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ ಎಂಗೇಜ್​ಮೆಂಟ್ ಈಗ. ಆದರೆ, ಮದುವೆ ಈಗಲ್ಲ. ಎರಡು ವರ್ಷಗಳ ನಂತರ. ಈ ಮಾತು ಹೇಳಿರೋದು ಸುಮನಾ ಮಂದಣ್ಣ. ಸುಮನಾ, ರಶ್ಮಿಕಾ ಅವರ ತಾಯಿ. 

  ನಿಶ್ಚಿತಾರ್ಥ ಸಂಪ್ರದಾಯ ಬದ್ಧ ಕಾರ್ಯಕ್ರಮ ಅಲ್ಲ. ವೆಸ್ಟರ್ನ್ ಶೈಲಿಯ ಗೆಟ್​ಟಿಗೆದರ್ ಅಷ್ಟೆ. ಸಂಜೆ 6.30ಕ್ಕೆ ಕಾರ್ಯಕ್ರಮ ಶುರುವಾಗಲಿದೆ. ಲಗ್ನಪತ್ರಿಕೆ ಬರೆಯೋ ಶಾಸ್ತ್ರ ಸಂಪ್ರದಾಯಬದ್ಧವಾಗಿ ನಡೆಯಲಿದೆ. 7.30ಕ್ಕೆ ಉಂಗುರ ಬದಲಾಯಿಸಿಕೊಳ್ಳಲಿದ್ದಾರೆ ಎಂದು ಮಾಹಿತಿ ಕೊಟ್ಟಿದ್ದಾರೆ.

  ಆದರೆ, ಮದುವೆ ಸದ್ಯಕ್ಕೆ ಇಲ್ಲ. ಎರಡು ವರ್ಷಗಳ ನಂತರ. ಇತ್ತೀಚೆಗೆ ಪದವಿ ಮುಗಿಸಿರುವ ರಶ್ಮಿಕಾಗೆ ಐಎಎಸ್ ಮಾಡಿಸುವ ಯೋಜನೆಯೂ ಇದೆಯಂತೆ. ಸಿನಿಮಾ, ಆಕೆಯ ಪ್ಯಾಷನ್ ಅಷ್ಟೆ ಎಂದಿದ್ದಾರೆ ಸುಮನಾ ಮಂದಣ್ಣ. 

 • Amulya Gets Engaged With Jagadish

  amulya engaged

  Actress Amulya on Monday evening got engaged with businessman Jagadish in Bangalore and they are all set to marry in the month of May.

  Both Amuly and Jagadish are common friends of actor Ganesh and both of them met at Ganesh's residence in Rajarajeshwarinagar. Ganesh and Shilpa Ganesh played the role of match maker for Amulya and Jagadish and it was at his residence, the marriage was finalized.

  On Monday, Amulya and Jagadish exchanged rings and got engaged in a private party. Ganesh and Shilpa was also present at the occasion.

 • Bhavana To Marry Naayaka Hero

  bhavana engagemant photo

  Actress Bhavana is all set to marry Kannada actor Naveen. The two got engaged in Kochi today according to reports pouring in after an engagement photo emerged online. Bhavana who has acted in Kannada films like Jackie, Vishnuvardhana, Topiwala and Chowka started her career in Malayalam films.

  Naveen acted as hero in the Kannada film Naayaka along with Ragini Dwivedi. He was one of the producers of Kannada film Romeo starring Ganesh and Bhavana. The two became friends during this movie and said to have fallen in love after that. 

 • Deepak to wed Nikitha - Exclusive

  deepak, nikitha image

  Actor Deepak of 'Shishya' fame is one of the most eligible bachelor of the Kannada film industry and Deepak is all set to tie knot soon. Deepak will be marrying Nikitha soon and  both sides have given their nod to the marriage.

  Deepak will get engaged to Nikitha on Thursday and the marriage date will be announced soon.

 • Yash Wants Wishes And Blessings Of Everybody

  yash radhika pandit image

  Actor Yash who got engaged to actress Radhika Pandith on Friday in Goa has asked his fans to wish and bless him. Yash and Radhika Pandith were dating for the last three years and there were speculations about their marriage for the last few months. However, the duo declined to talk about their relationship in public. Now the duo has put a full stop for the speculations and got engaged amidst fans and friends.

  Yash who was mum about his relationship with Radhika and finally accepted their relationship and has tweeted in this regard. Yash has tweeted that people can ask about his relationship with Radhika and he can talk about it officially now. Yash has also tweeted that he wants the wishes and blessings of everybody.

 • ಕೌರವರ ಮಗಳಿಗೆ ಕಂಕಣ ಭಾಗ್ಯ

  bc paiils daughter engaged

  ಕೌರವ ಬಿ.ಸಿ.ಪಾಟೀಲ್ ಮಗಳು ಸೃಷ್ಟಿ ಪಾಟೀಲ್‍ಗೆ ಕಂಕಣ ಭಾಗ್ಯ ಕೂಡಿ ಬಂದಿದೆ. ಹ್ಯಾಪಿ ನ್ಯೂ ಇಯರ್ ಚಿತ್ರದ ಮೂಲಕ ಬೆಳ್ಳಿತೆರೆಗೂ ಕಾಲಿಟ್ಟಿದ್ದ ಸೃಷ್ಟಿ ಪಾಟೀಲ್, ಬೇಲೂರಿನ ಸುಜಯ್ ಎಂಬುವರ ಜೊತೆ ಎಂಗೇಜ್‍ಮೆಂಟ್ ಮಾಡಿಕೊಂಡಿದ್ದಾರೆ.

  ಬೆಂಗಳೂರಿನಲ್ಲಿ ಬ್ಯುಸಿನೆಸ್‍ಮ್ಯಾನ್ ಆಗಿರುವ ಸುಜಯ್ ಹಾಗೂ ಸೃಷ್ಟಿ ಪಾಟೀಲ್‍ಗೆ ನೂರಾರು ಜನ ಸಿನಿಮಾ ಹಾಗೂ ಗಣ್ಯರು ಶುಭ ಹಾರೈಸಿದ್ದಾರೆ.

 • ನಾಳೆ ಹಸಿರು ಚಪ್ಪರದಲ್ಲಿ ಧ್ರುವ ಸರ್ಜಾ ಎಂಗೇಜ್‍ಮೆಂಟ್

  praparations for dhruva's engagement begins

  ಸಪ್ತಪದಿ ತುಳಿದು ವೈವಾಹಿಕ ಜೀವನಕ್ಕೆ ಕಾಲಿಡುತ್ತಿರುವ ಧ್ರುವ ಸರ್ಜಾ, ನಾಳೆ ನಿಶ್ಚಿತಾರ್ಥ ಮಾಡಿಕೊಳ್ಳುತ್ತಿದ್ದಾರೆ. ಬಾಲ್ಯದ ಗೆಳತಿ ಪ್ರೇರಣಾ ಅವರೊಂದಿಗೆ ಎಂಗೇಜ್‍ಮೆಂಟ್ ಮಾಡಿಕೊಳ್ಳಲಿದ್ದಾರೆ. ಪುಣ್ಯಕ್ಷೇತ್ರ ಶ್ರೀ ಧರ್ಮಗಿರಿ ದೇವಾಲಯದಲ್ಲಿ ಬೆಳಗ್ಗೆ 10 ಗಂಟೆಗೆ ಎಂಗೇಜ್‍ಮೆಂಟ್.

  ವಿಶೇಷವೆಂದರೆ ಪಕ್ಕಾ ಸಂಪ್ರದಾಯಸ್ಥ ಹುಡುಗನಾಗಿರುವ ಧ್ರುವ, ಮದುವೆಯ ಎಂಗೇಜ್‍ಮೆಂಟ್‍ನ್ನು ಹಸಿರು ಚಪ್ಪರದಲ್ಲಿಯೇ ಮಾಡಿಕೊಳ್ಳಲಿದ್ದಾರೆ. ಮದುವೆ ಚಪ್ಪರ ಹಾಕಿಸುತ್ತಿರುವುದು ಕಲಾ ನಿರ್ದೇಶಕ ಅರುಣ್ ಸಾಗರ್. ಚಿತ್ರರಂಗದ ಸ್ಟಾರ್‍ಗಳೆಲ್ಲ ಈ ನಿಶ್ಚಿತಾರ್ಥಕ್ಕೆ ಆಗಮಿಸಿ ನೂತನ ವಧು-ವರರಿಗೆ ಶುಭ ಹಾರೈಸಲಿದ್ದಾರೆ.

 • ಪ್ಯಾಟೆ ಹುಡ್ಗಿ ನಯನಾ ಎಂಗೇಜ್‍ಮೆಂಟ್

  pyate hudgi nanyana engagement

  ಇಡೀ ವರ್ಷ ಮದುವೆ, ನಿಶ್ಚಿತಾರ್ಥಗಳದ್ದೇ ದೊಡ್ಡ ಸುದ್ದಿ. ಈ ಸುದ್ದಿಗೆ ಇನ್ನೊಂದು ಸೇರ್ಪಡೆ ನಯನಾ. ಸಿದ್ದಾರ್ಥ ಸೇರಿದಂತೆ, ಕೆಲವು ಚಿತ್ರಗಳಲ್ಲೂ ನಟಿಸಿದ್ದ ನಯನಾ, ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು ರಿಯಾಲಿಟಿ ಶೋದಿಂದ ಜನಪ್ರಿಯರಾಗಿದ್ದವರು. ಈಗ ಮದುವೆಗೆ ರೆಡಿಯಾಗಿದ್ದಾರೆ.

  ಹೈದರಾಬಾದ್ ಮೂಲಕ ಚರಣ್‍ತೇಜ್ ಎಂಬುವವರ ಜೊತೆ ನಯನಾ ನಿಶ್ಚಿತಾರ್ಥವಾಗಿದೆ. ಇದು ಲವ್ ಮ್ಯಾರೇಜ್ ಏನಲ್ಲ, ಅರೇಂಜ್ಡ್ ಮ್ಯಾರೇಜ್.  ಮದುವೆ ಯಾವಾಗ ಅನ್ನೋದು ಇನ್ನೂ ಫೈನಲ್ ಆಗಿಲ್ಲ.

 • ಬಿಗ್‍ಬಾಸ್ ಸಂಜನಾ ಎಂಗೇಜ್ ಆದ್ರು..!

  sanjana chidanand to be engaged soon

  ಬಿಗ್‍ಬಾಸ್ ಮೂಲಕ ಕನ್ನಡ ಪ್ರೇಕ್ಷಕರಿಗೆ ಪರಿಚಯವಾದವರು ಸಂಜನಾ. ಬಿಗ್‍ಬಾಸ್‍ನಲ್ಲಿಯೇ ಇದ್ದ ಪ್ರಥಮ್ ಜೊತೆ ರಿಲೇಷನ್‍ಶಿಪ್‍ನಲ್ಲಿದ್ದಾರಂತೆ ಅನ್ನೋದು ಸುದ್ದಿಯಾಗಿತ್ತು. ನಂತರ, ಭುವನ್ ಜೊತೆ ಲವ್‍ನಲ್ಲಿದ್ದಾರೆ ಅನ್ನೋದು ಇನ್ನೊಂದು ಸುದ್ದಿಯಾಯ್ತು. ಈಗ, ಅವರು ಯಾರೂ ಅಲ್ಲ. ಸಂಜನಾ ಅವರನ್ನು ಮದುವೆಯಾಗುತ್ತಿರುವ ಹುಡುಗ ಗೌರವ್.

  ಗೌರವ್, ಸಂಜನಾ ಅವರ ಬಾಲ್ಯದ ಗೆಳೆಯ. ಇದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್ ಎಂದಿರುವ ಸಂಜನಾ, ಶೀಘ್ರದಲ್ಲಿಯೇ ಎಂಗೇಜ್‍ಮೆಂಟ್ ನಡೆಯಲಿದೆ ಎಂದಿದ್ದಾರೆ.

 • ಲೂಸ್ ಮಾದ ಯೋಗಿಗೂ, ಸಾಹಿತ್ಯಗೂ ನಿಶ್ಚಿತಾರ್ಥ

  yogi sahitya image

  ಇತ್ತೀಚೆಗೆ ಸ್ಯಾಂಡಲ್​ವುಡ್​ನಲ್ಲಿ ಗಟ್ಟಿಮೇಳಗಳ ಸದ್ದು ಜೋರಾಗಿದೆ. ಆ ಸಾಲಿಗೆ ಈಗ ಲೂಸ್ ಮಾದ ಖ್ಯಾತಿಯ ಯೋಗಿ ಹೊಸ ಸೇರ್ಪಡೆ. ಜೂನ್ 11ರಂದು ಯೋಗಿ ತಮ್ಮ ಬಾಲ್ಯದ ಗೆಳತಿ ಸಾಹಿತ್ಯ ಅರಸ್ ಜೊತೆ ನಿಶ್ಚಿತಾರ್ಥ ಮಾಡಿಕೊಳ್ಳುತ್ತಿದ್ದಾರೆ. ಮದುವೆ ನವೆಂಬರ್​ 2ಕ್ಕೆ. 

  ಸಾಹಿತ್ಯ ಅರಸ್, ಯೋಗಿಗೆ ಬಾಲ್ಯದ ಗೆಳತಿ. ಸದ್ಯಕ್ಕೆ ಐಟಿ ಉದ್ಯೋಗಿ. ಬಾಲ್ಯದಿಂದಲೇ ಸ್ನೇಹವಿತ್ತು. ಸ್ನೇಹ ಪ್ರೀತಿಯಾಯ್ತು. ಹಲವು ವರ್ಷಗಳ ಪ್ರೀತಿ ಮಾಗಿ ಮದುವೆಯ ಹಂತಕ್ಕೆ ಬಂತು. ಮನೆಯವರೂ ಒಪ್ಪಿ, ಈಗ ಮದುವೆಯ ಹಂತದಲ್ಲಿದೆ.

  ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಹತ್ತಿರದ ಸಂಬಂಧಿಗಳಿಗೆ ಮತ್ತು ಚಿತ್ರರಂಗದ ಆಪ್ತ ಗೆಳೆಯರಿಗೆ ಮಾತ್ರ ಆಮಂತ್ರಣ ನೀಡಲಾಗಿದೆ. ಅಂದಹಾಗೆ ಯೋಗಿಯ ಭಾವೀಪತ್ನಿ ಸಾಹಿತ್ಯ ಅರಸ್​ಗೂ, ಸಿನಿಮಾರಂಗಕ್ಕೂ ಯಾವುದೇ ಸಂಬಂಧವಿಲ್ಲ.

  ಮದುವೆಗೆ ಛತ್ರವೂ ಬುಕ್ ಆಗಿದೆ. ಮುಹೂರ್ತವೂ ಫಿಕ್ಸ್ ಆಗಿದೆ. ಶುಭ ಹಾರೈಸೋಣ.

 • ಸಿಂಪಲ್ಲಾಗ್ ಒಂದ್ ವರ್ಷದ್ ಲವ್ ಸ್ಟೋರಿ

  rakshit rashmika's engagement anniversary

  ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ. ಸ್ಯಾಂಡಲ್‍ವುಡ್‍ನ ಮುದ್ದು ಜೋಡಿ. ಈ ಜೋಡಿಹಕ್ಕಿಯ ಪ್ರೇಮಕಥೆಗೀಗ ಒಂದು ವರ್ಷ. ಆ ಒಂದು ವರ್ಷವನ್ನು ರಕ್ಷಿತ್ ಶೆಟ್ಟಿ, ತಮ್ಮಿಬ್ಬರ ಹಳೆಯ ಫೋಟೋ ಮತ್ತು ವಿಡಿಯೋಗಳ ಕೊಲಾಜ್ ಮಾಡಿಸಿ, ರಶ್ಮಿಕಾಗೊಂದು ಪ್ರೇಮ ಪತ್ರ ಬರೆದು ಹಂಚಿಕೊಂಡಿದ್ದಾರೆ.

  ನಮ್ಮಿಬ್ಬರ ಎಂಗೇಜ್‍ಮೆಂಟ್ ಆಗಿ ಒಂದು ವರ್ಷ ಕಳೆದಿದೆ. ನನಗೆ ನಂಬಲಾಗುತ್ತಿಲ್ಲ. ನಾನು ನಿನ್ನೊಂದಿಗೆ ಇದ್ದ ಸಮಯದಲ್ಲಿ ಸಾಕಷ್ಟು ಸಂಗತಿಗಳನ್ನು ಕಲಿತಿದ್ದೇನೆ. ನಿನ್ನಿಂದ ದೂರವಿದ್ದ ಸಮಯದಲ್ಲಿ ಕಲಿಯವ ಅವಕಾಶ ಕಳೆದುಕೊಂಡಿದ್ದೇನೆ. ನನ್ನ ಜೀವನದಲ್ಲಿ ಗಳಿಸಿದ ಬಹುದೊಡ್ಡ ಆಸ್ತಿ ನೀನು. ನಿನ್ನನ್ನು ಪ್ರತಿ ದಿನವೂ ಹೆಚ್ಚೆಚ್ಚು ಪ್ರೀತಿಸುತ್ತೇನೆ, ಸ್ವೀಟ್ ಹಾರ್ಟ್ ಎಂದು ಪ್ರೇಮ ಪತ್ರ ಬರೆದಿದ್ದಾರೆ ರಕ್ಷಿತ್ ಶೆಟ್ಟಿ.

  ಇದು ಪ್ರೀತಿಯಲ್ಲ.. ಬಿಕಾಸ್ ಪ್ರೀತಿ ಎಂದರೆ ಪರ್ಫೆಕ್ಟ್. ಎರಡು ಸುಂದರ ಮನಸ್ಸುಗಳು ಬೇರೆಯದ್ದನ್ನು ಹುಡುಕುತ್ತಿದ್ದಾಗ ಒಂದಾದ ಜೀವನ ಇದು. ಬದುಕಿನ ಪಾಠದ ಬಗ್ಗೆ ಒಬ್ಬರಿಗೊಬ್ಬರು ಕಲಿಸಿಕೊಂಡು ಬದುಕೋಣ. ನಾವಿಬ್ಬರೂ ಬೆಸ್ಟ್ ಟೀಚರ್ಸ್. ನಾನು ನಿಮ್ಮಿಂದ ಬಹಳಷ್ಟನ್ನು ಕಲಿತಿದ್ದೇನೆ.. ನಾನು.. ನೀವು ತುಂಬಾ ಕೋಪ ಮಾಡಿಕೊಂಡಿದ್ದೇವೆ. ಅದಕ್ಕಾಗಿ ನಾನು ನಿಮ್ಮನ್ನು ತುಂಬಾ ಪ್ರೀತಿಸುತ್ತೇನೆ. ಐ ಲವ್ ಯೂ ಎಂದಿದ್ದಾರೆ ರಶ್ಮಿಕಾ.

  ಪ್ರೀತಿಯೆಂದರೆ ಪರಸ್ಪರ ಗೌರವಿಸುವುದು ಎನ್ನುವುದು ಕೂಡಾ ಈ ಇಬ್ಬರ ಪ್ರೇಮಪತ್ರದ ಸ್ವಾರಸ್ಯ. ಇನ್ನೂ ಒಂದಷ್ಟು ವರ್ಷ ಪ್ರೀತಿ ಮಾಡಿಕೊಂಡೇ ಇರುತ್ತೇವೆ. ಇನ್ನೂ ನೂರು ವರ್ಷ ಆದರೂ ನಮ್ಮಿಬ್ಬರ ಪ್ರೀತಿ ಕಡಿಮೆ ಆಗುವುದಿಲ್ಲ. ವಿ ಲವ್ ಈಚ್ ಅದರ್ ಎಂದಿದ್ದಾರೆ ರಶ್ಮಿಕಾ.

  ಇದು ಸಿಂಪಲ್ಲಾಗ್ ಒಂದ್ ವರ್ಷದ್ ಲವ್ ಸ್ಟೋರಿ ಕಥೆ. 

Gara Gallery

Rightbanner02_butterfly_inside

Paddehuli Movie Gallery