` sudeep - chitraloka.com | Kannada Movie News, Reviews | Image

sudeep

 • ಹೆಬ್ಬುಲಿ ನೋಡಿದವರಿಗೆ ಕಿಚ್ಚನ ಅಚ್ಚರಿ..!

  sudeep image

  ಕಿಚ್ಚ ಸುದೀಪ್ ಅವರ ಹೆಬ್ಬುಲಿ ಸಿನಿಮಾ ಟಿವಿಯಲ್ಲಿ ಪ್ರಸಾರವಾಯ್ತು. ಥಿಯೇಟರ್‍ನಲ್ಲಿ ಕರ್ನಾಟಕಕ್ಕೆಲ್ಲ ಕೇಳುವಂತೆ ಗರ್ಜಿಸಿದ್ದ ಹೆಬ್ಬುಲಿ ಸಿನಿಮಾ ಪ್ರಸಾರವನ್ನು ಝೀ ಕನ್ನಡದವರು ಹಬ್ಬದಂತೆ ಸಂಭ್ರಮಿಸಿದರು. ಆ ಸಂಭ್ರಮದ ದೊಡ್ಡ ಕಿಚ್ಚು ಕಿಚ್ಚ ಸುದೀಪ್. ಏಕೆಂದರೆ, ಇಡೀ ಚಿತ್ರವನ್ನು ಪ್ರೇಕ್ಷಕರ ಜೊತೆಯಲ್ಲೇ ನೋಡಿದ ಕಿಚ್ಚ, ಚಿತ್ರದ ತೆರೆಯ ಹಿಂದಿನ ಕಥೆಗಳನ್ನು ಹೇಳುತ್ತಾ ಹೋದರು. ಪ್ರೇಕ್ಷಕರಿಗೆ ಪ್ರತಿ ಬ್ರೇಕ್‍ನಲ್ಲೂ ಅಚ್ಚರಿ.

  ಸಿನಿಮಾವೊಂದು ಬೆಳ್ಳಿತೆರೆಯಿಂದ ಕಿರುತೆರೆಗೆ ಬಂದಾಗ, ಆ ಚಿತ್ರದ ನಟರು, ನಿರ್ದೇಶಕರು ಸಿನಿಮಾದ ತೆರೆಯ ಹಿಂದಿನ ಕಥೆ ಹೇಳುವುದು ಹಿಂದಿಯಲ್ಲಿ ಮಾಮೂಲಿ. ಇಂಗ್ಲಿಷ್ ಚಿತ್ರಗಳಲ್ಲೂ ಇಂಥಾ ಸಂಪ್ರದಾಯವಿದೆ. ಹಿಂದಿಯಲ್ಲಿ ಇಂಥಾದ್ದೊಂದು ಪ್ರಯೋಗ ಆರಂಭವಾಗಿದ್ದು ಬಹುಶಃ ತಾರೆ ಜಮೀನ್ ಪರ್ ಚಿತ್ರದ ಮೂಲಕ. ಅಂಥಾದ್ದೊಂದು ಹೊಸತನಕ್ಕೆ ನಾಂದಿ ಹಾಡಿದ್ದಾರೆ ಕಿಚ್ಚ ಸುದೀಪ್.

 • ಹೇ.. ಜಲೀಲ.. ಹಾಡಿನ ಹಿಂದಿನ ಕಥೆ..!

  hey jallela kanwarlaala

  ಹೇ.. ಜಲೀಲ.. ಕನ್ವರ್‍ಲಾಲ.. ಹಾಡು ಸೂಪರ್ ಹಿಟ್ಟಾಗಿದೆ. ಸಂಗೀತ ನೀಡಿದ ಅರ್ಜುನ್ ಜನ್ಯ, ಸಾಹಿತ್ಯ ಒದಗಿಸಿದ ಜೋಗಿ ಪ್ರೇಮ್ ಹಾಗೂ ಹಾಡಿದ ವಿಜಯ್ ಪ್ರಕಾಶ್.. ಮೂವರೂ ಹಾಡಿನ ಸಕ್ಸಸ್‍ನ್ನು ಎಂಜಾಯ್ ಮಾಡುತ್ತಿದ್ದಾರೆ. ಈ ಹಾಡಿನ ಯಶಸ್ಸಿನ ಜೊತೆಯಲ್ಲೇ ಹಾಡಿಗೂ ಒಂದು ಕಥೆಯಿದೆ.

  ಸಿನಿಮಾಗೆ ಈ ರೀತಿಯ ಹಾಡು ಬೇಕು ಎಂದಾಗ ಅದು ಮಂಡ್ಯ ಸ್ಟೈಲ್‍ನಲ್ಲೇ ಇದ್ದರೆ ಚೆನ್ನ ಎಂಬ ಅಭಿಪ್ರಾಯ ಮೂಡಿಬಂತು. ಅದನ್ನು ಪ್ರೇಮ್ ಅವರಿಂದಲೇ ಬರೆಸಿದರೆ ಚೆಂದ ಎಂದು ಅಭಿಪ್ರಾಯಪಟ್ಟವರು ಸುದೀಪ್. ಪ್ರೇಮ್‍ಗೆ ಹಾಡು ಬರೆಯುವಂತೆ ಹೇಳಿದ್ದೂ ಅವರೇ. 

  ಜೋಗಿ ಪ್ರೇಮ್ ಅಂಬರೀಷ್‍ರ ದೊಡ್ಡ ಅಭಿಮಾನಿ. ಮಂಡ್ಯದವರೂ ಹೌದು. ಮಂಡ್ಯ ಶೈಲಿಯ ಕನ್ನಡದ ಮೇಲೆ ಅದ್ಬುತ ಹಿಡಿತವೂ ಇದೆ. ಜೊತೆಗೆ ಅಂಬರೀಷ್‍ರನ್ನು ಹತ್ತಿರದಿಂದ ಕಂಡವರು. ಇದೆಲ್ಲವನ್ನೂ ಪ್ರೇಮ್ ಹಾಡಿನಲ್ಲಿ ತುಂಬಿಕೊಟ್ಟಿದ್ದಾರೆ ಎಂದು ಖುಷಿಯಾಗುತ್ತಾರೆ ನಿರ್ಮಾಪಕ ಜಾಕ್ ಮಂಜು.

  ಈ ಹಾಡಿನ ಶೂಟಿಂಗ್‍ನ್ನು ಎರಡು ಬಾರಿ ಮುಂದೂಡಲಾಗಿತ್ತಂತೆ. ಎರಡೂ ಬಾರಿ ಅಂಬಿ ಆರೋಗ್ಯ ಕೈ ಕೊಟ್ಟಿತ್ತು. ಆದರೆ ಅಂಬರೀಷ್ ಸಿನಿಮಾವನ್ನು ಅದೆಷ್ಟು ಇಷ್ಟಪಟ್ಟಿದ್ದರು ಎಂದರೆ ಈ ಹಾಡಿಗೆ ತಮ್ಮ ಮಗ ಅಮರ್ ಜೊತೆ ರಿಹರ್ಸಲ್ ಮಾಡಿದ್ದರಂತೆ. 3ನೇ ಬಾರಿ ಶೂಟಿಂಗ್ ಪ್ಲಾನ್ ಆಗಿ ಶೂಟಿಂಗ್ ಶುರುವಾದಾಗ, ಅಂಬರೀಷ್ ಕಂಪ್ಲೀಟ್ ಆಗಿ ಸಿದ್ಧರಾಗಿಬಿಟ್ಟಿದ್ದರಂತೆ. 

  ಇಷ್ಟೆಲ್ಲ ಆಗಿ ಹಾಡು ಈಗ ಅಭಿಮಾನಿಗಳ ಎದೆಯಲ್ಲಿ ಪ್ರತಿಷ್ಠಾಪನೆಯಾಗಿಬಿಟ್ಟಿದೆ. ಅಂಬರೀಷ್ ಅವರ ಇಡೀ ವ್ಯಕ್ತಿತ್ವವೇ ಈ ಹಾಡಿನಲ್ಲಿದೆ. 

 • ಹೊಸ ಚರಿತ್ರೆ ಸೃಷ್ಟಿಸಲಿ ಯುವರತ್ನ - ಬಾದ್‍ಷಾ ಹಾರೈಕೆ

  sudeep wishes yuvaratna puneeth

  ಯುವರತ್ನ.. ಪವರ್ ಆಫ್ ಯೂತ್.. ಇದು ಅಪ್ಪು-ಸಂತೋಷ್-ಹೊಂಬಾಳೆ ಕಾಂಬಿನೇಷನ್‍ನ ಸಿನಿಮಾ. ರಾಜಕುಮಾರ ಚಿತ್ರದಲ್ಲಿ ಹೊಸ ದಾಖಲೆ ಬರೆದಿದ್ದ ಜೋಡಿಗಳು ಮತ್ತೆ ಒಂದಾಗಿವೆ. ಈ ಜೋಡಿ.. ಮತ್ತೊಂದು ಹೊಸ ಇತಿಹಸ ಸೃಷ್ಟಿಸಲಿ. ಬಾಕ್ಸಾಫೀಸ್‍ನಲ್ಲಿ ದಾಖಲೆ ಬರೆಯಲಿ ಎಂದು ಶುಭ ಹಾರೈಸಿದ್ದಾರೆ ಕಿಚ್ಚ ಬಾದ್‍ಷಾ ಸುದೀಪ್ ಹಾರೈಕೆ. 

  ಪುನೀತ್ ರಾಜ್‍ಕುಮಾರ್ ಸಿನಿಮಾಗಳು ಸೈಲೆಂಟ್ ಆಗಿಯೇ ಕ್ರೇಜ್ ಸೃಷ್ಟಿಸುತ್ತವೆ. ಅಬ್ಬರವಿಲ್ಲದೆ ಬಂದು, ಬಾಕ್ಸಾಫೀಸ್‍ನಲ್ಲಿ ಅಬ್ಬರಿಸುತ್ತವೆ. ಈಗ ಯುವರತ್ನ ಅನ್ನೋ ಸಿನಿಮಾ.. ಶೂಟಿಂಗ್ ಶುರುವಾಗುವ ಮೊದಲೇ ಕ್ರೇಜ್ ಸೃಷ್ಟಿಸಿದೆ. ಕಾರಣ ಸಿಂಪಲ್.. ಅದು ರಾಜಕುಮಾರ ಜೋಡಿಯ ಪುನರ್‍ಮಿಲನದ ಸಿನಿಮಾ. 

  ಈಗ ನಿರ್ದೇಶಕ ಸಂತೋಷ್ ಆನಂದ್‍ರಾಮ್ ಹೊರಬಿಟ್ಟಿರುವುದು ಯುವರತ್ನ ಚಿತ್ರದ ಟೈಟಲ್‍ನ ಮುದ್ದಾದ ಫಾಂಟ್‍ಗಳನ್ನು. ಉಳಿದಂತೆ.. ಚಿತ್ರತಂಡದ ತಂತ್ರಜ್ಞರು, ಕಲಾವಿದರ ಆಯ್ಕೆ ಇನ್ನೂ ನಡೆಯುತ್ತಿದೆ. ನಿರ್ಮಾಪಕ ವಿಜಯ್ ಕಿರಗಂದೂರು ಸದ್ಯಕ್ಕೆ ಕೆಜಿಎಫ್ ಚಿತ್ರದ ರಿಲೀಸ್‍ನಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದಾರೆ.

 • ಹೊಸ ಚಿತ್ರದಲ್ಲಿ ಸುದೀಪ್ ಬೇಟೆಗಾರನಲ್ಲ.. ಆಟಗಾರ

  sudeep image

  ಕಿಚ್ಚ ಸುದೀಪ್ ನಟಿಸಿದ್ದ ಹೆಬ್ಬುಲಿ ಚಿತ್ರದಲ್ಲಿ ವಿಲನ್‍ಗಳನ್ನು ಬೇಟೆಯಾಡುವ ಬೇಟೆಗಾರನ ಪಾತ್ರದಲ್ಲಿ ಮಿಂಚಿದ್ದರು ಕಿಚ್ಚ ಸುದೀಪ್. ಆದರೆ, ಹೊಸ ಚಿತ್ರದಲ್ಲಿ ಸುದೀಪ್ ಬೇಟೆಗಾರನಲ್ಲ..ಆಟಗಾರ.

  ಹೆಬ್ಬುಲಿ ನಂತರ ಕೃಷ್ಣ ನಿರ್ದೇಶಿಸುತ್ತಿರುವ ಹೊಸ ಚಿತ್ರದಲ್ಲಿ ಸುದೀಪ್ ಕ್ರೀಡಾಪಟುವಾಗಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಒಂದು ಮೂಲದ ಪ್ರಕಾರ ಸುದೀಪ್ ಅವರದ್ದು ಪೈಲ್ವಾನನ ಪಾತ್ರ. ಇನ್ನೊಂದು ಮೂಲದ ಪ್ರಕಾರ ಬಾಕ್ಸರ್ ಪಾತ್ರ. ಎರಡರ ನಡುವೆ ಹೋಲಿಕೆ ಇದೆಯಾದರೂ, ಹಳ್ಳಿ ಆಟದ ಕಥೆ ಎನ್ನಲಾಗುತ್ತಿದೆ. ಹೀಗಾಗಿ ಪೈಲ್ವಾನನಂತೆ ಕಾಣಿಸಿಕೊಂಡರೂ ಅಚ್ಚರಿಯಿಲ್ಲ. ಒಟ್ಟಿನಲ್ಲಿ ಅದು ಕ್ರೀಡಾಪಟುವಿನ ಕಥೆಯ ಚಿತ್ರ.

  ಕನ್ನಡದಲ್ಲಿ ಕ್ರೀಡೆಯನ್ನೇ ಕಥೆಯನ್ನಾಗಿಸಿಕೊಂಡ ಚಿತ್ರಗಳು ಬಂದೇ ಇಲ್ಲ ಎನ್ನಬೇಕು. ಹೀಗಾಗಿ ಹೊಸ ವಿಭಿನ್ನ ಪ್ರಯತ್ನಕ್ಕೆ ಕೈ ಹಾಕುತ್ತಿರುವ ಸುದೀಪ್, ಚಿತ್ರಕ್ಕಾಗಿ ಬಾಡಿಬಿಲ್ಡಿಂಗ್‍ನ್ನೂ ಮಾಡುತ್ತಿದ್ದಾರಂತೆ. ಜಿಮ್ ಎಂದರೇನೇ ಮಾರು ದೂರ ಓಡುತ್ತಿದ್ದ ಸುದೀಪ್ ಅವರನ್ನು ಕೃಷ್ಣ, ಈ ಚಿತ್ರದಿಂದ ಜಿಮ್‍ಗೆ ಕಟ್ಟಿಹಾಕಿದ್ದಾರೆ. 

  ಚಿತ್ರದ ಫೋಟೋಶೂಟ್ ಮುಗಿದಿದ್ದು, ಸುದೀಪ್ ಹುಟ್ಟುಹಬ್ಬದ ದಿನ ಅಥವಾ ಒಂದು ದಿನ ಮೊದಲು ಚಿತ್ರದ ಫಸ್ಟ್‍ಲುಕ್ ರಿಲೀಸ್ ಮಾಡುವ ಆಲೋಚನೆ ಚಿತ್ರತಂಡಕ್ಕಿದೆ.

  Related Articles :-

  Sudeep Plays A Boxer in His Next Film

  Krishna To Produce Sudeep's New Film

 • ‘ದಿ ವಿಲನ್’ ಚಿತ್ರದ ಗುಟ್ಟು ಬಿಚ್ಚಿಟ್ಟರು ಶಿವಣ್ಣ

  Shivanna Let Out A Secret About The Villain

  ಕಿಚ್ಚ ಸುದೀಪ್ ಮತ್ತು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ದಿ ವಿಲನ್ ಚಿತ್ರ ಸೆಟ್ಟೇರಿದ ದಿನದಿಂದ ಅಭಿಮಾನಿಗಳನ್ನು ಕಾಡುತ್ತಿರುವ ಪ್ರಶ್ನೆ ಒಂದೇ. ಚಿತ್ರದ ಕಥೆ ಏನು ಅನ್ನೋದು. ಅದಕ್ಕೆ ತಕ್ಕಂತೆ ಚಿತ್ರದ ಶೂಟಿಂಗ್ ಶುರುವಾಗಿದ್ದರೂ, ಸುದೀಪ್

  ಪೋರ್ಷನ್ನ ದೃಶ್ಯಗಳಷ್ಟೇ ಚಿತ್ರೀಕರಣಗೊಳ್ಳುತ್ತಿವೆ. ಆಗೆಲ್ಲ ಅಭಿಮಾನಿಗಳನ್ನು ಕಾಡುತ್ತಿದ್ದ ಪ್ರಶ್ನೆ. ಇಬ್ಬರು ದೊಡ್ಡ ಸ್ಟಾರ್ಗಳು ನಟಿಸುತ್ತಿರುವ ಚಿತ್ರದಲ್ಲಿ, ಇಬ್ಬರೂ ಮುಖಾಮುಖಿಯಾಗೋದಿಲ್ಲವಾ ಅನ್ನೋದು.

  ಆ ಅನುಮಾನಕ್ಕೆ ಉತ್ತರ ಕೊಟ್ಟಿದ್ದಾರೆ ಶಿವರಾಜ್ ಕುಮಾರ್. ಚಿತ್ರದಲ್ಲಿ ಸುದೀಪ್ ಜೊತೆ ಮುಖಾಮುಖಿಯಾಗುವ ದೃಶ್ಯಗಳಿವೆ. ಇಬ್ಬರೂ ಜೊತೆಯಾಗಿ ಶೂಟಿಂಗ್ನಲ್ಲಿ ಪಾಲ್ಗೊಳ್ಳಬೇಕಾಗುತ್ತೆ ಎಂದಿದ್ದಾರೆ. ಉಡುಪಿಯಲ್ಲಿ ಚಿನ್ನದ ಮಳಿಗೆಯೊಂದರ ಉದ್ಘಾಟನೆಯಲ್ಲಿ ಭಾಗವಹಿಸಿದ್ದ ಶಿವರಾಜ್ ಕುಮಾರ್, ಚಿತ್ರದ ಕಥೆ ಏನು..? ಹೇಗಿರುತ್ತೆ

  ಅನ್ನೋ ಗುಟ್ಟು ಮಾತ್ರ ಬಿಟ್ಟುಕೊಟ್ಟಿಲ್ಲ. ಚಿತ್ರದಲ್ಲಿ ಶಿವರಾಜ್ ಕುಮಾರ್ ಮತ್ತು ಸುದೀಪ್ ಎದುರಾಬದುರು ಬುರುವುದೇ ಇಲ್ಲವೇನೋ ಎಂದು ಟೆನ್ಷನ್ ಮಾಡಿಕೊಂಡಿದ್ದ ಅಭಿಮಾನಿಗಳಿಗೆ ಒಂದು ರಿಲ್ಯಾಕ್ಸ್ ಕೊಟ್ಟಿದ್ದಾರೆ ಶಿವರಾಜ್ ಕುಮಾರ್.

  Related Articles :-

  ವಿಲನ್ ಪ್ರೇಮ್​ಗೆ ಶಹಬ್ಬಾಸ್ ಎಂದ ಸುದೀಪ್

  Amy Jackson Joins The Villain

  Storm Hampers The Shooting Of The Villain

  Sudeep Joins The Villain Second Schedule

  Mithun Chakraborty Joins The Sets Of The Villain

  Amy Jackson Is The Heroine For The Villain

  Puneeth Visits The Villain Set - Exclusive

  First look Of The Villain Released

  The Villain Starting Next Week

   

   

   

Kaalidasa Kannada Mestru Movie Gallery

Kabza Movie Launch Gallery