` sudeep - chitraloka.com | Kannada Movie News, Reviews | Image

sudeep

 • ವಯಸ್ಸಾಗ್ತಾ ಆಗ್ತಾ ಚಿಕ್ಕೋರಾದ್ರು ಕಿಚ್ಚ ಸುದೀಪ್

  sudeep's young look

  ಸಿನಿಮಾಗಳಿಗೆ ಕಮಿಟ್ ಆದರೆ, ತಮ್ಮ ಲುಕ್ಕು, ಬಾಡಿ ಲಾಂಗ್ವೇಜ್ ಬದಲಿಸಿಕೊಳ್ಳೋ ವಿಚಾರದಲ್ಲಿ ಸುದೀಪ್ ಅವರಿಗೆ ಸುದೀಪ್ ಅವರೇ ಸಾಟಿ. ಈ ಬಾರಿ ಸುದೀಪ್ ಬದಲಾಗಿರೋದು ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರಕ್ಕೆ. ಆ ಚಿತ್ರದಲ್ಲಿ ಸುದೀಪ್ 80ರ ದಶಕದ ಯುವಕನಂತೆ ಕಾಣಬೇಕು. ಏಕೆಂದರೆ, ಅದು ಅಂಬರೀಶ್ ನಿರ್ವಹಿಸುತ್ತಿರುವ ಪಾತ್ರದ ಯಂಗ್ ವರ್ಷನ್.

  ಆ ಚಿತ್ರಕ್ಕಾಗಿ ಸುದೀಪ್ ಅದ್ಯಾವ ಮಟ್ಟಿಗೆ ಬೆವರು ಹರಿಸಿದ್ದಾರೆಂದರೆ, 10 ಕೆಜಿ ತೂಕ ಕಳೆದುಕೊಂಡಿದ್ದಾರೆ. 10 ಕೆಜಿ ದೇಹದ ತೂಕ ಇಳಿಸಿಕೊಳ್ಳೋದು ಸುಲಭದ ಮಾತಲ್ಲ. ವಿಶೇಷ ಡಯಟ್ ಮಾಡಿರುವ ಸುದೀಪ್, ಹಳ್ಳಿ ಯುವಕನ ಲುಕ್ ಪಡೆದುಕೊಳ್ಳೋಕೆ ಒಂದಿಷ್ಟು ಸರ್ಕಸ್‍ಗಳನ್ನೂ ಮಾಡಿದ್ದಾರೆ. ಟೋನ್ ಮಾಡಿಸಿಕೊಂಡಿದ್ದಾರೆ.

  ಈ ಎಲ್ಲ ಸಾಹಸಗಳ ಎಫೆಕ್ಟ್, ಈಗ ಸುದೀಪ್ ಇನ್ನಷ್ಟು ಮತ್ತಷ್ಟು ಯುವಕರಂತೆ ಕಾಣಿಸುತ್ತಿದ್ದಾರೆ. 30 ವರ್ಷ ಚಿಕ್ಕೋರಾಗಿದ್ದಾರೆ..  25 ರ ಹರೆಯದ ಹುಡುಗನಂತೆ ಕಾಣಿಸುತ್ತಿದ್ದಾರೆ ಅನ್ನೋದು ಕೊರಿಯೋಗ್ರಾಫರ್ ಇಮ್ರಾನ್ ಸರ್ದಾರಿಯಾ ಮಾತು. 

  ಸುದೀಪ್‍ರ ಈ ಹೊಸ ಲುಕ್‍ನ್ನು ನೀವೂ ನೋಡಿ. ನಿಮಗೆ ಲವ್ವಾದ್ರೆ ನಾವು ಜವಾಬ್ದಾರರಲ್ಲ.

 • ವರಮಹಾಲಕ್ಷ್ಮಿ ಹಬ್ಬಕ್ಕೆ ಬರ್ತಾನೆ ಪೈಲ್ವಾನ

  sudeep's pailan for varamahalakshmi

  ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾ ಮೇ ಹೊತ್ತಿಗೆ ರಿಲೀಸ್ ಆಗಬಹುದು ಎನ್ನಲಾಗಿತ್ತು. ಆದರೆ, ಚಿತ್ರದ ಬಿಡುಗಡೆ ಈಗ ಆಗಸ್ಟ್‍ಗೆ ಮುಂದೆ ಹೋಗಿದೆ. ಕಾರಣ ಸಿಂಪಲ್, ಸಿನಿಮಾವನ್ನು 9 ಭಾಷೆಗಳಲ್ಲಿ ರಿಲೀಸ್ ಮಾಡುತ್ತಿರುವುದು.

  6 ಭಾಷೆಗಳಲ್ಲಿ ಚಿತ್ರದ ಡೈಲಾಗ್ ಬರೆಯುವ ಕೆಲಸ ಮುಗಿದಿದೆ. ಹಾಡುಗಳ ಲಿರಿಕ್ಸ್ ಕೂಡಾ ಅನುವಾದವಾಗಿ ಹೋಗಿದೆ. ಈಗ ಲಿಪ್ ಸಿಂಕಿಂಗ್ ಆಗುವಂತೆ ಸಂಭಾಷಣೆ ಬರೆಯುವ ಕೆಲಸ ನಡೆಯುತ್ತಿದೆ. ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿ ಚಿತ್ರ ಪೈಲ್ವಾನ್ ಹೆಸರಲ್ಲೇ ರಿಲೀಸ್ ಆಗಲಿದೆ. ಹಿಂದಿಗೆ ಬೇರೆ ಟೈಟಲ್ ಇಡುವ ಕೆಲಸ ನಡೆಯುತ್ತಿದೆ. ಮರಾಠಿ, ಬೆಂಗಾಲಿ, ಬೋಜ್‍ಪುರಿ ಹಾಗೂ ಪಂಜಾಬಿ ಭಾಷೆಗಳಲ್ಲೂ ಸಿನಿಮಾ ಬಿಡುಗಡೆಯಾಗಲಿದೆ.

  ಆದರೆ, ಹಿಂದಿ ಬಿಡುಗಡೆ ಬಗ್ಗೆ ಇನ್ನೂ ಸ್ಪಷ್ಟ ನಿರ್ಧಾರ ಹೊರಬಿದ್ದಿಲ್ಲ. ಹಿಂದಿ ಡಬ್ಬಿಂಗ್ ಸಿನಿಮಾ ವಿತರಕರು, ಮರಾಠಿ, ಬೆಂಗಾಲಿ, ಬೋಜ್‍ಪುರಿ ಹಾಗೂ ಪಂಜಾಬಿ ಭಾಷೆಗಳಲ್ಲಿ ಸಿನಿಮಾ ಬೇಡ ಎನ್ನುತ್ತಿದ್ದಾರಂತೆ. ಹೀಗಾಗಿ, ಈ ಕುರಿತು ಇನ್ನೂ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ ಎನ್ನುತ್ತಿದೆ ಚಿತ್ರತಂಡ.

 • ವರಮಹಾಲಕ್ಷ್ಮಿ ಹಬ್ಬಕ್ಕೆ ಸುದೀಪ್ V/s ಸುದೀಪ್..?

  sudeep vs sudeep ?

  ಆಗಸ್ಟ್ 24ಕ್ಕೆ ವರಮಹಾಲಕ್ಷ್ಮಿ ಹಬ್ಬ. ಆ ದಿನ ಕನ್ನಡಿಗರಿಗೆ ಡಬಲ್ ಧಮಾಕಾ ಕಾದಿದೆಯಾ..? ಶಿವರಾಜ್‍ಕುಮಾರ್-ಸುದೀಪ್ ಕಾಂಬಿನೇಷನ್‍ನ ದಿ ವಿಲನ್ ಚಿತ್ರವನ್ನು ವರಮಹಾಲಕ್ಷ್ಮಿ ಹಬ್ಬಕ್ಕೆ ರಿಲೀಸ್ ಮಾಡೋದಾಗಿ ನಿರ್ದೇಶಕ ಪ್ರೇಮ್ ಹೇಳಿದ್ದರು. ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿರುವ ಪ್ರೇಮ್, ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸವನ್ನು ಸಮರೋಪಾದಿಯಲ್ಲಿ ಮಾಡುತಿತ್ತಿದ್ದಾರೆ. ಚಿತ್ರ ಅಂತಿಮ ಹಂತದಲ್ಲಿದೆ. ಸಿನಿಮಾ ಆಗಸ್ಟ್ 24ಕ್ಕೆ ರಿಲೀಸ್ ಆದರೆ ಅಚ್ಚರಿಯಿಲ್ಲ.

  ಇನ್ನು ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರ. ಬಹಳ ವರ್ಷಗಳ ನಂತರ ಅಂಬರೀಷ್ ನಾಯಕರಾಗಿ ನಟಿಸಿರುವ ಚಿತ್ರ. ಸುದೀಪ್ ಅವರೇ ಇಷ್ಟಪಟ್ಟು ಯಂಗ್ ಅಂಬರೀಷ್ ಆಗಿ ನಟಿಸಿರುವ ಚಿತ್ರ. ಚಿತ್ರ ರೆಡಿಯಾಗಿದ್ದು, ಸೆನ್ಸಾರ್ ಮುಂದೆ ಹೋಗೋ ಸಿದ್ಧತೆಯಲ್ಲಿದೆ. ಆ ಚಿತ್ರವೂ ಆಗಸ್ಟ್ 24ಕ್ಕೆ ರಿಲೀಸ್ ಆದರೆ ಅಚ್ಚರಿಯಿಲ್ಲ.

  ಸಿ.ಆರ್.ಮನೋಹರ್ ನಿರ್ಮಾಣದ ದಿ ವಿಲನ್ ಚಿತ್ರವನ್ನು ಕಾಂಬಿನೇಷನ್ ಕಾರಣಕ್ಕೆ ಇಡೀ ಕರ್ನಾಟಕ ಎದುರು ನೋಡುತ್ತಿದೆ. ಇದೇ ವೇಳೆ ಜಾಕ್ ಮಂಜು ನಿರ್ಮಾಣದ ಅಂಬಿ ನಿಂಗೆ ವಯಸ್ಸಾಯ್ತೋ.. ಚಿತ್ರ.. ಅಂಬರೀಷ್-ಸುದೀಪ್ ಕಾರಣಕ್ಕೇ ಕ್ರೇಜ್ ಸೃಷ್ಟಿಸಿದೆ. ಹಬ್ಬ ಆಗುತ್ತಾ..? ಕಾದು ನೋಡೋಣ..

 • ವಾರಸ್ದಾರ ವಿವಾದಕ್ಕೆ ಫುಲ್ ಸ್ಟಾಪ್ : ಸುದೀಪ್ ರಿಲ್ಯಾಕ್ಸ್

  sudeep image

  ವಾರಸ್ದಾರ ಧಾರಾವಾಹಿ ನಿಮಗೆ ನೆನಪಿರಬಹುದು. ಝೀ ಕನ್ನಡದಲ್ಲಿ ಬರುತ್ತಿದ್ದ ಈ ಧಾರಾವಾಹಿಗೆ ಕಿಚ್ಚ ಸುದೀಪ್ ನಿರ್ಮಾಪಕರಾಗಿದ್ದರು. ನಟ ಸುದೀಪ್ ಹಾಗೂ ಕಿಚ್ಚ ಕ್ರಿಯೇಷನ್ ನಿರ್ಮಾಣದ ಧಾರಾವಾಹಿ, ಒಳ್ಳೆಯ ಟಿಆರ್ಪಿಯನ್ನೂ ಕಂಡಿತ್ತು. ಆದರೆ, ಧಾರಾವಾಹಿ ಟೀಂ ಹಾಗೂ ಸುದೀಪ್ ವಿರುದ್ಧ ಚಿಕ್ಕಮಗಳೂರು ತಾಲೂಕಿನ ಬೈಗೂರು ಗ್ರಾಮದ ದೀಪಕ್ ಮಯೂರ್ ಪಟೇಲ್ ದೂರು ಕೊಟ್ಟಿದ್ದರು.

  ತಮ್ಮ ತೋಟದಲ್ಲಿ ಶೂಟಿಂಗ್ ಮಾಡಿದ ವೇಳೆ ವಾರಸ್ದಾರ ಟೀಂನಿಂದ ನಮಗೆ ನಷ್ಟವಾಗಿದೆ. ಆ ನಷ್ಟವನ್ನು ಭರಿಸಿಕೊಡಿ ಎಂದು ಚಿಕ್ಕಮಗಳೂರು 2ನೇ ಹೆಚ್ಚುವರಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ನಂತರ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿತ್ತು. ಈಗ ಪ್ರಕರಣದಲ್ಲಿ ಸುದೀಪ್ ಅವರಿಗೆ ಗೆಲುವಾಗಿದೆ.

  ದೂರಿನಲ್ಲಿ ಯಾವುದೇ ಹುರುಳಿಲ್ಲ. ದೀಪಕ್ ಮಯೂರ್ ಬೇರೆ ವ್ಯವಹಾರಗಳಲ್ಲಿ ನಷ್ಟ ಮಾಡಿಕೊಂಡು ಅದನ್ನು ಧಾರಾವಾಹಿ ತಂಡದಿಂದ ತುಂಬಿಕೊಳ್ಳಲು ಯತ್ನಿಸಿದ್ದಾರೆ ಎಂದು ತೀರ್ಪು ನೀಡಿದೆ. ಹೀಗಾಗಿ ಸುದೀಪ್ ವಿರುದ್ಧದ ದೂರು ಖುಲಾಸೆಯಾಗಿದೆ ಎಂದು ಸುದೀಪ್ ಪರ ವಕೀಲ ಗೋಪಿನಾಥ್ ತಿಳಿಸಿದ್ದಾರೆ.

 • ವಿಜಯಲಕ್ಷ್ಮಿಗೆ ಕಿಚ್ಚನ ನೆರವು - ಹೇಳಿದ್ದು ಅವರಲ್ಲ..!

  sudeep helps vijaylakshmi

  ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ, ಆರ್ಥಿಕ ಸಂಕಷ್ಟದಲ್ಲಿರುವ ನಾಗಮಂಡಲ ವಿಜಯಲಕ್ಷ್ಮಿಗೆ ಕಿಚ್ಚ ಸುದೀಪ್ 1 ಲಕ್ಷ ರೂ. ನೆರವು ನೀಡಿದ್ದಾರೆ. ಆದರೆ, ಎಂದಿನಂತೆ.. ಸುದೀಪ್ ತಾವು ನೆರವು ನೀಡಿದ್ದನ್ನು ಹೇಳಿಕೊಂಡಿಲ್ಲ. ಒನ್ಸ್ ಎಗೇಯ್ನ್.. ಇದು ವಿಜಯಲಕ್ಷ್ಮಿ ಅವರಿಂದಲೇ ಗೊತ್ತಾಗಿದೆ.

  ವಿಜಯಲಕ್ಷ್ಮಿ ಅವರ ಮೂಲಕ ಭಾ.ಮಾ.ಹರೀಶ್ ಅವರಿಗೆ ಗೊತ್ತಾಗಿ, ಅವರು ಕಿಚ್ಚ ಸುದೀಪ್ ನೆರವು ನೀಡಿರುವುದನ್ನು ಬಹಿರಂಗಪಡಿಸಿದ್ದಾರೆ. ವಿಜಯಲಕ್ಷ್ಮಿ ಅವರಿಗೆ ಶ್ರೀಮುರಳಿ ಅಭಿನಯದ ಮದಗಜ ಚಿತ್ರತಂಡ ಪಾತ್ರವೊಂದನ್ನು ನೀಡಿ ಬೆಂಬಲ ನೀಡಿದ್ದ ಬೆನ್ನಲ್ಲೇ ಸುದೀಪ್ ಆರ್ಥಿಕ ಸಹಾಯ ಒದಗಿಸಿದ್ದಾರೆ.

  Related Articles :-

  ಆಸ್ಪತ್ರೆ ಸೇರಿದ ನಾಗಮಂಡಲ ವಿಜಯಲಕ್ಷ್ಮಿ ಆರ್ಥಿಕ ಸಂಕಷ್ಟದಲ್ಲಿ..

 • ವಿಲನ್ ಚಿತ್ರದ ಕಾನ್ಸೆಪ್ಟ್ - ಹೀಗೂ ಉಂಟೆ..?

  the villain poster

  ಪೋಸ್ಟರ್ ತುಂಬಾ ಬೆಂಕಿ. ಬ್ಯಾಕ್‍ಗ್ರೌಂಡ್‍ನಲ್ಲಿ ರಣ ರಣ ರಾವಣ ಎಂಬ ಮ್ಯೂಸಿಕ್. ನೋಡ ನೋಡುತ್ತಿದ್ದಂತೆಯೇ ಶಿವರಾಜ್ ಕುಮಾರ್ ತಲೆ ಉರುಳಿ ಬರುತ್ತೆ. ಬೆನ್ನಲ್ಲೇ ಸುದೀಪ್ ತಲೆ ಉರುಳುತ್ತೆ. ದೇಹವೆಲ್ಲ ಬೆಂಕಿ..ಶಿವಣ್ಣದ ಮುಖದಿಂದ ಸುದೀಪ್ ಮುಖ ಹೊರಬಂದರೆ, ಸುದೀಪ್ ಮುಖದಿಂದ ಶಿವರಾಜ್ ಕುಮಾರ್ ಮುಖ ಚಿಮ್ಮುತ್ತೆ. ಇದು ದಿ ವಿಲನ್ ಚಿತ್ರದ ಮೋಶನ್ ಪೋಸ್ಟರ್.

  ಪ್ರತಿ ರಾಮನ ಒಳಗೂ ಒಬ್ಬ ರಾವಣ ಇರುತ್ತಾನೆ. ಪ್ರತಿಯೊಬ್ಬ ರಾವಣನಲ್ಲೂ ಒಬ್ಬ ರಾಮನಿರುತ್ತಾನೆ ಎಂಬ ಕಾನ್ಸೆಪ್ಟ್‍ನಲ್ಲಿ ಸಿದ್ಧವಾಗುತ್ತಿರುವ ಚಿತ್ರ ದಿ ವಿಲನ್. ಜೋಗಿ ಪ್ರೇಮ್ ನಿರ್ದೇಶನದ ಚಿತ್ರದ ಮೇಲೆ ಸ್ಯಾಂಡಲ್‍ವುಡ್ ಭರ್ಜರಿ ನಿರೀಕ್ಷೆ ಇಟ್ಟುಕೊಂಡಿದೆ. ಸುದೀಪ್ ಹುಟ್ಟುಹಬ್ಬಕ್ಕೆ ವಿಶೇಷ ಪೋಸ್ಟರ್ ರಿಲೀಸ್ ಮಾಡಿ ಶುಭ ಕೋರಿದೆ.

  Related Articles :-

  Motion poster Of 'The Villain' Released!

  ಮತ್ತೆ ಬ್ಯಾಂಕಾಕ್‍ಗೆ `ದಿ ವಿಲನ್' ಟೀಂ

  The Villain Rights Sold

  ದಿ ವಿಲನ್, ಲಂಡನ್ ಶೂಟಿಂಗ್ ಮುಗೀತು - ಭಾನುವಾರದ ಕಿಚ್ಚನ ಪ್ಲಾನ್ ಏನು?

   

   

 • ವಿಲನ್ ಟಿಕೆಟ್ ಬುಕ್ಕಿಂಗ್ ಅಕ್ಟೋಬರ್ 11ರಿಂದ

  the villain ticket booking from oct 1

  ದಿ ವಿಲನ್. ಚಿತ್ರದ 4 ಟೀಸರ್‍ಗಳನ್ನು ಬಿಟ್ಟಿರೋ ನಿರ್ದೇಶಕ ಪ್ರೇಮ್, ಅಭಿಮಾನಿಗಳನ್ನು ಕುತೂಹಲ, ಕಾತುರದ ತುತ್ತತುದಿಗೆ ಕೊಂಡೊಯ್ದಿದ್ದಾರೆ. ಪ್ರೇಮ್ ಇಷ್ಟವಾಗೋದು ಈ ಕಾರಣಕ್ಕೆ. ಒಂದು ಸಿನಿಮಾವನ್ನು ಎಷ್ಟು ಅದ್ಭುತವಾಗಿ ಹೇಗೆ ಪ್ರಮೋಟ್ ಮಾಡಬೇಕು ಅನ್ನೋದು ಪ್ರೇಮ್‍ಗೆ ಚೆನ್ನಾಗಿ ಗೊತ್ತು. ದಿ ವಿಲನ್ ಚಿತ್ರದಲ್ಲಂತೂ, ಚಿತ್ರ ಪ್ರಚಾರದ ಸಾಧ್ಯತೆಗಳನ್ನೆಲ್ಲ ತೆರೆದಿಟ್ಟ ಪ್ರೇಮ್, ಇಡೀ ಚಿತ್ರರಂಗವೇ ಕಣ್ಣಲ್ಲಿ ಕಣ್ಣಿಟ್ಟು ಕಾಯುವಂತೆ ಮಾಡಿದ್ದಾರೆ. 

  4 ಟೀಸರ್ ಬಿಟ್ಟರೂ, ಚಿತ್ರದ ಕಥೆ ಏನಿರಬಹುದು ಅನ್ನೋ ಗುಟ್ಟು ಮಾತ್ರ ಬಿಟ್ಟುಕೊಟ್ಟಿಲ್ಲ ಪ್ರೇಮ್. ಇದೇ ವೇಳೆ ಚಿತ್ರದ ಟಿಕೆಟ್ ಅಡ್ವಾನ್ಸ್ ಬುಕ್ಕಿಂಗ್ ಡೇಟ್‍ನ್ನು ಅನೌನ್ಸ್ ಮಾಡಿದ್ದಾರೆ. ಅಕ್ಟೋಬರ್ 11ರಿಂದ ಅಂದರೆ ಸಿನಿಮಾ ಬಿಡುಗಡೆಯಾಗುವುದಕ್ಕೆ ಒಂದು ವಾರ ಮೊದಲಿನಿಂದಲೇ ನೀವು ಆನ್‍ಲೈನ್‍ನಲ್ಲಿ ದಿ ವಿಲನ್‍ಗೆ ಟಿಕೆಟ್ ಬುಕ್ ಮಾಡಬಹುದು. ಸಿ.ಆರ್.ಮನೋಹರ್ ನಿರ್ಮಾಣದ ಚಿತ್ರ ಏಕಕಾಲದಲ್ಲಿ ತೆಲುಗು ಹಾಗೂ ತಮಿಳಿನಲ್ಲೂ ರಿಲೀಸ್ ಆಗಲಿದೆ. 1000+ ಚಿತ್ರಮಂದಿರಗಳಲ್ಲಿ ಸಿನಿಮಾ ರಿಲೀಸ್ ಮಾಡೋಕೆ ಸಿದ್ಧರಾಗಿದ್ದಾರೆ ನಿರ್ಮಾಪಕ ಸಿ.ಆರ್.ಮನೋಹರ್.

 • ವಿಲನ್ ಪ್ರೇಮ್​ಗೆ ಶಹಬ್ಬಾಸ್ ಎಂದ ಸುದೀಪ್

  sudeep praises prem

  ಕಿಚ್ಚ ಸುದೀಪ್ ಮತ್ತು ಶಿವರಾಜ್ ಕುಮಾರ್ ಅಭಿನಯಿಸುತ್ತಿರುವ 'ದಿ ವಿಲನ್' ಶೂಟಿಂಗ್​ ಬ್ಯಾಂಕಾಕ್​ನಲ್ಲಿ ಭರ್ಜರಿಯಾಗಿ ಸಾಗಿದೆ. ಪ್ರೇಮ್ ಕೆಲಸದ ವೈಖರಿಗೆ ಸುದೀಪ್ ಖುಷಿಗೊಂಡಿದ್ದಾರೆ. 

  ಸದ್ಯ, ಬ್ಯಾಂಕಾಕ್ ಶೂಟಿಂಗ್ನಲ್ಲಿರುವ ಸುದೀಪ್, ಬ್ಯಾಂಕಾಕ್ ಚಿತ್ರೀಕರಣದ ಅನುಭವ ಅದ್ಭುತ ಎಂದು ಹೇಳಿದ್ದಾರೆ. ''ಬ್ಯಾಂಕಾಕ್​ನಲ್ಲಿ ಚಿತ್ರೀಕರಣ ಅದ್ಭುತವಾಗಿತ್ತು. ಅಲ್ಲಿನ ವ್ಯವಸ್ಥೆ, ಪ್ರೊಡಕ್ಷನ್ ಕೆಲಸ, ಇಡೀ ಚಿತ್ರತಂಡ ಮತ್ತು ತಾಂತ್ರಿಕವರ್ಗದ ಕೆಲಸಗಳು ಉತ್ತಮವಾಗಿದ್ದವು'' ಎಂದು ಟ್ವೀಟ್ ಮಾಡಿದ್ದಾರೆ.

  ಮುಂದಿನ 10 ದಿನ ಚೇಸಿಂಗ್ ದೃಶ್ಯಗಳನ್ನ ಶೂಟ್ ಮಾಡುತ್ತಿದ್ದೇವೆ. ಚಿತ್ರದ ಸ್ಟೋರಿ ಬೋರ್ಡ್ ನೋಡಿದೆ. ಸಖತ್ ಥ್ರಿಲ್ಲಿಂಗ್. ಚಿತ್ರೀಕರಣದಲ್ಲಿ ಭಾಗಿಯಾಗಲು ಕಾತುರದಿಂದ ಕಾಯುತ್ತಿದ್ದೇನೆ'' ಎಂದಿದ್ದಾರೆ ಸುದೀಪ್.

  ಸುದೀಪ್ ಹೊಗಳಿಕೆ, ದಿ ವಿಲನ್ ಚಿತ್ರದ ಬಗ್ಗೆ ಇದ್ದ ನಿರೀಕ್ಷೆಯನ್ನ ಇನ್ನಷ್ಟು ಹೆಚ್ಚಿಸಿದೆ.

  Related Articles :-

  Amy Jackson Joins The Villain

  Storm Hampers The Shooting Of The Villain

  Sudeep Joins The Villain Second Schedule

  Mithun Chakraborty Joins The Sets Of The Villain

  Amy Jackson Is The Heroine For The Villain

  Puneeth Visits The Villain Set - Exclusive

  First look Of The Villain Released

  First Look Of The Villain Today Night At 7 PM

  First Look Of The Villain On April 1st

  Sudeep Starts Shooting For The Villain

  Sruthi Hariharan For 'The Villain'

  The Villain Starting Next Week

   

 • ವಿಲನ್ ಮೂಲಕ ರಕ್ಷಿತಾ ರೀ ಎಂಟ್ರಿ

  rakshitha re entry with the villan

  ಅಪ್ಪು ಮೂಲಕ ಬೆಳ್ಳಿತೆರೆಗೆ ಕಾಲಿಟ್ಟ ರಕ್ಷಿತಾ, ಕನ್ನಡ ಚಿತ್ರರಂಗ ಅಷ್ಟೇ ಅಲ್ಲ, ತೆಲುಗು, ತಮಿಳುನಲ್ಲೂ ಹವಾ ಸೃಷ್ಟಿಸಿದ್ದವರು. ಮದುವೆಯಾದ ಮೇಲೆ ಅಪ್ಪಟ ಗೃಹಿಣಿಯಾದ ರಕ್ಷಿತಾ ಕಿರುತೆರೆಗಷ್ಟೇ ಸೀಮಿತರಾಗಿಬಿಟ್ಟಿದ್ದಾರೆ. ಈಗ ಮತ್ತೊಮ್ಮೆ ಬೆಳ್ಳಿತೆರೆಗೆ ಎಂಟ್ರಿ ಕೊಡುತ್ತಿದ್ದಾರೆ. ನಟಿಯಾಗಿ ಅಲ್ಲ, ಕಂಠದಾನ ಕಲಾವಿದೆಯಾಗಿ.

  ದಿ ವಿಲನ್ ಚಿತ್ರದ ನಾಯಕಿ ಆ್ಯಮಿ ಜಾಕ್ಸನ್‍ಗೆ ಧ್ವನಿ ನೀಡುತ್ತಿರುವುದು ರಕ್ಷಿತಾ. ಯಾರ್ಯಾರದ್ದೋ ಧ್ವನಿ ಟೆಸ್ಟ್ ಮಾಡಿದ್ದ ಪ್ರೇಮ್‍ಗೆ, ಅದ್ಯಾವುದೂ ಇಷ್ಟವಾಗದೆ ಕೊನೆಗೆ ಓಕೆಯಾಗಿದ್ದು ರಕ್ಷಿತಾ ಅವರ ಧ್ವನಿ. ರಕ್ಷಿತಾ ಧ್ವನಿ ಡಿಫರೆಂಟಾಗಿದೆ ಅನ್ನೋ ಕಾರಣಕ್ಕೆ ರಕ್ಷಿತಾ ಅವರ ಧ್ವನಿಯನ್ನೇ ಫೈನಲ್ ಮಾಡಿದ್ದಾರೆ ಪ್ರೇಮ್. ಇದುವರೆಗೆ ತಮ್ಮ ಪಾತ್ರಕ್ಕಷ್ಟೇ ಧ್ವನಿ ನೀಡಿದ್ದ ರಕ್ಷಿತಾ, ಈ ಚಿತ್ರದ ಮೂಲಕ ಬೇರೊಬ್ಬರ ಪಾತ್ರಕ್ಕೂ ಧ್ವನಿ ಕೊಡುವ ಸಾಹಸಕ್ಕೆ ಕೈ ಹಾಕಿದ್ದಾರೆ.

  ಅಂದಹಾಗೆ ರಕ್ಷಿತಾ ಅವರ ಧ್ವನಿಯನ್ನು ಆ್ಯಮಿ ಜಾಕ್ಸನ್ ಪಾತ್ರಕ್ಕೆ ಹೊಂದುತ್ತೆ ಎಂದು ಗುರುತಿಸಿದ ಮೊದಲಿಗರು ಪ್ರೇಮ್ ಅಲ್ಲ, ನಿರ್ದೇಶಕ ಮಹೇಶ್ ಬಾಬು ಹಾಗೂ ಸೌಂಡ್ ಎಂಜಿನಿಯರ್ ಆನಂದ್ ಅಂತೆ. ಒಟ್ಟಿನಲ್ಲಿ ಶಿವರಾಜ್‍ಕುಮಾರ್, ಸುದೀಪ್ ಕಾಂಬಿನೇಷನ್‍ನ ಅದ್ಧೂರಿ ಚಿತ್ರಕ್ಕೆ ಮತ್ತೊಬ್ಬ ಸ್ಟಾರ್ ಎಂಟ್ರಿ ಕೊಟ್ಟಿದ್ದಾರೆ.

 • ವಿಲನ್ ವಿಳಂಬಕ್ಕೆ ಪ್ರೇಮ್ ಕಾರಣ ಅಲ್ಲ - ಸುದೀಪ್

  the villain delay issue clarified by sudeep

  ದಿ ವಿಲನ್ ವಿಳಂಬಕ್ಕೆ ಯಾರು ಕಾರಣ ಎಂಬ ಬಗ್ಗೆ ಶಿವರಾಜ್‍ಕುಮಾರ್ ಮಾತನಾಡಿದ್ದರು. ಅವರು ನೇರವಾಗಿ ಪ್ರೇಮ್ ಅವರೇ ಕಾರಣ ಎಂದೇನೂ ಹೇಳಿರಲಿಲ್ಲ. ಆದರೆ, ಚಿತ್ರವನ್ನು ನಿರ್ದೇಶಿಸಲು ಹೊರಡುವಾಗ ನಿರ್ದೇಶಕರಿಗೆ ಒಂದು ಪ್ಲಾನ್ ಇರಬೇಕು ಎಂಬರ್ಥದಲ್ಲಿ ಮಾತನಾಡಿದ್ದರು. ಈ ಕುರಿತು ಚಿತ್ರಲೋಕ ಕೂಡಾ ವರದಿ ಮಾಡಿತ್ತು.

  ಈ ವರದಿಗೆ ಪ್ರತಿಕ್ರಿಯೆ ನೀಡಿರುವ ಸುದೀಪ್, `ದಿ ವಿಲನ್' ವಿಳಂಬಕ್ಕೆ ಪ್ರೇಮ್ ಒಬ್ಬರನ್ನೇ ದೂಷಿಸುವುದು ಸರಿಯಲ್ಲ ಎಂದಿದ್ದಾರೆ. ಪ್ರೇಮ್ ಒಬ್ಬ ಫ್ಯಾಷನೇಟ್ ನಿರ್ದೇಶಕ. ಅವರು ಪ್ಲಾನ್ ಇಲ್ಲದೆ ಚಿತ್ರವನ್ನು ಶುರು ಮಾಡಿಲ್ಲ. ಸನ್ನಿವೇಶ ಹಾಗೂ ಪರಿಸ್ಥಿತಿಗಳು ಇದಕ್ಕೆಲ್ಲ ಕಾರಣ. ಪ್ರೇಮ್ ಒಬ್ಬರನ್ನೇ ದೂಷಿಸುವುದು ಸರಿಯಲ್ಲ ಎಂದಿದ್ದಾರೆ ಸುದೀಪ್.

  `ದಿ ವಿಲನ್' ಹೇಳಿಕೇಳಿ ಶಿವರಾಜ್‍ಕುಮಾರ್, ಸುದೀಪ್ ಹಾಗೂ ಪ್ರೇಮ್ ಕಾಂಬಿನೇಷನ್ನಿನ ಸಿನಿಮಾ. ಒಂದೊಂದು ದಿನ ವಿಳಂಬವಾದಷ್ಟೂ ಅಭಿಮಾನಿಗಳ ನಿರೀಕ್ಷೆ, ಕುತೂಹಲ ಹೆಚ್ಚುತ್ತಲೇ ಹೋಗುತ್ತೆ. ಕೇವಲ ಕಾಂಬಿನೇಷನ್ ಕಾರಣಕ್ಕೇ ದಿ ವಿಲನ್ ಚಿತ್ರ ಮೌಂಟ್‍ಎವರೆಸ್ಟ್‍ನಷ್ಟು ಎತ್ತರದ ನಿರೀಕ್ಷೆ ಮೂಡಿಸಿರುವುದು ನಿಜ. 

  ಇನ್ನು ಚಿತ್ರದಲ್ಲಿ ತೊಡಗಿಸಿಕೊಂಡಿರುವ ಸುದೀಪ್, ಶಿವರಾಜ್‍ಕುಮಾರ್, ಪ್ರೇಮ್, ನಿರ್ಮಾಪಕ ಮನೋಹರ್ ಸೇರಿದಂತೆ ಪ್ರತಿಯೊಬ್ಬರೂ ಸಿನಿಮಾ ಹುಚ್ಚರೇ. ಏನೇ ಮಾಡಿದರೂ ಅದ್ಭುತವಾಗಿ ಮಾಡಬೇಕು ಎನ್ನುವವರು. ಸಿನಿಮಾ ಆದಷ್ಟು ಬೇಗ ತೆರೆ ಕಾಣಲಿ.

 • ವಿಷ್ಣು ಹಬ್ಬಕ್ಕೆ ಸುದೀಪ್ ಗಾಯನ

  sudeep to sing at vishnu rastriya utsava

  ವಿಷ್ಣುವರ್ಧನ್ ಹುಟ್ಟುಹಬ್ಬವನ್ನು ರಾಷ್ಟ್ರೀಯ ಹಬ್ಬದಂತೆ ಆಚರಿಸಲಾಗುತ್ತಿದೆ. ವಿಷ್ಣು ಸೇನಾ ಸಮಿತಿ, ಸೆಪ್ಟೆಂಬರ್ 16,17 ಹಾಗೂ 18ರಂದು 3 ದಿನ ವಿಷ್ಣು ಜಯಂತಿಗಾಗಿ ವಿಶೇಷ, ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಈ ಕಾರ್ಯಕ್ರಮದಲ್ಲಿ ವಿಷ್ಣು ಅವರಿಗಾಗಿಯೇ ವಿಶೇಷ ಹಾಡು ರಚಿಸಲಾಗಿದ್ದು, ಆ ಗೀತೆಯನ್ನು ವಿಷ್ಣು ಅಭಿಮಾನಿಯೂ ಆಗಿರುವ ಕಿಚ್ಚ ಸುದೀಪ್ ಹಾಡುತ್ತಿದ್ದಾರೆ.

  ಕೆ. ಕಲ್ಯಾಣ್ ಸಾಹಿತ್ಯ ರಚಿಸಿ, ಸಂಗೀತ ನೀಡಿರುವ ಹಾಡಿನ ರೆಕಾರ್ಡಿಂಗ್, ಹೈದರಾಬಾದ್‍ನಲ್ಲಿ ನಡೆಯಲಿದೆ. ಉತ್ಸವ ಗೀತೆಗೆ ಧ್ವನಿಯಾಗುತ್ತಿರುವುದಷ್ಟೇ ಅಲ್ಲ, ವಿಷ್ಣು ಉತ್ಸವಕ್ಕೆ ಈ ಬಾರಿ ಸುದೀಪ್ ಅವರೇ ಚಾಲನೆ ನೀಡುತ್ತಿದ್ದಾರೆ.

 • ವಿಷ್ಣುವರ್ಧನ್ ಅವರ ಸಮಾದಿ ಪುಣ್ಯ ಭೂಮಿ - ಸುದೀಪ್

  sudeep request cm for vishnu memorial in mysore

  ವಿಷ್ಣುವರ್ಧನ್ ಅವರ ಸಮಾಧಿ ಇರುವುದು ಅಭಿಮಾನ್ ಸ್ಟುಡಿಯೋದಲ್ಲಿ. ಅಲ್ಲಿಂದ ಸಮಾಧಿಯನ್ನು ಮೈಸೂರಿಗೆ ಸ್ಥಳಾಂತರಿಸಿ ಅಲ್ಲಿ ಸ್ಮಾರಕ ನಿರ್ಮಿಸಬೇಕು ಎಂಬ ವಾದ ಒಂದು ಕಡೆ, ಸಮಾಧಿ ಇಲ್ಲಿಯೇ ಇರಲಿ, ಸ್ಮಾರಕವೂ ಇಲ್ಲಿಯೇ ಆಗಲಿ ಎನ್ನುವ ಹೋರಾಟ ಮತ್ತೊಂದು ಕಡೆ. ಈ ಎರಡು ವಾದಗಳ ಮಧ್ಯೆ ವಿಷ್ಣುವರ್ಧನ್ ಸ್ಮಾರಕದ ಕನನು ಕನಸಾಗಿಯೇ ಉಳಿದುಬಿಟ್ಟಿದೆ.

  ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯನವರನ್ನು ಭೇಟಿ ಮಾಡಿರುವ ಕಿಚ್ಚ ಸುದೀಪ್, ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣ ಹೋರಾಟಕ್ಕೆ ಮತ್ತೆ ಬಲ ತಂದಿದ್ದಾರೆ. ಅವರು ಸಿದ್ದರಾಮಯ್ಯನವರನ್ನು ಕೇಳಿರುವುದು ಇಷ್ಟೆ. ವಿಷ್ಣು ಅವರ ಸಮಾಧಿ ಇರುವ ಜಾಗ ಪುಣ್ಯಭೂಮಿ. ಅದನ್ನು ಯಾವುದೇ ಕಾರಣಕ್ಕೂ ಸ್ಥಳಾಂತರಿಸುವುದು ಬೇಡ. ಬಾಲಕೃಷ್ಣ ಅವರ ಕುಟುಂಬಕ್ಕೆ ಪರಿಹಾರವನ್ನು ಕೊಡಿ. ಅವರ ಕುಟುಂಬದ ಮೇಲೆ ಸರ್ಕಾರ ಹಾಕಿರುವ ಕೇಸ್​ಗಳನ್ನು ವಾಪಸ್ ತೆಗೆದಕೊಂಡರೆ ವಿವಾದ ಬಗೆಹರಿಯಬಹುದು. ಖುದ್ದು ನೀವೇ ಸಂಧಾನ ನಡೆಸಿ, ಮಾತನಾಡಿದರೆ, ಬಾಲಕೃಷ್ಣ ಕುಟುಂಬಸ್ಥರು ಒಪ್ಪಿಯೇ ಒಪ್ಪುತ್ತಾರೆ ಎಂದು ಸಿದ್ದರಾಮಯ್ಯನವರಿಗೆ ಮನವಿ ಮಾಡಿದ್ದಾರೆ ಸುದೀಪ್.

  ಸಮಾಧಿ ಜಾಗದ ಸಮಸ್ಯೆಯೊಂದನ್ನು ಬಗೆಹರಿಸಿಬಿಡಿ. ಆ ಜಾಗವನ್ನು ನಮಗೆ ಕೊಡಿ. ವಿಷ್ಣು ಅಭಿಮಾನಿಗಳೊಂದಿಗೆ ನಾವು ಆ ಜಾಗವನ್ನು ಅಭಿವೃದ್ಧಿಪಡಿಸುತ್ತೇವೆ. ಇದನ್ನು ಹೊರತುಪಡಿಸಿ, ಸರ್ಕಾರ ಮಾಡಲು ಉದ್ದೇಶಿಸಿರುವ ಸ್ಮಾರಕವನ್ನು ಎಲ್ಲಿ ಬೇಕಾದರೂ ನಿರ್ಮಿಸಿ. ಅದಕ್ಕೆ ನಮ್ಮ ತಕರಾರಿಲ್ಲ ಎಂದಿದ್ದಾರೆ ಸುದೀಪ್. 

  ವಿಷ್ಣುವರ್ಧನ್ ನಿಧನರಾಗಿ ಇದೇ ಡಿಸೆಂಬರ್ 30ಕ್ಕೆ 8 ವರ್ಷ ತುಂಬಲಿದೆ. ಆದರೆ, ಸಮಾಧಿಯ ಜಾಗದಲ್ಲಿ ವಿಷ್ಣು ಅವರ ನೆನಪಿಗಾಗಿ ಏನೆಂದರೆ ಏನೂ ಇಲ್ಲ. ಹೀಗಾಗಿಯೇ, ಅದರ ಜವಾಬ್ದಾರಿಯನ್ನು ಅಭಿಮಾನಿಗಳ ಜೊತೆ ಸ್ವತಃ ತಾವು ಹೊತ್ತುಕೊಳ್ಳೋದಾಗಿ ಹೇಳಿದ್ದಾರೆ ಸುದೀಪ್. ಹಾಗೆಂದು ಸರ್ಕಾರ ನಿರ್ಮಿಸಲು ಉದ್ದೇಶಿಸಿರುವ ವಿಷ್ಣು ಅವರ ಸ್ಮಾರಕಕ್ಕೆ ಯಾವುದೇ ವಿರೋಧ ವ್ಯಕ್ತಪಡಿಸಿಲ್ಲ ಎನ್ನುವುದು ಗಮನಾರ್ಹ. ಅಭಿಮಾನವೆಂದರೆ ಇದೇ ಅಲ್ಲವೆ.

 • ವೆಬ್ ಸಿರೀಸ್ ಲೋಕಕ್ಕೆ ಕಿಚ್ಚನ ಎಂಟ್ರಿ

  sudeep to enter web series

  ಕಿಚ್ಚ ಸುದೀಪ್, ವೆಬ್ ಸಿರೀಸ್ ಲೋಕಕ್ಕೆ ಕಾಲಿಟ್ಟಿದ್ದಾರೆ. ನೆಟ್‍ಫ್ಲಿಕ್ಸ್ ಡಿಜಿಟಲ್ ತಾಣಕ್ಕೆ ವೆಬ್ ಸಿರೀಸ್ ನಿರ್ಮಾಣ ಮಾಡಿಕೊಡಲು ಸುದೀಪ್ ಒಪ್ಪಿಕೊಂಡಿದ್ದಾರೆ. ಅಂಬಿ ನಿಂಗ್ ವಯಸ್ಸಾಯ್ತೋ ಚಿತ್ರದ ನಿರ್ದೇಶಕ ಗುರುದತ್ ಗಾಣಿಗ, ವೆಬ್ ಸಿರೀಸ್‍ನ ನಿರ್ದೇಶಕ. ನಿರ್ಮಾಪಕರು ಕಿಚ್ಚ ಸುದೀಪ್.

  ನಾವಿನ್ನೂ ಪೈಲಟ್ ಎಪಿಸೋಡ್ ಮಾಡಿಕೊಡಬೇಕು. ಅದಾದ ಮೇಲೆ ಫೈನಲ್ ಆಗಲಿದೆ ಎಂದಿದ್ದಾರೆ ಗುರುದತ್ ಗಾಣಿಗ.

   

 • ವ್ಯಾಯಾಮ ಹೇಳಿಕೊಡುತ್ತಿದ್ದಾರೆ ಅಂಬರೀಷ್

  ambi is gym trainer

  ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರ ಭಾರಿ ಸದ್ದು ಮಾಡುತ್ತಿದೆ. ಅಂಬರೀಷ್ & ಸುದೀಪ್ ಕಾಂಬಿನೇಷನ್ ಎಂಬುದೇ ಸೆನ್ಸೇಷನ್ ಸೃಷ್ಟಿಸಿದೆ. ಜೊತೆಗೆ, ಅಂಬರೀಷ್ ಅವರು ಅಭಿಮಾನಿಗಳಿಗಾಗಿಯೇ ಒಂದು ಪತ್ರ ಬರೆದು, ಕುತೂಹಲ ಮತ್ತು ನಿರೀಕ್ಷೆ ಎರಡನ್ನೂ ಹೆಚ್ಚಿಸಿಬಿಟ್ಟಿದ್ದಾರೆ.

  ಚಿತ್ರದ ಶೂಟಿಂಗ್ ಶುರುವಾಗಿದೆ. ಚಿತ್ರದಲ್ಲಿ ಅಂಬರೀಷ್ ಅವರದ್ದು ಸ್ಟಂಟ್‍ಮ್ಯಾನ್ ಪಾತ್ರ. ನಿವೃತ್ತಿಯಾದರೂ ವೃತ್ತಿ ಬಿಡಲು ಇಷ್ಟವಿರಲ್ಲ. ಮಗ ದೊಡ್ಡ ಹುದ್ದೆಯಲ್ಲಿದ್ದರೂ ಸ್ವಾಭಿಮಾನದಿಂದ ಬದುಕುವ ಅಂಬಿ, ಜಿಮ್ ಟ್ರೈನರ್ ಆಗಿ ಕೆಲಸ ಮುಂದುವರೆಸುತ್ತಾರೆ. ಈ ಭಾಗದ ಚಿತ್ರೀಕರಣ ಈಗ ಜೆಪಿ ನಗರದ ಜಿಮ್‍ವೊಂದರಲ್ಲಿ ಶುರುವಾಗಿದೆ. 

  ಗುರುದತ್ ಗಾಣಿಗ ಎಂಬುವರು ನಿರ್ದೇಶಿಸುತ್ತಿರುವ ಚಿತ್ರ, ಕಿಚ್ಚ ಕ್ರಿಯೇಷನ್ಸ್ ಬ್ಯಾನರ್‍ನಲ್ಲಿ ಬರುತ್ತಿದೆ. ನಿರ್ಮಾಪಕರು ಜಾಕ್ ಮಂಜು. ಅಂಬಿಗೆ ಸುಹಾಸಿನಿ ನಾಯಕಿ.

 • ವ್ಹಾವ್.. ವಾಟ್ ಎ ಫಿಲಂ.. ಇದು ಕಿಚ್ಚನ ಕರಾಳ ರಾತ್ರಿ ವಿಮರ್ಶೆ

  kiccha sudeep appreciates karala ratri

  ಕರಾಳ ರಾತ್ರಿ. ದಯಾಳ್ ಪದ್ಮನಾಭ್ ನಿರ್ದೇಶನದ ಸಿನಿಮಾ ಸೈಲೆಂಟ್ ಆಗಿ ಹಿಟ್ ಆದ ಚಿತ್ರ. ಜಯಕೀರ್ತಿ, ಅನುಪಮಾ ಗೌಡ, ರಂಗಾಯಣ ರಘು ನಟಿಸಿದ್ದ ಚಿತ್ರ, ಬಿಡುಗಡೆಯಾದ ಮೇಲೆ ಹಂತ ಹಂತವಾಗಿ ಪ್ರೇಕ್ಷಕರ ಹೃದಯ ಗೆಲ್ಲುತ್ತಾ ಹೋಯ್ತು. ಈಗ 25 ದಿನಗಳ ಯಶಸ್ವೀ ಪ್ರದರ್ಶನ ಮುಗಿಸಿ ಮುನ್ನುಗ್ಗುತ್ತಿದೆ.

  ಜೆಕೆ, ಕಿಚ್ಚ ಸುದೀಪ್‍ರ ಆತ್ಮೀಯ ಗೆಳೆಯ. ಗೆಳೆಯನ ಚಿತ್ರವೊಂದು ಸಕ್ಸಸ್ ಕಾಣುತ್ತಿರುವ ಖುಷಿಗೆ, ಚಿತ್ರವನ್ನು ನೋಡಿರುವ ಸುದೀಪ್, ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. 

  ಜೆಕೆ, ಸಿನಿಮಾವನ್ನು ನನಗೆ ತೋರಿಸಲು ಇಷ್ಟಪಟ್ಟಿದ್ದರು. ಸಮಯ ಹೊಂದಿಸಿಕೊಳ್ಳೋಕೆ ಆಗಲಿಲ್ಲ. ಚಿತ್ರವನ್ನು ನೋಡಿದಾಗ ಥ್ರಿಲ್ ಆಗಿ ಹೋದೆ. ಅತ್ಯಂತ ಕಡಿಮೆ ಪಾತ್ರಗಳು, ಪ್ರತಿಕ್ಷಣವೂ ನಮ್ಮನ್ನು ಚಿತ್ರದೊಳಗೆ ಕೂರಿಸಿಕೊಳ್ಳುವ ಚಿತ್ರಕಥೆ, ಸತ್ಯ ಗೊತ್ತಾದಾಗ ನಮ್ಮನ್ನು ಬೆಚ್ಚಿಬೀಳಿಸುತ್ತೆ. ಸೀಟ್‍ನ ತುದಿಗೆ ಕೂರುವಂತೆ ಮಾಡುತ್ತೆ.ಇಂಥಾದ್ದೊಂದು ಚಿತ್ರದಲ್ಲಿ ನಟಿಸಿದ ಕಲಾವಿದರು, ನಿರ್ದೇಶಕರು, ತಂತ್ರಜ್ಞರು ಎಲ್ಲರಿಗೂ ಹ್ಯಾಟ್ಸಾಫ್.

  ರಂಗಾಯಣ ರಘು, ಕನ್ನಡ ಚಿತ್ರರಂಗಕ್ಕೆ ದೊಡ್ಡದೊಂದು ಉಡುಗೊರೆ. ಅದು ಈ ಚಿತ್ರದಲ್ಲಿ ಮತ್ತೊಮ್ಮೆ ಸಾಬೀತಾಗಿದೆ. ವೀಣಾ ಸುಂದರ್ ಅಭಿನಯವಂತೂ ವಂಡರ್‍ಫುಲ್. ಅನುಪಮಾ ಅವರದ್ದಂತೂ 100 ಚಿತ್ರಗಳಲ್ಲಿ ನಟಿಸಿರುವ ಕಲಾವಿದರಂತೆ ಪ್ರಬುದ್ಧರಾಗಿ ನಟಿಸಿದ್ದಾರೆ. ಮೊದಲ ಚಿತ್ರದಲ್ಲೇ ಕಠಿಣ ಸವಾಲು ಸ್ವೀಕರಿಸಿ ಗೆದ್ದಿದ್ದಾರೆ. ಆಕೆಗೆ ಅತ್ಯುತ್ತಮ ಭವಿಷ್ಯವಿದೆ. ಇನ್ನು ಜೆಕೆ, ಈ ಚಿತ್ರದಲ್ಲಿ ನನಗೂ ಸರ್‍ಪ್ರೈಸ್ ಕೊಟ್ಟಿದ್ದಾರೆ. ಅವರ ಇನ್‍ವಾಲ್ವ್‍ಮೆಂಟ್, ಪಾತ್ರಕ್ಕೆ ತಮ್ಮನ್ನು ಒಗ್ಗಿಸಿಕೊಂಡಿರುವ ರೀತಿ ಅಮೋಘ.

  ನಿರ್ದೇಶಕ ದಯಾಳ್.. ಅವರಂತೂ ಎಕ್ಸಲೆಂಟ್. ಬೂದುಗನ್ನಡಿ ಹಾಕಿಕೊಂಡು ತಪ್ಪು ಹುಡುಕೋಣ ಎಂದು ಕೊಂಡೆ. ಝೂಮ್ ಲೆನ್ಸ್ ಫೇಲ್ ಆಯ್ತು. ಕಂಗ್ರಾಟ್ಸ್ ದಯಾಳ್. ನಾರಾಯಣ್ ಅವರ ಹಿನ್ನೆಲೆ ಸಂಗೀತವಂತೂ ಅದ್ಭುತ.

  ಯಾವುದೇ ಸಿನಿಮಾ ನೋಡಿದಾಗ ಅದು ಕಂಪ್ಲೀಟ್ ಎನಿಸುವುದಿಲ್ಲ. ಯಾವುದಾದರೊಂದು ಸಣ್ಣ ತಪ್ಪಾದರೂ ಕಾಣಿಸುತ್ತೆ. ಆದರೆ, ಈ ಚಿತ್ರವನ್ನು ನೋಡಿ. ವ್ಹಾವ್.. ವ್ಹಾಟ್ ಎ ಫಿಲ್ಮ್ ಅಂತೀರಿ.

  ಇದು ಕಿಚ್ಚ ಸುದೀಪ್ ಕರಾಳ ರಾತ್ರಿಗೆ ಬರೆದಿರುವ ವಿಮರ್ಶೆ. ಸಿನಿಮಾ ನಿಜಕ್ಕೂ ಥ್ರಿಲ್ಲಿಂಗ್ ಆಗಿದೆ ಅನ್ನೋದು ಸುದೀಪ್ ಮಾತು. 

 • ಶಿವಣ್ಣ V/s ಸುದೀಪ್ V/s ರಕ್ಷಿತ್ ಶೆಟ್ಟಿ V/s ಶ್ರೀಮುರಳಿ

  its clash of legends in august

  ಆಗಸ್ಟ್ ತಿಂಗಳು ಸ್ಯಾಂಡಲ್‍ವುಡ್‍ನ ಪೈಪೋಟಿಯ ತಿಂಗಳಾಗುವ ಎಲ್ಲ ಲಕ್ಷಣಗಳೂ ಗೋಚರವಾಗುತ್ತಿವೆ. 2019ರ ಸೆಮಿಫೈನಲ್ ತಿಂಗಳು ಆಗಸ್ಟ್ ಆದರೆ ಅಚ್ಚರಿಯಿಲ್ಲ. ಏಕೆ ಗೊತ್ತೇ.. ಕನ್ನಡ ಚಿತ್ರರಂಗದ ಸ್ಟಾರ್ ನಟರ ಚಿತ್ರಗಳು ಅದೇ ತಿಂಗಳು ರಿಲೀಸ್ ಆಗುತ್ತಿವೆ.

  ವರಮಹಾಲಕ್ಷ್ಮಿ ಹಬ್ಬಕ್ಕೆ ಸುದೀಪ್ ಅಭಿನಯದ ಕೃಷ್ಣ ನಿರ್ದೇಶನದ ಪೈಲ್ವಾನ್ ತೆರೆಗೆ ಬರುತ್ತಿದೆ.

  ಅದೇ ತಿಂಗಳು ರಕ್ಷಿತ್ ಶೆಟ್ಟಿ ಅಭಿನಯದ ಪುಷ್ಕರ್ ಮಲ್ಲಿಕಾರ್ಜುನಯ್ಯ, ಪ್ರಕಾಶ್ ಗೌಡ ನಿರ್ಮಾಣದ ಅವನೇ ಶ್ರೀಮನ್ನಾರಾಯಣ ಚಿತ್ರವೂ ರಿಲೀಸ್ ಆಗುತ್ತಿದೆ.

  ಪೈಲ್ವಾನ್ 9 ಭಾಷೆಗಳಲ್ಲಿ ರಿಲೀಸ್ ಆದರೆ, ಅವನೇ ಶ್ರೀಮನ್ನಾರಾಯಣ 5 ಭಾಷೆಗಳಲ್ಲಿ ರಿಲೀಸ್ ಆಗಲಿದೆ.

  ಈ ಇಬ್ಬರದ್ದಷ್ಟೇ ಅಲ್ಲ, ಆಗಸ್ಟ್ ಹೊತ್ತಿಗೆ ಶಿವರಾಜ್ ಕುಮಾರ್ ಅಭಿನಯದ ಆನಂದ್ ಕೂಡಾ ರಿಲೀಸ್ ಆಗಲಿದೆ. ದ್ವಾರಕೀಶ್ ಬ್ಯಾನರ್‍ನಲ್ಲಿ ಇದೇ ಮೊದಲ ಬಾರಿಗೆ ಶಿವಣ್ಣ ನಟಿಸಿರುವ, ವಾಸು ನಿರ್ದೇಶನದ ಸಿನಿಮಾ ಅದು. 

  ಇದಕ್ಕೆ ಕಳಶವಿಟ್ಟಂತೆ ಶ್ರೀಮುರಳಿ ಭರಾಟೆಯೂ ಅದೇ ತಿಂಗಳು ಶುರುವಾಗಲಿದೆ. ನಿರ್ದೇಶಕ ಚೇತನ್ ಕುಮಾರ್ ಬಹದ್ದೂರ್, ಭರ್ಜರಿ ನಂತರ ಹ್ಯಾಟ್ರಿಕ್ ನಿರೀಕ್ಷೆಯಲ್ಲಿರುವ ಸಿನಿಮಾ ಭರಾಟೆ.

  ಸದ್ಯಕ್ಕೆ ಆಗಸ್ಟ್ ಕ್ಯೂನಲ್ಲಿರುವ ಚಿತ್ರಗಳಿವು. ಇವುಗಳ ಜೊತೆಗೆ ಇನ್ನಷ್ಟು ಚಿತ್ರಗಳು ಜೊತೆಯಾದರೂ ಅಚ್ಚರಿಯಿಲ್ಲ.

 • ಶಿವಣ್ಣ ಜೊತೆ ಹೆಜ್ಜೆ ಹಾಕಿದ ಸುಂದರಿಯರ ಮಾತು

  shivanna dances sandalwood beauties

  ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್, ಅದ್ಭುತ ಡ್ಯಾನ್ಸರ್ ಎಂಬುದು ಕನ್ನಡಿಗರೆಲ್ಲರಿಗೂ ಗೊತ್ತಿರುವ ವಿಚಾರವೇ. ದಿ ವಿಲನ್ ಚಿತ್ರದಲ್ಲಿ ಶಿವಣ್ಣ ಜೊತೆ ಹಲವು ಸುಂದರಿಯರು ಹೆಜ್ಜೆ ಹಾಕಿದ್ದಾರೆ. ರಚಿತಾ ರಾಮ್, ಶ್ರದ್ಧಾ ಶ್ರೀನಾಥ್, ರಾಧಿಕಾ ಚೇತನ್, ಭಾವನಾ ರಾವ್, ಸಂಯುಕ್ತಾ ಹೊರನಾಡು, ಶಾನ್ವಿ ಶ್ರೀವಾಸ್ತವ್.. ಶಿವಣ್ಣ ಜೊತೆ ಸ್ಟೆಪ್ ಹಾಕಿರುವ ನಟಿಯರು. ಇವರಿಗೆಲ್ಲ ಒನ್ಸ್ ಎಗೇಯ್ನ್ ಅಚ್ಚರಿಯಾಗಿರುವುದು ಶಿವರಾಜ್‍ಕುಮಾರ್ ಅವರ ಎನರ್ಜಿ. 

  ಶಿವಣ್ಣ ಜೊತೆ ಕಾಣಿಸಿಕೊಳ್ಳೋದೇ ಹೆಮ್ಮೆಯ ಸಂಗತಿ. ನಾನಂತೂ ಎಕ್ಸೈಟ್ ಆಗಿದ್ದೇನೆ. ನರ್ವಸ್ ಕೂಡಾ ಆಗಿದ್ದೇನೆ.

  ರಾಧಿಕಾ ಚೇತನ್

  ಇದು ಸುದೀಪ್, ಶಿವರಾಜ್‍ಕುಮಾರ್ ಸಿನಿಮಾ ಅನ್ನೋ ಕಾರಣಕ್ಕೆ ಒಪ್ಪಿಕೊಂಡೆ. ಶೂಟಿಂಗ್ ತುಂಬಾ ಚೆನ್ನಾಗಿತ್ತು. ಆದರೆ, ಶಿವಣ್ಣ ತುಂಬಾ ಫಾಸ್ಟ್ ಆಗಿ ಡ್ಯಾನ್ಸ್ ಮಾಡ್ತಾರೆ. ಅವರ ವೇಗಕ್ಕೆ ತಕ್ಕಂತೆ ಹೆಜ್ಜೆ ಹಾಕೋದು ಕಷ್ಟ.

  ಶ್ರದ್ಧಾ ಶ್ರೀನಾಥ್

  ಹಾಡು ರಿಚ್ ಆಗಿ ಮೂಡಿಬಂದಿದೆ. ಇನ್ನೂ ಕೆಲವು ಇಂಟ್ರೆಸ್ಟಿಂಗ್ ವಿಷಯಗಳಿವೆ. ಸದ್ಯಕ್ಕೆ ಅವುಗಳನ್ನು ನಾವು ಬಹಿರಂಗಪಡಿಸುವ ಹಾಗಿಲ್ಲ. 

  ಭಾವನಾ ರಾವ್

  ಶಿವಣ್ಣ ಅವರ ಎನರ್ಜಿಗೆ ತಕ್ಕಂತೆ ಸ್ಟೆಪ್ ಹಾಕೋದು ಅಷ್ಟು ಸುಲಭ ಅಲ್ಲ. ನನಗೆ ಶೂಟಿಂಗ್ ವೇಳೆ ಕಾಲಿಗೆ ಸ್ವಲ್ಪ ಗಾಯವಾಗಿತ್ತು. ಇದರಿಂದಾಗಿ ವೇಗವಾಗಿ ಹೆಜ್ಜೆ ಹಾಕೋಕೆ ಆಗ್ತಾ ಇರಲಿಲ್ಲ. ಆದರೆ, ಶೂಟಿಂಗ್ ಮುಗಿದ ಮೇಲೆ ಗೊತ್ತಾಗಿದ್ದೇನೆಂದರೆ, ಶಿವಣ್ಣಂಗೂ ಅದೇ ರೀತಿ ಆಗಿತ್ತು. ಆದರೆ, ಅದನ್ನು ಅವರು ತೋರಿಸಿಕೊಳ್ಳಲೇ ಇಲ್ಲ. 

  ಶಾನ್ವಿ ಶ್ರೀವಾಸ್ತವ್

  Related Articles :-

  ಶಿವಣ್ಣ ಜೊತೆಗೆ ಡ್ಯಾನ್ಸ್‍ಗೆ ಸ್ಯಾಂಡಲ್‍ವುಡ್ ಸುಂದರಿಯರು..!

 • ಶಿವಣ್ಣ ಸ್ಟಂಟ್ಸ್‍ಗೆ ವಿಲನ್ ಟೀಂ ಫಿದಾ

  shivarajkumar, prem

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸ್ಟಂಟ್ಸ್‍ಗಳನ್ನು ಡ್ಯೂಪ್ ಇಲ್ಲದೆ ಮಾಡ್ತಾರೆ ಅನ್ನೋದು ಹೊಸ ಸುದ್ದಿಯೇನೂ ಅಲ್ಲ. ಆದರೆ, ಈಗ.. 50 ದಾಟಿದ ಮೇಲೂ ಶಿವರಾಜ್ ಕುಮಾರ್ ಅವರು ಅದೇ ರೀತಿ ಡ್ಯೂಪ್ ಇಲ್ಲದೆ ಸ್ಟಂಟ್ ಮಾಡ್ತಾರೆ ಅಂದ್ರೆ, ಅಚ್ಚರಿ ಆಗದೇ ಇರುತ್ತಾ..?

  ದಿ ವಿಲನ್ ಚಿತ್ರದ ಸಾಹಸ ದೃಶ್ಯಗಳ ಶೂಟಿಂಗ್ ವೇಳೆ ಖುದ್ದು ನಿರ್ದೇಶಕ ಪ್ರೇಮ್ ಕೂಡಾ ಬೆರಗಾಗುವಂತೆ, ಸಾಹಸ ನಿರ್ದೇಶಕರು ಅಚ್ಚರಿ ಪಡುವಂತೆ ಸ್ಟಂಟ್ಸ್ ಮಾಡಿದ್ದಾರೆ ಶಿವರಾಜ್ ಕುಮಾರ್. ಅದೂ ಡ್ಯೂಪ್ ಇಲ್ಲದೆ.

  ಬ್ಯಾಂಕಾಕ್‍ನಲ್ಲಿ ಚಿತ್ರದ ಈ ಸಾಹಸ ದೃಶ್ಯಗಳ ಶೂಟಿಂಗ್ ನಡೆದಿದ್ದು, ಈ ಸಾಹಸವನ್ನು ಪಾರ್ಕರ್ ಚೇಸ್ ಎಂದು ಕರೀತಾರಂತೆ. ಯುವಕರ ಗ್ಯಾಂಗ್‍ನ್ನು ಬೆನ್ನತ್ತಿ ಹಿಡಿಯುವ ದೃಶ್ಯ ಅದು. ಭಾಗವಹಿಸಿದ್ದವರೆಲ್ಲ 25ರ ವಯಸ್ಸಿನ ಯುವಕರು. ಅವರೆಲ್ಲರನ್ನೂ ದಾಟಿ, ಶತ್ರುಗಳನ್ನು ಹಿಡಿಯುವ ದೃಶ್ಯದಲ್ಲಿ ಶಿವಣ್ಣ ಲೀಲಾಜಾಲವಾಗಿ ಅಭಿನಯಿಸಿದ್ದಾರೆ. 

 • ಶಿವಣ್ಣ, ಸುದೀಪ್ ಇಬ್ಬರಲ್ಲಿ ರಿಯಲ್ ವಿಲನ್ ಯಾರು..?

  who is the real villain in the villain

  ದಿ ವಿಲನ್ ಚಿತ್ರದ ಟ್ರೈಲರ್ ಹಾಗೂ ಹಾಡಿನ ಲಿರಿಕಲ್ ವಿಡಿಯೋಗಳನ್ನಷ್ಟೇ ಹೊರಬಿಟ್ಟಿರುವ ದಿ ವಿಲನ್ ಟೀಂ, ಒಂದು ಬಹುದೊಡ್ಡ ಪ್ರಶ್ನೆಯನ್ನು ಹಾಗೆಯೇ ಉಳಿಸಿಬಿಟ್ಟಿದೆ. ಕನ್ನಡ ಚಿತ್ರರಂಗದ ಇಬ್ಬರು ಸೂಪರ್‍ಸ್ಟಾರ್‍ಗಳನ್ನಿಟ್ಟುಕೊಂಡು ದಿ ವಿಲನ್ ಅನ್ನೋ ಟೈಟಲ್ ಇಟ್ಟು ಸಿನಿಮಾ ಮಾಡಿರುವ ಜೋಗಿ ಪ್ರೇಮ್, ಚಿತ್ರದಲ್ಲಿ ವಿಲನ್ ಯಾರು ಅನ್ನೋ ಗುಟ್ಟನ್ನು ಮಾತ್ರ ಬಿಟ್ಟುಕೊಟ್ಟಿಲ್ಲ. ಆ ಗುಟ್ಟನ್ನು ಅಕ್ಟೋಬರ್ 1ರಂದು ರಟ್ಟು ಮಾಡಲಿದ್ದಾರಂತೆ.

  ಅರೆ.. ಸಿನಿಮಾ ರಿಲೀಸ್ ಆಗೋದು ಅಕ್ಟೋಬರ್ 18ಕ್ಕೆ. ಅಕ್ಟೋಬರ್ 1ಕ್ಕೇ ಹೇಗೆ ರಟ್ಟು ಮಾಡ್ತಾರೆ ಅಂತಿರಾ..? ಅದು ಪ್ರೇಮ್ ಸ್ಟೈಲ್. ಅ.1ನೇ ತಾರೀಕು ಚಿತ್ರದ ಇನ್ನೊಂದು ಟ್ರೈಲರ್ ರಿಲೀಸ್ ಆಗಲಿದೆ. ಅದು ಶಿವಣ್ಣ ಮತ್ತು ಸುದೀಪ್ ಪಾತ್ರಗಳು ಮುಖಾಮುಖಿಯಾಗುವ ಟ್ರೈಲರ್. ಅದನ್ನು ಸೂಕ್ಷ್ಮವಾಗಿ ನೋಡಿದರೆ ವಿಲನ್ ಯಾರು ಅನ್ನೋ ಸೀಕ್ರೆಟ್‍ಗೆ ಉತ್ತರ ಸಿಗಲಿದೆ ಎಂದಿದ್ದಾರೆ ಪ್ರೇಮ್.

  ಸಿ.ಆರ್.ಮನೋಹರ್ ನಿರ್ಮಾಣದ ಈ ಅದ್ಧೂರಿ ಸಿನಿಮಾದಲ್ಲಿ ಬಾಲಿವುಡ್, ಹಾಲಿವುಡ್ ತಾರೆಯರೆಲ್ಲ ನಟಿಸಿದ್ದಾರೆ. ಸಿನಿಮಾಗೆ ಅಡ್ವಾನ್ಸ್ ಬುಕಿಂಗ್ ಯಾವಾಗ ಅನ್ನೋದು ಅಕ್ಟೋಬರ್ 2ರಂದು ಗೊತ್ತಾಗಲಿದೆಯಂತೆ.

 • ಶಿವಣ್ಣಂದೂ ವಿಲನ್ ಲುಕ್ಕೇ.. ಹಾಗಾದ್ರೆ..

  shivarajkumar's look too creates curiosity

  ಕಿಚ್ಚ ಸುದೀಪ್ ಅವರ ಒಂದು ಫಸ್ಟ್ ಲುಕ್ ನೋಡಿದವರಿಗೆ, ದಿ ವಿಲನ್ ಸಿನಿಮಾದಲ್ಲಿ ಸುದೀಪ್ ಅವರೇ ವಿಲನ್ ಇರಬೇಕು ಅನ್ನಿಸೋದು ಸಹಜ. ಆದರೆ, ಒಂದ್ಸಲ ಈ ಫೋಟೋ ನೋಡಿ, ಇದು ಶಿವರಾಜ್‍ಕುಮಾರ್ ಅವರದ್ದು.

  ಸುದೀಪ್ ಬ್ಲಾಕ್ ಡ್ರೆಸ್ ಮತ್ತು ರಗಡ್ ಲುಕ್‍ನಲ್ಲಿದ್ದರೆ, ಶಿವಣ್ಣಂದು ಇನ್ನೂ ರಗಡ್ ಲುಕ್ಕು. ಉದ್ದನೆಯ ಕೂದಲು, ತಲೆಗೊಂದು ಸ್ಕಾರ್ಫ್, ಬಿಳಿಬಿಳಿಯಾದ ಕುರುಚಲು ಗಡ್ಡ, ಕಣ್ಣಿಗೆ ದಪ್ಪನೆಯ ಕನ್ನಡಕ, ಜೀನ್ಸ್ ಜಾಕೆಟ್ಟು.. 

  ಈ ಲುಕ್ ನೋಡಿದ್ರೆ, ಶಿವರಾಜ್ ಕುಮಾರ್ ಅವರೇ ವಿಲನ್ ಇರಬೇಕು ಅನ್ನಿಸೋದು ಸಹಜ. ನಿರ್ದೇಶಕ ಪ್ರೇಮ್ ಬಾಯ್ಬಿಡಲ್ಲ, ಬಾಯಿಬಿಟ್ಟರೂ ಇನ್ನಷ್ಟು ಹುಳ ಬಿಡ್ತಾರೆ. ಕಿಚ್ಚ ಸುದೀಪ್ ಹೇಳಲ್ಲ, ಶಿವರಾಜ್‍ಕುಮಾರ್ ಕೂಡಾ ಡೈರೆಕ್ಟರ್ ಕಡೆ ಬೆರಳು ತೋರಿಸ್ತಾರೆ.

  ಒಟ್ಟಿನಲ್ಲಿ ದಿ ವಿಲನ್ ಸಿನಿಮಾ ಹೇಗಿದೆ ಅನ್ನೋದನ್ನ ತಿಳಿಯೋಕೆ ರಿಲೀಸ್‍ವರೆಗೂ ಕಾಯೋದು ಅನಿವಾರ್ಯ.

  Related Articles :-

  ಫಸ್ಟ್ ಲುಕ್ ತೋರಿಸಿ ಮತ್ತೆ ಹುಳ ಬಿಟ್ಟ ಪ್ರೇಮ್

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery