` sudeep - chitraloka.com | Kannada Movie News, Reviews | Image

sudeep

 • ರಂಗಿತರಂಗ ನಿರ್ದೇಶಕರ ಜೊತೆ ಸುದೀಪ್ ಸಿನಿಮಾ

  anup bhandari's next is with sudeep

  ರಂಗಿತರಂಗ ಖ್ಯಾತಿಯ ಅನೂಪ್ ಭಂಡಾರಿ ಹೊಸ ಚಿತ್ರಕ್ಕೆ ಕೈ ಹಾಕಿದ್ದಾರೆ. ಈ ಬಾರಿ ಸ್ಟಾರ್ ನಟ ಕಿಚ್ಚ ಸುದೀಪ್ ಅವರನ್ನು ನಿರ್ದೇಶಿಸಲಿದ್ದಾರೆ. ಸುದೀಪ್ ಸಿನಿಮಾ ನಿರ್ದೇಶಿಸಬೇಕು ಎನ್ನುವುದು ನನ್ನ 18 ವರ್ಷಗಳ ಕನಸು. ಆ ಕನಸು ನನಸಾಗುತ್ತಿದೆ. ನನ್ನ ಕಥೆಗೆ ಸುದೀಪ್ ಓಕೆ ಎಂದಿದ್ದಾರೆ. ತಾವೇ ನಿರ್ಮಾಣ ಮಾಡುವುದಾಗಿ ಹೇಳಿದ್ದಾರೆ ಎಂದು ಥ್ರಿಲ್ಲಾಗಿದ್ದಾರೆ ಅನೂಪ್ ಭಂಡಾರಿ.

  ಈ ಚಿತ್ರವನ್ನು ಸುದೀಪ್ ಅವರೇ ತಮ್ಮ ಸುಪ್ರಿಯಾನ್ವಿ ಬ್ಯಾನರ್‍ನಲ್ಲಿ ನಿರ್ಮಿಸುತ್ತಿದ್ದಾರೆ. ಸುಪ್ರಿಯಾನ್ವಿ ಎಂದರೆ ಸುದೀಪ್, ಪತ್ನಿ ಪ್ರಿಯಾ ಹಾಗೂ ಮಗಳು ಸಾನ್ವಿಯ ಶಾರ್ಟ್ ವರ್ಷನ್. ಚಿತ್ರ ನಿರ್ಮಾಣಕ್ಕೆ ಜಾಕ್ ಮಂಜು ಅವರ ಕೆಎಸ್‍ಕೆ ಶೋರೀಲ್ ಕೂಡಾ ಕೈ ಜೋಡಿಸಲಿದೆ.

  ಅನೂಪ್ ಹೇಳಿದ ಕಥೆಯ ಒನ್‍ಲೈನ್ ತುಂಬಾ ಇಷ್ಟವಾಯಿತು. ಹೀಗಾಗಿ ನಾನೇ ನಿರ್ಮಿಸೋಣ ಎಂದು ನಿರ್ಧರಿಸಿದೆ ಎಂದಿದ್ದಾರೆ ಸುದೀಪ್. 

  ನಾಳೆ ಅಂದ್ರೆ ಗುರುವಾಗ, ಚಿತ್ರದ ಟೈಟಲ್ ಬಿಡುಗಡೆಯಾಗಲಿದೆ. ಇದೊಂದು ಸಾಹಸ ಪ್ರಧಾನ ಚಿತ್ರವಾಗಿದ್ದು, ಉಳಿದ ವಿವರಗಳು ಮುಂದಿನ ದಿನಗಳಲ್ಲಿ ತಿಳಿಯಲಿವೆ ಎಂದಿದ್ದಾರೆ ಅನೂಪ್ ಭಂಡಾರಿ.

 • ರಕ್ಷಿತ್ ಬೆಂಬಲಕ್ಕೆ ಸುದೀಪ್

  sudeep appreciates rakshit shetty's maturity

  ಇತ್ತೀಚೆಗೆ ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ನಡುವೆ ಬ್ರೇಕ್ ಅಪ್ ಆಗಿದೆ ಎಂಬ ಸುದ್ದಿಗಳಿಗೆ, ಗಾಸಿಪ್‍ಗಳಿಗೆ ರಕ್ಷಿತ್ ಶೆಟ್ಟಿ ತುಂಬಾ ಗಾಂಭೀರ್ಯದಿಂದ ಉತ್ತರ ಕೊಟ್ಟಿದ್ದರು. ಸಾಮಾಜಿಕ ಜಾಲತಾಣಗಳಿಗೆ ಮತ್ತೆ ವಾಪಸ್ ಬಂದು, ರಶ್ಮಿಕಾ ಅವರ ಬೆಂಬಲಕ್ಕೆ ನಿಂತಿದ್ದರು. ರಕ್ಷಿತ್ ಶೆಟ್ಟಿ,  ರಶ್ಮಿಕಾ ಅವರ ಬೆಂಬಲಕ್ಕೆ ನಿಂತ ರೀತಿ, ಕಿಚ್ಚ ಸುದೀಪ್ ಅವರಿಗೆ ಇಷ್ಟವಾಗಿದೆ.

  ರಕ್ಷಿತ್ ಶೆಟ್ಟಿ ಈ ವಿಷಯದಲ್ಲಿ ತುಂಬಾ ಘನತೆಯಿಂದ ಉತ್ತರ ಕೊಟ್ಟಿದ್ದಾರೆ.  ಸಾರ್ವಜನಿಕ ಜೀವನದಲ್ಲಿರುವವರು ತಮ್ಮ ಭಾವನೆಗಳನ್ನೂ ಸಾರ್ವಜನಿಕವಾಗಿಯೇ ವ್ಯಕ್ತಪಡಿಸಬೇಕಾದ ಅಗತ್ಯವಿಲ್ಲ. ಪ್ರತಿಯೊಬ್ಬರಿಗೂ ಅವರದ್ದೇ ಆದ ವೈಯಕ್ತಿಕ ಜೀವನ ಇರುತ್ತೆ. ರಕ್ಷಿತ್ ಒಳ್ಳೆಯದಾಗಲಿ ಎಂದಿದ್ದಾರೆ ಸುದೀಪ್.

 • ರಕ್ಷಿತ್ ಶೆಟ್ಟಿ ಥಗ್ಸ್..ಗೆ ಸುದೀಪ್ ಗುಡ್ ಬೈ

  rakshith sudeep thugs of malgudi

  ಸುದೀಪ್ ಹುಟ್ಟುಹಬ್ಬಕ್ಕೆ ಪೈಲ್ವಾನ್ ಚಿತ್ರತಂಡ ಹೊಸದೊಂದು ಪೋಸ್ಟರ್ ರಿಲೀಸ್ ಮಾಡಿ ಶುಭಕೋರಿತ್ತು. ಚಿತ್ರದ ಫಸ್ಟ್ ಲುಕ್ ಡಿಫರೆಂಟಾಗಿದ್ದ ಕಾರಣ, ಚಿತ್ರರಂಗದ ಹಲವರು ಇದನ್ನು ಮೆಚ್ಚಿಕೊಂಡಿದ್ದರು. ಹಾಗೆ ಪೈಲ್ವಾನ್ ಪೋಸ್ಟರ್‍ನ್ನು ಹೊಗಳಿದ್ದವರಲ್ಲಿ ರಕ್ಷಿತ್ ಶೆಟ್ಟಿ ಕೂಡಾ ಒಬ್ಬರು.

  ಪೈಲ್ವಾನ್ ಚಿತ್ರದ ಪೋಸ್ಟರ್‍ನ್ನು ಹೊಗಳುತ್ತಾ ರಕ್ಷಿತ್ ಶೆಟ್ಟಿ, ಸುದೀಪ್ ಅವರಿಂದ ಆಗದೇ ಇರುವಂತಹದ್ದು ಏನಿದೆ ಎಂದು ಹೇಳಿದ್ದರು. ಅದಕ್ಕೆ ಸುದೀಪ್ ಉತ್ತರ ಥ್ಯಾಂಕ್ಸ್. ಆದರೆ, ಥಗ್ಸ್ ಆಫ್ ಮಾಲ್ಗುಡಿ ಒಂದನ್ನು ಬಿಟ್ಟು ಎಂಬ ಉತ್ತರ ಕೊಟ್ಟರು.

  ಅದಕ್ಕೆ ಪ್ರತಿಕ್ರಿಯೆಯಾಗಿ ರಕ್ಷಿತ್ ಶೆಟ್ಟಿ, ನಾನಿನ್ನೂ ಅದನ್ನು ಕೈಬಿಟ್ಟಿಲ್ಲ ಎಂಬ ಉತ್ತರ ಕೊಟ್ಟರು. ಅದಕ್ಕೆ ಸುದೀಪ್ ನೀಡಿರುವ ಉತ್ತರ ಥ್ಯಾಂಕ್ಸ್ ಸರ್, ಆದರೆ ನನ್ನಿಂದ ಅದನ್ನು ಮುಂದುವರೆಸಲು ಸಾಧ್ಯವೇ ಇಲ್ಲ. ನನ್ನ ಪಾಲಿಗೆ ಅದು ಮುಗಿದ ಅಧ್ಯಾಯ ಎಂಬ ಉತ್ತರ ಕೊಟ್ಟರು. ರಕ್ಷಿತ್ ಶೆಟ್ಟಿಗೆ ಮಾತನಾಡಲು ಏನೂ ಉಳಿದಿರಲಿಲ್ಲ. ಅಲ್ಲಿಗೆ ಥಗ್ಸ್ ಆಫ್ ಮಾಲ್ಗುಡಿ ಚಿತ್ರದ ಕಥೆ ಮುಗಿಯಿತು.

 • ರಕ್ಷಿತ್ ಶೆಟ್ಟಿ ನಿರ್ದೇಶನದ ಕಿಚ್ಚನ ಚಿತ್ರ ಬ್ರೇಕಪ್

  rakshith shetty, sudeep image

  ಕಿಚ್ಚ ಸುದೀಪ್ ನಟಿಸಲಿರುವ `ಥಗ್ಸ್ ಆಫ್ ಮಾಲ್ಗುಡಿ' ಚಿತ್ರವನ್ನು ರಕ್ಷಿತ್ ಶೆಟ್ಟಿ ನಿರ್ದೇಶಿಸಲಿದ್ದಾರೆ ಎಂಬುದು ದೊಡ್ಡ ಮಟ್ಟದಲ್ಲೇ ಸುದ್ದಿಯಾಗಿತ್ತು. ಆ ಚಿತ್ರದ ಒನ್‍ಲೈನ್ ಸುದೀಪ್‍ಗೆ ಇಷ್ಟವಾಗಿದೆ. ಚಿತ್ರಕಥೆಯ ಸ್ಕ್ರಿಪ್ಟ್ ವರ್ಕ್ ನಡೆಯುತ್ತಿದೆ ಎನ್ನುವುದನ್ನು ಸುದೀಪ್ ಮತ್ತು ರಕ್ಷಿತ್ ಶೆಟ್ಟಿ ಇಬ್ಬರೂ ಹೇಳಿಕೊಂಡಿದ್ದರು. ಈಗ ಆ ಚಿತ್ರಕ್ಕೆ ಬ್ರೇಕ್ ಬಿದ್ದಿದೆ. ಸ್ವತಃ ಸುದೀಪ್ ಇದನ್ನು ಹೇಳಿಕೊಂಡಿದ್ದಾರೆ.

  ಥಗ್ಸ್ ಆಫ್ ಮಾಲ್ಗುಡಿ ಚಿತ್ರಕ್ಕೆ ರಕ್ಷಿತ್ ಶೆಟ್ಟಿ ಡೇಟ್ಸ್ ಕೇಳಿದ್ದು ಸುಮಾರು ಎರಡೂವರೆ ವರ್ಷಗಳ ಹಿಂದೆ. ಆದರೆ, ಚಿತ್ರದ ಸ್ಕ್ರಿಪ್ಟ್ ವರ್ಕ್ ಶುರುವಾಗಲೇ ಇಲ್ಲ. ಅದಾದ ಮೇಲೆ ರಕ್ಷಿತ್ ಶೆಟ್ಟಿ ಕೂಡಾ ಬ್ಯುಸಿಯಾಗಿಬಿಟ್ಟರು. ಇದು ಅವರಿಗೆ ಬೆಳೆಯುವ ಸಮಯ. ಚಿತ್ರಗಳು ಹಿಟ್ ಆಗಿವೆ. ಈ ಸಮಯದಲ್ಲಿ ನನ್ನ ಚಿತ್ರ ಮಾಡಿಕೊಡು ಎಂದು ನಾವೂ ಕೇಳಬಾರದು ಎಂದಿದ್ದಾರೆ ಸುದೀಪ್. 

  ಗೋಧಿ ಬಣ್ಣ ಸಾಧಾರಣ ಮೈಕಟ್ಟು ಮತ್ತು ಕಿರಿಕ್ ಪಾರ್ಟಿ ಸಕ್ಸಸ್ ಆದ ನಂತರ ರಕ್ಷಿತ್ ಶೆಟ್ಟಿ ಬ್ಯುಸಿಯಾಗಿ ಹೋಗಿದ್ದಾರೆ. ಒಂದರ ಹಿಂದೊಂದರಂತೆ ಚಿತ್ರಗಳು ಕ್ಯೂನಲ್ಲಿವೆ. ಸದ್ಯಕ್ಕೆ ರಕ್ಷಿತ್ ಶೆಟ್ಟಿ ಮತ್ತೆ ಡೈರೆಕ್ಷನ್ ಕ್ಯಾಪ್ ಹಾಕುವ ಲಕ್ಷಣಗಳಿಲ್ಲ. ಹೀಗಾಗಿಯೇ `ಥಗ್ಸ್ ಆಫ್ ಮಾಲ್ಗುಡಿ' ಸಿನಿಮಾಕ್ಕೆ ಫುಲ್‍ಸ್ಟಾಪ್ ಬಿದ್ದಿದೆ.

  Related Articles :-

  Thugs Of Malgudi Postponed Indefinitely

  Thugs Of Malgudi Will Have Lots Of Newcomers

 • ರವಿ ಸರ್ ಮಕ್ಕಳಿಗಿಂತ ನಾನೇ ಅದೃಷ್ಟವಂತ - ಲಾಯರ್ ಕಿಚ್ಚನ ಮನದಾಳ

  sudeep feels lucky to work with ravichandran

  ರವಿ ಸರ್ ಅವರಿಗೆ ನಾನು ನಿರ್ದೇಶನ ಮಾಡಿದ್ದೆ. ಈಗ ಅವರು ನನಗೆ ನಿರ್ದೇಶನ ಮಾಡುತ್ತಿದ್ದಾರೆ. ಸಣ್ಣ ಸಣ್ಣ ದೃಶ್ಯಗಳನ್ನೂ ಎಷ್ಟು ಪರಿಣಾಮಕಾರಿಯಾಗಿ ಚಿತ್ರೀಕರಿಸಬೇಕು ಎನ್ನುವುದನ್ನು ಅವರನ್ನು ನೋಡಿ ಕಲಿಯಬೇಕು. ಇದು ರವಿಚಂದ್ರನ್ ಡೈರೆಕ್ಷನ್ ಬಗ್ಗೆ ಸುದೀಪ್ ಹೇಳುವ ಮಾತು.

  ಚಿಕ್ಕ ಪಾತ್ರವನ್ನು ಒಪ್ಪಿಕೊಂಡಿದ್ದಕ್ಕೆ ಕಾರಣ ಹೇಳಿದ ಸುದೀಪ್ `ಅವರು ಇಷ್ಟು ವರ್ಷ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿದ್ದಾರೆ. ಅವರು ಕರೆಯೋದೇ ನಮ್ಮ ಅದೃಷ್ಟ. ಅವರು ಕರೆದಾಗ ತಲೆಬಾಗಿ ನಾವೆಲ್ಲ ಹೋಗಬೇಕು ಎಂದಿದ್ದಾರೆ ಸುದೀಪ್.

  ಅವರ ನಿರ್ದೇಶನದಲ್ಲಿ ಅಭಿನಯಿಸುವ ಸೌಭಾಗ್ಯ ಅವರ ಮಕ್ಕಳಿಗೇ ಇನ್ನೂ ಸಿಕ್ಕಿಲ್ಲ. ಅವರಿಗೆ ಹೋಲಿಸಿದರೆ ನಾನೇ ಅದೃಷ್ಟವಂತ ಎಂದಿದ್ದಾರೆ ಕಿಚ್ಚ.

  ರವೊ ಬೋಪಣ್ಣ ಚಿತ್ರದಲ್ಲಿ ಸುದೀಪ್ ಅವರದ್ದು ಲಾಯರ್ ಪಾತ್ರ. ಬೆಂಗಳೂರಿನ ಸೆಂಟ್ರಲ್ ಕಾಲೇಜ್ ಕ್ಯಾಂಪಸ್‍ನಲ್ಲಿ ಚಿತ್ರೀಕರಣ ನಡೆಯುತ್ತಿದೆ. ಸುದೀಪ್ ಲಾಯರ್ ಆದ್ರೆ, ಭಾರತಿ ವಿಷ್ಣುವರ್ಧನ್ ಜಡ್ಜ್. 

  ಸುದೀಪ್‍ಗೆ ನಿರ್ದೇಶನ ಮಾಡುವುದು ಹೇಗೆ ಅನ್ನೋದನ್ನ ರವಿಚಂದ್ರನ್ ಹೇಳ್ತಾರೆ `ಒಬ್ಬ ನಿರ್ದೇಶಕನಿಗೆ ಸುದೀಪ್ ಅವರಂತ ನಟನನ್ನು ನಿರ್ದೇಶನ ಮಾಡುವಷ್ಟು ಖುಷಿ ಮತ್ತೊಂದು ಇರುವುದಿಲ್ಲ. ಅವರೊಳಗೊಬ್ಬ ನಿರ್ದೇಶಕನಿದ್ದಾನೆ. ಹೀಗಾಗಿ ವನ್ ಮೋರ್ ಎನ್ನುವ ಪ್ರಶ್ನೆಯೂ ಉದ್ಭವಿಸುವುದಿಲ್ಲ. ಸುದೀಪ್ ಇದ್ದರೆ ಇಡೀ ಸಿನಿಮಾ ಟೀಂನಲ್ಲೊಂದು ಪಾಸಿಟಿವ್ ಎನರ್ಜಿ ಇರುತ್ತೆ' ಎಂದಿದ್ದಾರೆ ಕ್ರೇಜಿಸ್ಟಾರ್.

 • ರಾಜಕೀಯಕ್ಕೆ ಬರ್ತಾರಾ ಕಿಚ್ಚ ಸುದೀಪ್..?

  sudeep image

  ಉಪೇಂದ್ರ ರಾಜಕೀಯ ಪ್ರವೇಶದ ಸುದ್ದಿ ಘೋಷಿಸಿದ್ದೇ ತಡ. ಹಲವು ನಟರಿಗೆ ಇದೇ ಪ್ರಶ್ನೆ ಎದುರಾಗುತ್ತಿದೆ. ಇದೇ ಪ್ರಶ್ನೆ ಕಿಚ್ಚ ಸುದೀಪ್ ಅವರಿಗೂ ಎದುರಾಗಿದೆ. ಸುವರ್ಣ ನ್ಯೂಸ್​ನಲ್ಲಿ ಹಿರಿಯ ಪತ್ರಕರ್ತ ಜೋಗಿ, ಸುದೀಪ್ ಎದುರು ಈ ಪ್ರಶ್ನೆ ಮುಂದಿಟ್ಟಿದ್ದಾರೆ. ಈ ಪ್ರಶ್ನೆಗೆ ಸುದೀಪ್ ಉತ್ತರ ಕೊಡುವ ಬದಲು ಪ್ರಶ್ನೆ ಕೇಳಿದ್ದಾರೆ. ಆ ಪ್ರಶ್ನೆಗಳಲ್ಲೇ ಉತ್ತರವೂ ಇದೆ. 

  ಜೋಗಿ - ನೀವು ರಾಜಕೀಯಕ್ಕೆ ಬರುತ್ತೀರಾ..? ಯುವ ಸಮೂಹದ ಐಕಾನ್ ಆಗಿರುವ ನೀವೇಕೆ ರಾಜಕೀಯಕ್ಕೆ ಬರಬಾರದು..? 

  ಸುದೀಪ್ - ಏಕೆ ಬರಬೇಕು..?

  ಜೋಗಿ - ಸೇವೆ ಮಾಡೋಕೆ

  ಸುದೀಪ್ - ಈಗ ಮಾಡ್ತಾ ಇದ್ದೀನಲ್ಲ. 

  ಜೋಗಿ - ಅಧಿಕಾರ ಇದ್ದರೆ ಇನ್ನೂ ಹೆಚ್ಚಾಗಿ ಜನಸೇವೆ ಮಾಡಬಹುದಲ್ಲ..?

  ಸುದೀಪ್ - ನನಗೆ ರಾಜಕೀಯ ಅರ್ಥವಾಗಲ್ಲ. ನನ್ನ ಹಣದಲ್ಲಿ ನನ್ನ ವ್ಯಾಪ್ತಿಯಲ್ಲಿ ಏನು ಮಾಡಬೇಕೋ ಅದನ್ನು ಈಗಾಗಲೇ ಮಾಡುತ್ತಿದ್ದೇನೆ. ನನಗೆ ರಸ್ತೆ ಮಾಡಿಸೋದು ಗೊತ್ತಿಲ್ಲ. ಅದು ನನಗೆ ಅರ್ಥವಾಗಲ್ಲ. ಅದು ಸರ್ಕಾರದ ಕೆಲಸ. ಸೇವೆ ಮಾಡೋಕೆ ಅಧಿಕಾರವೇ ಬೇಕಿಲ್ಲ. ಮನಸ್ಸಿದ್ದರೆ ಸಾಕು.

  ಇದು ಸುದೀಪ್ ನೀಡಿರುವ ಉತ್ತರ. ಸುದೀಪ್​ಗೆ ಸಮಾಜಸೇವೆ ಹೊಸದೇನೂ ಅಲ್ಲ. ತಾವು ವಾಚ್ ಕಟ್ಟುವುದನ್ನು ಬಿಟ್ಟ ಮೇಲೆ, ವಾಚುಗಳ ಖರೀದಿಗೆ ಎಷ್ಟು ಖರ್ಚಾಗುತ್ತಿತ್ತೋ ಅಷ್ಟು ಹಣವನ್ನು ಅವರು ಸಮಾಜಸೇವೆಗೆ ತೊಡಗಿಸಿದ್ದಾರೆ. ಹಲವರಿಗೆ ಉಪಯೋಗವಾಗಿದೆ. ಆ ಹಣದಲ್ಲಿಯೇ  ಇಬ್ಬರ ಗಂಭೀರ  ಚಿಕಿತ್ಸೆಗೆ ನೆರವು ನೀಡಿರುವ ಸುದೀಪ್​ಗೆ, ಅವರ ಜೀವ ಉಳಿಸಿದ ತೃಪ್ತಿಯೂ ಇದೆ. ನನಗೆ ಗೊತ್ತಿಲ್ಲದ ಕೆಲಸ ನಾನು ಮಾಡುವುದಿಲ್ಲ. ರಾಜಕೀಯ ನನಗೆ ಆಗಿ ಬರೋದಿಲ್ಲ. ನಾನು ರಾಜಕೀಯಕ್ಕೆ ಸೂಕ್ತ ವ್ಯಕ್ತಿಯೇ ಅಲ್ಲ ಎನ್ನುತ್ತಾರೆ ಸುದೀಪ್.

 • ರಾಜಮೌಳಿ ಚಿತ್ರದಲ್ಲಿ ಕಿಚ್ಚ : ಸುದೀಪ್ ರಿಯಾಕ್ಷನ್

  kichcha sudeep image

  ಕಿಚ್ಚ ಸುದೀಪ್ ಮತ್ತು ರಾಜಮೌಳಿ ನಡುವಿನ ಬಾಂಧವ್ಯ ಗೊತ್ತಿರುವಂಥದ್ದೇ. ಸುದೀಪ್ ವೃತ್ತಿ ಜೀವನದ ಅತಿ ದೊಡ್ಡ ಬ್ಲಾಕ್ ಬಸ್ಟರ್ ಚಿತ್ರ ಕೊಟ್ಟವರು ರಾಜಮೌಳಿ. ಈಗದ ನಂತರ ಬಾಹುಬಲಿಯಲ್ಲಿ ಪುಟ್ಟ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು ಸುದೀಪ್. ಅದು ಸ್ನೇಹಪೂರ್ವಕವಾಗಿ. ಈ ಸ್ನೇಹದ ಕಾರಣಕ್ಕೇ ಅದೊಂದು ಸುದ್ದಿ ಹಬ್ಬಿತ್ತು.

  ಸದ್ಯಕ್ಕೆ ರಾಜಮೌಳಿ ನಿರ್ದೇಶಿಸುತ್ತಿರುವ ಆರ್‍ಆರ್‍ಆರ್ ಚಿತ್ರದಲ್ಲಿ ಸುದೀಪ್ ನಟಿಸುತ್ತಿದ್ದಾರೆ. ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ರಾಜಮೌಳಿ ಆಫರ್‍ಗಾಗಿ ಸುದೀಪ್ ತಮ್ಮ ಡೇಟ್ಸ್ ಅಡ್ಜಸ್ಟ್ ಮಾಡಿಕೊಂಡಿದ್ದಾರೆ ಎಂದೆಲ್ಲ ಸುದ್ದಿಗಳು ಹಬ್ಬಿದ್ದವು. ಈಗ ಆ ಎಲ್ಲ ಸುದ್ದಿಗಳಿಗೆ ಸ್ವತಃ ಸುದೀಪ್ ಸ್ಪಷ್ಟನೆ ಕೊಟ್ಟಿದ್ದಾರೆ.

  ಆರ್‍ಆರ್‍ಆರ್ ಚಿತ್ರದಲ್ಲಿ ನಾನು ನಟಿಸುತ್ತಿದ್ದೇನೆ ಎಂಬ ಸುದ್ದಿಗೆ ಎಕ್ಸೈಟ್ ಆದವರಿಗೆಲ್ಲ ಒಂದು ಮಾತು. ನನ್ನನ್ನು ಆರ್‍ಆರ್‍ಆರ್ ಚಿತ್ರಕ್ಕಾಗಿ ರಾಜಮೌಳಿ ಸಂಪರ್ಕಿಸಿಲ್ಲ. ಈ ಬಗ್ಗೆ ಹರಿದಾಡುತ್ತಿರುವ ಸುದ್ದಿ ಸಂಪೂರ್ಣ ಸುಳ್ಳು. ಆ ಚಿತ್ರದ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.

 • ರಾಜರಥಕ್ಕೆ ಸುದೀಪ್ ಕೊಟ್ಟ ಸ್ಫೂರ್ತಿ ಏನ್ ಗೊತ್ತಾ..?

  sudeep inspires rajaratha team

  ರಾಜರಥ ಚಿತ್ರದಲ್ಲಿ ತಮಿಳು ನಟ ಆರ್ಯ ನಟಿಸುತ್ತಿರುವುದು ಗೊತ್ತಿದೆಯಷ್ಟೆ. ಅದು ಆರ್ಯ ಅವರ ಮೊದಲ ಕನ್ನಡ ಸಿನಿಮಾ. ಚಿತ್ರದಲ್ಲಿ ಗಮನ ಸೆಳೆಯುತ್ತಿರುವುದ ಆರ್ಯ ಅವರ ಲುಕ್ಕು. ಏಕೆಂದರೆ, ಆರ್ಯ ಇದುವರೆಗೆ ಪ್ರಣಯರಾಜನಾಗಿ ಕಾಣಿಸಿಕೊಂಡಿರೋದೇ ಹೆಚ್ಚು. ಆದರೆ, ರಾಜರಥದಲ್ಲಿ ಹಾಗಲ್ಲ. 

  ಕೇವಲ ಲುಕ್ ಅಷ್ಟೇ ಅಲ್ಲ, ಪಾತ್ರವೂ ವಿಭಿನ್ನವಾಗಿದೆ ಎಂದಿದ್ದಾರೆ ಭಂಡಾರಿ ಬ್ರದರ್ಸ್. 

  ಅಂದಹಾಗೆ ಇದಕ್ಕೂ, ಸುದೀಪ್‍ಗೆ ಏನು ಸಂಬಂಧ ಅಂತೀರಾ. ನಿರೂಪ್ ಭಂಡಾರಿ ಹಾಗೂ ಅನೂಪ್ ಭಂಡಾರಿ ಅವರ ತಂದೆ ಸುಧಾಕರ್ ಭಂಡಾರಿ, 90ರ ದಶಕದಲ್ಲಿ ಪ್ರೇಮದ ಕಾದಂಬರಿ ಎಂಬ ಧಾರಾವಾಹಿ ಮಾಡಿದ್ದರು. ಆ ಧಾರಾವಾಹಿಯಲ್ಲಿ ಸುದೀಪ್ ಕೆಲಸ ಮಾಡಿದ್ದರಂತೆ. ಆಗಲೇ ಈ ಇಬ್ಬರೂ ಸೋದರರು ಸುದೀಪ್ ಅವರನ್ನೇ ಮನಸ್ಸಿನಲ್ಲಿಟ್ಟುಕೊಂಡು `ಯೋಧ' ಅನ್ನೋ ಸ್ಕ್ರಿಪ್ಟ್ ತಯಾರಿಸಿದ್ದರಂತೆ. ಸುದೀಪ್ ಪೊಲೀಸ್ ಇನ್ಸ್‍ಪೆಕ್ಟರ್ ಪಾತ್ರಕ್ಕೆ ಚೆನ್ನಾಗಿ ಹೊಂದುತ್ತಾರೆ ಎಂದುಕೊಂಡಿದ್ದರಂತೆ ಭಂಡಾರಿ ಬ್ರದರ್ಸ್.

  ಇನ್ನು ವಡ್ರ್ಸ್ ಅನ್ನೋ ಕಿರುಚಿತ್ರಕ್ಕೆ ಅನೂಪ್ ಪ್ರಶಸ್ತಿ ಗೆದ್ದಿದ್ದರು. ಆ ಸುದ್ದಿಗೋಷ್ಟಿಗೆ ಅತಿಥಿಯಾಗಿ ಬಂದಿದ್ದ ಸುದೀಪ್, ಕುರ್ತಾ, ಜೀನ್ಸ್, ಸ್ಯಾಂಡಲ್ ಧರಿಸಿದ್ದರು. ಅದು ಅನೂಪ್‍ಗೆ ಇಷ್ಟವಾಗಿತ್ತು. ನಾವೀಗ ರಾಜರಥ ಚಿತ್ರದಲ್ಲಿನ ಆರ್ಯ ಅವರ ಡ್ರೆಸ್ ಮತ್ತು ಸ್ಟೈಲ್ ಇರೋದು ಅದೇ ಸುದೀಪ್ ಅವರ ಶೈಲಿಯಲ್ಲಿ.

  ಇನ್ನು ಆರ್ಯ ಅವರಿಗೆ ಕನ್ನಡ ಅಷ್ಟೇ ಅಲ್ಲ, ತೆಲುಗು ಕೂಡಾ ಅಷ್ಟಕ್ಕಷ್ಟೆ. ಹೀಗಾಗಿ ಚಿತ್ರದ ಪ್ರತಿ ಸನ್ನಿವೇಶವನ್ನೂ ಎಚ್ಚರಿಕೆಯಿಂದ ಅಭ್ಯಾಸ ಮಾಡುತ್ತಿದ್ದರಂತೆ. ಆರ್ಯ ಅವರ ಸಹಾಯಕರೇ, ನಿರ್ದೇಶಕ ಅನೂಪ್ ಭಂಡಾರಿ ಆರ್ಯ ಅವರಿಗೆ ಚಿತ್ರಹಿಂಸೆ ಕೊಡುತ್ತಿದ್ದಾರೆ ಎಂದು ಜೋಕ್ ಮಾಡುತ್ತಿದ್ದರಂತೆ. ಹಾಗೇನೂ ಇಲ್ಲ, ಆರ್ಯ ತಮ್ಮ ಪಾತ್ರವನ್ನು ಜೀವಿಸಿದ್ದಾರೆ. ನಾನು ಕಂಡ ಸರಳ ಮತ್ತು ಶಿಸ್ತಿನ ವ್ಯಕ್ತಿಗಳಲ್ಲಿ ಆರ್ಯ ಒಬ್ಬರು. ನಿರ್ದೇಶಕರು ಹೇಳಿದಂತೆ ನಟಿಸುವ ಒಳ್ಳೆಯ ಕಲಾವಿದ ಎಂದು ಪ್ರಶಂಸಿಸಿದ್ದಾರೆ ನಿರ್ದೇಶಕ ಅನೂಪ್ ಭಂಡಾರಿ.

  ಸಿನಿಮಾ ಮಾರ್ಚ್ 23ರಂದು ತೆರೆಗೆ ಬರಲಿದೆ. ಆವಂತಿಕಾ ಶೆಟ್ಟಿ ನಾಯಕಿಯಾಗಿರುವ ಚಿತ್ರದಲ್ಲಿ ನಿರೂಪ್ ಭಂಡಾರಿಯವರ ಪಾತ್ರ ಕುತೂಹಲ ಹುಟ್ಟಿಸಿದೆ. ಆ್ಯಕ್ಷನ್, ಕಾಮಿಡಿ, ರೊಮ್ಯಾನ್ಸ್ ಮತ್ತು ಮ್ಯೂಸಿಕ್ ಮಯ ಚಿತ್ರದಲ್ಲಿ ರವಿಶಂಕರ್ ಅವರದ್ದು ಅತ್ಯಂತ ಪ್ರಮುಖ ಪಾತ್ರ. 

 • ರಾಜು ಕನ್ನಡ ಮೀಡಿಯಂನಲ್ಲಿ ಸುದೀಪ್ ಅಭಿನಯ 

  sudeep image

  ಇಂತಹ ಧೈರ್ಯ ಮತ್ತು ಪ್ರೀತಿಯನ್ನು ಸುದೀಪ್ ಆಗಾಗ್ಗೆ ತೋರಿಸುತ್ತಲೇ ಇರುತ್ತಾರೆ. ಈಗ ಮತ್ತೊಮ್ಮೆ ಸುದೀಪ್ ಪ್ರೀತಿ ರಾಜು ಕನ್ನಡ ಮೀಡಿಯಂ ಚಿತ್ರದ ಮೇಲೆ ಹರಿದಿದೆ. ಗುರುನಂದನ್, ಆವಂತಿಕಾ ಶೆಟ್ಟಿ ನಟಿಸಿರುವ ಚಿತ್ರದಲ್ಲಿ ಸುದೀಪ್ ಒಂದು ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಹಾಗೆಂದು ಅದು ಗೆಸ್ಟ್ ರೋಲ್ ಅಲ್ಲ. ಹೀಗೆ ಬಂದು ಹಾಗೆ ಹೋಗುವ ಪಾತ್ರವಲ್ಲ. ಇಂಟರ್‍ವೆಲ್ ನಂತರ ಇಡೀ ಚಿತ್ರದಲ್ಲಿ ಸುದೀಪ್ ಪಾತ್ರ ಇರುತ್ತದಂತೆ.

  ಶೂಟಿಂಗ್ ನಡೆಯುತ್ತಿದ್ದು, ಚಿತ್ರದಲ್ಲಿ ಹೀರೋಗೆ ಸ್ಫೂರ್ತಿ ತುಂಬುವ ಪಾತ್ರದಲ್ಲಿ ಸುದೀಪ್ ನಟಿಸುತ್ತಿದ್ದಾರಂತೆ. 5 ದಿನಗಳ ಕಾಲ್‍ಶೀಟ್ ನೀಡಿರುವ ಸುದೀಪ್, ಸತತವಾಗಿ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ. ಹಾಗಾದರೆ ಸುದೀಪ್, ಚಿತ್ರದಲ್ಲಿ ಕಿಚ್ಚ ಸುದೀಪ್ ಆಗಿಯೇ ಕಾಣಿಸಿಕೊಳ್ತಾರೆ. ಅದು ಸದ್ಯಕ್ಕೆ ಸಸ್ಪೆನ್ಸ್.

  ಈ ಹಿಂದೆ ಸುದೀಪ್, ತುಂಟಾಟ, ಗುನ್ನ, ಜಾಕ್‍ಪಾಟ್, ಕೇರ್ ಆಫ್ ಫುಟ್‍ಪಾತ್, ಮಾತಾಡ್ ಮಾತಾಡ್ ಮಲ್ಲಿಗೆ, ಮೇಘವೇ ಮೇಘವೇ, ರಂಗನ್ ಸ್ಟೈಲ್, ಲವ್ ಯೂ ಅಲಿಯಾ, ಅಪೂರ್ವ.. ಹೀಗೆ ಅಂತಹ  ಚಿತ್ರಗಳ ಪಟ್ಟಿಯೂ ದೊಡ್ಡದಿದೆ. ಆ ಪಟ್ಟಿಗೆ ಈಗ ರಾಜು ಕನ್ನಡ ಮೀಡಿಯಂ ಸೇರುತ್ತಿದೆ.

   

 • ರಾಮಾಚಾರಿ, ರಾಜಕುಮಾರ ಚಿತ್ರದ ನಿರ್ದೇಶಕರ ಮುಂದಿನ ಹೀರೋ ಸುದೀಪ್..?

  santosh anand ram new movie with sudeep?

  ನಿರ್ದೇಶಕ ಸಂತೋಷ್ ಆನಂದ ರಾಮ್ ಹೊಸ ಚಿತ್ರ ಯಾವುದು..? ಹೀರೋ ಯಾರು..? ಈ ಪ್ರಶ್ನೆ ರಾಜಕುಮಾರ ಹಿಟ್ ಆದ ದಿನದಿಂದ ಗಾಂಧಿನಗರದಲ್ಲಿ ಕೇಳಿಸುತ್ತಲೇ ಇದೆ. ಸಂತೋಷ್ ಗುಟ್ಟು ಬಿಟ್ಟು ಕೊಟ್ಟಿಲ್ಲ. ಈಗ ಸುದ್ದಿಯೊಂದು ಹೊರಬೀಳುತ್ತಿದೆ. ಸಂತೋಷ್‍ರ ಮುಂದಿನ ಚಿತ್ರದ ಹೀರೋ ಸುದೀಪ್ ಎಂಬ ಸುದ್ದಿಯ ಗಾಳಿ ಜೋರಾಗಿ ಬೀಸುತ್ತಿದೆ. ಚಿತ್ರದ ನಿರ್ಮಾಪಕರು ಒನ್ಸ್ ಎಗೇಯ್ನ್ ಹೊಂಬಾಳೆ ಕ್ರಿಯೇಷನ್ಸ್‍ನ ವಿಜಯ್ ಕಿರಗಂದೂರು. 

  ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ನಿರ್ದೇಶಕರ ಹೆಸರು ಹೇಳಲು ಹೊರಟರೆ ಸಿಗುವುದೇ ಕಡಿಮೆ ಹೆಸರುಗಳು. ಅಂತಹ ಸ್ಟಾರ್ ನಿರ್ದೇಶಕರ ಸಾಲು ಸೇರುತ್ತಿದ್ದಾರೆ ಸಂತೋಷ್ ಆನಂದ್‍ರಾಮ್. ಏಕೆಂದರೆ, ಅವರು ಇದುವರೆಗೆ ನಿದೇಶಿಸಿದ್ದು ಎರಡೇ ಸಿನಿಮಾ. ಅದರಲ್ಲಿ ರಾಮಾಚಾರಿ, ಯಶ್ ಚಿತ್ರ ಜೀವನ ಮೆಗಾ ಬ್ಲಾಕ್ ಬಸ್ಟರ್ ಆದರೆ, ರಾಜಕುಮಾರ್ ಪುನೀತ್ ಚಿತ್ರದ ಅತಿದೊಡ್ಡ ಬ್ಲಾಕ್‍ಬಸ್ಟರ್ ಆಗಿದ್ದು ವಿಶೇಷ. 

 • ರಿಲೀಸ್‍ಗೂ ಮೊದಲೇ ದುಬೈಯಲ್ಲಿ ವಿಲನ್ ಅಬ್ಬರ

  the villain

  ದಿ ವಿಲನ್, ಹ್ಯಾಟ್ರಿಕ್ ಹೀರೋ ಶಿವಣ್ಣ ಮತ್ತು ಕಿಚ್ಚ ಸುದೀಪ್ ಕಾಂಬಿನೇಷನ್‍ನ ಈ ಚಿತ್ರ ಬಿಡುಗಡೆಗೂ ಮೊಲದೇ ಭರ್ಜರಿಯಾಗಿ ಸದ್ದು ಮಾಡ್ತಿದೆ. ಚಿತ್ರದ ಒಂದೊಂದು ಅಪ್‍ಡೇಟ್ ಕೂಡಾ ಕುತೂಹಲ ಕೆರಳಿಸುತ್ತಿದೆ. ಮೊನ್ನೆ ಮೊನ್ನೆಯಷ್ಟೇ ಸುದೀಪ್ ಹುಟ್ಟುಹಬ್ಬದ ದಿನ, ಒಂದು ಮೋಷನ್ ಪೋಸ್ಟರ್ ರಿಲೀಸ್ ಮಾಡಿದ್ದರು ನಿರ್ದೇಶಕ ಪ್ರೇಮ್.

  ಆ ಮೋಷನ್ ಪೋಸ್ಟರ್ ಈಗ ದುಬೈ, ಅಬುದಾಬಿ, ಶಾರ್ಜಾ, ಮಸ್ಕಟ್‍ಗಳಲ್ಲಿ ದಾಖಲೆ ಬರೆದಿದೆ. ಅಲ್ಲಿನ ಚಿತ್ರಮಂದಿರಗಳಲ್ಲಿ ಚಿತ್ರದ ಮೋಷನ್ ಪೋಸ್ಟರ್ ಪ್ರಸಾರವಾಗಿದೆ. ಕನ್ನಡ ಚಿತ್ರವೊಂದರ ಮೋಷನ್ ಪೋಸ್ಟರ್, 

  ವಿದೇಶದ ಚಿತ್ರಮಂದಿರಗಳಲ್ಲಿ ಪ್ರಸಾರವಾಗಿರುವುದು ಇದೇ ಮೊದಲು. ಈ ಮೂಲಕ ನಿರ್ದೇಶಕ ಜೋಗಿ ಪ್ರೇಮ್ ಹಾಗೂ ನಿರ್ಮಾಪಕ ಮನೋಹರ್ ಮತ್ತೊಂದು ದಾಖಲೆ ಬರೆದಿದ್ದಾರೆ.

 • ರೈತರಿಗಾಗಿ BMW ಕಾರ್‍ನ್ನೇ ಮಾರಾಟಕ್ಕಿಟ್ಟ ಸುದೀಪ್..!

  sudeep, bmw car

  ಕಿಚ್ಚ ಸುದೀಪ್ ಇರೋದೇ ಹಾಗೆ. ತಾವು ಮಾಡಬೇಕು ಎನಿಸಿದ್ದನ್ನು ತಕ್ಷಣ ಮಾಡಿಬಿಡ್ತಾರೆ. ಒಮ್ಮೆ ತೆಗೆದುಕೊಂಡ ನಿರ್ಧಾರವನ್ನು ಬದಲಿಸೋ ಜಾಯಮಾನದವರಲ್ಲ. ಈಗ ಅಂಥಾದ್ದೇ ಜನ ಮೆಚ್ಚುವ ಕೆಲಸವೊಂದಕ್ಕೆ ಕೈ ಹಾಕಿದ್ದಾರೆ ಸುದೀಪ್.

  ವಿ ರೆಸ್ಪೆಕ್ಟ್ ಫಾರ್ಮರ್ಸ್ ಅನ್ನೋ ಟ್ರಸ್ಟ್, ಪ್ರೆಸ್‍ಕ್ಲಬ್‍ನಲ್ಲಿ ರೈತರಿಗಾಗಿ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿತ್ತು. ರೈತರ ತ್ಯಾಗ ಮತ್ತು ಸಮಾಜ ಕುರಿತು ಜಾಗೃತಿ ಮೂಡಿಸುವ `ರೈತ ಸ್ನೇಹಿ ಯೋಜನೆ'ಯ ಲೋಗೋ ಬಿಡುಗಡೆ ಮಾಡಲಾಯಿತು. ಬಿಡುಗಡೆ ಮಾಡಿದವರು ಕಿಚ್ಚ ಸುದೀಪ್.

  ಲೋಗೋ ಬಿಡುಗಡೆ ಮಾತನಾಡಿದ ಸುದೀಪ್, ರೈತರ ಹೆಸರಿನಲ್ಲಿ ಉದ್ಧಾರವಾಗುತ್ತಿರುವವರ ವಿರುದ್ಧ ತಮ್ಮ ಸಿಟ್ಟನ್ನೂ ಹೊರಹಾಕಿದರು. ರೈತರಿಗೆ ನೆರವಾಗಲು ತಮ್ಮ BMW ಕಾರ್‍ನ್ನು ಮಾರಿ, ಆ ಹಣವನ್ನು ಟ್ರಸ್ಟ್ ಗೆ ನೀಡುವುದಾಗಿ ಸ್ಥಳದಲ್ಲೇ ಘೋಷಿಸಿಯೂ ಬಿಟ್ಟರು. 

  ಕಾರ್ಯಕ್ರಮದಲ್ಲಿ ಸುದೀಪ್ ಜೊತೆ ನಿ.ಲೋ.ನ್ಯಾ. ಸಂತೋಷ್ ಹೆಗ್ಡೆ, ನಿ. ನ್ಯಾ. ಎ.ಜೆ.ಸದಾಶಿವ, ಜಿಕೆವಿಕೆ ವಿಶ್ರಾಂತ ಕುಲಪತಿ ಕೆ. ನಾರಾಯಣ ಗೌಡ, ಸಾಹಿತಿ ದೊಡ್ಡರಂಗೇಗೌಡ, ಟ್ರಸ್ಟ್‍ನ ಅಧ್ಯಕ್ಷ ದಿನೇಶ್ ಮೊದಲಾದ ಗಣ್ಯರಿದ್ದರು. ಕಾರ್ಯಕ್ರಮದಲ್ಲಿ 15 ರೈತರಿಗೆ ತಲಾ 10 ಸಾವಿರ ರೂ. ಚೆಕ್ ನೀಡಿ ಗೌರವಿಸಲಾಯಿತು.

  Related Articles :-

  Kiccha Gives Away BMW Car for Farmers' Cause - Exclusive

 • ರೈಸನ್ ನಲ್ಲಿ ಹೆಂಗಿದ್ದಾರೆ ಕಿಚ್ಚ..?

  sudeep's risen

  ಹಾಲಿವುಡ್‍ನಲ್ಲಿ ಕಿಚ್ಚ ಮೊದಲ ಬಾರಿಗೆ ನಟಿಸುತ್ತಿರುವ ರೈಸನ್ ಚಿತ್ರದ ಫಸ್ಟ್‍ಲುಕ್ ಬಿಡುಗಡೆಯಾಗಿದೆ. ಆರ್ಮಿ ಆಫೀಸರ್ ಪಾತ್ರದಲ್ಲಿ ನಟಿಸುತ್ತಿರುವ ಕಿಚ್ಚ ಸುದೀಪ್ ಅವರ ಪೋಸ್ಟರ್ ಅಭಿಮಾನಿಗಳಿಗೆ ಇಷ್ಟವಾಗಿಬಿಟ್ಟಿದೆ.

  ಸುದೀಪ್‍ಗೆ ಆರ್ಮಿ ಆಫೀಸರ್ ಪಾತ್ರ ಹೊಸದಲ್ಲ. ಇತ್ತೀಚೆಗಷ್ಟೇ ಹೆಬ್ಬುಲಿಯಲ್ಲಿ ಆರ್ಮಿ ಆಫೀಸರ್ ಆಗಿಯೇ ನಟಿಸಿದ್ದವರು ಕಿಚ್ಚ. ಆದರೆ, ಹಾಲಿವುಡ್ ಸಿನಿಮಾಗಳಲ್ಲಿ ರಿಯಾಲಿಟಿಗೆ ಹೆಚ್ಚು ಆದ್ಯತೆ ನೀಡುತ್ತಾರೆ. ಎಂಥ ವಿಚಿತ್ರ ಸ್ಟಂಟ್‍ಗಳಿದ್ದರೂ, ಅದು ಸತ್ಯ ಎಂಬಂತೆ ಬಿಂಬಿಸುವ ಲಾಜಿಕ್ ಕೊಟ್ಟುಬಿಡುತ್ತಾರೆ. 

  ಅದೇನೇ ಇರಲಿ, ರೈಸಿಂಗ್‍ನಲ್ಲಿ ಸೈನ್ಯಾಧಿಕಾರಿಯ ಪಾತ್ರದಲ್ಲಿ ನಟಿಸುತ್ತಿರುವ ಸುದೀಪ್ ಕೀರ್ತಿ, ಹಾಲಿವುಡ್‍ನಲ್ಲೂ ವಿಜೃಂಭಿಸಲಿ.

  Related Articles :-

  Sudeep's First Look Poster Of Risen Released

  ಕಿಚ್ಚನಿಗೆ ಹಾಲಿವುಡ್‍ನ ನಿಕೋಲ್ ಶಾಲ್ಮೋ ನಾಯಕಿ

  Sudeep In Eddie Arya's Risen

 • ಲಂಡನ್ನಲ್ಲಿ ಸುದೀಪ್-ಶಿವಣ್ಣ-ಪ್ರೇಮ್ ಬ್ಯುಸಿನೋ ಬ್ಯುಸಿ

  sudeep, shivarajkumar shooting together

  ದಿ ವಿಲನ್ ಚಿತ್ರದ ಚಿತ್ರೀಕರಣಕ್ಕೆ ಶಿವರಾಜ್ ಕುಮಾರ್ ಹಾಜರಾಗಿದ್ದೇ ತಡ, ಶೂಟಿಂಗ್ಗೆ ಮಿಂಚಿನ ವೇಗ ಸಿಕ್ಕಿಬಿಟ್ಟಿದೆ. ಇದೇ ಮೊದಲ ಬಾರಿಗೆ ಸುದೀಪ್ ಮತ್ತು ಶಿವರಾಜ್ ಕುಮಾರ್ ಒಟ್ಟಿಗೇ ನಟಿಸುತ್ತಿರುವ ಚಿತ್ರದ ಶೂಟಿಂಗ್ ಭರ್ಜರಿಯಾಗಿ ನಡೆಯುತ್ತಿದೆ.

  thevillain_shooting1.jpgಲಂಡನ್ನ ಗ್ರೀನ್ವಿಚ್ ಪಾರ್ಕ್ನಲ್ಲಿ ಶಿವರಾಜ್ ಕುಮಾರ್, ಸುದೀಪ್, ಪ್ರೇಮ್ ಮತ್ತು ನಿರ್ಮಾಪಕ ಮನೋಹರ್ ಒಟ್ಟಿಗೇ ಇರುವ ಫೋಟೋಗಳನ್ನು ನಿರ್ದೇಶಕ ಪ್ರೇಮ್ ಬಹಿರಂಗಪಡಿಸಿದ್ದಾರೆ. ನಟಿ ಆಮಿ ಜಾಕ್ಸನ್ ಕೂಡಾ ತಂಡದೊಂದಿಗೆ ಇದ್ದಾರೆ.

  thevillain_shooting3.jpgಅಭಿಮಾನಿಗಳಿಗೆ ಸುದೀಪ್ ಮತ್ತು ಶಿವಣ್ಣ ಒಟ್ಟಿಗೇ ಶೂಟಿಂಗ್ನಲ್ಲಿರುವ ಫೋಟೋಗಳನ್ನು ನೋಡೋದೇ ಖುಷಿ.

 • ಲವ್ವಾಗೋಯ್ತು ಹಾಡ್ ಮ್ಯಾಲೆ

  the villain 3rd song is also super hit

  ದಿ ವಿಲನ್ ಚಿತ್ರದ 3ನೇ ಹಾಡು ಬಿಟ್ಟಿದ್ದಾರೆ ನಿರ್ದೇಶಕ ಪ್ರೇಮ್. ಲವ್ವಾಗೋಯ್ತೇ ನಿನ್‍ಮ್ಯಾಲೆ.. ಅನ್ನೋ ಹಾಡನ್ನು ಸ್ವತಃ ಪ್ರೇಮ್ ಬರೆದು ಹಾಡಿದ್ದಾರೆ. ಹಾಡಿನ ಸಾಹಿತ್ಯ ಮತ್ತು ಅರ್ಜುನ್ ಜನ್ಯ ಸಂಗೀತ ಎರಡೂ ಮಜಬೂತಾಗಿವೆ.

  ಈ ಹಾಡನ್ನು ಪ್ರೇಮ್ ಅವರಿಂದಲೇ ಹಾಡಿಸಬೇಕು ಎಂದು ಮನಸ್ಸು ಮಾಡಿದ್ದು ಸ್ವತಃ ಸುದೀಪ್. ಆದರೆ, ಪ್ರೇಮ್ ಅವರನ್ನು ಒಪ್ಪಿಸೋದು ಅಷ್ಟು ಸುಲಭವಾಗಿರಲಿಲ್ಲ. ಹೇಗೋ ಕನ್ವಿನ್ಸ್ ಮಾಡಿಸಿ ಒಪ್ಪಿಸಿದ ಹಾಡು ಸಖತ್ತಾಗಿದೆ ಎಂದಿದ್ದಾರೆ ಸುದೀಪ್.

  ನೀವು ಬಿಡಿ.. ಎಂಥವರನ್ನೂ ಕನ್ವಿನ್ಸ್ ಮಾಡ್ತೀರಿ. ಈ ಹಾಡು ನಿಮಗೇ ಅರ್ಪಣೆ, ಲವ್ ಯು ಡಾರ್ಲಿಂಗ್ ಎಂದಿದ್ದಾರೆ ಪ್ರೇಮ್.

  ಈ ಮೊದಲು ಎರಡು ಬಿಲ್ಡಪ್ ಸಾಂಗ್ ರಿಲೀಸ್ ಮಾಡಿದ್ದ ಪ್ರೇಮ್, ಈ ಬಾರಿ ಪ್ರೇಮಗೀತೆ ತಂದಿದ್ದಾರೆ. ಎಂದಿನಂತೆ ಹಾಡುಗಳಲ್ಲಿ ಪ್ರೇಮ್ ಸ್ಪರ್ಶವಿದೆ. ನಾನು ರಾಮ, ನೀನೇನ್ ಸೀತೆ ಅಲ್ಲ. ಲವ್ವಾಗೋಯ್ತೇ ನಿನ್‍ಮ್ಯಾಲೆ, ನಾನೇನ್ ಕೃಷ್ಣ ಅಲ್ಲ, ನೀನೇನ್ ರುಕ್ಕು ಅಲ್ಲ, ಲವ್ವಾಗೋಯ್ತೇ ನಿನ್‍ಮ್ಯಾಲೆ ಅನ್ನೋ ಸಾಲುಗಳು ಇಷ್ಟವಾಗುತ್ತಿವೆ.

 • ವಯಸ್ಸಾಗ್ತಾ ಆಗ್ತಾ ಚಿಕ್ಕೋರಾದ್ರು ಕಿಚ್ಚ ಸುದೀಪ್

  sudeep's young look

  ಸಿನಿಮಾಗಳಿಗೆ ಕಮಿಟ್ ಆದರೆ, ತಮ್ಮ ಲುಕ್ಕು, ಬಾಡಿ ಲಾಂಗ್ವೇಜ್ ಬದಲಿಸಿಕೊಳ್ಳೋ ವಿಚಾರದಲ್ಲಿ ಸುದೀಪ್ ಅವರಿಗೆ ಸುದೀಪ್ ಅವರೇ ಸಾಟಿ. ಈ ಬಾರಿ ಸುದೀಪ್ ಬದಲಾಗಿರೋದು ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರಕ್ಕೆ. ಆ ಚಿತ್ರದಲ್ಲಿ ಸುದೀಪ್ 80ರ ದಶಕದ ಯುವಕನಂತೆ ಕಾಣಬೇಕು. ಏಕೆಂದರೆ, ಅದು ಅಂಬರೀಶ್ ನಿರ್ವಹಿಸುತ್ತಿರುವ ಪಾತ್ರದ ಯಂಗ್ ವರ್ಷನ್.

  ಆ ಚಿತ್ರಕ್ಕಾಗಿ ಸುದೀಪ್ ಅದ್ಯಾವ ಮಟ್ಟಿಗೆ ಬೆವರು ಹರಿಸಿದ್ದಾರೆಂದರೆ, 10 ಕೆಜಿ ತೂಕ ಕಳೆದುಕೊಂಡಿದ್ದಾರೆ. 10 ಕೆಜಿ ದೇಹದ ತೂಕ ಇಳಿಸಿಕೊಳ್ಳೋದು ಸುಲಭದ ಮಾತಲ್ಲ. ವಿಶೇಷ ಡಯಟ್ ಮಾಡಿರುವ ಸುದೀಪ್, ಹಳ್ಳಿ ಯುವಕನ ಲುಕ್ ಪಡೆದುಕೊಳ್ಳೋಕೆ ಒಂದಿಷ್ಟು ಸರ್ಕಸ್‍ಗಳನ್ನೂ ಮಾಡಿದ್ದಾರೆ. ಟೋನ್ ಮಾಡಿಸಿಕೊಂಡಿದ್ದಾರೆ.

  ಈ ಎಲ್ಲ ಸಾಹಸಗಳ ಎಫೆಕ್ಟ್, ಈಗ ಸುದೀಪ್ ಇನ್ನಷ್ಟು ಮತ್ತಷ್ಟು ಯುವಕರಂತೆ ಕಾಣಿಸುತ್ತಿದ್ದಾರೆ. 30 ವರ್ಷ ಚಿಕ್ಕೋರಾಗಿದ್ದಾರೆ..  25 ರ ಹರೆಯದ ಹುಡುಗನಂತೆ ಕಾಣಿಸುತ್ತಿದ್ದಾರೆ ಅನ್ನೋದು ಕೊರಿಯೋಗ್ರಾಫರ್ ಇಮ್ರಾನ್ ಸರ್ದಾರಿಯಾ ಮಾತು. 

  ಸುದೀಪ್‍ರ ಈ ಹೊಸ ಲುಕ್‍ನ್ನು ನೀವೂ ನೋಡಿ. ನಿಮಗೆ ಲವ್ವಾದ್ರೆ ನಾವು ಜವಾಬ್ದಾರರಲ್ಲ.

 • ವರಮಹಾಲಕ್ಷ್ಮಿ ಹಬ್ಬಕ್ಕೆ ಬರ್ತಾನೆ ಪೈಲ್ವಾನ

  sudeep's pailan for varamahalakshmi

  ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾ ಮೇ ಹೊತ್ತಿಗೆ ರಿಲೀಸ್ ಆಗಬಹುದು ಎನ್ನಲಾಗಿತ್ತು. ಆದರೆ, ಚಿತ್ರದ ಬಿಡುಗಡೆ ಈಗ ಆಗಸ್ಟ್‍ಗೆ ಮುಂದೆ ಹೋಗಿದೆ. ಕಾರಣ ಸಿಂಪಲ್, ಸಿನಿಮಾವನ್ನು 9 ಭಾಷೆಗಳಲ್ಲಿ ರಿಲೀಸ್ ಮಾಡುತ್ತಿರುವುದು.

  6 ಭಾಷೆಗಳಲ್ಲಿ ಚಿತ್ರದ ಡೈಲಾಗ್ ಬರೆಯುವ ಕೆಲಸ ಮುಗಿದಿದೆ. ಹಾಡುಗಳ ಲಿರಿಕ್ಸ್ ಕೂಡಾ ಅನುವಾದವಾಗಿ ಹೋಗಿದೆ. ಈಗ ಲಿಪ್ ಸಿಂಕಿಂಗ್ ಆಗುವಂತೆ ಸಂಭಾಷಣೆ ಬರೆಯುವ ಕೆಲಸ ನಡೆಯುತ್ತಿದೆ. ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿ ಚಿತ್ರ ಪೈಲ್ವಾನ್ ಹೆಸರಲ್ಲೇ ರಿಲೀಸ್ ಆಗಲಿದೆ. ಹಿಂದಿಗೆ ಬೇರೆ ಟೈಟಲ್ ಇಡುವ ಕೆಲಸ ನಡೆಯುತ್ತಿದೆ. ಮರಾಠಿ, ಬೆಂಗಾಲಿ, ಬೋಜ್‍ಪುರಿ ಹಾಗೂ ಪಂಜಾಬಿ ಭಾಷೆಗಳಲ್ಲೂ ಸಿನಿಮಾ ಬಿಡುಗಡೆಯಾಗಲಿದೆ.

  ಆದರೆ, ಹಿಂದಿ ಬಿಡುಗಡೆ ಬಗ್ಗೆ ಇನ್ನೂ ಸ್ಪಷ್ಟ ನಿರ್ಧಾರ ಹೊರಬಿದ್ದಿಲ್ಲ. ಹಿಂದಿ ಡಬ್ಬಿಂಗ್ ಸಿನಿಮಾ ವಿತರಕರು, ಮರಾಠಿ, ಬೆಂಗಾಲಿ, ಬೋಜ್‍ಪುರಿ ಹಾಗೂ ಪಂಜಾಬಿ ಭಾಷೆಗಳಲ್ಲಿ ಸಿನಿಮಾ ಬೇಡ ಎನ್ನುತ್ತಿದ್ದಾರಂತೆ. ಹೀಗಾಗಿ, ಈ ಕುರಿತು ಇನ್ನೂ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ ಎನ್ನುತ್ತಿದೆ ಚಿತ್ರತಂಡ.

 • ವರಮಹಾಲಕ್ಷ್ಮಿ ಹಬ್ಬಕ್ಕೆ ಸುದೀಪ್ V/s ಸುದೀಪ್..?

  sudeep vs sudeep ?

  ಆಗಸ್ಟ್ 24ಕ್ಕೆ ವರಮಹಾಲಕ್ಷ್ಮಿ ಹಬ್ಬ. ಆ ದಿನ ಕನ್ನಡಿಗರಿಗೆ ಡಬಲ್ ಧಮಾಕಾ ಕಾದಿದೆಯಾ..? ಶಿವರಾಜ್‍ಕುಮಾರ್-ಸುದೀಪ್ ಕಾಂಬಿನೇಷನ್‍ನ ದಿ ವಿಲನ್ ಚಿತ್ರವನ್ನು ವರಮಹಾಲಕ್ಷ್ಮಿ ಹಬ್ಬಕ್ಕೆ ರಿಲೀಸ್ ಮಾಡೋದಾಗಿ ನಿರ್ದೇಶಕ ಪ್ರೇಮ್ ಹೇಳಿದ್ದರು. ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿರುವ ಪ್ರೇಮ್, ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸವನ್ನು ಸಮರೋಪಾದಿಯಲ್ಲಿ ಮಾಡುತಿತ್ತಿದ್ದಾರೆ. ಚಿತ್ರ ಅಂತಿಮ ಹಂತದಲ್ಲಿದೆ. ಸಿನಿಮಾ ಆಗಸ್ಟ್ 24ಕ್ಕೆ ರಿಲೀಸ್ ಆದರೆ ಅಚ್ಚರಿಯಿಲ್ಲ.

  ಇನ್ನು ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರ. ಬಹಳ ವರ್ಷಗಳ ನಂತರ ಅಂಬರೀಷ್ ನಾಯಕರಾಗಿ ನಟಿಸಿರುವ ಚಿತ್ರ. ಸುದೀಪ್ ಅವರೇ ಇಷ್ಟಪಟ್ಟು ಯಂಗ್ ಅಂಬರೀಷ್ ಆಗಿ ನಟಿಸಿರುವ ಚಿತ್ರ. ಚಿತ್ರ ರೆಡಿಯಾಗಿದ್ದು, ಸೆನ್ಸಾರ್ ಮುಂದೆ ಹೋಗೋ ಸಿದ್ಧತೆಯಲ್ಲಿದೆ. ಆ ಚಿತ್ರವೂ ಆಗಸ್ಟ್ 24ಕ್ಕೆ ರಿಲೀಸ್ ಆದರೆ ಅಚ್ಚರಿಯಿಲ್ಲ.

  ಸಿ.ಆರ್.ಮನೋಹರ್ ನಿರ್ಮಾಣದ ದಿ ವಿಲನ್ ಚಿತ್ರವನ್ನು ಕಾಂಬಿನೇಷನ್ ಕಾರಣಕ್ಕೆ ಇಡೀ ಕರ್ನಾಟಕ ಎದುರು ನೋಡುತ್ತಿದೆ. ಇದೇ ವೇಳೆ ಜಾಕ್ ಮಂಜು ನಿರ್ಮಾಣದ ಅಂಬಿ ನಿಂಗೆ ವಯಸ್ಸಾಯ್ತೋ.. ಚಿತ್ರ.. ಅಂಬರೀಷ್-ಸುದೀಪ್ ಕಾರಣಕ್ಕೇ ಕ್ರೇಜ್ ಸೃಷ್ಟಿಸಿದೆ. ಹಬ್ಬ ಆಗುತ್ತಾ..? ಕಾದು ನೋಡೋಣ..

 • ವಾರಸ್ದಾರ ವಿವಾದಕ್ಕೆ ಫುಲ್ ಸ್ಟಾಪ್ : ಸುದೀಪ್ ರಿಲ್ಯಾಕ್ಸ್

  sudeep image

  ವಾರಸ್ದಾರ ಧಾರಾವಾಹಿ ನಿಮಗೆ ನೆನಪಿರಬಹುದು. ಝೀ ಕನ್ನಡದಲ್ಲಿ ಬರುತ್ತಿದ್ದ ಈ ಧಾರಾವಾಹಿಗೆ ಕಿಚ್ಚ ಸುದೀಪ್ ನಿರ್ಮಾಪಕರಾಗಿದ್ದರು. ನಟ ಸುದೀಪ್ ಹಾಗೂ ಕಿಚ್ಚ ಕ್ರಿಯೇಷನ್ ನಿರ್ಮಾಣದ ಧಾರಾವಾಹಿ, ಒಳ್ಳೆಯ ಟಿಆರ್ಪಿಯನ್ನೂ ಕಂಡಿತ್ತು. ಆದರೆ, ಧಾರಾವಾಹಿ ಟೀಂ ಹಾಗೂ ಸುದೀಪ್ ವಿರುದ್ಧ ಚಿಕ್ಕಮಗಳೂರು ತಾಲೂಕಿನ ಬೈಗೂರು ಗ್ರಾಮದ ದೀಪಕ್ ಮಯೂರ್ ಪಟೇಲ್ ದೂರು ಕೊಟ್ಟಿದ್ದರು.

  ತಮ್ಮ ತೋಟದಲ್ಲಿ ಶೂಟಿಂಗ್ ಮಾಡಿದ ವೇಳೆ ವಾರಸ್ದಾರ ಟೀಂನಿಂದ ನಮಗೆ ನಷ್ಟವಾಗಿದೆ. ಆ ನಷ್ಟವನ್ನು ಭರಿಸಿಕೊಡಿ ಎಂದು ಚಿಕ್ಕಮಗಳೂರು 2ನೇ ಹೆಚ್ಚುವರಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ನಂತರ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿತ್ತು. ಈಗ ಪ್ರಕರಣದಲ್ಲಿ ಸುದೀಪ್ ಅವರಿಗೆ ಗೆಲುವಾಗಿದೆ.

  ದೂರಿನಲ್ಲಿ ಯಾವುದೇ ಹುರುಳಿಲ್ಲ. ದೀಪಕ್ ಮಯೂರ್ ಬೇರೆ ವ್ಯವಹಾರಗಳಲ್ಲಿ ನಷ್ಟ ಮಾಡಿಕೊಂಡು ಅದನ್ನು ಧಾರಾವಾಹಿ ತಂಡದಿಂದ ತುಂಬಿಕೊಳ್ಳಲು ಯತ್ನಿಸಿದ್ದಾರೆ ಎಂದು ತೀರ್ಪು ನೀಡಿದೆ. ಹೀಗಾಗಿ ಸುದೀಪ್ ವಿರುದ್ಧದ ದೂರು ಖುಲಾಸೆಯಾಗಿದೆ ಎಂದು ಸುದೀಪ್ ಪರ ವಕೀಲ ಗೋಪಿನಾಥ್ ತಿಳಿಸಿದ್ದಾರೆ.

 • ವಿಜಯಲಕ್ಷ್ಮಿಗೆ ಕಿಚ್ಚನ ನೆರವು - ಹೇಳಿದ್ದು ಅವರಲ್ಲ..!

  sudeep helps vijaylakshmi

  ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ, ಆರ್ಥಿಕ ಸಂಕಷ್ಟದಲ್ಲಿರುವ ನಾಗಮಂಡಲ ವಿಜಯಲಕ್ಷ್ಮಿಗೆ ಕಿಚ್ಚ ಸುದೀಪ್ 1 ಲಕ್ಷ ರೂ. ನೆರವು ನೀಡಿದ್ದಾರೆ. ಆದರೆ, ಎಂದಿನಂತೆ.. ಸುದೀಪ್ ತಾವು ನೆರವು ನೀಡಿದ್ದನ್ನು ಹೇಳಿಕೊಂಡಿಲ್ಲ. ಒನ್ಸ್ ಎಗೇಯ್ನ್.. ಇದು ವಿಜಯಲಕ್ಷ್ಮಿ ಅವರಿಂದಲೇ ಗೊತ್ತಾಗಿದೆ.

  ವಿಜಯಲಕ್ಷ್ಮಿ ಅವರ ಮೂಲಕ ಭಾ.ಮಾ.ಹರೀಶ್ ಅವರಿಗೆ ಗೊತ್ತಾಗಿ, ಅವರು ಕಿಚ್ಚ ಸುದೀಪ್ ನೆರವು ನೀಡಿರುವುದನ್ನು ಬಹಿರಂಗಪಡಿಸಿದ್ದಾರೆ. ವಿಜಯಲಕ್ಷ್ಮಿ ಅವರಿಗೆ ಶ್ರೀಮುರಳಿ ಅಭಿನಯದ ಮದಗಜ ಚಿತ್ರತಂಡ ಪಾತ್ರವೊಂದನ್ನು ನೀಡಿ ಬೆಂಬಲ ನೀಡಿದ್ದ ಬೆನ್ನಲ್ಲೇ ಸುದೀಪ್ ಆರ್ಥಿಕ ಸಹಾಯ ಒದಗಿಸಿದ್ದಾರೆ.

  Related Articles :-

  ಆಸ್ಪತ್ರೆ ಸೇರಿದ ನಾಗಮಂಡಲ ವಿಜಯಲಕ್ಷ್ಮಿ ಆರ್ಥಿಕ ಸಂಕಷ್ಟದಲ್ಲಿ..

Shivarjun Movie Gallery

KFCC 75Years Celebrations and Logo Launch Gallery