` sudeep - chitraloka.com | Kannada Movie News, Reviews | Image

sudeep

 • ಭಲ್ಲೇ ಭಲ್ಲೇ.. ದಿ ವಿಲನ್‍ಗೆ ದಲೇರ್ ಮೆಹಂದಿ

  daler mehandi sings for the villain

  ತುಣಕ್ ತುಣಕ್ ತುಣು ತುಣಕ್ ತುಣಕ್ ತುಣು ದಾದಾದಾದಾದಾ.. ಬಲ್ಲೇ ಬಲ್ಲೇ.. ಅನ್ನೋ ಸೌಂಡು ಕಿವಿಗೆ ಬಿದ್ದರೆ, ತಕ್ಷಣ ಕಣ್ಣೆದುರು ಪ್ರತ್ಯಕ್ಷವಾಗೋದು ದಲೇರ್ ಮೆಹಂದಿ ಅನ್ನೋ ಸಿಖ್ ಗಾಯಕ. ಈಗಾಗಲೇ ಕನ್ನಡದಲ್ಲಿ ಕೆಲವು ಚಿತ್ರಗಳಿಗೆ ಹಾಡಿರುವ ದಲೇರ್ ಮೆಹಂದಿ, ದಿ ವಿಲನ್ ಚಿತ್ರದ ಹಾಡಿಗೆ ಧ್ವನಿ ಕೊಟ್ಟಿದ್ದಾರೆ.

  ಅರ್ಜುನ್ ಜನ್ಯ ಸಂಗೀತ ನಿರ್ದೇಶನದ ಹಾಡನ್ನು ದಲೇರ್ ಮೆಹಂದಿ ಹಾಡಿದ್ದಾರೆ. ಮೊದಲೇ ವಿಲನ್ ಚಿತ್ರ ಕನ್ನಡ ಚಿತ್ರರಂಗದ ದಿಗ್ಗಜರ ಸಮಾಗಮವಾಗಿರುವ ಚಿತ್ರ. ಶಿವರಾಜ್‍ಕುಮಾರ್, ಸುದೀಪ್, ಪ್ರೇಮ್, ಸಿ.ಆರ್.ಮನೋಹರ್, ಆ್ಯಮಿ ಜಾಕ್ಸನ್, ಮಿಥುನ್ ಚಕ್ರವರ್ತಿ, ಶ್ರೀಕಾಂತ್.. ಹೀಗೆ ಚಿತ್ರದ ತುಂಬಾ ದೊಡ್ಡ ದೊಡ್ಡವರೇ ಇದ್ದಾರೆ. ಈಗ ದಲೇರ್ ಮೆಹಂದಿ ಸೇರ್ಪಡೆಯಾಗಿದೆ.

  ಆಂದಹಾಗೆ ದಿ ವಿಲನ್ ಚಿತ್ರದ ಬಾಕಿಯಿರುವ ಏಕೈಕ ಹಾಡಿನ ಶೂಟಿಂಗ್, ಇದೇ ಹಾಡಿನದ್ದಂತೆ. ಗೆಟ್ ರೆಡಿ.

  Related Articles :-

  After 'Namo Bhootatma', Daler Mehandi sings for 'The Villain'

 • ಭೀಮಕಾಯ ಪೈಲ್ವಾನನ ವರ್ಕೌಟ್ ಹೇಗಿತ್ತು ಗೊತ್ತಾ..? 

  sudeep reveals his workout secret

  ಪೈಲ್ವಾನ್ ಚಿತ್ರದ ಪೋಸ್ಟರ್ ರಿಲೀಸ್ ಆಗಿದೆ. ಎಲ್ಲರನ್ನೂ ಅಚ್ಚರಿಗೊಳಿಸಿರುವುದು ಕಿಚ್ಚ ಸುದೀಪ್‍ರ ಹುರಿಗಟ್ಟಿದ ದೇಹ. ಥೇಟು ಭೀಮಕಾಯ. ಗರಡಿಯ ಮಣ್ಣಿನಲ್ಲಿ ಮೊದಲೇ ಕೆಂಪು ಕೆಂಪಗಿರುವ ಕಿಚ್ಚ, ಅಪ್ಪಟ ಮಣ್ಣಿನ ಮನುಷ್ಯನಂತೆಯೇ ಕಂಡುಬಿಡುತ್ತಾರೆ. ಮಟ್ಟಿಯ ಮಣ್ಣನ್ನು ಮೈಗೆ ಮೆತ್ತಿಕೊಳ್ಳೋಕೆ ಸುದೀಪ್ ಮಾಡಿದ ವರ್ಕೌಟ್ ಅದ್ಭುತವಾಗಿಯೇ ಇತ್ತು. ಜಿಮ್ ಎಂದರೇನೇ ಕಿಲೋ ಮೀಟರುಗಟ್ಟಲೆ ದೂರವಿರುವ ಸುದೀಪ್, ತಾವು ಬಾಡಿಬಿಲ್ಡ್ ಮಾಡೋಕೆ ದುಲ್ಹನ್ ಕಬೀರ್ ಸಿಂಗ್ ಪ್ರೇರಣೆ ಹಾಗೂ ಟ್ರೈನ್ ಮಾಡಿದ್ದು ಜೀತ್ ದೇವಯ್ಯ ಅನ್ನೊದನ್ನ ಹೇಳಿಕೊಂಡಿದ್ದರು. 

  ಇಷ್ಟೆಲ್ಲ ಮಾಡೋಕೆ ಸುದೀಪ್ ತಮ್ಮ ಬೆಳಗಿನ ಸಿಹಿ ನಿದ್ರೆಯನ್ನು ಬೆಳಗ್ಗೆ 4 ಗಂಟೆಗೇ ಏಳುತ್ತಿದ್ದರಂತೆ. 5 ಗಂಟೆಗೆ ಸ್ಟುಡಿಯೋದಲ್ಲಿರುವ ಜಿಮ್‍ಗೆ ಹೋದರೆ ಸತತ ಒಂದೂವರೆ ಗಂಟೆ ಬೆವರಿಳಿಸ್ತಾ ಇದ್ರು. 15 ನಿಮಿಷ ರೆಸ್ಟ್ ತಗೊಂಡ್ರೆ ನಂತರ ಮತ್ತೆ ಶೂಟಿಂಗ್. ಸಂಜೆ 5.30ರವರೆಗೆ ಶೂಟಿಂಗ್. ಅದು ಮುಗಿದ ಮೇಲೆ ಮತ್ತೆ ಮುಕ್ಕಾಲು ಗಂಟೆ ಸ್ವಿಮ್ಮಿಂಗ್ ಪೂಲ್‍ಗೆ ಧುಮುಕಬೇಕು. ಈಜಬೇಕು. 

  ಇದೆಲ್ಲದರ ಮಧ್ಯೆ ಸುದೀಪ್ ಆಹಾರದಲ್ಲೂ ಏರುಪೇರಾಗಿದೆ. ಉಪ್ಪಿಲ್ಲ. ಖಾರ ಇಲ್ಲ. ಸಕ್ಕರೆ ಇಲ್ಲ. ಎಣ್ಣೆ ಪದಾರ್ಥ ಇಲ್ಲ. ಎಲ್ಲ ಹೋಗಲಿ, ಅವರಿಗಿಷ್ಟವಾದ ರಾಗಿ ಮುದ್ದೆಯನ್ನೂ ತಿನ್ನೋ ಹಾಗಿಲ್ಲ. ಅಂದಹಾಗೆ ಇದು ಕೇವಲ ಪೋಸ್ಟರ್. ಸುದೀಪ್ ಹೇಗೆಲ್ಲ ಬದಲಾದರು ಅನ್ನೋ ವಿಡಿಯೋ ಕೂಡಾ ಶೀಘ್ರದಲ್ಲೇ ಬರಲಿದೆಯಂತೆ. 

  ಅದೇನೇ ಕಷ್ಟಬಿದ್ದಿದ್ದರೂ ಸಿನಿಮಾ, ಪಾತ್ರ ತೆರೆಯ ಮೇಲೆ ಬಂದಾಗ ಸಿಗೋ ಖುಷಿಯೇ ಬೇರೆ. ಒಬ್ಬ ಕಲಾವಿದನಿಗೆ ತೃಪ್ತಿ ಕೊಡುವುದೇ ಅದು. ಸುದೀಪ್ ಆ ಮಜಲಿನಲ್ಲಿದ್ದಾರೆ.

 • ಮಗಳ ಎದುರು ಆಗಲೇ ಗೆದ್ದಾಗಿದೆ ಪೈಲ್ವಾನ್

  sudeep's daughters first reaction on pailwan

  ಪೈಲ್ವಾನ್ ಚಿತ್ರದ ಪೋಸ್ಟರ್ ರಿಲೀಸ್ ಆದಾಗ ಎಲ್ಲರೂ ಹುಬ್ಬೇರಿಸಿದ್ದರು. ಮೂಗಿನ ಮೇಲೆ ಬೆರಳಿಟ್ಟಿದ್ದರು. ಅಭಿಮಾನಿಗಳು ವಾರೆ ವ್ಹಾ ಎಂದಿದ್ದರು. ಈಗ ಚಿತ್ರ ರಿಲೀಸ್ ಆಗಿದೆ.ಕೃಷ್ಣ ಡೈರೆಕ್ಷನ್, ಸ್ವಪ್ನಾ ಕೃಷ್ಣ ನಿರ್ಮಾಣದಲ್ಲಿ ಸುದೀಪ್ ಇದೇ ಮೊದಲ ಬಾರಿಗೆ ಕುಸ್ತಿ ಪಟುವಾಗಿ ಕಾಣಿಸಿಕೊಂಡಿದ್ದಾರೆ. ದೇಹ ಪ್ರದರ್ಶನವೂ ಅದ್ಭುತವಾಗಿದೆ.

  ಪ್ರೇಕ್ಷಕರ ಒಪ್ಪಿಗೆಗೂ ಮೊದಲೇ ಸುದೀಪ್ ಮೊದಲ ಗೆಲುವು ದಾಖಲಿಸಿದ್ದಾರೆ. ಅದೂ ಅವರ ಪ್ರೀತಿಯ ಮಗಳು ಸಾನ್ವಿಯ ಎದುರು. ನನ್ನ ಪೈಲ್ವಾನ್ ಪೋಸ್ಟರ್ ನೋಡಿ ನನ್ನ ಮಗಳು ವ್ಹಾವ್ ಎಂದರೂ.. ಆಮೇಲೆ ಪದೇ ಪದೇ ನಿಜಾನಾ ಅಂಥ ಕೇಳ್ತಾ ಇದ್ಲು. ಆಗ ಅವಳಿಗೆ ನಾನು ಜಿಮ್ ಮಾಡುತ್ತಿರುವ ದೃಶ್ಯಗಳನ್ನು ತೋರಿಸಿ ಪ್ರೂವ್ ಮಾಡಿದೆ. ನಿಜಕ್ಕೂ ಮಕ್ಕಳು ನನ್ನ ಸಿನಿಮಾ ಇಷ್ಟಪಡ್ತಾರೆ ಎಂದಿರುವ ಸುದೀಪ್, ಪೈಲ್ವಾನ್ ಚಿತ್ರದಿಂದಾಗಿ ನಾನು ಸರಿಯಾಗಿ ನಿದ್ದೆ, ಊಟ ಮತ್ತು ವರ್ಕೌಟ್ ಮಾಡುತ್ತಿದ್ದೇನೆ ಎಂದಿದ್ದಾರೆ. ಕೃಷ್ಣ ನಿರ್ದೇಶನದ ಪೈಲ್ವಾನ್ 5 ಭಾಷೆಗಳಲ್ಲಿ ಜಗತ್ತಿನಾದ್ಯಂತ ಏಕಕಾಲಕ್ಕೆ 3 ಸಾವಿರಕ್ಕೂ ಹೆಚ್ಚು ಥಿಯೇಟರ್ಗಳಲ್ಲಿ ರಿಲೀಸ್ ಆಗಿದೆ.

 • ಮತ್ತೆ ನಿರ್ದೇಶನಕ್ಕಿಳೀತಾರೆ ಕಿಚ್ಚ

  sudeep will be back to direction soons

  ಪೈಲ್ವಾನ್ ಗೆದ್ದ ಜೋಶ್‌ನಲ್ಲಿರೋ ಸುದೀಪ್ ಮತ್ತೆ ನಿರ್ದೇಶನಕ್ಕಿಳಿಯುತ್ತಿದ್ದಾರೆ. ಸದ್ಯಕ್ಕೆ ಕೋಟಿಗೊಬ್ಬ-೩ಯಲ್ಲಿ ಬ್ಯುಸಿಯಾಗಿರುವ ಸುದೀಪ್, ಹಿಂದಿಯಲ್ಲಿ ದಬಂಗ್-೩ಯಲ್ಲಿ ನಟಿಸಿದ್ದಾರೆ. ಇದಾದ ಮೇಲೆ ಪ್ಯಾಂಟಮ್ ಹಾಗೂ ಇನ್ನೊಂದು ಬಹುಭಾಷಾ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಆ ಕೆಲಸ ಮುಗಿದ ಮೇಲೆ ನಿರ್ದೇಶನದ ಸಿನಿಮಾ ಶುರುವಾಗಲಿದೆ.

  ಇದುವರೆಗೆ ಸುದೀಪ್ ೬ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಮೈ ಆಟೋಗ್ರಾಫ್, #೭೩ ಶಾಂತಿ ನಿವಾಸ, ವೀರಮದಕರಿ, ಜಸ್ಟ್ ಮಾತ್ ಮಾತಲ್ಲಿ, ಕೆಂಪೇಗೌಡ ಮತ್ತು ಮಾಣಿಕ್ಯ. ೨೦೨೦ರ ಮಧ್ಯಭಾಗದಲ್ಲಿ ೭ನೇ ಚಿತ್ರಕ್ಕೆ ಡೈರೆಕ್ಟರ್ ಕ್ಯಾಪ್ ತೊಡಲಿದ್ದಾರೆ ಸುದೀಪ್. ಅಫ್‌ಕರ‍್ಸ್, ಈ ಬಗ್ಗೆ ಸುದೀಪ್ ಅವರಿಂದ ಯಾವುದೇ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ.

 • ಮತ್ತೆ ಬ್ಯಾಂಕಾಕ್‍ಗೆ `ದಿ ವಿಲನ್' ಟೀಂ

  the villain team in bangkok

  ಈಗಾಗಲೇ ಎರಡು ಸುತ್ತಿನ ಚಿತ್ರೀಕರಣ ಮುಗಿಸಿರುವ ದಿ ವಿಲನ್ ಚಿತ್ರತಂಡ ಮತ್ತೆ ಫಾರಿನ್ನಿಗೆ ಹೊರಟು ನಿಂತಿದೆ. ಈ ಬಾರಿ ಬ್ಯಾಂಕಾಕ್‍ನಲ್ಲಿ ಶೂಟಿಂಗ್ ನಡೆಯಲಿದೆ. 

  ಮುಂದಿನ ವಾರದಿಂದ ಬ್ಯಾಂಕಾಕ್‍ನಲ್ಲಿ 10 ದಿನಗಳ ಶೂಟಿಂಗ್ ಶುರುವಾಗಲಿದೆ. ಶಿವರಾಜ್ ಕುಮಾರ್, ಸುದೀಪ್, ಆ್ಯಮಿ ಜಾಕ್ಸನ್ ಸೇರಿದಂತೆ ಇಡೀ ತಂಡ ಚಿತ್ರೀಕರಣದಲ್ಲಿ ಬ್ಯುಸಿಯಾಗಲಿದೆ.  ಶೂಟಿಂಗ್ ಮುಗಿಯುವ ಮುನ್ನವೇ ಚಿತ್ರದ ಹಕ್ಕುಗಳು ಮಾರಾಟವಾದ ಖುಷಿಯಲ್ಲಿರುವ ನಿರ್ದೇಶಕ ಪ್ರೇಮ್, ಬ್ಯಾಂಕಾಕ್‍ನಲ್ಲಿ ಇನ್ನಷ್ಟು ಉತ್ಸಾಹದಿಂದ ಶೂಟಿಂಗ್‍ನಲ್ಲಿ ತೊಡಗಿಕೊಳ್ಳಲಿದ್ದಾರೆ. 

 • ಮತ್ತೆ ಶುರುವಾಯ್ತು ವಿಲನ್

  the villain shooting re starts

  ಆ್ಯಮಿ ಜಾಕ್ಸನ್ ಅವರ ವೀಸಾ ಸಮಸ್ಯೆಯಿಂದಾಗಿ ಸ್ವಲ್ಪ ದಿನ ಸ್ಥಗಿತಗೊಂಡಿದ್ದ ದಿ ವಿಲನ್ ಚಿತ್ರದ ಶೂಟಿಂಗ್ ಮತ್ತೆ ಶುರುವಾಗಿದೆ. ಆ್ಯಮಿ ಜಾಕ್ಸನ್ ಮತ್ತೆ ಬಂದಿದ್ದಾರೆ. ಚಿತ್ರತಂಡ ಮತ್ತೆ ಚಿಕ್ಕಮಗಳೂರಿನ ಮಡಿಲು ಸೇರಿದೆ.

  ಇನ್ನೂ 4 ದಿನ ಚಿಕ್ಕಮಗಳೂರಿನಲ್ಲಿ ಶೂಟಿಂಗ್ ಇದ್ದು, ಕಿಚ್ಚ ಸುದೀಪ್ ಹಾಗೂ ಆ್ಯಮಿ ಜಾಕ್ಸನ್ ಜೊತೆಗಿನ ದೃಶ್ಯಗಳನ್ನು ಶೂಟ್ ಮಾಡಿಕೊಳ್ಳಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ.

  Related Articles :-

  ದಿ ವಿಲನ್ ಆ್ಯಮಿ ಜಾಕ್ಸನ್ ಪ್ರಾಬ್ಲಂ

   

 • ಮತ್ತೊಬ್ಬ ಹೊಸ ನಿರ್ದೇಶಕನಿಗೆ ಸುದೀಪ್ ಚಾನ್ಸ್

  sudeep gives chance to gurudutt ganiga

  ಹೊಸ ಪ್ರತಿಭೆಗಳನ್ನು ಗುರುತಿಸುವ, ಅವಕಾಶ ನೀಡುವುದರಲ್ಲಿ ಸದಾ ಮುಂದಿರುವ ಕಿಚ್ಚ ಸುದೀಪ್, ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಸದ್ಯಕ್ಕೆ ವಿಲನ್ ಚಿತ್ರದ ಶೂಟಿಂಗ್‍ನಲ್ಲಿ ಬಿಡುವಿಲ್ಲದೆ ತೊಡಗಿಸಿಕೊಂಡಿರುವ ಸುದೀಪ್, ಆನಂತರ ಪೈಲ್ವಾನ್ ಸಿನಿಮಾಗೆ ರೆಡಿಯಾಗಬೇಕು. ಅದರ ಮಧ್ಯೆಯೇ ಕೋಟಿಗೊಬ್ಬ-3 ಸಿನಿಮಾ ಶುರುವಾಗಲಿದೆ. 

  ಮೊನ್ನೆ ಮೊನ್ನೆಯಷ್ಟೇ `ಅಂಬಿ ನಿಂಗೆ ವಯಸ್ಸಾಯ್ತೋ' ಸಿನಿಮಾ ನಿರ್ದೇಶನದ ಅವಕಾಶವನ್ನು ಗುರುದತ್ತ ಗಾಣಿಗ ಎಂಬ ಯುವಕನಿಗೆ ನೀಡಿದ್ದ ಸುದೀಪ್, ತಮ್ಮ ಕೋಟಿಗೊಬ್ಬ-3 ಚಿತ್ರ ನಿರ್ದೇಶನದ ಅವಕಾಶವನ್ನು ಕಾರ್ತಿಕ್ ಎಂಬ ಹೊಸ ಪ್ರತಿಭೆಗೆ ನೀಡಿದ್ದಾರೆ. ಕಾರ್ತಿಕ್ ಕಥೆ ಹೇಳಿದ ಶೈಲಿ ಇಷ್ಟವಾಗಿ ಸುದೀಪ್‍ಗೆ ಕಾರ್ತಿಕ್‍ಗೆ ಅವಕಾಶ ಕೊಟ್ಟಿದ್ದಾರಂತೆ.

  ಕಾರ್ತಿಕ್ ಈಗಾಗಲೇ ಕಥೆ, ಚಿತ್ರಕಥೆ, ಸಂಭಾಷಣೆ ಎಲ್ಲವನ್ನೂ ಸಿದ್ಧ ಮಾಡಿಟ್ಟುಕೊಂಡು ಕಾಯುತ್ತಿದ್ದಾರೆ. ನಿರ್ಮಾಪಕ ಸೂರಪ್ಪ ಬಾಬು ಕೂಡಾ ರೆಡಿ ಇದ್ದಾರೆ. ದಿ ವಿಲನ್ ಚಿತ್ರದ ಶೂಟಿಂಗ್ ಮುಗಿದ ತಕ್ಷಣ ಉಳಿದ ಎಲ್ಲ ಚಿತ್ರಗಳಿಗೂ ಚಾಲನೆ ಸಿಗಲಿದೆ

 • ಮತ್ತೊಮ್ಮೆ ಹೃದಯ ಗೆದ್ದ ಕಿಚ್ಚನ ಮಾತು..

  humiliating them is like humiliating me says sudeep

  ಕಿಚ್ಚ ಸುದೀಪ್ ವ್ಯಕ್ತಿತ್ವೇ ಹಾಗೆ.. ಮಾಗಿದೆ. ಪ್ರತಿಯೊಬ್ಬರನ್ನೂ ನಮ್ಮವರು ಎಂದು ಭಾವಿಸುವ ಸುದೀಪ್, ಈ ಬಾರಿ ಅಭಿಮಾನಿಗಳಿಗೆ ಒಂದು ಕಿವಿ ಮಾತು ಹೇಳಿದ್ದಾರೆ. ಪೈಲ್ವಾನ್ ಚಿತ್ರದ ಪೋಸ್ಟರ್ ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಅದು ಆನ್‍ಲೈನ್‍ನಲ್ಲಿ ನಂಬರ್ 1 ಟ್ರೆಂಡಿಂಗ್ ಆಗಿತ್ತು.

  ಕಿಚ್ಚನನ್ನು ಹೊಗಳುವ ಭರದಲ್ಲಿ ಕೆಲವರು ಬೇರೆ ನಟರನ್ನು ಲೇವಡಿ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕಿಚ್ಚ.. `ಪೈಲ್ವಾನ್ ಚಿತ್ರ ಟ್ರೆಂಡಿಂಗ್‍ನಲ್ಲಿರುವುದು ನಿಮ್ಮ ಬೆಂಬಲದಿಂದ. ಪ್ರೀತಿಯಿಂದ. ಆದರೆ ಅಭಿಮಾನಿಗಳೇ.. ನನ್ನ ಅಭಿಮಾನಿಸುವುದು ಎಂದರೆ, ಇನ್ನೊಬ್ಬರನ್ನು ಹೀಯಾಳಿಸುವುದು.. ಟೀಕಿಸುವುದಲ್ಲ. ಕರ್ನಾಟಕ ಚಿತ್ರರಂಗ ಈಗ ಏರುತ್ತಿರುವ ಎತ್ತರವೇ ಬೇರೆ. ಇಂತಹ ಸಂದರ್ಭದಲ್ಲಿ ಈ ರೀತಿಯ ವರ್ತನೆ ಬೇಡ. ಬೇರೆ ನಟರನ್ನು ಅವಮಾನಿಸಿದರೆ.. ಅದು ನನ್ನನ್ನೇ ಅವಮಾನಿಸಿದಂತೆ'

  ಇದು ಅಭಿಮಾನಿಗಳಿಗೆ.. ಅದರಲ್ಲೂ ಅತಿರೇಕಿ ಅಭಿಮಾನಿಗಳಿಗೆ ಸುದೀಪ್ ಮಾಡಿರುವ ಮನವಿ. ಅಭಿಮಾನಿಗಳು ಅರ್ಥ ಮಾಡಿಕೊಳ್ಳಬೇಕು.

 • ಮರೆತೇನೆಂದರೆ ಮರೆಯಲಿ ಹ್ಯಾಂಗ.. ಆ ದಿನವಾ.. - ಕಿಚ್ಚ

  sudeep recalls maankiya days and ravichandran

  ಪ್ರತಿಯೊಬ್ಬರಿಗೂ ಅವರವರ ಜೀವನದಲ್ಲಿ ಕೆಲವೊಂದು ಅದ್ಭುತ ಕ್ಷಣ, ದಿನಗಳು ಇದ್ದೇ ಇರುತ್ತವೆ. ಕಿಚ್ಚ ಸುದೀಪ್‍ಗೆ ಅಂಥಾದ್ದೊಂದು ಮರೆಯಲಾಗದ ದಿನ ಮೇ 1. ಏಕೆಂದರೆ, ಅದು ರವಿಚಂದ್ರನ್‍ಗೆ ಆ್ಯಕ್ಷನ್ ಹೇಳಿದ ಆ ದಿನ.

  ಮಾಣಿಕ್ಯ, ರವಿಚಂದ್ರನ್ ಮತ್ತು ಕಿಚ್ಚ ಸುದೀಪ್ ಒಟ್ಟಿಗೇ ತೆರೆ ಮೇಲೆ ಕಾಣಿಸಿಕೊಂಡ ಮೊದಲ ಸಿನಿಮಾ. ಆ ಚಿತ್ರಕ್ಕೆ ಸುದೀಪ್ ಅವರೇ ಡೈರೆಕ್ಟರ್. ಆ ದಿನವನ್ನು ನೆನಪಿಸಿಕೊಂಡಿರುವ ಸುದೀಪ್, ಮಾಣಿಕ್ಯ ಚಿತ್ರದ ಶೂಟಿಂಗ್, ಕಥೆ, ತಂತ್ರಜ್ಞರು, ಕಲಾವಿದರ ಬಳಗವನ್ನೆಲ್ಲ ನೆನಪಿಸಿಕೊಂಡಿದ್ದಾರೆ.

  ಒಂದು ಒಳ್ಳೆಯ ಸ್ಕ್ರಿಪ್ಟ್, ಮಾನವೀಯತೆ, ಭಾವನೆಗಳ ಮೌಲ್ಯವೇ ಇದ್ದ ಕಥೆ ಅದು. ಚಿತ್ರದ ಪ್ರತಿಯೊಂದು ಹಂತವೂ ಅದ್ಭುತವಾಗಿತ್ತು. ಆದರೆ, ಫಸ್ಟ್ ಕಾಪಿ ನೋಡುವ ಭಾಗ್ಯವೇ ನನಗೆ ಸಿಗಲಿಲ್ಲ. ಆದರೆ, ರಿಲೀಸ್ ದಿನ ಚಿತ್ರವನ್ನು ಥಿಯೇಟರ್‍ನಲ್ಲಿ ನೋಡಿದಾಗ ಆದ ಸಂಭ್ರಮವೇ ಬೇರೆ. 

  ಆ ಸಂಭ್ರಮ, ಆ ಗೆಲುವು.. ನನ್ನನ್ನು ಇಂದಿಗೂ ಪ್ರತಿದಿನವೂ ಉಲ್ಲಸಿತನನ್ನಾಗಿ ಮಾಡುತ್ತದೆ ಎಂದು ಪ್ರೀತಿಯಿಂದ ಹೇಳಿಕೊಂಡಿದ್ದಾರೆ ಕಿಚ್ಚ ಸುದೀಪ್.

   

 • ಮಲ್ಟಿಪ್ಲೆಕ್ಸ್ ವಿರುದ್ಧ ಸಿಡಿದೆದ್ದ ಶಿವಣ್ಣ

  shivarajkumar expresses anger multiplex

  ಕರ್ನಾಟಕದಲ್ಲಿ ಮಲ್ಟಿಪ್ಲೆಕ್ಸ್‍ಗಳು ರಾಜಕೀಯ ಮಾಡುತ್ತವೆ. ಪರಭಾಷೆ ಚಿತ್ರಗಳನ್ನು ನೋಡುವ ರೀತಿಗೂ, ಕನ್ನಡ ಚಿತ್ರಗಳನ್ನು ನೋಡುವ ರೀತಿಗೂ ವ್ಯತ್ಯಾಸಗಳಿವೆ. ಕನ್ನಡ ಚಿತ್ರ ಸಕ್ಸಸ್ ಆಗಿದ್ದರೂ, ಏಕಾಏಕಿ ಶೋ ರದ್ದು ಮಾಡಿ, ದಿಢೀರ್ ಎಂದು ಬೇರೆ ಭಾಷೆ ಸಿನಿಮಾ ಪ್ರದರ್ಶಿಸಿದ ಘಟನೆಗಳೂ ಜರುಗಿವೆ. ಕನ್ನಡ ಚಿತ್ರಗಳಿಗೆ ಶೋ ಕೊಡದೆ ಸತಾಯಿಸುವವರಿಗೆನೂ ಕೊರತೆಯಿಲ್ಲ. ಇದು ಇಂದು ನಿನ್ನೆಯ ಕಥೆಯೇನೂ ಅಲ್ಲ. ಆದರೆ, ಈ ಬಾರಿ ಮಲ್ಟಿಪ್ಲೆಕ್ಸ್‍ಗಳ ವಿರುದ್ಧ ಗುಡುಗಿರುವುದು ಶಿವರಾಜ್‍ಕುಮಾರ್.

  ಈ ಬಾರಿ ಇಂತಹ ಅನುಭವ ಅವರ ಚಿತ್ರಕ್ಕೂ ಆಗುತ್ತಿದೆ. ಮಲ್ಟಿಪ್ಲೆಕ್ಸ್‍ಗಳು ಕನ್ನಡ ಚಿತ್ರ ನಿರ್ಮಾಪಕರಿಗೆ ಬೇರೆ ಭಾಷೆಯ ಚಿತ್ರಗಳಿಗಿಂತ ಕಡಿಮೆ ಶೇರ್ ಕೊಡುತ್ತಾರೆ. ಬೇರೆ ಭಾಷೆಯವರಿಗೆ ನೀಡಿದಂತೆಯೇ ಕನ್ನಡ ಚಿತ್ರಗಳಿಗೂ ಶೇರ್ ಕೊಡಿ ಎಂದು ಮನವಿ ಮಾಡಿತ್ತು ದಿ ವಿಲನ್ ಚಿತ್ರತಂಡ. ಆದರೆ, ಇದಕ್ಕೆ ಸ್ಥಳೀಯ ಮಲ್ಟಿಪ್ಲೆಕ್ಸ್‍ನವರು ಬಿಟ್ಟರೆ, ಬೇರೆಯವರು ಕ್ಯಾರೇ ಎಂದಿಲ್ಲ. ಇದರ ವಿರುದ್ಧ ನಿರ್ದೇಶಕ ಜೋಗಿ ಪ್ರೇಮ್ ಧಿಕ್ಕಾರವನ್ನೇ ಕೂಗಿದ್ದರು. ಈಗ ಶಿವಣ್ಣ ಮಾತನಾಡಿದ್ದಾರೆ.

  ಚೆನ್ನಾಗಿ ಹೋಗುತ್ತಿರುವ ಕನ್ನಡ ಚಿತ್ರಗಳ ಶೋಗಳನ್ನು ಏಕಾಏಕಿ ರದ್ದು ಮಾಡಿದರೆ, ಅದರ ವಿರುದ್ಧ ನಾನು ನಿಲ್ಲಬೇಕಾಗುತ್ತದೆ. ಬೇರೆ ಭಾಷೆಗಳವರಿಗೆ ಕೊಡುವ ಪ್ರಾಧಾನ್ಯತೆಯನ್ನು ಕನ್ನಡಿಗರಿಗೂ ಕೊಡಿ. ಬಿಸಿನೆಸ್ ಮಾಡೋಕೆ ಎಂದು ಬಂದವರು ಇಲ್ಲಿನ ನೆಲ, ಜಲ, ಭಾಷೆ, ಸಂಸ್ಕøತಿಗೆ ಗೌರವ ಕೊಡಬೇಕು. ನೀವು ಹೇಳಿದ್ದನ್ನು ಕೇಳಿಕೊಂಡು ಇರೋಕೆ ನಾವೇನೂ ಮುಠ್ಠಾಳರಲ್ಲ ಎಂದಿದ್ದಾರೆ ಶಿವಣ್ಣ.

  ಮಲ್ಟಿಪ್ಲೆಕ್ಸ್‍ಗಳ ಆಟಾಟೋಪದ ವಿರುದ್ಧ ಈ ಬಾರಿ ದೊಡ್ಡ ಸಮರವೊಂದು ಶುರುವಾಗಿದೆ. 

 • ಮಾಣಿಕ್ಯನ ಮಾತಿಗೆ ಮಣಿದ ಮಣಿಕಂಠ

  absconded child returns home after sudeep's advice

  ಕಿಚ್ಚ ಸುದೀಪ್ ಇತ್ತೀಚೆಗೆ ಲೈಫ್‍ಗುರುವಾಗುತ್ತಿದ್ದಾರಾ..? ಆದರೆ, ಸುದೀಪ್ ಮಾತಿಗೆ ಅಂತಾದ್ದೊಂದು ಶಕ್ತಿ ಇದೆ ಅನ್ನೋದು ಸಾಬೀತಾಗುತ್ತಿದೆ. ಜೀವನವೇ ಸಾಕು ಎಂದುಕೊಂಡಿದ್ದ ಯುವಕನಿಗೆ ಸುದೀಪ್ ಹೇಳಿದ್ದ ಬುದ್ದಿವಾದ, ಅವನನ್ನು ಮತ್ತೊಮ್ಮೆ ಜೀವನದಲ್ಲಿ ಗೆಲ್ಲುವಂತೆ ಪ್ರೇರೇಪಿಸಿದ ಕಥೆಯನ್ನು ಓದಿದ್ದೀರಿ. ಈಗ, ಮಣಿಕಂಠನ ಕಥೆ. ಮುನಿಸಿಕೊಂಡು ಮನೆ ಬಿಟ್ಟು ಹೋಗಿದ್ದ ಸುದೀಪ್ ಅವರ ಅಭಿಮಾನಿ ಮಣಿಕಂಠ, ಮತ್ತೆ ಮನೆಗೆ ಬಂದಿದ್ದಾನೆ.

  ಮೇ 18ರಂದು ನಾಪತ್ತೆಯಾಗಿದ್ದ ಮಣಿಕಂಠ, ಬೆಂಗಳೂರಿನ ಜೆಪಿ ನಗರದ ಹುಡುಗ. ಕಿಚ್ಚ ಸುದೀಪ್ ಅಭಿಮಾನಿ. ವಿಷಯ ತಿಳಿದ ಸುದೀಪ್, ಎಲ್ಲಿದ್ದರೂ ಮನೆಗೆ ಬಾ ಎಂದು ವಿಡಿಯೋ ಮೂಲಕ ಮನವಿ ಮಾಡಿದ್ದರು. ಈಗ ಮಗ ಮನೆಗೆ ಬಂದಿದ್ದಾನೆ. ಮಣಿಕಂಠನ ಕುಟುಂಬದವರು ಸುದೀಪ್ ಹಾಗೂ ಪೊಲೀಸರಿಗೆ ಧನ್ಯವಾದ ಅರ್ಪಿಸಿದ್ದಾರೆ. ಕಿಚ್ಚ ಸುದೀಪ್ ಕೂಡಾ ಮಣಿಕಂಠ ಮನೆಗೆ ಮರಳಿರುವುದಕ್ಕೆ ಹರ್ಷಗೊಂಡಿದ್ದಾರೆ.

 • ಮಾರ್ಷಲ್ ಆಟ್ರ್ಸ್ ಕಲಿಯಲಿದ್ದಾರೆ ಸುದೀಪ್

  sudeep to learn martial arts in thailan

  ಕಿಚ್ಚ ಸುದೀಪ್ ಮಾರ್ಷಲ್ ಆಟ್ರ್ಸ್ ಕಲಿಯಲಿದ್ದಾರೆ. ಕುಸ್ತಿ, ಬಾಕ್ಸಿಂಗ್ ಜೊತೆ ಮಾರ್ಷಲ್ ಆಟ್ರ್ಸ್‍ನ್ನೂ ಕಲಿತು ಬರಲಿದ್ದಾರೆ ಸುದೀಪ್. ಇದಕ್ಕಾಗಿ ಅವರು ಥೈಲ್ಯಾಂಡ್‍ಗೆ ಹೋಗುತ್ತಿದ್ದಾರೆ. ಅಲ್ಲಿ 2ರಿಂದ 3  ವಾರಗಳ ಕಾಲ ಇದ್ದು, ಮಾರ್ಷಲ್ ಆಟ್ರ್ಸ್ ಬೇಸಿಕ್ ಕಲಿತುಬರಲಿದ್ದಾರೆ.

  ಅಂದಹಾಗೆ ಸುದೀಪ್ ಇಷ್ಟೆಲ್ಲ ತಯಾರಿ ನಡೆಸುತ್ತಿರುವುದು ಪೈಲ್ವಾನ್ ಚಿತ್ರಕ್ಕಾಗಿ. ಈಗ ಬೆಂಗಳೂರಿನಲ್ಲೇ ಬೆವರು ಹರಿಸುತ್ತಿರುವ ಸುದೀಪ್, ಮಾರ್ಷಲ್ ಆಟ್ರ್ಸ್ ಕಲಿಯೋಕೆ ಹೋಗುವ ಮುನ್ನ ಫಿಟ್ ಆಗಿರಬೇಕು. ಆ ಫಿಟ್‍ನೆಸ್ ಬಂದ ನಂತರವೇ ಮಾರ್ಷಲ್ ಆಟ್ರ್ಸ್ ತರಬೇತಿ ಶುರುವಾಗಲಿದೆ.

  ಚಿತ್ರದ ಚಿತ್ರೀಕರಣ ಮಾರ್ಚ್ ಕೊನೆಯ ವಾರದಲ್ಲಿ ಶುರುವಾಗಲಿದೆ. ಸುದೀಪ್ ಅವರ ಮಾರ್ಷಲ್ ಆಟ್ರ್ಸ್ ಕಲೆ ಪ್ರೇಕ್ಷಕರಿಗೆ ಪರಿಚಯವಾಗುವುದು ಚಿತ್ರದ ಕ್ಲೈಮಾಕ್ಸ್‍ನಲ್ಲಿ. ಉಳಿದಂತೆ ಚಿತ್ರದ ಚಿತ್ರೀಕರಣ ಸರಾಗವಾಗಿ ನೆರವೇರಲಿದೆ. ಮಾತಿನ ಭಾಗ ಮುಗಿಸಿಕೊಳ್ಳಲಿದ್ದೇವೆ. ಸದ್ಯಕ್ಕೆ ವಿಲನ್ ಚಿತ್ರೀಕರಣ ಮುಗಿಯುವುದನ್ನು ಎದುರು ನೋಡುತ್ತಿದ್ದೇವೆ ಎಂದಿದ್ದಾರೆ ನಿರ್ದೇಶಕ ಕೃಷ್ಣ.

 • ಮಾಳವಿಕಾ ಗುಂಡ್ಕಲ್ ವಿಡಿಯೋ - ಸುದೀಪ್ ಹೇಳಿದ್ದೇನು..?

  sudeep, paramesh gundkal, malavika

  ಬಿಗ್‍ಬಾಸ್ ಮನೆಯಲ್ಲಿ ಏನೇನೋ ನಡೆಯುತ್ತಿದೆ. ನೋಡಿ.. ಅಲ್ಲೇನೋ ನಡೆಯಬಾರದ್ದು ನಡೆದು ಹೋಗಿದೆ ಎಂದು ಹೇಳುತ್ತಾ, ಒಂದು ವಿಡಿಯೋ ಇತ್ತೀಚೆಗೆ ಸೋಷಿಯಲ್ ಮೀಡಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಮಾಳವಿಕಾ ಬಿಗ್‍ಬಾಸ್ ಸ್ಪರ್ಧಿಯಾಗಿದ್ದವರು. ಪರಮೇಶ್ವರ್ ಗುಂಡ್ಕಲ್ ಶೋನ ನಿರ್ದೇಶಕ ಹಾಗೂ ಕಲರ್ಸ್ ಕನ್ನಡ ವಾಹಿನಿಯ ಮ್ಯಾನೇಜರ್. ಹೀಗಾಗಿ, ಆ ವಿಡಿಯೋ ಸುತ್ತ ಗುಸುಗುಸು ಪಿಸುಪಿಸು ಜೋರಾಗಿದ್ದವು.

  ಅವುಗಳಿಗೆಲ್ಲ ಸ್ವತಃ ಪರಮೇಶ್ವರ್ ಗುಂಡ್ಕಲ್ ತೆರೆ ಎಳೆದಿದ್ದಾರೆ. ಅದರಲ್ಲೇನೂ ವಿಶೇಷವಿಲ್ಲ. ಒಬ್ಬ ನಿರ್ದೇಶಕನಾಗಿ ನಾನು ಏನು ಮಾಡಬೇಕೋ ಅಷ್ಟು ಮಾಡಿದ್ದೇನೆ. ಒಬ್ಬ ಸ್ಪರ್ಧಿ ಸೀಕ್ರೆಟ್ ರೂಮ್‍ಗೆ ಹೋಗುವಾಗ ಡೈರೆಕ್ಟರ್ ಆಗಿ ನಾನು ಅಲ್ಲಿರಬೇಕಿತ್ತು. ಇದ್ದೇನೆ. ಅಷ್ಟೆ. ಇನ್ನು ಮಾಳವಿಕಾಗೆ ನಾನು ಸಪೋರ್ಟ್ ಮಾಡಿದ್ದರೆ, ಮಾಳವಿಕಾ ವಿನ್ನರ್ ಆಗಬೇಕಿತ್ತು. ಆದರೆ ಮಾಳವಿಕಾ 4ನೇ ಸ್ಥಾನ ಪಡೆದರು ಎಂಬುದು ಗೊತ್ತಿರಲಿ. ಎಲ್ಲವೂ ನಿರ್ಧಾರವಾಗುವುದು ಅವರು ಪಡೆದ ಮತಗಳ ಆಧಾರದ ಮೇಲೆ ಎಂದಿದ್ದಾರೆ ಪರಮೇಶ್ವರ್ ಗುಂಡ್ಕಲ್.

  ಬಿಗ್‍ಬಾಸ್ ನಿರೂಪಕ ಕಿಚ್ಚ ಸುದೀಪ್ ಕೂಡಾ ಗುಂಡ್ಕಲ್ ಮತ್ತು ಮಾಳವಿಕಾ ಅವರನ್ನು ಸಮರ್ಥಿಸಿಕೊಂಡಿದ್ದಾರೆ. ಸುಖಾಸುಮ್ಮನೆ ಏನೇನೋ ಸುದ್ದಿ ಮಾಡಬಾರದು. ನನಗೆ ಇಬ್ಬರೂ ಗೊತ್ತು. ಅವರು ತಪ್ಪು ಮಾಡಿಲ್ಲ. ಅವರೇನಾದರೂ ತಪ್ಪು ಮಾಡಿದ್ದರೆ, ನಾನೂ ತಪ್ಪು ಮಾಡಿದ್ದೇನೆ ಎಂದೇ ಅರ್ಥ ಎಂದಿದ್ದಾರೆ ಸುದೀಪ್.

  ಒಬ್ಬ ನಿರ್ದೇಶಕನಾಗಿ ಗುಂಡ್ಕಲ್ ಅವರಿಗೆ ಕ್ಯಾಮೆರಾ ಎಲ್ಲಿವೆ ಎಂಬುದು ಗೊತ್ತಿರುತ್ತೆ. ಎಡಿಟ್ ಮಾಡಿಸುವ, ಡಿಲೀಟ್ ಮಾಡಿಸುವ ಅಧಿಕಾರವೂ ಇರುತ್ತೆ. ಅದಾವುದೂ ಆಗಿಲ್ಲ. ಬಹುಶಃ, ತಪ್ಪು ಮಾಡಿದ್ದರೆ, ಗುಂಡ್ಕಲ್ ಅದನ್ನೆಲ್ಲ ಮಾಡುತ್ತಿದ್ದರೇನೋ.. ಇದರಲ್ಲಿಯೇ ಪರಮೇಶ್ವರ್ ಗುಂಡ್ಕಲ್ ಅಮಾಯಕ ಎಂಬುದು ಗೊತ್ತಾಗುತ್ತಿದೆ ಎಂದಿದ್ದಾರೆ ಸುದೀಪ್.

  ನನಗೂ ಎಷ್ಟೋ ಜನ ವೇದಿಕೆಗಳಲ್ಲೇ ಮುತ್ತು ಕೊಟ್ಟಿದ್ದಾರೆ. ಅದು ಪ್ರಸಾರವೂ ಆಗಿದೆ. ಆದರೆ, ವೈರಲ್ ಆಗಿಲ್ಲ ಎಂದ ಸುದೀಪ್, ಮಾಳವಿಕಾ ತುಂಬಾ ಫ್ರೆಂಡ್ಲಿ. ಅದರಲ್ಲೇನೂ ವಿಶೇಷವಿಲ್ಲ ಎಂದಿದ್ದಾರೆ. ಬಿಗ್‍ಬಾಸ್‍ನಲ್ಲಿ ಅನೈತಿಕ ಚಟುವಟಿಕೆ ನಡೆದಿಲ್ಲ. ನಡೆಯುವುದೂ ಇಲ್ಲ. ಅಕಸ್ಮಾತ್ ಅಂಥದ್ದು ನಡೆದ ದಿನ, ನಾನು ಅಲ್ಲಿರುವುದೂ ಇಲ್ಲ ಎಂದಿದ್ದಾರೆ ಸುದೀಪ್.

 • ಮಿಸ್ಟರಿ ಸ್ಟಾರ್‍ಗೆ ಕಿಚ್ಚನ ಕ್ರೇಜಿ ಶುಭಾಶಯ

  sudeep wishes crazy star on his birthday

  ರವಿಚಂದ್ರನ್ ಸಿಕ್ಕಾಪಟ್ಟೆ ಕ್ರೇಜಿ. ಅಷ್ಟೇ ಮಿಸ್ಟರಿ. ನಾನು ಅವರ ಸಿನಿಮಾಗಳ ಅಭಿಮಾನಿ. ಅವರೊಮದಿಗೆ ಕೆಲಸ ಮಾಡಲು, ಅವರಿಗೆ ಆ್ಯಕ್ಷನ್ ಕಟ್ ಹೇಳುವ, ಅವರೊಂದಿಗೆ ನಟಿಸುವ ಅವಕಾಶ ನನಗೆ ಸಿಕ್ಕಿದೆ. ಅವು ಅದ್ಭುತ ಅನುಭವಗಳು. ಹೀಗಿದ್ದರೂ ರವಿಚಂದ್ರನ್ ಹೇಗೆ ಎಂದು ಯಾರಾದರೂ ಕೇಳಿದರೆ, ನನ್ನ ಬಳಿ ಉತ್ತರ ಇಲ್ಲ. 

  ಅವರನ್ನ ಅರ್ಥ ಮಾಡಿಕೊಳ್ಳೊದು ಸುಲಭವಲ್ಲ. ಅವರು ಪ್ರತೀ ಸಲ ಅಚ್ಚರಿ ಕೊಡುತ್ತಲೇ ಇರುತ್ತಾರೆ. ಅವರ ಯೋಚನೆಯ ಧಾಟಿ ಮತ್ತು ಎತ್ತರಗಳೇ ಬೇರೆ. ಹೀಗಾಗಿಯೇ ಅವರು ಹೀಗೇ ಎಂದು ಜಡ್ಜ್‍ಮೆಂಟ್ ಕೊಡುವುದು ಕಷ್ಟ. ಒಟ್ಟಿನಲ್ಲಿ ಅವರು ನಂಬಿಕೆ, ಶಕ್ತಿ ಹಾಗೂ ಜ್ಞಾನದ ಭಂಡಾರ. 

  ನೀವು ಹೀಗೆಯೇ ನಮಗೆ ಮನರಂಜನೆ ಕೊಡ್ತಾ ಇರಿ ಅಣ್ಣಾ..

  ಇದು ಕ್ರೇಜಿಸ್ಟಾರ್ ರವಿಚಂದ್ರನ್‍ಗೆ ಕಿಚ್ಚ ಸುದೀಪ್ ಶುಭಾಶಯ ಕೋರಿರುವ ಸ್ಟೈಲ್. ಸುದೀಪ್‍ರನ್ನು ತಮ್ಮ ಹಿರಿಯ ಮಗ ಎಂದೇ ಪ್ರೀತಿಸುವ ರವಿಚಂದ್ರನ್‍ಗೆ, ಸುದೀಪ್ ಅಪ್ಪಟ ಅಭಿಮಾನಿಯಂತೆ ಶುಭ ಕೋರಿದ್ದಾರೆ.

 • ಮುಖ್ಯಮಂತ್ರಿಗಳೇ ಕ್ರಿಕೆಟ್ ನೋಡೋಕೆ ಬನ್ನಿ

  cm siddaramaiah is invted to be chief guest for cricket match by sudeep

  ಸಿಎಂ ಸಿದ್ದರಾಮಯ್ಯ ಕ್ರಿಕೆಟ್ ಪ್ರೇಮಿ. ಕಿಚ್ಚ ಸುದೀಪ್ ಕ್ರಿಕೆಟ್ ಆಟಗಾರರೂ ಹೌದು. ಕ್ರಿಕೆಟ್ ಮೇಲಿನ ಪ್ರೀತಿಗಾಗಿ ಸುದೀಪ್ ಅವರೇ ನೇತೃತ್ವ ವಹಿಸಿ ಆಯೋಜಿಸಿರುವ ಕನ್ನಡ ಚಲನಚಿತ್ರ ಕ್ರಿಕೆಟ್ ಪಂದ್ಯಾವಳಿ, ಏಪ್ರಿಲ್ 7ರಂದು ಶುರುವಾಗಲಿದೆ. ಟಿ-10 ಅಂದರೆ, ಹತ್ತು ಓವರ್‍ಗಳ ಮ್ಯಾಚ್ ನಡೆಯಲಿವೆ. ಈ ಟೂರ್ನಿಯ ಸಮಾರೋಪ ಸಮಾರಂಭಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬರಬೇಕು ಎಂದು ಕಿಚ್ಚ ಸುದೀಪ್ ಆಹ್ವಾನ ನೀಡಿದ್ದಾರೆ.

  ಟೂರ್ನಿಯಲ್ಲಿ 6 ತಂಡಗಳು ಭಾಗವಹಿಸುತ್ತಿವೆ. ಪ್ರತಿ ತಂಡದಲ್ಲೂ 12 ಆಟಗಾರರಿರುತ್ತಾರೆ. ಅಪ್ಪಟ ಸಿಸಿಎಲ್ ಮಾದರಿಯಲ್ಲಿಯೇ ನಡೆಯಲಿರುವ ಈ ಟೂರ್ನಿಗೆ ನಿಜಕ್ಕೂ ಸಿದ್ದರಾಮಯ್ಯ ಅತಿಥಿಯಾಗಿ ಬರ್ತಾರಾ..? ಅದೊಂದೇ ಡೌಟು. ಏಕೆಂದರೆ, ಏಪ್ರಿಲ್ ಹೊತ್ತಿಗೆ ರಾಜ್ಯದಲ್ಲಿ ಚುನಾವಣೆ ರಂಗೇರಿರುತ್ತದೆ. ಪ್ರಚಾರ ಬಿರುಸಾಗಿರುತ್ತದೆ. ಕಾಂಗ್ರೆಸ್ ಪಕ್ಷದ ಸೂಪರ್ ಸ್ಟಾರ್ ಪ್ರಚಾರಕ ಸಿದ್ದರಾಮಯ್ಯ ರಾಜಕೀಯ ಬ್ಯುಸಿ ನಡುವೆಯೂ ಕ್ರಿಕೆಟ್ ಸಮಾರೋಪ ಸಮಾರಂಭಕ್ಕೆ ಬರುತ್ತಾರಾ..? 

 • ಮುಖ್ಯಮಂತ್ರಿಯಿಂದ ದಿ ವಿಲನ್ ಟೀಸರ್ ರಿಲೀಸ್

  the villain teaser to release today

  ದಿ ವಿಲನ್ ಚಿತ್ರದ ಟೀಸರ್ ಬಿಡುಗಡೆಯೇ ಚಿತ್ರದ ರಿಲೀಸ್‍ನಷ್ಟು ಹವಾ ಸೃಷ್ಟಿಸಿದೆ.  ಜೂನ್ 28 ಚಿತ್ರದ ಟೀಸರ್ ಬಿಡುಗಡೆಯಾಗುತ್ತಿದ್ದು, ಅಭಿಮಾನಿಗಳು 500 ರೂ.ನ ಟಿಕೆಟ್ ಖರೀದಿಸಿ ಟೀಸರ್ ನೋಡೋಕೆ ರೆಡಿಯಾಗುತ್ತಿದ್ದಾರೆ. ಟೀಸರ್‍ನ್ನು ಮುಖ್ಯಮಂತ್ರಿ ಕುಮಾರಸ್ವಾಮಿಯವರೇ ಬಿಡುಗಡೆ ಮಾಡಲಿದ್ದಾರಂತೆ.

  ಟೀಸರ್ ಶೋಗೆ 500 ರೂ. ಟಿಕೆಟ್ ದರ ನಿಗದಿ ಮಾಡಲಾಗಿದ್ದು, ಆ ಹಣವನ್ನು ಚಿತ್ರರಂಗದ ಅಶಕ್ತ ಕಲಾವಿದರು, ನಿರ್ದೇಶಕರಿಗೆ ನೀಡಲು ನಿರ್ಧರಿಸಲಾಗಿದೆ. ಆ ದಿನವೇ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಂದಲೇ ನೆರವು ನೀಡಲು ಚಿತ್ರತಂಡ ನಿರ್ಧರಿಸಿದೆ.

  ವಿದೇಶದಲ್ಲಿ ಚಿತ್ರೀಕರಣದಲ್ಲಿರುವ ಕಾರಣ, ಸುದೀಪ್ ಇರುವುದಿಲ್ಲ. ಉಳಿದಂತೆ ಚಿತ್ರದ ಹೀರೋ ಶಿವಣ್ಣ ಸೇರಿದಂತೆ ಬಹುತೇಕ ಕನ್ನಡ ಚಿತ್ರರಂಗ ಅಲ್ಲಿರುತ್ತೆ. ಸಿ.ಆರ್.ಮನೋಹರ್ ನಿರ್ಮಾಣ, ಜೋಗಿ ಪ್ರೇಮ್ ನಿರ್ದೇಶನದ ಅದ್ಧೂರಿ ಚಿತ್ರ, ಬಿಡುಗಡೆಗೆ ಮುನ್ನವೇ ಭರ್ಜರಿ ಸದ್ದು ಮಾಡುತ್ತಿದೆ.

 • ಮುರುಘಾ ಶ್ರೀಗಳು ಮದಕರಿ ವಿವಾದ ತಣ್ಣಗಾಗಿಸ್ತಾರಾ..?

  will murugha mutt cools madakari nayaka issue

  ಮದಕರಿ ಚಿತ್ರದ ವಿವಾದ.. ಜಾತಿ ವಿವಾದಕ್ಕೆ ತಿರುಗಿರುವುದು ಗೊತ್ತೇ ಇದೆ. ಈಗ ಆ ವಿವಾದ ಮುರುಘಾ ಶರಣರ ಮಠದ ಅಂಗಳ ತಲುಪಿದೆ. ಶರಣರ ಉತ್ಸವಕ್ಕಾಗಿ ಚಿತ್ರದುರ್ಗಕ್ಕೆ ತೆರಳಿದ್ದ ದರ್ಶನ್ ಮತ್ತು ರಾಕ್‍ಲೈನ್ ವೆಂಕಟೇಶ್, ಈ ಕುರಿತು ಮುರುಘಾ ಶ್ರೀಗಳ ಜೊತೆ ಮಾತನಾಡಿದ್ದಾರಂತೆ.

  ವಾಲ್ಮೀಕಿ ಸಮುದಾಯದ ಶ್ರೀಗಳಾದ ಪ್ರಸನ್ನಾನಂದ ಸ್ವಾಮೀಜಿಗಳಿಗೆ ಮುರುಘಾ ಮಠದ ಶ್ರೀಗಳೆಂದರೆ ಅಪಾರ ಗೌರವ. ಹೀಗಾಗಿ ಮುರುಘಾ ಶರಣರ ಮೂಲಕ ವಾಲ್ಮೀಕಿ ಶ್ರೀಗಳನನ್ನು ಸುಮ್ಮನಾಗಿಸುವ ಪ್ರಯತ್ನ ಮಾಡಿದ್ದಾರಂತೆ ರಾಕ್‍ಲೈನ್ ವೆಂಕಟೇಶ್ ಮತ್ತು ದರ್ಶನ್.

  ಮದಕರಿ ಸಿನಿಮಾವನ್ನು ದರ್ಶನ್ ನಾಯಕತ್ವದಲ್ಲಿ ಮಾಡುತ್ತೇನೆ. ಅದರಲ್ಲಿ ಯಾವುದೇ ಅನುಮಾನವಿಲ್ಲ. ಕೆಲಸಗಳು ಈಗಾಗಲೇ ಶುರುವಾಗಿವೆ ಎಂದಿರುವ ರಾಕ್‍ಲೈನ್ ವೆಂಕಟೇಶ್, ವಿವಾದದ ಬಗ್ಗೆ ಮಾತನಾಡುವುದಿಲ್ಲ. ಆದರೆ ವಿವಾದವನ್ನು ತಣ್ಣಗಾಗಿಸುವ ಕೆಲಸಕ್ಕೆ ಕೈ ಹಾಕಿರುವುದು ಸತ್ಯ.

 • ಮೆಗಾಸ್ಟಾರ್ 151ನೇ ಚಿತ್ರದಲ್ಲಿ ಕಿಚ್ಚ - ಸುದ್ದಿ ಪಕ್ಕಾ

  sudeep in syreera

  ಮೆಗಾಸ್ಟಾರ್ ಚಿರಂಜೀವಿ ಅಭಿನಯದ "ಉಯ್ಯಾಲವಾಡ ನರಸಿಂಹ ರೆಡ್ಡಿ' ಚಿತ್ರದಲ್ಲಿ ಸುದೀಪ್‌ ನಟಿಸುತ್ತಾರೆ ಎಂಬ ಸುದ್ದಿ ಕೇಳಿ ಬರ್ತಾನೇ ಇತ್ತು. ಡೇಟ್‌ ಕ್ಲಾಶ್‌ ಆಗಬಹುದು ಎಂಬ ಕಾರಣಕ್ಕೆ ಸುದೀಪ್‌ ನಟಿಸುವ ಬಗ್ಗೆ ಅನುಮಾನವೂ ಇತ್ತು. ಈಗ ಯಾವ ಸಂಶಯವೂ ಇಲ್ಲ. ಸುದ್ದಿ ಪಕ್ಕಾ ಆಗಿದೆ.

  ಆ ಚಿತ್ರದ ಹೆಸರು ಈಗ "ಉಯ್ಯಾಲವಾಡ ನರಸಿಂಹ ರೆಡ್ಡಿ ಅಲ್ಲ. ಸೈಯರಾ ನರಸಿಂಹ ರೆಡ್ಡಿ. ಚಿತ್ರವನ್ನು ಚಿರಂಜೀವಿ ಪುತ್ರ ರಾಮಚರಣ್‌ ತೇಜ ಅವರೇ ನಿರ್ಮಿಸುತ್ತಿದ್ದಾರೆ. ಸುರೇಂದ್ರ ರೆಡ್ಡಿ ನಿರ್ದೇಶಕ.  ಚಿರಂಜೀವಿ ಹುಟ್ಟುಹಬ್ಬ  ಮೆಗಾ ಬರ್ತ್ ಡೇ ಸ್ಪೆಷಲ್ ಆಗಿ ಚಿತ್ರದ ಮೋಷನ್‌ ಪೋಸ್ಟರ್‌ ಬಿಡುಗಡೆಯಾಗಿದೆ. 

  ಸೈಯರಾ ನರಸಿಂಹ ರೆಡ್ಡಿ ಚಿತ್ರದಲ್ಲಿ ಬಾಲಿವುಡ್, ಟಾಲಿವುಡ್, ಸ್ಯಾಂಡಲ್​ವುಡ್, ಕಾಲಿವುಡ್​ನ ಕಲಾವಿದರ ದೊಡ್ಡ ದಂಡೇ ಇದೆ. ಚಿರಂಜೀವಿ ಜೊತೆಗೆ ಅಮಿತಾಭ್‌ ಬಚ್ಚನ್‌, ಸುದೀಪ್‌, ಜಗಪತಿ ಬಾಬು, ವಿಜಯ್‌ ಸೇತುಪತಿ, ನಾಸರ್‌, ರವಿ ಕಿಶನ್‌, ಸುಬ್ಬರಾಜು ಮುಂತಾದವರು ನಟಿಸಲಿದ್ದಾರೆ. ನಾಯಕಿಯಾಗಿ ನಯನತಾರಾ ಇರುತ್ತಾರೆ. ಎಷ್ಟೋ ವರ್ಷಗಳ ನಂತರ ಎ.ಆರ್‌. ರೆಹಮಾನ್‌ ತೆಲುಗು ಚಿತ್ರಕ್ಕೆ ಸಂಗೀತ ನೀಡುತ್ತಿರುವುದು ವಿಶೇಷ. 

  ಉಯ್ಯಾಲವಾಡ ನರಸಿಂಹ ರೆಡ್ಡಿ, ಆಂಧ್ರಪ್ರದೇಶಕ್ಕಷ್ಟೇ ಅಲ್ಲ, ಇಡೀ ಭಾರತಕ್ಕೇ ದೊಡ್ಡ ಹೆಸರು. 1857ರಲ್ಲಿ ಭಾರತದ ಸ್ವಾತಂತ್ರ್ಯ ಸಂಗ್ರಾಮ ಶುರುವಾಗುವ ಮುನ್ನವೇ ಬ್ರಿಟಿಷರ ವಿರುದ್ಧ ಬಂಡಾಯವೆದ್ದು ಮಣಿಸಿದ್ದ ಧೀರ. ಉಯ್ಯಾಲವಾಡ ನರಸಿಂಹ ರೆಡ್ಡಿಯನ್ನು ಭಾರತದ ಮೊದಲ ಸ್ವಾತಂತ್ರ್ಯ ಹೋರಾಟಗಾರ ಎಂದೇ ಗುರುತಿಸಲಾಗುತ್ತೆ. ಆತನನ್ನು 1847ರಲ್ಲಿ ಬ್ರಿಟಿಷರು ಗಲ್ಲಿಗೇರಿಸಿದ್ದರು. ಅಂಥಾದ್ದೊಂದು ಐತಿಹಾಸಿಕ ಚಿತ್ರದಲ್ಲಿ ಸುದೀಪ್ ನಟಿಸಲಿದ್ದಾರೆ. ಪಾತ್ರ ಯಾವುದು ಎನ್ನುವುದು ಇನ್ನೂ ಗೊತ್ತಾಗಿಲ್ಲ. 

   

 • ಮೊದಲ ಐತಿಹಾಸಿಕ ಚಿತ್ರದಲ್ಲಿ ಸುದೀಪ್

  sudeep in historical movie

  ಕಿಚ್ಚ ಸುದೀಪ ಇದೇ ಮೊದಲ ಬಾರಿಗೆ ಐತಿಹಾಸಿಕ ಚಿತ್ರವೊಂದಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ತೆಲುಗಿನ ಸೈರಾ ಚಿತ್ರದಲ್ಲಿ ಸುದೀಪ್ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಕರ್ನಾಟಕದಲ್ಲಿ ಸಂಗೊಳ್ಳಿ ರಾಯಣ್ಣನಂತೆಯೇ ಆಂಧ್ರದಲ್ಲಿ ಬ್ರಿಟಿಷರ ನಿದ್ದೆಗೆಡಿಸಿದ್ದ ಹೋರಾಟಗಾರ ಸೈರಾರೆಡ್ಡಿ. ಸೈರಾರೆಡ್ಡಿಯಾಗಿ ಚಿರಂಜೀವಿ ನಟಿಸುತ್ತಿದ್ದು, ಚಿತ್ರದಲ್ಲಿ ದಿಗ್ಗಜರ ಸೈನ್ಯವೇ ಜಮೆಯಾಗಿದೆ. ಆ ದಿಗ್ಗಜರ ಸೈನ್ಯದಲ್ಲಿ ಸುದೀಪ್ ಅವರದ್ದು ಅತ್ಯಂತ ಪ್ರಮುಖ ಪಾತ್ರ.

  ಮತ್ತೊಂದು ಮಹತ್ವದ ಚಿತ್ರಕ್ಕೆ ನಾನು ಸೇರಿಕೊಂಡಿದ್ದೇನೆ. ಚಿರಂಜೀವಿ ಸರ್ ಜೊತೆ ನಟಿಸುತ್ತಿದ್ದೇನೆ. ಉದ್ವೇಗವಿದೆ. ಆತಂಕವೂ ಇದೆ. ಥ್ರಿಲ್ಲಾಗುತ್ತಿದೆ ಎಂದು ಹೇಳಿಕೊಂಡಿದ್ದಾರೆ ಸುದೀಪ್. ಕೋಟಿಗೊಬ್ಬ 3 ಚಿತ್ರದ ಮೊದಲ ಶೆಡ್ಯೂಲ್ ಮುಗಿಸಿ ಸೈರಾ ಟೀಂ ಸೇರಿಕೊಂಡಿದ್ದಾರೆ.

  ಸಂಗೊಳ್ಳಿ ರಾಯಣ್ಣ ಸಿನಿಮಾದಲ್ಲಿ ಸುದೀಪ್, ಹಿನ್ನೆಲೆ ಧ್ವನಿ ನೀಡಿದ್ದರು. ಬಾಹುಬಲಿ ಚಿತ್ರದಲ್ಲಿ ಶಸ್ತ್ರಾಸ್ತ್ರ ಮಾರಾಟಗಾರನಾಗಿ ಪುಟ್ಟ ಪಾತ್ರದಲ್ಲಿ ನಟಿಸಿದ್ದರು. ಅಷ್ಟು ಬಿಟ್ಟರೆ, ಒಂದು ಐತಿಹಾಸಿಕ ಚಿತ್ರದಲ್ಲಿ ನಟಿಸುತ್ತಿರುವುದು ಸುದೀಪ್‍ಗೆ ಇದೇ ಮೊದಲು.

 • ಯಂಗ್ ಅಂಬಿಯಾಗಿ ಕಬಡ್ಡಿ ಆಡಿದ ಸುದೀಪ್

  sudeep plays kabbadi as young ambi in ambi ninge vaisaito

  ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರದಲ್ಲಿ ಕಿಚ್ಚ ಸುದೀಪ್ ಯಂಗ್ ಅಂಬರೀಷ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದ ಚಿತ್ರೀಕರಣವಂತೂ ಹಗಲೂ ರಾತ್ರಿ ಪುರುಸೊತ್ತಿಲ್ಲದೆ ನಡೆಯುತ್ತಿದೆ. ಮೋಹನ್ ಬಿ ಕೆರೆ ಸ್ಟುಡಿಯೋದಲ್ಲಿನ ಸೆಟ್‍ನಲ್ಲಿ ಸುದೀಪ್ ಕಬಡ್ಡಿ ಆಡಿದ್ದಾರೆ. ಕಚ್ಚೆ ಪಂಚೆ ಧರಿಸಿ ಸುದೀಪ್ ಕಬಡ್ಡಿ ಆಡಿರುವ ಫೋಟೋಗಳು ಅಭಿಮಾನಿಗಳಿಗೆ ಥ್ರಿಲ್ ನೀಡುತ್ತಿರುವುದು ನಿಜ.

  ಸುದೀಪ್‍ಗೆ ಅಂದರೆ ಯಂಗ್ ಅಂಬರೀಷ್‍ಗೆ ಜೋಡಿಯಾಗಿರೋದು ಶೃತಿ ಹರಿಹರನ್. ತಲೆ ತುಂಬಾ ಮಲ್ಲಿಗೆ ಹೂ ಮುಡಿದ ಅಪ್ಪಟ ಗೃಹಿಣಿಯ ವೇಷದಲ್ಲಿ ಶೃತಿ ಹರಿಹರನ್ ಇದ್ದಾರೆ. ಸಿನಿಮಾವನ್ನು ಅಂಬರೀಷ್ ಸಖತ್ ಎಂಜಾಯ್ ಮಾಡುತ್ತಿದ್ದು, ಅಂಬರೀಷ್ ಅವರಿಗೆ ಜೋಡಿಯಾಗಿರೋದು ಸುಹಾಸಿನಿ.

  ಗುರುದತ್ ಗಾಣಿಗ ಎಂಬ ಯುವ ಪ್ರತಿಭೆ, ಚಿತ್ರದ ನಿರ್ದೇಶನದ ಹೊಣೆ ಹೊತ್ತಿದ್ದಾರೆ. ಅಂಬಿ ಮಾಮ ಅವರಿಗಾಗಿಯೇ ಈ ಸಿನಿಮಾ. ಟೆಕ್ನಾಲಜಿಯಲ್ಲಿ ನನ್ನ ಹೈಟ್‍ನ್ನು ಅಂಬಿ ಮಾಮ ಹೈಟ್‍ಗೆ ಮ್ಯಾಚ್ ಮಾಡಿ ಶೂಟಿಂಗ್ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ ಸುದೀಪ್.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery