` sudeep - chitraloka.com | Kannada Movie News, Reviews | Image

sudeep

 • ಪೈಲ್ವಾನ್‍ಗೆ ಪವರ್ ಸ್ಟಾರ್ ಪವರ್

  puneeth to be chief guest for pailwan audio release

  ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರದ ಮೇಲೆ ಭಾರಿ ನಿರೀಕ್ಷೆ ಇದೆ. ಸುದೀಪ್ ಇದೇ ಮೊದಲ ಬಾರಿಗೆ ಕುಸ್ತಿ ಪಟುವಾಗಿ ನಟಿಸಿರುವ ಚಿತ್ರವಿದು. 5 ಭಾಷೆಗಳಲ್ಲಿ ಸಿದ್ಧವಾಗಿರುವ ಪೈಲ್ವಾನ್ ಸೆಪ್ಟೆಂಬರ್‍ನಲ್ಲಿ ರಿಲೀಸ್ ಆಗುತ್ತಿದೆ. ವರಮಹಾಲಕ್ಷ್ಮಿ ಹಬ್ಬದ ದಿನ ಚಿತ್ರದುರ್ಗದಲ್ಲಿ ಆಡಿಯೋ ರಿಲೀಸ್.

  ಪೈಲ್ವಾನ್ ಆಡಿಯೋ ಬಿಡುಗಡೆಗೆ ಸುನಿಲ್ ಶೆಟ್ಟಿ ಕೂಡಾ ಬರುತ್ತಿದ್ದಾರೆ. ಇದೆಲ್ಲದರ ಜೊತೆಗೆ ಕಾರ್ಯಕ್ರಮದ ಸ್ಪೆಷಲ್ ಗೆಸ್ಟ್ ಆಗಿ ಬರುತ್ತಿರುವುದು ಪುನೀತ್ ರಾಜ್‍ಕುಮಾರ್. ಇದು ಸಹಜವಾಗಿಯೇ ಚಿತ್ರತಂಡದ ಖುಷಿ ಹೆಚ್ಚಿಸಿದೆ.

  ಕೃಷ್ಣ ನಿರ್ದೇಶನದ ಚಿತ್ರದಲ್ಲಿ ಸುನಿಲ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸ್ವಪ್ನ ಕೃಷ್ಣ ನಿರ್ದೇಶನವಿದ್ದು, ಆಕಾಂಕ್ಷಾ ಸಿಂಗ್ ನಾಯಕಿ.

 • ಪ್ಯಾಂಟಮ್ ಅವತಾರ ಎತ್ತಲಿದ್ದಾನೆ ಪೈಲ್ವಾನ್

  is ohanthom sudeep's next film

  ಕಿಚ್ಚ ಸುದೀಪ್, ರಂಗಿತರಂಗ ಖ್ಯಾತಿಯ ಅನೂಪ್ ಭಂಡಾರಿ ಒಟ್ಟಿಗೇ ಸಿನಿಮಾ ಮಾಡಲಿದ್ದಾರೆ. ಅವರಿಬ್ಬರೂ ಈಗಾಗಲೇ ಘೋಷಿಸಿರುವ ಬಿಲ್ಲ ರಂಗ ಭಾಷಾ ಚಿತ್ರಕ್ಕೂ ಮೊದಲು ಇನ್ನೊಂದು ಚಿತ್ರ ಸೆಟ್ಟೇರಲಿದೆ ಎಂಬ ವಿಷಯ ಗೊತ್ತಿದೆಯಷ್ಟೇ. ಈಗ ಆ ಚಿತ್ರದ ಹೆಸರು ಪ್ಯಾಂಟಮ್ ಎಂಬ ಸುದ್ದಿ ಹೊರಬಿದ್ದಿದೆ.

  ಹೌದೇ ಎಂದರೆ ಅನೂಪ್ ಭಂಡಾರಿ ಯೆಸ್ ಅನ್ನಲ್ಲ.. ನೋ ಎಂದೂ ಹೇಳಲ್ಲ. ಎಲ್ಲವನ್ನೂ ಸುದೀಪ್ ಅವರೇ ಹೇಳಲಿದ್ದಾರೆ. ಯಾವ ರೀತಿಯ ಸಿನಿಮಾ, ಕಥೆ, ನಾಯಕಿಯ ಬಗ್ಗೆ ಅವರೇ ಅಧಿಕೃತವಾಗಿ ಹೇಳ್ತಾರೆ. ವೇಯ್ಟ್ ಎನ್ನುತ್ತಾರೆ.

  ಪೈಲ್ವಾನ್ ಗೆದ್ದ ಸಂಭ್ರಮದಲ್ಲಿರೋ ಸುದೀಪ್ ಅವರಿಗೆ ಈ ವಾರ ಸೈರಾ ಸಂಭ್ರಮ. ಅತ್ತ ದಬಾಂಗ್ 3, ಇತ್ತ ಕೋಟಿಗೊಬ್ಬ 3 ಚಿತ್ರೀಕರಣ. ಇವೆಲ್ಲ ಮುಗಿಯೋದು ಡಿಸೆಂಬರ್ ಹೊತ್ತಿಗೆ. ಅಷ್ಟು ಹೊತ್ತಿಗೆ ಎಲ್ಲವೂ ಫೈನಲ್ ಆಗಲಿದೆ.

 • ಪ್ರಕಾಶ್ ರೈಗೆ ಕಿಚ್ಚನ ಬಹುಪರಾಕ್

  sudeep praises prakash raj

  ಕಿಚ್ಚ ಸುದೀಪ್, ತಮಗೆ ಇಷ್ಟವಾಗಿದ್ದನ್ನು, ಅನ್ನಿಸಿದ್ದನ್ನು ಮುಚ್ಚುಮರೆಯಿಲ್ಲದ ಹೇಳುವ ವ್ಯಕ್ತಿ. ಇಷ್ಟವಾದವರನ್ನು ಕರಡಿಯಂತೆ ಪ್ರೀತಿಸುವ ಸುದೀಪ್, ಮೊನ್ನೆ ಪ್ರಕಾಶ್ ರೈ ಅವರ `ಇರುವುದೆಲ್ಲವ ಬಿಟ್ಟು..' ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಬಂದಿದ್ದರು. ಅದೂ ಏರ್‍ಪೋರ್ಟ್‍ಗೆ ಹೋಗಿ, ಅಲ್ಲಿ ಪ್ರಕಾಶ್ ರೈ ಅವರ ಟ್ವಿಟರ್ ನೋಡಿ, ಪ್ರಯಾಣವನ್ನು ಮುಂದಕ್ಕೆ ಹಾಕಿ ಕಾರ್ಯಕ್ರಮಕ್ಕೆ ಬಂದಿದ್ದರು ಸುದೀಪ್. ಅಷ್ಟೇ ಪ್ರೀತಿಯಿಂದ ಪ್ರಕಾಶ್ ರೈ ಅವರ ಮೇಲಿನ ಪ್ರೀತಿ, ಅಭಿಮಾನವನ್ನು ಬಿಚ್ಚಿಟ್ಟರು.

  ನನ್ನ ನಟನಾ ಬದುಕಿನಲ್ಲಿ ನಾನು ಶರಣಾಗಿರುವುದು ಇಬ್ಬರಿಗೆ ಮಾತ್ರ. ಮೊದಲು ಮಾತಾಡ್ ಮಾತಾಡ್ ಮಲ್ಲಿಗೆ ಚಿತ್ರೀಕರಣದ ವೇಳೆ ವಿಷ್ಣುವರ್ಧನ್ ಸರ್‍ಗೆ. ಆಮೇಲೆ ರನ್ನ ಚಿತ್ರೀಕರಣದ ವೇಳೆ ಪ್ರಕಾಶ್ ರೈ ಅವರಿಗೆ.. ಎಂದರು ಸುದೀಪ್.

  ಪ್ರಕಾಶ್ ರೈ ಜೊತೆ ನಟಿಸುವ ಅವಕಾಶ ನನಗೆ ಸಿಕ್ಕಿದ್ದು ರನ್ನ ಚಿತ್ರದಲ್ಲಿ. ಅವರು ಮಾತನಾಡುವಾಗ ಎಕೋ ಹೊಡೆಯುತ್ತೆ. ಅವರು ಎದುರಿಗಿದ್ದರೆ ನಟಿಸುವುದು ಕಷ್ಟ. ರನ್ನದಲ್ಲಿ ಕೂಡಾ ಅಷ್ಟೆ, ಅವರು ನಟಿಸುವಾಗ ನಾನು ಮಾತನಾಡಲೇ ಇಲ್ಲ. ಅವರು ಮಾತನಾಡುವ ತನಕ ಸುಮ್ಮನಿದ್ದು, ನಂತರ ಅವರ ಕೈಯ್ಯನ್ನು ಮೆಲ್ಲಗೆ ಒತ್ತಿದ್ದೆ. ಹಾಗಾಗಿ ನಾನೂ ಗೆದ್ದೆ ಎಂದು ಹೇಳಿಕೊಂಡಿದ್ದಾರೆ ಸುದೀಪ್.

  ಅಂದಹಾಗೆ ವೇದಿಕೆಯಲ್ಲಿದ್ದವರು ಬಹುತೇಕ ಸಾಹಿತ್ಯಾಸಕ್ತರು. ಸಾಹಿತಿಗಳು. ಆ ವೇದಿಕೆಯಲ್ಲಿ ಸುದೀಪ್ ಅವರ ಮಾತು ಎಲ್ಲರಿಗೂ ಇಷ್ಟವಾಗಿದ್ದು ವಿಶೇಷ. ಏಕೆಂದರೆ, ಅಲ್ಲಿ ಮಾತನಾಡಿದ್ದು ಸೂಪರ್ ಸ್ಟಾರ್ ಸುದೀಪ್ ಆಗಿರಲಿಲ್ಲ. ಪ್ರಕಾಶ್ ರೈ ಅವರ ನಟನೆಯನ್ನು ಗೌರವಿಸುವ, ಅಭಿಮಾನಿಸುವ ಅಭಿಮಾನಿ ಸುದೀಪ್. 

 • ಪ್ರಜಾಕೀಯಕ್ಕೆ ಶುಭ ಹಾರೈಸಿದ್ದ ಕಿಚ್ಚ

  sudeep upendra at mukunda murari pressmeet

  ಕಿಚ್ಚ ಸುದೀಪ್ ತಾವು ರಾಜಕೀಯಕ್ಕೆ ಬರಲ್ಲ. ಸೇವೆ ಮಾಡೋಕೆ ರಾಜಕೀಯಕ್ಕೆ ಬರಲೇಬೇಕೆಂದೇನೂ ಇಲ್ಲ. ನನ್ನ ಕೈಲಾದ ನೆರವು, ಸಹಾಯವನ್ನು ರಾಜಕೀಯದಲ್ಲಿ ಇಲ್ಲದೆಯೂ ಮಾಡಬಹುದು. ರಾಜಕೀಯ ನನ್ನ ಕ್ಷೇತ್ರವಲ್ಲ ಅನ್ನೋ ಮಾತನ್ನು ಹಲವು ಬಾರಿ ಹೇಳಿದ್ದಾರೆ. ಇತ್ತೀಚೆಗಂತೂ ಸುದೀಪ್ ರಾಜಕೀಯ ಪ್ರವೇಶ ದೊಡ್ಡ ಸುದ್ದಿಯಾದಾಗ ಸ್ಪಷ್ಟವಾಗಿಯೇ ನಿರಾಕರಿಸಿದ್ದರು.

  ಹೀಗಿರುವ ಸುದೀಪ್, ತಮ್ಮ ಮಿತ್ರರ ರಾಜಕೀಯಕ್ಕೆ ಏನಂತಾರೆ..? ಈ ಪ್ರಶ್ನೆ ಕಾಡುತ್ತಲೇ ಇತ್ತು. ಆದರೆ, ಉತ್ತರ ಸಿಕ್ಕಿರಲಿಲ್ಲ. ಅದರಲ್ಲೂ ಉಪೇಂದ್ರ ಪ್ರಜಾಕೀಯ ಘೋಷಿಸಿದ ನಂತರ ಇದೇ ಮೊದಲ ಬಾರಿಗೆ ಪತ್ರಕರ್ತರಿಗೆ ಎದುರಾಗಿದ್ದ ಸುದೀಪ್, ಪ್ರಜಾಕೀಯದ ಬಗ್ಗೆಯೂ ಮಾತನಾಡಿದ್ದಾರೆ.

  ಉಪೇಂದ್ರ ಅವರ ಆಲೋಚನೆಗಳು ಬೆರಗು ಮೂಡಿಸುತ್ತಿವೆ. ಅವರ ಪ್ರಜಾಕೀಯದ ಕಲ್ಪನೆ ಇಷ್ಟವಾಯ್ತು. ಅವರಿಗೆ ಯಶಸ್ಸು ಸಿಗಲಿ ಎಂದಿದ್ದಾರೆ. ಅಷ್ಟೇ ಅಲ್ಲ, ನನಗೆ ರಾಜಕೀಯ ಆಗಿಬರಲ್ಲ. ಇರುವಷ್ಟು ದಿನ ಸಾಮಾನ್ಯ ಮನುಷ್ಯನಾಗಿಯೇ ಇರಲು ಬಯಸುತ್ತೇನೆ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. 

   

 • ಪ್ರೇಮ ಬರಹ.. ಸುದೀಪ್ ಕಂಡಂತೆ..

  sudeep reviews aishwarya prema baraha

  `ಪ್ರೇಮ ಬರಹ' ಅರ್ಜುನ್ ಸರ್ಜಾ ಪುತ್ರ ಐಶ್ವರ್ಯಾ ಅಭಿನಯದ ಮೊದಲ ಚಿತ್ರ. ಚಂದನ್ ನಾಯಕರಾಗಿರುವ ಈ ಚಿತ್ರಕ್ಕೆ ಅರ್ಜುನ್ ಸರ್ಜಾ ನಿರ್ದೇಶಕ. ಸಿನಿಮಾ ನೋಡಿದ ಪ್ರೇಕ್ಷಕರು, ಚಿತ್ರಕ್ಕೆ ಫುಲ್ ಮಾಕ್ರ್ಸ್ ಕೊಟ್ಟಿದ್ದಾರೆ. ಒಬ್ಬೊಬ್ಬರ ವಿಮರ್ಶೆ ಒಂದೊಂದ್ ಥರಾ. `ಪ್ರೇಮ ಬರಹ' ಸಿನಿಮಾವನ್ನು ನೋಡಿದ ಕಿಚ್ಚ ಸುದೀಪ್ ಕೂಡಾ ಚಿತ್ರವನ್ನು ಮನಸಾರೆ ಮೆಚ್ಚಿದ್ದಾರೆ.

  ಪ್ರೇಮಬರಹ ಚಿತ್ರದಲ್ಲಿ ಜೀವನ ಮತ್ತು ಪ್ರೀತಿಯನ್ನು ಅದ್ಭುತವಾಗಿ ಸೆರೆಹಿಡಿಯಲಾಗಿದೆ. ಎರಡನ್ನೂ ಒಂದಕ್ಕೊಂದು ಬೆಸೆದಿರುವುದು ಎಂಥವರಿಗೂ ಇಷ್ಟವಾಗುತ್ತೆ. ಇಬ್ಬರು ಪ್ರೇಮಿಗಳು ಮತ್ತು ಸೈನಿಕರ ಹೋರಾಟದ ಬದುಕನ್ನು ಪ್ರೇಮಕಥೆಯೊಂದಿಗೆ ಬೆಸುಗೆ ಹಾಕುವ ಸವಾಲು ಇಷ್ಟವಾಗುತ್ತೆ.

  ಐಶ್ವರ್ಯಾ ಸರ್ಜಾ, ತಮ್ಮ ಪ್ರತಿಭೆಯಿಂದಲೇ ಬೆರಗು ಮೂಡಿಸುತ್ತಾರೆ. ಚಂದನ್ ಕೂಡಾ ಇಷ್ಟವಾಗುತ್ತಾರೆ. ಚಿತ್ರದಲ್ಲಿ ವ್ಹಾವ್ ಎನ್ನಿಸುವಂತ ದೃಶ್ಯಗಳಿವೆ. ಒಟ್ಟಾರೆ ಸಿನಿಮಾ ವಂಡರ್‍ಫುಲ್.

  ಇದು ಸುದೀಪ್ ನೀಡಿರುವ ಚಿತ್ರದ ವಿಮರ್ಶೆ. ಪ್ರೇಮಬರಹಕ್ಕೆ ಈಗಾಗಲೇ ಪ್ರೇಕ್ಷಕರ ಆಶೀರ್ವಾದ ಸಿಕ್ಕಿದೆ. ಥಿಯೇಟರುಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿರುವ ಚಿತ್ರ, ಉತ್ತಮ ಗಳಿಕೆಯನ್ನೂ ಮಾಡುತ್ತಿದೆ.

   

 • ಪ್ರೇಮ್ ಜೊತೆ ಸಿನಿಮಾಗೆ ನಾನು ಎವರ್ ರೆಡಿ - ಸುದೀಪ್

  i am always ready to act in prem's film

  ದಿ ವಿಲನ್, ಶಿವರಾಜ್‍ಕುಮಾರ್ ಮತ್ತು ಸುದೀಪ್ ಒಟ್ಟಿಗೇ ನಟಿಸಿದ್ದ ಚಿತ್ರ. ಜೋಗಿ ಪ್ರೇಮ್ ನಿರ್ದೇಶನದ ವಿಲನ್ ಹಿಟ್ ಆದರೂ ಪ್ರೇಮ್ ಅವರ ಬಗ್ಗೆ ಟೀಕೆಗಳ ಸುರಿಮಳೆಯೇ ಆಗಿತ್ತು. ಪ್ರತಿಯೊಂದನ್ನೂ ಸಹಜವಾಗಿ ಸ್ವೀಕರಿಸುವ ಪ್ರೇಮ್, ತಮ್ಮನ್ನು ಟೀಕಿಸಿದವರ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಇದೆಲ್ಲ ಆದಾಗ ಇನ್ನು ಮುಂದೆ ಸುದೀಪ್ ಪ್ರೇಮ್ ಜೊತೆ ಸಿನಿಮಾ ಮಾಡಲ್ಲ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, ಅದಕ್ಕೆಲ್ಲ ಕಿಚ್ಚ ಫುಲ್‍ಸ್ಟಾಪ್ ಇಟ್ಟಿದ್ದಾರೆ.

  `ಪ್ರೇಮ್ ಒಬ್ಬ ಅದ್ಬುತ ಟೆಕ್ನಿಷಿಯನ್. ಅವರಿಗೆ ಸಿನಿಮಾ ಕಟ್ಟುವ ಕಲೆ ಕರಗತ. ಸಿನಿಮಾ ಬಗ್ಗೆ ಅವರಿಗೆ ಇರುವ ಪ್ಯಾಷನ್ ಇಷ್ಟವಾಗುತ್ತೆ. ಸ್ಕ್ರಿಪ್ಟ್ ವಿಚಾರದಲ್ಲಿ ಅವರು ಸೋತಿರಬಹುದು. ಅದೇ ಪ್ರೇಮ್ ಜೋಗಿ, ಎಕ್ಸ್‍ಕ್ಯೂಸ್ ಮಿಯಂತಹ ಹಿಟ್ ಕೊಟ್ಟಿದ್ದರು ಎನ್ನುವುದನ್ನು ಮರೆಯಬಾರದು. ಅವರು ಒಳ್ಳೆ ಕಥೆ ತಂದರೆ ಅವರೊಂದಿಗೆ ಸಿನಿಮಾ ಮಾಡಲು ನಾನು ಸದಾ ಸಿದ್ಧ' ಎಂದಿದ್ದಾರೆ ಸುದೀಪ್.

  ಸುದೀಪ್ ಅವರನ್ನು ಡಾರ್ಲಿಂಗ್ ಎಂದೇ ಕರೆಯುವ ಪ್ರೇಮ್, ಸುದೀಪ್ ತಮ್ಮ ಮೇಲಿಟ್ಟಿರುವ ಅಭಿಮಾನ, ನಂಬಿಕೆ ಮತ್ತು ಪ್ರೀತಿ ಅವರ ಮೇಲಿನ ಗೌರವವನ್ನು ಮತ್ತಷ್ಟು ಹೆಚ್ಚಿಸಿದೆ ಎಂದಿದ್ದಾರೆ

 • ಫಸ್ಟ್ ಲುಕ್ ತೋರಿಸಿ ಮತ್ತೆ ಹುಳ ಬಿಟ್ಟ ಪ್ರೇಮ್

  the villain first look

  ನಿರ್ದೇಶಕ ಪ್ರೇಮ್ ಪ್ರೇಕ್ಷಕರ ತಲೆಗೆ ಹುಳ ಬಿಟ್ಟು, ಕುತೂಹಲ ಹುಟ್ಟಿಸೋದ್ರಲ್ಲಿ ನಂಬರ್ ಒನ್. ಅದು ದಿ ವಿಲನ್ ಚಿತ್ರದಲ್ಲೂ ಕಂಟಿನ್ಯೂ ಆಗಿದೆ. ಚಿತ್ರದ ಟೀಸರ್ ಬಿಟ್ಟಾಗಲೂ ಶಿವರಾಜ್ ಕುಮಾರ್ ಮತ್ತು ಸುದೀಪ್, ಹೀರೋಗಳಾ..? ವಿಲನ್ನಾ ಎಂಬ ಕುತೂಹಲ ಸೃಷ್ಟಿಸಿದ್ದ ಪ್ರೇಮ್, ಈ ಬಾರಿ ಸುದೀಪ್ & ಶಿವರಾಜ್‍ಕುಮಾರ್ ಅವರ ಇನ್ನೊಂದು ಲುಕ್ ಬಹಿರಂಗಪಡಿಸಿದ್ದಾರೆ.

  ಶಿವರಾಜ್‍ಕುಮಾರ್ ನಿರೂಪಣೆಯ ಯಾರೀ ವಿತ್ ಶಿವಣ್ಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರೇಮ್, ಅಲ್ಲಿಯೇ ದಿ ವಿಲನ್ ಚಿತ್ರದ ಇನ್ನೊಂದು ಪೋಸ್ಟರ್ ತೋರಿಸಿದ್ದಾರೆ. ಇವುಗಳನ್ನು ನೋಡಿದರೆ, ಒನ್ಸ್ ಎಗೇಯ್ನ್ ಅದೇ ಕುತೂಹಲ. ಅದೇ ಪ್ರಶ್ನೆ. 

  ಸಿನಿಮಾ ಮತ್ತು ಪಾತ್ರದ ಬಗ್ಗೆ ಏನನ್ನೂ ಹೇಳಲ್ಲ. ಮೇಕಿಂಗ್ ವಿಡಿಯೋ ಮತ್ತು ಚಿತ್ರದ ಸ್ಟಿಲ್‍ಗಳೇ ಪಾತ್ರದ ಪರಿಚಯ ಮಾಡಿಕೊಡಬೇಕು ಎಂದು ನಂಬಿಕೊಂಡವರನು ನಾನು. ಈಗಲೇ ಹೇಳಿಬಿಟ್ಟರೆ ಕುತೂಹಲ ಹೊರಟು ಹೋಗುತ್ತೆ. ಒಂದಂತೂ ನಿಜ, ಇದೊಂದು ಹೊಸ ರೀತಿಯ ಪರಿಚಯ. ಅಂತಿಮವಾಗಿ ಸಿನಿಮಾ ನೋಡಿ ಅಂತಾರೆ ಪ್ರೇಮ್.

  ಶಿವರಾಜ್‍ಕುಮಾರ್ ಮತ್ತು ಸುದೀಪ್, ಆ್ಯಮಿ ಜಾಕ್ಸನ್, ಪ್ರೇಮ್ ಕಾಂಬಿನೇಷನ್, ರಕ್ಷಿತಾ ಕಮ್‍ಬ್ಯಾಕ್ ಹೀಗೆ.. ಆರಂಭದಿಂದಲೂ ಸದ್ದು ಮತ್ತು ಸುದ್ದಿ ಮಾಡುತ್ತಲೇ ಇರುವ ಸಿನಿಮಾ. ಸಿ.ಆರ್.ಮನೋಹರ್ ನಿರ್ಮಾಣದ ಸಿನಿಮಾ ಅಬ್ಬರದ ಕುತೂಹಲವನ್ನಂತೂ ಸೃಷ್ಟಿಸಿದೆ.

 • ಫೇಸ್ ಬುಕ್ಕಿಗೆ ಎಂಟ್ರಿ ಕೊಟ್ಟ ಕಿಚ್ಚ

  sudeep enters facebook

  ಕಿಚ್ಚ ಸುದೀಪ್ ಟ್ವಿಟರ್‌ನಲ್ಲಿ ಸದಾ ಸಕ್ರಿಯ. ಇನ್‌ಸ್ಟಾಗ್ರಾಮ್‌ನಲ್ಲಿ ಕೂಡಾ ಫುಲ್ ಆಕ್ಟಿವ್. ಸೋಷಿಯಲ್ ಮೀಡಿಯಾ ಮೂಲಕ ಅಭಿಮಾನಿಗಳ ಜೊತೆ ನಿರಂತರ ಟಚ್‌ನಲ್ಲಿರೋ ಸುದೀಪ್, ಈಗ ಫೇಸ್‌ಬುಕ್ಕಿಗೆ ಎಂಟ್ರಿ ಕೊಟ್ಟಿದ್ದಾರೆ.

  ಟ್ವಿಟರಿನಲ್ಲಿ 2.3 ಮಿಲಿಯನ್ ಹಾಗೂ ಇನ್‌ಸ್ಟಾಗ್ರಾಮ್‌ನಲ್ಲಿ 5 ಲಕ್ಷಕ್ಕೂ ಹೆಚ್ಚು ಫಾಲೋರ‍್ಸ್ ಹೊಂದಿರುವ ಸುದೀಪ್‌ಗೆ ಫೇಸ್‌ಬುಕ್ಕಿನಲ್ಲೂ ಅಭೂತಪೂರ್ವ ಸ್ವಾಗತ ಸಿಕ್ಕಿದೆ.

  ಸುದೀಪ್ ತಮ್ಮ ಫೇಸ್ ಬುಕ್ ಪೇಜ್‌ಗೆ ಐ ಆ್ಯಮ್ ಕೆ ಹೆಸರಿಟ್ಟಿದ್ದು, ತಮ್ಮ ಫೋಟೋ ಹಾಕಿದ್ದಾರೆ.

 • ಬಿಗ್‍ಬಾಸ್ ರನ್ನರ್‍ಗೆ ಸುದೀಪ್ ಆರ್ಥಿಕ ನೆರವು

  sudeep supports divakar

  ಕಿಚ್ಚ ಸುದೀಪ್, ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದು ಚಿತ್ರರಂಗದ ಕೆಲವರಿಗಷ್ಟೇ ಗೊತ್ತು. ಸಹಾಯ ಪಡೆಯುವ ವ್ಯಕ್ತಿಯನ್ನು ಬಿಟ್ಟು, ಬೇರೆ ಯಾರಿಗೂ ತಿಳಿಯದಂತೆ ನೆರವು ನೀಡುವ ಕಲೆ ಅವರಿಗೆ ಸಿದ್ಧಿಸಿಬಿಟ್ಟಿದೆ. ಅವುಗಳನ್ನು ಪ್ರಚಾರಕ್ಕೆ ಬಳಸಿಕೊಳ್ಳಲು ಸುದೀಪ್ ಬಯಸುವುದಿಲ್ಲ. ಸುದೀಪ್ ಅವರಿಂದ ನೆರವು ಪಡೆದವರ ಪಟ್ಟಿ ದೊಡ್ಡದಿದೆ. ಆದರೆ, ಅವರು ಬಹಿರಂಗಪಡಿಸುವ ಹಾಗಿಲ್ಲ. ಆದರೆ, ಈ ಬಾರಿ ಸುದೀಪ್ ನೀಡಿದ್ದ ಸಹಾಯವೊಂದು ಬಹಿರಂಗವಾಗಿಬಿಟ್ಟಿದೆ.

  ಬಿಗ್‍ಬಾಸ್‍ನಲ್ಲಿ ರನ್ನರ್ ಅಪ್ ಆಗಿದ್ದ ದಿವಾಕರ್ ಅವರಿಗೆ ಸುದೀಪ್ ವೈಯಕ್ತಿಕವಾಗಿ ಆರ್ಥಿಕ ಸಹಾಯ ನೀಡಿದ್ದಾರೆ. ಅದು ಮನೆ ಕಟ್ಟಿಕೊಳ್ಳುವ ಕನಸಿಗೆ ನೀರೆರೆಯುವಷ್ಟು ಹಣ. ಇದನ್ನು ಸ್ವತಃ ದಿವಾಕರ್ ಅವರೇ ಹೇಳಿಕೊಂಡಿದ್ದಾರೆ. ಹಣ ಎಷ್ಟು ಎಂದು ಹೇಳದ ದಿವಾಕರ್‍ಗೆ, ಸುದೀಪ್ ತಮ್ಮ ಚಿತ್ರಗಳಲ್ಲಿ ಅವಕಾಶ ಕೊಡಿಸುವ ಭರವಸೆಯನ್ನೂ ನೀಡಿದ್ದಾರಂತೆ.

 • ಬಿಡು..ಬಿಡು.. ನಾನು ಅನ್ನೋದು ಮೊದಲು ಬಿಡು.. ವಿಲನ್‍ನ 2ನೇ ಸಾಂಗ್

  the villain second song coming soon

  ದಿ ವಿಲನ್ ಚಿತ್ರದ ಮೊದಲ ಹಾಡಿನಲ್ಲೇ ದೂಳೆಬ್ಬಿಸಿದ್ದ ಜೋಗಿ ಪ್ರೇಮ್, ದಿ ವಿಲನ್ ಚಿತ್ರದ 2ನೇ ಹಾಡನ್ನೂ ಬಿಡುಗಡೆ ಮಾಡೋಕೆ ರೆಡಿಯಾಗಿದ್ದಾರೆ. ಬಿಡುಗಡೆ ಮಾಡುವ ಮುನ್ನವೇ ಹಾಡಿನ ಒಂದೇ ಒಂದು ಲೈನ್‍ನ್ನು ಹೊರಬಿಟ್ಟು, ಎದೆಬಡಿತ ಹೆಚ್ಚಿಸಿದ್ದಾರೆ.

  ಬಿಡು ಬಿಡು.. ನಾನು ಅನ್ನೋದು ಮೊದಲು ಬಿಡು.. ನಾವು ಅಂತಾ ಬಾಳೋದು ಕಲಿ ಶಂಕರಾ.. ಎನ್ನುವುದು ಹಾಡಿನ ಮೊದಲ ಸಾಲು. ಈ ಭಾನುವಾರ ಬಿಡುಗಡೆಯಾಗುತ್ತಿದೆ.

  ನಿನ್ನೆ ಮೊನ್ನೆ ಬಂದವರೆಲ್ಲ ನಂಬರ್ ಒನ್ ಅಂತಾರೋ ಹಾಡಿನಲ್ಲಿ ಅಭಿಮಾನಿಗಳ ಹೃದಯಗಳಲ್ಲಿ ಸಡಗರದ ಪಟಾಕಿ ಸಿಡಿಸಿದ್ದ ಪ್ರೇಮ್, ಈ ಹಾಡಿನಲ್ಲೇನು ಮೋಡಿ ಮಾಡಿದ್ದಾರೋ.. ಶಿವಣ್ಣ ಮತ್ತು ಸುದೀಪ್ ಅಭಿಮಾನಿಗಳ ಎದೆಬಡಿತ ಲಬ್ ಡಬ್..ಲಬ್ ಡಬ್..

 • ಬಿಲ್ಲಾ ರಂಗ ಬಾಷಾ - 2209

  billa ranga basha year 2209

  2209.. ಹೌದು.. 2209. ನೀವು ಓದುತ್ತಿರುವುದು ಸರಿಯಾಗಿಯೇ ಇದೆ. ಇದು ಸುದೀಪ್ ಅಭಿನಯದ ಹೊಸ ಸಿನಿಮಾ. ರಂಗಿತರಂಗ ಖ್ಯಾತಿಯ ಅನೂಪ್ ಭಂಡಾರಿ ನಿರ್ದೇಶನದ ಸಿನಿಮಾ. ಅರೇ.. ಏನ್ರೀ ಇದು..190 ವರ್ಷಗಳ ನಂತರ ಸುದೀಪ್ ಈ ಸಿನಿಮಾ ಮಾಡ್ತಾರಾ..? ಅಂತಾ ಕೇಳಬೇಡಿ. ಸಿನಿಮಾ ಇನ್ನೊಂದು ನಾಲ್ಕೈದು ತಿಂಗಳಲ್ಲಿ ಸೆಟ್ಟೇರುತ್ತೆ. ಆದರೆ, ಸಿನಿಮಾದ ಕಥೆ ನಡೆಯುವುದು 2209ರಲ್ಲಿ. 

  ಇದು ಸುಮಾರು ಎರಡು ಶತಮಾನದ ಮುಂದಿನ ಕಥೆಯಾಗಿರೋದ್ರಿಂದ ಸೆಟ್‍ಗಳಲ್ಲೇ ಬಹುತೇಕ ಚಿತ್ರೀಕರಣ ಆಗಬೇಕು. ಪ್ರೀ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ. 2209ರಲ್ಲಿ ನಡೆಯೋ ಕಥೆ ಅದು. ಸುದೀಪ್ ಯಾಕೆ ಅಷ್ಟು ಮುಂದಕ್ಕೆ ಹೋಗ್ತಾರೆ ಅನ್ನೋದಕ್ಕೆ ಸಿನಿಮಾದಲ್ಲಿ ಉತ್ತರವಿದೆ ಅಂತಾರೆ ಅನೂಪ್.

  ಯುಗಾದಿಗೆ ಈ ಚಿತ್ರಕ್ಕೆ ಸಂಬಂಧಪಟ್ಟ ಸರ್‍ಪ್ರೈಸ್ ಕೊಡಲಿದ್ದಾರಂತೆ ಪ್ರಿಯಾ ಸುದೀಪ್. ವೇಯ್ಟ್.

 • ಬಿಲ್ಲಾ ರಂಗ ಮುಂದಕ್ಕೆ.. ಬೇರೊಂದು ಸಿನಿಮಾ ಸದ್ಯಕ್ಕೆ..

  billa ranga postponed

  ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಬಿಲ್ಲಾರಂಗ ಚಿತ್ರದ ಪ್ರಿ ಪ್ರೊಡಕ್ಷನ್ ಕೆಲಸಗಳು ಇಷ್ಟುಹೊತ್ತಿಗೆ ಫೈನಲ್ ಹಂತದಲ್ಲಿರಬೇಕಿತ್ತು. ಆದರೆ.. ಅದು ಇನ್ನೂ ಇನ್ನೂ ಹೆಚ್ಚು ಸಮಯ ಕೇಳುತ್ತಿರುವ ಕಾರಣಕ್ಕೆ, ಸದ್ಯಕ್ಕೆ ಆ ಪ್ರಾಜೆಕ್ಟ್‍ನ್ನು ಮುಂದೂಡಲಾಗಿದೆ. ಸುದೀಪ್ ಮತ್ತು ಅನೂಪ್ ಭಂಡಾರಿ ಹೊಸ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಜಾಕ್ ಮಂಜು ನಿರ್ಮಾಪಕ.

  ಸುದೀಪ್ ಅವರೊಬ್ಬ ಬ್ರಿಲಿಯಂಟ್ ನಟ. ಕಥೆ ಬರೆಯುತ್ತಾ ಬರೆಯುತ್ತಾ.. ಈ ಕಥೆಯನ್ನು ಸುದೀಪ್ ಮಾಡಿದರೇ ಚೆನ್ನ ಎನ್ನಿಸಿತು. ಸುದೀಪ್ ಕೂಡಾ ಕಥೆ ಕೇಳಿ ಥ್ರಿಲ್ ಆದರು ಎಂದಿದ್ದಾರೆ ಅನೂಪ್ ಭಂಡಾರಿ.

  ರಂಗಿತರಂಗ ಮತ್ತು ರಾಜರಥ ಚಿತ್ರಗಳ ನಂತರ ಅನೂಪ್ ಭಂಡಾರಿ ನಿರ್ದೇಶಿಸುವ ಸಿನಿಮಾ ಇದು. ಈ ಸಿನಿಮಾವನ್ನು ಪಕ್ಕಾ ಪ್ಲಾನ್ ಪ್ರಕಾರ ಅಂದುಕೊಂಡಂತೆಯೇ ಮುಗಿಸುತ್ತೇನೆ ಎನ್ನುವುದು ಅನೂಪ್ ನೀಡುತ್ತಿರುವ ಭರವಸೆ. 

 • ಬೈ ಟೂ ಟೀ ಕುಡ್ಯೋಕ್ ಆಗಲ್ವಾ ಕಿಚ್ಚನಿಗೆ..?

  kiccha's old promise still pending

  ಕಿಚ್ಚ ಸುದೀಪ್ ಚಿತ್ರರಂಗಕ್ಕೆ ಬಂದು 23 ವರ್ಷಗಳಾದವರು. ಸುದೀಪ್ ಆರ್ಥಿಕವಾಗಿ ಬಡವರೇನೂ ಆಗಿರಲಿಲ್ಲ. ಆದರೆ, ಸ್ವಾಭಿಮಾನಿ. ತಂದೆ ತಾಯಿಯ ಬಳಿಯೂ ಹಣ ಕೇಳದಷ್ಟು ಸ್ವಾಭಿಮಾನಿ. ಆಗೆಲ್ಲ ಅವರಿಗೆ ಫುಲ್ ಪೆಟ್ರೋಲ್ ತುಂಬಿಸಿದ ಸ್ಕೂಟಿ ಮತ್ತು ಕೈತುಂಬಾ ದುಡ್ಡು ಕೊಡುತ್ತಿದ್ದವರು ಪ್ರಿಯಾ.

  ಅದು ಅವರ ಪ್ರೇಮಗೀತೆಯ ಕಾಲ. ಪ್ರೇಮಗೀತೆ ಮುಗಿದು ದಾಂಪತ್ಯ ಗೀತೆ ಶುರುವಾಗಿ ಮಗಳಾಗಿದ್ದರೂ ಅದೊಂದು ಪ್ರಾಮಿಸ್ ಹಾಗೆಯೇ ಉಳಿಸಿಕೊಂಡುಬಿಟ್ಟಿದ್ದಾರೆ ಕಿಚ್ಚ.

  ವಿಶ್ರಾಂತಿಯಲ್ಲೊಂದು ಬೈಟು ಟೀ ಕುಡಿಯೋದು. ಈ ಬಾರಿ ಅದನ್ನು ಈಡೇರಿಸ್ತಾರಂತೆ. ಅಫ್‍ಕೋರ್ಸ್.. ಈ ಬಾರಿ ಜೀವದ ಗೆಳತಿಯ ಜೊತೆ ಜೀವಕ್ಕೆ ಜೀವವಾದ ಮಗಳೂ ಇರುತ್ತಾರೆ ಅವರ ಜೊತೆ. ಬೈ ಟೂ ಚಾಯ್ ಕುಡಿಯೋಕೆ. 

 • ಬ್ರಹ್ಮಾವರ್ ನೆರವಿಗೆ ಕೈ ಚಾಚಿದ ಸ್ವಾತಿಮುತ್ತು ಸುದೀಪ್

  sudeep helps bramhavar

  ಚಿತ್ರರಂಗದ ಹಿರಿಯ ಕಲಾವಿದ ಸದಾಶಿವ ಬ್ರಹ್ಮಾವರ್ ಬೀದಿಗೆ ಬಿದ್ದಿದ್ದಾರೆ. ಅವರ ಮಕ್ಕಳೇ ಅವರನ್ನು ಹೊರಹಾಕಿದ್ದಾರೆ. ಬ್ರಹ್ಮಾವರ್ ಈಗ ಬಸ್ ಚಾರ್ಜಿಗೂ ಹಣವಿಲ್ಲದೆ, ಊಟಕ್ಕೂ ಪರದಾಡುತ್ತಾ ಊರೂರು ಅಲೆಯುತ್ತಿದ್ದಾರೆ ಎಂಬ ಸುದ್ದಿ ತಿಳಿದಿದ್ದೇ ತಡ, ಅಭಿಮಾನಿಗಳು ಬೇಸರಗೊಂಡರು. ಹಲವರು ಚಿತ್ರಲೋಕವನ್ನು ಸಂಪರ್ಕಿಸಿದ್ದಾರೆ. 

  ಇದರ ನಡುವೆಯೇ ಚಿತ್ರಲೋಕ ಡಾಟ್ ಕಾಮ್‍ನಲ್ಲಿ ಸುದ್ದಿಯನ್ನೋದಿದ ಸುದೀಪ್, ನೇರವಾಗಿ ತಮ್ಮ ಅಭಿಮಾನಿ ಸಂಘದವರಿಗೆ ಬ್ರಹ್ಮಾವರ್ ಅವರನ್ನು ಎಲ್ಲಿದ್ದರೂ ಹುಡುಕಿ ಎಂದು ಸೂಚನೆ ಕೊಟ್ಟಿದ್ದಾರೆ. ಸದ್ಯಕ್ಕೆ ಸುದೀಪ್, ದೇಶದಲ್ಲಿ ಇಲ್ಲ. ದಿ ವಿಲನ್ ಶೂಟಿಂಗ್‍ಗಾಗಿ ಬ್ಯಾಂಕಾಕ್‍ನಲ್ಲಿದ್ದಾರೆ. ಅಲ್ಲಿಂದಲೇ ಕರೆ ಮಾಡಿರುವ ಸುದೀಪ್, ಬ್ರಹ್ಮಾವರ್ ಅವರ ಮುಂದಿನ ಹೊಣೆಯನ್ನು ತಾವು ಹೊತ್ತುಕೊಳ್ಳುವ ಭರವಸೆ ಕೊಟ್ಟಿದ್ದಾರೆ.

  ಚಿತ್ರಲೋಕ ಡಾಟ್ ಕಾಮ್ ಸಂಪಾದಕ ಕೆ.ಎಂ. ವೀರೇಶ್ ಜೊತೆ ಮಾತನಾಡಿದ ಸುದೀಪ್ `ಬ್ರಹ್ಮಾವರ್ ಅವರದ್ದು ಮೃದು ಮಾತಿನ ವ್ಯಕ್ತಿತ್ವ. ಸದಾ ಮೌನಿಯಾಗಿರುತ್ತಿದ್ದರು. ನನ್ನ ಜೊತೆ ಸ್ವಾತಿಮುತ್ತು ಮತ್ತು ಕಿಚ್ಚ ಚಿತ್ರಗಳಲ್ಲಿ ನಟಿಸಿದ್ದರು. ಅವರ ಈ ಸ್ಥಿತಿ ನೋಡಿ ಆಘಾತವಾಯಿತು. ಯಾವುದೇ ಹಿರಿಯ ಕಲಾವಿದರಿಗೆ ಈ ರೀತಿಯ ಪರಿಸ್ಥಿತಿ ಬರಬಾರದು. ನಾನು ನನ್ನ ಅಭಿಮಾನಿ ಸಂಘದ ಹುಡುಗರಿಗೆ ಸೂಚಿಸಿದ್ದೇನೆ. ಅವರು ಬ್ರಹ್ಮಾವರ್ ಎಲ್ಲಿದ್ದರೂ ಹುಡುಕಿ ನೆರವು ನೀಡುತ್ತಾರೆ. ಇದು ಅಲ್ಪ ಸ್ವಲ್ಪ ಹಣ ಕೊಟ್ಟು ಸುಮ್ಮನಾಗುವ ವಿಚಾರವಲ್ಲ. ಅವರು ತಮ್ಮ ಈ ವಯಸ್ಸಿನಲ್ಲಿ ನೆಮ್ಮದಿಯಿಂದ, ಶಾಂತಿಯಿಂದ ಜೀವನ ಕಳೆಯಬೇಕು. ಅದಕ್ಕೆ ಏನು ಬೇಕೋ ಆ ವ್ಯವಸ್ಥೆಯನ್ನು ನಾನು ಮಾಡುತ್ತೇನೆ'' ಎಂದಿದ್ದಾರೆ.

  Related Articles :-

  Sudeep Rushes to Help Brahmavar - Exclusive

  ಬೀದಿಗೆ ಬಿದ್ದರು ಸದಾಶಿವ ಬ್ರಹ್ಮಾವರ್ - ಹೆತ್ತಮಕ್ಕಳೇ ಹೊರಗೆ ದಬ್ಬಿದರಾ..?

 • ಭಗ್ನಪ್ರೇಮಿಗೆ ಲೈಫ್‍ಗುರುವಾದ ಸುದೀಪ್

  sudeep teaches life lesson to a fan

  ಸಾಮಾನ್ಯವಾಗಿ ಸೆಲಬ್ರಿಟಿಗಳು ತೀರಾ ತೀರಾ ಪರ್ಸನಲ್ ವಿಚಾರಗಳಿಗೆ ಯಾರಾದರೂ ಬಹಿರಂಗವಾಗಿ ಸಲಹೆ ಕೇಳಿದರೆ ಸುಮ್ಮನಿದ್ದು ಬಿಡ್ತಾರೆ. ಆದರೆ, ಕಿಚ್ಚ ಸುದೀಪ್ ಹಾಗಲ್ಲ, ಇತ್ತೀಚೆಗೆ ಅವರ ಜೀವ ಎಂಬ ಸುದೀಪ್ ಅವರ ಅಭಿಮಾನಿಯೊಬ್ಬ ತನ್ನ ಕಥೆ ಹೇಳಿಕೊಂಡಿದ್ದ. ಪ್ರೀತಿ ಮಾಡೋಕೆ ಆಸ್ತಿ, ಅಂತಸ್ತು, ಅಂದ ಚೆಂದ ಇವೆಲ್ಲ ಬೇಕಾ ಬಾಸ್ ಎಂದಿದ್ದ ಅಭಿಮಾನಿ, ಪ್ರೀತಿಸಿದವಳು ನನ್ನನ್ನು ಪ್ರೀತಿಸುತ್ತಿಲ್ಲ, ಅವಳಿಲ್ಲದೆ ಬದುಕೋಕೆ ಆಗ್ತಿಲ್ಲ ಎಂದು ಅಂಗಲಾಚಿದ್ದ.

  ಆ ಪ್ರೇಮಿಗೆ ಸುದೀಪ್ ಲವ್‍ಗುರುವಿಗಿಂತ ಹೆಚ್ಚಾಗಿ ಲೈಫ್‍ಗುರುವಾಗಿದ್ದಾರೆ. 

  ನಮಗಿರುವುದು ಒಂದೇ ಬದುಕು, ಒಂದೇ ಚಾನ್ಸು. ಪ್ರೀತಿ ಬಿಟ್ಟುಕೊಡುವುದೇ ಹೊರತು, ಹಿಡಿದಿಟ್ಟುಕೊಡುವುದಲ್ಲ. ನಿನ್ನ ಅಪ್ಪ, ಅಮ್ಮನಿಗೆ ಒಳ್ಳೆಯವನಾಗಿರು. ನಿನ್ನನ್ನೇ ಪ್ರಪಂಚ ಎಂದುಕೊಂಡಿರುವ ಕೆಲವರಿರುತ್ತಾರೆ. ಅವರಿಗೆ ಒಳ್ಳೆಯವನಾಗಿರು. ಜೀವನವನ್ನು ಸುಂದರವಾಗಿ ಬದುಕು ಗೆಳೆಯಾ ಎಂದಿದ್ದಾರೆ ಕಿಚ್ಚ.

  ಸುದೀಪ್ ಮಾತನ್ನು ಆ ಅಭಿಮಾನಿ ಅರ್ಥ ಮಾಡಿಕೊಳ್ಳಬೇಕಷ್ಟೆ. ಏಕೆಂದರೆ, ಇರೋದು ಒಂದೇ ಬದುಕು, ಸಿಕ್ಕಿರೋದು ಒಂದೇ ಚಾನ್ಸ್ ಅಲ್ವಾ..?

 • ಭಲ್ಲೇ ಭಲ್ಲೇ.. ದಿ ವಿಲನ್‍ಗೆ ದಲೇರ್ ಮೆಹಂದಿ

  daler mehandi sings for the villain

  ತುಣಕ್ ತುಣಕ್ ತುಣು ತುಣಕ್ ತುಣಕ್ ತುಣು ದಾದಾದಾದಾದಾ.. ಬಲ್ಲೇ ಬಲ್ಲೇ.. ಅನ್ನೋ ಸೌಂಡು ಕಿವಿಗೆ ಬಿದ್ದರೆ, ತಕ್ಷಣ ಕಣ್ಣೆದುರು ಪ್ರತ್ಯಕ್ಷವಾಗೋದು ದಲೇರ್ ಮೆಹಂದಿ ಅನ್ನೋ ಸಿಖ್ ಗಾಯಕ. ಈಗಾಗಲೇ ಕನ್ನಡದಲ್ಲಿ ಕೆಲವು ಚಿತ್ರಗಳಿಗೆ ಹಾಡಿರುವ ದಲೇರ್ ಮೆಹಂದಿ, ದಿ ವಿಲನ್ ಚಿತ್ರದ ಹಾಡಿಗೆ ಧ್ವನಿ ಕೊಟ್ಟಿದ್ದಾರೆ.

  ಅರ್ಜುನ್ ಜನ್ಯ ಸಂಗೀತ ನಿರ್ದೇಶನದ ಹಾಡನ್ನು ದಲೇರ್ ಮೆಹಂದಿ ಹಾಡಿದ್ದಾರೆ. ಮೊದಲೇ ವಿಲನ್ ಚಿತ್ರ ಕನ್ನಡ ಚಿತ್ರರಂಗದ ದಿಗ್ಗಜರ ಸಮಾಗಮವಾಗಿರುವ ಚಿತ್ರ. ಶಿವರಾಜ್‍ಕುಮಾರ್, ಸುದೀಪ್, ಪ್ರೇಮ್, ಸಿ.ಆರ್.ಮನೋಹರ್, ಆ್ಯಮಿ ಜಾಕ್ಸನ್, ಮಿಥುನ್ ಚಕ್ರವರ್ತಿ, ಶ್ರೀಕಾಂತ್.. ಹೀಗೆ ಚಿತ್ರದ ತುಂಬಾ ದೊಡ್ಡ ದೊಡ್ಡವರೇ ಇದ್ದಾರೆ. ಈಗ ದಲೇರ್ ಮೆಹಂದಿ ಸೇರ್ಪಡೆಯಾಗಿದೆ.

  ಆಂದಹಾಗೆ ದಿ ವಿಲನ್ ಚಿತ್ರದ ಬಾಕಿಯಿರುವ ಏಕೈಕ ಹಾಡಿನ ಶೂಟಿಂಗ್, ಇದೇ ಹಾಡಿನದ್ದಂತೆ. ಗೆಟ್ ರೆಡಿ.

  Related Articles :-

  After 'Namo Bhootatma', Daler Mehandi sings for 'The Villain'

 • ಭೀಮಕಾಯ ಪೈಲ್ವಾನನ ವರ್ಕೌಟ್ ಹೇಗಿತ್ತು ಗೊತ್ತಾ..? 

  sudeep reveals his workout secret

  ಪೈಲ್ವಾನ್ ಚಿತ್ರದ ಪೋಸ್ಟರ್ ರಿಲೀಸ್ ಆಗಿದೆ. ಎಲ್ಲರನ್ನೂ ಅಚ್ಚರಿಗೊಳಿಸಿರುವುದು ಕಿಚ್ಚ ಸುದೀಪ್‍ರ ಹುರಿಗಟ್ಟಿದ ದೇಹ. ಥೇಟು ಭೀಮಕಾಯ. ಗರಡಿಯ ಮಣ್ಣಿನಲ್ಲಿ ಮೊದಲೇ ಕೆಂಪು ಕೆಂಪಗಿರುವ ಕಿಚ್ಚ, ಅಪ್ಪಟ ಮಣ್ಣಿನ ಮನುಷ್ಯನಂತೆಯೇ ಕಂಡುಬಿಡುತ್ತಾರೆ. ಮಟ್ಟಿಯ ಮಣ್ಣನ್ನು ಮೈಗೆ ಮೆತ್ತಿಕೊಳ್ಳೋಕೆ ಸುದೀಪ್ ಮಾಡಿದ ವರ್ಕೌಟ್ ಅದ್ಭುತವಾಗಿಯೇ ಇತ್ತು. ಜಿಮ್ ಎಂದರೇನೇ ಕಿಲೋ ಮೀಟರುಗಟ್ಟಲೆ ದೂರವಿರುವ ಸುದೀಪ್, ತಾವು ಬಾಡಿಬಿಲ್ಡ್ ಮಾಡೋಕೆ ದುಲ್ಹನ್ ಕಬೀರ್ ಸಿಂಗ್ ಪ್ರೇರಣೆ ಹಾಗೂ ಟ್ರೈನ್ ಮಾಡಿದ್ದು ಜೀತ್ ದೇವಯ್ಯ ಅನ್ನೊದನ್ನ ಹೇಳಿಕೊಂಡಿದ್ದರು. 

  ಇಷ್ಟೆಲ್ಲ ಮಾಡೋಕೆ ಸುದೀಪ್ ತಮ್ಮ ಬೆಳಗಿನ ಸಿಹಿ ನಿದ್ರೆಯನ್ನು ಬೆಳಗ್ಗೆ 4 ಗಂಟೆಗೇ ಏಳುತ್ತಿದ್ದರಂತೆ. 5 ಗಂಟೆಗೆ ಸ್ಟುಡಿಯೋದಲ್ಲಿರುವ ಜಿಮ್‍ಗೆ ಹೋದರೆ ಸತತ ಒಂದೂವರೆ ಗಂಟೆ ಬೆವರಿಳಿಸ್ತಾ ಇದ್ರು. 15 ನಿಮಿಷ ರೆಸ್ಟ್ ತಗೊಂಡ್ರೆ ನಂತರ ಮತ್ತೆ ಶೂಟಿಂಗ್. ಸಂಜೆ 5.30ರವರೆಗೆ ಶೂಟಿಂಗ್. ಅದು ಮುಗಿದ ಮೇಲೆ ಮತ್ತೆ ಮುಕ್ಕಾಲು ಗಂಟೆ ಸ್ವಿಮ್ಮಿಂಗ್ ಪೂಲ್‍ಗೆ ಧುಮುಕಬೇಕು. ಈಜಬೇಕು. 

  ಇದೆಲ್ಲದರ ಮಧ್ಯೆ ಸುದೀಪ್ ಆಹಾರದಲ್ಲೂ ಏರುಪೇರಾಗಿದೆ. ಉಪ್ಪಿಲ್ಲ. ಖಾರ ಇಲ್ಲ. ಸಕ್ಕರೆ ಇಲ್ಲ. ಎಣ್ಣೆ ಪದಾರ್ಥ ಇಲ್ಲ. ಎಲ್ಲ ಹೋಗಲಿ, ಅವರಿಗಿಷ್ಟವಾದ ರಾಗಿ ಮುದ್ದೆಯನ್ನೂ ತಿನ್ನೋ ಹಾಗಿಲ್ಲ. ಅಂದಹಾಗೆ ಇದು ಕೇವಲ ಪೋಸ್ಟರ್. ಸುದೀಪ್ ಹೇಗೆಲ್ಲ ಬದಲಾದರು ಅನ್ನೋ ವಿಡಿಯೋ ಕೂಡಾ ಶೀಘ್ರದಲ್ಲೇ ಬರಲಿದೆಯಂತೆ. 

  ಅದೇನೇ ಕಷ್ಟಬಿದ್ದಿದ್ದರೂ ಸಿನಿಮಾ, ಪಾತ್ರ ತೆರೆಯ ಮೇಲೆ ಬಂದಾಗ ಸಿಗೋ ಖುಷಿಯೇ ಬೇರೆ. ಒಬ್ಬ ಕಲಾವಿದನಿಗೆ ತೃಪ್ತಿ ಕೊಡುವುದೇ ಅದು. ಸುದೀಪ್ ಆ ಮಜಲಿನಲ್ಲಿದ್ದಾರೆ.

 • ಮಗಳ ಎದುರು ಆಗಲೇ ಗೆದ್ದಾಗಿದೆ ಪೈಲ್ವಾನ್

  sudeep's daughters first reaction on pailwan

  ಪೈಲ್ವಾನ್ ಚಿತ್ರದ ಪೋಸ್ಟರ್ ರಿಲೀಸ್ ಆದಾಗ ಎಲ್ಲರೂ ಹುಬ್ಬೇರಿಸಿದ್ದರು. ಮೂಗಿನ ಮೇಲೆ ಬೆರಳಿಟ್ಟಿದ್ದರು. ಅಭಿಮಾನಿಗಳು ವಾರೆ ವ್ಹಾ ಎಂದಿದ್ದರು. ಈಗ ಚಿತ್ರ ರಿಲೀಸ್ ಆಗಿದೆ.ಕೃಷ್ಣ ಡೈರೆಕ್ಷನ್, ಸ್ವಪ್ನಾ ಕೃಷ್ಣ ನಿರ್ಮಾಣದಲ್ಲಿ ಸುದೀಪ್ ಇದೇ ಮೊದಲ ಬಾರಿಗೆ ಕುಸ್ತಿ ಪಟುವಾಗಿ ಕಾಣಿಸಿಕೊಂಡಿದ್ದಾರೆ. ದೇಹ ಪ್ರದರ್ಶನವೂ ಅದ್ಭುತವಾಗಿದೆ.

  ಪ್ರೇಕ್ಷಕರ ಒಪ್ಪಿಗೆಗೂ ಮೊದಲೇ ಸುದೀಪ್ ಮೊದಲ ಗೆಲುವು ದಾಖಲಿಸಿದ್ದಾರೆ. ಅದೂ ಅವರ ಪ್ರೀತಿಯ ಮಗಳು ಸಾನ್ವಿಯ ಎದುರು. ನನ್ನ ಪೈಲ್ವಾನ್ ಪೋಸ್ಟರ್ ನೋಡಿ ನನ್ನ ಮಗಳು ವ್ಹಾವ್ ಎಂದರೂ.. ಆಮೇಲೆ ಪದೇ ಪದೇ ನಿಜಾನಾ ಅಂಥ ಕೇಳ್ತಾ ಇದ್ಲು. ಆಗ ಅವಳಿಗೆ ನಾನು ಜಿಮ್ ಮಾಡುತ್ತಿರುವ ದೃಶ್ಯಗಳನ್ನು ತೋರಿಸಿ ಪ್ರೂವ್ ಮಾಡಿದೆ. ನಿಜಕ್ಕೂ ಮಕ್ಕಳು ನನ್ನ ಸಿನಿಮಾ ಇಷ್ಟಪಡ್ತಾರೆ ಎಂದಿರುವ ಸುದೀಪ್, ಪೈಲ್ವಾನ್ ಚಿತ್ರದಿಂದಾಗಿ ನಾನು ಸರಿಯಾಗಿ ನಿದ್ದೆ, ಊಟ ಮತ್ತು ವರ್ಕೌಟ್ ಮಾಡುತ್ತಿದ್ದೇನೆ ಎಂದಿದ್ದಾರೆ. ಕೃಷ್ಣ ನಿರ್ದೇಶನದ ಪೈಲ್ವಾನ್ 5 ಭಾಷೆಗಳಲ್ಲಿ ಜಗತ್ತಿನಾದ್ಯಂತ ಏಕಕಾಲಕ್ಕೆ 3 ಸಾವಿರಕ್ಕೂ ಹೆಚ್ಚು ಥಿಯೇಟರ್ಗಳಲ್ಲಿ ರಿಲೀಸ್ ಆಗಿದೆ.

 • ಮತ್ತೆ ನಿರ್ದೇಶನಕ್ಕಿಳೀತಾರೆ ಕಿಚ್ಚ

  sudeep will be back to direction soons

  ಪೈಲ್ವಾನ್ ಗೆದ್ದ ಜೋಶ್‌ನಲ್ಲಿರೋ ಸುದೀಪ್ ಮತ್ತೆ ನಿರ್ದೇಶನಕ್ಕಿಳಿಯುತ್ತಿದ್ದಾರೆ. ಸದ್ಯಕ್ಕೆ ಕೋಟಿಗೊಬ್ಬ-೩ಯಲ್ಲಿ ಬ್ಯುಸಿಯಾಗಿರುವ ಸುದೀಪ್, ಹಿಂದಿಯಲ್ಲಿ ದಬಂಗ್-೩ಯಲ್ಲಿ ನಟಿಸಿದ್ದಾರೆ. ಇದಾದ ಮೇಲೆ ಪ್ಯಾಂಟಮ್ ಹಾಗೂ ಇನ್ನೊಂದು ಬಹುಭಾಷಾ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಆ ಕೆಲಸ ಮುಗಿದ ಮೇಲೆ ನಿರ್ದೇಶನದ ಸಿನಿಮಾ ಶುರುವಾಗಲಿದೆ.

  ಇದುವರೆಗೆ ಸುದೀಪ್ ೬ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಮೈ ಆಟೋಗ್ರಾಫ್, #೭೩ ಶಾಂತಿ ನಿವಾಸ, ವೀರಮದಕರಿ, ಜಸ್ಟ್ ಮಾತ್ ಮಾತಲ್ಲಿ, ಕೆಂಪೇಗೌಡ ಮತ್ತು ಮಾಣಿಕ್ಯ. ೨೦೨೦ರ ಮಧ್ಯಭಾಗದಲ್ಲಿ ೭ನೇ ಚಿತ್ರಕ್ಕೆ ಡೈರೆಕ್ಟರ್ ಕ್ಯಾಪ್ ತೊಡಲಿದ್ದಾರೆ ಸುದೀಪ್. ಅಫ್‌ಕರ‍್ಸ್, ಈ ಬಗ್ಗೆ ಸುದೀಪ್ ಅವರಿಂದ ಯಾವುದೇ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ.

 • ಮತ್ತೆ ಬ್ಯಾಂಕಾಕ್‍ಗೆ `ದಿ ವಿಲನ್' ಟೀಂ

  the villain team in bangkok

  ಈಗಾಗಲೇ ಎರಡು ಸುತ್ತಿನ ಚಿತ್ರೀಕರಣ ಮುಗಿಸಿರುವ ದಿ ವಿಲನ್ ಚಿತ್ರತಂಡ ಮತ್ತೆ ಫಾರಿನ್ನಿಗೆ ಹೊರಟು ನಿಂತಿದೆ. ಈ ಬಾರಿ ಬ್ಯಾಂಕಾಕ್‍ನಲ್ಲಿ ಶೂಟಿಂಗ್ ನಡೆಯಲಿದೆ. 

  ಮುಂದಿನ ವಾರದಿಂದ ಬ್ಯಾಂಕಾಕ್‍ನಲ್ಲಿ 10 ದಿನಗಳ ಶೂಟಿಂಗ್ ಶುರುವಾಗಲಿದೆ. ಶಿವರಾಜ್ ಕುಮಾರ್, ಸುದೀಪ್, ಆ್ಯಮಿ ಜಾಕ್ಸನ್ ಸೇರಿದಂತೆ ಇಡೀ ತಂಡ ಚಿತ್ರೀಕರಣದಲ್ಲಿ ಬ್ಯುಸಿಯಾಗಲಿದೆ.  ಶೂಟಿಂಗ್ ಮುಗಿಯುವ ಮುನ್ನವೇ ಚಿತ್ರದ ಹಕ್ಕುಗಳು ಮಾರಾಟವಾದ ಖುಷಿಯಲ್ಲಿರುವ ನಿರ್ದೇಶಕ ಪ್ರೇಮ್, ಬ್ಯಾಂಕಾಕ್‍ನಲ್ಲಿ ಇನ್ನಷ್ಟು ಉತ್ಸಾಹದಿಂದ ಶೂಟಿಂಗ್‍ನಲ್ಲಿ ತೊಡಗಿಕೊಳ್ಳಲಿದ್ದಾರೆ. 

Sagutha Doora Doora Movie Gallery

Popcorn Monkey Tiger Movie Gallery