` sudeep - chitraloka.com | Kannada Movie News, Reviews | Image

sudeep

 • ಸರ್ಬಿಯಾದಲ್ಲಿ ಸುದೀಪ್ ಸೆನ್ಸೇಷನ್

  sudeep creates sensation in serbia

  ಕಿಚ್ಚ ಸುದೀಪ್, ಕರ್ನಾಟಕದಲ್ಲಿ, ದಕ್ಷಿಣ ಭಾರತದಲ್ಲಿ ಏನು ಮಾಡಿದರೂ ಬ್ರೇಕಿಂಗ್ ನ್ಯೂಸ್. ಏಕೆಂದರೆ ಅವರ ಅಭಿಮಾನಿ ಬಳಗ ಅಷ್ಟು ದೊಡ್ಡದು. ಅವರ ಖ್ಯಾತಿ ಈಗ ಭಾರತವನ್ನೂ ದಾಟಿ ಸರ್ಬಿಯಾಗೂ ಕಾಲಿಟ್ಟಿದೆ. ಸರ್ಬಿಯಾದಲ್ಲಿ ಕೋಟಿಗೊಬ್ಬ 3 ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಸುದೀಪ್ ಅವರಿಗೆ ಹಿತವಾದ ಶಾಕ್ ನೀಡಿರುವುದು ಸರ್ಬಿಯಾದ ಪತ್ರಿಕೆ ಹಾಗೂ ವೆಬ್‍ಸೈಟ್‍ಗಳು. ಸರ್ಬಿಯಾದ ಟೆಲಿಗ್ರಾಫ್ ಪತ್ರಿಕೆ ಹಾಗೂ ವೆಬ್‍ಸೈಟುಗಳಲ್ಲಿ ಕಿಚ್ಚ ಸುದೀಪ್ ಬಗ್ಗೆ ಸವಿವರವಾದ ಲೇಖನವನ್ನೇ ಬರೆಯಲಾಗಿದೆ.

  ಸುದೀಪ್ ಅವರನ್ನ ಕಿಚ್ಚ ಸುದೀಪ್ ಅಂತಾ ಕರೆಯೋದು ಯಾಕೆ..? ಅವರ ಚಿತ್ರಗಳ ಸಕ್ಸಸ್ ಏನು..? ಕೋಟಿಗೊಬ್ಬ2 ಚಿತ್ರ ಗೆದ್ದಿದ್ದು ಹೇಗೆ..? ಭಾರತದಲ್ಲಿ ಅವರ ಜನಪ್ರಿಯತೆ ಎಷ್ಟಿದೆ ಅನ್ನೋದನ್ನೆಲ್ಲ ವಿವರವಾಗಿ ಬರೆಯಲಾಗಿದೆ.

  ಶಿವ ಕಾರ್ತಿಕ್ ನಿರ್ದೇಶನದ ಚಿತ್ರಕ್ಕೆ ಸೂರಪ್ಪ ಬಾಬು ನಿರ್ಮಾಪಕರು. ಚಿತ್ರದಲ್ಲಿ ಮಡೋನ್ನಾ ಸೆಬಾಸ್ಟಿಯನ್ ಹಾಗೂ ಶ್ರದ್ಧಾದಾಸ್ ನಾಯಕಿಯರು. ಬಾಲಿವುಡ್ ನಟ ಅಫ್ತಾಬ್ ಶಿವದಾಸಾನಿ ಕೂಡಾ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ.

 • ಸಲ್ಮಾನ್ ಖಾನ್​ಗೆ ವಿಲನ್ ಆಗ್ತಾರಾ ಕಿಚ್ಚ ಸುದೀಪ್..?

  sudeep salman khan

  ಕನ್ನಡದ ಸೂಪರ್ ಸ್ಟಾರ್ ಕಿಚ್ಚ ಸುದೀಪ್​ಗೆ ಬೇರೆ ಭಾಷೆಯಲ್ಲಿ ನಟಿಸುವುದು ಹೊಸದೇನೂ ಅಲ್ಲ. ಹಿಂದಿ, ತಮಿಳು, ತೆಲುಗಿನಲ್ಲಾಗಲೇ ಕಿಚ್ಚನ ಹೆಜ್ಜೆ ಗುರುತು ಮೂಡಿದೆ. ಆದರೆ, ಈಗ ಬರುತ್ತಿರುವ ಸುದ್ದಿ ಇನ್ನೂ ಹೊಸದು. ಇದು ಬಂದಿರೋದು ಬಾಲಿವುಡ್​ನಿಂದ.    

  ಸಲ್ಮಾನ್ ಖಾನ್ ಅಭಿನಯದ ‘ಟೈಗರ್ ಜಿಂದಾ ಹೈ’ ಚಿತ್ರದಲ್ಲಿ ಸುದೀಪ್ ಖಳನಾಯಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅದು 2012ರಲ್ಲಿ ಬಂದಿದ್ದ ಏಕ್ ಥಾ ಟೈಗರ್ ಚಿತ್ರದ ಸೀಕ್ವೆಲ್. ಆ ಚಿತ್ರದಲ್ಲಿ ಸಲ್ಮಾನ್ ಖಾನ್, ಭಾರತದ ರಾ ಏಜೆಂಟ್ ಪಾತ್ರದಲ್ಲಿ ನಟಿಸಿದ್ದರು. ನಾಯಕಿಯಾಗಿ ಕತ್ರಿನಾ ಕೈಫ್ ಪಾಕ್ ಐಎಸ್​ಐ ಏಜೆಂಟ್ ಆಗಿ ಕಾಣಿಸಿಕೊಂಡಿದ್ದರು. ಎರಡು ಶತ್ರು ದೇಶಗಳ ಗೂಢಚಾರರು ಪ್ರೀತಿಗಾಗಿ ದೇಶವನ್ನೇ ಬಿಟ್ಟು ನಿಗೂಢವಾಗಿ ಮರೆಯಾಗುವುದರೊಂದಿಗೆ ಚಿತ್ರ ಕೊನೆಯಾಗಿತ್ತು. 

  ಈಗ ಆ ಚಿತ್ರದ ಎರಡನೇ ಭಾಗ ಸಿದ್ಧವಾಗುತ್ತಿದೆ. ಹಾಗಾದರೆ, ನಾಪತ್ತೆಯಾಗಿದ್ದ ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್​ರನ್ನು ಹುಡುಕಿಕೊಂಡು ಬರುವ ಪಾಕ್ ಐಎಸ್​ಐ ಏಜೆಂಟ್ ಆಗಿ ಸುದೀಪ್ ಕಾಣಿಸಿಕೊಳ್ಳಲಿದ್ದಾರಾ..? ಸದ್ಯಕ್ಕೆ ಇದು ಸಸ್ಪೆನ್ಸ್.ಸುದೀಪ್ ಪಾತ್ರದ ಹೆಸರು ಜಹೀರ್.

  ಚಿತ್ರಕ್ಕೆ ಸುದೀಪ್ ಅವರನ್ನೇ ಆಯ್ಕೆ ಮಾಡಿಕೊಳ್ಳುವುದರ ಹಿಂದೆ ಬಾಕ್ಸಾಫೀಸ್ ಲೆಕ್ಕಾಚಾರವೂ ಇದೆ. ದಕ್ಷಿಣದಲ್ಲಿ ಕರ್ನಾಟಕ, ತಮಿಳುನಾಡು ಹಾಗೂ ಆಂಧ್ರಪ್ರದೇಶ, ತೆಲಂಗಾಣದಲ್ಲೂ ಸುದೀಪ್ ಚಿತ್ರಗಳಿಗೆ ಡಿಮ್ಯಾಂಡ್ ಇದೆ. ಹೀಗಾಗಿ ದಕ್ಷಿಣದ ಸ್ಟಾರ್ ನಟರನ್ನು ಹಾಕಿಕೊಳ್ಳುವ ಲೆಕ್ಕಾಚಾರ ಬಾಲಿವುಡ್​ನದ್ದು. ಅದರ ಮೂಲಕ ಸುದೀಪ್ ಸ್ಟಾರ್​ಗಿರಿಯ ಲಾಭ ಪಡೆಯುವ ಬ್ಯುಸಿನೆಸ್ ಲೆಕ್ಕಾಚಾರವೂ ಇದರ ಹಿಂದಿದೆ.

  Related Articles :-

  Will Sudeep Act In Salman Khan's Tiger Zinda Hai?

 • ಸವಿಸವಿ ನೆನಪು.. ಸಾವಿರ ನೆನಪು.. - ಕಿಚ್ಚ @ 22

  22 years of sudeep

  ಸರಿಯಾಗಿ ಇವತ್ತಿಗೆ 22 ವರ್ಷಗಳ ಹಿಂದೆ, ಕನ್ನಡ ಚಿತ್ರರಂಗಕ್ಕೆ ಒಬ್ಬ ಸ್ಟಾರ್ ಕಾಲಿಟ್ಟಿದ್ದ. ಅವತ್ತು ಆತ ಅಂಬೆಗಾಲಿಡುತ್ತಿದ್ದ ಮಗು. ಇಂದು ಸ್ಟಾರ್. ಕನ್ನಡ ಚಿತ್ರರಂಗಕ್ಕೆ ಪ್ರತಿ ವರ್ಷ ಹಲವಾರು ಹೊಸ ಪ್ರತಿಭೆಗಳು ಬರುತ್ತವೆ. ಆದರೆ, ನಿಲ್ಲುವ ಗಟ್ಟಿಕಾಳು ಕೆಲವೇ ಕೆಲವು. ಅಂತಹವರಲ್ಲಿ ಸುದೀಪ್ ವಿಶೇಷವಾಗಿ ನಿಂತುಬಿಡ್ತಾರೆ. ಈ 22 ವರ್ಷಗಳಲ್ಲಿ ಅವರು ಚಿತ್ರರಂಗದ ಪ್ರತಿ ಕ್ಷೇತ್ರದಲ್ಲೂ ಹೆಜ್ಜೆಯಿಟ್ಟಿದ್ದಾರೆ. ಗೆದ್ದಿದ್ದಾರೆ. ಸೋತಿದ್ದಾರೆ. ಸೋತಿದ್ದ ಸ್ಥಳದಲ್ಲೇ ಮತ್ತೆ ಗೆದ್ದಿದ್ದಾರೆ. ಕನ್ನಡದಲ್ಲಷ್ಟೇ ಅಲ್ಲ, ಸುದೀಪ್, ತೆಲುಗು, ತಮಿಳು, ಹಿಂದಿಗೂ ಕಾಲಿಟ್ಟು ಗೆದ್ದ ಆರಡಿ ಕಟೌಟು. ಹಾಲಿವುಡ್‍ಗೂ ಪಾದಾರ್ಪಣೆ ಮಾಡ್ತಿರೋ ಸುದೀಪ್, ಚಿತ್ರರಂಗಕ್ಕೆ ಬಂದು 22 ವರ್ಷವಾಗಿ ಹೋಯ್ತಾ..? ತಮ್ಮ ಆರಂಭದ ದಿನದ ಕ್ಷಣಗಳನ್ನು ಸ್ವತಃ ಸುದೀಪ್ ಹೇಳಿಕೊಂಡಿದ್ದಾರೆ. ಇದು ಅವರದ್ದೇ ಪತ್ರ. 

  sudeep_kmv.jpg1996, ಜನವರಿ 31

  ಬ್ರಹ್ಮ ಚಿತ್ರದ ಮೊದಲ ದಿನದ ಚಿತ್ರೀಕರಣ ಶುರುವಾಯ್ತು. ಅದು ನಾನು ನನ್ನ ಬದುಕಿನಲ್ಲಿ ಮೊತ್ತ ಮೊದಲ ಬಾರಿಗೆ ಮೇಕಪ್ ಹಚ್ಚಿಕೊಂಡ ದಿನ. ಈ ಸಿನಿಮಾ ಪ್ರಪಂಚಕ್ಕೆ ಕಾಲಿಟ್ಟ ದಿನ ಅದು.

  ನನಗೆ ಆ್ಯಕ್ಷನ್, ಕಟ್ ಎಂಬ ಪದಗಳು ಹೊಸದಲ್ಲ. ತಂದೆಯ ಜೊತೆ, ಸ್ನೇಹಿತರ ಜೊತೆ ಹಲವು ಬಾರಿ ಚಿತ್ರೀಕರಣದ ಸ್ಥಳಗಳಿಗೆ ಹೋಗುತ್ತಿದ್ದೆ. ಕೇಳುತ್ತಿದ್ದೆ. ಆದರೆ, ಆ ಆ್ಯಕ್ಷನ್ ಕಟ್‍ನಲ್ಲಿ ಸ್ವತಃ ಭಾಗವಾಗದ ಆ ಕ್ಷಣ ಇದೆಯಲ್ಲ.. ಅದನ್ನು ಪದಗಳಲ್ಲಿ ಹೇಳುವುದು ಕಷ್ಟ.

  ಆ ದಿನ ನಾನು ಎದುರಿಸಿದ್ದು ಅತ್ಯಂತ ಸರಳ ಸನ್ನಿವೇಶ. ಆ ಚಿತ್ರದಲ್ಲಿ ಅಂಬರೀಷ್ ಮಾಮ ನನ್ನ ಅಣ್ಣನ ಪಾತ್ರ ಮಾಡಿದ್ದರು. ನಾನು ಅವರಿಂದ ಆಶೀರ್ವಾದ ಪಡೆಯಬೇಕಿತ್ತು. ಆದರೆ, ನನಗೆ ಆಗ ಅದು ಸರಳ ದೃಶ್ಯವಾಗಿರಲಿಲ್ಲ. ತುಂಬಾ ಟೇಕ್ ತೆಗೆದುಕೊಂಡೆ. ಅದನ್ನು ನೋಡಿದವರಿಗೆ ನನ್ನ ಸಾಮಥ್ರ್ಯ, ಪ್ರತಿಭೆ ಬಗ್ಗೆ ಅನುಮಾನ ಬಂದಿದ್ದರೂ ಬಂದಿರಬಹುದು. ಅಂದಿನಿಂದ ಶುರುವಾದ ಪಯಣ... ನಿಧಾನಕ್ಕೆ ಸರಿಯಾಗುತ್ತಾ ಹೋಯ್ತು.

  22 ವರ್ಷ ಕಳೆದಾಯ್ತು. ಸಿನಿಮಾಗೆ ಹೇಗೆ ಧನ್ಯವಾದ ಹೇಳಬೇಕು ಎಂದು ಗೊತ್ತಾಗುತ್ತಿಲ್ಲ. ನನ್ನ ನಿರ್ಮಾಪಕರು, ನಿರ್ದೇಶಕರು, ಸಹೋದ್ಯೋಗಿಗಳು, ಸಹ ನಟ-ನಟಿಯರು, ವಿತರಕರು, ಪ್ರದರ್ಶಕರು, ಮಾಧ್ಯಮ.. ಎಲ್ಲಕ್ಕಿಂತ ಮಿಗಿಲಾಗಿ ನೀವು.. ನನ್ನ ಈ ಪಯಣದಲ್ಲಿ ಯಾವುದೇ ಷರತ್ತುಗಳಿಲ್ಲದೆ ಪ್ರೀತಿಸಿದ್ದೀರಿ. ಅಭಿಮಾನದಿಂದ ಅಪ್ಪಿಕೊಂಡಿದ್ದೀರಿ. ನನ್ನನ್ನು ಹಾಗೆ ಅಪ್ಪಿಕೊಂಡು ಒಪ್ಪಿಸಿಕೊಂಡ ನಿಮಗೆ ನಾನು ಚಿರಋಣಿ.

  ಸಿನಮಾ, ನನಗೆ ನನ್ನ ಜೀವನದ ಅತ್ಯಂತ ಸುಂದರ ಸಂಗತಿ. ಇವತ್ತು ನಾನು ಏನೇ ಆಗಿರಬಹುದು. ಅದು ನೀವು ನನಗೆ ಕೊಟ್ಟ ಉಡುಗೊರೆ. ಧನ್ಯವಾದಗಳು.

  ನನ್ನ ಕುಟುಂಬದವರಿಗೆ ನಾನು ಕೃತಜ್ಞತೆ ಸಲ್ಲಿಸಲೇಬೇಕು. ಅವರು ನನಗಾಗಿ ಮಾಡಿದ ತ್ಯಾಗವನ್ನು ನಾನು ಮರಳಿ ಕೊಡಲು ಸಾಧ್ಯವೇ..? 

  ನನ್ನ ಜೊತೆ ನಿಂತಿದ್ದಕ್ಕೆ ನನ್ನ ಕುಟುಂಬಕ್ಕೆ ಕೃತಜ್ಞತೆ ಸಲ್ಲಿಸಲೇಬೇಕು. 

  ನನ್ನ ಜೀವನದ ಪ್ರತಿ ಕ್ಷಣಗಳಲ್ಲೂ ನನಗೆ ಜೊತೆಯಾದ ಚಿತ್ರರಂಗಕ್ಕೆ ನಾನು ಯಾವತ್ತೂ ಅಭಾರಿ. ಚಿತ್ರರಂಗದ ಸೇವೆಗೆ ನಾನು ಸದಾಸಿದ್ಧ.

  ಪ್ರೀತಿಯಿರಲಿ

  ಕಿಚ್ಚ ಸುದೀಪ

  ಇಂಥಾದ್ದೊಂದು ಹೃದಯಸ್ಪರ್ಶಿ ಪತ್ರ ಬರೆದಿರುವ ಸುದೀಪ್, ತಮ್ಮ 22 ವರ್ಷಗಳ ವೃತ್ತಿ ಜೀವನದ ಆರಂಭದ ಕ್ಷಣಗಳನ್ನು ನೆನಪಿಸಿಕೊಂಡಿದ್ದಾರೆ. 

 • ಸಿಕ್ಸ್ ಪ್ಯಾಕ್‍ಗಾಗಿ ಜಿಮ್‍ಗೆ ಹೊರಟ ಸುದೀಪ್

  sudeep's intense workout

  ಹಿಂದಿಯಲ್ಲಿ ಒಂದು ನಂಬಿಕೆಯಿದೆ. ಸಲ್ಮಾನ್ ಖಾನ್ ಚಿತ್ರಗಳಲ್ಲಿ ಅವರ ದೇಹ ಪ್ರದರ್ಶನವಾಗದೇ ಇದ್ದರೆ, ಸಿನಿಮಾ ಗೆಲ್ಲುವುದು ಡೌಟು ಎಂಬ ನಂಬಿಕೆಯದು. ಹೀಗಾಗಿ ಸಲ್ಲು ಚಿತ್ರಗಳಲ್ಲಿ ಅಂಥಾದ್ದೊಂದು ಸೀನ್ ಸೆಕೆಂಡುಗಳ ಲೆಕ್ಕದಲ್ಲಾದರೂ ಬಂದು ಹೋಗಿರುತ್ತೆ. ಹಿಂದಿಯಲ್ಲಿ ಹೃತಿಕ್, ಶಾರೂಕ್, ಕನ್ನಡದಲ್ಲಿ ದುನಿಯಾ ವಿಜಯ್, ಪುನೀತ್, ದರ್ಶನ್ ಮೊದಲಾದವರು ಈಗಾಗಲೇ ತಮ್ಮ ಸಿಕ್ಸ್‍ಪ್ಯಾಕ್‍ನ್ನು ಸಿನಿಮಾಗಳಲ್ಲಿ ತೋರಿಸಿದ್ದಾರೆ. ಆದರೆ, ಅದರಿಂದ ದೂರವೇ ಇದ್ದವರು ಸುದೀಪ್. 

  ದೇಹವನ್ನು ಹದ್ದುಬಸ್ತಿನಲ್ಲಿಟ್ಟುಕೊಂಡಿರುವ ನಟರಲ್ಲಿ ಸುದೀಪ್ ಕೂಡಾ ಒಬ್ಬರು. ಹೀಗಿದ್ದರೂ, ಸುದೀಪ್ ತಮ್ಮ ದೇಹವನ್ನು ಯಾವುದೇ ಚಿತ್ರಗಳಲ್ಲಿಯೂ ಪ್ರದರ್ಶನ ಮಾಡಿದವರಲ್ಲ. ಆ ಕಾಲ ಈಗ ಹತ್ತಿರವಾಗುತ್ತಿದೆ. ಏಕೆಂದರೆ, ಅವರೀಗ ಪೈಲ್ವಾನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. 

  ಅದು ಕೃಷ್ಣ ನಿರ್ದೇಶನದ ಚಿತ್ರ. ಒಬ್ಬ ಪೈಲ್ವಾನ್ ಹೇಗೆಂದರೆ ಹಾಗೆ ಇರೋಕೆ ಸಾಧ್ಯವಿಲ್ಲ. ಅದಕ್ಕೆ ತನ್ನದೇ ಆದ ನಿಯಮಗಳಿವೆ. ಈವರೆಗೂ ಮಾಡಿದ್ದ ಪಾತ್ರಗಳಲ್ಲಿ ದೇಹ ತೋರಿಸಬೇಕಾದ ಅಗತ್ಯ ಇರಲಿಲ್ಲ. ಆದರೆ, ಈ ಚಿತ್ರಕ್ಕೆ ತಯಾರಿ ಮಾಡಿಕೊಳ್ಳಲೇಬೇಕಿದೆ ಎಂದಿದ್ದಾರೆ ಕಿಚ್ಚ. 

 • ಸಿದ್ದರಾಮಯ್ಯ ಜೊತೆ ಸುದೀಪ್ 45 ನಿಮಿಷ ಮೀಟಿಂಗ್

  sudeep's letter to cm

  ಕಿಚ್ಚ ಸುದೀಪ್ ರಾಜಕೀಯಕ್ಕೆ ಬರ್ತಾರಾ..? ಇಂಥಾದ್ದೊಂದು ಪ್ರಶ್ನೆಗೆ ಸುದೀಪ್ ಖಡಾಖಂಡಿತವಾಗಿ ನೋ ಎಂದುಬಿಟ್ಟಿದ್ದಾರೆ. ರಾಜಕೀಯ ನಮ್ಮಂತಹವರಿಗಲ್ಲ ಎಂದಿದ್ದಾರೆ. ಆದರೆ, ಇಂದು ಇದ್ದಕ್ಕಿದ್ದಂತೆ ಸಿದ್ದರಾಮಯ್ಯ ಜೊತೆ ಸುದೀಪ್ ಭೇಟಿ ಮಾಡಿರುವುದು ತೀವ್ರ ಕುತೂಹಲ ಮೂಡಿಸಿತ್ತು. ಸಿಎಂ ಸಿದ್ದರಾಮಯ್ಯನವರ ಕಾವೇರಿ ನಿವಾಸಕ್ಕೆ ಭೇಟಿ ನೀಡಿದ ಸುದೀಪ್, ಸುಮಾರು 45 ನಿಮಿಷ ಕಾಲ ಸಿದ್ದರಾಮಯ್ಯ ಜೊತೆ ಮಾತುಕತೆ ನಡೆಸಿದ್ರ.

  ಈ ವೇಳೆ ವಿಷ್ಣು ಸ್ಮಾರಕ ಕುರಿತಂತೆ ಸಿದ್ದರಾಮಯ್ಯನವರಿಗೆ ಮನವಿ ಮಾಡಿರುವ ಸುದೀಪ್, ಸಮಾಧಿಯನ್ನು ಮಾತ್ರ ಸ್ಥಳಾಂತರಿಸಬೇಡಿ ಎಂದು ಮನವಿ ಮಾಡಿದ್ದಾರೆ. ಸ್ಮಾರಕವನ್ನು ಎಲ್ಲಾದರೂ ನಿರ್ಮಿಸಿ, ಸಮಾಧಿ ಸ್ಥಳ ಈಗ ಇರುವ ಜಾಗದಲ್ಲಿಯೇ ಇರಲಿ ಎಂದು ಕೇಳಿಕೊಂಡಿದ್ದಾರೆ.

  ರಾಜಕೀಯದ ಬಗ್ಗೆ ಏನಾದರೂ ಮಾತನಾಡಿದಿರಾ ಎಂಬ ಪ್ರಶ್ನೆಗೆ ಸುದೀಪ್ ನೀಡಿರುವುದು ಮುಗುಳ್ನಗೆಯ ಉತ್ತರ.

 • ಸುದೀಪ್ ಆ್ಯಪ್, ಸುದೀಪ್ ವೆಬ್‍ಸೈಟ್ ನೋಡಿದಿರಾ..?

  sudeep app and website launch

  ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಆಗಾಗ್ಗೆ ಸಿಹಿಯಾದ ಶಾಕ್ ಕೊಡ್ತಾನೇ ಇರ್ತಾರೆ. ಆದರೆ, ಈ ಬಾರಿ ಸುದೀಪ್‍ಗೆ ಅಭಿಮಾನಿಗಳೇ ಸಿಹಿ ಸಿಹಿಯಾದ ಉಡುಗೊರೆ ಕೊಟ್ಟಿದ್ದಾರೆ. ಅಭಿಮಾನಿಗಳೇ ಸೇರಿ ಕಿಚ್ಚ ಸುದೀಪ್ ಆ್ಯಪ್ ಹಾಗೂ ವೆಬ್‍ಸೈಟ್ ರೂಪಿಸಿದ್ದಾರೆ. ಇದು ಕಿಚ್ಚ ಸುದೀಪ್ ಫ್ಯಾನ್ಸ್ ಅಸೋಸಿಯೇಷನ್ ಸಾಹಸ. ಈ ಸಾಹಸ ಮಾಡಿರೋದು ಬೆಳಗಾವಿ ಜಿಲ್ಲೆಯ ಕಿಚ್ಚನ ಫ್ಯಾನ್ಸ್. 

  ಋತ್ವಿಕ್ ಹಾಗೂ ಇನ್ನಿಬ್ಬರು ಗೆಳೆಯರು ಒಟ್ಟಿಗೇ ಸೇರಿ ಈ ಆ್ಯಪ್ ಹಾಗೂ ವೆಬ್ ರೂಪಿಸಿದ್ಧಾರೆ. ಈ ವೆಬ್ ಹಾಗೂ ಆ್ಯಪ್‍ನಲ್ಲಿ ಸುದೀಪ್ ಅವರ ಹೊಸ ಹೊಸ ಸಿನಿಮಾ, ಆ ಸಿನಿಮಾಗಳಿಗೆ ಸಂಬಂಧಪಟ್ಟ ಸುದ್ದಿಗಳು, ಫೋಟೋಗಳೂ ಇರುತ್ತವೆ. ಬಹುಶಃ, ತಮ್ಮ ಹೆಸರಿನಲ್ಲೇ ಒಂದು ಆ್ಯಪ್ ಹಾಗೂ ವೆಬ್‍ಸೈಟ್ ಹೊಂದಿರುವ ಏಕೈಕ ನಟ ಸುದೀಪ್ ಅವರೇ ಇರಬೇಕು.

  ಆ್ಯಪ್‍ಗಾಗಿ KSFA  ಎಂದು ಟೈಪ್ ಮಾಡಿ. ವೆಬ್‍ಸೈಟ್ ವಿಳಾಸ ಇದು. ksfaofficial.com

 • ಸುದೀಪ್ ಇಷ್ಟವಾಗೋದು ಈ ಕಾರಣಕ್ಕೆ..

  sudeep

  ಕಿಚ್ಚ ಸುದೀಪ್ ಅವರನ್ನು ಹತ್ತಿರದಿಂದ ಬಲ್ಲವರಿಗೆ, ಅವರು ಬೇರೆ ಬೇರೆ ಕಾರಣಗಳಿಗೆ ಇಷ್ಟಪಡುತ್ತಾರೆ. ರನ್ನ ಚಿತ್ರದಲ್ಲೊಂದು ಡೈಲಾಗ್ ಇದೆ. ಯಾರ ಎದುರು ತಲೆ ತಗ್ಗಿಸಬೇಕು ಎಂದು ಗೊತ್ತಿರುವವನೇ ನಿಜವಾದ ಗ್ರೇಟ್ ಮ್ಯಾನ್ ಅನ್ನೋ ಅರ್ಥದ ಸಂಭಾಷಣೆ ಅದು. ಸುದೀಪ್ ರಿಯಲ್ ಲೈಫ್‍ಲ್ಲೂ ಇರೋದು ಹಾಗೇನೆ.

  ಈಗ ವಿಷ್ಣು ಸಮಾಧಿ ವಿಚಾರವನ್ನೇ ತೆಗೆದುಕೊಳ್ಳಿ. ಸುದೀಪ್ ವಿಷ್ಣು ಸಮಾಧಿ ಸ್ಥಳವನ್ನು ಪುಣ್ಯಭೂಮಿ ಎಂದು ಕರೆದು, ಅದರ ಜವಾಬ್ದಾರಿ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. ಹಾಗೆಂದು ಮೈಸೂರಿನಲ್ಲಿ ನಿರ್ಮಿಸಲು ಉದ್ದೇಶಿಸಿರುವ ವಿಷ್ಣು ಸ್ಮಾರಕವನ್ನೇನೂ ವಿರೋಧಿಸಿಲ್ಲ. 

  ಅಂದಹಾಗೆ ಓದುಗರಿಗೆ ಸ್ವಲ್ಪ ಅಪರಿಚಿತವಾಗಿಯೇ ಉಳಿದಿರುವ ಈ ಕಥೆಯನ್ನೂ ಓದಿಬಿಡಿ. ವಿಷ್ಣು ಅವರ ಸಮಾಧಿ ಇರೋದು ಅಭಿಮಾನ್ ಸ್ಟುಡಿಯೋದಲ್ಲಿ. ಅದು ಹಿರಿಯ ನಟ ಬಾಲಕೃಷ್ಣ ಅವರ ಕನಸಿನ ಕೂಸು. ಆದರೆ, ಅವರ ನಿಧನದೊಂದಿಗೆ ಅದು ಅನಾಥವಾಗಿ ಹೋಗಿತ್ತು. ಎಷ್ಟರಮಟ್ಟಿಗೆ ಎಂದರೆ ಬಾಲಕೃಷ್ಣ ಅವರ ಸಮಾಧಿ ಕೂಡಾ ಅನಾಥವಾಗಿತ್ತು.

  ಅದು ಸುದೀಪ್‍ಗೆ ಗೊತ್ತಾದ ನಂತರ, ಏನೊಂದು ಮಾತನಾಡದೆ ಸದ್ದಿಲ್ಲದೆ ಬಾಲಕೃಷ್ಣ ಅವರ ಸಮಾಧಿಯನ್ನು ಸ್ಮಾರಕವನ್ನಾಗಿಸಿದರು ಸುದೀಪ್. ಅಭಿಮಾನ್ ಸ್ಟುಡಿಯೋಗೆ ಹೋದರೆ, ಹಾಸ್ನನಟ ಬಾಲಣ್ಣನವರ ಚಿರನಿದ್ರಾಲಯ. ಕಲಾ ಬಾಂಧವರಿಗೆಲ್ಲ ಇದೊಂದು ದೇವಾಲಯ ಎಂಬ ಬೋರ್ಡ್ ಇರುವ ಪುಟ್ಟ ಸ್ಮಾರಕ ಕಣ್ಣಿಗೆ ಬೀಳುತ್ತೆ. ಅದೇ ಬೋರ್ಡ್‍ನ ಕೆಳಗೆ ಕೊಡುಗೆ ಎಂದು ಸರೋವರ್ ಪ್ರೊಡಕ್ಷನ್ಸ್‍ನ ಹೆಸರನ್ನು ಪುಟ್ಟದಾಗಿ ಬರೆಯಲಾಗಿದೆ. 

  ಹೀಗೆ ಅಭಿಮಾನ್ ಸ್ಟುಡಿಯೋದ ಜೊತೆ ಭಾವನಾತ್ಮಕ ನಂಟು ಹೊಂದಿರುವ ಸುದೀಪ್, ವಿಷ್ಣುವರ್ಧನ್ ಅವರನ್ನು ಅಪಾರವಾಗಿ ಗೌರವಿಸುತ್ತಿದ್ದ ಕಲಾವಿದ. ಹೀಗಾಗಿಯೇ ಸ್ಮಾರಕ ವಿಳಂಬವಾಗುತ್ತಿರುವುದಕ್ಕೆ ಬೇಸರಗೊಂಡು ಸ್ವತಃ ರಂಗಕ್ಕಿಳಿದಿದ್ದಾರೆ. ಸರ್ಕಾರ, ಕಾನೂನು ಗೊಂದಲಗಳನ್ನು ಬಗೆಹರಿಸಿದರೆ, ವಿಷ್ಣು ಅವರ ಸ್ಮಾರಕ ಬೆಳಗುವುದರಲ್ಲಿ ಸಂಶಯವಿಲ್ಲ.

 • ಸುದೀಪ್ ಎದುರು ನಟಿಸೋಕೆ ಸುನಿಲ್ ಶೆಟ್ಟಿಗೆ ಟೆನ್ಷನ್..!

  interesting conversation between sudeep and suneil shetty

  ಸಾಮಾನ್ಯವಾಗಿ ಸ್ಟಾರ್‍ಗಳ ಎದುರು ನಟಿಸೋಕೆ ಹೊಸ ಮುಖಗಳು ನರ್ವಸ್ ಆಗೋದು ಸಹಜ. ಆದರೆ, ಪೈಲ್ವಾನ್ ಚಿತ್ರದಲ್ಲಿ ಸುದೀಪ್ ಎದುರು ನಟಿಸೋಕೆ ರೆಡಿಯಾಗುತ್ತಿರುವ ಬಾಲಿವುಡ್ ಸ್ಟಾರ್ ಸುನಿಲ್ ಶೆಟ್ಟಿಗೂ ನರ್ವಸ್‍ನೆಸ್ ಕಾಡುತ್ತಿದೆಯಂತೆ. ಮುಂದಿನ ಶೆಡ್ಯೂಲ್‍ನಲ್ಲಿ ಸುನಿಲ್ ಶೆಟ್ಟಿ ಜೊತೆ ನಟಿಸಲಿದ್ದೇನೆ ಎಂದು ಟ್ವೀಟ್ ಮಾಡಿದ್ದ ಸುದೀಪ್‍ಗೆ ಸುನಿಲ್ ಶೆಟ್ಟಿ ಇಂಥಾದ್ದೊಂದು ಪ್ರತಿಕ್ರಿಯೆ ಕೊಟ್ಟಿದ್ದಾರೆ.

  ನನ್ನ ಪ್ರಥಮ ಹೆಜ್ಜೆ ಸೋದರ ಸುದೀಪ್ ಜೊತೆ. ಉತ್ಸಾಹ ಮತ್ತು ಆತಂಕ ಕಾಡುತ್ತಿದೆ ಎಂದಿದ್ದಾರೆ ಸುನಿಲ್ ಶೆಟ್ಟಿ.

  ಸುನಿಲ್ ಶೆಟ್ಟಿ ಪ್ರತಿಕ್ರಿಯೆಗೆ ಮನಸಾರೆ ನಕ್ಕಿರುವ ಸುದೀಪ್, ನಿಮ್ಮ ಜೊತೆ ಕೆಲಸ ಮಾಡಲು ಇಡೀ ತಂಡ ಕಾಯುತ್ತಿದೆ. ನಿಮ್ಮೊಂದಿಗೆ ಕೆಲಸ ಮಾಡುವ ವೇಳೆ ಹೇಗಿರಬೇಕು ಅನ್ನೋ ನರ್ವಸ್‍ನೆಸ್ ಕಾಡುತ್ತಿರುವುದು ನಮ್ಮ ತಂಡಕ್ಕೆ ಎಂದಿದ್ದಾರೆ ಸುದೀಪ್.

 • ಸುದೀಪ್ ಜೊತೆ ಕಾನ್‍ಸ್ಟೇಬಲ್ ಸರೋಜ..?

  triveni rao to act with sudeep?

  ಕಿಚ್ಚ ಸುದೀಪ್ ಮತ್ತು ತ್ರಿವೇಣಿ ಒಂದೇ ಸಿನಿಮಾದಲ್ಲಿ ನಟಿಸ್ತಾರಾ..? ಸದ್ಯಕ್ಕೆ ಫೈನಲ್ ಆಗಿಲ್ಲ. ಮಾತುಕತೆಯಂತೂ ನಡೆಯುತ್ತಿದೆ. ಈ ಖುಷಿ ಹೇಳಿಕೊಂಡಿರೋದು ತ್ರಿವೇಣಿ.. ಅರ್ಥಾತ್ ಕಾನ್‍ಸ್ಟೇಬಲ್ ಸರೋಜ.

  ಟಗರು ಚಿತ್ರದಲ್ಲಿನ ಕೆಲವೇ ನಿಮಿಷಗಳ ಪಾತ್ರದಲ್ಲಿಯೇ ಪ್ರೇಕ್ಷಕರನ್ನು ಆಕ್ರಮಿಸಿಕೊಂಡ ಸರೋಜಾ, ಈಗ ಬ್ಯುಸಿಯಾಗಿಬಿಟ್ಟಿದ್ದಾರೆ. ನೆಗೆಟಿವ್ ಶೇಡ್ ಇರುವ ಆ ಪುಟ್ಟ ಪಾತ್ರವನ್ನು ಕೇವಲ ಶಿವರಾಜ್ ಕುಮಾರ್ ಜೊತೆ ಹಾಗೂ ಸೂರಿ ನಿರ್ದೇಶನದಲ್ಲಿ ನಟಿಸುವ ಚಾನ್ಸ್‍ಗಾಗಿ ಒಪ್ಪಿಕೊಂಡ ತ್ರಿವೇಣಿಗೆ ಈಗ ಅದೇ ಪುಟ್ಟ ಪಾತ್ರ ಅವಕಾಶಗಳ ಸುರಿಮಳೆ ಸುರಿಸುತ್ತಿದೆ.

  ಈ ಪಾತ್ರದಿಂದಾಗಿ ತೆಲುಗಿನಲ್ಲಿ ಬೆಲ್ಲಂಕೊಂಡ ಶ್ರೀನಿವಾಸ್ ಸಿನಿಮಾದಲ್ಲಿ ಸಿಬಿಐ ಆಫೀಸರ್ ಪಾತ್ರ ಮಾಡುತ್ತಿದ್ಧಾರೆ. ಚಿರು ಸರ್ಜಾರ ರಾಜಮಾರ್ತಾಂಡ ಚಿತ್ರದಲ್ಲಿ ಮಾಡೆಲ್ ಆಗಿ ನಟಿಸುತ್ತಿದ್ದು, ಚಿರುಗೆ ಜೋಡಿಯಾಗಿದ್ದಾರೆ. ನಾಯಕಿಯ ಪಾತ್ರವೇ ಆಗಬೇಕೆಂದೇನೂ ಇಲ್ಲ, ಅಭಿನಯಕ್ಕೆ ಅವಕಾಶ ಇರಬೇಕು ಅಂತಾರೆ ತ್ರಿವೇಣಿ.

  ಸುದೀಪ್ ಮತ್ತು ದರ್ಶನ್ ಜೊತೆ ನಟಿಸುವ ಕನಸಿದೆ. ಅವರ ಹೈಟು ನನ್ನ ಹೈಟ್‍ಗೆ ಮ್ಯಾಚ್ ಆಗುತ್ತೆ. ಸದ್ಯಕ್ಕೆ ಸುದೀಪ್ ಅವರ ಸಿನಿಮಾದ ಮಾತುಕತೆ ನಡೆಯುತ್ತಿದೆ. ಕೆಲವೇ ದಿನಗಳಲ್ಲಿ ಕನ್‍ಫರ್ಮ್ ಆಗಲಿದೆ ಎಂದು ಖುಷಿ ಹಂಚಿಕೊಂಡಿದ್ದಾರೆ ತ್ರಿವೇಣಿ.

 • ಸುದೀಪ್ ಜೊತೆ ಚಿರಂಜೀವಿ ಜೊತೆ ಜೊತೆಯಲಿ - ಕನ್ನಡದಲ್ಲೇ ಹೊಸ ಚಿತ್ರ

  sudeep, chiranjeevi

  ಆಂಧ್ರಪ್ರದೇಶದ ಸ್ವಾತಂತ್ರ್ಯ ಹೋರಾಟಗಾರ `ತೆಲುಗಿನ ಉಯ್ಯಾಲವಾಡ ನರಸಿಂಹರೆಡ್ಡಿ' ಜೀವನ ಕಥೆ ಸಿನಿಮಾ ಆಗುತ್ತಿದ್ದು, ಚಿರಂಜೀವಿ ನಟಿಸುತಗ್ತಿರುವ ವಿಷಯ ಹಳೆಯದು. ಆ ಚಿತ್ರದಲ್ಲಿ ಅಮಿತಾಬ್ ಬಚ್ಚನ್ ಕೂಡಾ ನಟಿಸುತ್ತಿದ್ದಾರೆ. ಆ ದಿಗ್ಗಜರ ಜೊತೆ ಸುದೀಪ್ ಕೂಡಾ ಅತ್ಯಂತ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ, ಅದಕ್ಕಿಂತಲೂ ಖುಷಿ ಪಡುವ ಸುದ್ದಿ ಇನ್ನೊಂದಿದೆ.

  ಚಿರಂಜೀವಿ ಮತ್ತೊಮ್ಮೆ ಕನ್ನಡಕ್ಕೆ ಬರುತ್ತಿದ್ದಾರೆ. ಹೀರೋ ಆಗಿ. ಕಿಚ್ಚ ಸುದೀಪ್ ಮತ್ತು ಚಿರಂಜೀವಿ ಒಟ್ಟಿಗೇ ಹೀರೊಗಳಾಗಿ ಕನ್ನಡದಲ್ಲಿ ನಟಿಸಲಿದ್ದಾರೆ. ಆ ಚಿತ್ರ ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲದಲ್ಲಿ ನಿರ್ಮಾಣವಾಗಲಿದೆ.

  ಚಿರಂಜೀವಿಗೆ ಕನ್ನಡ ಹೊಸದಲ್ಲ. ಪಕ್ಕದ ಊರು ನನ್ನೂರು..ಇಲ್ಲಿನ ಜನರು ನನ್ನೋರು ಎಂದು ಸಿಪಾಯಿ ಚಿತ್ರದಲ್ಲಿ ಹಾಡಿ ಹೋಗಿದ್ದರು ಚಿರಂಜೀವಿ. ಅದಾದ ಮೇಲೆ ಕನ್ನಡವೂ ಸೇರಿದಂತೆ ಹಲವು ಭಾಷೆಗಳಲ್ಲಿ ನಿರ್ಮಾಣವಾದ ಶ್ರೀ ಮಂಜುನಾಥ ಚಿತ್ರದಲ್ಲಿ ಈಶ್ವರನಾಗಿ ಕಾಣಿಸಿಕೊಂಡಿದ್ದರು. ಎರಡೂ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಷ್ಟೇ ಕಾಣಿಸಿಕೊಂಡಿದ್ದ ಚಿರಂಜೀವಿ, ಸುದೀಪ್ ಜೊತೆ ಹೀರೋ ಆಗಿಯೇ ಕಾಣಿಸಿಕೊಳ್ಳಲಿದ್ದಾರಂತೆ.

  Related Articles :-

  ಚಿರಂಜೀವಿ, ಅಮಿತಾಬ್ ಬಚ್ಚನ್ ಜೊತೆ ಕಿಚ್ಚ ಸುದೀಪ್

 • ಸುದೀಪ್ ನೆಗೆಟಿವ್ ರೋಲ್ ಮಾಡಿದ್ದಾರಾ..?

  did sudeep play negative shade?

  ಕಿಚ್ಚ ಸುದೀಪ್‍ಗೆ ನೆಗೆಟಿವ್ ಪಾತ್ರಗಳು ಹೊಸದಲ್ಲ. ತೆಲುಗು, ತಮಿಳಿನಲ್ಲಿ ಈಗಾಗಲೇ ನೆಗೆಟಿವ್ ಶೇಡ್ ಇರುವ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮಿಂಚಿಯೂ ಇದ್ದಾರೆ. ಆದರೆ, ಕನ್ನಡದಲ್ಲಿ ನೆಗೆಟಿವ್ ಪಾತ್ರಗಳನ್ನು ಮಾಡಿದವರಲ್ಲ. ಹಾಗೆಂದು ಸುದೀಪ್ ಇಮೇಜ್‍ಗೆ ಅಂಟಿಕೊಂಡು ಕುಳಿತವರೇನೂ ಅಲ್ಲ. ಆ ಇಮೇಜ್‍ನ್ನು ರಾಜು ಕನ್ನಡ ಮೀಡಿಯಂ ಚಿತ್ರದಲ್ಲಿ ಮುರಿದಿದ್ದಾರೆ ಎನ್ನುವ ಸುದ್ದಿ ಇದೆ.

  ರಾಜು ಕನ್ನಡ ಮೀಡಿಯಂನಲ್ಲಿ ಸುದೀಪ್ ಗೆಸ್ಟ್‍ರೋಲ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ಅದು ಅಗರ್ಭ ಶ್ರೀಮಂತನ ಪಾತ್ರ. ಮೂಲಗಳ ಪ್ರಕಾರ ಅದು ನೆಗೆಟಿವ್ ರೋಲ್. ಆದರೆ, ಚಿತ್ರತಂಡ ಈ ಗುಟ್ಟನ್ನು ಮಾತ್ರ ಬಿಟ್ಟುಕೊಡೋದಿಲ್ಲ. ಇನ್ನೊಂದು ಮೂಲಗಳ ಪ್ರಕಾರ, ಸುದೀಪ್ ಅವರದ್ದು ಸ್ಫೂರ್ತಿ ತುಂಬುವ ರೋಲ್ ಮಾಡೆಲ್ ಪಾತ್ರ. ಹೌದಾ ಎಂದರೆ, ಅದಕ್ಕೂ ಚಿತ್ರ ತಂಡ ಮಾತನಾಡೋದಿಲ್ಲ.

  ಎಲ್ಲದಕ್ಕೂ ಉತ್ತರ ಸಿಗೋದು ಜನವರಿ 19ರಂದು. ಆ ದಿನ ಸಿನಿಮಾ ಥಿಯೇಟರ್‍ಗೆ ಲಗ್ಗೆಯಿಡುತ್ತಿದೆ. 

 • ಸುದೀಪ್ ಬಗ್ಗೆ ಹೆಮ್ಮೆ ಪಡಬೇಕು - ಶಿವಣ್ಣ

  sudeep shivarajkumar praise each other

  ಶಿವರಾಜ್ ಕುಮಾರ್ ನಡೆಸಿಕೊಡುತ್ತಿರುವ ಯಾರೀ ವಿತ್ ಶಿವಣ್ಣ ಕಾರ್ಯಕ್ರಮದಲ್ಲಿ ಅತಿಥಿಗಳಾಗಿದ್ದವರು ಸುದೀಪ್ ಮತ್ತು ಪ್ರೇಮ್. ಈ ವೇಳೆ ಸುದೀಪ್ ಬಗ್ಗೆ ಮೆಚ್ಚುಗೆಯ ಮಾತನ್ನಾಡಿದ ಶಿವರಾಜ್‍ಕುಮಾರ್, ಸುದೀಪ್ ಈಗ ಹಾಲಿವುಡ್ ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಎಲ್ಲ ಭಾಷೆಯ ಸಿನಿಮಾಗಳಲ್ಲೂ ನಟಿಸುತ್ತಿದ್ದಾರೆ. ಹ್ಯಾಟ್ಸ್ ಆಫ್ ಟು ಯೂ ಸುದೀಪ್. ಕರ್ನಾಟಕದಲ್ಲಿ ಇಂತಹ ಆ್ಯಕ್ಟರ್ ಇರುವುದಕ್ಕೆ ನಾವೆಲ್ಲ ಹೆಮ್ಮೆ ಪಡಬೇಕು. ಇದು ಶಿವರಾಜ್‍ಕುಮಾರ್ ಹೇಳಿದ ಮಾತು.

  ಗಾಂಧಿನಗರದಲ್ಲಿ ಒಬ್ಬರನ್ನು ಕಂಡರೆ ಒಬ್ಬರಿಗೆ ಆಗಲ್ಲ ಕಣ್ರಿ ಎನ್ನುವವರಿಗೆ ಕನ್ನಡ ಚಿತ್ರರಂಗದ ಕಲಾವಿದರು ಹಲವು ಬಾರಿ ಇಂತಹ ಉತ್ತರ ಕೊಟ್ಟಿದ್ದಾರೆ. ಅಂದಹಾಗೆ ಇಷ್ಟೆಲ್ಲ ಹೊಗಳಿದ ಶಿವರಾಜ್‍ಕುಮಾರ್‍ಗೆ ಸುದೀಪ್ ಅದೇ ಶೋನಲ್ಲಿ ಒಂದು ಸೀರಿಯಸ್ಸಾದ ಸಲಹೆಯನ್ನೂ ಕೊಟ್ಟಿದ್ದಾರೆ. ಟೈಟಲ್ ಕೇಳುತ್ತಿದ್ದ ಹಾಗೆಯೇ ಕಾಲ್‍ಶೀಟ್ ಕೊಡೋದನ್ನು ನಿಲ್ಲಿಸಬೇಕು. ಇದು ಸುದೀಪ್ ಶಿವರಾಜ್‍ಕುಮಾರ್‍ಗೆ ಕೊಟ್ಟಿರುವ ಸಲಹೆ. ಶಿವರಾಜ್‍ಕುಮಾರ್ ಪಾಲಿಸ್ತಾರಾ..?

   

 • ಸುದೀಪ್ ಬ್ಯಾಟಿಂಗ್ ಮೆಚ್ಚಿದ ಇಂಗ್ಲೆಂಡ್ ಕ್ರಿಕೆಟಿಗ

  owais shah, sudeep image

  ಕಿಚ್ಚ ಸುದೀಪ್ ನಟನೆಯಲ್ಲಷ್ಟೇ ಅಲ್ಲ, ಆಟದಲ್ಲೂ ಎತ್ತಿದ ಕೈ ಅನ್ನೋದು ಈಗ ಅಭಿಮಾನಿಗಳಿಗೆಲ್ಲ ಗೊತ್ತಿರುವ ವಿಚಾರ. ಅಭಿಮಾನಿಗಳಿಗೆ ಬಿಡಿ, ಸುದೀಪ್ ಹೇಗೇ ಆಡಿದರೂ ಇಷ್ಟವಾಗಿಬಿಡುತ್ತೆ. ಆದರೆ, ಕ್ರಿಕೆಟರ್‍ಗಳಿಗೆ ಇಷ್ಟವಾಗೋಕೆ ಸುದೀಪ್ ಅಪ್ಪಟ ಕ್ರಿಕೆಟಿಗರಂತೆ ಆಡಿದರಷ್ಟೆ ಸಾಧ್ಯ. ಈಗ ಅದನ್ನೂ ಸಾಧ್ಯವಾಗಿಸಿಬಿಟ್ಟಿದ್ದಾರೆ ಸುದೀಪ್.

  ಇಂಗ್ಲೆಂಡ್‍ನ ಕ್ರಿಕೆಟಿಗ ಓವೈಸ್ ಶಾ, ಸುದೀಪ್ ಆಟವನ್ನು ಮೆಚ್ಚಿಕೊಂಡಿದ್ದಾರೆ. ಸುದೀಪ್ ಇತ್ತೀಚೆಗಷ್ಟೇ ಟ್ವಿಟರ್‍ನಲ್ಲಿ ತಾವು ಪ್ರಾಕ್ಟೀಸ್ ಮಾಡುತ್ತಿರುವ ವಿಡಿಯೋ ಅಪ್‍ಲೋಡ್ ಮಾಡಿದ್ದರು. ವಿಡಿಯೋ ನೋಡಿದ ಓವೈಸ್ ಶಾ, ಸುದೀಪ್ ಆಟವನ್ನು ಮೆಚ್ಚಿದ್ದಾರೆ.

  ಹವ್ಯಾಸಿ ಕ್ರಿಕೆಟಿಗರ ಆಟ, ವೃತ್ತಿಪರ ಕ್ರಿಕೆಟಿಗರ ಮೆಚ್ಚುಗೆ ಗಳಿಸುವುದೆಂದರೆ ಸುಮ್ಮನೆ ಮಾತಲ್ಲ. ಹೀಗಾಗಿಯೇ ಓವೈಸ್ ಶಾ ಹೊಗಳಿಗೆ ಸುದೀಪ್‍ಗೂ ಖುಷಿ ಕೊಟ್ಟಿದೆ.

 • ಸುದೀಪ್ ಭೇಟಿಗೆ ಕುಮಾರಸ್ವಾಮಿ ಕೊಟ್ಟ ಸ್ಪಷ್ಟ ಉತ್ತರ

  hdk clarifies about his meet with sudeep

  ಇತ್ತೀಚೆಗೆ ಕಿಚ್ಚ ಸುದೀಪ್ ರಾಜಕೀಯಕ್ಕೆ ಬರ್ತಾರೆ ಅನ್ನೋ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬುತ್ತಲೇ ಇದೆ. ನನಗೆ ರಾಜಕೀಯ ಇಷ್ಟವಿಲ್ಲ. ಸಮಾಜಸೇವೆಯಲ್ಲಿ ಆಸಕ್ತಿ ಇದೆ. ಅದನ್ನು ರಾಜಕೀಯದಿಂದ ದೂರವಿದ್ದುಕೊಂಡೇ ಮಾಡುತ್ತೇನೆ. ಮಾಡುತ್ತಿದ್ದೇನೆ. ನನಗೂ ರಾಜಕೀಯಕ್ಕೂ ಆಗಿಬರಲ್ಲ. ಇದು ಸುದೀಪ್ ಹಲವು ಬಾರಿ ನೀಡಿರುವ ಸ್ಪಷ್ಟನೆ.

  ಆದರೂ, ಅವರು ಯಾವುದಾದರೂ ಕೆಲಸಕ್ಕೆ ಮುಖ್ಯಮಂತ್ರಿಗಳನ್ನೋ, ಬೇರೆ ಪಕ್ಷದ ರಾಜಕೀಯ ಮುಖಂಡರನ್ನೋ ಭೇಟಿಯಾದಾಗ.. ಮತ್ತೊಮ್ಮೆ ಇಂತಹ ಸುದ್ದಿ ಹಬ್ಬುತ್ತೆ. ಸುದೀಪ್ ಆದರೂ ಎಷ್ಟು ಬಾರಿ ಸ್ಪಷ್ಟನೆ ಕೊಡಬಹುದು. ಹೀಗಾಗಿ ಸುದೀಪ್ ಆ ಬಗ್ಗೆ ಮಾತನಾಡುವುದನ್ನೇ ಬಿಟ್ಟುಬಿಟ್ಟಿದ್ದಾರೆ.

  ಆದರೆ, ಈ ಬಾರಿ ಸುದೀಪ್ ಅವರ ರಾಜಕೀಯ ಪ್ರವೇಶದ ಬಗ್ಗೆ ಮಾತನಾಡಿರುವುದು ಸುದೀಪ್ ಅಲ್ಲ. ಸ್ವತಃ ಹೆಚ್.ಡಿ. ಕುಮಾರಸ್ವಾಮಿ. ಸುದೀಪ್ ಅವರ ಮನೆಗೆ ಹೋಗಿ, ಸುದೀಪ್ ಅವರಿಂದಲೇ ಆತಿಥ್ಯ ಸ್ವೀಕರಿಸಿದ್ದ ಕುಮಾರಸ್ವಾಮಿ ಈ ಕುರಿತು ಸ್ಪಷ್ಟನೆ ಕೊಟ್ಟಿದ್ದಾರೆ.

  ಸುದೀಪ್ ಅವರಿಗೆ ಚಿತ್ರರಂಗದಲ್ಲಿ ಬಹಳಷ್ಟು ಸಾಧನೆ ಮಾಡುವ ಆಸೆಯಿದೆ. ಅವರೊಬ್ಬ ಅತ್ಯುತ್ತಮ ಕಲಾವಿದ. ಅವರನ್ನು ರಾಜಕೀಯಕ್ಕೆ ಎಳೆತಂದು ಅವರ ರಾಜಕೀಯ ಭವಿಷ್ಯವನ್ನು ಹಾಳು ಮಾಡುವ ಸಣ್ಣತನ ನನಗಿಲ್ಲ ಎಂದಿದ್ದಾರೆ ಕುಮಾರಸ್ವಾಮಿ.

  ಆದರೆ, ರಾಜ್ಯದ ಹಲವಾರು ಸಮಸ್ಯೆಗಳ ಬಗ್ಗೆ ಧ್ವನಿಗೂಡಿಸುವಂತೆ ಅವರಿಗೆ ಮನವಿ ಮಾಡಿದ್ದೇನೆ. ಹಲವಾರು ವಿಚಾರಗಳ ಬಗ್ಗೆ ಮುಕ್ತವಾಗಿ ಚರ್ಚಿಸಿದ್ದೇನೆ ಎಂದಿದ್ದಾರೆ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ.

   

   

 • ಸುದೀಪ್ ಮದಕರಿಗೆ ವಾಲ್ಮೀಕಿ ಸ್ವಾಮೀಜಿ ಬೆಂಬಲ

  sudeep's madakari gets valmiki swamy support

  ಚಿತ್ರದುರ್ಗದ ವೀರ ಮದಕರಿ ನಾಯಕ ಸಿನಿಮಾವನ್ನು ಯಾರು ಮಾಡಬೇಕು..? ದರ್ಶನ್ ಮಾಡಬೇಕಾ..? ಸುದೀಪ್ ಮಾಡಬೇಕಾ..? ಈ ಬಗ್ಗೆ ಎರಡೂ ಕಡೆ ಸ್ಪಷ್ಟ ನಿರ್ಧಾರಗಳು ಹೊರಬಿದ್ದಿದ್ದರೂ, ಚರ್ಚೆಗಳು ಮುಂದುವರಿದಿವೆ. ಹೀಗಿರುವಾಗಲೇ ಕಿಚ್ಚ ಸುದೀಪ್ ಅವರೇ ಮದಕರಿ ನಾಯಕ ಪಾತ್ರ ಮಾಡಬೇಕು ಎಂದಿದ್ದಾರೆ ವಾಲ್ಮೀಕಿ ಸಮುದಾಯದ ಸ್ವಾಮೀಜಿ ಪ್ರಸನ್ನಾನಂದ  ಸ್ವಾಮೀಜಿ.

  ಮದಕರಿ ನಾಯಕನ ಪಾತ್ರ ಮಾಡುವವರು ಅತ್ಯುತ್ತಮ ಕಲಾವಿದರಾಗಿರಬೇಕು. ಅವರ ಮುಖದಲ್ಲೊಂದು ಗಾಂಭೀರ್ಯ ಇರಬೇಕು. ಕಲಾವಂತಿಕೆ ಇರಬೇಕು. ಅದೆಲ್ಲವೂ ಸುದೀಪ್ ಅವರಲ್ಲಿದೆ. ಹೀಗಾಗಿ ಐದಾರು ವರ್ಷದ ಹಿಂದೆಯೇ ಸುದೀಪ್ ಅವರಿಗೆ ಮದಕರಿ ನಾಯಕನ ಪಾತ್ರ ಮಾಡುವಂತೆ ಹೇಳಿದ್ದೆ. ಅವರು ಸುಮಾರು ಒಂದೂವರೆ ವರ್ಷದಿಂದ ಈ ಕುರಿತು ಕೆಲಸ ಆರಂಭಿಸಿದ್ದಾರೆ ಎಂದು ತಿಳಿಸಿದ್ದಾರೆ ಪ್ರಸನ್ನಾನಂದ ಸ್ವಾಮೀಜಿ.

  ಜೊತೆಗೆ ಸುದೀಪ್ ನಮ್ಮ ಸಮುದಾಯದವರು ಎಂಬ ಪ್ರೀತಿಯೂ ಇದೆ. ಹೀಗಾಗಿ ಅವರೇ ಈ ಸಿನಿಮಾ ಮಾಡಬೇಕು ಅನ್ನೋದು ನಮ್ಮ ಆಸೆ. ಇದನ್ನು ಮೀರಿ ದರ್ಶನ್ ಮದಕರಿ ನಾಯಕನ ಸಿನಿಮಾ ಮಾಡುತ್ತೇನೆನೆಂದು ಹೊರಟರೆ, ಮುಂದೇನು ಮಾಡಬೇಕೆಂದು ಸಮುದಾಯದ ಮುಖಂಡರ ಜೊತೆ ಚರ್ಚಿಸಿ ತಿಳಿಸುತ್ತೇವೆ ಎಂದಿದ್ದಾರೆ ಸ್ವಾಮೀಜಿ.

 • ಸುದೀಪ್ ಮೆಚ್ಚಿದ ಜೋಗಿ ಪ್ರೇಮ್‍ರ ಆ ಗುಣ

  the villain shooting image in chikkamangalur

  ಜೋಗಿ ಪ್ರೇಮ್ ನಿರ್ದೇಶನದಲ್ಲಿ ದಿ ವಿಲನ್ ಚಿತ್ರದಲ್ಲಿ ನಟಿಸುತ್ತಿರುವ ಸುದೀಪ್‍ಗೆ ಅವರ ಜೊತೆ ಕೆಲಸ ಮಾಡಿದ ಮೇಲೆ ತಾವು ಕೇಳಿದ್ದೇ ಬೇರೆ. ಇರುವ ಪ್ರೇಮ್ ಅವರೇ ಬೇರೆ ಎಂದು ಗೊತ್ತಾಗಿದೆಯಂತೆ. ಪ್ರೇಮ್ ಬಗ್ಗೆ ಅವರು ತುಂಬಾ ಬಿಲ್ಡಪ್ ಕೊಡ್ತಾರೆ. ಶೋ ಅಪ್ ಮಾಡ್ತಾರೆ ಅಂತಾ ಕೇಳಿದ್ದೆ. ಆದರೆ, ಅವರ ನಿರ್ದೇಶನದ  ಚಿತ್ರದಲ್ಲಿ ತೊಡಗಿಸಿಕೊಂಡ ಮೇಲೆ ಗೊತ್ತಾಯ್ತು. ಅವರು ತುಂಬಾ ಫ್ಯಾಷನೇಟ್. ಚಿತ್ರದ ಪ್ರತಿ ಫ್ರೇಂ ಕೂಡಾ ಹೀಗೇ ಬರಬೇಕು ಎಂದು ಬಯಸುತ್ತಾರೆ. ಅವರು ಬಯಸಿದ್ದು ಸಿಗುವವರೆಗೆ ಬಿಡುವುದೇ ಇಲ್ಲ ಎಂದು ಶಹಬ್ಬಾಸ್‍ಗಿರಿ ಕೊಟ್ಟಿದ್ದಾರೆ ಸುದೀಪ್.

  ಪ್ರೇಮ್ ಸಿನಿಮಾ ಬಿಟ್ಟು ಬೇರೇನೂ ಯೋಚಿಸೋದಿಲ್ಲ. ಕುಂತಲ್ಲಿ ಕೂರಲ್ಲ. ನಿಂತಲ್ಲಿ ನಿಲ್ಲಲ್ಲ. ಯಾರೊಬ್ಬರಿಗೂ ಬಯ್ಯಲ್ಲ. ಆದರೆ, ತನಗೆ ಬೇಕಾದ ಅಷ್ಟೂ ಕೆಲಸವನ್ನು ಪ್ರೀತಿಯಿಂದಲೇ ಮಾಡಿಸಿಕೊಂಡುಬಿಡ್ತಾರೆ ಅಂತಾರೆ ಸುದೀಪ್. ಸೆಟ್‍ನಲ್ಲಿ ಎಷ್ಟೋ ಬಾರಿ ಸುದೀಪ್ ಅವರೇ ಬೈದು ಊಟ ಮಾಡಿಸಿದ್ದೂ ಇದೆಯಂತೆ.

  ಇನ್ನು ಶಿವರಾಜ್ ಕುಮಾರ್ ಜೊತೆಗಿನ ಅನುಭವನ್ನೂ ಹಂಚಿಕೊಂಡಿದ್ದಾರೆ ಸುದೀಪ್. ಶಿವಣ್ಣ ಸೆಟ್‍ಗೆ ಯಾವಾಗ ಬರ್ತಾರೆ..ಯಾವಾಗ ಹೋಗ್ತಾರೆ ಗೊತ್ತೇ ಅಗಲ್ಲ. ಅಹಂ ಇಲ್ಲ. ಅವರ ಜೊತೆ ಕೆಲಸ ಮಾಡೋಕೆ ಖುಷಿಯಾಗುತ್ತೆ ಎಂದಿದ್ದಾರೆ ಸುದೀಪ್.

  ಇನ್ನು ಚಿತ್ರದ ಕಥೆ, ಪಾತ್ರದ ಬಗ್ಗೆ ಸುದೀಪ್ ಏನನ್ನೂ ಬಾಯ್ಬಿಡಲ್ಲ. ನಂಗೇನೂ ಗೊತ್ತಿಲ್ಲ. ಪ್ರೇಮ್ ಏನ್ ಹೇಳ್ತಿದ್ದಾರೋ, ಅಷ್ಟನ್ನು ಮಾತ್ರ ಮಾಡ್ತಿದ್ದೇನೆ ಅಂತಾರೆ ಸುದೀಪ್. ಅಫ್‍ಕೋರ್ಸ್, ಸುದೀಪ್ ಏನೇ ಹೇಳಿದರೂ, ಕಥೆ ಮತ್ತು ಪಾತ್ರದ ಬಗ್ಗೆ ಏನನ್ನೂ ತಿಳಿದುಕೊಳ್ಳದೆ ಸುದೀಪ್ ಸಿನಿಮಾ ಒಪ್ಪಿಕೊಳ್ಳಲ್ಲ ಎನ್ನುವುದು ಚಿತ್ರರಂಗದ ಪ್ರತಿಯೊಬ್ಬರಿಗೂ ಗೊತ್ತು. 

 • ಸುದೀಪ್ ಸಂಭಾವನೆ 8 ಕೋಟಿ..!

  sudeep gets 8 crores for kotigobba 3

  ಕಿಚ್ಚ ಸುದೀಪ್, ಕನ್ನಡಲ್ಲಿ ನಿರ್ಮಾಪಕರನ್ನು ಕೆಲವೇ ಕೆಲವು ಸ್ಟಾರ್ ನಟರಲ್ಲಿ ಒಬ್ಬರು. ಅವರು ಯಾವಾಗಲೂ ನಿರ್ಮಾಪಕರ ಜೊತೆ ಇರುತ್ತಾರೆ. ಅವರು ನಿರ್ಮಾಪಕರಿಗೆ  ಷರತ್ತು ಹಾಕೋದಿಲ್ಲ. ಅವರಂತೆ ಎಲ್ಲ ನಟರೂ ನಿರ್ಮಾಪಕರ ಕಷ್ಟಗಳಿಗೆ ಸ್ಪಂದಿಸೋದಿಲ್ಲ. ಹೀಗಾಗಿಯೇ, ಅವರು ಕೇಳದಿದ್ದರೂ ನಾನೇ 8 ಕೋಟಿ ಸಂಭಾವನೆ ಕೊಟ್ಟಿದ್ದೇನೆ. ಹೀಗೆಂದು ಹೇಳಿರುವುದು ಸೂರಪ್ಪ ಬಾಬು.

  ಸುದೀಪ್ ಜೊತೆ ಕೋಟಿಗೊಬ್ಬ 3 ಚಿತ್ರ ನಿರ್ಮಿಸುತ್ತಿರುವ ಸೂರಪ್ಪ ಬಾಬು, ಇಷ್ಟು ದೊಡ್ಡ ಮೊತ್ತದ ಸಂಭಾವನೆ ಪಡೆಯುವ ಸುದೀಪ್, ಚಿತ್ರದ ಪ್ರತಿ ಹಂತದಲ್ಲೂ ನಿರ್ಮಾಪಕರ ಜೊತೆಗಿರುತ್ತಾರೆ. 8 ಕೋಟಿ, ಸುದೀಪ್ ಕೇಳಿದ್ದಲ್ಲ. ನಾನೇ ಕೊಟ್ಟಿದ್ದು ಎಂದಿದ್ದಾರೆ ಸೂರಪ್ಪ ಬಾಬು.

  ಚಿತ್ರದ ಚಿತ್ರೀಕರಣ ಶೀಘ್ರದಲ್ಲಿಯೇ ಶುರುವಾಗಲಿದ್ದು, ಸ್ಪೇನ್ ಹಾಗೂ ಬೆಂಗಳೂರಿನಲ್ಲಿ ಶೂಟಿಂಗ್ ನಡೆಯಲಿದೆ. ಕನ್ನಡದ ನಟಿಯೇ ನಾಯಕಿಯಾಗಿ ನಟಿಸಲಿದ್ದಾರೆ ಎಂದು ತಿಳಿಸಿದ್ದಾರೆ ಸೂರಪ್ಪ ಬಾಬು.

  ಕನ್ನಡದಲ್ಲಿ ನಟರು ತೆಗೆದುಕೊಳ್ಳುವ ಸಂಭಾವನೆ ಎಷ್ಟು ಎಂಬ ಬಗ್ಗೆ ಯಾರೊಬ್ಬರೂ ತುಟಿ ಬಿಚ್ಚುವುದಿಲ್ಲ. ಅಲ್ಲಿ ಇಲ್ಲಿ ಕಿವಿಗೆ ಬಿದ್ದ ಮಾತುಗಳನ್ನಷ್ಟೇ ಕೇಳುತ್ತಿದ್ದವರಿಗೆ ಸೂರಪ್ಪ ಬಾಬು, ಬಹಿರಂಗವಾಗಿಯೇ ಹೇಳುವ ಮೂಲಕ ರಹಸ್ಯ ಸ್ಫೋಟಿಸಿರುವುದು ನಿಜ.

 • ಸುದೀಪ್ ಸಮಾಜಸೇವೆಯ ಕಂಪ್ಲೀಟ್ ಡೀಟೈಲ್ಸ್

  sudeep social service details

  ನಾನು ಕೋಟ್ಯಧಿಪತಿ ಅಲ್ಲ. ಆದರೆ ಸಂಪಾದಿಸಿದ್ದರಲ್ಲಿ ಶೇ.40ರಿಂದ 50ರಷ್ಟನ್ನು ಸಮಾಜಕ್ಕೆ ವಾಪಸ್ ಕೊಡುತ್ತಿದ್ದೇನೆ. ಇದು ಸುದೀಪ್ ಅವರೇ ಹೇಳಿಕೊಂಡಿರುವ ಮಾತು. ಇತ್ತೀಚೆಗಷ್ಟೇ ರಾಜಕೀಯಕ್ಕೆ ಬರುತ್ತೀರಾ ಎಂದು ಕೇಳಿದಾಗ, ನಾನು ನನ್ನ ಹಣದಲ್ಲಿ ನನ್ನ ಕೈಲಾದಷ್ಟು ಸಮಾಜಸೇವೆ ಮಾಡುತ್ತಿದ್ದೇನೆ. ಸೇವೆ ಮಾಡೋಕೆ ರಾಜಕೀಯಕ್ಕೆ ಬರಬೇಕು ಎಂಬ ಅನಿವಾರ್ಯತೆ ಇಲ್ಲ ಎಂದಿದ್ದರು. ಈಗ ತಮ್ಮ ಸಮಾಜಸೇವೆಯ ಕೆಲಸಗಳನ್ನು ಬಹಿರಂಗಪಡಿಸಿದ್ದಾರೆ.

  ಸುದೀಪ್ ಒಟ್ಟು 18 ಮಕ್ಕಳನ್ನು ದತ್ತು ತೆಗೆದುಕೊಂಡಿದ್ದಾರೆ. ಅವರ ಸಂಪೂರ್ಣ ಹೊಣೆ ಅವರದ್ದೇ. ಕೆಲವು ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿ ಕೆಲಸ ಮಾಡಿಸುತ್ತಿದ್ದಾರೆ. ಒಂದು ಅನಾಥಾಶ್ರಮವನ್ನೂ ನಡೆಸುತ್ತಿದ್ದಾರೆ. ಇದೆಲ್ಲವೂ ಅವರ ಸ್ವಂತ ಹಣದಲ್ಲಿಯೇ ನಡೆಯುತ್ತಿದೆ. 

  ಸುದೀಪ್ ಅವರನ್ನು ಮೆಚ್ಚಿಕೊಳ್ಳೋಕೆ ಇನ್ನಷ್ಟು ಕಾರಣಗಳು ಸಿಕ್ಕಿವೆ. ಅಷ್ಟೇ ಅಲ್ಲ, ಸಂಕಷ್ಟದಲ್ಲಿರುವ ಚಿತ್ರರಂಗದ ಕೆಲವರಿಗೆ ವೈಯಕ್ತಿಕವಾಗಿ ಸಹಾಯ ಮಾಡಿರುವುದನ್ನು ಸುದೀಪ್ ಹೊರಗೆ ಹೇಳಿಕೊಳ್ಳೋದಿಲ್ಲ. ಅದು ಸುದೀಪ್ ದೊಡ್ಡಗುಣ.

 • ಸುದೀಪ್ ಸಿನಿಮಾಗೆ ಅಫ್ತಾಬ್ ಶಿವದಾಸನಿ

  aftba debuts in kannada with sudeep movie

  ಸುದೀಪ್, ಬಾಲಿವುಡ್‍ನಲ್ಲಿ ನಟಿಸೋದು ಹೊಸದೇನಲ್ಲ. ಆದರೆ,ಸುದೀಪ್ ಚಿತ್ರದಲ್ಲಿ ಬಾಲಿವುಡ್ ತಾರೆಗಳು ನಟಿಸೋದು ಈಗ ಟ್ರೆಂಡ್. ಸುದೀಪ್ ಅವರ ಪೈಲ್ವಾನ್ ಚಿತ್ರದಲ್ಲಿ ಸುನಿಲ್ ಶೆಟ್ಟಿ ಮತ್ತು ಕಬೀರ್ ದುಹಾನ್ ನಟಿಸುತ್ತಿದ್ದಾರೆ. ಈಗ ಕೋಟಿಗೊಬ್ಬ3 ಚಿತ್ರಕ್ಕೂ ಬಾಲಿವುಡ್ ಸ್ಟಾರ್ಸ್ ಬರುತ್ತಿದ್ದಾರೆ.

  ಕೋಟಿಗೊಬ್ಬ3 ಚಿತ್ರದಲ್ಲಿ ಬಾಲಿವುಡ್‍ನ ಅಫ್ತಾಬ್ ಶಿವದಾಸನಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ವಿಲನ್ ಆಗಿರೋದು ಡಾನ್ 2 ಖ್ಯಾತಿಯ ನವಾಬ್ ಶಾ. ಅಫ್ತಾಬ್‍ಗೆ ಸ್ಯಾಂಡಲ್‍ವುಡ್‍ನಲ್ಲಿ ಇದು ಮೊದಲ ಸಿನಿಮಾ.

 • ಸುದೀಪ್ ಹೇಳ್ತಾನೇ ಇರ್ತಾರೆ.. ಡೌಟು ಬರ್ತಾನೇ ಇರುತ್ತೆ..!

  sudeep amidst the same question net

  ಕಿಚ್ಚ ಸುದೀಪ್ ಒಂದ್ಸಲ ಅಲ್ಲ, ಹಲವಾರು ಬಾರಿ ನಾನು ರಾಜಕೀಯಕ್ಕೆ ಬರಲ್ಲ ಎಂದು ಹೇಳಿದ್ದಾರೆ. ಟಿವಿ ಸಂದರ್ಶನಗಳಲ್ಲ, ಪತ್ರಿಕೆಗಳಲ್ಲಿ, ಸೋಷಿಯಲ್ ಮೀಡಿಯಾಗಳಲ್ಲಿ.. ಹೀಗೆ ಹಲವು ವೇದಿಕೆಗಳಲ್ಲಿ ಹೇಳಿದ್ದರೂ, ಅವರು ಮತ್ತೆ ಮತ್ತೆ ಸ್ಪಷ್ಟನೆ ಕೊಡ್ತಾನೇ ಇರಬೇಕಾದ ಪರಿಸ್ಥಿತಿ ಬಂದಿದೆ.

  ಇತ್ತೀಚೆಗೆ ಸಿದ್ದರಾಮಯ್ಯನವರನ್ನು ಭೇಟಿ ಮಾಡಿದ್ದ ಸುದೀಪ್, ಚರ್ಚೆ ಮಾಡಿದ್ದು ವಿಷ್ಣುವರ್ಧನ್ ಸ್ಮಾರಕದ ವಿಚಾರದ ಬಗ್ಗೆಯೇ ಆದರೂ, ರಾಜಕೀಯ ಪ್ರವೇಶದ ಸುದ್ದಿಗೆ ರೆಕ್ಕೆಪುಕ್ಕ ಕಟ್ಟಲಾಗಿತ್ತು. ಈಗ ಸುದೀಪ್ ಮನೆಗೆ ಸ್ವತಃ ಹೆಚ್.ಡಿ.ಕುಮಾರಸ್ವಾಮಿ ಹೋಗಿದ್ದಾರೆ. ಮನೆಗೆ ಬಂದ ಅತಿಥಿಗಳಿಗೆ ಸ್ವತಃ ಊಟ ಬಡಿಸುವುದನ್ನು ಇಷ್ಟಪಡುವ ಸುದೀಪ್, ಕುಮಾರಸ್ವಾಮಿಯವರಿಗೂ ಅದೇ ಆತಿಥ್ಯ ನೀಡಿದ್ದಾರೆ. ಆ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಕೆಲವೇ ಗಂಟೆಗಳಲ್ಲಿ ವೈರಲ್ ಆಗಿಬಿಟ್ಟಿವೆ.

  ಅಲ್ಲಿಗೆ ತಣ್ಣಗಾಗಿದ್ದ ಸುದೀಪ್ ರಾಜಕೀಯ ಪ್ರವೇಶಕ್ಕೆ ಮತ್ತೆ ಜೀವ ಬಂದಂತಾಗಿದೆ. ರಾಜಕೀಯಕ್ಕೂ, ಈ ಭೇಟಿಗೂ ಸಂಬಂಧ ಇಲ್ಲ ಎಂದು ಹೆಚ್‍ಡಿಕೆ ಹೇಳಿದ್ದರೂ, ಸುದೀಪ್ ಮತ್ತೊಮ್ಮೆ ಹೇಳಿಕೆ ನೀಡಲಿ ಎಂದು ಕಾಯುವವರಿಗೇನೂ ಕೊರತೆಯಿಲ್ಲ.

  ಬಹುಶಃ ತಮ್ಮ ರಾಜಕೀಯ ಪ್ರವೇಶದ ಬಗ್ಗೆ ಇಷ್ಟೊಂದು ಬಾರಿ ಸ್ಪಷ್ಟನೆ ನೀಡಿರುವ ವ್ಯಕ್ತಿ ಬೇರ್ಯಾರೂ ಇಲ್ಲವೇನೋ. ಅಂದಹಾಗೆ ರಜಿನಿಕಾಂತ್ ಅತಿ ಹೆಚ್ಚು ಬಾರಿ ಈ ಪ್ರಶ್ನೆಗೆ ಉತ್ತರ ಕೊಟ್ಟಿದ್ದಾರೆ. ಆದರೆ, ಪ್ರತಿಬಾರಿಯೂ ಅಡ್ಡಗೋಡೆ ದೀಪ ಇಡುವುದು ರಜಿನಿ ಸ್ಟೈಲ್. ಆದರೆ, ಸುದೀಪ್ ಅತ್ಯಂತ ಸ್ಪಷ್ಟವಾಗಿ `ನಾನು ರಾಜಕೀಯಕ್ಕೆ ಬರುವುದಿಲ್ಲ' ಎಂದು ಹೇಳಿದ್ದರೂ ಪದೇ ಪದೇ ಸುದ್ದಿಯಾಗುತ್ತಲೇ ಇದೆ. 

#

The Terrorist Movie Gallery

Thayige Thakka Maga Movie Gallery