` sudeep - chitraloka.com | Kannada Movie News, Reviews | Image

sudeep

 • ದಿ ವಿಲನ್ ಸೃಷ್ಟಿಸುತ್ತಿರುವ ದಾಖಲೆಗಳು..

  the villain creates record after record

  ದಿ ವಿಲನ್. ಶಿವರಾಜ್‍ಕುಮಾರ್ ಮತ್ತು ಕಿಚ್ಚ ಸುದೀಪ್‍ರನ್ನು ಒಗ್ಗೂಡಿಸಿದ್ದೇ ಪ್ರೇಮ್ ಮಾಡಿದ ಮೊದಲ ದಾಖಲೆ. ಕನ್ನಡ ಚಿತ್ರರಂಗದ ಎರಡು ಧ್ರುವ ನಕ್ಷತ್ರಗಳನ್ನು ಒಟ್ಟುಗೂಡಿಸುವುದು ಸುಲಭದ ಮಾತಲ್ಲ. ಹಾಗೆ ಶುರುವಾದ ಚಿತ್ರ, ಬಿಡುಗಡೆಗೂ ಮುನ್ನವೇ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿರುವುದು ವಿಶೇಷ.

  ದಿ ವಿಲನ್.. ಒಟ್ಟಾರೆ ತೋರಿಸಿದ್ದು 4 ನಿಮಿಷಗಳ ಟೀಸರ್. ಕನ್ನಡ ಚಿತ್ರರಂಗದಲ್ಲಷ್ಟೇ ಅಲ್ಲ, ಭಾರತ ಚಿತ್ರರಂಗದ ಇತಿಹಾಸದಲ್ಲೇ ಟೀಸರ್ ಬಿಡುಗಡೆಗಾಗಿ ಪ್ರೇಕ್ಷಕರಿಂದಲೇ ಹಣ ವಸೂಲಿ ಮಾಡಿದ ಉದಾಹರಣೆಗಳೇ ಇಲ್ಲ ಎನ್ನಬೇಕು. ಇದು ದಾಖಲೆಯೇ ಸರಿ.

  ಇಡೀ ಚಿತ್ರ ನೋಡೋದು ಬಿಡಿ, 4 ನಿಮಿಷಗಳ ಟೀಸರ್ ನೋಡೋಕೆ ಜನ 500 ರೂ. ಕೊಟ್ಟಿದ್ದಾರೆ. ಅಫ್‍ಕೋರ್ಸ್, ಆ ಹಣವನ್ನು ನಿರ್ಮಾಪಕ ಸಿ.ಆರ್.ಮನೋಹರ್ ಸಂಕಷ್ಟದಲ್ಲಿರುವ ನಿರ್ದೇಶಕರಿಗೇ ನೀಡಿರುವುದು ಸ್ವಾಗತಾರ್ಹ.

  ಆನಂದ್ ಪಿ.ರಾಜು, ಎ.ಟಿ.ರಘು, ಬೂದಾಳ ಕೃಷ್ಣಮೂರ್ತಿ, ಹಿರೇಮಠ್ ಅವರಿಗೆ ಟೀಸರ್ ಪ್ರದರ್ಶನದಿಂದ ಬಂದ ಹಣವನ್ನು ಸಂದಾಯ ಮಾಡಲಾಗಿದೆ. ಅದು ಅವರ ಸಂಕಷ್ಟದ ಬದುಕಿದೆ ದಿ ವಿಲನ್ ಸ್ಪಂದಿಸಿದ ರೀತಿ. 

  ಟೈಮೆಕ್ಸ್ ಹಾಗೂ ಡೈರಿ ಡೇ ಸಂಸ್ಥೆಗಳು, ದಿ ವಿಲನ್ ಚಿತ್ರಕ್ಕೆ ಬ್ರಾಂಡ್ ಪಾರ್ಟ್‍ನರ್ ಆಗಿರುವುದು ವಿಶೇಷ. ಇದು ಕನ್ನಡಕ್ಕೆ ಹೊಸದೇನಲ್ಲವಾದರೂ, ಟೈಮೆಕ್ಸ್ ಸಂಸ್ಥೆ ದಿ ವಿಲನ್ ಹೆಸರಿನಲ್ಲೇ ವಾಚ್ ತರುತ್ತಿರುವುದು ಹೊಸದು. ಒನ್ಸ್ ಎಗೇಯ್ನ್, ಇದೂ ಕೂಡಾ ದಾಖಲೆ.

  ಚಿತ್ರದ ಟೀಸರ್‍ನ್ನು ಮುಖ್ಯಮಂತ್ರಿ ಕುಮಾರಸ್ವಾಮಿಯವರೇ ಬಿಡುಗಡೆಗೊಳಿಸಿದ್ದು ವಿಶೇಷ. ಅಂದಹಾಗೆ ದಿ ವಿಲನ್ ಚಿತ್ರತಂಡ, ಮೊದಲು ಶುರು ಮಾಡಿದ್ದು ಕಲಿ ಚಿತ್ರವನ್ನ. ಆ ಚಿತ್ರವನ್ನು ಲಾಂಚ್ ಮಾಡಿದ್ದವರು ಆಗ ಸಿಎಂ ಆಗಿದ್ದ ಸಿದ್ದರಾಮಯ್ಯ. ಅದಾದ ಮೇಲೆ ಕಥೆಯೂ ಬದಲಾಗಿ ದಿ ವಿಲನ್ ಸಿದ್ಧವಾಯ್ತು. ಈ ಚಿತ್ರದ ಟೀಸರ್ ರಿಲೀಸ್ ಮಾಡಿದ್ದು ಈಗಿನ ಸಿಎಂ ಕುಮಾರಸ್ವಾಮಿ. ಒನ್ ಮೋರ್ ಸ್ಪೆಷಲ್.

  ಇನ್ನು ಚಿತ್ರದ ಎರಡೂ ಟೀಸರ್‍ಗಳು, ದಾಖಲೆ ಪ್ರಮಾಣದಲ್ಲಿ ಹಿಟ್ಸ್ ಪಡೆಯತ್ತಿರುವುದು ವಿಶೇಷ. ಕನ್ನಡ ಚಿತ್ರದ ಟೀಸರ್‍ವೊಂದು, ಬಿಡುಗಡೆ ದಿನವೇ ಟ್ವಿಟರ್‍ನಲ್ಲಿ ಟ್ರೆಂಡ್ ಆಗಿದ್ದು ಕೂಡಾ ದಿ ವಿಲನ್ ಸೃಷ್ಟಿಸಿದ ದಾಖಲೆಯೇ..

 • ದಿ ವಿಲನ್ ಹಾಡನ್ನು ಕೇಳಿ.. ಒಂದ್ಸಲ ಓದ್ಕೊಂಡ್ ಬಿಡಿ

  the villain lyrics

  ನಾನ್ ಸೈಲೆಂಟ್ ಆಗಿದ್ರೆ ರಾಮ

  ವಯಲೆಂಟ್ ಆದ್ರೆ.. ರಾವಣಾ...

  ರಾವಣಾ... ರಾವಣಾ...

  ಅಣ್ಣಾ ನನ್ನ ಊರು..

  ಅಣ್ಣಾ ನನ್ನ ಹಎಸರು..

  ಅಣ್ಣಾ ನಾನು ಕೆಂಚಹಳ್ಳಿ ಕೆಂಚ ಕಾಣಣ್ಣೋ..

  ಇಫ್ ಯೂ ಕಮ್ ಟುಡೇ..

  ಐ ಆ್ಯಮ್ ಸೋ ಹ್ಯಾಪಿ

  ಇಫ್ ಯೂ ಕಮ್ ಟುಮಾರೋ..

  ಐ ಆ್ಯಮ್ ಟೂ ಬ್ಯಾಡ್

  ಯೂ ಪಿಕ್ ದ ಟೈಂ..

  ಟಿಕ್ ಟಿಕ್ ಟಿಕ್ ಟಿಕ್ ಟಿಕ್

  ಟಿಕ್ ಟಿಕ್ ಟಿಕ್ ಟಿಕ್ ಟಿಕ್

  ಧಗ ಧಗ ಧಗ ಧಗ

  ರಾಜರ ಹಿರಿ ಮಗ..

  ಬಿಟ್ಟ ನೋಡು ಮೂರನೇ ಕಣ್ಣ

  ಶಂಕರಾ.. ಶಿವಶಂಕರಾ..

  ತಗ ತಗ ತಗ ತಗ

  ಮಚ್ಚೇಟು ಬೀಳುವಾಗ

  ಕೈಕಾಲು ಲ್ಯಾಪ್ಸು

  ಶಿವಶಂಕರಾ.. ಅಯ್ಯೋ ಶಂಕರಾ..

  ಮಚ್ಚು ಹಿಡಿದು ನಿಂತ್ರೆ ನೀನು ಹುಚ್ಚೆದ್ದು ಕುಣೀತಾರೋ..

  ನಿನ್ನ ಮುಂದೆ ಎಲ್ರೂ ಬಚ್ಚ ಕಾಣಣ್ಣ..

  ಇಫ್ ಯೂ ಕಮ್ ಟುಡೇ..

  ಐ ಆ್ಯಮ್ ಸೋ ಹ್ಯಾಪಿ

  ಇಫ್ ಯೂ ಕಮ್ ಟುಮಾರೋ..

  ಐ ಆ್ಯಮ್ ಟೂ ಬ್ಯಾಡ್

  ಯೂ ಪಿಕ್ ದ ಟೈಂ..

  ಟಿಕ್ ಟಿಕ್ ಟಿಕ್ ಟಿಕ್ ಟಿಕ್

  ಟಿಕ್ ಟಿಕ್ ಟಿಕ್ ಟಿಕ್ ಟಿಕ್

  ರಾಜಾಧಿರಾಜನೇ.. 

  ರಾಕ್ಷಸರ ರಾಜನೇ..

  ಹೇಳಿ ಹೇಳಿ ಹೇಳ್ರಪ್ಪಾ..

  ಎಲ್ರೂ ಒಟ್ಟಿಗೆ ಹೇಳ್ರಪ್ಪಾ..

  ಟಿಕ್ ಟಿಕ್ ಟಿಕ್ ಟಿಕ್ ಟಿಕ್

  ಟಿಕ್ ಟಿಕ್ ಟಿಕ್ ಟಿಕ್ ಟಿಕ್

  ಬಿಡು ಬಿಡು ಬಿಡು ಬಿಡು 

  ನಾನು ಅನ್ನದ್ ಮೊದ್ಲು ಬಿಡು

  ನಾವು ಅಂತಾ ಬಾಳೋದು ಕಲಿ ಶಂಕರಾ..

  ಶಿವಶಂಕರಾ..

  ಕೊಡು ಕೊಡು ಕೊಡು ಕೊಡು 

  ಕೈಲಾದಷ್ಟು ದಾನ ಕೊಡು

  ಸ್ವರ್ಗ ನರ್ಕ ಎಲ್ಲ ಇಲ್ಲೇ.. ಶಂಕರಾ..

  ಶಿವಶಂಕರಾ..

  ನಿನ್ನೆ ಮೊನ್ನೆ ಬಂದೋರೆಲ್ಲ ನಂಬರ್ ಒನ್ ಅಂತಾರೋ..

  ಅವ್ರವ್ರೆ ಸಂಘ ಕಟ್ಕೊಂಡು ಬಿರುದು ಇಟ್ಕೊಂಡ್ ನಿಂತವ್ರೋ..

  ನಿಂಗೆ ನಂಬರ್‍ಗಳ ಲೆಕ್ಕ ಇಲ್ಲಣ್ಣ..

  ಇಫ್ ಯೂ ಕಮ್ ಟುಡೇ..

  ಐ ಆ್ಯಮ್ ಸೋ ಹ್ಯಾಪಿ

  ಇಫ್ ಯೂ ಕಮ್ ಟುಮಾರೋ..

  ಐ ಆ್ಯಮ್ ಟೂ ಬ್ಯಾಡ್

  ಯೂ ಪಿಕ್ ದ ಟೈಂ..

  ಟಿಕ್ ಟಿಕ್ ಟಿಕ್ ಟಿಕ್ ಟಿಕ್

  ಟಿಕ್ ಟಿಕ್ ಟಿಕ್ ಟಿಕ್ ಟಿಕ್

 • ದಿ ವಿಲನ್‍ನ ಹಾಡುಗಳೆಲ್ಲ `ಪ್ರೇಮ್'ಮಯ..!

  prem's magic in the villain's magic

  ದಿ ವಿಲನ್ ಚಿತ್ರದ ಹಾಡುಗಳು ರಿಲೀಸ್ ಆಗಿವೆ. ವಿಡಿಯೋ ಟ್ರ್ಯಾಕ್ ಬಿಡದೆ, ಕೇವಲ ಲಿರಿಕಲ್ ವಿಡಿಯೋ ಬಿಟ್ಟು ಮೋಡಿ ಸೃಷ್ಟಿಸಿದ್ದಾರೆ ಪ್ರೇಮ್. ದಿನೇ ದಿನೇ ಹಾಡುಗಳ ಹಿಟ್ಸ್ ಹೆಚ್ಚುತ್ತಲೇ ಇದೆ. ಚಿತ್ರದ ಹಾಡುಗಳ ಸ್ಪೆಷಾಲಿಟಿ ಏನ್ ಗೊತ್ತಾ..? ಚಿತ್ರದ ಎಲ್ಲ ಹಾಡುಗಳಲ್ಲೂ ಪ್ರೇಮ್ ಇದ್ದಾರೆ. 

  ಚಿತ್ರದ ಎಲ್ಲ ಹಾಡುಗಳನ್ನೂ ಬರೆದಿರುವುದು ಜೋಗಿ ಪ್ರೇಮ್. ದಲೇರ್ ಮೆಹಂದಿಯಂತಹವರಿಂದ ಹಾಡಿಸಿದರೂ ಅದು ಪ್ರೇಮ್‍ಗೆ ಇಷ್ಟವಾಗಲಿಲ್ಲ. ಆಡು ಭಾಷೆಯನ್ನು ಹೆಚ್ಚಾಗಿ ಬಳಸಿದ್ದ ಪ್ರೇಮ್‍ಗೆ, ಆ ಆಡುಭಾಷೆಯ ಉಚ್ಛಾರಣೆ ಹಿಂದಿ ಗಾಯಕರಿಂದ ಸರಿ ಕಾಣಲಿಲ್ಲ. ಹೀಗಾಗಿ ಹಾಡುಗಳಲ್ಲಿ ಪ್ರೇಮ್ ಅವರ ಧ್ವನಿ ಖಾಯಂ ಆಗಿದೆ ಎನ್ನುತ್ತಾರೆ ಅರ್ಜುನ್ ಜನ್ಯ.

  ಅರ್ಜುನ್ ಜನ್ಯ ಅವರಿಗೆ ದಿನಗಟ್ಟಲೆ ಕಾಟ ಕೊಟ್ಟಿದ್ದೇನೆ. ಈಗ ಒಳ್ಳೆಯ ಹಾಡುಗಳು ಬಂದಿವೆ. ನನ್ನ ಚಿತ್ರದಲ್ಲಿ ಹಾಡುಗಳಿಗೂ ಅಷ್ಟೇ ಪ್ರಾಮುಖ್ಯತೆ ಕೊಡುತ್ತೇನೆ. ಪ್ರತಿಯೊಂದು ಹಾಡು, ಚಿತ್ರದ ಕಥೆಗೆ ಪೂರಕವಾಗಿವೆ ಎಂದು ಹೇಳಿಕೊಂಡಿದ್ದಾರೆ ನಿರ್ದೇಶಕ ಪ್ರೇಮ್.

  ಶಿವರಾಜ್‍ಕುಮಾರ್, ಸುದೀಪ್, ಆ್ಯಮಿ ಜಾಕ್ಸನ್, ಮಿಥುನ್ ಚಕ್ರವರ್ತಿ, ಶ್ರೀಕಾಂತ್ ಅಭಿನಯದ ಸಿನಿಮಾ, ಅಕ್ಟೋಬರ್‍ನಲ್ಲಿ ತೆರೆಕಾಣುವ ಸಾಧ್ಯತೆ ಇದೆ.

 • ದುನಿಯಾ ವಿಜಿಗೆ ಕಿಚ್ಚನ ಹಾರೈಕೆ

  sudeep congragulates duniya vijay

  ನಟ ದುನಿಯಾ ವಿಜಯ್, ನಿರ್ದೇಶಕರಾಗಲು ಹೊರಟಿರುವುದನ್ನು ನಟ ಸುದೀಪ್ ಸ್ವಾಗತಿಸಿದ್ದಾರೆ. ಸುದೀಪ್ ಅಭಿನಯದ ರಂಗ ಎಸ್‍ಎಸ್‍ಎಲ್‍ಸಿ ಚಿತ್ರದಲ್ಲಿ ದುನಿಯಾ ವಿಜಿ, ವಿಲನ್ ಆಗಿ ನಟಿಸಿದ್ದವರು. ಅದಾದ ಮೇಲೆ ವಿಜಿ, ಹೀರೋ ಆಗಿ, ಸ್ಟಾರ್ ಆದರು. ಈಗ ಡೈರೆಕ್ಟರ್ ಆಗುತ್ತಿದ್ದಾರೆ.

  ವಿಜಿ ನಿರ್ದೇಶಕರಾಗುತ್ತಿರುವುದನ್ನು ಚಿತ್ರಲೋಕ ವೆಬ್‍ಸೈಟ್‍ನಲ್ಲಿ ನೋಡಿ ತಿಳಿದ ಸುದೀಪ್, ಅದನ್ನೇ ರೀ ಟ್ವೀಟ್ ಮಾಡಿದ್ದಾರೆ. ಶುಭ ಹಾರೈಸುವುದರ ಜೊತೆಗೆ, ನಮ್ಮನ್ನು ನಾವೇ ಹುಡುಕಿಕೊಳ್ಳುವ ಈ ಸಾಹಸ ನಿಜಕ್ಕೂ ಬೇರೆಯದೇ ಅನುಭವ. ನಿರ್ದೇಶಕರಾಗಲು ಹೊರಟಿರುವ ದುನಿಯಾ ವಿಜಯ್‍ಗೆ ಶುಭವಾಗಲಿ. ನಿಮ್ಮ ಪ್ರತಿ ಹೆಜ್ಜೆಯನ್ನೂ ಆನಂದಿಸಿ ಎಂದು ಶುಭ ಕೋರಿದ್ದಾರೆ ಸುದೀಪ್.

 • ದುಬೈನಲ್ಲಿ ವಿಲನ್ ಕ್ರೇಝ್

  the villain's craze in dubai

  ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಚಿತ್ರವಾಗಿರುವ ದಿ ವಿಲನ್ ಚಿತ್ರದ ಆಡಿಯೋ ರಿಲೀಸ್, ದುಬೈನಲ್ಲಿ ಅದ್ಧೂರಿಯಾಗಿ ನೆರವೇರಿದೆ. ದುಬೈನಲ್ಲಿ ಅಡಿಯೋ ಬಿಡುಗಡೆ ಮಾಡಿದ ಮೊದಲ ಕನ್ನಡ ಸಿನಿಮಾ ದಿ ವಿಲನ್ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ ನಿರ್ದೇಶಕ ಪ್ರೇಮ್. ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಆಡಿಯೋ ರಿಲೀಸ್ ಮಾಡಿದ್ದ ಚಿತ್ರತಂಡ, ದುಬೈನಲ್ಲಿಯೂ ಆಡಿಯೋ ರಿಲೀಸ್ ಮಾಡುವ ಮೂಲಕ ಅದ್ಧೂರಿ ಪ್ರಚಾರ ಆರಂಭಿಸಿದೆ.

  ಅನಿವಾರ್ಯ ಕಾರಣಗಳಿಂದ ಕಾರ್ಯಕ್ರಮಕ್ಕೆ ಬರಲಾಗುತ್ತಿಲ್ಲ ಎಂದು ತಿಳಿಸಿದ್ದ ನಾಯಕ ಕಿಚ್ಚ ಸುದೀಪ್, ಚಿತ್ರತಂಡಕ್ಕೆ ಶುಭ ಹಾರೈಸಿದ್ದರು. ಶಿವರಾಜ್‍ಕುಮಾರ್, ಅಂಬರೀಷ್, ಅರ್ಜುನ್ ಜನ್ಯಾ, ನಾಯಕಿ ನಟಿ ಆ್ಯಮಿ ಜಾಕ್ಸನ್ ಹಾಗೂ ನಿರ್ಮಾಪಕ ಸಿ.ಆರ್. ಮನೋಹರ್ ಆಡಿಯೋ ರಿಲೀಸ್‍ನಲ್ಲಿ ಭಾಗವಹಿಸಿದ್ದರು. ಸೆಪ್ಟೆಂಬರ್ ಕೊನೆಯಲ್ಲಿ ಚಿತ್ರ ಬಿಡುಗಡೆಯಾಗುವ ನಿರೀಕ್ಷೆ ಇದೆ.

 • ದುರ್ಯೋಧನ ಆಗ್ತಾರಾ ಕಿಚ್ಚ..?

  sudeep as duryodhana?

  ಅರೆ, ಕುರುಕ್ಷೇತ್ರದಲ್ಲಿ ದರ್ಶನ್ ದುರ್ಯೋಧನ ಅಲ್ಲವಾ..? ಸುದೀಪ್ ಹೇಗೆ ದುರ್ಯೋಧನ ಆಗೋಕೆ ಸಾಧ್ಯ ಎಂದು ತಲೆಗೆ ಹುಳ ಬಿಟ್ಟುಕೊಳ್ಳಬೇಡಿ. ಕಿಚ್ಚ ಸುದೀಪ್ ಮತ್ತೊಮ್ಮೆ ಬಾಲಿವುಡ್‍ನತ್ತ ಹೊರಟಿದ್ದಾರೆ. 

  ಹಿಂದಿಯಲ್ಲಿ `ಕರ್ಣ' ಹೆಸರಿನಲ್ಲಿ ಮಹಾಭಾರತದ ಸಿನಿಮಾ ತಯಾರಾಗುತ್ತಿದೆ. ಅಮಿತಾಬ್ ಬಚ್ಚನ್ ಆ ಚಿತ್ರದಲ್ಲಿ ಭೀಷ್ಮನಾಗಿ ನಟಿಸುತ್ತಿದ್ದಾರೆ. ಆ ಚಿತ್ರದಲ್ಲಿ ಸುದೀಪ್‍ಗೆ ದುರ್ಯೋಧನನ ಪಾತ್ರದಲ್ಲಿ ನಟಿಸುವಂತೆ ಆಫರ್ ಬಂದಿದೆಯಂತೆ. ಆಫರ್‍ನ್ನು ಸುದೀಪ್ ಇನ್ನೂ ಒಪ್ಪಿಕೊಂಡಿಲ್ಲ. ಆ ಚಿತ್ರದಲ್ಲಿ ತಮಿಳಿನಿಂದ ವಿಜಯ್ ಕೂಡಾ ನಟಿಸುವ ಸಾಧ್ಯತೆಗಳಿವೆ.

  ಇದೇ ವೇಳೆ ರೋಹಿತ್ ಶೆಟ್ಟಿ ಅವರ ಹೊಸ ಚಿತ್ರದಲ್ಲೂ ಸುದೀಪ್‍ಗೆ ಆಫರ್ ಬಂದಿದೆಯಂತೆ. ರೋಹಿತ್ ಶೆಟ್ಟಿ, ಬಾಲಿವುಡ್‍ನ ಬಾಕ್ಸಾಫೀಸ್ ಸುಲ್ತಾನ್. ಆ ಚಿತ್ರಕ್ಕೂ ಕೂಡಾ ಸುದೀಪ್ ಇನ್ನೂ ಗ್ರೀನ್ ಸಿಗ್ನಲ್ ಕೊಟ್ಟಿಲ್ಲ.

  Related Articles :-

  Sudeep Gets An Offer From Amitabh Bachchan's New Film

 • ದೇವೇಗೌಡ್ರೇ ಹೇಳಿದ್ರು. ರಾಜಕೀಯಕ್ಕೆ ಹೋಗ್ತಾರಾ ಸುದೀಪ್..?

  devegowda speaks on sudeep

  ಕಿಚ್ಚ ಸುದೀಪ್ ರಾಜಕೀಯಕ್ಕೆ ಹೋಗ್ತಾರಂತೆ ಅನ್ನೋ ಸುದ್ದಿ ಇವತ್ತು ನಿನ್ನೆಯದಲ್ಲ. ನಾನು ರಾಜಕೀಯಕ್ಕೆ ಬರೋದಿಲ್ಲ ಎಂದು ಹಲವು ಬಾರಿ ಸ್ಪಷ್ಟಪಡಿಸಿರುವ ಸುದೀಪ್, ಜನಸೇವೆ ಮಾಡೋಕೆ ರಾಜಕೀಯಕ್ಕೇ ಬರಬೇಕೆಂದೇನೂ ಇಲ್ಲ ಅಂತಾರೆ. ಆದರೆ, ಈ ಬಾರಿ ಸುದೀಪ್ ಮತ್ತೊಮ್ಮೆ ಉತ್ತರ ಕೊಡಬೇಕಾದ ಪರಿಸ್ಥಿತಿ ಬಂದಿದೆ. ಏಕೆಂದರೆ, ಈ ಬಾರಿ ಸುದೀಪ್ ರಾಜಕೀಯದ ಬಗ್ಗೆ ಮಾತನಾಡಿರುವುದು ಕರ್ನಾಟಕದ ಹಿರಿಯ ರಾಜಕಾರಣಿ ಮಾಜಿ ಪ್ರಧಾನಿ ದೇವೇಗೌಡ.

  ಸುದೀಪ್ ಅವರನ್ನು ಕುಮಾರಸ್ವಾಮಿ ಆಹ್ವಾನಿಸುರುವುದು ನಿಜ. ಆದರೆ, ಸುದೀಪ್ ಏನು ಹೇಳಿದ್ದಾರೆ ಎನ್ನುವುದು ನನಗೆ ಗೊತ್ತಿಲ್ಲ. ನಾನು ಯಾರ ವ್ಯಕ್ತಿತ್ವವನ್ನೂ ಹಗುರವಾಗಿ ಕಾಣುವುದಿಲ್ಲ ಎಂದಿದ್ದಾರೆ ದೇವೇಗೌಡ.

  ಇತ್ತೀಚೆಗೆ ಕುಮಾರಸ್ವಾಮಿ ಸುದೀಪ್ ಮನೆಗೆ ಹೋಗಿ ಸುಮಾರು ಒಂದು ಗಂಟೆ ಕಾಲ ಚರ್ಚೆ ನಡೆಸಿದ್ದರು. ಕುಮಾರಸ್ವಾಮಿಯವರಿಗೆ ಸ್ವತಃ ತಾವೇ ಊಟ ಬಡಿಸಿದ್ದ ಸುದೀಪ್, ಆತ್ಮೀಯತೆ ಮೆರೆದಿದ್ದರು. ಸುದೀಪ್ ಇನ್ನೂ ಯಾವುದೇ ಸ್ಪಷ್ಟನೆ ಕೊಟ್ಟಿಲ್ಲ. ಆಗಲೇ ಸುದೀಪ್ ಅವರು ಮೊಳಕಾಲ್ಮೂರಿನಿಂದ ಸ್ಪರ್ಧಿಸ್ತಾರಂತೆ, ಚಿತ್ರದುರ್ಗದಿಂದ ಎಲೆಕ್ಷನ್‍ಗೆ ನಿಲ್ತಾರಂತೆ, ಶಿವಮೊಗ್ಗದಲ್ಲಿ ಕ್ಷೇತ್ರ ಹುಡುಕುತ್ತಿದ್ದಾರಂತೆ ಎಂಬ ಸುದ್ದಿಗಳಿಗೆ ರೆಕ್ಕೆಪುಕ್ಕ ಬಂದುಬಿಟ್ಟಿದೆ.

  ದೇವೇಗೌಡರು ಹೇಳಿರೋದ್ರಿಂದ ಸುದೀಪ್ ಮತ್ತೊಮ್ಮೆ ಸ್ಪಷ್ಟನೆ ಕೊಡ್ತಾರಾ..? ಅಥವಾ ತಮ್ಮ ಹಿಂದಿನ ರಾಜಕೀಯದಿಂದ ದೂರ ಇರುವ ಹೇಳಿಕೆಗೇ ಬದ್ಧರಾಗಿರ್ತಾರಾ..? ಮೂಲಗಳ ಪ್ರಕಾರ, ಸುದೀಪ್ ರಾಜಕೀಯಕ್ಕೆ ಬರುವ ಸಾಧ್ಯತೆ ಇಲ್ಲವೇ ಇಲ್ಲ.

 • ದೇಶದಲ್ಲೇ ನಡೆದಿರಲಿಲ್ಲ ಇಂಥಾದ್ದೊಂದು ಸಿನಿಮಾ ಐಟಿ ರೇಡ್..!

  biggest ever income raids raid on sandalwood stars

  ಶಿವರಾಜ್ ಕುಮಾರ್, ಸುದೀಪ್, ಪುನೀತ್ ರಾಜ್‍ಕುಮಾರ್, ಯಶ್, ರಾಕ್‍ಲೈನ್ ವೆಂಕಟೇಶ್, ಸಿ.ಆರ್.ಮನೋಹರ್, ಜಯಣ್ಣ, ವಿಜಯ್ ಕಿರಗಂದೂರು ಮೇಲೆ ನಡೆದಿರುವ ಐತಿಹಾಸಿಕ ಐಟಿ ರೇಡ್ ಹಿಂದಿರೋ ನಿಜವಾದ ಕಾರಣ ಏನಿರಬಹುದು..? ಅದು ಈಗ ಎಲ್ಲೆಡೆ ಚರ್ಚೆಯಾಗುತ್ತಿರುವ ವಿಷಯ. ಏಕೆಂದರೆ, ಈ ಹಿಂದೆ ಚಿತ್ರರಂಗದವರ ಐಟಿ ದಾಳಿ ಆಗಿಯೇ ಇಲ್ಲ ಎಂದಲ್ಲ. ಹಲವಾರು ಬಾರಿ ಆಗಿವೆ. ಅತೀ ಹೆಚ್ಚು ಐಟಿ ತನಿಖೆ ಎದುರಿಸಿರುವುದು ಬಾಲಿವುಡ್ ಮಂದಿ. ಅವರನ್ನು ತಮಿಳು, ತೆಲುಗು ಚಿತ್ರನಟರು, ನಿರ್ಮಾಪಕರ ಮನೆಗಳಿಗೆ ಐಟಿ ಮಂದಿ ಹೋಗಿ ಬಂದಿದ್ದಾರೆ. ಆದರೆ.. ಹೀಗೆ.. ಇಷ್ಟು ದೊಡ್ಡ ಮಟ್ಟದಲ್ಲಿ.. ಒಂದೇ ದಿನ.. ಇಷ್ಟೊಂದು ನಟರ ಮೇಲೆ, ನಿರ್ಮಾಪಕರ ಮೇಲೆ ಏಕಕಾಲದಲ್ಲಿ ದಾಳಿ ನಡೆದಿದ್ದು ದೇಶದಲ್ಲಿ ಇದೇ ಮೊದಲು.

  ಸುಮಾರು 300 ಅಧಿಕಾರಿಗಳ ತಂಡ ದಾಳಿ, ಪರಿಶೀಲನೆ, ವಿಚಾರಣೆಯಲ್ಲಿ ನಿರತವಾಗಿದ್ದಾರೆ. ದಾಳಿ ಎದುರಿಸುತ್ತಿರುವುದು 10ಕ್ಕೂ ಹೆಚ್ಚು ಮಂದಿ. 100 ಇನ್ನೋವಾ ಕಾರುಗಳಲ್ಲಿ ಬಂದಿರುವ ಅಧಿಕಾರಿಗಳು, ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದು ದಾಳಿ ಆರಂಭಿಸುವ ಅರ್ಧಗಂಟೆಗೂ ಮುನ್ನ. ಅದು ಐಟಿ ಅಧಿಕಾರಿಗಳ ದಾಳಿಯ ವೈಖರಿ.

  ಒಂದು ಮೂಲದ ಪ್ರಕಾರ, ಇತ್ತೀಚೆಗೆ ಬಂದಂತಹ ವಿಲನ್, ಕೆಜಿಎಫ್ ಚಿತ್ರಗಳು ನೂರಾರು ಕೋಟಿ ಗಳಿಸಿವೆ ಎಂಬ ಸುದ್ದಿಯೇ ಇದಕ್ಕೆಲ್ಲ ಕಾರಣ ಎನ್ನಲಾಗಿದೆ. ಚಿತ್ರಕ್ಕೆ ಅಷ್ಟು ದೊಡ್ಡ ಮೊತ್ತ ಹೂಡಿಕೆ ಮಾಡಿದ್ದು ಹೇಗೆ..? ಆ ಹಣ ಎಲ್ಲಿಂದ ಬಂತು..? ಅದು ಕಪ್ಪುಹಣವಾ..? ಹಾಗಾದರೆ, ಕಪ್ಪುಹಣದ ಮೂಲ ಎಲ್ಲಿ..? ಯಾರು..? ಇಷ್ಟೂ ಹಣಕ್ಕೆ ತೆರಿಗೆ ಕಟ್ಟಿದ್ದಾರಾ..? ಇಲ್ಲವಾ..? ಹೀಗೆ ಹಲವಾರು ಅನುಮಾನಗಳ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ ಎನ್ನಲಾಗಿದೆ.

 • ನನ್ನ ವಯಸ್ಸು ಯಾವಾಗ್ಲೂ 29..!

  im always 29 years old says sudeep

  ಕಿಚ್ಚ ಸುದೀಪ್ ವಯಸ್ಸೆಷ್ಟು..? ಜಸ್ಟ್ 29. ಹೌದು, ಇದು ಸುದೀಪ್ ಅವರೇ ಹೇಳಿಕೊಳ್ಳೋ ವಯಸ್ಸು. ಅರೆ.. ಮೊನ್ನೆ ಮೊನ್ನೆ 44 ಆಯ್ತಲ್ವಾ ಅಂದ್ಕೋಬೇಡಿ.. ಇದು ಸುದೀಪ್ ಅವರ ಮನಸ್ಸಿನ ಮಾತು. ವಯಸ್ಸಾಯ್ತು ಅಂದ್ಕೊಂಡ್ರೆ ವಯಸ್ಸಾಗಿಬಿಡುತ್ತೆ. ವಯಸ್ಸಾಗೋದು ನಮ್ಮ ಫೀಲ್‍ನಲ್ಲಿದೆ. ಪ್ರತಿದಿನ ಬೆಳಗ್ಗೆ ಬೇಗ ಎದ್ದು ವ್ಯಾಯಾಮ ಮಾಡಿ, ಮನಸ್ಸನ್ನು ಫ್ರೆಶ್ ಆಗಿಟ್ಕೊಂಡ್ರೆ ಸಾಕು. ಚೆನ್ನಾಗಿ ತಿನ್ನಬೇಕು. ಆಕ್ಟಿವ್ ಆಗಿರಬೇಕು. ಆಗ ವಯಸ್ಸಾಗೋದಿಲ್ಲ ಅನ್ನೋದು ಸುದೀಪ್ ಪಾಲಿಸಿ.

  ಹೀಗಾಗಿಯೇ ಸುದೀಪ್ ಈಗಲೂ 29ರ ಯುವಕನಂತೆಯೇ ಕಾಣಿಸ್ತಾರೆ. ಆದರೆ ವಯಸ್ಸಾಗದಂತೆ ಇರೋಕೆ ಸುದೀಪ್ ಅವರ ಇನ್ನೂ ಒಂದು ಗುಣ ಕಾರಣ. ಅವರಿಗೆ ಈಗಲೂ ಅವರು ಸಾಧನೆಗಾಗಿ ಕಷ್ಟಪಡ್ತಾರೆ. ತಮಗಿಂತ ಹೆಚ್ಚು ಶ್ರಮಪಡುವವರನ್ನು ಪ್ರೀತಿಸ್ತಾರೆ. ಆ ಮಟ್ಟದ ಒಂದು ಸಂತೃಪ್ತಿಯ ಹಂತ ತಲುಪಿರುವುದೂ ಕೂಡಾ ಸುದೀಪ್ ಯಂಗ್ ಆಗಿರೋಕೆ ಕಾರಣ.

 • ನಾನು ಪಾರ್ವತಿ ಕೃತಿ ಬಿಡುಗಡೆ ಸಂಭ್ರಮ

  naanu parvathi book launch

  ಪಾರ್ವತಮ್ಮ ರಾಜ್‍ಕುಮಾರ್ ಜೀವನ, ಸಾಧನೆಗಳ ಕುರಿತ ಕೃತಿ `ನಾನು ಪಾರ್ವತಿ'. ಜೋಗಿ ಅವರು ಬರೆದಿರುವ ಚಿತ್ರಲೋಕ ಡಾಟ್ ಕಾಮ್ ಅರ್ಪಿಸಿರುವ ಕೃತಿಯ ಬಿಡುಗಡೆ ಸಮಾರಂಭಕ್ಕೆ ರಾಘವೇಂದ್ರ ರಾಜ್‍ಕುಮಾರ್, ಸುದೀಪ್, ಜಯಮಾಲಾ, ಸುವರ್ಣ ನ್ಯೂಸ್ & ಕನ್ನಡಪ್ರಭ ಸಂಪಾದಕ ರವಿ ಹೆಗ್ಡೆ, ಜೋಗಿ (ಗಿರೀಶ್ ರಾವ್ ಹತ್ವಾರ್), ಫಿಲಂಚೇಂಬರ್ ಅಧ್ಯಕ್ಷ ಸಾ.ರಾ.ಗೋವಿಂದು, ಚಿತ್ರಲೋಕ ಸಂಪಾದಕ ವೀರೇಶ್, ಹಿರಿಯ ನಿರ್ದೇಶಕ ಭಗವಾನ್ ಸೇರಿದಂತೆ ಚಿತ್ರರಂಗದ ಹಲವಾರು ಗಣ್ಯರು ಸಾಕ್ಷಿಯಾದರು.

  ರಾಘವೇಂದ್ರ ರಾಜ್‍ಕುಮಾರ್ ತಾಯಿಯ ಸಾಮಾಜಿಕ ಕಳಕಳಿಯನ್ನು ಸ್ಮರಿಸಿದರು. ನಾವು ಮೂರೂ ಜನ ಒಟ್ಟಿಗೇ ಒಂದೇ ಚಿತ್ರದಲ್ಲಿ ನಟಿಸುವ ಕನಸು ಇನ್ನೂ ಈಡೇರಿಲ್ಲ ಎಂದು ಹೇಳಿಕೊಂಡರು. ಮಿಸ್ ಯೂ ಅಮ್ಮ, ಬೇಗ ಹಿಂದಿರುಗಿ ಬಂದುಬಿಡಮ್ಮ, ನಾನು ಇನ್ನೇನೂ ಕೇಳುವುದಿಲ್ಲ ಎಂದು ಭಾವುಕರಾದಾಗ, ಸಮಾರಂಭದಲ್ಲಿದ್ದವರೂ ಭಾವುಕರಾದರು.

  ನಟ ಸುದೀಪ್ `ಮೊದಲಿನಿಂದಲೂ ಅವರಿಗೂ (ಡಾ.ರಾಜ್ ಕುಟುಂಬ) ನಮಗೂ ಆಗಿಬರುವುದಿಲ್ಲ ಎಂದು ಬರೆದುಕೊಂಡು ಬರುತ್ತಿದ್ದರು. ಅದನ್ನು ನೋಡಿ ನೋಡಿ ನಮಗೂ ಹಾಗೆಯೇ ಅನ್ನಿಸೋಕೆ ಶುರುವಾಗಿಬಿಟ್ಟಿತ್ತು. ಚಿತ್ರರಂಗಕ್ಕೆ ಖಾಲಿ ಕಂಪ್ಯೂಟರ್‍ನಂತೆ ಬಂದಿದ್ದ ನಮಗೆ, ಅಲ್ಲಿದ್ದವರು ಈ ಮನೆಯ ಬಗ್ಗೆ ಏನೇನೋ ಹೇಳಿ ತಲೆಗೆ ತುಂಬಿದ್ದರು. ಆಗೆಲ್ಲ ನಮಗೆ ಶಿವಣ್ಣ ಹೆಂಗೆಂಗೋ ಕಾಣಿಸುತ್ತಿದ್ದರು. ರಾಘಣ್ಣ ಕಪ್ಪಗೆ ಕಾಣಿಸುತ್ತಿದ್ದರು.ನಾವು ಅವರಿಗೆ ಹೇಗೆ ಕಾಣಿಸುತ್ತಿದ್ದೆವೋ ಗೊತ್ತಿಲ್ಲ. ಆದರೆ, ಶಿವಣ್ಣ ಅವರ ಸಾಧನೆಯ ಮುಂದೆ ನಾನು ತುಂಬಾ ಚಿಕ್ಕವನು. ಈ ಕಾರ್ಯಕ್ರಮಕ್ಕೆ ಬಂದ ಮೇಲೆ ನನಗೆ ಎಲ್ಲ ತಿಳಿಯುತ್ತಿದೆ. ನಾನು ಪಾರ್ವತಿ ಪುಸ್ತಕದ ತೂಕ ಅರ್ಥವಾಗಿದೆ ಎಂದು ಹೇಳಿಕೊಂಡರು. 

  ಫಿಲಂ ಚೇಂಬರ್ ಅಧ್ಯಕ್ಷ ಸಾ.ರಾ.ಗೋವಿಂದು, ಡಾ.ರಾಜ್ ಅವರೊಂದಿಗಿನ ಹೋರಾಟದ ದಿನಗಳ ಮೆಲುಕು ಹಾಕಿದರು. ಪುಸ್ತಕ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಓದುಗರಿಂದ ಅದ್ಭುತ ಪ್ರತಿಕ್ರಿಯೆ ಸಿಕ್ಕಿದೆ.

  Related Articles :-

  Shivanna, Sudeep For Naanu Parvati Book Release

  ಚಿತ್ರಲೋಕದಿಂದ `ನಾನು ಪಾರ್ವತಿ' ಇಂದು ಬಿಡುಗಡೆ

  Chitraloka's New Book Naanu Parvathi To Release Tomorrow

 • ನಾನೂ ಮದಕರಿ ಸಿನಿಮಾ ಮಾಡುತ್ತೇನೆ - ಸುದೀಪ್

  i will also make a film on makadakar nayaka says sudeep

  ಕನ್ನಡದಲ್ಲಿ ಚಿತ್ರದುರ್ಗದ ಮದಕರಿ ನಾಯಕನ ಕುರಿತು ಎರಡು ಸಿನಿಮಾ ಬರುವುದು ಈಗ ಖಚಿತವಾಗಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಹಾಕಿಕೊಂಡು, ರಾಕ್‍ಲೈನ್ ವೆಂಕಟೇಶ್ ಗಂಡುಗಲಿ ಮದಕರಿ ನಾಯಕ ಸಿನಿಮಾ ಮಾಡುತ್ತಿರುವುದಾಗಿ ಹೇಳಿದ್ದ ಬೆನ್ನಲ್ಲೇ ಸುದೀಪ್ ಅವರೇ ಮದಕರಿ ನಾಯಕ ಸಿನಿಮಾ ಮಾಡಬೇಕು ಎಂದು ಅಭಿಮಾನಿಗಳು ದುಂಬಾಲು ಬಿದ್ದಿದ್ದರು. ಈ ಕುರಿತು ಸುದೀಪ್ ಸುದೀರ್ಘ ಪತ್ರವನ್ನೇ ಬರೆದಿದ್ದಾರೆ. ತಾವು ಮದಕರಿ ನಾಯಕನ ಸಿನಿಮಾ ಮಾಡುತ್ತಿರುವುದು ನಿಜ ಎಂದಿದ್ದಾರೆ.

  ಮದಕರಿ ನಾಯಕನ ಕುರಿತು ರಿಸರ್ಚ್ ಕೆಲಸಕ್ಕೆ ಈಗಾಗಲೇ ಹಣವನ್ನೂ ಖರ್ಚು ಮಾಡಿರುವ ಸುದೀಪ್, ಒಂದು ತಂಡವನ್ನೇ ಆ ಕೆಲಸಕ್ಕೆ ಹಚ್ಚಿದ್ದಾರೆ. ಆ ತಂಡ ಸುಮಾರು ಒಂದೂವರೆ ವರ್ಷದಿಂದ ಕೆಲಸ ಮಾಡುತ್ತಿದೆ. ಸ್ಕ್ರಿಪ್ಟ್ ಕೆಲಸವೂ ನಡೆಯುತ್ತಿದೆ. ಮದಕರಿ ನಾಯಕನ ಕುರಿತು ಸಿನಿಮಾ ಮಾಡುವುದು ನನ್ನ ಕನಸು ಎಂದಿರುವ ಸುದೀಪ್, ರಾಕ್‍ಲೈನ್ ವೆಂಕಟೇಶ್ ಅವರ ನಿರ್ಮಾಣದ ಗಂಡುಗಲಿ ಮದಕರಿ ನಾಯಕ ಚಿತ್ರಕ್ಕೂ ಶುಭ ಹಾರೈಸಿದ್ದಾರೆ.

  ನನ್ನ ತಂಡದ ಕನಸನ್ನು ಭಗ್ನ ಮಾಡಲು ನಾನು ಬಯಸುವುದಿಲ್ಲ. ಅದರ ಬದಲಿಗೆ ಮಾಡಿ ಮಡಿಯುವುದೇ ಮೇಲು. ನಾನೂ ಒಬ್ಬ ಮದಕರಿ ಎಂದಿದ್ದಾರೆ ಸುದೀಪ್.

  ಅಲ್ಲಿಗೆ ಕನ್ನಡದಲ್ಲಿ ಒಬ್ಬ ಐತಿಹಾಸಿಕ ವ್ಯಕ್ತಿಯ ಕುರಿತಂತೆ ಎರಡು ಸಿನಿಮಾ ಬರಲಿದೆ ಎನ್ನುವುದು ಖಚಿತವಾಗಿದೆ. ಯಾರು ಮೊದಲು ಮದಕರಿ ನಾಯಕನಾಗುತ್ತಾರೆ ಎನ್ನುವುದಷ್ಟೇ ಸದ್ಯದ ಕುತೂಹಲ.

  Related Articles :-

  ಒಬ್ಬ ವ್ಯಕ್ತಿ.. ಎರಡು ಸಿನಿಮಾ.. ಇದೇ ಮೊದಲಲ್ಲ..!

  My Opinion on the Biopic on Veera Madhakari - Sudeep

 • ನಾಳೆಯಿಂದ ಬಿಗ್‍ಬಾಸ್ ಹವಾ

  big boss 6 to kick start from tomorrow

  ನಾಳೆಯಿಂದ ಕಿಚ್ಚ ಸುದೀಪ್ ಬಿಗ್‍ಬಾಸ್ ಮನೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ದಿ ವಿಲನ್ ಚಿತ್ರದಲ್ಲಿ ಅಬ್ಬರಿಸಿ ಬೊಬ್ಬಿರಿದಿರುವ ಕಿಚ್ಚ ಸುದೀಪ್, ಶಿವಣ್ಣನ ಜೊತೆ ಹಿಟ್ ಕೊಟ್ಟಿದ್ದಾರೆ. ಇದರ ನಡುವೆಯೇ ಬಿಗ್‍ಬಾಸ್ ಶೋ ಕೂಡಾ ಶುರುವಾಗಲಿದೆ.

  ಕನ್ನಡ, ತೆಲುಗು, ಹಿಂದಿ, ತಮಿಳು ಚಿತ್ರಗಳ ಶೂಟಿಂಗು, ಕ್ರಿಕೆಟ್ಟು, ಪ್ರವಾಸ, ಮನೆಯಲ್ಲಿದ್ದಾಗ ಅಡುಗೆ ಮಾಡೋದು.. ಹೀಗೆ ಜೀವನದ ಪ್ರತಿ ಕ್ಷಣವನ್ನೂ ಎಂಜಾಯ್ ಮಾಡುವ ಸುದೀಪ್, ಬಿಡುವು ಪಡೆದವರೇ ಅಲ್ಲ. ದಿ ವಿಲನ್ ತೆರೆಗೆ ಬರುತ್ತಿರುವಾಗ ಇನ್ನೊಂದು ಕಡೆ ಕೋಟಿಗೊಬ್ಬ-3, ಪೈಲ್ವಾನ್ ಚಿತ್ರಗಳಲ್ಲಿ ಬ್ಯುಸಿಯಾಗಿರೋ ಸುದೀಪ್, ತೆಲುಗಿನಲ್ಲಿ ಸೈರಾ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಹಿಂದಿಯಲ್ಲಿ ಸಲ್ಮಾನ್ ಜೊತೆ, ಹಾಲಿವುಡ್‍ನಲ್ಲಿ ಒಂದು ಸಿನಿಮಾ ಮಾಡುತ್ತಿರುವ ಸುದೀಪ್, ಬಿಗ್‍ಬಾಸ್‍ಗೂ ಸಮಯ ಹೊಂದಿಸಿಕೊಂಡಿದ್ದಾರೆ.

  ಈ ಬಾರಿಯೂ 17 ಸ್ಪರ್ಧಿಗಳು ಬಿಗ್‍ಬಾಸ್ ಮನೆಯಲ್ಲಿರ್ತಾರೆ. ಅರ್ಧ ಸೆಲಬ್ರಿಟಿಗಳಿರ್ತಾರೆ. ಉಳಿದರ್ಧ ಕಾಮನ್ ಮ್ಯಾನ್ ಕ್ಯಾಟಗರಿಯಿಂದ ಆಯ್ಕೆ ಮಾಡಿಕೊಳ್ಳಲಾಗಿದೆ. ಇದಕ್ಕಾಗಿ 1 ಲಕ್ಷಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದವಂತೆ.

  ಬಿಗ್‍ಬಾಸ್ ನನಗೆ ಯಾವಾಗಲೂ ಖುಷಿ ಕೊಡುವ ವೇದಿಕೆ. ಹೊಸ ಹೊಸ ವ್ಯಕ್ತಿಗಳು, ವ್ಯಕ್ತಿತ್ವಗಳು ಇಂಟರೆಸ್ಟಿಂಗ್ ಎಂದಿದ್ದಾರೆ ಸುದೀಪ್.

 • ನಿವೇದಿತಾಗೆ ಕೈ ಮುಗಿದ ಕಿಚ್ಚ..!

  sudeep praises niveditha

  ಬಿಗ್‍ಬಾಸ್ ಮನೆಯ ಬಾರ್ಬಿ ಡಾಲ್ ನಿವೇದಿತಾ ಗೌಡ, ತಮ್ಮ ಕಂಗ್ಲಿಷ್‍ನಿಂದಲೇ ಫೇಮಸ್ ಆದ ಹುಡುಗಿ. ವಿಚಿತ್ರ ಆ್ಯಕ್ಸೆಂಟ್‍ನ  ಭಾಷೆಯಿಂದಾಗಿ, ಬಿಗ್‍ಬಾಸ್ ಮನೆಗೆ ಎಂಟ್ರಿ ಕೊಟ್ಟ ದಿನದಿಂದಲೇ ಫೇಮಸ್ ಆದವರು. ವಯಸ್ಸಿನ್ನೂ ಚಿಕ್ಕದು. ಬಿಕಾಂ ಓದುತ್ತಿರುವ ಈ ಹುಡುಗಿಗೆ ಕನ್ನಡದ ಹಿರಿಯ ನಟ, ಬಿಗ್‍ಬಾಸ್ ನಿರೂಪಕ ಕಿಚ್ಚ ಸುದೀಪ್ ಕೈ ಮುಗಿದರು ಎಂದರೆ, ನಿವೇದಿತಾ ಅಂಥದ್ದೇನು ಮಾಡಿದರು ಎಂಬ ಕುತೂಹಲ ಸಹಜ.

  ಬಿಗ್‍ಬಾಸ್‍ನಲ್ಲಿ ಈ ವಾರ ಅವರ ಕುಟುಂಬದವರೊಂದಿಗೆ ಅರ್ಧ ಗಂಟೆ ಕಳೆಯುವ ಅವಕಾಶ ನೀಡಲಾಗಿತ್ತು. ಆದರೆ, ಅರ್ಧ ಗಂಟೆ ಸಂಪೂರ್ಣ ಇರಬೇಕು ಎಂದರೆ, ಅವರ ಸಹಸ್ಪರ್ಧಿ ಅದಕ್ಕೆ ಸಹಕರಿಸಬೇಕು. ಅರ್ಧ ಗಂಟೆ ಒಂಟಿ ಕಾಲಿನ ಟೇಬಲ್ ಮೇಲಿಟ್ಟ ಮಡಕೆ ಬಿದ್ದು ಒಡೆದು ಹೋಗದಂತೆ ತಡೆಯಬೇಕು. ಒಂಟಿ ಕಾಲಿನಲ್ಲಿ ಸರ್ಕಸ್ ಮಾಡುತ್ತಲೇ ಅದನ್ನು ನಿಭಾಯಿಸಬೇಕು. ಅರ್ಧ ಗಂಟೆ ಹಾಗೆ ನಿಲ್ಲುವುದು ಸುಲಭದ ಮಾತಲ್ಲ.

  ಆದರೆ, ಬಿಗ್‍ಬಾಸ್ ಸ್ಪರ್ಧಿ ದಿವಾಕರ್ ಅವರು ತಮ್ಮ ಪತ್ನಿ ಮಮತಾ ಅವರ ಜೊತೆ ಅರ್ಧಗಂಟೆ ಕಳೆಯುವ ಅವಕಾಶ ಸಿಕ್ಕಿತು. ಆ ಅವಕಾಶ ಸಿಗುವಂತೆ ಮಾಡಿದ್ದು ನಿವೇದಿತಾ ಗೌಡ. ಬೇರೆ ಯಾವ ಸ್ಪರ್ಧಿಗಳೂ ಮಾಡದಂತಹಾ ಈ ಸಾಹಸವನ್ನು ಕಷ್ಟಪಟ್ಟು ಮಾಡಿ, ಪತಿ-ಪತ್ನಿಯ ಮಾತುಕತೆಗೆ ಅವಕಾಶ ಕೊಟ್ಟ ನಿವೇದಿತಾ ಗೌಡ, ಅರ್ಧಗಂಟೆ ಕಳೆಯುವಷ್ಟರಲ್ಲಿ ಸುಸ್ತಾಗಿ ಹೋಗಿದ್ದರು.

  ಕಿಚ್ಚ ಸುದೀಪ್ ನಿವೇದಿತಾಗೆ ಕೈ ಮುಗಿದದ್ದು ಇದೇ ಕಾರಣಕ್ಕೆ. ನಿಮ್ಮ ಪರಿಶ್ರಮ, ತ್ಯಾಗಕ್ಕೆ ನನ್ನ ಧನ್ಯವಾದ ಎಂದು ಕೈಮುಗಿದರು ಸುದೀಪ್.

 • ಪವರ್ ಡ್ಯಾನ್ಸ್‍ಗೆ ಪೈಲ್ವಾನ್ ಕಿಚ್ಚ ವೇಯ್ಟಿಂಗ್..!

  pailwan awaiting for natasarvabhouma's power dance

  ಕಿಚ್ಚ ಸುದೀಪ್‍ರ ಡೆಡಿಕೇಷನ್, ಕುಸ್ತಿಯ ಪಟ್ಟುಗಳಿಗೆ ದೇಶದ ಚಿತ್ರೋದ್ಯಮದ ಗಣ್ಯರೆಲ್ಲ ವ್ಹಾವ್ ಎನ್ನುತ್ತಿದ್ದಾರೆ. ಸುದೀಪ್‍ಗೆ ಸಲಾಂ ಎನ್ನುತ್ತಿದ್ದಾರೆ. ಹಾಗೆಯೇ.. ಕನ್ನಡದ ಸ್ಟಾರ್ ನಿರ್ದೇಶಕ ಸಂತೋಷ್ ಆನಂದ್‍ರಾಮ್ ಕೂಡಾ ಸುದೀಪ್‍ರ ಪೈಲ್ವಾನ್ ಟೀಸರ್‍ನ್ನು ಹೊಗಳಿದ್ದರು. ಇಂತಹ ಸಾಧನೆಗಳ ಮೂಲಕವೇ ನೀವು ನಮಗೆಲ್ಲ ಸ್ಫೂರ್ತಿ ಎಂದು ಹೇಳಿ ಶುಭ ಹಾರೈಸಿದ್ದರು.

  ಸಂತೋಷ್ ಶುಭ ಹಾರೈಕೆಗೆ ಪ್ರತಿಕ್ರಿಯೆ ನೀಡಿರುವ ಕಿಚ್ಚ ಸುದೀಪ್,  ನಿಮ್ಮ ಮುಂದಿನ ಚಿತ್ರ ಯುವರತ್ನಕ್ಕಾಗಿ ಎದುರು ನೋಡುತ್ತಿರುವೆ. ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ಸ್ಪೀಡ್ ಡ್ಯಾನ್ಸ್‍ಗೆ ಕಾಯುತ್ತಿರುವೆ ಎಂದಿದ್ದಾರೆ.

 • ಪಾಕಿಸ್ತಾನದ ಅಭಿಮಾನಿ ಸುದೀಪ್‍ಗೆ ಕಣ್ಣು ತೆರೆಸಿದ್ದ ಕಥೆ

  sudeep's bangakok experience

  ನಮ್ಮ ಮಾತುಕತೆ ವರ್ತನೆಗಳಲ್ಲಿ ಬದಲಾವಣೆಗಳಾಗೋಕೆ ದೊಡ್ಡ ದೊಡ್ಡ ಘಟನೆಗಳೇ ನಡೆಯಬೇಕೆಂದೇನಿಲ್ಲ. ಸಣ್ಣ ಸಣ್ಣ ಘಟನೆ, ಪುಟ್ಟದೊಂದು ಮಾತು ಸಾಕು. ಕಿಚ್ಚ ಸುದೀಪ್ ಜೀವನದಲ್ಲೂ ಅಂಥಾದ್ದೊಂದು ಘಟನೆ ನಡೆದಿದೆ.

  ಚಿತ್ರವೊಂದರ ಶೂಟಿಂಗ್‍ಗೆ ಸುದೀಪ್ ಬ್ಯಾಂಕಾಕ್‍ಗೆ ಹೋಗಿದ್ದರಂತೆ. ಆಗ ನಡೆದಿರುವ ಘಟನೆ ಇದು.

  ಶೂಟಿಂಗ್ ಸೆಟ್‍ನಲ್ಲಿನ ಸಪ್ಪೆ ಸಪ್ಪೆ ಊಟ ತಿಂದು ಬೇಜಾರಾದ ಸುದೀಪ್ ಮತ್ತು ಜೊತೆಗಿದ್ದವರು ಖಾರದ ಊಟಕ್ಕೆ ರೆಸ್ಟೋರೆಂಟ್ ಹುಡುಕಿದ್ದಾರೆ. ಅಲ್ಲೊಂದು ರೆಸ್ಟೋರೆಂಟ್ ಕಂಡಿದೆ. ಊಟವೂ ಇಷ್ಟವಾಗಿದೆ. ಸುಮಾರು ಒಂದು ವಾರ ನಿರಂತರವಾಗಿ ಹೋಗುವಷ್ಟರಲ್ಲಿ ಅದು ಪಾಕಿಸ್ತಾನದ ವ್ಯಕ್ತಿ ನಡೆಸುತ್ತಿರುವ ರೆಸ್ಟೋರೆಂಟ್ ಎನ್ನುವುದು ಗೊತ್ತಾಗಿದೆ. ಪ್ರತಿದಿನ ಇವರಿಗೆ ಊಟ ಸಪ್ಲೈ ಮಾಡುತ್ತಿದ್ದ ಸರ್ವರ್ ಹುಡುಗನಂತೂ ಫ್ರೆಂಡ್ ಆಗಿ ಹೋಗಿದ್ದಾನೆ. 

  ಹೀಗಿರುವಾಗಲೇ ಒಂದು ದಿನ ಬಾಂಗ್ಲಾದೇಶದ ಮಹಿಳೆಯೊಬ್ಬರು ರೆಸ್ಟೋರೆಂಟ್‍ಗೆ ಊಟಕ್ಕೆ ಬಂದಿದ್ದಾರೆ. ಸುದೀಪ್‍ರನ್ನು ಗುರುತಿಸಿ ಬಂದು ಮಾತನಾಡಿಸಿದ್ದಾರೆ. ನಿಮ್ಮ ಮಕ್ಕೀ(ಈಗ ಚಿತ್ರದ ಹಿಂದಿ ವರ್ಷನ್) ನೋಡಿದ್ದೇನೆ. ಬಹಳ ಇಷ್ಟವಾಯಿತು ಎಂದು ಹೇಳಿ ಫೋಟೋ ತೆಗೆಸಿಕೊಳ್ಳುವ ಬಯಕೆ ತೋಡಿಕೊಂಡಿದ್ದಾರೆ. ಸುದೀಪ್ ಊಟ ಮಾಡುತ್ತಿದ್ದುದನ್ನು ನೋಡಿ, ತಾನು ಹೊರಗೆ ಕಾಯತ್ತಿರುತ್ತೇನೆ, ಮಿಸ್ ಮಾಡಬೇಡಿ ಎಂದು ಹೇಳಿದ್ದಾರೆ. ಊಟವನ್ನು ಅರ್ಧಕ್ಕೇ ನಿಲ್ಲಿಸಿದ ಸುದೀಪ್, ಅಭಿಮಾನಿಯ ಜೊತೆಗೆ ಫೋಟೋ ತೆಗೆಸಿಕೊಂಡು ನಂತರ ಊಟಕ್ಕೆ ಕುಳಿತಿದ್ದಾರೆ. 

  ಆಗ ರೆಸ್ಟೋರೆಂಟ್‍ನಲ್ಲಿ ಫ್ರೆಂಡ್ ಆಗಿದ್ದ ಸರ್ವರ್ ಹುಡುಗ ಬಂದು ಸುದೀಪ್ ಅವರಿಗೆ ಒಂದು ಘಟನೆ ಹೇಳಿದ್ದಾನೆ. ಬಾಲಿವುಡ್ ಗಾಯಕರೊಬ್ಬರು ಆಗಾಗ್ಗೆ ರೆಸ್ಟೋರೆಂಟ್‍ಗೆ ಬರುತ್ತಿರುತ್ತಾರಂತೆ. ಆದರೆ, ಅಭಿಮಾನಿಗಳು ಫೋಟೋ ತೆಗೆಸಿಕೊಳ್ಳಲು ಹೋದರೆ, ಬಾಯಿಗೆ ಬಂದಂತೆ ಬೈದು ಕಳಿಸುತ್ತಾರಂತೆ. ನೀವು ಡಿಫರೆಂಟ್ ಸರ್, ಊಟದ ಮಧ್ಯೆಯೇ ಎದ್ದು ಹೋಗಿ ಫೋಟೋ ತೆಗೆಸಿಕೊಂಡಿದ್ದು ಇಷ್ಟವಾಯಿತು ಎಂದಿದ್ದಾರೆ. ಇರಲಿ ಬಿಡಿ, ಅವರವರ ಸಮಸ್ಯೆ ಏನಿರುತ್ತೋ ಏನೋ.. ಏನ್ ಮಾಡೋಕಾಗುತ್ತೆ ಎಂದಿದ್ದಾರೆ ಸುದೀಪ್. ಆಗ ಆ ಹುಡುಗ ಕೇಳಿದ ಪ್ರಶ್ನೆ ಸುದೀಪ್ ಅವರನ್ನು ಚಿಂತಿಸುವಂತೆ ಮಾಡಿದೆ. 

  ಆ ಹುಡುಗ ಕೇಳಿದ ಪ್ರಶ್ನೆ ಇಷ್ಟೆ. `` ಸರ್, ನಾವೇಕೆ ನಿಮ್ಮನ್ನು ಪ್ರೀತಿಸಬೇಕು. ನೀವು ಹಣ ತಗೊಂಡು ಸಿನಿಮಾ ಮಾಡ್ತೀರಿ. ನಾವೂ ಹಣ ಕೊಟ್ಟು ಸಿನಿಮಾ ನೋಡ್ತೀವಿ. ಅಲ್ಲಿಗೆ ಲೆಕ್ಕಾಚಾರ ಚುಕ್ತಾ ಆಗಬೇಕಲ್ವಾ..? ಆದರೂ ನಾವು ನಿಮ್ಮನ್ನು ಪ್ರೀತಿಸ್ತೇವೆ. ಆದರೆ, ಅದೇ ಪ್ರೀತಿ, ಅಭಿಮಾನ ಸ್ಟಾರ್‍ಗಳಿಂದ ನಮಗೆ ಸಿಗಲ್ಲ. ಏಕೆ ಎಂದಿದ್ದಾರೆ.

  ಆ ಪ್ರಶ್ನೆ ನನಗೆ ನನ್ನೊಳಗೇ ಯೋಚಿಸುವಂತೆ ಮಾಡಿತು. ಅದಾದ ನಂತರ ಅಭಿಮಾನಿಗಳ ಜೊತೆ ಇನ್ನೂ ಹೆಚ್ಚಾಗಿ ಬೆರೆಯತೊಡಗಿದೆ ಎಂದಿದ್ದಾರೆ ಸುದೀಪ್.

 • ಪುನೀತ್ ಸುದೀಪ್ ಜೊತೆ ಜೊತೆಯಲಿ..

  sudeep, puneeth

  ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಮತ್ತು ಕಿಚ್ಚ ಸುದೀಪ್ ಒಟ್ಟಿಗೇ ತೆರೆ ಮೇಲೆ ಕಾಣಿಸಿಕೊಂಡರೆ ಹೇಗಿರುತ್ತೆ..? ಅಭಿಮಾನಿಗಳು ಹಬ್ಬ ಮಾಡ್ತಾರೆ ಬಿಡಿ ಅಂತೀರಾ. ಅಂಥಾದ್ದೊಂದು ಸನ್ನಿವೇಶ ಸೃಷ್ಟಿಯಾಗಿದೆ. ಆದರೆ, ಅದು ಬೆಳ್ಳಿತೆರೆಯಲ್ಲಿ ಅಲ್ಲ. ಕಿರುತೆರೆಯಲ್ಲಿ.

  ಇತ್ತೀಚೆಗಷ್ಟೇ ಪುನೀತ್ ರಾಜ್‍ಕುಮಾರ್ ಕಲರ್ಸ್ ಕನ್ನಡ ವಾಹಿನಿಯ ರಿಯಾಲಿಟಿ ಷೋವೊಂದರಲ್ಲಿ ಭಾಗವಹಿಸಲು ಒಪ್ಪಿಕೊಂಡಿದ್ದಾರೆ. ಆ ಷೋದ ಪ್ರೋಮೋ ಕೂಡಾ ಶೂಟಿಂಗ್ ಆಗಿದೆ. ಆದರೆ, ರಿಯಾಲಿಟಿ ಷೋನ ಕಾನ್ಸೆಪ್ಟ್‍ನ್ನು ಸಂಪೂರ್ಣ ಗುಟ್ಟಾಗಿಟ್ಟಿದ್ದಾರೆ.

  ಕೆಲವೇ ದಿನಗಳಲ್ಲಿ ಪ್ರೋಮೋ ರಿಲೀಸ್ ಆಗಬಹುದು. ಅಂದಹಾಗೆ ಅದೇ ಕಲರ್ಸ್ ಸೂಪರ್ ವಾಹಿನಿಯಲ್ಲಿ ಬಿಗ್‍ಬಾಸ್ ಶುರುವಾಗಲಿದ್ದು, ಅಲ್ಲಿ ಕಿಚ್ಚ ಇರುತ್ತಾರೆ. 

  ಅಂದ್ರೆ ಒಂದೇ ಚಾನೆಲ್‍ನಲ್ಲಿ ಎರಡು ರಿಯಾಲಿಟಿ ಷೋಗಳಿಗೆ ಒಂದರಲ್ಲಿ ಪುನೀತ್, ಇನ್ನೊಂದರಲ್ಲಿ ಸುದೀಪ್ ಇರುತ್ತಾರೆ. ಇಬ್ಬರು ಸ್ಟಾರ್‍ಗಳನ್ನು ಒಂದೇ ಚಾನೆಲ್‍ನಲ್ಲಿ ಸೇರಿಸುವ ಸಾಹಸವನ್ನು ಕಲರ್ಸ್ ಮಾಡಿದೆ. ಇನ್ನು ಕಾಯ್ತಾ ಇರಬೇಕು. ಅಷ್ಟೆ.

 • ಪೈಲ್ವಾನ್ ಅಂದ್ರೆ ಪೈಲ್ವಾನ್.. ಸ್ಪೆಷಲ್ ಪೈಲ್ವಾನ್

  sudeep's phailwan speciality

  ಪೈಲ್ವಾನ್. ಹೆಬ್ಬುಲಿ ನಂತರ ನಿರ್ದೇಶಕ ಕೃಷ್ಣ ಮತ್ತು ಸುದೀಪ್ ಮತ್ತೆ ಒಟ್ಟಾಗಿರುವ ಸಿನಿಮಾ. ಚಿತ್ರದಲ್ಲಿ ಸುದೀಪ್ ಬಾಕ್ಸರ್ ಆಗಿ ಕಾಣಿಸುತ್ತಿರುವುದು ಒಂದು ವಿಶೇಷವಾದರೆ, ಸುನಿಲ್ ಶೆಟ್ಟಿ ನಟಿಸುತ್ತಿರುವುದು ಇನ್ನೊಂದು ಬೋನಸ್. ಆದರೆ, ಸುನಿಲ್ ಶೆಟ್ಟಿ ಅವರದ್ದು ವಿಲನ್ ಪಾತ್ರ ಅಲ್ಲವಂತೆ. ಹಾಗಾದರೆ ಮತ್ತೇನು ಎಂದು ಕೇಳಿದರೆ, ಚಿತ್ರದ ಹಲವು ವಿಶೇಷಗಳನ್ನು ಹೊರಹಾಕಿದ್ದಾರೆ ನಿರ್ದೇಶಕ ಕೃಷ್ಣ.

  ಸುನಿಲ್ ಶೆಟ್ಟಿ ಅವರದ್ದು ಚಿತ್ರದಲ್ಲಿ ಪ್ರಮುಖ ಪಾತ್ರ. ವಿಲನ್ ಅಲ್ಲ. ಅವರ ಪಾತ್ರ ತುಂಬಾ ಸಾಫ್ಟ್ ಆಗಿದೆ.ಚಿತ್ರದಲ್ಲಿ ಖಳನಟರಾಗಿ ನಟಿಸುತ್ತಿರುವುದು ಕಬೀರ್ ಖಾನ್, ಶಶಾಂಕ್. 

  ಸುದೀಪ್ ಎರಡು ಶೇಡ್‍ನಲಿ ಕಾಣಿಸಿಕೊಳ್ತಾರೆ. ಒಂದು ಪಾತ್ರ ಸ್ಲಿಮ್ ಆಗಿದ್ದರೆ, ಇನ್ನೊಂದು ಪಾತ್ರ ಜಟ್ಟಿಯದ್ದು. ಹಾಗಂತ ಡಬಲ್ ಆ್ಯಕ್ಟಿಂಗ್ ಅಲ್ಲ.ಚಿತ್ರದ ಬಹುತೇಕ ಚಿತ್ರೀಕರಣ ಸೆಟ್‍ನಲ್ಲಿಯೇ ನಡೆಯಲಿದೆ. ಹೈದರಾಬಾದ್, ಬೆಂಗಳೂರಿನಲ್ಲಿ ದೊಡ್ಡ ಮಟ್ಟದ ಸೆಟ್ ಹಾಕಲಾಗುತ್ತಿದೆ.

 • ಪೈಲ್ವಾನ್ ಕಿಚ್ಚನ ತೂಕ ಈಗ ಎಷ್ಟು..?

  kiccha sudeep looses his weight for phailwan

  ಕನ್ನಡದಲ್ಲಿ ಫಿಟ್‍ನೆಸ್ ಮೈಂಟೇನ್ ಮಾಡುವ ಕೆಲವೇ ನಟರಲ್ಲಿ ಸುದೀಪ್ ಕೂಡಾ ಒಬ್ಬರು. ಅವರು ಮೊದಲಿನಿಂದಲೂ ತೀರಾ ದಪ್ಪಗೂ ಆಗಿಲ್ಲ. ತೀರಾ ತೆಳ್ಳಗೂ ಆಗಿಲ್ಲ. ಎಲ್ಲ ಓಕೆ.. ಕಿಚ್ಚ ಸುದೀಪ್ ಈಗ ಎಷ್ಟು ಕೆಜಿ ತೂಕವಿದ್ದಾರೆ..? 

  89 ಕೆಜಿ ತೂಗುತ್ತಿದ್ದ ಸುದೀಪ್, ಈಗ 73 ಕೆಜಿಗೆ ಇಳಿದಿದ್ದಾರೆ. 36 ಇದ್ದ ಎದೆಯ ಸುತ್ತಳತೆ ಈಗ 31.5ಕ್ಕೆ ಇಳಿದಿದೆ. ಎಲ್ಲದಕ್ಕೂ ಕಾರಣ.. ಪೈಲ್ವಾನ್ ಸಿನಿಮಾ. ಪೈಲ್ವಾನ್ ಸಿನಿಮಾಗಾಗಿ ಕಸರತ್ತು ಮಾಡುತ್ತಿರುವ ಸುದೀಪ್, ಇದಕ್ಕೆ ಸ್ಫೂರ್ತಿ ನೀಡಿದ ಪೈಲ್ವಾನ್ ಚಿತ್ರತಂಡ ಹಾಗೂ ನಟ ಕಬೀರ್ ದುಲ್ಹನ್ ಸಿಂಗ್‍ಗೆ ಥ್ಯಾಂಕ್ಸ್ ಹೇಳಿದ್ದಾರೆ.

 • ಪೈಲ್ವಾನ್ ಕಿಚ್ಚನ ಹೊಸ ಕಥೆ

  pailwan first look

  ಪೈಲ್ವಾನ್, ಸುದೀಪ್ ಅಭಿನಯದ ಈ ಚಿತ್ರ ಶೂಟಿಂಗ್ ಶುರುವಾಗುವ ಮುನ್ನವೇ ಭಾರಿ ನಿರೀಕ್ಷೆ ಹುಟ್ಟಿಸಿದೆ. ಆದರೆ, ಚಿತ್ರಕ್ಕೆ ಇನ್ನೂ ನಾಯಕಿ ಆಯ್ಕೆಯಾಗಿಲ್ಲ. ಚಿತ್ರದಲ್ಲಿ ನಾಯಕಿಯ ಪಾತ್ರಕ್ಕೆ ತುಂಬಾನೇ ಸ್ಕೋಪ್ ಇದೆ. ಸಾಮಾನ್ಯವಾಗಿ ಸ್ಟಾರ್ ನಟರ ಚಿತ್ರಗಳಲ್ಲಿ ನಾಯಕಿಯ ಪಾತ್ರಕ್ಕೆ ಅಷ್ಟೊಂದು ಪ್ರಾಮುಖ್ಯತೆ ಇರಲ್ಲ. ಆದರೆ, ಪೈಲ್ವಾನ್ ಚಿತ್ರದಲ್ಲಿ ನಾಯಕಿಯ ಪಾತ್ರಕ್ಕೆ ತುಂಬಾನೇ ಮಹತ್ವವಿದೆ. ಹೀಗಾಗಿ ನಾಯಕಿಯ ಆಯ್ಕೆ ನಿಧಾನವಾಗುತ್ತಿದೆ. ಕೆಲವರನ್ನು ಸಂಪರ್ಕಿಸಿದ್ದೇವೆ. ಇನ್ನೂ ಪೈನಲ್ ಆಗಿಲ್ಲ ಎಂದಿದ್ದಾರೆ ನಿರ್ದೇಶಕ ಕೃಷ್ಣ.

  ಸುದೀಪ್ ಅವರಿಗೆ ಪೈಲ್ವಾನ್ ಆಗಿ ರೂಪುಗೊಳ್ಳಲು ತರಬೇತಿ ಕೂಡಾ ನೀಡಲಾಗುವುದಂತೆ. ಅದಕ್ಕಾಗಿ ಎರಡು ಕ್ರೀಡಾ ಸಂಸ್ಥೆಗಳನ್ನು ಸಂಪರ್ಕಿಸಲಾಗಿದೆಯಂತೆ. ಪೈಲ್ವಾನ್ ಚಿತ್ರಕ್ಕೆ ಸುದೀಪ್ ಪೈಲ್ವಾನ್ ತರಬೇತಿ ಪಡೆದುಕೊಂಡೇ ಬಣ್ಣ ಹಚ್ಚಲಿದ್ದಾರೆ ಕಿಚ್ಚ.

  ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಲಿದ್ದಾರೆ. ಕರುಣಾಕರ್ ಕ್ಯಾಮೆರಾ ಕೆಲಸ ಮಾಡಲಿದ್ದಾರೆ. ಹೆಬ್ಬುಲಿಯಲ್ಲಿ ಅದ್ಭುತ ಸಾಹಸ ಸಂಯೋಜಿಸಿದ್ದ ರವಿವರ್ಮ, ಪೈಲ್ವಾನ್‍ಗೆ ಸಾಹಸ ನಿರ್ದೇಶಕ. ಕೆಲವು ಬಾಕ್ಸಿಂಗ್ ಹಾಗೂ ಕ್ಲೈಮಾಕ್ಸ್ ದೃಶ್ಯಗಳ ಚಿತ್ರೀಕರಣ ವಿದೇಶದಲ್ಲಿ ನಡೆಯಲಿದೆ. ಎಲ್ಲ ತಯಾರಿಯೂ ಮುಗಿದರೆ, ಅಕ್ಟೋಬರ್ ಮೊದಲ ವಾರದಲ್ಲಿ ಚಿತ್ರೀಕರಣ ಶುರುವಾಗಲಿದೆ.

  Related Articles :-

  ಪೈಲ್ವಾನ್ ಸುದೀಪ್​ಗೆ ಸೆಲಬ್ರಿಟಿಗಳ ಬಹುಪರಾಕ್..!

  ಪೈಲ್ವಾನ ಸುದೀಪ್..ಹೇಗಿರ್ತಾರೋ ನೋಡ್ಬೇಕು..

 • ಪೈಲ್ವಾನ್ ಮುಗಿದರೂ.. ಕಿಚ್ಚನಿಗದು ಅರ್ಥವಾಗಲೇ ಇಲ್ಲ..!

  sudeep completes phailwan shooting

  ಕಿಚ್ಚ ಸುದೀಪ್, ಕೃಷ್ಣ ಕಾಂಬಿನೇಷನ್ನಿನ ಪೈಲ್ವಾನ್ ಚಿತ್ರದ ಚಿತ್ರೀಕರಣ ಮುಗಿದಿದೆ. ಇದನ್ನು ಖುಷಿಯಿಂದ ಹೇಳಿಕೊಂಡಿರೋ ಕಿಚ್ಚ ಸುದೀಪ್, ಚಿತ್ರತಂಡಕ್ಕೆ ಒಂದು ಅಭಿನಂದನಾ ಪತ್ರವನ್ನೇ ಬರೆದುಬಿಟ್ಟಿದ್ದಾರೆ. ಚಿತ್ರದ ನಿರ್ದೇಶಕ ಕೃಷ್ಣಪ್ಪ, ಬಾಕ್ಸಿಂಗ್ ಸೀಕ್ವೆನ್ಸ್ ಕಂಪೋಸ್ ಮಾಡಿದ ಲಾರ್ನೆಲ್ ಸ್ಟುವೆಲ್, ಕುಸ್ತಿ ದೃಶ್ಯಗಳನ್ನು ಸಂಯೋಜಿಸಿದ ವಿಜಯ್ ಮಾಸ್ಟರ್, ಒಟ್ಟಾರೆ ಚಿತ್ರದ ಸಾಹಸ ನಿರ್ದೇಶನ ಮಾಡಿದ ರವಿವರ್ಮ.. ಹೀಗೆ ಚಿತ್ರತಂಡದ ಪ್ರತಿಯೊಬ್ಬರನ್ನೂ ಕೊಂಡಾಡಿದ್ದಾರೆ ಕಿಚ್ಚ ಸುದೀಪ್.

  ನನಗೆ ಕುಸ್ತಿ ಮತ್ತು ಬಾಕ್ಸಿಂಗ್ ಕಥೆ ಆಧರಿಸಿದ ಸಿನಿಮಾಗಳನ್ನು ನೋಡುವಾಗ, ನನಗೆ ಇಂಥದ್ದೊಂದು ಕಥೆ, ಚಾನ್ಸ್ ಸಿಗಬಾರದೇ ಎಂದುಕೊಳ್ಳುತ್ತಿದೆ. ಕೃಷ್ಣಪ್ಪ, ಒಂದೇ ಚಿತ್ರದಲ್ಲಿ ಕುಸ್ತಿ ಮತ್ತು ಬಾಕ್ಸಿಂಗ್ ಎರಡರ ಪರಿಚಯವನ್ನೂ ಮಾಡಿಕೊಟ್ಟರು. ನಾನು ಸ್ಟುವೆಲ್‍ರ ಗುರ್ ವಾಯ್ಸ್‍ನ್ನು ಮಿಸ್ ಮಾಡಿಕೊಳ್ಳಲಿದ್ದೇನೆ. ಕುಸ್ತಿ ದೃಶ್ಯಗಳಲ್ಲಿಯೂ ನನ್ನ ಮುಖದ ಮೇಲಿನ ನಗು ಮಾಸದಂತೆ ನೋಡಿಕೊಂಡ  ವಿಜಯ್ ಮಾಸ್ಟರ್‍ಗೆ ಅಭಿನಂದನೆ. ಹೆಚ್ಚು ಕಡಿಮೆ  ನನ್ನೊಂದಿಗೇ ವೃತ್ತಿ ಜೀವನ ಆರಂಭಿಸಿದ ರವಿವರ್ಮಾ ಸಾಧನೆ ನನಗೆ ಈಗಲೂ ಒಂದು ಬೆರಗು. ಇಡೀ ಚಿತ್ರತಂಡದ ಪ್ರತಿಯೊಬ್ಬ ಸದಸ್ಯರಿಗೂ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದಿದ್ದಾರೆ ಕಿಚ್ಚ.

  ಇಷ್ಟೆಲ್ಲ ಆದ ಮೇಲೆ ಅವರಿಗೆ ಅರ್ಥವಾಗದೇ ಹೋದ, ಉತ್ತರ ಸಿಗದ ಪ್ರಶ್ನೆಯಾಗಿಯೇ ಉಳಿದುಕೊಂಡಿದ್ದು ಒಂದೇ ಒಂದು.ಬಾಕ್ಸಿಂಗ್ ರಿಂಗ್ ಯಾಕೆ ಚೌಕಾಕಾರದಲ್ಲಿರುತ್ತೆ..? 

I Love You Movie Gallery

Rightbanner02_butterfly_inside

One Way Movie Gallery