` sudeep - chitraloka.com | Kannada Movie News, Reviews | Image

sudeep

 • ಡಾರ್ಲಿಂಗ್ ಜೊತೆ ಹೋದ ಪ್ರೇಮ್ - ರಕ್ಷಿತಾ ಮುನಿಸು - ಕಿಚ್ಚನ ಉತ್ತರ ಸೂಪರ್ಬ್

  rakshitha sudeep's friendly banter

  ಜೋಗಿ ಪ್ರೇಮ್ ತಮ್ಮ ಪತ್ನಿ ರಕ್ಷಿತಾರನ್ನು ಡಾರ್ಲಿಂಗ್ ಎನ್ನುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ, ಸುದೀಪ್‍ರನ್ನು ಪ್ರೇಮ್ ಯಾವಾಗಲೂ ಕರೆಯೋದು ಡಾರ್ಲಿಂಗ್ ಎಂತಲೇ. ಈಗ ಈ ಡಾರ್ಲಿಂಗ್ ಜೊತೆ ಸುದೀಪ್ ಮುಂಬೈಗೆ ಹೋಗಿದ್ದಾರೆ. ದಬಾಂಗ್ 3ಯಲ್ಲಿ ನಟಿಸುತ್ತಿರುವ ಸುದೀಪ್, ದಬಾಂಗ್ ಸೆಟ್ಟಿಗೆ ಪ್ರೇಮ್‍ರನ್ನು ಕರೆದುಕೊಂಡು ಹೋಗಿದ್ದಾರೆ.

  ಮುಂಬೈಗೆ ಪ್ರೇಮ್‍ನನ್ನು ಮಾತ್ರ ಕರೆದುಕೊಂಡು ಹೋಗಿದ್ದೀಯ. ನನ್ನನ್ನು ಬಿಟ್ಟು ಹೋಗಿದ್ದೀಯ, ನಾನ್ ಏನ್ ಮಾಡಿದ್ದೆ ನಿನಗೆ.. ಎಂದು ಹುಸಿಮುನಿಸು ತೋರಿದ್ದಾರೆ ರಕ್ಷಿತಾ. ಅದಕ್ಕೆ ಸುದೀಪ್ ಕೊಟ್ಟಿರುವ ಉತ್ತರವೂ ಮಜವಾಗಿದೆ.

  ದಿ ವಿಲನ್ ಶೂಟಿಂಗ್ ನಡೀತಿದ್ದಾಗ, ನಮ್ಮನ್ನು ನೋಡೋಕೆ ಒಂದ್ಸಲ ಕೂಡಾ ನೀನು ಸೆಟ್ಟಿಗೆ ಬರಲಿಲ್ಲ. ಅದಕ್ಕೆ ನಿಮ್ಮ ಪತಿಯೇ ನಿರ್ದೇಶಕ. ಎರಡು ವರ್ಷ ನಿರ್ದೇಶನ ಮಾಡಿದ್ದರು. ಚಂದ್ರಾ ಲೇಔಟ್‍ನಿಂದ ಮಿನರ್ವ ಮಿಲ್ಸ್‍ಗೇ ಬರೋಕೆ ನಿನಗೆ ಸಾಧ್ಯವಾಗಲಿಲ್ಲ, ಇನ್ನು ಮುಂಬೈಗೆ ಕರೆದುಕೊಂಡು ಬರೋದು ಯಾಕೆ ಅಂತಾ ಸುಮ್ಮನಾದ್ವಿ ಎಂದು ಉತ್ತರ ಕೊಟ್ಟಿದ್ದಾರೆ ಕಿಚ್ಚ ಸುದೀಪ್.

  ಇಷ್ಟಕ್ಕೂ ರಕ್ಷಿತಾ ಬೇಸರಕ್ಕೆ ಕಾರಣವೂ ಇದೆ. ಏನಂದ್ರೆ.. ರಕ್ಷಿತಾ ಸಲ್ಮಾನ್ ಖಾನ್‍ರ ಅಭಿಮಾನಿ. ಗೆಳೆಯ ಸುದೀಪ್, ಸಲ್ಮಾನ್ ಜೊತೆ ನಟಿಸುತ್ತಿದ್ದಾರೆ. ಪತಿ ಪ್ರೇಮ್ ಆ ಚಿತ್ರದ ಸೆಟ್ಟಿಗೆ ಹೋಗಿದ್ದಾರೆ. ನಾನ್ ಮಾತ್ರ ಇಲ್ಲ ಅಂದಾಗ ಬೇಜಾರಾಗೋದು ಕಾಮನ್ ಅಲ್ವೇ..

 • ಡಿಕೆ ಶಿವಕುಮಾರ್ ಐಟಿ ರೈಡ್ - ಸಿನಿಮಾ ಶೂಟಿಂಗ್‍ಗೂ ತಟ್ಟಿದ ಬಿಸಿ

  sudeep image

  ಇಂಧನ ಸಚಿವ ಡಿ.ಕೆ. ಶಿವಕುಮಾರ್ ಮನೆ, ಸಂಬಂಧಿಕರು ಸೇರಿದಂತೆ ಅವರ ಆಸ್ತಿಪಾಸ್ತಿಗಳ ಮೇಲೆಲ್ಲ ಐಟಿ ರೈಡ್ ಆಗಿದೆ. ದೇಶಾದ್ಯಂತ 39ಕ್ಕೂ ಹೆಚ್ಚು ಕಡೆ, ನೂರಾರು ಅಧಿಕಾರಿಗಳಿಂದ ನಡೆಯುತ್ತಿರುವ ಐಟಿ ರೈಡ್ ಬಿಸಿ, ಸಿನಿಮಾ ಶೂಟಿಂಗ್‍ಗೂ ತಟ್ಟಿದೆ.

  ಬಿಡದಿ ಸಮೀಪದ ಈಗಲ್‍ಟನ್ ರೆಸಾರ್ಟ್‍ನಲ್ಲಿ ಗುಜರಾತ್‍ನ ಶಾಸಕರಿದ್ದಾರೆ. ಅವರ ಆತಿಥ್ಯ ನೋಡಿಕೊಳ್ತಾ ಇರೋದು ಡಿ.ಕೆ. ಶಿವಕುಮಾರ್. ಒಂದು ಕಡೆ ರೈಡ್ ಆಗಿರುವ ಹಿನ್ನೆಲೆಯಲ್ಲಿ ಇಡೀ ರೆಸಾರ್ಟ್‍ಗೆ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಈ ಭದ್ರತೆಯ ಬಿಸಿ ತಟ್ಟಿದ್ದು ರಾಜು ಕನ್ನಡ ಮೀಡಿಯಂ ಚಿತ್ರದ ಶೂಟಿಂಗ್‍ಗೆ.

  ಚಿತ್ರದಲ್ಲಿ ಸುದೀಪ್ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದು, ಬೆಳಗ್ಗೆಯೇ ಇಡೀ ಚಿತ್ರತಂಡದ ಕಲಾವಿದರು, ತಂತ್ರಜ್ಞರು ಕ್ಯಾರವಾನ್ ಸಮೇತ ಹೋಗಿದ್ದರು. ಆದರೆ, ಬಿಗಿ ಭದ್ರತೆ ಹಿನ್ನೆಲೆಯಲ್ಲಿ ಚಿತ್ರತಂಡಕ್ಕೆ ರೆಸಾರ್ಟ್‍ಗೆ ಹೋಗಲು ಸಾಧ್ಯವಾಗಲಿಲ್ಲ. 

  ಸುಮಾರು ಅರ್ಧಗಂಟೆ ಇಡೀ ತಂಡವನ್ನು ತಪಾಸಣೆಗೊಳಪಡಿಸಿದ ಮೇಲೆ, ಚಿತ್ರತಂಡಕ್ಕೆ ರೆಸಾರ್ಟ್‍ನಲ್ಲಿ ಶೂಟಿಂಗ್ ಮಾಡಿಕೊಳ್ಳಲು ಬಿಟ್ಟುಕೊಟ್ಟಿದ್ದಾರೆ.

 • ಡ್ಯಾನ್ಸ್ ಮಾಡೋಕೆ ಕಿಚ್ಚ-ಸುನಿಲ್ ಶೆಟ್ಟಿ ರೆಡಿ

  suniel shetty sudeep's dance in pailwan

  ಕಿಚ್ಚ ಸುದೀಪ್ ಮತ್ತು ಸುನಿಲ್ ಶೆಟ್ಟಿ ಇಬ್ಬರಿಗೂ ಡ್ಯಾನ್ಸ್ ಎಂದರೆ ಅಷ್ಟಕ್ಕಷ್ಟೆ. ಅನಿವಾರ್ಯದ ಹೊರತಾಗಿ ಸ್ಟೆಪ್ಸ್ ಹಾಕಿದ್ದಿಲ್ಲ. ಈಗ ಅವರಿಬ್ಬರನ್ನೂ ಕುಣಿಸುತ್ತಿದ್ದಾರೆ ನಿರ್ದೇಶಕ ಕೃಷ್ಣ. ಪೈಲ್ವಾನ್ ಚಿತ್ರದ ಹಾಡಿನ ಶೂಟಿಂಗ್ ಶುರುವಾಗಿದ್ದು, ಸುನಿಲ್ ಶೆಟ್ಟಿ, ಟೀಂ ಸೇರಿಕೊಂಡಿದ್ದಾರೆ. ಹಾಡುಗಳ ಶೂಟಿಂಗ್ ನಡೆಯುತ್ತಿದೆ.

  ಹೈದರಾಬಾದ್‍ನಲ್ಲಿ ಇದಕ್ಕಾಗಿಯೇ ದೊಡ್ಡ ಸೆಟ್ ಹಾಕಲಾಗಿದೆ. ಕುಸ್ತಿಯಲ್ಲಿ ಗೆದ್ದ ಬಳಿಕ ಸಂಭ್ರಮಿಸುವ ಹಾಡು ಇದಾಗಿದ್ದು, ಹಾಡಿಗೆ ಸಾಹಿತ್ಯ ಬರೆದಿದ್ದಾ ವಿ.ನಾಗೇಂದ್ರ ಪ್ರಸಾದ್. 

 • ತಾಯಿಗೆ ತಕ್ಕ ಮಗನಿಗೆ ಕಿಚ್ಚನ ಪವರ್

  sudeep gives voice over to thayige thakka maga

  ತಾಯಿಗೆ ತಕ್ಕ ಮಗ. ಶಶಾಂಕ್ ನಿರ್ದೇಶನ, ನಿರ್ಮಾಣದ ಸಿನಿಮಾ. ಕೃಷ್ಣನ್ ಲವ್ ಸ್ಟೋರಿ ಮತ್ತು ಕೃಷ್ಣ ಲೀಲಾ ನಂತರ ಅಜೇಯ್ ರಾವ್ ಮತ್ತು ಶಶಾಂಕ್ ಮತ್ತೊಮ್ಮೆ ಜೊತೆಯಾಗಿರುವ ಸಿನಿಮಾ. ಚಿತ್ರದ ಪ್ರಮುಖ ತಾಯಿಯ ಪಾತ್ರದಲ್ಲಿರೋದು ಸುಮಲತಾ. ಮೊದಲೇ ಅಣ್ಣಾವ್ರ ಹಳೆಯ ಸೂಪರ್ ಹಿಟ್ ಚಿತ್ರದ ಟೈಟಲ್. ಹೀಗೆ ಹಲವು ನಿರೀಕ್ಷೆ ಹುಟ್ಟಿಸಿರುವ ಸಿನಿಮಾಗೆ ಈಗ ಇನ್ನೊಂದು ಪವರ್ ಕೊಟ್ಟಿದ್ದಾರೆ ಕಿಚ್ಚ ಸುದೀಪ್.

  ತಾಯಿಗೆ ತಕ್ಕ ಮಗ ಚಿತ್ರಕ್ಕೆ ಹಿನ್ನೆಲೆ ಧ್ವನಿ ನೀಡಿದ್ದಾರೆ ಸುದೀಪ್. ಆಶಿಕಾ ರಂಗನಾಥ್ ಚಿತ್ರದ ನಾಯಕಿ. ಆಗಸ್ಟ್ 31ಕ್ಕೆ ಚಿತ್ರದ ಟ್ರೈಲರ್ ರಿಲೀಸ್ ಆಗಲಿದ್ದು, ಅದಕ್ಕೊಂದು ಟೀಸರ್ ಕೂಡಾ ರಿಲೀಸ್ ಮಾಡಿದ್ದಾರೆ ಶಶಾಂಕ್.

 • ತುಳು ಭಾಷೆಯ ಕಟಪ್ಪಾಡಿ ಕಟ್ಟಪ್ಪನಿಗೆ ಕಿಚ್ಚನ ಪ್ರೋತ್ಸಾಹ

  sudeep supports coastalwood

  ಕಿಚ್ಚ ಸುದೀಪ್ ಬರ್ತಾರೆ ಅಂದ್ರೆ, ಪ್ರತಿಯೊಬ್ಬರೂ ಸಂಭ್ರಮಿಸ್ತಾರೆ. ಈಗ ಸಂಭ್ರಮಿಸುವ ಸರದಿ ತುಳು ಚಿತ್ರರಂಗದ್ದು. ಕನ್ನಡದ ಉಪಭಾಷೆಯಾಗಿರುವ ತುಳು, ತನ್ನದೇ ಆದ ವೈಶಿಷ್ಟ್ಯ ಹೊಂದಿರುವ ಭಾಷೆ. ಕರಾವಳಿ ಭಾಗದಲ್ಲಿ ತನ್ನದೇ ಆದ ಸೊಗಡಿನಿಂದ ಜನಭಾಷೆಯಾಗಿರುವ ತುಳುವಿನಲ್ಲಿಯೇ ಪ್ರತ್ಯೇಕ ಚಿತ್ರಗಳು ಬರುತ್ತಿವೆ. ಆದರೆ, ಆ ಚಿತ್ರಗಳಿನ್ನೂ ಕನ್ನಡದ ಮುಖ್ಯವಾಹಿನಿಗೆ ಬಂದಿಲ್ಲ. ತುಳು ಸೀಮೆಯ ಗಡಿ ದಾಟಿಲ್ಲ. 

  ಹೀಗೆ ತನ್ನದೇ ಆದ ಇತಿಮಿತಿಯಲ್ಲಿ ಬೆಳೆಯುತ್ತಿರುವ ತುಳು ಚಿತ್ರರಂಗಕ್ಕೆ ಸಂಭ್ರಮದ ಕಿಚ್ಚು ಹಚ್ಚಿರುವುದು ಕಿಚ್ಚ ಸುದೀಪ್. ತುಳು ಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷರೂ ಆಗಿರುವ ರಾಜೇಶ್ ಬ್ರಹ್ಮಾವರ, ತುಳುವಿನಲ್ಲಿ ಕಟಪಾಡಿ ಕಟ್ಟಪ್ಪ ಅನ್ನೋ ಸಿನಿಮಾ ನಿರ್ಮಿಸಿದ್ದಾರೆ. ರಿಲೀಸ್‍ಗೆ ರೆಡಿಯಾಗಿರೋ ಚಿತ್ರದ ಆಡಿಯೊ ಬಿಡುಗಡೆಗೆ ಅತಿಥಿಯಾಗಿರೋದು ಕಿಚ್ಚ ಸುದೀಪ್.

  ಕೋಸ್ಟಲ್‍ವುಡ್‍ನ ಸಿನಿಮಾ ಪ್ರಚಾರಕ್ಕೆ ಸ್ಯಾಂಡಲ್‍ವುಡ್‍ನ ಸ್ಟಾರ್ ನಟರೊಬ್ಬರು ಮುಂದಾಗಿರುವುದು ಸಹಜವಾಗಿಯೇ ತುಳು ಚಿತ್ರರಂಗದ ಉತ್ಸಾಹ ಹೆಚ್ಚಿಸಿದೆ.

 • ತೆಲುಗಿನಲ್ಲೂ ಕೋಟಿಗೊಬ್ಬನ ದರ್ಬಾರ್

  sudeep, nitya menon starrer kotigobba 2

  ಕಿಚ್ಚ ಸುದೀಪ್ ಹಾಗೂ ನಿತ್ಯಾ ಮೆನನ್ ಅಭಿನಯದ ಕೋಟಿಗೊಬ್ಬ-2 ಚಿತ್ರ, ಕನ್ನಡದಲ್ಲಿ ಸೂಪರ್ ಹಿಟ್ ಆಗಿತ್ತು. ಬಾಕ್ಸಾಫೀಸ್‍ನಲ್ಲೂ ದಾಖಲೆ ಬರೆದಿತ್ತು. ಈಗ ಅದೇ ಸಿನಿಮಾ ತೆಲುಗಿಗೆ ಕೋಟಿಕೊಕ್ಕುಡು ಹೆಸರಿನಲ್ಲಿ ರಿಲೀಸ್ ಆಗಿದೆ. ತೆಲುಗಿನಲ್ಲಿ ಈಗಾಗಲೇ ಥಿಯೇಟರ್‍ನಲ್ಲಿ ಅಭಿಮಾನಿಗಳನ್ನು ಆಕರ್ಷಿಸಿರುವ ಕೋಟಿಕೊಕ್ಕುಡು ಚಿತ್ರವನ್ನು ಖ್ಯಾತ ನಿರ್ಮಾಪಕ ಬಿಎ ರಾಜು ವಿತರಣೆ ಮಾಡಿದ್ದಾರೆ.

  ಈಗ ಚಿತ್ರದ ನಂತರ ತೆಲುಗಿನಲ್ಲೂ ದೊಡ್ಡ ಮಾರ್ಕೆಟ್ ಸೃಷ್ಟಿಸಿಕೊಂಡಿರುವ ಸುದೀಪ್ ಸಿನಿಮಾ, ತೆಲುಗಿನಲ್ಲೂ ದಾಖಲೆ ಬರೆಯುವ ಸನ್ನಾಹದಲ್ಲಿದೆ. ಚಿತ್ರತಂಡಕ್ಕೆ ಶುಭ ಕೋರಿದ್ದಾರೆ ಕಿಚ್ಚ ಸುದೀಪ್.

   

 • ತ್ರಿಮೂರ್ತಿಗಳಿಗೆ ಹ್ಯಾಟ್ಸಾಫ್ ಎಂದ ಕಿಚ್ಚ

  sudeep applauds to trimurthi

  ಕಲಾವಿದರ ಸಂಘಕ್ಕೊಂದು ಸ್ವಂತ ಕಟ್ಟಡ. ಅದು ಕನ್ನಡ ಚಿತ್ರರಂಗದ ಕಲಾವಿದರ ಹಲವು ವರ್ಷಗಳ ಕನಸು. ಡಾ.ರಾಜ್ ಇದ್ದಾಗ ಚಿಗುರಿದ ಆ ಕನಸು ನನಸಾಗಿದ್ದು ಇತ್ತೀಚೆಗೆ. ಕಲಾವಿದರ ಸಂಘದ ಕಟ್ಟಡ ಉದ್ಘಾಟನೆಯಾಗಿದ್ದು ಕೂಡಾ ಇತ್ತೀಚೆಗೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಆ ಕಟ್ಟಡವನ್ನು ಉದ್ಘಾಟಿಸಿ, ಚಿತ್ರರಂಗದವರ ಜೊತೆ ಸಂಭ್ರಮಿಸಿ ಹೋಗಿದ್ದರು.

  ಕಲಾವಿದರ ಸಂಘದ ಕಟ್ಟಡ ನಿರ್ಮಾಣ ಕುರಿತಂತೆ ಕಿಚ್ಚ ಸುದೀಪ್ ವಿಶೇಸವಾಗಿ ಮೂವರಿಗೆ ಥ್ಯಾಂಕ್ಸ್ ಹೇಳಿದ್ದಾರೆ. ಅಂಬರೀಷ್, ರಾಕ್‍ಲೈನ್ ವೆಂಕಟೇಶ್ ಮತ್ತು ದೊಡ್ಡಣ್ಣ. ಇಡೀ ಕಟ್ಟಡದ ಕನಸನ್ನು ನನಸಾಗಿದ್ದು ಒಬ್ಬ ವ್ಯಕ್ತಿ. ಅದು ಅಂಬರೀಷ್ ಸರ್. ಅವರ ಜೊತೆ ಗಟ್ಟಿಯಾಗಿ ನಿಂತವರು ಇಬ್ಬರು. ರಾಕ್‍ಲೈನ್ ವೆಂಕಟೇಶ್ ಮತ್ತು ದೊಡ್ಡಣ್ಣ ಎಂದಿದ್ದಾರೆ ಸುದೀಪ್.

  ಕಟ್ಟಡ ಉದ್ಘಾಟನೆ ಸಮಾರಂಭದ ಒಂದು ಗ್ರೂಪ್ ಫೋಟೋ ಟ್ವೀಟ್ ಮಾಡಿರುವ ಸುದೀಪ್, ನೋಡೋಕೆ ಇದು ಸಾಮಾನ್ಯ ಗ್ರೂಪ್ ಫೋಟೋದಂತೆ ಕಾಣುತ್ತೆ. ಆದರೆ, ಇದರ ಹಿಂದೆ ನಾವೆಲ್ಲ ಸೆಲ್ಯೂಟ್ ಹೊಡೆಯಬೇಕಾದ ಸಾಧಕರಿದ್ದಾರೆ ಎಂದು ಸ್ಮರಿಸಿದ್ದಾರೆ ಕಿಚ್ಚ ಸುದೀಪ್.

   

 • ದಚ್ಚುಗೆ ಕಿಚ್ಚನ ಹಾರೈಕೆ

  sudeep wishes darshan a speedy recovery

  ಚಾಲೆಂಜಿಂಗ್ ಸ್ಟಾರ್ ದರ್ಶನ್, ಮೈಸೂರಿನಲ್ಲಿ ಅಪಘಾತಕ್ಕೀಡಾಗಿ ಗುಣಮುಖರಾಗುತ್ತಿದ್ದಾರೆ. ಅವರ ಬಲಗೈ ಮೂಳೆ ಮುರಿದಿದ್ದು, 25 ಹೊಲಿಗೆ ಹಾಕಲಾಗಿದೆ. ಅಭಿಮಾನಿಗಳಿಗೂ ಆತಂಕಪಡಬೇಡಿ ಎಂದು ಮನವಿ ಮಾಡಿರುವ ದರ್ಶನ್, ಇನ್ನೂ ಎರಡು ದಿನ ರೆಸ್ಟ್ ಪಡೆಯಲಿದ್ದಾರೆ. ದರ್ಶನ್ ಗುಣಮುಖರಾಗಿರುವುದರ ಬಗ್ಗೆ ಕಿಚ್ಚ ಸುದೀಪ್ ಸಂತಸ ವ್ಯಕ್ತಪಡಿಸಿದ್ದಾರೆ.

  ನೀವು ಗುಣಮುಖರಾಗಿದ್ದೀರಿ ಎಂದು ತಿಳಿದು ಸಂತಸವಾಯಿತು. ಆದಷ್ಟು ಬೇಗ ಆರೋಗ್ಯವಂತನಾಗಿ ಬಾ ಗೆಳೆಯ ಎಂದು ಟ್ವೀಟ್ ಮಾಡಿದ್ದಾರೆ.

 • ದಬಾಂಗ್ 3ಗೆ ಸುದೀಪ್..?

  sudeep in dabang 3 ?

  ಸಲ್ಮಾನ್ ಖಾನ್ ಅಭಿನಯದ ದಬಾಂಗ್ 3 ಸಿನಿಮಾದಲ್ಲಿ ಸುದೀಪ್ ನಟಿಸಲಿದ್ದಾರಂತೆ ಅನ್ನೋ ಸುದ್ದಿ ಈಗ ಗಾಂಧಿನಗರದ ಹಾಟ್‍ನ್ಯೂಸ್. ಕಿಚ್ಚ ಸುದೀಪ್‍ಗೆ ಬಾಲಿವುಡ್ ಹೊಸದಲ್ಲ. ಈಗಾಗಲೇ ಕೆಲವು ಚಿತ್ರಗಳಲ್ಲಿ ನಟಿಸಿರುವ ಸುದೀಪ್, ಅಮಿತಾಬ್ ಬಚ್ಚನ್‍ರಂತಹ ದಿಗ್ಗಜನಿಂದಲೇ ಮೆಚ್ಚುಗೆ ಗಳಿಸಿರುವ ಕಲಾವಿದ. ದಬಾಂಗ್ 3 ಚಿತ್ರದಲ್ಲಿ ಸುದೀಪ್ ನಟಿಸುತ್ತಿರುವುದನ್ನು ಸುದೀಪ್ ಅಧಿಕೃತವಾಗಿ ಹೇಳಿಲ್ಲವಾದರೂ ಸುದ್ದಿಯನ್ನು ನಿರಾಕರಿಸಿಲ್ಲ.

  ಚಿತ್ರದಲ್ಲಿ ಸುದೀಪ್ ವಿಲನ್ ಆಗಿ ನಟಿಸುತ್ತಿಲ್ಲವಂತೆ. ಬದಲಿಗೆ ಅತ್ಯಂತ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ಧಾರೆ ಎನ್ನುವುದು ಒಂದು ಸುದ್ದಿಯಾದರೆ, ಇಲ್ಲ.. ಇಲ್ಲ.. ಸುದೀಪ್ ವಿಲನ್ ಪಾತ್ರದಲ್ಲೇ ಕಾಣಿಸಿಕೊಳ್ಳುತ್ತಿದ್ಧಾರೆ ಎನ್ನುತ್ತಿದೆ ಇನ್ನೊಂದು ಮೂಲ. ಸಲ್ಮಾನ್ ಸೋದರ ಅರ್ಬಾಜ್ ಖಾನ್, ಸುದೀಪ್‍ರ ಆತ್ಮೀಯ ಗೆಳೆಯ. ಈ ಗೆಳೆತನವೇ ಸುದೀಪ್ ಅವರನ್ನು ದಬಾಂಗ್ 3ಗೆ ಕರೆದೊಯ್ಯುತ್ತಿದೆ. 

  ಈ ಮೊದಲೇ ಸುದೀಪ್ ಟೈಗರ್ ಜಿಂದಾ ಹೈ ಚಿತ್ರದಲ್ಲಿ ಸಲ್ಮಾನ್ ಎದುರು ನಟಿಸಬೇಕಿತ್ತು. ಡೇಟ್ಸ್ ಸಮಸ್ಯೆಯಿಂದಾಗಿ ಆ ಚಿತ್ರವನ್ನು ಸುದೀಪ್ ಕೈಬಿಟ್ಟಿದ್ದರು. ಈಗ ಮತ್ತೊಮ್ಮೆ ಚಾನ್ಸ್. 

 • ದರ್ಶನ್ ಕುರುಕ್ಷೇತ್ರಕ್ಕೆ ಸುದೀಪ್ ಶುಭಾಶಯ - ಅಭಿಮಾನಿಗಳ ಬೇಡಿಕೆ ಒಂದೇ..

  sudeep, darshan

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಇತ್ತೀಚೆಗೆ ನಟ ಸುದೀಪ್ ಬಗ್ಗೆ ಬೇಸರಗೊಂಡಿದ್ದರು. ತಾವಿಬ್ಬರೂ ಗೆಳೆಯರೇ ಅಲ್ಲ, ವೃತ್ತಿ ಬದುಕಿನ ಜೊತೆಗಾರರಷ್ಟೇ ಎಂದಿದ್ದರು. ಅದಕ್ಕೂ ಮುನ್ನ ಟ್ವಿಟರ್‍ನಲ್ಲಿ ಸುದೀಪ್‍ರನ್ನು ಅನ್‍ಫಾಲೋ ಮಾಡಿದ್ದರು. ಇಬ್ಬರಲ್ಲೂ ಕನ್ನಡ ಚಿತ್ರರಂಗದ ಅಪರೂಪದ ಗೆಳೆತನವನ್ನು ಕಾಣುತ್ತಿದ್ದ ಅಭಿಮಾನಿಗಳಿಗೆ ಅದು ಆಘಾತವನ್ನೇ ತಂದಿತ್ತು.

  ಈಗ ಸುದೀಪ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಪ್ರೀತಿಯಿಂದ.. ತಮ್ಮ ಟ್ವಿಟರ್ ಖಾತೆಯಲ್ಲಿ ನಟ ದರ್ಶನ್ ಅಭಿನಯದ 50ನೇ ಚಿತ್ರ ಕುರುಕ್ಷೇತ್ರಕ್ಕೆ ಶುಭ ಕೋರಿದ್ದಾರೆ. ದರ್ಶನ್ ಕಿರೀಟಕ್ಕೆ ಇನ್ನೊಂದು ಗರಿ ಸೇರ್ಪಡೆಯಾಗಲಿದೆ. ಆ ಚಿತ್ರದ ದುರ್ಯೋಧನನ ಪಾತ್ರವನ್ನು ದರ್ಶನ್ ಬಿಟ್ಟರೆ ಮಿಕ್ಕವರ್ಯಾರಿಂದಲೂ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ. ಅಂದಹಾಗೆ ಸುದೀಪ್ ಇಂಥಾದ್ದೊಂದು ಟ್ವೀಟ್ ಮಾಡಿರುವುದು ಸ್ನೇಹಿತರ ದಿನಾಚರಣೆಯ ಸಂಭ್ರಮದಲ್ಲಿದ್ದಾಗ..

  ಸುದೀಪ್‍ರ ಈ ಒಂದು ಟ್ವೀಟ್, ಈ ಒಂದು ಸ್ನೇಹ ಸಂದೇಶ.. ಇಬ್ಬರೂ ನಟರ ಅಭಿಮಾನಿಗಳಲ್ಲಿ ಉತ್ಸಾಹ ಮೂಡಿಸಿದೆ. ಟ್ವಿಟರ್‍ನಲ್ಲಿ, ಫೇಸ್‍ಬುಕ್‍ನಲ್ಲಿ ಅಭಿಮಾನಿಗಳದ್ದು ಒಂದೇ ಬೇಡಿಕೆ. ನೀವಿಬ್ಬರೂ ಮೊದಲಿನಂತೆ ಗೆಳೆಯರಾಗಿರಿ, ಒಟ್ಟಿಗೇ ಸಿನಿಮಾ ಮಾಡಿ, ಒಬ್ಬರ ಗೆಲುವಿಗೆ ಒಬ್ಬರು ಜೊತೆಯಾಗಿ.. ಹೀಗೆ ಅಭಿಮಾನಿಗಳೆಲ್ಲ ಇಬ್ಬರೂ ನಟರ ಮೇಲೆ ಪ್ರೀತಿಯ ಬಂಧನವನ್ನೇ ಹೇರುತ್ತಿದ್ದಾರೆ. ಅಭಿಮಾನಿಗಳ ಪ್ರೀತಿಯ ಆಗ್ರಹಕ್ಕೆ ದರ್ಶನ್, ಸುದೀಪ್ ಏನಂತಾರೆ..? ಕಾದು ನೋಡೋಣ.

  Related Articles :-

  Sudeep Wishes Kurukshetra

 • ದರ್ಶನ್ ಗಾಗಿ ದುರ್ಗದ ಹುಲಿ ಕೈಬಿಟ್ಟ ಕಿಚ್ಚ

  sudeep drops madakari movie nayaka project

  ಕಿಚ್ಚ ಸುದೀಪ್ ದುರ್ಗದ ಹುಲಿ ಚಿತ್ರವನ್ನು ಕೈಬಿಟ್ಟಿದ್ದಾರೆ. ಮದಕರಿ ನಾಯಕನ ಕುರಿತು ಚಿತ್ರ ಮಾಡುವ ಯೋಜನೆಯನ್ನು ಕೈಬಿಟ್ಟು, ವಿವಾದಕ್ಕೆ ತೆರೆ ಎಳೆದಿದ್ದಾರೆ. ದುರ್ಗದ ಹುಲಿ ಕೈಬಿಡುವುದಾಗಿ ಹೇಳಿರುವ ಸುದೀಪ್, ನಮ್ಮವರಿಗಾಗಿ.. ನಮ್ಮವರ ಖುಷಿಗಾಗಿ ತ್ಯಾಗ ಮಾಡುವುದೇ ಒಳ್ಳೆಯದು ಎಂಬ ಸಂದೇಶ ರವಾನಿಸಿದ್ದಾರೆ.

  ಇತ್ತೀಚೆಗೆ ಸುದೀಪ್ ಅವರನ್ನು ಭೇಟಿ ಮಾಡಿದ್ದ ರಾಕ್‍ಲೈನ್ ವೆಂಕಟೇಶ್ ಅವರಿಗೆ ಸುದೀಪ್ `ನೀವು ನಮ್ಮ ಚಿತ್ರರಂಗದ ನಿರ್ಮಾಪಕರು. ದರ್ಶನ್ ಕೂಡಾ ನಮ್ಮ ಚಿತ್ರರಂಗದ ಹೀರೋ. ನಾನೂ ನಿಮ್ಮವನೇ. ಒಂದೊಳ್ಳೆ ಕಥೆಗಾಗಿ ನಾನು.. ನೀವು ಮುನಿಸಿಕೊಳ್ಳುವುದು ಬೇಡ. ಖುಷಿಯಾಗಿ ವೀರ ಮದಕರಿ ಚಿತ್ರ ಮಾಡಿ'' ಎಂದು ಹೇಳಿದ್ದಾರಂತೆ.

 • ದರ್ಶನ್ ಜೊತೆ ನಟಿಸೋಕೆ ನಾನ್ ರೆಡಿ - ಕಿಚ್ಚ ಸುದೀಪ

  sudeep ready to act with darshan

  ಕಿಚ್ಚ ಸುದೀಪ್ ಮತ್ತು ದರ್ಶನ್ ಚಿತ್ರರಂಗಕ್ಕೆ ಒಟ್ಟಿಗೇ ಬಂದವರು. ಆದರೆ, ಇಬ್ಬರನ್ನೂ ಒಂದೇ ಚಿತ್ರದಲ್ಲಿ ನೋಡುವ ಭಾಗ್ಯ ಕನ್ನಡಿಗರಿಗೆ ಇನ್ನೂ ಸಿಕ್ಕಿಲ್ಲ. ಇಬ್ಬರು ಸ್ಟಾರ್‍ಗಳು ಒಟ್ಟಿಗೇ ನಟಿಸೋದು ಯಾವಾಗ ಅನ್ನೋದು ಅಭಿಮಾನಿಗಳ ಪ್ರಶ್ನೆ. ಅಂತಹ ಒಬ್ಬ ಅಭಿಮಾನಿಯ ಪ್ರಶ್ನೆಗೆ ಕಿಚ್ಚ ಸುದೀಪ್ ಅಷ್ಟೇ ಪ್ರೀತಿಯಿಂದ ಉತ್ತರ ಕೊಟ್ಟಿದ್ದಾರೆ. ದರ್ಶನ್ ಅಂದು.. ಇಂದೂ.. ಎಂದೆಂದೂ ನನ್ನ ಸ್ನೇಹಿತನೇ ಎಂದಿದ್ದಾರೆ ಸುದೀಪ್.

  ಒಳ್ಳೆಯ ಸ್ಕ್ರಿಪ್ಟ್ ಸಿಕ್ಕರೆ, ದರ್ಶನ್ ಜೊತೆ ನಟಿಸೋಕೆ ನಾನ್ ರೆಡಿ ಎಂದಿದ್ದಾರೆ. ಸುದೀಪ್. ಅವರು ಕಾಯುತ್ತಿರುವ ಒಳ್ಳೆಯ ಸ್ಕ್ರಿಪ್ಟ್ ಅವರಿಬ್ಬರಿಗೂ ಬೇಗ ಸಿಗಲಿ.

   

 • ದರ್ಶನ್ ನಿಜಕ್ಕೂ ಅದೃಷ್ಟವಂತ, ಅಂತಹ ಅವಕಾಶ ಯಾರಿಗೂ ಸಿಕ್ಕಲ್ಲ - ಸುದೀಪ್

  darshan double lucky

  ದರ್ಶನ್ ಅಭಿನಯದ ಕುರುಕ್ಷೇತ್ರ ಚಿತ್ರ ಸೆಟ್ಟೇರಿದ ಮಾರನೇ ದಿನ ಸುದೀಪ್ ಟ್ವಿಟರ್ ಮೂಲಕ ದರ್ಶನ್ ಮತ್ತು ಕುರುಕ್ಷೇತ್ರ ತಂಡಕ್ಕೆ ಶುಭ ಹಾರೈಸಿದ್ದರು. ಇಂತಹ ಪ್ರಯತ್ನಗಳು ನಡೆಯುತ್ತಲೇ ಇರಬೇಕು ಎಂದಿದ್ದರು. ಸುದೀಪ್‍ರ ಈ ಸ್ವಯಂಪ್ರೇರಿತ ಮೆಚ್ಚುಗೆ ಅಭಿಮಾನಿಗಳಲ್ಲಿ ಹೊಸ ಉತ್ಸಾಹವನ್ನೇ ಮೂಡಿಸಿತ್ತು.

  ಸುವರ್ಣ ನ್ಯೂಸ್‍ನಲ್ಲಿ ವಿಶೇಷ ಸಂದರ್ಶನದಲ್ಲಿ ಭಾಗವಹಿಸಿದ್ದ ಸುದೀಪ್ ಅವರಿಗೆ ಇದೇ ಪ್ರಶ್ನೆ ಎದುರಾಯ್ತು. ಅದಕ್ಕೆ ಸುದೀಪ್ ನೀಡಿದ ಉತ್ತರ ಇದು.

  ``ಅದರಲ್ಲಿ ವಿಶೇಷವೇನೂ ಇಲ್ಲ. ಕುರುಕ್ಷೇತ್ರ ಚಿತ್ರದ ಮುಹೂರ್ತದ ಸುದ್ದಿಯನ್ನು ಟ್ವಿಟರ್‍ನಲ್ಲಿ ನೋಡಿದೆ. ನನಗೆ ಚಿತ್ರದಲ್ಲಿ ತುಂಬಾ ಪಾತ್ರಗಳಿದ್ದರೆ ತುಂಬಾನೇ ಇಷ್ಟವಾಗುತ್ತೆ.ಅಲ್ಲಿ ರವಿ ಸರ್, ಅಂಬರೀಷ್ ಅಣ್ಣ, ಅರ್ಜುನ್ ಸರ್ಜಾ, ರವಿಶಂಕರ್, ನಿಖಿಲ್.. ಹೀಗೆ ತುಂಬಾ ಕಲಾವಿದರು ಒಟ್ಟಿಗೇ ಇದ್ದರು. ನನಗದು ಇಷ್ಟವಾಯಿತು. ವಿಷ್ ಮಾಡಬೇಕು ಎನ್ನಿಸಿತು. ಮಾಡಿದೆ ಅಷ್ಟೆ. ಅದಕ್ಕೂ ಮೊದಲು ಒಂದ್ಸಲ ಆ ಪಾತ್ರದಲ್ಲಿ ನನ್ನನ್ನು ನಾನೇ ಕಲ್ಪನೆ ಮಾಡಿಕೊಂಡೆ. ಅಬ್ಬಾ.. ಅಂತಹ ಪಾತ್ರಕ್ಕೆ ನಾನು ಸೂಟಬಲ್ ವ್ಯಕ್ತಿ ಅಲ್ಲವೇ ಅಲ್ಲ ಎನ್ನಿಸಿಬಿಟ್ಟಿತು. ಆ ಪಾತ್ರವನ್ನು ಅವನು ಚೆನ್ನಾಗಿ ಮಾಡುತ್ತಾನೆ. ಒಂದು ಲೆಕ್ಕದಲ್ಲಿ ಆತ ಅದೃಷ್ಟವಂತ. ಐತಿಹಾಸಿಕ ಮತ್ತು ಪೌರಾಣಿಕ, ಹೀಗೆ ಎರಡೂ ವೈವಿಧ್ಯಮಯ ಪಾತ್ರಗಳಲ್ಲಿ ನಟಿಸುವ ಅವಕಾಶ ಸಿಕ್ಕಿದೆ. ಆತ ಅದನ್ನು ಅದ್ಭುತವಾಗಿ ಮಾಡುತ್ತಾನೆ''

 • ದರ್ಶನ್, ಸುದೀಪ್ ಜೊತೆ ನಟಿಸಲು ಸಿದ್ಧ - ಪುನೀತ್

  ready to act with sudeep and darshan says puneeth

  ಒಳ್ಳೆಯ ಕಥೆ ಸಿಗಬೇಕು. ಇಷ್ಟವಾಗುವಂತಾದ್ದೊಂದು ಕಥೆ ಸಿಕ್ಕರೆ, ಸುದೀಪ್ ಮತ್ತು ದರ್ಶನ್ ಜೊತೆ ನಟಿಸಲು ನಾನು ರೆಡಿ. ನನಗೂ ಎಲ್ಲ ನಟರ ಜೊತೆ ನಟಿಸಬೇಕೆಂಬ ಆಸೆಯಿದೆ. ಇಂಥಾದ್ದೊಂದು ಕನಸು ಹೇಳಿಕೊಂಡಿದ್ದಾರೆ ಪುನೀತ್ ರಾಜ್‍ಕುಮಾರ್.

  ಹಬ್ಬದ ದಿನ ಇದೇ ಮೊದಲ ಬಾರಿಗೆ ಫೇಸ್‍ಬುಕ್ ಲೈವ್‍ಗೆ ಬಂದಿದ್ದ ಪುನೀತ್, ನೇರವಾಗಿ ಅಭಿಮಾನಿಗಳಿಗೇ ಇಂಥಾದ್ದೊಂದು ವಾಗ್ದಾನ ಮಾಡಿದ್ದಾರೆ. ಮುಂದಿನ ತಿಂಗಳ ಕೊನೆಯಲ್ಲಿ ಪುನೀತ್ ಕನ್ನಡ ಕಿರುತೆರೆಯಲ್ಲಿ ಪ್ರತ್ಯಕ್ಷರಾಗುತ್ತಿದ್ದಾರೆ. ಫ್ಯಾಮಿಲಿ ಪವರ್ ರಿಯಾಲಿಟಿ ಶೋ ಮೂಲಕ ಬರುತ್ತಿರುವ ಪುನೀತ್, ಆ ಶೋನಲ್ಲಿ ಕೌಟುಂಬಿಕ ಬಾಂಧವ್ಯಗಳ ಕಥೆ ಹೇಳಲಿದ್ದಾರಂತೆ.

 • ದಿ ವಿಲನ್ - ಒಂದು ಸೀನ್‍ಗೇ ಮೂರೂವರೆ ಕೋಟಿ..!

  the villain

  ದಿ ವಿಲನ್. ಶಿವರಾಜ್ ಕುಮಾರ್ ಮತ್ತು ಸುದೀಪ್ ಒಟ್ಟಿಗೇ ನಟಿಸುತ್ತಿರುವ ಈ ಸಿನಿಮಾ, ಕನ್ನಡ ಚಿತ್ರರಂಗದಲ್ಲಿ ಭರ್ಜರಿ ನಿರೀಕ್ಷೆ ಹುಟ್ಟಿಸಿರುವ ಚಿತ್ರ. ಇಬ್ಬರು ದೊಡ್ಡ ಸ್ಟಾರ್‍ಗಳು ಒಟ್ಟಿಗೇ ನಟಿಸುತ್ತಿರುವ ಕಾರಣಕ್ಕೆ ಇಷ್ಟು ದೊಡ್ಡ ನಿರೀಕ್ಷೆ ಮೂಡಿಸಿರುವ ಚಿತ್ರದ ಇನ್ನೊಂದು ಹೈಲೈಟ್ ಇಲ್ಲಿದೆ ನೋಡಿ.

  ದಿ ವಿಲನ್ ಚಿತ್ರದ ಒಂದು ಚೇಸಿಂಗ್ ಸೀನ್‍ಗೇ ಮೂರೂವರೆ ಕೋಟಿ ಖರ್ಚಾಗುತ್ತಿದೆಯಂತೆ. ಅದು ಕನ್ನಡದ ಸಣ್ಣ ಬಜೆಟ್ ಸಿನಿಮಾಗಳ ಒಟ್ಟು ಬಜೆಟ್ ಎಂಬುದು ನಿಮಗೆ ಗೊತ್ತಿರಲಿ. ಚಿತ್ರದ ಈ ಚೇಸಿಂಗ್ ಸೀನ್‍ನ ಚಿತ್ರೀಕರಣ ನಡೆಯುತ್ತಿರುವುದು ಬ್ಯಾಂಕಾಕ್‍ನಲ್ಲಿ. ಆ ದೃಶ್ಯದ ಚಿತ್ರೀಕರಣ ನೋಡಲು ಶಿವಣ್ಣನ ಮಗಳು ನಿವೇದಿತಾ ಕೂಡಾ ಬ್ಯಾಂಕಾಕ್‍ಗೆ ಹೋಗಿದ್ದಾರೆ.

  ಈ ದೃಶ್ಯದಲ್ಲಿ ಸುದೀಪ್, ಶಿವಣ್ಣ ಜೊತೆ ತಿಲಕ್ ಕೂಡಾ ಕಾಣಿಸಿಕೊಳ್ಳಲಿದ್ದಾರೆ. ಸಾಹಸ ದೃಶ್ಯ ಸಂಯೋಜಿಸಿರುವುದು ಮಾಸ್ ಮಾದ. ವಿದೇಶಿ ಸಾಹಸ ಕಲಾವಿದರೂ ಕೂಡಾ ಈ ಸಾಹಸ ದೃಶ್ಯದಲ್ಲಿ ನಟಿಸಲಿದ್ದು, ದುಬಾರಿ ಕಾರುಗಳ ಬಳಕೆಯಾಗುತ್ತಿದೆ. 

  ಈ ಮೂರೂವರೆ ಕೋಟಿ ವೆಚ್ಚದ ದೃಶ್ಯದ ಚಿತ್ರೀಕರಣ ನಡೆಯಲಿರುವುದು 2 ದಿನ. ಒಂದು ದೃಶ್ಯಕ್ಕೆ ಇಷ್ಟು ಖರ್ಚು ಮಾಡಲಿರುವ ಚಿತ್ರದ ಒಟ್ಟಾರೆ ಬಜೆಟ್ ಎಷ್ಟಿರಬಹುದು..? ನಮಗೂ ಗೊತ್ತಿಲ್ಲ. ನೀವೇ ಲೆಕ್ಕ ಹಾಕಿ.

  Related Articles :-

  ರಿಲೀಸ್‍ಗೂ ಮೊದಲೇ ದುಬೈಯಲ್ಲಿ ವಿಲನ್ ಅಬ್ಬರ

  ಇಂದಿನಿಂದ ಚಿಕ್ಕಮಗಳೂರಿನಲ್ಲಿ ವಿಲನ್ ಟೀಂ

  ದಿ ವಿಲನ್ ಚಿತ್ರದ ಸೀಕ್ರೆಟ್ ಹೇಳಿದ ಕಿಚ್ಚ

  ವಿಲನ್ ಚಿತ್ರದ ಕಾನ್ಸೆಪ್ಟ್ - ಹೀಗೂ ಉಂಟೆ..?

  Motion poster Of 'The Villain' Released!

 • ದಿ ವಿಲನ್ ಆಡಿಯೋಗೆ 1 ಕೋಟಿ, 8 ಲಕ್ಷ..!

  the villain audio rights sold for 1.08 crores

  ಕನ್ನಡದ ಬಹುನಿರೀಕ್ಷಿತ ಚಿತ್ರ `ದಿ ವಿಲನ್' ಚಿತ್ರದ ಆಡಿಯೋ ರೈಟ್ಸ್ 1 ಕೋಟಿ, 8 ಲಕ್ಷಕ್ಕೆ ಮಾರಾಟವಾಗಿದೆ. ಇದು ಒಂದು ದಾಖಲೆಯೇ. ದಕ್ಷಿಣ ಭಾರತ ಚಿತ್ರರಂಗದಲ್ಲಿ 70 ಲಕ್ಷಕ್ಕೆ ಆಡಿಯೋ ಮಾರಾಟವಾಗುವುದು ಗರಿಷ್ಠ ಸರಾಸರಿ. ಹೀಗಿರುವಾಗ ವಿಲನ್ ಚಿತ್ರಕ್ಕೆ 1 ಕೋಟಿ 8 ಲಕ್ಷ ನೀಡಿದೆ ಆನಂದ್ ಆಡಿಯೋ ಕಂಪೆನಿ.

  ಪ್ರೇಮ್ ಅವರ ಚಿತ್ರಗಳಿಂದ ಆನಂದ್ ಆಡಿಯೋಗೆ ಈ ಹಿಂದೆ ಒಳ್ಳೆಯ ಬ್ಯುಸಿನೆಸ್ ಆಗಿದೆ. ಈ ಹಿನ್ನೆಲೆಯಲ್ಲಿ ಈ ಮೊತ್ತಕ್ಕೆ ಆಡಿಯೊ ಖರೀದಿಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ ಪ್ರೇಮ್. ಚಿತ್ರದ ಚಿತ್ರೀಕರಣ ಮುಂದಿನ ತಿಂಗಳು ಮುಗಿಯಲಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳೂ ಆಗಲೇ ಶುರುವಾಗಿವೆ. ಸಿ.ಆರ್. ಮನೋಹರ್ ನಿರ್ಮಾಣದ ಚಿತ್ರ ಶಿವರಾಜ್‍ಕುಮಾರ್ & ಸುದೀಪ್ ಕಾಂಬಿನೇಷನ್‍ನಿಂದಾಗಿಯೇ ಭಾರಿ ನಿರೀಕ್ಷೆ ಹುಟ್ಟಿಸಿರುವ ಸಿನಿಮಾ.

 • ದಿ ವಿಲನ್ ಚಿತ್ರದ ಸೀಕ್ರೆಟ್ ಹೇಳಿದ ಕಿಚ್ಚ

  sudeep, the villain

  ಕಿಚ್ಚ ಸುದೀಪ್ ಇದೇ ಮೊದಲ ಬಾರಿಗೆ ಫೇಸ್​ಬುಕ್​ ಲೈವ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಅದಕ್ಕೆ ಕಾರಣ, ದಿ ವಿಲನ್ ಚಿತ್ರದ ನಿರ್ದೇಶಕ. ಚಿತ್ರದಲ್ಲಿ ಇಂಥಾದ್ದೊಂದು ಅವಕಾಶ ಕೊಟ್ಟಿದ್ದಕ್ಕೆ ಪ್ರೇಮ್​ಗೆ ಅಭಿನಂದನೆ ಸಲ್ಲಿಸಿದ್ದಾರೆ ಕಿಚ್ಚ ಸುದೀಪ್. ಇದೇ ವೇಳೆ ಸುದೀಪ್ ಹುಟ್ಟುಹಬ್ಬದ ವಿಶೇಷವಾಗಿ ಚಿತ್ರದ ಮೋಶನ್ ಪೋಸ್ಟರ್​ನ್ನೂ ರಿಲೀಸ್ ಮಾಡಲಾಗಿದೆ.

  ಶಿವರಾಜ್ ಕುಮಾರ್ ಜೊತೆ ನಟಿಸುವ ಚಾನ್ಸ್ ಸಿಕ್ಕಿದ್ದಕ್ಕೆ, ಅದನ್ನು ಸಾಧ್ಯವಾಗಿಸಿದ ಪ್ರೇಮ್ ಹಠಕ್ಕೆ ಸುದೀಪ್ ಖುಷಿಯಾಗಿದ್ದಾರೆ. ಚಿತ್ರದ ಚಿತ್ರೀಕರಣದ ವೇಳೆ ಪ್ರೇಮ್ ಸಿಕ್ಕಾಪಟ್ಟೆ ಕಾಟ ಕೊಡ್ತಾನೆ ಅನ್ನೋದನ್ನು ಪ್ರೀತಿಯಿಂದಲೇ ಹೇಳಿಕೊಂಡಿರುವ ಕಿಚ್ಚ ಸುದೀಪ್, ಅದೇ ವೇಳೆ ಚಿತ್ರದ ಗುಟ್ಟೊಂದನ್ನು ಬಿಟ್ಟುಕೊಟ್ಟಿದ್ದಾರೆ.

  ಚಿತ್ರದಲ್ಲಿ ನಾವೀಗ ನೋಡ್ತಿರೋದು ಸುದೀಪ್​ರ ಒಂದು ಗೆಟಪ್ ಮಾತ್ರ. ಆದರೆ, ಚಿತ್ರದಲ್ಲಿ ಸುದೀಪ್ ಮೂರು ಶೇಡ್​ಗಳಲ್ಲಿ, ಮೂರು ಅವತಾರಗಳಲ್ಲಿ ಕಾಣಿಸಿಕೊಳ್ಳುತ್ತಾರಂತೆ. ಉಳಿದಂತೆ ಕಥೆಯ ಬಗ್ಗೆ ಏನೊಂದು ಗುಟ್ಟನ್ನೂ ಬಿಟ್ಟುಕೊಡದ ಸುದೀಪ್, ದಿ ವಿಲನ್ ಚಿತ್ರದ ಬಗ್ಗೆ ಅಪಾರ ನಿರೀಕ್ಷೆ ಇಟ್ಟುಕೊಂಡಿರುವುದಾಗಿ ಹೇಳಿದ್ದಾರೆ. ಅರ್ಜುನ್ ಜನ್ಯ ಸಂಗೀತ ಸಂಯೋಜಸಿರುವ ಒಂದು ಹಾಡಿನ ಕೆಲವು ಸಾಲುಗಳನ್ನಷ್ಟೇ ಸುದೀಪ್ ಕೇಳಿದ್ದಾರಂತೆ. ಅದು ಕೂಡಾ ಸಖತ್ತಾಗಿದೆ ಎಂದು ಖುಷಿ ಹಂಚಿಕೊಂಡಿದ್ದಾರೆ ಸುದೀಪ್.

 • ದಿ ವಿಲನ್ ಡಬ್ಬಿಂಗ್ ಶುರು

  the villain dubbing starts

  ಕಿಚ್ಚ ಸುದೀಪ್ ಮತ್ತು ಶಿವರಾಜ್‍ಕುಮಾರ್ ಒಟ್ಟಿಗೇ ನಟಿಸುತ್ತಿರುವ ಸ್ಯಾಂಡಲ್‍ವುಡ್‍ನ ಬಹುನಿರೀಕ್ಷಿತ ಚಿತ್ರ ದಿ ವಿಲನ್. ಪ್ರೇಮ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಚಿತ್ರದ ಡಬ್ಬಿಂಗ್ ಈಗ ಶುರುವಾಗಿದೆ. ಹಾಗೆಂದು ಶೂಟಂಗ್ ಮುಗಿದಿದೆ ಎಂದುಕೊಳ್ಳಬೇಡಿ. ಇನ್ನೂ ಎರಡು ಹಾಡುಗಳ ಶೂಟಿಂಗ್ ಕೆಲಸ ಬಾಕಿಯಿದೆ.

  ಸಿ.ಆರ್.ಮನೋಹರ್ ನಿರ್ಮಾಣದ ಚಿತ್ರ ವರಮಹಾಲಕ್ಷ್ಮಿ ಹಬ್ಬಕ್ಕೆ ತೆರೆಯ ಮೇಲೆ ಬರಲಿದೆ. ರಿಲೀಸ್ ಡೇಟ್ ಫಿಕ್ಸ್ ಮಾಡಿಕೊಂಡೇ ಪೋಸ್ಟ್ ಪ್ರೊಡಕ್ಷನ್ ಕೆಲಸ ಶುರು ಮಾಡಲಾಗಿದೆ. ಎಲ್ಲವೂ ನಿರೀಕ್ಷೆಯಂತೆಯೇ ಆದರೆ, ಆಗಸ್ಟ್ 24ರಂದು ಚಿತ್ರ ತೆರೆಗೆ ಬರಲಿದೆ.

  ಅಂದಹಾಗೆ.. ಸುದೀಪ್ ಅವರೇ ಹೀರೋ ಆಗಿರುವ ಚಿತ್ರವೊಂದು ತೆರೆಯ ಮೇಲೆ ಒಂದು ವರ್ಷ 2 ತಿಂಗಳಾಗಿದೆ.

 • ದಿ ವಿಲನ್ ರಿಲೀಸ್ ಲಕ್ಷ್ಮಿ ಹಬ್ಬಕ್ಕಿಲ್ಲ.. ಮುಂದಾ..?

  the villain not releasing for varamahalakshmi festival

  ದಿ ವಿಲನ್ ಚಿತ್ರ ಆಗಸ್ಟ್‍ನಲ್ಲಿಯೇ ವರಮಹಾಲಕ್ಷ್ಮಿ ಹಬ್ಬದ ದಿನ ರಿಲೀಸ್ ಆಗಲಿದೆ ಎಂಬ ಸುದ್ದಿ ಗಾಂಧಿನಗರದಲ್ಲಿ ದಟ್ಟವಾಗಿ ಹಬ್ಬಿತ್ತು. ಈಗ ದಿ ವಿಲನ್ ಚಿತ್ರತಂಡದಿಂದ ಒಂದು ಸುದ್ದಿಯಂತೂ ಪಕ್ಕಾ ಆಗಿದೆ. ವರಮಹಾಲಕ್ಷ್ಮಿ ಹಬ್ಬಕ್ಕೆ ದಿ ವಿಲನ್ ರಿಲೀಸ್ ಆಗುತ್ತಿಲ್ಲ.

  ವಿಲನ್ ಚಿತ್ರದ 3 ಹಾಡುಗಳನ್ನು ರಿಲೀಸ್ ಮಾಡಿರುವ ಚಿತ್ರತಂಡ, ಆಡಿಯೋ ಬಿಡುಗಡೆ ಸಮಾರಂಭವನ್ನು ಅದ್ಧೂರಿಯಾಗಿ ದುಬೈ ಹಾಗೂ ಹುಬ್ಬಳ್ಳಿಯಲ್ಲಿಆಯೋಜಿಸಲು ತೀರ್ಮಾನಿಸಿದೆ. ಚಿತ್ರತಂಡದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಚುರುಕಾಗಿ ನಡೆಯುತ್ತಿವೆ. ಹೀಗಿರುವಾಗಲೇ.. ದಿ ವಿಲನ್ ಸಿನಿಮಾ ಸೆಪ್ಟೆಂಬರ್ 13ಕ್ಕೆ ರಿಲೀಸ್ ಆಗಲಿದೆ ಎಂಬ ಸುದ್ದಿ ಹರಿದಾಡೋಕೆ ಶುರುವಾಗಿದೆ.

  ಈ ಸೆಪ್ಟೆಂಬರ್ 13ರ ಡೇಟ್ ಫಿಕ್ಸ್ ಮಾಡಿರುವುದು ನಿರ್ಮಾಪಕ ಸಿ.ಆರ್.ಮನೋಹರ್ ಅಲ್ಲ, ನಿರ್ದೇಶಕ ಜೋಗಿ ಪ್ರೇಮ್ ಅಲ್ಲ. ಶಿವರಾಜ್‍ಕುಮಾರ್ ಮತ್ತು ಸುದೀಪ್ ಅಭಿಮಾನಿಗಳು.

 • ದಿ ವಿಲನ್ ವಿಳಂಬಕ್ಕೆ ಯಾರು ಕಾರಣ..?

  delya in the villain

  ದಿ ವಿಲನ್ ಎಂಬ ಚಿತ್ರದ ಕನಸು ಬಿತ್ತಿರುವ ನಿರ್ದೇಶಕ ಪ್ರೇಮ್, ಚಿತ್ರವನ್ನು ಮಾತ್ರ ಬೇಗ ಮುಗಿಸುತ್ತಿಲ್ಲ. ಮೊದಲೇ ಹೇಳಿದಂತೆ ಆಗಿದ್ದರೆ ಚಿತ್ರ ಇಷ್ಟು ಹೊತ್ತಿಗೆ ತೆರೆಗೆ ಬರಲು ರೆಡಿಯಾಗಿರಬೇಕಿತ್ತು. ಆದರೆ, ಇನ್ನೂ ಶೂಟಿಂಗ್ ಮುಗಿದಿಲ್ಲ. ಇನ್ನೂ 12 ದಿನದ ಶೂಟಿಂಗ್ ಬಾಕಿ ಇದೆಯಂತೆ. ಮೊದಲೇ ಶಿವರಾಜ್‍ಕುಮಾರ್ ಮತ್ತು ಸುದೀಪ್ ಕಾಂಬಿನೇಷನ್ ಸಿನಿಮಾ. ಇಷ್ಟು ನಿಧಾನವಾದರೆ ಹೇಗೆ..? ಯಾರು ಕಾರಣ ಎಂದರೆ, ಪ್ರಶ್ನೆ ಪ್ರೇಮ್ ಅವರತ್ತಲೇ ತಿರುಗುತ್ತಿದೆ.

  ಚಿತ್ರ ಇನ್ನೂ ಮುಗಿದಿಲ್ಲ. ಚಿತ್ರ ಯಾಕೆ ತಡವಾಯ್ತು ಅನ್ನೋದನ್ನು ಪ್ರೇಮ್ ಅವರನ್ನೇ ಕೇಳಬೇಕು. ನಾನೇನಾದರೂ ನಿರ್ದೇಶಕನಾಗಿದ್ದರೆ, ಪಕ್ಕಾ ಪ್ಲಾನ್ ಮಾಡಿಕೊಳ್ಳುತ್ತಿದ್ದೆ. ನಿರ್ಮಾಪಕರಿಗೆ ನಷ್ಟವಾಗದಂತೆ ನೋಡಿಕೊಳ್ಳುತ್ತಿದ್ದೆ. ಮುಂದೇನಾದರೂ ನಾನು ಡೈರೆಕ್ಷನ್ ಮಾಡಿದರೆ, ಸಿನಿಮಾ ಶುರುವಾದ ನಂತರದ 7ನೇ ತಿಂಗಳು ಸಿನಿಮಾ ತೆರೆಯ ಮೇಲಿರುವಂತೆ ನೋಡಿಕೊಳ್ಳುತ್ತೇನೆ. ಎರಡು ವರ್ಷ ಸಿನಿಮಾ ಮಾಡಿದರೆ ಗೆಲ್ಲುತ್ತೆ ಅನ್ನೋದು ಭ್ರಮೆಯಷ್ಟೆ ಎಂದಿದ್ದಾರೆ ಸ್ವತಃ ಶಿವರಾಜ್‍ಕುಮಾರ್.

I Love You Movie Gallery

Rightbanner02_butterfly_inside

Paddehuli Movie Gallery