` sudeep - chitraloka.com | Kannada Movie News, Reviews | Image

sudeep

  • ಕಷ್ಟಕಾಲದಲ್ಲಿ ಸಾಲ ಕೊಟ್ಟಿದ್ದವರನ್ನೆಲ್ಲ ನೆನೆದ ಕಿಚ್ಚ..!

    sudeep remebers who helped him in diffucult times

    ಕಿಚ್ಚ ಸುದೀಪ್ ಈಗ ಭಾರತದ ಸ್ಟಾರ್ ನಟರಲ್ಲಿ ಒಬ್ಬರು. ಕನ್ನಡದಲ್ಲಿ ಸೂಪರ್ ಸ್ಟಾರ್. ಅವರ ಚಿತ್ರಗಳಿಗೆ ಕೋಟಿ ಕೋಟಿ ಸುರಿಯಲು ನಿರ್ಮಾಪಕರು ಕ್ಯೂನಲ್ಲಿದ್ದಾರೆ. ಆದರೆ, ಕೆಲವೇ ವರ್ಷಗಳ ಹಿಂದೆ ಹೀಗಿರಲಿಲ್ಲ. ಆಗಿನ್ನೂ ಸುದೀಪ್ ಚಿತ್ರರಂಗಕ್ಕೆ ಕಾಲಿಟ್ಟಿದ್ದ ಆರಂಭದ ದಿನಗಳು. ಆ ದಿನಗಳಲ್ಲಿ ಸುದೀಪ್‍ಗೆ ಪತ್ನಿ ಪ್ರಿಯಾ ಅವರೇ ಸಾಲ ಕೊಟ್ಟಿದ್ದರಂತೆ.

    ನಲ್ಲ ಚಿತ್ರವನ್ನು ಕಡಿಮೆ ಬಜೆಟ್ಟಿನಲ್ಲಿ ಮಾಡಬೇಕೆಂದು ಹೊರಟಿದ್ದೆವು. ಆದರೆ, ಬಜೆಟ್ ಏರಿಬಿಡ್ತು. ಕೈಲಿದ್ದ ಕಾಸು ಮುಗಿದಿತ್ತು. ಮೊದಲು ಅಕ್ಕನ ಒಡವೆಗಳನ್ನೆಲ್ಲ ಮಾರಿ, ಆ ಹಣವನ್ನು ಖರ್ಚು ಮಾಡಿದೆವು. ಅದೂ ಖರ್ಚಾದ ಮೇಲೆ ಪತ್ನಿ ಪ್ರಿಯಾ ಅವರಿಂದ 25 ಸಾವಿರ ಸಾಲ ತೆಗೆದುಕೊಂಡೆ. ಅದೂ ಖರ್ಚಾಗಿ ಹೋಯ್ತು. ಪೋಸ್ಟ್ ಪ್ರೊಡಕ್ಷನ್ ಹಂತಕ್ಕೆ ಬಂದಾಗ ಕೈಖಾಲಿ. ಆಗ ಮಧು ಬಂಗಾರಪ್ಪ 5 ಲಕ್ಷ ಸಾಲ ಕೊಟ್ಟರು. ಇವರು ಹಾಗೂ ಇಂತಹ ಹಲವರಿಂದಲೇ ಸುದೀಪ್ ಹೀರೋ ಆಗಿದ್ದು ಎಂದು ನೆನಪಿಸಿಕೊಂಡಿದ್ದಾರೆ ಕಿಚ್ಚ ಸುದೀಪ್.

    ಸದ್ಯಕ್ಕೆ ಸುದೀಪ್ ಅವರ ಪೈಲ್ವಾನ್ ಸಿನಿಮಾ ರಿಲೀಸ್ ಹಂತದಲ್ಲಿದ್ದು, ದಿನಾಂಕ ಅಧಿಕೃತವಾಗಿ ಘೋಷಣೆಯಾಗಬೇಕಿದೆ. ನಿರ್ದೇಶಕ ಕೃಷ್ಣ ಚಿತ್ರವನ್ನು 5 ಭಾಷೆಗಳಲ್ಲಿ ಏಕಕಾಲಕ್ಕೆ ರಿಲೀಸ್ ಮಾಡುತ್ತಿದ್ದಾರೆ.

  • ಕಷ್ಟದ ಆ ದಿನಗಳನ್ನು ನೆನೆದ ಕಿಚ್ಚ ಸುದೀಪ್ 

    sudeep recalls his struggling days

    ಕಿಚ್ಚ ಸುದೀಪ್ ಅವರನ್ನು ನೋಡಿದವರು ಇವರಿಗೇನ್ ಕಷ್ಟ ಇದೆ ಬಿಡಿ.. ಆರಾಮ್ ಇದ್ದಾರೆ ಎಂದುಕೊಂಡರೆ ಅದು ಸಹಜ. ತಮ್ಮ ವೈಯಕ್ತಿಕ ಭಾವನೆ, ಕಷ್ಟಸುಖಗಳನ್ನು ಕಣ್ಣ ಕೊನೆಯಲ್ಲಿ ಕಾಣದಂತೆ ನೋಡಿಕೊಳ್ಳುವ ಸುದೀಪ್, ಪರ್ಸನಲ್ ವಿಚಾರಗಳನ್ನ ಹೇಳಿಕೊಳ್ಳೋದು ಕಡಿಮೆ. ಆದರೆ ಈ ಬಾರಿ ಅವರು ತಾವು ಅನುಭವಿಸಿದ ಕಷ್ಟದ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

    ಅಂದು ಮೈ ಆಟೋಗ್ರಾಫ್ ಚಿತ್ರಕ್ಕೆ ಕೈ ಹಾಕಿ, ಹಣವಿಲ್ಲದೆ ಪರದಾಡುತ್ತಿದ್ದೆ. ಆಗೆಲ್ಲ ಟಿವಿ ರೈಟ್ಸ್ 25ರಿಂದ 30 ಲಕ್ಷಕ್ಕೆ ಹೋದರೆ ಅದೇ ಹೆಚ್ಚು. ಆ ವೇಳೆ ಖಾಸಗಿ ವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದ ರಘುರಾಮ್, ನನ್ನ ಆ ಚಿತ್ರಕ್ಕೆ 1 ಕೋಟಿ ಕೊಡಿಸಿದ್ದರು. ಅದು ನನಗೆ ಬಹಳ ಸಹಾಯ ಮಾಡಿತ್ತು ಎಂದು ನೆನಪಿಸಿಕೊಂಡಿದ್ದಾರೆ ಸುದೀಪ್.

    ಸುದೀಪ್ ಹೇಳಿದ ರಘುರಾಮ್ ಬೇರಾರೋ ಅಲ್ಲ, ಮಿಸ್ಸಿಂಗ್ ಬಾಯ್ ಚಿತ್ರದ ನಿರ್ದೇಶಕ. ಹೀಗಾಗಿಯೇ.. ಅಂದು ನೆರವು ನೀಡಿದ್ದ ರಘುರಾಮ್ ಚಿತ್ರವನ್ನು ಪ್ರೀತಿಯಿಂದ ಪ್ರಚಾರ ಮಾಡುತ್ತಿದ್ದಾರೆ ಸುದೀಪ್

  • ಕಾಮಿಡಿ ವಿತ್ ಕಿಚ್ಚ

    kiccha sudeep in the kapil sharma show

    ಕಿಚ್ಚ ಸುದೀಪ್, ಇಂಡಿಯನ್ ಸ್ಟಾರ್ ಅನ್ನೋದನ್ನು ಪದೇ ಪದೇ ಹೇಳಬೇಕಾದ ಅಗತ್ಯವೇನೂ ಇಲ್ಲ. ಕನ್ನಡದ ರಿಯಾಲಿಟಿ ಶೋಗಳಲ್ಲಿ ಎದುರು ಇದ್ದವರನ್ನು ಕಾಲೆಳೆಯುತ್ತ, ಕಿಚಾಯಿಸುತ್ತ, ಎಂಥವರನ್ನೂ ನಕ್ಕು ನಲಿಸುವ ಸುದೀಪ್, ಈಗ ಹೊಟ್ಟೆ ತುಂಬಾ ನಕ್ಕು ಬಂದಿದ್ದಾರೆ. ಕಾಮಿಡಿ ವಿತ್ ಕಪಿಲ್ ಶೋನಲ್ಲಿ.

    ಹಿಂದಿಯ ನಂಬರ್ 1 ಕಾಮಿಡಿ ಶೋ ನಡೆಸಿಕೊಡುವ ಕಪಿಲ್ ಶರ್ಮಾ, ತಮ್ಮ ಶೋಗೆ ಸುದೀಪ್ ಅವರನ್ನು ಆಹ್ವಾನಿಸಿದ್ದಾರೆ. ಶೋನಲ್ಲಿ ಸುನಿಲ್ ಶೆಟ್ಟಿ ಸೇರಿದಂತೆ ಹಲವರೊಂದಿಗೆ ಭಾಗಿಯಾಗಿದ್ದ ಸುದೀಪ್, ಇಡೀ ಶೋನಲ್ಲಿ ನಕ್ಕು ನಕ್ಕು ಬಂದಿದ್ದೇನೆ ಎಂದು ನಗು ಹಂಚಿಕೊಂಡಿದ್ದಾರೆ.

  • ಕಿಚ್ಚ ನೀ ಬೇಗನೆ ಬಾರೋ.. - ಅಭಿಮಾನಿ

    sudeep's fan on a hunger strike

    ಕಿಚ್ಚ ಸುದೀಪ್ ತಮ್ಮ ಅಭಿಮಾನಿಗಳ ಸದಾ ಒಂದು ನಂಟನ್ನು ಇಟ್ಟುಕೊಂಡೇ ಇರ್ತಾರೆ. ಇದರ ಮಧ್ಯೆಯೂ ಅಭಿಮಾನಿಗಳು ಕಿಚ್ಚನನ್ನು ನೋಡಲು, ಮಾತನಾಡಿಸಲು ಹಠ ಮಾಡುವುದು ಹೊಸದೇನೂ ಅಲ್ಲ. ಈ ಬಾರಿ ಶಿವು ಎಂಬ ಸುದೀಪ್ ಅಭಿಮಾನಿ, ಕಿಚ್ಚ ಸುದೀಪ್ ತನ್ನನ್ನು ನೋಡುವವರೆಗೂ ಉಪವಾಸ ಮಾಡೋದಾಗಿ ಹಠ ಹಿಡಿದು ಕುಳಿತುಬಿಟ್ಟಿದ್ದಾನೆ.

    ಆದರೆ, ಈ ಕ್ಷಣವೇ ಹೋಗಬೇಕು ಎಂದರೆ ಹೇಗೆ..? ಹೀಗಾಗಿ ಸುದೀಪ್ ಅಭಿಮಾನಿಗೆ ಟ್ವಿಟರ್ ಮೂಲಕವೇ ಮನವಿ ಮಾಡಿದ್ದಾರೆ. ಭೇಟಿ ಮಾಡಲು ಪ್ರೀತಿ, ತಾಳ್ಮೆಯ ಜೊತೆ ಸಮಯವೂ ಬೇಕು ಎಂದು ಬುದ್ದಿ ಹೇಳಿದ್ದಾರೆ. ನೀವು ಚೆನ್ನಾಗಿದ್ದರೆ ನನಗೆ ಖುಷಿ. ಉಪವಾಸ ಮಾಡಿ ನನಗೆ ನೋವು ಕೊಡಬೇಡಿ ಎಂದು ಮನವಿ ಮಾಡಿದ್ದಾರೆ ಕಿಚ್ಚ ಸುದೀಪ್. 

  • ಕಿಚ್ಚ ಬೈಕು ಹತ್ತಿದ್ರೆ.. ಭೂಮ್.. ಭೂಂ..

    sudeep city rounds in bike

    ಬಿಎಂಡಬ್ಲ್ಯುಆರ್1200, ಇದು ಕಿಚ್ಚನ ಮನೆ ಸೇರಿರುವ ಹೊಸ ಬೈಕು. ಸುದೀಪ್ ಮನೆಯಲ್ಲಿ ಈಗಾಗಲೇ ಹಾರ್ಲೆ ಡೇವಿನ್‍ಸನ್, ರಾಯಲ್ ಎನ್‍ಫೀಲ್ಡ್ ಬುಲೆಟ್, ಯಮಹಾ ಆರ್‍ಎಕ್ಸ್ 100 ಸೇರಿದಂತೆ ಹಲವಾರು ಬೈಕ್‍ಗಳಿವೆ. ಜಾಗ್ವಾರ್, ಬಿಎಂಡಬ್ಲ್ಯು, ಲ್ಯಾಂಡ್‍ರೋವರ್, ಫೋರ್ಡ್ ಎಂಡೇವರ್, ಮಿನಿ ಕೂಪರ್, ಆಡಿ, ಇನ್ನೋವಾ.. ಹೀಗೆ ದುಬಾರಿ ಕಾರುಗಳೂ ಇವೆ. ಆದರೂ ಕಿಚ್ಚನಿಗೆ ಬೈಕ್ ಓಡಿಸೋದಂದ್ರೆ ಥ್ರಿಲ್ಲು.

    ಇತ್ತೀಚೆಗಷ್ಟೇ ಈ ಬೈಕು ಖರೀದಿಸಿದ ಸುದೀಪ್, ಬೈಕ್ ಹತ್ತಿ ಸಿಟಿ ರೌಂಡ್ಸ್ ಹೊಡೆದಿದ್ದಾರೆ. ಹೆಲ್ಮೆಟ್‍ನ್ನು ಎಲ್ಲಿಯೂ ತೆಗೆಯದೆ, ಸಿಟಿಯಲ್ಲಿ ರೌಂಡ್ ಹಾಕಿ ಖುಷಿಪಟ್ಟಿದ್ದಾರೆ. ಹೆಲ್ಮೆಟ್ ತೆಗೆದು, ಯಾರಾದರು ಗುರುತಿಸಿದ್ದರೆ, ರೌಂಡ್ಸ್‍ನ ಮಜಾ ಹೋಗುತ್ತೆ ಅನ್ನೋದು ಸುದೀಪ್‍ಗೆ ಗೊತ್ತಿಲ್ಲದ ವಿಚಾರವೇನಲ್ಲ.

    ಚಂದನ್ ಮತ್ತು ನಿರ್ದೇಶಕ ಕೃಷ್ಣ, ಮತ್ತೊಂದು ಬೈಕ್‍ನಲ್ಲಿ ಸುದೀಪ್ ಅವರನ್ನು ಫಾಲೋ ಮಾಡಿದ್ದಾರೆ. ಹಿಂದೆ ರಾಜಮಹಾರಾಜರು ಮಾರುವೇಷದಲ್ಲಿ ದೇಶ ಸಂಚಾರ ಮಾಡುತ್ತಿದ್ದರಂತೆ. ಈಗ ಸೆಲಬ್ರಿಟಿಗಳ ಸರದಿ.

  • ಕಿಚ್ಚ ಸಲ್ಮಾನ್ ದಬಾಂಗ್ ಶುರು

    two sulathan's team up for dabaang 3

    ಕಿಚ್ಚ ಸುದೀಪ್ ಮತ್ತೊಮ್ಮೆ ಬಾಲಿವುಡ್ ಅಂಗಳಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಅಮಿತಾಬ್ ಬಚ್ಚನ್ ಜೊತೆ ರಣ್, ಪೂಂಕ್, ರಕ್ತ ಚರಿತ್ರ ಚಿತ್ರಗಳಲ್ಲಿ ನಟಿಸಿದ್ದ ಸುದೀಪ್, ಈಗ ಸಲ್ಮಾನ್ ಚಿತ್ರದಲ್ಲಿ ಖಳನಾಯಕ. ಎಲ್ಲ ಅಂದುಕೊಂಡಂತೆ ಆಗಿದ್ದರೆ, ಸಲ್ಮಾನ್‍ರ ಟೈಗರ್ ಜಿಂದಾ ಹೈ ಚಿತ್ರದಲ್ಲೇ ಕಿಚ್ಚನ ದರುಶನವಾಗಬೇಕಿತ್ತು. ಡೇಟ್ಸ್ ಸಮಸ್ಯೆಯಿಂದಾಗಿ ಮಿಸ್ ಆಗಿತ್ತು.

    ಈಗ ದಬಾಂಗ್ 3ಯಲ್ಲಿ ಸಲ್ಮಾನ್ ಎದುರು ನಟಿಸುತ್ತಿದ್ದಾರೆ ಸುದೀಪ್. ಸಲ್ಮಾನ್‍ಗೆ ಹೀರೋಯಿನ್ ಸೋನಾಕ್ಷಿ ಸಿನ್ಹಾ. ಡೈರೆಕ್ಟರ್ ಪ್ರಭುದೇವ. ಸಲ್ಮಾನ್‍ರ ಸೋದರ ಅರ್ಬಾಜ್ ಖಾನ್ ಕೂಡಾ ನಟಿಸುತ್ತಿರುವ ಚಿತ್ರದ ಶೂಟಿಂಗ್ ಶುರುವಾಗಿದೆ.

  • ಕಿಚ್ಚ ಸುದೀಪನ ಜಪಾನ್ ಅಭಿಮಾನಿ

    kiccha's japanese fan art work

    ಕಿಚ್ಚ ಸುದೀಪ್, ಕನ್ನಡದಲ್ಲಷ್ಟೇ ಅಲ್ಲ, ಇಡೀ ಭಾರತೀಯ ಚಿತ್ರರಂಗಕ್ಕೇ ಸಲ್ಲುವ ಸ್ಟಾರ್ ನಟ. ಹೀಗಾಗಿ ಸುದೀಪ್ ಅಭಿಮಾನಿಗಳು ದೇಶ ವಿದೇಶದಲ್ಲೆಲ್ಲ ಇದ್ದಾರೆ. ಈಗ ನಾವು ಹೇಳ್ತಿರೋದು ಜಪಾನ್‍ನ ಅಂತಹ ಒಬ್ಬ ಕಿಚ್ಚನ ಅಭಿಮಾನಿಯ ಬಗ್ಗೆ.

    ಈತನ ಹೆಸರು ಮೋಹಿಶ್‍ಮೊಟೊ. ಕಿಚ್ಚ ಸುದೀಪ್‍ಗೆ ಈತ ಎಷ್ಟರಮಟ್ಟಿಗಿನ ಅಭಿಮಾನಿಯೆಂದರೆ, ಸುದೀಪ್‍ರ ಪ್ರತಿ ಚಿತ್ರದ ಪೋಸ್ಟರ್‍ನ್ನು ತನ್ನ ಕುಂಚದಲ್ಲಿ ಅರಳಿಸಿದ್ದಾನೆ. ರನ್ನ, ವೀರಮದಕರಿ, ಬಾಹುಬಲಿಯ ಸುಲ್ತಾನ, ಹೆಬ್ಬುಲಿ.. ಹೀಗೆ ಸುದೀಪ್ ಅಭಿನಯದ ಹಲವು ಚಿತ್ರಗಳ ಪಾತ್ರಗಳು ಮೋಹಿಶ್‍ಮೋಟೋ ಕೈಯ್ಯಲ್ಲಿ ರೇಖಾಚಿತ್ರಗಳಾಗಿವೆ.

    ರನ್ನ ಚಿತ್ರದಲ್ಲಿ ಸುದೀಪ್‍ರನ್ನು ಬಬ್ಬರ್ ಶೇರ್ ಎಂದು ಹೊಗಳುವ ಹಾಡಿದೆ. ಸುದೀಪ್ ಕುರಿತ ರೇಖಾಚಿತ್ರಗಳ ಸರಣಿಗೆ ಬಬ್ಬರ್ ಶೇರ್ ಎಂದೇ ಹೆಸರಿಟ್ಟಿದ್ದಾರೆ ಮೋಹಿಶ್‍ಮೋಟೊ. ಈ ಸರಣಿಯಲ್ಲಿ ಇನ್ನಷ್ಟು ರೇಖಾಚಿತ್ರಗಳನ್ನು ಬರೆಯುವುದಾಗಿಯೂ ತಿಳಿಸಿದ್ದಾರೆ. 

    ಮುದ್ದಾದ ರೇಖಾಚಿತ್ರಗಳನ್ನು ನೋಡಿದ ಸುದೀಪ್, ಅಭಿಮಾನಿಯ ಅಭಿಮಾನಕ್ಕೆ ಶರಣಾಗಿಬಿಟ್ಟಿದ್ದಾರೆ.

  • ಕಿಚ್ಚ ಸುದೀಪ್ ಇಷ್ಟವಾಗೋದೇ ಇಂಥ ಕಾರಣಕ್ಕೆ.

    sudeep's simplicity during election campaigning

    ಕಿಚ್ಚ ಸುದೀಪ್ ಸರಳತೆಗೆ ಇನ್ನೊಂದು ಹೆಸರು. ಹತ್ತಿರವಾದವರು ಸುದೀಪ್ ಸ್ನೇಹಕ್ಕೆ, ಸರಳತೆಗೆ ಶರಣಾಗುತ್ತಾರೆ. ಸುದೀಪ್‍ರ ಅಂತಹುದೇ ಇನ್ನೊಂದು ಸರಳತೆಗೆ ಸಾಕ್ಷಿಯಾಗಿದ್ದು ಈ ಎಲೆಕ್ಷನ್ ಪ್ರಚಾರ.

    ಚಿತ್ರದುರ್ಗ ಮೊಳಕಾಲ್ಮೂರಿನಲ್ಲಿ ಶ್ರೀರಾಮುಲು ಪರ ಪ್ರಚಾರ ನಡೆಸುತ್ತಿದ್ದ ಸುದೀಪ್ ಹೊಟ್ಟೆ ಹಸಿದಿತ್ತು. ನೇರವಾಗಿ ಕಣ್ಣಿಗೆ ಕಂಡ ರಸ್ತೆಯ ಬದಿಯಲ್ಲಿಯೇ ಇದ್ದ ಹೋಟೆಲ್‍ವೊಂದಕ್ಕೆ ಹಓದ ಸುದೀಪ್, ಆರಾಮಾಗಿ ಊಟ ಮಾಡಿ, ಟೀ ಕುಡಿದು ಬಂದಿದ್ದಾರೆ.

    ಹೋಟೆಲ್‍ನ ಮಾಲಕಿಗೆ 10000 ರೂ. ನೀಡಿದ ಸುದೀಪ್, ನನಗೆ ಹೊಟ್ಟೆ ಹಸಿದಿತ್ತು, ಹೋಟೆಲ್‍ನಲ್ಲಿ ಅಡುಗೆಯೂ ಬೊಂಬಾಟ್ ಆಗಿತ್ತು ಎಂದು ಖುಷಿಗೊಂಡಿದ್ದಾರೆ.

    ಹಸಿದಾಗ ಅನ್ನ ಕೊಟ್ಟವರೇ ದೇವರು ಅನ್ನೋದು ಸುದೀಪ್ ಅವರ ಮಾತಿನ ತಾತ್ಪರ್ಯ. ಹೋಟೆಲ್‍ನವರು ಸುದೀಪ್ ನೋಡಿ ಥ್ರಿಲ್ಲಾದರೆ, ಸುದೀಪ್ ಊಟ ಮಾಡಿ ಖುಷಿಯಾದರು. ಸುದೀಪ್ 

  • ಕಿಚ್ಚ ಸುದೀಪ್ ರಾಜಕೀಯಕ್ಕೆ..? - ಆರ್. ಅಶೋಕ್ ಹೇಳಿಕೆ

    r ashok says on sudeep joining politics

    ನಟ ಸುದೀಪ್ ರಾಜಕೀಯಕ್ಕೆ ಬರ್ತಾರಾ..? ಇತ್ತೀಚೆಗಷ್ಟೇ ಸುದೀಪ್ ನಾನು ರಾಜಕೀಯಕ್ಕೆ ಬರಲ್ಲ. ಸೇವೆ ಮಾಡೋಕೆ ರಾಜಕೀಯಕ್ಕೇ ಬರಬೇಕು ಅಂತೇನೂ ಇಲ್ಲ. ರಾಜಕೀಯದಿಂದ ದೂರವಿದ್ದುಕೊಂಡೇ ನನ್ನ ಕೈಲಾದಷ್ಟು ಸೇವೆ ಮಾಡುತ್ತೇನೆ ಎಂದಿದ್ದರು. ಆದರೆ, ಬಿಜೆಪಿ ಮುಖಂಡ ಆರ್.ಅಶೋಕ್ ಹೊಸ ಹೇಳಿಕೆಯನ್ನೇ ನೀಡಿದ್ದಾರೆ.

    ನನ್ನ ಚುನಾವಣಾ ಪ್ರಚಾರ ಉದ್ಘಾಟಿಸಿದ್ದೇ ಸುದೀಪ್. ನಾನು ಮತ್ತು ಸುದೀಪ್ ಒಳ್ಳೆಯ ಸ್ನೇಹಿತರು. ನಾನು ಸುದೀಪ್ ಸೇರಿದಂತೆ ಹಲವರ ಜೊತೆ ಮಾತುಕತೆ ನಡೆಸುತ್ತೇನೆ. ಸಾಕಷ್ಟು ಸ್ಟಾರ್​ಗಳು ಬಿಜೆಪಿ ಪರ ಪ್ರಚಾರಕ್ಕೆ ಬರುತ್ತಾರೆ ಎಂದಿದ್ದಾರೆ ಅಶೋಕ್. 

    ದರ್ಶನ್ ಕಾಂಗ್ರೆಸ್​ಗೆ ಹೋಗ್ತಾರೆ ಅನ್ನೋ ಸುದ್ದಿಗೆ ಪ್ರತಿಕ್ರಿಯೆ ನೀಡಿರುವ ಆರ್.ಅಶೋಕ್, ಚುನಾವಣೆ ಸಮಯದಲ್ಲಿ ಸ್ಪಷ್ಟ ಉತ್ತರ ನೀಡುತ್ತೇನೆ ಎಂದಿದ್ದಾರೆ.

  • ಕಿಚ್ಚ ಸುದೀಪ್, ಶ್ರೀರಾಮುಲು ಭೇಟಿ ಮತ್ತು ಮೋದಿ

    mla sriramulu meets sudeep

    ಕಿಚ್ಚ ಸುದೀಪ್ ರಾಜಕೀಯಕ್ಕೆ ಬರ್ತಾರಂತೆ ಅನ್ನೋದು ಕಳೆದ ವಿಧಾನಸಭೆ ಚುನಾವಣೆಯಲ್ಲಿ ದೊಡ್ಡಮಟ್ಟದಲ್ಲಿ ಸದ್ದು ಮಾಡಿತ್ತು. ಆದರೆ, ಸುದೀಪ್, ವ್ಯಕ್ತಿಗತವಾಗಿ ಪ್ರಚಾರಕ್ಕೆ ಹೋದರೇ ಹೊರತು, ಯಾವುದೇ ರಾಜಕೀಯ ಪಕ್ಷದ ಒಲವು ತೋರಲಿಲ್ಲ. ಮೊಳಕಾಲ್ಮೂರಿನಲ್ಲಿ ಬಿಜೆಪಿಯಿಂದ ನಿಂತಿದ್ದ ಶ್ರೀರಾಮುಲು ಪರ ಕೂಡಾ ಪ್ರಚಾರ ಮಾಡಿದ್ದರು. ಈಗ.. ಚುನಾವಣೆ ಮುಗಿದ ನಂತರ ಶ್ರೀರಾಮುಲು ದಿಢೀರನೆ ಸುದೀಪ್ ಅವರನ್ನು ಭೇಟಿ ಮಾಡಿ, ಅಚ್ಚರಿ ಮೂಡಿಸಿದ್ದಾರೆ.

    ಹಾಗಂತ, ಇದು ಸುದೀಪ್ ಅವರನ್ನು ಬಿಜೆಪಿಗೆ ಆಹ್ವಾನಿಸುವ ವಿಷಯ ಎಂದುಕೊಳ್ಳಬೇಡಿ. ಕೇಂದ್ರದಲ್ಲಿರೋ ಮೋದಿ ಸರ್ಕಾರ 4 ವರ್ಷ ಪೂರೈಸಿದೆ. ಇನ್ನೇನು ಕೆಲವೇ ತಿಂಗಳಲ್ಲಿ ಚುನಾವಣೆ ಎದುರಾಗುತ್ತಿದೆ. ಮೋದಿ ಸರ್ಕಾರದ ಸಾಧನೆಗಳ ಒಂದು ಪುಸ್ತಕವನ್ನೇ ರೂಪಿಸಿರು ಬಿಜೆಪಿ, ಆ ಪುಸ್ತಕವನ್ನು ಸೆಲಬ್ರಿಟಿಗಳಿಗೂ ನೀಡುತ್ತಿದೆ. 

    ಈ ಅಭಿಯಾನದಲ್ಲಿ ಶ್ರೀರಾಮುಲು, ಸುದೀಪ್ ಅವರನ್ನು ಭೇಟಿ ಮಾಡಿ ಆ ಪುಸ್ತಕ ನೀಡಿದ್ದಾರೆ. 

  • ಕಿಚ್ಚ ಹೇಳಿದ್ದನ್ನು ಚಾಚೂ ತಪ್ಪದೆ ಪಾಲಿಸಿದ್ದಾರೆ ರಿಷಬ್ ಶೆಟ್ಟಿ..!

    rishab sheety sincerly followed sudeep's teachings

    ಕಿರಿಕ್ ಪಾರ್ಟಿ, ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಚಿತ್ರಗಳ ಮೂಲಕ ಸ್ಟಾರ್ ನಿರ್ದೇಶಕರಾದ ರಿಷಬ್ ಶೆಟ್ಟಿ, ಬೆಲ್ಬಾಟಂ ಚಿತ್ರದ ನಂತರ ಸ್ಟಾರ್ ಹೀರೋ ಕೂಡಾ ಆಗಿದ್ದಾರೆ. ಕಾಮಿಡಿ ಮತ್ತು ಸೀರಿಯಸ್..ಎರಡನ್ನೂ ಅದ್ಭುತವಾಗಿ ನಿರ್ವಹಿಸುವ ರಿಷಬ್ ಶೆಟ್ಟಿಗೆ ಈಗ ಫುಲ್ ಡಿಮ್ಯಾಂಡ್ ಇದೆ. ಇದರ ನಡುವೆ ರುದ್ರಪ್ರಯಾಗ ಅನ್ನೋ ಚಿತ್ರಕ್ಕೆ ನಿರ್ದೇಶಕರಾಗಿರುವ ರಿಷಬ್ ಶೆಟ್ಟಿ, ಹೀರೋ ಆಗಿ 4 ಕಥೆಗಳನ್ನು ಒಪ್ಪಿಕೊಂಡಿದ್ದಾರಂತೆ. 

    ಮೊದಲ ಆದ್ಯತೆ ನಿರ್ದೇಶನ ಎನ್ನುವ ರಿಷಬ್ ಶೆಟ್ಟಿ, 4 ಕಥೆಗಳನ್ನು ಒಪ್ಪಿದ್ದರೂ ಯಾರಿಂದಲೂ ಅಡ್ವಾನ್ಸ್ ಪಡೆದಿಲ್ಲ. ಕಾರಣ ಇಷ್ಟೆ.. ಸುದೀಪ್ ಹೇಳಿದ್ದ ಮಾತು. ‘‘ನನಗೆ ಸುದೀಪ್‌ ಒಂದು ಪಾಠ ಹೇಳಿಕೊಟ್ಟಿದ್ದಾರೆ.  ಯಾರಿಂದಲೂ ಮೊದಲೇ ಅಡ್ವಾನ್ಸ್‌ ತೆಗೆದುಕೊಳ್ಳಬೇಡ. ಒಂದು ವೇಳೆ ಅಡ್ವಾನ್ಸ್‌ ತಗೊಂಡರೆ ಲಾಕ್‌ ಆದಂತೆ’’ ಎಂದು.. ಆ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದೇನೆ ಎನ್ನುತ್ತಾರೆ ರಿಷಬ್ ಶೆಟ್ಟಿ.

  • ಕಿಚ್ಚನ ಅಭಿಮಾನಿ ಫಾಲೋವರ್ಸ್ ದಾಖಲೆ

    2 million followers on twitter

    ಕಿಚ್ಚ ಸುದೀಪ್, ಸಾಮಾಜಿಕ ಜಾಲತಾಣದಲ್ಲಿ ಮತ್ತೊಮ್ಮೆ ದಾಖಲೆ ಬರೆದಿದ್ದಾರೆ. ಈಗ ಟ್ವಿಟರ್‍ನಲ್ಲಿ ಅವರ ಫಾಲೋವರ್ಸ್‍ಗಳ ಸಂಖ್ಯೆ 20 ಲಕ್ಷದ ಗಡಿ ದಾಟಿದೆ. ಅಂದರೆ 2 ಮಿಲಿಯನ್ +.

    ಕನ್ನಡದಲ್ಲಿ ಇಷ್ಟು ದೊಡ್ಡ ಮಟ್ಟದಲ್ಲಿ ಫಾಲೋವರ್ಸ್ ಹೊಂದಿರುವ ನಟರಲ್ಲಿ ಸುದೀಪ್ ನಂಬರ್ 1. 

    ಇನ್‍ಸ್ಟಾಗ್ರಾಮ್‍ನಲ್ಲೂ ಸುದೀಪ್ ಅಭಿಮಾನಿಗಳ ಸಂಖ್ಯೆ ಏರುತ್ತಲೇ ಇದೆ. ದೇಶ ವಿದೇಶಗಳಲ್ಲೆಲ್ಲ ಅಭಿಮಾನಿಗಳನ್ನು ಸೃಷ್ಟಿಸಿಕೊಳ್ಳುತ್ತಲೇ ಇರುವ ಸುದೀಪ್‍ಗೆ, ಚಿತ್ರಲೋಕದಿಂದ ಅ

  • ಕಿಚ್ಚನ ಅಭಿಮಾನಿಗಳೇ.. ಶಹಬ್ಬಾಶ್..

    sudeep fan associations social work

    ಕಿಚ್ಚ ಸುದೀಪ್ ಸಾಮಾಜಿಕ ಸೇವೆಗಳಲ್ಲಿ, ನೆರವು ನೀಡುವುದರಲ್ಲಿ ಒಂದು ಹೆಜ್ಜೆ ಮುಂದಿರುತ್ತಾರೆ. ಹಾಗೆ ತಾವು ನೆರವು ನೀಡಿದ್ದನ್ನು ಹೊರಗೆಲ್ಲಿಯೂ ಹೇಳಿಕೊಳ್ಳುವುದೂ ಇಲ್ಲ. ಸಹಾಯ ಪಡೆದುಕೊಂಡವರಿಗೆ ಹಾಗೂ ಸುದೀಪ್‍ಗೆ ಮಾತ್ರವೇ ಗೊತ್ತಿರುತ್ತೆ. ಹೀಗೆ ಸಹಾಯ ಮಾಡುವ ಸುದೀಪ್, ಇತ್ತೀಚೆಗೆ ತಮ್ಮ ಹುಟ್ಟುಹಬ್ಬದ ದಿನವೂ ಅಭಿಮಾನಿಗಳಿಗೆ ಮನವಿ ಮಾಡಿ, ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಂಡಿದ್ದರು.

    ಆಗ ಸುದೀಪ್ ಮೆಚ್ಚುಗೆಗೆ ಪಾತ್ರವಾಗಿದ್ದರು. ಈಗ ಅಭಿಮಾನಿಗಳು ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಉತ್ತರ ಕರ್ನಾಟಕದಲ್ಲಿ ಈ ವರ್ಷವೂ ನೀರಿಗೆ ಬರ. ಆದರೆ, ಕಿಚ್ಚ ಸುದೀಪ್ ಅಭಿಮಾನಿಗಳು ತಮ್ಮ ಶಕ್ತಿಮೀರಿ ಜನರಿಗೆ ಕುಡಿಯುವ ನೀರು ಒದಗಿಸುವ ಸೇವೆಗೆ ಕೈ ಹಾಕಿದ್ದಾರೆ. ಬಸವ ಕಲ್ಯಾಣದಲ್ಲಿರುವ ಕಿಚ್ಚನ ಅಭಿಮಾನಿಗಳ ಸಂಘ ಈ ಸೇವೆಗೆ ಮುಂದಾಗಿದೆ. 

    ಇವರಷ್ಟೆ ಅಲ್ಲ, ಇವರಂತೆಯೇ ಬಡವರಿಗೆ ನೆರವು ನೀಡುವ, ಅಶಕ್ತರಿಗೆ ಸಹಾಯವಾಗುವ ಎಷ್ಟೋ ಕೆಲಸಗಳಲ್ಲಿ ಸುದೀಪ್ ಅಭಿಮಾನಿಗಳು ಮುಂದಿದ್ದಾರೆ. ಶಹಬ್ಬಾಶ್ ಹೇಳಲೇಬೇಕಲ್ಲವೇ...

  • ಕಿಚ್ಚನ ಆ ಒಂದು ಮಾತಿಗೆ ಕೊಲೆಗಾರ ಬದಲಾಗಿ ಹೋದ..!

    sudeep interview changed this khaidi's life

    ಸಾಮಾನ್ಯವಾಗಿ ಕಿಚ್ಚ ಸುದೀಪ್ ಚಿತ್ರಗಳಲ್ಲಿ, ಅವರ ಸಂಭಾಷಣೆಗಳಲ್ಲಿ ನೆಗೆಟಿವ್ ಅನ್ನೋದು ಇರಲ್ಲ. ಅವರ ಸಿನಿಮಾಗಳಲ್ಲಿ.. ಗೆಲ್ತೀವೋ.. ಸೋಲ್ತೀವೋ.. ಪ್ರಯತ್ನ ಮಾಡ್ತಾನೇ ಇರಬೇಕು. ನಾವು ಸೋಲಬಹುದು.. ಆದರೆ ಸಾಯಲ್ಲ.. ಎಂಬಂತಹ ಡೈಲಾಗುಗಳು ಅಥವಾ ಆ ಅರ್ಥ ಬರುವಂತಹ ಸಂಭಾಷಣೆಗಳು ಇದ್ದೇ ಇರುತ್ತವೆ. ಸುದೀಪ್ ಅವರು ಒಂದು ಟಿವಿ ಸಂದರ್ಶನದಲ್ಲಿ ಆ ಮಾತು ಹೇಳಿದ್ದರು. ಅವರ ನಿರ್ದೇಶನದ ಚಿತ್ರ ಸೋತಾಗ ಅನುಭವಿಸಿದ, ಅವರಿಗೆ ಕಂಡ ಜೀವನದ ಪಾಠ ಹೇಳಿದ್ದರು.

    `ನಾನು ಸೋತಿದ್ದೆ. ಏಕೆಂದರೆ ನನ್ನ ಚಿತ್ರ ಗೆದ್ದಿತ್ತು. ಆದರೆ, ನಾನು ಗೆದ್ದಿದ್ದೆ. ನನ್ನ ಚಿತ್ರ ಸೋತಿದ್ದರೂ, ನನ್ನೊಳಗೊಬ್ಬ ಸಮರ್ಥ ನಿರ್ದೇಶಕನಿದ್ದಾನೆ ಅನ್ನೋದು ನನಗೆ ಗೊತ್ತಾಗಿತ್ತು. ಮತ್ತೆ.. ಪ್ರಯತ್ನ ಪಟ್ಟೆ. ಗೆದ್ದೆ' ಎಂದಿದ್ದರು ಸುದೀಪ್.

    ಅದೊಂದು ಮಾತು ಜೈಲಿನಲ್ಲಿದ್ದ ಯಲ್ಲಪ್ಪ ಎಂಬುವನಿಗೆ ಸ್ಫೂರ್ತಿ ತುಂಬಿತ್ತು. ಅಂದಹಾಗೆ ಸುಮಾರು 4 ವರ್ಷಗಳ ಹಿಂದೆ ಈ ಯಲ್ಲಪ್ಪ ಎಂಬ ಖೈದಿ ಸುದೀಪ್ ಮಾತುಗಳನ್ನು ಕೇಳಿ ಸ್ಫೂರ್ತಿಗೊಂಡ. ಕೊಲೆ ಆರೋಪದಲ್ಲಿ 14 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ಯಲ್ಲಪ್ಪ, ಈಗ 4 ಡಿಗ್ರಿ ಪರೀಕ್ಷೆ ಬರೆದು ಪಾಸ್ ಆಗಿದ್ದಾರೆ. ಅಷ್ಟೇ ಅಲ್ಲ, ಒಂದು ಪುಸ್ತಕವನ್ನೂ ಬರೆದಿದ್ದಾರೆ. 

  • ಕಿಚ್ಚನ ಎದುರು ಚಂದನ್ ಶೆಟ್ಟಿ ಬಿಚ್ಚಿಟ್ಟ ಲವ್‍ಸ್ಟೋರಿ

    chandan reveals his love story to sudeep

    ಬಿಗ್‍ಬಾಸ್‍ನಲ್ಲಿ ಚಂದನ್ ಶೆಟ್ಟಿ ಕಂಪ್ಲೀಟ್ ಡಿಫರೆಂಟು. ಇದ್ದ ಜಾಗದಲ್ಲಿ ಕೈಗೆ ಸಿಕ್ಕ ಟೇಬಲ್ಲು, ತಟ್ಟೆಗಳಲ್ಲೇ ರಾರ ಹೊಮ್ಮಿಸುವ, ತಾಳ ಹಾಕಿಸುವ, ಆಶು ಕವಿತೆಗಳ ಸುರಿಮಳೆ ಸುರಿಸುವ ಚಂದನ್ ಶೆಟ್ಟಿ, ಬಿಗ್‍ಬಾಸ್‍ನಲ್ಲಿ ಅತ್ಯಂತ ಇಂಟ್ರೆಸ್ಟಿಂಗ್ ಕ್ಯಾರೆಕ್ಟರ್. ಈಗಾಗಲೇ ಚಂದನ್ ಶೆಟ್ಟಿ ಬಿಗ್‍ಬಾಸ್‍ನಲ್ಲಿ ಜಯಶ್ರೀನಿವಾಸನ್, ನಿವೇದಿತಾ, ಅನುಪಮಾ ಅವರ ಮೇಲೆ ಹೀಗೆಯೇ ಹಾಡು ಕಟ್ಟಿ ಹಾಡಿದ್ದಾರೆ. ಆದರೆ, ಶ್ರುತಿ ಪ್ರಕಾಶ್ ಮೇಲೆ ಚಂದನ್ ಶೆಟ್ಟಿ ಹಾಡು ಕಟ್ಟಿ ಹಾಡಿದ್ದು ಮಾತ್ರ ಎಲ್ಲರಲ್ಲೂ ಒಂದು ಪ್ರಶ್ನೆ ಹುಟ್ಟಿಸಿತ್ತು.

    ಚಂದನ್ ಶೆಟ್ಟಿ ಬಹುಶಃ ಶ್ರುತಿ ಅವರನ್ನು ಇಷ್ಟಪಡುತ್ತಿದ್ದಾರೇನೋ ಎಂಬ ಪ್ರಶ್ನೆ ಮೂಡೋದಕ್ಕೆ ಕಾರಣ, ಚಂದನ್ ಶೆಟ್ಟಿಯವರ ವರ್ತನೆ. ಇದು ಸುದೀಪ್ ಅವರಿಗೂ ಇತ್ತೆಂದು ಕಾಣುತ್ತೆ. ಚಂದನ್ ಅವರ ಬಳಿ ಮತ್ತೊಮ್ಮೆ ಆ ಹಾಡು ಹೇಳಿಸಿದ ಕಿಚ್ಚ, ಶ್ರುತಿ ಅವರನ್ನೂ ಕೆಣಕಿ, ಉತ್ತರ ಕೊಡ್ತೀರೇನೋ ಎಂಬ ನಿರೀಕ್ಷೆಯಲ್ಲಿದ್ವಿ ಎಂದರು.

    ಚಂದನ್ ಶೆಟ್ಟಿ ಮುಚ್ಚುಮರೆಯೇನೂ ಮಾಡಲಿಲ್ಲ. ಶ್ರುತಿ ಅವರ ಕೆಲವೊಂದು ಗುಣಗಳು, ಅವರ ಕ್ಯೂಟ್‍ನೆಸ್ ನನಗಿಷ್ಟ ಎಂದ ಚಂದನ್, ಅವಳು ನಂಗೆ ಸಿಗೋದಿಲ್ಲ ಎಂದೂ ಹೇಳಿಬಿಟ್ಟರು. ಸುದೀಪ್ ನಗುತ್ತಿದ್ದರೆ, ಅತ್ತ ಶ್ರುತಿ ಪ್ರಕಾಶ್ ಕೂಡಾ ಮುಖ ಮುಚ್ಚಿಕೊಂಡು ನಗುತ್ತಿದ್ದರು. 

    ಪ್ರೀತಿ ವಿಚಾರ.. ಅದು ಇನ್ನೂ ಸೀಕ್ರೆಟ್.

  • ಕಿಚ್ಚನ ಕ್ರಿಕೆಟ್ ಟೀಂಗೆ ಲಾರಾ, ಹರ್ಷಲ್ ಗಿಬ್ಸ್..

    kannada chalanachitra cup2

    ಕಿಚ್ಚ ಸುದೀಪ್‍ರ ಕನಸಿನ ಕೂಸುಗಳಲ್ಲಿ ಒಂದು ಕರ್ನಾಟಕ ಚಲನಚಿತ್ರ ಕಪ್. ಮೊದಲ ಸೀಸನ್ ಮುಗಿದು 2ನೇ ಸೀಸನ್ ಶುರುವಾಗುವ ಸಮಯ ಹತ್ತಿರವಾಗುತ್ತಿದೆ. ಎಲ್ಲವೂ ಪ್ಲಾನ್ ಪ್ರಕಾರವೇ ನಡೆದರೆ, ಸೆಪ್ಟೆಂಬರ್‍ನಲ್ಲಿ 2ನೇ ಸೀಸನ್ ಶುರುವಾಗಲಿದೆ. ಈ 2ನೇ ಸೀಸನ್‍ನಲ್ಲಿ ಅಭಿಮಾನಿಗಳು ಥ್ರಿಲ್ಲಾಗುವಂತ ಇನ್ನೊಂದು ವಿಷಯವೂ ಇದೆ. 2ನೇ ಸೀಸನ್‍ನಲ್ಲಿ ಬ್ರಿಯಾನ್ ಲಾರಾ, ಹರ್ಷಲ್ ಗಿಬ್ಸ್‍ರಂತಹ ಖ್ಯಾತನಾಮರು ಕೆಸಿಸಿ ಟೂರ್ನಮೆಂಟ್‍ನಲ್ಲಿ ಆಡುವ ನಿರೀಕ್ಷೆ ಇದೆ. ಈಗಾಗಲೇ ಈ ಕುರಿತು ಮಾತುಕತೆ ನಡೆದಿವೆಯಂತೆ.

    2ನೇ ಸೀಸನ್‍ನ ಕ್ರಿಕೆಟ್ ಟೂರ್ನಮೆಂಟ್, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಸಾಧ್ಯತೆಗಳಿವೆ. ಈ ಟೂರ್ನಮೆಂಟ್‍ನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ಕನಸಿದೆ ಎಂದಿದ್ದ ಸುದೀಪ್, ಆ ಕನಸನ್ನು ನನಸಾಗಿಸುತ್ತಿದ್ದಾರೆ. 

  • ಕಿಚ್ಚನ ಚಾಲೆಂಜ್ ಸ್ವೀಕರಿಸಿದ ಯಶ್, ಪ್ರಿಯಾ ಸುದೀಪ್

    sudeep's fitness challenge

    ಕಿಚ್ಚ ಸುದೀಪ್ ಹಾಕಿದ್ದ ಫಿಟ್‍ನೆಸ್ ಚಾಲೆಂಜ್‍ನ್ನು ಯಶ್ ಮತ್ತು ಪ್ರಿಯಾ ಸ್ವೀಕರಿಸಿದ್ಧಾರೆ. ಯಶ್‍ರದ್ದು ಒಂಥರಾ ಡಿಫರೆಂಟ್. ಅವರು ತಾವು ವ್ಯಾಯಾಮ ಮಾಡುವ ವಿಡಿಯೋ ಹಾಕೋದ್ರ ಬದಲು, ತಮ್ಮ ಗೆಳೆಯ ಚಕ್ಲಿ ಅಲಿಯಾಸ್ ಚೇತನ್‍ರನ್ನು ವ್ಯಾಯಾಮಕ್ಕೆ ಎಳೆದು ತಂದಿದ್ದಾರೆ. ಲೈಫಲ್ಲೇ ವ್ಯಾಯಾಮ ಮಾಡೋಕೆ ಆಗಲ್ಲ ಎನ್ನುತ್ತಿದ್ದ ಗೆಳೆಯನನ್ನು ಜಿಮ್‍ಗೆ ತಳ್ಳಿದ್ದಾರೆ.

    ಹಾಯ್ ಸುದೀಪ್, ನೀವು ನನಗೆ ಚಾಲೆಂಜ್ ಕೊಟ್ಟಿದ್ದೀರ. ಥ್ಯಾಂಕ್ಯೂ. ನಾವು ಆ್ಯಕ್ಟರ್‍ಗಳು ಯಾವಾಗಲೂ ಫಿಟ್ನೆಸ್ ಚಾಲೆಂಜ್ ಮಾಡ್ತನೇ ಇರ್ತೇವೆ. ಹಾಗಾಗಿ ಒಂದು ಟ್ವಿಸ್ಟ್ ಕೊಟ್ಟಿದ್ದೇನೆ. ಲೈಫಲ್ಲಿ ಫಿಟ್ ಆಗೋಕೆ ಸಾಧ್ಯವಿಲ್ಲ ಎನ್ನುವ ನನ್ನ ಬಾಲ್ಯದ ಗೆಳೆಯ ಚೇತನ್ ಅಲಿಯಾಸ್ ಚಕ್ಲಿಯ ಮೂಲಕ ನಿಮ್ಮ ಚಾಲೆಂಜ್ ಮಾಡಿಸುತ್ತೇನೆ ಎಂದು ಹೇಳಿರುವ ಯಶ್, ತಮ್ಮ ಗೆಳೆಯನ ಫಿಟ್ನೆಸ್ ವಿಡಿಯೋ ಅಪ್‍ಲೋಡ್ ಮಾಡಿದ್ದಾರೆ.

    ಸುದೀಪ್ ತಮ್ಮ ಪತ್ನಿ ಪ್ರಿಯಾ ಅವರಿಗೂ ಫಿಟ್‍ನೆಸ್ ಚಾಲೆಂಜ್ ಹಾಕಿದ್ದರು. ಪತಿಯ ಚಾಲೆಂಜ್ ಸ್ವೀಕರಿಸಿದ ಪ್ರಿಯಾ, ವೇಯ್ಟ್ ಲಿಫ್ಟ್ ಮಾಡುವ ವಿಡಿಯೋ ಹಾಕಿದ್ದಾರೆ. 

    ಇನ್ನು ಸುದೀಪ್ ಹಾಕಿರುವ ಚಾಲೆಂಜ್‍ನಲ್ಲಿ ಬಾಕಿ ಉಳಿದಿರೋದು ಶಿವರಾಜ್ ಕುಮಾರ್ ಮಾತ್ರ.

  • ಕಿಚ್ಚನ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ

    cm sidaramaiah, sudeep image

    ಇತ್ತೀಚೆಗೆ ಕಿಚ್ಚ ಸುದೀಪ್ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ವಿಷ್ನು ಸಮಾಧಿ ಅಭಿವೃದ್ಧಿಯ ಕುರಿತು ಮಾತನಾಡಿದ್ದರು. ವಿಷ್ಣು ಅವರ ಸಮಾಧಿ ಸ್ಥಳವನ್ನು ಪುಣ್ಯಭೂಮಿ ಎಂದು ಘೋಷಿಸಿ, ಅಭಿವೃದ್ಧಿಯ ಜವಾಬ್ದಾರಿಯನ್ನು ಅಭಿಮಾನಿಗಳಿಗೇ ಕೊಟ್ಟರೂ ನಿರ್ವಹಿಸುತ್ತೇವೆ ಎಂದು ಹೇಳಿದ್ದರು. ವಿಷ್ಣು ಸ್ಮಾರಕ ನಿರ್ಮಾಣದ ಯೋಜನೆಗೆ ಯಾವುದೇ ವಿರೋಧವಿಲ್ಲ ಎಂದು ಸ್ಪಷ್ಟಪಡಿಸಿದ್ದ ಸುದೀಪ್, ವಿಷ್ಣು ಅವರ ಸಮಾಧಿ ಸ್ಥಳ ಅಭಿವೃದ್ಧಿಯಾಗದೇ ಇರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದರು.

    ಸುದೀಪ್ ಅವರ ಮನವಿಗೆ ತಕ್ಷಣ ಸ್ಪಂದಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ತಮ್ಮ ಅಪರ ಕಾರ್ಯದರ್ಶಿ ಡಾ.ಸಿಂಧೆ ಭೀಮಸೇನ ರಾವ್ ಅವರಿಗೆ ಈ ಕುರಿತು ಪರಿಶೀಲಿಸುವಂತೆ ಸೂಚನೆ ಕೊಟ್ಟಿದ್ದಾರೆ. ಡಾ.ವಿಷ್ಣುವರ್ಧನ ಪುಣ್ಯಭೂಮಿ ಅಭಿವೃದ್ಧಿ ಕುರಿತು ಸಿಎಂ ಸೂಚನೆ ನೀಡಿದ್ದು, ತಮ್ಮ ಅರ್ಜಿಯನ್ನು ಪರಿಶೀಲಿಸುತ್ತಿದ್ದೇವೆ ಎಂದು ಸ್ವತಃ ಭೀಮಸೇನ ರಾವ್ ಸುದೀಪ್ ಅವರಿಗೆ ಪತ್ರ ಬರೆದಿದ್ದಾರೆ. 

    ತುರ್ತಾಗಿ ಕ್ರಮ ತೆಗೆದುಕೊಂಡ ಮುಖ್ಯಮಂತ್ರಿಗಳಿಗೆ ಸುದೀಪ್ ಧನ್ಯವಾದ ಅರ್ಪಿಸಿದ್ದಾರೆ.ವಿಷ್ಣು ಅಭಿಮಾನಿಗಳಾದ ನಮಗೆಲ್ಲ ಇದು ಅವಿಸ್ಮರಣೀಯ ಕ್ಷಣ ಎಂದು ಹೇಳಿಕೊಂಡಿದ್ದಾರೆ ಸುದೀಪ್.

  • ಕಿಚ್ಚನ ಹುಟ್ಟುಹಬ್ಬಕ್ಕೆ 3 ಉಡುಗೊರೆ

    sudeep birthday gifts

    ಕಿಚ್ಚ ಸುದೀಪ್ ಈ ಬಾರಿ ಹುಟ್ಟುಹಬ್ಬವನ್ನು ಅಭಿಮಾನಿಗಳ ಜೊತೆಯಲ್ಲೇ ಆಚರಿಸಿಕೊಳ್ಳಲು ನಿರ್ಧರಿಸಿದ್ದಾರೆ. ಇದರ ಜೊತೆಯಲ್ಲೇ ಸುದೀಪ್ ಅವರಿಗೆ 3 ಉಡುಗೊರೆಗಳು ಕಾದಿವೆ. ಅದು ಚಿತ್ರತಂಡದವರಿಂದ.

    ಸುದೀಪ್ ಹುಟ್ಟುಹಬ್ಬಕ್ಕೆ ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರತಂಡ, ಒಂದು ಹಾಡನ್ನು ರಿಲೀಸ್ ಮಾಡುತ್ತಿದೆ. ಪೈಲ್ವಾನ್ ಹಾಗೂ ಕೋಟಿಗೊಬ್ಬ-3 ಚಿತ್ರತಂಡಗಳು ಟೀಸರ್ ಬಿಡುಗಡೆ ಮಾಡುತ್ತಿವೆ. ಒಬ್ಬ ನಟನಾಗಿ ನನಗೆ ಹಾಗೂ ನನ್ನ ಅಭಿಮಾನಿಗಳಿಗೆ ಇದು ಸಂಭ್ರಮದ ಸಮಯ ಎಂದು ಖುಷಿ ಹಂಚಿಕೊಂಡಿದ್ದಾರೆ ಸುದೀಪ್.

  • ಕಿಚ್ಚನ ಹುಟ್ಟುಹಬ್ಬಕ್ಕೆ ಬನ್ನಿ. ಷರತ್ತುಗಳು ಅನ್ವಯ..

    sudeep to celebrate hi birthday with fans this year

    ಕಳೆದ ವರ್ಷದ ಹುಟ್ಟುಹಬ್ಬವನ್ನು ಮನೆಯಿಂದ ಹೊರಗಿದ್ದು, ಅಭಿಮಾನಿಗಳಿಂದ ದೂರವಿದ್ದು ಆಚರಿಸಿಕೊಂಡಿದ್ದ ಕಿಚ್ಚ ಸುದೀಪ್, ಈ ಬಾರಿ ಅಭಿಮಾನಿಗಳ ಜೊತೆಯಲ್ಲೇ ಹುಟ್ಟುಹಬ್ಬ ಆಚರಿಸುತ್ತಿದ್ದಾರೆ. ಕಳೆದ ವರ್ಷ, ಹುಟ್ಟುಹಬ್ಬಕ್ಕೆಂದು ಮಾಡುವ ವೆಚ್ಚವನ್ನು ಯಾವುದಾದರೂ ಸಮಾಜ ಸೇವಾ ಕಾರ್ಯಗಳಿಗೆ ಬಳಸಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದರು. ಆದರೆ, ಈ ಬಾರಿ ಮತ್ತೊಮ್ಮೆ ಅಭಿಮಾನಿಗಳ ಜೊತೆಗೇ ಹುಟ್ಟುಹಬ್ಬ ಆಚರಿಸುತ್ತಿದ್ದಾರೆ. ಕಾರಣ, ಬೇರೆ ಯಾರೂ ಅಲ್ಲ. ಅಭಿಮಾನಿಗಳೇ.

    ಸುದೀಪ್ ಎಲ್ಲೇ ಹೋಗಲೀ.. ಎಲ್ಲೆಡೆ ಅಭಿಮಾನಿಗಳದ್ದು ಒಂದೇ ಪ್ರಶ್ನೆಯಾಗಿತ್ತು. ನಮ್ಮ ಜೊತೆ ಹುಟ್ಟುಹಬ್ಬ ಆಚರಿಸಿ ಎಂದು ಪಟ್ಟು ಹಿಡಿಯುತ್ತಿದ್ದ ಅಭಿಮಾನಿಗಳು, ಸುದೀಪ್ ಓಕೆ ಎನ್ನುವವರೆಗೆ ಬಿಡುತ್ತಿರಲಿಲ್ಲ. ಕೊನೆಗೂ ಅಭಿಮಾನಿಗಳ ಎದುರು, ಸುದೀಪ್ ಶರಣಾಗಿದ್ದಾರೆ. ಆದರೆ, ಕೆಲವು ಷರತ್ತುಗಳನ್ನು ವಿಧಿಸಿದ್ದಾರೆ.

    ಸುದೀಪ್ ಹುಟ್ಟುಹಬ್ಬಕ್ಕೆ ಹೋಗುವವರು ಯಾವುದೇ ಹಾರ, ತುರಾಯಿ, ಕೇಕು ತೆಗೆದುಕೊಂಡು ಹೋಗುವಂತಿಲ್ಲ. ಉಡುಗೊರೆ ತೆಗೆದುಕೊಂಡು ಹೋಗುವಂತಿಲ್ಲ. ಬರೀ ಕೈಯ್ಯಲ್ಲಿ ಹೋಗಬೇಕು. ಶುಭಾಶಯ ಹೇಳಬೇಕು. ಅಷ್ಟೆ.. ಇದು ಸುದೀಪ್ ಅಭಿಮಾನಿಗಳಿಗೆ ವಿಧಿಸಿರುವ ಷರತ್ತು.

    ಅದಕ್ಕೆ ಕಾರಣವೂ ಇದೆ. ಹುಟ್ಟುಹಬ್ಬಕ್ಕೆಂದು ಬರುವವರು ನೂರಾರು ಕೆಜಿ ಕೇಕ್ ತಂದು, ಸ್ವಲ್ಪ ತಿಂದು ಮಿಕ್ಕಿದ್ದನ್ನು ರಸ್ತೆಯಲ್ಲಿ ಎಸೆದು ಹೋಗುತ್ತಾರೆ. ಹಾಗೆ ರಸ್ತೆಯಲ್ಲಿ ಎಸೆದು ಹೋದ ಕೇಕ್‍ನ್ನು ಅಪಾರ್ಟ್‍ಮೆಂಟ್‍ವೊಂದರಲ್ಲಿ ಕೆಲಸ ಮಾಡುತ್ತಿದ್ದವರ ಮಗಳು ತಿನ್ನುತ್ತಿದ್ದುದು ಆಕಸ್ಮಿಕವಾಗಿ ಸುದೀಪ್ ಕಣ್ಣಿಗೆ ಬಿದ್ದಿದೆ. ಸುದೀಪ್ ಮನಸ್ಸು ಕಲಕಿದೆ. ಹೀಗಾಗಿಯೇ ಅದನ್ನು ವೇಸ್ಟ್ ಮಾಡುವ ಬದಲು, ಹಸಿದಿರುವವರಿಗೆ ನೀಡಿ ಎಂದು ಮನವಿ ಮಾಡಿದ್ದರು ಸುದೀಪ್. 

    ಈ ಬಾರಿ ಅಭಿಮಾನಿಗಳ ಜೊತೆ ಸುದೀಪ್ ಇರುತ್ತಾರೇನೋ ಹೌದು. ಆದರೆ, ಸರಳವಾಗಿ ಆಚರಿಸಬೇಕು. ಶುಭಾಶಯಕ್ಕಷ್ಟೇ ಸೀಮಿತವಾಗಿರಬೇಕು. ಅಂದಹಾಗೆ.. ಸುದೀಪ್ ಹುಟ್ಟುಹಬ್ಬ ಸೆಪ್ಟೆಂಬರ್ 2ರಂದು.

Ayushmanbhava Movie Gallery

Ellidhe Illitanaka Movie Gallery