` sudeep - chitraloka.com | Kannada Movie News, Reviews | Image

sudeep

 • ಅಭಿಮಾನಿಯ ಅಮ್ಮನ ಕಷ್ಟಕ್ಕೆ ಸ್ಪಂದಿಸಿದ ಮಾಣಿಕ್ಯ

  sudeep reacts to his fan's problem

  ಅಣ್ಣ.. ಇವರು ನನ್ನ ತಾಯಿ. ಮಂಗಳಮ್ಮ. 40 ವರ್ಷ ವಯಸ್ಸಾಗಿದೆ. 4 ವರ್ಷಗಳಿಂದ  ಇವರಿಗೆ ಸ್ತನ ಕ್ಯಾನ್ಸರ್ ಇದೆ. ಈಗಾಗಲೇ 2 ಬಾರಿ ಆಪರೇಷನ್ ಮಾಡಿಸಿದ್ದೇವೆ. ಆದರೂ ಕಾಯಿಲೆ ಉಲ್ಬಣವಾಗುತ್ತಲೇ ಇದೆ. ತುಂಬಾ ಕಷ್ಟದಲ್ಲಿದ್ದೇವೆ ಅಣ್ಣಾ.. ದಯವಿಟ್ಟು ಸಹಾಯ ಮಾಡಿ. 

  ಕಿಚ್ಚ ಸುದೀಪ್ ಅಭಿಮಾನಿ ಲಕ್ಷ್ಮಣ್ ಗೌಡ ಎಂಬುವವರು ಸುದೀಪ್‍ಗೆ ಸಾಮಾಜಿಕ ಜಾಲತಾಣದ ಮೂಲಕವೇ ಇಂತಾದ್ದೊಂದು ಮನವಿ ಮಾಡಿದ್ದಾರೆ. ಅಭಿಮಾನಿಯ ತಾಯಿಯ ಕಷ್ಟಕ್ಕೆ ತಕ್ಷಣ ಸ್ಪಂದಿಸಿರುವ ಕಿಚ್ಚ ಸುದೀಪ್, ನಿಮ್ಮ ತಾಯಿಯನ್ನು ಅಡ್ಮಿಟ್ ಮಾಡಿರುವ ಆಸ್ಪತ್ರೆಯ ವಿವರ ತಿಳಿಸುವಂತೆ ಸೂಚಿಸಿದ್ದಾರೆ. ನಿಮ್ಮ ತಾಯಿ ಗುಣಮುಖರಾಗಲಿ ಎಂದು ನಾನೂ ಪ್ರಾರ್ಥಿಸುತ್ತೇನೆ ಎಂದಿದ್ದಾರೆ ಸುದೀಪ್. ನಿಮ್ಮನ್ನು ಮಾಣಿಕ್ಯ ಎಂದು ಕರೆಯುವುದೇ ಈ ಕಾರಣಕ್ಕೆ ಎಂದು ಅಭಿಮಾನಿಗಳು ಕೊಂಡಾಡಿದ್ದಾರೆ. 

 • ಅಭಿಮಾನಿಯ ಆಸೆ ಪೂರೈಸಿದ ಮಾಣಿಕ್ಯ

  sudeep fulfills his fan's dream

  ಕಿಚ್ಚ ಸುದೀಪ್, ಅಭಿಮಾನಿಗಳ ಜೊತೆ ಸದಾ ಸಂಪರ್ಕದಲ್ಲಿರುವ ಕಲಾವಿದ. ಸೋಷಿಯಲ್ ಮೀಡಿಯಾ ಮೂಲಕ ನೇರವಾಗಿ, ನಿರಂತರವಾಗಿ ಅಭಿಮಾನಿಗಳ ಜೊತೆಯಲ್ಲಿರುವ ಸುದೀಪ್, ತಮ್ಮ ಅಭಿಮಾನಿಗಳನ್ನು ಆತ್ಮೀಯವಾಗಿ ನೋಡಿಕೊಳ್ಳುತ್ತಾರೆ. 

  ಅಭಿಷೇಕ್ ಎಂಬ ಈ ಪುಟ್ಟ ಬಾಲಕ ಮಾಂಸಖಂಡ ದೌರ್ಬಲ್ಯದಿಂದ ಬಳಲುತ್ತಿದ್ದಾರೆ. ಸುದೀಪ್ ಅವರ ಅಭಿಮಾನಿ. ಈ ಅಭಿಮಾನಿಗೆ ಸುದೀಪ್ ಅವರನ್ನು ನೋಡಬೇಕು ಎನ್ನುವ ಹಂಬಲ. ವಿಷಯ ತಿಳಿದ ಸುದೀಪ್, ಅಭಿಷೇಕ್ ಅವರ ಕುಟುಂಬವನ್ನು ಭೇಟಿ ಮಾಡಿದ್ದಾರೆ.

  ಧೈರ್ಯವಾಗಿರಿ, ಸರಿ ಹೋಗುತ್ತೆ ಎಂದು ನೈತಿಕ ಸ್ಥೈರ್ಯ ತುಂಬಿದ್ದಾರೆ. ಪುಟ್ಟ ಅಭಿಮಾನಿಯ ಬಯಕೆ ಈಡೇರಿಸಿದ್ದಾರೆ. ಕಿಚ್ಚನ ಅಭಿಮಾನಿಗಳಂತೂ ಸುದೀಪ್ ಅವರ ಈ ಹೃದಯವಂತಿಕೆಯನ್ನು ಮೆಚ್ಚಿ ಕೊಂಡಾಡಿದ್ದಾರೆ.

 • ಅರ್ಧ ಡಜನ್ ಚೆಲುವೆಯರ ಜೊತೆ ಶಿವಣ್ಣ..!

  6 sandalwood beauties shake leg with shivanna

  ಬೋಲೋ ಬೋಲೋ ರಾಮಪ್ಪ.. ಎಂಥ ಹುಡುಗಿ ಬೇಕು ಒಸಿ ಬಿಡಿಸಿ ಹೇಳಪ್ಪಾ.. ಇದು ದಿ ವಿಲನ್ ಚಿತ್ರದ ಹಾಡು. ಈ ಹಾಡು ಚಿತ್ರೀಕರಣಗೊಂಡಿರೋದು ಶಿವರಾಜ್‍ಕುಮಾರ್ ಮೇಲೆ. ಹಾಡಿನಲ್ಲಿ ಶಿವಣ್ಣನ ಜೊತೆ ಹೆಜ್ಜೆ ಹಾಕಿರೋದು ಕನ್ನಡ ಚಿತ್ರರಂಗದ ಅರ್ಧ ಡಜನ್ ಚೆಲುವೆಯರು. 

  ಡಿಂಪಲ್ ಕ್ವೀನ್ ರಚಿತಾ ರಾಮ್, ಯು ಟರ್ನ್ ಶ್ರದ್ಧಾ ಶ್ರೀನಾಥ್, ಗೂಗ್ಲಿ ಗೊಂಬೆ ಶಾನ್ವಿ ಶ್ರೀವಾಸ್ತವ್, ರಂಗಿತರಂಗದ ಸುಂದರಿ ರಾಧಿಕಾ ಚೇತನ್, ಗಾಳಿಪಟದ ಭಾವನಾ ರಾವ್, ಸಂಯುಕ್ತಾ ಹೊರನಾಡು... ಶಿವಣ್ಣನ ಜೊತೆ ಬಿಂದಾಸ್ ಆಗಿ ಕುಣಿದಿದ್ದಾರೆ. ಎಲ್ಲರದ್ದೂ ಟ್ರೆಡಿಷನಲ್ ಡ್ರೆಸ್ ಅನ್ನೋದು ವಿಶೇಷ.

  ಎಲ್ಲ ಚೆಲುವೆಯರಿಗೂ ಥ್ರಿಲ್ಲಾಗಿರೋದು ಶಿವಣ್ಣನ ಎನರ್ಜಿ  ನೋಡಿ. ನಾವು ಸ್ಟೆಪ್ ಕಲಿಯೋದು ನಿಧಾನ. ಅವರೋ ತುಂಬಾ ಫಾಸ್ಟು. ಆದರೆ ಶಿವಣ್ಣ ನಾವು ಕಲಿಯುವವರೆಗೆ ಸುಸ್ತೇ ಆಗದೆ ನಮ್ಮ ಜೊತೆ ಹೆಜ್ಜೆ ಹಾಕ್ತಾರೆ. ಬೇಜಾರೂ ಮಾಡ್ಕೊಳ್ಳಲ್ಲ. ಸುಸ್ತೂ ಆಗಲ್ಲ ಅನ್ನೋದು ರಚಿತಾ ರಾಮ್ ಕಾಂಪ್ಲಿಮೆಂಟು.

  ಶಿವಣ್ಣನ ಜೊತೆ ಕಾಣಿಸಿಕೊಂಡಿದ್ದು ಒಂದೇ ಡ್ಯಾನ್ಸ್‍ನಲ್ಲಿ. ಅದೊಂದು ಮರೆಯಲಾಗದ ಅನುಭವ. ಕಿರಿಯರಿಗೆ ಅವರು ನೀಡುವ ಪ್ರೋತ್ಸಾಹವನ್ನು ಮರೆಯೋಕೆ ಸಾಧ್ಯವೇ ಇಲ್ಲ ಅಂತಾರೆ ರಾಧಿಕಾ ಚೇತನ್.

 • ಅಲ್ಲಿ ಹಂಗೆ.. ಇಲ್ಲಿ ಹಿಂಗೆ.. ಕ್ಯಾರೆಕ್ಟರ್ ಹೆಂಗೆ..?

  amy jackson's role

  ದಿ ವಿಲನ್, ಕಿಚ್ಚ ಸುದೀಪ್, ಶಿವರಾಜ್ ಕುಮಾರ್ ಕಾಂಬಿನೇಷನ್, ಜೋಗಿ ಪ್ರೇಮ್ ಡೈರೆಕ್ಷನ್ ಹಾಗೂ ಮನೋಹರ್ ನಿರ್ಮಾಣದ ಅದ್ಧೂರಿ ಚಿತ್ರ. ಶೂಟಿಂಗ್ ಹಂತದಿಂದಲೇ ಭರ್ಜರಿಯಾಗಿ ಸುದ್ದಿ, ಸದ್ದು ಮಾಡುತ್ತಿದೆ. ಈಗ ಅಂಥದ್ದೇ ಕುತೂಹಲ ಮೂಡಿಸಿರುವುದು ಆ್ಯಮಿ ಜಾಕ್ಸನ್.

  ಚಿತ್ರದ ಆರಂಭದ ಫೋಟೋಗಳಲ್ಲಿ ಈ ಫಾರಿನ್ ಸುಂದರಿ ಕಂಪ್ಲೀಟ್ ಮಾಡರ್ನ್ ಆಗಿ ಕಣ್ಣು ತಂಪು ಮಾಡಿದ್ದರು. ಈಗ ಚಿಕ್ಕಮಗಳೂರಿನಿಂದ ಬರುತ್ತಿರುವ ಹೊಸ ಫೋಟೋಗಳಲ್ಲಿ ಅದೇ ಆ್ಯಮಿ ಜಾಕ್ಸನ್ ಹಳ್ಳಿ ಹುಡುಗಿಯಾಗಿ ಕಂಗೊಳಿಸುತ್ತಿದ್ದಾರೆ.

  ಹಾಗಾದರೆ, ಏನಿದು..? ಚಿತ್ರದಲ್ಲಿ ಅವರ ಪಾತ್ರ ಎಂಥದ್ದು..? ಅಲ್ಲಿ ಹಂಗೆ.. ಇಲ್ಲಿ ಹಿಂಗೆ.. ಕ್ಯಾರೆಕ್ಟರ್ ಹೆಂಗೆ..? ಪ್ರೇಮ್ ಅವರನ್ನ ಕೇಳಿ ನೋಡಿ.. ನೋಡಾಣಂತೆ ಬಿಡಣ್ಣ.. ಸಿನಿಮಾ ರಿಲೀಸ್ ಆದ್ಮೇಲೆ ನಿಮ್ಗೇ ಗೊತ್ತಾಗ್ತದೆ ಅಂತಾರೆ.

 • ಆಗಸ್ಟ್ 18ಕ್ಕೆ ಪೈಲ್ವಾನ್ ಹಬ್ಬ ಫಿಕ್ಸ್

  pailwaan image

  ವರಮಹಾಲಕ್ಷ್ಮಿ ಹಬ್ಬದ ದಿನ ಚಿತ್ರದುರ್ಗದಲ್ಲಿ ನಡೆಯಬೇಕಿದ್ದ ಪೈಲ್ವಾನ್ ಹಬ್ಬ ಬೆಂಗಳೂರಿಗೆ ಶಿಫ್ಟ್ ಆಗಿದೆ. ಪ್ರವಾಹದ ಹಿನ್ನೆಲೆಯಲ್ಲಿ ಕೊನೆಯ ಘಳಿಗೆಯಲ್ಲಿ ಚಿತ್ರದುರ್ಗದ ಕಾರ್ಯಕ್ರಮ ರದ್ದು ಮಾಡಲಾಗಿತ್ತು. ಈಗ ಅದು ಕೋರಮಂಗಲದ ಇಂಡೋರ್ ಸ್ಟೇಡಿಯಂನಲ್ಲಿ ಆಡಿಯೋ ಬಿಡುಗಡೆ ನಡೆಯಲಿದೆ.

  ಉಳಿದಂತೆ ಬಿಡುಗಡೆ ಸಮಾರಂಭದಲ್ಲಿ ಯಾವುದೇ ಬದಲಾವಣೆ ಇಲ್ಲ. ಒನ್ಸ್ ಎಗೇಯ್ನ್ ಪುನೀತ್ ರಾಜ್‍ಕುಮಾರ್ ಅವರೇ ವಿಶೇಷ ಅತಿಥಿಯಾಗಿರಲಿದ್ದಾರೆ. ನಿರ್ದೇಶಕ ಕೃಷ್ಣ, ನಿರ್ಮಾಪಕಿ ಸ್ವಪ್ನಾ ಕೃಷ್ಣ, ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ, ಸುನಿಲ್ ಶೆಟ್ಟಿ ಮೊದಲಾದವರೆಲ್ಲ ಬರಲಿದ್ದಾರೆ.

  ಆಗಸ್ಟ್ 18, ಸಂಜೆ 5 ಗಂಟೆಗೆ. ಕೋರಮಂಗಲದ ಇಂಡೋರ್ ಸ್ಟೇಡಿಯಂನಲ್ಲಿ ಹಬ್ಬ ನಡೆಯುತ್ತದೆ. ಅದಕ್ಕೂ ಮುನ್ನ ಧ್ರುವತಾರೆ.. ಧ್ರುವತಾರೆ.. ಸಾವಿರಾರು... ಭೂಮಿಯಲ್ಲೂ ಇರುತಾರೆ.. ಎಂಬ ಹಾಡಿನ ಲಿರಿಕಲ್ ವಿಡಿಯೋ ರಿಲೀಸ್ ಮಾಡಿದೆ ಪೈಲ್ವಾನ್ ಟೀಂ.

 • ಆತ್ಮಸಂಗಾತಿಗೆ ಕಿಚ್ಚನ ಹೃದಯಗೀತೆ

  sudeep wishes his wife priya

  ನನ್ನ ಜೀವನದ ಶಕ್ತಿ, ಸ್ಫೂರ್ತಿ, ನನ್ನ ತಾಳ್ಮೆಯ ಹಿಂದಿನ ಪ್ರೇರಣೆ, ನನ್ನ ಗೌರವ, ನನ್ನ ಹೆಮ್ಮೆಯ ಆತ್ಮಸಂಗಾತಿಯೇ ನಿನಗೆ ಶುಭವಾಗಲಿ. ಹುಟ್ಟುಹಬ್ಬದ ಶುಭಾಶಯಗಳು. ಸದಾ ಪ್ರೀತಿಸೋಣ

  ಕಿಚ್ಚ ಸುದೀಪ್ ಇಂಥಾದ್ದೊಂದು ಹೃದಯಗೀತೆಯಂತ ಶುಭ ಹಾರೈಕೆ ನೀಡಿರುವುದು ತಮ್ಮ ಪತ್ನಿ ಪ್ರಿಯಾಗೆ. ಇಂದು ಕಿಚ್ಚು ಸುದೀಪ್ ಅವರ ಮನ ಮೆಚ್ಚಿದ ಮಡದಿಯ ಹುಟ್ಟುಹಬ್ಬ. ಶುಭಾಶಯಗಳು.

 • ಆನ್‍ಲೈನ್‍ನಲ್ಲಿ ಅಂಬಿ ಲೀಕ್ - ಪೈರಸಿ ಪರಾಕ್ರಮಿಗೆ ಕಿಚ್ಚನ ಎಚ್ಚರಿಕೆ

  sudeep fights against piracy makers

  ಅಂಬಿ ನಿಂಗ್ ವಯಸ್ಸಾಯ್ತೋ ಸಿನಿಮಾ ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ವಿವಿಧ ಭಾಷೆಯ ಚಿತ್ರರಂಗದ ಸೆಲಬ್ರಿಟಿಗಳೂ ಸಿನಿಮಾ ನೋಡಿ ಥ್ರಿಲ್ಲಾಗುತ್ತಿದ್ದಾರೆ. ಎಂದಿನಂತೆ ಈ ಚಿತ್ರಕ್ಕೂ ಪೈರಸಿ ದುರುಳರ ಕಾಟ ತಟ್ಟಿದೆ. ಇಡೀ ಚಿತ್ರವನ್ನು ಆನ್‍ಲೈನ್‍ನಲ್ಲಿ ಬಿಡುಗಡೆ ಮಾಡಿ ವಿಕೃತ ಸಂತೋಷ ಅನುಭವಿಸಿದ್ದಾನೆ ಒಬ್ಬ ಕಿರಾತಕ. ಆ ಕಿರಾತಕನಿಗೆ ಸುದೀಪ್ ತಮ್ಮದೇ ಶೈಲಿಯಲ್ಲಿ ವಾರ್ನಿಂ ಕೊಟ್ಟಿದ್ದಾರೆ.

  ಮೈ ಫ್ರೆಂಡ್, ನೀನು ಎಲ್ಲೇ ಇರು. ನಿನ್ನ ಮೂಲ ಪತ್ತೆ ಹಚ್ಚುತ್ತೇನೆ. ಇದು ಕೋಪ ಅಲ್ಲ, ಸರಿ ತಪ್ಪಿನ ವಿಚಾರ ಅಷ್ಟೆ. ಶೀಘ್ರದಲ್ಲೇ ನಿನ್ನನ್ನು ಕಾಣುತ್ತೇನೆ.

  ಇದು ಸುದೀಪ್ ಪೈರಸಿ ಪರಾಕ್ರಮಿಗೆ ನೀಡಿರುವ ಎಚ್ಚರಿಕೆ. ಸಾತ್ವಿಕರ ಸಿಟ್ಟೂ ಅಪಾಯಕಾರಿ. 

 • ಆರಡಿ ಕಟೌಟು, ಕುಳ್ಳ ಆಗೋದು ಹೇಗೆ..?

  sudeep in ambi ninage vaisaitu

  ಅಂಬಿ ನಿಂಗೆ ವಯಸ್ಸಾಯ್ತೋ.. ಚಿತ್ರ ಟೇಕಾಫ್ ಆಗಿದೆ. ಸಿನಿಮಾದಲ್ಲಿ ಹೀರೋ ಅಂಬರೀಷ್. ಅಂಬರೀಷ್ ಯುವಕರಾಗಿದ್ದಾಗಿನ ಪಾತ್ರ ಮಾಡೋದು ಕಿಚ್ಚ ಸುದೀಪ್. 

  ಈಗ ಅಭಿಮಾನಿಗಳನ್ನು ಕಾಡ್ತಾ ಇರೋ ಪ್ರಶ್ನೆ ಇದು. ಸುದೀಪ್ ಆರಡಿ ಕಟೌಟು. ಅಂಬರೀಷ್ 5+ ಅಡಿ ಕಟೌಟು. ಹೀಗಿರೋವಾಗ ಸುದೀಪ್ ಅದು ಹೇಗೆ ಕುಳ್ಳರಾಗ್ತಾರೆ..? ಇನ್ನೊಂದು ಪ್ರಶ್ನೆ ಕಣ್ಣುಗಳದ್ದು. ಇಬ್ಬರ ಕಣ್ಣುಗಳ ನಡುವೆ ಹೋಲಿಕೆಯೇ ಇಲ್ಲ. ಇದನ್ನೆಲ್ಲ ಹೇಗೆ ಮಾಡ್ತಾರೆ..? 

  ಈ ಪ್ರಶ್ನೆಗೆ ಉತ್ತರ ಟೆಕ್ನಾಲಜಿ. ಶಾರುಕ್ ಖಾನ್‍ರ ಫ್ಯಾನ್ ಚಿತ್ರಕ್ಕೆ ಕೆಲಸ ಮಾಡಿದ್ದ ಮುಂಬೈನ ದಿ ಬೆಸ್ಟ್ ಎನ್ನುವ ಗ್ರಾಫಿಕಲ್ ಟೀಂ ಜೊತೆ ಮಾತುಕತೆ ನಡೆಯುತ್ತಿದೆಯಂತೆ. ಕಿಚ್ಚ ಕ್ರಿಯೇಷನ್ಸ್ ಅರ್ಪಿಸುತ್ತಿರುವ ಸಿನಿಮಾಗೆ ಜಾಕ್ ಮಂಜು ನಿರ್ಮಾಪಕರು.

  ಟೆಕ್ನಾಲಜಿಯಲ್ಲಿ ಇನ್ನೂ ಏನೇನು ಅದ್ಭುತ ಹೊರಬೀಳಲಿವೆಯೋ.. ಕಾದು ನೋಡೋಣ.

 • ಇದು ಸೆಹ್ವಾಗ್ ಕೋಟೆ ಕಣೋ.. 

  sehwag speaks kannada

  ಇದು ನನ್ನೂರು. ಚಿನ್ನಸ್ವಾಮಿ ಸ್ಟೇಡಿಯಂಗಿಳಿದು ಬ್ಯಾಟ್ ಹಿಡಿದ್ರೆ, ಫೋರ್, ಸಿಕ್ಸ್ ಸುರಿಮಳೆ ಆಗುತ್ತೆ. ಇದು ಸೆಹ್ವಾಗ್ ಕೋಟೆ ಕಣೋ..

  ಆರ್ಮುಗಂ ಸ್ಟೈಲಲ್ಲಿ ಸೆಹ್ವಾಗ್ ಅಬ್ಬರಿಸುತ್ತಿದ್ದರೆ, ಕೆಸಿಸಿ ಸುದ್ದಿಗೋಷ್ಟಿಯಲ್ಲಿದ್ದರ ಮುಖದಲ್ಲೆಲ್ಲ ನಗುವೋ ನಗು. ಕೆಸಿಸಿ ಟೂರ್ನಿಯಲ್ಲಿ ಈ ಬಾರಿ ಕನ್ನಡ ಸಿನಿಮಾ ನಟರೊಂದಿಗೆ ಸೆಹ್ವಾಗ್ ಕೂಡಾ ಪಾಲ್ಗೊಳ್ಳುತ್ತಿದ್ದಾರೆ.

  ನಾನು ಕನ್ನಡ ಸಿನಿಮಾ ನೋಡಿಲ್ಲ. ಆದರೆ ಸುದೀಪ್ ಅಭಿನಯದ ಮಕ್ಕಿ (ಈಗ ಚಿತ್ರದ ಹಿಂದಿ ವರ್ಷನ್) ನೋಡಿದ್ದೇನೆ. ಅದುವರೆಗೆ ಸುದೀಪ್ ಒಬ್ಬ ಸೂಪರ್ ಸ್ಟಾರ್ ಎನ್ನುವುದೇ ನನಗೆ ಗೊತ್ತಿರಲಿಲ್ಲ. ಅದಾದ ಮೇಲೆ ಪರಿಚಯವಾಯ್ತು. ಈಗ ಇಲ್ಲಿಗೆ ತಂದಿಟ್ಟಿದೆ. ಕನ್ನಡ ಕಲಿತುಕೊಳ್ಳುವ ಆಸಕ್ತಿಯೂ ಇದೆ ಎಂದರು ಸೆಹ್ವಾಗ್. ಭಾಷೆ ಕಲಿಯುವ ವಿಚಾರದಲ್ಲಿ ಸೆಹ್ವಾಗ್‍ಗೆ ಮೊದಲಿನಿಂದಲೂ ಆಸಕ್ತಿ ಇರುವುದು ಗುಟ್ಟಿನ ವಿಷಯವೇನಲ್ಲ.

  ದ್ರಾವಿಡ್, ಕುಂಬ್ಳೆಯವರಿಂದ ಕನ್ನಡದ ಪರಿಚಯವಿದೆ. ಅವರು ಕನ್ನಡದಲ್ಲಿ ಮಾತನಾಡಿಕೊಳ್ಳೋದನ್ನು ಕೇಳಿದ್ದೇನೆ. ಸ್ವಲ್ಪ ಸ್ವಲ್ಪ ಅರ್ಥವಾಗುತ್ತೆ. ಮಾತನಾಡೋದು ಕಷ್ಟ ಎಂದು ಕನ್ನಡದ ಕಥೆ ಹೇಳಿಕೊಂಡರು ಸೆಹ್ವಾಗ್.

  ಮುಂದೊಂದು ದಿನ ನಾನು ಕನ್ನಡ ಸಿನಿಮಾ ನಿರ್ಮಿಸಿದರೂ ಅಚ್ಚರಿಯಿಲ್ಲ ಎಂದಿದ್ದಾರೆ ಸೆಹ್ವಾಗ್. 

 • ಈ ಬಾರಿ ಕೆಪಿಎಲ್ ಆಡುತ್ತಿಲ್ಲ ಸುದೀಪ್ - ನಟ ಸುದೀಪ್​ ಕೆಎಸ್​ಸಿಎ ವಿರುದ್ಧ ಸಿಟ್ಟಾಗಿದ್ದೇಕೆ..?

  rockstars team will not play in kpl

  ಇದು ಸುದೀಪ್ ಮತ್ತು ಕ್ರಿಕೆಟ್ ಎರಡನ್ನೂ ಆರಾಧಿಸುವ ಸುದೀಪ್ ಅಭಿಮಾನಿಗಳಿಗೆ ಬೇಸರದ ಸುದ್ದಿ. ಕಳೆದ ಬಾರಿ ಕೆಪಿಎಲ್​ನಲ್ಲಿ ಆಡಿ ಹವಾ ಸೃಷ್ಟಿಸಿದ್ದ ಕಿಚ್ಚ ಸುದೀಪ್ ನೇತೃತ್ವದ ರಾಕ್ ಸ್ಟಾರ್ಸ್ ತಂಡ ಈ ಬಾರಿ ಕೆಪಿಎಲ್​ನಲ್ಲಿ ಆಡುತ್ತಿಲ್ಲ.  ಅವರ ತಂಡದ ಗುತ್ತಿಗೆಯನ್ನು ನವೀಕರಿಸಿಲ್ಲ ಎನ್ನುವ ಕಾರಣವನ್ನು ಕೆಎಸ್​ಸಿಎ ನೀಡಿದೆ.

  ಆದರೆ ವಿಷಯ ಇದಲ್ಲ. ಸುದೀಪ್ ತಂಡವೇನೂ ಸ್ವತಃ ಸರಣಿಯಿಂದ ಹಿಂದೆ ಸರಿಯುತ್ತಿಲ್ಲ. ತಂಡದ ನಾಯಕ ಸುದೀಪ್​ಗಾಗಲೀ, ತಂಡದ ಮಾಲೀಕ ರಾಜುಗೌಡ ಅವರಿಗಾಗಲಿ ಮಾಹಿತಿಯನ್ನೇ ನೀಡದೆ ಕೆಎಸ್​ಸಿಎ, ರಾಕ್ ಸ್ಟಾರ್ಸ್ ತಂಡವನ್ನು ಟೂರ್ನಿಯಿಂದ ಹೊರಗಿಟ್ಟಿದೆ.

  ಈ ಕುರಿತು ನಟ ಸುದೀಪ್ ಬೇಸರ ವ್ಯಕ್ತಪಡಿಸಿದ್ದಾರೆ. ಒಂದು ಸುದೀರ್ಘ ಪತ್ರದ ಮೂಲಕ ಬೇಸರ ಹೊರಹಾಕಿದ್ದಾರೆ.

  ‘‘ಕೆಪಿಎಲ್​ನಿಂದ ರಾಕ್ ಸ್ಟಾರ್ಸ್ ತಂಡವನ್ನು ಆಡಿಸದೆ ಇರುವುದು ತುಂಬಾ ಬೇಸರ ತಂದಿದೆ. ಕೆಪಿಎಲ್​ನಿಂದ ರಾಕ್ ಸ್ಟಾರ್ಸ್ ತಂಡವನ್ನು ಆಡದಂತೆ ಮಾಡಿರುವ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ನಿರ್ಧಾರ ಸರಿಯಲ್ಲ. ನಮಗೆ ಮಾಹಿತಿ ನೀಡಿ ಈ ನಿರ್ಧಾರ ಕೈಗೊಳ್ಳಬೇಕಿತ್ತು. ನನ್ನ ಜೊತೆಯಲ್ಲಾಗಲೀ ಅಥವಾ ತಂಡದ ಮಾಲೀಕ ರಾಜು ಗೌಡ ಜೊತೆ ಮಾತನಾಡಬೇಕಿತ್ತು. ನಮ್ಮನ್ನು ಸಂಪರ್ಕಿಸದೆ ರಾಕ್ ಸ್ಟಾರ್ಸ್ ತಂಡವನ್ನು ಕೆಪಿಎಲ್​ನಿಂದ ಹೊರಕ್ಕೆ ಹಾಕಿರುವುದು ಬೇಸರ ಮೂಡಿಸಿದೆ. ಕೆಎಸ್​ಸಿಎಗೆ ಮಾತಿಗೆ ಬೆಲೆ ಕೊಟ್ಟು ಕೆಪಿಎಲ್​ನಿಂದ ನಮ್ಮ ತಂಡ ಹಿಂದೆ ಸರಿದಿದೆ. ಕೆಪಿಎಲ್​ಗಾಗಿ ನಮ್ಮ ತಂಡ ಎಷ್ಟು ಕಷ್ಟಪಟ್ಟಿದೆ ಎನ್ನುವುದು ತಂಡದ ನಾಯಕನಾಗಿ ನನಗೆ ಗೊತ್ತು. ಪ್ರತಿ ವರ್ಷವೂ ಕೆಪಿಎಲ್​ನಲ್ಲಿ ಆಡಬೇಕು ಎಂಬುದು ನಮ್ಮ ಆಸೆಯಲ್ಲ. ಆದರೆ ನಮಗೆ ಉತ್ತಮ ವಿದಾಯ ಸಿಗಬೇಕಿತ್ತು’

  - ಕಿಚ್ಚ ಸುದೀಪ್, ರಾಕ್ ಸ್ಟಾರ್ಸ್ ತಂಡದ ನಾಯಕ

 • ಎಲೆಕ್ಷನ್ ಸಮಯ - ಸುದೀಪ್ ಹೇಳ್ತಾರೆ ಕೇಳಿ

  sudeep

  ಮೊದಲಿಗೆ ಇನ್ನೊಮ್ಮೆ ಸ್ಪಷ್ಟವಾಗಿ ಹೇಳಿಬಿಡ್ತೇವೆ. ಸುದೀಪ್ ರಾಜಕೀಯಕ್ಕೆ ಬರುತ್ತಿಲ್ಲ. ಯಾವ ಪಕ್ಷಕ್ಕೂ ಸೇರುತ್ತಿಲ್ಲ. ಹಾಗಿದ್ದರೆ, ಸುದೀಪ್ ಏನು ಹೇಳ್ತಾರೆ ಅನ್ನೋ ಕುತೂಹಲವಿದ್ದರೆ, ಹಾಗೆಯೇ ಓದಿಕೊಳ್ಳಿ. ಏಕೆಂದರೆ, ಸುದೀಪ್ ಮನವಿ ಮಾಡಿಕೊಂಡಿರೋದು ಮತದಾರರಿಗೆ.

  `ಚುನಾವಣೆ ಹತ್ತಿರ ಬರ್ತಾ ಇದೆ. ಎಲೆಕ್ಷನ್ ವೋಟರ್ ಐಡಿ ಚೆಕ್ ಮಾಡಿಕೊಂಡ್ರಾ..? ಒಂದ್ಸಲ ಚೆಕ್ ಮಾಡ್ಕೊಳಿ. ಇನ್ನೂ ಆಗಿಲ್ಲ ಅಂದ್ರೆ, ಸಂಬಂಧಪಟ್ಟ ಕಚೇರಿಗೆ ಹೋಗಿ ರಿಜಿಸ್ಟರ್ ಮಾಡಿಸಿ. ನಿಮಗೆ ಈಗ ಇರುವ ಜನಪ್ರತಿನಿಧಿ ಚೆನ್ನಾಗಿ ಕೆಲಸ ಮಾಡಿದ್ದಾನೆ ಎಂದಾದರೆ, ಆತನನ್ನು ಮತ್ತೆ ಆರಿಸಿಕಳಿಸುವ ಜವಾಬ್ದಾರಿ ನಿಮ್ಮದೇ ಅಲ್ವಾ..? ಅಥವಾ ಆತ ಕೆಲಸ ಮಾಡಿಲ್ಲ ಎಂದಾದರೆ, ಆತನನ್ನು ತಿದ್ದಬೇಕಾದ ಜವಾಬ್ದಾರಿಯೂ ನಿಮ್ಮದೇ ಅಲ್ವಾ..? ದಯವಿಟ್ಟು ಹೋಗಿ, ಮತಪತ್ರ ಮಾಡಿಸಿಕೊಳ್ಳಿ. ಅದರಲ್ಲೂ ಯುವಕ, ಯುವತಿಯರು ಮತಪತ್ರವನ್ನು ಕಡ್ಡಾಯವಾಗಿ ಮಾಡಿಸಿಕೊಳ್ಳಿ. ಚುನಾವಣೆ ದಿನ ತಪ್ಪದೇ ಹೋಗಿ ಮತ ಚಲಾಯಿಸಿ''

  ಇದು ಸುದೀಪ್ ಅವರೊಬ್ಬರಷ್ಟೇ ಅಲ್ಲ, ಪ್ರತಿಯೊಬ್ಬರೂ ಮಾಡುವ ಮನವಿ. ಪ್ರತಿಯೊಬ್ಬರೂ ಮಾಡಲೇಬೇಕಾದ ಕರ್ತವ್ಯ. ಮಾಡ್ತೀರಲ್ವಾ..?

 • ಎಲ್ಲಿದ್ದರೂ ಮನೆಗೆ ಹೋಗು - ಅಭಿಮಾನಿಗೆ ಸುದೀಪ್ ಮನವಿ

  sudeep requests fans to return

  ಅಭಿಮಾನಿಗಳ ಎದುರು ಸದಾ ಮಗುವಾಗುವ ಕಿಚ್ಚ ಸುದೀಪ್ ಈ ಬಾರಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ತಮ್ಮ ಅಭಿಮಾನಿ ಮಣಿಕಂಠ ಎಂಬುವವರು ಮನೆಯವರೊಂದಿಗೆ ಮುನಿಸಿಕೊಂಡು ಹೋಗಿದ್ದಾರೆ ಅನ್ನೋ ಸುದ್ದಿ ತಿಳಿದ ಸುದೀಪ್, ಅಭಿಮಾನಿಗೆ ಎಲ್ಲಿದ್ದರೂ ಮನೆಗೆ ಬಾ. ಮನೆಯವರು ಅಂದಮೇಲೆ ಒಂದು ಮಾತು ಬರುತ್ತೆ. ಒಂದ್ ಮಾತು ಹೋಗುತ್ತೆ. ನೀನು ಎಲ್ಲೇ ಇದ್ದರೂ ಮನೆಗೆ ಹೋಗು. ಆಮೇಲೆ ನಾನೇ ಬಿಡುವಾದಾಗ ನಿಮ್ಮ ಮನೆಗೆ ಒಂದ್ಸಲ ಬರ್ತೀನಿ ಎಂದು ಹೇಳಿದ್ದಾರೆ ಸುದೀಪ್.

  ಅಭಿಮಾನಿಗಳಿಗೆ ಹಲವು ಬಾರಿ ಇಂತಹ ಬುದ್ದಿವಾದ ಹೇಳಿರುವ ಸುದೀಪ್, ಈ ಬಾರಿ ಕುಟುಂಬವೊಂದನ್ನು ಒಂದುಗೂಡಿಸಲು ಮುಂದಾಗಿದ್ದಾರೆ. 

 • ಐ ಆ್ಯಮ್ ವಿಲನ್.. ಮೊದಲ ಸಾಂಗ್ ಸೂಪರ್

  the villain lyrical song is hit

  ಅಭಿಮಾನಿಗಳ ಬಹುಕಾಲದ ನಿರೀಕ್ಷೆ ಒಂದೊಂದಾಗಿ ಈಡೇರುತ್ತಿದೆ. ದಿ ವಿಲನ್ ಚಿತ್ರದ ಮೊದಲ ಹಾಡು ರಿಲೀಸ್ ಆಗಿದೆ. ವಿಡಿಯೋ ಸಾಂಗ್ ಅಲ್ಲ, ಲಿರಿಕಲ್ ಸಾಂಗ್. ಮಚ್ಚು ಗಿಚ್ಚು ಹಿಡಿದವನಲ್ಲ.. ಆದ್ರೂ ಹವಾ ಇಟ್ಟವನಲ್ಲ ಎಂದು ಶುರುವಾಗುವ ಹಾಡು, ಪ್ರೇಕ್ಷಕರಿಗೆ ಇಷ್ಟವಾಗಿದೆ.

  ದಿ ವಿಲನ್ ಚಿತ್ರದ ಟೈಟಲ್ ಸಾಂಗ್ ಆಗಿರುವ ಈ ಹಾಡು, ಬಹುಶಃ ಇಂಟ್ರೊಡಕ್ಷನ್ ಹಾಡಿರಬೇಕು. ಈ ಇಂಟ್ರೊಡಕ್ಷನ್ ಹಾಡು ಯಾರದ್ದು..? ಸುದೀಪ್‍ಗಾ..? ಶಿವರಾಜ್‍ಕುಮಾರ್‍ಗಾ..? ಅದೊಂದು ಕುತೂಹಲವನ್ನು ಪ್ರೇಮ್ ಹಾಗೆಯೇ  ಉಳಿಸಿಕೊಂಡಿದ್ದಾರೆ.

  ಹಾಡಿಗೆ ಸಾಹಿತ್ಯ ಬರೆದಿರುವುದು ಪ್ರೇಮ್. ಹಾಡಿರುವುದು ಶಂಕರ್ ಮಹಾದೇವನ್ ಮತ್ತು ಬಸ್ರು. ಅರ್ಜುನ್ ಜನ್ಯ ಸಂಗೀತ ನೀಡಿರುವ ಹಾಡನ್ನು ಒಂದೇ ದಿನದಲ್ಲಿ 3 ಲಕ್ಷಕ್ಕೂ ಹೆಚ್ಚು ಮಂದಿ ನೋಡಿರುವುದು ವಿಶೇಷ. 

  ಸಿ.ಆರ್.ಮನೋಹರ್ ಅವರ ತನ್ವಿ ಫಿಲಂಸ್ ಲಾಂಛನದಲ್ಲಿ ಬರುತ್ತಿರುವ ಸಿನಿಮಾಗೆ ಆ್ಯಮಿ ಜಾಕ್ಸನ್ ನಾಯಕಿ. ಮಿಥುನ್ ಚಕ್ರವರ್ತಿ, ಶ್ರೀಕಾಂತ್, ತಿಲಕ್ ಮೊದಲಾದವರು ನಟಿಸಿರುವ ಸಿನಿಮಾ, ಶೀಘ್ರದಲ್ಲೇ ಬಿಡುಗಡೆಯಾಗುವ ನಿರೀಕ್ಷೆ ಇದೆ.

 • ಒಂದು ಪೋಸ್ಟರ್, ಎರಡು ಟೀಸರ್.. ಕಿಚ್ಚನ ಹಬ್ಬ..

  sudeep gets special gifts on his borthday

  ಕಿಚ್ಚ ಸುದೀಪ್‍ಗೆ ಹುಟ್ಟುಹಬ್ಬ. ಅಭಿಮಾನಿಗಳಿಗೆ ಕಿಚ್ಚನ ಹಬ್ಬ. ಈ ಬಾರಿಯ ಹಬ್ಬಕ್ಕೆ ಎರಡು ಚಿತ್ರಗಳ ನಿರ್ಮಾಪಕರು, ವಿಶೇಷ ಟೀಸರ್‍ವೊಂದನ್ನು ಬಿಡುಗಡೆ ಮಾಡಿ ಶುಭ ಕೋರಿದ್ದಾರೆ.

  ಹೆಬ್ಬುಲಿ ನಿರ್ದೇಶಿಸಿದ್ದ ಕೃಷ್ಣ, ಸುದೀಪ್ ಅವರಿಗಾಗಿ ಪೈಲ್ವಾನ್ ಸಿನಿಮಾ ಮಾಡುತ್ತಿದ್ದಾರೆ. ಇದೇ ಮೊದಲ ಬಾರಿಗೆ ಸುದೀಪ್ ಕಟ್ಟುಮಸ್ತಾದ ಹುರಿಗಟ್ಟಿದ ದೇಹದಲ್ಲಿ ಕಾಣಿಸಿಕೊಂಡಿದ್ದಾರೆ. ಸ್ವಪ್ನ ಕೃಷ್ಣ ನಿರ್ಮಾಣದ ಪೈಲ್ವಾನ್ ಟೀಸರ್‍ನಲ್ಲಿ ಸುದೀಪ್ ಅವರನ್ನು ನೋಡುವುದೇ ಒಂದು ಸೊಗಸು.

  ಇನ್ನು ಕೋಟಿಗೊಬ್ಬ3 ಚಿತ್ರದ ಟೀಸರ್ ಕೂಡಾ ಹೊರಬಿದ್ದಿದೆ. ಸಸ್ಪೆನ್ಸ್ ಥ್ರಿಲ್ಲರ್ ಎನ್ನುವುದು ಮೇಲ್ನೋಟಕ್ಕೇ ಗೊತ್ತಾಗುವಂತಿದೆ. ಚಿಮ್ಮಿದ ನಾಣ್ಯದಲ್ಲಿ ಸುದೀಪ್ ಮುಖ ಬರುವಂತೆ ಮಾಡಿರುವ ಟೀಸರ್, ಮೆಚ್ಚುವಂತಿದೆ.

  ಇನ್ನು ತೆಲುಗಿನ ಸೈರಾ ನರಸಿಂಹರೆಡ್ಡಿ ಚಿತ್ರ ತಂಡವೂ ಕೂಡಾ ಸುದೀಪ್ ಅವರ ಪೋಸ್ಟರ್‍ನ್ನು ರಿಲೀಸ್ ಮಾಡಿ ಶುಭ ಕೋರಿದೆ. ಚಿರಂಜೀವಿ ಅವರು ಪ್ರಧಾನ ಪಾತ್ರದಲ್ಲಿರೋ ಸ್ವಾತಂತ್ರ್ಯ ಹೋರಾಟಗಾರನ ಕಥೆ ಹೊಂದಿರುವ ಚಿತ್ರದಲ್ಲಿ ಸುದೀಪ್, ಸೈರಾಗೆ ನೆರವು ನೀಡುವ ರಾಜನೊಬ್ಬನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

 • ಒಬ್ಬ ವ್ಯಕ್ತಿ.. ಎರಡು ಸಿನಿಮಾ.. ಇದೇ ಮೊದಲಲ್ಲ..!

  one name.. two films is not new in industry

  ಚಿತ್ರದುರ್ಗದ ಏಳು ಸುತ್ತಿನ ಕೋಟೆಯ ಒಡೆಯ ಮದಕರಿ ನಾಯಕ, ಕನ್ನಡ ಚರಿತ್ರಕಾರರಿಗೆ ವಿಶೇಷ ಪುರುಷ. ಕೆಚ್ಚೆದೆಯ ನಾಯಕನ ಕುರಿತು ಎರಡು ಸಿನಿಮಾಗಳು ಬರುವುದು ಈಗ ಖಚಿತವಾಗಿದೆ. ದರ್ಶನ್ ಹಾಗೂ ಸುದೀಪ್ ಇಬ್ಬರೂ ಬೇರೆ ಬೇರೆ ಸಿನಿಮಾಗಳಲ್ಲಿ ಮದಕರಿ ನಾಯಕನಾಗಲಿದ್ದಾರೆ. ಇದು ಕನ್ನಡ ಚಿತ್ರರಂಗಕ್ಕೆ ಹೊಸದೇನಲ್ಲ.

  kaviratna_kaalidasa_mahakav.jpgಕಾಳಿದಾಸನ ಕಥೆ ಗೊತ್ತಿದೆಯಲ್ಲವೇ.. ಈ ಕಾಳಿದಾಸನ ಕುರಿತು ಕನ್ನಡದಲ್ಲಿ ಎರಡು ಸಿನಿಮಾ ಬಂದಿವೆ. ಮೊದಲನೆಯದು ಮಹಾಕವಿ ಕಾಳಿದಾಸ. ಅದು ಹೊನ್ನಪ್ಪ ಭಾಗವತರ್ ಸಿನಿಮಾ. ಮತ್ತೊಂದು ಕವಿರತ್ನ ಕಾಳಿದಾಸ. ಅದು ಡಾ.ರಾಜ್‍ಕುಮಾರ್ ಸಿನಿಮಾ.

  ಬಸವೇಶ್ವರರ ಕುರಿತೂ ಎರಡು ಸಿನಿಮಾ ಬಂದಿವೆ. ಮೊದಲನೆಯದು ಜಗಜ್ಯೋತಿ ಬಸವೇಶ್ವರ. ಆ ಚಿತ್ರದಲ್ಲಿ ಬಸವಣ್ಣನಾಗಿದ್ದವರು ಹೊನ್ನಪ್ಪ ಭಾಗವತರ್. ಇನ್ನೊಂದು ಕ್ರಾಂತಿಯೋಗಿ ಬಸವಣ್ಣ. ಆ ಚಿತ್ರದಲ್ಲಿ ಬಸವಣ್ಣನಾಗಿದ್ದವರು ಅಶೋಕ್.

  ಹಾಗೆಯೇ ರಾಘವೇಂದ್ರ ಸ್ವಾಮಿಗಳ ಕುರಿತೂ ಎರಡು ಸಿನಿಮಾ ಬಂದಿವೆ. ಮೊದಲನೆಯದು ಮಂತ್ರಾಲಯ ಮಹಾತ್ಮೆ. ಆ ಚಿತ್ರದಲ್ಲಿ ರಾಘವೇಂದ್ರ ಸ್ವಾಮಿ ಪಾತ್ರಕ್ಕೆ ಜೀವ ತುಂಬಿದ್ದವರು ಡಾ.ರಾಜ್. ಮತ್ತೊಮ್ಮೆ ಅದೇ ಕಥೆಯನ್ನಿಟ್ಟುಕೊಂಡು ರಾಘವೇಂದ್ರ ವೈಭವ ಚಿತ್ರ ತೆರೆಕಂಡಿತ್ತು. ಆಗ ರಾಯರಾಗಿದ್ದವರು ಶ್ರೀನಾಥ್.

  ಹಿಂದಿಯಲ್ಲಿ ಭಗತ್ ಸಿಂಗ್ ಕುರಿತಂತೆ ಶಹೀದ್ ಭಗತ್ ಸಿಂಗ್ ಹಾಗೂ ದಿ ಲೆಜೆಂಡ್ ಆಫ್ ಭಗತ್ ಸಿಂಗ್ ಚಿತ್ರಗಳು ಏಕಕಾಲದಲ್ಲಿ ತೆರೆ ಕಂಡಿದ್ದವು. ಕನ್ನಡದಲ್ಲೀಗ ಮದಕರಿ ನಾಯಕನ ಸರದಿ.

 • ಕನ್ನಡ ಚಿತ್ರರಂಗದ ಕ್ರಿಕೆಟ್‍ಗೆ ದಿಗ್ಗಜರ ಎಂಟ್ರಿ

  kcc 2 pressmeet

  ವೀರೇಂದ್ರ ಸೆಹ್ವಾಗ್, ತಿಲಕರತ್ನೆ ದಿಲ್ಷಾನ್, ಹರ್ಷಲ್ ಗಿಬ್ಸ್, ಒವೈಸ್ ಷಾ, ಗಿಲ್‍ಕ್ರಿಸ್ಟ್, ಲ್ಯಾನ್ಸ್ ಕ್ಲೂಸ್ನರ್.. ಅವರೊಂದಿಗೆ ವೇದಿಕೆಯಲ್ಲಿ ಸಿನಿಮಾ ನಟರು. ಕರ್ನಾಟಕ ಚಲನಚಿತ್ರ ಕಪ್ ಟಿ20 ಲೀಗ್‍ನ 2ನೇ ಆವೃತ್ತಿಯ ಕ್ಷಣಗಳು ಆರಂಭವಾಗಿದ್ದು ಹೀಗೆ. ಈ ಬಾರಿಯ ಲೀಗ್‍ಗೆ ಅಂತಾರಾಷ್ಟ್ರೀಯ ಖ್ಯಾತಿಯ ಕ್ರಿಕೆಟಿಗರು ಬಂದಿರುವುದು ವಿಶೇಷ. ಚಿನ್ನಸ್ವಾಮಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಈ ಸಂಭ್ರಮ ಹಂಚಿಕೊಂಡಿದ್ದು ನಟ ಸುದೀಪ್.

  ಇತಿಹಾಸ ಸೃಷ್ಟಿಸುತ್ತೇವೆ ಎಂದು ಹೊರಟವರು ಇತಿಹಾಸ ಸೃಷ್ಟಿಸುವುದಿಲ್ಲ. ನಾನು ಸುಮ್ಮನೆ ಆರಂಭಿಸಿದೆ. ಈಗ ಎಲ್ಲವೂ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ. ಈ ಲೀಗ್ ಯಶಸ್ಸಿಗೆ ಪ್ರತಿಯೊಬ್ಬರ ಬೆಂಬಲ, ಪ್ರೋತ್ಸಾಹ ಇದೆ. ಶಿವರಾಜ್‍ಕುಮಾರ್ ಅಂತೂ ಸಂಪೂರ್ಣ ಸಪೋರ್ಟ್ ಮಾಡುತ್ತಿದ್ದಾರೆ. ಪುನೀತ್, ಉಪೇಂದ್ರ, ಯಶ್, ಗಣೇಶ್ ಎಲ್ಲರ ಸಹಕಾರವೂ ಇದೆ. ಈ ಮೂಲಕ ಕೆಸಿಸಿ(ಕರ್ನಾಟಕ ಚಲನಚಿತ್ರ ಕಪ್)ಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಬೇಕು. ಈ ಟೂರ್ನಿಗೆ ದಿಗ್ಗಜ ಕ್ರಿಕೆಟಿಗರನ್ನು ಆಹ್ವಾನಿಸಿದರೆ ಹೇಗೆ ಎನ್ನುವ ಆಲೋಚನೆ ಬಂತು. ಕೇಳಿದೊಡನೆ ಎಲ್ಲರೂ ಒಪ್ಪಿಕೊಂಡರು ಎಂದು ಹೇಳಿಕೊಂಡವರು ಸುದೀಪ್.

  ನಮಸ್ಕಾರ ಬೆಂಗಳೂರು ಎಂದು ಕನ್ನಡದಲ್ಲಿಯೇ ಮಾತು ಆರಂಭಿಸಿದ ಸೆಹ್ವಾಗ್, ಕನ್ನಡ ಚಿತ್ರರಂಗದ ಕುರಿತು ಸಾಕಷ್ಟು ಕೇಳಿದ್ದೇನೆ. ನನ್ನ ಮಕ್ಕಳೂ ಅಷ್ಟೆ, ದಕ್ಷಿಣ ಭಾರತದ ಸಿನಿಮಾಗಳನ್ನೇ ಹೆಚ್ಚು ನೋಡುತ್ತಾರೆ ಎಂದರು.

  ಸಿನಿಮಾ ನಟರ ಜೊತೆ ಕ್ರಿಕೆಟ್ ಆಡುವುದು ವಿಶೇಷ ಅನುಭವ. ಈ ಹಿಂದೆ ಬಾಲಿವುಡ್ ನಟರೊಂದಿಗೆ ಒಂದು ಮ್ಯಾಚ್ ಆಡಿದ್ದೆ. ಈಗ ಕೆಸಿಸಿ ಲೀಗ್‍ನಲ್ಲಿ ಆಡಲಿದ್ದೇನೆ ಎಂದು ಸಂತಸ ಹಂಚಿಕೊಂಡವರು ವೀರು.

 • ಕಪಿಲ್ ಶೋನಲ್ಲಿ ಕಿಚ್ಚನ ಕನ್ನಡ

  kiccha sudeep talks in kannada at kapil sharma show

  ಕಪಿಲ ಶರ್ಮಾ ಶೋ, ಹಿಂದಿಯ ರಿಯಾಲಿಟಿ ಶೋ. ಕನ್ನಡದ ಮಜಾ ಟಾಕೀಸಿನಂತಹುದೇ ಶೋ. ಆ ಶೋನಲ್ಲಿ ಬಾಲಿವುಡ್ ಸ್ಟಾರ್‍ಗಳು ಬಂದು ನಕ್ಕು ಎಂಜಾಯ್ ಮಾಡ್ತಾರೆ. ಆ ಶೋನಲ್ಲಿ ಕಿಚ್ಚ ಸುದೀಪ್ ಭಾಗವಹಿಸಿದ್ದರು. ದಕ್ಷಿಣ ಭಾರತೀಯ ಚಿತ್ರರಂಗದ ತಾರೆಗಳು ಈ ಶೋನಲ್ಲಿ ಕಾಣಿಸಿಕೊಳ್ಳೋದು ಅಪರೂಪ. ಕನ್ನಡದಲ್ಲಿ ಕಿಚ್ಚ ಸುದೀಪ್ ಮೊದಲಿಗ.

  ಹಿಂದಿ ಶೋನಲ್ಲಿಯೂ ಕಿಚ್ಚ ಸುದೀಪ್ ಕನ್ನಡ ಮರೆತಿಲ್ಲ. ಅಷ್ಟೇ ಅಲ್ಲ, ಬಿಗ್ ಬಾಸ್ ಶೋ ನಿರೂಪಕರೂ ಆಗಿರುವ ಸುದೀಪ್, ನಮಸ್ತೆ, ಕಪಿಲ್ ಶರ್ಮಾ ಶೋಗೆ ಸ್ವಾಗತ. ನಾನು ನಿಮ್ಮ ಕಿಚ್ಚ ಸುದೀಪ್, ಬೆಂಗಳೂರಿನಿಂದ ಇಲ್ಲಿಗೆ ಬಂದಿದ್ದೇನೆ ಎಂದು ಕನ್ನಡದಲ್ಲಿಯೇ ಹೇಳಿದ್ದಾರೆ. ಸ್ವಾಗತಿಸಿದ್ದಾರೆ.

 • ಕಬೀರ್ ಸಾಧನೆಗೆ ಜೈಹೋ ಎಂದ ಕಿಚ್ಚ

  sudeep applauds kabir's commitment

  ಕಿಚ್ಚ ಸುದೀಪ್ ಪೈಲ್ವಾನ್ ಚಿತ್ರದಲ್ಲಿ ನಟಿಸುತ್ತಿರುವುದು ಗೊತ್ತೇ ಇದೆ. ಆ ಸಿನಿಮಾದಲ್ಲಿ ಸುದೀಪ್ ಎದುರು ನೆಗೆಟಿವ್ ರೋಲ್‍ನಲ್ಲಿ ನಟಿಸುತ್ತಿರುವುದು ಕಬೀರ್ ದುಹಾನ್ ಸಿಂಗ್. ಹೆಬ್ಬುಲಿಯಾಗಿ ಸುದೀಪ್ ಎದುರು ವಿಲನ್ ಆಗಿ ಮಿಂಚಿದ್ದ ಕಬೀರ್, ಈಗ ಮತ್ತೊಮ್ಮೆ ಪೈಲ್ವಾನ್‍ಗಾಗಿ ತಯಾರಾಗುತ್ತಿದ್ದಾರೆ. 

  ಕೇವಲ 12 ವಾರಗಳಲ್ಲಿ 6 ಪ್ಯಾಕ್ ಮಾಡಿರುವ ಕಬೀರ್, ಮೈಯ್ಯನ್ನು ಹುರಿಗೊಳಿಸಿದ್ದಾರೆ. ಕಬೀರ್‍ರ ಶ್ರಮಕ್ಕೆ ಶರಣಾಗಿರುವುದು ಕಿಚ್ಚ ಸುದೀಪ್. ನಿಮ್ಮ ಕಮಿಟ್‍ಮೆಂಟ್‍ಗೊಂದು ಹ್ಯಾಟ್ಸಾಫ್ ಎಂದಿರುವ ಸುದೀಪ್‍ಗೆ  ನಿಮ್ಮ ಚಾರ್ಮ್‍ಗೆ ನಾನೂ ಸರಿಹೊಂದಬೇಕಿದೆ. ನಿಮ್ಮ ಹಾರೈಕೆ ಇರಲಿ ಎಂದಿದ್ದಾರೆ. ನಿಮ್ಮ ಬದ್ಧತೆ, ಪರಿಶ್ರಮಕ್ಕೆ ನಾನು ಸರಿದೂಗುವುದಿಲ್ಲ, ನಿಮ್ಮೊಂದಿಗೆ ತೆರೆ ಹಂಚಿಕೊಳ್ಳಲು ಕಾಯುತ್ತಿದ್ದೇನೆ ಎಂದಿದ್ದಾರೆ ಸುದೀಪ್.

  ಕಬೀರ್‍ರ ಬದ್ಧತೆ ನಿರ್ದೇಶಕ ಕೃಷ್ಣ ಅವರಿಗೂ ಇಷ್ಟವಾಗಿ ಹೋಗಿದೆ. ಅವರ ಪಾತ್ರ ನೆಗೆಟಿವ್ ಶೇಡ್‍ನಲ್ಲಿದೆ ಎನ್ನುವ ಕೃಷ್ಣ, ಅವರು ವಿಲನ್ ಎಂದು ಹೇಳೋದಿಲ್ಲ. ಕುತೂಹಲವನ್ನು ಕಾಯ್ದಿರಿಸಲಾಗಿದೆ.

 • ಕರ್ನಾಟಕ ಚಲನಚಿತ್ರ ಕ್ರಿಕೆಟ್ ಕಪ್ - ಸುದೀಪ್ ಕನಸು

  kcc sup is sudeep's dream

  ಐಪಿಎಲ್, ಸಿಸಿಎಲ್ ಮಾದರಿಯಲ್ಲೇ ಇನ್ನೊಂದು ಕ್ರಿಕೆಟ್ ಟೂರ್ನಿ ಆಯೋಜಿಸಲು ಪ್ಲಾನ್‍ವೊಂದು ರೆಡಿಯಾಗುತ್ತಿದೆ. ಅನುಮಾನವೇ ಇಲ್ಲ. ಇದು ಪಕ್ಕಾ ಕಿಚ್ಚ ಸುದೀಪ್ ಅವರದ್ದೇ ಕನಸು. ಐಪಿಎಲ್ ಮಾದರಿಯಲ್ಲೇ ಶುರುವಾದ ಸಿಸಿಎಲ್‍ನಲ್ಲಿ ಸುದೀಪ್, ಪ್ರತಿ ವರ್ಷ ಆಡುತ್ತಾರೆ. ಅಂಥದ್ದೇ ಒಂದು ಟೂರ್ನಿಯನ್ನು ಕನ್ನಡ ಚಲನಚಿತ್ರರಂಗಕ್ಕೇ ಸೀಮಿತಗೊಳಿಸಿ ಆಡುವುದು ಸುದೀಪ್ ಕನಸು.

  ಕೆಸಿಸಿ-ಟಿ10 ಅನ್ನೋ ಹೆಸರನ್ನೂ ಇಡಲಾಗಿದೆ. ಅಂದರೆ, ಕರ್ನಾಟಕ ಚಲನಚಿತ್ರ ಕ್ರಿಕೆಟ್ ಕಪ್ ಎಂದರ್ಥ. ಅಷ್ಟೇ ಅಲ್ಲ, ಇದು 20 ಓವರ್‍ಗಳ ಆಟವಲ್ಲ. 10 ಓವರ್‍ಗಳ ಆಟ. ಇನ್ನು ಟೂರ್ನಿ ಹೇಗಿರುತ್ತೆ ಅಂದರೆ, ಒಟ್ಟು 6 ಟೀಂಗಳಿರುತ್ತವೆ. ಸಿಸಿಎಲ್ ಆಡಿರುವ ತಂಡದಲ್ಲಿರುವ ತಲಾ ಮೂರು ಆಟಗಾರರು, ರಾಜ್ಯ ಕ್ರಿಕೆಟ್ ತಂಡದಲ್ಲಿರುವ ತಲಾ ಇಬ್ಬರು ಆಟಗಾರರು ಇರುತ್ತಾರೆ. ಇವರನ್ನು ಲಕ್ಕಿ ಡ್ರಾ ಮೂಲಕ ಆಯ್ಕೆ ಮಾಡಲಾಗುತ್ತೆ.

  ತಂಡದಲ್ಲಿ ಕಲಾವಿದರು, ಬರಹಗಾರರು, ತಂತ್ರಜ್ಞರು, ಮಾಧ್ಯಮದವರೂ ತಂಡದಲ್ಲಿರುತ್ತಾರೆ. ಒಂದೊಂದು ತಂಡಕ್ಕೂ ಒಬ್ಬೊಬ್ಬ ಮಾಲೀಕರಿರುತ್ತಾರೆ. ಕ್ರಿಕೆಟ್ ಲೀಗ್‍ನ ಆಂತರಿಕ ಸಮಿತಿಯ ಮೇಲ್ವಿಚಾರಕರಾಗಿ ನಿರ್ಮಾಪಕ ಜಾಕ್ ಮಂಜು, ಕೆ.ಪಿ.ಶ್ರೀಕಾಂತ್, ನಿರ್ದೇಶಕ ಕೃಷ್ಣ, ನಂದಕಿಶೋರ್, ಇಂದ್ರಜಿತ್ ಲಂಕೇಶ್ ಹಾಗೂ ಪತ್ರಕರ್ತ ಸದಾಶಿವ ಶೆಣೈ ಇರುತ್ತಾರೆ.

  ಏಪ್ರಿಲ್ 7ರಂದು ಕ್ರಿಕೆಟ್ ಲೀಗ್‍ಗೆ ಚಾಲನೆ ಸಿಗಲಿದೆ.

 • ಕವಚದ ರೆಕ್ಕೆಗೆ ಬೆರಗಾದ ಕಿಚ್ಚ

  kavacha song released by sudeep

  ಕವಚ ಚಿತ್ರದ ರೆಕ್ಕೆಯಾ.. ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆಯಾಗಿದೆ. ಬಿಡುಗಡೆ ಮಾಡಿರುವುದು ಕಿಚ್ಚ ಸುದೀಪ್. ಹಾಡನ್ನು ಕೇಳಿದ ಕಿಚ್ಚ ಹಾಡಿನ ಸಾಹಿತ್ಯಕ್ಕೆ ಬೆರಗಾಗಿ ಹೋಗಿದ್ದಾರೆ. ನಾಗೇಂದ್ರ ಪ್ರಸಾದ್ ಬರೆದಿರುವ ಹಾಡಿನ ಪ್ರತೀ ಸಾಲನ್ನೂ ಮೆಚ್ಚಿಕೊಂಡಿದ್ದಾರೆ.

  ಅದು ಮಗುವಿನ ಮೇಲಿನ ಗೀತೆ. ಮಗಳನ್ನು ಅತಿಯಾಗಿ ಪ್ರೀತಿಸುವ ಕಿಚ್ಚ ಸುದೀಪ್‍ಗೆ ಹಾಡು ಇಷ್ಟವಾಗಿದ್ದರೆ, ಅಚ್ಚರಿಯೇನಿಲ್ಲ. ಹಾಡಿನ ಪ್ರತಿ ಫ್ರೇಮಿನಲ್ಲೂ ಶಿವಣ್ಣನ ಮುಗ್ಧ ಅಭಿನಯಕ್ಕೆ ಹ್ಯಾಟ್ಸಾಫ್ ಎಂದಿದ್ದಾರೆ ಸುದೀಪ್.

  ಜಿವಿಆರ್ ವಾಸು ನಿರ್ದೇಶನದ ಕವಚ ಏಪ್ರಿಲ್ 5ಕ್ಕೆ ತೆರೆಕಾಣುತ್ತಿದೆ. ಶಿವಣ್ಣ 15 ವರ್ಷಗಳ ನಂತರ ನಟಿಸಿರುವ ರೀಮೇಕ್ ಚಿತ್ರ ಕವಚ.

Ayushmanbhava Movie Gallery

Ellidhe Illitanaka Movie Gallery